variety-trendy-white-t-shirts-for-the-summer-cool-look-of-the-youth Summer Fashion : ಯುವಕರ ಸಮ್ಮರ್‌ ಕೂಲ್‌ ಲುಕ್‌ಗೆ ಬಂತು ವೆರೈಟಿ ಟ್ರೆಂಡಿ ವೈಟ್‌ ಟೀ ಶರ್ಟ್ಸ್​​ - Vistara News

ಫ್ಯಾಷನ್

Summer Fashion : ಯುವಕರ ಸಮ್ಮರ್‌ ಕೂಲ್‌ ಲುಕ್‌ಗೆ ಬಂತು ವೆರೈಟಿ ಟ್ರೆಂಡಿ ವೈಟ್‌ ಟೀ ಶರ್ಟ್ಸ್​​

ಇಂಟ್ರೋ : ಯುವಕರ ಸಮ್ಮರ್‌ ಫ್ಯಾಷನ್‌ನಲ್ಲಿ ಇದೀಗ ವೈಟ್‌ ಟೀ ಶರ್ಟ್ಗೆ ಅಗ್ರಸ್ಥಾನ. ಸಾದಾ, ಪ್ರಿಂಟೆಡ್‌ ಸೇರಿದಂತೆ ನಾನಾ ಬಗೆಯ ಶ್ವೇತ ವರ್ಣದ ಟೀ ಶರ್ಟ್ಗಳು ಯುವಕರನ್ನು ಈ ಸೀಸನ್‌ನಲ್ಲಿ ಸವಾರಿ ಮಾಡತೊಡಗಿವೆ. ಈ ಬಗ್ಗೆ ಇಲ್ಲಿದೆ ಡಿಟೇಲ್ಸ್‌.

VISTARANEWS.COM


on

variety-trendy-white-t-shirts-for-the-summer-cool-look-of-the-youth
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುವಕರ ಸಮ್ಮರ್‌ ಫ್ಯಾಷನ್‌ನಲ್ಲಿ ಇದೀಗ ವೈಟ್‌ ಟೀ ಶರ್ಟ್ಸ್​ಗಳದ್ದೇ ಕಾರುಬಾರು. ನೋಡಲು ಸಿಂಪಲ್‌ ಹಾಗೂ ಫ್ರೆಶ್‌ ಫೀಲಿಂಗ್‌ ನೀಡುವ ಈ ಶ್ವೇತ ವರ್ಣದ ನಾನಾ ವಿನ್ಯಾಸದ ಟೀ ಶರ್ಟ್ಸ್​ಗಳು ಬೇಸಿಗೆಯ ಬಿಸಿಲಿಗೆ ತಂಪನ್ನೆರೆಯುವ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ವಿನೂತನ ರೂಪದಲ್ಲಿ ರೌಂಡ್‌, ವಿ ನೆಕ್‌ನ ಸಿಂಪಲ್‌ ಕಾಟನ್‌, ಲೆನಿನ್‌, ಜೆರ್ಸಿ ಹಾಗೂ ನಾನಾ ಬಗೆಯ ಲೋಗೋ, ಜೆಮೆಟ್ರಿಕ್‌ ಪ್ರಿಂಟೆಡ್‌ ಟೀ ಶರ್ಟ್​​ಗಳು ಸೇರಿದಂತೆ ನಾನಾ ಡಿಸೈನ್‌ನ ಟೀ ಶರ್ಟ್​​ಗಳು ಈ ಬಿರು ಬೇಸಿಗೆಯಲ್ಲಿ ಎಂಟ್ರಿ ನೀಡಿವೆ. ಯುವಕರ ಔಟಿಂಗ್‌ ಹಾಗೂ ವೀಕೆಂಡ್‌ಗೆ ಸೂಟ್‌ ಆಗುವಂತಹ ಫಂಕಿ ಡಿಸೈನ್‌ನಲ್ಲೂ ಬಿಡುಗಡೆಗೊಂಡಿವೆ.

ಕಾಲೇಜು ಹುಡುಗರ ಫೇವರೇಟ್‌ ಟೀ ಶರ್ಟ್

ಟಿನೇಜ್‌ ಹಾಗೂ ಯುವಕರ ಫೇವರೇಟ್‌ ಲಿಸ್ಟ್‌ನಲ್ಲಿರುವ ಈ ಸಮ್ಮರ್‌ ವೈಟ್‌ ಶೇಡ್​ನ ಟಿ ಶರ್ಟ್​​ಗಳು ಬ್ರಿಥೆಬಲ್‌ ಫ್ಯಾಬ್ರಿಕ್‌ನಲ್ಲಿ ದೊರೆಯುತ್ತಿರುವುದು ಟ್ರೆಂಡಿಯಾಗಲು ಕಾರಣ. ಯಾವುದೇ ಜೀನ್ಸ್‌ ಪ್ಯಾಂಟ್‌ ಮೇಲೆ ಧರಿಸಿದರಾಯಿತು. ನೋಡಲು ಮಾಡರ್ನ್ ಲುಕ್‌ ನೀಡುವುದರೊಂದಿಗೆ ಟ್ರೆಂಡಿಯಾಗಿಯೂ ಕಾಣಿಸುತ್ತವೆ. ಹೇರ್‌ಸ್ಟೈಲ್‌ ಕೊಂಚ ಸ್ಟೈಲಾಗಿ ಮಾಡಿದರಾಯಿತು. ಫಂಕಿ ಲುಕ್‌ ಗ್ಯಾರಂಟಿ ಎನ್ನುತ್ತಾರೆ ಸ್ಟೈಲಿಸ್ಟ್‌ ರಿಚರ್ಡ್.

