ಶ್ರೀಲಂಕಾದ ಎಕಾನಮಿ ಪತನ, ತೈಲ ಆಮದಿಗೂ ದುಡ್ಡಿಲ್ಲ ಎಂದ ಪ್ರಧಾನಿ ರನಿಲ್‌ ವಿಕ್ರಮಸಿಂಘೆ - Vistara News

ಪ್ರಮುಖ ಸುದ್ದಿ

ಶ್ರೀಲಂಕಾದ ಎಕಾನಮಿ ಪತನ, ತೈಲ ಆಮದಿಗೂ ದುಡ್ಡಿಲ್ಲ ಎಂದ ಪ್ರಧಾನಿ ರನಿಲ್‌ ವಿಕ್ರಮಸಿಂಘೆ

ಶ್ರೀಲಂಕಾದ ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಕಚ್ಚಾ ತೈಲ ಆಮದಿಗೂ ಸರ್ಕಾರದ ಬೊಕ್ಕಸದಲ್ಲಿ ದುಡ್ಡಿಲ್ಲ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಸಂಸತ್ತಿನಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

VISTARANEWS.COM


on

lanka economy
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೊಲಂಬೊ: ಶ್ರೀಲಂಕಾದ ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಕಚ್ಚಾ ತೈಲ ಆಮದು ಮಾಡಿಕೊಳ್ಳಲೂ ದುಡ್ಡಿಲ್ಲ ಎಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಕೈ ಚೆಲ್ಲಿದ್ದಾರೆ.

“ನಾವೀಗ ಕೇವಲ ಇಂಧನ, ಅನಿಲ, ವಿದ್ಯುತ್‌ ಮತ್ತು ಆಹಾರದ ಕೊರತೆಗಿಂತಲೂ ದೊಡ್ಡ ವಿಪತ್ತು ಎದುರಿಸುತ್ತಿದ್ದೇವೆ, ನಮ್ಮ ಎಕಾನಮಿ ಸಂಪೂರ್ಣ ಕುಸಿದಿದೆʼʼ ಎಂದು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಸಂಸತ್ತಿಗೆ ತಿಳಿಸಿದ್ದಾರೆ.

ಶ್ರೀಲಂಕಾದ ಹಣಕಾಸು ಮಂತ್ರಿಯೂ ಆಗಿರುವ ರನಿಲ್‌ ವಿಕ್ರಮಸಿಂಘೆ ಅವರು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆಯ ಹಳಿಗೆ ತರುವಲ್ಲಿ ಸರಕಾರ ವಿಫಲವಾಗಿದೆ. ವಿದೇಶಿ ವಿನಿಮಯ ಸಂಗ್ರಹ ತೀವ್ರ ಕುಸಿಯುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಭಾರತವು ಶ್ರೀಲಂಕಾಗೆ ೪೦೦ ಶತಕೋಟಿ ಡಾಲರ್‌ ನೆರವನ್ನು ನೀಡಿದ್ದು, ( ಅಂದಾಜು ೩೧ ಲಕ್ಷ ಕೋಟಿ ರೂ.) ಇದರಿಂದ ಪ್ರಯೋಜನವಾಗಿದೆ. ಆದರೆ ಭಾರತವೂ ದೀರ್ಘಕಾಲ ನೆರವು ಮುಂದುವರಿಸಲಾರದು ಎಂದು ರನಿಲ್‌ ವಿಕ್ರಮಸಂಘೆ ಹೇಳಿದ್ದಾರೆ. ವಿದೇಶಿ ವಿನಿಮಯ ಸಂಗ್ರಹ ಬರಿದಾಗುತ್ತಿರುವುದರಿಂದ ಲಂಕಾದಲ್ಲಿ ಅಗತ್ಯ ವಸ್ತುಗಳಿಗೂ ಜನತೆ ಪರದಾಡುವಂತಾಗಿದೆ.

ಸಿಲೋನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ 700 ದಶಲಕ್ಷ ಡಾಲರ್‌ ( ೫.೪೬ ಲಕ್ಷ ಕೋಟಿ ರೂ.) ಸಾಲವನ್ನು ಹೊಂದಿದೆ. ಹೀಗಾಗಿ ಯಾರೂ ಕಚ್ಚಾ ತೈಲ ಮಾರಾಟ ಮಾಡಲು ಸಿದ್ಧರಿಲ್ಲ. ನಗದಿಗೆ ತೈಲ ಕೊಡಲೂ ಹಿಂಜರಿಯುತ್ತಿವೆ ಎಂದು ರನಿಲ್‌ ವಿವರಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Suraj Revanna Case: ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ

Suraj Revanna Case: 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್‌ಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ.

