King Charles III and Queen Camilla formally crowned; PM Modi tweets congratulationsKing Charles III: ಬ್ರಿಟನ್‌ನ ಕಿಂಗ್ ಚಾರ್ಲ್ಸ್‌, ಕೆಮಿಲಾ ಪಟ್ಟಾಭಿಷೇಕ; ಮೋದಿ ಅಭಿನಂದನೆ - Vistara News

ದೇಶ

King Charles III: ಬ್ರಿಟನ್‌ನ ಕಿಂಗ್ ಚಾರ್ಲ್ಸ್‌, ಕೆಮಿಲಾ ಪಟ್ಟಾಭಿಷೇಕ; ಮೋದಿ ಅಭಿನಂದನೆ

King Charles III: ಬ್ರಿಟನ್‌ನ ನೂತನ ಅರಸನಾಗಿ ಕಿಂಗ್‌ ಚಾರ್ಲ್ಸ್‌ III ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

VISTARANEWS.COM


on

King Charles III and Queen Camilla formally crowned; PM Modi tweets congratulations
ಕಿಂಗ್‌ ಚಾರ್ಲ್ಸ್‌ III ಹಾಗೂ ಅವರ ಪತ್ನಿ ಕ್ವೀನ್‌ ಕೆಮಿಲಾ.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಬ್ರಿಟನ್‌ ಅರಸನಾಗಿ ಕಿಂಗ್‌ ಚಾರ್ಲ್ಸ್‌ III (King Charles III) ಅವರ ಪಟ್ಟಾಭಿಷೇಕ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಕಿಂಗ್‌ ಚಾರ್ಲ್ಸ್‌ III ಹಾಗೂ ಅವರ ಪತ್ನಿ ಕ್ವೀನ್‌ ಕೆಮಿಲಾ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

“ಪಟ್ಟಾಭಿಷೇಕದ ಹಿನ್ನೆಲೆಯಲ್ಲಿ ಕಿಂಗ್‌ ಚಾರ್ಲ್ಸ್‌ III ಹಾಗೂ ಕ್ವೀನ್‌ ಕೆಮಿಲಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಭಾರತ ಹಾಗೂ ಬ್ರಿಟನ್‌ ಸಂಬಂಧವು ಇನ್ನಷ್ಟು ವೃದ್ಧಿಸಲಿದೆ ಎಂಬ ವಿಶ್ವಾಸ ನಮ್ಮದು” ಎಂದು ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ನರೇಂದ್ರ ಮೋದಿ ಟ್ವೀಟ್‌

ಬ್ರಿಟನ್‌ನ ವೆಸ್ಟ್‌ ಮಿನಿಸ್ಟರ್‌ ಅಬೆಯಲ್ಲಿರುವ ಬಕಿಂಗ್‌ಹ್ಯಾಮ್‌ ಅರಮನೆಯಲ್ಲಿ ಚಾರ್ಲ್ಸ್‌ ಹಾಗೂ ಕೆಮೆಲ್‌ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು. 1952ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ ಅರಸನ ಪಟ್ಟಾಭಿಷೇಕ ನೆರವೇರಿದೆ. 1952ರಲ್ಲಿ ಬ್ರಿಟನ್‌ ರಾಣಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಕ್ವೀನ್‌ ಎಲಿಜಬೆತ್‌ II ಅವರು ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ಹಾಗಾಗಿ, ಚಾರ್ಲ್ಸ್‌ III ಅವರಿಗೆ ಪಟ್ಟಾಭಿಷೇಕ ಮಾಡಲಾಗಿದೆ.

ಪಟ್ಟಾಭಿಷೇಕದ ವಿಡಿಯೊ

ಮೂರನೇ ಸಾಲಿನಲ್ಲಿ ಕುಳಿತ ಹ್ಯಾರಿ

ಚಾರ್ಲ್ಸ್‌ ಅವರ ಕಿರಿಯ ಪುತ್ರ ಪ್ರಿನ್ಸ್‌ ಹ್ಯಾರಿ ಹಾಗೂ ಅವರ ಪತ್ನಿ ಮೇಘನ್‌ ಅವರು ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಆದರೆ, ಅವರನ್ನು ಮೂರನೇ ಸಾಲಿನಲ್ಲಿ ಕೂರಿಸಲಾಗಿತ್ತು. ಇದರಿಂದ, ಬ್ರಿಟನ್‌ ರಾಜಮನೆತನದ ಜತೆಗಿನ ಮುನಿಸು ಹಾಗೆಯೇ ಮುಂದುವರಿದಿದೆ ಎಂಬುದು ಜಗಜ್ಜಾಹೀರಾಗಿದೆ.

ಇದನ್ನೂ ಓದಿ: Modi In Karnataka: ಭಾನುವಾರವೂ ಇರಲಿದೆ ಬೆಂಗಳೂರಲ್ಲಿ ಮೋದಿ ಮೋಡಿ; ರೋಡ್‌ ಶೋ ಎಲ್ಲೆಲ್ಲಿ?

ಭಾರತದ ಉಪ ರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಹಾಗೂ ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರು ಕೂಡ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Lok Sabha Election 2024

Lok Sabha Election: ಫಲೋಡಿ ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಒಕ್ಕೂಟಕ್ಕೆ ಬರುವ ಸೀಟೆಷ್ಟು?

