Viral Video: ಆನೆಗಳನ್ನು ಕಂಡ ಹುಲಿಯದ್ದು ಪುಕ್ಕಲುತನವೋ, ಗೌರವವೋ!; ಮುದುಡಿ ಕುಳಿತಿದ್ಯಾಕೆ? - Vistara News

ವೈರಲ್ ನ್ಯೂಸ್

Viral Video: ಆನೆಗಳನ್ನು ಕಂಡ ಹುಲಿಯದ್ದು ಪುಕ್ಕಲುತನವೋ, ಗೌರವವೋ!; ಮುದುಡಿ ಕುಳಿತಿದ್ಯಾಕೆ?

ಐಎಫ್​ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಕಾಡೆಂಬ ಸಾಮ್ರಾಜ್ಯದಲ್ಲಿ ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ, ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ ಎಂದು ಹೇಳಿದ್ದಾರೆ.

VISTARANEWS.COM


on

Special Video Of Tiger And elephants viral in Social Media
ಸಾಂದರ್ಭಿಕ ಚಿತ್ರ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದೊಡ್ಡ ದೇಹ, ಅಗಲ ಕಿವಿ, ನಾಲ್ಕು ಕಂಬದಂಥ ಕಾಲುಗಳು, ಸಾಲದ್ದಕ್ಕೆ ಉದ್ದನೆಯ ಸೊಂಡಿಲು ಹೊತ್ತು ಗಾಂಭೀರ್ಯದಿಂದ ಓಡಾಡುವ ಆನೆಗಳ ಬಳಿ ಹೋಗಲು ಎಂಥವರಿಗಾದರೂ ಸಣ್ಣ ಅಳುಕು ಇದ್ದೇ ಇರುತ್ತದೆ. ಅವು ಮುದ್ದಿಸುವಾಗ ಎಷ್ಟು ಚೆನ್ನಾಗಿ ಮುದ್ದಿಸುತ್ತವೋ, ಕೋಪಗೊಂಡಾಗ ಒಂದೇ ಕ್ಷಣದಲ್ಲಿ ಎತ್ತಿ ಬಿಸಾಕಿ ಬಿಡುತ್ತವೆ. ಇದು ಮನುಷ್ಯರಿಗೆ ಮಾತ್ರ ಅನ್ವಯವಲ್ಲ. ಕಾಡಿನಲ್ಲಿರುವ ಕಾಡಾನೆಗಳು ಸ್ವಲ್ಪ ಆಕ್ರಮಣ ಮನೋಭಾವವನ್ನೇ ಹೊಂದಿರುತ್ತವೆ. ಚಿಕ್ಕಪುಟ್ಟ ಪ್ರಾಣಿಗಳು ಬಿಡಿ, ಹುಲಿ-ಸಿಂಹಗಳಂಥ ಕ್ರೌರ್ಯವೇ ತುಂಬಿದ, ಬೇಟೆಯಾಡಲು ಹೆಸರು ಮಾತಾಗಿರುವ ಪ್ರಾಣಿಗಳು ಅಷ್ಟು ಬೇಗ ಆನೆಗಳ ಬಳಿ ಹೋಗುವುದಿಲ್ಲ. ಕಾಡಿನಲ್ಲಿ ಆನೆಗಳು ಹಿಂಡಿನಲ್ಲಿಯೇ ಇರುವುದರಿಂದ ಹುಲಿ-ಸಿಂಹಗಳು ಕೂಡ ಸಲೀಸಾಗಿ ಅವುಗಳ ಸಹವಾಸಕ್ಕೆ ಹೋಗೋದಿಲ್ಲ. ಆನೆಗಳು ಒಂಟಿಯಾಗಿ ಸಿಕ್ಕರೆ ಈ ಕಾಡು ಪ್ರಾಣಿಗಳು ಬೇಟೆಗೆ ಮುನ್ನುಗ್ಗಿದರೂ ಬಹುಪಾಲು ಸಮಯದಲ್ಲಿ ಗೆಲುವು ಆನೆಯದ್ದೇ ಆಗಿರುತ್ತದೆ.

