Former MP and Raichur Congress district president B V Nayak joins BJP Karnataka Election 2023: ಬಿಜೆಪಿ ಸೇರಿದ ಮಾಜಿ ಸಂಸದ ಬಿ.ವಿ.ನಾಯಕ್, ಮಾನ್ವಿ ಟಿಕೆಟ್‌ ಫಿಕ್ಸ್?‌ - Vistara News

ಕರ್ನಾಟಕ

Karnataka Election 2023: ಬಿಜೆಪಿ ಸೇರಿದ ಮಾಜಿ ಸಂಸದ ಬಿ.ವಿ.ನಾಯಕ್, ಮಾನ್ವಿ ಟಿಕೆಟ್‌ ಫಿಕ್ಸ್?‌

Karnataka Election 2023: ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಬಿ.ವಿ. ನಾಯಕ್ ಅವರು ಕಮಲ ಪಾಳಯ ಸೇರಿದ್ದಾರೆ.

VISTARANEWS.COM


on

Former MP and Raichur Congress district president B V Nayak joins BJP
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಟಿಕೆಟ್‌ ಕೈತಪ್ಪಿದ ನಾಯಕರು ಪಕ್ಷಾಂತರಗೊಳ್ಳುತ್ತಿರುವುದು (Karntaka Election 2023) ಹೆಚ್ಚಾಗಿದೆ. ಈ ನಡುವೆ ರಾಯಚೂರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಮಾಜಿ ಸಂಸದ ಬಿ.ವಿ. ನಾಯಕ್ ಅವರು ಬಿಜೆಪಿ‌ ಸೇರ್ಪಡೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸಮ್ಮುಖದಲ್ಲಿ ಅವರು ಕಮಲ ಪಾಳಯ ಸೇರಿದ್ದಾರೆ. ಇವರು ಬಿಜೆಪಿ ಟಿಕೆಟ್‌ ಪಡೆದು ಮಾನ್ವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ ಬಿ.ವಿ.ನಾಯಕ್ ಬೇಡಿಕೆ ಇಟ್ಟಿದ್ದರು. ಕೊನೆ ಘಳಿಗೆಯಲ್ಲಿ‌ ಮಾನ್ವಿ ಟಿಕೆಟ್ ಮಿಸ್ ಆಗಿದ್ದರಿಂದ ಅಸಮಾಧಾನಗೊಂಡಿದ್ದರು. ಜತೆಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯಕ್ಕೆ ಬೇಸತ್ತು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಆದಾಗ್ಯೂ, ಬಿಜೆಪಿಯು ಶಿವಮೊಗ್ಗ ಹಾಗೂ ಮಾನ್ವಿ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಗಾಗಿ, ನಾಯಕ್‌ ಅವರಿಗೇ ಮಾನ್ವಿ ಟಿಕೆಟ್‌ ಸಿಗುವ ಸಾಧ್ಯತೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ | Karnataka Election 2023 : ಕಾಂಗ್ರೆಸ್‌ ನಾಲ್ಕನೇ ಪಟ್ಟಿ ಪ್ರಕಟ; ಸಿಎಂ ಬೊಮ್ಮಾಯಿ ವಿರುದ್ಧ ಮಹ್ಮದ್ ಯೂಸುಫ್ ಕಣಕ್ಕೆ

ಬಿಜೆಪಿ ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ ಮಹೇಂದ್ರ ನಾಯಕ

ವಿಜಯಪುರ:‌ ಜಿಲ್ಲೆಯ ನಾಗಠಾಣ ಮೀಸಲು ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಹೇಂದ್ರ ನಾಯಕ ಅವರು ಟಿಕೆಟ್ ತಪ್ಪಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಬಿಜೆಪಿ 3ನೇ ಪಟ್ಟಿಯಲ್ಲಿ ನಾಗಠಾಣ ಟಿಕೆಟ್ ಸಂಜೀವ್ ಐಹೊಳೆ ಪಾಲಾದ ಹಿನ್ನೆಲೆಯಲ್ಲಿ ಬೆಂಬಲಿಗರೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಭಾವುಕರಾಗಿದ್ದಾರೆ.

ವಿಜಯಪುರ ನಗರದ ರಾಣಿ ಚನ್ನಮ್ಮ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸಹಸ್ರಾರು ಬೆಂಬಲಿಗರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಮಾಜಿ ಪೊಲೀಸ್‌ ಅಧಿಕಾರಿಯೂ ಆದ ಮಹೇಂದ್ರ ನಾಯಕ, ನಾನು ನಂಬಿದ ಪಕ್ಷವೇ ನನಗೆ ಮೋಸ ಮಾಡಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಆಸ್ಪತ್ರೆ ಬೆಡ್‌ನಿಂದಲೇ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಪ್ರಚಾರ

Congress candidate Baburao Chinchansur campaigns from hospital Karnataka Election 2023 updates

ಯಾದಗಿರಿ: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ದಿನೇ ದಿನೆ ಕಾವು ಪಡೆದುಕೊಳ್ಳುತ್ತಿದೆ. ಆಯಾ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ, ಪ್ರಚಾರ ಕಾರ್ಯಗಳಲ್ಲಿ ಕಾರ್ಯನಿರತರಾಗಿದ್ದಾರೆ. ಸಭೆ, ಸಮಾರಂಭಗಳನ್ನು ಏರ್ಪಡಿಸುವುದು, ರೋಡ್‌ ಶೋ (Road Show) ಮಾಡುವುದು ಸೇರಿದಂತೆ ಭರ್ಜರಿ ಪ್ರಚಾರ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಇತ್ತ ಕಾರು ಅಪಘಾತದಲ್ಲಿ (Road Accident) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗುರುಮಠಕಲ್‌ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ (Baburao Chinchansur) ಅವರು ಆಸ್ಪತ್ರೆಯಿಂದಲೇ ಮತ ಯಾಚನೆ ಮಾಡಿದ್ದಾರೆ.

