festive jewelfashionFestive Jewel Fashion: ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಚಾಂದ್‌ ಬಾಲಿ ಇಯರಿಂಗ್ಸ್ - Vistara News

ಫ್ಯಾಷನ್

Festive Jewel Fashion: ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಚಾಂದ್‌ ಬಾಲಿ ಇಯರಿಂಗ್ಸ್

ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ (Festive Jewel Fashion) ಗ್ರ್ಯಾಂಡ್‌ ಲುಕ್‌ ನೀಡುವ ಚಾಂದ್‌ ಬಾಲಿ ಇಯರಿಂಗ್ಸ್‌ ಟ್ರೆಂಡಿಯಾಗಿದ್ದು, ಹಬ್ಬದ ಸಂಭ್ರಮ ಹೆಚ್ಚಿಸಲು ಬಂಗಾರದಲ್ಲಿ ಮಾತ್ರವಲ್ಲ, ವನ್‌ ಗ್ರಾಮ್‌ ಗೋಲ್ಡ್‌ ಸೇರಿದಂತೆ ಇತರೇ ಮೆಟಲ್‌ನಲ್ಲೂ ಎಂಟ್ರಿ ನೀಡಿವೆ. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Festive Jewel Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಚಾಂದ್‌ ಬಾಲಿ ಇಯರಿಂಗ್‌ಗಳು ಮಾನಿನಿಯರ ಮನ ಗೆದ್ದಿವೆ. ಧರಿಸಿದಾಗ ಗ್ರ್ಯಾಂಡ್‌ ಆಗಿ ಕಾಣುವ ಇವು ಇದೀಗ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂಗಾರ ಹಾಗೂ ಬಂಗಾರೇತರ ಲೋಹದಲ್ಲಿ ಬಿಡುಗಡೆಗೊಂಡಿವೆ.

Festive Jewel Fashion

ಬಂಗಾರದ ಚಾಂದ್‌ ಬಾಲಿ

ಮೊದೆಲೆಲ್ಲಾ ಬಂಗಾರದ ಚಾಂದ್‌ ಬಾಲಿ ಇಯರಿಂಗ್‌ಗಳನ್ನು ಮಾಡಿಸಲು ಸಾಕಷ್ಟು ಗ್ರಾಮ್‌ ಚಿನ್ನ ಬೇಕಾಗಿತ್ತು. ಆದರೆ, ಇದೀಗ ಲೈಟ್‌ವೈಟ್‌ನಲ್ಲಿ ಈ ಬಂಗಾರದ ಚಾಂದ್‌ಬಾಲಿ ಕಿವಿಯೊಲೆಗಳು ಲಭ್ಯವಿದ್ದು, ಈ ಇಯರಿಂಗ್‌ ಪ್ರಿಯರು ಕೊಳ್ಳುವ ಹಾಗಾಗಿದೆ. ಕಡಿಮೆ ಗ್ರಾಮ್‌ನಲ್ಲಿ ದೊರೆಯುತ್ತಿರುವುದರಿಂದ ಚಾಂದ್‌ಬಾಲಿ ಕಿವಿಯೊಲೆಗಳನ್ನು ಇಷ್ಟಪಡುವವರು ಖರೀದಿ ಮಾಡುವುದು ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ ರಾಜನ್‌. ಅವರ ಪ್ರಕಾರ, ಬಂಗಾರ ಚಾಂದ್‌ ಬಾಲಿ ಇಯರಿಂಗ್‌ಗಳಲ್ಲಿ ಇದೀಗ ಇದಕ್ಕೆ ಮ್ಯಾಚ್‌ ಆಗುವಂತಹ ಇತರೇ ಮ್ಯಾಚಿಂಗ್‌ ಆಭರಣಗಳು ಲಭ್ಯ ಎನ್ನುತ್ತಾರೆ ಅವರು.

ನಾನಾ ವಿನ್ಯಾಸದಲ್ಲಿ ಚಾಂದ್‌ ಬಾಲಿ ಇಯರಿಂಗ್ಸ್‌

ಬಂಗಾರೇತರ ಚಾಂದ್‌ ಬಾಲಿ ಇಯರಿಂಗ್‌ಗಳಲ್ಲಿ ಒಂದಲ್ಲ, ಎರಡಲ್ಲ ನೂರಾರು ಬಗೆಯ ಡಿಸೈನ್‌ಗಳು ಲಭ್ಯ. ಮೊದಲೆಲ್ಲಾ ಒಂದೇ ವಿನ್ಯಾಸದಲ್ಲಿ ದೊರೆಯುತ್ತಿದ್ದ ಇವು ಇದೀಗ ಮಿಕ್ಸ್‌ ಮ್ಯಾಚ್‌ ವಿನ್ಯಾಸದೊಂದಿಗೆ ದೊರೆಯುತ್ತಿವೆ. ಉದಾಹರಣೆಗೆ., ಪರ್ಲ್, ಬೀಡ್ಸ್‌, ಕುಂದನ್‌, ಎಮರಾಲ್ಡ್, ರೂಬಿ, ಅಮೆರಿಕನ್‌ ಡೈಮಂಡ್‌ವನ್ನೊಳಗೊಂಡಂತಹ ಹೂವಿನ ಕಿವಿಯೊಲೆಯೊಂದಿಗೆ, ಜುಮ್ಕಾದೊಂದಿಗೆ, ಹೂಪ್‌ನಂತಹ ಡಿಸೈನ್‌ನೊಂದಿಗೆ ಅಥವಾ ಬಿಗ್‌ ಶಾಂಡೆಲಿಯರ್‌ ಡಿಸೈನ್‌ನೊಂದಿಗೆ ಸಿಗುತ್ತಿವೆ. ಒಂದಕ್ಕಿಂತ ಒಂದು ಮನಮೋಹಕ ವಿನ್ಯಾಸದಲ್ಲಿ ದೊರೆಯುತ್ತಿದ್ದು, ಹೊಸ ರೂಪ ಪಡೆದಿವೆ. ಭುಜವನ್ನು ಮುಟ್ಟುವಂತಹ ಬಿಗ್‌ ಶ್ಯಾಂಡೆಲಿಯರ್‌ ರೂಪದ ಚಾಂದ್‌ ಬಾಲಿಗಳು ಇಂದು ಬಾಲಿವುಡ್‌ ತಾರೆಯರನ್ನು ಸೆಳೆದಿವೆ. ಅಷ್ಟೇಕೆ! ಧರಿಸುವ ಉಡುಪಿಗೆ ತಕ್ಕಂತೆ ಸ್ಟೇಟ್‌ಮೆಂಟ್‌ ಚಾಂದ್‌ ಬಾಲಿಗಳು ಕೂಡ ಇಂದು ಪ್ರಚಲಿತದಲ್ಲಿವೆ ಎನ್ನುತ್ತಾರೆ ಆಭರಣ ವಿನ್ಯಾಸಕಾರರು.

