RIL Q4 Results : ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಜನವರಿ-ಮಾರ್ಚ್‌ನಲ್ಲಿ 19,299 ಕೋಟಿ ರೂ. ನಿವ್ವಳ ಲಾಭ, 19% ಏರಿಕೆ - Vistara News

ಪ್ರಮುಖ ಸುದ್ದಿ

RIL Q4 Results : ರಿಲಯನ್ಸ್‌ ಇಂಡಸ್ಟ್ರೀಸ್‌ಗೆ ಜನವರಿ-ಮಾರ್ಚ್‌ನಲ್ಲಿ 19,299 ಕೋಟಿ ರೂ. ನಿವ್ವಳ ಲಾಭ, 19% ಏರಿಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 19,299 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಡಿಜಿಟಲ್‌, ರಿಟೇಲ್‌ ಸೇವೆ, ತೈಲ, ಅನಿಲ ಉದ್ದಿಮೆಯಲ್ಲಿ (RIL Q4 Results) ಲಾಭ ಗಳಿಸಿದೆ.

VISTARANEWS.COM


on

mukesh ambani
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 19,299 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಟ್ಟು ಆದಾಯ 2.16 ಲಕ್ಷ ಕೋಟಿ ರೂ.ಗೆ (RIL Q4 Results) ಏರಿಕೆಯಾಗಿದೆ. ರಿಲಯನ್ಸ್‌ ಲಾಭದಲ್ಲಿ 19% ವೃದ್ಧಿಸಿದೆ.

ಡಿಜಿಟಲ್‌ ಸೇವೆ, ರಿಟೇಲ್‌ ಬಿಸಿನೆಸ್‌, ತೈಲ ಮತ್ತು ಅನಿಲ ಸೇರಿದಂತೆ ಇಂಧನ ವಲಯದಲ್ಲಿ ಈ ತ್ರೈಮಾಸಿಕದಲ್ಲಿ ಉತ್ತಮ ಆದಾಯ ಮತ್ತು ಲಾಭವನ್ನು ರಿಲಯನ್ಸ್‌ ಗಳಿಸಿದೆ. ಹಣಕಾಸು ವೆಚ್ಚ 5,819 ಕೋಟಿ ರೂ.ಗೆ ಏರಿಕೆಯಾಗಿತ್ತು. ತೆರಿಗೆ ವೆಚ್ಚವಾಗಿ 2,787 ಕೋಟಿ ರೂ, ಬಂಡವಾಳ ವೆಚ್ಚವಾಗಿ 44,413 ಕೋಟಿ ರೂ.ಗಳನ್ನು ಕಂಪನಿ ವ್ಯಯಿಸಿತ್ತು.

2022-23ರಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಒಟ್ಟು ಆಧಾಯ 23% ಏರಿದ್ದು, 9.76 ಲಕ್ಷ ಕೋಟಿ ರೂ.ಗೆ ಏರಿದೆ. ರಿಲಯನ್ಸ್‌ನ ಸಾಲ ಮಾರ್ಚ್‌ 31ರ ವೇಳೆಗೆ 1.10 ಲಕ್ಷ ಕೋಟಿ ರೂ.ಗಳಾಗಿತ್ತು. ನಗದು ಮತ್ತು ತತ್ಸಮಾನ ಆಸ್ತಿ 3.15 ಲಕ್ಷ ಕೋಟಿ ರೂ.ಗಳಾಗಿತ್ತು.

ಜಿಯೋಗೆ 4,716 ಕೋಟಿ ರೂ. ಲಾಭ:

ರಿಲಯನ್ಸ್‌ ಇಂಡಸ್ಟ್ರೀಸ್‌ನ ಭಾಗವಾಗಿರುವ ರಿಲಯನ್ಸ್‌ ಜಿಯೊ ಕಳೆದ ಜನವರಿ-ಮಾರ್ಚ್‌ ಅವಧಿಯಲ್ಲಿ 4,716 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. (Reliance Jio Q4 Results) ಕಳೆದ ವರ್ಷ ಇದೇ ಅವಧಿಯಲ್ಲಿ ಜಿಯೊ, 4,173 ಕೋಟಿ ರೂ. ಲಾಭ ಗಳಿಸಿತ್ತು. ಜಿಯೊ 23,394 ಕೋಟಿ ರೂ. ತ್ರೈಮಾಸಿಕ ಆದಾಯ ಸಂಪಾದಿಸಿದೆ.