VISTARANEWS.COM


on

Suraj Revanna Case
Koo

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನವಾಗಿರುವ ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ಸಿಐಡಿ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಸೂರಜ್‌ಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ. ಇದರಿಂದ ಸೂರಜ್ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ

ಇನ್ನು ಸೂರಜ್ ರೇವಣ್ಣ ಪರ ವಕೀಲ ನಿಖಿಲ್ ಡಿ ಕಾಮತ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಐಡಿಗೆ ನ್ಯಾಯಾಧಿಶರು ಸೂಚಿಸಿದ್ದಾರೆ. ಹೀಗಾಗಿ ನಾಳೆಗೆ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ಮಗನ ಬಗ್ಗೆ ಬೇಸರ ವ್ಯಕ್ತಪಡಿಸಿದ ರೇವಣ್ಣ

ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ನ ಮಾಜಿ ಸಚಿವ ಎಚ್.ಡಿ. ರೇವಣ್ಣ ಬುಧವಾರ ಭೇಟಿ ಮಾಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿರುವ ಮಗನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರೇವಣ್ಣ, ಭವಿಷ್ಯವನ್ನು ಹಾಳು ಮಾಡಿಕೊಂಡೆ. ನಮ್ಮ ಕುಟುಂಬಕ್ಕೂ ಕೆಟ್ಟ ಹೆಸರು ತಂದೆ. ಎಂತಹ ಮಕ್ಕಳು ಹುಟ್ಟಿದ್ದೀರಪ್ಪಾ ನನಗೆ ಎಂದು ಬೇಸರ ಹೊರಹಾಕಿದ್ದಾರೆ ಎನ್ನಲಾಗಿದೆ.

ನಮ್ಮ ಹಣೆಬರಹ ಏನೂ ಮಾಡೋದಿಕ್ಕೆ ಆಗೋದಿಲ್ಲ ಎಂದು ರೇವಣ್ಣ ಬೇಸರ ವ್ಯಕ್ತಪಡಿಸಿದಾಗ, ತಂದೆ ಮಾತಿಗೆ ಮರು ಉತ್ತರ ನೀಡಲಾಗದೆ ಪ್ರಜ್ವಲ್ ಸುಮ್ಮನಾಗಿದ್ದಾರೆ. ನಂತರ ಬಟ್ಟೆ ಮತ್ತು ಹಣ್ಣುಗಳನ್ನು ನೀಡಿ ರೇವಣ್ಣ ವಾಪಸ್ ತೆರಳಿದ್ದಾರೆ ಎಂದು ಜೈಲ್ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

ಬೆಂಗಳೂರು: ನಗರದಲ್ಲಿ ಮತ್ತೊಂದು ರೇಪ್ ಆ್ಯಂಡ್ ಮರ್ಡರ್ ಕೇಸ್‌ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿರುವ ಘಟನೆ (Physical Abuse) ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಕೂಲಿ ಕೆಲಸ ಮಾಡುವ ದಂಪತಿಯ 6 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಗಳು, ನಂತರ ಕೊಲೆ ಮಾಡಿ ಪಾರ್ಕಿಂಗ್‌ ಪ್ರದೇಶದ ಮರವೊಂದರ ಬಳಿ ಶವ ಎಸೆದಿದ್ದಾರೆ. ರಾತ್ರಿ ವೇಳೆ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಪಾರ್ಕಿಂಗ್ ಲಾಟ್‌ನಲ್ಲಿದ್ದರೂ ಬಾಲಕಿ ಕೊಲೆ ವಿಚಾರ ಬೆಳಕಿಗೆ ಬಂದಿರಲಿಲ್ಲ. ಜನರು ಓಡಾಡುತ್ತಿದ್ದರೂ ಯಾರೂ ಗಮನ ಹರಿಸಿರಲಿಲ್ಲ. ಮೈ ಮೇಲೆ ಪರಚಿದ ಗಾಯಗಳು ಹಾಗು ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದೆ. ಸದ್ಯ ಬಾಲಕಿ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Actor Darshan: ದರ್ಶನ್‌ ಕೆಟ್ಟ ವ್ಯಕ್ತಿಯಲ್ಲ, ತಪ್ಪು ಮಾಡಿಲ್ಲ ಎಂದ ಕೆ. ಮಂಜು

ಈ ಬಗ್ಗೆ ರೈಲ್ವೆ ಎಸ್ ಪಿ ಡಾ. ಸೌಮ್ಯ ಲತಾ ಅವರು ಪ್ರತಿಕ್ರಿಯಿಸಿ, ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಲ್ಲಿ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ನಮ್ಮ ಸಿಬ್ಬಂದಿ ಬಂದು ತಿಳಿಸಿದ್ದು, ಪರಿಶೀಲನೆ ನಡೆಸಲಾಗಿದೆ. ದೇಹದ ಮೇಲೆ ಸಾಕಾಷ್ಟು ಗಾಯಗಳಾಗಿವೆ, ಸಿಸಿಟಿವಿ ದೃಶ್ಯ ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆ ಮಾಡಿ ಎಲ್ಲಿಂದಲ್ಲೋ ತಂದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Continue Reading

Latest

Sexual Harassment: ಎಲ್ಲಾ ತಂದೆಯರೂ ಹೀಗೇ ಮಾಡುತ್ತಾರೆ ಎನ್ನುತ್ತ ಮಗಳನ್ನೇ ಗರ್ಭಿಣಿ ಮಾಡಿದ್ದ ನೀಚ ತಂದೆಗೆ 101 ವರ್ಷ ಶಿಕ್ಷೆ!

