April Fool's Day : ಏಪ್ರಿಲ್‌ ಫೂಲ್ಸ್‌ ದಿನದ ಹಿನ್ನೆಲೆಯೇನು? ನಿಮ್ಮ ಸ್ನೇಹಿತರನ್ನು ಬಕ್ರಾ ಮಾಡುವುದು ಹೇಗೆ? - Vistara News

ಪ್ರಮುಖ ಸುದ್ದಿ

April Fool’s Day : ಏಪ್ರಿಲ್‌ ಫೂಲ್ಸ್‌ ದಿನದ ಹಿನ್ನೆಲೆಯೇನು? ನಿಮ್ಮ ಸ್ನೇಹಿತರನ್ನು ಬಕ್ರಾ ಮಾಡುವುದು ಹೇಗೆ?

ಏಪ್ರಿಲ್‌ 1 ಫೂಲ್ಸ್ ದಿನ(April Fool’s Day). ಈ ದಿನದ ವಿಶೇಷತೆ, ಹಿನ್ನೆಲೆ ಬಗ್ಗೆ ತಿಳಿದವರು ಅತಿ ಕಡಿಮೆ. ಅದೇ ಹಿನ್ನೆಲೆ ಈ ವಿಶೇಷ ದಿನದ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಏಪ್ರಿಲ್‌ 1 ಎಂದಾಕ್ಷಣ ನೆನಪಾಗುವುದು ಏಪ್ರಿಲ್‌ ಫೂಲ್ಸ್‌ ಡೇ(April Fool’s Day). ಅಂದರೆ ಬಕ್ರಾ ಆಗುವ ಮತ್ತು ಬಕ್ರಾ ಮಾಡುವ ದಿನ ಎಂದೇ ಹೇಳಬಹುದು. ಈ ದಿನದಂದು ನಿಮ್ಮ ಸ್ನೇಹಿತರಿಗೆ ಸುಳ್ಳು ಹೇಳಿಯೋ ಅಥವಾ ಏನಾದರೂ ಸಣ್ಣ ತಮಾಷೆ ಮಾಡಿ ಯಾಮಾರಿಸುವುದು ವಿಶೇಷ. ಹಾಗಾದರೆ ಈ ದಿನದ ಆಚರಣೆ ಏಕಾಗಿ ಬಂತು? ಯಾರಿಂದ ಬಂತು? ಎನ್ನುವಂತಹ ಸಾಕಷ್ಟು ಪ್ರಶ್ನೆಗಳು ನಿಮ್ಮಲ್ಲಿರಬಹುದು. ಅವುಗಳಿಗೆ ಉತ್ತರ ಇಲ್ಲಿದೆ.

ಇದನ್ನೂ ಓದಿ: Viral Video: ಅರ್ಧ ರಾತ್ರೀಲಿ ಮಧ್ಯ ರಸ್ತೇಲಿ ಮೊಬೈಲ್‌ ಹಿಡಿದು ನಿಂತಿದ್ದ ಇನ್ಫ್ಲುಯೆನ್ಸರ್‌; ಮುಂದಾಗಿದ್ದೇನು?
ಏಪ್ರಿಲ್‌ ಫೂಲ್ಸ್‌ ಡೇ ಯಾವಾಗ ಆರಂಭವಾಯಿತು ಎನ್ನುವುದಕ್ಕೆ ಯಾರ ಬಳಿಯೂ ನಿಖರವಾದ ಉತ್ತರವಿಲ್ಲ. ಆದರೆ ಕೆಲವು ಇತಿಹಾಸತಜ್ಞರು ಹೇಳುವ ಪ್ರಕಾರ ಈ ದಿನದ ಆಚರಣೆ 1582ರಲ್ಲಿ ಆರಂಭವಾಯಿತು. ಫ್ರಾನ್ಸ್‌ನಲ್ಲಿ ಅದಕ್ಕೂ ಮೊದಲು ಗ್ರೆಗೊರಿಯನ್‌ ಕ್ಯಾಲೆಂಡರ್‌ ಬಳಕೆ ಮಾಡಲಾಗುತ್ತಿತ್ತು. 1582ರಲ್ಲಿ ಜೂಲಿಯನ್‌ ಕ್ಯಾಲೆಂಡರ್‌ನ್ನು ಬಳಸಲಾರಂಭಿಸಲಾಯಿತು. ಜೂಲಿಯನ್‌ ಕ್ಯಾಲೆಂಡರ್‌ ಪ್ರಕಾರ ಹೊಸ ವರ್ಷ ಏಪ್ರಿಲ್‌ 1ರ ಸನಿಹದಲ್ಲಿ ಬರುತ್ತದೆ. ಅದೇ ಕಾರಣಕ್ಕೆ ಅನೇಕರು ಏಪ್ರಿಲ್‌ ಆರಂಭವನ್ನು ಹೊಸ ವರ್ಷ ಎಂದು ಆಚರಿಸಲಾರಂಭಿಸಿದರು. ಆದರೆ ಜನವರಿ 1ನ್ನು ಹೊಸ ವರ್ಷ ಎಂದು ನಂಬುತ್ತಿದ್ದ ಜನರು ಇದನ್ನು ವಿರೋಧಿಸಿದರು. ಹಾಗೆಯೇ ಏಪ್ರಿಲ್‌ನಲ್ಲಿ ಹೊಸ ವರ್ಷ ಎನ್ನುತ್ತಿದ್ದವರನ್ನು ಏಪ್ರಿಲ್‌ ಫೂಲ್‌ಗಳು ಎಂದು ಕರೆಯಲಾರಂಭಿಸಿದರು ಎಂದು ಹೇಳಲಾಗಿದೆ. ಅದೇ ಹಿನ್ನೆಲೆ ಈ ದಿನಾಚರಣೆ ಆಚರಣೆಗೆ ಬಂದಿದ್ದಾಗಿ ಹೇಳಲಾಗುತ್ತದೆ.

