Two brothers who had gone for a swim in tungabhadra river waterRaichur News: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ನೀರು ಪಾಲು - Vistara News

ಕರ್ನಾಟಕ

Raichur News: ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ನೀರು ಪಾಲು

Raichur News: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಡೆಸುಗೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಇಬ್ಬರು ಸಹೋದರರು ಈಜುವಾಗ ತುಂಗಭದ್ರಾ ನದಿಯಲ್ಲಿ ಮುಳುಗಿದ್ದಾರೆ.

VISTARANEWS.COM


on

two brothers drowned in tungabhadra river
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ (Raichur News) ದಡೆಸುಗೂರಿನ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದಾಗ ಸಹೋದರರಿಬ್ಬರು ಮುಳುಗಿ ಮೃತಪಟ್ಟಿದ್ದಾರೆ.

ದಡೆಸುಗೂರು ಗ್ರಾಮದ ಮುದಿಯಪ್ಪ ಎಂಬುವವರ ಪುತ್ರರಾದ ಅಮರ್ (18), ಮಲ್ಲಿಕಾರ್ಜುನ (16) ಮೃತರು. ಸೋಮವಾರ ಮಧ್ಯಾಹ್ನ ಬಿಸಿಲು ಹೆಚ್ಚಾಗಿದ್ದರಿಂದ ತುಂಗಭದ್ರಾ ನದಿಯಲ್ಲಿ ಈಜಲು ಅಣ್ಣ, ತಮ್ಮ ತೆರಳಿದ್ದರು. ನದಿಯಲ್ಲಿ ಈಜುತ್ತಿದ್ದಾಗ ಕೆಸರಿನಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಂಗಭದ್ರಾ ನದಿ ದಂಡೆಯಲ್ಲಿ ಮೃತರ ಪೋಷಕರು ಭತ್ತದ ರಾಶಿ ಹಾಕಿದ್ದರು. ಹೀಗಾಗಿ ಅಲ್ಲಿಗೆ ಆಗಮಿಸಿದ್ದ ಸಹೋದರರು ಸೇರಿ ಮೂವರು ನದಿಗೆ ಈಜಲು ಹೋಗಿದ್ದರು. ಮೊದಲಿಗೆ ಮಲ್ಲಿಕಾರ್ಜುನ ನದಿಯಲ್ಲಿ ಮುಳುಗಿದ್ದಾನೆ. ಆತನನ್ನು ರಕ್ಷಿಸಲು ಹೋಗಿ ಅಮರ್ ಕೂಡ ನೀರು ಪಾಲಾಗಿದ್ದಾನೆ. ಈ ವೇಳೆ ಮತ್ತೊಬ್ಬ ಬಾಲಕ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ನಂತರ ಮೀನುಗಾರರು ಹಾಗೂ ಸ್ಥಳೀಯರು ಆಗಮಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ | Karnataka Election: ವಿವಿಧೆಡೆ ಪಕ್ಷಗಳ ಕಾರ್ಯಕರ್ತರ ಚಕಮಕಿ; ಬಿಜೆಪಿ- ಕಾಂಗ್ರೆಸ್‌ ಬೆಂಬಲಿಗರಿಗೆ ಹಲ್ಲೆ, ಗಾಯ

ಬೈಕ್‌ ಅಪಘಾತದಲ್ಲಿ ಸವಾರ ಸಾವು

ವಿಜಯಪುರ: ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ತಡೆಗೋಡೆಗೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವುದು ಜಿಲ್ಲೆಯ ಬಸವನಬಾಗೇಬಾಡಿ ಪಟ್ಟಣದ ತಾಳಿಕೋಟೆ ರಸ್ತೆಯಲ್ಲಿ ನಡೆದಿದೆ. ಮೃತರ ಹೆಸರು ಹಾಗೂ ವಿಳಾಸ ಲಭ್ಯವಾಗಿಲ್ಲ. ಅಪಘಾತಕ್ಕೆ ಅತೀ ವೇಗವೇ ಕಾರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಸ್ತಿ ವಿಚಾರಕ್ಕೆ ಅಣ್ಣನಿಗೆ ಚಾಕು ಇರಿದು ಕೊಲೆಗೈದ ತಮ್ಮ

ದಾವಣಗೆರೆ: ಮನೆ ಹಾಗೂ ಆಸ್ತಿ‌ ವಿಚಾರಕ್ಕೆ ಅಣ್ಣನಿಗೇ ಚಾಕುವಿನಿಂದ ಇರಿದು ತಮ್ಮ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಪ್ರಶಾಂತ್ ನಗರ ನಿವಾಸಿ ಗುಂಡಪ್ಪ ಎಂಬುವವರ ಪುತ್ರ ಕೆ.ಜಿ.ಕುಮಾರ್ ಕೊಲೆಯಾದ ವ್ಯಕ್ತಿ, ರಾಜು ಕೊಲೆ ಅರೋಪಿ.

