Actress Priyanka Chopra said that she ran to Bollywood because she was afraid of the politics of Bollywood. Priyanka Chopra : ಬಾಲಿವುಡ್​ನ ಪೊಲಿಟಿಕ್ಸ್​ಗೆ ಹೆದರಿ ಹಾಲಿವುಡ್​ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ - Vistara News

ಕ್ರಿಕೆಟ್

Priyanka Chopra : ಬಾಲಿವುಡ್​ನ ಪೊಲಿಟಿಕ್ಸ್​ಗೆ ಹೆದರಿ ಹಾಲಿವುಡ್​ಗೆ ಓಡಿದ್ದೆ ಎಂದ ನಟಿ ಪ್ರಿಯಾಂಕ ಚೋಪ್ರಾ

ಬಾಲಿವುಡ್​ನ ಒಳಗೆ ತುಂಬಿರುವ ರಾಜಕೀಯದಿಂದ ಮುಕ್ತಿ ಪಡೆಯುವುದಕ್ಕೆ ಲಾಸ್​ ಏಂಜಲೀಸ್​ಗೆ ಹೋಗಿ ಗಾಯಕಿಯಾದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.

VISTARANEWS.COM


on

Actress Priyanka Chopra said that she ran to Bollywood because she was afraid of the politics of Bollywood.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ರಾಜಕೀಯ ಇದೆ. ಅಲ್ಲಿ ಅವಕಾಶಗಳನ್ನು ಪಡೆಯಲು ಪ್ರತಿಭೆ ಮಾತ್ರ ಇದ್ದರೆ ಸಾಲದು ಎಂಬ ಮಾತುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಅಂಥದ್ದೇ ಮಾತನ್ನು ನಟಿ ಪ್ರಿಯಾಂಕ ಚೋಪ್ರಾ (Priyanka Chopra) ಜೊನಾಸ್ ಹೇಳಿದ್ದಾರೆ. ಅವಕಾಶಗಳು ಇಲ್ಲದ ಕಾರಣಕ್ಕೆ ನಾನು ಹಾಲಿವುಡ್​ಗೆ ಹೋಗಿರಲಿಲ್ಲ. ಬದಲಾಗಿ ಇಲ್ಲಿನ ಕೆಟ್ಟ ರಾಜಕೀಯದಿಂದ ಬೇಸತ್ತು ನಿರ್ಗಮಿಸಿದೆ ಎಂದು ಹೇಳಿಕೊಂಡಿದ್ದಾರೆ. ಡಾರ್ಕ್ ಶೆಪರ್ಡ್​ ಹಾಗೂ ಮೋನಿಕಾ ಪಾಡ್​ಮನ್ ಅವರು ನಿರ್ವಹಿಸುವ ಹಾಸ್ಯ ಕಾರ್ಯಕ್ರಮ ಆರ್ಮ್​ಚೆರ್​ ಎಕ್ಸ್​ಪರ್ಟ್​ನಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ.

ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಎರಡು ದಶಕಗಳ ಕಾಲ ಬಾಲಿವುಡ್​ನಲ್ಲಿ ಸಕ್ರಿಯರಾಗಿದ್ದರು. ಆ ಬಳಿಕ ಏಕಾಏಕಿ ಅವರು ದೇಶ ಬಿಟ್ಟು ಅಮೆರಿಕದಲ್ಲಿ ನೆಲೆಸಿದ್ದರು. ಹಾಲಿವುಡ್​ನಲ್ಲಿ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದರು. ಅಲ್ಲಿಯೂ ನಟನೆಗೆ ಅವಕಾಶ ಪಡೆದುಕೊಂಡಿದ್ದರು. ಅಲ್ಲಿ ಸಾಧನೆ ಮಾಡಿದ ಬಳಿಕ ಭಾರತಕ್ಕೆ ವಾಪಸಾಗಿ ನೆಲೆಸಿದ್ದಾರೆ. ಜತೆಗೆ ನಿಕ್​ ಜೊನಾಸನ್​ ಅವರನ್ನು ವಿವಾಹವಾಗಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಅವರು ತಮ್ಮ ಸಿನಿಮಾ ಜರ್ನಿಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಅವರು ಬಾಲಿವುಡ್​ ರಾಜಕೀಯದ ಬಗ್ಗೆ ಮಾತನಾಡಿ ಇಲ್ಲಿ ಗೆಲ್ಲುವುದು ಎಲ್ಲರಿಗೂ ಸುಲಭವಲ್ಲ ಎಂಬ ಮಾತನ್ನು ಹೇಳಿದ್ದಾರೆ. ನಾನು ಈ ಮಾತನ್ನು ಮುಕ್ತವಾಗಿ ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಈಗ ನಾನು ಸುರಕ್ಷಿತ ಎಂಬ ಭಾವ ಬಂದಿದೆ. ಹೀಗಾಗಿ ನನಗೆ ಹೇಳುವ ಧೈರ್ಯ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ : Rani Mukerji Birthday: ಬಾಲಿವುಡ್‌ ನಟಿ ರಾಣಿ ಮುಖರ್ಜಿ ಅವರ ನೋಡಲೇಬೇಕಾದ ಸಿನಿಮಾಗಳಿವು