ಪ್ರಿಂಟೆಡ್‌ ಸಮ್ಮರ್‌ ಟೀ ಶರ್ಟ್

ಮೊದಲೆಲ್ಲಾ ಪ್ರಿಂಟೆಡ್‌ ಟೀ ಶರ್ಟ್​​ಗಳು ಕೇವಲ ಹುಡುಗಿಯರ ಆಸ್ತಿ ಎಂಬಂತಿದ್ದವು. ಇದೀಗ ಹುಡುಗರಿಗೂ ಪ್ರಿಂಟೆಡ್‌ ಟೀ ಶರ್ಟ್​​ಗಳು ಕೊಂಚ ವಿಭಿನ್ನ ವಿನ್ಯಾಸದಲ್ಲಿ ದೊರಕಲಾರಂಭಿಸಿವೆ. ಬ್ರಾಂಡೆಡ್‌ ಟೀ ಶರ್ಟ್​​ನಿಂದ ಹಿಡಿದು ಲೋಕಲ್‌ ಬ್ರಾಂಡ್‌ವರೆಗೂ ಆಕರ್ಷಕ ವಿನ್ಯಾಸದಲ್ಲಿ ಸಿಗುತ್ತಿವೆ ಎನ್ನುತ್ತಾರೆ ಡಿಸೈನರ್‌ ಧೀರಜ್‌. ಹಾಗೆಂದು ಇಡೀ ವೈಟ್‌ ಟೀ ಶರ್ಟ್ ಪ್ರಿಂಟೆಡ್‌ನದ್ದಾಗಿರುವುದಿಲ್ಲ! ಉದಾಹರಣೆಗೆ., ಟೀ ಶರ್ಟ್​​​ನ ಮಧ್ಯ ಭಾಗದಲ್ಲಿ ಜೆಮೆಟ್ರಿಕ್‌ ಶೇಪ್‌ನೊಳಗೆ ಪ್ರಿಂಟ್ಸ್‌ ಕಾಣಬಹುದು. ಇಲ್ಲವೇ ಲೋಗೋದಂತಹ ಸಿಂಬಲ್‌ನೊಳಗೆ ಪ್ರಿಂಟ್ಸ್‌ ಅಥವಾ ಜೆರ್ಸಿ ಮೆಟೀರಿಯಲ್‌ನಲ್ಲಿ ಕ್ಯಾರೆಕ್ಟರ್ಸ್‌ ಪ್ರಿಂಟ್ಸ್‌ ನೋಡಬಹುದು ಎನ್ನುತ್ತಾರೆ.

ಕೂಲ್‌ ಲುಕ್ಕಾಗಿ ವೈಟ್‌ ಟೀ ಶರ್ಟ್

ಬಿಸಿಲಿಗೆ ಆದಷ್ಟೂ ಡಾರ್ಕ್ ಕಲರ್‌ನ ಟೀ ಶರ್ಟ್​​ಗಳನ್ನು ಅವಾಯ್ಡ್‌ ಮಾಡಬೇಕು. ವೈಟ್‌ ಟೀ ಶರ್ಟ್ ನೋಡಲು ಕೂಲ್‌ ಲುಕ್‌ ನೀಡುವುದಲ್ಲದೇ ಫ್ರೆಶ್‌ ಲುಕ್‌ ನೀಡುತ್ತದೆ. ಜೊತೆಗೆ ಆಕರ್ಷಕವಾಗಿಯೂ ಕಾಣಿಸುತ್ತದೆ ಎನ್ನುವ ಸ್ಟೈಲಿಸ್ಟ್‌ ರಾಜ್‌ ಪ್ರಕಾರ, ಯುವಕರು ಮಾತ್ರವಲ್ಲ, ಯಾವುದೇ ವಯಸ್ಸಿನ ಪುರುಷರು ಕೂಡ ಶ್ವೇತ ವರ್ಣದ ಟೀ ಶರ್ಟ್ನ ಧರಿಸಬಹುದು. ಇದು ಯಂಗ್‌ ಲುಕ್‌ಗೆ ಸಹಕಾರಿ ಎನ್ನುತ್ತಾರೆ.

ವೈಟ್‌ ಟೀ ಶರ್ಟ್ ಪ್ರಿಯ ಯುವಕರು ಪಾಲಿಸಬೇಕಾದ್ದು…

  • · ಯೂನಿಸೆಕ್ಸ್‌ ಟೀ ಶರ್ಟ್ ಆಯ್ಕೆ ಬೇಡ. ಫೆಮಿನೈನ್‌ ಲುಕ್‌ ನೀಡುವ ಸಾಧ್ಯತೆ ಹೆಚ್ಚು.
  • · ಕಾಲರ್‌ ಟೀ ಶರ್ಟ್ ಬೇಸಿಗೆಯಲ್ಲಿ ಆವಾಯ್ಡ್‌ ಮಾಡಿ.
  • · ರೌಂಡ್‌ ನೆಕ್‌ ಟೀ ಶರ್ಟ್ ಮೇಲೆ ಅಗತ್ಯವಿದ್ದಲ್ಲಿ ಲೈಟ್‌ವೈಟ್‌ ಬ್ಲೇಝರ್‌ ಧರಿಸಬಹುದು.

ಚಿತ್ರಗಳು : ಇಶಾನ್‌, ಬಾಲಿವುಡ್ ನಟ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

ICW 2024: ಮುಂಬರುವ ವೆಡ್ಡಿಂಗ್‌ ಸೀಸನ್‌ ಮೆನ್ಸ್ ವೇರ್‌ ಅನಾವರಣಗೊಳಿಸಿದ ಇಂಡಿಯಾ ಕೌಚರ್‌ ವೀಕ್‌ 2024

ICW 2024: ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚರ್‌ ವೀಕ್‌ನ 3ನೇ ದಿನದಂದು ಮುಂಬರುವ ವೆಡ್ಡಿಂಗ್‌ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್‌ಗಳು ಅನಾವರಣಗೊಂಡವು. ನಟ ಆದಿತ್ಯಾ ರಾಯ್‌ ಕಪೂರ್‌ ಹಾಗೂ ರಾಹುಲ್‌ ಖನ್ನಾ ಶೋ ಸ್ಟಾಪರ್‌ಗಳಾಗಿ ಕಾಣಿಸಿಕೊಂಡರು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

