World Cup : ಕೋಲ್ಕೊತಾ, ಚೆನ್ನೈನಲ್ಲಿ ಆಡಿಸುವುದಾದರೆ ನಾವು ಬರ್ತೇವೆ ಎಂದ ಪಾಕಿಸ್ತಾನ ತಂಡ - Vistara News

ಕ್ರಿಕೆಟ್

World Cup : ಕೋಲ್ಕೊತಾ, ಚೆನ್ನೈನಲ್ಲಿ ಆಡಿಸುವುದಾದರೆ ನಾವು ಬರ್ತೇವೆ ಎಂದ ಪಾಕಿಸ್ತಾನ ತಂಡ

ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಭಾರತದ ನಗರಗಳಾದ ಕೋಲ್ಕೊತಾ ಹಾಗೂ ಚೆನ್ನೈಸುರಕ್ಷಿತ ಎಂದು ಅನಿಸಿದೆ ಎಂಬುದಾಗಿ ವರದಿಗಳು ಹೇಳಿವೆ.

VISTARANEWS.COM


on

Pakistan team said that if they play in Kolkata and Chennai, we will come
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತ ತಂಡ ಏಷ್ಯಾ ಕಪ್​ನಲ್ಲಿ ಆಡುವುದಕ್ಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ, ಪಾಕಿಸ್ತಾನ ತಂಡ ವಿಶ್ವ ಕಪ್​ ಆಡುವುದಕ್ಕೆ ಭಾರತಕ್ಕೆ ಬರುವುದಿಲ್ಲ ಎಂಬ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಏತನ್ಮಧ್ಯೆ ಹೊಸ ಸುದ್ದಿಯೊಂದು ಐಸಿಸಿ ಕಡೆಯಿಂದ ಪ್ರಕಟಗೊಂಡಿದೆ. ಭಾರತ ತಂಡ ನಮ್ಮ ದೇಶಕ್ಕೆ ಆಡಲು ಬರುವದೋ ಇಲ್ಲವೊ ಗೊತ್ತಿಲ್ಲ. ಆದರೆ, ನಾವು ಭಾರತಕ್ಕೆ ಹೋಗುವುದಕ್ಕೆ ರೆಡಿ ಇದ್ದೇವೆ. ಆದರೆ, ನಮ್ಮ ಪಂದ್ಯಗಳೆಲ್ಲವನ್ನೂ ಚೆನ್ನೈ ಮತ್ತು ಕೋಲ್ಕೊತಾದಲ್ಲಿ ಆಯೋಜಿಸಬೇಕು ಎಂದು ಕೋರಿಕೊಂಡಿದೆ ಎಂಬುದಾಗಿ ಪಿಟಿಐ ವರದಿ ಮಾಡಿದೆ.

ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವ ಕಪ್​ ಅಕ್ಟೋಬರ್​ 5ರಂದ ಆರಂಭಗೊಳ್ಳಲಿದೆ. ಸುಮಾರು 46 ಪಂದ್ಯಗಳು ಈ ಐಸಿಸಿ ಟೂರ್ನಿಯಲ್ಲಿ ನಡೆಯಲಿದೆ. ಭಾರತದ 12 ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಸಿದ್ಧತೆಯನ್ನೂ ನಡೆಸಿಕೊಂಡಿದೆ. ಅಹಮದಾಬಾದ್​, ಲಖನೌ, ಮುಂಬಯಿ, ಕೋಲ್ಕೊತಾ, ರಾಜ್​ಕೋಟ್​, ಬೆಂಗಳೂರು, ಡೆಲ್ಲಿ, ಇಂದೋರ್​, ಗುವಾಹಟಿ ಹಾಗೂ ಹೈದರಾಬಾದ್​ನಲ್ಲಿ ಪಂದ್ಯಗಳು ನಡೆಯಲಿವೆ. ಇಲ್ಲಿ ಚೆನ್ನೈ ಮತ್ತು ಕೋಲ್ಕೊತಾವನ್ನು ಪಾಕಿಸ್ತಾನ ತಂಡ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಲಾಗಿದೆ.

ದಶಕದ ಹಿಂದೆ ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಮಾಡಿದ್ದಾಗ ಚೆನ್ನೈ ಮತ್ತು ಕೋಲ್ಕೊತಾ ಸುರಕ್ಷಿತ ಎಂದು ಅನಿಸಿತ್ತು. ಹೀಗಾಗಿ ಆ ಎರಡು ತಾಣಗಳಲ್ಲಿ ಪಂದ್ಯಗಳನ್ನು ನಡೆಸಿದರೆ ಮಾತ್ರ ಬರುವುದಾಗಿ ಐಸಿಸಿ ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿದೆ ಎಂದು ಹೇಳಲಾಗಿದೆ.

2016ರ ಟಿ20 ವಿಶ್ವ ಕಪ್​ಗೆ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿತ್ತು. ಈ ವೇಳೆ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಗೊಂಡಿತ್ತು. ಆದರೆ, ಪಠಾಣ್​ಕೋಟ್ ದಾಳಿಯ ಹಿನ್ನೆಲೆಯಲ್ಲಿ ಪಂದ್ಯವನ್ನು ಕೋಲ್ಕೊತಾಗೆ ವರ್ಗಾಯಿಸಲಾಗಿತ್ತು.

