PCB ಕಣ್ಣು ಕುಕ್ಕಿದ ಐಪಿಎಲ್‌ ಆದಾಯ, ತಕರಾರು ಎತ್ತಿದ ರಾಜಾ - Vistara News

ಕ್ರಿಕೆಟ್

PCB ಕಣ್ಣು ಕುಕ್ಕಿದ ಐಪಿಎಲ್‌ ಆದಾಯ, ತಕರಾರು ಎತ್ತಿದ ರಾಜಾ

ಹೆಚ್ಚಿನ ಆದಾಯ ಗಳಿಕೆ ಉದ್ದೇಶದಿಂದ ಎರಡೂವರೆ ತಿಂಗಳ ಐಪಿಎಲ್‌ ನಡೆಸುವುದಾಗಿ ಬಿಸಿಸಿಐ ಘೋಷಿಸಿರುವುದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಹೊಟ್ಟೆಯುರಿಗೆ ಕಾರಣವಾಗಿದ್ದು, ಈ ಬಗ್ಗೆ ಐಸಿಸಿ ಮುಂದೆ ತಕರಾರು ಎತ್ತುವುದಾಗಿ ಅದರ ಅಧ್ಯಕ್ಷ ರಮೀಜ್ ರಾಜಾ ಹೇಳಿದ್ದಾರೆ.

VISTARANEWS.COM


on

PCB
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಏನೇ ಮಾಡಿದರೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತರಕಾರು (PCB) ಎತ್ತುವುದು ನಿಶ್ಚಿತ. ಅದು ಒಂಥರಾ “ಕೈಲಾಗದವನು ಮೈ ಪರಚಿಕೊಂಡಂತೆ’. ಇದೀಗ ಮತ್ತೊಮ್ಮೆ ಅದೇ ಚಾಳಿ ಮುಂದುವರಿಸಿದ್ದು, ಎರಡೂವರೆ ತಿಂಗಳ ಐಪಿಎಲ್‌ ನಡೆಸುವುದಾಗಿ ಬಿಸಿಸಿಐ ಘೋಷಿಸಿರುವುದರ ವಿರುದ್ಧ ಅಂತಾರಾಷ್ಟ್ರಿಯ ಕ್ರಿಕೆಟ್‌ ಸಮಿತಿಗೆ ದೂರು ನೀಡುವುದಾಗಿ ಹೇಳಿದೆ.

ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಎರಡೂವರೆ ತಿಂಗಳ ಐಪಿಎಲ್‌ ನಡೆಸುವ ಬಗ್ಗೆ ತಕರಾರು ಇರುವುದು ಅನುಮಾನ. ಯಾಕೆಂದರೆ ಐಪಿಎಲ್‌ ನಡೆಯಲಿ, ನಡಯದೇ ಹೋಗಲಿ. ಪಿಸಿಬಿಗೆ ಲಾಭ, ನಷ್ಟದ ಪ್ರಶ್ನೆಯೇ ಇಲ್ಲ. ಅಲ್ಲಿನ ಆಟಗಾರರಿಗೆ ಇಲ್ಲಿಗೆ ನೋ ಎಂಟ್ರಿ. ಹೀಗಾಗಿ ಅವಧಿ ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ. ಆದರೆ, ಇತ್ತೀಚೆಗೆ ನಡೆದ ಐಪಿಎಲ್‌ ಪಂದ್ಯಗಳ ನೇರ ಪ್ರಸಾರದ ಹಕ್ಕಿನ ಹರಾಜಿನಲ್ಲಿ ಬಿಸಿಸಿಐ 48,390 ಕೋಟಿ ರೂಪಾಯಿ ಆದಾಯ ಸಂಗ್ರಹಿಸಿದೆ. ಇದು ಪಾಕ್‌ ಕ್ರಿಕೆಟ್‌ ಮಂಡಳಿಯ ಹೊಟ್ಟೆಯುರಿಗೆ ನೈಜ ಕಾರಣ. ಹೀಗಾಗಿ ‘ಪಿಳ್ಳೆ ನೆವ’ ಮುಂದೊಡ್ಡಿ ಐಪಿಎಲ್‌ನ ಸಾಮರ್ಥ್ಯವನ್ನೇ ಪ್ರಶ್ನಿಸಲು ಮುಂದಾಗಿದೆ.

ಐಸಿಸಿ ಸಭೆಯಲ್ಲಿ ಪ್ರಶ್ನೆ

ಎರಡೂವರೆ ತಿಂಗಳ ಐಪಿಎಲ್‌ ನಡೆಸುವ ಬಗ್ಗೆ ಬಿಸಿಸಿಐ ಇದುವರೆಗೆ ಪ್ರಕಟಣೆ ಹೊರಡಿಸಿಲ್ಲ. ಕೇವಲ ಘೋಷಣೆಗೆ ಸೀಮಿತವಾಗಿದೆ. ಇಂಥದ್ದೊಂದು ದೊಡ್ಡ ಬದಲಾವಣೆ ಬಗ್ಗೆ ಮುಂದಿನ ಐಸಿಸಿ ಸಭೆಯಲ್ಲಿ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವೆ,” ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮಿಜ್‌ ರಾಜಾ ಶುಕ್ರವಾರ ಹೇಳಿದ್ದಾರೆ.