Festive Jewel Fashion

ಚಾಂದ್‌ ಬಾಲಿ ಇಯರಿಂಗ್ಸ್‌ ಪ್ರಿಯರಿಗೆ 4 ಟಿಪ್ಸ್‌

  • ಈ ಫೆಸ್ಟಿವ್‌ ಸೀಸನ್‌ನಲ್ಲಿ ಖರೀದಿಸುವವರಿಗೆ ನಾನಾ ವಿನ್ಯಾಸದವು ಲಭ್ಯ.
  • ಗ್ರ್ಯಾಂಡ್‌ ಉಡುಪಿಗೆ ಸಖತ್‌ ಮ್ಯಾಚ್‌ ಆಗುತ್ತದೆ.
  • ಉಡುಪಿನ ವರ್ಣಗಳಿಗೂ ಮ್ಯಾಚ್‌ ಮಾಡಬಹುದು.
  • ಮದುವೆ ಹಾಗೂ ಇತರೇ ಸಮಾರಂಭಗಳಿಗೂ ಧರಿಸಬಹುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: wedding Fashion: ಸಮ್ಮರ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನ ಹಿಟ್‌ ಲಿಸ್ಟ್‌ಗೆ 3 ಗ್ಲಾಮರಸ್‌ ಶೈಲಿಯ ಲೆಹೆಂಗಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Necklace Mangalya Fashion: ವಿವಾಹಿತರ ಮಾಂಗಲ್ಯಕ್ಕೂ ಸಿಕ್ತು ವೈವಿಧ್ಯಮಯ ನೆಕ್ಲೇಸ್‌ ರೂಪ!

Necklace Mangalya Fashion: ವಿವಾಹಿತ ಮಹಿಳೆಯರ ಮಾಂಗಲ್ಯಕ್ಕೂ ಇದೀಗ ಸಿಂಪಲ್‌ ನೆಕ್ಲೇಸ್‌ ರೂಪ ದೊರೆತಿದೆ. ಫ್ಯಾಷನೆಬಲ್‌ ಆಗಿ ಧರಿಸಲು ಬಯಸುವ ಮಹಿಳೆಯರ ಕತ್ತನ್ನು ಸಿಂಗರಿಸುತ್ತಿವೆ. ಹಾಗಾದಲ್ಲಿ, ಯಾವ್ಯಾವ ಬಗೆಯವು ಆಭರಣ ಲೋಕಕ್ಕೆ ಕಾಲಿಟ್ಟಿವೆ. ಯಾವುದು ಹೆಚ್ಚು ಟ್ರೆಂಡಿಯಾಗಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Necklace Mangalya Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೆಕ್ಲೇಸ್‌ ರೂಪದ ಮಾಂಗಲ್ಯಗಳು (Necklace Mangalya Fashion) ಇದೀಗ ಟ್ರೆಂಡಿಯಾಗಿವೆ. ಹೌದು, ವಿವಾಹಿತೆಯರ ಸುಮಂಗಲಿತನದ ದ್ಯೋತಕ ಎನ್ನಲಾಗುವ ಕರಿಮಣಿ ಸರದ ಮಾಂಗಲ್ಯಗಳು ಇದೀಗ ನಾನಾ ಬಗೆಯ ನೆಕ್ಲೇಸ್‌ ರೂಪವನ್ನು ಪಡೆದಿವೆ. ಇಂದಿನ ಜನರೇಷನ್‌ನ ಮದುವೆಯಾದ ಯುವತಿಯರಿಗೂ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಬಂದಿವೆ. ಅದರಲ್ಲೂ ಫ್ಯಾಷನೆಬಲ್‌ ಆಗಿ ಧರಿಸಲು ಬಯಸುವ ಉದ್ಯೋಗಸ್ಥ ಮಹಿಳೆಯರ ಕತ್ತನ್ನು ಸಿಂಗರಿಸುತ್ತಿವೆ.