ಏಪ್ರಿಲ್ 16ರಂದು ರಸ್ತೆ ಅಪಘಾತದಲ್ಲಿ ಬಾಬುರಾವ್ ಚಿಂಚನಸೂರ್‌ಗೆ ಭಾರಿ ಪೆಟ್ಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಅಲ್ಪ ಮಟ್ಟಿಗೆ ಚೇತರಿಕೆ ಕಂಡಿರುವ ಚಿಂಚನಸೂರ್‌ ಅವರು ಆಸ್ಪತ್ರೆಯಲ್ಲಿಯೇ ವಿಡಿಯೊ (Video) ಮಾಡಿಸಿ, ಆ ಮೂಲಕ ಮತ ಪ್ರಚಾರ ಮಾಡಿದ್ದಾರೆ. ‌ ಆಸ್ಪತ್ರೆಯ ಬೇಡ್ ಮೇಲೆ ಕುಳಿತಿರುವ ಚಿಂಚನಸೂರ್‌ ಅವರು ವಿಡಿಯೊ ಮೂಲಕ ತಮಗೆ ಮತ ಹಾಕುವಂತೆ ಮನವಿ ಮಾಡಿದ್ದಾರೆ. ಮುಖದಲ್ಲಿ ಗಲ್ಲ ಹಾಗೂ ಕಣ್ಣಿನ ಪಕ್ಕ ಪೆಟ್ಟಾಗಿದ್ದು, ಬ್ಯಾಂಡೇಜ್‌ ಹಾಕಿರುವುದು ಕಾಣುತ್ತದೆ.

ವಿಡಿಯೊದಲ್ಲೇನಿದೆ?

ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ಮಟ್ಟದ ಉನ್ನತ ಸ್ಥಾನದಲ್ಲಿ ಬೆಳೆದಿದ್ದಾರೆ. ಇವತ್ತು ಇಡೀ ವಿಶ್ವವೇ ಅವರನ್ನು ತಿರುಗಿ ನೋಡುತ್ತಿದೆ. ಹಳ್ಳಿಯಿಂದ ದಿಲ್ಲಿವರೆಗೆ ಅವರು ಬೆಳವಣಿಗೆ ಸಾಧಿಸಿದ್ದಾರೆ. ಇಂದು ಅವರು ನನ್ನ ಮೇಲೆ ವಿಶ್ವಾಸವಿಟ್ಟು ಟಿಕೆಟ್ ನೀಡಿ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಸಮಸ್ತ ಕುಲ ಬಾಂಧವರಲ್ಲಿ ಕೈ ಮುಗಿದು ನಮಸ್ಕಾರ ಮಾಡುತ್ತೇನೆ. ಇವತ್ತು ಬಿದ್ದು ಹೋಗುವ ಶರೀರ, ಮಣ್ಣು ಪಾಲಾಗುವ ಶರೀರ ಇದು. ಹೀಗೆ ಸಾಯುವುದಕ್ಕಿಂದ ಬಡ ಜನರ ಸೇವೆ ಮಾಡಿ ಸಾಯಬೇಕು ಅಂತ ಬಂದಿದ್ದೀನಿ. ನನ್ನ ಆರೋಗ್ಯ ಚೆನ್ನಾಗಿದೆ. ಸಮಸ್ತ ಮತ ಬಾಂಧವರ ಆಶೀರ್ವಾದ ನನ್ನ ಮೇಲಿರಲಿ. ಮತದಾರರ ಪಾದ ಕಮಲಗಳಿಗೆ ಶಿರಸಾಷ್ಟಾಂಗ ನಮಸ್ಕಾರ ಎಂದು ಚಿಂಚನಸೂರ್‌ ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಚಿಂಚನಸೂರ್‌ ಅವರು ಅಪಘಾತ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರಿಂದ ಅವರ ಪರ ಪ್ರಚಾರ ಮಾಡಲು ಕುಟುಂಬಸ್ಥರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಅವರು ಆಸ್ಪತ್ರೆಯಲ್ಲಿರುವುದರಿಂದ ಈಗ ಕಾಂಗ್ರೆಸ್‌ಗೆ ಸಹ ಪ್ರಚಾರದ ಆತಂಕ ಎದುರಾಗಿದೆ. ಸೋಮವಾರ (ಏ. 17) ಬಾಬುರಾವ್‌ ಚಿಂಚನಸೂರ್‌ ಪರವಾಗಿ ಅವರ ಪತ್ನಿ ನಾಮಪತ್ರವನ್ನು ಸಲ್ಲಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

GT World Mall: ರೈತ ಫಕೀರಪ್ಪರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಜಿ.ಟಿ.ಮಾಲ್‌ ಮಾಲೀಕ

GT World Mall: ಜಿ.ಟಿ.ಮಾಲ್‌ ಮಾಲೀಕ ಎಸ್‌.ಟಿ.ಆನಂದ್‌ ಅವರು ರೈತ ಫಕೀರಪ್ಪ ಹಾಗೂ ಪುತ್ರ ನಾಗರಾಜ್‌ ಅವರನ್ನು ಶುಕ್ರವಾರ ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ಅಲ್ಲದೇ ಮಾಲ್‌ನಲ್ಲಿ ಸಿಬ್ಬಂದಿ ಮಾಡಿದ ತಪ್ಪಿಗೆ ಕ್ಷಮೆಯಾಚನೆ ಮಾಡಿದ್ದಾರೆ.

