IPL 2023: ಟಾಸ್​ ಸೋತ ಆರ್​ಸಿಬಿಯಿಂದ ಮೊದಲು ಬ್ಯಾಟಿಂಗ್​ - Vistara News

ಕ್ರಿಕೆಟ್

IPL 2023: ಟಾಸ್​ ಸೋತ ಆರ್​ಸಿಬಿಯಿಂದ ಮೊದಲು ಬ್ಯಾಟಿಂಗ್​

ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್​ ವಾರ್ನರ್​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

VISTARANEWS.COM


on

Royal Challengers Bangalore vs Delhi Capitals
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: 16ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2023) ಗೆಲುವೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದೆ. ಆರ್​ಸಿಬಿ ಬ್ಯಾಟಿಂಗ್​ ಆಹ್ವಾನ ಪಡೆದಿದೆ. ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುವ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದ್ದಾಗಿದೆ. ಡೆಲ್ಲಿ ಇದುವರೆಗೂ ಖಾತೆ ತೆರೆದಿಲ್ಲ. ಆರ್​ಸಿಬಿ ಸೋತರೆ ಹ್ಯಾಟ್ರಿಕ್​ ಸೋಲಿಗೆ ತುತ್ತಾಗಲಿದೆ. ಆರ್​ಸಿಬಿ ಪರ ವನಿಂದು ಹಸರಂಗ ಈ ಪಂದ್ಯದಲ್ಲಿ ಅವಕಾಶ ಪಡೆದರು.

ಪಿಚ್​ ರಿಪೋರ್ಟ್​

ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್​ ಬ್ಯಾಟಿಂಗ್​ಗೆ ಹೇಳಿ ಮಾಡಿಸಿದಂತೆ. ಇದು​ ಸಂಪೂರ್ಣ ಬ್ಯಾಟಿಂಗ್​​ ಸ್ನೇಹಿ ಪಿಚ್​ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ಇಲ್ಲಿ ಬೌಂಡರಿ ಗೆರೆ ಕೂಡ ಅಂತ್ಯಂತ ಸಮೀಪವಿರುವ ಕಾರಣ ಬ್ಯಾಟರ್​ಗಳು ಯಾವುದೇ ಒತ್ತಡವಿಲ್ಲದೆ ಬ್ಯಾಟ್​ ಬೀಸಬಹುದಾಗಿದೆ. ಆದರೆ ಬೌಲರ್​ಗಳು ಮಾತ್ರ ಶಕ್ತಿ ಮೀರಿ ಪ್ರಯತ್ನ ತೋರಬೇಕಿದೆ. ಎಷ್ಟೇ ದೊಡ್ಡ ಮೊತ್ತವನ್ನು ಬಾರಿಸಿದರೂ ಇಲ್ಲಿ ಚೇಸ್​ ಮಾಡಿ ಗೆಲುವು ಸಾಧಿಸಬಹುದು. ಇದಕ್ಕೆ ಕಳೆದ ಲಕ್ನೋ ವಿರುದ್ಧದ ಪಂದ್ಯವೇ ಸಾಕ್ಷಿ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ಇದುವರೆ ಐಪಿಎಲ್​ನಲ್ಲಿ 27 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ 16 ಪಂದ್ಯಗಳನ್ನು ಗೆದ್ದರೆ, ಡೆಲ್ಲಿ 10 ಪಂದ್ಯಗಳಲ್ಲಿ ಗೆದ್ದಿದೆ. ಒಂದು ಪಂದ್ಯ ಫಲಿತಾಂಶ ಕಾಣದೆ ಕೊನೆಗೊಂಡಿದೆ. ಕಳೆದ ಎರಡು ವರ್ಷಗಳಲ್ಲಿ ಡೆಲ್ಲಿ ವಿರುದ್ಧ ಆರ್​ಸಿಬಿ ಆಡಿದ ಒಂದೂ ಪಂದ್ಯವನ್ನು ಸೋಲು ಕಂಡಿಲ್ಲ. ಹೀಗಾಗಿ ಈ ಪಂದ್ಯದ ಮೇಲು ಆರ್​ಸಿಬಿ ಮೇಲೆ ನಿರೀಕ್ಷೆಯೊಂದನ್ನು ಮಾಡಬಹುದು.

