Karnataka Elections : ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್‌ ಮೆಗಾ ಪ್ಲ್ಯಾನ್‌, ಕೂಡಲಸಂಗಮದಲ್ಲಿ ರಾಹುಲ್‌ ನೇತೃತ್ವದಲ್ಲಿ ಬಸವ ಜಯಂತಿ - Vistara News

ಕರ್ನಾಟಕ

Karnataka Elections : ಲಿಂಗಾಯತ ಮತ ಸೆಳೆಯಲು ಕಾಂಗ್ರೆಸ್‌ ಮೆಗಾ ಪ್ಲ್ಯಾನ್‌, ಕೂಡಲಸಂಗಮದಲ್ಲಿ ರಾಹುಲ್‌ ನೇತೃತ್ವದಲ್ಲಿ ಬಸವ ಜಯಂತಿ

Basava Jayanti : ಲಿಂಗಾಯತ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಕಾಂಗ್ರೆಸ್‌ ಮತ್ತು ಬಿಜೆಪಿಗಳೆರಡೂ ಕೆಲಸ ಮಾಡುತ್ತಿವೆ. ಇದೀಗ ಕಾಂಗ್ರೆಸ್‌ ಬಸವಜಯಂತಿ ಆಯೋಜನೆ ಮುಂದಾಗಿದೆ.

VISTARANEWS.COM


on

Basava jayanthi
ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಸ್ಥಳ ಪರಿಶೀಲನೆಗೆ ಆಗಮಿಸಿದ ಕಾಂಗ್ರೆಸ್‌ ಮುಖಂಡರು
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಾಗಲಕೋಟೆ: ಬಿಜೆಪಿಯಲ್ಲಿ ಲಿಂಗಾಯತ ನಾಯಕರು ಮತ್ತು ಮತದಾರರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್‌, ಈ ವರ್ಗವನ್ನು ಸೆಳೆಯಲು ಮೆಗಾ ಪ್ಲ್ಯಾನ್‌ ಮಾಡಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಲಿಂಗಾಯತ ಮತಗಳೇ ಅಧಿಕಾರ ಹಿಡಿಯಲು ಪ್ರಬಲ ಅಸ್ತ್ರ ಎಂದು ಎರಡೂ ಪಕ್ಷಗಳು ನಂಬಿಕೊಂಡಿವೆ. ಹೀಗಾಗಿ ಈ ಸಮುದಾಯವನ್ನು ಟಾರ್ಗೆಟ್‌ ಮಾಡಿಕೊಂಡು ಪ್ಲ್ಯಾನ್‌ ಮಾಡಲಾಗುತ್ತಿದೆ.

ಬಸವಣ್ಣನ ಐಕ್ಯ ಸ್ಥಳ ಕೂಡಲ ಸಂಗಮದಲ್ಲಿ ಬಸವ ಜಯಂತಿ ಆಚರಣೆಗಾಗಿ ದೊಡ್ಡ ಕಾರ್ಯಕ್ರಮವೊಂದನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗಿ ಅವರು ಭಾಗಿಯಾಗಲಿದ್ದಾರೆ. ಹಾಗಂತ ಇದು ಕಾಂಗ್ರೆಸ್‌ ಪಕ್ಷದ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮವಲ್ಲ. ಆದರೆ, ಆಯೋಜಿಸುವವರು, ಭಾಗಿಯಾಗುವವರಲ್ಲಿ ಹೆಚ್ಚಿನವರೆಲ್ಲ ಕಾಂಗ್ರೆಸ್‌ನವರೇ ಆಗಿರುತ್ತಾರೆ.

ಏಪ್ರಿಲ್‌ 23ರಂದು ಕೂಡಲ ಸಂಗಮಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡಲಿದ್ದು, ಸಂಗಮೇಶ್ವರ ದೇವಸ್ಥಾನ, ಅಣ್ಣ ಬಸವಣ್ಣನ ಐಕ್ಯ ಮಂಟಪ ದರ್ಶನ ಮಾಡಲಿದ್ದಾರೆ. ಇದಿಷ್ಟು ಮೊದಲೇ ಫಿಕ್ಸ್‌ ಆಗಿರುವ ಕಾರ್ಯಕ್ರಮ. ಆದರೆ, ಅದಕ್ಕೆ ಬಸವ ಜಯಂತಿ ಸಮಾವೇಶದ ರೂಪವನ್ನು ಹೊಸದಾಗಿ ನೀಡಲಾಗಿದೆ. ಈ ಕಾರ್ಯಕ್ರಮವನ್ನು ಸಭಾಭವನದಲ್ಲಿ ಬಸವ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಲಿದೆ.

ಕೂಡಲ ಸಂಗಮದಲ್ಲಿ ಬಸವ ಜಯಂತಿ ಕಾರ್ಯಕ್ರಮಕ್ಕೆ ಸ್ಥಳ ಪರಿಶೀಲನೆ ನಡೆಸುತ್ತಿರುವ ಕಾಂಗ್ರೆಸ್‌ ಮುಖಂಡರು

ಕೂಡಲ ಸಂಗಮದಲ್ಲಿ ಸ್ಥಳ ಪರಿಶೀಲನೆ

ಬಸವ ಜಯಂತಿ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಶುಕ್ರವಾರ ಕೂಡಲ ಸಂಗಮದಲ್ಲಿ ಸ್ಥಳ ಮತ್ತು ಸಿದ್ಧತೆಗಳ ಪರಿಶೀಲನೆ ನಡೆಸಿದರು. ಜತೆಗೆ ಸಭೆಯನ್ನೂ ನಡೆಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಅಧ್ಯಕ್ಷ ಎಸ್.ಜಿ ನಂಜಯ್ಯನಮಠ ಅವರ ಜತೆ ಕೆಪಿಸಿಸಿ ಹಾಗೂ ಎಐಸಿಸಿ ಪ್ರತಿನಿಧಿಗಳು ಸಭೆ ನಡೆಸಿದರು.