ನಾನು ಒಳ್ಳೆಯ ನಟಿ ಎಲ್ಲ ಎಂಬ ಮಾತುಗಳು ಕೇಳಿ ಬಂದವು. ನನ್ನನ್ನೇ ಮೂಲೆ ಗುಂಪು ಮಾಡಲು ಮುಂದಾಯಿತು. ಇಲ್ಲಿನ ರಾಜಕೀಯದಲ್ಲಿ ಗೆಲುವು ಸಾಧ್ಯವಿಲ್ಲ ಎಂದು ನನಗೆ ಅನಿಸಿತು. ಹೀಗಾಗಿ ಎಲ್ಲದರಿಂದಲೂ ಮುಕ್ತಿ ಪಡೆಯುವ ಉದ್ದೇಶಕ್ಕೆ ಲಾಸ್​ ಏಂಜಲೀಸ್​ಗೆ ಹೋಗಿ ಅಲ್ಲಿ 2012ರಲ್ಲಿ ಗಾಯಕಿಯಾಗಿ ವೃತ್ತಿ ಆರಂಭಿಸಿದೆ ಎಂದು ಪ್ರಿಯಾಂಕ ಹೇಳಿಕೊಂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

IPL 2024 : ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್​​ನಲ್ಲಿ ಗುಜರಾತ್​ ಜೈಂಟ್ಸ್​​ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

VISTARANEWS.COM


on

IPL 2024
Koo

ಬೆಂಗಳೂರು: ಲಕ್ನೊ ಸೂಪರ್ ಜೈಂಟ್ಸ್​ ತಂಡದ ವೇಗದ ಬೌಲರ್​ ಮಯಾಂಕ್ ಯಾದವ್​​ (Mayank Yadav) ಮತ್ತೆ ಗಾಯಗೊಂಡರೇ? ಏಪ್ರಿಲ್ 30 ರ ಮಂಗಳವಾರ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ 2024 (IPL 2024) ಪಂದ್ಯದ ವೇಳೆ ಮತ್ತೆ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಗಾಯದ ಸಮಸ್ಯೆ ಅನುಭವಿಸಿದ್ದ ಅವರು ಈ ಪಂದ್ಯಕ್ಕೆ ಮರಳಿದ್ದರು. ಅವರು 10 ಡಾಟ್ ಬಾಲ್ ಗಳನ್ನು ಎಸೆದಿದ್ದರೂ ತಮ್ಮ ಮೊದಲ 3 ಓವರ್ ಗಳಲ್ಲಿ 31 ರನ್ ಗಳನ್ನು ಸೋರಿಕೆ ಮಾಡಿದ್ದರು.

18ನೇ ಓವರ್​ನ ಮೊದಲ ಎಸೆತದಲ್ಲಿ ಮಯಾಂಕ್ ಅನುಭವಿ ಮೊಹಮ್ಮದ್ ನಬಿ ಅವರನ್ನು ಔಟ್ ಮಾಡಿದರು. ಆದಾಗ್ಯೂ, ಅವರು ಒಂದು ರೀತಿಯ ಅನನುಕೂಲತೆ ಅನುಭವಿಸಿದರು. ಅಲ್ಲದೆ, ಸ್ಟೇಡಿಯಮ್ ಬಿಟ್ಟು ಹೊರಗೆ ನಡೆದಿದ್ದಾರೆ. ಅವರು ಮೆಟ್ಟಿಲುಗಳ ಮೇಲೆ ಓಡುತ್ತಿರುವ ವಿಡಿಯೊ ಕಂಡು ಬಂದಿದೆ. ಆದರೆ, ಅದು ಯಾಕೆ ಎಂದು ಗೊತ್ತಾಗಿಲ್ಲ. ಆದರೆ, ಗಾಯಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಎನ್ನಲಾಗಿದೆ.

ಮಯಾಂಕ್ ಓವರ್ ಮಧ್ಯದಲ್ಲಿ ಮೈದಾನದಿಂದ ಹೊರಗುಳಿಯುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಏಪ್ರಿಲ್​​ನಲ್ಲಿ ಗುಜರಾತ್​ ಜೈಂಟ್ಸ್​​ ವಿರುದ್ಧದ ಪಂದ್ಯದ ವೇಳೆ ವೇಗದ ಬೌಲರ್ ತನ್ನ ಮೊದಲ ಓವರ್ ನಂತರ ಮೈದಾನದಿಂದ ಹೊರಕ್ಕೆ ಹೋಗಿದ್ದರು. ಅಲ್ಲಿಂದ ನಂತರ , ಅವರು 5 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಮುಂಬೈ ವಿರುದ್ಧದ ಪಂದ್ಯಕ್ಕೂ ಮುನ್ನ ಎಲ್ಎಸ್ಜಿ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ಎಲ್ಲಾ ಫಿಟ್ನೆಸ್ಪ ರೀಕ್ಷೆಗಳಲ್ಲಿ ತೇರ್ಗಡೆಯಾದ ನಂತರ ಮಯಾಂಕ್ ಆಡುತ್ತಿದ್ದಾರೆ ಎಂದು ಹೇಳಿದ್ದರು. ತಂಡದ ಸಹಾಯಕ ಕೋಚ್ ಎಸ್ ಶ್ರೀರಾಮ್ ಕೂಡ ವೇಗದ ಬೌಲರ್ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರು. ಅವರು ನೆಟ್ಸ್​ನಲ್ಲಿ ಪೂರ್ಣ ತೀವ್ರತೆಯಿಂದ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