Lok Sabha Election: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಫಲೋಡಿ ಸಟ್ಟಾ ಬಜಾರ್‌ ಮಾರ್ಕೆಟ್‌ ಫಲೋಡಿ ಸಟ್ಟಾ ಬಜಾರ್‌ ಮಾರ್ಕೆಟ್‌ (Phalodi Satta Bazar) ಸಂಸ್ಥೆಯು ಸಮೀಕ್ಷಾ ವರದಿ ಪ್ರಕಟಿಸಿದೆ. ಅದರ ಪ್ರಕಾರ, ಕಾಂಗ್ರೆಸ್‌ 55-65 ಕ್ಷೇತ್ರಗಳಲ್ಲಿ ಜಯಿಸಲಿದೆ. ಬಿಜೆಪಿ 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಚುನಾವಣೆ ಘೋಷಣೆಯಾದ ನಂತರ 8ರಿಂದ 9 ಲಕ್ಷ ಕೋಟಿ ರೂ.ಗಳ ಬೆಟ್ಟಿಂಗ್ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಬಹು ನಿರೀಕ್ಷಿತ ಲೋಕಸಭಾ ಚುನಾವಣೆ (Lok Sabha Election)ಯ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಕೊನೆಯ ಹಂತದ ಮತದಾನ ಜೂನ್‌ 1ರಂದು ನಡೆಯಲಿದ್ದು, ಜೂನ್‌ 4ರಂದು ರಿಸಲ್ಟ್‌ ಹೊರ ಬೀಳಲಿದೆ. ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಬಗ್ಗೆ ಈಗಾಗಲೇ ಚರ್ಚೆ ಆರಂಭವಾಗಿದೆ. ಬೆಟ್ಟಿಂಗ್‌ ಮಾರುಕಟ್ಟೆ ಬಿಜೆಪಿ ಮತ್ತೊಮ್ಮೆ ಸುಲಭವಾಗಿ ಅಧಿಕಾರಕ್ಕೆ ಮರಳಲಿದೆ ಎಂದು ಭವಿಷ್ಯ ನುಡಿದಿದೆ. ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಪಟ್ಟಕ್ಕೇರುತ್ತಾರೆ ಎಂದು ಅಂದಾಜಿಸಿದ್ದರೂ ಬಿಜೆಪಿ ‘400 ಸೀಟು’ ಗಳಿಸಬಹುದು ಎನ್ನುವ ವಿಚಾರದಲ್ಲಿ ಸಂದೇಹ ವ್ಯಕ್ತಪಡಿಸಿದೆ. ಜತೆಗೆ ಫಲೋಡಿ ಸಟ್ಟಾ ಬಜಾರ್‌ ಮಾರ್ಕೆಟ್‌ (Phalodi Satta Bazar) ಸಂಸ್ಥೆಯು ಸಮೀಕ್ಷಾ ವರದಿ ಪ್ರಕಟಿಸಿದ್ದು, ಕಾಂಗ್ರೆಸ್‌ (Congress) ಎಷ್ಟು ಸೀಟು ಗಳಿಸಬಹುದು ಎನ್ನುವುದನ್ನು ಅಂದಾಜಿಸಿದೆ. ಆ ಕುರಿತಾದ ವಿವರ ಇಲ್ಲಿದೆ.

ಬಿಜೆಪಿ 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಎನ್‌ಡಿಎ ಮೈತ್ರಿಕೂಟವು ಸುಲಭವಾಗಿ 325-330 ಕ್ಷೇತ್ರಗಳಲ್ಲಿ ಜಯಿಸಲಿದೆ. ಮತ್ತೊಂದೆಡೆ ಕಾಂಗ್ರೆಸ್‌ 55-65 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಆರಂಭದಲ್ಲಿ ಬಿಜೆಪಿಗೆ 315ರಿಂದ 325 ಸ್ಥಾನಗಳು ಮತ್ತು ಕಾಂಗ್ರೆಸ್‌ಗೆ 45ರಿಂದ 55 ಸ್ಥಾನಗಳು ಸಿಗಲಿವೆ ಎಂದು ಊಹಿಸಲಾಗಿತ್ತು.

ಬದಲಾದ ಚಿತ್ರಣ

ಮೂರು ಹಂತಗಳ ಮತದಾನದ ನಂತರ ಬಿಜೆಪಿಗೆ 270ರಿಂದ 280 ಮತ್ತು ಕಾಂಗ್ರೆಸ್‌ಗೆ 70ರಿಂದ 80 ಸೀಟು ಸಿಗಬಹುದು ಎಂದು ಭವಿಷ್ಯವಾಣಿಯಲ್ಲಿ ಅಂದಾಜಿಸಲಾಗಿತ್ತು. ಆರು ಹಂತಗಳ ಮತದಾನ ಮುಗಿದ ಬಳಿಕ ಚಿತ್ರಣ ಬದಲಾಗಿದ್ದು, ಬಿಜೆಪಿಗೆ 295ರಿಂದ 305 ಮತ್ತು ಕಾಂಗ್ರೆಸ್‌ಗೆ 55ರಿಂದ 65 ಸೀಟು ಲಭಿಸಬಹುದು ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ಬಿಜೆಪಿಗೆ 400 ಸೀಟು ಸಿಗುವ ಸಾಧ್ಯತೆ ಇಲ್ಲ. ಅಲ್ಲದೆ ಬೆಟ್ಟಿಂಗ್ ದರದ ಪ್ರಕಾರ 350 ಸೀಟುಗಳು ಸಹ ಅಸಾಧ್ಯವೆಂದು ಎಂದು ಮೂಲಗಳು ತಿಳಿಸಿವೆ. ಚುನಾವಣೆ ಘೋಷಣೆಯಾದ ನಂತರ 8ರಿಂದ 9 ಲಕ್ಷ ಕೋಟಿ ರೂ.ಗಳ ಬೆಟ್ಟಿಂಗ್ ನಡೆಯುತ್ತಿದೆ ಎಂದು ಅಂದಾಜಿಸಲಾಗಿದೆ.

