Modi in Karnataka : ಮೈಸೂರಿನ ರ‍್ಯಾಡಿಸನ್‌ ಹೋಟೆಲ್‌ ದರ್ಬಾರ್‌ ಸೂಟ್‌ ಮೋದಿಮಯ; ಟವೆಲ್‌, ಹೊದಿಕೆಯಲ್ಲೂ ಮೋದಿ ಚಿತ್ರ - Vistara News

ಕರ್ನಾಟಕ

Modi in Karnataka : ಮೈಸೂರಿನ ರ‍್ಯಾಡಿಸನ್‌ ಹೋಟೆಲ್‌ ದರ್ಬಾರ್‌ ಸೂಟ್‌ ಮೋದಿಮಯ; ಟವೆಲ್‌, ಹೊದಿಕೆಯಲ್ಲೂ ಮೋದಿ ಚಿತ್ರ

PM Narendra Modi : ಪ್ರಧಾನಿ ನರೇಂದ್ರ ಮೋದಿ ಅವರು ತಂಗಲಿರುವ ಮೈಸೂರಿನ ಹೋಟೆಲ್‌ನ ದರ್ಬಾರ್‌ ಸೂಟನ್ನು ಸಂಪೂರ್ಣ ಮೋದಿಮಯಗೊಳಿಸಲಾಗಿದೆ

VISTARANEWS.COM


on

Modi mysore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮೈಸೂರು: ಪ್ರಾಜೆಕ್ಟ್‌ ಟೈಗರ್‌ನ 50ನೇ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿನ ರ‍್ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಏಪ್ರಿಲ್‌ 8 (ಶನಿವಾರ) ರಾತ್ರಿ ಇಲ್ಲಿಗೆ ಆಗಮಿಸಲಿರುವ ಅವರು ರಾತ್ರಿಯಿಡೀ ತಂಗಲಿದ್ದಾರೆ.

ಮೈಸೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಈ ಖಾಸಗಿ ಹೋಟಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಲಿದ್ದು, ತಮ್ಮಲ್ಲಿ ಉಳಿಯುವ ವಿಶೇಷ ಅತಿಥಿಗೆ ಹೋಟೆಲ್‌ ಕಡೆಯಿಂದ ವಿಶೇಷ ಗೌರವ ನೀಡಲಾಗುತ್ತಿದೆ. ಒಟ್ಟು 140 ರೂಂಗಳಿರುವ ಹೋಟೆಲನ್ನು ಎಸ್‌ಪಿಜಿ ತಂಡ ಸಂಪೂರ್ಣ ಹೋಟೆಲ್ ವಶಕ್ಕೆ ಪಡೆದಿದೆ.

ಹೋಟೆಲ್‌ನ ದರ್ಬಾರ್ ಸೂಟ್ ನಲ್ಲಿ ಮೋದಿ ವಾಸ್ತವ್ಯಕ್ಕೆ ಸಿದ್ಧತೆ ಮಾಡಲಾಗಿದ್ದು, ದರ್ಬಾರ ಸೂಟ್ ಮೋದಿ ಮಯಗೊಳಿಸಲಾಗಿದೆ. ಮೋದಿ ಬಳಸುವ ಪ್ರತಿಯೊಮದು ವಸ್ತುಗಳ ಮೇಲೆ ಅವರ ಫೋಟೊವನ್ನು ಚಿತ್ರಸಿ ಅಲಂಕಾರ ಮಾಡಲಾಗಿದೆ. ಟವಲ್, ಬ್ಲಾಂಕೆಟ್, ಬೆಡ್ ಶೀಟ್, ತಲೆದಿಂಬಿನ ಕವರ್, ಟೇಬಲ್ ಮೇಲಿನ ಬಟ್ಟೆ ಸೇರಿ ಹಲವು ವಸ್ತುಗಳ ಮೇಲೆ ಮೋದಿ ಚಿತ್ರವನ್ನು ಹಾಕಲಾಗಿದೆ.

ಚಂದದ ಬರಹಗಳ ಚಿತ್ತಾರ

ʻʻThe splender of mysore welcomes back. The pride of India. Your leadership inspire usʼ ಎಂದು ಬರೆದ ವಸ್ತುಗಳನ್ನು ಒಳಗೊಂಡ ವಸ್ತುಗಳನ್ನು ಇಲ್ಲಿ ಬಳಸಲಾಗುತ್ತದೆ.