ಪಾಕಿಸ್ತಾನದ ತೀರ್ಮಾನಕ್ಕೆ ಬಿಸಿಸಿಐ ಮತ್ತು ಭಾರತ ಸರಕಾರ ಒಪ್ಪಿಗೆ ಕೊಡಬೇಕಾಗುತ್ತದೆ. ಆದರೆ, ಪಾಕಿಸ್ತಾನ ತಂಡ ತನ್ನ ಪಂದ್ಯಗಳನ್ನು ಚೆನ್ನೈ ಮತ್ತು ಕೋಲ್ಕೊತಾದಲ್ಲಿ ಆಡುವುದಾಗಿಯೇ ಹೇಳುತ್ತಿದೆ. 2016ರಲ್ಲಿ ಟಿ20 ವಿಶ್ವ ಕಪ್​ ಆಡಿದಾಗ ಪಾಕಿಸ್ತಾನದ ಆಟಗಾರರಿಗೆ ಅಲ್ಲಿ ಸುರಕ್ಷಿತ ಎಂದು ಅನಿಸಿತತು. ಚೆನ್ನೈ ಕೂಡ ಅಪಾಯಕಾರಿ ಅಲ್ಲ ಎಂಬುದು ಅವರ ಭಾವನೆ ಎಂಬುದಾಗಿ ಪಾಕಿಸ್ತಾನ ತಂಡ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ಇದನ್ನೂ ಓದಿ : World Cup : ವಿಶ್ವ ಕಪ್​ ಹಿನ್ನೆಲೆಯಲ್ಲಿ ಐದು ಸ್ಟೇಡಿಯಮ್​ಗಳ ಉನ್ನತೀಕರಣಕ್ಕೆ ಬಿಸಿಸಿಐ ಸಿದ್ಧತೆ

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯವೆಂದರೆ ಜಿದ್ದಾಜಿದ್ದಿ ಹೆಚ್ಚು. ಈ ಹಣಾಹಣಿಯ ಮೂಲಕ ಗರಿಷ್ಠ ಆದಾಯ ಸಂಗ್ರಹ ಮಾಡುವುದು ಬಿಸಿಸಿಐ ಗುರಿಯಾಗಿರುತ್ತದೆ. ಹೀಗಾಗಿ ಭಾರತದಲ್ಲಿರುವ ಅತಿ ದೊಡ್ಡ ಕ್ರಿಕೆಟ್​ ಸ್ಟೇಡಿಯಮ್​ ಆಗಿರುವ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಈ ಪಂದ್ಯ ಆಯೋಜಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಈ ಸ್ಟೇಡಿಯಮ್​ನಲ್ಲಿ 1 ಲಕ್ಷಕ್ಕೂ ಅಧಿಕ ಮಂದಿಗೆ ಪಂದ್ಯ ವೀಕ್ಷಿಸಲು ಸಾಧ್ಯವಿದೆ.

ವಿಶ್ವ ಕಪ್​ನಲ್ಲಿ ಪ್ರತಿಯೊಂದು ತಂಡಗಳು ತಲಾ 9 ಪಂದ್ಯಗಳಲ್ಲಿ ಆಡಲಿವೆ. ಟೂರ್ನಿಯು ರೌಂಡ್​ ರಾಬಿನ್​ ಹಂತದಲ್ಲಿ ನಡೆಯಲಿದೆ.

ಐಪಿಎಲ್​ ಮುಕ್ತಾಯಗೊಂಡ ತಕ್ಷಣ ವಿಶ್ವ ಕಪ್​ನ ವೇಳಾಪಟ್ಟಿಯನ್ನು ಬಿಸಿಸಿಐ ಮತ್ತು ಐಸಿಸಿ ಜಂಟಿಯಾಗಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

IND vs USA: ಯುವರಾಜ್​ ಸಿಂಗ್​(Yuvraj Singh) ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್​ಗೆ ಬಂದು ಸಿರಾಜ್​ಗೆ ಅತ್ಯುತ್ತಮ ಫೀಲ್ಡರ್ ಚಿನ್ನದ ಪದಕ ನೀಡಿ ಗೌರವಿಸಿದರು.

VISTARANEWS.COM


on

IND vs USA
Koo

ನ್ಯೂಯಾರ್ಕ್​: ಅಮೆರಿಕ(IND vs USA) ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಫೀಲ್ಡರ್​ ಪ್ರಶಸ್ತಿಯನ್ನು ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್(Mohammed Siraj)​ ಪಡೆದುಕೊಂಡಿದ್ದಾರೆ. ಸಿರಾಜ್​ಗೆ ಒಲಿದ 2ನೇ ಚಿನ್ನದ ಪದಕ ಇದಾಗಿದೆ. ಇದಕ್ಕೂ ಮುನ್ನ ಐರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸಿರಾಜ್ ಈ​ ಪ್ರಶಸ್ತಿ ಗೆದ್ದಿದ್ದರು. ನಿನ್ನೆಯ ಪಂದ್ಯದಲ್ಲಿ ಸಿರಾಜ್​ ಅವರು 2 ಕ್ಯಾಚ್​ ಮತ್ತು ಒಂದು ರನೌಟ್​ ಮಾಡಿ ಗಮನಸೆಳೆದಿದ್ದರು. ಯುವರಾಜ್​ ಸಿಂಗ್​(Yuvraj Singh) ಅವರು ವಿಶೇಷ ಅತಿಥಿಯಾಗಿ ಡ್ರೆಸ್ಸಿಂಗ್ ರೂಮ್​ಗೆ ಬಂದು ಈ ಪ್ರಶಸ್ತಿ ಪ್ರದಾನ ಮಾಡಿದರು.