ಕಾರ್ಯಕ್ರಮವನ್ನು ಬಸವ ಸಂಘಟನೆಯ ಹೆಸರಿನಲ್ಲಿ ಆಯೋಜನೆ ಮಾಡಲಾಗಿದ್ದು, ಅದರಲ್ಲಿ ರಾಹುಲ್ ಗಾಂಧಿ ಭಾಗಿ ಆಗುತ್ತಾರೆ ಎಂಬಂತೆ ಬಿಂಬಿಸಲಾಗುತ್ತಿದೆ. ರಾಹುಲ್‌ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ಪಕ್ಷದ ಯಾವೆಲ್ಲ ಮುಖಂಡರು ಇರ್ತಾರೆ ಎನ್ನುವುದು ಇನ್ನೂ ಫೈನಲ್‌ ಆಗಿಲ್ಲ. ಇದು ಪಕ್ಷಕ್ಕೆ ಸೀಮಿತವಾಗಿ ಮಾಡದೇ ಬೇರೆ ರೂಪ ಕೊಡಲು ಚಿಂತನೆ ನಡೆಯುತ್ತಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದ ಬಳಿಕ ಬಿಜೆಪಿಯಲ್ಲಿ ಲಿಂಗಾಯತರ ಕಡೆಗಣನೆ ಮಾತು ಜೋರಾಗಿದೆ. ಬಿ.ಎಸ್‌. ಯಡಿಯೂರಪ್ಪ ಅವರ ಸಿಎಂ ಹುದ್ದೆಯಿಂದ ಇಳಿಸಿದ್ದು, ಅವರು ಕಣ್ಣೀರು ಹಾಕಿದ್ದನ್ನು ಕಾಂಗ್ರೆಸ್‌ ಲಿಂಗಾಯತ ಕಡೆಗಣನೆ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ.

ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡಾ ಹಲವು ತಂತ್ರಗಳನ್ನು ಹೆಣೆಯುತ್ತಿದ್ದು, ಒಂದೆರಡು ನಾಯಕರು ಕಮಲ ಪಕ್ಷ ಬಿಟ್ಟು ಹೋದ ಕೂಡಲೇ ಲಿಂಗಾಯತರ ಕಡೆಗಣನೆ ಎಂದಾಗುವುದಿಲ್ಲ. ಲಿಂಗಾಯತರನ್ನು ಸಿಎಂ ಮಾಡುವುದಿದ್ದರೆ ಅದು ಬಿಜೆಪಿ ಮಾತ್ರ ಎಂಬ ವಾದವನ್ನು ಮುಂದಿಡುತ್ತಿದೆ. ಜತೆಗೆ ತಾಕತ್ತಿದ್ದರೆ ಲಿಂಗಾಯತ ಸಿಎಂ ಘೋಷಣೆ ಮಾಡಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕುತ್ತಿದೆ.

ಇದನ್ನೂ ಓದಿ : Karnataka Congress: ಬಿಜೆಪಿ ಅಣೆಕಟ್ಟೆ ಒಡೆದಿದೆ; ವೀರಶೈವ ಲಿಂಗಾಯತರು ಕಾಂಗ್ರೆಸ್‌ ಸೇರುವುದನ್ನು ತಡೆಯಲಾಗದು: ಡಿಕೆಶಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರು, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ವಿರುದ್ಧ 5,267 ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ.

VISTARANEWS.COM


on

Koo

ಮೈಸೂರು: ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದ (MLC Election Results) ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಅವರು ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ್ದಾರೆ. ಇವರು ಮತ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ವಿರುದ್ಧ 5,267 ಮತಗಳ ಭಾರಿ ಅಂತರದಿಂದ ಜಯಭೇರಿ ಮೊಳಗಿಸಿದ್ದಾರೆ.

ಕ್ಷೇತ್ರದಲ್ಲಿ 19,479 ಒಟ್ಟು ಚಲಾವಣೆ ಆಗಿದ್ದು, ಇದರಲ್ಲಿ 821 ಮತ ತಿರಸ್ಕೃತಗೊಂಡಿವೆ. ಇನ್ನುಳಿದ 18,658 ಮತಗಳಲ್ಲಿ 9,330 ಕೋಟಾ ನಿಗದಿಯಾಗಿತ್ತು. 9829 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಭೋಜೇಗೌಡ ಗೆಲುವು ಸಾಧಿಸಿದ್ದು,
ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಗೆ 4,562 ಮತಗಳುನ್ನು ಪಡೆದಿದ್ದಾರೆ.