VISTARANEWS.COM


on

GT World Mall
Koo

ಬೆಂಗಳೂರು: ಹಾವೇರಿ ಮೂಲದ ರೈತ ಫಕೀರಪ್ಪ ಅವರು ಪಂಚೆ ಧರಿಸಿದ್ದ ಹಿನ್ನೆಲೆಯಲ್ಲಿ ಜಿ.ಟಿ.ಮಾಲ್‌ (GT World Mall) ಪ್ರವೇಶಕ್ಕೆ ನಿರಾಕರಿಸಿದ ಘಟನೆಗೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಆಡಳಿತ ಮಂಡಳಿ ಕ್ಷಮೆಯಾಚಿಸಿತ್ತು. ಬಳಿಕ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಅನ್ನು ಒಂದು ವಾರದ ಕಾಲ ಬಂದ್‌ ಮಾಡಿಸಿದ್ದಾರೆ. ಇದೀಗ ಮಾಲೀಕ ಎಸ್‌.ಟಿ.ಆನಂದ್‌ ಅವರು ರೈತ ಫಕೀರಪ್ಪ ಅವರನ್ನು ಮನೆಗೆ ಆಹ್ವಾನಿಸಿ ಸನ್ಮಾನ ಮಾಡಿದ್ದು, ಸಿಬ್ಬಂದಿಯಿಂದ ನಡೆದಿದ್ದ ಅಚಾತುರ್ಯಕ್ಕೆ ಕ್ಷಮೆಯಾಚಿಸಿದ್ದಾರೆ.

ಜಿ.ಟಿ.ಮಾಲ್‌ ಮಾಲೀಕ ಎಸ್‌.ಟಿ.ಆನಂದ್‌ ಅವರು ರೈತ ಫಕೀರಪ್ಪ ಹಾಗೂ ಪುತ್ರ ನಾಗರಾಜ್‌ ಅವರನ್ನು ಶುಕ್ರವಾರ ನಗರದ ನಿವಾಸಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ಈ ವೇಳೆ ರೈತ ಫಕೀರಪ್ಪ ಹಾಗೂ ಪುತ್ರನಿಗೆ ಉಪಾಹಾರ ನೀಡಿ ಸತ್ಕರಿಸಲಾಗಿದ್ದು, ಮಾಲೀಕ ಆನಂದ್‌ ಅವರು ಸ್ವತಃ ಕೈತುತ್ತು ತಿನ್ನಿಸಿದ್ದು ಕಂಡುಬಂದಿದೆ. ಸನ್ಮಾನ ಮಾಡುವಾಗ ಮಾಲೀಕ ಕೂಡ ಪಂಚೆ, ಬನಿಯನ್‌ ಧರಿಸಿದ್ದರು.

ಈ ವೇಳೆ ಮಾತನಾಡಿರುವ ಮಾಲೀಕ ಆನಂದ್‌ ಅವರು, ನಾವು ಕೂಡ ರೈತ ಕುಟುಂಬದವರೇ ಆಗಿದ್ದು, ಕೃಷಿಕರ ಬಗ್ಗೆ ಅಪಾರ ಗೌರವವಿದೆ. ನೀವು ನಮ್ಮ ಮನೆಗೆ ಬಂದಿರುವುದು ಸಂತಸ ತಂದಿದೆ. ನಾನು ಕೂಡ ಸರ್ಕಾರಿ ಶಾಲೆಯಲ್ಲೇ ಓದಿದ್ದು. ನಾವು ಯಾವತ್ತೂ ಯಾರನ್ನೂ ಅವಮಾನ ಮಾಡಿಲ್ಲ, ಅನಾಗರಿಕವಾಗಿ ನಡೆದುಕೊಂಡವರಲ್ಲ. ನಮ್ಮ ಸಿಬ್ಬಂದಿಯಿಂದ ತಪ್ಪಾಗಿದೆ. ದಯವಿಟ್ಟು ನೀವು ಕ್ಷಮಿಸಬೇಕು ಎಂದು ರೈತ ಫಕೀರಪ್ಪರನ್ನು ಕೋರಿದ್ದಾರೆ.

ಇದನ್ನೂ ಓದಿ | GT World Mall: ಅನ್ನದಾತರಿಗೆ ಅವಮಾನ; ತೆರಿಗೆ ಪಾವತಿಸದ್ದಕ್ಕಾಗಿ ಜಿಟಿ ಮಾಲ್‌ ಸೀಲ್ ಮಾಡಿದ ಬಿಬಿಎಂಪಿ

ಏನಿದು ಘಟನೆ?

ಬೆಂಗಳೂರಿನ ಮಾಗಡಿ ರಸ್ತೆಯ ಬಳಿ ಇರುವ ಜಿಟಿ ವರ್ಲ್ಡ್‌ ಮಾಲ್‌ಗೆ ಜುಲೈ 16ರಂದು ಪಂಚೆ ಧರಿಸಿ ತೆರಳಿದ್ದ ಹಾವೇರಿ ಮೂಲದ ರೈತ ಫಕೀರಪ್ಪ ಅವರನ್ನು ಒಳ ಹೋಗಲು ಬಿಟ್ಟಿರಲಿಲ್ಲ. ಈ ಕುರಿತು ಪ್ರಶ್ನಿಸಿದಾಗ, ʼಪಂಚೆ ಧರಿಸಿದವರನ್ನು ಒಳಗೆ ಬಿಡುವುದಿಲ್ಲ, ಈ ಬಗ್ಗೆ ನಮಗೆ ಸೂಚನೆ ಇದೆʼ ಎಂದು ಸೆಕ್ಯುರಿಟಿ ಸಿಬ್ಬಂದಿ ಮುಖ್ಯಸ್ಥರು ಹೇಳಿದ್ದಾರೆ. ಯಾಕೆ ಬಿಡುವುದಿಲ್ಲ ಎಂದು ಮರುಪ್ರಶ್ನಿಸಿದ ರೈತರ ಮಗನಿಗೆ ʼನಿಮ್ಮ ಮೇಲೆ ಕೇಸ್‌ ಹಾಕುತ್ತೇವೆʼ ಎಂದು ಸೆಕ್ಯೂರಿಟಿ ಬೆದರಿಸಿದ್ದರು. ಬಳಿಕ ಘಟನೆ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರೈತ ಫಕೀರಪ್ಪಗೆ ಆಡಳಿತ ಮಂಡಳಿ ಕ್ಷಮೆಯಾಚನೆ ಮಾಡಿತ್ತು.