ICW 2024
ಚಿತ್ರಗಳು: ಇಂಡಿಯಾ ಕೌಚರ್‌ 2024 ಯ 3 ನೇ ದಿನ ಹೈಲೈಟಾದ ಮೆನ್ಸ್ ವೆಡ್ಡಿಂಗ್‌ ವೇರ್ಸ್, ಚಿತ್ರಕೃಪೆ: FDCI official
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಇಂಡಿಯಾ ಕೌಚರ್‌ ವೀಕ್‌ನ 3 ನೇ ದಿನದಂದು ಯುವತಿಯರ ಲಕ್ಷುರಿ ಡಿಸೈನರ್‌ವೇರ್‌ಗಳ ನಡುವೆಯೇ ಗ್ರ್ಯಾಂಡ್‌ ಮೆನ್ಸ್ ವೇರ್‌ಗಳು ಫ್ಯಾಷನ್‌ ಪ್ರಿಯರ ಮನಗೆದ್ದವು.
ಇದುವರೆಗೂ ಕೇವಲ ಯುವತಿಯರ ಹಾಗೂ ಬ್ರೈಡಲ್‌ ಲುಕ್‌ ನೀಡುವಂತಹ ಹೆವಿ ಹಾಗೂ ಜಗಮಗಿಸುವ ಡಿಸೈನರ್‌ವೇರ್‌ಗಳು ಎಲ್ಲರ ಮನಸೂರೆಗೊಂಡಿದ್ದವು. ಆದರೆ, ಮೂರನೇ ದಿನದಂದು ನಡೆದ ಶೋನಲ್ಲಿ ಇವೆಲ್ಲಕ್ಕಿಂತ ಹೆಚ್ಚಾಗಿ, ಮುಂಬರುವ ವೆಡ್ಡಿಂಗ್‌ ಸೀಸನ್‌ಗೆ ಪೂರಕವಾಗುವಂತಹ ನಾನಾ ವೆರೈಟಿ ಮೆನ್ಸ್ ವೇರ್‌ ಡಿಸೈನರ್‌ವೇರ್‌ಗಳು ಅನಾವರಣಗೊಂಡವು. ಪುರುಷರೂ ಹೀಗೆಲ್ಲಾ ಕಾಣಿಸಿಕೊಳ್ಳಬಹುದೇ ! ಎಂಬ ಇಮ್ಯಾಜೀನೇಷನ್‌ಗೆ ಪೂರಕವಾಗವಂತಹ ಡಿಸೈನರ್‌ವೇರ್‌ಗಳೂ ಕೂಡ ಈ ಫ್ಯಾಷನ್‌ ಶೋನಲ್ಲಿ (ICW 2024) ಪ್ರದರ್ಶನಗೊಂಡವು.

ICW 2024

ಮಿರ ಮಿರ ಮಿನುಗಿದ ಆದಿತ್ಯಾ ರಾಯ್‌ ಕಪೂರ್‌

ಸೆಲೆಬ್ರೆಟಿ ಡಿಸೈನರ್‌ ಕುನಾಲ್‌ ರಾವಲ್‌ ಅವರ ಮೆನ್ಸ್ ಕಲೆಕ್ಷನ್‌ನ ನೆವ್ವಿ ಬ್ಲ್ಯೂ ಎಂಬಾಲಿಶ್ಡ್ ಸಿಕ್ವೀನ್ಸ್‌ನಿಂದ ಮಿರ ಮಿರ ಮಿನುಗುತ್ತಿದ್ದ ಶೆರ್ವಾನಿ ಹಾಗೂ ದೊಗಲೆ ಧೋತಿಯಲ್ಲಿ ಬಾಲಿವುಡ್‌ ನಟ ಆದಿತ್ಯಾ ರಾಯ್‌ ಕಪೂರ್‌ ಆಕರ್ಷಕವಾಗಿ ಕಾಣಿಸಿಕೊಂಡರು.

ICW 2024

ಮಲೈಕಾಗಿಂತ ಹೆಚ್ಚು ಹೈಲೈಟಾದ ನಟ ರಾಹುಲ್‌ ಖನ್ನಾ

ಡಿಸೈನರ್‌ ಸಿದ್ಧಾರ್ಥ್‌ ಟೈಟ್ಲರ್‌ ಅವರ ಬ್ಲ್ಯಾಕ್‌ ಕಟೌಟ್‌ ಡಿಸೈನರ್‌ ಬ್ಲೌಸ್‌ –ಲೆಹೆಂಗಾ ಧರಿಸಿ ನಟಿ ಮಲೈಕಾ ಅರೋರಾ ಕಾಣಿಸಿಕೊಂಡರು. ಇದೇ ಡಿಸೈನರ್‌ನ ವಿಶೇಷ ಮೆನ್ಸ್‌ವೇರ್‌ ಕಲೆಕ್ಷನ್‌ ಭಾಗವಾಗಿದ್ದ ಬ್ಲ್ಯಾಕ್‌ ಸಾಲಿಡ್‌ ಶೇಡ್‌ನ ಜಿಪ್‌ ಇರುವಂತಹ ಬಾಟಮ್‌ ಗೋಲ್ಡ್ ಎಂಬ್ರಾಯ್ಡರಿ ಶೆರ್ವಾನಿಯಲ್ಲಿ ನಟ ರಾಹುಲ್‌ ಖನ್ನಾ ರ್ಯಾಂಪ್‌ ವಾಕ್‌ ಮಾಡಿದರು.

ICW 2024

ಪುರುಷರ ಮನ ಗೆದ್ದ ಜಿಪ್‌ ಶೆರ್ವಾನಿ

ಬಟನ್‌ ಇಲ್ಲದೆಯೂ ಶೆರ್ವಾನಿ ಡಿಸೈನ್‌ ಅತ್ಯಾಕರ್ಷಕವಾಗಿ ಕಾಣಿಸುತ್ತದೆ ಎಂಬುದು ರಾಹುಲ್‌ ಖನ್ನಾ ಅವರು ಧರಿಸಿದ ವಿನೂತನ ಕಾನ್ಸೆಪ್ಟ್‌ನ ಶೆರ್ವಾನಿ ವಿನ್ಯಾಸ ಪ್ರೂವ್‌ ಮಾಡಿತು. ಸಿಂಪಲ್‌ ಹಾಗೂ ಎಲಿಗೆಂಟ್‌ ಲುಕ್‌ ಬಯಸುವ ಪುರುಷರು ಇವುಗಳನ್ನು ಧರಿಸಿ ಸ್ಮಾರ್ಟಾಗಿ ಕಾಣಿಸಬಹುದು ಎಂಬುದನ್ನು ತೋರಿಸಿಕೊಟ್ಟಿತು.

