ನೀವು ಸರಿಯಾಗಿ ಆಸ್ತಿ ತೆರಿಗೆ ಕಟ್ಟುತ್ತಿಲ್ಲವಾ?ನಿಮ್ಮ ಮೇಲೆ ಕಣ್ಣಿಡಲು ಬರುತ್ತಿದೆ ಹೈಟೆಕ್‌ ಡ್ರೋನ್‌ - Vistara News

ತಂತ್ರಜ್ಞಾನ

ನೀವು ಸರಿಯಾಗಿ ಆಸ್ತಿ ತೆರಿಗೆ ಕಟ್ಟುತ್ತಿಲ್ಲವಾ?ನಿಮ್ಮ ಮೇಲೆ ಕಣ್ಣಿಡಲು ಬರುತ್ತಿದೆ ಹೈಟೆಕ್‌ ಡ್ರೋನ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತಷ್ಟು ಹೈಟೆಕ್‌ ಆಗಲಿದೆ. ಆಸ್ತಿ ತೆರಿಗೆ ಸಂಗ್ರಹಕ್ಕೆ ಟೆಕ್ನಾಲಜಿ ಪ್ರಯೋಗಕ್ಕೆ ಮುಂದಾಗಿದ್ದು, ಯಾವ ರೀತಿಯಲ್ಲಿ ಉಪಯೋಗಕ್ಕೆ ಬರಲಿದೆ ಎಂಬುದೇ ಕುತೂಹಲ ಮೂಡಿಸಿದೆ.

VISTARANEWS.COM


on

ಬಿಬಿಎಂಪಿ ವಿಶೇಷ ಆಯುಕ್ತ ದೀಪಕ್‌
ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ದೀಪಕ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ಆಸ್ತಿ ತೆರಿಗೆ ವಸೂಲಿ ಮಾಡುವುದೇ ದೊಡ್ಡ ಸವಾಲು. ಕೋಟಿ ಕೋಟಿ ಆಸ್ತಿ ತೆರಿಗೆ ವಂಚನೆಯಿಂದಾಗಿ ಆದಾಯ ಸೋರಿಕೆಯನ್ನು ತಡೆಯಲು ತಂತ್ರಜ್ಞಾನದ ಮೊರೆ ಹೋಗುತ್ತಿದೆ. ಕಳೆದ ವರ್ಷ 1170 ಕೋಟಿ ರೂ.ಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿತ್ತು. ಈ ಬಾರಿ ಜೂನ್‌ ೧೬ರವರೆಗೆ 2093 ಕೋಟಿಯಷ್ಟು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಇದರಲ್ಲಿ ಶೇ.30 ರಷ್ಟು ವ್ಯತ್ಯಾಸ ಇರುವುದು ಕಂಡು ಬಂದಿದೆ.

ಇದನ್ನೂ ಓದಿ | ಪಾಲಿಕೆ ಆಸ್ತಿ ರಕ್ಷಣೆಗಾಗಿ ಸರ್ವೆ: ಬಿಬಿಎಂಪಿ‌ ಜಂಟಿ ಆಯುಕ್ತರಿಂದ ಮಾಹಿತಿ

ಈ ನಿಟ್ಟಿನಲ್ಲಿ ಬಿಬಿಎಂಪಿಯ ಕಂದಾಯ ಅಧಿಕಾರಿಗಳು ತೆರಿಗೆ ಸಂಗ್ರಹಕ್ಕೆ ಡ್ರೋನ್ ಸರ್ವೆ ನಡೆಸಲು ತೀರ್ಮಾನಿಸಿದ್ದಾರೆ. ಈ ಕುರಿತು ಮಾತನಾಡಿರುವ ಬಿಬಿಎಂಪಿ ಕಂದಾಯ ವಿಭಾಗದ‌ ವಿಶೇಷ ಆಯುಕ್ತ ದೀಪಕ್‌, ಪಾಲಿಕೆಯ ವ್ಯಾಪ್ತಿಯ ಆಸ್ತಿ ತೆರಿಗೆ ಸಂಗ್ರಹಕ್ಕೆ ಕಂದಾಯ ಅಧಿಕಾರಿಗಳಿಗೆ ಟಾರ್ಗೆಟ್‌ ಫಿಕ್ಸ್ ಮಾಡಲು ತೀರ್ಮಾನಿಸಲಾಗಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ತಪ್ಪು ಮಾಹಿತಿ ನೀಡುವವರು ಹಾಗೂ ತಪ್ಪು ಮಾಹಿತಿ ನೀಡಿ ಆಸ್ತಿ ತೆರಿಗೆ ಕಟ್ಟದಿದ್ದರೆ ಡ್ರೋನ್‌ ಟೆಕ್ನಾಲಜಿಯನ್ನು ಬಳಸಲಾಗುವುದು ಎಂದರು.  

ಆಸ್ತಿ ಕಳ್ಳರ ವಂಚನೆ ಪತ್ತೆ ಹಚ್ಚಲು ಡ್ರೋನ್‌ ಸಹಾಯಕ್ಕೆ ಪಾಲಿಕೆಯು ಬೆಸ್ಕಾಂ ಮೊರೆ ಹೋಗಲಿದೆ. ಬೆಸ್ಕಾಂ ಬಿಲ್ ಆಧರಿಸಿ ತಪ್ಪು ಮಾಹಿತಿ ನೀಡಿದವರಿಗೆ ದಂಡ ಹಾಕುವ ಕೆಲಸ ಮಾಡಲಿದೆ. ಇದಕ್ಕಾಗಿ ಒಬ್ಬೊಬ್ಬ ಕಂದಾಯ ಅಧಿಕಾರಿಗಳಿಗೆ ಇಂತಿಷ್ಟು ತೆರಿಗೆ ಸಂಗ್ರಹ ಮಾಡಬೇಕು ಎಂಬ ಟಾರ್ಗೆಟ್‌ ನೀಡಲಾಗುತ್ತದೆ. ಕಂದಾಯ ಅಧಿಕಾರಿಗಳ ಕಾರ್ಯವೈಖರಿ ಅಳೆಯಲು ಇದು ಸಹಾಯವಾಗಲಿದ್ದು, ಉತ್ತಮ ಕೆಲಸ ಮಾಡಿದವರಿಗೆ ಸನ್ಮಾನ, ಮಾಡದೇ ಇರುವವರಿಗೆ ಗೇಟ್‌ ಪಾಸ್‌ ಕೊಡಲು ತೀರ್ಮಾನಿಸಲಾಗಿದೆ.

ಡ್ರೋನ್‌ ಪ್ರಯೋಗ ಒಂದು ಕಡೆಯಾದರೆ ಮತ್ತೊಂದು ಕಡೆ ಇ-ಆಸ್ತಿ ತಂತ್ರಾಂಶ ಜಾರಿಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಬೆಂಗಳೂರು ಒನ್ ಸೆಂಟರ್‌ಗಳ ಮೂಲಕ ತಂತ್ರಾಂಶ ಬಳಕೆಗೆ ಸಿದ್ಧತೆ ಮಾಡಿಕೊಂಡಿದೆ. ಪ್ರತಿಯೊಂದು ಆಸ್ತಿಯ ಮಾಹಿತಿ ಆನ್ ಲೈನ್ ಸೇವೆ ಮೂಲಕ ಸಿಗಲಿದ್ದು, ಜತೆಗೆ ಮುಂದಿನ‌ ದಿನಗಳಲ್ಲಿ ಖಾತಾ ನೇರವಾಗಿ ಡಿಜಿಲಾಕರ್‌ಗೆ ಹೋಗುವ ವ್ಯವಸ್ಥೆಯನ್ನು ಮೊದಲು ಪ್ರಾಯೋಗಿಕವಾಗಿ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ನಡೆಯಲಿದೆ.

