Actress Simran Shares Photo With Late Sister Monal Actress Simran: ಸಹೋದರಿಯ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ ಸಿಮ್ರಾನ್‌ - Vistara News

South Cinema

Actress Simran: ಸಹೋದರಿಯ ನೆನೆದು ಭಾವುಕ ಪೋಸ್ಟ್‌ ಹಂಚಿಕೊಂಡ ನಟಿ ಸಿಮ್ರಾನ್‌

ಮೋನಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹೋದರಿಯನ್ನು ನೆನೆದು ನಟಿ ಸಿಮ್ರಾನ್ (Actress Simran) ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

VISTARANEWS.COM


on

Actress Simran Shares Photo With Late Sister Monal
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ನಟ ಶಿವರಾಜ್‌ಕುಮಾರ್‌ ಅಭಿನಯದ ‘ಇಂದ್ರ ಧನುಷ್‌’ ಚಿತ್ರದ ಮೂಲಕ ನಟಿ ಮೋನಲ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಮೋನಲ್‌ (Monal) ಅವರು ಬಹುಭಾಷಾ ನಟಿ ಸಿಮ್ರಾನ್ (Actress Simran) ಅವರ ಸಹೋದರಿ. ಇದೀಗ ಮೋನಲ್‌ ಅವರನ್ನು ನೆನೆದು ನಟಿ ಸಿಮ್ರಾನ್ ಭಾವುಕರಾಗಿದ್ದಾರೆ. ಮೋನಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಹೋದರಿಯನ್ನು ನೆನೆದು ನಟಿ ಸಿಮ್ರಾನ್ ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

ಸಿಮ್ರಾನ್ ಟ್ವೀಟ್

ಟ್ವೀಟ್‌ನಲ್ಲಿ ನಟಿ ಸಿಮ್ರಾನ್ ಸಹೋದರಿ ಜತೆಗಿನ ಫೋಟೊ ಹಂಚಿಕೊಂಡು “ನನ್ನ ಪ್ರೀತಿಯ ಸಹೋದರಿಯ ಪುಣ್ಯಸ್ಮರಣೆ. ನಿನ್ನನ್ನು ಎಂದಿಗೂ ಮರೆಯುವುದಿಲ್ಲ” ಎಂದು ಬರೆದುಕೊಂಡಿದ್ದಾರೆ. ನಟಿ ಸಿಮ್ರಾನ್ ಕನ್ನಡದ ‘ಸಿಂಹದ ಮರಿ’ ಚಿತ್ರದಲ್ಲೂ ನಟಿಸಿದ್ದರು. ತೆಲುಗು, ತಮಿಳಿನಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದರು.

ಪ್ರೀತಿಯ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡ್ರಾ ಮೋನಲ್‌?

ಸಹೋದರಿ ಮೋನಲ್‌ ತಮಿಳಿನ ಪ್ರಸನ್ನ ಸುಜಿತ್ ಎಂಬ ಕೊರಿಯೋಗ್ರಾಫರ್‌ ಜತೆ ಪ್ರೀತಿಯಲ್ಲಿ ಬಿದ್ದಿದ್ದರು. ಆತ ಮೋಸ ಮಾಡಿದ ಎಂದು ಮೋನಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿತ್ತು. ಮೋನಲ್ ಆತ್ಮಹತ್ಯೆ ಬಗ್ಗೆ ನಿಜವಾದ ಕಾರಣ ಇದುವರೆಗೆ ತಿಳಿದಿಲ್ಲ. 2002, ಏಪ್ರಿಲ್ 14ರಂದು ಚೆನ್ನೈನ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೋನಲ್ ದೇಹ ಪತ್ತೆ ಆಗಿತ್ತು.

ಇದನ್ನೂ ಓದಿ: Actor Prithiveeraj | 24 ವರ್ಷದ ಜಿಮ್‌ ಟ್ರೈನರ್‌ ಪ್ರೀತಿಯ ಬಲೆಯಲ್ಲಿ 56 ವರ್ಷದ ನಟ ಪೃಥ್ವಿರಾಜ್‌!