“ನನ್ನ ಅಭಿಪ್ರಾಯ ಸ್ಪಷ್ಟವಾಗಿದೆ. ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾದರೆ ಅದರ ಕುರಿತು ಐಸಿಸಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುವುದು ಅಗತ್ಯ. ಬಿಸಿಸಿಐಯ ನಿರ್ಧಾರವನ್ನು ಖಂಡಿತವಾಗಿಯೂ ಪ್ರಶ್ನಿಸಲಿದ್ದೇವೆ,” ಎಂದು ರಾಜಾ ಹೇಳಿದ್ದಾರೆ.

ಏನು ಹೇಳಿದ್ದರು ಜಯ್‌ ಶಾ?

ಐಪಿಎಲ್‌ನ ೨೦೨೩-೨೭ರ ಅವಧಿಯ ೪೧೦ ಪಂದ್ಯಗಳ ನೇರ ಪ್ರಸಾರದ ಹಕ್ಕಿನ ಹರಾಜು ಪ್ರಕ್ರಿಯೆಯನ್ನು ಬಿಸಿಸಿಐ ಇತ್ತೀಚೆಗೆ ನಡೆಸಿತ್ತು. ಈ ಪ್ರಕ್ರಿಯೆಗೆ ದೊಡ್ಡ ಮಟ್ಟದ ಉದ್ಯಮಗಳಿಂದ ದೊಡ್ಡ ಮಟ್ಟದ ಬೆಂಬಲ ದೊರಕಿತ್ತು. ಒಟ್ಟಾರೆ 48,390 ಕೋಟಿ ರೂಪಾಯಿ ಸಂಗ್ರಹಿಸಿ ಇದುವರೆಗಿನ ಎಲ್ಲ ದಾಖಲೆ ಮುರಿದಿತ್ತು. ಅಲ್ಲದೆ, ಜಗತ್ತಿನ ಎರಡನೇ ಅತಿ ಶ್ರೀಮಂತ ಕ್ರೀಡಾ ಲೀಗ್‌ ಎಂಬ ಖ್ಯಾತಿ ತನ್ನದಾಗಿಸಿಕೊಂಡಿದೆ.

ಇದಾದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ “ಪ್ರಸಾರದ ಹಕ್ಕಿನ ಮಾರಾಟದಿಂದ ಬಿಸಿಸಿಐಗೆ ಸಂತಸವಾಗಿದೆ. ಅಂತೆಯೇ ಮುಂದಿನ ಫ್ಯೂಚರ್‌ ಟೂರ್‌ ಪ್ರೋಗ್ರಾಂ (ಎಫ್‌ಟಿಪಿ) ನಲ್ಲಿ ಎರಡೂವರೆ ತಿಂಗಳ ಐಪಿಎಲ್‌ ನಡೆಸಲು ಯೋಜನೆ ರೂಪಿಸಲಾಗುವುದು. ಅದರಿಂದ ಹೆಚ್ಚು ವಿದೇಶಿ ಆಟಗಾರರಿಗೆ ಐಪಿಎಲ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗಲಿದೆ. ಈ ಬಗ್ಗೆ ನಾನಾ ಕ್ರಿಕೆಟ್‌ ಮಂಡಳಿಗಳ ಜತೆ ಮಾತುಕತೆ ನಡೆಸುತ್ತೇವೆ,” ಎಂದು ಹೇಳಿದ್ದರು.

ಭಾರತ ಜತೆ ಕ್ರಿಕೆಟ್‌ ಆಡುತ್ತೇವೆ

ಪಾಕಿಸ್ತಾನ ಜತೆ ಕ್ರಿಕೆಟ್ ಆಡದಿರುವುದರಿಂದ ಬಿಸಿಸಿಐಗೆ ದೊಡ್ಡ ಮಟ್ಟದ ನಷ್ಟ ಉಂಟಾಗಿಲ್ಲ. ಆದರೆ, ಟೀಮ್‌ ಇಂಡಿಯಾ ಅವರ ನೆಲಕ್ಕೆ ಕಾಲಿಡದೇ ಹೋಗಿರುವುದು ಪಿಸಿಬಿ ಪಾಲಿಗೆ ಭಾರಿ ನಷ್ಟ ಉಂಟು ಮಾಡಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಪ್ರತಿ ಬಾರಿಯೂ ಭಾರತದ ಜತೆ ಕ್ರಿಕೆಟ್‌ ಆಡಲು ಸಿದ್ಧರಿದ್ದೇವೆ ಎಂದು ಹೇಳುತ್ತಿದೆ. ರಮಿಜ್‌ ರಾಜಾ ಮತ್ತೊಮ್ಮೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ “ರಾಜಕೀಯ ವಿಷಯ ಬದಿಗಿರಲಿ. ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್‌ ಪಂದ್ಯ ನಡೆಯಲೇಬೇಕಾಗಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಜತೆ ಹಲವು ಬಾರಿ ಈ ಕುರಿತು ಮಾತುಕತೆ ನಡೆಸಿದ್ದೇನೆ. ಎರಡೆರಡು ಬಾರಿ ಅವರು ಐಪಿಎಲ್‌ ಫೈನಲ್‌ ಪಂದ್ಯದ ವೀಕ್ಷಣೆಗೆ ಆಹ್ವಾನ ಕೊಟ್ಟಿದ್ದರು. ಆದರೆ, ಪರಿಸ್ಥಿತಿ ಸರಿಯಿಲ್ಲದ ಕಾರಣ ಭೇಟಿ ನೀಡಲು ಸಾಧ್ಯವಾಗಿಲ್ಲ,” ಎಂದು ಅವರು ರಾಜಾ ಹೇಳಿದರು.