ಮೋದಿ ಆಗಮನ ಫ್ಲೆಕ್ಸ್‌, ಬ್ಯಾನರ್‌ ಹಾಕಲು ಅನುಮತಿ

ನಗರದಲ್ಲಿ ಫ್ಲೆಕ್ಸ್ ಬ್ಯಾನರ್ ಹಾಕುವ ಮುನ್ನ ಎಚ್ಚರವಾಗಿ ಇರುವಂತೆ ಪಾಲಿಕೆ ವಿಶೇಷ ಆಯುಕ್ತ ದೀಪಕ್‌ ಎಚ್ಚರಿಕೆ ನೀಡಿದ್ದಾರೆ. ಅನಧಿಕೃತವಾಗಿ ಫ್ಲೆಕ್ಸ್ ಹಾಕುವುದು, ಬ್ಯಾನರ್‌ನಲ್ಲಿ ಮೂಲಕ ಶುಭಕೋರುವುದು ಮಾಡಿದರೆ ಅಂತಹವರ ಮೇಲೆ ದಂಡ ಪ್ರಯೋಗ ಮಾಡಲಾಗುವುದು. ಬ್ಯಾನರ್ ತೆಗೆಯುವ ವೆಚ್ಚವನ್ನು ಅವರಿಂದಲೇ ಭರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಕೆಲ ಕಡೆಗಳಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕಲು ಮುಖ್ಯ ಆಯುಕ್ತರು ಅನುಮತಿ ನೀಡಿದ್ದಾರೆ.

ಬಿಬಿಎಂಪಿ ವಾರ್ಡ್ ಮರುವಿಂಗಡನೆ ವಿಚಾರ

ಬಿಬಿಎಂಪಿ ಕಡೆಯಿಂದ ವಾರ್ಡ್‌ ವಿಂಗಡನೆ ಮಾಡಿ ನಗರಾಭಿವೃದ್ಧಿ ಇಲಾಖೆಗೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯು ಸರ್ಕಾರಕ್ಕೆ ಕಳುಹಿಸಿದ ಬಳಿಕ ಅನುಮೋದನೆ ಸಿಗಲಿದೆ. ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ಬಿಬಿಎಂಪಿ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ದೀಪಕ್‌ ತಿಳಿಸಿದ್ದಾರೆ.

ಇದನ್ನೂ ಓದಿ | ಆಸ್ತಿ ತೆರಿಗೆ ವಸೂಲಿಯಲ್ಲಿ ಉಳ್ಳವರಿಗೊಂದು, ಸಾಮಾನ್ಯರಿಗೊಂದು ನ್ಯಾಯ ಮಾಡ್ತಿದ್ಯಾ ಬಿಬಿಎಂಪಿ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಗ್ಯಾಜೆಟ್ಸ್

Apple iPhones: ಆ್ಯಪಲ್‌ ಬ್ರ್ಯಾಂಡ್‌ ಪ್ರಿಯರಿಗೆ ಗುಡ್‌ನ್ಯೂಸ್;‌ ಐಫೋನ್‌ಗಳ ಬೆಲೆಯಲ್ಲಿ ಗಣನೀಯ ಇಳಿಕೆ

ಜುಲೈ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2024 ರಲ್ಲಿ ಮೊಬೈಲ್ ಫೋನ್‌ಗಳ ಮೂಲ ಕಸ್ಟಮ್ಸ್ ಸುಂಕವನ್ನು ಶೇ.20 ರಿಂದ 15ರಷ್ಟು ಇಳಿಕೆ ಮಾಡಿರುವುದಾಗಿ ಘೋಷಣೆ ಮಾಡಿದ ಬಳಿಕ ಆ್ಯಪಲ್‌ (Apple iPhones) ಈ ಬಾರಿ ಪ್ರೊ ಮಾಡೆಲ್‌ಗಳ ಬೆಲೆಗಳನ್ನು ಕಡಿಮೆ ಮಾಡಿದೆ.

VISTARANEWS.COM


on

By

Apple iPhones
Koo

ನವದೆಹಲಿ: ಆ್ಯಪಲ್‌ ತನ್ನ ಎಲ್ಲ ಮಾದರಿಗಳ ಐಫೋನ್‌ಗಳ (Apple iPhones) ಬೆಲೆಗಳನ್ನು ಶೇ. 3- 4ರಷ್ಟು ಕಡಿತಗೊಳಿಸಿದೆ. ಇದರಿಂದ ಗ್ರಾಹಕರು ಪ್ರೊ ಅಥವಾ ಪ್ರೊ ಮ್ಯಾಕ್ಸ್ ಮಾದರಿ ಮೇಲೆ 5,100 ರಿಂದ 6,000 ರೂ. ವರೆಗೆ (Apple cut prices) ಉಳಿಸಬಹುದಾಗಿದೆ. ಐಫೋನ್ 13, 14 ಮತ್ತು 15 ಸೇರಿದಂತೆ ಇನ್ನು ಕೆಲವು ಮಾದರಿಯ ಐಫೋನ್‌ಗಳು ಮೇಲೆ 300 ರೂ. ಮತ್ತು ಐಫೋನ್ ಎಸ್‌ಇ 2,300 ರೂ. ಕಡಿತ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಇದೇ ಮೊದಲ ಬಾರಿಗೆ ಆ್ಯಪಲ್‌ ತನ್ನ ಪ್ರೊ ಮಾದರಿಗಳಿಗೆ (Pro models) ಬೆಲೆಗಳನ್ನು ಕಡಿಮೆ ಮಾಡಿದೆ. ಹೊಸ ಪ್ರೊ ಮಾದರಿಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಅನಂತರ ಕಂಪೆನಿಯು ಹಳೆಯ ಪ್ರೊ ಮಾದರಿಗಳನ್ನು ನಿಲ್ಲಿಸುತ್ತದೆ. ಹಳೆಯ ಪ್ರೊ ಮಾಡೆಲ್‌ಗಳ ದಾಸ್ತಾನುಗಳನ್ನು ಮಾತ್ರ ವಿತರಕರು ಮತ್ತು ಮರುಮಾರಾಟಗಾರರ ಮೂಲಕ ರಿಯಾಯಿತಿ ದರದಲ್ಲಿ ತೆರವು ಮಾಡಲಾಗುತ್ತದೆ. ಹೀಗಾಗಿ ಪ್ರೊ ಮಾದರಿಗಳ ಗರಿಷ್ಠ ಚಿಲ್ಲರೆ ಮಾರಾಟದ ಬೆಲೆಯನ್ನು (MRP) ಇಲ್ಲಿ ಕಡಿಮೆ ಮಾಡಲಾಗಿಲ್ಲ.

ಜುಲೈ 23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2024 ರಲ್ಲಿ ಮೊಬೈಲ್ ಫೋನ್‌ಗಳ ಮೂಲ ಕಸ್ಟಮ್ಸ್ ಸುಂಕವನ್ನು ಶೇ.20 ರಿಂದ 15ರಷ್ಟು ಇಳಿಕೆ ಮಾಡಿರುವುದಾಗಿ ಘೋಷಣೆ ಮಾಡಿದ ಬಳಿಕ ಆ್ಯಪಲ್‌ ಈ ಬಾರಿ ಪ್ರೊ ಮಾಡೆಲ್‌ಗಳ ಬೆಲೆಗಳನ್ನು ಕಡಿಮೆ ಮಾಡಿದೆ. ಮೊಬೈಲ್ ಫೋನ್‌ಗಳ ಹೊರತಾಗಿ ಮೊಬೈಲ್ ಫೋನ್ ಚಾರ್ಜರ್‌ಗಳಿಗೆ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಜೋಡಣೆ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಾಗಿದೆ.