ಗುಂಡಪ್ಪನಿಗೆ ಇಬ್ಬರು ಹೆಂಡತಿಯರಿದ್ದು ಮೊದಲ ಹೆಂಡತಿ ಮಗ ಕೊಲೆಯಾಗಿದ್ದಾನೆ. ಮೊದಲ ಪತ್ನಿ ಪುತ್ರ ಕುಮಾರ್ ಹಾಗೂ 2ನೇ ಹೆಂಡ್ತಿ ಪುತ್ರ ರಾಜು ನಡುವೆ ಆಸ್ತಿ ಕಲಹ ನಡೆದಿದ್ದು, ಇಬ್ಬರ ಆಸ್ತಿ ವ್ಯಾಜ್ಯ ನ್ಯಾಯಾಲಯದಲ್ಲಿತ್ತು

ಇದನ್ನೂ ಓದಿ | Road Accident : ಕಾರು- ಬೈಕ್‌ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ

ಭಾನುವಾರ ರಾತ್ರಿ ಕುಮಾರ್ ಮೇಲೆ ತಮ್ಮ ರಾಜು ಮತ್ತು ಮಾರುತಿ ಎಂಬುವರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಕುಮಾರ್‌ನನ್ನು ಸ್ಥಳೀಯರು ಹರಿಹರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೂ ಮತ್ತೆ ಆಸ್ಪತ್ರೆಗೆ ಸಹೋದರ ರಾಜು ನುಗ್ಗಿ ಅಣ್ಣನ ಮೇಲೆ ಹಲ್ಲೆ ಮಾಡಿ, ಚಾಕು ಇರಿದು ಕೊಲೆ ಮಾಡಿದ್ದಾನೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಲಬುರಗಿ

Kalaburagi murder : ಚಾಕುವಿನಿಂದ ಇರಿದು ಕೊಂದು ಆಟೋ ಚಾಲಕನನ್ನು ಮರಕ್ಕೆ ನೇತು ಹಾಕಿದ ಹಂತಕರು

Kalaburagi murder : ಆಟೋ ಚಾಲಕನನ್ನು ಚಾಕುವಿನಿಂದ ಕೊಂದಿರುವ ಹಂತಕರು ಬಳಿಕ ಮರಕ್ಕೆ ನೇಣು ಹಾಕಿ ಪರಾರಿ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಕೊಲೆಗಾರರ ಹುಡುಕಾಟ ನಡೆಸಿದ್ದಾರೆ.

VISTARANEWS.COM


on

By

kalaburagi Murder Case
Koo

ಕಲಬುರಗಿ: ಕಲಬುರಗಿಯಲ್ಲಿ (Kalaburagi murder) ಚಾಕುವಿನಿಂದ ಇರಿದು ಆಟೋ ಚಾಲಕನ (Auto Driver) ಬರ್ಬರ ಹತ್ಯೆ ನಡೆಸಲಾಗಿದೆ. ಗೋಪಾಲ್ ಜಾಧವ್ (48) ಮೃತಪಟ್ಟವನು. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.

ನಿನ್ನೆ ಶುಕ್ರವಾರ ಸಂಜೆ ಜಮೀನಿಗೆ ತೆರಳಿದ್ದ ಗೋಪಾಲ್‌ ಮೇಲೆ ಎರಗಿದ ದುಷ್ಕರ್ಮಿಗಳು ಏಕಾಏಕಿ ಚಾಕುವಿನಿಂದ ಇರಿದಿದ್ದಾರೆ. ಚಾಕುವಿನಿಂದ ಇರಿದು ಕೊಂದ ಬಳಿಕ ಜಮೀನಿನಲ್ಲಿರುವ ಮರಕ್ಕೆ ನೇಣು ಹಾಕಿ ಪರಾರಿ ಆಗಿದ್ದಾರೆ. ಈ ವೇಳೆ ಮರಕ್ಕೆ ಮೃತದೇಹವನ್ನು ಕಟ್ಟಿದ್ದ ಹಗ್ಗ ಕಟ್‌ ಆಗಿ ಬಿದ್ದಿದೆ.