ಗೆಲುವು ಸಾಧಿಸಬಹುದಾದ ಸಂಭಾವ್ಯ ಅಭ್ಯರ್ಥಿಗಳು

ಕ್ಷೇತ್ರಪಕ್ಷಅಭ್ಯರ್ಥಿ
ಅಮೇಥಿಬಿಜೆಪಿಸ್ಮೃತಿ ಇರಾನಿ
ರಾಯ್‌ಬರೇಲಿಕಾಂಗ್ರೆಸ್ರಾಹುಲ್ ಗಾಂಧಿ
ವಯನಾಡ್ಕಾಂಗ್ರೆಸ್ರಾಹುಲ್ ಗಾಂಧಿ
ನಾಗ್ಪುರಬಿಜೆಪಿನಿತಿನ್ ಗಡ್ಕರಿ
ಚಂದ್ರಾಪುರಕಾಂಗ್ರೆಸ್ಪ್ರತಿಭಾ ಧನೋರ್ಕರ್
ಗಾಂಧಿನಗರಬಿಜೆಪಿಅಮಿತ್ ಶಾ
ಮೈನ್ಪುರಿಎಸ್‌ಪಿಡಿಂಪಲ್ ಯಾದವ್
ಲಕ್ನೋಬಿಜೆಪಿರಾಜನಾಥ್ ಸಿಂಗ್
ಮಥುರಾಬಿಜೆಪಿಹೇಮಾ ಮಾಲಿನಿ
ಯವತ್ಮಾಲ್ಯುಬಿಟಿ ಸೇನಾಸಂಜಯ್ ದೇಶ್ಮುಖ್
ಅಮರಾವತಿಕಾಂಗ್ರೆಸ್‌ಬಲ್ವಂತ್ ವಾಂಖೆಡೆ
ಬಾರಾಮತಿಶರದ್ ಪವಾರ್ ಪಕ್ಷಸುಪ್ರಿಯಾ ಸುಳೆ
ಮುಂಬೈ ಉತ್ತರಬಿಜೆಪಿಪಿಯೂಷ್ ಗೋಯಲ್
ಕೊಲ್ಹಾಪುರಕಾಂಗ್ರೆಸ್‌ಶಾಹು ಛತ್ರಪತಿ ಮಹಾರಾಜ್
ಹೈದರಾಬಾದ್ಎಐಎಂಐಎಂಅಸಾದುದ್ದೀನ್ ಓವೈಸಿ
ಕನೌಜ್ಎಸ್‌ಪಿಅಖಿಲೇಶ್ ಯಾದವ್
ನಾಸಿಕ್ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಹೇಮಂತ್ ಗೋಡ್ಸೆ

ಫಲೋಡಿ ಸಟ್ಟಾ ಮಾರುಕಟ್ಟೆ ಇತಿಹಾಸವೇನು?

ಚುನಾವಣಾ ಫಲಿತಾಂಶದ ಭವಿಷ್ಯವಾಣಿಗಾಗಿ ರಾಜಸ್ಥಾನ ಮೂಲಕ ಫಲೋಡಿ ಸಟ್ಟಾ ಬಜಾರ್‌ನತ್ತ ಎಲ್ಲರೂ ಮುಖಮಾಡಿದ್ದಾರೆ. ಫಲೋಡಿ ಸಟ್ಟಾ ಮಾರುಕಟ್ಟೆಯು ಶತಮಾನಗಳ ಇತಿಹಾಸ ಹೊಂದಿದೆ. 19 ನೇ ಶತಮಾನದ ಅಂತ್ಯದ ವೇಳೆಗೆ ಈ ಮಾರುಕಟ್ಟೆಯ ಭವಿಷ್ಯವಾಣಿ ಮೂಲಕ ದೇಶದ ಗಮನವನ್ನೇ ಸೆಳೆದಿತ್ತು. ಹಿಂದೆ ಮಳೆಯ ಮುನ್ಸೂಚನೆಗಾಗಿ ಈ ಮಾರುಕಟ್ಟೆಯ ಮೇಲೆ ಜನ ಅವಲಂಭಿಸಿದ್ದರು. ಬರು ಬರುತ್ತಾ ಈ ಕಲೆ ದಂಧೆಯಾಗಿ ಮಾರ್ಪಾಡಾಗಿತ್ತು. ಅನಂತರದ ದಿನಗಳಲ್ಲಿ ಚುನಾವಣಾ ಭವಿಷ್ಯವಾಣಿ, ಬೆಟ್ಟಿಂಗ್‌ ದಂಧೆಗಳಿಗೆ ಈ ಮಾರುಕಟ್ಟೆ ಕುಖ್ಯಾತಿ ಪಡೆಯಿತು. ಕಾನೂನೂ ಬಾಹಿರವಾಗಿದ್ದರೂ ಕ್ರಿಕೆಟ್‌, ಐಪಿಎಲ್‌ ಸಂದರ್ಭದಲ್ಲಿ ಇಲ್ಲಿ ಅತಿ ಹೆಚ್ಚಾಗಿ ಬೆಟ್ಟಿಂಗ್‌ ನಡೆಯುತ್ತದೆ ಎಂಬ ಆರೋಪ ಕೇಳಿಬರುತ್ತದೆ.

