Food Tips: ನೆಲ್ಲಿಕಾಯಿ ಎಂಬ ವಿಟಮಿನ್‌ ಸಿಯನ್ನು ತಿಂಗಳುಗಟ್ಟಲೆ ಶೇಖರಿಸಿಡುವುದು ಹೇಗೆ!? - Vistara News

ಆಹಾರ/ಅಡುಗೆ

Food Tips: ನೆಲ್ಲಿಕಾಯಿ ಎಂಬ ವಿಟಮಿನ್‌ ಸಿಯನ್ನು ತಿಂಗಳುಗಟ್ಟಲೆ ಶೇಖರಿಸಿಡುವುದು ಹೇಗೆ!?

ಬಹಳಷ್ಟು ಸಾರಿ ಮಾರುಕಟ್ಟೆಯಿಂದ ಕಡಿಮೆಗೆ ಸಿಕ್ಕಿತು ಎಂದು ತಂದ ಕೆಜಿಗಟ್ಟಲೆ ಬೆಟ್ಟದ ನೆಲ್ಲಿಕಾಯಿಯನ್ನು (Gooseberry) ಏನು ಮಾಡಬೇಕೆಂದು ತಿಳಿಯದೆ ಹೆಚ್ಚು ಕಾಲ ಶೇಖರಿಸಿಡುವುದೂ ಗೊತ್ತಾಗದೆ ಹಾಳಾಗಿಬಿಡುತ್ತದೆ. ಹಾಗಾದರೆ ನೆಲ್ಲಿಕಾಯಿಯನ್ನು ಆದಷ್ಟು ಕಾಲ ಕೆಡದಂತೆ ಶೇಖರಿಸಿಡುವುದು ಹೇಗೆ ಎಂಬುದನ್ನು ನೋಡೋಣ.

VISTARANEWS.COM


on

gooseberry
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಟಮಿನ್‌ ಸಿ (vitamin C) ಎಂದಾಗ ನೆನಪಾಗುವುದು ನೆಲ್ಲಿಕಾಯಿ. ತನ್ನಲ್ಲಿ ಅತ್ಯಂತ ಹೆಚ್ಚು ವಿಟಮಿನ್‌ ಸಿ ಹೊಂದಿರುವ ನೆಲ್ಲಿಕಾಯಿಯನ್ನು ಬಹುತೇಕರು ಅಡುಗೆಯಲ್ಲಿ ಹಾಗೂ ನಾನಾ ರೂಪಗಳಲ್ಲಿ ನಿತ್ಯೋಪಯೋಗಿಯಾಗುವಂತೆ ನೋಡಿಕೊಳ್ಳುತ್ತಾರೆ. ವಿಟಮಿನ್‌ ಸಿ ದೇಹಕ್ಕೆ ಸೇರಲಿ ಎಂದು ಹಲವು ಬಗೆಗಳಲ್ಲಿ ನೆಲ್ಲಿಕಾಯಿಯನ್ನು ಶೇಖರಿಸಿಡಲು ಯತ್ನಿಸುತ್ತಾರೆ. ಬಹಳಷ್ಟು ಸಾರಿ ಮಾರುಕಟ್ಟೆಯಿಂದ ಕಡಿಮೆಗೆ ಸಿಕ್ಕಿತು ಎಂದು ತಂದ ಕೆಜಿಗಟ್ಟಲೆ ಬೆಟ್ಟದ ನೆಲ್ಲಿಕಾಯಿಯನ್ನು ಏನು ಮಾಡಬೇಕೆಂದು ತಿಳಿಯದೆ ಹೆಚ್ಚು ಕಾಲ ಶೇಖರಿಸಿಡುವುದೂ ಗೊತ್ತಾಗದೆ ಹಾಳಾಗಿಬಿಡುತ್ತದೆ. ಉಪ್ಪಿನಕಾಯಿ ಹಾಕಲು, ಮೊರಬ್ಬ ಮಾಡಲು ಸಮಯವಿಲ್ಲವೆಂದೋ ತಳ್ಳಿದ ದಿನಗಳು ವಾರಗಳಾಗಿ ತಂದ ನೆಲ್ಲಿಕಾಯಿಯಲ್ಲಿ ಅರ್ಧದಷ್ಟು ಭಾಗ ಹಾಳಾಗಿ ಕಸದ ಬುಟ್ಟಿ ಸೇರುತ್ತವೆ. ಹಾಗಾದರೆ ನೆಲ್ಲಿಕಾಯಿಯನ್ನು ಆದಷ್ಟು ಕಾಲ ಕೆಡದಂತೆ ಶೇಖರಿಸಿಡುವುದು ಹೇಗೆ ಎಂಬುದನ್ನು ನೋಡೋಣ.

1. ಎಣ್ಣೆ ಹಚ್ಚಿಡಿ: ನೆಲ್ಲಿಕಾಯಿ ಕೆಡದಂತೆ ಇಡಲು ಅತ್ಯಂತ ಪುರಾತನ ಐಡಿಯಾ ಎಂದರೆ ಎಣ್ಣೆ ಹಚ್ಚಿಡುವುದು. ಹೌದು. ನೆಲ್ಲಿಕಾಯಿಯನ್ನು ಏನಾದರೂ ಮಾಡಲು ಸಮಯವಿಲ್ಲದಾದಾಗ ಹೆಚ್ಚು ಕಾಲ ಹಾಗೆಯೇ ಸಂರಕ್ಷಿಸಿಡಲು ಎಣ್ಣೆ ಹಚ್ಚಿ ಶೇಖರಿಸಿಡುವುದು ಅತ್ಯುತ್ತಮ ಉಪಾಯ. ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಅದರ ನೀರು ಆರಿದ ಮೇಲೆ ಅದಕ್ಕೆ ಕೆಲವು ಬಿಂದುಗಳು ಸಾಸಿವೆ ಎಣ್ಣೆಯನ್ನು ಹಚ್ಚಿ ಅದನ್ನೊಂದು ಪ್ಲಾಸ್ಟಿಕ್‌ ಬ್ಯಾಗ್‌ನೊಳಗೆ ಹಾಕಿ ಫ್ರಿಡ್ಜ್‌ನಲ್ಲಿಡಿ.

2. ಗಾಳಿಯಾಡದ ಡಬ್ಬದಲ್ಲಿಡಿ: ಆಹಾರವನ್ನು ಹೆಚ್ಚೂ ಕಾಲ ಉಳಿಯುವಂತೆ ಕಾಪಾಡಲು ಇರುವ ಸರಳ ಉಪಾಯ ಎಂದರೆ ಗಳಿಯಾಡದ ಡಬ್ಬದಲ್ಲಿ ಹಾಕಿಡುವುದು. ನೆಲ್ಲಿಕಾಯಿಗೂ ಅದೇ ತಂತ್ರ ಅನುಸರಿಸಬಹುದು. ಧಾನ್ಯ, ಬೇಳೆಕಾಳುಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಹೇಗೆ ಕೆಡುವುದಿಲ್ಲವೋ ಹಾಗೆಯೇ ನೆಲ್ಲಿಕಾಯಿಯೂ ಸುಲಭವಾಗಿ ಹಾಳಾಗುವುದಿಲ್ಲ. ಡಬ್ಬದಲ್ಲಿ ಮುಚ್ಚಿಡುವ ಮೊದಲು ನೆಲ್ಲಿಕಾಯಿಯಮೇಲೆ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಒರೆಸಿರುವುದು ಬಹಳ ಮುಖ್ಯ.