ಮೋನಲ್ ʻಬದ್ರಿʼ, ʻಲವ್ಲಿʼ, ʻಸಮುದಿರಂʼ, ʻಇಷ್ಟಂʼ, ʻಮಾ ತುಜೇ ಸಲಾಂʼ, ʻಚಾರ್ಲಿ ಚಾಪ್ಲಿನ್ʼ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಕೇವಲ 21 ವರ್ಷ ವಯಸ್ಸಿನಲ್ಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸಿಮ್ರಾನ್‌ ಅವರು ಬ್ರೇಕ್‌ ಬಳಿಕ ʻರಾಕೆಟ್ರಿ: ದಿ ನಂಬಿ ಎಫೆಕ್ಟ್ʼ ಸಿನಿಮಾ ಮೂಲಕ ಮತ್ತೆ ಬಣ್ಣ ಹಚ್ಚಿದ್ದರು. ಸದ್ಯ ಅವರ ಕೈಯಲ್ಲಿ ʻವಿಕ್ರಮ್‌ನ ಧ್ರುವ ನಚ್ಚತಿರಂʼ, ʻಆರ್ಯನ ಕ್ಯಾಪ್ಟನ್ʼ, ಮತ್ತು ʻಅರವಿಂದ್ ಸ್ವಾಮಿಯವರ ವನಂಗಮುಡಿʼ ಸೇರಿದಂತೆ ಹಲವಾರು ಚಲನಚಿತ್ರಗಳಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕಾಲಿವುಡ್

Actor Suriya: ಹೊಸ ಸಿನಿಮಾ ಶೂಟಿಂಗ್‌ ಶುರು ಮಾಡಿದ ನಟ ಸೂರ್ಯ!

Actor Suriya: ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ.

VISTARANEWS.COM


on

Actor Suriya visits temple ahead of Suriya 44
Koo

ಬೆಂಗಳೂರು: ನಟ ಸೂರ್ಯ (Actor Suriya) ಅವರು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅವರೊಂದಿಗೆ ಮುದಿನ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಮುಂದಿನ ಸಿನಿಮಾಗೆ ತಾತ್ಕಾಲಿಕವಾಗಿ ‘ಸೂರ್ಯ 44’ ಎಂದು ಶಿರ್ಷಿಕೆ ಇಡಲಾಗಿದೆ. ನಟ ಶೀಘ್ರದಲ್ಲೇ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ ಚಿತ್ರದ ಚಿತ್ರೀಕರಣಕ್ಕೆ ಸೆಟ್‌ ಸಿದ್ಧಪಡಿಸಿದೆ ಎನ್ನಲಾಗಿದೆ. ಸೂರ್ಯ ಇತ್ತೀಚೆಗಷ್ಟೆ ‘ಕಂಗುವ’ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಹೊಸ ಸಿನಿಮಾ ಪ್ರಾರಂಭ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಹ ಸೂರ್ಯ ಸಲ್ಲಿಸಿದ್ದಾರೆ.

ಇದೀಗ ನಟ ಸೂರ್ಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿರುವ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಸೂರ್ಯ ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧೋತಿ ಮತ್ತು ಬಿಳಿ ಅಂಗಿಯಲ್ಲಿ ಕಂಡಿದ್ದಾರೆ.
‘ಚಿತ್ರದಲ್ಲಿ ಉರಿಯಾಡಿ ವಿಜಯ್ ಕುಮಾರ್ ಪ್ರತಿಸ್ಪರ್ಧಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗಿದ್ದು, ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ. ನಟರಾದ ಜಯರಾಮ್ ಮತ್ತು ಜೋಜು ಜಾರ್ಜ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದ ತಾರಾಗಣದ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡ ಹಂಚಿಕೊಂಡಿಲ್ಲ.