ಮುಂಬೈ ಇಂಡಿಯನ್ಸ್ ವಿರುದ್ಧ ಮಯಾಂಕ್ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು,.ಆದರೆ ಪಂಜಾಬ್​ ಮತ್ತು ಆರ್​ಸಿಬಿ ವಿರುದ್ಧದ ಎಲ್ಎಸ್​ಜಿ ಪರ ಹಿಂದಿನ ಮುಖಾಮುಖಿಗಳಲ್ಲಿ ಅವರು ಬೌಲಿಂಗ್ ಮಾಡಿದಷ್ಟು ವೇಗದಲ್ಲಿ ಬೌಲಿಂಗ್ ಮಾಡಲಿಲ್ಲ.

ಮಯಾಂಕ್ ಯಾದವ್: ಸೂಪರ್ ಜೈಂಟ್ಸ್​ಗೆ ನಿರ್ಣಾಯಕ

ಐಪಿಎಲ್ 2024 ರಲ್ಲಿ ಗಂಟೆಗೆ 156.7 ಕಿ.ಮೀ ವೇಗದಲ್ಲಿ ವೇಗದ ಚೆಂಡನ್ನು ಎಸೆಯುವ ಮೂಲಕ ಯುವ ಆಟಗಾರ ಮೈದಾನಕ್ಕೆ ಎಂಟ್ರಿ ಕೊಟ್ಟಿದ್ದರು. ಅವರು ಬ್ಯಾಕ್ ಟು ಬ್ಯಾಕ್ 3 ವಿಕೆಟ್ ಸಾಧನೆಗಳನ್ನು ಮಾಡಿದ್ದರು . ಅವರ ಆರಾಧ್ಯ ದೈವ ಡೇಲ್ ಸ್ಟೇನ್ ಸೇರಿದಂತೆ ಕ್ರಿಕೆಟ್ ಕ್ಷೇತ್ರದಿಂದ ಗೌರವ ಪಡೆದುಕೊಂಡಿದ್ದರು.

ಪ್ಲೇಆಫ್ಗೆ ಅರ್ಹತೆ ಪಡೆಯಲು ಎಲ್ಎಸ್​ಜಿ ಇನ್ನೂ ಸ್ವಲ್ಪ ದೂರದಲ್ಲಿದೆ. ಮೊಹ್ಸಿನ್ ಖಾನ್ ಮತ್ತು ಯಶ್ ಠಾಕೂರ್ ಅವರಂತಹ ಭಾರತೀಯ ವೇಗಿಗಳನ್ನು ಹೊಂದಿದ್ದರೂ, ಮಯಾಂಕ್ ಫಿಟ್ ಆಗಿ ಉಳಿಯುವುದು ಆ ತಂಡಕ್ಕೆ ಸಾಕಷ್ಟು ಪ್ರಾಮುಖ್ಯವಾಗಿದೆ.

Continue Reading

ಪ್ರಮುಖ ಸುದ್ದಿ

IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

ಮಹೇಶ್ ಕುಮಾರ್ ಬೆಂಗಳೂರು ಮೂಲದ ಕ್ರಿಕೆಟಿಗ. ಅವರು ಬಲಗೈ ವೇಗದ ಬೌಲರ್. ಬೆಂಗಳೂರಿನಿಂದ 45 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಮಹೇಶ್ 2 ಐಪಿಎಲ್ ತಂಡಗಳಿಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಸರ್ಕೀಟ್​ನಲ್ಲಿ ಹೆಚ್ಚು ಪರಿಚಿತ ಆಟಗಾರ ಅಲ್ಲದಿದ್ದರೂ ಎಕ್ಸ್​ನಲ್ಲಿ ವೈರಲ್ ಆಗಿರುವ ವೀಡಿಯೊ ಅವರ ಬಗ್ಗೆ ಮಾತನಾಡುವಂತೆ ಮಾಡಿದೆ.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್​ 2024ನೇ (IPL 2024) ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನೆಟ್​​ಬೌಲರ್​ ಆಗಿರುವ ಕರ್ನಾಟಕ ಮುಲಕ ಮಹೇಶ್ ಕುಮಾರ್ ಅವರ ಬೌಲಿಂಗ್ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಮಹೇಶ್ ಕುಮಾರ್ ಅವರು ಜಸ್ಪ್ರೀತ್ ಬುಮ್ರಾ ಅವರ ಅಸಾಂಪ್ರದಾಯಿಕ ಬೌಲಿಂಗ್ ಕ್ರಮವನ್ನು ಅನುಸರಿಸುತ್ತಿರುವುದು ಕಾಣಬಹುದು. ಹೀಗಾಗಿ ಬುಮ್ರಾ 2.0 ಎಂದು ಕರೆಯಲಾಗಿದೆ.