ವಿಜೇತ ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಮಾತನಾಡಿ, ಈ ಬಾರಿ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಬಹಳ ಅಭೂತಪೂರ್ವ ಗೆಲುವನ್ನು ಶಿಕ್ಷಕರು ತಂದು ಕೊಟ್ಟಿದ್ದಾರೆ. ಹಾಗಾಗಿ ಈ ಗೆಲುವನ್ನು ಶಿಕ್ಷಕ ಸಮುದಾಯಕ್ಕೆ ಸರ್ಮಪಿಸುತ್ತೇನೆ. ನಮ್ಮ ಶಿಕ್ಷಕರು ಬಹಳ ಶ್ರಮಪಟ್ಟು ಗೆಲುವನ್ನು ತಂದುಕೊಟ್ಟಿದ್ದಾರೆ. ಬಹಳ ವಿಶ್ವಾಸವಿಟ್ಟು ಮೊದಲ ಪ್ರಾಶಸ್ತ್ಯ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ನನ್ನ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲ್ಲುವ ವಿಶ್ವಾಸವಿತ್ತು, ಅದರಂತೆಯೇ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಒಂದಾಗಿದ್ದರಿಂದ ನಮ್ಮ ಬಲ ಹೆಚ್ಚಾಗಿದೆ. ಹೊಂದಾಣಿಕೆ ಕೆಲಸ ಮಾಡಿದೆ, ಕಳೆದ ಬಾರಿಯೇ ನಾನು ಜೆಡಿಎಸ್‌ನಿಂದ ಏಕಾಂಗಿಯಾಗಿ ನಿಂತು ಗೆದ್ದಿದ್ದೆ. ಈ ಬಾರಿ ಬಿಜೆಪಿ ಜತೆಗಿನ ಹೊಂದಾಣಿಕೆಯಿಂದ ಬಲ ಇನ್ನಷ್ಟು ಹೆಚ್ಚಿದೆ. ಬಿಜೆಪಿ ಜೆಡಿಎಸ್ ಮೈತ್ರಿ ಫಲಪ್ರದವಾಗಿದೆ. ಬಿಜೆಪಿ-ಜೆಡಿಎಸ್‌ನ ಎಲ್ಲಾ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

MLC Election Results

ಮೈಸೂರು: ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ 6 ಕ್ಷೇತ್ರಗಳ ಚುನಾವಣೆಯ (MLC Election Results) ಮತ ಎಣಿಕೆ ಗುರುವಾರ ನಡೆದಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಚುನಾವಣಾ ಇತಿಹಾಸದಲ್ಲೇ ಮೊದಲ ಪ್ರಾಶಸ್ತ್ಯ ಮತದಲ್ಲಿ ಮೊದಲ ಗೆಲುವು ಇದಾಗಿದೆ.

ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದಗೆ 10,823 ಮತ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6,201 ಮತ ಬಂದಿವೆ, ವಾಟಾಳ್ ನಾಗರಾಜ್ 84 ಮತ ಗಳಿಸಿದ್ದಾರೆ. ಈ ಮೂಲಕ 4,622 ಮತಗಳ ಭಾರಿ ಅಂತರದಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದ ಗೆಲುವು ದಾಖಲಿಸಿದ್ದಾರೆ. ಕ್ಷೇತ್ರದಲ್ಲಿ 1049 ಕುಲಗೆಟ್ಟ ಮತಗಳು (ತಿರಸ್ಕೃತ) ದಾಖಲಾಗಿವೆ.

ಇದನ್ನೂ ಓದಿ | MLC Election: ವಿಧಾನ ಪರಿಷತ್ ಚುನಾವಣೆ; ಯತೀಂದ್ರ, ಸಿ.ಟಿ.ರವಿ ಸೇರಿ 11 ಅಭ್ಯರ್ಥಿಗಳ ಅವಿರೋಧ ಆಯ್ಕೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ (south teachers constituency) ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳು ಬರುತ್ತವೆ. ಒಟ್ಟು 20,549 ಮತದಾರರ ಪೈಕಿ 18,979 ಮತಗಳು ಚಲಾವಣೆಯಾಗಿದ್ದವು. ಈ ಚುನಾವಣೆಯಲ್ಲಿ ವಿವೇಕಾನಂದ ಹಾಗೂ ಮರಿತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌

ಮೈಸೂರು: ನೈರುತ್ಯ ಪದವೀಧರರ ಕ್ಷೇತ್ರ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದುವರೆಗೂ 14 ಸಾವಿರ ಮತಗಳ ಎಣಿಕೆ ಆಗಿದ್ದು, ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಗೆ 6,693 ಮತ, ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ 3,054 ಮತ ಹಾಗೂ ಆಯನೂರು ಮಂಜುನಾಥ್‌ಗೆ 2397 ಮತ ಬಂದಿವೆ.

Continue Reading

ಬೆಂಗಳೂರು

Bangalore News : ಕೇಳಚಂದ್ರ ಕಾಫಿಗೆ ಎಚ್​ಆರ್​ಡಿ ಮುಖ್ಯಸ್ಥರಾಗಿ ಡಾ.ಪಿ.ಕುರಿಯನ್ ರಾಫೆಲ್ ನೇಮಕ