ಈ ಸಿನಿಮಾವನ್ನು ತಮಿಳಿನ ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಲಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಾದ ‘ಜಿಗರ್​ಥಂಡಾ’, ರಜನೀಕಾಂತ್ ನಟನೆಯ ‘ಪೆಟ್ಟಾ’, ‘ಜಿಗರ್ ಥಂಡಾ ಡಬಲ್ ಎಕ್ಸ್’, ‘ಮಹಾನ್’ ಇನ್ನಿತರೆ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದಾರೆ.2022 ರಲ್ಲಿ ಬಿಡುಗಡೆ ಆದ ‘ಆಚಾರ್ಯ’ ಸಿನಿಮಾ ಬಳಿಕ ಪೂಜಾ ಹೆಗ್ಡೆ ಯಾವುದೇ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರಲಿಲ್ಲ. ಇದೀಗ ‘ಸೂರ್ಯ 44’ ಸಿನಿಮಾ ಮೂಲಕ ಪೂಜಾ ಕಮ್ ಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: Actor Suriya: ಹೊಸ ಸಿನಿಮಾ ಅನೌನ್ಸ್‌ ಮಾಡಿದ ಕಾಲಿವುಡ್‌ ನಟ ಸೂರ್ಯ: ಅಚ್ಚರಿಯಾಗಿದೆ ಪೋಸ್ಟರ್‌!

ಸದ್ಯ ಸೂರ್ಯ ಅವರು ಶಿವ ನಿರ್ದೇಶನದ ‘ಕಂಗುವ’ ಚಿತ್ರದ ಬಿಡುಗಡೆಗಾಗಿ ಸೂರ್ಯ ಕಾಯುತ್ತಿದ್ದಾರೆ. ತಮಿಳು ಚಿತ್ರರಂಗದ (Tamil Cinema) ಖ್ಯಾತ ನಟ ಸೂರ್ಯ (Actor Surya) ಅವರ ಬಹು ನಿರೀಕ್ಷಿತ `ಕಂಗುವ’ (Kanguva Film) ಚಿತ್ರದ ಟೀಸರ್ ಔಟ್‌ ಆಗಿತ್ತು. ಬಾಲಿವುಡ್​ ನಟ ಬಾಬಿ ಡಿಯೋಲ್​ ಕೂಡ ಹೊಸ ಅವತಾರ ತಾಳಿದ್ದರು. ಬಾಬಿ ಡಿಯೋಲ್ ಒಳಗೊಂಡಿರುವ ಬೃಹತ್ ಯುದ್ಧದ ದೃಶ್ಯವನ್ನು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಿಸಲಾಗಿತ್ತು. ನಟ ಸೂರ್ಯ (Actor Suriya) ಅವರು ಸಿರುತೈ ಶಿವ ನಿರ್ದೇಶನದ ಬಹು ನಿರೀಕ್ಷಿತ ಪ್ರಾಜೆಕ್ಟ್ ʻಕಂಗುವʼ ಚಿತ್ರವನ್ನು 38 ಭಾಷೆಗಳಲ್ಲಿ ಬಿಡುಗಡೆ ಮಾಡುವುದಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರದ ನಿರ್ಮಾಪಕ ಕೆ.ಇ.ಜ್ಞಾನವೇಲ್ ರಾಜಾ ಅವರು ಹೇಳಿದ್ದರು. ‘ಕಂಗುವ’ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಮಾಡುವ ಆಲೋಚನೆಯನ್ನು ನಿರ್ಮಾಪಕರು ಹಾಕಿಕೊಂಡಿದ್ದರು.

ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ನಟ ಐದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೆಂಕಟೇರ್, ಅರತಾರ್, ಮಂದಾಂಕರ್, ಮುಕಾತಾರ್ ಮತ್ತು ಪೆರುಮಾನಾಥರ್ ಎಂಬ ಐದು ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ದಿಶಾ ಪಟಾನಿ ಈ ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದರಲ್ಲಿ ಕೋವೈ ಸರಳಾ, ಯೋಗಿ ಬಾಬು, ಆನಂದ್ ರಾಜ್, ರೆಡಿನ್ ಕಿಂಗ್ಸ್ಲಿ, ರವಿ ರಾಘವೇಂದ್ರ ಮತ್ತು ಇತರರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

Continue Reading

ಸ್ಯಾಂಡಲ್ ವುಡ್

Kiccha Sudeep: ಸಂದೇಶ್‌ ಪ್ರೊಡಕ್ಷನ್ಸ್‌ ಜತೆ ಕೈ ಜೋಡಿಸಿದ ಕಿಚ್ಚ ಸುದೀಪ್

Kiccha Sudeep: ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು.

