ಅಗ್ನಿವೀರರಿಗಾಗಿ ಮತ್ತೊಂದು ಘೋಷಣೆ; ರಕ್ಷಣಾ ಇಲಾಖೆ ಹುದ್ದೆಗಳಲ್ಲೂ ಶೇ.10 ಮೀಸಲು - Vistara News

ಉದ್ಯೋಗ

ಅಗ್ನಿವೀರರಿಗಾಗಿ ಮತ್ತೊಂದು ಘೋಷಣೆ; ರಕ್ಷಣಾ ಇಲಾಖೆ ಹುದ್ದೆಗಳಲ್ಲೂ ಶೇ.10 ಮೀಸಲು

Agnipath Row: ದೇಶದ ಸುಮಾರು ಎಂಟು ರಾಜ್ಯಗಳಲ್ಲಿ ಅಗ್ನಿಪಥ ವಿರೋಧಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಕೇಂದ್ರ ಒಂದೊಂದೇ ಮಹತ್ವದ ಯೋಜನೆಗಳನ್ನು ಘೋಷಿಸುತ್ತಿದೆ.

VISTARANEWS.COM


on

Agnipath Scheme
ಪ್ರಾತಿನಿಧಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ ವಿರುದ್ಧ ಹಿಂಸಾಚಾರ ಹೆಚ್ಚುತ್ತಿರುವಂತೆ, ಇದಕ್ಕೆ ಸಂಬಂಧಪಟ್ಟ ಕೇಂದ್ರದ ಘೋಷಣೆಗಳೂ ಒಂದೊಂದೇ ಏರಿಕೆಯಾಗುತ್ತಿವೆ. ಉದ್ಯೋಗ ಭರವಸೆ ನೀಡುವುದಿಲ್ಲ ಎಂಬ ತಪ್ಪುಕಲ್ಪನೆಯನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಇನ್ನಷ್ಟು-ಮತ್ತಷ್ಟು ಪ್ರಯತ್ನ ಮಾಡುತ್ತಿದೆ. ಅಗ್ನಿವೀರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುವವರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ನೀಡುವುದಾಗಿ ಇಂದು ಬೆಳಗ್ಗೆಯಷ್ಟೇ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ವಿಷಯ ಪ್ರಕಟಿಸಿದೆ. ಕೇಂದ್ರ ರಕ್ಷಣಾ ಸಚಿವಾಲಯದಡಿ ಇರುವ ವಿವಿಧ ಹುದ್ದೆಗಳಲ್ಲೂ ಅಗ್ನಿವೀರರಿಗೆ ಶೇ.10 ರಷ್ಟು ಮೀಸಲಾತಿ ಕೊಡುವುದಾಗಿ ತಿಳಿಸಿದೆ.

ದೇಶದ ಸುಮಾರು 8 ರಾಜ್ಯಗಳಲ್ಲಿ ಅಗ್ನಿಪಥ್‌ ವಿರುದ್ಧ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಇಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದರು. ಈ ಸಭೆ ಬಳಿಕ ರಕ್ಷಣಾ ಸಚಿವಾಲಯದ ಟ್ವಿಟರ್‌ ಖಾತೆಯಲ್ಲಿ ಎರಡು ಟ್ವೀಟ್‌ಗಳನ್ನು ಮಾಡಲಾಗಿದೆ. ಅಗ್ನಿವೀರರಿಗೆ, ರಕ್ಷಣಾ ಸಚಿವಾಲಯದ ವಿವಿಧ ವಿಭಾಗಗಳಡಿ ಖಾಲಿ ಇರುವ ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುವ ಪ್ರಸ್ತಾಪಕ್ಕೆ ರಾಜನಾಥ್‌ ಸಿಂಗ್‌ ಅನುಮೋದನೆ ಕೊಟ್ಟಿದ್ದಾರೆ ಎಂದು ತಿಳಿಸಿದೆ.

ಇದನ್ನೂ ಓದಿ: ಅಗ್ನಿವೀರರಿಗೆ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆಯಲ್ಲಿ ಶೇ.10 ರಷ್ಟು ಮೀಸಲಾತಿ; ಗೃಹ ಇಲಾಖೆ ಘೋಷಣೆ

ಈ ಹೊಸ ಘೋಷಣೆಯ ಅನ್ವಯ, ರಕ್ಷಣಾ ಸಚಿವಾಲಯದಡಿ ಬರುವ ಇಂಡಿಯನ್‌ ಕೋಸ್ಟ್‌ ಗಾರ್ಡ್‌ (ಭಾರತೀಯ ಕರಾವಳಿ ರಕ್ಷಕ ಪಡೆ, ರಕ್ಷಣಾ ನಾಗರಿಕ ಹುದ್ದೆಗಳು ಮತ್ತು ಎಲ್ಲ 16 ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ ಇರಲಿದೆ. ಈ ಕ್ಷೇತ್ರಗಳಲ್ಲಿ ಈಗಾಗಲೇ ಸೇನೆಯಿಂದ ನಿವೃತ್ತರಾದವರಿಗೂ ಮೀಸಲಾತಿ ಕೊಡಲಾಗಿದ್ದು, ಹೊಸದಾಗಿ ಅಗ್ನಿವೀರರೂ ಸೇರ್ಪಡೆಗೊಳ್ಳಲಿದ್ದಾರೆ.