3. ಬೇಯಿಸಿಡಿ: ನೆಲ್ಲಿಕಾಯಿಯನ್ನು ಬೇಯಿಸಿಡುವುದೂ ಕೂಡಾ ಅತ್ಯುತ್ತಮ ಉಪಾಯ. ತೊಳೆದು ನೀರು ಆರಿದ ನೆಲ್ಲಿಕಾಯಿಗಳನ್ನು ಕತ್ತರಿಸಿ ಬೀಜದಿಂದ ಬೇರ್ಪಡಿಸಿ. ನಂತರ ಈ ನೆಲ್ಲಿಕಾಯಿಯ ಹೋಳುಗಳನ್ನು ೧೦ರಿಂದ ೧೫ ನಿಮಿಷಗಳ ಕಾಲ ಕುದಿಸಿ. ಒಲೆಯಿಂದ ಕೆಳಗಿಳಿಸಿ ನೀರನ್ನು ತೆಗೆದು ಒಣಗಲು ಬಿಡಿ. ಇದಾದ ಮೇಲೆ ಈ ಬೇಯಿಸಿದ ನೆಲ್ಲಿಕಾಯಿ ತುಂಡುಗಳನ್ನು ಸೂರ್ಯನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಡಿ. ಒಣಗಿದ ತುಂಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಡಿ.

4. ನೆಲ್ಲಿಕಾಯಿ ಪುಡಿ ಮಾಡಿಡಿ: ಪುಡಿ ಮಾಡುವುದು ನೆಲ್ಲಿಕಾಯಿ ಶೇಖರಿಸಿಡುವ ಅತ್ಯಂತ ಹಳೆಯ ಹಾಗೂ ಪರಿಣಾಮಕಾರಿ ತಂತ್ರ ಎಂದರೆ ನೆಲ್ಲಿಕಾಯಿಯನ್ನು ಪುಡಿ ಮಾಡಿಡುವುದು. ನೆಲ್ಲಿಕಾಯಿಯ ಬೀಜ ತೆಗೆದು ತುಂಡುಗಳಾಗಿ ಮಾಡಿ ೧೦-೧೫ ನಿಮಿಷ ಕುದಿಸಿ ಬಿಸಿಲಲ್ಲಿ ಒಣಗಿಸಿ, ಚೆನ್ನಾಗಿ ಒಣಗಿದ ಮೇಲೆ ಅದನ್ನು ಪುಡಿ ಮಾಡಿಡುವುದು. ಇದನ್ನು ಗಾಳಿಯಾಡದ ಡಬ್ಬದಲ್ ಹಾಕಿಟ್ಟರೆ ವರ್ಷಗಳ ಕಾಳ ಕೆಡದೆ ಉಳಿಯುತ್ತದೆ. ಈ ಪುಡಿಯನ್ನು ಬೇಕಾದಾಗ ನೀರಿಗೆ ಹಾಕಿ ಕುಡಿಯುವ ಮೂಲಕ ಅಥವಾ ತಂಬುಳಿ, ನೆಲ್ಲಿಕಾಯಿ ರೈಸ್‌ ಇತ್ಯಾದಿಗಳನ್ನು ಮಾಡುವ ಮೂಲಕ ಬಹಳ ಕಾಲ ಉಪಯೋಗಿಸುತಲೇ ಇರಬಹುದು.

5. ನೆಲ್ಲಿಕಾಯಿ ಕ್ಯಾಂಡಿ: ನೆಲ್ಲಿಕಾಯಿ ಕ್ಯಾಂಡಿ ಅಥವಾ ಮೊರಬ್ಬ ಕೂಡಾ ನೆಲ್ಲಿಕಾಯಿ ಶೇಖರಣೆಯ ಅತ್ಯಂತ ಪ್ರಸಿದ್ಧ ವಿಧಾನಗಳಲ್ಲಿ ಒಂದು. ರುಚಿಯೂ ಕೂಡಾ. ಮುಖ್ಯವಾಗಿ ಮಕ್ಕಳು ನೆಲ್ಲಿಕಾಯಿಯನ್ನು ತಿನ್ನುವಂತೆ ಮಾಡಬೇಕಿದ್ದರೆ ಇಂತಹ ಉಪಾಯಗಳೇ ಆಗಬೇಕು. ನೆಲ್ಲಿಕಾಯಿಯನ್ನು ತೊಳೆದು ಬೀಜ ತೆಗೆದು ನೀರಿನಲ್ಲಿ ೧೦-೧೫ ನಿಮಿಷ ಕುದಿಸಿ, ನಂತರ ಬಿಸಿಲಿನಲ್ಲಿ ಒಣಗಿಸುವಾಗ ಸಾಕಷ್ಟು ಪ್ರಮಾಣದಲ್ಲಿ ಸಕ್ಕರೆ ಸೇರಿಸಬೇಕು. ತಿಂಗಳುಗಟ್ಟಲೆ ಕಾಲ ಇದು ಕೆಡದೆ ಹಾಗೆಯೇ ಉಳಿಯುತ್ತದೆ. ತಿನ್ನಲು ರುಚಿಕರ ಕೂಡಾ. 

ಇದನ್ನೂ ಓದಿ: Health Tips: ಮದುವೆಗಳ ಕಾಲ; ಭರ್ಜರಿ ತಿಂದು ಬಂದ ಮೇಲೆ ಹೀಗೆ ಕಾಳಜಿ ವಹಿಸಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ (healthy sandwich spread) ವಿವರ ಇಲ್ಲಿದೆ.

VISTARANEWS.COM


on

Healthy Sandwich Spread
Koo

ಸ್ಯಾಂಡ್‌ವಿಚ್‌ ಎಂಬ ತಿನಿಸು, ಬೆಳಗ್ಗೆ, ಮಧ್ಯಾಹ್ನ ಸಂಜೆ ರಾತ್ರಿಯೆನ್ನದೆ, ಯಾವುದೇ ಹೊತ್ತಿಗೂ ಹೊಟ್ಟೆ ತುಂಬಿಸಬಲ್ಲ ಒಂದು ಸುಲಭವಾದ ತಿನಿಸು. ಅಷ್ಟೇ ರುಚಿಯಾದ ತಿನಸು ಎಂಬುದರಲ್ಲೂ ಎರಡು ಮಾತಿಲ್ಲ. ಮಕ್ಕಳಿರುವ ಹೆತ್ತವರಿಗಂತೂ, ವಾರದಲ್ಲಿ ಎರಡು ಸಲವಾದರೂ ಮನೆಯಲ್ಲಿ ಸ್ಯಾಂಡ್‌ವಿಚ್‌ ಮಾಡಬೇಕಾದ ಪ್ರಸಂಗಗಳು ಇದ್ದೇ ಇರುತ್ತವೆ. ಕಚೇರಿ ಕೆಲಸಕ್ಕೆ ಬೇಗ ಹೋಗಬೇಕಾದಾಗ, ಅತೀವ ಕೆಲಸದ ಒತ್ತಡದಲ್ಲಿರುವಾಗ, ಅಡುಗೆ ಮಾಡಲು ಪುರುಸೊತ್ತು, ವ್ಯವಧಾನ ಇರದಿದ್ದಾಗ, ಬೇರೆ ಅಡುಗೆ ಮಾಡಲು ಗೊತ್ತಿಲ್ಲದೇ ಇದ್ದಾಗ, ಏನಾದರೂ ರುಚಿಯಾಗಿ ತಿನ್ನಬೇಕೆಂದು ಬಯಕೆಯಾದಾಗ, ಹೀಗೆ ನಾನಾ ಕಾರಣಗಳಲ್ಲಿ ಸ್ಯಾಂಡ್‌ವಿಚ್‌ ಎಂಬ ತಿನಿಸು ಅಡುಗೆಮನೆಯಲ್ಲಿ ಹೊತ್ತಲ್ಲದ ಹೊತ್ತಿನಲ್ಲೆಲ್ಲ ಪ್ರತ್ಯಕ್ಷವಾಗುತ್ತದೆ. ಬ್ರೆಡ್‌ ಆರೋಗ್ಯಕ್ಕೆ ಅಷ್ಟೇನೂ ಒಳ್ಳೆಯದಲ್ಲ ಎಂದು ತಿಳಿದಿದ್ದರೂ, ಬಹುತೇಕರ ಮನೆಗಳಲ್ಲಿ ಬ್ರೆಡ್‌ ಬಳಕೆ ಸಾಮಾನ್ಯ. ಈ ಬ್ರೆಡ್‌ ಒಳಗೆ ಮೆಯೋನೀಸ್‌ ಅಥವಾ ಇನ್ನೇನೋ ಅದರೊಳಗೆ ಸುರಿದು ಇನ್ನಷ್ಟು ಅನಾರೋಗ್ಯಕರ ವಾತಾವರಣವನ್ನು ಅಲ್ಲಿ ಸೃಷ್ಟಿಸುವುದು ಬೇಡವೆನಿಸಿದವರೆಲ್ರೂ, ಸ್ಯಾಂಡ್‌ವಿಚ್‌ನಲ್ಲೂ ಆರೋಗ್ಯಕರ ವಿಧಾನಗಳನ್ನು ಹುಡುಕುತ್ತಾರೆ. ಆದರಷ್ಟೂ ಬ್ರೆಡ್‌ ಜೊತೆಗೆ ಒಂದಷ್ಟು ತರಕಾರಿ, ಪ್ರೊಟೀನ್‌, ನೈಸರ್ಗಿಕ ಆಹಾರಗಳು ಹೊಟ್ಟೆ ಸೇರಲಿ ಎಂದು ಬಯಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಬಗೆಬಗೆಯ ಸ್ಪ್ರೆಡ್‌ಗಳು ರುಚಿಕರವಾಗಿ ಕಂಡರೂ, ಅದರಲ್ಲಿರುವ ಆರೋಗ್ಯಕರ ಅಂಶಗಳು ಅಷ್ಟಕ್ಕಷ್ಟೇ ಎಂಬ ಸತ್ಯವೂ ತಿಳಿದಿರುವುದರಿಂದ ಒಂದಿಷ್ಟಿ ಒಳ್ಳೆಯ ಆರೋಗ್ಯಕರ, ಹಾಗೂ ಕಡಿಮೆ ಕ್ಯಾಲರಿಯ ಮನೆಯಲ್ಲೇ ಮಾಡಬಹುದಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ಗಳ ವಿವರ ಇಲ್ಲಿದೆ. ಸಾಕಷ್ಟು ಪೋಷಕಾಂಶವನ್ನು ನೀಡುವ ಈ ಆರೋಗ್ಯಕರ ಸ್ಪ್ರೆಡ್‌ಗಳು (healthy sandwich spread) ಇವು.