ಇದನ್ನೂ ಓದಿ| the 6ixty: ಹೊಸ ಮಾದರಿಯ ಕ್ರಿಕೆಟ್‌ ಲೀಗ್‌ ಜಾರಿಗೆ ತಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

T20 World Cup 2024: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಎಲ್ಲೆಡೆಯಿಂದ ಅಭಿನಂದನಾ ಪ್ರವಾಹವೇ ಹರಿದು ಬರುತ್ತಿದೆ. ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಇತ್ತ ಟೀಮ್‌ ಇಂಡಿಯಾ ಜಯ ಗಳಿಸುತ್ತಿದ್ದಂತೆ ಅಭಿನಂದನೆ ತಿಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಂಡದ ಸದಸ್ಯರಿಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

VISTARANEWS.COM


on

T20 World Cup 2024
Koo

ನವದೆಹಲಿ: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಎಲ್ಲೆಡೆಯಿಂದ ಅಭಿನಂದನಾ ಪ್ರವಾಹವೇ ಹರಿದು ಬರುತ್ತಿದೆ. ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಇತ್ತ ಟೀಮ್‌ ಇಂಡಿಯಾ ಜಯ ಗಳಿಸುತ್ತಿದ್ದಂತೆ ಅಭಿನಂದನೆ ತಿಳಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ತಂಡದ ಸದಸ್ಯರಿಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಮೋದಿ ಹೇಳಿದ್ದೇನು?

ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡರು.

ಜತೆಗೆ ಭಾರತೀಯ ಜಸ್ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರಿಗೂ ಪ್ರಧಾನಿ ಮೆಚ್ಚುಗೆ ಸೂಚಿಸಿದರು. ಮಾತ್ರವಲ್ಲ ಅದ್ಭುತ ಕ್ಯಾಚ್‌ ಹಿಡಿದು ಪಂದ್ಯದ ಗತಿಯನ್ನೇ ಬದಲಾಯಿಸಿದ ಸೂರ್ಯ ಕುಮಾರ್ ಯಾದವ್ ಅವರನ್ನು ಉಲ್ಲೇಖಿಸಲು ಪ್ರಧಾನಿ ಮರೆಯಲಿಲ್ಲ.

ರಾಹುಲ್‌ ದ್ರಾವಿಡ್‌ಗೆ ಧನ್ಯವಾದ ಹೇಳಿದ ಮೋದಿ

ಗೆಲುವಿಗಾಗಿ ಮುಖ್ಯ ಕೊಡುಗೆ ನೀಡಿದ ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಮೋದಿ ಧನ್ಯವಾದ ಅರ್ಪಿಸಿದರು. ಶನಿವಾರ (ಜೂನ್ 29) ತಡರಾತ್ರಿ ಭಾರತ ಪಂದ್ಯವನ್ನು ಗೆದ್ದ ನಂತರ, ಪ್ರಧಾನಿ ‘ಮೆನ್ ಇನ್ ಬ್ಲೂ’ಗೆ ಅಭಿನಂದನಾ ವಿಡಿಯೊ ಸಂದೇಶವನ್ನು ಪೋಸ್ಟ್ ಮಾಡಿ ಭಾರತೀಯ ಕ್ರಿಕೆಟಿಗರು ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ ಎಂದು ಅವರು ಹೇಳಿದ್ದಾರೆ. “ಚಾಂಪಿಯನ್ಸ್! ನಮ್ಮ ತಂಡವು ಟಿ20 ವಿಶ್ವಕಪ್ ಅನ್ನು ಮನೆಗೆ ತರುತ್ತಿದೆ! ಭಾರತೀಯ ಕ್ರಿಕೆಟ್ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆʼʼ ಎಂದು ಬರೆದುಕೊಂಡು ಅವರು ವಿಡಿಯೊವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಬಗ್ಗು ಬಡಿದಿರುವುದು ಐತಿಹಾಸಿಕ ಎಂದು ಬಣ್ಣಿಸಿದ್ದಾರೆ. ಕಳೆದ ವರ್ಷದ ಏಕದಿನ ವಿಶ್ವಕಪ್‌ ಪಂದ್ಯದ ಫೈನಲ್‌ನಲ್ಲಿ ಭಾರತ ತಂಡ ಸೋತಾಗ ಮೋದಿ ಅವರು ಸಾಂತ್ವನ ಹೇಳಿದ್ದರು.