ಇದನ್ನೂ ಓದಿ: PM Narendra Modi: ಒಡಿಶಾ ಸಿಎಂ ಆರೋಗ್ಯ ಹದಗೆಟ್ಟಿರುವ ಹಿಂದೆ ಇದ್ಯಾ ಭಾರೀ ಸಂಚು? ಏನಂದ್ರು ಪ್ರಧಾನಿ ಮೋದಿ?-ವಿಡಿಯೋ ಇದೆ

Continue Reading

ವೈರಲ್ ನ್ಯೂಸ್

Viral Video: ಮುಂಬೈನ ಚಕಾಚಕ್‌ ʻರಜನೀಕಾಂತ್‌ʼ ಶೈಲಿಯ ದೋಸೆ ಈಗ ವೈರಲ್!‌

ಹಗಲು ರಾತ್ರಿಯೆನ್ನದೆ ಝಗಮಗಿಸುವ ಮುಂಬಯಿ ನಗರಿಯಲ್ಲಿ (Viral Video) ರಸ್ತೆಬದಿಯ ತಿಂಡಿಗಳಿಗೆ ಶ್ರೀಮಂತ ಬಡವರೆನ್ನದೆ ಎಲ್ಲರೂ ಮುಗಿ ಬೀಳುತ್ತಾರೆ. ಬೀದಿ ಬದಿಯ ಥರಹೇವಾರಿ ಚಾಟ್‌ಗಳೂ, ವಡಾಪಾವ್‌ಗಳೂ, ಸಮೋಸಾಗಳೂ, ದೋಸೆ, ಪರಾಠಾಗಳು ಹಲವರ ಹೊಟ್ಟೆಯನ್ನು ನಿತ್ಯವೂ ತುಂಬಿಸುತ್ತವೆ.

VISTARANEWS.COM


on

Viral Video
Koo

ಮುಂಬೈ ಎಂದರೆ ಹಲವು ಅಚ್ಚರಿಗಳ ಮಹಾನಗರಿ. ಇಲ್ಲಿ ಎಲ್ಲವೂ (Viral Video) ಇದೆ. ಇಲ್ಲಿ ಕೋಟ್ಯಾಧಿಪತಿಗಳೂ ಇದ್ದಾರೆ. ಏನೂ ಇಲ್ಲದೆ ದಿನಗೂಲಿಯಿಂದ ದಿನ ತಳ್ಳುವವರೂ ಇದ್ದಾರೆ. ಹಗಲು ರಾತ್ರಿಯೆನ್ನದೆ ಝಗಮಗಿಸುವ ಈ ನಗರಿಯಲ್ಲಿ ರಸ್ತೆಬದಿಯ ತಿಂಡಿಗಳಿಗೆ ಶ್ರೀಮಂತ ಬಡವರೆನ್ನದೆ ಎಲ್ಲರೂ ಮುಗಿ ಬೀಳುತ್ತಾರೆ. ಬೀದಿ ಬದಿಯ ಥರಹೇವಾರಿ ಚಾಟ್‌ಗಳೂ, ವಡಾಪಾವ್‌ಗಳೂ, ಸಮೋಸಾಗಳೂ, ದೋಸೆ, ಪರಾಠಾಗಳು ಹಲವರ ಹೊಟ್ಟೆಯನ್ನು ನಿತ್ಯವೂ ತುಂಬಿಸುತ್ತವೆ.

Viral Video Rajinikanth Style Dosas

ಗಡಿ ದಾಟಿದ ದೋಸೆ

ದೋಸೆ ಎಂಬ ಬೆಳಗಿನ ಉಪಹಾರವೂ ಕೇವಲ ದಕ್ಷಿಣ ಭಾರತೀಯರ ಬೆಳಗಿನ ಉಪಹಾರವಾಗಿ ಉಳಿಯದೆ ದೇಶ ಗಡಿಗಳ ಹಂಗು ತೊರೆದು ಎಲ್ಲರನ್ನೂ ಆಕರ್ಷಿಸುತ್ತಿದೆ. ಸಂಜೆಯ ಹೊತ್ತು ಬೀದಿಬದಿಯಲ್ಲಿ ಜನರನ್ನು ಆಕರ್ಷಿಸುವ ತಿನಿಸುಗಳ ಪೈಕಿ ಇಂದು ದೋಸೆಗೆ ಅಗ್ರಗಣ್ಯ ಸ್ಥಾನವಿದೆ. ಉತ್ತರ ಭಾರತದ ಮಹಾನಗರಿಗಳಲ್ಲೂ ಇದೀಗ ದೋಸೆ ಎಲ್ಲರ ಪ್ರಿಯವಾದ ತಿನಿಸಾಗಿ ಮಾರ್ಪಡುತ್ತಿದೆ. ಇದೀಗ ಮುಂಬೈನ ಬೀದಿಬದಿಯ ದೋಸೆ ಸ್ಟಾಲ್‌ ಒಂದು ಭಾರೀ ಸುದ್ದಿಯನ್ನೇ ಮಾಡುತ್ತಿದೆ. ರಜನೀಕಾಂತ್‌ ಸ್ಟೈಲ್‌ನ ದೋಸೆ ಎಂದೇ ವೈರಲ್‌ ಆಗುತ್ತಿರುವ ಈ ದೋಸೆಯ ವಿಶೇಷತೆ ಏನು ಎಂದು ಅರ್ಥ ಮಾಡಿಕೊಳ್ಳಬೇಕಾದರೆ ನೀವು ಆ ವಿಡಿಯೋವನ್ನು ನೋಡಬೇಕು.