ಮಹೇಶ್ ಕುಮಾರ್ ಬೆಂಗಳೂರು ಮೂಲದ ಕ್ರಿಕೆಟಿಗ. ಅವರು ಬಲಗೈ ವೇಗದ ಬೌಲರ್. ಬೆಂಗಳೂರಿನಿಂದ 45 ಕಿಲೋಮೀಟರ್ ದೂರದಲ್ಲಿರುವ ದೊಡ್ಡಬಳ್ಳಾಪುರದಲ್ಲಿ ಜನಿಸಿದ ಮಹೇಶ್ 2 ಐಪಿಎಲ್ ತಂಡಗಳಿಗೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಅವರು ಭಾರತೀಯ ಕ್ರಿಕೆಟ್ ಸರ್ಕೀಟ್​ನಲ್ಲಿ ಹೆಚ್ಚು ಪರಿಚಿತ ಆಟಗಾರ ಅಲ್ಲದಿದ್ದರೂ ಎಕ್ಸ್​ನಲ್ಲಿ ವೈರಲ್ ಆಗಿರುವ ವೀಡಿಯೊ ಅವರ ಬಗ್ಗೆ ಮಾತನಾಡುವಂತೆ ಮಾಡಿದೆ.

2017ರಲ್ಲಿ ಇಂಗ್ಲೆಂಡ್​​ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತಾಗ ಮಹೇಶ್ ಕುಮಾರ್ ಮೊದಲ ಬಾರಿಗೆ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದರು. ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್, ಎಂಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ವಿರುದ್ಧ ಮಹೇಶ್ ಬೌಲಿಂಗ್ ಮಾಡಿದ್ದರು. ಈ ವೇಳೆ ಭಾರತದ ನೆಟ್ ಸೆಷನ್​ನಲ್ಲಿ ಅವರು ತಮ್ಮ ಆರಾಧ್ಯ ದೈವ ಜಸ್ಪ್ರೀತ್ ಬುಮ್ರಾ ಅವರನ್ನು ಭೇಟಿ ಮಾಡುವ ಅವಕಾಶ ಕೂಡ ಪಡೆದಿದ್ದರು.

ಇದನ್ನೂ ಓದಿ: IPL 2024 : ಬುದ್ಧಿ ಹೇಳಿದರೂ ಕೇಳದ ಕೆಕೆಆರ್​ ಬೌಲರ್​ ರಾಣಾಗೆ ಮತ್ತೆ ದಂಡ ; ಒಂದು ಪಂದ್ಯದಿಂದ ಸಸ್ಪೆಂಡ್​​

ಮಹೇಶ್ ಕುಮಾರ್ ನೆಟ್ ಬೌಲರ್ ಆಗಿ ಸಾಕಷ್ಟು ಅನುಭವ ಗಳಿಸಿದ್ದಾರೆ. 2018 ರ ಋತುವಿನಲ್ಲಿ ಐಪಿಎಲ್ ನೆಟ್​ ಬೌಲರ್​​ ಆಗಿ ಮೊದಲ ಬಾರಿ ಕಾಣಿಸಿಕೊಂಡಿದ್ದರು. ಅವರ ತವರು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ಕೆಲಸ ಮಾಡಿದ್ದರು.

ಅಂದು ಆಶಿಶ್ ನೆಹ್ರಾ ಅವರು ಮಹೇಶ್ ಕುಮಾರ್ ಅವರಿಗೆ ಒಂದು ಜೋಡಿ ಶೂಗಳನ್ನು ಉಡುಗೊರೆಯಾಗಿ ನೀಡಿದ್ದರು. ಕೊಹ್ಲಿ ಆಟೋಗ್ರಾಫ್ ನೀಡಿದ್ದರು. ಡಿವಿಲಿಯರ್ಸ್ ಕೂಡ ಅಭಿನಂದಿಸಿದರು. 2018 ರಲ್ಲಿ ಫ್ರಾಂಚೈಸಿಯ ಮುಂದಿನ ಎಲ್ಲಾ ತವರು ಪಂದ್ಯಗಳಲ್ಲಿ ಅವರನ್ನು ಆರ್​​ಸಿಬಿ ಅವರನ್ನು ಕರೆಸಿಕೊಂಡಿತ್ತು.