ರೋಚಕ ಹೋರಾಟದಲ್ಲಿ ಭಾರತಕ್ಕೆ ಗೆಲುವು

ಕಿಂಗ್ ಕೊಹ್ಲಿಯ ಅಬ್ಬರದ ಅರ್ಧ ಶತಕ (76 ರನ್​) ರನ್ ಹಾಗೂ ಆಲ್​ರೌಂಡರ್ ಅಕ್ಷರ್ ಪಟೇಲ್​ ಅವರ ಸ್ಫೋಟಕ ಬ್ಯಾಟಿಂಗ್​ (47 ರನ್​, 31 ಎಸೆತ, 4 ಸಿಕ್ಸರ್​, 1 ಫೋರ್​) ನೆರವು ಹಾಗೂ ಕೊನೇ ಕ್ಷಣದ ರೋಚಕ ಹೋರಾಟ ಫಲವಾಗಿ ಭಾರತ ತಂಡ ವಿಶ್ವ ಕಪ್​ ಗೆದ್ದುಕೊಂಡಿತು. ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್​ಗಳ ರೋಚಕ ಗೆಲುವು ದಾಖಲಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಭಾರತದ ಪಾಲಿಗೆ ಇದು ಸ್ಮರಣೀಯ ಟ್ರೋಫಿ. ಹಿರಿಯ ಆಟಗಾರರಾದ ರೋಹಿತ್​ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ಅಪೇಕ್ಷಿತ ಚಾಂಪಿಯನ್ ಪಟ್ಟ. ಅತ್ತ ದಕ್ಷಿಣ ಆಫ್ರಿಕಾ ತಂಡ ತನ್ನ ಚೋಕರ್ಸ್​ ಹಣೆಪಟ್ಟಿಯನ್ನು ಮತ್ತಷ್ಟು ದಿನ ಕಟ್ಟಿಕೊಳ್ಳುವಂತಾಯಿತು. 4 ದಶಕಗಳ ತನ್ನ ವಿಶ್ವ ಕಪ್​ ಅಭಿಯಾನದಲ್ಲಿ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದೇ ನಿರಾಸೆ ಎದುರಿಸಿತು.

ಇದನ್ನೂ ಓದಿ: Virat Kohli : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ ವಿರಾಟ್​​ ಕೊಹ್ಲಿ

Continue Reading

ಪ್ರಮುಖ ಸುದ್ದಿ

Jay Shah Promise: ಜಯ್​​ ಶಾ ಭವಿಷ್ಯ ನುಡಿದಂತೆ ಟಿ20 ವಿಶ್ವಕಪ್​ ಗೆದ್ದ ಭಾರತ; ವಿಡಿಯೊ ವೈರಲ್​

Jay Shah Promise: ಅಂದು ಸಭೆಯಲ್ಲಿ ಮಾತನಾಡಿದ್ದ ಜಯ್​ ಶಾ ಅವರು ನಾನು ಭರವಸೆ ನೀಡುತ್ತಿದ್ದೇನೆ. ರೋಹಿತ್​ ಶರ್ಮ ನಾಯಕತ್ವದಲ್ಲಿ ಭಾರತ ತಂಡ ಜೂನ್​ 29ರಂದು ಬಾರ್ಬಡೋಸ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಪಕ್​ ಗೆದ್ದು ವಿಂಡೀಸ್​ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ ಎಂದು ಹೇಳಿದ್ದರು. ಇದೀಗ ಅವರು ನುಡಿದಂತೆ ಭಾರತ 17 ವರ್ಷಗಳ ಬಳಿಕ ಭಾರತ 2ನೇ ಟಿ20 ವಿಶ್ವಕಪ್​ ಗೆದ್ದು ಸಂಭ್ರಮಿಸಿದೆ.

VISTARANEWS.COM


on

Jay Shah Promise
Koo

ಬಾರ್ಬಡೋಸ್​: ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ(Jay Shah) ಅವರು ಟಿ20 ವಿಶ್ವಕಪ್(T20 World Cup 2024 Final)​ ಟೂರ್ನಿಯ ಆರಂಭಕ್ಕೆ ತಂಡ ಪ್ರಕಟಿಸುವ ಮುನ್ನವೇ ಭಾರತ ತಂಡ ಜೂನ್​ 29ರಂದು ಬಾರ್ಬಡೋಸ್​ನಲ್ಲಿ ವಿಶ್ವಕಪ್​ ಗೆಲ್ಲಲಿದೆ ಎಂದು ವೇದಿಯಲ್ಲಿ ಮಾತನಾಡುವ ವೇಳೆ ಬಹಿರಂಗವಾಗಿಯೇ ಭವಿಷ್ಯ(Jay Shah Promise) ನುಡಿದಿದ್ದರು. ಇದೀಗ ಅವರ ಹೇಳಿದಂತೆ ಭಾರತ ಕಪ್​ ಗೆದ್ದು ಸಂಭ್ರಮಿಸಿದೆ. ಅಂದು ಜಯ್​ ಶಾ ಹೇಳಿದ ಹೇಳಿದ ಈ ಭವಿಷ್ಯದ ವಿಡಿಯೊ ಇದೀಗ ವೈರಲ್(viral video)​ ಆಗಿದೆ.