ಅಗ್ನಿಪಥ್‌ದಡಿ ಸೇನೆಗೆ ಆಯ್ಕೆಯಾಗಿ, ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವವರಿಗೆ ರಕ್ಷಣಾ ವಲಯದ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸೂಕ್ತ ನಿಯಮಗಳನ್ನು ರೂಪಿಸಲಾಗುವುದು. ಈಗಿರುವ ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಲಾಗುವುದು. ಹಾಗೇ, ವಯಸ್ಸಿನ ಮಿತಿಯಲ್ಲೂ ವಿನಾಯಿತಿ ಕೊಡಲಾಗುವುದು ಎಂದೂ ರಕ್ಷಣಾ ಸಚಿವಾಲಯ ಟ್ವೀಟ್‌ ಮಾಡಿದೆ.

ಇದನ್ನೂ ಓದಿ: ಅಗ್ನಿಪಥ್‌ ವಿರೋಧವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ, ರಾಜನಾಥ್‌ ನೇತೃತ್ವದಲ್ಲಿ ಸೇನಾ ಮುಖ್ಯಸ್ಥರ ಸಭೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Amazon India: ನೀರು ಕುಡಿಯುವಂತಿಲ್ಲ, ವಾಶ್ ರೂಮ್ ಗೆ ಹೋಗುವಂತಿಲ್ಲ; ಸಿಬ್ಬಂದಿಗೆ ಅಮೆಜಾನ್ ಕಂಪನಿ ತಾಕೀತು!

ಹರಿಯಾಣದ ಅಮೆಜಾನ್ ನ (Amazon India) ಗೋದಾಮುಗಳಲ್ಲಿ ಕೆಲಸ ಮಾಡುವವರಿಗೆ ಶಿಫ್ಟ್ ಸಮಯದಲ್ಲಿ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ. ವಿಶ್ರಾಂತಿ ಕೊಠಡಿ ಇದ್ದರೂ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ಕಳೆಯುವಂತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ಈ ಸಂಗತಿ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

VISTARANEWS.COM


on

By

Amazon India
Koo

ಅಮೆಜಾನ್ ನ (Amazon India) ಗೋದಾಮುಗಳಲ್ಲಿ (warehouse) ಕೆಲಸ ಮಾಡುವವರು ನೀರು ಕುಡಿಯಬಾರದು, ವಾಶ್ ರೂಮ್ ಗೆ ಹೋಗಬಾರದು (no toilet, water breaks) ಎಂದು ಒತ್ತಾಯಿಸಿರುವುದು ಬೆಳಕಿಗೆ ಬಂದಿದೆ. ಹರಿಯಾಣದ (Haryana) ಮಾನೇಸರ್‌ನಲ್ಲಿರುವ (Manesar) ಅಮೆಜಾನ್‌ನ ಐದು ಗೋದಾಮುಗಳ ಕೆಲಸ ಮಾಡುವವರಿಗೆ ಈ ಕಠಿಣ ಪ್ರತಿಜ್ಞೆ ಮಾಡಲು ಒತ್ತಾಯಿಸಲಾಗಿದೆ.

ಆರು ಟ್ರಕ್‌ಗಳಿಂದ ಪ್ಯಾಕೇಜ್‌ಗಳನ್ನು ಇಳಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ ನೀರು ಕುಡಿಯುವುದಿಲ್ಲ, ವಾಶ್ ರೂಮ್ ಗೆ ಹೋಗುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಒತ್ತಾಯಿಸಲಾಯಿತು.

ಶಿಫ್ಟ್ ಸಮಯದಲ್ಲಿ ಕಾರ್ಮಿಕರು ಸಮಯ ವ್ಯರ್ಥ ಮಾಡುತ್ತಿಲ್ಲವೇ ಎಂದು ಪರಿಶೀಲಿಸಲು ಹಿರಿಯರು ವಾಶ್‌ರೂಮ್‌ಗಳನ್ನು ಪರಿಶೀಲಿಸುತ್ತಾರೆ. ಹರಿಯಾಣದ ಮನೇಸರ್‌ನಲ್ಲಿರುವ ಅಮೆಜಾನ್ ಇಂಡಿಯಾದ ಐದು ಗೋದಾಮುಗಳಲ್ಲಿ ತಿಂಗಳಿಗೆ 10,088 ರೂ ಆದಾಯ ಪಡೆಯುವ 24 ವರ್ಷ ವಯಸ್ಸಿನವರು ವಾರದಲ್ಲಿ ಐದು ದಿನಗಳಲ್ಲಿ ದಿನಕ್ಕೆ ಹತ್ತು ಗಂಟೆ ಕೆಲಸ ಮಾಡುತ್ತಾರೆ.