Hummus Sandwich Spread

ಹುಮಸ್‌

ಚೆನ್ನಾ, ಎಳ್ಳು ಹಾಗೂ ಆಲಿವ್‌ ಎಣ್ಣೆಯಿಂದ ಮಾಡಬಹುದಾದ ಹುಮಸ್‌, ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಸ್ಪ್ರೆಡ್‌. ಇದರಲ್ಲಿ ದೇಹಕ್ಕೆ ಅಗತ್ಯವಾದ ಒಳ್ಳೆಯ ಕೊಬ್ಬಿದೆ. ಇದನ್ನು ತಯಾರಿಸಿ, ಸ್ಯಾಂಡ್‌ವಿಚ್‌ ಮಾಡುವಾಗ ಒಳಗೆ ಲೇಪಿಸಿ ಟೊಮೇಟೋ, ಸೌತೆಕಾಯಿ ಇತ್ಯಾದಿಗಳನ್ನೂ ಇಟ್ಟು ಸ್ಯಾಂಡ್‌ವಿಚ್‌ ಮಾಡಬಹುದು.

Avocado Sandwich Spread

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣನ್ನು ಸ್ಯಾಂಡ್‌ವಿಚ್‌ ಒಳಗೆ ಸ್ಪ್ರೆಡ್‌ನಂತೆ ಬಳಸಬಹುದು. ರುಚಿಯಾದ ಹಾಗೂ ಅಷ್ಟೇ ಪೋಷಕಾಂಶಯುಕ್ತವೂ ಆಗಿರುವ ಈ ಸ್ಪ್ರೆಡ್‌ ಮಾಡಲು ಬೆಣ್ಣೆಹಣ್ಣಿಗೆ ವಿವಿಧ ಮಿಕ್ಸ್‌ಡ್‌ ಹರ್ಬ್ಸ್‌ ಹಾಗೂ ಮಸಾಲೆಗಳನ್ನು ಬಳಸಬಹುದು. ಸಿಹಿಯಾದ ಹಾಗೂ ಸ್ಪೈಸೀಯಾದ ಸ್ಯಾಂಡ್‌ವಿಚ್‌ಗಳೆರಡಕ್ಕೂ ಇದು ಸೂಕ್ತವಾದ ಆಯ್ಕೆ.

Berries Sandwich Spread

ಬೆರ್ರಿಗಳು

ನಿಮಗೆ ಅಥವಾ ನಿಮ್ಮ ಮಕ್ಕಳಿಗೆ ಸಿಹಿಯಾದ ಸ್ಯಾಂಡ್‌ವಿಚ್‌ ಇಷ್ಟವಾಗುತ್ತಿದ್ದರೆ, ಮಾರುಕಟ್ಟೆಯಿಂದ ಜ್ಯಾಮ್‌ ತಂದು ಸುರಿಯುವ ಬದಲು ಬೆರ್ರಿ ಹಣ್ಣುಗಳನ್ನು ಮ್ಯಾಶ್‌ ಮಾಡಿ ಬಳಸಬಹುದು. ನಿಮಗಿಷ್ಟವಾದ ಬೆರ್ರಿ ಹಣ್ಣುಗಳನ್ನು ಕೊಂಡು ತಂದು ಅವನ್ನೆಲ್ಲ ಮ್ಯಾಶ್‌ ಮಾಡಿ, ಸ್ವಲ್ಪ ಜೇನುತುಪ್ಪ ಸೇರಿಸಿ ಪೇಸ್ಟ್‌ ತರಹ ಮಾಡಿ, ನೈಸರ್ಗಿಕವಾದ ಸಿಹಿಯಾದ ಸ್ಯಾಂಡ್‌ವಿಚ್‌ಗಳನ್ನು ಮಾಡಬಹುದು. ಬೆಳಗಿನ ಹಗುರವಾದ ಉಪಹಾರಕ್ಕೆ ಇದನ್ನು ಮಾಡಬಹುದು.

Peanut Butter Sandwich Spread

ಪೀನಟ್‌ ಬಟರ್‌

ಮಾರುಕಟ್ಟೆಯಿಂದ ದೊಡ್ಡ ಜಾರ್‌ನಲ್ಲಿ ಪೀನಟ್‌ ಬಟರ್‌ ತಂದು ಸ್ಯಾಂಡ್‌ವಿಚ್‌ಗೆ ಸ್ಪ್ರೆಡ್‌ ಮಾಡಿ ಕೊಡುವ ಬದಲು ನೀವೇ ಏಕೆ ಪೀನಟ್‌ ಬಟರನ್ನು ಮನೆಯಲ್ಲಿಯೇ ಮಾಡಬಾರದು? ನೆಲಗಡಲೆಯಿಂದ ಪೀನಟ್‌ ಬಟರ್‌ ಮಾಡಿ ಅದರ ಜೊತೆಗೆ ಬಾಳೆಹಣ್ಣಿನ ತುಣುಕುಗಳನ್ನೂ ಸೇರಿಸಿ ಅದನ್ನು ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿ ಬಳಸಬಹುದು. ಬೇಕಾದರೆ ಜೇನುತುಪ್ಪವನ್ನೂ ಸೇರಿಸಬಹುದು.