ಎಂಜಿನಿಯರಿಂಗ್ ಪದವಿಧರ

ಟೀಮ್ ಇಂಡಿಯಾ ಮತ್ತು ಆರ್​ಸಿಬಿಯ ನೆಟ್ಸ್​ನಲ್ಲಿ ಕಾಣಿಸಿಕೊಳ್ಳುವ ಮೊದಲೇ, ಮಹೇಶ್ ಕುಮಾರ್ ಕ್ರಿಕೆಟ್ ಮೇಲಿನ ಪ್ರೀತಿ ಅರಿತುಕೊಳ್ಳುವ ಮೊದಲು ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿದ್ದರು. 27ರ ಹರೆಯದ ಮಹೇಶ್​​ ದೇಶೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಇನ್ನೂ ಪಾದಾರ್ಪಣೆ ಮಾಡಿಲ್ಲ.

2022 ರ ಋತುವಿನಲ್ಲಿ, ಮಹೇಶ್ ಗುಜರಾತ್ ಟೈಟಾನ್ಸ್ ಪರ ನೆಟ್ ಬೌಲರ್ ಆಗಿ ಹೋಗಿದ್ದರು. ಅವರು ವೃತ್ತಿಪರ ಕ್ರಿಕೆಟಿಗರಾಗಿ ಹೊರಹೊಮ್ಮುವುದನ್ನು ನೋಡುವುದು ಅವರ ತಾಯಿಯ ಕನಸು.

Continue Reading

ಪ್ರಮುಖ ಸುದ್ದಿ

IPL 2024 : ಬುದ್ಧಿ ಹೇಳಿದರೂ ಕೇಳದ ಕೆಕೆಆರ್​ ಬೌಲರ್​ ರಾಣಾಗೆ ಮತ್ತೆ ದಂಡ ; ಒಂದು ಪಂದ್ಯದಿಂದ ಸಸ್ಪೆಂಡ್​​

IPL 2024 : ಮಾರ್ಚ್ 23 ರಂದು ಎಸ್ಆರ್​ಎಚ್​ ವಿರುದ್ಧದ ಕೆಕೆಆರ್ ಪಂದ್ಯದ ವೇಳೆ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾಗೆ ದಂಡ ವಿಧಿಸಲಾಗಿತ್ತು. ಈಡನ್ ಗಾರ್ಡನ್ಸ್​ನಲ್ಲಿ ನಡೆದ ಆ ಪಂದ್ಯದಲ್ಲಿ ಬ್ಯಾಟರ್​ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ಫ್ಲೈಯಿಂಗ್ ಕಿಸ್ ನೀಡಿದ್ದರು. ಅದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು.

VISTARANEWS.COM


on

IPL 2024
Koo

ಬೆಂಗಳೂರು: ಐಪಿಎಲ್ 2024 ರ ಋತುವಿನಲ್ಲಿ ಎರಡನೇ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅವರಿಗೆ ಪಂದ್ಯದ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ. ಏಪ್ರಿಲ್ 29 ರ ಮಂಗಳವಾರ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೆಕೆಆರ್ ಗೆಲುವಿನ ಸಂದರ್ಭದಲ್ಲಿ ಹರ್ಷಿತ್ ಎರಡನೇ ಅಪರಾಧ ಎಸಗಿದ್ದಾರೆ. ಐಪಿಎಲ್ 2024 ರಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಿಷೇಧ ಶಿಕ್ಷೆ ಎದುರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಹರ್ಷಿತ್ ರಾಣಾ ಪಾತ್ರರಾಗಿದ್ದಾರೆ.

ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ 4 ಓವರ್​​ಗಳಲ್ಲಿ 28 ರನ್​ ನೀಡಿ 2 ವಿಕೆಟ್ ಪಡೆದು ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯದ 7 ನೇ ಓವರ್​ನಲ್ಲಿ ಎಡಗೈ ಬ್ಯಾಟ್ಸ್ಮನ್ ಅಭಿಷೇಕ್​ ಪೊರೆಲ್​ ವಿಕೆಟ್ ಪಡೆದ ನಂತರ ಅವರತ್ತ ಕೈಬೀಸಿ ಲೇವಡಿ ಮಾಡಿದ್ದಾರೆ. ಇದು ಐಪಿಎಲ್​ ನಿಯಮಗಳ ಉಲ್ಲಂಘನೆಯಾಗಿದೆ. ಈ ರೀತಿಯ ತಪ್ಪು ಮಾಡುತ್ತಿರುವುದು ಎರಡನೇ ಬಾರಿಯಾಗಿರುವ ಕಾರಣ ಅವರಿಗೆ ನಿಷೇಧ ಶಿಕ್ಷೆ ನೀಡಲಾಗಿದೆ. ಹೀಗಾಗಿ ಮೇ 3 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ವಿರುದ್ಧದ ಕೆಕೆಆರ್ ಪಂದ್ಯಕ್ಕೆ ಹರ್ಷಿತ್ ಲಭ್ಯವಿರುವುದಿಲ್ಲ.