ಉದ್ಯೋಗಸ್ಥ ಮಹಿಳೆಯರ ಚಾಯ್ಸ್

“ಮದುವೆಯಾದ ಮಹಿಳೆಯರು ಮೊದಲಿನಂತೆ ಉದ್ದುದ್ದದ ಮಾಂಗಲ್ಯ ಸರಗಳನ್ನು ಧರಿಸುವುದು ಕಡಿಮೆಯಾಗಿದೆ. ಅದರಲ್ಲೂ ಉದ್ಯೋಗಸ್ಥ ಮಹಿಳೆಯರು ಆದಷ್ಟೂ ಲೈಟ್‌ವೈಟ್‌ ಹಾಗೂ ಸಿಂಪಲ್‌ ಆಗಿರುವಂತಹ ನೆಕ್ಲೇಸ್‌ ರೂಪದ ಕರಿಮಣಿ ಸರಗಳನ್ನು ಅಥವಾ ನೆಕ್‌ಚೈನ್‌ಗಳನ್ನು ಧರಿಸಲು ಇಷ್ಟಪಡತೊಡಗಿದ್ದಾರೆ. ದಶಕಗಳ ಹಿಂದೆಯೇ ಈ ಆಭರಣದ ಟ್ರೆಂಡ್‌ ಕಾಲಿಟ್ಟಿತ್ತು. ಒಂದಿಷ್ಟು ವರ್ಗದ ಮಹಿಳೆಯರು ಮಾತ್ರ, ಅದರಲ್ಲೂ ಹೊರಗಡೆ ದುಡಿಯುವ ಮಹಿಳೆಯರು ಇವನ್ನು ಧರಿಸುತ್ತಿದ್ದರು. ಇಲ್ಲವೇ ಮಾಡೆಲಿಂಗ್‌ ಹಾಗೂ ಫ್ಯಾಷನ್‌ ಕ್ಷೇತ್ರದ ಯುವತಿಯರು ಇವನ್ನು ಅತಿ ಹೆಚ್ಚಾಗಿ ಧರಿಸುತ್ತಿದ್ದರು. ಕಾಲ ಕಳೆದಂತೆ ಇವುಗಳ ಬಳಕೆ ಹೆಚ್ಚಾಗತೊಡಗಿತು. ನೋಡಲು ಆಕರ್ಷಕವಾಗಿ ಕಾಣುವ ಮಾಂಗಲ್ಯದ ಕರಿಮಣಿ ನೆಕ್ಲೇಸ್‌ ಪಾಪುಲರ್‌ ಆಗತೊಡಗಿತು. ಪರಿಣಾಮ, ಬರಬರುತ್ತಾ ಕರಿಮಣಿ ಮಾಂಗಲ್ಯಕ್ಕೆ ಸಿಂಪಲ್‌ ನೆಕ್ಲೇಸ್‌ ರೂಪ ದೊರಕಿತು” ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ ರಾಜೀವಾಚಾರ್‌.

ಟ್ರೆಂಡ್‌ನಲ್ಲಿರುವ ನೆಕ್ಲೇಸ್‌ ಮಂಗಲಸೂತ್ರ

ಒಂದೆಳೆ, ಎರಡೆಳೆ, ಕೆಲವು ಐದೆಳೆಯ ಕರಿಮಣಿ ಇರುವಂತಹ ಮಂಗಲಸೂತ್ರದ ನೆಕ್ಲೆಸ್‌ನಂತವು ಟ್ರೆಂಡಿಯಾಗಿವೆ. ಅವುಗಳಲ್ಲಿ ಅತಿ ಹೆಚ್ಚು ಬೇಡಿಕೆ ಹಾಗೂ ಮಾರಾಟವಾಗುತ್ತಿರುವ ಮಾಂಗಲ್ಯಗಳೆಂದರೇ ಒಂದೆಳೆಯ ಕರಿಮಣಿ ಸೂತ್ರ. ಅದರಲ್ಲೂ ಸಿಂಪಲ್‌ ಡಿಸೈನ್‌ನವು, ಗೋಲ್ಡ್ ಚೈನ್‌, ಗೋಲ್ಡ್ ಬೀಡ್ಸ್ ಇರುವಂತಹ 18 ಇಂಚಿನ ಕರಿಮಣಿ ಮಾಂಗಲ್ಯ ಸರದ ನೆಕ್ಲೆಸ್‌ಗಳು ಹೆಚ್ಚು ಪಾಫುಲರ್‌ ಆಗಿವೆ.

ಇದನ್ನೂ ಓದಿ: Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಐಡಿಯಾ

ಜಿರ್ಕೋನ್‌ ಪೆಂಡೆಂಟ್‌ ಕರಿಮಣಿ ಮಾಂಗಲ್ಯದ ನೆಕ್ಲೇಸ್‌

ಕರಿಮಣಿ ಮಾಂಗಲ್ಯದ ನೆಕ್ಲೆಸ್‌ಗಳಲ್ಲಿ ಇದೀಗ ಜಿರ್ಕೋನ್‌ನ ಪೆಂಡೆಂಟ್‌ ಇರುವಂತಹ ಸರಗಳು ಅಂದರೇ, ಚಿಕ್ಕ ನೆಕ್ಲೇಸ್‌ಗಳು ಅತಿ ಹೆಚ್ಚು ಪ್ರಚಲಿತದಲ್ಲಿವೆ. ಹರಳಿನ ಬಿಳಿ ಕಲ್ಲಿನ, ಅಮೆರಿಕನ್‌ ಡೈಮಂಡ್‌ನ ಒಂದರಿಂದ ಎರಡು ಇಂಚಿನ ನಾನಾ ವಿನ್ಯಾಸದ ಪೆಂಡೆಂಟ್‌ನ ಕರಿಮಣಿ ನೆಕ್ಲೇಸ್‌ಗಳು ಉದ್ಯೋಗಸ್ಥ ಮಹಿಳೆಯರನ್ನು ಸೆಳೆದಿವೆ.

  • ಬಂಗಾರೇತರ ಲೋಹದಲ್ಲೂ ಇವು ಲಭ್ಯ.
  • ಸಿಲ್ವರ್‌ ಜ್ಯುವೆಲರಿ ಡಿಸೈನ್‌ನಲ್ಲೂ ದೊರೆಯುತ್ತಿವೆ.
  • ಒಂದೆಳೆಯ ಸರದಂತಹ ನೆಕ್‌ಚೈನ್‌ ಡಿಸೈನ್‌ನಲ್ಲೂ ದೊರೆಯುತ್ತಿವೆ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Varamahalakshmi Festival 2024: ಹಬ್ಬಕ್ಕೆ ಸೀರೆಯನ್ನು ದಾವಣಿಯಂತೆ ಉಡುವುದು ಹೇಗೆ? ಇಲ್ಲಿದೆ ಸಿಂಪಲ್‌ ಐಡಿಯಾ

Varamahalakshmi Festival 2024: ಈ ಫೆಸ್ಟಿವ್‌ ಸೀಸನ್‌ನಲ್ಲಿ ಹೆಚ್ಚು ಖರ್ಚಿಲ್ಲದೇ ಬಳಿಯಿರುವ ರೇಷ್ಮೆ ಸೀರೆಯನ್ನೇ ಡಿಸೈನರ್‌ ದಾವಣಿಯಂತೆ ಧರಿಸುವ ಸ್ಟೈಲಿಂಗ್‌ ಟ್ರೆಂಡಿಯಾಗಿದೆ. ಅದನ್ನು ಡ್ರೇಪ್‌ ಮಾಡುವುದು ಹೇಗೆ? ಇದಕ್ಕಾಗಿ ಸೀರೆಯ ಆಯ್ಕೆ ಹೇಗಿರಬೇಕು ಎಂಬುದರ ಕುರಿತಂತೆ ಸೀರೆ ಡ್ರೇಪಿಂಗ್‌ ಸ್ಪೆಷಲಿಸ್ಟ್‌ಗಳು ವಿವರಿಸಿದ್ದಾರೆ.