ಮೋದಿ ಸ್ವಾಗತಕ್ಕೆ ಜನಪ್ರತಿನಿಧಿಗಳು, ಪಕ್ಷದ ಮುಖಂಡರಿಲ್ಲ

ಮೋದಿ ಯಾವುದಾದರೂ ನಗರಕ್ಕೆ ಹೋದಾಗ ಅಲ್ಲಿನ ಜನಪ್ರತಿನಿಧಿಗಳು ಮತ್ತು ಬಿಜೆಪಿ ಮುಖಂಡರು ಸ್ವಾಗತ ಕೋರುವುದು ವಾಡಿಕೆ. ಅದರೆ, ಈ ಬಾರಿ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮೋದಿ ಸ್ವಾಗತಕ್ಕೆ ಜನಪ್ರತಿನಿಧಿಗಳು ಹಾಗೂ ಬಿಜೆಪಿ ಮುಖಂಡರಿಗೆ ಅವಕಾಶ ನೀಡಲಾಗಿಲ್ಲ.
ಮೋದಿ ಆಗಮನ ಮತ್ತು ನಿರ್ಗಮನದ ವೇಳೆ ಜನಪ್ರತಿನಿಧಿಗಳು, ಬಿಜೆಪಿ ಮುಖಂಡರು ಅವರಿಗೆ ವಂದನೆ ಸಲ್ಲಿಸುವುದಕ್ಕೆ ಬ್ರೇಕ್‌ ಹಾಕಲಾಗಿದೆ.

ಮೋದಿ ಪ್ರವಾಸದ ಸಂಪೂರ್ಣ ವಿವರ

  • ಏಪ್ರಿಲ್ 8ರ ರಾತ್ರಿ 8.45ಕ್ಕೆ‌ ಚೆನ್ನೈನಿಂದ ಮೈಸೂರು ಮಂಡಕಳ್ಳಿ‌ ವಿಮಾನ ನಿಲ್ದಾಣಕ್ಕೆ‌ ಆಗಮನ. ಬಳಿಕ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ.
  • ಏಪ್ರಿಲ್ 9ರ ಬೆಳಗ್ಗೆ 6.20ಕ್ಕೆ ಮೈಸೂರು ವಿಶೇಷ ಹೆಲಿಪ್ಯಾಡ್‌ನಿಂದ ಚಾಮರಾಜನಗರದ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ಪ್ರಯಣ.
  • ಬೆಳಗ್ಗೆ 7.15ಕ್ಕೆ ಬಂಡೀಪುರಕ್ಕೆ ಭೇಟಿ, ಸಫಾರಿ ನಡೆಸಲಿರುವ ಮೋದಿ.
  • ಅಲ್ಲಿಂದ ರಸ್ತೆ ಮಾರ್ಗವಾಗಿ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಭೇಟಿ.
  • ಸುಮಾರು 2 ಗಂಟೆಗಳ ಕಾಲ ಅರಣ್ಯದಲ್ಲಿ ಕಾಲ ಕಳೆಯಲಿರುವ ಪ್ರಧಾನಿ.
  • ಬೆಳಗ್ಗೆ 10.20ಕ್ಕೆ ಮೈಸೂರಿಗೆ ವಾಪಸ್ ಆಗಲಿರುವ ನರೇಂದ್ರ ಮೋದಿ.
  • ಮೈಸೂರು ವಿಶ್ವವಿದ್ಯಾನಿಲಯದ ಓವೆಲ್ ಮೈದಾನದ ವಿಶೇಷ ಹೆಲಿಪ್ಯಾಡ್‌ಲ್ಲಿ ಇಳಿಯಲಿರುವ ಮೋದಿ.
  • 10.30ಕ್ಕೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನಕ್ಕೆ ಆಗಮನ.
  • ಹುಲಿ ಯೋಜನೆ 50ನೇ ವರ್ಷದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗಿ.
  • ಕಾರ್ಯಕ್ರಮದಲ್ಲಿ ದೇಶ ವಿದೇಶಗಳ ಗಣ್ಯರು ಭಾಗಿ.
  • ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧ.
  • 12.10 ಹೆಲಿಕಾಪ್ಟರ್ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಾಪಸ್.
  • 12.40ಕ್ಕೆ ದೆಹಲಿಗೆ ವಾಪಸ್ ಆಗಲಿರುವ ಪ್ರಧಾನಿಗಳು.
  • ಮಂಡಕಳ್ಳಿ ವಿಮಾನ ನಿಲ್ದಾಣದಿಂದ ದೆಹಲಿಗೆ ಪಯಣ

ಇದನ್ನೂ ಓದಿ : Tiger Census : ಏಪ್ರಿಲ್​ 9ರಂದು ಹುಲಿ ಗಣತಿ ಬಿಡುಗಡೆ ಮಾಡಲಿದ್ದಾರೆ ಪಿಎಂ ಮೋದಿ, ಕರ್ನಾಟಕವೇ ನಂಬರ್​ ಒನ್​?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿಜಯನಗರ

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Vijayanagara News : ಕೆಲಸಕ್ಕೆ ಚೆಕ್ಕರ್ ಹಾಕಿ ಸಂಬಳಕ್ಕೆ ಮಾತ್ರ ಹಾಜರಾಗುವ ಪಿಡಿಓ ಅಧಿಕಾರಿ (PDO Officer) ವಿರುದ್ಧ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು. ನಾಪತ್ತೆಯಾಗುತ್ತಿರುವ ಪಿಡಿಓ ಅಧಿಕಾರಿಯನ್ನು ಹುಡುಕಿಕೊಡಿ ಎಂದು ಬಿತ್ತಿ ಪತ್ರಗಳನ್ನು ಅಂಟಿಸಿದ್ದರು.