ಮಾರ್ಚ್ 23 ರಂದು ಎಸ್ಆರ್​ಎಚ್​ ವಿರುದ್ಧದ ಕೆಕೆಆರ್ ಪಂದ್ಯದ ವೇಳೆ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾಗೆ ದಂಡ ವಿಧಿಸಲಾಗಿತ್ತು. ಈಡನ್ ಗಾರ್ಡನ್ಸ್​ನಲ್ಲಿ ನಡೆದ ಆ ಪಂದ್ಯದಲ್ಲಿ ಬ್ಯಾಟರ್​ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ಫ್ಲೈಯಿಂಗ್ ಕಿಸ್ ನೀಡಿದ್ದರು. ಅದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು.

“ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ರಾಣಾ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿಯ ಅನುಮತಿಯನ್ನು ಸ್ವೀಕರಿಸಿದ್ದರೆ. ನಿಯಮಗಳ ಲೆವೆಲ್ 1 ಉಲ್ಲಂಘನೆಗಾಗಿ ಮ್ಯಾಚ್ ರೆಫರಿ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ. ಈ ಹಿಂದೆ ಐಪಿಎಲ್ ನೀತಿ ಸಂಹಿತೆಯಡಿ ಈ ಆಟಗಾರನಿಗೆ ದಂಡ ವಿಧಿಸಲಾಗಿತ್ತು, “ಎಂದು ಐಪಿಎಲ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ IPL 2024 : ಐಪಿಎಲ್ ಪ್ಲೇಆಫ್​ ಹಂತಕ್ಕೆ ಇಂಗ್ಲೆಂಡ್ ಆಟಗಾರರು ಅಲಭ್ಯ; ಇದಕ್ಕೂ ಒಂದು ಕಾರಣವಿದೆ

ಡೆಲ್ಲಿ ನಾಯಕ ರಿಷಭ್ ಪಂತ್ ಸೇರಿದಂತೆ ಕ್ಯಾಪಿಟಲ್ಸ್ ತಂಡದ ಒಂದೆರಡು ಕ್ಯಾಚ್​​ ಳನ್ನು ಬಿಟ್ಟುಕೊಟ್ಟ ನಂತರ ಒತ್ತಡದಲ್ಲಿದ್ದ ಹರ್ಷಿತ್ ರಾಣಾ ಕೋಪಗೊಂಡಿದ್ದರು. ಆದಾಗ್ಯೂ, ಡಿಸಿಯನ್ನು 20 ಒವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್​ಗಳಿಗೆ ನಿಯಂತ್ರಿಸಿತ್ತು. ಫಿಲ್ ಸಾಲ್ಟ್ 33 ಎಸೆತಗಳಲ್ಲಿ 68 ರನ್ ಸಿಡಿಸಿದ ಕಾರಣ ಕೆಕೆಆರ್ ಬೆವರು ಸುರಿಸದೆ ಗುರಿ ತಲುಪಿತು.

ಹರ್ಷಿತ್ ರಾಣಾ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Continue Reading

ಪ್ರಮುಖ ಸುದ್ದಿ

IPL 2024 : ಐಪಿಎಲ್ ಪ್ಲೇಆಫ್​ ಹಂತಕ್ಕೆ ಇಂಗ್ಲೆಂಡ್ ಆಟಗಾರರು ಅಲಭ್ಯ; ಇದಕ್ಕೂ ಒಂದು ಕಾರಣವಿದೆ

ಇಂಗ್ಲೆಂಡ್​ ಟಿ 20 ವಿಶ್ವಕಪ್​​ಗೆ ತೆರಳುವ ಆಟಗಾರರಾದ ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್​ಸ್ಟನ್​ , ಮೊಯೀನ್ ಅಲಿ, ಫಿಲ್ ಸಾಲ್ಟ್ ಮತ್ತು ಜಾನಿ ಬೈರ್​ಸ್ಟೋವ್​ ಪ್ರಸ್ತುತ ಐಪಿಎಲ್ 2024 ಫ್ರಾಂಚೈಸಿಗಳಿಗಾಗಿ ಆಡುತ್ತಿದ್ದಾರೆ. ಅವರೆಲ್ಲೂ ಈ ಕರ್ತವ್ಯದಿಂದ ವಿಮುಖರಾಗಬೇಕಾಗುತ್ತದೆ.