ಎನ್​ ಆರ್​ ಕುಮಾರ್​ ಅವರ ಕ್ಯಾಚೊಂದನ್ನು ಸಿರಾಜ್​ ಬೌಂಡರಿ ಲೈನ್​ನಲ್ಲಿ ಅತ್ಯದ್ಭುತ ರೀತಿಯಲ್ಲಿ ಹಾರಿ ಹಿಡಿದರು. ಕಳೆದ ವರ್ಷ ನಡೆದಿದ್ದ ಏಕದಿ ವಿಶ್ವಕಪ್ ಟೂರ್ನಿಯಲ್ಲಿ ಟೀಮ್​ ಇಂಡಿಯಾ ಮ್ಯಾನೆಜ್​ಮೆಂಟ್​ ಆಟಗಾರರಲ್ಲಿ ಹೆಚ್ಚಿನ ಸ್ಫೂರ್ತಿ ತುಂಬವ ನಿಟ್ಟಿನಲ್ಲಿ, ಪಂದ್ಯವೊಂದರಲ್ಲಿ ಉತ್ತಮ ಫೀಲ್ಡಿಂಗ್(Best Fielder Award) ನಡೆಸಿದರೆ ಆತನನ್ನು ಗುರುತಿಸಿ ಚಿನ್ನದ ಪದಕ ನೀಡುವ ಕಾರ್ಯವನ್ನು ಜಾರಿಗೆ ತಂದಿತ್ತು. ಈ ಪ್ರಕ್ರಿಯೆ ಟಿ20 ವಿಶ್ವಕಪ್​ನಲ್ಲಿಯೂ ಮುಂದುವರಿದೆ.

ಸೂಪರ್​-8ಗೆ ಲಗ್ಗೆಯಿಟ್ಟ ಭಾರತ


ಅಮೆರಿಕ(IND vs USA) ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸುವ ‘ಎ’ ವಿಭಾಗದಿಂದ ಮೊದಲ ತಂಡವಾಗಿ ಸೂಪರ್​-8 ಪ್ರವೇಶ ಪಡೆದಿದೆ. ಇಲ್ಲಿನ ನಾಸೌ ಕೌಂಟಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಅಮೆರಿಕ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 110 ರನ್​ ಬಾರಿಸಿತು. ಜವಾಬಿತ್ತ ಭಾರತ ಈ ಸಣ್ಣ ಮೊತ್ತವನ್ನು 18.2 ಓವರ್​ ಎದುರಿಸಿ 3 ವಿಕೆಟ್​ ಕಳೆದುಕೊಂಡು 111 ರನ್​ ಬಾರಿಸಿ ಗೆಲುವಿನ ದಡ ಸೇರಿತು.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಎಡಗೈ ವೇಗಿ ಅರ್ಶ​ದೀಪ್​ ಸಿಂಗ್​ ಈ ಪಂದ್ಯದಲ್ಲಿ 4 ಓವರ್​ ಎಸೆದು ಕೇವಲ 9 ರನ್​ಗೆ 4 ವಿಕೆಟ್​ ಕಿತ್ತು ಜೀವನಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದರು. ಜತೆಗೆ ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಶ್ರೇಷ್ಠ ಬೌಲಿಂಗ್​ ನಡೆಸಿದ ಆಟಗಾರ ಎನ್ನುವ ಹಿರಿಮೆಗೂ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಅಶ್ವಿನ್​ ಹೆಸರಿನಲ್ಲಿತ್ತು. ಅಶ್ವಿನ್​ ಅವರು 2014ರ ಟೂರ್ನಿಯಲ್ಲಿ 11ರನ್​ಗೆ 4 ವಿಕೆಟ್​ ಕೆಡವಿದ್ದರು.

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಿರೀಕ್ಷಿತ ಬ್ಯಾಟಿಂಗ್​ ನಡೆಸಲು ವಿಫಲವಾಗಿದ್ದ ಸೂರ್ಯಕುಮಾರ್​ ಮತ್ತು ದುಬೆ ಈ ಪಂದ್ಯದಲ್ಲಿ ಉತ್ತಮ ಜತೆಯಾಟ ನಡೆಸುವ ಮೂಲಕ ಗಮನಸೆಳೆದರು. ಗೆಲುವಿಗೆ 20 ರನ್​ ಬೇಕಿದ್ದಾಗ ಸೂರ್ಯಕುಮಾರ್​ ತಮ್ಮ ಎಂದಿನ ಶೈಲಿಯಾದ ಸ್ಫೋಟಕ ಬ್ಯಾಟಿಂಗ್​ಗೆ ಒಗ್ಗಿಕೊಂಡರು. ಸತತ ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ನೆರದಿದ್ದ ಪ್ರೇಕ್ಷರಕರಿಗೆ ಕೊನೆಯ ಕ್ಷಣದಲ್ಲಿ ಮನರಂಜನೆ ನೀಡಿದರು. ಜತೆಗೆ ಅರ್ಧಶತಕ ಬಾರಿಸಿ ಮಿಂಚಿದರು. ದುಬೆ ಮತ್ತು ಸೂರ್ಯ ಜೋಡಿ 4 ವಿಕೆಟ್​ಗೆ ಅಜೇಯ 72 ರನ್​ ಒಟ್ಟುಗೂಡಿಸಿತು. ಸೂರ್ಯಕುಮಾರ್​ 49 ಎಸೆತ ಎದುರಿಸಿ ತಲಾ 2 ಬೌಂಡರಿ ಮತ್ತು ಸಿಕ್ಸರ್​ ಬಾರಿಸಿ ಭರ್ತಿ 50 ರನ್​ ಗಳಿಸಿದರೆ, ದುಬೆ 35 ಎಸೆತಗಳಿಂದ 31 ರನ್​ ಬಾರಿಸಿದರು.