Bangalore News: ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ (ಕೀಟಶಾಸ್ತ್ರ) ಪಿಎಚ್​ಡಿ ಪಡೆದಿರುವ ಡಾ.ರಾಫೆಲ್ ಅವರು ​​ ಲಂಡನ್​ನ ಬ್ರಿಟಿಷ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ಪೋಸ್ಟ್​ಡಾಕ್ಟರಲ್​ ಫೆಲೋಶಿಪ್ ( ಪಿಎಚ್​ಡಿ ನಂತರದ ಫೆಲೊಶಿಪ್​) ಪಡೆದಿದ್ದಾರೆ. ಕಾಫಿ ಬೋರ್ಡ್ ಆಫ್ ಇಂಡಿಯಾದಲ್ಲಿ ಹಿರಿಯ ವಿಜ್ಞಾನಿಯಾಗಿ 25 ವರ್ಷಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಕ್ಷೇತ್ರದಲ್ಲಿ 31 ವರ್ಷಗಳ ಪರಿಣತಿಯನ್ನು ಹೊಂ

VISTARANEWS.COM


on

Koo

ಬೆಂಗಳೂರು: ಕೇಳಚಂದ್ರ ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿಯ ನೂತನ ಮುಖ್ಯಸ್ಥರಾಗಿ ಡಾ.ಪಿ. ಕುರಿಯನ್ ರಾಫೆಲ್ ಅವರನ್ನು ನೇಮಕಗೊಂಡಿದ್ದಾರೆ. ಡಾ. ರಾಫೆಲ್ ಅವರು ಟಾಟಾ ಕಾಫಿ ಲಿಮಿಟೆಡ್​ನಲ್ಲಿ ಇದೇ ಹುದ್ದೆಯನ್ನು ನಿರ್ವಹಿಸಿದ್ದರು. ತೋಟದ ಬೆಳೆಗಳು, ಸುಸ್ಥಿರ ಕೃಷಿ ಮತ್ತು ಆವೃತ್ತನೀಯ ಆರ್ಥಿಕತೆಯಲ್ಲಿ ಅನುಭವ ಹೊಂದಿರುವ ಅವರು ಇನ್ನು ಮುಂದೆ ಕೇಳಚಂದ್ರ ಕಾಫಿ ಸಂಸ್ಥೆ ಪ್ರಗತಿಗಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ (ಕೀಟಶಾಸ್ತ್ರ) ಪಿಎಚ್​ಡಿ ಪಡೆದಿರುವ ಡಾ.ರಾಫೆಲ್ ಅವರು ​​ ಲಂಡನ್​ನ ಬ್ರಿಟಿಷ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಿಂದ ಪೋಸ್ಟ್​ಡಾಕ್ಟರಲ್​ ಫೆಲೋಶಿಪ್ ( ಪಿಎಚ್​ಡಿ ನಂತರದ ಫೆಲೊಶಿಪ್​) ಪಡೆದಿದ್ದಾರೆ. ಕಾಫಿ ಬೋರ್ಡ್ ಆಫ್ ಇಂಡಿಯಾದಲ್ಲಿ ಹಿರಿಯ ವಿಜ್ಞಾನಿಯಾಗಿ 25 ವರ್ಷಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಕ್ಷೇತ್ರದಲ್ಲಿ 31 ವರ್ಷಗಳ ಪರಿಣತಿಯನ್ನು ಹೊಂದಿರುವ ಡಾ.ರಾಫೆಲ್ ಅವರು ಭಾರತದ ವಿವಿಧ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಾಫಿ ಸಂಶೋಧನೆಗೆ ಕೊಡುಗೆಗಳನ್ನು ನೀಡಿದ್ದಾರೆ. ಈ ಎಲ್ಲ ಕಾರ್ಯಗಳಿಗಾಗಿ ಅವರಿಗೆ ಗೌರವಗಳು ದೊರಕಿವೆ. ಅವರ ಸಮೃದ್ಧ ವೃತ್ತಿಜೀವನದ ನಡುವೆ ರಾಷ್ಟ್ರೀಯ ಮತ್ತು ಅಂ ತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ 37 ಸಂಶೋಧನಾ ಪ್ರಬಂಧಗಳು ಪ್ರಕಟಣೆಗೊಂಡಿವೆ. ಜೊತೆಗೆ ಜಾಗತಿಕ ವೈಜ್ಱನಿಕ ಜರ್ನಲ್​ಗಳಿಗೆ ಕೊಡುಗೆ ನೀಡಿದ್ದಾರೆ. ಅದೇ ರೀತಿ ಹಲವಾರು ಸಂಶೋಧನೆಗಳಿಗೆ ಮಾರ್ಗದರ್ಶನ ನೀಡಿದ್ದಾರೆ.

ಸಸ್ಯಗಳು ಫಲ ನೀಡುವ ಅವಧಿಯನ್ನು ಪ್ರಸ್ತುತ 5 ವರ್ಷದಿಂದ 2-3 ವರ್ಷಗಳಿಗೆ ಇಳಿಸುವುದು. ಇದು ಕೇಳಚಂದ್ರ ಕಾಫಿಯಲ್ಲಿ ಇಳುವರಿ ಮತ್ತು ಉತ್ಪಾದಕತೆ ಹೆಚ್ಚಿಸುವುದು. ಕಾಳುಮೆಣಸು ಉತ್ಪಾದನೆಯಲ್ಲಿನ ಸುಧಾರಣೆ ಮತ್ತು ರಕ್ಷಣಾ ಕಾರ್ಯವಿಧಾನಗಳನ್ನು ಉತ್ತೇಜಿಸುವುದು. ಎಸ್ಟೇಟ್​ನಲ್ಲಿ ಜೇನು ಸಾಕಾಣಿಕೆ ನಿರ್ವಹಣೆ ಮತ್ತು ಜೇನು ಉತ್ಪಾದನೆ ಹೆಚ್ಚಿಸುವುದು. ನಿಗದಿತ ಸ್ಥಳಗಳಲ್ಲಿ ವಿಶಿಷ್ಟ ಹಣ್ಣುಗಳ (ವಿದೇಶಿ ಹಣ್ಣುಗಳ) ಉತ್ಪಾದನೆ ಮಾಡುವುದು. ಪರಿಸರ ನಿರ್ವಹಣೆಗೆ ಕೆಳಚಂದ್ರ ಅವರ ಬದ್ಧತೆಯನ್ನು ಎತ್ತಿಹಿಡಿಯಲು ಸುಸ್ಥಿರ ಮತ್ತು ಪುನರುತ್ಪಾದಕ ಕೃಷಿ ಪದ್ಧತಿಗಳ ಪ್ರೇರಪಿಸುವುದು ಕೇಳಚಂದ್ರ ಕಾಫಿಯಲ್ಲಿ ಡಾ. ರಾಫೆಲ್ ಅವರು ಈ ಪ್ರಮುಖ ಕಾರ್ಯಗಳಾಗಿವೆ.