Sexual Harassment: ಹೆಣ್ಣುಮಕ್ಕಳಿಗೆ ಅಪ್ಪನೆಂದರೆ ಆಕಾಶ ಎಂಬ ಭಾವ ಇರುತ್ತದೆ. ಆದರೆ ಈಗ ಸಮಾಜದಲ್ಲಿ ನಡೆಯುತ್ತಿರುವ ಘಟನೆ ನೋಡಿದರೆ ಅಪ್ಪನೆಂದರೆ ಅನುಮಾನ ಪಡುವ ಹಾಗೇ ಆಗಿದೆ. ತನ್ನ ಮಗಳನ್ನು ಜತನದಿಂದ ಕಾಪಾಡಬೇಕಾದ ತಂದೆಯೇ ಮಗಳಿಗೆ ಸುಳ್ಳು ಹೇಳಿ ನಂಬಿಸಿ ಅವಳೊಂದಿಗೆ ಕಾಮದಾಟವಾಡಿದ್ದಾನೆ. ಸತತ ಆರು ವರ್ಷಗಳ ಕಾಲ ಮಗಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು ಗರ್ಭಿಣಿ ಮಾಡಿದಂತಹ ನೀಚಕೃತ್ಯ ಬಯಲಿಗೆ ಬಂದಿತ್ತು. ಇದೀಗ ಆತನಿಗೆ ಕೋರ್ಟ್‌ ಕಠಿಣ ಶಿಕ್ಷೆ ವಿಧಿಸಿದೆ.

VISTARANEWS.COM


on

Sexual Harassment
Koo

ತಂದೆ ತಮ್ಮ ಹೆಣ್ಣುಮಕ್ಕಳ ರಕ್ಷಕನಾಗಿರುತ್ತಾನೆ. ಆದರೆ ಈ ರಕ್ಷಕನೇ ಭಕ್ಷಕನಾದರೆ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವವರು ಯಾರು? ಕೆಲವು ತಂದೆಯರು ತಮ್ಮ ಹೆಣ್ಣು ಮಕ್ಕಳನ್ನು ನೀಚರಿಂದ ಕಾಪಾಡಲು ತಮ್ಮ ಪ್ರಾಣವನ್ನೇ ಕೊಡುತ್ತಾರೆ. ಆದರೆ ಕೆಲವರು ತಮ್ಮ ಹೆಣ್ಣು ಮಕ್ಕಳನ್ನೇ ಕಾಮದಾಟಕ್ಕೆ(Sexual Harassment) ಬಳಸಿಕೊಳ್ಳುತ್ತಾರೆ. ಅಂತಹ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಆಕೆಯ ತಂದೆಯೇ ಆರು ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೇರಳದಲ್ಲಿ ನಡೆದಿದ್ದು, ಕೋರ್ಟ್ ಆತನಿಗೆ ತಕ್ಕ ಶಿಕ್ಷೆ ವಿಧಿಸಿದೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ, ಇದು ವೈರಲ್ ಆಗಿದ್ದು ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.  ನೀಚ ತಂದೆಯ ಕೃತ್ಯದ ವಿರುದ್ಧ ಜನರು ಕಿಡಿಕಾರಿದ್ದಾರೆ. ಇದೀಗ ಈ ಪಾಪಿ ತಂದೆಗೆ ಕೋರ್ಟ್‌ ಕಠಿಣ ಶಿಕ್ಷೆ ವಿಧಿಸಿದೆ.