VISTARANEWS.COM


on

Varamahalakshmi Festival 2024
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಒಂದು ನಯಾ ಪೈಸೆ ಖರ್ಚಿಲ್ಲದೇ (Varamahalakshmi Festival 2024) ನಿಮ್ಮ ಸೀರೆಯನ್ನು ಡಿಸೈನರ್‌ ದಾವಣಿ-ಲಂಗವಾಗಿ ಪರಿವರ್ತಿಸಬಹುದು. ಅದು ಹೇಗೆ? ಎಂದು ಯೋಚಿಸುತ್ತಿದ್ದೀರಾ! ಖಂಡಿತಾ ಸಾಧ್ಯ! ಅದು ಯಾವುದೇ ಮ್ಯಾಜಿಕ್‌ನಿಂದಲ್ಲ! ಸೀರೆಯ ಡಿಫರೆಂಟ್‌ ಡ್ರೇಪಿಂಗ್‌ನಿಂದ ಇದು ಸಾಧ್ಯ ಎನ್ನುತ್ತಾರೆ ಡ್ರೇಪಿಸ್ಟ್‌ಗಳು.
ಹೌದು, ಈ ಫೆಸ್ಟಿವ್‌ ಸೀಸನ್‌ನಲ್ಲಿ, ಹೆಚ್ಚು ಖರ್ಚಿಲ್ಲದೇ ರೇಷ್ಮೆ ಸೀರೆಯನ್ನೇ ಲಂಗ-ದಾವಣಿಯಂತೆ ಧರಿಸುವ ಸ್ಟೈಲಿಂಗ್‌ ಟ್ರೆಂಡಿಯಾಗಿದೆ. ನೋಡಲು ಆಕರ್ಷಕವಾಗಿ ಕಾಣಿಸುವ ಡಿಸೈನರ್‌ ಲಂಗ-ದಾವಣಿಯಂತೆ ಸೀರೆಯನ್ನು ಉಡುವ ಶೈಲಿ ಇದೀಗ ಡ್ರೇಪಿಂಗ್‌ ಪ್ಯಾಟರ್ನ್‌ನಲ್ಲಿ ಹೆಚ್ಚು ಪಾಪುಲರ್‌ ಆಗಿದೆ. ಹಾಗಾದಲ್ಲಿ ಅದು ಹೇಗೆ? ಇದಕ್ಕಾಗಿ ಪಾಲಿಸಬೇಕಾದ ಡ್ರೇಪಿಂಗ್‌ ರೂಲ್ಸ್ ಏನು ಎಂಬುದರ ಕುರಿತಂತೆ ಸ್ಟೈಲಿಸ್ಟ್‌ಗಳು ಇಲ್ಲಿ ಸಿಂಪಲ್ಲಾಗಿ ವಿವರಿಸಿದ್ದಾರೆ.

Varamahalakshmi Festival 2024

ಸೀರೆಯನ್ನು ದಾವಣಿಯಂತೆ ಡ್ರೇಪ್‌ ಮಾಡುವುದು ಹೇಗೆ?

ಯಾವುದೇ ಸೀರೆ ಬ್ಲೌಸ್‌ ಅಥವಾ ಉದ್ದಲಂಗದ ಲಂಗವನ್ನು ಮೊದಲು ಧರಿಸಬೇಕು. ಮಾಮೂಲಿಯಂತೆ ಸೀರೆಯ ಒಂದು ಅಂಚನ್ನು ದಾವಣಿ ಸಿಕ್ಕಿಸುವಂತೆ ಮುಂಭಾಗದಲ್ಲಿ ಸಿಕ್ಕಿಸಿ, ಹಿಂಭಾಗದಲ್ಲಿ ಎಳೆದು ಒಂದಿಷ್ಟು ನೆರಿಗೆ ಮಾಡಿಕೊಳ್ಳಬೇಕು. ಸೆರಗಿಗೆ ಅಗತ್ಯವಿರುವಷ್ಟು ಸೀರೆಯ ಕೊನೆಯ ಭಾಗವನ್ನು ಉಳಿಸಿಕೊಂಡು, ಇನ್ನುಳಿದ ನೆರಿಗೆಯ ಭಾಗವನ್ನು, ಹಿಂಭಾಗದಲ್ಲಿ ಅಂದರೇ, ಬೆನ್ನಿನ ಹಿಂದೆ ಲಂಗಕ್ಕೆ ಸಿಕ್ಕಿಸಬೇಕು. ನಂತರ ಸೆರಗನ್ನು ಮುಂಭಾಗಕ್ಕೆ ಹಾಕಬೇಕು. ಹಿಂಭಾಗದಲ್ಲಿ ಸೀರೆ ನೀಟಾಗಿ ಸಿಕ್ಕಿಸಬೇಕು. ಜಾರಿ ಹೋಗದಂತೆ ಅದನ್ನು ಪಿನ್‌ ಮಾಡಬೇಕು ಎನ್ನುತ್ತಾರೆ ಸೀರೆ ಡ್ರೇಪರ್‌ ಸಾಕ್ಷಿ. ಇಷ್ಟಾಗಿಯೂ ಈ ಸ್ಟೈಲಿಂಗ್‌ ಮಾಡುವುದು ಗೊತ್ತಾಗದಿದ್ದಲ್ಲಿ, ಯೂ ಟ್ಯೂಬ್‌ನಲ್ಲಿಈ ಶೈಲಿಯ ಡ್ರೇಪಿಂಗ್‌ ಕುರಿತ ಸಾಕಷ್ಟು ಟ್ಯುಟೋರಿಯಲ್‌ ಹಾಗೂ ಕಲಿಸಿಕೊಡುವ ವಿಡಿಯೋಗಳು ಲಭ್ಯವಿದೆ. ಅವುಗಳ ಸಹಾಯ ಪಡೆಯಬಹುದು ಎನ್ನುತ್ತಾರೆ ಅವರು.