ಸುಸ್ಥಿರ ಕೃಷಿ, ಕೀಟಗಳ ನಿರ್ವಹಣೆ ಮತ್ತು ಹೊಸ ಮಾದರಿಯ ಪರಿಸರ ಸ್ನೇಹಿ ಪರಿಹಾರಗಳ ಅಭಿವೃದ್ಧಿಯಲ್ಲಿ ಅವರ ಅತ್ಯುತ್ತಮ ಕೆಲಸವನ್ನು ಜಾಗತಿಕವಾಗಿ ಗುರುತಿಸಲಾಗಿದೆ. ಉತ್ಕೃಷ್ಟತೆ ಮತ್ತು ಸುಸ್ಥಿರತೆಗೆ ಡಾ. ರಾಫೆಲ್ ಅವರ ಸಮರ್ಪಣೆ ಕೆಳಚಂದ್ರ ಕಾಫಿಯ ಧ್ಯೇಯ ಮತ್ತು ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತದೆ. ಟಾಟಾ ಕಾಫಿಯಲ್ಲಿದ್ದಾಗ, ಡಾ.ರಾಫೆಲ್ ಅವರು ಸುಸ್ಥಿರ ಕೃಷಿ ಕ್ಷೇತ್ರದಲ್ಲಿ ಮಾಡಿದ ಕೆಲಸಕ್ಕಾಗಿ 2022 ಮತ್ತು 2023 ರಲ್ಲಿ ವಾರ್ಷಿಕ ಶ್ರೇಷ್ಠತೆ ಪ್ರಶಸ್ತಿಯನ್ನು ಪಡೆದರು.

ಇದನ್ನೂ ಓದಿ: TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

ಟಾಟಾ ಕಾಫಿ ಸಂಸ್ಥೆಯಲ್ಲಿ ಡಾ. ರಾಫೆಲ್ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯವನ್ನು ಮುನ್ನಡೆಸಿದ್ದರು. ಅವರ ಪರಿಣತಿ ಕಾಫಿ ಮತ್ತು ಮೆಣಸು ಕೃಷಿಗೆ ಸೀಮಿತವಾಗದೇ ನಾಯಕತ್ವವು ಹಲವಾರು ಪ್ರಶಂಸೆಗಳನ್ನು ಗಳಿಸಿವೆ. ಅಲ್ಲದೆ ಕೃಷಿ ಸಂಶೋಧನೆಯನ್ನು ಪರಿವರ್ತಿಸುವ ಮತ್ತು ಸುಸ್ಥಿರವಾಗಿ ಬೆಳೆಸುವ ಬದ್ಧತೆಯಿಂದ ಕೂಡಿತ್ತು.

ಕೇಳಚಂದ್ರ ಕಾಫಿಯ ವ್ಯವಸ್ಥಾಪಕ ನಿರ್ದೇಶಕ ರಾಣಾ ಜಾರ್ಜ್ ಹೊಸ ನೇಮಕದ ಕುರಿತು ಮಾತನಾಡಿ, ಡಾ.ಪಿ.ಕುರಿಯನ್ ರಾಫೆಲ್ ಅವರನ್ನು ಕೇಳಚಂದ್ರ ಕಾಫಿಗೆ ಸ್ವಾಗತಿಸಲು ನಾವು ಉತ್ಸಾಹಭರಿತರಾಗಿದ್ದೇವೆ. ಕಾಫಿ ಸಂಶೋಧನೆ ಮತ್ತು ಅಭಿವೃದ್ಧಿಯ ವ್ಯಾಪ್ತಿ ವಿಸ್ತರಣೆ ಮಾಡುವಲ್ಲಿ ಅವರ ವ್ಯಾಪಕ ಅನುಭವ ನಮಗೆ ಅಮೂಲ್ಯವಾಗಿದೆ “ಎಂದು ಹೇಳಿದರು. ಮುಂದುವರಿದ ಅವರು. ಡಾ. ರಾಫೆಲ್ ಅವರ ದೃಷ್ಟಿಕೋನ ಮತ್ತು ನಾಯಕತ್ವವು ನಿಸ್ಸಂದೇಹವಾಗಿ ಉತ್ಕೃಷ್ಟತೆ ಮತ್ತು ಸುಸ್ಥಿರತೆಯ ವಿಚಾರದಲ್ಲಿ ನಮ್ಮ ಬದ್ಧತೆಯನ್ನು ಮುನ್ನಷ್ಟು ಮುಂದಕ್ಕೆ ಕೊಂಡೊಯ್ಯಲಿದೆ. ಇದು ಭಾರತವನ್ನು ಜಾಗತಿಕ ಕಾಫಿ ಕ್ಷೇತ್ರದಲ್ಲಿ ದೃಢವಾಗಿ ಇರಿಸಲು ನಮಗೆ ಸಹಾಯ ಮಾಡಲಿದೆ ಎಂದು ಹೇಳಿದರು.