VISTARANEWS.COM


on

Kichcha Sudeep joined hands with Sandesh
Koo

ಬೆಂಗಳೂರು: ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಸಂದೇಶ್‌ (kiccha sudeep) ಪ್ರೊಡಕ್ಷನ್ಸ್‌ ಸಂಸ್ಥೆ, ಈಗಾಗಲೇ ಸದಭಿರುಚಿಯ ಚಿತ್ರಗಳ ಜತೆಗೆ ಬಿಗ್‌ ಬಜೆಟ್‌ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ “ಘೋಸ್ಟ್‌” ಚಿತ್ರವೂ ಅದರಲ್ಲೊಂದು. ಇದೀಗ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಸಂಸ್ಥೆ, ಮತ್ತೊಂದು ಬಿಗ್‌ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಸಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್‌. ಸಂದೇಶ್‌.

ಸಂದೇಶ್‌ ನಾಗರಾಜ್‌ ಅರ್ಪಿಸುವ ಸಂದೇಶ್‌ ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಎನ್‌ ಸಂದೇಶ್‌ ನಿರ್ಮಾಣದಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಮೂಡಿಬರುವುದು ಅಧಿಕೃತವಾಗಿದೆ. ಇತ್ತೀಚೆಗಷ್ಟೇ ಕಿಚ್ಚ ಸುದೀಪ್‌ ಅವರ ಜತೆಗೆ ಸಂದೇಶ್‌ ನಾಗರಾಜ್ ಮತ್ತು ಎನ್ ಸಂದೇಶ್‌ ಅವರು ಒಟ್ಟಿಗೆ ಇರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ನಾಯಕರಾಗಿ ನಟಿಸುತ್ತಿರುವ ಚಿತ್ರ ಶುರುವಾಗಲಿದೆ ಎಂದೇ ಹೇಳಲಾಗಿತ್ತು. ಇದೀಗ ಆ ಊಹೆ ನಿಜವಾಗಿದೆ. ಸಂದೇಶ್‌ ಪ್ರೊಡಕ್ಷನ್ಸ್‌ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಕಿಚ್ಚ ಸುದೀಪ್‌ ಸಿನಿಮಾ ಸೆಟ್ಟೇರಲಿದೆ.

ಇದನ್ನೂ ಓದಿ: Kiccha Sudeep: ಚಾಮುಂಡಿ ಬೆಟ್ಟಕ್ಕೆ ಕಿಚ್ಚ ಸುದೀಪ್ ಭೇಟಿ; ಇವರನ್ನು ನೋಡಲು ಜನವೋ ಜನ!

ಹಾಗಾದರೆ ಯಾವಾಗ ಶುರು?

ಸದ್ಯಕ್ಕೆ ಕಿಚ್ಚ ಸುದೀಪ್‌ ಸಂದೇಶ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ. ಈ ಸಿನಿಮಾ ಯಾವಾಗ ಶುರು, ನಿರ್ದೇಶಕರು ಯಾರು ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಮಾಪಕರು ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೇ ಸಂದೇಶ್‌ ಪ್ರೊಡಕ್ಷನ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ. ಸೃಜನ್‌ ಲೋಕೇಶ್‌ ಜತೆಗಿನ ಜಿಎಸ್‌ಟಿ ಚಿತ್ರದ ಶೂಟಿಂಗ್‌ ಕೆಲಸಗಳೂ ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಇದರ ಜತೆಗೆ “ಘೋಸ್ಟ್‌ 2” ಅಥವಾ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ”, “ಬೀರಬಲ್ 2” ಸಿನಿಮಾಗಳೂ ಸೆಟ್ಟೇರಲಿವೆ.

Continue Reading

ಸ್ಯಾಂಡಲ್ ವುಡ್

Actor Jaggesh: ಬಾಲ್ಯದಲ್ಲಿ ನನ್ನನ್ನು ಕರಿಯ ಎಂದು ಗೇಲಿ ಮಾಡುತ್ತಿದ್ದರು, ಆದರೆ ನಾನು…; ಜಗ್ಗೇಶ್‌ ಮನದ ಮಾತು

Actor Jaggesh: ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್‌ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.