ತಲಾ 30 ನಿಮಿಷಗಳ ಊಟ ಮತ್ತು ಚಹಾ ವಿರಾಮಗಳು ಸೇರಿ ಉಳಿದ ಯಾವುದೇ ವಿರಾಮವಿಲ್ಲದೆ ಕೆಲಸ ಮಾಡುತ್ತಿದ್ದರೂ ದಿನಕ್ಕೆ ನಾಲ್ಕು ಟ್ರಕ್‌ಗಳಿಗಿಂತ ಹೆಚ್ಚು ಇಳಿಸಲು ಸಾಧ್ಯವಿಲ್ಲ. ಎರಡು ದಿನಗಳ ಹಿಂದೆ, ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಗುರಿಯನ್ನು ಸಾಧಿಸಲು ನಾವು ನೀರು ಮತ್ತು ವಾಶ್‌ರೂಮ್ ವಿರಾಮಗಳನ್ನು ತ್ಯಜಿಸುವುದಾಗಿ ಪ್ರತಿಜ್ಞೆ ಮಾಡಿಸಿದ್ದಾರೆ ಎಂದು ಕಾರ್ಮಿಕರು ದೂರಿದ್ದಾರೆ.


ಹರಿಯಾಣದ ಕೈಗಾರಿಕಾ ಕೇಂದ್ರವಾದ ಮನೇಸರ್‌ನಲ್ಲಿರುವ ಗೋದಾಮುಗಳಲ್ಲಿ ಕಾರ್ಮಿಕರಿಂದ ಆರೋಪ ಕೇಳಿ ಬಂದ ಬಳಿಕ ಅಮೆಜಾನ್ ಇಂಡಿಯಾದ ವಕ್ತಾರರು ಪರಿಶೀಲನೆ ನಡೆಸಿದರು.

ಕಾರ್ಮಿಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅಮೆಜಾನ್ ಇಂಡಿಯಾದ ವಕ್ತಾರರು, ನಾವು ಈ ಬಗ್ಗೆ ತನಿಖೆ ನಡೆಸಿದ್ದೇವೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಾವು ನಮ್ಮ ಉದ್ಯೋಗಿಗಳ ಮೇಲೆ ಈ ರೀತಿಯ ವಿನಂತಿಗಳನ್ನು ಎಂದಿಗೂ ಮಾಡುವುದಿಲ್ಲ. ಇಂತಹ ಘಟನೆ ಕಂಡುಬಂದರೆ ತಕ್ಷಣವೇ ಅದನ್ನು ನಿಲ್ಲಿಸುತ್ತೇವೆ. ತಂಡದ ಬೆಂಬಲ, ಆರೋಗ್ಯ ಮತ್ತು ಸುರಕ್ಷತೆಯ ಕುರಿತು ನಮ್ಮ ನಿರೀಕ್ಷೆಗಳು ಒಳಗೊಂಡಿರುತ್ತವೆ ಎಂದು ಹೇಳಿದ್ದಾರೆ.

ಕಂಪೆನಿಯು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಗಂಭೀರವಾಗಿ ಪರಿಗಣಿಸುತ್ತದೆ. ನಮ್ಮ ಎಲ್ಲಾ ಕಟ್ಟಡಗಳು ಶಾಖ ಸೂಚ್ಯಂಕ ಮಾನಿಟರಿಂಗ್ ಸಾಧನಗಳನ್ನು ಹೊಂದಿವೆ. ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ತಾಪಮಾನದಲ್ಲಿನ ಬದಲಾವಣೆಗಳನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ರೆಸ್ಟ್ ರೂಂ ಅನ್ನು ಬಳಸಲು, ನೀರು ಪಡೆಯಲು ಅಥವಾ ಮ್ಯಾನೇಜರ್ ಅಥವಾ ಹೆಚ್ ಆರ್ ನೊಂದಿಗೆ ಮಾತನಾಡಲು ಉದ್ಯೋಗಿಗಳು ತಮ್ಮ ಪಾಳಿಗಳ ಉದ್ದಕ್ಕೂ ಅನೌಪಚಾರಿಕ ವಿರಾಮಗಳನ್ನು ತೆಗೆದುಕೊಳ್ಳಲು ಮುಕ್ತರಾಗಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಅಮೆಜಾನ್ ವಿದೇಶದಲ್ಲಿ ಇಂತಹ ಆರೋಪಗಳನ್ನು ಎದುರಿಸಿದೆ. ಯುಎಸ್ ನಲ್ಲಿನ ಔದ್ಯೋಗಿಕ ಸುರಕ್ಷತೆ ಮತ್ತು ಆರೋಗ್ಯ ಆಡಳಿತವು 2022 ಮತ್ತು 2023 ರಲ್ಲಿ ಕಂಪೆನಿಯ ಅಸುರಕ್ಷಿತ ಕೆಲಸದ ಪರಿಸ್ಥಿತಿಗಳು ಮತ್ತು ಆರು ಗೋದಾಮುಗಳಲ್ಲಿ ಕಾರ್ಮಿಕರಿಗೆ ಆದ ಗಾಯಗಳ ಕುರಿತು ಸರಿಯಾದ ವರದಿ ಮಾಡಲು ವಿಫಲವಾಗಿದೆ ಎನ್ನುವ ದೂರು ಕೇಳಿ ಬಂದಿತ್ತು.