Continue Reading

ಕ್ರೀಡೆ

Shardul Thakur: ಶಾರ್ದೂಲ್‌ ಠಾಕೂರ್‌ಗೆ ಪಾದದ ಶಸ್ತ್ರಚಿಕಿತ್ಸೆ; ಮೂರು ತಿಂಗಳು ಕ್ರಿಕೆಟ್​ನಿಂದ ದೂರ 

Shardul Thakur: 2019ರಲ್ಲೂ ಶಾರ್ದೂಲ್​ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ನೋವು ಕಾಣಿಸಿಕೊಂಡಿತ್ತು. ಕಳೆದ ತಿಂಗಳು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಿದ್ದ ಅವರು 9 ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನಷ್ಟೇ ಪಡೆದಿದ್ದರು.

VISTARANEWS.COM


on

Shardul Thakur
Koo

ಲಂಡನ್‌: ಲಾರ್ಡ್ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಭಾರತ ತಂಡದ ಆಲ್‌ರೌಂಡರ್‌ ಶಾರ್ದೂಲ್ ಠಾಕೂರ್(Shardul Thakur) ಅವರ ಪಾದದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ(Shardul Thakur foot surgery) ನಡೆದಿದ್ದು, ಕನಿಷ್ಠ ಮೂರು ತಿಂಗಳುಗಳ ಕಾಲ ಅವರು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ.

32 ವರ್ಷ ವರ್ಷದ ಶಾರ್ದೂಲ್‌ ಬುಧವಾರ ಲಂಡನ್​ನಲ್ಲಿ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದ ಫೋಟೊವನ್ನು ಶಾರ್ದೂಲ್​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದು ಶೀಘ್ರದಲ್ಲೇ ಗುಣಮುಖರಾಗಿ ಮತ್ತೆ ನಿಮ್ಮ ಮುಂದೆ ಆಡಲಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಕೇಂದ್ರಿಯ ಗುತ್ತಿಗೆಯಲ್ಲಿ ಅವರು ‘ಸಿ’ ಗ್ರೇಡ್‌ ವ್ಯಾಪ್ತಿಯಲ್ಲಿರುವ ಕಾರಣ ಅವರ ಚಿಕಿತ್ಸೆಯ ವೆಚ್ಚವನ್ನು ಬಿಸಿಸಿಐ ಭರಿಸಲಿದೆ.

2019ರಲ್ಲೂ ಶಾರ್ದೂಲ್​ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅಂದು ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಪಾದದ ನೋವು ಕಾಣಿಸಿಕೊಂಡಿತ್ತು. ಕಳೆದ ತಿಂಗಳು ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಪರ ಆಡಿದ್ದ ಅವರು 9 ಪಂದ್ಯಗಳಲ್ಲಿ ಕೇವಲ ಐದು ವಿಕೆಟ್‌ಗಳನ್ನಷ್ಟೇ ಪಡೆದಿದ್ದರು. ಶಾರ್ದೂಲ್​ ಭಾರತ ಪರ 11 ಟೆಸ್ಟ್​, 47 ಏಕದಿನ ಮತ್ತು 25 ಟಿ20 ಪಂದ್ಯಗಳನ್ನಾಡಿ ಒಟ್ಟು 129 ವಿಕೆಟ್​ ಪಡೆದಿದ್ದಾರೆ. ಬ್ಯಾಟಿಂಗ್​ನಲ್ಲಿಯೂ ಉತ್ತಮ ಪ್ರದರ್ಶನ ತೋರಿರುವ ಅವರು ಒಟ್ಟು 729 ರನ್​ ಬಾರಿಸಿದ್ದಾರೆ. ಇದರಲ್ಲಿ 5 ಅರ್ಧಶತಕ ಒಳಗೊಂಡಿದೆ.


ಟೀಮ್​ ಇಂಡಿಯಾದ ಪ್ರಧಾನ ವೇಗಿ ಮೊಹಮ್ಮದ್​ ಶಮಿ ಕೂಡ ಕೆಲ ತಿಂಗಳ ಹಿಂದೆ ಲಂಡನ್​ನಲ್ಲಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿ ಈಗ ವಿಶ್ರಾಂತಿಯಲ್ಲಿದ್ದಾರೆ. ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಗಾಯದಿಂದಾಗಿ ಶಮಿ ಅವರು ಈ ಬಾರಿಯ ಐಪಿಎಲ್​ ಸೇರಿ ಟಿ20 ವಿಶ್ವಕಪ್​ ಆಡುವ ಅವಕಾಶ ಕಳೆದುಕೊಂಡರು. ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading

ಕ್ರಿಕೆಟ್

T20 World Cup Viral Video: ಪಾಕ್​ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ

T20 World Cup Viral Video: ಪಂದ್ಯ ಮುಗಿಸಿ ಡ್ರೆಸಿಂಗ್​ ರೋಮ್​ಗೆ ತೆರಳುವ ವೇಳೆ ಅಮೀರ್​ ಅವರು ಅಭಿಮಾನಿಗಳಿಗೆ ಏನೋ ಕೈ ಸನ್ನೆ ಮಾಡುವ ಮೂಲಕ ಅಹಂಕಾರದ ವರ್ತನೆ ತೋರಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅಭಿಮಾನಿಗಳು ಜೋರಾಗಿ ಫಿಕ್ಸರ್​…ಫಿಕ್ಸರ್​ ಎಂದು ಕರೆದು ಗೇಲಿ ಮಾಡಿದ್ದಾರೆ.

VISTARANEWS.COM


on

T20 World Cup Viral Video
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್(T20 World Cup)​ ಆಡುವ ಸಲುವಾಗಿ ನಿವೃತ್ತಿ ಹಿಂಪಡೆದು ಪಾಕಿಸ್ತಾನ ತಂಡದ ಪರ ಆಡುತ್ತಿರುವ ಅನುಭವಿ ಹಾಗೂ ಹಿರಿಯ ವೇಗಿ ಮೊಹಮ್ಮದ್​ ಅಮೀರ್(Mohammad Amir)​ ಅವರು ನ್ಯೂಯಾರ್ಕ್​ನಲ್ಲಿ ತವರಿನ ಅಭಿಮಾನಿಗಲೇ ಗೇಲಿ ಮಾಡಿದ್ದಾರೆ. ಅಮೀರ್​ ಅವರನ್ನು ಫಿಕ್ಸರ್…ಫಿಕ್ಸರ್​ ಎಂದು ಕರೆದಿದ್ದಾರೆ. ಈ ವಿಡಿಯೊ ವೈರಲ್​(T20 World Cup Viral Video) ಆಗಿದೆ.

ಪಂದ್ಯ ಮುಗಿಸಿ ಡ್ರೆಸಿಂಗ್​ ರೋಮ್​ಗೆ ತೆರಳುವ ವೇಳೆ ಅಮೀರ್​ ಅವರು ಅಭಿಮಾನಿಗಳಿಗೆ ಏನೋ ಕೈ ಸನ್ನೆ ಮಾಡುವ ಮೂಲಕ ಅಹಂಕಾರದ ವರ್ತನೆ ತೋರಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಅಭಿಮಾನಿಗಳು ಜೋರಾಗಿ ಫಿಕ್ಸರ್​…ಫಿಕ್ಸರ್​ ಎಂದು ಕರೆದು ಗೇಲಿ ಮಾಡಿದ್ದಾರೆ. ಈ ವೇಳೆ ಅಮೀರ್​ ಕೋಪಗೊಂಡು ಬೈದಿದ್ದಾರೆ. ಇದರಿಂದ ಕೆರಳಿದ ಅಭಿಮಾನಿಗಳು ಮತ್ತೂ ಜೋರಾಗಿ ನೀನೊಬ್ಬ ಫಿಕ್ಸರ್​ ಎನ್ನುವುದನ್ನು ಮರಿಬೇಡ, ಜೈಲು ಶಿಕ್ಷೆಯೂ ಅನುಭವಿಸಿದ್ದೀಯ ಎಂದು ಹೇಳಿದ್ದಾರೆ. ಇದು ಬಾಬರ್​ ಅಜಂ ಅವರ ಅಭಿಮಾನಿಗಳು ಎಂದು ಹೇಳಲಾಗಿದೆ.

2010ರ ಆಗಸ್ಟ್‌ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಅಮೀರ್​ ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಹೀಗಾಗಿ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಅವರ ಮೇಲೆ ಕ್ರಿಕೆಟ್ ಆಡದಂತೆ ಐದು ವರ್ಷಗಳ ನಿಷೇಧ ವಿಧಿಸಲಾಗಿತ್ತು. ಆಗ ಅವರಿಗೆ 18 ವರ್ಷ ವಯಸ್ಸಾಗಿತ್ತು. 2015ರಲ್ಲಿ ನಿಷೇಧ ಮುಕ್ತರಾಗಿ ಅವರು ದೇಶಿ ಕ್ರಿಕೆಟ್‌ನಲ್ಲಿ ಆಡುವ ಅವಕಾಶ ಪಡೆದು ಬಳಿಕ ರಾಷ್ಟ್ರೀಯ ತಂಡಕ್ಕೆ ಮತ್ತೆ ಪುನರಾಗಮನ ಮಾಡಿದ್ದರು. ಈ ಪ್ರಕರಣದಲ್ಲಿ ಅಮೀರ್​ ಮಾತ್ರವಲ್ಲದೆ ತಂಡದ ನಾಯಕ ಸಲ್ಮಾನ್ ಭಟ್ ಮತ್ತು ಮೊಹಮ್ಮದ್ ಆಸೀಫ್ ಕೂಡ ನಿಷೇಧಕ್ಕೊಳಗಾಗಿದ್ದರು.