Apple iPhones
Apple iPhones


ಪ್ರಸ್ತುತ, ಭಾರತದಲ್ಲಿ ಮಾರಾಟವಾಗುವ ಆಮದು ಮಾಡಿದ ಸ್ಮಾರ್ಟ್‌ಫೋನ್‌ಗಳು ಶೇ. 18ರಷ್ಟು ಜಿಎಸ್‌ಟಿ ಮತ್ತು ಶೇ. 22ರಷ್ಟು ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತದೆ. ಇದರಲ್ಲಿ ಹೆಚ್ಚುವರಿ ಶುಲ್ಕ, ಮೂಲ ಕಸ್ಟಮ್ಸ್ ಸುಂಕ ಕಳೆದು ಶೇ. 10ರಷ್ಟುಉಳಿಯುತ್ತದೆ. ಬಜೆಟ್ ಕಡಿತದ ಅನಂತರ ಒಟ್ಟು ಕಸ್ಟಮ್ಸ್ ಸುಂಕವು ಶೇ. 16.5ರಷ್ಟಾಗಿರುತ್ತದೆ. ಇದರಲ್ಲಿ ಶೇ. 15% ಮೂಲ ಮತ್ತು ಶೇ. 1.5 ಹೆಚ್ಚುವರಿ ಶುಲ್ಕ ಸೇರಿದೆ. ಭಾರತದಲ್ಲಿ ತಯಾರಿಸಿದ ಫೋನ್‌ಗಳಿಗೆ ಕೇವಲ ಶೇ. 18ರಷ್ಟು ಜಿಎಸ್ ಟಿ ವಿಧಿಸಲಾಗುತ್ತದೆ.

ಇದನ್ನೂ ಓದಿ: Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಶೇ.99ರಷ್ಟು ಆ್ಯಪಲ್‌ನ ಮೊಬೈಲ್ ಫೋನ್‌ಗಳನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಆದರೆ ಆಯ್ದ ಉನ್ನತ ಮಟ್ಟದ ಮಾದರಿಗಳನ್ನು ಮಾತ್ರ ಆಮದು ಮಾಡಿಕೊಳ್ಳಲಾಗುತ್ತದೆ.

Continue Reading

ವಾಣಿಜ್ಯ

Jio Air Fiber: ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದ ಜಿಯೊ! ಎಲ್ಲಿಯವರೆಗೆ ಈ ಆಫರ್‌?

Jio Air Fiber: ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದ ಹಾಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡದಾದ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ ಸಂಸ್ಥೆಯಾಗಿದೆ. ಏನು ಈ ಕೊಡುಗೆ ಎಂಬ ವಿವರ ಇಲ್ಲಿದೆ.

VISTARANEWS.COM


on

Jio announced 30 Percent discount on Freedom Offer for Air Fiber new customers
Koo

ಮುಂಬೈ: ಜಿಯೋದಿಂದ ಏರ್ ಫೈಬರ್ ಹೊಸ ಗ್ರಾಹಕರಿಗೆ “ಫ್ರೀಡಂ ಆಫರ್” ಶೇಕಡಾ 30ರಷ್ಟು ರಿಯಾಯಿತಿ ಘೋಷಣೆ ಮಾಡಲಾಗಿದೆ. ಅಂದ ಹಾಗೆ ಜಿಯೋ ಫೈಬರ್ ಅಥವಾ ಏರ್ ಫೈಬರ್ ಎಂಬುದು ದೇಶದಲ್ಲಿಯೇ ಅತಿ ವೇಗವಾಗಿ ಬೆಳೆಯುತ್ತಿರುವ ಮತ್ತು ಅತಿ ದೊಡ್ಡದಾದ ಗೃಹ ಬ್ರಾಡ್ ಬ್ಯಾಂಡ್ ಹಾಗೂ ಮನರಂಜನಾ ಸೇವೆಯನ್ನು ಒದಗಿಸುತ್ತಿರುವ (Jio Air Fiber) ಸಂಸ್ಥೆಯಾಗಿದೆ.

1.2 ಕೋಟಿ ಮನೆಗಳೊಂದಿಗೆ ಜಿಯೋಫೈಬರ್ ಅಥವಾ ಏರ್ ಫೈಬರ್ ಎಂಬುದು ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಭಾರತೀಯರ ಮನೆಗಳನ್ನು ಇನ್ನಷ್ಟು ವೇಗವಾಗಿ ಡಿಜಿಟೈಸ್ ಮಾಡುವ ಉದ್ದೇಶದಿಂದ ಮತ್ತು ಭಾರತವನ್ನು ಡಿಜಿಟಲ್ ಸಮುದಾಯವಾಗಿ ಮಾರ್ಪಡಿಸುವ ಉದ್ದೇಶದಿಂದ ಜಿಯೋದಿಂದ ಈ ಭರವಸೆಯ ಕೊಡುಗೆಯನ್ನು ಘೋಷಣೆ ಮಾಡಲಾಗಿದೆ. ಇದರಿಂದಾಗಿ ಇನ್ನಷ್ಟು ಮನೆಗಳಲ್ಲಿ ಈ ಸಂಪರ್ಕ ಪಡೆಯುವುದಕ್ಕೆ ಉತ್ತೇಜನ ದೊರೆಯುತ್ತದೆ. ಈಗಾಗಲೇ ಕೈಗೆಟುಕುವ ಬೆಲೆಯಲ್ಲಿ ಇರುವ ಜಿಯೋಏರ್ ಫೈಬರ್ ಪ್ಲಾನ್‌ಗಳ ಜತೆಗೆ ಶೇಕಡಾ 30ರಷ್ಟು ರಿಯಾಯಿತಿ ನೀಡಲಾಗುತ್ತಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Paris Olympics India schedule: ಒಲಿಂಪಿಕ್ಸ್​ನಲ್ಲಿ ನಾಳೆ ಭಾರತ ಯಾವೆಲ್ಲ ವಿಭಾಗದಲ್ಲಿ ಸ್ಪರ್ಧಿಸಲಿದೆ?; ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಈ ಫ್ರೀಡಂ ಆಫರ್ ಜತೆಗೆ ಹೊಸ ಜಿಯೋಏರ್ ಫೈಬರ್ ಬಳಕೆದಾರರು ಶೇ 30ರಷ್ಟು ರಿಯಾಯಿತಿಯನ್ನು ಹೊಸ ಸಂಪರ್ಕವನ್ನು 1000 ರೂಪಾಯಿಯ ಇನ್‌ಸ್ಟಲೇಷನ್ ಶುಲ್ಕದ ಮನ್ನಾದ ಮೂಲಕ ಪಡೆಯುತ್ತಾರೆ. ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು, ಜುಲೈ 26ರಿಂದ ಆಗಸ್ಟ್ 15ನೇ ತಾರೀಕಿನ ಮಧ್ಯೆ ಇರುತ್ತದೆ.

ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ?

ಇನ್ನು ಜಿಯೋಏರ್ ಫೈಬರ್ ಸಂಪರ್ಕ ಪಡೆಯುವುದು ಹೇಗೆ ಎಂಬ ಪ್ರಶ್ನೆ ಇದೆಯಾ? ಅದು ಬಹಳ ಸರಳ. Jio.com ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮಗಿರುವ ಆಸಕ್ತಿಯನ್ನು ತಿಳಿಸಿ ಅಥವಾ 60008-60008 ಈ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ. ಜಿಯೋದಿಂದ ಸ್ಥಿರ ನಿಸ್ತಂತು (ವೈರ್ಲೆಸ್) ಕೊಡುಗೆ ಏರ್ ಫೈಬರ್ ಅನ್ನು ಕಳೆದ ವರ್ಷ ಗಣೇಶ ಚತುರ್ಥಿಗೆ ಪರಿಚಯಿಸಲಾಯಿತು.

ಜಿಯೋದಿಂದ 5ಜಿ ಸ್ಟ್ಯಾಂಡ್ ಅಲೋನ್ ಸಂಪರ್ಕ ಸೇವೆಗಳನ್ನು ನಿಯೋಜಿಸಲಾಗಿದೆ. 5ಜಿ ಸ್ಥಿರ ನಿಸ್ತಂತು ಸಂಪರ್ಕವನ್ನು ಒದಗಿಸುವುದಕ್ಕೆ ಮೀಸಲಿಟ್ಟ ನೆಟ್‌ವರ್ಕ್ ಬಳಕೆ ಮಾಡುತ್ತಿದೆ. ನೆಟ್‌ವರ್ಕ್ ಇಕ್ಕಟ್ಟಾಗುವುದನ್ನು ನಿರ್ವಹಿಸುವುದಕ್ಕೆ ಇದರಿಂದ ಸಹಾಯ ಆಗುತ್ತದೆ. ಆದರೂ ಏರ್‌ಫೈಬರ್‌ನ ಸರಾಸರಿ ಬಳಕೆದಾರರು ಒಂದು ತಿಂಗಳಿಗೆ 400 ಜಿಬಿ ಡೇಟಾ ಬಳಸುತ್ತಾರೆ.