VISTARANEWS.COM


on

By

Vijayanagara News
Koo

ವಿಜಯನಗರ: ಕೆಲಸಕ್ಕೆ ಮಾತ್ರ ಕರೀಬೇಡಿ, ಸಂಬಳಕ್ಕೆ ಮಾತ್ರ ಮರಿಲೇಬೇಡಿ. ಇದು ವಿಜಯನಗರದ (Vijayanagara News) ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯತ್‌ನ ಪಿಡಿಓ ಕಥೆ. ಗ್ರಾ.ಪಂ ಪಿಡಿಓ ವೀರೇಶ್ (PDO Officer) ಬೆಳಗ್ಗೆ ಹಾಜರಿ ಬುಕ್‌ನಲ್ಲಿ ಸಹಿ ಹಾಕಿ ಹೋದರೆ ಕಚೇರಿಗೆ ವಾಪಸ್ ಮರುದಿನ ಬೆಳಗ್ಗೆಯೇ ಬರುವುದು.

ಕೆಲಸಕ್ಕೆ ಚೆಕ್ಕರ್ ಹಾಕಿ ಸಂಬಳಕ್ಕೆ ಮಾತ್ರ ಹಾಜರಾಗುವ ಪಿಡಿಓ ಅಧಿಕಾರಿ ವಿರುದ್ಧ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು. ಕಳೆದ ಆರು ತಿಂಗಳಿನಿಂದ ಕೆಲಸಕ್ಕೆ ಬಾರದೇ ಶೋಕಿ ಗ್ರಾ.ಪಂ ಪಿಡಿಓ ವೀರೇಶ್ ಶೋಕಿ ಮಾಡುತ್ತಿದ್ದನಂತೆ.

ಹೀಗಾಗಿ ಪಂಚಾಯ್ತಿಯತ್ತ ಸುಳಿಯದ ಪಿಡಿಓಗಾಗಿ ಗ್ರಾಮಸ್ಥರಿಂದಲೇ ಹುಡುಕಾಟ ನಡೆದಿದೆ. ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾ. ಪಂಚಾಯತ್ ಎದುರು ಬಿತ್ತಿ ಪತ್ರಗಳು, ಬ್ಯಾನರ್ ಪ್ರದರ್ಶನ ಮಾಡಿ ನಾಪತ್ತೆ ಆಗಿದ್ದಾನೆ. ಆದರೆ ಆರು ತಿಂಗಳಿಂದ ಕೆಲಸಕ್ಕೆ ಬಾರದಿದ್ದರೂ ಹಾಜರಾತಿ ಬುಕ್‌ನಲ್ಲಿ ಸಹಿ ಹಾಕಿದ್ದಾರೆ ಎಂದು ಆಕ್ರೋಶಿಸಿ ವಿನೂತನ ಪ್ರತಿಭಟನೆ ನಡೆಸಿದರು.

vijayanagara News

ಆರು ತಿಂಗಳಲ್ಲಿ ಒಂದೂ ಅಭಿವೃದ್ಧಿ ಕೆಲಸವೂ ಆಗಿಲ್ಲ ಯಾವ ಸಭೆಗಳನ್ನು ನಡೆಸಿಲ್ಲ. ಜನಸಾಮಾನ್ಯರ ಕೆಲಸ ಆಗುತ್ತಿಲ್ಲ, ಇಂತಹ ಪಿಡಿಓ ನಮ್ಮ ಪಂಚಾಯತಿಗೆ ಬೇಡ. ಬೆಳಗ್ಗೆ ಜನ ಕಚೇರಿಗೆ ಬರುವ‌ ಮೊದಲೇ ಸಹಿ ಹಾಕಿ ಹರಪನಹಳ್ಳಿಗೆ ಹೋಗುತ್ತಾರೆ. ಜನರು ಪಿಡಿಓ ವೀರೇಶ್‌ಗಾಗಿ ಕಾದು, ಕಾದು ಮನೆಗೆ ಹೋಗುತ್ತಾರೆ. ಕೂಡಲೆ ಬೇರೆ ಪಿಡಿಓ ಬದಲವಾವಣೆಗೆ ಅನುಮತಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: Electric shock : ವಸತಿ ಶಾಲೆ ಆವರಣದಲ್ಲಿ ಕರೆಂಟ್‌ ಶಾಕ್‌ನಿಂದ ಬಾಲಕ ಸಾವು; 8 ಮಂದಿ ಅಮಾನತು

ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ‌ ಮಾಡಿದ ಶೆಡ್ ಮೇಲೆ ಕೂಡ ನೂರೆಂಟು ಅನುಮಾನ ಹುಟ್ಟಿಕೊಂಡಿದ್ದು, ರೇಣುಕಾಸ್ವಾಮಿ ಕೊಲೆ ಮಾಡಿದ ಶೆಡ್ ಇಂದು ಕೂಡಾ ಪೊಲೀಸ್ ವಶಕ್ಕೆ ಇರಲಿದೆ.