18ನೇ ಶತಮಾನದಲ್ಲಿ ಬ್ರಿಟನ್‌ನಲ್ಲಿ ಈ ಏಪ್ರಿಲ್‌ ಫೂಲ್‌ ದಿನವನ್ನು ವ್ಯಾಪಕವಾಗಿ ಆಚರಣೆ ಮಾಡಲಾರಂಭಿಸಲಾಯಿತು. ಸ್ಕಾಟ್ಲೆಂಡ್‌ನಲ್ಲಿ ಪ್ರತಿ ವರ್ಷ ಎರಡು ದಿನಗಳ ಕಾಲ ಈ ದಿನವನ್ನು ಅತ್ಯಂತ ವಿಶೇಷವಾಗಿ ಆಚರಣೆ ಮಾಡಲಾಯಿತು. ಆ ದಿನಗಳಂದು ಜನರು ತಮ್ಮ ಸ್ನೇಹಿತರಿಗೆ ಸುಳ್ಳು ಹೇಳಿ, ತಮಾಷೆ ಮಾಡಿ ಸಂಭ್ರಮಿಸಲಾರಂಭಿಸಿದರು.

ಏಪ್ರಿಲ್‌ ಫೂಲ್‌ ದಿನವನ್ನು ಒಂದು ಒಳ್ಳೆಯ ಉದ್ದೇಶದಿಂದಲೂ ಆಚರಿಸಲಾಗುತ್ತದೆ. ಯಾರಾದರೂ ಜಗಳ ಆಡಿಕೊಂಡು ಮನಸ್ತಾಪ ಮಾಡಿಕೊಂಡಿದ್ದರೆ, ಈ ದಿನದಂದು ಸಣ್ಣದೊಂದು ತಮಾಷೆ ಮೂಲಕ ಮನಸ್ತಾಪ ಮರೆಯಬಹುದಾಗಿದೆ.

April Fool’s Day : ಬಕ್ರಾ ಮಾಡುವುದಕ್ಕೆ ಐಡಿಯಾಗಳು

* ಮಾರುಕಟ್ಟೆಯಿಂದ ಕೃತಕ ಬಾಲವನ್ನು ತಂದು ನಿಮ್ಮ ಸ್ನೇಹಿತರಿಗೆ ಅಂಟಿಸಿ. ಅವರಿಗೆ ಅದು ಗೊತ್ತಾದ ತಕ್ಷಣ ಏಪ್ರಿಲ್‌ ಫೂಲ್‌ ಎಂದು ಕೂಗಿ ಅವರ ಮುಖದಲ್ಲಿ ನಗು ತರಿಸಿ.
*ನಿಮ್ಮ ಸ್ನೇಹಿತರು ಇನ್ನೇನು ಖುರ್ಚಿ ಮೇಲೆ ಕೂರುತ್ತಾರೆ ಎನ್ನುವಷ್ಟರಲ್ಲಿ ಖುರ್ಚಿ ಮೇಲೆ ಬಲೂನ್‌ ಇಡಿ. ಬಲೂನ್‌ ಒಡೆದ ಸದ್ದಿಗೆ ಒಮ್ಮೆಲೆ ಅವರು ಗಾಬರಿ ಬಿದ್ದು, ಆಮೇಲೆ ನಗಲಾರಂಭಿಸುತ್ತಾರೆ.
*ನಿಮ್ಮ ಸ್ನೇಹಿತರ ಮೊಬೈಲ್‌ನಲ್ಲಿ ಆಟೋ ಕರೆಕ್ಟ್‌ ವರ್ಲ್ಡ್‌ ತೆಗೆದು ಅಲ್ಲಿ ನೀವೇ ಒಂದಿಷ್ಟು ಬದಕ್ಕೆ ಬೇರೆ ಪದಗಳನ್ನು ಬದಲಾಯಿಸಿಡಿ. ಉದಾಹರಣೆಗೆ ಹಲೋ ಬದಲು ಬನಾನಾ. ಈ ರೀತಿ ಮಾಡುವುದರಿಂದ ನಿಮ್ಮ ಸ್ನೇಹಿತರು ಏನೋ ಸಂದೇಶ ಕಳುಹಿಸುವುದಕ್ಕೆ ಹೋಗಿ ಇನ್ನೇನೋ ಕಳುಹಿಸಿ ಪರದಾಡುತ್ತಾರೆ. ನಂತರ ಅವರಿಗೆ ತಿಳಿಸಿ, ಬಕ್ರಾವಾದ ವಿಚಾರವನ್ನು ಹೇಳಿ.
*ಯಾವುದಾದರೂ ಸಂದೇಶಗಳಿರುವ ಸ್ಕ್ರೀನ್‌ಶಾಟ್‌ ಅನ್ನು ಎಡಿಟ್‌ ಮಾಡಿ ನಿಮ್ಮ ಸ್ನೇಹಿತರಿಗೆ ಕಳುಹಿಸಿ. ನೋಡಿದಾಕ್ಷಣ ಅವರು ನಂಬುವಂತಿರಬೇಕು. ಅವರು ಬಕ್ರಾ ಆದ ನಂತರ ನಿಜ ವಿಚಾರ ತಿಳಿಸಿ.
*ಹೊಸ ನಂಬರ್‌ನಿಂದ ನಿಮ್ಮ ಸ್ನೇಹಿತರಿಗೆ ಅಪರಿಚಿತರಂತೆ ಸಂದೇಶ ಕಳುಹಿಸಿ. ಅವರ ಪ್ರತಿಕ್ರಿಯೆ ನೋಡಿ, ಒಂದಿಷ್ಟು ಕಾಡಿಸಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Nandini Milk: ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಆರ್.‌ ಅಶೋಕ್‌ ಪ್ರಶ್ನೆ ಮಾಡಿದ್ದಾರೆ. ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ ಎಂದು ಟೀಕಿಸಿದ್ದಾರೆ.