ಏನಿದು ಜಿಯೋ ಏರ್ ಫೈಬರ್?

ಯಾವುದೇ ತಂತಿ ಇಲ್ಲದೆ ಫೈಬರ್ ರೀತಿ ವೇಗವನ್ನು ಗಾಳಿಯ ಮೂಲಕವೇ ಒದಗಿಸುತ್ತದೆ ಏರ್ ಫೈಬರ್. ಬಳಕೆದಾರರು ಪ್ಲಗ್ ಹಾಕಿ, ಆನ್ ಮಾಡಿದರೆ ಆಯಿತು. ಇಷ್ಟು ಮಾಡಿದಲ್ಲಿ ತಮ್ಮ ಮನೆಯಲ್ಲಿ ವೈಯಕ್ತಿಕವಾಗಿ ಹಾಟ್‌ಸ್ಪಾಟ್ ಅನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಂತಾಗುತ್ತದೆ.

ಇದನ್ನೂ ಓದಿ: Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ

ಜಿಯೋಫೈಬರ್ ಸ್ಥಿರ ನಿಸ್ತಂತು ಸಂಪರ್ಕ ಪರಿಹಾರವಾಗಿದ್ದು, ಇದರಿಂದ ಯಾವುದೇ ಅಡೆತಡೆಯಿಲ್ಲದೆ 1 ಜಿಬಿಪಿಎಸ್ ತನಕದ ಹೈ- ಸ್ಪೀಡ್ ಸಂಪರ್ಕ ಮನೆ ಮತ್ತು ಕಚೇರಿಗಳಿಗೆ ದೊರೆಯುತ್ತದೆ. ಏಕಕಾಲಕ್ಕೆ ಹಲವು ಸಾಧನಗಳನ್ನು ಬಳಸಬಹುದು. ಸ್ಮಾರ್ಟ್‌ ಫೋನ್, ಪರ್ಸನಲ್ ಕಂಪ್ಯೂಟರ್‌ಗಳು, ಟ್ಯಾಬ್ಲೆಟ್, ಸ್ಮಾರ್ಟ್ ಟಿವಿಗಳು, ಮತ್ತು ಇದರ ಜತೆಗೆ ಸೆಟ್ ಟಾಪ್ ಬಾಕ್ಸ್‌ಗಳನ್ನು ಸಹ ಏಕಕಾಲಕ್ಕೆ ಸಂಪರ್ಕ ಕೊಡಬಹುದು, ಅದು ಕೂಡ ಇಂಟರ್‌ನೆಟ್ ವೇಗದಲ್ಲಿ ಯಾವುದೇ ರೀತಿಯಲ್ಲಿ ಕಡಿಮೆ ಇಲ್ಲದಂತೆ ಸಾಧ್ಯವಾಗುತ್ತದೆ.

Continue Reading

ಆಟೋಮೊಬೈಲ್

Nissan SUV X-TRAIL : ನಿಸ್ಸಾನ್ ನ ಹೊಚ್ಚ ಹೊಸ 4 ಜನರೇಷನ್ ಪ್ರೀಮಿಯಂ ಅರ್ಬನ್ ಎಸ್‌ಯುವಿ ಎಕ್ಸ್-ಟ್ರಯಲ್ ಬಿಡುಗಡೆ

Nissan SUV X-TRAIL : ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

VISTARANEWS.COM


on

Nissan SUV X-TRAIL
Koo

ಬೆಂಗಳೂರು: ನಿಸ್ಸಾನ್ ಮೋಟಾರ್ ಇಂಡಿಯಾ ಇಂದು ಹೊಚ್ಚ ಹೊಸ ಮೇಡ್ ಇನ್ ಜಪಾನ್ 4 ಜನರೇಷನ್ ಪ್ರೀಮಿಯಂ ಅರ್ಬನ್‌ ಎಸ್‌ಯುವಿ ನಿಸ್ಸಾನ್‌ ಎಕ್ಸ್-ಟ್ರಯಲ್ (Nissan SUV X-TRAIL) ಅನ್ನು ಬಿಡುಗಡೆ ಮಾಡಿದೆ. ಇದು 7 ಸೀಟರ್ ಎಸ್‌ಯುವಿ ಆಗಿದ್ದು, ಜುಲೈ 26ರಿಂದ ರೂ.1 ಲಕ್ಷ ನೀಡಿ ಬುಕ್ ಬುಕ್ ಮಾಡಬಹುದಾಗಿದೆ. ಆಗಸ್ಟ್ ನಲ್ಲಿ ಎಕ್ಸ್ ಟ್ರಯಲ್ ಡೆಲಿವರಿ ಆರಭವಾಗಲಿದೆ.

ನಿಸ್ಸಾನ್ ಈ ಎಸ್‌ಯುವಿ ಅನ್ನು ಈಗಾಗಲೇ ಜಾಗತಿಕವಾಗಿ ಬಿಡುಗಡೆ ಮಾಡಿದ್ದು, ನಿಸ್ಸಾನ್ ಎಕ್ಸ್-ಟ್ರಯಲ್ ಪ್ರಸ್ತುತ 150ಕ್ಕೂ ಹೆಚ್ಚು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ವಿಶೇಷ ಎಂದರೆ ಈಗಾಗಲೇ ವಿಶ್ವದಾದ್ಯಂತ ಈ ಕಾರಿನ 7.8 ಮಿಲಿಯನ್ ಯುನಿಟ್ ಗಳು ಮಾರಾಟವಾಗಿವೆ. 2023ನೇ ವರ್ಷದಲ್ಲಿ ಜಾಗತಿಕವಾಗಿ ಮಾರಾಟವಾಗಿರುವ ಟಾಪ್ 5 ಎಸ್‌ಯುವಿಗಳಲ್ಲಿ ಇದೂ ಕೂಡ ಒಂದಾಗಿದೆ.

ನಿಸಾನ್ ತನ್ನ ಜಾಗತಿಕ ಉತ್ಪನ್ನಗಳನ್ನು ಮತ್ತು ತಂತ್ರಜ್ಞಾನವನ್ನು ಭಾರತಕ್ಕೆ ಒದಗಿಸುವ ಉದ್ದೇಶವನ್ನು ಹೊಂದಿದ್ದು, ಅದರ ಆರಂಭಿಕ ಹೆಜ್ಜೆಯಾಗಿ ಎಕ್ಸ್ ಟ್ರಯಲ್ ಬಿಡುಗಡೆ ಆಗಿದೆ. ಈ ಮೂಲಕ ಕಂಪನಿಯು ತನ್ನ ಸಿಬಿಯು ಬಿಸಿನೆಸ್ ಅನ್ನು ಮರು ಆರಂಭಿಸುವುದಾಗಿ ಘೋಷಿಸಿದೆ.

ಎಂಜಿನ್ ಪವರ್​

ಈ ಮೇಡ್ ಇನ್ ಜಪಾನ್ 4ನೇ ಜನರೇಷನ್ ನ ನಿಸ್ಸಾನ್‌ಎಕ್ಸ್-ಟ್ರಯಲ್ ವಿಶ್ವದ ಮೊತ್ತ ಮೊದಲ ಪ್ರೊಡಕ್ಷನ್ ವೇರಿಯೇಬಲ್ ಕಂಪ್ರೆಷನ್-ಟರ್ಬೊ ಎಂಜಿನ್‌ ಅನ್ನು ಹೊಂದಿದೆ. ಇದರ ಅತ್ಯಾಧುನಿಕ ಡಿಎನ್ಎ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದ್ದು, ಅದರಿಂದ ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್-ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಸುಧಾರಿತ ಮೈಲೇಜ್​ ಇತ್ಯಾದಿ ಸೌಕರ್ಯಗಳು ದೊರೆಯಲಿವೆ.