ಇದನ್ನೂ ಓದಿ: Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

ಲೇಡಿ ಮಾಡೆಲ್‌ಗಳ ಮೆನ್ಸ್ ವೇರ್‌

ಇನ್ನು, ಈ ದಿನದ ಫ್ಯಾಷನ್‌ ಇವೆಂಟ್‌ನಲ್ಲಿ ಕೇವಲ ಮೆನ್ಸ್ ಮಾಡೆಲ್‌ಗಳು ಮಾತ್ರವಲ್ಲ, ಕೆಲವು ಹುಡುಗಿಯರು ಕೂಡ ಮೆನ್ಸ್ವೇರ್‌ ಧರಿಸಿ, ವಾಕ್‌ ಮಾಡಿದ್ದು, ಹೊಸತನ ಮೂಡಿಸಿತು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Paris Olympics 2024: ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ ಕೋಡ್‌ ವಿನ್ಯಾಸಕ್ಕೆ ಜನರ ಮಿಶ್ರ ಪ್ರತಿಕ್ರಿಯೆ

Paris Olympics 2024: ಪ್ಯಾರಿಸ್‌ ಒಲಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಭಾರತೀಯ ಅಥ್ಲೀಟ್‌ಗಳ ಡ್ರೆಸ್‌ಕೋಡ್‌ ಸಿದ್ಧಪಡಿಸಿದ್ದ ಡಿಸೈನರ್‌ ತರುಣ್‌ ತಹಿಲಿಯಾನಿಯವರ ವಿನ್ಯಾಸಕ್ಕೆ ಒಂದೆಡೆ ಮೆಚ್ಚುಗೆ ದೊರೆತರೆ, ಮತ್ತೊಂದೆಡೆ ಮಹಿಳೆಯೊಬ್ಬರು ಕಮೆಂಟ್‌ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಯಾಕಾಗಿ ಈ ಟೀಕೆ? ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಏನಿತ್ತು? ಎಂಬುದರ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Paris Olympics 2024
ಚಿತ್ರಗಳು: ವೀ ಆರ್‌ ಟೀಮ್‌ ಇಂಡಿಯಾ ಇನ್‌ಸ್ಟಾ ಖಾತೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾರಿಸ್‌ ಒಲಿಂಪಿಕ್ಸ್ ಕ್ರೀಡಾಪಟುಗಳ (Paris Olympics 2024) ಡ್ರೆಸ್‌ಕೋಡ್‌ ಡಿಸೈನ್‌ ಮಾಡಿದ ಬಾಲಿವುಡ್‌ ಡಿಸೈನರ್‌ ತರುಣ್‌ ತಹಿಲಿಯಾನಿಗೆ ಪ್ರಶಂಸೆಯ ಜೊತೆಜೊತೆಗೆ ತೀವ್ರ ಟೀಕೆಯ ಸುರಿಮಳೆಯೂ ಆಗಿದೆ. ಹೌದು, ಕೆಲವರು ಕ್ರೀಡಾಪಟುಗಳ ತಿರಂಗಾ ಕಾನ್ಸೆಪ್ಟ್ ಹೊಂದಿದ ಡ್ರೆಸ್‌ಕೋಡ್‌ ಆಕರ್ಷಕವಾಗಿದೆ. ರಾಷ್ಟ್ರದ ಸಂಸ್ಕೃತಿ ಬಿಂಬಿಸಿದೆ ಎಂದರೇ, ಇನ್ನು ಕೆಲವರು, ಕಳಪೆ ಡಿಸೈನ್‌ ಹೊಂದಿದೆ ಎಂದೆಲ್ಲಾ ತೀವ್ರವಾಗಿ ಟೀಕಿಸಿದ್ದಾರೆ.

paris olympics 20Paris Olympics 2024
paris olympics 20Paris Olympics 2024

ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡ ಅಥ್ಲಿಟ್ಸ್

ಅಂದಹಾಗೆ, ಪ್ಯಾರಿಸ್‌ ಒಲಂಪಿಕ್ಸ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ, ಅಥ್ಲೀಟ್ಸ್ ಡ್ರೆಸ್‌ ಕೋಡ್‌ಗಳನ್ನು ಬಾಲಿವುಡ್‌ನ ಖ್ಯಾತ ಡಿಸೈನರ್‌ ತರುಣ್‌ ತಹಿಲಿಯಾನಿ ಡಿಸೈನ್‌ ಮಾಡಿದ್ದು, ಈಗಾಗಲೇ ಈ ಉಡುಪಿನಲ್ಲಿ ಕಾಣಿಸಿಕೊಂಡ ಅಥ್ಲಿಟ್‌ ಫೋಟೋಗಳು ಕೂಡ ಜಗಜ್ಹಾಹಿರಾಗಿವೆ. ಕ್ರೀಡಾಪಟುಗಳು ಕೂಡ ಈ ತಿರಂಗಾ ಕಾನ್ಸೆಪ್ಟ್‌ನ ಔಟ್‌ಫಿಟ್ಸ್ ಧರಿಸಿ ಖುಷಿಖುಷಿಯಾಗಿ ಪೋಸ್‌ ಕೂಡ ನೀಡಿ, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಇವನ್ನು ನೋಡಿದ ಕೆಲವರು ಮಾತ್ರ, ಈ ಡ್ರೆಸ್‌ಕೋಡ್‌ ಕಾನ್ಸೆಪ್ಟ್ ಚೆನ್ನಾಗಿದೆ ಎಂದಿದ್ದಾರೆ, ಮತ್ತೆ ಕೆಲವರು ಕಳಪೆ ಡಿಸೈನ್‌ ಎಂದೆಲ್ಲಾ ಖಾರವಾಗಿ ಕಾಮೆಟ್‌ ಮಾಡಿದ್ದಾರೆ.