ಆರೋಪಿ ಮುಹಮ್ಮದ್ ಎಚ್ ಮಗಳ ಮೇಲೆ ಅತ್ಯಾಚಾರ ಎಸಗಿದ ಪಾಪಿ ತಂದೆ. ಈತ ತನ್ನ 10 ವರ್ಷದ ಮಗಳಿಗೆ ʼಎಲ್ಲಾ ತಂದೆಯರು ತಮ್ಮ ಹೆಣ್ಣು ಮಕ್ಕಳಿಗೆ ಈ ರೀತಿ ಮಾಡುತ್ತಾರೆʼ ಎಂದು ಹೇಳುವ ಮೂಲಕ ಆಕೆಯನ್ನು ಆರು ವರ್ಷಗಳ ಕಾಲ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ತಾಯಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ತಂದೆ ಮಗಳ ಮೇಲೆ ಇಂತಹ ಘೋರ ಕೃತ್ಯ ಎಸಗಿದ್ದಾನೆ. ಇದರ ಪರಿಣಾಮವಾಗಿ ಬಾಲಕಿ 16ನೇ ವಯಸ್ಸಿಗೆ ಗರ್ಭಿಣಿಯಾಗಿದ್ದಾಳೆ. ಅಸ್ವಸ್ಥಗೊಂಡ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷಿಸಿದಾಗ ಈ ವಿಚಾರ ಬಯಲಿಗೆ ಬಂದಿತ್ತು.

ಈ ಬಗ್ಗೆ ಮಗಳು ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಮಕ್ಕಳ ರಕ್ಷಣೆ ಕಾಯ್ದೆ, 2012 (ಪೋಕ್ಸೊ ಕಾಯ್ದೆ), ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಬಾಲನ್ಯಾಯ ಕಾಯ್ದೆ (ಜೆಜೆ ಕಾಯ್ದೆ) ಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ಇದನ್ನೂ ಓದಿ: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

ಡಿಎನ್‍ಎ ಪರೀಕ್ಷೆಯಲ್ಲಿ ಸತ್ಯಾಂಶ ತಿಳಿದುಬಂದಿದೆ. ಹಾಗಾಗಿ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ ಕೇರಳ ನ್ಯಾಯಾಲಯವು ಮುಹಮ್ಮದ್‍ಗೆ ಜೀವಾವಧಿ ಶಿಕ್ಷೆಯೊಂದಿಗೆ 101 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಂದರೆ ಹಲವು ಪ್ರತ್ಯೇಕ ಶಿಕ್ಷೆ ಸೇರಿ 101 ವರ್ಷ ಶಿಕ್ಷೆಯಾಗುತ್ತದೆ. ಈ ಶಿಕ್ಷೆಯನ್ನು ಜೀವಿತಾವಧಿಯಲ್ಲಿ ಒಟ್ಟಿಗೇ ಅನುಭವಿಸಬೇಕಾಗುತ್ತೆ.

Continue Reading

ಕರ್ನಾಟಕ

Koo Shut Down: ‘ಕೂ’ಗು ನಿಲ್ಲಿಸಿದ ಕನ್ನಡಿಗನೇ ಕಟ್ಟಿದ ಆ್ಯಪ್‌; ದೇಶೀಯ ಟ್ವಿಟರ್‌ ಇನ್ನು ನೆನಪು ಮಾತ್ರ!

Koo Shut Down: ಭಾರತದಲ್ಲಿ ಜಾಗತಿಕ ಮಟ್ಟದ ಸಂಸ್ಥೆ, ಅಪ್ಲಿಕೇಶನ್‌ಅನ್ನು ನಿರ್ವಹಣೆ ಮಾಡಲು ಭಾರಿ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ. ಕೂ ಅಪ್ಲಿಕೇಶನ್‌ ನಿರ್ವಹಣೆಗೂ ಹೆಚ್ಚಿನ ಬಂಡವಾಳ ಬೇಕಾಗಿದ್ದು, ಇದಕ್ಕೆ ಅಧಿಕ ಪ್ರಮಾಣದಲ್ಲಿ ಹಣ ಹರಿದುಬಂದಿಲ್ಲ. ಬೇರೆ ಕಂಪನಿಗಳಿಗೆ ಮಾರಾಟ ಮಾಡುವ ಅಥವಾ ವಿಲೀನಗೊಳಿಸುವ ದಿಸೆಯಲ್ಲಿ ಸತತ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ ಎಂಬುದಾಗಿ ಕೂ ಸಂಸ್ಥಾಪಕ ರಾಧಾಕೃಷ್ಣ ಅಪ್ರಮೇಯ ತಿಳಿಸಿದ್ದಾರೆ.