ಲೈಸೆನ್ಸ್‌ ಶುಲ್ಕಗಳು ಮತ್ತು ಸ್ಪೆಕ್ಟ್ರಮ್‌ ಶುಲ್ಕದ ರೂಪದಲ್ಲಿ ಜನವರಿ-ಮಾರ್ಚ್‌ ಅವಧಿಯಲ್ಲಿ 2,155 ಕೋಟಿ ರೂ.ಗಳನ್ನು ರಿಲಯನ್ಸ್‌ ಜಿಯೊ ವ್ಯಯಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,504 ಕೋಟಿ ರೂ. ವ್ಯಯಿಸಿತ್ತು. ಒಟ್ಟಾರೆ ಖರ್ಚು 17,172 ಕೋಟಿ ರೂ.ಗೆ ಏರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,353 ಕೋಟಿ ರೂ. ಒಟ್ಟಾರೆ ಖರ್ಚಾಗಿತ್ತು.

ಬಿಲಿಯನೇರ್‌ ಉದ್ಯಮಿ ಮುಕೇಶ್‌ ಅಂಬಾನಿಯವರ ರಿಲಯನ್ಸ್‌ ಜಿಯೊ, (Reliance Jio) 5ಜಿ ನೆಟ್‌ ವರ್ಕ್‌ ವಿಸ್ತರಿಸುವ ಸಲುವಾಗಿ 1 ಲಕ್ಷ ಟೆಲಿಕಾಂ ಗೋಪುರಗಳನ್ನು ಅಳವಡಿಸಿದೆ. ಇದರ ಸಮೀಪದ ಪ್ರತಿಸ್ಪರ್ಧಿಗೆ ಹೋಲಿಸಿದರೆ ಇದು 5 ಪಟ್ಟು ಹೆಚ್ಚು. ದೂರ ಸಂಪರ್ಕ ಇಲಾಖೆಯ ಇತ್ತೀಚಿನ ಅಂಕಿ ಅಂಶಗಳ ( ಮಾರ್ಚ್‌ 23) ಪ್ರಕಾರ, ರಿಲಯನ್ಸ್‌ ಜಿಯೊ 99,897 ಬಿಟಿಎಸ್‌ (base transceiver station) ಅನ್ನು ಅಳವಡಿಸಿದೆ. ಭಾರ್ತಿ ಏರ್‌ಟೆಲ್‌ 22,219 ಬಿಟಿಎಸ್‌ಗಳನ್ನು ಅಳವಡಿಸಿದೆ. 700 MHz ಮತ್ತು 3,500 MHz ತರಂಗಾಂತರಗಳ ಶ್ರೇಣಿಗಳಲ್ಲಿ ಬಿಟಿಎಸ್‌ಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಬೇಸ್‌ ಸ್ಟೇಶನ್‌ನಲ್ಲಿ ಜಿಯೊದ 3 ಸೆಲ್‌ ಸೈಟ್ಸ್‌ ಇದ್ದರೆ ಏರ್‌ಟೆಲ್‌ನ 2 ಸೆಲ್‌ ಇರುತ್ತದೆ ಎಂದು ದೂರಸಂಪರ್ಕ ಇಲಾಖೆಯ ವರದಿ ತಿಳಿಸಿದೆ. ಹೆಚ್ಚು ಗೋಪುರಗಳು ಮತ್ತು ಸೆಲ್‌ ಸೈಟ್ಸ್‌ ಇರುವುದರಿಂದ ಹೆಚ್ಚು ವೇಗವಾಗಿ 5ಜಿ ಸೇವೆ ನೀಡಲು ಸಾಧ್ಯ. ಓಕ್ಲಾದ ವರದಿಯ ಪ್ರಕಾರ ಜಿಯೊದ ಸ್ಪೀಡ್‌ 506 Mbps (megabytes per second) ಆಗಿದ್ದರೆ, ಏರ್‌ಟೆಲ್‌ನ ಸ್ಪೀಡ್‌ 268 Mbps ಆಗಿದೆ.