ಜಮೀನಿನಲ್ಲಿ ಶವ ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕುಂಚಾವರಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಹಂತಕರಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Road Accident: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ನವ ವಿವಾಹಿತೆ ಸಾವು

ಕುಡಿದ ಅಮಲಿನಲ್ಲಿ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಕೊಂದ ಯುವಕ

ಬೆಂಗಳೂರು: ಕುಡಿದ ಅಮಲಿನಲ್ಲಿ ಯುವಕನೊಬ್ಬ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಕೊಲೆ‌ ಮಾಡಿರುವ ಘಟನೆ (Murder Case) ಬೆಂಗಳೂರಿನ ತಲಘಟ್ಟಪುರದ ಅಂಜನಾಪುರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ವಿಶಾಲ್ ಯಾದವ್ ಕೊಲೆಯಾದವನು. ಅಭಿಷೇಕ್ ಎಂಬಾತ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಇಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ದಿನಗೂಲಿ ನೌಕರನಾಗಿದ್ದರು. ನಿನ್ನೆ ಕಟ್ಟಡದಲ್ಲಿ ಇವರಿಬ್ಬರು ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದಿದೆ. ಕಟ್ಟಡದ ಮೇಲಿಂದ ವಿಶಾಲ್ ಯಾದವ್‌ನನ್ನು ಅಭಿಷೇಕ್‌ ನೂಕಿದ್ದಾನೆ. ಇದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ವಿಶಾಲ್ ಯಾದವ್‌ ಮೃತಪಟ್ಟಿದ್ದಾನೆ. ಘಟನೆ ಬಳಿಕ ಅಭಿಷೇಕ್ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Battlegrounds Mobile India : ಬಿಜಿಎಮ್​ಐ ಜತೆ ಹೊಸ ಪಾಲುದಾರಿಕೆ ಮಾಡಿಕೊಂಡ ಕೆಎಫ್​​ಸಿ

Battlegrounds Mobile India: ಇದು ಸೀಮಿತ ಅವಧಿಯ ಸಹಯೋಗವಾಗಿದ್ದು. ಕೆಎಫ್‌ಸಿ ಮತ್ತು ಬಿಜಿಎಂಐ ಚಿಕನ್ ಮತ್ತು ಗೇಮಿಂಗ್ ಪ್ರಿಯರಿಗೆ ಒಂದೊಳ್ಳೆ ಕೊಡುಗೆಯಾಗಿದೆ. ಅಭಿಮಾನಿಗಳು ಕೆಎಫ್‌ಸಿ ಜಿಂಜರ್ ಬಾಕ್ಸ್ ಅನ್ನು ಖರೀದಿಸುವ ಮೂಲಕ ಅತ್ಯಾಕರ್ಷಕ ಇನ್ ಗೇಮ್ ಬಿಜಿಎಂಐ ಬಹುಮಾನಗಳನ್ನು ಪಡೆಯಲು ಸಾಧ್ಯವಿದೆ.

VISTARANEWS.COM


on

Battlegrounds Mobile India
Koo

ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ಡಿಜಿಟಲ್ ಗೇಮ್​ ಬ್ಯಾಟಲ್ ರಾಯಲ್ ಗೇಮ್‌ನ ತಯಾರಕರಾದ ಕ್ರಾಫ್ಟನ್ ಇಂಡಿಯಾ ಜೊತೆ ಕೆಎಫ್‌ಸಿ ಇಂಡಿಯಾ ಹೊಸ ಪಾಲುದಾರಿಕೆ ಮಾಡಿಕೊಂಡಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ (Battlegrounds Mobile India) ಆಟವಾಡುವವರಿಗಾಗಿ ಈ ಸಹಭಾಗಿತ್ವ ಪಡೆದುಕೊಂಡಿದ್ದು, ‘ವಿನ್ನರ್ ವಿನ್ನರ್ ಚಿಕನ್ ಲಂಚ್’ ಅನ್ನು ಬಿಡುಗಡೆ ಮಾಡಿದೆ.