ತೀವ್ರವಾಗಿ ಟೀಕೆ ಮಾಡಿದ ಮಹಿಳೆ

ಅದರಲ್ಲೂ ಮಹಿಳೆಯೊಬ್ಬರು, ಹಲೋ ತರುಣ್‌ ತಹಿಲಿಯಾನಿಯವರೇ., ನೀವು ಡಿಸೈನ್‌ ಮಾಡಿರುವ ಸೀರೆ ಮುಂಬಯಿಯ ಸ್ಟ್ರೀಟ್‌ಗಳಲ್ಲಿ, ಕಡಿಮೆ ಬೆಲೆಯ 200 ರೂ.ಗಳ ಸೀರೆಗಳಂತಿವೆ. ಪಾಲಿಸ್ಟರ್‌ ಹಾಗೂ ಇಕ್ಕಟ್‌ ಡಿಸೈನ್‌ಗಳು ತೀರಾ ಸಾಮಾನ್ಯವಾಗಿದೆ. ಇಂತಹ ಡಿಸೈನ್‌ಗಳನ್ನೇನಾದರೂ ನೀವು ಇಂಟರ್ನ್‌ಗಳಿಂದ ಮಾಡಿಸಿದ್ದೀರಾ ಹೇಗೆ? ನಮ್ಮ ರಾಷ್ಟ್ರದ ಸಂಸ್ಕೃತಿ ಬಿಂಬಿಸಲು ಇವು ಸೂಕ್ತವಾಗಿಲ್ಲ! ಎಂಬುದಾಗಿ ಟ್ವೀಟ್‌ ( X ) ಮಾಡುವ ಮೂಲಕ ತೀವ್ರವಾಗಿ ಟೀಕಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮಂದಿ ಶೇರ್‌ ಮಾಡುವ ಮೂಲಕ ಹಾಗೂ ಇನ್ನೊಂದಿಷ್ಟು ತೆಗಳುವ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆದರೆ, ಡಿಸೈನರ್‌ ತರುಣ್‌ ತಹಿಲಿಯಾನಿ ಅವರು ಮಾತ್ರ, ಈ ಡಿಸೈನ್ಸ್ ನಮ್ಮ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಪೂರಕವಾಗುವಂತೆ ವಿನ್ಯಾಸ ಮಾಡಲಾಗಿದೆ ಎಂದು ಮಾಧ್ಯಮವೊಂದಕ್ಕೆ ಕೂಲಾಗಿ ಪ್ರತಿಕ್ರಿಯಿಸಿದ್ದಾರೆ.

ಕ್ರೀಡಾಪಟುಗಳ ಸೀರೆ & ಕುರ್ತಾ ಡಿಸೈನ್ಸ್

ಮಹಿಳಾ ಅಥ್ಲಿಟ್‌ಗಳಿಗೆ ಇಕ್ಕಟ್‌ ಪ್ರಿಂಟ್ಸ್‌ನಿಂದ ಸ್ಪೂರ್ತಿಗೊಂಡ ತಿರಂಗಾ ಶೇಡ್‌ನಲ್ಲಿ ಬಾರ್ಡರ್‌ ವಿನ್ಯಾಸಗೊಳಿಸಲಾಗಿತ್ತು. ನ್ಯಾಚುರಲ್‌ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿದ ಶ್ವೇತ ವರ್ಣದ ಕುರ್ತಾಗೆ ಹೊಂದುವಂತಹ ಬಂಡಿ ಜಾಕೆಟ್‌ನಲ್ಲಿ ಮೆನ್ಸ್ ಟೀಮ್‌ ಕಾಣಿಸಿಕೊಂಡಿತ್ತು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

FDCI & ICW 2024: ಇಂಡಿಯಾ ಕೌಚರ್‌ ವೀಕ್‌ನ 2ನೇ ದಿನ ಹೆಜ್ಜೆ ಹಾಕಿದ ಜಾಕ್ವೆಲೀನ್‌ ಫರ್ನಾಂಡಿಸ್‌

FDCI & ICW 2024: ಎಫ್‌ಡಿಸಿಐ ಸಹಯೋಗದಲ್ಲಿ ನಡೆಯುತ್ತಿರುವ ಇಂಡಿಯಾ ಕೌಚರ್‌ ವೀಕ್‌ನ ಎರಡನೇ ದಿನ ಬಾಲಿವುಡ್‌ ನಟಿ ಜಾಕ್ವೆಲೀನ್‌ ಫರ್ನಾಂಡಿಸ್‌ ಹೆಜ್ಜೆ ಹಾಕಿದರೇ, ಡಿಸೈನರ್‌ ಸುನೀತ್‌ ವರ್ಮಾ ಅವರ ಜಗಮಗಿಸುವ ಡಿಸೈನರ್‌ವೇರ್‌ಗಳು ಹೈಲೈಟಾದವು. ಈ ಕುರಿತಂತೆ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್.

VISTARANEWS.COM


on

FDCI & ICW 2024
ಚಿತ್ರಗಳು: ಇಂಡಿಯಾ ಕೌಚರ್‌ ವೀಕ್‌ನ 2 ನೇ ದಿನದ ಹೈಲೈಟ್ಸ್, ಚಿತ್ರಕೃಪೆ: FDCI official
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಂಡಿಯನ್ ಕೌಚರ್‌ ವೀಕ್‌ನ (FDCI & ICW 2024) ಮೊದಲನೇ ದಿನಕ್ಕೆ ಹೊಲಿಸಿದಲ್ಲಿ, ಎರಡನೇ ದಿನದ ಫ್ಯಾಷನ್‌ ಶೋ, ಮತ್ತಷ್ಟು ಜಗಮಗಿಸಿತ್ತು! ಅತ್ಯಾಕರ್ಷಕ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ರ‍್ಯಾಂಪ್‌ ಮೇಲೆ ನಡೆದು ಬರುತ್ತಿದ್ದಲ್ಲಿ, ಸ್ವರ್ಗ ಲೋಕವೇ ಭೂಮಿಗೆ ಇಳಿದು ಬಂದಂತೆ ಭಾಸವಾಗುತ್ತಿತ್ತು. ಈ ಮಧ್ಯೆ, ಡಿಸೈನರ್‌ ಇಶಾ ಅವರ ಡಿಸೈನರ್‌ವೇರ್‌ನಲ್ಲಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕಿದ ನಟಿ ಜಾಕ್ವೆಲೀನ್‌ ಮನಮೋಹಕವಾಗಿ ಕಂಡರು.ಅಂದಹಾಗೆ, ಈಗಾಗಲೇ ಎಫ್‌ಡಿಸಿಐ ಸಹಯೋಗದಲ್ಲಿ, ಆರಂಭಗೊಂಡಿರುವ ಇಂಡಿಯಾ ಕೌಚರ್‌ ವೀಕ್‌ನ ಎರಡನೇ ದಿನದ ಹೈಲೈಟ್‌ಗಳಿವು.