ಭಾರತದಲ್ಲಿ 50 ಕೋಟಿಗೂ ಹೆಚ್ಚು ಇಂಟರ್‌ನೆಟ್‌ ಬಳಕೆದಾರರಿದ್ದು, ಚೀನಾದ ಬಳಿಕ ಅತಿ ಹೆಚ್ಚು ಬಳಕೆದಾರರು ಇಲ್ಲಿದ್ದಾರೆ. 2022ರ ಅಕ್ಟೋಬರ್‌ನಲ್ಲಿ 5ಜಿ ಜಾರಿಯಾಗಿದೆ. ದೇಶದ 500 ನಗರಗಳಲ್ಲಿ ಜಿಯೊ ಮತ್ತು ಏರ್‌ಟೆಲ್‌ನ 5ಜಿ ಈಗ ಲಭ್ಯವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Covid 19: ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ ಎಂದು ಸಿಂಗಾಪುರ ಆರೋಗ್ಯ ಸಚಿವ ತಿಳಿಸಿದ್ದಾರೆ.

VISTARANEWS.COM


on

Covid 19
Koo

ಸಿಂಗಾಪುರ: ಭಾರತ ಸೇರಿ ಜಗತ್ತನ್ನೇ ಪಿಡುಗಿನಂತೆ ಕಾಡಿದ ಕೊರೊನಾ ಸೋಂಕು (Covid 19) ಈಗ ಸಿಂಗಾಪುರದಲ್ಲಿ ಹೊಸದೊಂದು ಅಲೆ ಸೃಷ್ಟಿಸಿದೆ. ಸಿಂಗಾಪುರದಲ್ಲಿ (Singapore) ಕಳೆದ ಒಂದು ವಾರದಲ್ಲಿಯೇ (ಮೇ 5-11) 25,900 ಪ್ರಕರಣಗಳು ದಾಖಲಾಗಿದ್ದು, ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವಂತೆ ಆರೋಗ್ಯ ಸಚಿವ ಓಂಗ್‌ ಯೆ ಕುಂಗ್‌ (Ong Ye Kung) ಅವರು ಖಡಕ್‌ ಆದೇಶ ಹೊರಡಿಸಿದ್ದಾರೆ. ಸಿಂಗಾಪುರದಲ್ಲಿ ಏಕಾಏಕಿ ಮಹಾಮಾರಿಯ ಹೊಸ ಅಲೆ ಸೃಷ್ಟಿಯಾಗಿರುವುದರಿಂದ ಭಾರತಕ್ಕೂ ಭೀತಿ ಎದುರಾಗಿದೆ.

“ಸಿಂಗಾಪುರದಲ್ಲಿ ಕೊರೊನಾ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿವೆ. ಕೊರೊನಾ ಹೊಸ ಅಲೆಯ ಆರಂಭಿಕ ಹಂತದಲ್ಲಿ ನಾವಿದ್ದೇವೆ. ಎರಡರಿಂದ ನಾಲ್ಕು ವಾರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದೆ ಎಂಬುದಾಗಿ ವರದಿಗಳು ತಿಳಿಸಿವೆ. ಜೂನ್‌ ಅಂತ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವ ಜತೆಗೆ ಅಂತರ ಕಾಪಾಡಿಕೊಳ್ಳುವ ಮೂಲಕ ಸೋಂಕನ್ನು ನಿಗ್ರಹಿಸಲು ಸೂಚಿಸಲಾಗಿದೆ” ಎಂದು ಓಂಗ್‌ ಯೆ ಕುಂಗ್‌ ತಿಳಿಸಿದ್ದಾರೆ.

ಮೇ 5ಕ್ಕಿಂತ ಮೊದಲಿನ ಒಂದು ವಾರದಲ್ಲಿ ಸಿಂಗಾಪುರದಲ್ಲಿ 13,700 ಕೇಸ್‌ಗಳು ದಾಖಲಾಗಿದ್ದವು. ಆದರೆ, ಒಂದೇ ವಾರದ ಅಂತರದಲ್ಲಿ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೆ ಏರಿಕೆಯಾಗಿದೆ. ಒಂದು ವಾರದಲ್ಲಿ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 181ರಿಂದ 250ಕ್ಕೆ ಏರಿಕೆಯಾಗಿದೆ. ಪ್ರತಿ ದಿನ ಸರಾಸರಿ ಮೂವರು ಸೋಂಕಿತರು ಐಸಿಯು ಸೇರುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೊರೊನಾ ಸೋಂಕಿತರ ಸಂಖ್ಯೆ ದುಪ್ಪಟ್ಟಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಹಾಸಿಗೆ ಸಾಮರ್ಥ್ಯ ಸೇರಿ ಹಲವು ವೈದ್ಯಕೀಯ ಸೌಕರ್ಯಗಳನ್ನು ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಭಾರತಕ್ಕೂ ಇದೆ ಹೊಸ ಅಲೆಯ ಭೀತಿ