VISTARANEWS.COM


on

Koo Shut Down
Koo

ಬೆಂಗಳೂರು: ಜಾಗತಿಕ ಖ್ಯಾತಿಯ ಟ್ವಿಟರ್‌ಗೆ (ಈಗ ಎಕ್ಸ್)‌ ಸೆಡ್ಡು ಹೊಡೆಯುವ ದಿಸೆಯಲ್ಲಿ 2020ರಲ್ಲಿ ಕನ್ನಡಿಗ ಅಪ್ರಮೇಯ ರಾಧಾಕೃಷ್ಣ ಅವರು ಪರಿಚಯಿಸಿದ್ದ ಕೂ ಸೋಷಿಯಲ್‌ ಮೀಡಿಯಾ ಅಪ್ಲಿಕೇಶನ್‌ (Koo Shut Down) ಈಗ ಇತಿಹಾಸದ ಪುಟ ಸೇರಿದೆ. ಹೌದು, ಕೂ ಅಪ್ಲಿಕೇಶನ್‌ (Koo Application) ಸ್ಥಗಿತಗೊಳಿಸುವುದಾಗಿ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ (Aprameya Radhakrishna) ಹಾಗೂ ಮಯಾಂಕ್‌ ಬಿಡವಟ್ಕ (Mayank Bidawatka) ಅವರು ಘೋಷಣೆ ಮಾಡಿದ್ದು, ಇದರಿಂದ ಕನ್ನಡಿಗರು ಅಭಿವೃದ್ಧಿಪಡಿಸಿದ, ದೇಶಾದ್ಯಂತ ಖ್ಯಾತಿ ಗಳಿಸಿದ್ದ, ಕೋಟ್ಯಂತರ ಜನರು ಬಳಸುತ್ತಿದ್ದ ಕೂ ಈಗ ‘ಕೂ’ಗು ನಿಲ್ಲಿಸಿದಂತಾಗಿದೆ.

ಕೂ ಸ್ಥಗಿತಗೊಳಿಸುವ ಕುರಿತು ಅಪ್ರಮೇಯ ರಾಧಾಕೃಷ್ಣ ಅವರು ಲಿಂಕ್ಡ್‌ ಇನ್‌ನಲ್ಲಿ ಬರೆದುಕೊಂಡಿದ್ದಾರೆ. “ಭಾರತದಲ್ಲಿ ಜಾಗತಿಕ ಮಟ್ಟದ ಸಂಸ್ಥೆ, ಅಪ್ಲಿಕೇಶನ್‌ಅನ್ನು ನಿರ್ವಹಣೆ ಮಾಡಲು ಭಾರಿ ಪ್ರಮಾಣದಲ್ಲಿ ಬಂಡವಾಳ ಬೇಕಾಗುತ್ತದೆ. ಕೂ ಅಪ್ಲಿಕೇಶನ್‌ ನಿರ್ವಹಣೆಗೂ ಹೆಚ್ಚಿನ ಬಂಡವಾಳ ಬೇಕಾಗಿದ್ದು, ಇದಕ್ಕೆ ಅಧಿಕ ಪ್ರಮಾಣದಲ್ಲಿ ಹಣ ಹರಿದುಬಂದಿಲ್ಲ. ಬೇರೆ ಕಂಪನಿಗಳಿಗೆ ಮಾರಾಟ ಮಾಡುವ ಅಥವಾ ವಿಲೀನಗೊಳಿಸುವ ದಿಸೆಯಲ್ಲಿ ಸತತ ಪ್ರಯತ್ನ ಮಾಡಿದರೂ ಅದು ಫಲ ಕೊಡಲಿಲ್ಲ. ಹಾಗಾಗಿ, ಕೂ ಅಪ್ಲಿಕೇಶನ್‌ಅನ್ನು ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.

ಕೂ ಅಪ್ಲಿಕೇಶನ್‌ ಸಂಸ್ಥಾಪಕರಾದ ಅಪ್ರಮೇಯ ರಾಧಾಕೃಷ್ಣ ಹಾಗೂ ಮಯಾಂಕ್‌ ಬಿಡವಟ್ಕ.

“ನಮಗೆ ಕೂ ಅಪ್ಲಿಕೇಶನ್‌ಅನ್ನು ಸ್ಥಗಿತಗೊಳಿಸಲು ಮನಸ್ಸಿರಲಿಲ್ಲ. ಹಾಗಾಗಿ, ಬೃಹತ್‌ ಇಂಟರ್‌ನೆಟ್‌ ಕಂಪನಿಗಳು, ಮೀಡಿಯಾ ಸಂಸ್ಥೆಗಳು ಸೇರಿ ಹತ್ತಾರು ಕಂಪನಿಗಳ ಜತೆ ವಿಲೀನ, ಮಾರಾಟದ ಕುರಿತು ಸತತ ಮಾತುಕತೆ ನಡೆಸಿದೆವು. ಆದರೆ, ಒಂದೇ ಒಂದು ಕಂಪನಿಯ ಜತೆ ನಾವು ವ್ಯವಹಾರ ಮಾಡಲು ಆಗಲಿಲ್ಲ. ಯಾರೂ ಕೂ ಕಂಪನಿಯನ್ನು ಖರೀದಿ ಮಾಡಲಿಲ್ಲ. ಕೂ ಅಪ್ಲಿಕೇಶನ್‌ಅನ್ನು ಇನ್ನಷ್ಟು ಜನಪ್ರಿಯಗೊಳಿಸಲು, ಜಾಗತಿಕ ಕಂಪನಿಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಬದಲಾವಣೆ ತರಲು ಸುಮಾರು 6 ವರ್ಷಗಳ ಅವಧಿಗೆ ಬಂಡವಾಳದ ಅವಶ್ಯಕತೆ ಇತ್ತು. ಆದರೆ, ಅದನ್ನು ನಿರ್ವಹಣೆ ಮಾಡಲು ಆಗದ ಕಾರಣ ಸ್ಥಗಿತಗೊಳಿಸಲು ಮುಂದಾಗಿದ್ದೇವೆ” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಹಣಕಾಸು ಬಿಕ್ಕಟ್ಟಿನಿಂದಾಗಿ 2023ರಲ್ಲಿ ಕೆಲ ಉದ್ಯೋಗಿಗಳನ್ನೂ ವಜಾಗೊಳಿಸಲಾಗಿತ್ತು.