ಇದನ್ನೂ ಓದಿ: Windfall Tax: ಕಚ್ಚಾ ತೈಲದ ಲಾಭ ತೆರಿಗೆಯನ್ನು ಪ್ರತಿ ಟನ್‌ಗೆ 3,250 ರೂ.ಗೆ ಇಳಿಸಿದ ಸರ್ಕಾರ

ಟ್ರಕ್‌ಗಳು ಹೊರಗೆ ನಿಲ್ಲಿಸುವುದರಿಂದ ಹೆಚ್ಚು ಬಿಸಿಯಾಗಿರುತ್ತವೆ. ಕಾರ್ಮಿಕರು ಅದರಿಂದ ವಸ್ತುಗಳನ್ನು ಇಳಿಸುವಾಗ ಬಹು ಬೇಗನೆ ದಣಿಯುತ್ತಾರೆ. ಇದು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹರಿಯಾಣದ ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು ಹೇಳಿದ್ದಾರೆ.

ಗೋದಾಮಿನಲ್ಲಿ ಕೆಲಸ ಮಾಡುವ ಮಹಿಳೆಯರು ಸಾಕಷ್ಟಿದ್ದಾರೆ. ಆದರೆ ಈ ಆವರಣದಲ್ಲಿ ವಿಶ್ರಾಂತಿ ಕೊಠಡಿ ಇಲ್ಲ. ನಾವು ಅಸ್ವಸ್ಥರಾಗಿದ್ದರೆ ವಾಶ್‌ರೂಮ್ ಅಥವಾ ಲಾಕರ್ ಕೋಣೆಗೆ ಹೋಗುವುದು ಒಂದೇ ಆಯ್ಕೆಯಾಗಿದೆ. ಹಾಸಿಗೆ ಇರುವ ಒಂದು ಕೋಣೆ ಇದೆ. ಆದರೆ ಇಲ್ಲಿ ಕಾರ್ಮಿಕರನ್ನು 10 ನಿಮಿಷಗಳ ಅನಂತರ ಹೊರಡಲು ಕೇಳಲಾಗುತ್ತದೆ. ನಾನು ದಿನಕ್ಕೆ ಒಂಬತ್ತು ಗಂಟೆಗಳ ಕಾಲ ನಿಲ್ಲುತ್ತೇನೆ ಮತ್ತು ಪ್ರತಿ ಗಂಟೆಗೆ 60 ಸಣ್ಣ ಉತ್ಪನ್ನ ಅಥವಾ 40 ಮಧ್ಯಮ ಗಾತ್ರದ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಬೇಕು ಎಂದು ದೂರಿದ್ದಾರೆ.

Continue Reading

ಉದ್ಯೋಗ

Job Alert: ಗುಡ್‌ನ್ಯೂಸ್‌: ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ 627 ಹುದ್ದೆ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Job Alert: ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಭರ್ಜರಿ ಅವಕಾಶ. ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪಡೆದ, ಕಂಪ್ಯೂಟರ್‌ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2. 627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

VISTARANEWS.COM


on

Job Alert
Koo

ಬೆಂಗಳೂರು: ಬ್ಯಾಂಕ್‌ನಲ್ಲಿ ಉದ್ಯೋಗ ನಿರ್ವಹಿಸಬೇಕು ಎಂದು ಕನಸು ಕಾಣುವವರಿಗೆ ಇಲ್ಲಿದೆ ಭರ್ಜರಿ ಅವಕಾಶ. ದೇಶದ ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಬರೋಡಾ (Bank of Baroda) ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಪಡೆದ, ಕಂಪ್ಯೂಟರ್‌ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಹುದು (Bank of Baroda Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನಾಂಕ ಜುಲೈ 2 (Job Alert).