VISTARANEWS.COM


on

Actor Jaggesh talk about body shame
Koo

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ (Actor Jaggesh) ಅವರು ಸೋಷಿಯಲ್‌ ಮೀಡಿಯಾ ಮೂಲಕ ಆಗಾಗ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ಈ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

ಜಗ್ಗೇಶ್‌ ಪೋಸ್ಟ್‌ನಲ್ಲಿ ʻʻನನ್ನನ್ನು ಕಪ್ಪು ಎಂದು ಅಣಕ ಮಾಡುತ್ತಿದ್ದರು ಬಾಲ್ಯದಲ್ಲಿ ಎಲ್ಲರು..!!
ಆಗ ನನಗೆ ಬಹಳ ಸಿಟ್ಟು ಬರುತ್ತಿತ್ತು. ನಾನು ಯವ್ವನದಲ್ಲಿ ಬೆಳ್ಳಗಾಗಲು ಅನೇಕ ಕೆಟ್ಟ ಪ್ರಯತ್ನ ಮಾಡಿದ್ದುಂಟು!
ನಟನಾದ ಮೇಲೆ ನನ್ನ ಮ್ಯಾಕ್ಸ್‌ ಫ್ಯಾಕ್ಟರ್‌ (max factor) ಮೇಕಪ್‌, ಅಂಬರೀಶ್‌ ಅವರ, ರಜನಿಯವರ, ವಿಜಯಕಾಂತ್, ಶಿವಣ್ಣ ಕೂಡ ಬಳಸುತ್ತಿದ್ದರು. ನಾನು ಬಳಸುತ್ತಿದ್ದ ಪ್ಯಾನ್‌ ಕೇಕ್‌ ಇಂದು ವಿಶ್ವದಲ್ಲಿ ಮರೆಯಾದ ಪ್ಯಾನ್‌ ಕೇಕ್‌ . ಆದರೆ ನನ್ನ ಅದೃಷ್ಟ ಅದು ನನ್ನ ಬಳಿ ಇನ್ನೂ 50 ಸಿನಿಮಾಗೆ ಸಾಕಾಗುತ್ತದೆ ಅಪ್ಟಿದೆ. ಅನೇಕರು ಕೇಳಿದರು ಈ ಪ್ಯಾನ್‌ ಕೇಕ್‌ ಕೊಡಿ ಎಂದು (pancake). ನಾನು ನೀಡುವುದಿಲ್ಲಾ ಎಂದೆ. ಕಾರಣ ಅದರ ಮೇಲಿನ ವಿಪರೀತ ಪ್ರೀತಿ ಹಾಗೂ ಭಕ್ತಿ. ಅದು ಹಚ್ಚಿದರೆ ನನ್ನ ಕಪ್ಪು ಅಂದವರು ಮೌನವಾಗುತ್ತಾರೆ. ಇದನ್ನು ಬಳಸುವಾಗ ಅಯ್ಯೋ ನಾನು ನಿಜವಾಗಲು ಈ ಬಣ್ಣ ಹೊಂದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸುತ್ತದೆ. ಆದರೆ ನನ್ನ ಮೊಮ್ಮಗ ಅರ್ಜುನ ಯಾವ pancake ಬಳಸದಂತೆ ಬಣ್ಣ ಹಚ್ಚಿಕೊಂಡೇ ಬಂದಿದ್ದಾನೆ. ಭೂಮಿಗೆ ಇಷ್ಟು ಹೇಳಲು ಕಾರಣ ಇಂದು ಇವನು 9ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಅಂದರೆ ಅವನ ಹುಟ್ಟುಹಬ್ಬ. ಹುಟ್ಟು ಹಬ್ಬದ ಶುಭಾಶಯಗಳು ಕಂದ. ದೇವರು ಒಳ್ಳೆಯದು ಮಾಡಲಿʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Jaggesh: ರಂಗ ನಾಯಕ, ʻಕಿತ್ತೋದ್‌ ನನ್ಮಗʼ ಮಾತಿಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ ಜಗ್ಗೇಶ್‌!