ಕೆಳಚಂದ್ರ ಕಾಫಿಗೆ ಸೇರಲು ಮತ್ತು ಭಾರತೀಯ ಕಾಫಿ ಸಂಶೋಧನೆ ಮತ್ತು ನೈತಿಕ ಮೂಲದ ಸುಸ್ಥಿರ ಕಾಫಿ (ECS) ಯಲ್ಲಿ ಪ್ರವರ್ತಕ ಪ್ರಗತಿಗೆ ಸಮರ್ಪಿತವಾದ ತಂಡದೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿದ್ದೇನೆ” ಎಂದು ಡಾ. ರಾಫೆಲ್​ ಹೇಳಿದ್ದಾರೆ. ಪುನರುತ್ಪಾದಕ ಕೃಷಿಯಲ್ಲಿ ನನ್ನ ಅನುಭವವನ್ನು ನಾವೀನ್ಯತೆಯ ಹಂಚಿಕೆಯ ಗುರಿಗಳಿಗೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

Continue Reading

ಪ್ರಮುಖ ಸುದ್ದಿ

MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಪರಿಷತ್‌ ಚುನಾವಣೆಯ ಇತಿಹಾಸದಲ್ಲೇ ಮೊದಲ ಪ್ರಾಶಸ್ತ್ಯ ಮತದಲ್ಲಿ ಮೊದಲ ಗೆಲುವು ಇದಾಗಿದೆ.

VISTARANEWS.COM


on

MLC Election Results
Koo

ಮೈಸೂರು: ವಿಧಾನ ಪರಿಷತ್‌ನ ಪದವೀಧರರು ಮತ್ತು ಶಿಕ್ಷಕರ 6 ಕ್ಷೇತ್ರಗಳ ಚುನಾವಣೆಯ (MLC Election Results) ಮತ ಎಣಿಕೆ ಗುರುವಾರ ನಡೆದಿದ್ದು, ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಕೆ. ವಿವೇಕಾನಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಚುನಾವಣಾ ಇತಿಹಾಸದಲ್ಲೇ ಮೊದಲ ಪ್ರಾಶಸ್ತ್ಯ ಮತದಲ್ಲಿ ಮೊದಲ ಗೆಲುವು ಇದಾಗಿದೆ.

ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದಗೆ 10,823 ಮತ ಬಂದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡಗೆ 6,201 ಮತ ಬಂದಿವೆ, ವಾಟಾಳ್ ನಾಗರಾಜ್ 84 ಮತ ಗಳಿಸಿದ್ದಾರೆ. ಈ ಮೂಲಕ 4,622 ಮತಗಳ ಭಾರಿ ಅಂತರದಿಂದ ಮೊದಲ ಪ್ರಾಶಸ್ತ್ಯ ಮತಗಳಲ್ಲೇ ಜೆಡಿಎಸ್‌ ಅಭ್ಯರ್ಥಿ ವಿವೇಕಾನಂದ ಗೆಲುವು ದಾಖಲಿಸಿದ್ದಾರೆ. ಕ್ಷೇತ್ರದಲ್ಲಿ 1049 ಕುಲಗೆಟ್ಟ ಮತಗಳು (ತಿರಸ್ಕೃತ) ದಾಖಲಾಗಿವೆ.

ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ (south teachers constituency) ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳು ಬರುತ್ತವೆ. ಒಟ್ಟು 20,549 ಮತದಾರರ ಪೈಕಿ 18,979 ಮತಗಳು ಚಲಾವಣೆಯಾಗಿದ್ದವು. ಈ ಚುನಾವಣೆಯಲ್ಲಿ ವಿವೇಕಾನಂದ ಹಾಗೂ ಮರೀತಿಬ್ಬೇಗೌಡ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು.

ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಗೆಲುವಿನ ನಾಗಾಲೋಟಕ್ಕೆ ಮೈತ್ರಿ ಅಭ್ಯರ್ಥಿ ಬ್ರೇಕ್ ಹಾಕಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಗೆದ್ದು ನಂತರದ ದಿನಗಳಲ್ಲಿ ಕಾಂಗ್ರೆಸ್‌ಗೆ ಬಂದಿದ್ದ ಮರಿತಿಬ್ಬೇಗೌಡ ಸತತ ನಾಲ್ಕು ಬಾರಿ ಗೆದ್ದಿದ್ದರು. ಈ ಬಾರಿ ಮೈತ್ರಿ ಅಭ್ಯರ್ಥಿ ವಿವೇಕಾನಂದ ವಿರುದ್ಧ ಪರಾಭವಗೊಂಡಿದ್ದಾರೆ. ಇದರಿಂದ ಮೈಸೂರಿನಲ್ಲಿ ಲೋಕಸಭಾ ಬಳಿಕ ಕಾಂಗ್ರೆಸ್‌ಗೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.