ಸಿಂಗಾಪುರದಿಂದ ಭಾರತಕ್ಕೆ ಬರುವವರ ಸಂಖ್ಯೆ ಜಾಸ್ತಿ ಇರುವುದರಿಂದ ಭಾರತಕ್ಕೂ ಹೊಸ ಸೋಂಕಿನ ಅಲೆಯ ಭೀತಿ ಇದ್ದೇ ಇದೆ. ಹಾಗೊಂದು ವೇಳೆ, ಸಿಂಗಾಪುರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟ ಜಾಸ್ತಿಯಾದರೆ ಭಾರತಕ್ಕೆ ಬರುವವರ ಮೇಲೆ ಹೆಚ್ಚಿನ ನಿಗಾ ಇರಿಸುವುದು ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮದ ಕುರಿತು ವರದಿಗಳು ಬಹಿರಂಗವಾದ ಬೆನ್ನಲ್ಲೇ ಹೊಸ ತಳಿಯ ಸೋಂಕು ಹರಡುವ ಭೀತಿಯು ಜನರನ್ನು ಆತಂಕಕ್ಕೀಡು ಮಾಡಿದೆ.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Continue Reading

ಪ್ರಮುಖ ಸುದ್ದಿ

SSLC 2024 Exam 2: ಜೂ. 14ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ-2; ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

SSLC 2024 Exam 2: ಎಸ್ಎಸ್ಎಲ್‌ಸಿ ಪರೀಕ್ಷೆ-2, ಜೂನ್‌ 14ರಿಂದ 22 ರವರೆಗೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸುತ್ತೋಲೆ ಬಿಡುಗಡೆ ಮಾಡಿದೆ.

VISTARANEWS.COM


on

SSLC 2024 Exam 2
Koo

ಬೆಂಗಳೂರು: 2024ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ-2ರ (SSLC 2024 Exam 2) ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಬಿಡುಗಡೆ ಮಾಡಿದ್ದು, ಜೂನ್‌ 14 ರಿಂದ 22ರವರೆಗೆ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಅಧ್ಯಕ್ಷೆ ಎನ್‌.ಮಂಜುಶ್ರೀ ಸುತ್ತೋಲೆ ಹೊರಡಿಸಿದ್ದಾರೆ.

2024ರ ಎಸ್ಎಸ್ಎಲ್‌ಸಿ ಪರೀಕ್ಷೆ-2 ಅನ್ನು ಈ ಹಿಂದೆ ಜೂನ್‌ 7ರಿಂದ 14ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಸರ್ಕಾರದ ಸೂಚನೆ ಅನ್ವಯ ಪರೀಕ್ಷೆ-2ನ್ನು ಮುಂದೂಡಿ, ಜೂನ್‌ 14ರಿಂದ 22 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ.

ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಎಸ್ಎಸ್ಎಲ್‌ಸಿ ಪರೀಕ್ಷೆ-2ರ ವೇಳಾಪಟ್ಟಿಯನ್ನು ಮಂಡಲಿಯ ಜಾಲತಾಣ www.kseab.karnataka.gov.in ದಿಂದ ಪಡೆದುಕೊಂಡು ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾ ಉಪನಿರ್ದೇಶಕರು(ಆಡಳಿತ) ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ-2ರ ಪರಿಷ್ಕೃತ ವೇಳಾಪಟ್ಟಿ

  • 14-06-2024 ಶುಕ್ರವಾರ: ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಇಂಗ್ಲಿಷ್(ಎನ್‌ಸಿಇಆರ್‌ಟಿ), ಸಂಸ್ಕೃತ.
  • 15-06-2024 ಶನಿವಾರ: ತೃತೀಯ ಭಾಷೆ – ಹಿಂದಿ (ಎನ್‌ಸಿಇಆರ್‌ಟಿ), ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
  • 18-06-2024 ಮಂಗಳವಾರ: ಕೋರ್ ಸಬ್ಜೆಕ್ಟ್‌ -ಗಣಿತ, ಸಮಾಜ ಶಾಸ್ತ್ರ
  • 19-06-2024 ಬುಧವಾರ: ಅರ್ಥ ಶಾಸ್ತ್ರ
  • 20-06-2024 ಗುರುವಾರ: ಕೋರ್ ಸಬ್ಜೆಕ್ಟ್- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಸಂಗೀತ.
  • 21-06-2024 ಶುಕ್ರವಾರ– ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
  • 22-06-2024 ಶನಿವಾರ – ಕೋರ್ ಸಬ್ಜೆಕ್ಟ್- ಸಮಾಜ ವಿಜ್ಞಾನ