ಮೋದಿ ಕೂಡ ಬಳಸುತ್ತಿದ್ದರು

2020ರಲ್ಲಿ ಟ್ವಿಟರ್‌ಗೆ ಪರ್ಯಾಯವಾಗಿ ಕೂ ಸಾಮಾಜಿಕ ಜಾಲತಾಣದ ಪರಿಚಯಿಸಿದಾಗ ಅದು ಭಾರಿ ಖ್ಯಾತಿ ಗಳಿಸಿತು. ಕೆಲವೇ ದಿನಗಳಲ್ಲಿ ಲಕ್ಷಾಂತರ ಜನ ಕೂ ಅಪ್ಲಿಕೇಶನ್‌ಅನ್ನು ಡೌನ್‌ಲೋಡ್‌ ಮಾಡಿಕೊಂಡರು. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸಚಿವರು, ಗಣ್ಯರು ಕೂ ಇನ್‌ಸ್ಟಾಲ್‌ ಮಾಡಿಕೊಳ್ಳುವ ಮೂಲಕ ದೇಶೀಯ ಜಾಲತಾಣಕ್ಕೆ ಬೆಂಬಲ ಸೂಚಿಸಿದರು. ದೇಶದ 9 ಸಾವಿರ ವಿಐಪಿಗಳು ಸೇರಿ ಒಂದು ಹಂತದಲ್ಲಿ ಪ್ರತಿದಿನ 21 ಲಕ್ಷ ದೇಶೀಯ ಬಳಕೆದಾರರು ‘ಕೂ’ಗೆ ಇದ್ದರು. ಆದರೆ, ಎಕ್ಸ್‌ ಜಾಲತಾಣಕ್ಕೆ ಸೆಡ್ಡು ಹೊಡೆಯಲು ಆಗದೆ, ಬೇರೆ ಬೇರೆ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಆಗದೆ, ಬಂಡವಾಳ ಸೆಳೆಯಲು ಆಗೆ ಈಗ ಕೂ ತೆರೆಗೆ ಸರಿಯುತ್ತಿದೆ.

ಇದನ್ನೂ ಓದಿ: Elon Musk: ಜಿಮೇಲ್ ಸ್ಥಗಿತ ವದಂತಿ ಮಧ್ಯೆಯೇ ಶೀಘ್ರ ‘ಎಕ್ಸ್‌ಮೇಲ್’ ಲಾಂಚ್!

Continue Reading

Latest

Ananth Ambani: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

Ananth Ambani ಅನಂತ್ ಮತ್ತು ರಾಧಿಕಾ ಅವರ ವಿವಾಹ ಸಮಾರಂಭವು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜುಲೈ 2 ರಂದು ಅಂಬಾನಿ ಕುಟುಂಬವು ದೀನದಲಿತರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದೆ. ಈ ಸಮಾರಂಭವು ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‍ನಲ್ಲಿ ನಡೆಯಿತು. ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಸೇರಿದಂತೆ ಇಡೀ ಕುಟುಂಬ ಮಂಗಳವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

VISTARANEWS.COM


on

Ananth Ambani
Koo

ಮುಂಬೈ : ಅಂಬಾನಿ ಕುಟುಂಬದ ಕುಡಿ ಅನಂತ್ ಅಂಬಾನಿ (Ananth Ambani) ಜುಲೈ 12ರಂದು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಈಗಾಗಲೇ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರನ ಮದುವೆಯ ಹಿನ್ನಲೆಯಲ್ಲಿ ಎರಡು ಅದ್ಧೂರಿ ವಿವಾಹಪೂರ್ವ ಉತ್ಸವಗಳನ್ನು ಆಚರಿಸಿದ್ದರು. ಈ ನಡುವೆ ಮದುವೆ ತಯಾರಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಅನಂತ್ ಮದುವೆಗೂ ಮುನ್ನ ಅಂಬಾನಿ ದಂಪತಿ ಇತ್ತೀಚೆಗೆ ದೀನದಲಿತರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದರು.