ಪಟ್ಟಣಗೆರೆ ವಿನಯ್ ಶೆಡ್‌ನಲ್ಲಿ ಇಂದು ಕೂಡ ಪೊಲೀಸರು ಮಾಹಿತಿಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆನ್ನಲೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಅದೇಷ್ಟೋ ಜನರಿಗೆ ಈ ಶೆಡ್‌ನಲ್ಲಿಯೇ ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾಗಿದೆ. ದರ್ಶನ್ ವಿರುದ್ಧ ಮಾತನಾಡಿದವರಿಗೆ ಇದೇ ಶೆಡ್ ನಲ್ಲಿ ಕರೆತಂದು ʻಡಿ ಗ್ಯಾಂಗ್ʼ ಹೊಡೆಯುತ್ತಿದ್ದರು ಎನ್ನಲಾಗಿದೆ. ಬಡ್ಡಿ ದುಡ್ಡು ಕಟ್ಟದ, ಲೋನ್ ಪಾವತಿ ಮಾಡದವರಿಗೆ ಕೂಡ ಇದೇ ಶೆಡ್‌ನಲ್ಲಿ ʻಡಿ ಗ್ಯಾಂಗ್ʼ ನರಕ ತೋರಿಸುತ್ತಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನಲೆ ಮತ್ತಷ್ಟು ಕೇಸ್‌ಗಳು ರಿವೀಲ್‌ ಆಗಬಹುದು ಎನ್ನಲಾಗಿದೆ. ಪೊಲೀಸರು ವಶಪಡಿಸಿಕೊಂಡ ಸಿಸಿ ಕ್ಯಾಮರೆ ದೃಶ್ಯಗಳ ಪರಿಶೀಲನೆ ಆಗುತ್ತಿದೆ. ಆರೋಪಿ ವಿನಯ್ ಸೇರಿದಂತೆ ಇತರೆ ಆರೋಪಿಗಳನ್ನು ಮತಷ್ಟು ತೀವ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಮಾದರಿಯಲ್ಲಿಯೇ ಹಲವು ಜನರಿಗೆ ಗ್ಯಾಂಗ್‌ ಚಿತ್ರಹಿಂಸೆ ನೀಡಿತ್ತಾ ಎಂಬುದುರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.

ಇದನ್ನೂ ಓದಿ: Darshan Arrested: `ಅಪ್ಪ, ನೀವೇ ನನ್ನ ಹೀರೊʼಎಂದ ದರ್ಶನ್‌ ಪುತ್ರ; ಫಾದರ್ಸ್‌ ಡೇಗೆ ಭಾವುಕ ಪೋಸ್ಟ್‌!

ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಮುಂದಾಗಿದ್ದಾರೆ ಪೊಲೀಸರು. ಎವಿಡೆನ್ಸ್‌ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ . ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ. ವೆಪನ್ ಗಳು, 30 ಲಕ್ಷ ರೂ. ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿಯಾಗಿವೆ. ಈಗಾಗಲೇ ಆರೋಪಿಗಳನ್ನು ವಿಚಾರಣೆ ಮಾಡಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿಕ್ಕಮಗಳೂರು

Electric shock : ವಸತಿ ಶಾಲೆ ಆವರಣದಲ್ಲಿ ಕರೆಂಟ್‌ ಶಾಕ್‌ನಿಂದ ಬಾಲಕ ಸಾವು; 8 ಮಂದಿ ಅಮಾನತು

Electric shock :ಶಾಲಾ ಆವರಣದಲ್ಲಿದ್ದ ಮರವೇರಿ ನೇರಳೆ ಹಣ್ಣು ಕೀಳುವಾಗ ಕರೆಂಟ್‌ ಶಾಕ್‌ ಹೊಡೆದು, ಬಾಲಕನೊರ್ವ ದಾರುಣವಾಗಿ ಮೃತಪಟ್ಟಿದ್ದ. ಸದ್ಯ ಪ್ರಕರಣ ಸಂಬಂಧ ಎಂಟು ಮಂದಿಯನ್ನು ಅಮಾನತು ಮಾಡಲಾಗಿದೆ.