ಇದನ್ನೂ ಓದಿ WI vs NZ: ಕಿವೀಸ್​ ಕಿವಿ ಹಿಂಡಿ ಸೂಪರ್​-8ಗೆ ಪ್ರವೇಶಿಸಿದ ವೆಸ್ಟ್​ ಇಂಡೀಸ್​

 2021 ರಲ್ಲಿ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಅವರು ಜಗತ್ತಿನಾದ್ಯಂತ T20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಿದ್ದರು. ಈ ಬಾರಿಯ ಟಿ20 ವಿಶ್ವಕಪ್​ ಆಡುವ ಸಲುವಾಗಿಯೇ ಅವರು ತಮ್ಮ ನಿವೃತ್ತಿಯನ್ನು ಹಿಂಪಡೆದು ಮತ್ತೆ ತಂಡ ಸೇರಿದ್ದರು. 32 ವರ್ಷದ ಅಮೀರ್ ಇದುವರೆಗೆ 36 ಟೆಸ್ಟ್‌ಗಳು, 61 ಏಕದಿ ಮತ್ತು 61 ಟಿ20 ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 81, ಟೆಸ್ಟ್​ನಲ್ಲಿ 119 ಮತ್ತು ಟಿ20ಯಲ್ಲಿ 69 ವಿಕೆಟ್​ ಕೆಡವಿದ್ದಾರೆ.

ಪಾಕಿಸ್ತಾನ ತಂಡ ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದೆ. ಅಮೆರಿಕ ತಂಡ ಮುಂದಿನ ಪಂದ್ಯದಲ್ಲಿ ಐರ್ಲೆಂಡ್​ ವಿರುದ್ಧ ಗೆದ್ದರೆ ಪಾಕ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಪಾಕ್​ ಆಟಗಾರನಿಗೆ ‘ನಾಲಾಯಕ್’ ಎಂದ ಹರ್ಭಜನ್​ ಸಿಂಗ್


ಭಾರತ ಮತ್ತು ಪಾಕ್​(IND vs PAK) ಪಂದ್ಯದ ವೇಳೆ ಸಿಕ್ಖ್ ಸಮುದಾಯವನ್ನು ಅವಹೇಳನ ಮಾಡುವ ರೀತಿಯಲ್ಲಿ ಜನಾಂಗೀಯ ನಿಂದನೆ ಮಾಡಿ ಬಳಿಕ ಕ್ಷಮೆಯಾಚಿಸಿದ್ದ ಪಾಕಿಸ್ತಾನದ ಮಾಜಿ ಆಟಗಾರ ಕಮ್ರಾನ್​ ಅಕ್ಮಲ್(Kamran Akmal) ವಿರುದ್ಧ ಹರ್ಭಜನ್​ ಸಿಂಗ್(Harbhajan Singh) ಮತ್ತೆ ಕಿಡಿ ಕಾರಿದ್ದಾರೆ. ನಿನೋಬ್ಬ ನಾಲಾಯಕ್(Nalaayak)​ ಎಂದು ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ. ಎಎನ್​ಐ ಜತೆಗಿನ ಸಂದರ್ಶನದಲ್ಲಿ ಮಾತನಾಡುವ ವೇಳೆ ಹರ್ಭಜನ್​ ಸಿಂಗ್ ಅವರು ಕಮ್ರಾನ್​ ಅಕ್ಮಲ್​ ಒಬ್ಬ ನಾಲಾಯಕ್​, ಈತನಿಂದ ಮಾತ್ರ ಈ ರೀತಿಯ ಹೇಳಿಕೆ ನೀಡಲು ಸಾಧ್ಯ ಎಂದು ತೀಕ್ಷ್ಣ ಮಾತುಗಳಿಂದ ಜಾಡಿಸಿದ್ದಾರೆ.

Continue Reading

ಕ್ರೀಡೆ

WI vs NZ: ಕಿವೀಸ್​ ಕಿವಿ ಹಿಂಡಿ ಸೂಪರ್​-8ಗೆ ಪ್ರವೇಶಿಸಿದ ವೆಸ್ಟ್​ ಇಂಡೀಸ್​

WI vs NZ: ಚೇಸಿಂಗ್​ ಆರಂಭಿಸಿದ ನ್ಯೂಜಿಲ್ಯಾಂಡ್​ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟಿ20 ಸ್ಪೆಷಲಿಸ್ಟ್​ಗಳನ್ನು ಹೆಚ್ಚಾಗಿ ನೆಚ್ಚಿಕೊಂಡ ಬಲಿಷ್ಠ ತಂಡವಾಗಿದ್ದರೂ ಕೂಡ ಯಾರೋಬ್ಬರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲೇ ಇಲ್ಲ