ಅಂದು ಸಭೆಯಲ್ಲಿ ಮಾತನಾಡಿದ್ದ ಜಯ್​ ಶಾ ಅವರು ನಾನು ಭರವಸೆ ನೀಡುತ್ತಿದ್ದೇನೆ. ರೋಹಿತ್​ ಶರ್ಮ ನಾಯಕತ್ವದಲ್ಲಿ ಭಾರತ ತಂಡ ಜೂನ್​ 29ರಂದು ಬಾರ್ಬಡೋಸ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಪಕ್​ ಗೆದ್ದು ವಿಂಡೀಸ್​ನಲ್ಲಿ ತ್ರಿವರ್ಣ ಧ್ವಜ ರಾರಾಜಿಸಲಿದೆ ಎಂದು ಹೇಳಿದ್ದರು. ಇದೀಗ ಅವರು ನುಡಿದಂತೆ ಭಾರತ 17 ವರ್ಷಗಳ ಬಳಿಕ ಭಾರತ 2ನೇ ಟಿ20 ವಿಶ್ವಕಪ್​ ಗೆದ್ದು ಸಂಭ್ರಮಿಸಿದೆ.

ಚಾಂಪಿಯನ್​(T20 World Cup Final) ಪಟ್ಟ ಅಲಂಕರಿಸಿದ ಭಾರತ ತಂಡಕ್ಕೆ (t20 world cup winner) ಮೊತ್ತದ $ 2.45 ಮಿಲಿಯನ್ ಯುಎಸ್ ಡಿ (20,42,49,000 ರೂ) ಬಹುಮಾನ(T20 World Cup 2024 Prize Money) ಮೊತ್ತ ಲಭಿಸಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ರನ್ನರ್​ ಅಪ್​ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 USD (10,68,06,400 ರೂ.) ಹಣ ದೊರೆಕಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.

ಇದನ್ನೂ ಓದಿ Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್​ ಆಗಿ ವಿಶ್ವಕಪ್​ ಎತ್ತಿ ಹಿಡಿದ ದ್ರಾವಿಡ್

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ದ್ರಾವಿಡ್​ಗೆ ಸ್ಮರಣೀಯ ಬೀಳ್ಕೊಡುಗೆ


ನಾಯಕನಾಗಿ ಗೆಲ್ಲಲಾಗದ ವಿಶ್ವಕಪ್(T20 World Cup 2024)​ ಟ್ರೋಫಿಯನ್ನು ರಾಹುಲ್​ ದ್ರಾವಿಡ್‌(Rahul Dravid) ಕೊನೆಗೂ ಭಾರತ ತಂಡದ ತರಬೇತುದಾರಾಗಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಕೂಡ ತಮ್ಮ ಕೊನೆಯ ಮಾರ್ಗದರ್ಶನದಲ್ಲಿ ಎನ್ನುವುದು ವಿಶೇಷ. 2007ರಲ್ಲಿ ವೆಸ್ಟ್​ ಇಂಡೀಸ್​ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರಾಹುಲ್​ ದ್ರಾವಿಡ್​ ಅವರ ನಾಯಕತ್ವದಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಲೀಗ್​ ಹಂತದಿಂದಲೇ ನಿರ್ಗಮಿಸಿತ್ತು. ದುರ್ಬಲ ಬಾಂಗ್ಲಾದೇಶ ವಿರುದ್ದವೂ ಕೂಡ ಗೆಲುವು ಸಾಧಿಸಲು ಸಾಧ್ಯವಾಗ ಅವಮಾನಕ್ಕೆ ಸಿಲುಕಿತ್ತು. ಅಂದು ಅವಮಾನ ಎದುರಿಸಿದ ವಿಂಡೀಸ್​ ನೆಲದಲ್ಲೇ ಇದೀಗ ದ್ರಾವಿಡ್​ ತರಬೇತುದಾರನಾಗಿ ಕಪ್​ ಗೆದ್ದು ಸಂಭ್ರಮಿಸಿದ್ದಾರೆ.

Continue Reading

ಕ್ರೀಡೆ

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

T20 World Cup 2024 Prize Money: ರನ್ನರ್​ ಅಪ್​ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 USD (10,68,06,400 ರೂ.) ಹಣ ದೊರೆಕಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.

VISTARANEWS.COM


on

T20 World Cup 2024 prize money
Koo

ಬಾರ್ಬಡೋಸ್​: 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದ ಚಾಂಪಿಯನ್​(T20 World Cup Final) ಭಾರತ ತಂಡಕ್ಕೆ ಭಾರಿ(t20 world cup winner) ಮೊತ್ತದ ಬಹುಮಾನ(T20 World Cup 2024 Prize Money) ಲಭಿಸಿದೆ. $ 2.45 ಮಿಲಿಯನ್ ಯುಎಸ್ ಡಿ (20,42,49,000 ರೂ) ಪಡೆದಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ರನ್ನರ್​ ಅಪ್​ ದಕ್ಷಿಣ ಆಫ್ರಿಕಾ ತಂಡಕ್ಕೆ 1,280,000 USD (10,68,06,400 ರೂ.) ಹಣ ದೊರೆಕಿದೆ. ಈ ಬಾರಿಯ ಟಿ20 ವಿಶ್ವಕಪ್ ಟೂರ್ನಿಯ ಒಟ್ಟು ಬಹುಮಾನ ಮೊತ್ತ 11.25 ಮಿಲಿಯನ್ ಯುಸ್ ಡಾಲರ್ ಆಗಿತ್ತು.