VISTARANEWS.COM


on

Nandini Milk No incentives for milk producers Ashok slams govt for sponsoring foreign cricket team
Koo

ಬೆಂಗಳೂರು: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಡದ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಗರಂ ಆಗಿದ್ದಾರೆ. ಒಂದು ಕಡೆ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಬಾಕಿ ಉಳಿಸಿಕೊಂಡು ಮತ್ತೊಂದು ಕಡೆ ಕೆಎಂಎಫ್‌ ಸಂಸ್ಥೆಯ ನಂದಿನಿ ಹಾಲು (Nandini Milk) ಉತ್ಪಾದನೆಯಿಂದ ಬಂದ ಲಾಭದಲ್ಲಿ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವವನ್ನು ಪಡೆದುಕೊಳ್ಳಲಾಗಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಈ ಸಂಬಂಧ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಆರ್.‌ ಅಶೋಕ್‌, ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನವನ್ನು ಹೊರಹಾಕಿದ್ದಾರೆ. ಈಗಾಗಲೇ ಸರ್ಕಾರದ ಮೇಲೆ ಮುಗಿಬಿದ್ದಿರುವ ಪ್ರತಿಪಕ್ಷಗಳು, ಈಗ ಮತ್ತಷ್ಟು ಸಮಸ್ಯೆಗಳನ್ನು ಹೊತ್ತು ಜನರ ಮುಂದಿಡಲು ಪ್ರಯತ್ನ ಮಾಡುತ್ತಿವೆ. ಇದರ ಭಾಗವಾಗಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಪ್ರಾಯೋಜಕತ್ವಕ್ಕೆ ಹಣ ಹಾಕಿರುವ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

ಆರ್.‌ ಅಶೋಕ್‌ ಪೋಸ್ಟ್‌ನಲ್ಲೇನಿದೆ?

“ರಾಜ್ಯದ ವಿವಿಧ ಹಾಲು ಒಕ್ಕೂಟಗಳಿಗೆ ಹಾಲು ಸರಬರಾಜು ಮಾಡುವ 26 ಲಕ್ಷಕ್ಕೂ ಹೆಚ್ಚು ರೈತರಿಗೆ ಸಲ್ಲಬೇಕಾದ 703 ಕೋಟಿ ರೂಪಾಯಿ ಪ್ರೋತ್ಸಾಹ ಧನವನ್ನು ಕಳೆದ 8 ತಿಂಗಳಿನಿಂದ ಬಾಕಿ ಉಳಿಸಿಕೊಂಡಿದೆ ಈ ರೈತ ವಿರೋಧಿ ಕಾಂಗ್ರೆಸ್‌ ಸರ್ಕಾರ.

ಸಿಎಂ ಸಿದ್ದರಾಮಯ್ಯ ಅವರೇ, ಚುನಾವಣೆ ಸಂದರ್ಭದಲ್ಲಿ ನಂದಿನಿ ಹೆಸರಲ್ಲಿ ರಾಜಕೀಯ ಮಾಡಿ ಈಗ ಅಮೃತದಂತಹ ಹಾಲು ಕೊಡುವ ರೈತರ ಬಾಳಲ್ಲಿ ವಿಷ ಹಿಂಡುವ ಪಾಪದ ಕೆಲಸ ಮಾಡುತ್ತಿದ್ದೀರಲ್ಲ, ಇದೇನಾ ನೀವು ನಮ್ಮ ನಂದಿನಿ ಬ್ರ್ಯಾಂಡ್ ಉಳಿಸುವ ಪರಿ?

ಇದನ್ನೂ ಓದಿ: Phone tapping: ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು ಏನು?

ನಂದಿನಿ ಸಂಸ್ಥೆಯ ಕೋಟ್ಯಂತರ ರೂಪಾಯಿ ಹಣ ಬಳಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ಪ್ರಾಯೋಜಕತ್ವ ಪಡೆಯಲು ನಿಮ್ಮ ಸರ್ಕಾರದ ಬಳಿ ಇದೆ. ಆದರೆ, ನಂದಿನಿ ಬ್ರ್ಯಾಂಡ್ ಅನ್ನ ಕಟ್ಟಿ, ಬೆಳೆಸಿ, ಪೋಷಿಸುತ್ತಿರುವ ಹೈನುಗಾರರಿಗೆ ಸಮಯಕ್ಕೆ ಸರಿಯಾಗಿ ಪ್ರೋತ್ಸಾಹ ಧನ ನೀಡಲು ತಮ್ಮ ಬಳಿ ಹಣವಿಲ್ಲ ಅಲ್ಲವೇ ಸಿದ್ದರಾಮಯ್ಯನವರೇ? ನಾಡಿನ ರೈತರ ಶಾಪ ತಮಗೆ ತಟ್ಟದೇ ಇರದು” ಎಂದು ಆರ್.‌ ಅಶೋಕ್‌ ರೈತರ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ.