ಎಕ್ಸ್-ಟ್ರಯಲ್ 1.5ಲೀ ಪೆಟ್ರೋಲ್ ವೇರಿಯೇಬಲ್ ಕಂಪ್ರೆಷನ್- ಟರ್ಬೊ ಎಂಜಿನ್ ಹೊಂದಿದೆ. ಇದರ ಮೈಲ್ಡ್ ಹೈಬ್ರಿಡ್ 2ಡಬ್ಲ್ಯೂಡಿ ಎಂಜಿನ್‌ ಜೊತೆಗೆ 3 ಜೆನ್ ಎಕ್ಸ್‌ ಟ್ರಾನಿಕ್ ಸಿವಿಟಿ ಪವರ್‌ಟ್ರೇನ್‌ ಅನ್ನು ಸಂಯೋಜಿಸಲಾಗಿದೆ. ಈ ಎಂಜಿನ್ 163ಪಿಎಸ್ ಮತ್ತು 300ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಕರ್ಷಕ ಸೀಟ್​​​ಗಳು

ಎಕ್ಸ್-ಟ್ರಯಲ್ ವಿಶಾಲವಾದ ಜಾಗ ಹೊಂದಿದೆ. 7- ಸೀಟರ್ ವಿನ್ಯಾಸದಲ್ಲಿ ಲಭ್ಯವಿರುವ ಈ ಕಾರಿನ 2ನೇ ಮತ್ತು 3 ನೇ ಸಾಲಿನ ಆಸನಗಳಿಗೆ ಸುಲಭವಾಗಿ ಪ್ರವೇಶಿಸಲು/ಅಲ್ಲಿಂದ ಹೊರಹೋಗಲು ವಿಶೇಷವಾದ 85-ಡಿಗ್ರಿ ರೇರ್ ಡೋರ್ ಓಪನಿಂಗ್ ಅನುಕೂಲ ಒದಗಿಸಲಾಗಿದೆ. ಜಪಾನಿ ಶೈಲಿಯ ವಿನ್ಯಾಸ ಹೊಂದಿರುವ ಈ ಕಾರು ಸುಂದರವಾದ ಎಕ್ಸ್ ಟೀರಿಯರ್ ಮತ್ತು ಇಂಟೀರಿಯರ್ ಅನ್ನು ಹೊಂದಿದೆ. ಇ-ಶಿಫ್ಟರ್, ಡ್ರೈವ್ ಮೋಡ್ ಸೆಲೆಕ್ಟರ್ ಮತ್ತು ಟ್ವಿನ್ ಕಪ್ ಹೋಲ್ಡರ್‌ಗಳು, ಹಾಗೆಯೇ ಸ್ಮಾರ್ಟ್‌ಫೋನ್‌ಗಳಿಗಾಗಿ 15w ವೈರ್‌ಲೆಸ್ ಚಾರ್ಜ್ ಪ್ಯಾಡ್ ಅನ್ನು ಕಾರು ಒಳಗೊಂಡಿದೆ. ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಆರ್ಮ್​ರೆಸ್ಟ್​ ಇದೆ. ಬೆಲೆಬಾಳುವ ವಸ್ತುಗಳನ್ನು ಇಡಲು ಸ್ಟೋರೇಜ್ ಸ್ಪೇಸ್ ನೀಡಲಾಗಿದೆ. ಸೈಡಿನಲ್ಲಿ ಹಿಂದಿನ ಸೀಟಿನ ಪ್ರಯಾಣಿಕರಿಗೆ ವಸ್ತು ಗಳನ್ನು ಇಡಬಹುದಾದ ಸ್ಥಳಗಳನ್ನು ನೀಡಲಾಗಿದೆ. ಪ್ಯಾನೋರಮಿಕ್ ಸನ್‌ರೂಫ್ ಸೌಕರ್ಯ ಹೊಂದಿದ್ದು, ಇದರ 3ನೇ ಸಾಲಿನ ಸೀಟನ್ನು ಮಡಿಸಿದರೆ ಒಟ್ಟು 585 ಲೀಟರ್‌ಗಳಷ್ಟು ಸಾಮರ್ಥ್ಯದ ಲಗೇಜ್ ಜಾಗ ಸಿಗುತ್ತದೆ. ಎಕ್ಸ್‌ಟ್ರಯಲ್‌ ಹೈ-ಡೆಫಿನಿಷನ್, ಸಂಪೂರ್ಣ ಎಲೆಕ್ಟ್ರಾನಿಕ್ 31.2ಸೆಂಮೀನ ಟಿ ಎಫ್ ಟಿ ಮಲ್ಟಿ-ಇನ್ಫರ್ಮೇಷನ್ ಸ್ಕ್ರೀನ್ ಹೊಂದಿದೆ.

ಇದನ್ನೂ ಓದಿ: Honor 200 Series : ಒಂದೇ ದಿನ 2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ ಹಾನರ್

7 ಏರ್‌ಬ್ಯಾಗ್‌ಗಳು, ಅರೌಂಡ್ ವ್ಯೂ ಮಾನಿಟರ್ (ಎವಿಎಂ) ಜೊತೆಗೆ ಮೂವಿಂಗ್ ಆಬ್ಜೆಕ್ಟ್ ಡಿಟೆಕ್ಷನ್ (ಎಂಓಡಿ), ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫರೆನ್ಷಿಯಲ್ (ಬಿಎಲ್ಎಸ್ಡಿ(, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್‌ (ಇ ಎಸ್ ಸಿ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್(ಟಿಸಿಎಸ್), ಹಿಲ್ ಸ್ಟಾರ್ಟ್ ಅಸಿಸ್ಟ್ (ಎಚ್ಎಸ್ಎ), ಎಬಿಡಿ ಜೊತೆಗೆ ಎಬಿಎಸ್, ಫ್ರಂಟ್ ಆಂಡ್ ರೇರ್ ಪಾರ್ಕಿಂಗ್ ಸೆನ್ಸರ್ ಗಳು ಮತ್ತು 4 ವೀಲ್ ಡಿಸ್ಕ್ ಬ್ರೇಕ್ ಗಳು ಮುಂತಾದ ಹಲವಾರು ಸುರಕ್ಷತಾ ಫೀಚರ್ ಗಳಿವೆ.

ಹೊಸ ಎಕ್ಸ್-ಟ್ರಯಲ್ ನಲ್ಲಿ ಲಭ್ಯವಿರುವ 12ವಿ ಎಎಲ್ಐಎಸ್ (ಸುಧಾರಿತ ಲೀಥಿಯಂ ಐಯಾನ್ ಬ್ಯಾಟರಿ ಸಿಸ್ಟಮ್) ಮೈಲ್ಡ್ ಹೈಬ್ರಿಡ್ ಸಿಸ್ಟಮ್, ಟಾರ್ಕ್ ಅಸಿಸ್ಟ್, ಹೆಚ್ಚುವರಿ ಐಡಲ್ ಸ್ಟಾಪ್, ಕ್ವಿಕ್ ರೀಸ್ಟಾರ್ಟ್ ಮತ್ತು ಕೋಸ್ಟಿಂಗ್ ಸ್ಟಾಪ್ ಫೀಚರ್ ಒದಗಿಸುತ್ತದೆ.