Viral Video Rajinikanth Style Dosas

ದಾದರ್ ನ ಬೀದಿಯಲ್ಲಿ

ಮುಂಬೈನ ದಾದರ್‌ನಲ್ಲಿ ಬೀದಿ ಬದಿಯಲ್ಲಿ ತನ್ನ ದೋಸೆ ಗಾಡಿಯನ್ನಿಟ್ಟುಕೊಂಡು ದೋಸೆ ಮಾರುವ ಈತನ ದೋಸೆ ಮಾಡುವ ಶೈಲಿಯನ್ನೊಮ್ಮೆ ನೋಡಬೇಕು. ಚಕಾಚಕ್‌ ಎಂದು ಪಟಪಟನೆ ದೋಸೆ ಹೊಯ್ಯುವುದೂ ಅಲ್ಲದೆ, ಅದನ್ನು ತೆಗದು ತಟ್ಟೆಗೆ ಹಾಕುವ ಶೈಲಿಯೂ ವಿಶೇಷವಾದದ್ದೇ. ದೂರದಲ್ಲಿ ನಿಂತಿರುವ ದೋಸೆ ಸಪ್ಲೈ ಮಾಡುವಾತನ ತಟ್ಟೆಗಳಿಗೆ ಒಂದೊಂದಾಗಿ ಹಾರಿಕೊಂಡು ಹೋಗುವ ದೋಸೆಗಳನ್ನು ನೋಡುವುದೇ ಒಂದು ಮಜಾ. ದೋಸೆಯನ್ನು ಮಗುಚಿ ಎಸೆದರೆ ದೂರದಲ್ಲಿರುವ ಸಪ್ಲೈಯರ್‌ ಅದನ್ನು ತಟ್ಟೆಯಲ್ಲೇ ಕ್ಯಾಚ್‌ ಹಿಡಿದು ಗ್ರಾಹಕರಿಗೆ ನೀಡುತ್ತಾನೆ. ಈ ಇಬ್ಬರ ಕೌಶಲ್ಯದ ಜಾದೂ ನೋಡುವುದೇ ಅಲ್ಲಿಗೆ ದೋಸೆ ತಿನ್ನಲು ಬಂದವರಿಗೆ ಹಬ್ಬ. ಕಣ್ಣು ಬಾಯಿ ಬಿಟ್ಟುಕೊಂಡು ಕ್ರಿಕೆಟ್‌ ನೋಡುವಂತೆ ಈ ದೋಸೆ ಪ್ರದರ್ಶನವನ್ನು ವೀಕ್ಷಿಸುವ ಜೊತೆಗೆ ತಿಂದು ಹೊಟ್ಟೆ ತುಂಬಿಸಿಕೊಂಡು ಹೋಗುತ್ತಾರೆ.

Viral Video Rajinikanth Style Dosas

ದೋಸಾ ಕಾರ್ನರ್

ಮುತ್ತು ದೋಸಾ ಕಾರ್ನರ್‌ ಎಂಬ ಹೆಸರಿನ ದಾದರ್‌ನಲ್ಲಿರುವ ದೋಸೆ ಗಾಡಿ ರಜನೀಕಾಂತ್‌ ಸ್ಟೈಲ್‌ ದೋಸಾವಾಲಾ ಎಂದೇ ಫೇಮಸ್ಸು. ಈತನ ದೋಸೆ ಎಸೆಯುವ ಸ್ಟೈಲ್‌ ನೋಡಲೆಂದೇ ಈತನ ಸ್ಟಾಲ್‌ ಹುಡುಕಿಕೊಂಡು ಬರುವುದುಂಟು. ಅಷ್ಟು ವೇಗವಾಗಿ ದೋಸೆ ಮಾಡುವುದೂ ಅಲ್ಲದೆ, ಅಷ್ಟೇ ವೇಗವಾಗಿ ತನ್ನದೇ ಆದ ಸ್ಟೈಲ್‌ನೊಂದಿಗೆ ದೋಸೆ ಗಾಳಿಯಲ್ಲಿ ಹಾರಿಸಿ ಅದು ನೇರವಾಗಿ ತಟ್ಟೆಗೆ ಬೀಳಿಸುವ ಕೌಶಲ್ಯ ಮಾತ್ರ ವಿನೂತನವಾದದ್ದು. ಅದಕ್ಕಾಗಿಯೇ ಈತ ರಜನೀಕಾಂತ್‌ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದಾರೆ.

https://www.instagram.com/reel/C7WrLbqSOkS/?igsh=MXNzYnU1ZXRhdGZ1Mw==

ಸಪ್ಲಯರ್ ಕೌಶಲ್ಯ

ಹೀಗೆ ದೋಸೆ ಮಾಡು ಎಸೆಯುವಾಗ ಅದು ತಪ್ಪಿಯೂ ಬೇರೆಲ್ಲಿಯೋ ಹೋಗಿ ಬೀಳದು. ನೇರವಾಗಿ ಅದನ್ನು ತಟ್ಟೆಗೆ ಬೀಳುವಂತೆ ಮಾಡುವ ಸಪ್ಲಯರ್‌ ಕೌಶಲ್ಯವೂ ಇಲ್ಲಿ ಮೆಚ್ಚುವಂಥದ್ದೇ. ಈ ದೋಸೆ ವಿಡಿಯೋ ಇದೀಗ ವೈರಲ್‌ ಆಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಹೆಸರು ಮಾಡಿದ್ದು ನೋಡುಗರೆಲ್ಲರೂ ಈತನ ಕಲೆಗೆ, ಕೌಶಲ್ಯಕ್ಕೆ ತಲೆದೂಗಿದ್ದಾರೆ. ಜನರು ಥರಹೇವಾರಿ ಕಮೆಂಟುಗಳನ್ನೂ ಮಾಡುತ್ತಿದ್ದಾರೆ. ಒಬ್ಬ ನೋಡುಗ, ಹೀಗೆ ದೋಸೆಯನ್ನು ನೇರವಾಗಿ ತಟ್ಟೆಗೆ ಕ್ಯಾಚ್‌ ಮಾಡುವಾತನನ್ನು ಭಾರತೀಯ ಕ್ರಿಕೆಟ್‌ ಟೀಮ್‌ನಲ್ಲಿ ಕ್ಯಾಚ್‌ ಹಿಡಿಯಲು ಕಳುಹಿಸಬಹುದು ಎಂದಿದ್ದಾರೆ!