ಬೆಂಗಳೂರಿನ ವಿಜಯನಗರದ ನಿವಾಸಿಯಾದ ನಾಗರಾಜ್ ಎಂಬವರ ತಂದೆ ಮೂಲತಃ ರೈತರಾಗಿದ್ದಾರೆ. ಅವರು ಹಾವೇರಿಯಿಂದ ಬೆಂಗಳೂರಿನಲ್ಲಿರುವ ಮಗನ ಮನೆಗೆ ಬಂದಿದ್ದರು. ಜು. 16ರಂದು ತಮ್ಮ ವೃದ್ಧ ತಂದೆಯವರಿಗೆ ಸಿನಿಮಾ ತೋರಿಸಿ ಖುಷಿಪಡಿಸಲು ನಿರ್ಧರಿಸಿದ ನಾಗರಾಜ್, ತಂದೆಯನ್ನು ಜಿಟಿ ಮಾಲ್‌ಗೆ ಕರೆದೊಯ್ದಿದ್ದರು. ಸಾಮಾನ್ಯವಾಗಿ ಪಂಚೆ ಉಡುವ ಹವ್ಯಾಸವಿರುವ ಅವರು ಎಂದಿನಂತೆಯೇ ಪಂಚೆ ಉಟ್ಟು ಮಗನ ಜೊತೆಗೆ ಮಾಲ್‌ಗೆ ತೆರಳಿದ್ದರು. ಆದರೆ, ಮಾಲ್‌ನೊಳಗೆ ಪ್ರವೇಶಿಸಲು ಸಿಬ್ಬಂದಿ ನಿರಾಕರಿಸಿದ್ದರು. ಬಳಿಕ ಮಾಲ್‌ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದರಿಂದ ಬಿಬಿಎಂಪಿ ಅಧಿಕಾರಿಗಳು ಮಾಲ್‌ ಅನ್ನು ಒಂದು ವಾರದ ಕಾಲ ಮುಚ್ಚಿಸಿದ್ದಾರೆ.

Continue Reading

ಕರ್ನಾಟಕ

Uttara Kannada News: ಭೂಕುಸಿತದಿಂದ ಕೊಚ್ಚಿ ಹೋದ ಟ್ಯಾಂಕರ್‌; ಗ್ರಾಮಸ್ಥರೀಗ ಗ್ಯಾಸ್ ಸ್ಫೋಟ ಅಪಾಯದಿಂದ ಪಾರು

Uttara Kannada News: ಉತ್ತರ ಕನ್ನಡದ ಸಗಡಗೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್‌ನಲ್ಲಿದ್ದ ಸುಮಾರು 15 ಟನ್ ಗ್ಯಾಸ್ ಅನ್ನು ಎಚ್.ಪಿ.ಸಿ.ಎಲ್, ಬಿ.ಪಿ.ಸಿ.ಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ಎಂದು ಡಿಸಿ ಲಕ್ಷ್ಮೀಪ್ರಿಯಾ.ಕೆ ತಿಳಿಸಿದ್ದಾರೆ.

VISTARANEWS.COM


on

Sadageri village free from gas leakage risk says DC Lakshmipriya
Koo

ಕಾರವಾರ: ಸಗಡಗೇರಿ ಗ್ರಾಮದ ಬಳಿ ಗಂಗಾವಳಿ ನದಿಯಲ್ಲಿದ್ದ ಗ್ಯಾಸ್ ಟ್ಯಾಂಕರ್‌ನಲ್ಲಿದ್ದ ಸುಮಾರು 15 ಟನ್ ಗ್ಯಾಸ್ ಅನ್ನು ಎಚ್.ಪಿ.ಸಿ.ಎಲ್, ಬಿ.ಪಿ.ಸಿ.ಎಲ್, ರಾಜ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ತಂಡಗಳ ನೆರವಿನಿಂದ ಸಂಪೂರ್ಣವಾಗಿ ಖಾಲಿ ಮಾಡಲಾಗಿದೆ. ಈ ಪ್ರದೇಶವನ್ನು ವಾಸಯೋಗ್ಯಕ್ಕೆ ಮುಕ್ತಗೊಳಿಸಲಾಗಿದ್ದು, ಗ್ರಾಮಸ್ಥರು ತಮ್ಮ ಮನೆಗಳಿಗೆ ವಾಪಸ್ ಬರಬಹುದಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. (Uttara Kannada News) ತಿಳಿಸಿದ್ದಾರೆ.

ಜಿಲ್ಲೆಯ ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದ ಅವರು, ಅಂಕೋಲಾ ಶಿರೂರು ಸಮೀಪ ಸಂಭವಿಸಿದ್ದ ಗುಡ್ಡ ಕುಸಿತ ಪ್ರದೇಶದಲ್ಲಿ ರಸ್ತೆಯ ಮೇಲಿದ್ದ ಮಣ್ಣು ತೆರವು ಕಾರ್ಯಾಚರಣೆ ಮುಗಿದಿದ್ದು, ಹೆದ್ದಾರಿಯ ಒಂದು ಬದಿಯನ್ನು ಮುಕ್ತಗೊಳಿಸಲಾಗಿದೆ. ಆದರೆ ಯಾವುದೇ ವಾಹನ ಸಂಚಾರಕ್ಕೆ ಅನುಮತಿ ನೀಡಿರುವುದಿಲ್ಲ ಎಂದರು.