ಈಗ ಸೋಷಿಯಲ್ ಮೀಡಿಯಾದಲ್ಲಿ ಆನೆಗಳು ಮತ್ತು ಒಂದು ಹುಲಿಯ ವಿಡಿಯೊ ವೈರಲ್ ಆಗುತ್ತಿದೆ. ಅದೊಂದು ರಸ್ತೆಯಲ್ಲಿ ಹುಲಿಯೊಂದು ಉದ್ದನೆಯ ಬಾಲ ಅಲ್ಲಾಡಿಸುತ್ತ, ಅಂಕು-ಡೊಂಕು ಹೆಜ್ಜೆ ಇಡುತ್ತ ಬಿಂದಾಸ್ ಆಗಿ ಹೋಗುತ್ತಿರುತ್ತದೆ. ಥಟ್ಟನೇ ರಸ್ತೆ ಪಕ್ಕದ ಕಾಲುವೆಯಲ್ಲಿ, ದೊಡ್ಡದಾದ ಹುಲ್ಲುಗಳ ಮರೆಯಲ್ಲಿ ಅವಿತು, ಮುದುಡಿ ಕುಳಿತುಬಿಡುತ್ತದೆ. ಅದ್ಯಾಕೆ ಆ ಹುಲಿ ಹಾಗೆ ಮಾಡಿತು ಎಂದು ನೀವು ಯೋಚಿಸುವುದರೊಳಗೆ, ಅಲ್ಲಿ ಸಲಗವೊಂದು ಬರುತ್ತಿರುವುದು ನಿಮಗೆ ಕಾಣಿಸುತ್ತದೆ. ಹೀಗೆ ಮೂರು ಸಲಗಗಳು ರಸ್ತೆ ದಾಟಿ ಪಕ್ಕದ ಕಾಡಿಗೆ ಹೋಗುವವರೆಗೂ ಹುಲಿ ಅಲ್ಲಿಂದ ಎದ್ದು ಬರುವುದಿಲ್ಲ. ಆನೆಗಳು ಹೋದವು ಎಂದು ದೃಢಪಡಿಸಿಕೊಂಡ ಬಳಿಕ ಅಲ್ಲಿಂದ ಎದ್ದ ಹುಲಿ, ಆನೆಗಳು ಹೋದ ದಿಕ್ಕಿನತ್ತ ಹೆಜ್ಜೆ ಹಾಕಿ, ಸೆಕೆಂಡ್​ಗಳ ಕಾಲ ಅಲ್ಲಿ ನಿಂತು ವಾಪಸ್ ಬರುತ್ತದೆ. ಆನೆಗಳು ಹೋಗಿರುವ ವಿರುದ್ಧ ದಿಕ್ಕಿಗೆ ನಡೆಯುತ್ತದೆ.

ಐಎಫ್​ಎಸ್ ಅಧಿಕಾರಿ ಸುಸಾಂತಾ ನಂದಾ ಅವರು ವಿಡಿಯೊ ಶೇರ್ ಮಾಡಿಕೊಂಡಿದ್ದಾರೆ. ಕಾಡೆಂಬ ಸಾಮ್ರಾಜ್ಯದಲ್ಲಿ ಪ್ರಾಣಿಗಳು ಹೇಗೆ ಸಂವಹನ ನಡೆಸುತ್ತವೆ, ಸಾಮರಸ್ಯವನ್ನು ಕಾಪಾಡಿಕೊಳ್ಳುತ್ತವೆ ಎಂಬುದಕ್ಕೆ ಈ ವಿಡಿಯೊ ಸಾಕ್ಷಿ ಎಂದು ಹೇಳಿದ್ದಾರೆ. ಈ ವಿಡಿಯೊ ಮಾಡಿದ್ದು ವಿಜೇತ್ ಸಿಂಹಾ ಎಂದೂ ಅವರು ತಿಳಿಸಿದ್ದಾರೆ. ಈ ವಿಡಿಯೊಕ್ಕೆ ಲಕ್ಷಾಂತರ ವೀವ್ಸ್​ ಬಂದಿದೆ. ಅನೇಕರು ಕಮೆಂಟ್ ಮಾಡಿದ್ದಾರೆ. ಕೆಲವರು ಆ ಹುಲಿ ಆನೆಗಳಿಗೆ ಕೊಟ್ಟ ಗೌರವ ಇದು ಎಂದು ಹೇಳಿದ್ದರೆ, ಇನ್ನೂ ಅನೇಕರು, ಇಲ್ಲ ಇಲ್ಲ, ಗಜಗಳನ್ನು ನೋಡಿ ಹುಲಿ ಹೆದರಿ ಹಾಗೆ ಕುಳಿತಿತು ಎಂದಿದ್ದಾರೆ. ಹುಲಿ ಯಾಕೆ ಹಾಗೆ ಕುಳಿತಿತು ಎಂಬುದಕ್ಕೆ ಉತ್ತರವಿಲ್ಲ. ಅದೇನೇ ಇರಲಿ ಈ ವಿಡಿಯೊ ನೋಡಿದರೆ ವನ್ಯಜೀವಿಗಳಿಗೂ ಒಂದು ಭಾಷೆಯಿದೆ. ಅವರಲ್ಲೂ ಒಂದು ವಿಶೇಷ ಗ್ರಹಿಕೆ-ಸಂವಹನ ಶಕ್ತಿ ಇದೆ ಎಂದು ನಮಗೂ ಅನ್ನಿಸುತ್ತದೆ. ಆದರೆ ಅದು ಮನುಷ್ಯರಿಗೆ ಅರ್ಥವಾಗುವಂಥದ್ದಲ್ಲ ಅಷ್ಟೇ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕ್ರಿಕೆಟ್