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಗ್ರೇಸ್‌ ಮಾರ್ಕ್ಸ್‌ ಅಲ್ಲ, ಗುಣಮಟ್ಟದ ಶಿಕ್ಷಣವೇ ಫಲಿತಾಂಶಕ್ಕೆ ದಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಫೇಲ್‌ ಆದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿಕೆ

SSLC Exam 2024

ಬೆಂಗಳೂರು: 2024ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರಲ್ಲಿ (SSLC 2024 Exam 2) ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ಪರಿಹಾರ ಬೋಧನೆ ತರಗತಿ ಮುಂದೂಡಿ ರಾಜ್ಯ ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾದ ಸೂಚನೆಗಳ ಅನ್ವಯ ಮುಂದೂಡಲಾಗಿದ್ದು, ಮೇ 29ರಿಂದ ಜೂ.6ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿಗಳು ನಡೆಯಲಿವೆ.

ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದ ಮೇರೆಗೆ ನಿರ್ದೇಶಕರು (ಪ್ರೌಢ ಶಿಕ್ಷಣ) ಆದೇಶ ಹೊರಡಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ – 1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಈ ಹಿಂದೆ ಮೇ 15ರಿಂದ ಜೂನ್‌ 5ರವರೆಗೆ ವಿಶೇಷ ಪರಿಹಾರ ಬೋಧನೆ ತರಗತಿ ನಡೆಸಲು ಸುತ್ತೋಲೆ ಹೊರಡಿಸಲಾಗಿತ್ತು. ಆದರೆ, ಈಗ ಸರ್ಕಾರದ ಸೂಚನೆ ಮೇರೆಗೆ ವಿಶೇಷ ತರಗತಿಗಳನ್ನು ಮೇ 29ರಿಂದ ಜೂನ್‌ 13ವರೆಗೆ ನಡೆಸಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading

ಕರ್ನಾಟಕ

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Veerabhadreswara Fair: ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

VISTARANEWS.COM


on

Two killed after being hit by the wheel of a chariot while performing at Veerabhadreswara fair
Koo

ಗದಗ: ಗದಗ ಜಿಲ್ಲೆ ರೋಣ ಪಟ್ಟಣದ ವೀರಭದ್ರೇಶ್ವರ ಜಾತ್ರೆಯಲ್ಲಿ (Veerabhadreswara Fair) ರಥದ ಚಕ್ರದಡಿ‌ ಸಿಲುಕಿ ಇಬ್ಬರು ಮೃತಪಟ್ಟಿದ್ದಾರೆ. ರಥ ಎಳೆಯುವ ವೇಳೆ ಈ ಅವಘಡ ನಡೆದಿದೆ.

ಪ್ರತಿವರ್ಷ ಜರುಗುವ ಅದ್ಧೂರಿಯಾಗಿ ವೀರಭದ್ರೇಶ್ವರ ಜಾತ್ರೆ ನಡೆಯುತ್ತಾ ಬರುತ್ತಿದೆ. ಈ ವೇಳೆ ಹತ್ತಾರು‌ ಸಾವಿರ ಭಕ್ತರ ಸಮ್ಮುಖದಲ್ಲಿ ಜಯಘೋಷಗಳೊಂದಿಗೆ ರಥೋತ್ಸವ ನಡೆಯುತ್ತದೆ. ಶನಿವಾರ ರಥೋತ್ಸವದ ವೇಳೆ ಭಕ್ತರೆಲ್ಲರೂ ಸೇರಿ ರಥ ಎಳೆಯುವಾಗ ರಥದ ಚಕ್ರದಡಿ ಇಬ್ಬರು ಬಿದ್ದಿದ್ದಾರೆ. ಇದು ಗೊತ್ತಾಗದೇ ಎಳೆದಿದ್ದರಿಂದ ಇಬ್ಬರು ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಒಬ್ಬ ಭಕ್ತನ ತಲೆ‌ ಮೇಲೆ ರಥದ ಚಕ್ರ ಹತ್ತಿಳಿದಿದ್ದರಿಂದ ತಲೆಬುರುಡೆ ಅಪ್ಪಚ್ಚಿಯಾಗಿದೆ. ಮತ್ತೊಬ್ಬನ ಬೆನ್ನಿನ ಮೇಲೆ ಹಾದು ಹೋಗಿದೆ. ಹೀಗಾಗಿ ಆತನೂ ಅಲ್ಲಿಯೇ ಉಸಿರು ಚೆಲ್ಲಿದ್ದಾನೆ. ರಥೋತ್ಸವಕ್ಕೆ‌ ಎಸೆಯುವ ಉತ್ತುತ್ತೆಯನ್ನು ಆರಿಸುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮಲ್ಲಪ್ಪ ಲಿಂಗನಗೌಡರ (55) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮತ್ತೊಬ್ಬನ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ರೋಣ ಪೊಲೀಸ್ ಠಾಣೆ‌ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದೆ.