ಬ್ರಿಜ್‌ಟೌನ್‌ನ ಕೆನ್ಸಿಂಗ್ಟನ್‌ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿರಾಟ್ ಕೊಹ್ಲಿ ಮತ್ತು ಅಕ್ಷರ್ ಪಟೇಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಈ ಮೊತ್ತವನ್ನು ಒಂದು ಹಂತದ ವರೆಗೆ ದಿಟ್ಟವಾಗಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 8 ವಿಕೆಟ್​ಗೆ 169 ರನ್​ ಗಳಿಸಲಷ್ಟೇ ಶಕ್ತವಾಯಿತು.

ಕೊನೆಯ ಓವರ್​ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ 16 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ ಮೊದಲ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ನತ್ತ ಬಾರಿಸಿದ್ದರು. ಬೌಂಡರಿ ಲೈನ್ ನಲ್ಲಿದ್ದ ಸೂರ್ಯ ಕುಮಾರ್ ಯಾದವ್ ಯಾರೂ ಊಹಿಸದಂತೆ ಸಾಹಸಮಯ ಅಮೋಘ ಕ್ಯಾಚ್ ಪಡೆದರು. 21 ರನ್ ಗಳಿಸಿದ್ದ ಡೇವಿಡ್​ ಮಿಲ್ಲರ್ ವಿಕೆಟ್​ ಕೈಚೆಲ್ಲಿದರು. ಎರಡನೇ ಎಸೆತವನ್ನು ರಬಾಡಾ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಒಂದು ರನ್ ಬಂತು. ಕೊನೆಯ ಎರಡು ಎಸೆತಗಳಲ್ಲಿ 10 ರನ್ ಅಗತ್ಯವಿತ್ತು. ಹಾರ್ದಿಕ್ ಒಂದು ವೈಡ್ ಎಸೆದರು. ರಬಾಡಾ ಕ್ಯಾಚಿತ್ತು ನಿರ್ಗಮಿಸಿದರು. ಕೊನೆಯ ಎಸೆತದಲ್ಲಿ ಒಂದು ರನ್ ಮಾತ್ರ ಬಂತು. ಭಾರತ 7 ರನ್​ಗಳ ಗೆಲುವು ಸಾಧಿಸಿ 17 ವರ್ಷಗಳ ಬಳಿಕ ಟಿ20 ವಿಶ್ವಕಪ್​ ಗೆದ್ದು ಬೀಗಿತು.

ಇದನ್ನೂ ಓದಿ Rahul Dravid: ನಾಯಕನಾಗಿ ಸೋಲಿನ ಅವಮಾನ ಎದುರಿಸಿದ್ದ ಮೈದಾನದಲ್ಲೇ ಕೋಚ್​ ಆಗಿ ವಿಶ್ವಕಪ್​ ಎತ್ತಿ ಹಿಡಿದ ದ್ರಾವಿಡ್

ಜಮ್ಮು-ಕಾಶ್ಮೀರದಲ್ಲಿ ಮೊಳಗಿದ ವಿಜಯೋತ್ಸವ


17ನೇ ವರ್ಷಗಳ ಬಳಿಕ ಟಿ20 ವಿಶ್ವಕಪ್(T20 World Cup final)​ ಗೆದ್ದ ಭಾರತ ತಂಡದ ಈ ಅಭೂತಪೂರ್ವ ಗೆಲುವನ್ನು ಅಭಿಮಾನಿಗಳು ದೇಶಾದ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ದೇಶದ ಮೂಲೆ ಮೂಲೆಯಲ್ಲೂ ತಡರಾತ್ರಿಯೇ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲೂ ಅಭಿಮಾನಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ಗೆಲುವನ್ನು ಸಂಭ್ರಮಿಸಿದ್ದಾರೆ. ಇದರ ಫೋಟೊ ಮತ್ತು ವೈರಲ್​ ಆಗಿದೆ.

ಜಮ್ಮು ಕಾಶ್ಮೀರದ ಕಚಿ ಚೌನಿ ಸೇರಿದಂತೆ ವಿವಿಧ ಭಾಗಗಳಲ್ಲಿ ಚಳಿಯನ್ನು ಕೂಡ ಲೆಕ್ಕಿಸದೆ ಮಧ್ಯರಾತ್ರಿಯೇ ಅಭಿಮಾನಿಗಳು ಮನೆಯಿಂದ ಹೊರ ಬಂದು ಭಾರತದ ಗೆಲುವನ್ನು ಸಂಭ್ರಮಿಸಿದ್ದಾರೆ. ಬೃಹತ್ ತ್ರಿವರ್ಣ ಧ್ವಜ ಹಿಡಿದು ಪಟಾಕಿ ಸಿಡಿಸಿ ಜಯಘೋಷ ಮೊಳಗಿಸಿದ್ದಾರೆ.