ಇದು ಸೀಮಿತ ಅವಧಿಯ ಸಹಯೋಗವಾಗಿದ್ದು. ಕೆಎಫ್‌ಸಿ ಮತ್ತು ಬಿಜಿಎಂಐ ಚಿಕನ್ ಮತ್ತು ಗೇಮಿಂಗ್ ಪ್ರಿಯರಿಗೆ ಒಂದೊಳ್ಳೆ ಕೊಡುಗೆಯಾಗಿದೆ. ಅಭಿಮಾನಿಗಳು ಕೆಎಫ್‌ಸಿ ಜಿಂಜರ್ ಬಾಕ್ಸ್ ಅನ್ನು ಖರೀದಿಸುವ ಮೂಲಕ ಅತ್ಯಾಕರ್ಷಕ ಇನ್ ಗೇಮ್ ಬಿಜಿಎಂಐ ಬಹುಮಾನಗಳನ್ನು ಪಡೆಯಲು ಸಾಧ್ಯವಿದೆ. ಜೆನರೇಷನ್​​ ಝೀಯ (ಆಧುನಿಕ ಪೀಳಿಗೆಯ ಜನರು) ಪ್ರೀತಿಯ ವಿಷಯಗಳಾದ ಆಹಾರ ಮತ್ತು ಗೇಮಿಂಗ್ ಅನ್ನು ಒಂದುಗೂಡಿಸುವ ಉದ್ದೇಶದಿಂದ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಯುವ ಭಾರತೀಯರಲ್ಲಿ ಈಗ ಗೇಮಿಂಗ್ ಬಹಳ ಜನಪ್ರಿಯವಾಗಿದ್ದು, 2025ರಲ್ಲಿ ಒಟ್ಟು ಗೇಮರ್ ಗಳ ಸಂಖ್ಯೆ 750 ಮಿಲಿಯನ್ ಗೆ ಹೋಗಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: Deepika Padukone: ‘ಕಲ್ಕಿ 2898 ಎಡಿ’ ಚಿತ್ರದ ದೀಪಿಕಾ ಪಡುಕೋಣೆ ನಗ್ನ ಚಿತ್ರ ಸೋರಿಕೆ; ನೆಟ್ಟಿಗರು ಹೇಳಿದ್ದೇನು?

ಕೆಎಫ್‌ಸಿ ಜಿಂಜರ್ ಬಾಕ್ಸ್ ಮೂಲಕ ಗ್ರಾಹಕರು ಕ್ರಿಸ್ಪಿ ಚಿಕನ್ ಮತ್ತು ವಿಶೇಷವಾದ ಇನ್-ಗೇಮ್ ಬಹುಮಾನಗಳನ್ನು ಪಡೆಯಬಹುದಾಗಿದೆ. ಈ ಪ್ಯಾಕ್​ ಬೆಲೆ ರೂ.299. (ಡೈನ್ ಇನ್ ಅಥವಾ ಟೇಕ್‌ಅವೇ ಲಭ್ಯವಿರುತ್ತಎ) ಈ ಬಾಕ್ಸ್ ನಲ್ಲಿ ಕೆಎಫ್‌ಸಿಯ ಕ್ಲಾಸಿಕ್ ಜಿಂಜರ್ ಬರ್ಗರ್, 2-ಪೀಸ್ ಹಾಟ್ ವಿಂಗ್ಸ್, ಫ್ರೈಸ್ ಮತ್ತು ತಂಪು ಪಾನೀಯ ಕೂಡ ಸೇರಿದಎ.

ಕೆಎಫ್‌ಸಿ ಜಿಂಜರ್ ಬಾಕ್ಸ್ ನಲ್ಲಿ ಒಂದು ಯುನಿಕ್ ಕೋಡ್ ದೊರೆಯುತ್ತದೆ. ಅದನ್ನು ಬಿಜಿಎಂಐ ವೆಬ್ ಸೈಟ್ ನಲ್ಲಿ ಅನ್ ಲಾಕ್ ಮಾಡಬೇಕು. ಅದೃಷ್ಯಶಾಲಿ ಅಭಿಮಾನಿಗಳಿಗೆ ದೊರೆಯುವ ವಿಶೇಷ ಕೋಡ್ ಗಳಿಂದ ಪ್ಯಾರಾಚೂಟ್ ಗಳು, ಬ್ಯಾಗ್ ಗಳು, ಹ್ಯಾಟ್ ಗಳು ಮತ್ತು ಇತ್ಯಾದಿ ವಸ್ತುಗಳನ್ನು ಉಚಿತವಾಗಿ ಪಡೆಯಬಹುದು.

ಸಹಯೋಗದ ಕುರಿತು ಮಾತನಾಡಿದ ಕೆಎಫ್‌ಸಿ ಇಂಡಿಯಾದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಅಪರ್ಣಾ ಭವಾಲ್, “ನಾವು ಇತ್ತೀಚೆಗೆ ಕೆಎಫ್‌ಸಿಯ ಲಂಚ್ ಸ್ಪೆಷಲ್ ಗಳನ್ನು ಬಿಡುಗಡೆ ಮಾಡಿದಾಗ ಬಿಜಿಎಂಐ ಜೊತೆಗಿನ ಸಹಯೋಗದ ಕಲ್ಪನೆ ಹುಟ್ಟಿಕೊಂಡಿತು. ಗೇಮರ್​ಗಳು ಸಾಮಾನ್ಯವಾಗಿ ‘ವಿನ್ನರ್, ವಿನ್ನರ್ ಚಿಕನ್ ಡಿನ್ನರ್’ ಜೊತೆಗೆ ಗೆಲುವು ಆಚರಿಸಿಕೊಳ್ಳಲಿದ್ದಾರೆ. ಆದ್ದರಿಂದ ಅದಕ್ಕೆ ಕೆಎಫ್‌ಸಿ ಟ್ವಿಸ್ಟ್ ನೀಡಿ ಜೆನ್ ಝೀ ಗ್ರಾಹಕರ ಮನ ಸೆಳೆಯುವ ಪ್ರಯತ್ನ ಮಾಡಿದ್ದೇವೆ” ಎಂದು ಹೇಳಿದರು.