Paneer Mayonnaise Sandwich Spread

ಪನೀರ್‌ನ ಮೆಯೋನೀಸ್‌

ನಿಮಗೆ ಮೆಯೋನೀಸ್‌ ಅತ್ಯಂತ ಪ್ರಿಯವಾದ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಆಗಿದ್ದರೆ, ನೀವು ಪನೀರ್‌ ಅಥವಾ ಮೊಸರಿನಿಂದ ಇಂತಹ ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಮಾಡಬಹುದು. ಯಾವುದೇ ಕಷ್ಟವಿಲ್ಲದ, ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಈ ಸ್ಪ್ರೆಡ್‌ ಮಕ್ಕಳಿಗೂ ಬಹಳ ಪ್ರಿಯವಾಗುತ್ತದೆ. ಮೊಸರಿನ ನೀರನ್ನು ಸಂಪೂರ್ಣವಾಗಿ ಒಂದು ಬಟ್ಟೆಯಲ್ಲಿ ಹಿಂಡಿ ತೆಗೆದು ಅಥವಾ ಪನೀರ್‌ರನ್ನು ಚೆನ್ನಾಗಿ ಮ್ಯಾಶ್‌ ಮಾಡಿ ಅದಕ್ಕೆ ಒಂದಿಷ್ಟು ನೆನೆಸಿದ ಗೋಡಂಬಿ ಹಾಗೂ ಒಂದು ಹಸಿ ಬೆಳ್ಳುಳ್ಳಿಯನ್ನು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್‌ ತಯಾರಿಸಿ. ರುಚಿಗೆ ತಕ್ಕಷ್ಟು ಉಪ್ಪು, ಮಿಕ್ಸ್ಡ್‌ ಹರ್ಬ್ಸ್‌ ಸೇರಿಸಿದರೆ, ಮಾರುಕಟ್ಟೆಯ ಮೆಯೋನೀಸ್‌ಗಳೆಲ್ಲ ಮಕಾಡೆ ಮಲಗಬೇಕು!

ಇದನ್ನೂ ಓದಿ: Heatwave Effect: ಬೇಸಿಗೆಗೂ ಕಣ್ಣಿನ ಸಮಸ್ಯೆಗೂ ಇದೆ ನಂಟು!

Continue Reading

ಆರೋಗ್ಯ

Health Tips For Rainy Season: ಮಳೆಗಾಲ ಶುರುವಾಗಿದೆ, ಅನಾರೋಗ್ಯಕ್ಕೆ ತುತ್ತಾಗದಿರಲು ಈ ಸಲಹೆ ಪಾಲಿಸಿ

ಮಳೆಗಾಲದಲ್ಲಿ ಆರೋಗ್ಯವನ್ನು (Health Tips For Rainy Season) ಕಾಪಾಡಿಕೊಳ್ಳುವುದು ಬಹುಮುಖ್ಯ,. ಇದಕ್ಕಾಗಿ ಕೆಲವೊಂದು ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ಆಹಾರ ಮತ್ತು ಆರೋಗ್ಯದ ಕಾಳಜಿ ಹೆಚ್ಚಾಗಿದ್ದರೆ ಈ ಬಾರಿ ಮಳೆಗಾಲವನ್ನು ಸಂತೋಷದಿಂದ ಕಳೆಯಬಹುದು. ಮಳೆಗಾಲದಲ್ಲಿ ಆರೋಗ್ಯವಾಗಿರಲು ಏನು ಮಾಡಬೇಕು? ಇಲ್ಲಿದೆ ಉಪಯುಕ್ತ ಸಲಹೆ.

VISTARANEWS.COM


on

By

Man
Koo

ಮಳೆ ಆರಂಭವಾದಾಗ ಬಿಸಿಬಿಸಿ ಪಕೋಡ, ಚಹಾ, ಕಾಫಿ ಎಲ್ಲವೂ ನೆನಪಾಗುತ್ತದೆ. ಆದರೆ ಮಳೆಗಾಲ (Health Tips For Rainy Season) ಎಂದರೆ ನಾವು ಆರೋಗ್ಯದ (health) ಜೊತೆಜೊತೆಗೆ ಆಹಾರದ (food) ಬಗ್ಗೆಯೂ ಎಚ್ಚರವಹಿಸಬೇಕು. ಮಳೆಗಾಲ (Rainy Season) ಪ್ರಕೃತಿಯಲ್ಲಿ ಉಲ್ಲಾಸಕರ ಅನುಭವವನ್ನು ತುಂಬುವ ಸಮಯ. ಈ ಋತು ಎಲ್ಲರಿಗೂ ಅಚ್ಚುಮೆಚ್ಚಿನದ್ದಾಗಿದೆ.

ಮಳೆಗಾಲದ ಸಮಯದಲ್ಲಿ ಆರೋಗ್ಯದ ಬಗ್ಗೆ ಜಾಗೃತರಾಗಿದ್ದರೆ ರೋಗ ಮತ್ತು ಸೋಂಕುಗಳಿಂದ ದೂರವಿರಬಹುದು. ಇದಕ್ಕೆ ಸಹಾಯ ಮಾಡಲು ಟಾಪ್ 10 ಸಲಹೆಗಳು ಇಲ್ಲಿವೆ.

ಆರೋಗ್ಯದ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯ ಸೇವೆಗಳ ತಜ್ಞರು ಹೇಳುವ ಮಳೆಗಾಲದಲ್ಲಿ ಪಾಲಿಸಬೇಕಾದ ಕೆಲವು ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.


ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ

ಇದು ಮಳೆಗಾಲದಲ್ಲಿ ನಾವು ತೆಗೆದುಕೊಳ್ಳಬೇಕಾದ ಮೊದಲ ಹೆಜ್ಜೆ. ರೋಗನಿರೋಧಕ ಶಕ್ತಿಯ ಕೊರತೆಯಿಂದಾಗಿ ಮಳೆಗಾಲದಲ್ಲಿ ಹೆಚ್ಚಿನ ರೋಗ ಮತ್ತು ಸೋಂಕುಗಳು ಹರಡುತ್ತವೆ. ಅಲ್ಲದೇ ವಾತಾವರಣದಲ್ಲಿ ಅತಿಯಾದ ತೇವಾಂಶದ ಪರಿಣಾಮವಾಗಿ ಕೆಮ್ಮು, ಶೀತ ಮತ್ತು ಜ್ವರ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಸಂರಕ್ಷಿತವಾಗಿರಲು ಸೂಪ್‌ಗೆ ಬೆಳ್ಳುಳ್ಳಿಯನ್ನು ಸೇರಿಸುವುದು ಮತ್ತು ಚಹಾಕ್ಕೆ ಶುಂಠಿಯನ್ನು ಸೇರಿಸುವುದು ಮೊದಲಾದವುಗಳನ್ನು ಪ್ರಯತ್ನಿಸಬಹುದು.

ಕಹಿ ತರಕಾರಿಗಳನ್ನು ಸೇವಿಸಿ

ತಜ್ಞರು ಸೂಚಿಸುವಂತೆ ಇದು ಅತ್ಯಗತ್ಯ ಸಲಹೆಯಾಗಿದೆ. ಕೆಲವು ಸಂಸ್ಕೃತಿಯಲ್ಲಿ ಹಾಗಲಕಾಯಿಯಂತಹ ತರಕಾರಿಗಳನ್ನು ತಿನ್ನುವುದು ವಿಶೇಷವಾಗಿ ಮಳೆಗಾಲದಲ್ಲಿ ಸಂಪ್ರದಾಯದ ಒಂದು ಭಾಗವಾಗಿದೆ. ಅಂತಹ ತರಕಾರಿಗಳಿಂದ ನೀವು ಪಡೆಯುವ ಹಲವಾರು ಪ್ರಯೋಜನಗಳಿವೆ ಮತ್ತು ಆದ್ದರಿಂದ ನಿಮ್ಮ ದೈನಂದಿನ ಊಟದಲ್ಲಿ ಅದನ್ನು ಸೇರಿಸಿಕೊಳ್ಳಬೇಕು.

ಕುದಿಸಿದ ನೀರು ಕುಡಿಯಿರಿ

ಮಳೆಗಾಲದಲ್ಲಿ ಕಲುಷಿತ ನೀರಿನಿಂದ ಹಲವಾರು ರೋಗಗಳು ಬರಬಹುದು. ಆದ್ದರಿಂದ ಶುದ್ಧ ಮತ್ತು ಸುರಕ್ಷಿತ ನೀರನ್ನು ಮಾತ್ರ ಕುಡಿಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕೆಲವೊಂದು ಕಾಯಿಲೆಗಳನ್ನು ತೊಡೆದುಹಾಕಲು ಮನೆಯಲ್ಲಿ ಕುದಿಸಿ ಆರಿಸಿದ ನೀರು ಬಳಸುವುದು ಉತ್ತಮ ಮಾರ್ಗವಾಗಿದೆ.