Continue Reading

ಬಾಲಿವುಡ್

Virat Kohli: ವಿಶ್ವಕಪ್ ಗೆದ್ದ ನಂತರ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿ ಫ್ಲೈಯಿಂಗ್ ಕಿಸ್‌ ಕೊಟ್ಟ ವಿರಾಟ್ ಕೊಹ್ಲಿ!

Virat Kohli: ವಿರಾಟ್​ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದು ಹೇಳಿದರು.

VISTARANEWS.COM


on

Virat Kohli video calls Anushka Sharma after winning
Koo

ಬೆಂಗಳೂರು: ಬಾರ್ಬಡೋಸ್​ನ ಕೆನ್ಸಿಂಗ್ಟನ್ ಓವಲ್​ನಲ್ಲಿ ಜೂನ್ 29ರಂದು ನಡೆದ ಟಿ20 ವಿಶ್ವಕಪ್​ 2024 (T20 World Cup 2024) ಫೈನಲ್​ನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಏಳು ರನ್​ಗಳ ಅಂತರದಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿ (Virat Kohli) ಹೊರ ಹೊಮ್ಮಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.  ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರತೀಯ ಆಟಗಾರರು ಸಂಭ್ರಮಿಸುತ್ತಿರುವ ವಿಡಿಯೊಗಳು ಮತ್ತು ಫೋಟೋಗಳು ಸದ್ದು ಮಾಡುತ್ತಿವೆ. ವಿಶ್ವಕಪ್ ಗೆದ್ದ ನಂತರ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿರುವ ಫೋಟೊಗಳು ಸಖತ್‌ ವೈರಲ್‌ ಆಗುತ್ತಿವೆ.

ವೈರಲ್‌ ಆದ ಫೋಟೊಗಳಲ್ಲಿ ವಿರಾಟ್‌ ಸಂತಸದಿಂದ ಪತ್ನಿ ಜತೆ ಮಾತನಾಡುತ್ತಿರುವುದು ಕಂಡು ಬಂದಿದೆ. ಮಾತ್ರವಲ್ಲ ಕಾಲ್‌ ಮೂಲಕವೇ ಫ್ಲೈ ಕಿಸ್‌ ಕೂಡ ಕೊಟ್ಟಿದ್ದಾರೆ. ಈ ಭಾವುಕ ಕ್ಷಣಗಳನ್ನು ಅಭಿಮಾನಿಗಳು ಕೂಡ ಹಾಡಿ ಹೊಗಳುತ್ತಿದ್ದಾರೆ.

ನಟಿ ಅನುಷ್ಕಾ ಶರ್ಮಾ ಅವರು ತಮ್ಮ ಪತಿ-ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಹೊಗಳಿ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಗಳು ವಾಮಿಕಾ ಬಗ್ಗೆ ಘಟನೆವೊಂದನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಪೋಸ್ಟ್‌ನಲ್ಲಿ ʻʻನಮ್ಮ ಮಗಳ ದೊಡ್ಡ ಕಾಳಜಿ ಏನೆಂದರೆ, ಎಲ್ಲಾ ಆಟಗಾರರು ಟಿವಿಯಲ್ಲಿ ಅಳುತ್ತಿರುವುದನ್ನು ನೋಡಿದ ನಂತರ ಅವರನ್ನು ತಬ್ಬಿಕೊಳ್ಳಲು ಯಾರಾದರೂ ಇದ್ದರೆ ಎಂದು. ಆಗ ನಾನು ಅಂದೆ ..ಹೌದು, ಅವರನ್ನು 1.5 ಬಿಲಿಯನ್ ಜನರು ತಬ್ಬಿಕೊಂಡರು ಎಂದೆ. ಎಂತಹ ಅದ್ಭುತ ಗೆಲುವು ಮತ್ತು ಎಂತಹ ಪೌರಾಣಿಕ ಸಾಧನೆ!! ಚಾಂಪಿಯನ್ಸ್ – ಅಭಿನಂದನೆಗಳು!! ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ಅನುಷ್ಕಾ ಅವರು ವಿರಾಟ್ ಮುಗುಳ್ನಕ್ಕು ಟ್ರೋಫಿಯನ್ನು ಎತ್ತುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ಗೆಲುವಿನ ಬಳಿಕ ಪಂಜಾಬಿ ಹಾಡಿಗೆ ಮಸ್ತ್​ ಸ್ಟೆಪ್ಸ್​ ಹಾಕಿದ ವಿರಾಟ್​ ಕೊಹ್ಲಿ