VISTARANEWS.COM


on

By

Electric shock
Koo

ಚಿಕ್ಕಮಗಳೂರು : ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿದ್ಯುತ್ ಶಾಕ್‌ನಿಂದ (Electric shock) 7ನೇ ತರಗತಿ ವಿದ್ಯಾರ್ಥಿ ಆಕಾಶ್ (13) ಎಂಬಾತ ಶನಿವಾರ ಮೃತಪಟ್ಟಿದ್ದ. ಈ ಪ್ರಕರಣ ಸಂಬಂಧ 8 ಮಂದಿಯನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯ ಜವಾಬ್ದಾರಿಯನ್ನು ನಿರ್ವಹಿಸಬೇಕಿದ್ದ ಸಿಬ್ಬಂದಿ ಕರ್ತವ್ಯ ಲೋಪದಿಂದ ಬಾಲಕ ಮೃತಪಟ್ಟಿದ್ದಾಗಿ ಮೇಲ್ನೋಟಕ್ಕೆ ಕಂಡು ಬಂದಿದ.

ಹೀಗಾಗಿ ಪ್ರಭಾರ ಪ್ರಾಂಶುಪಾಲರು, ಬೋಧಕತರ, ನಿಲಯ ಪಾಲಕ ಸೇರಿ 8 ಮಂದಿಯನ್ನು ಅಮಾನತು ಮಾಡಿ ಕ್ರೈಸ್ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರವೀಣ್ ಬಿ ಬಾಗೇವಾಡಿಯಿಂದ ಆದೇಶ ಹೊರಡಿಸಿದ್ದಾರೆ. ಸಿಬ್ಬಂದಿ ಬೇಜವಾಬ್ದಾರಿಯಿಂದ ಬಾಲಕ ಮೃತಪಟ್ಟಿದ್ದರಿಂದ ಅಮಾನತು ಮಾಡಲಾಗಿದೆ. ಪ್ರಾಂಶುಪಾಲ ಧನರಾಜು, ನಿಲಯಪಾಲಕರಾದ ಗೀತಾಂಜಲಿ, ಶಿಕ್ಷಕರಾದ ಗಾಯತ್ರಿ, ಶಿವರಾಜ ನಾಯ್ಕ, ಕಾವ್ಯ, ಸುರೇಶ್‌ ಬೀಳಗಿ ಹಾಗೂ ವಿಶಾಲಕ್ಷಿ, ಬಿಂದು ಅವರನ್ನು ಅಮಾನತು ಮಾಡಲಾಗಿದೆ.

ಇನ್ನೂ ಶಾಲೆಯ ಪ್ರಭಾರ ಪ್ರಾಂಶುಪಾಲರ ಅಮಾನತ್ತಿನಿಂದ ತೆರವಾದ ಜಾಗಕ್ಕೆ ಚಿಕ್ಕಮಗಳೂರಿನ ಮೂಡಿಗೆರೆಯ ಕೋಳೂರು ಶಾಲೆಯ ಪ್ರಾಂಶುಪಾಲರಾದ ಶೈಲ ಕೆ.ಪಿ ಅವರನ್ನು ನಿಯೋಜನೆ ಮಾಡಲಾಗಿದೆ.

Electric shock

ಇದನ್ನೂ ಓದಿ: Murder Case : ಚಿಕ್ಕಬಳ್ಳಾಪುರದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ

ನೇರಳೆ ಹಣ್ಣು ಕೀಳುವಾಗ ಕರೆಂಟ್‌ ಶಾಕ್‌

ನಿನ್ನೆ ಜೂನ್‌ 15ರಂದು ವಿದ್ಯುತ್ ಶಾಕ್‌ನಿಂದ (Electric shock) 7ನೇ ತರಗತಿ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ ನಡೆದಿತ್ತು. ಆಕಾಶ್ (13) ಮೃತ ದುರ್ದೈವಿ.

ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಆಕಾಶ್ ಮರ ಹತ್ತಿದ್ದ. ಈತನ ಜತೆಗೆ ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು. ಹಣ್ಣು ಕೀಳುವಾಗ ಆಕಾಶ್‌ ಮರದಿಂದ ಜಾರಿ ಬೀಳುತ್ತಿದ್ದ. ಈ ವೇಳೆ ಅಚಾನಕ್‌ ಆಗಿ ವಿದ್ಯುತ್ ತಂತಿ ಹಿಡಿದಿದ್ದಾನೆ.

ವಿದ್ಯುತ್‌ ತಂತಿ ಹಿಡಿಯುತ್ತಿದ್ದಂತೆ ಕರೆಂಟ್‌ ಶಾಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದವರು ಆಕಾಶ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕಾಶ್ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಚಿನ್ನದ ದರ

Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಏರಿಕೆಯಾಗದ ಬೆಲೆ

Gold Rate Today: ಶನಿವಾರ ಒಂದೇ ದಿನ ಗ್ರಾಂ ಚಿನ್ನದ ಬೆಲೆಯು 67 ರೂಪಾಯಿ ಜಾಸ್ತಿಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ಇನ್ನಷ್ಟು ಏರಿಕೆಯಾಗುವ ಭೀತಿ ಇತ್ತು. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆ ಕಂಡರೆ, ಎರಡು ಬಾರಿ ಮಾತ್ರ ಇಳಿಕೆ ಕಂಡಿತ್ತು. ಭಾನುವಾರ ಬೆಳ್ಳಿಯ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆಯು 90.30 ರೂ. ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಶನಿವಾರ (ಜೂನ್‌ 15) ಏರಿಕೆ ಕಂಡಿದ್ದ ಚಿನ್ನದ ಬೆಲೆಯು ಭಾನುವಾರ (ಜೂನ್‌ 16) ಯಥಾಸ್ಥಿತಿ ಕಾಯ್ದುಕೊಂಡಿರುವುದು ಗ್ರಾಹಕರಿಗೆ ತುಸು ರಿಲೀಫ್‌ ತಂದಿದೆ. ಬೆಂಗಳೂರಿನಲ್ಲಿ ಇಂದು (Gold Rate Today) 22 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 6,650 ರೂ. ಇದ್ದರೆ, 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 7,255 ರೂ. ಇದೆ. ಚಿನ್ನದ ಬೆಲೆ ಏರಿಕೆ ಕಾಣದ ಹಿನ್ನೆಲೆಯಲ್ಲಿ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾನುವಾರ ಚಿನ್ನ ಖರೀದಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಒಂದೇ ದಿನ ಗ್ರಾಂ ಚಿನ್ನದ ಬೆಲೆಯು 67 ರೂಪಾಯಿ ಜಾಸ್ತಿಯಾಗಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ಇನ್ನಷ್ಟು ಏರಿಕೆಯಾಗುವ ಭೀತಿ ಇತ್ತು. ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯು ನಾಲ್ಕು ಬಾರಿ ಏರಿಕೆ ಕಂಡರೆ, ಎರಡು ಬಾರಿ ಮಾತ್ರ ಇಳಿಕೆ ಕಂಡಿತ್ತು. ಇನ್ನು ನಾಲ್ಕು ಬಾರಿ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿರಲಿಲ್ಲ. ಭಾನುವಾರ ಬೆಳ್ಳಿಯ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಬೆಂಗಳೂರಿನಲ್ಲಿ ಇಂದು ಒಂದು ಗ್ರಾಂ ಬೆಳ್ಳಿಯ ಬೆಲೆಯು 90.30 ರೂ. ಇದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,665 ₹ 7,270
ಮುಂಬೈ₹ 6,650 ₹ 7,255
ಬೆಂಗಳೂರು₹ 6,650₹ 7,255
ಚೆನ್ನೈ₹ 6,705 ₹ 7,315

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

Gold Rate Today

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Heist: ಜ್ಯುವೆಲರಿ ಶಾಪ್‌ಗೆ ನುಗ್ಗಿ ಚಿನ್ನ ಕದ್ದ 20 ಕಳ್ಳರು; ಸಿನಿಮಾ ಸ್ಟೈಲಲ್ಲೇ ದರೋಡೆ ಮಾಡಿದ ವಿಡಿಯೊ ಇಲ್ಲಿದೆ!

Continue Reading

ಚಿಕ್ಕಬಳ್ಳಾಪುರ

Murder Case : ಚಿಕ್ಕಬಳ್ಳಾಪುರದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯ ಬರ್ಬರ ಹತ್ಯೆ

Murder case : ಪೊಲೀಸ್‌ ಠಾಣೆ ಸಮೀಪವೇ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆ ನಡೆಸಲಾಗಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.

VISTARANEWS.COM


on

By

murder case
Koo

ಚಿಕ್ಕಬಳ್ಳಾಪುರ: ತಲೆ ಮೇಲೆ ಕಲ್ಲು ಎತ್ತಿಹಾಕಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆ (Murder Case) ನಡೆದಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಸಮೀಪವೇ ಈ ಕೃತ್ಯ ನಡೆದಿದೆ. ಶೇಖರ್ ಎಂಬಾತ ಕೊಲೆಯಾದವನು. ಶಿವಕುಮಾರ್ (35) ಕೊಲೆಗೈದ ಆರೋಪಿಯಾಗಿದ್ದಾನೆ.

ಅನೈತಿಕ ಸಂಬಂಧ, ಕಿರುಕುಳ, ಹಳೆ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ನಡುರಸ್ತೆಯಲ್ಲಿ ಶೇಖರ್‌ ಮೇಲೆ ಹಲ್ಲೆ ನಡೆಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರದ ಕಾರ್ಖಾನೆ ಪೇಟೆ ನಿವಾಸಿ ಶಿವಕುಮಾರ್ ಕೊಲೆ ಮಾಡಿ ಎಸ್ಕೇಪ್‌ ಆಗಿದ್ದಾನೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶೇಖರ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಶಿವಕುಮಾರ್‌ ಪತ್ತೆಗೆ ಚಿಕ್ಕಬಳ್ಳಾಪುರ ಪೊಲೀಸರು ಬಲೆ ಬೀಸಿದ್ದಾರೆ. ಪ್ರಕರಣ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: Darshan Arrested: ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