ಹಾಲಿನ ಉತ್ಪನ್ನಗಳನ್ನು ಸೇವಿಸಿ

ಮಳೆಗಾಲದಲ್ಲಿ ಹಾಲು ಅಜೀರ್ಣವನ್ನು ಉಂಟುಮಾಡಬಹುದು. ಇದಕ್ಕೆ ಪರ್ಯಾಯವಾಗಿ ಕಾಟೇಜ್ ಚೀಸ್, ತಾಜಾ ಮೊಸರು ಮತ್ತು ಮಜ್ಜಿಗೆಯಂತಹ ಇತರ ಡೈರಿ ಉತ್ಪನ್ನಗಳನ್ನು ಆಯ್ಕೆ ಮಾಡಬಹುದು. ಈ ಉತ್ಪನ್ನಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗಿಡಮೂಲಿಕೆ ಚಹಾಗಳನ್ನು ಸೇರಿಸಿ

ಗಿಡಮೂಲಿಕೆಯ ಚಹಾ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಆರೋಗ್ಯವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಚಹಾಕ್ಕೆ ಬದಲಾಗಿ ಗಿಡಮೂಲಿಕೆ ಚಹಾಗಳಿಗೆ ಬದಲಾಯಿಸುವ ಸಮಯ. ಇದು ರೋಗನಿರೋಧಕ ಶಕ್ತಿ ಮತ್ತು ಹಸಿವನ್ನು ಹೆಚ್ಚಿಸುವುದು. ಒಂದೆರಡು ದಿನಗಳಲ್ಲೇ ಇದರ ಪರಿಣಾಮ ಗಮನಿಸಬಹುದು.

ಹಣ್ಣುಗಳ ಆಯ್ಕೆ ಮಾಡುವಾಗ ಜಾಗರೂಕರಾಗಿರಿ

ಎಲ್ಲಾ ಹಣ್ಣುಗಳನ್ನು ತಿನ್ನುವುದು ಉತ್ತಮ ಅಭ್ಯಾಸವಾಗಿದೆ. ಯಾಕೆಂದರೆ ಪ್ರತಿಯೊಂದರಿಂದಲೂ ಬಹು ಪೋಷಕಾಂಶಗಳೊಂದಿಗೆ ಪೂರ್ಣ ಪೋಷಣೆಯನ್ನು ಪಡೆಯುತ್ತೀರಿ. ಆದರೂ ಮಳೆಗಾಲದಲ್ಲಿ ಕಲ್ಲಂಗಡಿ ಸೇರಿದಂತೆ ಕೆಲವು ನಿರ್ದಿಷ್ಟ ಹಣ್ಣುಗಳನ್ನು ತ್ಯಜಿಸುವುದು ಒಳ್ಳೆಯದು. ಪೇರಳೆ, ಮಾವಿನ ಹಣ್ಣು, ಸೇಬು, ದಾಳಿಂಬೆ ಮೊದಲಾದ ಹಣ್ಣುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಮಸಾಲೆಯುಕ್ತ ಆಹಾರದಿಂದ ದೂರವಿರಿ

ಮಸಾಲೆಯುಕ್ತ ಆಹಾರಕ್ಕಾಗಿ ಹಂಬಲಿಸುತ್ತಿದ್ದರೆ ಮಳೆಗಾಲದಲ್ಲಿ ಅದನ್ನು ಸೇವಿಸುವುದನ್ನು ನಿರ್ಬಂಧಿಸಬೇಕಾದ ಸಮಯವಾಗಿದೆ. ಇಂತಹ ಆಹಾರಗಳು ಚರ್ಮದ ಅಲರ್ಜಿ ಮತ್ತು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಬದಲಾಗಿ ಆರೋಗ್ಯಕರ ಸೂಪ್‌ ಮತ್ತು ಕಡಿಮೆ ಅಥವಾ ಮಧ್ಯಮ ಮಸಾಲೆಯುಕ್ತ ಬೆಚ್ಚಗಿನ ಆಹಾರವನ್ನು ಸೇವಿಸಿ.

ನೀರು ನಿಲ್ಲದಂತೆ ಮಾಡಿ

ಮನೆಯ ಸುತ್ತಮುತ್ತ ಮಳೆಯಿಂದ ನಿಂತ ನೀರು ತೀವ್ರ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಬಳಕೆಯಾಗದ ಟ್ಯಾಂಕ್, ವಾಟರ್ ಕೂಲರ್ ಮತ್ತು ಹೂವಿನ ಕುಂಡಗಳೊಳಗೆ ನೀರು ನಿಲ್ಲದಂತೆ ಮಾಡಿ. ನೀರಿನ ಮೇಲ್ಮೈಗಳನ್ನು ಸ್ವಚ್ಛವಾಗಿ ಮತ್ತು ಶುಷ್ಕವಾಗಿ ಇಟ್ಟುಕೊಳ್ಳುವುದು ಅಪಾರ ಪ್ರಯೋಜನವನ್ನು ನೀಡುತ್ತದೆ.

ಇದನ್ನೂ ಓದಿ: Hair Growth Tips: ಕೂದಲು ಉದುರುವುದಕ್ಕೆ ಬೀಟಾ ಕ್ಯಾರೊಟಿನ್‌ ಮದ್ದು!


ಸೊಳ್ಳೆ ನಿವಾರಕವನ್ನು ಬಳಸಿ

ಮಳೆಗಾಲದಲ್ಲಿ ಸೊಳ್ಳೆಗಳು ವೇಗವಾಗಿ ಬೆಳೆಯುತ್ತವೆ ಮತ್ತು ಇವು ದೊಡ್ಡ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಸಮಯದಲ್ಲಿ ರೂಮ್ ಫ್ರೆಶ್ನರ್, ಸೌಮ್ಯವಾದ ಮಾರ್ಜಕ ಮತ್ತು ಸುಗಂಧ ದ್ರವ್ಯಗಳಂತಹ ಸೊಳ್ಳೆ ನಿವಾರಕಗಳು ಅತ್ಯಗತ್ಯವಾಗಿರುತ್ತದೆ.

ಛತ್ರಿ ಮತ್ತು ರೈನ್‌ಕೋಟ್‌ಗಳನ್ನು ಒಯ್ಯಿರಿ

ಮನೆಯಿಂದ ಹೊರಗೆ ಹೋಗುವಾಗ ಮಳೆಗಾಲದಲ್ಲಿ ಅಗತ್ಯವಿರುವ ಛತ್ರಿ ಅಥವಾ ರೈನ್ ಕೋಟ್ ಅಥವಾ ಎರಡನ್ನೂ ಒಯ್ಯಲು ಪ್ರಯತ್ನಿಸಿ. ಶೀತ, ಕೆಮ್ಮು, ಜ್ವರ ಮತ್ತು ಜ್ವರದಂತಹ ಕಾಯಿಲೆಗಳನ್ನು ತಪ್ಪಿಸಲು ನಿಮ್ಮನ್ನು ಶುಷ್ಕ, ತಾಜಾ ಮತ್ತು ಸ್ವಚ್ಛವಾಗಿರಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.

Continue Reading

ಆಹಾರ/ಅಡುಗೆ

Healthy Salad Tips: ನೀವು ಸಲಾಡ್‌ ಪ್ರಿಯರೇ? ಸಲಾಡ್‌ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!

ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ (healthy salad tips) ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ.