ವಿದಾಯ ಹೇಳಿದ ರೋಹಿತ್​


ನಾಯಕನಾಗಿ ಮತ್ತು ಆಟಗಾರನಾಗಿ 2 ಟಿ20 ವಿಶ್ವಕಪ್​ ಗೆದ್ದ ರೋಹಿತ್​ ಗೆಲುವಿನ ಬಳಿಕ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಈ ಮೂಲಕ ಸ್ಮರಣೀಯ ವಿದಾಯ ಪಡೆದರು. ಪಂದ್ಯದ ಬಳಿಕ ಮಾತನಾಡಿದ ರೋಹಿತ್​, “ಇದು ನನ್ನ ಕೊನೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ. ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ಇದಕ್ಕಿಂತ ಸಕಾಲ ಇನ್ನೊಂದಿಲ್ಲ. ನಾನು ಮೊದಲು ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದೇ ಟಿ20 ಆಡುವ ಮೂಲಕ. ನಾಕಯನಾಗಿ ನಾನು ಕಪ್ ಗೆಲ್ಲಬೇಕೆಂದು ಬಯಸಿದ್ದೆ. ಇದು ಸಾಕಾರಗೊಂಡಿದೆ” ಎಂದು ಹೇಳುವ ಮೂಲಕ ವಿದಾಯ ಹೇಳಿದರು. ಟಿ20ಯಲ್ಲಿ 159 ಪಂದ್ಯಗಳನ್ನು ಆಡಿರುವ ರೋಹಿತ್‌, 4231 ರನ್‌ ಗಳಿಸಿದ್ದು, 5 ಶತಕ ಹಾಗೂ 37 ಅರ್ಧಶತಕಗಳನ್ನು ಬಾರಿಸಿದ್ದಾರೆ.

ವಿದಾಯ ಹೇಳಿದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಈ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದರು. ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದು ಹೇಳಿದರು.

Continue Reading
Advertisement
Kamal Haasan on limited screen time in 'Kalki 2898 AD
ಟಾಲಿವುಡ್4 mins ago

Kamal Haasan: ನನ್ನ ಪಾತ್ರ ಚಿಕ್ಕದಿರಬಹುದು ಆದರೆ ಇದು ಆರಂಭವಷ್ಟೇ ಎಂದು ಕಲ್ಕಿ ಭಾಗ- 2ರ ಸುಳಿವು ಕೊಟ್ಟ ಕಮಲ್‌ ಹಾಸನ್‌!

T20 World Cup 2024
ಕ್ರೀಡೆ9 mins ago

T20 World Cup 2024: ʼವಿಶ್ವʼ ಗೆದ್ದ ನಾಯಕ ರೋಹಿತ್‌, ಕೋಚ್‌ ದ್ರಾವಿಡ್‌, ಕೊಹ್ಲಿಗೆ ಕರೆ ಮಾಡಿ ಅಭಿನಂದಿಸಿದ ಮೋದಿ

Self Harming
ಮೈಸೂರು14 mins ago

Self Harming : ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ

Jay Shah Promise
ಪ್ರಮುಖ ಸುದ್ದಿ27 mins ago

Jay Shah Promise: ಜಯ್​​ ಶಾ ಭವಿಷ್ಯ ನುಡಿದಂತೆ ಟಿ20 ವಿಶ್ವಕಪ್​ ಗೆದ್ದ ಭಾರತ; ವಿಡಿಯೊ ವೈರಲ್​

snake Bite
ಕಲಬುರಗಿ36 mins ago

Snake Bite : ಮರದಡಿ ಕುಳಿತಾಗ ಮಹಿಳೆಯ ಕಿವಿಗೆ ಕುಟುಕಿದ ಹಾವು; ವಿಷವೇರಿ ಸಾವು

T20 World Cup 2024 prize money
ಕ್ರೀಡೆ54 mins ago

T20 World Cup 2024 Prize Money:ಚಾಂಪಿಯನ್​ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Text Book
ಕರ್ನಾಟಕ54 mins ago

Text Book: ರಾಜ್ಯ ಪಠ್ಯಕ್ರಮದ ವಿರುದ್ಧ ವೀರಶೈವ ಮಠಾಧೀಶರ ಅಸಮಾಧಾನ; ಸಿಎಂಗೆ ಪತ್ರ

Virat Kohli video calls Anushka Sharma after winning
ಬಾಲಿವುಡ್55 mins ago

Virat Kohli: ವಿಶ್ವಕಪ್ ಗೆದ್ದ ನಂತರ ಅನುಷ್ಕಾ ಶರ್ಮಾಗೆ ವಿಡಿಯೊ ಕಾಲ್‌ ಮಾಡಿ ಫ್ಲೈಯಿಂಗ್ ಕಿಸ್‌ ಕೊಟ್ಟ ವಿರಾಟ್ ಕೊಹ್ಲಿ!

Sabja Seeds Benefits
ಆರೋಗ್ಯ58 mins ago

Sabja Seeds Benefits: ಸಬ್ಜಾ ಬೀಜವನ್ನು ನೆನೆಹಾಕಿ ಸೇವಿಸಿದರೆ ಹಲವು ಆರೋಗ್ಯ ಸಮಸ್ಯೆ ದೂರ

Physical Abuse
ಚಿಕ್ಕಬಳ್ಳಾಪುರ1 hour ago

Physical Abuse : ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

ಟ್ರೆಂಡಿಂಗ್‌