ವಿವೇಕಾನಂದ ಗೆಲುವು ಹಿನ್ನೆಲೆ ಅವರಿಗೆ ಟ್ವೀಟ್ ಮೂಲಕ ಮಾಜಿ ಸಂಸದ ಪ್ರತಾಪ್ ಸಿಂಹ ಅಭಿನಂದನೆ ಸಲ್ಲಿಸಿದ್ದಾರೆ.

ಇದನ್ನೂ ಓದಿ | MLC Election: ವಿಧಾನ ಪರಿಷತ್ ಚುನಾವಣೆ; ಯತೀಂದ್ರ, ಸಿ.ಟಿ.ರವಿ ಸೇರಿ 11 ಅಭ್ಯರ್ಥಿಗಳ ಅವಿರೋಧ ಆಯ್ಕೆ, ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ನೈರುತ್ಯ ಪದವೀಧರರ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌

ಮೈಸೂರು: ನೈರುತ್ಯ ಪದವೀಧರರ ಕ್ಷೇತ್ರ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದುವರೆಗೂ 14 ಸಾವಿರ ಮತಗಳ ಎಣಿಕೆ ಆಗಿದ್ದು, ಮೈತ್ರಿ ಅಭ್ಯರ್ಥಿ ಡಾ.ಧನಂಜಯ ಸರ್ಜಿಗೆ 6,693 ಮತ, ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್‌ಗೆ 3,054 ಮತ ಹಾಗೂ ಆಯನೂರು ಮಂಜುನಾಥ್‌ಗೆ 2397 ಮತ ಬಂದಿವೆ.

Continue Reading

ಬೆಂಗಳೂರು

TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

TA Sharavana: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ವಿಧಾನ ಪರಿಷತ್‌ ಸದಸ್ಯ ಡಾ. ಟಿ.ಎ. ಶರವಣ ಅವರು, ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಪ್ರಸಾದವನ್ನು ನೀಡುವುದರ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು.

VISTARANEWS.COM


on

TA Sharavana congratulated former CM hd Kumaraswamy who was elected to Lok Sabha from Mandya
Koo

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ವಿಧಾನ ಪರಿಷತ್‌ ಸದಸ್ಯ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಡಾ. ಟಿ.ಎ. ಶರವಣ (TA Sharavana) ಅವರು ಶಿರಡಿ ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ವಿಧಾನ ಪರಿಷತ್‌ ಸದಸ್ಯ ಡಾ. ಟಿ.ಎ. ಶರವಣ, ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ಪ್ರಸಾದವನ್ನು ನೀಡುವುದರ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಶುಭ ಕೋರಿದರು.

ಫಲಿತಾಂಶದಿಂದ ಬಲಿಷ್ಠವಾದ ಜೆಡಿಎಸ್‌: ಟಿ.ಎ.ಶರವಣ

ಈ ಚುನಾವಣೆಯ ಫಲಿತಾಂಶವು ಜೆಡಿಎಸ್ (JDS) ಮತ್ತೊಮ್ಮೆ ಬಲಿಷ್ಠ ಪಕ್ಷ ಎನ್ನುವುದನ್ನು ಸಾಬೀತು ಮಾಡಿದೆ. ಸತತ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿಕೂಟ ಗೆಲುವಿನ ಮೂಲಕ ಹೊಸ ದಾಖಲೆ ಬರೆದಿದೆ ಎಂದು ವಿಧಾನ ಪರಿಷತ್‌ ಸದಸ್ಯ ಟಿ.ಎ. ಶರವಣ ತಿಳಿಸಿದ್ದಾರೆ.

ಇದನ್ನೂ ಓದಿ: World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ

ಲೋಕಸಭಾ ಚುನಾವಣಾ ಫಲಿತಾಂಶ 2024 ರ ಕುರಿತು ಹೇಳಿಕೆ ನೀಡಿರುವ ಅವರು, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ದೇಶದ ಜನ ಆಯ್ಕೆ ಮಾಡಿದ್ದಾರೆ. ಸತತ ಮೂರನೇ ಬಾರಿಗೆ ಎನ್‌ಡಿಎ ಮೈತ್ರಿಕೂಟ ಗೆಲುವಿನ ಮೂಲಕ ಹೊಸ ದಾಖಲೆ ಬರೆದಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಯು ಒಂದು ಪ್ರಬಲ ರಾಜಕೀಯ ಶಕ್ತಿ ಎನ್ನುವುದು ಸಾಬೀತಾಗಿದೆ ಎಂದು ಹೇಳಿದ್ದಾರೆ.

ಜೆಡಿಎಸ್‌ ಪಕ್ಷವನ್ನು ಮುಗಿಸುವ ಸಂಚು ವಿಫಲ ಆಗಿದೆ. ಅಧಿಕೃತವಾಗಿ ಜೆಡಿಎಸ್‌ ಪಕ್ಷವು ಎರಡು ಸ್ಥಾನಗಳನ್ನು ಗೆದ್ದಿರಬಹುದು. ಆದರೆ ಸುಮಾರು 9 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲು ಜೆಡಿಎಸ್ ಸಹಕಾರ ಸಿಕ್ಕಿದೆ. ಹೀಗಾಗಿ ರಾಜ್ಯದಲ್ಲಿ ಜೆಡಿಎಸ್ ಪ್ರಬಲ ಶಕ್ತಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Weather : ಭಾರಿ ಮಳೆಗೆ ಶ್ರೀನಿವಾಸಪುರದ ರೈಲ್ವೆ ಅಂಡರ್‌ ಪಾಸ್‌ ಜಲಾವೃತ; ಇನ್ನೈದು ದಿನ ಭಾರಿ ವರ್ಷಧಾರೆ