ಇದನ್ನೂ ಓದಿ IPL 2023: ಟಾಸ್​ ಸೋತ ಆರ್​ಸಿಬಿಯಿಂದ ಮೊದಲು ಬ್ಯಾಟಿಂಗ್​

ಸಂಭಾವ್ಯ ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ರಿಲೀ ರೊಸೊ, ರೋವ್ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಅನ್ರಿಚ್​ ನೋರ್ಜೆ, ಖಲೀಲ್ ಅಹ್ಮದ್, ಕುಲ್ದೀ​ಪ್ ಯಾದವ್, ಮುಖೇಶ್ ಕುಮಾರ್.

ಆರ್​ಸಿಬಿ: ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಸುಯೇಶ್ ಪ್ರಭುದೇಸಾಯಿ, ಶಹಬಾಜ್ ಅಹ್ಮದ್, ವನಿಂದು ಹಸರಂಗ / ಮೈಕಲ್ ಬ್ರೆಸ್‌ವೆಲ್, ಡೇವಿಡ್ ವಿಲ್ಲಿ, ಕರ್ಣ್ ಶರ್ಮಾ, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

RCB vs CSK: ಚೆನ್ನೈ-ಆರ್​ಸಿಬಿ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿ ಏನು?

RCB vs CSK: ಗುರುವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶುಕ್ರವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬೀಳಲಿದೆ.

VISTARANEWS.COM


on

RCB vs CSK
Koo

ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟು ಸ್ವತಃ ಅಭಿಮಾನಿಗಳಿಂದಲೇ ಟ್ರೋಲ್​ ಆಗಿದ್ದ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು(RCB vs CSK) ತಂಡ ಆ ಬಳಿಕದ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಯಾರೂ ಕೂಡ ಊಹಿಸದಂತೆ ಪ್ಲೇ ಆಪ್​ ರೇಸ್​ಗೆ ಬಂದು ನಿಂತಿದೆ. ತನ್ನ ಅಂತಿಮ ಲೀಗ್​ ಪಂದ್ಯವನ್ನು ನಾಳೆ(ಶುಕ್ರವಾರ) ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಗೆದ್ದರೆ ಪ್ಲೇ ಆಫ್​(RCB’s playoff hopes) ಟಿಕೆಟ್​​ ಅಧಿಕೃತಗೊಳ್ಳಲಿದೆ. ಆದರೆ, ಆರ್​ಸಿಬಿ ಪಾಲಿಗೆ ಮಳೆ ವಿಲನ್ ಆಗುವ ಎಲ್ಲ ಸಾಧ್ಯತೆ ಅಧಿಕವಾಗಿ ಗೋಚರಿಸಿದೆ.

​ಭಾರೀ ಮಳೆ ಎಚ್ಚರಿಕೆ


ಹವಾಮಾನ ಇಲಾಖೆ ಶುಕ್ರವಾರ ಶೇ.89 ರಷ್ಟು ಮಳೆ(Rain forecast for Bengaluru) ಇದೆ ಎಂದು, ಒಂದು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಗುರುವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶುಕ್ರವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ಪ್ಲೇ ಆಫ್​ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್​ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್​, ಸನ್​ರೈಸರ್ಸ್​ ಹೈದರಾಬಾದ್​ ಮತ್ತು ರಾಜಸ್ಥಾನ್​ ಪ್ಲೇ ಆಫ್​ ತಲುಪಿದೆ. ಒಂದು ಸ್ಥಾನ ನಾಳೆ ನಿರ್ಧಾರವಾಗಲಿದೆ.

ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್​ಗಳ ಪಂದ್ಯವನ್ನು ನಿರೀಕ್ಷಿಸಬಹುದು.

ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್​​ಲ್ಲಿದ್ದ ಆರ್​ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.