ಹುದ್ದೆಗಳ ವಿವರ

627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಡೆಪ್ಯುಟಿ ವೈಸ್ ಪ್ರೆಸಿಡೆಂಟ್ – ಡಾಟಾ ಸೈಂಟಿಸ್ಟ್ & ಡಾಟಾ ಎಂಜಿನಿಯರ್: 4 ಹುದ್ದೆ
ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ – ಡಾಟಾ ಸೈಂಟಿಸ್ಟ್ & ಡಾಟಾ ಎಂಜಿನಿಯರ್: 9 ಹುದ್ದೆ
ಆರ್ಕಿಟೆಕ್ಟ್: 8 ಹುದ್ದೆ
ಜೋನಲ್ ಸೇಲ್ಸ್ ಮ್ಯಾನೇಜರ್: 3 ಹುದ್ದೆ
ಅಸಿಸ್ಟೆಂಟ್ ವೈಸ್ಪ್ರೆಸಿಡೆಂಟ್: 20 ಹುದ್ದೆ
ಸೀನಿಯರ್ ಮ್ಯಾನೇಜರ್: 22 ಹುದ್ದೆ
ಮ್ಯಾನೇಜರ್: 11 ಹುದ್ದೆ
ರೇಡಿಯನ್ಸ್ ಪ್ರೈವೇಟ್ ಸೇಲ್ಸ್ ಹೆಡ್: 1 ಹುದ್ದೆ
ಗ್ರೂಪ್ ಹೆಡ್: 4 ಹುದ್ದೆ
ಟೆರಿಟರಿ ಹೆಡ್: 8 ಹುದ್ದೆ
ಸೀನಿಯರ್ ರಿಲೇಶನ್‌ಶಿಪ್‌ ಮ್ಯಾನೇಜರ್: 234 ಹುದ್ದೆ
ಇ-ವೆಲ್ತ್ ರಿಲೇಶನ್‌ಶಿಪ್‌ ಮ್ಯಾನೇಜರ್: 26 ಹುದ್ದೆ
ಪ್ರೈವೇಟ್ ಬ್ಯಾಂಕರ್-ರೇಡಿಯನ್ಸ್ ಪ್ರೈವೇಟ್: 12 ಹುದ್ದೆ
ಗ್ರೂಪ್ ಸೇಲ್ಸ್ ಹೆಡ್ (ವರ್ಚುವಲ್ ಆರ್‌ಎಂ ಸೇಲ್ಸ್ ಹೆಡ್): 1 ಹುದ್ದೆ
ವೆಲ್ತ್ ಸ್ಟ್ರಾಟಜಿಸ್ಟ್ (ಇನ್ವೆಸ್‌ಮೆಂಟ್‌ & ಇನ್ಶೂರೆನ್ಸ್)/ ಪ್ರಾಡಕ್ಟ್ ಹೆಡ್: 10 ಹುದ್ದೆ
ಪೋರ್ಟ್ಫೋಲಿಯೊ ರಿಸರ್ಚ್ ಅನಾಲಿಸ್ಟ್: 1 ಹುದ್ದೆ
ಎವಿಪಿ- ಅಕ್ವಿಸಿಷನ್ & ರಿಲೇಶನ್‌ಶಿಪ್‌ ಮ್ಯಾನೇಜರ್: 19 ಹುದ್ದೆ
ಫಾರೆಕ್ಸ್ ಅಕ್ವಿಸಿಷನ್ & ರಿಲೇಶನ್‌ಶಿಪ್‌ ಮ್ಯಾನೇಜರ್: 15 ಹುದ್ದೆ
ಕ್ರೆಡಿಟ್ ಅನಾಲಿಸ್ಟ್: 80 ಹುದ್ದೆ
ರಿಲೇಶನ್‌ಶಿಪ್‌ ಮ್ಯಾನೇಜರ್: 66 ಹುದ್ದೆ
ಸೀನಿಯರ್ ಮ್ಯಾನೇಜರ್- ಬಿಸಿನೆಸ್ ಫೈನಾನ್ಸ್: 4 ಹುದ್ದೆ
ಚೀಫ್ ಮ್ಯಾನೇಜರ್- ಇಂಟರ್ನಲ್ ಕಂಟ್ರೋಲ್ಸ್‌ – 3 ಹುದ್ದೆಗಳಿವೆ.

ವಿದ್ಯಾರ್ಹತೆ

ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಕೃಷಿ, ಪಶುವೈದ್ಯಕೀಯ ವಿಜ್ಞಾನ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ. ಅಭ್ಯರ್ಥಿಗಳು ಸ್ಥಳೀಯ ಭಾಷೆ ಮತ್ತು ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು. ಔದ್ಯೋಗಿಕ ಅನುಭವ ಕಡ್ಡಾಯ.

ಅರ್ಜಿ ಶುಲ್ಕ ಮತ್ತು ವಯೋಮಿತಿ

ಅರ್ಜಿ ಶುಲ್ಕವಾಗಿ ಸಾಮಾನ್ಯ, ಇಡಬ್ಲ್ಯುಎಸ್‌ ಮತ್ತು ಒಬಿಎಸ್ ವರ್ಗಗಳಿಗೆ ಸೇರಿದ ಅರ್ಜಿದಾರರು 600 ರೂ., ಎಸ್‌ಸಿ, ಎಸ್‌ಟಿ, ಅಂಗವಿಕಲ ಮತ್ತು ಮಹಿಳಾ ವರ್ಗಗಳಿಗೆ ಸೇರಿದ ಅರ್ಜಿದಾರರು 199 ರೂ. ಪಾವತಿಸಬೇಕಾಗುತ್ತದೆ. ಇದಕ್ಕೆ ತೆರಿಗೆ ಪ್ರತ್ಯೇಕ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 24 ವರ್ಷಗಳಿಂದ 60 ವರ್ಷದೊಳಗಿನವರು ಅರ್ಜಿ ಸಲ್ಲಿಬಹುದು.