ರಾಷ್ಟ್ರ ರಾಜಕಾರಣದಲ್ಲಿ ಮೋದಿ ಪ್ರಶ್ನಾತೀತ ನಾಯಕರಾಗಿ ಹೊರ ಹೊಮ್ಮಿದ್ದಾರೆ ಎಂದು ತಿಳಿಸಿರುವ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರವು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡರೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನ ಗೆಲ್ಲಲು ಆಗಿಲ್ಲ, ಗ್ಯಾರಂಟಿ ಯೋಜನೆಗಳು ವಿಫಲವಾಗಿವೆ, ವೋಟ್ ಬ್ಯಾಂಕ್ ಸೃಷ್ಟಿಸುವಲ್ಲಿ ಗ್ಯಾರಂಟಿ ಯೋಜನೆ ವಿಫಲವಾಗಿವೆ ಎಂದು ಅವರು ತಿಳಿಸಿದ್ದಾರೆ.

Continue Reading
Advertisement
Kangana Ranaut
ಪ್ರಮುಖ ಸುದ್ದಿ21 mins ago

Kangana Ranaut : ನಟಿ ಕಂಗನಾಗೆ ಏರ್​ಪೋರ್ಟ್​ ಮಹಿಳಾ ಪೇದೆ ಹೊಡೆಯಲು ಕಾರಣವೇನು? ರೈತರ ಬಗ್ಗೆ ಅವರು ನೀಡಿದ ವಿವಾದಾತ್ಮಕ ಹೇಳಿಕೆ ಯಾವುದು?

Lok Sabha Election 2024
ದೇಶ28 mins ago

Lok Sabha Election 2024: ಈ 17 ಸಂಸದರು ಎನ್‌ಡಿಎಯಲ್ಲೂ ಇಲ್ಲ, ಇಂಡಿ ಕೂಟದಲ್ಲೂ ಇಲ್ಲ!

Viral Video
ವೈರಲ್ ನ್ಯೂಸ್41 mins ago

Viral Video: ಏಕಾಏಕಿ ಕುಸಿದು ಸಾವನ್ನಪ್ಪಿದ ಮೆಡಿಕಲ್ ಸಿಬ್ಬಂದಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕರ್ನಾಟಕ50 mins ago

MLC Election Results: ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಜಯಭೇರಿ

ಬೆಂಗಳೂರು1 hour ago

Bangalore News : ಕೇಳಚಂದ್ರ ಕಾಫಿಗೆ ಎಚ್​ಆರ್​ಡಿ ಮುಖ್ಯಸ್ಥರಾಗಿ ಡಾ.ಪಿ.ಕುರಿಯನ್ ರಾಫೆಲ್ ನೇಮಕ

MLC Election Results
ಪ್ರಮುಖ ಸುದ್ದಿ2 hours ago

MLC Election Results: ದಕ್ಷಿಣ ಶಿಕ್ಷಕರ ಕ್ಷೇತ್ರ; ಮೊದಲ ಪ್ರಾಶಸ್ತ್ಯ ಮತದಲ್ಲೇ ಮೈತ್ರಿ ಅಭ್ಯರ್ಥಿ ವಿವೇಕಾನಂದ ಭರ್ಜರಿ ಗೆಲುವು

TA Sharavana congratulated former CM hd Kumaraswamy who was elected to Lok Sabha from Mandya
ಬೆಂಗಳೂರು2 hours ago

TA Sharavana: ಮಂಡ್ಯದಿಂದ ಕುಮಾರಸ್ವಾಮಿ ಲೋಕಸಭೆಗೆ ಆಯ್ಕೆ; ಸಾಯಿಬಾಬಾ ಪ್ರಸಾದ ನೀಡಿ, ಅಭಿನಂದಿಸಿದ ಟಿ.ಎ.ಶರವಣ

Stock market Crash
ಪ್ರಮುಖ ಸುದ್ದಿ2 hours ago

Stock market Crash : ಜೂ. 4ರ ಷೇರುಪೇಟೆ ಕುಸಿತ ಮೋದಿ, ಅಮಿತ್​ ಶಾ ನಡೆಸಿದ ಮಹಾ ಹಗರಣ; ರಾಹುಲ್ ಗಾಂಧಿ ಆರೋಪ

Lok Sabha Election 2024
ರಾಜಕೀಯ2 hours ago

Lok Sabha Election 2024: ಈ ಬಾರಿ ಲೋಕಸಭೆ ಪ್ರವೇಶಿಸಲಿದ್ದಾರೆ 41 ಪಕ್ಷಗಳ ಸಂಸದರು!

Fancy Handbags Fashion
ಫ್ಯಾಷನ್2 hours ago

Fancy Handbags Fashion: ಸ್ಟೈಲಿಶ್‌ ಲುಕ್‌ಗೆ ಫ್ಯಾನ್ಸಿ ಹ್ಯಾಂಡ್‌ ಬ್ಯಾಗ್‌ಗಳ ಸಾಥ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ8 hours ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ3 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ3 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ3 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ4 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು5 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

ಟ್ರೆಂಡಿಂಗ್‌