VISTARANEWS.COM


on

Healthy Salad Tips
Koo

ಪೋಷಕಾಂಶಯುಕ್ತ ಆಹಾರ ಎಂದಾಕ್ಷಣ ಸುಲಭವಾಗಿ ನೆನಪಿಗೆ ಬರುವುದು ಸಲಾಡ್‌ಗಳು. ಸುಲಭವಾಗಿ ಮಾಡಬಹುದಾದ, ಹೆಚ್ಚೂ ಶ್ರಮ ಬೇಡದ, ಬೇಗ ಹೊಟ್ಟೆ ತುಂಬಿಸುವ ಗುಣ ಉಳ್ಳ ಸಲಾಡ್‌ಗಳು ತೂಕ ಇಳಿಸುವ ಮಂದಿಯ ಪರಮಾಪ್ತ ಸ್ನೇಹಿತನಂತೆ. ಕಚೇರಿಗಳಿಗೆ ಬಿಡು ಹೊತ್ತಿನಲ್ಲಿ ತಿನ್ನಬಹುದಾದ ಸ್ನ್ಯಾಕ್‌ಗಳ ಬದಲಿಗೂ ಈ ಸಲಾಡ್‌ಗಳು ಅನೇಕರಿಗೆ ಸುಲಭವಾಗಿ ಮಾಡಬಹುದಾದ ಆಹಾರವೇ ಆಗಿದೆ. ಕೆಲವು ಬಗೆಯ ಹಣ್ಣುಗಳು, ಒಣಬೀಜಗಳು, ಒಣಹಣ್ಣುಗಳು, ಹಸಿ ತರಕಾರಿಗಳು, ಮೊಳಕೆ ಕಾಳುಗಳು, ಬೇಯಿಸಿದ ಕಾಳುಗಳು ಹೀಗೆ ಹತ್ತು ಹಲವು ಬಗೆಯ ಕಾಂಬಿನೇಶನ್ನಿನ ಸಲಾಡ್‌ಗಳನ್ನು ನಿತ್ಯವೂ ತಯಾರಿಸಬಹುದು. ಕಡಿಮೆ ಕ್ಯಾಲರಿಯ, ಪ್ರೊಟೀನ್‌ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ನಮ್ಮ ದೇಹಕ್ಕೆ ಒದಗಿಸಬಲ್ಲ ಆಹಾರವಾದ ಈ ಸಲಾಡ್‌ಗಳು ಆರೋಗ್ಯಕರ ಎಂಬುದರಲ್ಲಿ ಎರಡು ಮಾತೇ ಇಲ್ಲ. ಹಸಿವಾದಾಗ ತಕ್ಷಣ ಹಸಿವು ಕಡಿಮೆ ಮಾಡಬಲ್ಲ ಆಪದ್ಬಾಂಧವ ಕೂಡಾ ಈ ಸಲಾಡ್‌ಗಳೇ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಈ ಆರೋಗ್ಯ ವರ್ಧಿಸುವ ಸಲಾಡ್‌ಗಳನ್ನು ಮಾಡುವ ಸಮಯದಲ್ಲಿ ಕೆಲವು ತಪ್ಪುಗಳನ್ನು ಮಾಡುವ ಅಪಾಯವೂ ಇದೆ. ಬನ್ನಿ, ನೀವು ಸಲಾಡ್‌ಗಳನ್ನು ಮಾಡುವ ಸಂದರ್ಭ ಈ ಕೆಳಗಿನ ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದಾದಲ್ಲಿ, ಆರೋಗ್ಯಕ್ಕೆ ಒಳಿತಾಗುವ ರೀತಿಯಲ್ಲಿ ತಿದ್ದಿಕೊಳ್ಳಿ. ಬನ್ನಿ, ಸಲಾಡ್‌ ಮಾಡುವ ಸಮಯದಲ್ಲಿ ಸಾಮಾನ್ಯವಾಗಿ (healthy salad tips) ಮಾಡುವ ತಪ್ಪುಗಳೇನು ಎಂಬುದನ್ನು ನೋಡೋಣ.

Greek Salad

ಡ್ರೆಸ್ಸಿಂಗ್‌ ಅತಿಯಾಗಿ ಮಾಡುವುದು

ಹೌದು, ಸಲಾಡ್‌ ಎಂದಾಕ್ಷಣ ಡ್ರೆಸ್ಸಿಂಗ್‌ ಸಹಜ. ಯಾಕೆಂದರೆ ಸಲಾಡ್‌ಗೆ ಒಂದು ರುಚಿಯನ್ನು ನೀಡುವುದೇ ಈ ಡ್ರೆಸ್ಸಿಂಗ್‌. ಆದರೆ, ಅತಿಯಾದ ಡ್ರೆಸ್ಸಿಂಗ್‌ ಮಾಡುವುದರಿಂದ ಸಲಾಡ್‌ನಲ್ಲಿ ಕೊಬ್ಬು ಜಾಸ್ತಿಯಾಗಬಹುದು. ಹೆಚ್ಚು ಕ್ಯಾಲರಿ ಸೇರಿಕೊಳ್ಳಬಹುದು. ಕೇವಲ ರುಚಿಗೆ ತಕ್ಕಷ್ಟೇ ಡ್ರೆಸ್ಸಿಂಗ್‌ ಮಾಡಿ.

ತರಕಾರಿಗಳನ್ನು ತೊಳೆಯದೆ ಇರುವುದು

ಹಸಿಯಾದ ತರಕಾರಿಗಳನ್ನು ಹಾಗೆಯೇ ಸಲಾಡ್‌ಗೆ ಬಳಸುವುದರಿಂದ ತರಕಾರಿಗಳನ್ನು ತೊಳೆಯುವುದು ಅತ್ಯಂತ ಮುಖ್ಯವಾದ ಘಟ್ಟ. ಹಾಗಾಗಿ ತರಕಾರಿಗಳನ್ನು ಒಮ್ಮೆ ಉಪ್ಪು ನೀರಿನಲ್ಲಿ ಹಾಕಿಟ್ಟು ತೊಳೆಯುವುದನ್ನು ರೂಢಿ ಮಾಡಿಕೊಳ್ಳಿ. ಯಾಕೆಂದರೆ ಇಲ್ಲಿ ತರಕಾರಿ ಬೇಯುವುದಿಲ್ಲವಾದ್ದರಿಂದ ಕೆಲವು ರಾಸಾಯನಿಕಗಳು ತರಕಾರಿಗೆ ಸಿಂಪಡಿಸಲ್ಪಟ್ಟದ್ದು ಹಾಗೆಯೇ ಉಳಿದಿರುವ ಸಾಧ್ಯತೆಯೂ ಇದೆ. ಹಾಗಾಗಿ, ತರಕಾರಿಯನ್ನು ಎರಡೆರಡು ಬಾರಿ ತೊಳೆದುಕೊಂಡು ಬಳಸಿ.

ಇದನ್ನೂ ಓದಿ: Which Type Of Roti Is Best: ಯಾರಿಗೆ ಯಾವ ರೊಟ್ಟಿ ಸೂಕ್ತ? ತಿನ್ನುವ ಮೊದಲು ತಿಳಿದುಕೊಂಡಿರಿ!

ಅತಿಯಾಗಿ ತರಕಾರಿಗಳನ್ನು ಬಳಸುವುದು

ಸಲಾಡ್‌ ಎಂದಾಕ್ಷಣ ಬೇಕಾದ ಹಾಗೆ ತರಕಾರಿಗಳನ್ನು ಬಳಸಬಹುದು ಎಂಬ ನಿಮ್ಮ ಎಣಿಕೆಯಾಗಿದ್ದರೆ ಅದು ತಪ್ಪು. ತರಕಾರಿಗಳ ಸಂಖ್ಯೆಯೂ ಅತಿಯಾಗಬಾರದು. ಒಂದಕ್ಕೊಂದು ಹೊಂದಿಕೊಳ್ಳುವ ಮೂರ್ನಾಲ್ಕು ಬಗೆಯ ತರಕಾರಿಗಳಿಗಿಂತ ಹೆಚ್ಚು ಬಳಸಬೇಡಿ. ತರಕಾರಿಗಳು ಅತಿಯಾದರೆ, ಅವು ಹಸಿಯಾಗಿರುವುದರಿಂದ ಇವು ಗ್ಯಾಸ್‌ನಂತಹ ಸಮಸಯೆಯನ್ನು ತಂದೊಡ್ಡಬಹುದು. ಜೀರ್ಣದ ಸಮಸ್ಯೆಗಳೂ ತಲೆದೋರಬಹುದು. ಕೆಲವರಿಗೆ ಹಸಿ ತರಕಾರಿಗಳು ಕರಗುವುದಿಲ್ಲ. ಇಂಥ ಮಂದಿ ತರಕಾರಿಗಳನ್ನು ಸ್ವಲ್ಪ ಬೇಯಿಸಿಕೊಂಡು ತಿನ್ನಬಹುದು. ಹೀಗೆ ಮಾಡುವುದರಿಂದ ಜೀರ್ಣ ಸಮಸ್ಯೆಗಳು ಬರದು.