ಬಾಡಿ ಶೇಮಿಂಗ್ ಬಗ್ಗೆ ಜಗ್ಗೇಶ್‌ ಅವರು ಈ ಮೂಲಕ ಹೇಳಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಕಪ್ಪು ಮೈಬಣ್ಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಕೆಲವೊಮ್ಮೆ ಅದನ್ನೇ ತಮಾಷೆಯಾಗಿ ಹೇಳಿಕೊಂಡು ನಕ್ಕಿದ್ದಾರೆ, ನಗಿಸಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರ ಹಿರಿಯ ಪುತ್ರ ಗುರುರಾಜ್ ಅವರ ಮಗ ಅರ್ಜುನ್. ಮೊಮ್ಮಗ ಎಂದರೆ ಜಗ್ಗೇಶ್ ಅವರಿಗೆ ಬಹಳ ಪ್ರೀತಿ.

ʻಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್‌ ಅವರು ಮುದ್ದಿನ ಶ್ವಾನ ಅರ್ಜುನನನ್ನು ನೆನೆದು ಭಾವುಕರಾಗಿದ್ದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಜಗ್ಗೇಶ್ ಅವರು ʻಅರ್ಜುನʼ ಎಂಬ ಹೆಸರಿನ ಸಾಕು ನಾಯಿಯ ಜತೆ ಇರುವ ಫೋಟೊವನ್ನು ತೋರಿಸಿದಾಗ, ʻಇವನ ಹೆಸರನ್ನೇ ನಾನು ನನ್ನ ಮೊಮ್ಮಗನಿಗೆ ಇಟ್ಟಿದ್ದೇನೆ. ಕಾರಣವೇನೆಂದರೆ, ಲ್ಯಾಬ್ರೇಡರ್ ನಾಯಿ ಜಾಸ್ತಿ ದಿನ ಬದುಕುವುದಿಲ್ಲ. ಆದರೆ ಅವನು ಹದಿನಾಲ್ಕುವರೆ ವರ್ಷ ನಮ್ಮ ಜತೆ ಬದುಕಿದ್ದʼ ಎಂದಿದ್ದರು. ಸಿನಿಮಾಗಳ ವಿಚಾರಕ್ಕೆ ಬಂದರೆ ಕೊನೆಯದಾಗಿ ಜಗ್ಗೇಶ್ ನಟಿಸಿದ ‘ರಂಗನಾಯಕ’ ಸಿನಿಮಾ ತೆರೆಗೆ ಬಂದಿತ್ತು. ಆದರೆ ಚಿತ್ರ ಗೆಲ್ಲಲಿಲ್ಲ.

Continue Reading

ಟಾಲಿವುಡ್

Nandamuri Balakrishna: ನಟಿ ಅಂಜಲಿಯ ಹಿಂಭಾಗ ಟಚ್ ಮಾಡಿದ್ರಾ ಬಾಲಯ್ಯ?

Nandamuri Balakrishna: ನಟಿ ಅಂಜಲಿಯನ್ನು (Actress Anjali ) ವೇದಿಕೆಯಲ್ಲಿಯೇ ತಳ್ಳಿದ್ದರು ಬಾಲಯ್ಯ. ನಟಿ ಅಂಜಲಿ “ನಾವಿಬ್ಬರು ಗ್ರೇಟ್ ಫ್ರೆಂಡ್ಸ್” ಎಂದು ಹೇಳಿ ಆ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. . ಆದರೆ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವೀಡಿಯೊ ವೈರಲ್ ಆಗಿ ಮತ್ತೆ ಬಾಲಯ್ಯ ಟ್ರೋಲ್ ಆಗುವಂತಾಗಿದೆ.