Continue Reading

ಕ್ರೀಡೆ

MS Dhoni : ಆರ್​​ಸಿಬಿ ವಿರುದ್ಧ ಬೌಲಿಂಗ್ ಮಾಡಲು ಅಭ್ಯಾಸ ನಡೆಸಿದ ಎಂ ಎಸ್​ ಧೋನಿ

MS Dhoni : ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

VISTARANEWS.COM


on

MS Dhoni
Koo

ಬೆಂಗಳೂರು: ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದ ಮೇಲೆ ಎಂಎಸ್ ಧೋನಿ (MS Dhoni) ಸಂಪೂರ್ಣ ಗಮನ ಹರಿಸಿದ್ದಾರೆ. ಸ್ಟಾರ್ ವಿಕೆಟ್ ಕೀಪರ್ ನೆಟ್ ಸೆಷನ್ ಸಮಯದಲ್ಲಿ ತಮ್ಮ ವಿಕೆಟ್​ಕೀಪಿಂಗ್​ ಗ್ಲೌಸ್ ಗಳೊಂದಿಗೆ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಏತನ್ಮಧ್ಯೆ ಅವರು ಸ್ವಲ್ಪ ಬೌಲಿಂಗ್ ಕೂಡ ಮಾಡುತ್ತಿದ್ದಾರೆ. ಧೋನಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂದಿಗೂ ಬೌಲಿಂಗ್ ಮಾಡಿಲ್ಲ. ಆದರೆ ಆರ್​ಸಿಬಿ ವಿರುದ್ಧ ಬೌಲಿಂಗ್ ಮಾಡಬಲ್ಲರು ಎಂದು ಹೇಳಲಾಗುತ್ತಿದೆ!

ಧೋನಿ ಕಡಿಮೆ ವೇಗದ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ನೆಟ್ಸ್​ನಲ್ಲಿ ತಮ್ಮ ಕೈಚಳಕ ತೋರಿದ್ದಾರೆ. ಐಪಿಎಲ್ 2023 ರ ಸಮಯದಲ್ಲಿಯೂ ಧೋನಿ ಸಿಎಸ್​ಕೆ ಬ್ಯಾಟರ್​ಗಳಿಗೆ ನೆಟ್ಸ್​ನಲ್ಲಿ ಬೌಲಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಸಿಎಸ್​ಕೆ ಸ್ಟಾರ್ ಬೌಲಿಂಗ್​ನ ಇತ್ತೀಚಿನ ವೀಡಿಯೊ ಈಗಾಗಲೇ ವೈರಲ್ ಆಗಿದೆ.

ನೆಟ್ಸ್​ನಲ್ಲಿ ತಾವು ಎದುರಿಸಿದ ಕಠಿಣ ಬೌಲರ್ ಧೋನಿ ಎಂದು ರೈನಾ ಒಮ್ಮೆ ಹೇಳಿದ್ದರು. ಅಭ್ಯಾಸದ ವೇಲೆ ಧೋನಿ ಎಸೆತಕ್ಕೆ ಔಟಾದರೆ ಅವರು ನಿಮ್ಮನ್ನು ಪದೇ ಪದೇ ಕಾಡುತ್ತಾರೆ. ಹೇಗೆ ಔಟ್ ಮಾಡಿದೆ ಎಂಬುದನ್ನು ನೆನಪಿಸುತ್ತಾರೆ ಎಂದು ಸಿಎಸ್​ಕೆ ಮಾಜಿ ಬ್ಯಾಟ್ಸ್ಮನ್ ಹೇಳಿದ್ದರು.