Continue Reading

ಆರೋಗ್ಯ

Fruit and Veggie Smoothies: ಹಣ್ಣು, ತರಕಾರಿಗಳ ಆರೋಗ್ಯಕರ ಸ್ಮೂದಿ ಎಂಬ ಟ್ರೆಂಡ್‌! ಒಳ್ಳೆಯದೇ, ಕೆಟ್ಟದ್ದೇ?

ಒಂದಿಷ್ಟು ಹಣ್ಣುಗಳನ್ನು ಸೇರಿಸಿ ಮಾಡುವ ಸ್ಮೂದಿ, ತರಕಾರಿಗಳನ್ನು ಸೇರಿಸಿ ಮಾಡುವ ಸ್ಮೂದಿ, ಬೀಜಗಳು ಒಣ ಹಣ್ಣುಗಳು, ವೇಗನ್‌ ಹಾಲು ಇತ್ಯಾದಿ ಇತ್ಯಾದಿ ಹಲವು ಬಗೆಯನ್ನು ಸೇರಿಸಿ ಮಾಡಬಹುದಾದ ಸ್ಮೂದಿಗಳು ಬಹುತೇಕರ ಜೀವನದಲ್ಲಿ ಇಂದು ಪ್ರತಿನಿತ್ಯದ ಆಹಾರ. ಹಲವು ಪೋಷಕಾಂಶಗಳನ್ನು ಒಳಗೊಂಡ, ಒಮ್ಮೆಲೇ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸುಲಭವಾಗಿ ದೇಹಕ್ಕೆ ಸಿಗುವಂತೆ ಮಾಡಬಲ್ಲ, ಸುಲಭ ಸರಳವಾದ, ಫಟಾಫಟ್‌ ಮಾಡಬಹುದಾದ ಆಯ್ಕೆ ಇದು ಎಂಬುದರಲ್ಲಿ (Fruit and Veggie Smoothies) ಯಾವ ಸಂಶಯವೂ ಇಲ್ಲ. ಆದರೆ…

VISTARANEWS.COM


on

Fruit and Veggie Smoothie
Koo

ಸದ್ಯದ ಯುವಜನರ ಆಹಾರದ ಟ್ರೆಂಡ್‌ ಎಂದರೆ ಅದು ಸ್ಮೂದಿ. ಬಹಳ ಸುಲಭವಾಗಿ ಮಾಡಬಲ್ಲ, ಹೊಟ್ಟೆ ತುಂಬಿಸಿಕೊಳ್ಳಬಹುದಾದ ಹಾಗೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾದ ಟ್ರೆಂಡ್‌ ಆದ ಆಹಾರ ಕ್ರಮ. ಒಂದಿಷ್ಟು ಹಣ್ಣುಗಳನ್ನು ಸೇರಿಸಿ ಮಾಡುವ ಸ್ಮೂದಿ, ತರಕಾರಿಗಳನ್ನು ಸೇರಿಸಿ ಮಾಡುವ ಸ್ಮೂದಿ, ಬೀಜಗಳು ಒಣ ಹಣ್ಣುಗಳು, ವೇಗನ್‌ ಹಾಲು ಇತ್ಯಾದಿ ಇತ್ಯಾದಿ ಹಲವು ಬಗೆಯನ್ನು ಸೇರಿಸಿ ಮಾಡಬಹುದಾದ ಸ್ಮೂದಿಗಳು ಬಹುತೇಕರ ಜೀವನದಲ್ಲಿ ಇಂದು ಪ್ರತಿನಿತ್ಯದ ಆಹಾರ. ಹಲವು ಪೋಷಕಾಂಶಗಳನ್ನು ಒಳಗೊಂಡ, ಒಮ್ಮೆಲೇ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಸುಲಭವಾಗಿ ದೇಹಕ್ಕೆ ಸಿಗುವಂತೆ ಮಾಡಬಲ್ಲ, ಸುಲಭ ಸರಳವಾದ, ಫಟಾಫಟ್‌ ಮಾಡಬಹುದಾದ ಆಯ್ಕೆ ಇದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ, ಈ ಸ್ಮೂದಿಗಳನ್ನು ಕುಡಿಯುವುದರಿಂದ, ದೇಹಕ್ಕೆ ಹಣ್ಣು, ತರಕಾರಿ, ಬೀಜಗಳನ್ನು ತಿಂದಷ್ಟೇ ಲಾಭಗಳು ದೊರೆಯುತ್ತವೆಯೇ ಎಂಬ ಬಗ್ಗೆ ನಿಮಗೆ ಪ್ರಶ್ನೆ ಉದ್ಭವಿಸಿದಲ್ಲಿ ಅದಕ್ಕೆ (Fruit and Veggie Smoothies) ಉತ್ತರ ಇಲ್ಲಿದೆ.