Rishabh Pant: ಕೀಪಿಂಗ್​ ಬಿಟ್ಟು ಬೌಲಿಂಗ್​ ನಡೆಸಿದ ರಿಷಭ್​ ಪಂತ್​; ವಿಡಿಯೊ ವೈರಲ್​

Rishabh Pant: ಮುಂದಿನ ವರ್ಷ ನಡೆಯುವ ಐಪಿಎಲ್​ ಟರ್ನಿಯಲ್ಲಿ ಪಂತ್​ ಡೆಲ್ಲಿ ತಂಡದ ಬದಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡಲಿದ್ದಾರೆ ಎನ್ನಲಾಗಿದೆ. ಪಂತ್​ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

VISTARANEWS.COM


on

Rishabh Pant
Koo

ನವದೆಹಲಿ: ಟೀಮ್​ ಇಂಡಿಯಾದ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ರಿಷಭ್​ ಪಂತ್(Rishabh Pant)​ ಅವರು ದೆಹಲಿ ಪ್ರೀಮಿಯರ್ ಲೀಗ್ 2024 ರ(Delhi Premier League T20 2024) ಉದ್ಘಾಟನಾ ಆವೃತ್ತಿಯ ಪಂದ್ಯದಲ್ಲಿ ಬೌಲಿಂಗ್(rishabh pant bowling)​ ನಡೆಸುವ ಮೂಲಕ ಗಮನಸೆಳೆದಿದ್ದಾರೆ. ಪಂತ್​ ಬೌಲಿಂಗ್​ ನಡೆಸುವ ವಿಡಿಯೊ ವೈರಲ್(viral video)​ ಆಗಿದ್ದು, ಇದು ನೂತನ ಕೋಚ್​ ಗೌತಮ್​ ಗಂಭೀರ್(gautam gambhir)​ ಪ್ರಭಾವ ಎಂದು ನಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಪಂತ್ ಪಂದ್ಯದ ಅಂತಿಮ ಓವರ್​ ಬೌಲಿಂಗ್​ ನಡೆಸಿದರು. ಎದುರಾಳಿ ಸೌತ್​ ಡೆಲ್ಲಿ ತಂಡಕ್ಕೆ 6 ಎಸೆತಗಳಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಪಂತ್​ ಸ್ಪಿನ್​ ಬೌಲಿಂಗ್​ ನಡೆಸಿದರು. ಈ ಪಂದ್ಯದಲ್ಲಿ ಪಂತ್​ ತಂಡ 3 ವಿಕೆಟ್​ ಅಂತರದ ಸೋಲು ಕಂಡಿತು. ಮೊದಲು ಬ್ಯಾಟಿಂಗ್​ ನಡೆಸಿದ ಪಂತ್​ ಸಾರಥ್ಯದ ಪುರಾಣಿ ದಿಲ್ಲಿ ಸಿಕ್ಸ್​ ತಂಡ 197 ರನ್​ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸೌತ್​ ಡೆಲ್ಲಿ ತಂಡ 7 ವಿಕೆಟ್​ಗೆ 198 ರನ್​ ಬಾರಿಸಿ ಗೆಲುವು ಸಾಧಿಸಿತು.

ಪಂತ್​ ಅವರ ಬೌಲಿಂಗ್​ ಕಂಡ ನೆಟ್ಟಿಗರು ಇದು ನೂತನ ಕೋಚ್​ ಗಂಭೀರ್​ ಅವರ ಪ್ರಭಾವ ಎಂದು ಹೇಳಿದ್ದಾರೆ. ಹೌದು, ಗಂಭೀರ್​ ಭಾರತ ತಂಡದ ಕೋಚ್​ ಆದಾಗಿನಿಂದ ತಂಡ ಆಟಗಾರರು ಕೇಲವ ಬ್ಯಾಟಿಂಗ್​ ಮತ್ತು ಬೌಲಿಂಗ್​ಗೆ ಸೀಮಿತರಲ್ಲ ಎಲ್ಲ ಪಾತ್ರವನ್ನು ನಿಭಾಯಿಸಬೇಕು ಎಂಬ ನಿಯಮ ಜಾರಿಗೆ ತಂದಿದ್ದಾರೆ. ಇದೇ ಕಾರಣಕ್ಕೆ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ರಿಂಕು ಸಿಂಗ್​, ನಾಯಕ ಸೂರ್ಯಕುಮಾರ್​​ ಯಾದವ್ ಕೇವಲ ಬ್ಯಾಟಿಂಗ್​ ಮಾತ್ರವಲ್ಲದೆ​ ಬೌಲಿಂಗ್ ಕೂಡ ನಡೆಸಿದ್ದರು. ಏಕದಿನ ಸರಣಿಯಲ್ಲಿ ನಾಯಕ ರೋಹಿತ್​ ಶರ್ಮ ಕೂಡ ಬೌಲಿಂಗ್​ ನಡೆಸಿದ್ದರು.​ ಇದೀಗ ಪಂತ್​ ಕೂಡ ಬೌಲಿಂಗ್​ ಕಡೆ ಗಮನಹರಿಸಿದಂತಿದೆ.