ಬೆಳಗಾವಿಯಲ್ಲಿ ನಕಲಿ ವೈದ್ಯನಿಂದ ಭ್ರೂಣಗಳ ಹತ್ಯೆ; ಜಮೀನಲ್ಲಿ ಸಿಕ್ಕಿತು ಶಿಶುವಿನ ಶವ

ಬೆಳಗಾವಿ: ಬೆಂಗಳೂರು ಹಾಗೂ ಮಂಡ್ಯದಲ್ಲಿ ಕೆಲ ತಿಂಗಳ ಹಿಂದೆ ಹೆಣ್ಣು ಭ್ರೂಣಹತ್ಯೆಯ ಬೃಹತ್‌ ಜಾಲವೊಂದು ಪತ್ತೆಯಾದ ಬೆನ್ನಲ್ಲೇ ಬೆಳಗಾವಿ (Belagavi) ಜಿಲ್ಲೆಯಲ್ಲೂ ನಕಲಿ ವೈದ್ಯನು ಭ್ರೂಣ ಹತ್ಯೆ (Foeticide) ಮಾಡಿರುವ ಪ್ರಕರಣವು ಬಯಲಾಗಿದೆ. ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಕಲಿ ವೈದ್ಯ ಅಬ್ದುಲ್‌ ಗಫಾರ್‌ ಲಾಡಖಾನ್‌ ಎಂಬಾತನು ಭ್ರೂಣಹತ್ಯೆ ಮಾಡಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಫಾರ್ಮ್‌ಹೌಸ್‌ನಲ್ಲಿ ಭ್ರೂಣದ ಶವವೊಂದು ಪತ್ತೆಯಾಗಿದೆ. ಇನ್ನಷ್ಟು ಭ್ರೂಣಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ನಕಲಿ ವೈದ್ಯ ಅಬ್ದುಲ್‌ ಗಫಾರ್‌ ಲಾಡಖಾನ್‌ನ ಸಹಾಯಕನಾಗಿರುವ ರೋಹಿತ್ ಕುಪ್ಪಸಗೌಡರ್ ಎಂಬಾತನನ್ನು ಕರೆದುಕೊಂಡು ಹೋಗಿರುವ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ನಕಲಿ ವೈದ್ಯನ ಜಮೀನಿನಲ್ಲಿ ಭ್ರೂಣದ ಶವ ಪತ್ತೆಯಾಗಿದೆ. ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಡಿಎಎಸ್‌ಪಿ ರವಿ ನಾಯ್ಕ ನೇತೃತ್ವದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಭ್ರೂಣಗಳನ್ನು ಹೂಳುತ್ತಿದ್ದ ರೋಹಿತ್‌ ಕುಪ್ಪಸಗೌಡರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆತ ತೋರಿಸಿದ ಜಾಗದಲ್ಲಿ ಶೋಧ ನಡೆಸಲಾಗುತ್ತಿದೆ.

ಕಿತ್ತೂರು ಪಟ್ಟಣದಲ್ಲಿ ಭ್ರೂಣ ಲಿಂಗ ಪತ್ತೆ, ಭ್ರೂಣಗಳನ್ನು ಹತ್ಯೆ ಕೃತ್ಯದಲ್ಲಿ ತೊಡಗಿರುವ ನಕಲಿ ವೈದ್ಯ ಅಬ್ದುಲ್‌ ಗಫಾರ್‌ ಲಾಡಖಾನ್‌ಗೆ ರೋಹಿತ್‌ ಕುಪ್ಪಸಗೌಡರ್‌ ಹಲವು ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ತಿಗಡೊಳ್ಳಿ ಗ್ರಾಮದ ಬಳಿ ಇರುವ ಫಾರ್ಮ್‌ಹೌಸ್‌ನಲ್ಲಿ ಭ್ರೂಣಗಳನ್ನು ಹೂಳುವುದೇ ರೋಹಿತ್‌ ಕುಪ್ಪಸಗೌಡರ ಕೆಲಸವಾಗಿತ್ತು ಎಂದು ತಿಳಿದುಬಂದಿದೆ. ಈತನನ್ನು ಫಾರ್ಮ್‌ಹೌಸ್‌ಗೆ ಕರೆದುಕೊಂಡು ಹೋಗಿರುವ ಅಧಿಕಾರಿಗಳು, ಶೋಧ ನಡೆಸುತ್ತಿದ್ದಾರೆ. ರೋಹಿತ್‌ ತೋರಿಸಿದ ಜಾಗದಲ್ಲಿಯೇ ಒಂದು ಭ್ರೂಣ ಪತ್ತೆಯಾಗಿರುವ ಕಾರಣ ಇನ್ನಷ್ಟು ಭ್ರೂಣಗಳು ಇರಬಹುದು ಎಂಬ ಶಂಕೆಯಿಂದ ಶೋಧ ಕಾರ್ಯ ಮುಂದುವರಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅಬ್ದುಲ್‌ ಗಫಾರ್‌ ಲಾಡಖಾನ್‌ ಹಿಂದೆ ಯಾರಿದ್ದಾರೆ? ಜಾಲದಲ್ಲಿ ಯಾರೆಲ್ಲ ತೊಡಗಿಸಿಕೊಂಡಿದ್ದಾರೆ? ಫಾರ್ಮ್‌ಹೌಸ್‌ ಸೇರಿ ಇನ್ನೂ ಹಲವು ಪ್ರದೇಶಗಳಲ್ಲಿ ಭ್ರೂಣಗಳನ್ನು ಹೂಳಲಾಗಿದೆಯೇ ಎಂಬುದು ಸೇರಿ ಹತ್ತಾರು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬಾಗಲಕೋಟೆಯಲ್ಲೂ ಭ್ರೂಣ ಹತ್ಯೆ ಪ್ರಕರಣಗಳು ಬಯಲಾಗಿದ್ದವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Vijayanagara News
ವಿಜಯನಗರ11 mins ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Pakistan Cricket Team
ಕ್ರಿಕೆಟ್17 mins ago