ರ‍್ಯಾಂಪ್‌ ಮೇಲೆ ಡಿಸೈನರ್‌ ಸುನೀತ್‌ ವರ್ಮಾ ಡಾನ್ಸ್

ಇಂಡಿಯಾ ಕೌಚರ್‌ ವೀಕ್‌ನ ಎರಡನೇ ದಿನ ನಡೆದ ಅತ್ಯಾಕರ್ಷಕ ರ‍್ಯಾಂಪ್‌ ಶೋನಲ್ಲಿ, ಡಿಸೈನರ್‌ ಸುನೀತ್‌ ವರ್ಮಾ ಡಿಸೈನರ್‌ವೇರ್ಸ್‌ಗಳು ಹೈಲೈಟಾದವು. ಎಲ್ಲದಕ್ಕಿಂತ ಹೆಚ್ಚಾಗಿ ಡಿಸೈನರ್‌ವೇರ್‌ಗಳೆಲ್ಲವೂ ಜಗಮಗಿಸುತ್ತಿದ್ದವು.
ಇವರು ಡಿಸೈನ್‌ ಮಾಡಿದ್ದ ಶಿಮ್ಮರ್‌ನಿಂದ ಡಿಸೈನ್‌ಗೊಂಡ ವಾಟರ್‌ಫಾಲ್‌ ಸ್ಲೀವ್ಸ್ ಹೊಂದಿದ 2 ಪೀಸ್‌ ಇಂಡೋ ವೆಸ್ಟರ್ನ್‌ ಡಿಸೈನರ್‌ವೇರ್‌ಗಳು ಎಲ್ಲರ ಮನಗೆದ್ದವು. ಮಾಡೆಲ್‌ಗಳು ಧರಿಸಿದ್ದ, ಶೀರ್‌ ಸಾಫ್ಟ್ ಫ್ಯಾಬ್ರಿಕ್‌ನ ಡಿಸೈನ್‌ಗೊಂಡ ಸೀರೆಯಿಂದಿಡಿದು ಇಂಡೋ-ವೆಸ್ಟರ್ನ್‌ ಲೆಹೆಂಗಾಗಳು ಕೂಡ ಸಿಕ್ವೀನ್ಸ್ ಡಿಸೈನ್‌ನಿಂದ ಮಿರಮಿರ ಮಿನುಗುತ್ತಿದ್ದವು. ಕೊನೆಯಲ್ಲಿ, ಮಾಡೆಲ್‌ಗಳೊಂದಿಗೆ ಡಿಸೈನರ್‌ ಸುನೀತ್‌ ವರ್ಮಾ, ಡಾನ್ಸ್ ಮಾಡುತ್ತಾ ವಾಕ್ ಮಾಡಿದ್ದು, ಎಲ್ಲರ ಉತ್ಸಾಹ ಹೆಚ್ಚಿಸಿತ್ತು.

ಬ್ಲ್ಯಾಕ್‌ ಮೆರ್ಮೈಡ್‌ ಗೌನ್‌ನಲ್ಲಿ ಜಾಕ್ವೆಲೀನ್‌ ವಾಕ್‌

ರೋಸ್‌ರೂಮ್‌ ಬ್ರಾಂಡ್‌ನ ಇಶಾ ಅವರ ಸಿಕ್ವೀನ್ಸ್ ಕೇಪ್‌ ವಾಟರ್‌ ಫಾಲ್‌ ಸ್ಲೀವ್‌ಹೊಂದಿದ ಬ್ಲ್ಯಾಕ್‌ ಮೆರ್ಮೈಡ್‌ ಗೌನ್‌ನಲ್ಲಿ ಬಾಲಿವುಡ್‌ ನಟಿ ಜಾಕ್ವೇಲಿನ್‌ ರ‍್ಯಾಂಪ್‌ ವಾಕ್‌ ಮಾಡಿದ್ದು, ಫ್ಯಾಷನ್‌ ಪ್ರಿಯರಿಗೆ ಪ್ರಿಯವಾಯಿತು.

ಇದನ್ನೂ ಓದಿ: Jennifer Lopez: ಮನೀಶ್‌ ಮಲ್ಹೋತ್ರಾ ಗೌನ್‌ ನಲ್ಲಿ ಬರ್ತ್‌ ಡೇ ಪಾರ್ಟಿ ಸೆಲೆಬ್ರೇಟ್‌ ಮಾಡಿದ ಹಾಲಿವುಡ್‌ ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌!

ರಿದ್ದಿಮಾ ರ‍್ಯಾಂಪ್‌ ವಾಕ್‌

ರಣವೀರ್‌ ಕಪೂರ್‌ ಸಹೋದರಿ ರಿದ್ದಿಮಾ ಕೂಡ ಇಶಾ ಜಜೊಡಿಯಾ ಅವರ ವೆಡ್ಡಿಂಗ್‌ ಸೀಸನ್‌ ಟ್ರೆಂಡ್‌ನಲ್ಲಿರುವ ಐವರಿ ಲೆಹೆಂಗಾದಲ್ಲಿ ಕಾಣಿಸಿಕೊಂಡು ಶೋ ಆರಂಭಿಸಿದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Jennifer Lopez: ಮನೀಶ್‌ ಮಲ್ಹೋತ್ರಾ ಗೌನ್‌ನಲ್ಲಿ ಬರ್ತ್‌ ಡೇ ಪಾರ್ಟಿ ಸೆಲೆಬ್ರೇಟ್‌ ಮಾಡಿದ ಹಾಲಿವುಡ್‌ ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌!

Jennifer Lopez: ಹಾಲಿವುಡ್‌ ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌ ಯಾರಿಗೆ ಗೊತ್ತಿಲ್ಲ? ಅವರ 55ನೇ ಥೀಮ್‌ ಬರ್ತ್‌ ಡೇ ಪಾರ್ಟಿಯಲ್ಲಿ ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಅವರ ಕಸ್ಟಮೈಸ್ಡ್ ಗೌನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದಲ್ಲಿ, ಈ ಗೌನ್‌ ವಿಶೇಷತೆಯೇನು? ಹೇಗೆಲ್ಲಾ ಡಿಸೈನ್‌ ಮಾಡಲಾಗಿದೆ ಎಂಬುದರ ಬಗ್ಗೆ ಡಿಸೈನರ್‌ವಿವರಿಸಿರುವ ಸಾರಾಂಶ ಇಲ್ಲಿದೆ.