Continue Reading

ರಾಜಕೀಯ

Phone tapping: ಗೃಹ ಸಚಿವರಿಗೆ ಅಶೋಕ್‌ ರೈಟಿಂಗ್‌ನಲ್ಲಿ ಕಂಪ್ಲೇಂಟ್‌ ಕೊಡಲಿ; ಫೋನ್‌ ಕದ್ದಾಲಿಕೆ ಆರೋಪಕ್ಕೆ ಡಿಕೆಶಿ ತಿರುಗೇಟು

Phone tapping: ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್‌ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್‌ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್‌ ಟ್ಯಾಪಿಂಗ್‌ ಬಗ್ಗೆ ನಮಗೂ ರಿಪೋರ್ಟ್‌ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಈ ಮೂಲಕ ವಿಧಾನಸಭಾ ವಿಪಕ್ಷ ನಾಯಕ ಆರ್.‌ ಅಶೋಕ್‌ಗೆ ತಿರುಗೇಟು ನೀಡಿದ್ದಾರೆ.

VISTARANEWS.COM


on

Phone tapping case Let Ashok file a complaint to Home Minister DK Shivakumar hits back at phone tapping allegations
Koo

ಬೆಂಗಳೂರು: ರಾಜ್ಯ ಸರ್ಕಾರದ ಮೇಲೆ ಕೇಳಿಬಂದಿರುವ ಫೋನ್‌ ಕದ್ದಾಲಿಕೆ (Phone tapping) ಆರೋಪವು ದಿನೇ ದಿನೆ ವಾಕ್ಸಮರಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ಮೊದಲು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದರು. ಬಳಿಕ ಇದಕ್ಕೆ ಧ್ವನಿಗೂಡಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಹೇಳಿದ್ದರು. ಈಗ ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್‌ ತಿರುಗೇಟು ನೀಡಿದ್ದು, ಅಶೋಕ್‌ ಅವರಿಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲು ಹೇಳಿ ಎಂದು ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಸರ್ಕಾರ ಫೋನ್‌ ಕದ್ದಾಲಿಕೆ ಮಾಡುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದಕ್ಕೆ ತಿರುಗೇಟು ನೀಡಿದರು.

ಫೋನ್‌ ಕದ್ದಾಲಿಕೆ ಆಗುತ್ತಿದೆ ಎಂದಾದರೆ ಈ ಬಗ್ಗೆ ಗೃಹ ಸಚಿವರಿಗೆ ಬರವಣಿಗೆ ಮೂಲಕ ದೂರು ಕೊಡಲಿ. ಅವರ ಕಾಲದಲ್ಲೆಲ್ಲ ಮಾಡಿದ್ದರಲ್ಲವೇ? ಯಾರ ಯಾರ ಕಾಲದಲ್ಲಿ ಫೋನ್‌ ಕದ್ದಾಲಿಕೆ ಮಾಡಿದ್ದಾರೆಂಬುದು ಗೊತ್ತಿದೆ. ಅಶೋಕ್‌ ಹೋಮ್ ಮಿನಿಸ್ಟರ್ ಆಗಿದ್ದವರು, ಕೆಲವರು ಚೀಫ್‌ ಮಿನಿಸ್ಟರ್ ಆಗಿದ್ದವರು ಮಾಡಿರುವ ಫೋನ್‌ ಟ್ಯಾಪಿಂಗ್‌ ಬಗ್ಗೆ ನಮಗೂ ರಿಪೋರ್ಟ್‌ ಬಂದಿತ್ತು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ನಿಮ್ಮ ಸುತ್ತ ಮುತ್ತ ಇರುವವರೇ ಮಾಹಿತಿ ನೀಡಿದ್ದಾರೆ ಎಂಬ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಬಹಳ ಸಂತೋಷ. ಅವರು ಯಾರು ಯಾರು ಮಾಹಿತಿ ಕೊಟ್ಟಿದ್ದಾರೆಂಬುದರ ಬಗ್ಗೆ ಅಪ್ಡೇಟ್ ಕೊಡುವುದಕ್ಕೆ ಹೇಳಿ ಎಂದು ಮಾಧ್ಯಮವರಿಗೆ ಹೇಳಿದರು.

ಸಿಬಿಐಗೆ ಫೋನ್‌ ಕದ್ದಾಲಿಕೆ ಪ್ರಕರಣ ವಹಿಸಲಿ: ಸರ್ಕಾರಕ್ಕೆ ಅಶೋಕ್‌ ಸವಾಲು

ಫೋನ್‌ ಕದ್ದಾಲಿಕೆಯನ್ನು ರಾಜ್ಯ ಸರ್ಕಾರವೇ ಮಾಡುತ್ತಿದೆ. ಇದು ಸುಳ್ಳು ಎಂದಾದರೆ ಕೂಡಲೇ ಈ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲಿ. ಅವರು ತಪ್ಪು ಮಾಡಿಲ್ಲ ಎಂದಾದರೆ ಕೂಡಲೇ ಸಿಬಿಐಗೆ ತನಿಖೆ ಹೊಣೆಯನ್ನು ಒಪ್ಪಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಮಂಗಳವಾರ ಮಾಧ್ಯಮದವರ ಮುಂದೆ ಸವಾಲು ಹಾಕಿದ್ದರು.