ಅಂಕೋಲಾ ಸಮೀಪದ ಗುಡ್ಡ ಬಿದ್ದ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರಸ್ತುತ ಬಿದ್ದಿರುವ ಮಣ್ಣನ್ನು ಸಂಪೂರ್ಣ ತೆರವುಗೊಳಿಸಿ ಸಂಚಾರಕ್ಕೆ ಯೋಗ್ಯವನ್ನಾಗಿ ಮಾಡಲು ಅವಿರತವಾಗಿ ಶ್ರಮಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: R Ashok: ಹಗರಣದ ವಿರುದ್ಧ ಮಾತನಾಡಿದ ಸದಸ್ಯರ ಬಾಯಿ ಮುಚ್ಚಿಸಿದ ಸ್ಪೀಕರ್‌; ಆರ್‌. ಅಶೋಕ್‌ ಆಕ್ರೋಶ

ಜಿಲ್ಲೆಯಲ್ಲಿ ಪ್ರಸ್ತುತ, ಕಾರವಾರ ತಾಲೂಕಿನ 6, ಅಂಕೋಲಾದ 6, ಕುಮಟಾದ 5, ಹೊನ್ನಾವರದ 13 ಸೇರಿದಂತೆ ಒಟ್ಟು 30 ಕಾಳಜಿ ಕೇಂದ್ರಗಳಲ್ಲಿ 2373 ಮಂದಿ ಆಶ್ರಯ ಒದಗಿಸಲಾಗಿದ್ದು, ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದರು.

ಗುಡ್ಡ ಕುಸಿತ ಪ್ರದೇಶದಲ್ಲಿ ಇದುವರೆಗೆ 7 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಮಣ್ಣಿನ ಅವಶೇಷಗಳಡಿ ಬೆಂಜ್ ಲಾರಿ ಮತ್ತು ಚಾಲಕ ಸಿಲುಕಿರುವ ಸಾಧ್ಯತೆಯಿದ್ದು, ಈ ಬಗ್ಗೆ ಜಿಲ್ಲಾ ಬಾಂಬ್ ನಿಷ್ಕ್ರೀಯ ದಳ ಮೆಟಲ್ ಡಿಟೆಕ್ಟರ್ ಮೂಲಕ ವಾಹನದ ತಪಾಸಣೆ ಕೈಗೊಳ್ಳಲಾಗಿದೆ. ನೌಕಾನೆಲೆ ಅಧಿಕಾರಿಗಳು, ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಸಮೀಪದ ನದಿಯಲ್ಲಿ ಕೂಡಾ ತಪಾಸಣೆ ನಡೆಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ತಿಳಿಸಿದರು.

ಇನ್ಸ್‌ಪೆಕ್ಟರ್ ಜನರಲ್ ಅಫ್ ಪೊಲೀಸ್ ಅಮಿತ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸುರಕ್ಷಿತ ಕಾರ್ಯಚರಣೆಗೆ ಅಗತ್ಯ ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ್ ಕಾಂದೂ, ಭಟ್ಕಳ ಉಪ ವಿಭಾಗಾಧಿಕಾರಿ ಡಾ. ನಯನ ಮತ್ತು ವಿವಿಧ ಅಧಿಕಾರಿಗಳು ಇದ್ದರು.

Continue Reading

ದೇಶ

Reliance Jio: ರಿಲಯನ್ಸ್ ಜಿಯೋಗೆ ಮೂರೇ ತಿಂಗಳಲ್ಲಿ ಎಷ್ಟು ಲಾಭ ನೋಡಿ; 5,445 ಕೋಟಿ ರೂ!

Reliance Jio: ರಿಲಯನ್ಸ್ ಜಿಯೋದ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್‌ನಿಂದ ಜೂನ್ ತಿಂಗಳ ವರೆಗಿನ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಗಳಿಸಿದೆ. ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್‌ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ.

VISTARANEWS.COM


on

Reliance Jio first quarter profit at Rs 5445 crore
Koo

ಮುಂಬೈ: ರಿಲಯನ್ಸ್ ಜಿಯೋದ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕದ, ಅಂದರೆ ಏಪ್ರಿಲ್‌ನಿಂದ ಜೂನ್ ತಿಂಗಳವರೆಗಿನ ಹಣಕಾಸು ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ 5,337 ಕೋಟಿ ರೂಪಾಯಿಯ ನಿವ್ವಳ ಲಾಭ ಘೋಷಿಸಿದ್ದ ಕಂಪನಿಯು ಈ ತ್ರೈಮಾಸಿಕದಲ್ಲಿ 5,445 ಕೋಟಿ ರೂಪಾಯಿ ನಿವ್ವಳ ಲಾಭವನ್ನು (Reliance Jio) ಗಳಿಸಿದೆ.

ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮತ್ತೆ ಮುಂದುವರಿದಿದೆ. ಜೂನ್‌ಗೆ ಕೊನೆಯಾದ ತ್ರೈಮಾಸಿಕದಲ್ಲಿ 90 ಲಕ್ಷ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಅಂದ ಹಾಗೆ ವರ್ಷದ ಹಿಂದಿನ ಇದೇ ಹಣಕಾಸು ತ್ರೈಮಾಸಿಕದಲ್ಲಿ ಜಿಯೋ 4,863 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ಕಾರ್ಯಾಚರಣೆ ಮೂಲಕ ಬರುವಂತ ಆದಾಯವು 26,478 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ತ್ರೈಮಾಸಿಕದಲ್ಲಿ ಕಾರ್ಯಾಚರಣೆ ಮೂಲಕವಾಗಿ 25,959 ಕೋಟಿ ರೂಪಾಯಿ ಆದಾಯ ಬಂದಿತ್ತು. ವರ್ಷದ ಹಿಂದಿನ ಇದೇ ಅವಧಿಯಲ್ಲಿ 24,042 ಕೋಟಿ ರೂಪಾಯಿ ಕಾರ್ಯಾಚರಣೆ ಮೂಲಕ ಆದಾಯ ಪಡೆದದ್ದನ್ನು ಇಲ್ಲಿ ಉಲ್ಲೇಖಿಸಬಹುದು.

ಇದನ್ನೂ ಓದಿ: Sbi Recruitment: ಎಸ್‌ಬಿಐನಲ್ಲಿ 1,040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಅಹ್ವಾನ

ಇನ್ನು ತಿಂಗಳಿಗೆ ಪ್ರತಿ ಬಳಕೆದಾರರಿಂದ ಬರುವಂತ ಸರಾಸರಿ ಆದಾಯದಲ್ಲಿ, ಅಂದರೆ ಇದನ್ನು ಎಆರ್ ಪಿಯು (ಆವರೇಜ್ ರೆವಿನ್ಯೂ ಪರ್ ಯೂಸರ್) ಎನ್ನಲಾಗುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಆದಾಯ ಹಾಗೂ ಇಬಿಐಟಿಡಿಎ ಬೆಳವಣಿಗೆಗೆ ಇದು ಕೊಡುಗೆ ನೀಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಟೆಲಿಕಾಂ ಘಟಕವಾದ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ 2025ನೇ ಇಸವಿಯಲ್ಲಿ ಅತಿದೊಡ್ಡ ಐಪಿಒಗೆ (ಇನಿಷಿಯಲ್ ಪಬ್ಲಿಕ್ ಆಫರ್) ಮುಂದಾಗಬಹುದು. 9.3 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಸಂಭಾವ್ಯ ಮೌಲ್ಯಮಾಪನದೊಂದಿಗೆ ಇದು ಆಗಬಹುದು ಎಂದು ಜೆಫರೀಸ್ ಟಿಪ್ಪಣಿ ಹೇಳಿದೆ.

ಜಿಯೋ ‘$112 ಶತಕೋಟಿ ಮೌಲ್ಯದಲ್ಲಿ ಲಿಸ್ಟಿಂಗ್ ಮಾಡಬಹುದು’ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಷೇರು ಬೆಲೆಗೆ ‘ಶೇ 7ರಿಂದ 15ರಷ್ಟು ಮೇಲಕ್ಕೆ’ ಸೇರಿಸಬಹುದು ಎಂದು ಜೆಫ್ರೀಸ್ ಜುಲೈ 11 ರಂದು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ನಾಳೆ ಕರೆಂಟ್‌ ಇರಲ್ಲ!

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಮಾರುಕಟ್ಟೆ ವ್ಯವಹಾರ ಶುಕ್ರವಾರದಂದು ಕೊನೆಗೊಂಡ ವೇಳೆಗೆ ಪ್ರತಿ ಷೇರಿಗೆ 3,116.95 ರೂಪಾಯಿಯಂತೆ ಮುಕ್ತಾಯ ಕಂಡಿವೆ. ಷೇರಿನ ಮೌಲ್ಯ ಶೇ 1.78 ರಷ್ಟು ಇಳಿಕೆ ಕಂಡಿದೆ.

Continue Reading

ಕರ್ನಾಟಕ

R Ashok: ಹಗರಣದ ವಿರುದ್ಧ ಮಾತನಾಡಿದ ಸದಸ್ಯರ ಬಾಯಿ ಮುಚ್ಚಿಸಿದ ಸ್ಪೀಕರ್‌; ಆರ್‌. ಅಶೋಕ್‌ ಆಕ್ರೋಶ

R Ashok: ಸದನದಲ್ಲಿ ಸದಸ್ಯರು ಮಾತನಾಡುವಾಗ ಅವರನ್ನು ಒತ್ತಾಯಪೂರ್ವಕವಾಗಿ ಸ್ಪೀಕರ್‌ ಕೂರಿಸುತ್ತಿದ್ದಾರೆ. ಇದು ಸದನಕ್ಕೆ ಅಥವಾ ಸ್ಪೀಕರ್‌ಗೆ ಗೌರವ ತರುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಸದನ ನಡೆದಿಲ್ಲ. ಸ್ಪೀಕರ್‌ ಸದನ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತಿಳಿಸಿರುವ ಪ್ರತಿಪಕ್ಷ ನಾಯಕ ಆರ್‌. ಅಶೋಕ್‌, ಇಂತಹ ಸ್ಪೀಕರ್‌ರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಮಳೆ ಹಾನಿ ಕುರಿತು 15 ದಿನಗಳ ಹಿಂದೆಯೇ ಹೇಳಬೇಕಿತ್ತು. ಸ್ಪೀಕರ್‌ ನಡೆ ಸದನಕ್ಕೆ ಗೌರವ ತರುವುದಿಲ್ಲ. ಸೋಮವಾರದ ಅಧಿವೇಶನದಲ್ಲಿ ಬಿಜೆಪಿ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

VISTARANEWS.COM


on

Opposition party leader R Ashok statement about Valmiki Development Corporation scam
Koo