ಕ್ರಾಫ್ಟನ್ ಇಂಡಿಯಾದ ಬಿಸಿನೆಸ್ ಡೆವಲಪ್ಮೆಂಟ್ ಹೆಡ್ ಸಿದ್ದಾರ್ಥ ಮಲ್ಹೋತ್ರಾ ಈ ಸಹಯೋಗದ ಕುರಿತು ಸಂತಸ ವ್ಯಕ್ತಪಡಿಸಿದರು. ಗ್ರಾಹಕರು ಇನ್-ಗೇಮ್ ಕೆಎಫ್‌ಸಿ ಬಹುಮಾನಗಳನ್ನು ಪಡೆಯಲು ಕೆಎಫ್‌ಸಿ ಜಿಂಜರ್ ಬಾಕ್ಸ್ ನಲ್ಲಿ ಬರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು ಅಥವಾ www.battlegroundsmobileindia.com/redeemಗೆ ಭೇಟಿ ನೀಡಬಹುದು.

ಬಿಜಿಎಂಐ ಬಹುಮಾನಗಳು ದೊರೆಯುವ ಕೆಎಫ್‌ಸಿ ಜಿಂಜರ್ ಬಾಕ್ಸ್ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಮುಂಬೈ, ನವದೆಹಲಿ ಮತ್ತು ಪುಣೆಗಳಾದ್ಯಂತ ಇರುವ ಕೆಎಫ್‌ಸಿ ರೆಸ್ಟೋರೆಂಟ್‌ಗಳಲ್ಲಿ 30 ಆಗಸ್ಟ್ 2024 ರವರೆಗೆ ಮಾತ್ರ ಲಭ್ಯವಿರುತ್ತದೆ.

Continue Reading

ಬೆಂಗಳೂರು

Murder Case: ಕುಡಿದ ಅಮಲಿನಲ್ಲಿ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಕೊಂದ ಯುವಕ!

Murder Case: ಬೆಂಗಳೂರಿನ ತಲಘಟ್ಟಪುರದ ಅಂಜನಾಪುರದಲ್ಲಿ ಶನಿವಾರ ಬೆಳಗ್ಗೆ ಪ್ರಕರಣ ನಡೆದಿದೆ. ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆಯಾದಾಗ, ಸ್ನೇಹಿತನನ್ನು ಯುವಕ ಕಟ್ಟಡದಿಂದ ತಳ್ಳಿ ಕೊಂದಿದ್ದಾನೆ.

VISTARANEWS.COM


on

Murder Case
Koo

ಬೆಂಗಳೂರು: ಕುಡಿದ ಅಮಲಿನಲ್ಲಿ ಯುವಕನೊಬ್ಬ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಕೊಲೆ‌ ಮಾಡಿರುವ ಘಟನೆ (Murder Case) ತಲಘಟ್ಟಪುರದ ಅಂಜನಾಪುರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ವಿಶಾಲ್ ಯಾದವ್ ಕೊಲೆಯಾದ ಯುವಕ. ಅಭಿಷೇಕ್ ಎಂಬಾತ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ.

ಇಬ್ಬರೂ ಉತ್ತರ ಪ್ರದೇಶ ಮೂಲದವರಾಗಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ದಿನಗೂಲಿ ನೌಕರನಾಗಿದ್ದರು. ನೆನ್ನೆ ಕಟ್ಟಡದಲ್ಲಿ ಸ್ನೇಹಿತರು ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಅಮಲಿನಲ್ಲಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದಿದ್ದರಿಂದ ಕಟ್ಟಡದ ಮೇಲಿಂದ ವಿಶಾಲ್ ಯಾದವ್‌ನನ್ನು ಅಭಿಷೇಕ್‌ ನೂಕಿದ್ದಾನೆ. ಇದರಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ವಿಶಾಲ್ ಯಾದವ್‌ ಮೃತಪಟ್ಟಿದ್ದು, ಘಟನೆ ಬಳಿಕ ಆರೋಪಿ ಸ್ನೇಹಿತ ಅಭಿಷೇಕ್ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ | Attica Babu: ಕಳ್ಳರಿಂದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಬಂಧನ

ಅತ್ತಿಗೆ ತಂಗಿಯ ಪ್ರೀತಿ ಸಿಗದ್ದಕ್ಕೆ ಫ್ಯಾನಿಗೆ ನೇಣು ಬಿಗಿದುಕೊಂಡ ಹುಚ್ಚು ಪ್ರೇಮಿ

Love Failure

ರಾಯಚೂರು: ರಾಯಚೂರಲ್ಲಿ ಪ್ರೇಮ ವೈಫಲ್ಯಕ್ಕೆ (Love Failure) ಯುವಕನೊರ್ವ ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಮುದ್ಗಲ್ ಪಟ್ಟಣ ಸಮೀಪದ ಕನಸಾವಿ ಗ್ರಾಮದಲ್ಲಿ ಘಟನೆ ನಡೆದಿದೆ. ಸಂತೋಷ್ (22) ಮೃತ ದುರ್ದೈವಿ.

ಮನೆಯಲ್ಲಿರುವ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೂ ಮುನ್ನ ತನ್ನ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್‌ನಲ್ಲಿ ʻನಾನು ಸತ್ತರು ಪ್ರೀತಿಗೋಸ್ಕರ ಸೋಲ್ತಿನಿ ಯಾಕೆಂದರೆ ನಾನು ಒಬ್ಬ ಹುಚ್ಚು ಪ್ರೇಮಿʼ ಎಂದು ಫೋಟೊ ಜತೆಗೆ ಬರಹವೊಂದನ್ನು ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ | Road Accident: ಭೀಕರ ರಸ್ತೆ ಅಪಘಾತ; 2 ಕಾರು ಮುಖಾಮುಖಿ ಡಿಕ್ಕಿಯಾಗಿ 6 ಮಂದಿ ಸಾವು

ಸಂತೋಷ್‌ ತನ್ನ ಅಣ್ಣನ ಹೆಂಡತಿ ತಂಗಿಯನ್ನೇ ಪ್ರೀತಿ ಮಾಡುತ್ತಿದ್ದ. ಆದರೆ ಮದುವೆಗೆ ಒಪ್ಪದಿದ್ದಾಗ ಮನನೊಂದು ಆತ್ಮಹತ್ಯೆ ಶರಣಾಗಿದ್ದಾನೆ. ಮುದ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೈಕ್-ಟ್ರ್ಯಾಕ್ಟರ್ ಡಿಕ್ಕಿಯಾಗಿ ಆಹಾರ ಇಲಾಖೆ ನಿರೀಕ್ಷಕ ಸಾವು

ಚಾಮರಾಜನಗರ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿಯಾಗಿ ಆಹಾರ ಇಲಾಖೆ ನಿರೀಕ್ಷಕ ಮೃತಪಟ್ಟು, ಶಿರಸ್ತೇದಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಸಪುರ ಗ್ರಾಮದ ಬಳಿ ನಡೆದಿದೆ.

ಆಹಾರ ಇಲಾಖೆ ನಿರೀಕ್ಷಕ ನಾಗೇಂದ್ರ (46) ಮೃತರು. ಆಹಾರ‌ ಇಲಾಖೆ ಶಿರಸ್ತೇದಾರ ರಮೇಶ್‌ಗೆ ಗಂಭೀರ ಗಾಯಗಳಾಗಿವೆ. ಗುಂಡ್ಲುಪೇಟೆ ಆರೋಗ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳು, ಇಂದು ಹಂಗಲ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಮುಗಿಸಿ ಬರುವ ವೇಳೆ ಅವಘಡ ನಡೆದಿದೆ. ಅಪಘಾತದಲ್ಲಿ
ಸ್ಥಳದಲ್ಲೇ ಆಹಾರ ಇಲಾಖೆ ನಿರೀಕ್ಷಕ ನಾಗೇಂದ್ರ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದು, ಗಾಯಾಳು ರಮೇಶ್‌ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕರ್ನಾಟಕ

Gruha Lakshmi: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ

Gruha Lakshmi: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀಯ ಹಣ ಯಜಮಾನಿಯ ಖಾತೆಗೆ ಇಂದು ಅಥವಾ ನಾಳೆ ಕ್ರೆಡಿಟ್‌ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ ನೀಡಿದ್ದಾರೆ. ಜತೆಗೆ ಗೃಹ ಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎನ್ನುವ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

VISTARANEWS.COM


on

Gruha Lakshmi
Koo

ಬೆಳಗಾವಿ: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ (Gruha Lakshmi)ಯ ಹಣ ಯಜಮಾನಿಯ ಖಾತೆಗೆ ಇಂದು ಅಥವಾ ನಾಳೆ ಕ್ರೆಡಿಟ್‌ ಆಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಭರವಸೆ ನೀಡಿದ್ದಾರೆ.