ಇದನ್ನೂ ಓದಿ: Viral Video: ಇವನೇ ನಿಜವಾದ ಹೀರೋ! ಇವರ ಧೈರ್ಯ, ಶೌರ್ಯಕ್ಕೆ ಸರಿಸಾಟಿಯೇ ಇಲ್ಲ; ವೈರಲಾಯ್ತು ವಿಡಿಯೋ

Continue Reading

ದೇಶ

Gold Smuggling: ಶಶಿ ತರೂರ್‌ ಪಿಎ ಅರೆಸ್ಟ್‌- ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ನಾಯಕನಿಗೆ ತೀವ್ರ ಮುಜುಗರ

Gold Smuggling:ಈ ಕುರಿತು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈನಿಂದ ತಮ್ಮ ಸಹಾಯಕನ ಮೂಲಕ ಅಕ್ರಮವಾಗಿ ಚಿನ್ನವನ್ನು ಶಿವಕುಮಾರ್‌ ತರಿಸಿದ್ದರು. ಇದನ್ನು ಪಡೆಯುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು 30ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

VISTARANEWS.COM


on

Gold Smuggling
Koo

ನವದೆಹಲಿ: ಅಕ್ರಮ ಚಿನ್ನ ಸಾಗಾಟ(Gold Smuggling) ಮಾಡುತ್ತಿದ್ದ ಆರೋಪದ ಮೇಲೆ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌(Shashi Tharoor) ಅವರ ಆಪ್ತ ಸಹಾಯಕನನ್ನು ಅರೆಸ್ಟ್‌ ಮಾಡಲಾಗಿದೆ. ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ(IGI Airport)ದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಶಶಿ ತರೂರ್‌ ಅವರ ಪಿಎ ಶಿವ ಪ್ರಸಾದ್‌ ಅವರನ್ನು ವಶಕ್ಕೆ ಪಡೆಸಿದ್ದಾರೆ. ಶಿವ ಕುಮಾರ್‌ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಕಸ್ಟಮ್ಸ್‌ ಅಧಿಕಾರಿಗಳು ಟರ್ಮಿನಲ್‌ 3ರಲ್ಲಿ ಅವರನ್ನು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದು, ದುಬೈನಿಂದ ತಮ್ಮ ಸಹಾಯಕನ ಮೂಲಕ ಅಕ್ರಮವಾಗಿ ಚಿನ್ನವನ್ನು ಶಿವಕುಮಾರ್‌ ತರಿಸಿದ್ದರು. ಇದನ್ನು ಪಡೆಯುವ ವೇಳೆ ಕಸ್ಟಮ್ಸ್‌ ಅಧಿಕಾರಿಗಳು ಅವರನ್ನು ಅರೆಸ್ಟ್‌ ಮಾಡಿದ್ದಾರೆ. ಇನ್ನು 30ಲಕ್ಷ ರೂ.ಗೂ ಅಧಿಕ ಮೊತ್ತದ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಕುಮಾರ್‌ ದುಬೈನಿಂದ ದೆಹಲಿ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ಕಸ್ಟಮ್ಸ್‌ ಆದಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದು, ಚಿನ್ನ ಎಲ್ಲಿಂದ ಬಂತು ಹೇಗೆ ಬಂದು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕುಮಾರ್‌ ಅಧಿಕಾರಿಗಳ ಪ್ರಶ್ನೆಗೆ ಸಮಾಧಾನಕರ ಉತ್ತರ ನೀಡಿಲ್ಲ. ಹೀಗಾಗಿ ಅವರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇನ್ನು ಕೆಲವು ದಿನಗಳ ಹಿಂದೆ ಭಾರತದಿಂದ ದುಬೈಗೆ ಕೋಟ್ಯಂತರ ರೂ ಮೌಲ್ಯದ ಚಿನ್ನವನ್ನು ಕಳ್ಳ ಸಾಗಾಣೆಮಾಡುತ್ತಿದ್ದ ಅಫ್ಘಾನಿಸ್ತಾನದ ರಾಜತಾಂತ್ರಿಕ(Afghan diplomat) ಅಧಿಕಾರಿಯೊಬ್ಬರು ಮುಂಬೈ ವಿಮಾನ ನಿಲ್ದಾಣದಲ್ಲಿ ಬಲೆಗೆ ಬಿದ್ದಿದ್ದರು. ಅಫ್ಘಾನಿಸ್ತಾನದ(Afghanistan) ಇಸ್ಲಾಮಿಕ್‌ ರಿಪಬ್ಲಿಕ್‌ನ ರಾಜತಾಂತ್ರಿಕ ಅಧಿಕಾರಿ ಜಾಕಿಯಾ ವಾರ್ದಕ್‌ ಅವರು ಬರೋಬ್ಬರಿ 18.6 ಕೋಟಿ ರೂ. ಮೌಲ್ಯದ 25 ಕೆ.ಜಿ. ಚಿನ್ನವನ್ನು ಕಳ್ಳ ಸಾಗಾಟ ಮಾಡುತ್ತಿದ್ದ ವೇಳೆ ಏರ್‌ಪೋರ್ಟ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು.