ಆಯ್ಕೆ ವಿಧಾನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆ ಆಯೋಜಿಸಲಾಗುತ್ತದೆ.

ನಿಯಮಿತ ಆಧಾರದಲ್ಲಿನ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಗುತ್ತಿಗೆ ಆಧಾರದಲ್ಲಿನ ನೇಮಕಾತಿಯ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲುವ ವಿಧಾನ

ಇದನ್ನೂ ಓದಿ: Job Alert: ಬರೋಬ್ಬರಿ 9,923 ಬ್ಯಾಂಕ್‌ ಹುದ್ದೆಗಳ ಭರ್ತಿಗೆ ಮುಂದಾದ ಐಬಿಪಿಎಸ್‌; ಇಂದೇ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ಕಾಟನ್‌ ಕಾರ್ಪೋರೇಷನ್‌ನಲ್ಲಿದೆ 214 ಹುದ್ದೆ; ಆನ್‌ಲೈನ್‌ ಮೂಲಕ ಇಂದೇ ಅಪ್ಲೈ ಮಾಡಿ

Job Alert: ಭಾರತ ಸರ್ಕಾರದ ಜವಳಿ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಬರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಕಾಟನ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ 214 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 2.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಜವಳಿ ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಬರುವ ಕೇಂದ್ರ ಸಾರ್ವಜನಿಕ ವಲಯದ ಸಂಸ್ಥೆಯಾದ ಕಾಟನ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (Cotton Corporation of India Limited) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜ್‌ಮೆಂಟ್‌ ಟ್ರೈನಿ, ಅಸಿಸ್ಟೆಂಟ್‌ ಮ್ಯಾನೇಜರ್‌ ಸೇರಿ ಸುಮಾರು 214 ಹುದ್ದೆಗಳಿವೆ (Cotton Corporation of India Recruitment 2024). ಪದವಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ ಜುಲೈ 2 (Job Alert).

ಹುದ್ದೆಗಳ ವಿವರ

ಅಸಿಸ್ಟೆಂಟ್ ಮ್ಯಾನೇಜರ್ (ಲೀಗಲ್) 1 ಹುದ್ದೆ, ವಿದ್ಯಾರ್ಹತೆ: ಕಾನೂನಿನಲ್ಲಿ ಪದವಿ, ಎಲ್‌ಎಲ್‌ಬಿ
ಅಸಿಸ್ಟೆಂಟ್ ಮ್ಯಾನೇಜರ್ (ಅಧಿಕೃತ ಭಾಷೆ) 1 ಹುದ್ದೆ, ವಿದ್ಯಾರ್ಹತೆ: ಸ್ನಾತಕೋತ್ತರ ಪದವಿ
ಮ್ಯಾನೇಜ್‌ಮೆಂಟ್‌ ಟ್ರೈನಿ (ಮಾರ್ಕೆಟಿಂಗ್) 11 ಹುದ್ದೆ, ವಿದ್ಯಾರ್ಹತೆ: ಕೃಷಿ ಕ್ಷೇತ್ರದಲ್ಲಿ ಎಂಬಿಎ
ಮ್ಯಾನೇಜ್‌ಮೆಂಟ್‌ ಟ್ರೈನಿ (ಅಕೌಂಟ್ಸ್) 20 ಹುದ್ದೆ, ವಿದ್ಯಾರ್ಹತೆ: ಸಿಎ, ಸಿಎಂಎ, ಎಂಬಿಎ, ಎಂ.ಕಾಂ., ಎಂಎಂಎಸ್, ಸ್ನಾತಕೋತ್ತರ ಪದವಿ
ಜೂನಿಯರ್ ಕಮರ್ಷಿಯಲ್ ಎಕ್ಸಿಕ್ಯೂಟಿವ್ 120 ಹುದ್ದೆ, ವಿದ್ಯಾರ್ಹತೆ: ಬಿಎಸ್‌ಸಿ ಅಗ್ರಿಕಲ್ಚರ್
ಜೂನಿಯರ್ ಅಸಿಸ್ಟೆಂಟ್ (ಸಾಮಾನ್ಯ) 20 ಹುದ್ದೆ, ವಿದ್ಯಾರ್ಹತೆ: ಬಿಎಸ್‌ಸಿ ಅಗ್ರಿಕಲ್ಚರ್
ಜೂನಿಯರ್ ಅಸಿಸ್ಟೆಂಟ್ (ಅಕೌಂಟ್ಸ್) 40 ಹುದ್ದೆ, ವಿದ್ಯಾರ್ಹತೆ: ಬಿ.ಕಾಂ.
ಜೂನಿಯರ್ ಅಸಿಸ್ಟೆಂಟ್ (ಹಿಂದಿ ಭಾಷಾಂತರಕಾರ) 1 ಹುದ್ದೆ, ವಿದ್ಯಾರ್ಹತೆ: ಹಿಂದಿಯಲ್ಲಿ ಪದವಿ