VISTARANEWS.COM


on

IPL 2024
Koo

ಬೆಂಗಳೂರು: ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ (IPL 2024) 15 ಆಟಗಾರರ ಪ್ರಾಥಮಿಕ ತಂಡವನ್ನು ಪ್ರಕಟಿಸಿದೆ. 2022 ರ ಟಿ 20 ವಿಶ್ವಕಪ್ (T20 World Cup) ವಿಜೇತ ನಾಯಕ ಜೋಸ್ ಬಟ್ಲರ್ (Jos Butler) ನೇತೃತ್ವದ ತಂಡವು ಪಂದ್ಯಾವಳಿಗೆ ಒಂದು ವಾರ ಮೊದಲು ತವರಿನಲ್ಲಿ ನಾಲ್ಕು ಪಂದ್ಯಗಳ ಟಿ 20ಐ ಸರಣಿಯಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಇಂಗ್ಲೆಂಡ್​ನ ಟಿ 20 ವಿಶ್ವಕಪ್ 2024ರ ಹಲವಾರು ಆಟಗಾರರು ಪ್ರಸ್ತುತ ಐಪಿಎಲ್ 2024 ಋತುವಿಗಾಗಿ ಭಾರತದಲ್ಲಿದ್ದಾರೆ. ಹಿಗಾಗಿ ಆಯ್ಕೆಯಾದ ಆಟಗಾರರು ಪ್ಲೇಆಫ್​​ಗೆ ಮುಂಚಿತವಾಗಿ ಇಂಗ್ಲೆಂಡ್​ಗೆ ವಾಪಸ್​ ಹೋಗಬೇಕು ಎಂದು ಇಸಿಬಿ ಹೇಳಿದೆ. ಹೀಗಾಗಿ ಐಪಿಎಲ್​ ಫೈನಲ್​ಗೇರುವ ತಂಡಗಳಲ್ಲಿರುವ ಇಂಗ್ಲೆಂಡ್​ ಆಟಗಾರರು ಪ್ರಮುಖ ಹಂತದಲ್ಲಿ ಅಲಭ್ಯರಾಗುತ್ತಾರೆ.

ಏಪ್ರಿಲ್ 30 ರಂದು, ಇಸಿಬಿಯ ಆಯ್ಕೆ ಸಮಿತಿಯು ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್​​ ತಂಡದ ಮುಂಬರುವ ತವರು ಟಿ 20 ಐ ಸರಣಿ ಮತ್ತು ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2024 ಗಾಗಿ ಸಂಯೋಜಿತ ತಂಡವನ್ನು ಘೋಷಿಸಿದೆ. ವಿಶೇಷವೆಂದರೆ, ಪಾಕಿಸ್ತಾನ ವಿರುದ್ಧದ ಸರಣಿಯು ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ಋತುವಿನ ಪ್ಲೇಆಫ್ ದಿನಾಂಕದೊಂದಿಗೆ ಸಂಘರ್ಷ ಎದುರಿಸುತ್ತಿದೆ. ಹೀಗಾಗಿ ಟೂರ್ನಿಗೆ ಆಯ್ಕೆಯಾಗಿರುವ ಆಟಗಾರರು ಮರಳಬೇಕಾಗುತ್ತದೆ.

ಇಂಗ್ಲೆಂಡ್​ ಟಿ 20 ವಿಶ್ವಕಪ್​​ಗೆ ತೆರಳುವ ಆಟಗಾರರಾದ ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಲಿಯಾಮ್ ಲಿವಿಂಗ್​ಸ್ಟನ್​ , ಮೊಯೀನ್ ಅಲಿ, ಫಿಲ್ ಸಾಲ್ಟ್ ಮತ್ತು ಜಾನಿ ಬೈರ್​ಸ್ಟೋವ್​ ಪ್ರಸ್ತುತ ಐಪಿಎಲ್ 2024 ಫ್ರಾಂಚೈಸಿಗಳಿಗಾಗಿ ಆಡುತ್ತಿದ್ದಾರೆ. ಅವರೆಲ್ಲೂ ಈ ಕರ್ತವ್ಯದಿಂದ ವಿಮುಖರಾಗಬೇಕಾಗುತ್ತದೆ.

ಲೀಡ್ಸ್​ನಲ್ಲಿ ಮೊದಲ ಪಂದ್ಯ

ಪಾಕಿಸ್ತಾನ ವಿರುದ್ಧದ ಸರಣಿ ಮೇ 22 ರಿಂದ ಲೀಡ್ಸ್​ನಲ್ಲಿ ಪ್ರಾರಂಭವಾಗಲಿದ್ದು, ಐಪಿಎಲ್ 2024 ಪ್ಲೇಆಫ್​ಗೆ ಮೊದಲು ಇಂಗ್ಲೆಂಡ್​ಗೆ ಮರಳುವಂತೆ ಇಸಿಬಿ ತನ್ನ ಆಟಗಾರರಿಗೆ ಸೂಚನೆ ನೀಡಿದೆ. ಇಸಿಬಿಯ ಈ ಮೇಲಿನ ನಿಲುವು ರಾಜಸ್ಥಾನ್ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಂತಹ ಫ್ರಾಂಚೈಸಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಲಿಯಾಮ್ ಲಿವಿಂಗ್​ಸ್ಟನ್​, ಜಾನಿ ಬೈರ್​​ಸ್ಟೋವ್​ ಮತ್ತು ಸ್ಟ್ಯಾಂಡ್-ಇನ್ ನಾಯಕ ಸ್ಯಾಮ್ ಕರ್ರನ್ ಅವರಂತಹ ಆಟಗಾರರ ಸೇರ್ಪಡೆಯೊಂದಿಗೆ ಪಂಜಾಬ್ ಕಿಂಗ್ಸ್ ತಂಡವೂ ಇಂಗ್ಲೆಂಡ್ ಆಟಗಾರರನ್ನು ನೆಚ್ಚಿಕೊಂಡಿದೆ.