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿ ಸದಸ್ಯರು ಧ್ವನಿ ಎತ್ತಿದರೆ ಅವರನ್ನು ಒತ್ತಾಯಪೂರ್ವಕವಾಗಿ ಕೂರಿಸುವ ಕೆಲಸವನ್ನು ಸ್ಪೀಕರ್‌ ಯು.ಟಿ. ಖಾದರ್‌ ಮಾಡಿದ್ದಾರೆ. ಮಳೆ ಹಾನಿಗೆ ಪರಿಹಾರ ನೀಡದೆ ಹಗರಣ ಮುಚ್ಚಿ ಹಾಕಲು ನಡುವೆ ಈ ವಿಷಯ ತರಲಾಗಿದೆ. ಇದು ಸದನಕ್ಕೆ ಹಾಗೂ ಸ್ಪೀಕರ್‌ಗೆ ಗೌರವ ತರುವ ಕೆಲಸವಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆಕ್ರೋಶ ವ್ಯಕ್ತಪಡಿಸಿದರು.

ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸದಸ್ಯರು ಮಾತನಾಡುವಾಗ ಅವರನ್ನು ಒತ್ತಾಯಪೂರ್ವಕವಾಗಿ ಸ್ಪೀಕರ್‌ ಕೂರಿಸುತ್ತಿದ್ದಾರೆ. ಇದು ಸದನಕ್ಕೆ ಅಥವಾ ಸ್ಪೀಕರ್‌ಗೆ ಗೌರವ ತರುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಸದನ ನಡೆದಿಲ್ಲ. ಸ್ಪೀಕರ್‌ ಸದನ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ. ಇಂತಹ ಸ್ಪೀಕರ್‌ರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಮಳೆ ಹಾನಿ ಕುರಿತು 15 ದಿನಗಳ ಹಿಂದೆಯೇ ಹೇಳಬೇಕಿತ್ತು. ಸ್ಪೀಕರ್‌ ನಡೆ ಸದನಕ್ಕೆ ಗೌರವ ತರುವುದಿಲ್ಲ. ಸೋಮವಾರದ ಅಧಿವೇಶನದಲ್ಲಿ ಬಿಜೆಪಿ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru Power Cut: ಬೆಂಗಳೂರಿನ ಹಲವೆಡೆ ನಾಳೆ ಕರೆಂಟ್‌ ಇರಲ್ಲ!

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದರೆ ಅದು ಕಾಂಗ್ರೆಸ್‌ ಸರ್ಕಾರದ ಪ್ರಾಯೋಜಿತ ಕೊಲೆ. 187 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಲೂಟಿ ಮಾಡಿ ಚುನಾವಣೆಗೆ ಬಳಸಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿದೆ. ಈ ಕುರಿತು ಸದನದಲ್ಲಿ ನಿಲುವಳಿ ಸೂಚನೆಯಲ್ಲಿ ಮಾತನಾಡಲಾಗಿದೆ. ಲೂಟಿಯಾದ ಹಣವನ್ನು ಯಾವಾಗ ವಾಪಸ್‌ ತರಲಾಗುತ್ತದೆ ಎಂದು ನಾವು ಪ್ರಶ್ನೆ ಮಾಡಿದ್ದೇವೆ. ಇದು ಎಟಿಎಂ ಸರ್ಕಾರದ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ತಲುಪಿದೆಯೇ ಎಂದು ಕೇಳಿದ್ದೇವೆ ಎಂದರು.

ಈ ಹಗರಣ ಮಾಡಿದ ತಪ್ಪಿತಸ್ಥರಿಗೆ ಶಿಕ್ಷಯಾಗಬೇಕೆಂದರೆ ಮಾಜಿ ಸಚಿವ ಬಿ. ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್‌ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಬೇಕು. ಆದರೆ ಇವರಿಬ್ಬರ ಹೆಸರು ಕೂಡ ಎಫ್‌ಐಆರ್‌ನಲ್ಲಿ ಬಾರದಂತೆ ಮಾಡಲು ಪೊಲೀಸರಿಗೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದಿಂದ ಭಾಷಣ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾರೂ ಭಾಗಿಯಾಗಿಲ್ಲ ಎಂದಿದ್ದಾರೆ. ಆದರೆ ಸಚಿವರು ರಾಜೀನಾಮೆ ನೀಡಿದ್ದಾರೆ. ಹಣ ಲೂಟಿಯಾಗಿದೆ ಎಂದು ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. 40 ಪರ್ಸೆಂಟ್‌ ಎಂದು ಭಿತ್ತಿಪತ್ರ ಅಂಟಿಸಿ, ಅಧಿಕಾರಕ್ಕೆ ಬಂದ ಮೇಲೆ ತನಿಖೆಗೆ ವಹಿಸಿದ್ದಾರೆ. ಆದರೆ ಇದರ ವರದಿ ಮಾತ್ರ ಬಂದಿಲ್ಲ. ಆದರೂ ಬಿಜೆಪಿ ಹಗರಣ ಮಾಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಶ್ನೆ ಮಾಡಿದ ನಂತರ ದಿಢೀರನೆ ಹಳೆ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ದೂರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿದ್ದು, ರಾಜೀನಾಮೆ ಕೊಡಬೇಕಿತ್ತು. ಆದರೆ ಅದನ್ನೂ ಮಾಡಿಲ್ಲ, ಸಿಬಿಐ ತನಿಖೆಗೂ ವಹಿಸಿಲ್ಲ. ಹಗರಣವನ್ನು ಮುಚ್ಚಿಹಾಕಲು ಎಲ್ಲ ವ್ಯವಸ್ಥಿತ ಸಂಚು ಮಾಡಲಾಗಿದೆ. ಬಿಜೆಪಿಯಿಂದ ಇದರ ವಿರುದ್ಧ ತೀವ್ರ ಹೋರಾಟ ಮುಂದುವರಿಯಲಿದೆ. ದಲಿತರ ಹಣ ವಾಪಸ್‌ ಸಿಗಬೇಕು, ಅಪರಾಧಿಗಳಿಗೆ ಶಿಕ್ಷೆ ಸಿಗಬೇಕು ಎಂಬುದು ಬಿಜೆಪಿಯ ಬೇಡಿಕೆ ಎಂದರು.