ವಯೋಮಿತಿ ಮತ್ತು ಅರ್ಜಿ ಶುಲ್ಕ

ವಿವಿಧ ಹುದ್ದೆಗಳಿಗೆ ಅನುಗುಣವಾಗಿ 27 ವರ್ಷದಿಂದ 32 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ವಿಭಾಗಕ್ಕೆ 3 ವರ್ಷ, ಎಸ್‌ಸಿ / ಎಸ್‌ಟಿ ವಿಭಾಗಕ್ಕೆ 5 ವರ್ಷ, ಪಿಡಬ್ಲ್ಯುಬಿಡಿ ವಿಭಾಗಕ್ಕೆ 10 ವರ್ಷಗಳ ರಿಯಾಯಿತಿ ಇದೆ. ಅರ್ಜಿ ಶುಲ್ಕವಾಗಿ ಸಾಮಾನ್ಯ / ಒಬಿಸಿ / ಇಡಬ್ಲ್ಯುಎಸ್‌ ವಿಭಾಗದ ಅಭ್ಯರ್ಥಿಗಳು 1,000 ರೂ., ಎಸ್‌ಸಿ / ಎಸ್‌ಟಿ / ಇಎಸ್‌ಎಂ / ಪಿಡಬ್ಲ್ಯುಡಿ ಅಭ್ಯರ್ಥಿಗಳು 250 ರೂ. ಅನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು.

ಆಯ್ಕೆ ವಿಧಾನ

ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Cotton Corporation of India Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಸೂಚನೆಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (cdn.digialm.com).
  • ಅಗತ್ಯ ಮಾಹಿತಿಗಳನ್ನು ನೀಡಿ ಹೆಸರು ನೋಂದಾಯಿಸಿ.
  • ಲಾಗಿನ್‌ ಆಗಿ ಅಗತ್ಯ ಮಾಹಿತಿಗಳ ಮೂಲಕ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊ ಅಪ್‌ಲೋಡ್‌ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.
  • ಅಪ್ಲಿಕೇಷನ್‌ ಫಾರಂ ಅನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಇದನ್ನೂ ಓದಿ: Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Continue Reading

ಉದ್ಯೋಗ

Job Alert: ಪದವೀಧರರಿಗೆ ಗುಡ್‌ನ್ಯೂಸ್‌; ಪಶುವೈದ್ಯ ಸೇವಾ ಇಲಾಖೆಯಲ್ಲಿದೆ 400 ವೈದ್ಯಾಧಿಕಾರಿ ಹುದ್ದೆ

Job Alert: ಕರ್ನಾಟಕದಲ್ಲೇ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಖಾಲಿ ಇರುವ ಬರೋಬ್ಬರಿ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್‌ 14ರಿಂದ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನಾಂಕ ಜೂನ್‌ 24.

VISTARANEWS.COM


on

Job Alert
Koo

ಬೆಂಗಳೂರು: ಒಂದೊಳ್ಳೆ ಉದ್ಯೋಗದ ಹುಡುಕಾಟದಲ್ಲಿದ್ದೀರಾ? ಕರ್ನಾಟಕದಲ್ಲೇ ಉದ್ಯೋಗ ನಿರ್ವಹಿಸಬೇಕು ಎನ್ನುವ ಕನಸು ಕಾಣುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ (Animal Husbandry & Veterinary Services Karnataka) ಖಾಲಿ ಇರುವ ಬರೋಬ್ಬರಿ 400 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (AHVS Karnataka Recruitment 2024). ಪಶು ವೈದ್ಯಾಧಿಕಾರಿ ಹುದ್ದೆ ಇದಾಗಿದ್ದು, ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುತ್ತದೆ. ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಜೂನ್‌ 14ರಿಂದ ಅಪ್ಲೈ ಮಾಡಬೇಕಿದ್ದು, ಕೊನೆಯ ದಿನಾಂಕ ಜೂನ್‌ 24 (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಒಟ್ಟು 400 ಹುದ್ದೆಗಳಿದ್ದು, ಈ ಪೈಕಿ ಕಲ್ಯಾಣ ಕರ್ನಾಟಕಕ್ಕೆ 14 ಪೋಸ್ಟ್‌ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಅಂಗೀಕೃತ ಪಶುವೈದ್ಯಕೀಯ ವಿಜ್ಞಾನ ವಿಶ್ವ ವಿದ್ಯಾನಿಲಯ ಅಥವಾ ಕೃಷಿ ವಿಶ್ವ ವಿದ್ಯಾನಿಲಯದಿಂದ ಬಿ.ವಿ.ಎಸ್‌.ಸಿ. / ಬಿ.ವಿ.ಎಸ್‌.ಸಿ ಆ್ಯಂಡ್‌ ಎಎಚ್‌ ಪದವಿ ಪಡೆದಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ

ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ರಿಯಾಯಿತಿ ಲಭ್ಯ. ಪ್ರವರ್ಗ 2 ಎ, 2 ಬಿ, ಪ್ರವರ್ಗ 3 ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ 1ರ ಅಭ್ಯರ್ಥಿಗಳಿಗೆ 5 ವರ್ಷಗಳ ರಿಯಾಯಿತಿ ಇದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 52,640 ರೂ. ಮಾಸಿಕ ವೇತನ ದೊರೆಯಲಿದೆ.