ಫೋನ್‌ ಟ್ಯಾಪಿಂಗ್‌ ಬಗ್ಗೆ ಮಾಜಿ ಸಿಎಂ ಎಚ್‌.ಡಿ.‌ ಕುಮಾರಸ್ವಾಮಿ ಹೇಳಿದ್ದಾರೆ. ಅವರಿಗೆ ಪೊಲೀಸ್‌ ಅಧಿಕಾರಿಗಳು ಸಂಪರ್ಕದಲ್ಲಿದ್ದು, ಅವರಿಂದ ತಿಳಿದುಕೊಂಡು ಹೇಳಿರಬಹುದು. ಫೋನ್‌ ಟ್ಯಾಪ್‌ ಮಾಡುವುದು ಅಕ್ರಮವಾಗಿದ್ದು, ಹಣ ಕೊಟ್ಟರೆ ಚೀನಾದಿಂದ ಉಪಕರಣ ಸಿಗುತ್ತದೆ. ರಾಜ್ಯಕ್ಕೆ ಇಂತಹ ಉಪಕರಣ ಎಷ್ಟು ಬಂದಿದೆ? ಎಲ್ಲೆಲ್ಲಿದೆ ಎಂದು ಪತ್ತೆ ಮಾಡಬೇಕು. ವಿರೋಧ ಪಕ್ಷಗಳ ನಾಯಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂದು ನನಗೂ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

ಸರ್ಕಾರ ಮಾಡಿಲ್ಲವಾದರೆ ತನಿಖೆಗೆ ಕೊಡಲಿ

ಫೋನ್‌ ಟ್ಯಾಪ್‌ ಮಾಡುವವರನ್ನು ಜೈಲಿಗೆ ಕಳುಹಿಸಬೇಕು. ಹಿಂದೆಯೂ ಈ ರೀತಿ ಪೊಲೀಸ್‌ ಅಧಿಕಾರಿಗಳು ಮಾಡಿ ತನಿಖೆಗೆ ಒಳಗಾಗಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸರ್ಕಾರ ಇದನ್ನು ಮಾಡಿಲ್ಲವೆಂದು ಎದೆ ಮುಟ್ಟಿ ಹೇಳುವುದಾದರೆ ತನಿಖೆಗೆ ನೀಡಲಿ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸಲಿ ಎಂದು ಆರ್‌. ಅಶೋಕ್ ಒತ್ತಾಯಿಸಿದ್ದರು.

Continue Reading

ಉದ್ಯೋಗ

Job Alert: ಟಿಸಿಎಸ್‌ನಲ್ಲಿದೆ ಭರ್ಜರಿ ಉದ್ಯೋಗಾವಕಾಶ; ಇಂದೇ ಅರ್ಜಿ ಸಲ್ಲಿಸಿ

Job Alert: ದೇಶದ ಐಟಿ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನಲ್ಲಿ ಖಾಲಿ ಇರುವ ಸಾವಿರಾರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಎನ್‌ಸಿಆರ್‌, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಮುಂತಾದೆಡೆಗೆ ನೇಮಕಾತಿ ನಡೆಯಲಿದೆ. ವಿವಿಧ ಹುದ್ದೆಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಹಾಗಾದರೆ ನಿಮಗೊಂದು ಗುಡ್‌ನ್ಯೂಸ್‌. ದೇಶದ ಐಟಿ ವಲಯದ ಅತಿದೊಡ್ಡ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ತನ್ನಲ್ಲಿ ಖಾಲಿ ಇರುವ ಸಾವಿರಾರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 1 ವರ್ಷದ ಕಾರ್ಯಾನುಭ ಇದ್ದವರೂ ಅರ್ಜಿ ಸಲ್ಲಿಸಬಹುದು (Tcs Recruitment 2024). ಬೆಂಗಳೂರು ಸೇರಿದಂತೆ ದೇಶಾದ್ಯಂತ ವಿವಿಧ ಹುದ್ದೆಗಳು ಖಾಲಿ ಇದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ವಿವಿಧ ಹುದ್ದೆಗಳಿಗೆ ಸಂಬಂಧಿಸಿ ಅರ್ಜಿ ಸಲ್ಲಿಸಲು ಜುಲೈವರೆಗೂ ಅವಕಾಶ ನೀಡಲಾಗಿದೆ (Job Alert).

ಹುದ್ದೆಗಳ ವಿವರ

ವೈರ್‌ಲೈನ್‌ – ವೈರ್‌ಲೆಸ್ ನೆಟ್‌ವರ್ಕ್‌ ಸೆಕ್ಯೂರಿಟಿ, ಆಪರೇಷನ್ ಎನೇಬಲ್ಮೆಂಟ್ -ಹ್ಯೂಮನ್ ರಿಸೋರ್ಸ್, ಇಪಿ ಡ್ರೈವ್
ಆಪರೇಷನ್‌ ಸ್ಪೆಷಲಿಸ್ಟ್‌, ಎಂಎಫ್‌ಜಿ ಇಯು ಡ್ರೈವ್, ಎನ್‌ಜಿಎಂ ಎಪಿಎಸಿ ಬಿಎಫ್‌ಎಸ್‌, ಕಸ್ಟಮರ್ ಸರ್ವೀಸ್, ಆ್ಯಕ್ಟಿವ್ ಡೈರೆಕ್ಟರಿ ಡೈರೆಕ್ಟರಿ, ಎಸ್‌ಸಿಸಿಎಂ, ವಿಂಡೋಸ್ ಅಡ್ಮಿನ್, ಜಾವ ಡೆವಲಪರ್, ಪಬ್ಲಿಕ್ ಕ್ಲೌಡ್ ಎಡಬ್ಲ್ಯೂಎಸ್ ಅಡ್ಮಿನ್, ಬ್ಯಾಕಪ್ ಅಡ್ಮಿನ್, ಸ್ಟೋರೇಜ್ ಅಡ್ಮಿನ್, DevOps Admin, ಮಿಡಲ್‌ವೇರ್ ಅಡ್ಮಿನ್, ಓಪೆನ್‌ಶಿಫ್ಟ್‌ ಅಡ್ಮಿನ್, ನೆಟ್‌ವರ್ಕ್ ಅಡ್ಮಿನ್, ಡಾಟಾಬೇಸ್ ಅಡ್ಮಿನ್, ಇಎಲ್‌ಕೆ ಅಡ್ಮಿನ್, ಸೆಕ್ಯೂರಿಟಿ ಎಸ್‌ಎಂಇ, ಟೀಮ್‌ ಸೆಂಟರ್, ಲಿನಕ್ಸ್‌ ಅಡ್ಮಿನ್,
ಮೆಕ್ಯಾನಿಕಲ್ ಡಿಸೈನ್, ಸರ್ವೀಸ್‌ನೌ ಡೆವಲಪರ್, ಓಪೆನ್‌ಸ್ಟಾಕ್‌ ಅಡ್ಮಿನ್, ನೆಟ್‌ವರ್ಕ್‌ ಟೆಸ್ಕಿಂಗ್ ಆ್ಯಂಡ್‌ ಆಟೋಮೇಷನ್, ಪ್ರೋಗ್ರೆಸ್ ಡಾಟಾಬೇಸ್ ಅಡ್ಮಿನಿಸ್ಟ್ರೇಟರ್, ಜಾವ ಫುಲ್‌ಸ್ಟಾಕ್ ಡೆವಲಪರ್ ಮುಂತಾಹ ಹುದ್ದೆಗಳು ಖಾಲಿ ಇವೆ.