ಇದನ್ನೂ ಓದಿ:Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

ಇನ್ನು ಚುನಾವಣೆ ಸಂದರ್ಭದಲ್ಲೇ ತಮ್ಮ ಆಪ್ತ ಸಹಾಯಕನ ಬಂಧನ ಆಗಿರುವುದು ಶಶಿ ತರೂರ್‌ ಅವರಿಗೆ ಮುಜುಗರ ತಂದಿದೆ. ಶಶಿ ತರೂರ್‌ ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರದ ಹಾಲಿ ಸಂಸದನಾಗಿದ್ದು, ಈ ಬಾರಿ ಅವರಿಗೆ ಪೈಪೋಟಿ ನೀಡಲು ಬಿಜೆಪಿಯಿಂದ (bjp) ರಾಜೀವ್ ಚಂದ್ರಶೇಖರ್ (Rajeev Chandrasekhar ) ಮತ್ತು ಸಿಪಿಐ (cpi) ನಾಯಕ ಪನ್ನಯನ್ ರವೀಂದ್ರನ್ (Pannyan Raveendran) ಕಣಕ್ಕೆ ಇಳಿದಿದ್ದಾರೆ.
59 ವರ್ಷದ ಚಂದ್ರಶೇಖರ್ ಮತ್ತು 67 ವರ್ಷದ ತರೂರ್ ಇಬ್ಬರೂ ರಾಷ್ಟ್ರ ಮಟ್ಟದ ನಾಯಕರು. ಇವರಿಬ್ಬರೂ ತಮ್ಮದೇ ಆದ ಸಾಧನೆಗಳಿಂದ ಗುರುತಿಸಿಕೊಂಡಿದ್ದಾರೆ. ಇವರಿಗೆ ಪೈಪೋಟಿ ನೀಡಲು 78 ವರ್ಷದ ರವೀಂದ್ರನ್ ಸ್ಪರ್ಧೆಗೆ ಇಳಿದಿದ್ದು, ತಳಮಟ್ಟದ ನಾಯಕ ಎನ್ನುವ ಖ್ಯಾತಿ ಇವರಿಗೆ ಇದೆ.

Continue Reading

ದೇಶ

Firecracker Explosion: ಪುರಿ ಜಗನ್ನಾಥ ದೇಗುಲದಲ್ಲಿ ಅಗ್ನಿ ದುರಂತ; 15 ಮಂದಿಗೆ ಗಾಯ

Firecracker Explosion: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲದಲ್ಲಿ ಬುಧವಾರ ರಾತ್ರಿ ಅಗ್ನಿ ದುರಂತವೊಂದು ಸಂಭವಿಸಿದ್ದು, ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ. ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ರಾಶಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಕ್ತರ ಗುಂಪು ಪಟಾಕಿ ಹಚ್ಚುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಹಾರಿದ ಬೆಂಕಿಯ ಕಿಡಿ ಪಟಾಕಿಗಳ ರಾಶಿಗೆ ಅಪ್ಪಳಿಸಿತು. ಇದು ಸ್ಫೋಟಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

VISTARANEWS.COM


on

Firecracker Explosion
Koo

ಭುವನೇಶ್ವರ: ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ದೇಗುಲ (Puri Jagannath temple)ದಲ್ಲಿ ಬುಧವಾರ ರಾತ್ರಿ ಅಗ್ನಿ ದುರಂತವೊಂದು ಸಂಭವಿಸಿದ್ದು, ಸುಮಾರು 15 ಮಂದಿಗೆ ಸುಟ್ಟ ಗಾಯಗಳಾಗಿವೆ. ಭಗವಾನ್ ಜಗನ್ನಾಥನ ಚಂದನ್ ಜಾತ್ರಾ ಉತ್ಸವದ ಸಂದರ್ಭದಲ್ಲಿ ಪಟಾಕಿಗಳ ರಾಶಿ ಸ್ಫೋಟಗೊಂಡು ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ (Firecracker Explosion).

ಉತ್ಸವ ವೀಕ್ಷಣೆಗಾಗಿ ನೂರಾರು ಮಂದಿ ನರೇಂದ್ರ ಪುಷ್ಕರಿಣಿ ದಂಡೆ ಮೇಲೆ ಜಮಾಯಿಸಿದ್ದ ವೇಳೆ ಪಟಾಕಿ ಸ್ಫೋಟಗೊಂಡಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಕ್ತರ ಗುಂಪು ಪಟಾಕಿ ಹಚ್ಚುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆ ಹಾರಿದ ಬೆಂಕಿಯ ಕಿಡಿ ಪಟಾಕಿಗಳ ರಾಶಿಗೆ ಅಪ್ಪಳಿಸಿತು. ಇದು ಸ್ಫೋಟಕ್ಕೆ ಕಾರಣ ಎಂದು ಅವರು ವಿವರಿಸಿದ್ದಾರೆ.