“ನಾನು ಎದುರಿಸಿದ ಕಠಿಣ ಬೌಲರ್​​ ಮುರಳೀಧರನ್ ಮತ್ತು ಮಾಲಿಂಗ ಎಂದು ಭಾವಿಸುತ್ತೇನೆ. ಆದರೆ ನೆಟ್ಸ್​ನಲ್ಲಿ ಅದು ಎಂಎಸ್ ಧೋನಿ. ಅವರಯ ನಿಮ್ಮನ್ನು ಔಟ್ ಮಾಡಿದರೆ ನೀವು ಒಂದೂವರೆ ತಿಂಗಳವರೆಗೆ ಅವರ ಬಳಿಗೆ ಹೋಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರು ಔಟಾದ ರೀತಿಯನ್ನು ಸನ್ನೆ ಮಾಡುತ್ತಲೇ ಇರುತ್ತಾರೆ. ಅವರು ನಿಮ್ಮನ್ನು ಹೇಗೆ ಔಟ್ ಮಾಡಿದನೆಂದು ನೆನಪಿಸುತ್ತಾರೆ . ಅವರು ಆಫ್-ಸ್ಪಿನ್, ಮಧ್ಯಮ ವೇಗ, ಲೆಗ್ ಸ್ಪಿನ್, ಎಲ್ಲವನ್ನೂ ಬೌಲಿಂಗ್ ಮಾಡುತ್ತಿದ್ದರು. ನೆಟ್ಸ್​ಬಲ್ಲಿ ಅವರು ತಮ್ಮ ಮುಂಭಾಗದ ಪಾದದ ನೋ-ಬಾಲ್​ಗಳನ್ನು ಸಹ ಸಮರ್ಥಿಸುತ್ತಿದ್ದರು. ಟೆಸ್ಟ್ ನೆಟ್ಸ್​ನಲ್ಲಿ ಅವರು ಬೌಲಿಂಗ್ ಚೆನ್ನಾಗಿ ಮಾಡುತ್ತಿದ್ದರು. ಇಂಗ್ಲೆಂಡ್​​ನಲ್ಲಿ ಅವರು ಅದನ್ನು ವೇಗದಲ್ಲಿ ಸ್ವಿಂಗ್ ಮಾಡುತ್ತಿದ್ದರು, “ಎಂದು ರೈನಾ ಹೇಳಿದ್ದರು.

ಇದನ್ನೂ ಓದಿ: MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

ಧೋನಿ ಗುರುವಾರ ನೆಟ್ಸ್​ನಲ್ಲಿ ಬೌಲಿಂಗ್ ಮಾಡಿದ್ದರೂ, ಶನಿವಾರದ ಪಂದ್ಯದ ಸಮಯದಲ್ಲಿ ಸಿಎಸ್ಕೆ ಸ್ಟಾರ್ ಅದೇ ರೀತಿ ಮಾಡುವುದಿಲ್ಲ ಎಂದು ಅಭಿಮಾನಿಗಳು ಸಂಪೂರ್ಣವಾಗಿ ನಿರೀಕ್ಷಿಸಬಹುದು. ಧೋನಿ ಈ ಋತುವಿನಲ್ಲಿ ಕೆಲವು ಗಾಯದ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಚೆನ್ನೈನ ಮಾಜಿ ನಾಯಕ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ತಡವಾಗಿ ಬರಲು ಇದು ಕಾರಣವಾಗಿದೆ.

ಧೋನಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದಾರೆ. 50 ಓವರ್​ಗಳ ಸ್ವರೂಪದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಧೋನಿ ಆರ್​ಸಿಬಿ ಶಿಬಿರದೊಂದಿಗೆ ಸ್ವಲ್ಪ ಮೋಜಿನ ಸಮಯವನ್ನು ಕಳೆಯುತ್ತಿದ್ದರು. ಅವರೊಂದಿಗೆ ಚಹಾ ಕೂಡ ಸೇವಿಸಿದ್ದರು.

Continue Reading

ಪ್ರಮುಖ ಸುದ್ದಿ

MS Dhoni : ಆರ್​ಸಿಬಿಯವರು ಕೊಟ್ಟ ಬೆಂಗಳೂರಿನ ಸ್ಪೆಷಲ್​ ಚಹಾ ಕುಡಿದ ಧೋನಿ; ಇಲ್ಲಿದೆ ವಿಡಿಯೊ

MS Dhoni: ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್​ಸಿಬಿಯ ಡ್ರೆಸ್ಸಿಂಗ್ ರೂಮ್​ನಲ್ಲಿ ಏಕಾಏಕಿ ಕಾಣಿಸಿಕೊಂಡರು.

VISTARANEWS.COM


on

MS Dhoni
Koo

ಬೆಂಗಳೂರು : ಆರ್​ಸಿಬಿ ಮತ್ತು ಚೆನ್ನೈ ನಡುವಿನ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗ ಆರ್​ಸಿಬಿ ಆಟಗಾರರು ಹಾಗೂ ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್​​ಲ್ಲಿದ್ದ ಆರ್​ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.

ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿವೆ. ಆರ್​ಸಿಬಿ ಫ್ರಾಂಚೈಸಿಯ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ನಲ್ಲಿ ವಿಷಯವನ್ನು ಹೇಳಲಾಗಿದೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸದ ಸಮಯದಲ್ಲಿ 42 ವರ್ಷದ ಧೋನಿ ಆರ್​ಸಿಬಿಯ ಡ್ರೆಸ್ಸಿಂಗ್ ರೂಮ್​ನಲ್ಲಿ ಏಕಾಏಕಿ ಕಾಣಿಸಿಕೊಂಡರು.

ಧೋನಿ ಸಿಎಸ್​ಕೆ ತರಬೇತಿ ಕಿಟ್ ಧರಿಸಿ ಡ್ರೆಸ್ಸಿಂಗ್ ರೂಮ್​ನಿಂದ ಹೊರನಡೆದಿರುವ ವಿಡಿಯೊ ಬಹಿರಂಗಗೊಂಡಿದೆ. ಫ್ರಾಂಚೈಸಿ ಈ ಪೋಸ್ಟ್​ಗೆ “ವೆಲ್ಕಮ್ ಟು ಬೆಂಗಳೂರು ಮಹಿ” ಎಂದು ಶೀರ್ಷಿಕೆ ನೀಡಲಾಗಿದೆ.

ಇದನ್ನೂ ಓದಿ: IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

ಕಳೆದ ವರ್ಷ ಸಂದರ್ಶನವೊಂದರಲ್ಲಿ ಎಂಎಸ್ ಧೋನಿ ತಮ್ಮನ್ನು ಅನುಭವಿ ಎಂದು ಕರೆದುಕೊಂಡಿದ್ದರು. ಚಹಾವು ಅದರ ಸರಳತೆಯ ಪ್ರತಿಕೆ ಎಂದರು. ಎಲ್ಲಾದರೂ ಅಭ್ಯಾಸಕ್ಕೆ ಹೋದಾಗ ಮತ್ತು ಯಾರಾದರೂ ಅವರಿಗೆ ಚಹಾ ನೀಡಿದರೆ ಅವರು ಯಾವಾಗಲೂ ಸಂತೋಷ ಪಡುತ್ತೇನೆ ಎಂದು ಹೇಳಿದ್ದರು. ಬೆಂಗಳೂರು ಫ್ರಾಂಚೈಸಿ ವಿರುದ್ಧ 35 ಪಂದ್ಯಗಳಲ್ಲಿ 140.77 ಸ್ಟ್ರೈಕ್​​​ರೇಟ್​​ನಲ್ಲಿ 839 ರನ್ ಗಳಿಸಿದ್ದಾರೆ.

ಆರ್ಸಿಬಿ-ಸಿಎಸ್ಕೆ ಪಂದ್ಯದ ವೇಳೆ ಮಳೆ ಭೀತಿ?

ಬೆಂಗಳೂರಿನಲ್ಲಿ ಶನಿವಾರ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ತಜ್ಞರ ಭವಿಷ್ಯವಾಣಿಗಳು ಬೆಂಗಳೂರು ಮೂಲದ ಫ್ರಾಂಚೈಸಿಯ ಅಭಿಮಾನಿಗಳಿಗೆ ಕೆಟ್ಟ ಸುದ್ದಿಯಾಗಿದೆ. ಆದಾಗ್ಯೂ, ಎರಡೂ ತಂಡಗಳು, ವಿಶೇಷವಾಗಿ ಆರ್​​ಸಿಬಿ ಮುಖಾಮುಖಿಯ ದಿನದಂದು ಮಳೆಗಾಲದ ಹವಾಮಾನ ಊಹಿಸುವುದಿಲ್ಲ.