ಇದನ್ನೂ ಓದಿ Rishabh Pant : ರಿಷಭ್​ ಪಂತ್​ಗೆ ವಿಶೇಷ ಸನ್ಮಾನ ಮಾಡಿದ ಡೆಲ್ಲಿ ಕ್ರಿಕೆಟ್ ಸಂಸ್ಥೆ

ಬ್ಯಾಟಿಂಗ್​ನಲ್ಲಿ ವಿಫಲವಾದ ಪಂತ್​

ಪಂತ್​ ಈ ಪಂದ್ಯದಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್​ ಪ್ರದರ್ಶನ ತೋರಿದರು. 32 ಎಸೆತಗಳಲ್ಲಿ ಕೇವಲ 35 ರನ್ ಗಳಿಸಲಷ್ಟೇ ಶಕ್ತರಾದರು. ರಿಷಭ್ ಪಂತ್ ಅವರನ್ನು ಡಿಡಿಸಿಎ ಅಧ್ಯಕ್ಷ ಮತ್ತು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸನ್ಮಾನಿಸಿದರು. 2024ರ ಟಿ 20 ವಿಶ್ವಕಪ್ ಗೆಲುವಿನಲ್ಲಿ ಪಂತ್​ ನೀಡಿದ ಕೊಡುಗೆಗಳಿಗಾಗಿ ಅವರನ್ನು ಗೌರವಿಸಲಾಯಿತು.

ಮುಂದಿನ ವರ್ಷ ನಡೆಯುವ ಐಪಿಎಲ್​ ಟರ್ನಿಯಲ್ಲಿ ಪಂತ್​ ಡೆಲ್ಲಿ ತಂಡದ ಬದಲು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡಲಿದ್ದಾರೆ ಎನ್ನಲಾಗಿದೆ. ಪಂತ್​ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

Continue Reading

ಪ್ರಮುಖ ಸುದ್ದಿ

Liquor Theft : ಡಾಬಾದಿಂದ ಲೋಕಲ್ ಬ್ರಾಂಡ್​ ಎಣ್ಣೆ ಕದಿಯುತ್ತಿದ್ದವನ ಮುಖ ಸಿಸಿಟಿವಿಯಲ್ಲಿ ಸೆರೆ

Liquor theft: :

VISTARANEWS.COM


on

Liquor theft:
Koo

ರಾಯಚೂರು : ಡಾಬಾವೊಂದಕ್ಕೆ ನುಗ್ಗಿ ಪ್ರತಿನಿತ್ಯ ಲೋಕಲ್ ಎಣ್ಣೆ ಕದಿಯುತ್ತಿದ್ದ ವ್ಯಕ್ತಿಯೊಬ್ಬನ ಮುಖ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯ ಕುರಿತು ಡಾಬಾ ಮಾಲೀಕರು ಮುದ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಣ್ಣೆ ಆಸೆಗೆ ಬಂದಿದ್ದ ಆತ ಮುಖಕ್ಕೆ ಮುಸುಕು ಧರಿಸಿರಲಿಲ್ಲ. ಹೀಗಾಗಿ ಕ್ಯಾಮೆರಾದಲ್ಲಿ ಆತನ ಚಹರೆ ಸಂಪೂರ್ಣವಾಗಿ ಸೆರೆಯಾಗಿದೆ. ಹೀಗಾಗಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುವ ಸಾಧ್ಯತೆಗಳಿವೆ.

ಆರೋಪಿಗೆ ಡಾಬಾಕ್ಕೆ ನುಗ್ಗಿ ಲೋಕಲ್ ಬ್ರ್ಯಾಂಡ್ ಎಣ್ಣೆ ಕದಿಯುವ ಚಾಳಿ ಶುರುವಾಗಿತ್ತು. ಅಲ್ಲಿ ಹಣ ಇದ್ದರೂ ಅದನ್ನು ಮುಟ್ಟೇ ಕೇವಲ ಒಟಿ, ಚಾಯ್ಸ್ ಸೇರಿದಂತೆ ಲೋಕಲ್ ಬ್ರಾಂಡ್​ನ ಮದ್ಯ ಎತ್ತಿಕೊಂಡು ಪರಾರಿಯಾಗುತ್ತಿದ್ದ. ಲಿಂಗಸಗೂರು ತಾಲೂಕಿನ ಮಾಕಾಪೂರ ಗ್ರಾಮದಲ್ಲಿರುವ ಡಾಬಾದ ಮಾಲೀಕರು ಇದರಿಂದ ಬೇಸತ್ತಿದ್ದರು. ಮಾಲೀಕ ಬಸವರಾಜ್ ಅವರು ಆರೋಪಿಯನ್ನು ಹಿಡಿಯುವ ಉದ್ದೇಶದಿಂದ ಸಿಸಿ ಟಿವಿ ಕ್ಯಾಮೆರಾವನ್ನು ಅಳವಡಿಸಿದ್ದರು. ಆರೋಪಿ ಈ ಬಗ್ಗೆ ಅರಿಯದೇ ಒಳಗೆ ನುಗ್ಗಿ ಮತ್ತೆ ಎಣ್ಣೆಗಾಗಿ ತಡಕಾಡಿದಾಗ ಆತನ ಮುಖ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Chikkodi News : ಒಮ್ಮೆ ಶಾಸಕರಿಂದ ಮತ್ತೊಮ್ಮೆ ಸಂಸದರಿಂದ; ಒಂದೇ ಗ್ರಾಮ ಪಂಚಾಯಿತಿ ಕಟ್ಟಡ ಎರಡೆರಡು ಬಾರಿ ಉದ್ಘಾಟನೆ!