ಎಕ್ಸ್-ಟ್ರಯಲ್ ಷಾಂಪೇನ್ ಸಿಲ್ವರ್, ಪರ್ಲ್ ವೈಟ್ ಮತ್ತು ಡೈಮಂಡ್ ಬ್ಲ್ಯಾಕ್ ಎಂಬ ಮೂರು ಸೊಗಸಾದ ಬಣ್ಣಗಳಲ್ಲಿ ಲಭ್ಯವಿದೆ. ಬುಕಿಂಗ್‌ಗಳು ಜುಲೈ 26 ರಂದು ರಾಷ್ಟ್ರಾದ್ಯಂತ ಇರುವ ನಿಸ್ಸಾನ್ ಡೀಲರ್‌ಶಿಪ್‌ಗಳು ಮತ್ತು ನಿಸ್ಸಾನ್‌ನ ವೆಬ್‌ಸೈಟ್ ನಲ್ಲಿ https://book.Nissan.in/ ನಲ್ಲಿ ಪ್ರಾರಂಭವಾಗುತ್ತಿದೆ. ಎಕ್ಸ್-ಟ್ರಯಲ್ ಗಾಗಿ ಬುಕಿಂಗ್ ಮೊತ್ತ ರೂ. 100,000 ಆಗಿದೆ ಮತ್ತು ವಾಹನದ ಡೆಲಿವರಿ 2024ರ ಆಗಸ್ಟ್ ನಲ್ಲಿ ರಿಂದ ಪ್ರಾರಂಭವಾಗುತ್ತದೆ.

ನಿಸ್ಸಾನ್ ಇಂಡಿಯಾ ಆಪರೇಷನ್ಸ್ ಪ್ರೆಸಿಡೆಂಟ್ ಮತ್ತು ಎಎಂಐಇಓ ರೀಜನ್ ಬಿಸಿನೆಸ್ ಟ್ರಾನ್ಸ್‌ ಫಾರ್ಮೇಶನ್ ನ ಡಿವಿಷನಲ್ ವೈಸ್ ಪ್ರೆಸಿಡೆಂಟ್ ಫ್ರಾಂಕ್ ಟೊರೆಸ್, ನಿಸ್ಸಾನ್ ಮೋಟಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸಾ ಹರ್ಷ ವ್ಯಕ್ತ ಪಡಿಸಿದ್ದಾರೆ.

Continue Reading

ವಾಣಿಜ್ಯ

Samsung Galaxy: ಎಐ ಆಧರಿತ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್6 ಹೇಗಿದೆ? ದರ ಎಷ್ಟು?

Samsung Galaxy: ಸ್ಯಾಮ್‌ಸಂಗ್ ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್6, ಝಡ್ ಫ್ಲಿಪ್6 ಫೋನ್ ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.

VISTARANEWS.COM


on

Samsung Galaxy Z Fold6 Z Flip6 Smartphones Good Customer Response
Koo

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ (Samsung Galaxy) ತನ್ನ 6ನೇ ಜನರೇಷನ್‌ನ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ ದಾಖಲೆ ಮಾಡಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಳೆಯ ಜನರೇಷನ್‌ನ ಫೋಲ್ಡೆಬಲ್ ಫೋನ್‌ಗಳಿಗೆ ಹೋಲಿಸಿದರೆ ಗ್ಯಾಲಕ್ಸಿ ಝಡ್ ಫೋಲ್ಡ್ 6, ಝಡ್ ಫ್ಲಿಪ್ 6 ಫೋನ್‌ಗಳ ಪ್ರೀ ಬುಕಿಂಗ್‌ನಲ್ಲಿ 40% ಹೆಚ್ಚಳ ಉಂಟಾಗಿದ್ದು, ಈ ಪೋನ್‌ಗಳು ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ಸಾಧಿಸಿದ ಝಡ್ ಸರಣಿಯ ಫೋನ್‌ಗಳು ಎಂಬ ಹೆಗ್ಗಳಿಕೆ ಗಳಿಸಿವೆ.

ಭಾರತದಲ್ಲಿ ಮತ್ತು ವಿಶ್ವಾದ್ಯಂತ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6ನ ಪ್ರೀ ಬುಕಿಂಗ್ ಅನ್ನು ಜುಲೈ 10ರಂದು ಪ್ರಾರಂಭಿಸಲಾಗಿತ್ತು. ಈ ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಇತ್ತೀಚೆಗೆ ಬಿಡುಗಡೆಯಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7, ಗ್ಯಾಲಕ್ಸಿ ಬಡ್ಸ್3 ಪ್ರೊ ಮತ್ತು ಗ್ಯಾಲಕ್ಸಿ ಬಡ್ಸ್3 ಭಾರತದಲ್ಲಿ ಇದೇ ಜು.24ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.

ಈ ಕುರಿತು ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ಮಾತನಾಡಿ, “ನಮ್ಮ ಹೊಸ ಫೋಲ್ಡೆಬಲ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ಗೆ ಭಾರತದ ಗ್ರಾಹಕರಿಂದ ದೊರೆತಿರುವ ಅಭೂತಪೂರ್ವ ಪ್ರತಿಕ್ರಿಯೆಯಿಂದ ನಾವು ಸಂತೋಷಗೊಂಡಿದ್ದೇವೆ. ಹೊಸ ಫೋಲ್ಡೆಬಲ್ ಸ್ಮಾರ್ಟ್‌ಫೋನ್‌ಗಳ ಪ್ರೀ ಬುಕಿಂಗ್ ನಲ್ಲಿ 1.4x ಹೆಚ್ಚಳ ಉಂಟಾಗಿದ್ದು, ಇದು ಹೊಸ ತಂತ್ರಜ್ಞಾನವನ್ನು ವೇಗವಾಗಿ ಅಳವಡಿಸಿಕೊಳ್ಳುವವರಲ್ಲಿ ಭಾರತೀಯ ಗ್ರಾಹಕರು ಮುಂಚೂಣಿಯಲ್ಲಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದರು.

ಇದನ್ನೂ ಓದಿ: Pralhad joshi: ನವೀಕರಿಸಬಹುದಾದ ಇಂಧನ ಉತ್ಪಾದನೆ; ವಿಶ್ವದಲ್ಲೇ 4ನೇ ಸ್ಥಾನದಲ್ಲಿ ಭಾರತ

ಆರನೇ ಜನರೇಷನ್‌ನ ನಮ್ಮ ಹೊಸ ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಗ್ಯಾಲಕ್ಸಿ ಎಐನ ಹೊಸ ಅಧ್ಯಾಯವನ್ನು ಆರಂಭಿಸಿವೆ. ಈ ಗ್ಯಾಲಕ್ಸಿ ಎಐ ಸೌಲಭ್ಯವು ಬಳಕೆದಾರರ ಅನುಭವವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ಹೆಚ್ಚಿಸಿ, ಅನನ್ಯ ಮೊಬೈಲ್ ಅನುಭವಕ್ಕೆ ಪಾತ್ರರಾಗುವ ಸೌಕರ್ಯ ಒದಗಿಸುತ್ತದೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6ನ ಯಶಸ್ಸು ಭಾರತದಲ್ಲಿನ ಪ್ರೀಮಿಯಂ ವಿಭಾಗದ ನಾಯಕತ್ವವನ್ನು ಮುಂದುವರಿಸಲು ನಮಗೆ ಸಹಾಯ ಮಾಡುತ್ತದೆ” ಎಂದು ತಿಳಿಸಿದರು.

ಭಾರತೀಯ ಗ್ರಾಹಕರಿಗೆ ತಲುಪಿಸಲು ಸ್ಯಾಮ್‌ಸಂಗ್‌ನ ನೋಯ್ಡಾ ಕಾರ್ಖಾನೆಯಲ್ಲಿ ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಝಡ್ ಫ್ಲಿಪ್6 ಅನ್ನು ತಯಾರಿಸಲಾಗುತ್ತಿದೆ. ಹೊಸ ಫೋಲ್ಡೆಬಲ್‌ಗಳು ಇದುವರೆಗಿನ ಫೋಲ್ಡೆಬಲ್‌ಗಳಿಗಿಂತ ಹೆಚ್ಚು ತೆಳ್ಳಗಿರುವ ಮತ್ತು ಹಗುರವಾಗಿರುವ ಗ್ಯಾಲಕ್ಸಿ ಝಡ್ ಸರಣಿಯ ಸಾಧನಗಳಾಗಿವೆ. ಸಿಮ್ಮೆಟ್ರಿಕಲ್ ವಿನ್ಯಾಸ ಅಂದ್ರೆ ಎರಡೂ ಬದಿಯಲ್ಲಿ ಒಂದೇ ಥರ ಕಾಣುವ ವಿನ್ಯಾಸ ಮತ್ತು ನೇರವಾದ ಎಡ್ಜ್ ಅನ್ನು ಹೊಂದಿವೆ.