Continue Reading

ಪ್ರಮುಖ ಸುದ್ದಿ

IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್​, ಆರ್​ಆರ್​ ಬಳಿಕ ಪ್ಲೇಆಫ್​ಗೇರಿದ ಎಸ್​ಆರ್​ಎಚ್​​

VISTARANEWS.COM


on

IPL 2024
Koo

ಹೈದರಾಬಾದ್​​: ಇಲ್ಲಿ ಗುರುವಾರ ನಿಗದಿಯಾಗಿದ್ದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ (Sunrisers Hyderabad) ತಂಡ ಬೆವರು ಸುರಿಸದೇ 2024ನೇ ಆವೃತ್ತಿಯ (IPL 2024) ಐಪಿಎಲ್​ನ ಪ್ಲೇಆಫ್​​ಗೆ ಪ್ರವೇಶಿಸಿತು. ಕೋಲ್ಕತಾ ಮತ್ತು ರಾಜಸ್ಥಾನದ ನಂತರ ಐಪಿಎಲ್ 2024 ರ ಪ್ಲೇಆಫ್​​ಗೆ ಅರ್ಹತೆ ಪಡೆದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಎಸ್​ಆರ್​ಎಚ್​ ಪಾತ್ರವಾಯಿತು. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ (ಮೇ 16) ಗುಜರಾತ್ ವಿರುದ್ಧ ಸೆಣಸಬೇಕಾಗಿತ್ತು. ಆದರೆ ಪಂದ್ಯ ಟಾಸ್​ ಕೂಡ ಕಾಣದೆ ಮಳೆಯಿಂದಾಗಿ ರದ್ದಾಯಿತು. ಹೀಗಾಗಿ 2016ರ ಚಾಂಪಿಯನ್ಸ್ ತಂಡ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಿಕೊಂಡಿತು.

2020ರ ಬಳಿಕ ಇದೇ ಮೊದಲ ಬಾರಿಗೆ ಸನ್ರೈಸರ್ಸ್ ಪ್ಲೇ ಆಫ್ ಹಂತ ತಲುಪಿದೆ. ಮಾಜಿ ಚಾಂಪಿಯನ್​ಗಳು ​2021, 2022 ಮತ್ತು 2023 ರಲ್ಲಿ ಕ್ರಮವಾಗಿ 8, 8 ಮತ್ತು 10 ನೇ ಸ್ಥಾನಗಳನ್ನು ಪಡೆದುಕೊಂಡಿದ್ದರು. ವಿಶ್ವ ಟೆಸ್ಟ್ ಚಾಂಪಿಯನ್​ ​ಷಿಪ್​​ ಮತ್ತು ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿರುವ ನಾಯಕ ಪ್ಯಾಟ್ ಕಮಿನ್ಸ್, ಐಪಿಎಲ್ 2024 ರಲ್ಲಿ ನಿರ್ಭೀತ ಬ್ರಾಂಡ್ ಕ್ರಿಕೆಟ್ ಆಡುತ್ತಿದ್ದಾರೆ.

ಪಂದ್ಯಕ್ಕೆ ಮುಂಚಿತವಾಗಿ ನಿರಂತರವಾಗಿ ಮಳೆ ಸುರಿಯಿತು. 10 ಗಂಟೆ ದಾಟಿದರೂ ಪಿಚ್​ನಿಂದ ಟಾರ್ಪಾಲ್​ ತೆಗೆಯಲು ಸಾಧ್ಯವಾಗಲಿಲ್ಲ. ನಾಯಕರಾದ ಪ್ಯಾಟ್ ಕಮಿನ್ಸ್ ಮತ್ತು ಶುಬ್ಮನ್ ಗಿಲ್ ಪಿಚ್ ಅನ್ನು ಅನೇಕ ಬಾರಿ ಪರಿಶೀಲನೆ ನಡೆಸಿದರು. ಆದರೆ ಅವರು ತಮ್ಮ ತರಬೇತಿ ಕಿಟ್​​ ಧರಿಸಿದರೇ ಹೊರತು ಮ್ಯಾಚ್​ ಕಿಟ್​ ಧರಿಸಲಿಲ್ಲ. . ಮಳೆಯ ಹೊರತಾಗಿಯೂ, ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ತವರು ತಂಡವನ್ನು ಹುರಿದುಂಬಿಸಲು ದೊಡ್ಡ ಪ್ರಮಾಣದ ಪ್ರೇಕ್ಷಕರು ಇದ್ದರು. ಎಸ್ಆರ್​ಎಚ್​ ಪ್ಲೇಆಫ್​ ಪ್ರವೇಶಿಸುತ್ತಿದ್ದಂತೆ ಅಭಿಮಾನಿಗಳಿಗಾಗಿ ಲಘು ಪ್ರದರ್ಶನ ಮತ್ತು ಸಂಗೀತ ಆಯೋಜಿಸಲಾಗಿತ್ತು.