ಪತ್ನಿಯ ಶೀಲ ಶಂಕಿಸಿ, ಆಕೆಯ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕಿದ ದುಷ್ಟ; ಏನು ಮಾಡಬೇಕು ಇಂಥವರಿಗೆ?

ಮುಂಬೈ: ಗಂಡ-ಹೆಂಡತಿ, ಪ್ರಿಯತಮ-ಪ್ರಿಯತಮೆ ಸೇರಿ ಯಾವುದೇ ಸಂಬಂಧದಲ್ಲಿ ಅನುಮಾನ ಎಂಬ ಪೀಡೆ ಹೊಕ್ಕರೆ ಅಲ್ಲಿಗೆ ಮುಗಿಯಿತು ಕತೆ. ಒಂದೋ ಆ ಸಂಬಂಧದಲ್ಲಿ ಬಿರುಕು ಮೂಡುತ್ತದೆ, ಇಲ್ಲವೇ ಪರಸ್ಪರ ಹಿಂಸೆಗೆ ದಾರಿ ಮಾಡುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ (Maharashtra) ಪುಣೆಯಲ್ಲಿ (Pune) ವ್ಯಕ್ತಿಯೊಬ್ಬ ತನ್ನ ಪತಿಯ ಶೀಲ ಶಂಕಿಸಿ, ಆಕೆ ಗುಪ್ತಾಂಗಕ್ಕೆ ಮೊಳೆ ಜಡಿದು, ಬೀಗ ಹಾಕುವ ಮೂಲಕ ರಕ್ಕಸ ಕೃತ್ಯ ಎಸಗಿದ್ದಾನೆ.

ಪುಣೆಯ ವಾಕಡ್‌ ಪ್ರದೇಶದಲ್ಲಿ ಮೇ 11ರಂದು ಪತಿಯು ಮೃಗದಂತೆ ವರ್ತಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯು ದೂರು ದಾಖಲಿಸಿದ ಬಳಿಕ ಪೊಲೀಸರು ದುಷ್ಟನನ್ನು ಬಂಧಿಸಿದ್ದಾರೆ. ಗುಪ್ತಾಂಗಕ್ಕೆ ಮೊಳೆ ಹೊಡೆದು, ಬೀಗ ಜಡಿದ ಪರಿಣಾಮ ಮಹಿಳೆಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮಾರಣಾಂತಿಕವಾಗಿ ಹಲ್ಲೆ ನಡೆಸಿದವನನ್ನು ನೇಪಾಳದ ಮೂಲದ, ಸದ್ಯ ಪಿಂಪ್ರಿ-ಚಿಂಚ್ವಾಡ್‌ನ ವಾಕಡ್‌ನಲ್ಲಿ ನೆಲೆಸಿದ ಉಪೇಂದ್ರ ಹುಡಕೆ (30) ಎಂಬುದಾಗಿ ಗುರುತಿಸಲಾಗಿದೆ.