ಬಾಗಿಲಿ ಮುರಿಯುತ್ತಿರಲಿಲ್ಲ

ಆರೋಪಿಯು ಎಣ್ಣೆ ಕದಿಯಲು ಬರುವಾಗ ಡಾಬಾದ ಬಾಗಿಲು ಅಥವಾ ಬೀಗ ಮುರಿಯುತ್ತಿರಲಿಲ್ಲ. ಟಿನ್ ಶೀಟ್ ಹಾಕಿದ್ದ ಡಾಬಾದಲ್ಲಿ ಸಂದಿಯಿಂದ ನುಗ್ಗಿಕೊಂಡು ಬರುತ್ತಿದ್ದ. ಎಣ್ಣೆಯ ಆಸೆ ಶುರುವಾದ ತಕ್ಷಣ ಹಾವಿನಂತೆ ಸಂದಿಯಲ್ಲಿ ನುಗ್ಗಿ ಡಾಬಾಗೆ ಪ್ರವೇಶ ಪಡೆಯುತ್ತಿದ್ದ. ಬಳಿಕ ಅಲ್ಲಿನ ಡ್ರಾಯರ್​ಗಳನ್ನು ತೆರೆದು ಎಣ್ಣೆ ತೆಗೆದುಕೊಂಡು ಪರಾರಿಯಾಗುತ್ತಿದ್ದ ಎಂದು ಮಾಲೀಕರು ತಿಳಿಸಿದ್ದಾರೆ.

Continue Reading

ವೈರಲ್ ನ್ಯೂಸ್

Dog Attack: 17 ಮಂದಿ ಮೇಲೆ ಬೀದಿ ನಾಯಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಉತ್ತರ ಪ್ರದೇಶದ ಗೋರಖ್‌ಪುರದ ಶಹಪುರದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 17 ಮಂದಿಯ ಮೇಲೆ ಹುಚ್ಚು ನಾಯಿಯೊಂದು ದಾಳಿ (Dog Attack) ನಡೆಸಿದೆ. ಇದರ ಭಯಾನಕ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೋರಖ್‌ಪುರದ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ದುರ್ಗೇಶ್ ಮಿಶ್ರಾ ಅವರು, ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಅಭಿಯಾನವನ್ನು ನಾವು ನಿಯಮಿತವಾಗಿ ನಡೆಸುತ್ತಿದ್ದೇವೆ. ಪ್ರಾಣಿ ಜನನ ನಿಯಂತ್ರಣ ಕೇಂದ್ರವನ್ನು ಸಹ ನಿರ್ಮಿಸಲಾಗುತ್ತಿದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚು ಮದ್ದು ನೀಡಲಾಗುತ್ತಿದೆ ಎಂದಿದ್ದಾರೆ.

VISTARANEWS.COM


on

By

Dog attack
Koo

ಮಕ್ಕಳು, ಮಹಿಳೆಯರು ಸೇರಿದಂತೆ ಸುಮಾರು 17 ಮಂದಿಯ ಮೇಲೆ ಉತ್ತರ ಪ್ರದೇಶದ (uttarpradesh) ಗೋರಖ್‌ಪುರದ ಶಹಪುರದಲ್ಲಿ ಆಗಸ್ಟ್ 14ರಂದು ಹುಚ್ಚು ನಾಯಿಯೊಂದು ದಾಳಿ (Dog Attack) ನಡೆಸಿದೆ. ಇದರ ಭಯಾನಕ ದೃಶ್ಯವೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆವಾಸ್ ವಿಕಾಸ್ ಕಾಲೋನಿಯಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ 22 ವರ್ಷದ ಆಶಿಶ್ ಯಾದವ್ ಮೇಲೆ ನಾಯಿಯು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಿಬಿಎ ವಿದ್ಯಾರ್ಥಿಯಾಗಿರುವ ಆಶಿಶ್ ಯಾದವ್ ಅವರು ರಾತ್ರಿ 9.45ರ ಸುಮಾರಿಗೆ ಮನೆಯ ಹೊರಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಬಂದ ನಾಯಿ ಏಕಾಏಕಿ ಅವರ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದೆ.