ಇದನ್ನೂ ಓದಿ: IPL 2024 : ವಾಂಖೆಡೆ ಸ್ಟೇಡಿಯಮ್​ನಲ್ಲಿ ಗುದ್ದಾಡಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರರು; ಇಲ್ಲಿದೆ ವಿಡಿಯೊ

ಹೈದರಾಬಾದ್​​ನ ನಡೆದ ಪಂದ್ಯದಲ್ಲಿ ಒಂದು ಅಂಕ ಗಳಿಸುವ ಮೂಲಕ ಸನ್​ರೈಸರ್ಸ್​ ಹೈದರಾಬಾದ್​​ 13 ಪಂದ್ಯಗಳಿಂದ 15 ಅಂಕಗಳನ್ನು ಗಳಿಸಿದೆ. ಮೇ 19ರಂದು ಪಂಜಾಬ್ ವಿರುದ್ಧ ತವರಿನಲ್ಲಿ ಸೆಣಸಲಿರುವ ಪ್ಯಾಟ್ ಕಮಿನ್ಸ್ ಪಡೆಗೆ ಅಗ್ರ ಎರಡು ಸ್ಥಾನಗಳನ್ನು ಗಳಿಸುವ ಅವಕಾಶವಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ 1ರಲ್ಲಿ ಆಡುವ ಅವಕಾಶ ಸಿಗಲಿದೆ. . ಎಸ್​ಆರ್​​ಎಚ್​​ ಅರ್ಹತೆಯು ದೆಹಲಿ ಮತ್ತು ಲಕ್ನೋದ ಪ್ಲೇಆಫ್ ಭರವಸೆಗಳನ್ನು ಕೊನೆಗೊಳಿಸಿತು. ಶನಿವಾರ ಬೆಂಗಳೂರಿನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ನಡುವಿನ ಬಹುನಿರೀಕ್ಷಿತ ಪಂದ್ಯದ ಕಿಚ್ಚನ್ನು ಹೆಚ್ಚಿಸಿತು.

ಗುಜರಾತ್ ಗೆ ನಿರಾಶಾದಾಯಕ ಅಭಿಯಾನ

ಮಳೆಯಿಂದಾಗಿ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಿದ ನಂತರ ಗುಜರಾತ್ ತನ್ನ ಋತುವನ್ನು ಕೊನೆಯ ನಾಲ್ಕರಲ್ಲಿ ಕೊನೆಗೊಳಿಸಬೇಕಾಯಿತು. ಅಹ್ಮದಾಬಾದ್​ನಲ್ಲಿ ಕೆಕೆಆರ್ ವಿರುದ್ಧ ಜಿಟಿಯ ಕೊನೆಯ ತವರು ಪಂದ್ಯವೂ ಕೆಟ್ಟ ಹವಾಮಾನದಿಂದಾಗಿ ರದ್ದಾಗಿತ್ತು. 2022 ರಲ್ಲಿ ಪ್ರಶಸ್ತಿ ಗೆದ್ದ ಮತ್ತು 2022 ರಲ್ಲಿ ರನ್ನರ್ ಅಪ್ ಸ್ಥಾನ ಪಡೆದ ಗುಜರಾತ್​ಗೆ ಇದು ನಿರಾಶಾದಾಯಕ ಅಭಿಯಾನ. ಏಕೆಂದರೆ ಹೊಸ ನಾಯಕ ಶುಭ್ಮನ್ ಗಿಲ್ ಅವರ ಅಡಿಯಲ್ಲಿ ತಂಡವು ಪ್ರತಿಭೆಯ ಕಿಡಿಗಳನ್ನು ಹೊಂದಿದ್ದರೂ ಉತ್ತಮ ಪ್ರದರ್ಶನ ನೀಡಲು ವಿಫಲಗೊಂಡಿತು.