ಗಮನಿಸಿ, ಒಂದೊಂದು ಹುದ್ದೆಗೂ ಅರ್ಜಿ ಸಲ್ಲಿಸಲು ಬೇರೆ ಬೇರೆ ದಿನಾಂಕ ಮತ್ತು ಕಾರ್ಯಾನುಭವ ನಿಗದಿ ಪಡಿಸಲಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್, ಎನ್‌ಸಿಆರ್‌, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ ಮುಂತಾದೆಡೆಗೆ ನೇಮಕಾತಿ ನಡೆಯಲಿದೆ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ನೀವು ಹುಡುಕುತ್ತಿರುವ ಆಸಕ್ತ ಹುದ್ದೆ ಸಿಕ್ಕಲ್ಲಿ ಅದರ ಮೇಲೆ ಕ್ಲಿಕ್ ಮಾಡಿ.
  • ನಂತರ ಈ ಹುದ್ದೆಯ ಕುರಿತು ಅರ್ಹತೆ, ರೋಲ್ ಕರ್ತವ್ಯ, ಅನುಭವ, ಇತರ ವಿವರಗಳು ಇರುತ್ತವೆ. ಓದಿಕೊಳ್ಳಿ.
  • ನಂತರ ‘Apply’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಇಮೇಲ್‌ ವಿಳಾಸ, ಪಾಸ್‌ವರ್ಡ್‌ ಮೂಲಕ ಸೈನ್‌ ಇನ್ ಆಗಿ, ಅರ್ಜಿ ಸಲ್ಲಿಸಿ.

ಇದನ್ನೂ ಓದಿ: Job alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Continue Reading

ಪ್ರಮುಖ ಸುದ್ದಿ

Hampi Monument: ಹಂಪಿಯಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ವಿಜಯನಗರ ಅರಸರ ಕಾಲದ ಕಲ್ಲು ಮಂಟಪ

Hampi Monument: ಹಂಪಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ವಿಜಯನಗರ ಸಾಮ್ರಾಜ್ಯದ ಕಾಲದ ಕಲ್ಲು ಮಂಟಪಗಳು ಇವಾಗಿದ್ದು, ಮಳೆಗೆ ಕುಸಿದುಬಿದ್ದಿವೆ. ಇವುಗಳನ್ನು ವಿಜಯನಗರ ಅರಸರು ನಿರ್ಮಿಸಿದ್ದರು. ಇವು ಪಂಪಾ ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತಿವೆ. ಇವು ಮೊದಲೇ ಶಿಥಿಲವಾಗಿದ್ದು, ದುರಸ್ತಿಯ ಅಗತ್ಯದಲ್ಲಿದ್ದವು.

VISTARANEWS.COM


on

Hampi Monument falls
Koo

ವಿಜಯನಗರ: ಕೇಂದ್ರ ಪುರಾತತ್ವ (Archaeology) ಹಾಗೂ ಪ್ರವಾಸೋದ್ಯಮ (tourism) ಇಲಾಖೆಗಳ ದಿವ್ಯ ನಿರ್ಲಕ್ಷ್ಯದ ದುಷ್ಪರಿಣಾಮ, ಯುನೆಸ್ಕೋ ಪಾರಂಪರಿಕ ತಾಣ (unesco heritage site) ಹಂಪಿಯ ಸ್ಮಾರಕಗಳ (Hampi Monument) ಮೇಲೆ ಆಗಿದೆ. ನಿನ್ನೆ ಸುರಿದ ಭಾರಿ ಮಳೆಗೆ ಹಂಪಿಯ ರಥ ಬೀದಿಯಲ್ಲಿರುವ (Hampi car street) ಸಾಲು ಮಂಟಪಗಳಲ್ಲಿ ಕೆಲವು ಉರುಳಿ ಬಿದ್ದಿವೆ.

ಹಂಪಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ವಿಜಯನಗರ ಸಾಮ್ರಾಜ್ಯದ ಕಾಲದ ಕಲ್ಲು ಮಂಟಪಗಳು ಇವಾಗಿದ್ದು, ಮಳೆಗೆ ಕುಸಿದುಬಿದ್ದಿವೆ. ಇವುಗಳನ್ನು ವಿಜಯನಗರ ಅರಸರು ನಿರ್ಮಿಸಿದ್ದರು. ಇವು ಪಂಪಾ ವಿರೂಪಾಕ್ಷ ದೇವಾಲಯದ ರಥ ಬೀದಿಯಲ್ಲಿದ್ದು, ಹಂಪಿಗೆ ಬಂದಿಳಿಯುವವರಿಗೆ ಮೊದಲಾಗಿ ಕಾಣಿಸುವಂತಿವೆ. ಇವು ಮೊದಲೇ ಶಿಥಿಲವಾಗಿದ್ದು, ದುರಸ್ತಿಯ ಅಗತ್ಯದಲ್ಲಿದ್ದವು.

ಹಂಪಿಯ ಸ್ಮಾರಕಗಳು ಯುನೆಸ್ಕೋ ಪಟ್ಟಿಗೆ ಸೇರಿವೆ. ಹೀಗಾಗಿಯೇ ಇವುಗಳನ್ನು ನೋಡಲು ವಿದೇಶಗಳಿಂದ ಜನ ಆಗಮಿಸುತ್ತಾರೆ. ಆದರೆ ಪುರಾತತತ್ವ ಇಲಾಖೆ ಇವುಗಳನ್ನು ರಕ್ಷಿಸಲು ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ಸ್ಮಾರಕಗಳ ರಕ್ಷಣೆಗೆ ಲಕ್ಷ ಲಕ್ಷ ರೂಪಾಯಿ ಹಣ ಬರುತ್ತಿದ್ದರೂ, ಕೇಂದ್ರ ಪುರಾತತ್ವ ಇಲಾಖೆ ಇವುಗಳ ಸ್ಥಿತಿಗತಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂದು ದೂರಲಾಗಿದೆ.

ಕಳೆದ ಒಂದು ವಾರದಿಂದ ವಿಜಯನಗರ ಜಿಲ್ಲಾದ್ಯಾಂತ ಉತ್ತಮ ಮಳೆಯಾಗುತ್ತಿದೆ. ಹಂಪಿಯಲ್ಲಿ ಇನ್ನಷ್ಟು ಶಿಥಿಲ ಸ್ಮಾರಕಗಳಿವೆ. ಸೂಕ್ತ ನಿರ್ವಹಣೆ ಇಲ್ಲದೇ ಇದ್ದಕ್ಕಿದ್ದಂತೆ ಉರುಳಿ ಬಿದ್ದಿರುವ ಸಾಲು ಮಂಟಪಗಳು, ಐತಿಹಾಸಿಕ ಹಂಪಿಯ ಸ್ಮಾರಕಗಳ ನಿರ್ವಹಣೆಯ ಸಮಸ್ಯೆಯತ್ತ ಬೆಟ್ಟು ಮಾಡಿವೆ.

ಹಂಪಿ ದೇಗುಲಕ್ಕೆ ಮೊಳೆ; ರಾಜ್ಯ ಸರ್ಕಾರಕ್ಕೆ ಎಎಸ್‌ಐ ನೋಟಿಸ್

ಆರು ತಿಂಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ಹಂಪಿ ವಿರೂಪಾಕ್ಷ ದೇವಾಲಯದ (Hampi Virupaksha Temple) ಕಂಬಗಳಿಗೆ ಮೊಳೆ ಹೊಡೆಯಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ದತ್ತಿ ಇಲಾಖೆಗೆ (Endowment Department) ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ನೋಟಿಸ್‌ ನೀಡಿದೆ. ಹಂಪಿ ವಿರೂಪಾಕ್ಷೇಶ್ವರ ದೇವಾಲಯದ ಕಂಬಗಳಿಗೆ ಮೊಳೆ ಹೊಡೆದ ಫೋಟೊಗಳು ವೈರಲ್‌ ಆದ ಬೆನ್ನಲ್ಲೇ ಎಎಸ್‌ಐ ನೋಟಿಸ್ ಜಾರಿಗೊಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಂಪಿ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದರು. ಕನ್ನಡ ಜ್ಯೋತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಹಂಪಿಗೆ ತೆರಳಿದ್ದರು. ಇದೇ ವೇಳೆ ಧ್ವಜ ಕಟ್ಟಲು ವಿರೂಪಾಕ್ಷ ದೇವಾಲಯದ ಕಂಬಕ್ಕೆ ಮೊಳೆ ಹೊಡೆಯಲಾಗಿತ್ತು. ಡ್ರಿಲ್‌ನಿಂದ ಕೊರೆದು, ಕಂಬಕ್ಕೆ ಮೊಳೆ ಹೊಡೆಯಲಾಗಿತ್ತು. ದತ್ತಿ ಇಲಾಖೆಯಿಂದಲೇ ಮೊಳೆ ಹೊಡೆಸಲಾಗಿತ್ತು. ಆದರೆ, ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಕಾರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪುರಾತತ್ವ ಇಲಾಖೆಯು ದತ್ತಿ ಇಲಾಖೆಗೆ ನೋಟಿಸ್‌ ಜಾರಿಗೊಳಿಸಿದೆ.