ಪಟಾಕಿ ಸಿಡಿಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಕೆಲವರು ತಮ್ಮನ್ನು ರಕ್ಷಿಸಿಕೊಳ್ಳಲು ಪುಷ್ಕರಿಣಿಗೆ ಜಿಗಿದಿದ್ದಾರೆ. ಇನ್ನು ಹಲವರು ಕೂಡಲೇ ಸ್ಥಳದಿಂದ ತೆರಳಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ದುಃಖ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಚಿಕಿತ್ಸೆಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ʼʼಪುರಿ ಜಗನ್ನಾಥ ಉತ್ಸವದ ವೇಳೆ ನಡೆದ ಬೆಂಕಿ ದುರಂತದಿಂದ ತೀವ್ರ ದುಃಖವಾಗಿದೆ. ಗಾಯಗೊಂಡವರಿಗೆ ಸರಿಯಾದ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಲು ಮುಖ್ಯ ಆಡಳಿತ ಕಾರ್ಯದರ್ಶಿ ಮತ್ತು ಜಿಲ್ಲಾಡಳಿತಕ್ಕೆ ನಿರ್ದೇಶಿಸಲಾಗಿದೆ. ಗಾಯಾಳುಗಳ ಎಲ್ಲ ವೈದ್ಯಕೀಯ ವೆಚ್ಚವನ್ನು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಭರಿಸಲಾಗುವುದು. ಎಲ್ಲರಿಗೂ ಉತ್ತಮ ಆರೋಗ್ಯವನ್ನು ಹಾರೈಸುತ್ತೇನೆ” ಎಂದು ನವೀನ್ ಪಟ್ನಾಯಕ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. “ಪುರಿ ಚಂದನ ಯಾತ್ರೆಯ ಸಂದರ್ಭದಲ್ಲಿ ನರೇಂದ್ರ ಪುಷ್ಕರಿಣಿ ದೇವಿಘಾಟ್‌ನಲ್ಲಿ ನಡೆದ ಅಪಘಾತದಲ್ಲಿ ಅನೇಕರು ಗಾಯಗೊಂಡಿದ್ದಾರೆ ಎಂಬ ಸುದ್ದಿ ಕೇಳಿ ದುಃಖವಾಗಿದೆ. ಭಗವಂತನ ಆಶೀರ್ವಾದದಿಂದ, ಚಿಕಿತ್ಸೆಯಲ್ಲಿರುವವರು ಶೀಘ್ರದಲ್ಲೇ ಗುಣಮುಖರಾಗಿ ಮನೆಗೆ ಮರಳಲಿ” ಎಂದು ಅವರು ಹಾರೈಸಿದ್ದಾರೆ.

ಇದನ್ನೂ ಓದಿ: Fire Accident: ದೇಗುಲದಲ್ಲಿ ಅಗ್ನಿ ದುರಂತ; 13 ಜನಕ್ಕೆ ಗಾಯ, ಸಿಎಂ ಸ್ವಲ್ಪದರಲ್ಲೇ ಪಾರು!

Continue Reading
Advertisement
All We Imagine As Light actor rejected audition call by The Kerala Story
ಮಾಲಿವುಡ್5 mins ago

All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

IND vs PAK
ಕ್ರೀಡೆ6 mins ago

IND vs PAK: ಉಗ್ರರಿಂದ ‘ಒಂಟಿ ತೋಳ’ ದಾಳಿ ಬೆದರಿಕೆ; ಭಾರತ-ಪಾಕ್​ ಪಂದ್ಯಕ್ಕೆ ಭಾರೀ ಭದ್ರತಾ ವ್ಯವಸ್ಥೆ

Prajwal Revanna Case
ಪ್ರಮುಖ ಸುದ್ದಿ28 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಆಗಮನಕ್ಕೆ ಕೌಂಟ್‌ಡೌನ್‌, ವಿಮಾನ ಏರ್ತಾರಾ ಇಲ್ವಾ?

Viral Video
ಕ್ರೀಡೆ39 mins ago

Viral Video: ಜಡಿ ಮಳೆಗೆ ಒದ್ದೆಯಾಗುತ್ತಲೇ ಓಡೋಡಿ ಬಂದು ಕಾರು ಹತ್ತಿದ ರೋಹಿತ್​, ದ್ರಾವಿಡ್​

Lok Sabha Election
Lok Sabha Election 20241 hour ago

Lok Sabha Election: ಫಲೋಡಿ ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಒಕ್ಕೂಟಕ್ಕೆ ಬರುವ ಸೀಟೆಷ್ಟು?

Ravichandran Birthday will give surprise To Fans
ಸ್ಯಾಂಡಲ್ ವುಡ್1 hour ago

Ravichandran Birthday: ಇಂದು ಕನಸುಗಾರನ ಜನುಮದಿನ: ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡ್ತಾರಾ ‘ಕ್ರೇಜಿ ಸ್ಟಾರ್’?

Norway Chess
ಕ್ರೀಡೆ1 hour ago

Norway Chess: ವಿಶ್ವ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್​ಗೆ ಸೋಲುಣಿಸಿದ ಪ್ರಜ್ಞಾನಂದ

Viral Video
ವೈರಲ್ ನ್ಯೂಸ್1 hour ago

Viral Video: ಬಾಯ್‌ಫ್ರೆಂಡನ್ನು ಹೆದರಿಸಲು ರೈಲ್ವೇ ಟ್ರ್ಯಾಕ್‌ಗೆ ಇಳಿದಳು.. ಆಮೇಲೆ ಆಗಿದ್ದೇ ಬೇರೆ! ಶಾಕಿಂಗ್‌ ವಿಡಿಯೋ ನೋಡಿ

Viral Video
ವೈರಲ್ ನ್ಯೂಸ್2 hours ago

Viral Video: ಮುಂಬೈನ ಚಕಾಚಕ್‌ ʻರಜನೀಕಾಂತ್‌ʼ ಶೈಲಿಯ ದೋಸೆ ಈಗ ವೈರಲ್!‌

Actor Rajinikanth response to political questions is unmissable
ಕಾಲಿವುಡ್2 hours ago

Actor Rajinikanth: ಈ ಬಾರಿಯೂ ಮೋದಿ ಗೆಲ್ಲಬಹುದಾ ಎಂಬ ಪ್ರಶ್ನೆಗೆ ರಜನಿಕಾಂತ್ ಕೊಟ್ಟ ಉತ್ತರ ಏನು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