ದಾವಣಿ-ಲಂಗ ಮಾಪರ್ಡಿಸಲು ಸೀರೆ ಆಯ್ಕೆ ಹೀಗಿರಲಿ

ಹಬ್ಬದಂದು ಸೀರೆಯನ್ನು ಡಿಸೈನರ್‌ ದಾವಣಿ –ಲಂಗದಂತೆ ಮಾರ್ಪಡಿಸಲು ಸೂಕ್ತವಾದ ಸೀರೆಯ ಆಯ್ಕೆ ಮಾಡಬೇಕು. ಆಗಷ್ಟೇ ಅದು ಉಟ್ಟಾಗ ನೋಡಲು ಆಕರ್ಷಕವಾಗಿ ಕಾಣಿಸುವುದು. ಇದಕ್ಕಾಗಿ ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುತ್ತಾರೆ ಸೀರೆ ಡ್ರೇಪರ್‌ ನೈನಾ.

  • ಹಬ್ಬಕ್ಕೆ ಉಡುವುದಾದಲ್ಲಿ ರೇಷ್ಮೆ ಸೀರೆ ಆಯ್ಕೆ ಮಾಡಬೇಕು.
  • ಗ್ರ್ಯಾಂಡ್‌ ಸೀರೆಯಾದಲ್ಲಿ ನೋಡಲು ಆಕರ್ಷಕವಾಗಿ ಕಾಣಿಸುವುದು.
  • ಉಡುವ ಲಂಗ, ಸೀರೆಗೆ ಕಾಂಟ್ರಾಸ್ಟ್ ಶೇಡ್‌ನದ್ದಾಗಿರಬೇಕು.
  • ಯಾವುದೇ ಹಳೆಯ ಸಾದಾ ಲೆಹೆಂಗಾ ಅಥವಾ ರೇಷ್ಮೆಯ ಲಂಗವಾದರೂ ಸರಿಯೇ ಮ್ಯಾಚ್‌ ಆಗುತ್ತದೆ.
  • ಪ್ರಿಂಟೆಡ್‌ ಲಂಗ ಆವಾಯ್ಡ್ ಮಾಡಿ. ಸಾದಾ ಡಿಸೈನ್‌ ಅಥವಾ ಗ್ರ್ಯಾಂಡ್‌ ಬ್ರೋಕೆಡ್‌ನವನ್ನು ಆಯ್ಕೆ ಮಾಡಿ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Varamahalakshmi Festival Fashion: ಫೆಸ್ಟಿವ್‌ ಸೀಸನ್‌ಗೆ ಮರಳಿದ ಹೆಣ್ಣುಮಕ್ಕಳ ಟ್ರೆಡಿಷನಲ್‌ ಉದ್ದ ಲಂಗ!

Continue Reading

ಫ್ಯಾಷನ್

Prime Fashion week: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸಂಜಯ್‌ ಚೊಲಾರಿಯಾ ಡಿಸೈನರ್‌ ವೇರ್ಸ್ ಅನಾವರಣ

Prime fashion week: ಉದ್ಯಾನನಗರಿಯಲ್ಲಿ ನಡೆದ ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸೆಲೆಬ್ರೆಟಿ ಡಿಸೈನರ್‌ ಸಂಜಯ್‌ ಚೊಲಾರಿಯಾ ಅವರ ಡಿಸೈನರ್‌ವೇರ್‌ಗಳು ಎರಡು ದಿನಗಳ ಕಾಲ ಪ್ರದರ್ಶನಗೊಂಡವು. ಈ ಕುರಿತಂತೆ ಇಲ್ಲಿದೆ ವರದಿ.

VISTARANEWS.COM


on

Prime fashion week
ಚಿತ್ರಗಳು: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸಂಜಯ್‌ ಚೊಲಾರಿಯಾ ಡಿಸೈನರ್‌ವೇರ್ಸ್
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೊಸ ತಲೆಮಾರಿನ ಯುವತಿಯರನ್ನು (Prime fashion week) ಗಮನದಲ್ಲಿಟ್ಟುಕೊಂಡು ಡಿಸೈನ್‌ ಮಾಡಲಾದ ಅತ್ಯಾಕರ್ಷಕವಾದ ಡಿಸೈನರ್‌ವೇರ್‌ಗಳು ರ‍್ಯಾಂಪ್‌ ಮೇಲೆ ಮಾಡೆಲ್‌ಗಳು ಧರಿಸಿ ನಡೆಯುತ್ತಿದ್ದರೆ ನೆರೆದಿದ್ದ ಫ್ಯಾಷನ್‌ ಪ್ರಿಯರು ಕಣ್ಣರಳಿಸಿ ನೋಡುತ್ತಿದ್ದರು. ಹೌದು. ಉದ್ಯಾನನಗರಿಯಲ್ಲಿ ಎರಡು ದಿನಗಳ ಕಾಲ ನಡೆದ ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಸೆಲೆಬ್ರೆಟಿ ಡಿಸೈನರ್‌ ಸಂಜಯ್‌ ಚೊಲಾರಿಯಾ ವಿನ್ಯಾಸಗೊಳಿಸಿದ ನಾನಾ ಬಗೆಯ ಡಿಸೈನರ್‌ವೇರ್‌ಗಳು ಯಶಸ್ವಿಯಾಗಿ ಪ್ರದರ್ಶನಗೊಂಡವು.