ದೇವಾಲಯದ ಉತ್ತರ ದಿಕ್ಕಿನಲ್ಲಿ ಗೇಟ್‌ ಕೂರಿಸಲು, ಭಕ್ತರು ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಬೇಕು ಎಂದು ದತ್ತಿ ಇಲಾಖೆಯಿಂದ ಮೊಳೆ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಮೊಳೆ ಹೊಡೆಯುವ ಮುನ್ನ ದತ್ತಿ ಇಲಾಖೆಯು ಪುರಾತತ್ವ ಇಲಾಖೆಯ ಅನುಮತಿ ಕೂಡ ಪಡೆದಿಲ್ಲ, ಮಾಹಿತಿಯನ್ನೂ ನೀಡಿಲ್ಲ. ಹಾಗಾಗಿ, ಹಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದತ್ತಿ ಇಲಾಖೆಯ ಅಧಿಕಾರಿಯನ್ನು ಕರೆಸಿ ನೋಟಿಸ್‌ ಜಾರಿಗೊಳಿಸಲಾಗಿದೆ ಎಂದು ಎಎಸ್‌ಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Hampi tourism: ಹಂಪಿ ಗ್ರಾಮ ಪಂಚಾಯತ್‌ಗೆ ಕೇಂದ್ರದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ಪ್ರಶಸ್ತಿ

“ಹಂಪಿ ದೇವಾಲಯದ ಕಂಬವನ್ನು ವಿರೂಪಗೊಳಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ದೇವಾಲಯದ ಕಂಬಗಳಿಗೆ ಹಾನಿ ಮಾಡಿರುವ ಫೋಟೊಗಳನ್ನು ದಾಖಲೆಯಾಗಿ ಪರಿಗಣಿಸಲಾಗಿದೆ. ಹಂಪಿಯು ಯುನೆಸ್ಕೋ ಪಾರಂಪರಿಕ ತಾಣದ ಮಾನ್ಯತೆ ಪಡೆದಿದ್ದು, ಇದಕ್ಕೆ ಹಾನಿ ಮಾಡಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. 1986ರಲ್ಲಿಯೇ ಹಂಪಿಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿದೆ.

Continue Reading
Advertisement
List of Movies Releasing From may 24
ಟಾಲಿವುಡ್9 mins ago

List of Movies Releasing: ಈ ವಾರ ಬಿಡುಗಡೆಗೆ ಸಜ್ಜಾಗಿವೆ ಈ ಸಾಲು ಸಾಲು ಸಿನಿಮಾಗಳು!

Prashant Kishor
ದೇಶ23 mins ago

Prashant Kishor: 3ನೇ ಅವಧಿಯ ಮೋದಿ ಸರ್ಕಾರದಿಂದ ಈ 4 ಕ್ರಾಂತಿಕಾರಕ ಬದಲಾವಣೆ; ಪ್ರಶಾಂತ್‌ ಕಿಶೋರ್‌ ಭವಿಷ್ಯ

Viral Video
ವೈರಲ್ ನ್ಯೂಸ್34 mins ago

Viral Video: ರಸ್ತೆ ಜಗಳದಿಂದ ತಪ್ಪಿಸಿಕೊಳ್ಳುವುದು ಹೇಗೆ? ಬೆಂಗಳೂರು ಪೊಲೀಸರ ವಿಡಿಯೊ ಪಾಠ ಇಲ್ಲಿದೆ!

Diabetes Management Tips
Latest37 mins ago

Diabetes Management Tips: ಈ ಏಳು ಪಾನೀಯಗಳನ್ನು ಸೇವಿಸಿ, ಮಧುಮೇಹ ನಿಯಂತ್ರಿಸಿ

gold rate today beauty
ಚಿನ್ನದ ದರ37 mins ago

Gold Rate Today: ಬಂಗಾರದ ಬೆಲೆಯಲ್ಲಿ ಯಥಾಸ್ಥಿತಿ; ಇಂದಿನ ದರಗಳನ್ನು ಇಲ್ಲಿಯೇ ನೋಡಿ

Viral News
ವೈರಲ್ ನ್ಯೂಸ್40 mins ago

Viral News: ಸಿಂಹದ ಹಿಂಡನ್ನೇ ಹಿಮ್ಮೆಟ್ಟಿಸಿದ ಕಾಡುಕೋಣಗಳು; ರೋಮಾಂಚನಕಾರಿ ವಿಡಿಯೊ ನೀವೂ ನೋಡಿ

Rishab shetty family visit Hariharpur Narasimhaswamy
ಸ್ಯಾಂಡಲ್ ವುಡ್58 mins ago

Rishab shetty: ಹರಿಹರಪುರ ಕ್ಷೇತ್ರಕ್ಕೆ ರಿಷಬ್ ಶೆಟ್ಟಿ ಕುಟುಂಬದ ಭೇಟಿ: ನರಸಿಂಹಸ್ವಾಮಿಯ ದರ್ಶನ ಪಡೆದ ಡಿವೈನ್‌ ಸ್ಟಾರ್‌!

nisha cp yogeshwara
ವೈರಲ್ ನ್ಯೂಸ್1 hour ago

CP Yogeshwara: “ಹೊಡೀತಾರೆ, ಭಿಕ್ಷೆ ಬೇಡು ಅನ್ತಾರೆ….ʼʼ ಯೋಗೇಶ್ವರ್‌ ವಿರುದ್ಧ ಕಣ್ಣೀರು ಹಾಕುತ್ತಾ ರೆಬೆಲ್‌ ಆದ ಮಗಳು

Nandini Milk No incentives for milk producers Ashok slams govt for sponsoring foreign cricket team
ರಾಜಕೀಯ1 hour ago

Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

Viral video
ವೈರಲ್ ನ್ಯೂಸ್1 hour ago

Viral Video:‌ ಅಬ್ಬಾ..ಇದೆಂಥಾ ಹುಚ್ಚಾಟ; ಸ್ವಲ್ಪ ಮಿಸ್‌ ಆದ್ರೂ ಸಾವು ಗ್ಯಾರಂಟಿ-ಶಾಕಿಂಗ್‌ ವಿಡಿಯೋ ವೈರಲ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ7 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