ಗ್ಯಾಲಕ್ಸಿ ಝಡ್ ಸರಣಿಯು ಅತ್ಯುತ್ತಮ ಆರ್ಮರ್ ಅಲ್ಯೂಮಿನಿಯಂ ಮತ್ತು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದ್ದು, ಇದು ಇನ್ನೂ ಹೆಚ್ಚು ಬಾಳಿಕೆ ಬರುವ ಗ್ಯಾಲಕ್ಸಿ ಝಡ್ ಸರಣಿಯ ಫೋನ್‌ಗಳಾಗಿವೆ. ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಫ್ಲಿಪ್6 ಗಳು ಗ್ಯಾಲಕ್ಸಿಯ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್‌ ಹೊಂದಿದ್ದು, ಇದು ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದೆ. ಅತ್ಯುತ್ತಮ ದರ್ಜೆಯ ಸಿಪಿಯು, ಜಿಪಿಯು ಮತ್ತು ಎನ್‌ಪಿಯು ಹೊಂದಿದ್ದು, ಅತ್ಯಪೂರ್ವ ಕಾರ್ಯಕ್ಷಮತೆಯನ್ನು ಒದಗಿಸುತ್ತದೆ. ವಿಶೇಷವಾಗಿ ಪ್ರೊಸೆಸರ್ ಅನ್ನು ಎಐಗೆ ಸೂಕ್ತವಾಗಿ ಹೊಂದುವಂತೆ ವಿನ್ಯಾಸ ಮಾಡಲಾಗಿದೆ ಮತ್ತು ಒಟ್ಟಾರೆಯಾಗಿ ಸುಧಾರಿತ ಕಾರ್ಯಕ್ಷಮತೆ ಜತೆಗೆ ಉತ್ತಮ ಗ್ರಾಫಿಕ್ಸ್ ಸೌಕರ್ಯವನ್ನೂ ನೀಡುತ್ತದೆ.

ಇದನ್ನೂ ಓದಿ: Kannada New Movie: ಯುವ ನಿರ್ಮಾಪಕಿಗೆ ಸಾಥ್ ಕೊಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್; ‘ಕುಬುಸ’ ಚಿತ್ರದ ಟ್ರೈಲರ್ ಬಿಡುಗಡೆ

ಗ್ಯಾಲಕ್ಸಿ ಝಡ್ ಫೋಲ್ಡ್6 ಎಐ- ಆಧರಿತ ಫೀಚರ್‌ಗಳು ಮತ್ತು ಟೂಲ್ ಗಳನ್ನು ಒದಗಿಸುತ್ತವೆ. ಆ ಫೀಚರ್‌ಗಳಲ್ಲಿ ನೋಟ್ ಅಸಿಸ್ಟ್, ಸ್ಕೆಚ್ ಟು ಇಮೇಜ್, ಇಂಟರ್‌ಪ್ರಿಟರ್, ಫೋಟೋ ಅಸಿಸ್ಟ್ ಮತ್ತು ಇನ್‌ಸ್ಟಾಂಟ್ ಸ್ಲೋ-ಮೋ ಒಳಗೊಂಡಿವೆ.

ಗ್ಯಾಲಕ್ಸಿ ಝಡ್ ಫೋಲ್ಡ್6 ಈಗ ದೀರ್ಘಾವಧಿಯ ಗೇಮಿಂಗ್ ಸೆಷನ್‌ನಲ್ಲಿ ತೊಡಗಿಕೊಳ್ಳಲು ಅನುಕೂಲತೆ ಒದಗಿಸುವ 1.6x ಲಾರ್ಜರ್ ವೇಪರ್ ಚೇಂಬರ್ ಅನ್ನು ಹೊಂದಿದೆ ಮತ್ತು ರೇ ಟ್ರೇಸಿಂಗ್ ವ್ಯವಸ್ಥೆಯು 7.6-ಇಂಚಿನ ಪರದೆಯ ಮೇಲೆ ಅತ್ಯುತ್ತಮ ಗುಣಮಟ್ಟದ ಗ್ರಾಫಿಕ್ಸ್ ಸೌಕರ್ಯ ಒದಗಿಸುತ್ತದೆ. ಇವೆಲ್ಲಾ ಸೌಕರ್ಯಗಳು ಹಾಗೂ 2,600 ಎನ್ಐಟಿ ವರೆಗಿನ ಬ್ರೈಟ್ ಆದ ಡಿಸ್ ಪ್ಲೇ ಸೇರಿಕೊಂಡು ಗೇಮಿಂಗ್ ಅನುಭವವನ್ನು ತೀವ್ರಗೊಳಿಸುತ್ತದೆ.

ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೊಸತಾಗಿ ಕಸ್ಟಮೈಸೇಶನ್ ಸೌಲಭ್ಯ ನೀಡುತ್ತದೆ ಮತ್ತು ಸೃಜನಶೀಲ ಫೀಚರ್‌ಗಳ ಶ್ರೇಣಿಯನ್ನು ಒದಗಿಸುತ್ತದೆ. ಆದ್ದರಿಂದ ನೀವು ಪ್ರತಿ ಕ್ಷಣದಲ್ಲಿಯೂ ಇದನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ. 3.4-ಇಂಚಿನ ಸೂಪರ್ ಅಮೋಲ್ಡ್ ಫ್ಲೆಕ್ಸ್‌ ವಿಂಡೋ ಮೂಲಕ ನೀವು ಫೋನ್ ಅನ್ನು ತೆರೆಯದೆಯೇ ಎಐ ಆಧರಿತ ಕಾರ್ಯ ನಿರ್ವಹಣೆಗಳನ್ನು ಮಾಡಬಹುದಾಗಿದೆ. ಯಾವುದಾದರೂ ಟೆಕ್ಸ್ಟ್ ಮೆಸೇಜ್‌ಗೆ ಸಾಧನೆ ಸೂಚಿಸಿದ ಮೆಸೇಜ್ ರಿಪ್ಲೈ ಮಾಡಬಹುದಾಗಿದೆ. ನಿಮ್ಮ ಇತ್ತೀಚಿನ ಮೆಸೇಜ್‌ಗಳನ್ನು ವಿಶ್ಲೇಷಿಸುವ ಮೂಲಕ ಈಗಾಗಲೇ ಸಿದ್ಧವಿರುವ ಸೂಕ್ತವಾದ ಮೆಸೇಜ್‌ಗಳನ್ನು ಕಳುಹಿಸಲು ಎಐ ಸೂಚಿಸುತ್ತದೆ.