Prime fashion week
Prime fashion week

ಜೆನ್‌ ಜಿ ಜನರೇಷನ್‌ ಡಿಸೈನರ್‌ವೇರ್ಸ್

ಇಂದಿನ ಜನರೇಷನ್‌ನ ಯುವತಿಯರನ್ನು ಹಾಗೂ ಮಹಿಳೆಯರನ್ನು ಮನದಲ್ಲಿರಿಸಿಕೊಂಡು ಈ ಡಿಸೈನರ್‌ವೇರ್‌ಗಳನ್ನು ʼಇವರಾʼ ಕಾನ್ಸೆಪ್ಟ್ ಹೆಸರಿನಲ್ಲಿ ಮೊದಲ ದಿನದ ರ‍್ಯಾಂಪ್‌ ಶೋಗಾಗಿ ಡಿಸೈನ್‌ ಮಾಡಲಾಗಿದೆ. ವಿಶೇಷವೆಂದರೆ ಈ ಉಡುಗೆಗಳು ಮಹಿಳೆಯ ಆತ್ಮವಿಶ್ವಾಸ ಹಾಗೂ ಬಲದ ಸಂಕೇತವಾಗಿದೆ ಎಂದು ಡಿಸೈನರ್‌ ಸಂಜಯ್‌ ಚೊಲಾರಿಯಾ ಹೇಳಿದರು.

ಡಿಸೈನರ್‌ವೇರ್‌ಗಳ ಯಶಸ್ವಿ ಪ್ರದರ್ಶನ

ಎರಡನೇ ದಿನದ ರ‍್ಯಾಂಪ್‌ ಶೋನಲ್ಲಿ ಜಪಾನ್‌ ಟೆಂಪಲ್‌ ಹೆಸರನ್ನು ಬಿಂಬಿಸುವ ʼಮಿಯಾನಾʼ ಕಾನ್ಸೆಪ್ಟ್‌ನಲ್ಲಿ ಡಿಸೈನರ್‌ವೇರ್‌ಗಳನ್ನು ಸಿದ್ಧಪಡಿಸಲಾಗಿದೆ. ಈ ಡಿಸೈನರ್‌ವೇರ್‌ಗಳು ಕೂಡ ಮಹಿಳೆಯರ ಶಕ್ತಿ, ಸ್ಥೈರ್ಯ ಹಾಗೂ ಬಲದ ದ್ಯೋತಕವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸಂಜಯ್‌ ಹೇಳಿದ್ದಾರೆ. ಒಬ್ಬ ಡಿಸೈನರ್‌ ಫ್ಯಾಷನ್‌ ವೀಕ್‌ನಲ್ಲಿ ಎರಡೂ ದಿನವೂ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸುವುದು ಕಷ್ಟ. ಅದನ್ನು ಯಶಸ್ವಿಯಾಗಿ ಪೂರೈಸಿದ್ದೇನೆ. ಇದು ನನಗೆ ಸಂತಸ ತಂದಿದೆ ಎಂದು ಅವರು ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.

Prime fashion week
Prime fashion week

ನಟಿ ಶುಭಾ ರಕ್ಷಾ & ಪ್ರಿಯಾಂಕಾ ಅರೋರಾ ಶೋ ಸ್ಟಾಪರ್‌

ಫ್ಯಾಷನ್‌ ವೀಕ್‌ನ ಮೊದಲ ದಿನ ನಟಿ ಹಾಗೂ ಮಾಡೆಲ್‌ ಶುಭಾ ರಕ್ಷಾ ಗೋಲ್ಡನ್‌ ಗೌನ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿದರು. ಈ ಸಂದರ್ಭದಲ್ಲಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಂಜಯ್‌ ಚೊಲಾರಿಯಾ ಡಿಸೈನರ್‌ವೇರ್‌ಗಳು ನವೋಲ್ಲಾಸ ಹೆಚ್ಚಿಸುತ್ತವೆ ಎಂದು ಹೇಳಿದರು. ಎರಡನೇ ದಿನ ರ‍್ಯಾಂಪ್‌ ಶೋನಲ್ಲಿ ಮಾಡೆಲ್‌ ಪ್ರಿಯಾಂಕಾ ಅರೋರಾ ತ್ರೀ ಪೀಸ್‌ ಗ್ರ್ಯಾಂಡ್‌ ಡಿಸೈನರ್‌ವೇರ್‌ನಲ್ಲಿ ವಾಕ್‌ ಮಾಡಿದರು. ಇವರುಗಳೊಂದಿಗೆ ಡಿಸೈನರ್‌ಗಳಾದ ಸಂಜಯ್‌ ಚೊಲಾರಿಯಾ ಮತ್ತು ಡಿಸೈನರ್‌ ಶ್ಯಾಮಿ ಚೊಲಾರಿಯಾ ಕೂಡ ವಾಕ್‌ ಮಾಡಿದರು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Varamahalakshmi Festival Fashion: ಫೆಸ್ಟಿವ್‌ ಸೀಸನ್‌ಗೆ ಮರಳಿದ ಹೆಣ್ಣುಮಕ್ಕಳ ಟ್ರೆಡಿಷನಲ್‌ ಉದ್ದ ಲಂಗ!