ಇಂಗ್ಲೆಂಡ್ ಜೂನ್ 4 ರಂದು ಸ್ಕಾಟ್ಲೆಂಡ್ ವಿರುದ್ಧ ಗ್ರೂಪ್ ಬಿ ಪಂದ್ಯದೊಂದಿಗೆ ಮುಂಬರುವ 2024 ರ ಆವೃತ್ತಿಯ ಪಂದ್ಯಾವಳಿಯಲ್ಲಿ ತನ್ನ ಟಿ 20 ವಿಶ್ವಕಪ್ ಪ್ರಶಸ್ತಿಯ ಹೋರಾಟ ಪ್ರಾರಂಭಿಸಲಿದೆ.

Continue Reading
Advertisement
IPL 2024
ಪ್ರಮುಖ ಸುದ್ದಿ12 mins ago

IPL 2024 : ಅತಿ ವೇಗದ ಬೌಲರ್​ ಮಾಯಾಂಕ್​ ಯಾದವ್​ಗೆ ಮತ್ತೆ ಗಾಯ?

labour Day
ಪ್ರಮುಖ ಸುದ್ದಿ1 hour ago

Labour Day : ಮೇ 1ರಂದೇ ಕಾರ್ಮಿಕ ದಿನ ಆಚರಿಸುವುದು ಯಾಕೆ? ರಜೆ ಕೊಡಲು ಶುರು ಮಾಡಿದ್ದು ಯಾವಾಗ?

Parliament Flashback
Lok Sabha Election 20241 hour ago

Parliament Flashback: 1996ರಲ್ಲಿ ಬಿಜೆಪಿ ಮೊದಲ ಬಾರಿ ಕೇಂದ್ರದಲ್ಲಿ ಸರ್ಕಾರ ನಡೆಸಿದ್ದು ಹೇಗೆ?

Viral Video
ವೈರಲ್ ನ್ಯೂಸ್1 hour ago

Viral News: ಸೆಕೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕಾಪಾಡಲು ಶಿಕ್ಷಕರ ಸೂಪರ್‌ ಐಡಿಯಾ; ಇಲ್ಲಿದೆ ವಿಡಿಯೊ

Prime Minister Narendra Modi wrote a letter to former CM Basavaraj Bommai
ಕರ್ನಾಟಕ2 hours ago

Lok Sabha Election 2024: ಬಸವರಾಜ ಬೊಮ್ಮಾಯಿಗೆ ಪತ್ರ ಬರೆದ ಪ್ರಧಾನಿ ಮೋದಿ; ಕೊಟ್ಟ ಟಾಸ್ಕ್‌ ಏನು?

Labour Day 2024
ದೇಶ2 hours ago

Labour Day 2024: ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ರೂಪಿಸಿರುವ ಪ್ರಮುಖ ಯೋಜನೆಗಳಿವು

State government conspiracy behind Prajwal Hassan Pen Drive Case says HD Kumaraswamy
ಕ್ರೈಂ2 hours ago

Hassan Pen Drive Case: ಪ್ರಜ್ವಲ್‌ಗೆ ಕಾಂಗ್ರೆಸ್‌ ಸರ್ಕಾರದಿಂದಲೇ ಖೆಡ್ಡಾ? ಏನಿದು ಹಕೀಕತ್ತು? ಮಾಜಿ ಸಿಎಂ ಗರಂ ಆಗಿದ್ದೇಕೆ?

Karnataka Weather
ಕರ್ನಾಟಕ2 hours ago

Karnataka Weather: ರಾಜ್ಯದಲ್ಲಿ ಕಳೆದ 7 ವರ್ಷಗಳಲ್ಲೇ ಗರಿಷ್ಠ ತಾಪಮಾನ ದಾಖಲು!

IPL 2024
ಪ್ರಮುಖ ಸುದ್ದಿ2 hours ago

IPL 2024 : ಗುಜರಾತ್​ ಟೀಮ್​ನಲ್ಲಿ ಬುಮ್ರಾ 2.0; ಕನ್ನಡಿಗನ ಬೌಲಿಂಗ್​ ಶೈಲಿ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​

Rescue of a boy who drowned at Malpe beach Two boys die after taking bath in Sindagi
ಕ್ರೈಂ2 hours ago

Malpe Beach: ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆ; ಸಿಂದಗಿಯಲ್ಲಿ ಸ್ನಾನಕ್ಕೆಂದು ಬಾವಿಗಿಳಿದಿದ್ದ ಬಾಲಕರಿಬ್ಬರ ಸಾವು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ18 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest3 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