ಅನಂತ್ ಮತ್ತು ರಾಧಿಕಾ ಅವರ ವಿವಾಹ ಸಮಾರಂಭವು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಜುಲೈ 2 ರಂದು ಅಂಬಾನಿ ಕುಟುಂಬವು ದೀನದಲಿತರಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಿದೆ. ಈ ಸಮಾರಂಭವು ರಿಲಯನ್ಸ್ ಕಾರ್ಪೊರೇಟ್ ಪಾರ್ಕ್‍ನಲ್ಲಿ ನಡೆಯಿತು.

ಮುಕೇಶ್ ಅಂಬಾನಿ, ನೀತಾ ಅಂಬಾನಿ, ಆಕಾಶ್ ಅಂಬಾನಿ, ಶ್ಲೋಕಾ ಅಂಬಾನಿ, ಇಶಾ ಅಂಬಾನಿ ಮತ್ತು ಆನಂದ್ ಪಿರಮಾಲ್ ಸೇರಿದಂತೆ ಇಡೀ ಕುಟುಂಬ ಮಂಗಳವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂಬೈ ಬಳಿಯ ಪಾಲ್ಘರ್ ಪ್ರದೇಶದ 50 ಬಡ ದಂಪತಿಗಳೊಂದಿಗೆ ಸಾಮೂಹಿಕ ವಿವಾಹವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುಮಾರು 800 ಜನರು ಭಾಗವಹಿಸಿದ್ದಾರೆ ಎನ್ನಲಾಗಿದೆ.

ಈ ವೇಳೆ ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಅಂಬಾನಿ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಶಾ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಆಗಮಿಸಿದ ವಿಡಿಯೋ ವೈರಲ್ ಆಗಿದೆ. ಲೈಟ್ ಮೇಕಪ್ ಮತ್ತು ಶರಾರಾ ಸೂಟ್‍ನಲ್ಲಿ ಶ್ಲೋಕಾ ಸುಂದರವಾಗಿ ಕಾಣುತ್ತಿದ್ದರು. ಮತ್ತೊಂದೆಡೆ, ಅವರ ಪತಿ ಆಕಾಶ್ ಗರಿಗರಿಯಾದ ಬಿಳಿ ಬಣ್ಣದ ಶರ್ಟ್‍ನಲ್ಲಿ ಸ್ಮಾರ್ಟ್ ಆಗಿ ಕಾಣುತ್ತಿದ್ದರು. ಹಾಗೇ ಅನಾರ್ಕಲಿಯನ್ನು ಧರಿಸಿಕೊಂಡ ಇಶಾ ಅಂಬಾನಿ, ಅವರ ಪತಿ ಆನಂದ್ ಪಿರಮಾಲ್ ಅವರೊಂದಿಗೆ ಕಾಣಿಸಿಕೊಂಡರು. ನೀತಾ ಅಂಬಾನಿಯವರು ಕೆಂಪು-ಗುಲಾಬಿ ಬಣ್ಣ ಮಿಶ್ರಿತ ಸೀರೆಯಲ್ಲಿ ಮಿಂಚಿದ್ದಾರೆ.

ಸಮಾಜ ಸೇವೆಯಲ್ಲಿ ನಂಬಿಕೆ ಹೊಂದಿರುವ ಅಂಬಾನಿ ಕುಟುಂಬವು ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಿತ್ತು. ಕುಟುಂಬವು ಇತರರಿಗೆ ಸೇವೆ ಸಲ್ಲಿಸುವ ಮೂಲಕ ದೊಡ್ಡ ಸಮಾರಂಭವನ್ನು ಪ್ರಾರಂಭಿಸುವ ಸಂಪ್ರದಾಯವನ್ನು ಹೊಂದಿದೆ. ಮುಕೇಶ್ ಅಂಬಾನಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸಮಾರಂಭದಲ್ಲಿ ಭಾಗವಹಿಸಿ ದಂಪತಿಗಳಿಗೆ ತಮ್ಮ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಸಾಮೂಹಿಕ ವಿವಾಹದಲ್ಲಿ ಅಂಬಾನಿ ಕುಟುಂಬವು ದಂಪತಿಗಳಿಗೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿತು. ವಧುವಿಗೆ ಮಂಗಳಸೂತ್ರ, ಮದುವೆಯ ಉಂಗುರಗಳು ಮತ್ತು ಮೂಗುತಿ ಸೇರಿದಂತೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದರು.