VISTARANEWS.COM


on

Jennifer Lopez
ಚಿತ್ರಗಳು: ಸೆಲೆಬ್ರೆಟಿ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಗೌನ್‌ನಲ್ಲಿ ಜೆನ್ನಿಫರ್‌ ಲೋಪೆಜ್‌.
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ನ ಹೆಸರಾಂತ ಸೆಲೆಬ್ರೆಟಿ ಡಿಸೈನರ್‌ (Jennifer Lopez) ಮನೀಶ್ ಮಲ್ಹೋತ್ರಾ ಅವರ ಡಿಸೈನರ್‌ ಗೌನ್‌ ಇದೀಗ ಹೆಸರಾಂತ ಹಾಲಿವುಡ್‌ ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌ ಅವರನ್ನು ಸಿಂಗರಿಸಿದೆ. ಹೌದು, ಪಾಪ್‌ ಸ್ಟಾರ್‌ ಜೆನ್ನಿಫರ್‌ ಲೋಪೆಜ್‌ ಯಾರಿಗೆ ಗೊತ್ತಿಲ್ಲ! ಜಗತ್ತಿನಾದ್ಯಂತ ತಮ್ಮದೇ ಆದ ಪಾಪ್‌ ಮ್ಯೂಸಿಕ್‌ ಮೂಲಕ ಹಾಲಿವುಡ್‌ನಲ್ಲಿ ಹೆಸರು ಮಾಡಿರುವ ಜೆನ್ನಿಫರ್‌ ಅವರು, ಇತ್ತೀಚೆಗೆ ತಮ್ಮ 55 ನೇ ಬರ್ತ್‌ ಡೇ ಸೆಲೆಬ್ರೇಟ್‌ ಮಾಡಿಕೊಂಡರು. ಈ ಬರ್ತ್‌ ಡೇಯು ಬ್ರಿಡ್ಜ್‌ ಸ್ಟೋನ್‌ ಹೆಸರಿನ ಪಾರ್ಟಿ ಥೀಮ್‌ಗೆ ಹೊಂದುವಂತೆ ಆಚರಿಸಲಾಯಿತು. ಈ ಸೆಲೆಬ್ರೇಷನ್‌ಗೆ ಜೆನ್ನಿಫರ್‌, ಭಾರತೀಯ ಮೂಲದ ಅಂದರೆ, ಬಾಲಿವುಡ್‌ನ ಡಿಸೈನರ್‌ ಮನೀಶ್‌ ಮಲ್ಹೋತ್ರಾ ಅವರ ಕೈಗಳಲ್ಲಿ ವಿನ್ಯಾಸಗೊಂಡ ಕಸ್ಟಮೈಸ್ಡ್ ಗೌನನ್ನು ಧರಿಸಿದ್ದರು. ಇದು, ಇಡೀ ಫ್ಯಾಷನ್‌ ಜಗತ್ತೇ ಒಮ್ಮೆ, ಜೆನ್ನಿಫರ್‌ ಗೌನ್‌ನತ್ತ ತಿರುಗುವಂತೆ ಮಾಡಿದೆ.

Jennifer Lopez

ಜೆನ್ನಿಫರ್‌ ಲೋಪೆಜ್‌ ಗೌನ್‌ ವಿಶೇಷತೆ

ಅಂದಹಾಗೆ, ಜೆನ್ನಿಫರ್‌ ಅವರ ಗೌನ್‌ ಕಂಪ್ಲೀಟ್‌ ವಿಶೇಷತೆಗಳಿಂದಲೇ ಕೂಡಿದೆ ಎನ್ನುತ್ತಾರೆ ಡಿಸೈನರ್‌ ಮನೀಶ್‌ ಮಲ್ಹೋತ್ರಾ. ಅವರು ಹೇಳುವಂತೆ, ಈ ಐಕಾನಿಕ್‌ ಗೌನ್‌ನನ್ನು, ಸುಮಾರು 40 ಆರ್ಟಿಸ್ಟ್‌ಗಳು ಸಿದ್ಧಪಡಿಸುವಲ್ಲಿ ನೆರವಾಗಿದ್ದಾರೆ. ಇದಕ್ಕಾಗಿ ಸರಿ ಸುಮಾರು 3,490 ಗಂಟೆಗಳ ಕಾಲ ಕೇವಲ ಡಿಸೈನ್‌ಗೆ ಹಿಡಿದಿದೆ. ಈ ಗೌನ್‌ ಕಾರ್ಸೆಟ್‌ ಹಾಗೂ ವಿಕ್ಟೋರಿಯನ್‌ ಸ್ಕರ್ಟ್‌ನಿಂದ ಸ್ಪೂರ್ತಿಗೊಂಡು ಸಿದ್ಧಪಡಿಸಿಲಾಗಿದೆ.