ಎರಡು ತಿಂಗಳಿನಿಂದ ಗೃಹಲಕ್ಷ್ಮೀ ಹಣ ಬಾರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ʼʼಮೇ, ಜೂನ್‌ ತಿಂಗಳ ಹಣ ಹಾಕಿದ್ದೇವೆ. ಇಂದು ಅಥವಾ ನಾಳೆ ಜಮೆ ಆಗಲಿದೆʼʼ ಎಂದು ವಿವರಿಸಿದ್ದಾರೆ.

ಯೋಜನೆಯನ್ನು ನಿಲ್ಲಿಸುವುದಿಲ್ಲ

ಗೃಹ ಲಕ್ಷ್ಮೀ ಸೇರಿದಂತೆ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುತ್ತವೆ ಎನ್ನುವ ವದಂತಿಯನ್ನು ಸ್ಪಷ್ಟವಾಗಿ ನಿರಾಕರಿಸಿದ ಅವರು, ʼʼರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಗೃಹಲಕ್ಷ್ಮೀ ಯೋಜನೆ ನಿಲ್ಲುವುದಿಲ್ಲ. ಐದು ವರ್ಷಗಳವರೆಗೂ ಇದು ಮುಂದುವರಿಯಲಿದೆ. ಬಿಜೆಪಿಯವರು ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆʼʼ ಎಂದು ಹೇಳಿದ್ದಾರೆ.

ಆಧಾರ್‌ ಸೀಡಿಂಗ್

ಇನ್ನೂ ಸಾಕಷ್ಟು ಫಲಾನುಭವಿಗಳು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು ಕೂಡ ಆಧಾರ್‌ ಸೀಡಿಂಗ್ (Aadhar seeding) ಮಾಡಿಕೊಂಡಿಲ್ಲ. ಹೀಗಾಗಿ ಅವರಿಗೆ ಹಣ ಬರುತ್ತಿಲ್ಲ. ಗೃಹಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡರೂ ಸಹಾಯಧನ ಪಾವತಿಯಾಗದ ಫಲಾನುಭವಿಗಳು ಕೂಡಲೇ ಅರ್ಜಿಯೊಂದಿಗೆ ಇ-ಕೆವೈಸಿ ಸಂಬಂಧಿತ ಸಮಸ್ಯೆಗಳನ್ನು ಬ್ಯಾಂಕ್‌ಗಳಲ್ಲಿ ಪರಿಹರಿಸಿಕೊಳ್ಳಬೇಕು. ಬಳಿಕ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ, ಇ-ಕೆವೈಸಿ ಅಪ್‌ಡೇಟ್‌ ಮಾಡಿಸಿ, ದೃಢೀಕರಣ ಪಡೆದು ಅವುಗಳನ್ನು ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿ ಕೇಂದ್ರಗಳ ಕಾರ್ಯಕರ್ತೆಯರಿಗೆ ಒದಗಿಸಿದರೆ, ಸಹಾಯಧನ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆ ನಿಲ್ಲಲ್ಲ ಎಂದ ಸಿದ್ದರಾಮಯ್ಯ

ಇತ್ತೀಚೆಗೆ ಮೈಸೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಐದು ಗ್ಯಾರಂಟಿಗಳೂ (Congress Guarantee) ಮುಂದುವರಿಯಲಿವೆ. ಅವು ಬಡವರಿಗೆ ಶಕ್ತಿ ತುಂಬುವ ಕಾರ್ಯಕ್ರಮವಾಗಿರುವುದರಿಂದ ಈ ಕಾರ್ಯಕ್ರಮಗಳನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಗ್ಯಾರಂಟಿಗಳನ್ನು ಮರು ಪರಿಶೀಲಿಸಲಾಗುವುದೇ ಎಂಬ ಪ್ರಶ್ನೆಗೆ ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿ, ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ನಿಲ್ಲಿಸುವ ಯೋಚನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: Congress Guarantee Scheme: ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಸಿಎಂ ಸಿದ್ದರಾಮಯ್ಯ

ಬಿ.ಎಸ್. ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂಬ ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ಹಾಗೂ ಜೆಡಿಎಸ್ ಈ ಪ್ರಕರಣದಲ್ಲಿ ಕಾಂಗ್ರೆಸ್‍ನದ್ದು ರಾಜಕೀಯ ಷಡ್ಯಂತ್ರ ಎಂದು ಆರೋಪಿಸುತ್ತಿದ್ದಾರೆ. ಆದರೆ ದೂರು ನೀಡಿರುವವರು ಯಾರು? ಸರ್ಕಾರವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುವುದಿಲ್ಲ. ಕಾನೂನು ರೀತಿ ಕೆಲಸ ಮಾಡುವ ಪೊಲೀಸರ ಕೆಲಸದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಎಲ್ಲರೂ ಒಪ್ಪಿ ಅದರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದಿದ್ದರು.