VISTARANEWS.COM


on

Nandamuri Balakrishna touch actress anjali back
Koo

ಬೆಂಗಳೂರು: ತೆಲುಗು ಸೂಪರ್‌ಸ್ಟಾರ್ ನಂದಮೂರಿ ಬಾಲಕೃಷ್ಣ (Nandamuri Balakrishna) ಇತ್ತೀಚೆಗೆ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ಗೋದಾವರಿ’ (Gangs of Godavari) ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟಿ ಅಂಜಲಿಯನ್ನು (Actress Anjali ) ವೇದಿಕೆಯಲ್ಲಿಯೇ ತಳ್ಳಿದ್ದರು. ಈ ವಿಡಿಯೊ ಭಾರಿ ವೈರಲ್‌ ಆಗಿ, ಸಖತ್‌ ಟ್ರೋಲ್‌ ಆಗಿದ್ದರು ಬಾಲಯ್ಯ. ನಟಿ ಅಂಜಲಿ “ನಾವಿಬ್ಬರು ಗ್ರೇಟ್ ಫ್ರೆಂಡ್ಸ್” ಎಂದು ಹೇಳಿ ಆ ಚರ್ಚೆಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಿದ್ದರು. . ಆದರೆ ಇದೀಗ ಅದೇ ಕಾರ್ಯಕ್ರಮದ ಮತ್ತೊಂದು ವೀಡಿಯೊ ವೈರಲ್ ಆಗಿ ಮತ್ತೆ ಬಾಲಯ್ಯ ಟ್ರೋಲ್ ಆಗುವಂತಾಗಿದೆ. ವೇದಿಕೆಗೆ ಅಂಜಲಿ ಹೊರಟು ನಿಂತಾಗ ನಟ ಬಾಲಯ್ಯ ಆಕೆಯ ಹಿಂಬದಿಯನ್ನು ನಯವಾಗಿ ತಟ್ಟಿದ್ದಾರೆ ಎನ್ನಲಾಗಿದೆ.

ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ಬಾಲಕೃಷ್ಣ ಕುಳಿತಿದ್ದಾಗ ಅವರ ಕಾಲ ಬಳಿ ನೀರಿನ ಬಾಟಲ್‌ನಲ್ಲಿ ಮದ್ಯದ ರೀತಿಯ ಪಾನೀಯ ಇರುವುದು ಕಂಡುಬಂದಿತ್ತು. ಇದನ್ನು ನೋಡಿ ಅವರು ಕುಡಿದು ವೇದಿಕೆಯಲ್ಲಿ ಆ ರೀತಿ ನಡೆದುಕೊಂಡಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಆದರೆ ಅದೆಲ್ಲಾ ಗ್ರಾಫಿಕ್ಸ್ ಎಂದು ಕಾರ್ಯಕ್ರಮದ ಆಯೋಜಕರು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: Nandamuri Balakrishna: ವೇದಿಕೆ ಮೇಲೆ ತಳ್ಳಿದ್ದ ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

‘ಗ್ಯಾಂಗ್ಸ್ ಆಫ್ ಗೋದಾವರಿ’ ಯ ಪ್ರೀ-ರಿಲೀಸ್ ಸಮಾರಂಭದಲ್ಲಿ (Vishwak Sen and Neha Shetty) ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದರು. ನೇಹಾ ಶೆಟ್ಟಿ ಮೊದಲಾದವರು ವೇದಿಕೆ ಮೇಲೆ ನಿಂತಿದ್ದರು. ಬಾಲಯ್ಯ ಅವರು ಅಂಜಲಿಗೆ ಏನನ್ನೋ ಹೇಳುವ ಪ್ರಯುತ್ನ ಮಾಡಿದ್ದಾರೆ. ಆದರೆ, ಅವರಿಗೆ ಇದು ಕೇಳಿಲ್ಲ. ಇದರಿಂದ ಸಿಟ್ಟಾದ ಬಾಲಯ್ಯ ಅವರು ಅಂಜಲಿಯನ್ನು ತಳ್ಳಿದ್ದರು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿದ್ದವು.

ವೈರಲ್‌ ಆದ ವಿಡಿಯೊದಲ್ಲಿ ವೇದಿಕೆಯ ಮೇಲೆ ನೇಹಾ ಶೆಟ್ಟಿ ಮತ್ತು ಅಂಜಲಿ ಅಕ್ಕ ಪಕ್ಕ ನಿಂತಿದ್ದರು. ನೇಹಾ ಅವರಿಗೆ ನಯವಾಗಿ ಪಕ್ಕಕ್ಕೆ ಸರಿಯಲು ಕೇಳುತ್ತಾರೆ. ಕೆಲವು ಕ್ಷಣಗಳ ನಂತರ, ಬಾಲಯ್ಯ ಅವರು ಅಂಜಲಿಯನ್ನು ದೂರ ತಳ್ಳುತ್ತಾರೆ, ಬಹುತೇಕ ನಟಿ ಬಿದ್ದೇ ಬಿಡುವಂತಿದ್ದರು. ಆಗ ನೇಹಾ ಅವರು ಅಂಜಲಿ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಬಳಿಕ ನಟಿಯರು ತಮಾಷೆಯಾಗಿ ಬಾಲಯ್ಯ ನೋಡಿ ನಕ್ಕಿದ್ದರು.