Varamahalakshmi Festival Fashion: ವರಮಹಾಲಕ್ಷ್ಮಿ ಹಬ್ಬದ ಹೆಣ್ಣು ಮಕ್ಕಳ ಟ್ರೆಡಿಷನಲ್‌ ಫ್ಯಾಷನ್‌ಗೆ ಇದೀಗ ಸಾಂಪ್ರದಾಯಿಕ ಶೈಲಿಯ ಉದ್ದ ಲಂಗ ಹೊಸ ವಿನ್ಯಾಸದೊಂದಿಗೆ ಮರಳಿದೆ. ದೇಸಿ ಲುಕ್‌ ನೀಡುವ ಈ ಎಥ್ನಿಕ್‌ ಫ್ಯಾಷನ್‌ವೇರ್‌ನಲ್ಲಿ ಯಾವ್ಯಾವ ವಿನ್ಯಾಸದವು ಟ್ರೆಂಡಿಯಾಗಿವೆ. ಆಯ್ಕೆ ಹೇಗೆ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Varamahalakshmi Festival Fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಣ್ಣು ಮಕ್ಕಳಿಗೆ ಟ್ರೆಡಿಷನಲ್‌ ಲುಕ್‌ ನೀಡುವ (Varamahalakshmi Festival Fashion) ಉದ್ದ ಲಂಗದ ಫ್ಯಾಷನ್‌ ಈ ಫೆಸ್ಟಿವ್‌ ಸೀಸನ್‌ನಲ್ಲಿ ಹೊಸ ವಿನ್ಯಾಸಗಳೊಂದಿಗೆ ಮರಳಿದೆ. ಹೌದು. ವರಮಹಾಲಕ್ಷ್ಮಿ ಹಬ್ಬ ಹೆಣ್ಣು ಮಕ್ಕಳ ಹಬ್ಬ. ಆ ದಿನದಂದು ಮಕ್ಕಳು ಹಾಗೂ ಮಹಿಳೆಯರೆಲ್ಲರೂ ಸಾಂಪ್ರದಾಯಿಕವಾಗಿ ಸಿಂಗರಿಸಿಕೊಂಡು ಹಬ್ಬ ಆಚರಿಸುವುದು ಸಂಪ್ರದಾಯ. ಇದಕ್ಕೆ ಪೂರಕ ಎಂಬಂತೆ, ನಾನಾ ಬಗೆಯ ದೇಸಿ ಲುಕ್ ನೀಡುವ ಉಡುಗೆ-ತೊಡುಗೆಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿದ್ದು, ಅವುಗಳಲ್ಲಿ ಇದೀಗ ಹೆಣ್ಣು ಮಕ್ಕಳನ್ನು ಅಂದವಾಗಿ ಬಿಂಬಿಸಬಲ್ಲ, ನಮ್ಮ ಸಂಸ್ಕೃತಿಗೆ ಸಾಥ್‌ ನೀಡಬಲ್ಲ ಟ್ರೆಡಿಷನಲ್‌ ಲುಕ್‌ ನೀಡುವಂತಹ ಉದ್ದ –ಲಂಗದ ಡ್ರೆಸ್‌ಗಳು ಮರಳಿವೆ.

Varamahalakshmi Festival Fashion

ಹೊಸ ಲುಕ್‌ನೊಂದಿಗೆ ಉದ್ದ-ಲಂಗ ರೀ ಎಂಟ್ರಿ

ಉದ್ದ ಲಂಗ ಧರಿಸುವುದು ನಮ್ಮ ಸಂಸ್ಕೃತಿಯಲ್ಲಿ ಹೊಸತೇನಲ್ಲ! ಆದರೆ, ಇತ್ತೀಚಿನ ಹೆಣ್ಣು ಮಕ್ಕಳು ವೆಸ್ಟರ್ನ್‌ ಉಡುಗೆ ತೊಡುಗೆಗಳನ್ನು ಹೆಚ್ಚಾಗಿ ಪ್ರಿಫರ್‌ ಮಾಡುವುದರಿಂದ ಈ ಟ್ರೆಡಿಷನಲ್‌ ಉದ್ದ-ಲಂಗದ ಫ್ಯಾಷನ್‌ ಸೈಡಿಗೆ ಸರಿದಿತ್ತು. ಆದರೆ, ಕೆಲವು ಡಿಸೈನರ್‌ಗಳು ಇವಕ್ಕೆ ಕೊಂಚ ಗ್ರ್ಯಾಂಡ್‌ ಲುಕ್‌ ಹಾಗೂ ಆಕರ್ಷಕ ವಿನ್ಯಾಸವನ್ನು ಸೇರಿಸಿ ಅನಾವರಣಗೊಳಿಸಲಾರಂಭಿಸಿದರು. ಪರಿಣಾಮ, ಹೆಣ್ಣು ಮಕ್ಕಳನ್ನು ಇವು ಆಕರ್ಷಿಸತೊಡಗಿದವು. ಹೈಲೈಟಾಗುವ ಕಲರ್‌ ಕಾಂಬಿನೇಷನ್‌ ಹಾಗೂ ಮನ ಸೆಳೆಯುವ ವಿನ್ಯಾಸ, ಹಬ್ಬಗಳಲ್ಲಿ ಇವನ್ನು ಧರಿಸಲು ಆರಂಭಿಸುವಂತೆ ಮನಪರಿವರ್ತಿಸಿದವು. ಪರಿಣಾಮ ಲೆಕ್ಕವಿಲ್ಲದಷ್ಟು ಬಗೆಯ ವಿನ್ಯಾಸದ ಉದ್ದ-ಲಂಗಗಳು ಮಾರುಕಟ್ಟೆಯನ್ನು ಪ್ರವೇಶಿಸಿದವು. ಹಾಗಾಗಿ ಫೆಸ್ಟಿವ್‌ ಸೀಸನ್‌ನಲ್ಲಿ ಇವುಗಳ ರೀ ಎಂಟ್ರಿ ಟ್ರೆಂಡಿಯಾಗಲು ಕಾರಣವಾಯಿತು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಾನ್‌ ಹಾಗೂ ರಚ್ಚು.

ಟ್ರೆಂಡ್‌ನಲ್ಲಿರುವ ಉದ್ದ ಲಂಗದ ವಿನ್ಯಾಸಗಳು

ಕ್ವೀನ್‌ ಡಿಸೈನ್‌, ಕಾಂಟ್ರಾಸ್ಟ್ ಉದ್ದ-ಲಂಗ, ಬಿಗ್‌ ಬಾರ್ಡರ್‌ ಉದ್ದ-ಲಂಗ, ಫ್ಲೋರಲ್‌ ಸಿಲ್ಕ್‌, ರೇಷ್ಮೆಯ ಕಾಂಟ್ರಾಸ್ಟ್ ಶೇಡ್‌ ಉದ್ದ-ಲಂಗ, ಕಮರ್‌ಬಾಂದ್ ಬ್ಲೌಸ್‌ನವು, ಪಫ್‌, ಫೆದರ್‌ ಸ್ಲೀವ್‌ನ ಉದ್ದಲಂಗ, ಗೌನ್‌ ಶೈಲಿಯ ಉದ್ದ-ಲಂಗಗಳು ಈ ಫೆಸ್ಟಿವ್‌ ಸೀಸನ್‌ನ ಟ್ರೆಂಡ್‌ ಲಿಸ್ಟ್‌ನಲ್ಲಿ ಸೇರಿವೆ.