Pakistan Cricket Team: ಪಾಕಿಸ್ತಾನ ಕ್ರಿಕೆಟಿಗರ ವೇತನ ಕಡಿತಕ್ಕೆ ಮುಂದಾದ ಪಾಕ್​ ಕ್ರಿಕೆಟ್ ಮಂಡಳಿ

Madrasa
ದೇಶ24 mins ago

Madrasa: ಬಕ್ರೀದ್‌ ಹಿನ್ನೆಲೆ ಮದರಸಾದಲ್ಲೇ ಗೋವುಗಳ ಬಲಿ; ನೂರಾರು ಹಿಂದುಗಳಿಂದ ದಾಳಿ, ಸೆಕ್ಷನ್‌ 144 ಜಾರಿ!

Actor Darshan teacher Addanda Cariappa sad on arrested darshan
ಸಿನಿಮಾ26 mins ago

Actor Darshan: ಸಂಸ್ಕಾರ ಹಾಗೂ ಶಿಕ್ಷಣ ಮುಖ್ಯ, ದರ್ಶನ್‌ ಬಳಿ ಎರಡೂ ಇಲ್ಲ; ಶಿಷ್ಯನ ಬಗ್ಗೆ ಗುರು ಬೇಸರ!

Shivraj Chouhan
ವೈರಲ್ ನ್ಯೂಸ್39 mins ago

Shivraj Chouhan: ರೈಲಿನಲ್ಲಿ ಜನ ಸಾಮಾನ್ಯರಂತೆ ಪ್ರಯಾಣಿಸಿ ಸರಳತೆ ಮೆರೆದ ಶಿವರಾಜ್‌ ಸಿಂಗ್‌ ಚೌಹಾಣ್‌; ಸಚಿವರ ನಡೆಗೆ ವ್ಯಾಪಕ ಪ್ರಶಂಸೆ

Electric shock
ಚಿಕ್ಕಮಗಳೂರು52 mins ago

Electric shock : ವಸತಿ ಶಾಲೆ ಆವರಣದಲ್ಲಿ ಕರೆಂಟ್‌ ಶಾಕ್‌ನಿಂದ ಬಾಲಕ ಸಾವು; 8 ಮಂದಿ ಅಮಾನತು

Grand Prix 2024 Competition
ಕ್ರೀಡೆ55 mins ago

Grand Prix 2024 Competition: ಬೆಳ್ಳಿ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್

Actor Darshan case pavithra Gowda manager Arrest
ಸ್ಯಾಂಡಲ್ ವುಡ್1 hour ago

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ಪವಿತ್ರಾ ಗೌಡ ಮ್ಯಾನೇಜರ್ ಅರೆಸ್ಟ್‌

Gold Rate Today
ಚಿನ್ನದ ದರ1 hour ago

Gold Rate Today: ವೀಕೆಂಡ್‌ನಲ್ಲಿ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್;‌ ಇಂದು ಏರಿಕೆಯಾಗದ ಬೆಲೆ

Tata Motors SUV Tata Nexon 7th Anniversary Benefit up to Rs 1 lakh for customers
ವಾಣಿಜ್ಯ2 hours ago

Tata Motors: ಎಸ್‌ಯುವಿ ಟಾಟಾ ನೆಕ್ಸಾನ್‌ನ 7ನೇ ವಾರ್ಷಿಕೋತ್ಸವ; ಗ್ರಾಹಕರಿಗೆ 1 ಲಕ್ಷ ರೂ.ವರೆಗೆ ಉಳಿತಾಯ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Vijayanagara News
ವಿಜಯನಗರ11 mins ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ22 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

ಟ್ರೆಂಡಿಂಗ್‌