VISTARANEWS.COM


on

WI vs NZ
Koo

ಟ್ರಿನಿಡಾಡ್: ಸೂಪರ್​-8 ಆಸೆ ಜೀವಂತವಿರಿಸುವ ಇರಾದೆಯೊಂದಿಗೆ ಆಡಲಿಳಿದ ನ್ಯೂಜಿಲ್ಯಾಂಡ್(WI vs NZ)ಗೆ ಆತಿಥೇಯ ವೆಸ್ಟ್​ ಇಂಡೀಸ್(West Indies) ಆಘಾತವಿಕ್ಕಿದೆ. 13 ರನ್​​ಗಳ ಅಂತರದ ಸೋಲುಣಿಸಿದೆ. ಗೆಲುವು ಸಾಧಿಸಿದ ವಿಂಡೀಸ್​ ‘ಸಿ’ ಗುಂಪಿನಿಂದ ಸೂಪರ್​-8ಗೆ ಪ್ರವೇಶ ಪಡೆಯಿತು. ಸತತ 2 ಸೋಲು ಕಂಡ ನ್ಯೂಜಿಲ್ಯಾಂಡ್​(New Zealand) ಟೂರ್ನಿಯಿಂದ ಬಹುತೇಕ ಹೊರಬೀಳುವ ಸ್ಥಿತಿಗೆ ಬಂದು ನಿಂತಿದೆ. ನಾಳೆ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನ ತಂಡ ಪಪುವಾ ನ್ಯೂ ಗಿನಿಯಾ ವಿರುದ್ಧ ಗೆದ್ದರೆ ಕಿವೀಸ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್‌ ಪಂದ್ಯಾವಳಿಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿರುವ ನ್ಯೂಜಿಲ್ಯಾಂಡ್‌ ಈ ರೀತಿಯ ಶೋಚನೀಯ ಸ್ಥಿತಿ ತಲುಪಿದ್ದು ಇದೇ ಮೊದಲು.

ಇಲ್ಲಿನ ಬ್ರಿಯನ್​ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ವೆಸ್ಟ್​ ಇಂಡೀಸ್​ ಆರಂಭಿಕ ಆಘಾತ ಕಂಡರೂ ಕೂಡ ಶೆರ್ಫೇನ್ ರುದರ್ಫೋರ್ಡ್(68) ಅಜೇಯ ಅರ್ಧಶತಕದ ಬ್ಯಾಟಿಂಗ್​ ಹೋರಾಟದಿಂದ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 149 ರನ್​ ಬಾರಿಸಿತು. ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್​ ನಾಟಕೀಯ ಕುಸಿತ ಕಂಡು 9 ವಿಕೆಟ್​ಗೆ 136 ರನ್​ ಗಳಿಸಿ ಸೋಲಿಗೆ ತುತ್ತಾಯಿತು. ಕಳೆದ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧವೂ ಕೇವಲ 75 ರನ್​ಗೆ ಕುಸಿದು ಹೀನಾಯ ಸೋಲು ಕಂಡಿತ್ತು.

ಚೇಸಿಂಗ್​ ಆರಂಭಿಸಿದ ನ್ಯೂಜಿಲ್ಯಾಂಡ್​ ಆರಂಭದಲ್ಲೇ ಸತತವಾಗಿ ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಟಿ20 ಸ್ಪೆಷಲಿಸ್ಟ್​ಗಳನ್ನು ಹೆಚ್ಚಾಗಿ ನೆಚ್ಚಿಕೊಂಡ ಬಲಿಷ್ಠ ತಂಡವಾಗಿದ್ದರೂ ಕೂಡ ಯಾರೋಬ್ಬರು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಯಶಸ್ಸು ಕಾಣಲೇ ಇಲ್ಲ. ಡೆವೋನ್​ ಕಾನ್ವೆ(5), ನಾಯಕ ಕೇನ್​ ವಿಲಿಯಮ್ಸನ್​(1), ರಚಿನ್​ ರವೀಂದ್ರ(10), ಡ್ಯಾರಿಲ್​ ಮಿಚೆಲ್​(12), ಜೇಮ್ಸ್​ ನೀಶಮ್​(10) ಅಲ್ಪ ಮೊತ್ತಕ್ಕೆ ವಿಕೆಟ್​ ಕೈಚೆಲ್ಲಿ ಪೆವಿಲಿಯನ್​ ಪರೇಡ್​ ನಡೆಸಿದರು. ತಂಡಕ್ಕೆ ಆಸರೆಯಾದ ಆಟಗಾರನೆಂದರೆ ಗ್ಲೆನ್​ ಫಿಲಿಫ್ಸ್​ ಮಾತ್ರ.

ಇದನ್ನೂ ಓದಿ IND vs USA: ಭಾರತಕ್ಕೆ 5​ ಪೆನಾಲ್ಟಿ ರನ್ ಲಭಿಸಿದ್ದು ಹೇಗೆ?

ಒಂದೆಡೆ ಸಹ ಆಟಗಾರರ ವಿಕೆಟ್​ ಬೀಳುತ್ತಿದ್ದರೂ ಕೂಡ ವಿಂಡೀಸ್​ ಬೌಲಿಂಗ್​ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಂತ ಫಿಲಿಫ್ಸ್​ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಹೋರಾಟ ನಡೆಸಿದರು. ಆದರೆ 40 ರನ್​ ಗಳಿಸಿದ ವೇಳೆ ಇವರ ವಿಕೆಟ್​ ಕೂಡ ಪತನಗೊಂಡಿತು. ಈ ವಿಕೆಟ್​ ಬೀಳುತ್ತಿದ್ದಂತೆ ನ್ಯೂಜಿಲ್ಯಾಂಡ್​ ಸೋಲು ಕೂಡ ಖಚಿತಗೊಂಡಿತು. ಅಂತಿಮ ಹಂತದಲ್ಲಿ ಮಿಚೆಲ್​ ಸ್ಯಾಂಟ್ನರ್ ಅವರು 12 ಎಸೆತಗಳಿಂದ ಅಜೇಯ 21 ರನ್​ ಬಾರಿಸಿದರೂ ಕೂಡ ಇವರಿಗೆ ತಂಡವವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ವಿಂಡೀಸ್​ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ಅಲ್ಜಾರಿ ಜೋಸೆಫ್​ 19 ರನ್​ಗೆ 4 ವಿಕೆಟ್​ ಕಿತ್ತರೆ, ಗುಡಾಕೇಶ್ ಮೋತಿ 3 ವಿಕೆಟ್​ ಕಿತ್ತು ಮಿಂಚಿದರು.