ವಿಂಟೇಜ್‌ ಲುಕ್‌ ಜೊತೆಗೆ ಕಂಟೆಂಪರರಿ ಡಿಸೈನ್‌

ವಿಂಟೇಜ್‌ ಲುಕ್‌ ನೀಡುವ ಗೌನ್‌ನ ಫ್ಯಾಬ್ರಿಕ್‌ ಬ್ರೋಕೆಡ್‌ನದ್ದಾಗಿದ್ದು, ಒಡಲ ತುಂಬೆಲ್ಲಾ ಫ್ಲೋರಲ್‌ ಮೊಟಿಫ್‌ಗಳನ್ನು ಹ್ಯಾಂಡ್‌ ವರ್ಕ್‌ನಿಂದ ಮಾಡಲಾಗಿದೆ. ಕ್ರಿಸ್ಟಲ್ಸ್‌ ಅನ್ನು ಬಳಸಿ ಸಿಕ್ವಿನ್ಸ್‌ನಂತೆ ಡಿಸೈನ್‌ ಮಾಡಲಾಗಿದೆ. ಹೂವಿನ ದಳಗಳು ಹಾಗೂ ಹಾಫ್‌ ರಿಂಗ್‌ನಂಹ ಸಿಕ್ವಿನ್ಸ್ ಚಿತ್ತಾರಗಳನ್ನು ಎಲ್ಲೆಡೆ ಮೂಡಿಸಿ, ವಿಕ್ಟೋರಿಯನ್‌ ಡಿಸೈನ್‌ಜೊತೆಗೆ ಮೆಳೈಸಲಾಗಿದೆ. ವಿಶೇಷವೆಂದರೇ, ಇದು ಇಂಡಿಯನ್‌ ಕ್ರಾಪ್ಟ್ಸ್‌ಮೆನ್‌ಗಳಿಂದ ಸಿದ್ಧಗೊಂಡ, ದೇಸಿ ಡಿಸೈನ್‌ ಆಗಿದ್ದು, ಜೆನಿಫರ್‌ ಅವರ ಮನೋಭಿಲಾಷೆಗೆ ತಕ್ಕಂತೆ ವೆಸ್ಟರ್ನ್‌ ಟಚ್‌ ನೀಡಲಾಗಿದೆ. ಇನ್ನು, ಕಂಟೆಂಪರರಿ ಲುಕ್‌ಗಾಗಿ ಈ ಗೌನ್‌ನ ಮಧ್ಯ ಭಾಗದಲ್ಲಿ ಮಂಡಿಯವರೆಗೂ ಸ್ಲಿಟ್‌ ನೀಡಲಾಗಿದೆ. ಬ್ರಿಡ್ಜ್‌ ಸ್ಟೋನ್‌ ಪಾರ್ಟಿ ಥೀಮ್‌ಗೆ ತಕ್ಕಂತೆ ಜೆನ್ನಿಫರ್‌ ಅವರ ಈ ಗೌನ್‌ನ ಸ್ಟೈಲಿಂಗ್‌ ಕೂಡ ಮ್ಯಾಚ್‌ ಮಾಡಲಾಗಿದ್ದು ಖ್ಯಾತ ಸ್ಟೈಲಿಸ್ಟ್‌ಗಳಾದ ರೊಬ್‌ ಜೆಂಗಾರ್ಡಿ ಹಾಗೂ ಮೆರಿಯಲ್‌ ಹೆನ್‌ ಅವರ ಸ್ಟೈಲಿಂಗ್‌ನಲ್ಲಿ ಜೆನ್ನಿಫರ್‌ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ, ಭಾರತೀಯ ಮೂಲದ ಡಿಸೈನರ್‌ಗಳು ಇದೀಗ ಹಾಲಿವುಡ್‌ ಸ್ಟಾರ್‌ಗಳಿಗೂ ಡಿಸೈನ್‌ ಮಾಡುತ್ತಿರುವುದು, ಫ್ಯಾಷನ್‌ ಲೋಕದಲ್ಲಿ ಹೆಮ್ಮೆಯ ವಿಷಯ ಎಂದರೇ, ಅತಿಶಯೋಕ್ತಿಯಾಗದು!

ಇದನ್ನೂ ಓದಿ: Monsoon Fashion: ಮಾನ್ಸೂನ್‌ ಸೀಸನ್‌ಗೆ ರ‍್ಯಾಪರ್‌ ಇಶಾನಿಯ ಫ್ಯಾಷನ್‌ ಟಿಪ್ಸ್‌ ಹೀಗಿದೆ!

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Viral Video
Latest4 seconds ago

Viral Video: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

Kabini Dam
ಕರ್ನಾಟಕ3 mins ago

Kabini Dam: ಕಬಿನಿ ಡ್ಯಾಂಗೆ ಬಾಗಿನ ಅರ್ಪಿಸಿದ ಸಿಎಂ; ರಾಜ್ಯದ ಜಲಾಶಯಗಳು ತುಂಬಿದ್ದಕ್ಕೆ ಸಂತಸ

Paris Olympics 2024
ಪ್ರಮುಖ ಸುದ್ದಿ42 mins ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ ಹೋದ ಇಸ್ರೇಲ್ ಅಥ್ಲೀಟ್​ಗಳಿಗೆ ಜೀವ ಬೆದರಿಕೆ!

Viral News
ದೇಶ51 mins ago

Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Kannada New Movie Audio rights of Niveditha Shivarajkumar produced movie sold for huge amount
ಸ್ಯಾಂಡಲ್ ವುಡ್53 mins ago

Kannada New Movie: ಭಾರಿ ಮೊತ್ತಕ್ಕೆ ಮಾರಾಟವಾಯ್ತು ನಿವೇದಿತಾ ಶಿವರಾಜ್ ಕುಮಾರ್ ನಿರ್ಮಾಣದ ಸಿನಿಮಾ ಆಡಿಯೊ ಹಕ್ಕು

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ55 mins ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

KRS Dam
ಪ್ರಮುಖ ಸುದ್ದಿ55 mins ago

KRS Dam: ಸಂಪ್ರದಾಯಕ್ಕೆ ಎಳ್ಳು ನೀರು; ಕಾವೇರಿಗೆ ಬಾಗಿನ ಕಾರ್ಯಕ್ರಮದಲ್ಲಿ ಬಾಡೂಟ!

Rajya Sabha
ರಾಜಕೀಯ1 hour ago

Rajya Sabha: ಸತ್ನಾಮ್‌ ಸಿಂಗ್‌ ಸಂಧು ಬಿಜೆಪಿ ಸೇರ್ಪಡೆ; ರಾಜ್ಯಸಭೆಯಲ್ಲಿ ಕೇಸರಿ ಪಕ್ಷದ ಬಲ 87ಕ್ಕೆ ಏರಿಕೆ

Paris Olympics 2024
ಪ್ರಮುಖ ಸುದ್ದಿ1 hour ago

Paris Olympics 2024 : ಕ್ರಿಕೆಟ್ ಕೆಲಸದಿಂದ ನಿರಾಳ; ಒಲಿಂಪಿಕ್ಸ್​​ವೀಕ್ಷಿಸಲು ತೆರಳಿದ ರಾಹುಲ್ ದ್ರಾವಿಡ್​

‌Actor Darshan
ಕರ್ನಾಟಕ1 hour ago

‌Actor Darshan: ನಟ ದರ್ಶನ್‌ಗೆ ಸದ್ಯಕ್ಕಿಲ್ಲ ಮನೆಯೂಟದ ಭಾಗ್ಯ; ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ವಾಪಸ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ55 mins ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ4 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ24 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

ಟ್ರೆಂಡಿಂಗ್‌