Varamahalakshmi Festival Fashion

ಆಕರ್ಷಕವಾಗಿರುವ ಉದ್ದ ಲಂಗ ಆಯ್ಕೆ ಮಾಡುವುದು ಹೇಗೆ?

  • ಟ್ರೆಂಡಿಯಾಗಿರುವ ಕಾಂಟ್ರಸ್ಟ್ ಶೇಡ್‌ನವು ಮಕ್ಕಳಿಗೆ ಆಕರ್ಷಕವಾಗಿ ಕಾಣಿಸುತ್ತವೆ.
  • ಟ್ರೆಡಿಷನಲ್‌ ಸ್ಲೀವ್‌ ಹಾಗೂ ಬಾರ್ಡರ್ ಉದ್ದ-ಲಂಗ ಸಾಂಪ್ರದಾಯಿಕ ಲುಕ್‌ ನೀಡುತ್ತವೆ.
  • ಪಾದಗಳಿಗಿಂತ ಕೆಳಗಿರುವ ಲಂಗವನ್ನು ಆಯ್ಕೆ ಮಾಡಬಾರದು.
  • ಬ್ಲೌಸ್‌ ಮಕ್ಕಳಿಗೆ ಫಿಟ್‌ ಆಗಿ ಕಾಣಿಸಬೇಕು. ದೊಗಲೆಯಾಗಿರಬಾರದು.
  • ಬ್ರೋಕೆಡ್‌ ಪ್ರಿಂಟ್‌ನವು ಹಬ್ಬಕ್ಕೆ ಅಂದವಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Varamahalakshmi Festival 2024: ಹಬ್ಬಕ್ಕೆ ಮಾರುಕಟ್ಟೆ ಪ್ರವೇಶಿಸಿವೆ ರೆಡಿಮೇಡ್‌ ವರಮಹಾಲಕ್ಷ್ಮಿ ಮೂರ್ತಿಗಳು!

Continue Reading
Advertisement
Bengaluru Roads
ಕರ್ನಾಟಕ9 mins ago

Bengaluru Roads: ರಸ್ತೆ ಗುಂಡಿ ಮುಚ್ಚುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸಚಿವರಿಂದಲೇ ಮನವಿ!

Wildlife
ಪರಿಸರ10 mins ago

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

Karnataka Rain
ಮಳೆ17 mins ago

Karnataka Rain: ಗಂಗಾವತಿಯಲ್ಲಿ ಭಾರಿ ಮಳೆಗೆ ಮನೆಗಳಿಗೆ ನುಗ್ಗಿದ ನೀರು; ಭತ್ತದ ಗದ್ದೆಗಳಿಗೆ ಹಾನಿ

Gold Rate
ಪ್ರಮುಖ ಸುದ್ದಿ19 mins ago

Gold Rate : ಬೆಲೆ ಏರಿಕೆ ಪರಿಣಾಮ; ಏಪ್ರಿಲ್-ಜುಲೈನಲ್ಲಿ ಚಿನ್ನದ ಆಮದು ಶೇ.4.23ರಷ್ಟು ಇಳಿಕೆ

Viral Video
Latest24 mins ago

‌Richard Lugner: ಇತ್ತೀಚೆಗಷ್ಟೆ 6ನೇ ಮದುವೆಯಾಗಿದ್ದ 91 ವರ್ಷದ ಬಿಲಿಯಾಧೀಶ ಇನ್ನಿಲ್ಲ!

Viral News
Latest31 mins ago

Viral News: ಈತ 610 ಕೆಜಿ ಇದ್ದ, ಈಗ 63 ಕೆಜಿಗೆ ಇಳಿದಿದ್ದಾನೆ! 30 ವೈದ್ಯರ ತಂಡದ ಕಾರ್ಯಾಚರಣೆ!

Sexual Abuse
Latest39 mins ago

Sexual Abuse: ಲೈಂಗಿಕ ಕಿರುಕುಳ ನೀಡಿದವನನ್ನು ನಡು ರಸ್ತೆಯಲ್ಲಿ ಥಳಿಸಿದ ಅಕ್ಕತಂಗಿ; ವಿಡಿಯೊ ವೈರಲ್

Paris Paralympics
ಪ್ರಮುಖ ಸುದ್ದಿ56 mins ago

Paris Paralympics : ಪ್ಯಾರಾಲಿಂಪಿಕ್ಸ್​​ನಲ್ಲಿ 12 ಕ್ರೀಡೆಗಳಲ್ಲಿ ಭಾಗವಹಿಸಲಿದೆ ಭಾರತ

karnataka Weather Forecast
ಮಳೆ1 hour ago

Karnataka Weather : ಇಂದು ಧ್ವಜಾರೋಹಣ ಆಯ್ತು, ನಾಳೆ ವರಮಹಾಲಕ್ಷ್ಮಿ ಹಬ್ಬಕ್ಕೂ ಮಳೆ ಅಡ್ಡಿ; ಬೆಂಗಳೂರು ಸೇರಿ ಕರಾವಳಿ, ಮಲೆನಾಡಿಗೆ ಅಲರ್ಟ್‌

Electric Shock
ಕರ್ನಾಟಕ2 hours ago

Electric Shock: ಸ್ವಾತಂತ್ರ್ಯ ದಿನಾಚರಣೆ ಮುಗಿಸಿ ಮನೆಗೆ ಹೋಗುವಾಗ ವಿದ್ಯುತ್ ತಗುಲಿ ವಿದ್ಯಾರ್ಥಿ ಸಾವು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು1 week ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ1 week ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