Physical Abuse

ಪ್ರಕರಣದ ಕುರಿತು ತನಿಖಾಧಿಕಾರಿ ಬಾಲಾಜಿ ಮೆತೆ ಅವರು ಮಾಹಿತಿ ನೀಡಿದ್ದಾರೆ. “ಗಂಡ ಹಾಗೂ ಹೆಂಡತಿ ನೇಪಾಳದವರು. ಉದ್ಯೋಗ ಅರಸಿ ಅವರು ಮೇ ತಿಂಗಳ ಮೊದಲ ವಾರದಲ್ಲಿ ವಾಕಡ್‌ಗೆ ಬಂದು ನೆಲೆಸಿದ್ದರು. ಮೇ 11ರಂದು ಪಾನಮತ್ತನಾಗಿ ಬಂದ ವ್ಯಕ್ತಿಯು ಪತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಶೀಲ ಶಂಕಿಸಿದ ಆತನು ಒದ್ದು, ಆಕೆಯ ಕೈಕಾಲು ಕಟ್ಟಿ, ಗುಪ್ತಾಂಗಕ್ಕೆ ಮೊಳೆ ಜಡಿದು, ಚಾಕುವಿನಿಂದ ಹಲ್ಲೆ ನಡೆಸಿ, ಬೀಗ ಹಾಕಿದ್ದಾನೆ. ಮಹಿಳೆಯು ಅಂಗಲಾಚಿದರೂ ಆತನು ಬಿಟ್ಟಿಲ್ಲ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Murder Case : ಶೀಲ ಶಂಕಿಸಿ ಪತ್ನಿಯ ಕುತ್ತಿಗೆ ಹಿಸುಕಿ ಕೊಂದ ಸಂಶಯ ಪಿಶಾಚಿ ಗಂಡ

ಮಹಿಳೆ ಅರಚುವ ಧ್ವನಿ ಕೇಳಿ ಪಕ್ಕದ ಮನೆಯ ಲಲಿತ್‌ ಪರಿಹಾರ್‌ ಎಂಬುವರು ಮನೆಗೆ ತೆರಳಿ ನೋಡಿದಾಗ, ಮಹಿಳೆಯು ರಕ್ತದ ಮಧ್ಯೆ ಬಿದ್ದಿರುವುದು ಕಂಡಿದೆ. ಕೂಡಲೇ ಅವರು ಸುತ್ತಮುತ್ತಲಿವರನ್ನು ಕರೆದ ಅವರು ಮಹಿಳೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಜ್ಞೆ ಕಳೆದುಕೊಂಡಿದ್ದ ಮಹಿಳೆಗೆ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Continue Reading

ದೇಶ

Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Voter Turnout: ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಈಗ ನಾಲ್ಕನೇ ಹಂತದಲ್ಲಿ ಮತದಾನ ಪ್ರಮಾಣವು ಹೆಚ್ಚಾಗಿರುವುದು ಸಕಾರಾತ್ಮಕ ಬೆಳವಣಿಗೆ ಎಂದೇ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

VISTARANEWS.COM


on

Voter Turnout
Koo

ನವದೆಹಲಿ: ಕಳೆದ ಸೋಮವಾರ (ಮೇ 13) ನಡೆದ ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನದ ಕುರಿತು ಚುನಾವಣೆ ಆಯೋಗವು (Election Commission) ಶುಕ್ರವಾರ ತಡರಾತ್ರಿ (ಮೇ 17) ಮಾಹಿತಿ ನೀಡಿದೆ. ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಮೂರು ಹಂತಗಳಿಗಿಂತ ಗರಿಷ್ಠ ಮತದಾನ (Voter Turnout) ದಾಖಲಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ. ಅಷ್ಟೇ ಅಲ್ಲ, ಬಿಹಾರದಲ್ಲಿ 2, 3, ಹಾಗೂ 4ನೇ ಹಂತದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದಾರೆ ಎಂಬುದಾಗಿ ಆಯೋಗವು ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಬಿಹಾರ, ಜಾರ್ಖಂಡ್‌ನಲ್ಲಿ ಹೆಣ್ಮಕ್ಳೇ ಸ್ಟ್ರಾಂಗು!

ಸಾಮಾನ್ಯವಾಗಿ ಬಹುತೇಕ ಕ್ಷೇತ್ರಗಳಲ್ಲಿ ಮತದಾನ ಮಾಡುವವರು ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಎರಡು, ಮೂರು ಹಾಗೂ ನಾಲ್ಕನೇ ಹಂತದಲ್ಲಿ ಬಹಾರದ 15 ಹಾಗೂ ಜಾರ್ಖಂಡ್‌ನ 13 ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ ಎಂಬುದಾಗಿ ಚುನಾವಣೆ ಆಯೋಗ ತಿಳಿಸಿದೆ. ಹಾಗೆಯೇ, ಪಶ್ಚಿಮ ಬಂಗಾಳದ 6, ಬಿಹಾರ, ಆಂಧ್ರದಲ್ಲಿ ತಲಾ 5, ಒಡಿಶಾ 2, ತೆಲಂಗಾಣ ಹಾಗೂ ಮಧ್ಯಪ್ರದೇಶದಲ್ಲಿ ತಲಾ 1 ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ವೋಟ್‌ ಹಾಕಿದ್ದಾರೆ.

ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶದ 25, ಬಿಹಾರ 5, ಜಮ್ಮು-ಕಾಶ್ಮೀರ 1, ಜಾರ್ಖಂಡ್ 4, ಮಧ್ಯಪ್ರದೇಶ 8, ಮಹಾರಾಷ್ಟ್ರ 11, ಒಡಿಶಾ 4, ತೆಲಂಗಾಣ 17, ಉತ್ತರ ಪ್ರದೇಶ 13 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು ಐದನೇ ಹಂತದ ಮತದಾನವು ಮೇ 20ರಂದು ನಡೆಯಲಿದೆ. ಜೂನ್‌ 1ರಂದು ಕೊನೆಯ ಅಥವಾ ಏಳನೇ ಹಂತದ ಮತದಾನ ನಡೆಯಲಿದ್ದು, ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಇದುವರೆಗೆ 379 ಕ್ಷೇತ್ರಗಳಲ್ಲಿ ಮತದಾನ ಮುಕ್ತಾಯಗೊಂಡಂತಾಗಿದೆ.

ಇದನ್ನೂ ಓದಿ: Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Continue Reading
Advertisement
Virat Kohli
ಕ್ರೀಡೆ3 mins ago

Virat Kohli: ರೋಹಿತ್​ ಶರ್ಮ ರನ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ

Covid 19
ವಿದೇಶ4 mins ago

Covid 19: ಸಿಂಗಾಪುರದಲ್ಲಿ ಕೊರೊನಾ ಹೊಸ ಅಲೆ; ವಾರದಲ್ಲಿ 25 ಸಾವಿರ ಕೇಸ್‌, ಭಾರತಕ್ಕೆ ಇದೆಯೇ ಭೀತಿ?

Inspirational Story
ಶಿಕ್ಷಣ7 mins ago

Inspirational Story: 25 ವರ್ಷಗಳ ಹಿಂದೆ ಕಸದ ತೊಟ್ಟಿಯಲ್ಲಿ ಸಿಕ್ಕ ಅಂಧ ಹೆಣ್ಣುಮಗುವಿನ ಸಾಧನೆ ನೋಡಿ!

MLC Election Withdrawal of nomination paper says Suresh Sajjan
ಕರ್ನಾಟಕ8 mins ago

MLC Election: ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ

SSLC 2024 Exam 2
ಪ್ರಮುಖ ಸುದ್ದಿ18 mins ago

SSLC 2024 Exam 2: ಜೂ. 14ರಿಂದ ಎಸ್ಎಸ್ಎಲ್‌ಸಿ ಪರೀಕ್ಷೆ-2; ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

Two killed after being hit by the wheel of a chariot while performing at Veerabhadreswara fair
ಕರ್ನಾಟಕ26 mins ago

Veerabhadreswara Fair: ವೀರಭದ್ರೇಶ್ವರ ಜಾತ್ರೆಯಲ್ಲಿ ಉತ್ತತ್ತಿ ಆಯುವಾಗ ರಥದ ಚಕ್ರದಡಿ‌ ಸಿಲುಕಿ ಇಬ್ಬರ ಸಾವು

Voter Turnout
ದೇಶ41 mins ago

Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Uttara Kannada News Take precautionary measures to prevent the spread of infectious diseases in the district says DC Gangubai manakar
ಉತ್ತರ ಕನ್ನಡ45 mins ago

Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

BJP State President B Y Vijayendra latest statement in bengaluru
ಕರ್ನಾಟಕ47 mins ago

BY Vijayendra: ವಿಧಾನಪರಿಷತ್ ವಿವಿಧ ಕ್ಷೇತ್ರಗಳ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ; ಬಿ.ವೈ.ವಿಜಯೇಂದ್ರ

Shed houses electric poles damaged due to heavy rain and wind in Karatagi
ಕೊಪ್ಪಳ50 mins ago

Heavy Rain: ಕಾರಟಗಿಯಲ್ಲಿ ಭಾರೀ ಮಳೆ ಗಾಳಿಗೆ ಅಪಾರ ಹಾನಿ; ಸಚಿವ ಶಿವರಾಜ ತಂಗಡಗಿ ಪರಿಶೀಲನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ24 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ2 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ4 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ4 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