  • ನೀವು ಸ್ಮೂದಿಗಾಗಿ ಬಳಸುವ ಹಣ್ಣು ಹಂಪಲಾಗಿರಬಹುದು, ತರಕಾರಿಗಳಿರಬಹುದು, ಬೀಜ ಒಣಹಣ್ಣುಗಳಿರಬಹುದು, ಅವುಗಳನ್ನು ಹಾಗೆಯೇ ಜಗಿದು ತಿಂದರೆ ಆ ಜಗಿಯುವ ಪ್ರಕ್ರಿಯೆಯಲ್ಲಿ ಬಾಯಲ್ಲಿ ಲಾಲಾರಸವೂ ಅಂದರೆ ಜೊಲ್ಲೂ ಕೂಡಾ ಅದಕ್ಕೆ ಸೇರುತ್ತದೆ. ಈ ರಸ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸ. ಜೊತೆಗೆ ಇದು ಬಾಯಿಯನ್ನು ತೇವವಾಗಿ ಇಟ್ಟುಕೊಳ್ಳುವ ರಸವಾದ್ದರಿಂದ ಇದು ಬಾಯಿಯ ಮೂಲಕ ದೇಹಕ್ಕೆ ಇನ್‌ಫೆಕ್ಷನ್‌ ಹೋಗದಂತೆಯೂ ರಕ್ಷಿಸುತ್ತದೆ. ಸ್ಮೂದಿ ಮಾಡಿ ಕುಡಿಯುವುದರಿಂದ ದೇಹದ ಈ ನೈಸರ್ಗಿಕ ಕ್ರಿಯೆಯನ್ನೇ ನೀವು ದೂರ ಮಾಡಿ ಸುಲಭವಾಗಿ ಆಹಾರವನ್ನು ಹೊಟ್ಟೆಗೆ ಕಳುಹಿಸುತ್ತಿದ್ದೀರಿ ಎಂದಾಯಿತು. ಬಾಯಿಗೆ ಕೆಲಸವೇ ಇಲ್ಲ. ಜೀರ್ಣಕ್ರಿಗೆ ಸಹಾಐ ಆಡುವ ಅಂಶಗಳೂ ಅಲ್ಲಿ ಸೇರಲಿಲ್ಲ!
  • ಸ್ಮೂದಿಯನ್ನು ಕುಡಿಯುವುದರಿಂದ ಬಾಯಿಗೆ ಕೆಲಸವಿಲ್ಲದೆ ಅದು ನೇರವಾಗಿ ಹೊಟ್ಟೆಗೆ ಇಳಿಯುತ್ತದೆ. ಅಲ್ಲಿ ನಿಮ್ಮ ಜೊಲ್ಲುರಸ ಅಂದರೆ ಲಾಲಾರಸ ಈ ಆಹಾರದ ಜೊತೆಗೆ ಸರಿಯಾಗಿ ಸೇರಲಿಲ್ಲ ಅಂತಾಯಿತು. ಇದರಿಂದಾಗಿ ನಿಮ್ಮ ಜೀರ್ಣಕ್ರಿಯೆಯ ಸಾಮರ್ಥ್ಯ ನಿಧಾನವಾಗಿ ಕುಂಠಿತವಾಗುತ್ತಾ ಬರುತ್ತದೆ. ಕೇವಲ ಜೀರ್ಣಕ್ರಿಯೆಯಷ್ಟೇ ಅಲ್ಲ, ರೋಗನಿರೋಧಕ ಶಕ್ತಿಯೂ ಕುಂಠಿತವಾಗುತ್ತಾ ಬರುತ್ತದೆ. ಇಂತಹ ಬಗೆಯ ಆಹಾರಕ್ಕೇ ದೇಹ ಹೊಂದಿಕೊಂಡು, ಜೀರ್ಣ ಮಾಡುವ ಶಕ್ತಿ ಇಳಿಕೆಯಾಗುತ್ತದೆ.
  • ಸ್ಮೂದಿಯು ದ್ರವರೂಪದಲ್ಲಿರುವುದರಿಂದ ಸಹಜವಾಗಿಯೇ, ಸ್ಮೂದಿಯಲ್ಲಿರುವ ನೈಸರ್ಗಿಕ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ಇದರಿಂದಾಗಿ ಸುಸ್ತಿನ ಅನುಭವ, ತಲೆಸುತ್ತಿನಂತ ಸಮಸ್ಯೆಗಳೂ ಮುಂದೆ ತಲೆದೋರಬಹುದು. ಹಣ್ಣುಗಳು, ಹಂಪಲುಗಳು ಹಾಗೂ ತರಕಾರಿಗಳಲ್ಲಿರುವ ನಾರಿನಂಶ ಸರಿಯಾಗಿ ಹೊಟ್ಟೆ ಸೇರದೆ, ವ್ಯರ್ಥವಾಗಬಹುದು. ಪೋಷಕಾಂಶವೂ ನಷ್ಟವಾಗಬಹುದು. ಇವೆಲ್ಲವನ್ನೂ ಜಗಿದು ತಿನ್ನುವಾಗ ಸಿಗಬಃಉದಾದ ಆರೋಗ್ಯದ ಲಾಭಗಳೆಲ್ಲವೂ ಸ್ಮೂದಿಯ ಮೂಲಕ ಸಿಗದೇ ಹೋಗುವ ಸಾಧ್ಯತೆಗಳೇ ಹೆಚ್ಚು.
  • ಕೆಲವು ಮಂದಿಗೆ ದೇಹದಲ್ಲಿರುವ ಸಕ್ಕರೆಯ ಅಂಶದ ಏರಿಕೆಯಿಂದಾಗಿ ತಕ್ಷಣ ತಲೆಸುತ್ತು, ತಲೆನೋವು ಮತ್ತಿತರ ಸಮಸ್ಯೆಯೂ ಕಾಡಬಹುದು. ಆದರೆ, ಸ್ಮೂದಿಗೆ ಬಳಸಿದ ಹಣ್ಣು ಹಂಪಲು ಅಥವಾ ತರಕಾರಿ, ಒಣ ಹಣ್ಣು ಬೀಜಗಳನ್ನು ಹಾಗೆಯೇ ತಿನ್ನುವುದರಿಂದ ಈ ಪರಿಣಾಮಗಳು ಕಾಣಿಸಿಕೊಳ್ಳಲಾರದು. ಹಾಗಾಗಿ, ಸ್ಮೂದಿಗಿಂತ ಹಾಗೆಯೇ ತಿನ್ನುವುದೇ ಆರೋಗ್ಯಕ್ಕೆ ಹೆಚ್ಚು ಸೂಕ್ತ ಎಂಬುದನ್ನು ನೆನಪಿಡಿ.

ಇದನ್ನೂ ಓದಿ: Nosebleeds In Summer: ಬೇಸಿಗೆಯ ತಾಪಕ್ಕೆ ಮೂಗಿನಲ್ಲಿ ರಕ್ತಸ್ರಾವವೇ? ತಡೆಯಲು ಇಲ್ಲಿವೆ ಸರಳ ಉಪಾಯ

Continue Reading
Advertisement
Actor Dhanush unveils new poster from Ilaiyaraaja biopic
ಕಾಲಿವುಡ್7 mins ago

Actor Dhanush: ಇಳಯರಾಜ ಬಯೋಪಿಕ್‌ ಹೊಸ ಪೋಸ್ಟರ್‌ ಔಟ್‌; ಸಹೋದರರು ಎಂದು ಕಮಲ್‌ ಹಾಸನ್‌ ಹೇಳಿದ್ಯಾರಿಗೆ?

Murder Case
ಚಾಮರಾಜನಗರ8 mins ago

Murder Case : ಚಾಮರಾಜನಗರದಲ್ಲಿ ಅತ್ತಿಗೆ ಮೇಲಿನ ಮೋಹಕ್ಕೆ ಅಣ್ಣನನ್ನೇ ಕೊಂದ ಕಾಮುಕ ತಮ್ಮ

Venkatesh Iyer Marriage
ಕ್ರೀಡೆ21 mins ago

Venkatesh Iyer Marriage: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ವೆಂಕಟೇಶ್​ ಅಯ್ಯರ್​

West Bengal
ದೇಶ22 mins ago

West Bengal: ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ; ಗುಂಡಿಕ್ಕಿ ಕೊಂದು, ರುಂಡ ಕಡಿದು ಒಯ್ದ ದುಷ್ಕರ್ಮಿಗಳು

Electric shock Electronic City
ಬೆಂಗಳೂರು ಗ್ರಾಮಾಂತರ40 mins ago

Electric Shock: ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಪ್ರವಹಿಸಿದ ವಿದ್ಯುತ್‌; ಕ್ಷಣಾರ್ಧದಲ್ಲೇ ಇಬ್ಬರು ಸುಟ್ಟು ಕರಕಲು

Udupi Pocso case
ಪ್ರಮುಖ ಸುದ್ದಿ42 mins ago

Udupi Pocso case: ಉಡುಪಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿಯ ಕೇಸ್‌; 8-9 ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ!

Aaron Jones
ಕ್ರಿಕೆಟ್58 mins ago

Aaron Jones: 17 ವರ್ಷಗಳ ಹಿಂದಿನ ಟಿ20 ವಿಶ್ವಕಪ್​ ದಾಖಲೆ ಸರಿಗಟ್ಟಿದ ಯುಎಸ್​ಎ ಬ್ಯಾಟರ್​ ಆರೋನ್ ಜೋನ್ಸ್

Indian 2 Audio Launch Kamal Haasan Simbu Kajal Aggarwal
ಕಾಲಿವುಡ್1 hour ago

Indian 2 Audio Launch: ಅದ್ಧೂರಿಯಾಗಿ ನೆರವೇರಿತು ʼಇಂಡಿಯನ್‌ 2ʼ ಸಿನಿಮಾದ ಆಡಿಯೊ ಲಾಂಚ್‌!

Traffic Advisory
Lok Sabha Election 20241 hour ago

Traffic Advisory : ಲೋಕಸಭೆ ಎಲೆಕ್ಷನ್‌ ಕೌಂಟಿಂಗ್‌; ಬೆಂಗಳೂರಲ್ಲಿ ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?

education News
ಬೆಂಗಳೂರು1 hour ago

Education News : ನೀಟ್ ಪರೀಕ್ಷೆ ಬಳಿಕ ಎಂಜಿನಿಯರ್ ಸೀಟು ಹಂಚಿಕೆ; 1.24 ಲಕ್ಷ ಸೀಟುಗಳು ಲಭ್ಯ, ಆನ್ ಲೈನ್ ಪ್ರಕ್ರಿಯೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು21 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