ಆಶಿಶ್ ನಾಯಿಯನ್ನು ಹಿಮ್ಮೆಟ್ಟಿಸಲು ಮತ್ತು ಅದರ ಮೇಲೆ ಪ್ರತಿ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಆದರೆ ಅದು ಬೊಗಳುವುದು ಮತ್ತು ಕಚ್ಚುವುದನ್ನು ನಿಲ್ಲಿಸಲಿಲ್ಲ. ಆಶಿಶ್ ನೆಲಕ್ಕೆ ಬೀಳುತ್ತಿದ್ದಂತೆ ಅದು ಅವರ ಕಾಲಿಗೆ ಕಚ್ಚಿದೆ. ಅಲ್ಲದೇ ಜಿಗಿದು ಮುಖದ ಮೇಲೂ ಕಚ್ಚಿದೆ. ನಾಯಿಯ ದಾಳಿಯಿಂದ ಅವರ ಬಾಯಿ, ಕಣ್ಣು ಮತ್ತು ತುಟಿಗಳಿಂದ ರಕ್ತಸ್ರಾವವಾಗುತ್ತಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದಾದ ನಂತರ ಇನ್ನೊಂದು ಮನೆಯ ಗೇಟ್‌ ಬಳಿ ನಿಂತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿದ ನಾಯಿ ಆಕೆಯ ಕಾಲನ್ನು ಕಚ್ಚಿದೆ. ಇದರಿಂದ ಆಕೆಗೆ ಆಳವಾದ ಗಾಯವಾಗಿದ್ದು, ಹಲವಾರು ಹೊಲಿಗೆಗಳನ್ನು ವೈದ್ಯರು ಹಾಕಿದ್ದಾರೆ ಎನ್ನಲಾಗಿದೆ. ಅನಂತರ ಮನೆಯ ಹೊರಗೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೂ ನಾಯಿ ದಾಳಿ ಮಾಡಿದೆ.

ಆಶಿಶ್ ಅವರನ್ನು ರೇಬಿಸ್ ಲಸಿಕೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ಔಷಧ ಖಾಲಿಯಾಗಿತ್ತು ಎಂದು ಆಶಿಶ್ ತಂದೆ ವಿಜಯ್ ಯಾದವ್ ಹೇಳಿದ್ದಾರೆ. ಬೀದಿ ನಾಯಿಗಳ ಹಾವಳಿ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ ಎಂದು ನಾಯಿ ದಾಳಿಯಿಂದ ಗಾಯಗೊಂಡಿರುವ ಅನೇಕರು ದೂರಿದ್ದಾರೆ.

ಇದನ್ನೂ ಓದಿ: Viral Video: ಅಟಲ್ ಸೇತು ಮೇಲಿಂದ ಸಮುದ್ರಕ್ಕೆ ಹಾರಲೆತ್ನಿಸಿದ ಮಹಿಳೆಯನ್ನು ರಕ್ಷಿಸಿದ್ದು ಹೇಗೆ? ವಿಡಿಯೊ ನೋಡಿ

ಈ ಕುರಿತು ಪ್ರತಿಕ್ರಿಯಿಸಿರುವ ಗೋರಖ್‌ಪುರದ ಹೆಚ್ಚುವರಿ ಮುನ್ಸಿಪಲ್ ಕಮಿಷನರ್ ದುರ್ಗೇಶ್ ಮಿಶ್ರಾ ಅವರು, ಘಟನೆಯ ಬಗ್ಗೆ ತನಗೆ ತಿಳಿದಿಲ್ಲ ಮತ್ತು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದರು. ಬೀದಿ ನಾಯಿಗಳ ಸಂತಾನಹರಣ ಅಭಿಯಾನವನ್ನು ನಾವು ನಿಯಮಿತವಾಗಿ ನಡೆಸುತ್ತಿದ್ದೇವೆ. ಪ್ರಾಣಿ ಜನನ ನಿಯಂತ್ರಣ ಕೇಂದ್ರವನ್ನು ಸಹ ನಿರ್ಮಿಸಲಾಗುತ್ತಿದೆ. ಬೀದಿ ನಾಯಿಗಳನ್ನು ಹಿಡಿದು ಅವುಗಳಿಗೆ ಚುಚ್ಚು ಮದ್ದು ನೀಡಲಾಗುತ್ತಿದೆ ಮತ್ತು ಸಾಕು ನಾಯಿಗಳಿಗೆ ಲಸಿಕೆ ಹಾಕಲು ನಾವು ಜಾಗೃತಿ ಅಭಿಯಾನವನ್ನು ನಡೆಸುತ್ತೇವೆ ಎಂದು ಹೇಳಿದರು.

Continue Reading

Latest

Viral Video: ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡುತ್ತ ದೇವಾಲಯದೊಳಗೇ ಹಸ್ತಮೈಥುನ!