ದೇವೇಗೌಡರ ಕುಟುಂಬವನ್ನು ನಾಶ ಮಾಡುವುದರಲ್ಲಿ ಯಶಸ್ಸು ಕಂಡಿರುವ ಕಾಂಗ್ರೆಸ್ ಈಗ ಯಡಿಯೂರಪ್ಪ ಅವರನ್ನು ನಾಶ ಮಾಡಲು ಹೊರಟಿದೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ಈ ನೆಲದ ಕಾನೂನನ್ನು ನಾವು ಗೌರವಿಸುತ್ತೇವೆ. ಕಾನೂನು ಹೇಳಿದಂತೆ ನಡೆದುಕೊಳ್ಳುತ್ತೇವೆ ಹಾಗೂ ಕಾನೂನನ್ನು ಪಾಲಿಸುತ್ತೇವೆ ಎಂದು ತಿಳಿಸಿದ್ದರು.

Continue Reading
Advertisement
kalaburagi Murder Case
ಕಲಬುರಗಿ1 min ago

Kalaburagi murder : ಚಾಕುವಿನಿಂದ ಇರಿದು ಕೊಂದು ಆಟೋ ಚಾಲಕನನ್ನು ಮರಕ್ಕೆ ನೇತು ಹಾಕಿದ ಹಂತಕರು

Battlegrounds Mobile India
ಬೆಂಗಳೂರು2 mins ago

Battlegrounds Mobile India : ಬಿಜಿಎಮ್​ಐ ಜತೆ ಹೊಸ ಪಾಲುದಾರಿಕೆ ಮಾಡಿಕೊಂಡ ಕೆಎಫ್​​ಸಿ

Varalaxmi Sarathkumar invite PM Narendra Modi for wedding
ಸಿನಿಮಾ13 mins ago

Varalaxmi Sarathkumar: ಪ್ರಧಾನಿ ಮೋದಿಗೆ ಮದುವೆ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

Murder Case
ಬೆಂಗಳೂರು23 mins ago

Murder Case: ಕುಡಿದ ಅಮಲಿನಲ್ಲಿ ಕಟ್ಟಡದಿಂದ ಸ್ನೇಹಿತನನ್ನೇ ತಳ್ಳಿ ಕೊಂದ ಯುವಕ!

Gruha Lakshmi
ಕರ್ನಾಟಕ35 mins ago

Gruha Lakshmi: ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಸ್ಪಷ್ಟನೆ

Road Accident
ಕ್ರೈಂ35 mins ago

Road Accident: ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಬೈಕ್‌ನಿಂದ ಬಿದ್ದು ನವ ವಿವಾಹಿತೆ ಸಾವು

INDW vs SAW
ಕ್ರೀಡೆ36 mins ago

INDW vs SAW: ವಿಶ್ವ ದಾಖಲೆ ನಿರ್ಮಿಸಿದ ಭಾರತ ಮಹಿಳಾ ತಂಡ

Karnataka CM Row
ಪ್ರಮುಖ ಸುದ್ದಿ39 mins ago

Karnataka CM Row: ‘ಗೌಡ’ ಸಿಎಂ ಆಯ್ತು, ಈಗ ‘ಲಿಂಗಾಯತ’ ಸಿಎಂ ಕೂಗು; ರಂಭಾಪುರಿ ಶ್ರೀ ಹೇಳಿದ ಹೆಸರಿದು!

Dengue Fever
ಚಿಕ್ಕಮಗಳೂರು1 hour ago

Dengue Fever : ಡೆಂಗ್ಯೂ ಮಹಾಮಾರಿಗೆ ಚಿಕ್ಕಮಗಳೂರಿನಲ್ಲಿ ಬಾಲಕಿ ಬಲಿ; ಈವರೆಗೆ ಐವರು ಸಾವು

Aiden Markram
ಕ್ರೀಡೆ1 hour ago

Aiden Markram: ಧೋನಿಯಂತೆ ಮಾರ್ಕ್ರಮ್​ ಕೂಡ ಲಕ್ಕಿ ಕ್ಯಾಪ್ಟನ್​; ಸಾಧನೆ ಹೀಗಿದೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ3 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ19 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