ಇದನ್ನೂ ಓದಿ: Karnataka Weather : ವಾಯುಭಾರ ಕುಸಿತ ಎಫೆಕ್ಟ್‌; ವಾರಾಂತ್ಯದಲ್ಲಿ ಭಾರಿ ಮಳೆ ಎಚ್ಚರಿಕೆ, ಶಾಲೆಗಳಿಗೆ ರಜೆ ಘೋಷಣೆ

ಮಳೆ ಹಾನಿಗೆ ಕ್ರಮವಿಲ್ಲ

ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಾನಿಯಾಗಿ ಜನರು ಸತ್ತಿದ್ದರೂ ಸಚಿವರು ಘಟನಾ ಸ್ಥಳಕ್ಕೆ ಹೋಗಿ ಸಂತ್ರಸ್ತರನ್ನು ಭೇಟಿ ಮಾಡಿಲ್ಲ. ಹಾನಿಗೊಳಗಾದವರಿಗೆ ಬಿಜೆಪಿ ಸರ್ಕಾರ 10,000 ರೂ. ಪರಿಹಾರ ನೀಡುತ್ತಿತ್ತು. ಈಗ ಸರ್ಕಾರ ಪರಿಹಾರವನ್ನು 5,000 ರೂ. ಗೆ ಇಳಿಸಿದೆ. ಮನೆ ಕಳೆದುಕೊಂಡವರಿಗೆ ಬಿಜೆಪಿ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಈಗ ಅದು ಕೂಡ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Continue Reading
Advertisement
Vastu Tips
ಧಾರ್ಮಿಕ4 mins ago

Vastu Tips: ಮನೆಯಲ್ಲಿ ಸಂಪತ್ತು ಸದಾ ತುಂಬಿರಬೇಕೆ? ಈ ನಿಯಮ ಪಾಲಿಸಿ

Women's Asia Cup 2024
ಪ್ರಮುಖ ಸುದ್ದಿ5 mins ago

Women’s Asia Cup 2024 : ಪಾಕಿಸ್ತಾನ ವಿರುದ್ಧ ಭರ್ಜರಿ 7 ವಿಕೆಟ್​ ವಿಜಯ ಸಾಧಿಸಿದ ಭಾರತದ ಮಹಿಳೆಯರು

GT World Mall
ಕರ್ನಾಟಕ10 mins ago

GT World Mall: ರೈತ ಫಕೀರಪ್ಪರನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ಜಿ.ಟಿ.ಮಾಲ್‌ ಮಾಲೀಕ

Viral Video
Latest10 mins ago

Viral Video: ಮಗಳೊಂದಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿ!

Sadageri village free from gas leakage risk says DC Lakshmipriya
ಕರ್ನಾಟಕ11 mins ago

Uttara Kannada News: ಭೂಕುಸಿತದಿಂದ ಕೊಚ್ಚಿ ಹೋದ ಟ್ಯಾಂಕರ್‌; ಗ್ರಾಮಸ್ಥರೀಗ ಗ್ಯಾಸ್ ಸ್ಫೋಟ ಅಪಾಯದಿಂದ ಪಾರು

Reliance Jio first quarter profit at Rs 5445 crore
ದೇಶ16 mins ago

Reliance Jio: ರಿಲಯನ್ಸ್ ಜಿಯೋಗೆ ಮೂರೇ ತಿಂಗಳಲ್ಲಿ ಎಷ್ಟು ಲಾಭ ನೋಡಿ; 5,445 ಕೋಟಿ ರೂ!

Women's Asia Cup 2024
ಪ್ರಮುಖ ಸುದ್ದಿ30 mins ago

Women’s Asia Cup 2024 : ಏಷ್ಯಾ ಕಪ್​ನ ಮೊದಲ ಪಂದ್ಯದಲ್ಲೇ ಗೆದ್ದು ಇತಿಹಾಸ ಸೃಷ್ಟಿಸಿದ ನೇಪಾಳ ಮಹಿಳಾ ತಂಡ

Self Harming
Latest32 mins ago

Self Harming : ವಾಟರ್‌ ಟ್ಯಾಂಕ್‌ ಮೇಲಿನಿಂದ ಜಿಗಿದ ವಿದ್ಯಾರ್ಥಿ; ವಿಡಿಯೋ ಇದೆ

NHAI FastTag
ದೇಶ55 mins ago

NHAI FastTag: ಇನ್ನೂ ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿಲ್ಲವೇ? ಹಾಗಿದ್ದರೆ ದುಪ್ಪಟ್ಟು ಶುಲ್ಕ ಕಟ್ಟಲು ಸಿದ್ದರಾಗಿ!

Suryakumar Yadav:
ಕ್ರೀಡೆ1 hour ago

Suryakumar Yadav : ಮುಂದಿನ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಮುಂಬೈ ಇಂಡಿಯನ್ಸ್ ನಾಯಕತ್ವವೂ ನಷ್ಟ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ9 hours ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ9 hours ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ1 day ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ1 day ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

Karnataka Rain
ಮಳೆ3 days ago

Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು; ನಾಲ್ವರು ಪ್ರಾಣಾಪಾಯದಿಂದ ಪಾರು

karnataka Weather Forecast
ಮಳೆ4 days ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ4 days ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ5 days ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ5 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

ಟ್ರೆಂಡಿಂಗ್‌