ಇದನ್ನೂ ಓದಿ: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

ಹಾಗೇ ಅವರು ಕಾಲುಂಗುರ ಮತ್ತು ಕಾಲ್ಗೆಜ್ಜೆಗಳು ಸೇರಿದಂತೆ ಬೆಳ್ಳಿಯ ಆಭರಣಗಳನ್ನು ದಂಪತಿಗಳಿಗೆ ನೀಡಿದರು. ವಧುವಿಗೆ 1.01 ಲಕ್ಷ ರೂ.ಗಳ ಚೆಕ್ ಅನ್ನು ನೀಡಲಾಯಿತು. ಪ್ರತಿ ದಂಪತಿಗೆ 36 ಅಗತ್ಯ ವಸ್ತುಗಳು ಮತ್ತು ಪಾತ್ರೆಗಳು, ಗ್ಯಾಸ್ ಸ್ಟೌವ್, ಮಿಕ್ಸರ್ ಮತ್ತು ಫ್ಯಾನ್‍ನಂತಹ ಉಪಕರಣಗಳು, ಹಾಸಿಗೆ ಮತ್ತು ದಿಂಬುಗಳು ಸೇರಿದಂತೆ ಒಂದು ವರ್ಷಕ್ಕೆ ಸಾಕಾಗುವಷ್ಟು ದಿನಸಿ ಮತ್ತು ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಯಿತು.

Continue Reading
Advertisement
Ram charan the Indian House on set
ಟಾಲಿವುಡ್6 mins ago

Ram Charan: ಹಂಪಿ ವಿರೂಪಾಕ್ಷ ಸನ್ನಿಧಿಯಲ್ಲಿ ಸೆಟ್ಟೇರಿತು ರಾಮ್ ಚರಣ್ ನಿರ್ಮಾಣದ ಸಿನಿಮಾ!

Family drama Kannada movie song
ಕರ್ನಾಟಕ8 mins ago

Kannada New Movie: ಸಿನಿಪ್ರಿಯರ ಗಮನ ಸೆಳೆಯುತ್ತಿದೆ ‘ಫ್ಯಾಮಿಲಿ ಡ್ರಾಮ’ ಸಿನಿಮಾದ ಸಾಂಗ್!

Suraj Revanna Case
ಕರ್ನಾಟಕ10 mins ago

Suraj Revanna Case: ಸೂರಜ್ ರೇವಣ್ಣಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನ

Sexual Harassment
Latest11 mins ago

Sexual Harassment: ಎಲ್ಲಾ ತಂದೆಯರೂ ಹೀಗೇ ಮಾಡುತ್ತಾರೆ ಎನ್ನುತ್ತ ಮಗಳನ್ನೇ ಗರ್ಭಿಣಿ ಮಾಡಿದ್ದ ನೀಚ ತಂದೆಗೆ 101 ವರ್ಷ ಶಿಕ್ಷೆ!

Koo Shut Down
ಕರ್ನಾಟಕ21 mins ago

Koo Shut Down: ‘ಕೂ’ಗು ನಿಲ್ಲಿಸಿದ ಕನ್ನಡಿಗನೇ ಕಟ್ಟಿದ ಆ್ಯಪ್‌; ದೇಶೀಯ ಟ್ವಿಟರ್‌ ಇನ್ನು ನೆನಪು ಮಾತ್ರ!

Ananth Ambani
Latest30 mins ago

Ananth Ambani: ಸಾಮೂಹಿಕ ವಿವಾಹದಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಅಂಬಾನಿ ಕುಟುಂಬ

kanaganahalli mid day meal
ಕಲಬುರಗಿ32 mins ago

Mid Day Meal: ಕಲಬುರಗಿಯಲ್ಲಿ ಬಿಸಿಯೂಟ ಉಂಡ 33 ವಿದ್ಯಾರ್ಥಿಗಳು ಅಸ್ವಸ್ಥ; 3 ದಿನಗಳಲ್ಲಿ ಎರಡನೇ ಘಟನೆ

Yakshagana artist Tulsi Hegade added to the world record list
ಕರ್ನಾಟಕ33 mins ago

Sirsi News: ವಿಶ್ವಶಾಂತಿಗೆ ಯಕ್ಷ ನೃತ್ಯ ಕೊಡುಗೆ; ವಿಶ್ವದಾಖಲೆ ಪಟ್ಟಿಗೆ ತುಳಸಿ ಹೆಗಡೆ ಸೇರ್ಪಡೆ

Hardik Pandya
ಕ್ರೀಡೆ33 mins ago

Hardik Pandya: ಆಲ್​ರೌಂಡರ್​ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ ಹಾರ್ದಿಕ್​ ಪಾಂಡ್ಯ

Actor Darshan K manju talks
ಸ್ಯಾಂಡಲ್ ವುಡ್35 mins ago

Actor Darshan: ದರ್ಶನ್‌ ಕೆಟ್ಟ ವ್ಯಕ್ತಿಯಲ್ಲ, ತಪ್ಪು ಮಾಡಿಲ್ಲ ಎಂದ ಕೆ. ಮಂಜು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ21 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