ಸನ್ರೈಸರ್ಸ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಎರಡನೇ ಸ್ಥಾನಕ್ಕೆ ಅರ್ಹತೆ ಪಡೆಯುವ ನಿರೀಕ್ಷೆಯಲ್ಲಿದೆ. ನಾಲ್ಕು ಪಂದ್ಯಗಳ ಸೋಲಿನ ಹಾದಿಯಲ್ಲಿರುವ ರಾಜಸ್ಥಾನ್ ಭಾನುವಾರ ಗುವಾಹಟಿಯಲ್ಲಿ ಕೆಕೆಆರ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಕಳೆದುಕೊಳ್ಳಲಿ ಎಂದು ಅವರು ಪ್ರಾರ್ಥಿಸಬೇಕಾಗಿದೆ. ರಾಜಸ್ಥಾನ್ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆದ್ದರೆ, ಆ ತಂಡ ಎರಡನೇ ಸ್ಥಾನ ಪಡೆಯುತ್ತದೆ.

Continue Reading
Advertisement
RCB vs CSK
ಕ್ರೀಡೆ44 seconds ago

RCB vs CSK: ಚೆನ್ನೈ-ಆರ್​ಸಿಬಿ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಎಚ್ಚರಿ ಏನು?

illegal hunting chikkamagaluru
ಕ್ರೈಂ12 mins ago

Illegal hunting: ಶಿಕಾರಿಗೆ ತೆರಳಿದ ಯುವಕನಿಗೆ ಗುಂಡು ತಗುಲಿ ಸಾವು, ಆಕಸ್ಮಿಕವೋ ಕೊಲೆಯೋ?

Cannes 2024 Aishwarya Rai turns lady in black in Falguni
ಸಿನಿಮಾ18 mins ago

Cannes 2024: ಬ್ಯಾಂಡೇಜ್​ ಸುತ್ತಿಕೊಂಡೇ ರೆಡ್​ ಕಾರ್ಪೆಟ್ ಮೇಲೆ ಪೋಸ್‌ ಕೊಟ್ಟ ​ಐಶ್ವರ್ಯಾ ರೈ!

These foods are really what our body needs in summer
ಆರೋಗ್ಯ41 mins ago

Health Tips in Kannada: ಬೇಸಿಗೆಯಲ್ಲಿ ನಿಜಕ್ಕೂ ನಮ್ಮ ದೇಹಕ್ಕೆ ಬೇಕಾಗಿರುವುದು ಈ ಆಹಾರಗಳು

Lok Sabha Election 2024
ದೇಶ51 mins ago

Lok Sabha Election 2024: ಬಿಜೆಪಿಯ 400+ ಲೆಕ್ಕಾಚಾರ ಉಲ್ಟಾ? ಚುನಾವಣೆ ಹೊತ್ತಲ್ಲೇ ಪಕ್ಷಕ್ಕೆ ಬಿಗ್‌ ಶಾಕ್‌!

Medical Negligence
ದೇಶ53 mins ago

ವೈದ್ಯರ ಸಲಹೆಯಂತೆ 5 ದಿನದ ಹಸುಳೆಯನ್ನು ಬಿಸಿಲಿನಲ್ಲಿ ಮಲಗಿಸಿದರು; ಬೆಂದು ಕರಟಿಹೋಯ್ತು ಕಂದಮ್ಮನ ಜೀವ

anjali murder case girish
ಕ್ರೈಂ1 hour ago

Anjali Murder Case: ಅಂಜಲಿ ಹಂತಕನಿಗೆ ಸಾರ್ವಜನಿಕರಿಂದ ಗೂಸಾ, ಬಂಧನ

techie wife udr case
ಕ್ರೈಂ2 hours ago

UDR Case: ಟೆಕ್ಕಿ ಪತ್ನಿಯ ಅನುಮಾನಾಸ್ಪದ ಸಾವು

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 hours ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ19 hours ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು22 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ2 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ2 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ3 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20243 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20243 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