AHVS Karnataka Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ (ahvs.karnataka.gov.in).
  • ಹೆಸರು, ಫೋನ್‌ ನಂಬರ್‌ ನೀಡಿ ನಿಮ್ಮ ಹೆಸರು ನೋಂದಾಯಿಸಿ.
  • ಲಾಗಿನ್‌ ಆಗಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆ, ಫೋಟೊಗಳನ್ನು ಸೂಕ್ತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಭರ್ತಿ ಮಾಡಿದ ಮಾಹಿತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್‌ ಕ್ಲಿಕ್‌ ಮಾಡಿ.

ಇದನ್ನು ಗಮನಿಸಿ

  • ಈ ನೇಮಕಾತಿ ಗುತ್ತಿಗೆ ಆಧಾರದಲ್ಲಿ ನಡೆಯುತ್ತಿದ್ದು, ತಾತ್ಕಾಲಿಕವಾಗಿರುತ್ತದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದಲ್ಲಿ ವಾಸವಾಗಿರಬೇಕು.
  • ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಮಾಸಿಕ ವೇತನಕ್ಕಿಂತ ಹೊರತುಪಡಿಸಿ ಬೇರೆ ಭತ್ಯೆ ನೀಡಲಾಗುವುದಿಲ್ಲ.
  • ನಿಯುಕ್ತಿಗೊಳಿಸುವ ಸ್ಥಳದಲ್ಲಿಯೇ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಬೇಕು.
  • ಉದ್ಯೋಗ ತ್ಯಜಿಸುವುದಿದ್ದರೆ 1 ತಿಂಗಳು ಮುಂಚಿತವಾಗಿಯೇ ತಿಳಿಸಬೇಕು.
  • ಅಭ್ಯರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಲು ಬದ್ಧರಾಗಿರಬೇಕು.

ಹೆಚ್ಚಿನ ಮಾಹಿತಿಗೆ, ಯಾವುದೇ ಸಂಶಯ ನಿವಾರಣೆಗೆ ದೂರವಾಣಿ ಸಂಖ್ಯೆ 080-23414446ಕ್ಕೆ ಕರೆ ಮಾಡಿ.

ಇದನ್ನೂ ಓದಿ: Job Alert: ಎಚ್‌ಎಎಲ್‌ನಲ್ಲಿದೆ ಉದ್ಯೋಗಾವಕಾಶ; ಡಿಪ್ಲೋಮಾ ಪಾಸಾದವರು ಅಪ್ಲೈ ಮಾಡಿ

Continue Reading
Advertisement
Actor Darshan case pavithra Gowda manager Arrest
ಸ್ಯಾಂಡಲ್ ವುಡ್15 mins ago

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್‌

Gold Rate Today
ಚಿನ್ನದ ದರ21 mins ago

Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಏರಿಕೆಯಾಗದ ಬೆಲೆ

Tata Motors SUV Tata Nexon 7th Anniversary Benefit up to Rs 1 lakh for customers
ವಾಣಿಜ್ಯ32 mins ago

Tata Motors: ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ; ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಉಳಿತಾಯ!

murder case
ಚಿಕ್ಕಬಳ್ಳಾಪುರ34 mins ago

Murder Case : ಚಿಕ್ಕಬಳ್ಳಾಪುರದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ

David Wiese Retirement
ಕ್ರೀಡೆ54 mins ago

David Wiese Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಡೇವಿಡ್ ವೈಸ್

Money Guide
ಮನಿ-ಗೈಡ್1 hour ago

Money Guide: ಹಿರಿಯ ನಾಗರಿಕರಿಗಾಗಿ ಅತ್ಯಾಕರ್ಷಕ ಉಳಿತಾಯ ಯೋಜನೆ

PMAY
ವಾಣಿಜ್ಯ1 hour ago

PMAY: ಸ್ವಂತ ಮನೆ ಹೊಂದುವ ನಿಮ್ಮ ಕನಸು ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಮೂಲಕ ನನಸು; ಹೀಗೆ ಅಪ್ಲೈ ಮಾಡಿ

Bahaddur movie is re released on June 21
ಕರ್ನಾಟಕ1 hour ago

Bahaddur Movie: ಹತ್ತು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ಮತ್ತೆ “ಬಹದ್ದೂರ್”!

Darshan Arrested renuka shed like hell more murders here
ಸ್ಯಾಂಡಲ್ ವುಡ್1 hour ago

Darshan Arrested: ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

Foeticide
ಕರ್ನಾಟಕ1 hour ago

Foeticide: ಬೆಳಗಾವಿಯಲ್ಲಿ ನಕಲಿ ವೈದ್ಯನಿಂದ ಭ್ರೂಣಗಳ ಹತ್ಯೆ; ಜಮೀನಲ್ಲಿ ಸಿಕ್ಕಿತು ಶಿಶುವಿನ ಶವ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ21 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