ಫ್ಲೆಕ್ಸ್‌ ಕ್ಯಾಮ್ ಈಗ ಹೊಸ ಅಟೋ ಜೂಮ್‌ ಜತೆಗೆ ಬರುತ್ತದೆ. ಈ ಅಟೋ ಜೂಮ್ ನೀವು ತೆಗೆಯಲು ಉದ್ದೇಶಿಸಿರುವ ಶಾಟ್‌ಗೆ, ನೀವು ಯಾವುದೇ ಅಗತ್ಯ ಹೊಂದಾಣಿಕೆಗಳನ್ನು ಮಾಡುವ ಮೊದಲೇ ಫೋಟೋ ವಸ್ತುವನ್ನು ವಿಶ್ಲೇಷಿಸಿ ಝೂಮ್ ಇನ್ ಔಟ್ ಮಾಡುವ ಮೂಲಕ ಅತ್ಯುತ್ತಮವಾದ ಫ್ರೇಮ್ ಅನ್ನು ಸೆಟ್ ಮಾಡುತ್ತದೆ. ಹೊಸ 50 ಎಂಪಿ ವೈಡ್ ಮತ್ತು 12 ಎಂಪಿ ಅಲ್ಟ್ರಾ-ವೈಡ್ ಸೆನ್ಸರ್‌ಗಳು ಫೋಟೋಗಳಲ್ಲಿ ಸ್ಪಷ್ಟತೆ ಮತ್ತು ಸೂಕ್ಷ್ಮ ವಿವರಗಳು ಇರುವಂತೆ ನೋಡಿಕೊಳ್ಳುತ್ತದೆ. ಆ ಮೂಲಕ ವಿಶಿಷ್ಟ ಕ್ಯಾಮರಾ ಅನುಭವವನ್ನು ಒದಗಿಸುತ್ತವೆ. ಹೊಸ 50 ಎಂಪಿ ಸೆನ್ಸರ್ ಶಬ್ದ- ಮುಕ್ತ ಫೋಟೋ ತೆಗೆಯಲು 2x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. 10x ಜೂಮ್‌ ಜತೆಗೆ ಸುಧಾರಿತ ಶೂಟಿಂಗ್ ಅನುಭವಕ್ಕಾಗಿ ಎಐ ಜೂಮ್ ಕೂಡ ಲಭ್ಯವಿದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಈಗ ಹೆಚ್ಚು ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ ಮತ್ತು ಮೊದಲ ಬಾರಿಗೆ ವೇಪರ್ ಚೇಂಬರ್ ಅನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಗ್ಯಾಲಕ್ಸಿ ಝಡ್ ಫೋಲ್ಡ್6 ಬೆಲೆ ರೂ. 164999 (12ಜಿಬಿ+256 ಜಿಬಿ)ರಿಂದ ಪ್ರಾರಂಭವಾಗುತ್ತದೆ. ಗ್ಯಾಲಕ್ಸಿ ಝಡ್ ಫ್ಲಿಪ್6 ಬೆಲೆ ರೂ. 109999 (12 ಜಿಬಿ+256 ಜಿಬಿ)ಗೆ ಲಭ್ಯವಿದೆ.

ಗ್ಯಾಲಕ್ಸಿ ಝಡ್ ಫೋಲ್ಡ್6 ಮತ್ತು ಗ್ಯಾಲಕ್ಸಿ ಝಡ್ ಫ್ಲಿಪ್6 ಜತೆಗೆ ಸ್ಯಾಮ್‌ಸಂಗ್, ಎಐ-ಆಧರಿತ ಉತ್ಪನ್ನಗಳಾದ ಗ್ಯಾಲಕ್ಸಿ ವಾಚ್ ಅಲ್ಟ್ರಾ, ಗ್ಯಾಲಕ್ಸಿ ವಾಚ್7 ಮತ್ತು ಗ್ಯಾಲಕ್ಸಿ ಬಡ್ಸ್3 ಸರಣಿಗಳನ್ನು ಪರಿಚಯಿಸಿದ್ದು, ಇವುಗಳಿಗೂ ಜುಲೈ 10 ರಂದು ಭಾರತದಲ್ಲಿ ಪ್ರೀ ಬುಕಿಂಗ್ ಆರಂಭ ಆಗಿದೆ.

ಇದನ್ನೂ ಓದಿ: Back Benchers Movie: ಬ್ಯಾಕ್ ಬೆಂಚರ್ಸ್‌ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕ ಖುಷಿ!

ಗ್ಯಾಲಕ್ಸಿ ವಾಚ್7 ಬೆಲೆ ರೂ. 29999ರಿಂದ ಪ್ರಾರಂಭವಾಗುತ್ತದೆ ಮತ್ತು ಗ್ಯಾಲಕ್ಸಿ ವಾಚ್ ಅಲ್ಟ್ರಾ ಬೆಲೆ ರೂ. 59999 ಆಗಿದೆ. ಸ್ಯಾಮ್‌ಸಂಗ್ ನ ಹೊಸ ಗ್ಯಾಲಕ್ಸಿ ಬಡ್ಸ್3 ಬೆಲೆ ರೂ. 14999 ಆಗಿದೆ. ಗ್ಯಾಲಕ್ಸಿ ಬಡ್ಸ್3 ಪ್ರೊ ಬೆಲೆ ರೂ. 19999 ಆಗಿದೆ ಎಂದು ತಿಳಿಸಿದೆ.

Continue Reading
Advertisement
Vaccin for Hiv
ಆರೋಗ್ಯ29 mins ago

Vaccine for HIV: ವರ್ಷಕ್ಕೆರಡು ಬಾರಿ ಈ ಇಂಜೆಕ್ಷನ್‌ ತೆಗೆದುಕೊಂಡರೆ ಎಚ್‌ಐವಿ ಭಯವೇ ಬೇಡ!

Physical Assault
ದೇಶ38 mins ago

Physical Assault : ಅಶ್ಲೀಲ ವಿಡಿಯೊಗಳನ್ನು ನೋಡಿ 9 ವರ್ಷದ ತಂಗಿಯನ್ನು ಅತ್ಯಾಚಾರ ಮಾಡಿ ಕೊಂದ 13 ವರ್ಷದ ಬಾಲಕ!

Paris Olympics
ಕ್ರೀಡೆ53 mins ago

Paris Olympics: ಕ್ರೀಡಾ ಗ್ರಾಮದಲ್ಲಿ ಭಾರತದ ಅಥ್ಲೀಟ್ಸ್‌ಗೆ ಆಹಾರ ಕೊರತೆ; ರೆಸ್ಟೋರೆಂಟ್​ನಿಂದ ರೋಟಿ, ದಾಲ್‌ ತರಿಸಿದ ಬಾಕ್ಸರ್​

karnataka Rain
ಮಳೆ55 mins ago

Karnataka Rain : ಮಳೆಗೆ ಮನೆ ಮುಳುಗಡೆಯಾದ ಸುದ್ದಿ ಕೇಳಿ ಮನೆ ಯಜಮಾನ ಹೃದಯಾಘಾತದಿಂದ ಸಾವು

Rahul Gandhi
ದೇಶ56 mins ago

Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Gautam Gambhir
ಕ್ರೀಡೆ1 hour ago

Gautam Gambhir : ಗೌತಮ್​ ಗಂಭೀರ್​ಗೆ ವಿಶೇಷ ಸಂದೇಶ ಕಳುಹಿಸಿದ ದ್ರಾವಿಡ್​; ಭಾವುಕರಾದ ನೂತನ ಕೋಚ್​!

Kannada New Movie Nava Digantha latest news
ಸಿನಿಮಾ1 hour ago

Kannada New Movie: ನೆರವೇರಿತು ’ನವ ದಿಗಂತ’ ಚಿತ್ರದ ಮುಹೂರ್ತ

DK Shivakumar
ಕರ್ನಾಟಕ2 hours ago

Brand Bengaluru: ‘ಬ್ರ್ಯಾಂಡ್‌ ಬೆಂಗಳೂರು’ ನಿರ್ಮಾಣಕ್ಕೆ ಡಿಕೆಶಿ ಮಾಸ್ಟರ್‌ಪ್ಲಾನ್;‌ ಇಲ್ಲಿದೆ ಸಭೆಯ ವಿವರ

Drone Prathap Eye surgery for an old woman with her own money
ಬಿಗ್ ಬಾಸ್2 hours ago

Drone Prathap: ನುಡಿದಂತೆ ನಡೆದ ‘ಬಿಗ್ ಬಾಸ್’ ಡ್ರೋನ್ ಪ್ರತಾಪ್; ಸ್ವಂತ ಹಣದಿಂದ ವೃದ್ಧೆಗೆ ಕಣ್ಣು ಆಪರೇಷನ್ !

ದೇಶ2 hours ago

Chandipura Virus: ಗುಜರಾತ್‌ನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್‌ಗೆ 48 ಬಲಿ; 39 ಮಂದಿಗೆ ಚಾಂದಿಪುರ ವೈರಸ್ ದೃಢ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

ramanagara news
ರಾಮನಗರ4 hours ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ5 hours ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ23 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ1 day ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ1 day ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ1 day ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

ಟ್ರೆಂಡಿಂಗ್‌