Viral Video: ಉತ್ತರ ಪ್ರದೇಶದ ದೇವಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ಅಶ್ಲೀಲ ಕೃತ್ಯದಲ್ಲಿ ತೊಡಗಿಕೊಂಡಿರುವ ವಿಡಿಯೊವೊಂದು ವೈರಲ್ ಆಗಿದೆ. ಇದು ಸ್ಥಳೀಯ ಸಮುದಾಯ ಮತ್ತು ಧಾರ್ಮಿಕ ಭಕ್ತರಲ್ಲಿ ಬೇಸರವನ್ನುಂಟುಮಾಡಿದೆ. ವಿಡಿಯೊ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಗಾಜಿಯಾಬಾದ್ ಪೊಲೀಸರು ಪ್ರಕರಣ ಗಂಭೀರತೆಯನ್ನು ತಿಳಿದುಕೊಂಡು ವಿಡಿಯೊ ದೃಶ್ಯವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಿದ್ದು, ಆತನನ್ನು ಬಂಧಿಸಲು ಹುಡುಕಾಟ ನಡೆಸುತ್ತಿದ್ದಾರೆ.

VISTARANEWS.COM


on

Viral Video
Koo


ಗಾಜಿಯಾಬಾದ್: ಇತ್ತೀಚಿನ ದಿನಗಳಲ್ಲಿ ಕಾಮುಕರ ಹಾವಳಿ ಮಿತಿ ಮೀರುತ್ತಿದೆ. ತಮ್ಮ ಕಾಮದಾಸೆಯನ್ನು ತೀರಿಸಿಕೊಳ್ಳಲು ಎಲ್ಲೆಂದರಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವುದು, ಖಾಸಗಿ ಭಾಗಗಳನ್ನು ಪ್ರದರ್ಶನ ಮಾಡುವುದು, ಮೂಕ ಪ್ರಾಣಿಗಳ ಮೇಲೂ ಲೈಂಗಿಕ ದೌರ್ಜನ್ಯ ಮಾಡುವುದು ಹೀಗೆ ನೀಚ ಕೃತ್ಯಗಳನ್ನು ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈಗ ಅವರು ಪವಿತ್ರವಾದ ದೇವಾಲಯದೊಳಗೂ ಈ ನಾಚಿಕೆಗೇಡಿನ ಕೆಲಸಕ್ಕೆ ಮುಂದಾಗಿದ್ದಾರೆ. ಅದಕ್ಕೆ ಸಂಬಂಧಪಟ್ಟ ವಿಡಿಯೊ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video)ಆಗಿ, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಪ್ರದೇಶದ ಈ ದೇವಾಲಯದೊಳಗೆ ಕಾಮುಕ ವ್ಯಕ್ತಿಯೊಬ್ಬ ಮೊಬೈಲ್ ಫೋನ್‍ನಲ್ಲಿ ಅಶ್ಲೀಲ ವಿಡಿಯೊವನ್ನು ನೋಡುತ್ತಾ ಹಸ್ತಮೈಥುನ ಮಾಡಿಕೊಂಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಆ ವ್ಯಕ್ತಿಗಾಗಿ ಗಾಜಿಯಾಬಾದ್ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ ಎನ್ನಲಾಗಿದೆ. ಈ ವಿಡಿಯೊವನ್ನು ಸಚಿನ್ ಗುಪ್ತಾ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ.

ಉತ್ತರ ಪ್ರದೇಶದ ದೇವಾಲಯವೊಂದರಲ್ಲಿ ನಡೆದ ಈ ಆಘಾತಕಾರಿ ಘಟನೆಯನ್ನು ಅಲ್ಲಿದ್ದ ವ್ಯಕ್ತಿಯೊಬ್ಬರು ರೆಕಾರ್ಡ್ ಮಾಡಿ ನಂತರ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ದೇವಾಲಯದ ಆವರಣದಲ್ಲಿ ವ್ಯಕ್ತಿಯು ಅಶ್ಲೀಲ ಕೃತ್ಯದಲ್ಲಿ ತೊಡಗಿರುವುದನ್ನು ವಿಡಿಯೊ ತೋರಿಸುತ್ತದೆ. ಇದು ಸ್ಥಳೀಯ ಸಮುದಾಯ ಮತ್ತು ಧಾರ್ಮಿಕ ಭಕ್ತರಲ್ಲಿ ಬೇಸರವನ್ನುಂಟುಮಾಡಿದೆ. ವಿಡಿಯೊ ವೈರಲ್ ಆದ ನಂತರ ಎಚ್ಚೆತ್ತುಕೊಂಡ ಗಾಜಿಯಾಬಾದ್ ಪೊಲೀಸರು ಪ್ರಕರಣ ಗಂಭೀರತೆಯನ್ನು ತಿಳಿದುಕೊಂಡು ವಿಡಿಯೊ ದೃಶ್ಯವಳಿಯನ್ನು ಪರಿಶೀಲಿಸಿ ಆರೋಪಿಯನ್ನು ಗುರುತಿಸಿದ್ದು, ಆತನನ್ನು ಬಂಧಿಸಲು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ:ಕೋಲ್ಕತ್ತಾ ವೈದ್ಯೆಯ ಅತ್ಯಾಚಾರಿಗೆ ಮರಣದಂಡನೆ ವಿಧಿಸುವಂತೆ ಬಾಲಿವುಡ್ ತಾರೆಯರ ಆಗ್ರಹ

ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯಲ್ಲಿ ಸರ್ಕಾರಿ ನೌಕರ ಗಜೇಂದ್ರ ಸಿಂಗ್ ಎಂಬಾತ ಹಸ್ತಮೈಥುನ ಮಾಡಲು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಬಳಸಿಕೊಂಡಿದ್ದಾನೆ. ಅಲ್ಲದೇ ಆತ ತನ್ನ ಕಾಮದಾಹ ತೀರಿಸಿಕೊಳ್ಳಲು ಮೇಕೆಯ ಜೊತೆಗೂ ಕ್ರೂರವಾಗಿ ವರ್ತಿಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆತ ಹಸ್ತಮೈಥುನ ಮಾಡಿಕೊಳ್ಳಲು ಹುಡುಗಿಯ ಖಾಸಗಿ ಭಾಗಗಳನ್ನು ಮುಟ್ಟಿ ಅವಳನ್ನು ಚುಂಬಿಸಿದನು. ಹುಡುಗಿ ಹೇಗೋ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಾಗ, ಆತನ ಕೆಟ್ಟ ಕಣ್ಣು ಮೇಕೆಯ ಮೇಲೆ ಬಿದ್ದಿದೆ. ನಂತರ ಆತನ ಕಾಮದಾಹಕ್ಕೆ ಮೇಕೆ ಬಲಿಪಶುವಾಗಿತ್ತು.

Continue Reading
Advertisement
Rishabh Pant
ಕ್ರಿಕೆಟ್7 mins ago

Rishabh Pant: ಕೀಪಿಂಗ್​ ಬಿಟ್ಟು ಬೌಲಿಂಗ್​ ನಡೆಸಿದ ರಿಷಭ್​ ಪಂತ್​; ವಿಡಿಯೊ ವೈರಲ್​

Physical abuse
ಬೆಂಗಳೂರು15 mins ago

Physical Abuse : ಕೋರಮಂಗಲದ ಪಬ್‌ನಿಂದ ಮನೆಗೆ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

P Susheela hospitalized Legendary playback singer
ಸ್ಯಾಂಡಲ್ ವುಡ್16 mins ago

P Susheela: ಖ್ಯಾತ ಗಾಯಕಿ ಪಿ. ಸುಶೀಲಾ ಆಸ್ಪತ್ರೆಗೆ ದಾಖಲು

Gold Rate Today
ಚಿನ್ನದ ದರ32 mins ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

Bigg boss Hindi list of contestants
ಬಿಗ್ ಬಾಸ್39 mins ago

Bigg boss Hindi: ಬಿಗ್ ಬಾಸ್ 18ರ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಯಾವಾಗಿಂದ ಶುರು? 

karnataka weather Forecast
ಮಳೆ49 mins ago

Karnataka Weather : ಭಾರಿ ಮಳೆ ಹಿನ್ನೆಲೆ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

TNIT Media Awards
ಕರ್ನಾಟಕ51 mins ago

TNIT Media Award : ವಿಸ್ತಾರ ನ್ಯೂಸ್​​ಗೆ ಟಿಎನ್​ಐಟಿ ಸೌತ್ ಇಂಡಿಯಾ ಮೀಡಿಯಾ ಅವಾರ್ಡ್ಸ್​​ನ 3 ಪ್ರಶಸ್ತಿಗಳ ಗರಿ

ಕ್ರೀಡೆ59 mins ago

WTC 2025: ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶಿಸಬೇಕಿದ್ದರೆ ಭಾರತಕ್ಕೆ ಇನೆಷ್ಟು ಗೆಲುವು ಬೇಕು?

Doctors Strike
ದೇಶ1 hour ago

Doctors Strike: ನಾವು ಮುಂದಿನ ಸಂತ್ರಸ್ತರಾಗಲು ಬಯಸುವುದಿಲ್ಲ; ಪ್ರತಿಭಟನಾನಿರತ ವೈದ್ಯರ ಕಿಡಿನುಡಿ

Dina Bhavishya
ಭವಿಷ್ಯ1 hour ago

Dina Bhavishya: ಈ ರಾಶಿಯವರಿಗೆ ಆತುರದಲ್ಲಿ ಆಡಿದ ಮಾತು ಅಪಾಯ ತಂದಿತು ಎಚ್ಚರ

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ1 week ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ1 week ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ1 week ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ2 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ2 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ2 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