ಬಿರುಸಿನ ಬ್ಯಾಟಿಂಗ್​ ನಡೆಸಿದ ರುದರ್ಫೋರ್ಡ್

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ವಿಂಡೀಸ್​ 30 ರನ್​ಗೆ 5 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ಜಾನ್ಸನ್ ಚಾರ್ಲ್ಸ್ ಮತ್ತು ರೋಸ್ಟನ್ ಚೇಸ್ ಶೂನ್ಯ ಸಂಕಟಕ್ಕೆ ಸಿಲುಕಿದರು. ಅನುಭವಿ ನಿಕೋಲಸ್​ ಪೂರಣ್(17) ಮತ್ತು ಆರಂಭಿಕ ಆಟಗಾರ ಬ್ರೆಂಡನ್​ ಕಿಂಗ್​(9), ನಾಯಕ ರೋವ್ಮನ್ ಪೊವೆಲ್(1) ಸಂಪೂರ್ಣ ಬ್ಯಾಟಿಂಗ್​ ವೈಫಲ್ಯ ಕಂಡರು. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ವಿಂಡೀಸ್​ಗೆ ಆಸರೆಯಾದದ್ದು 7ನೇ ಕ್ರಮಾಂಕದಲ್ಲಿ ಆಡಲಿಳಿದ ಶೆರ್ಫೇನ್ ರುದರ್ಫೋರ್ಡ್. ಬಿರುಸಿನ ಬ್ಯಾಟಿಂಗ್​ ನಡೆಸಿದ ಶೆರ್ಫೇನ್ ರುದರ್ಫೋರ್ಡ್ 39 ಎಸೆತಗಳಲ್ಲಿ ಬರೋಬ್ಬರಿ 6 ಸಿಕ್ಸರ್​ ಮತ್ತು 2 ಬೌಂಡರಿ ಸಿಡಿಸಿ ಅಜೇಯ 68 ರನ್​ಗಳ ಕೊಡುಗೆ ನೀಡಿದರು. ಇವರು ನಿಂತು ಆಡದೇ ಹೋಗಿದ್ದರೆ ವಿಂಡೀಸ್​ ಅಲ್ಪ ಮೊತ್ತಕ್ಕೆ ಕುಸಿಯುತ್ತಿತ್ತು.

Continue Reading
Advertisement
JP Nadda
Latest9 mins ago

JP Nadda: ವೇದಿಕೆ ಮೇಲೆ ಗುಟ್ಕಾ ತಿಂದ ಕೇಂದ್ರ ಆರೋಗ್ಯ ಸಚಿವ ನಡ್ಡಾ? ವಿಡಿಯೊ ನೋಡಿ

Actor darshan Arrested
ಪ್ರಮುಖ ಸುದ್ದಿ16 mins ago

Actor darshan Arrested : ದರ್ಶನ್‌ಗೆ ಎಣ್ಣೆ ಹೊಡೆಯಲು, ಸಿಗರೇಟ್​ ಸೇದಲು ಠಾಣೆಗೇ ಶಾಮಿಯಾನ ಹಾಕಿದರೆ ಪೊಲೀಸರು?

Hamare Baarah Release Supreme Court has imposed a stay
ಬಾಲಿವುಡ್21 mins ago

Hamare Baarah: ಮುಸ್ಲಿಂ ಮಹಿಳೆಯರ ಕುರಿತ ʻಹಮಾರೆ ಬಾರಾʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

Stock Market
ವಾಣಿಜ್ಯ23 mins ago

Stock Market: ಷೇರುಪೇಟೆಯಲ್ಲಿ ಗೂಳಿ ಗುಟುರು; ಸೆನ್ಸೆಕ್ಸ್‌, ನಿಫ್ಟಿ ಏರಿಕೆ

Actor Darshan
ಬೆಂಗಳೂರು23 mins ago

Actor Darshan : ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

Darshan Old Case Coming Out darshan gang
ಕ್ರೈಂ27 mins ago

Actor Darshan: ಬಡಪಾಯಿ ಕಾರ್ಮಿಕರ ಮೇಲೆ ನಾಯಿ ಛೂ ಬಿಟ್ಟು ಹಿಂಸಿಸಿದ್ದ ದರ್ಶನ್‌ & ಗ್ಯಾಂಗ್‌!

IND vs USA
ಕ್ರೀಡೆ43 mins ago

IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

Actor Darshan case ram gopal varma Reaction
ಸ್ಯಾಂಡಲ್ ವುಡ್1 hour ago

Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

Gold Rate Today
ಚಿನ್ನದ ದರ1 hour ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ; ಇಂದಿನ ದರ ಚೆಕ್‌ ಮಾಡಿ

Karnataka Rain Effect
ಮಳೆ1 hour ago

Karnataka Rain : ಮಳೆ ಅವಾಂತರ: ತರಗತಿ ನಡೆಯುವಾಗಲೇ ಮಕ್ಕಳ ಮೇಲೆ ಕುಸಿದು ಬಿದ್ದ ಚಾವಣಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