ಕಾರ್ಯಕ್ರಮದ ಕ್ಲಿಪ್ ಅನ್ನು ಹಂಚಿಕೊಂಡಿರುವ ಅಂಜಲಿ ಹೀಗೆ ಬರೆದುಕೊಂಡಿದ್ದರು “ಗ್ಯಾಂಗ್ಸ್ ಆಫ್ ಗೋದಾವರಿ ಪ್ರೀ-ರಿಲೀಸ್ ಈವೆಂಟ್‌ವನ್ನು ತಮ್ಮ ಉಪಸ್ಥಿತಿಯೊಂದಿಗೆ ಅಲಂಕರಿಸಿದ್ದಕ್ಕಾಗಿ ನಾನು ಬಾಲಕೃಷ್ಣ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಬಾಲಕೃಷ್ಣ ಅವರು ಮತ್ತು ನಾನು ಯಾವಾಗಲೂ ಪರಸ್ಪರ ಗೌರವವನ್ನು ಉಳಿಸಿಕೊಂಡಿದ್ದೇವೆ. ಬಹಳ ಹಿಂದಿನಿಂದಲೂ ನಾವಿಬ್ಬರು ಪರಸ್ಪರ ಉತ್ತಮ ಸ್ನೇಹ, ಗೌರವವನ್ನು ಹಂಚಿಕೊಂಡಿದ್ದೇವೆ ಎಂದು ಹೇಳುವುದಕ್ಕೆ ನಾನು ಬಯಸುತ್ತೇನೆ. ಅವರ ಜತೆ ವೇದಿಕೆ ಹಂಚಿಕೊಂಡಿದ್ದು ಅದ್ಭುತವಾಗಿತ್ತುʼʼಎಂದು ಬರೆದುಕೊಂಡಿದ್ದರು.

Continue Reading
Advertisement
gold rate today
ಕರ್ನಾಟಕ8 mins ago

Gold Rate Today: ಬಂಗಾರ ಪ್ರಿಯರಿಗೆ ಶುಭ ಸುದ್ದಿ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Drowned in water
ಚಿಕ್ಕಬಳ್ಳಾಪುರ27 mins ago

Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

Virat Kohli
ಕ್ರೀಡೆ28 mins ago

Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Exit Poll 2024
ದೇಶ35 mins ago

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Karnataka Rain
ಮಳೆ56 mins ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Bhavani Revanna hide Not Present For SIT Questioning At Home
ಕರ್ನಾಟಕ59 mins ago

Bhavani Revanna: ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ; ಎಸ್ ಐ ಟಿಗೆ ಅರೆಸ್ಟ್ ಮಾಡಿ ಜೈಲಿಗಟ್ಟುವ ಹಠ!

IND vs PAK
ಕ್ರಿಕೆಟ್1 hour ago

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

Foeticide Case Foeticide another Case in Bagalkot
ಬಾಗಲಕೋಟೆ2 hours ago

Foeticide Case: ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ: ಗಾಢ ನಿದ್ರೆಯಲ್ಲಿದ್ದಾರಾ ಅಧಿಕಾರಿಗಳು?

Healthy Sandwich Spread
ಆರೋಗ್ಯ2 hours ago

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Taiwan Athletics Open
ಕ್ರೀಡೆ2 hours ago

Taiwan Athletics Open: ತೈವಾನ್‌ ಓಪನ್​ನಲ್ಲಿ ಚಿನ್ನ ಗೆದ್ದ ಕನ್ನಡಿಗ ಡಿ.ಪಿ. ಮನು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ56 mins ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು19 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