What will be the reward if India wins the World Test Championship? Here's the information WTC Final 2023: ವಿಶ್ವ ಟೆಸ್ಟ್​ಚಾಂಪಿಯನ್​​ಷಿಪ್​​ ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ಮಾಹಿತಿ - Vistara News

ಕ್ರಿಕೆಟ್

WTC Final 2023: ವಿಶ್ವ ಟೆಸ್ಟ್​ಚಾಂಪಿಯನ್​​ಷಿಪ್​​ ಭಾರತ ಗೆದ್ದರೆ ಸಿಗುವ ಬಹುಮಾನ ಎಷ್ಟು? ಇಲ್ಲಿದೆ ಮಾಹಿತಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಡಬ್ಲ್ಯುಟಿಸಿ ಫೈನಲ್ ವಿಜೇತರಿಗೆ ಟ್ರೋಫಿಯ ಜತೆಗೆ ಐಸಿಸಿಯಿಂದ ಭಾರಿ ಬಹುಮಾನದ ಮೊತ್ತವನ್ನು ನೀಡಲಾಗುವುದು.

VISTARANEWS.COM


on

What will be the reward if India wins the World Test Championship? Here's the information
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದುಬೈ: ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್​​ನ ದಿ ಓವಲ್​ ಸ್ಟೇಡಿಯಮ್​ನಲ್ಲಿ ನಡೆಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದ ವಿಜೇತರು ಹಾಗೂ ರನ್ನರ್ ಅಪ್​​ ತಂಡಕ್ಕೆ ಬಹುಮಾನದ ಮೊತ್ತವನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಟ್ರೋಫಿ ಹಾಗೂ ಬಹುಮಾನ ಜತೆಗೆ ಎರಡೂ ತಂಡಗಳಿಗೆ ಪ್ರಮುಖ ಪ್ರೋತ್ಸಾಹ ಧನವನ್ನೂ ನೀಡುವುದಾಗಿ ಐಸಿಸಿ ಘೋಷಿಸಿದೆ. ಟ್ರೋಫಿ ಗೆದ್ದ ತಂಡಕ್ಕೆ 13,21,86,400 ರೂಪಾಯಿ (16 ಲಕ್ಷ ಡಾಲರ್​) ಹಾಗೂ ರನ್ನರ್​ ಅಪ್​ ತಂಡಕ್ಕೆ 6,60,96,000 ರೂಪಾಯಿ ಬಹುಮಾನ ಲಭಿಸಲಿದೆ. ಹೀಗಾಗಿ ಭಾರತ ತಂಡ ಗೆದ್ದರೆ 13 ಕೋಟಿ ರೂಪಾಯಿ ಬಹುಮಾನ ಪಡೆಯಲಿದ್ದು, ಸೋತರೂ 6.6 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್​ ನ್ಯೂಜಿಲ್ಯಾಂಡ್​ ತಂಡ 1.6 ಮಿಲಿಯನ್​ ಡಾಲರ್​ (ಬಹುತೇಕ 13 ಕೋಟಿ ರೂಪಾಯಿ) ಪಡೆದುಕೊಂಡಿತ್ತು. ಹಾಲಿ ಆವೃತ್ತಿಯ ಬಹುಮಾನ ಮೊತ್ತವೂ ಅಷ್ಟೇ ಪ್ರಮಾಣದಲ್ಲಿದ್ದು ಆಟಗಾರರ ಜೇಬಿಗೆ ದೊಡ್ಡ ಮೊತ್ತ ಸೇರಿಕೊಳ್ಳಲಿದೆ. ಅಂತೆಯೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ನಲ್ಲಿ ಮೂರನೇ ಸ್ಥಾಣ ಪಡೆದುಕೊಂಡಿರುವ ದಕ್ಷಿಣ ಆಫ್ರಿಕಾ 3,71,79,000 ರೂಪಾಯಿ (450,000 ಡಾಲರ್) ಗಳಿಸಿದೆ.

ಇದನ್ನೂ ಓದಿ : IPL 2023 : ಮೋದಿ ಸ್ಟೇಡಿಯಂ ಬಳಿ ಐಪಿಎಲ್​ ಟಿಕೆಟ್​ಗೆ ನೂಕುನುಗ್ಗಲು, ಕಾಲ್ತುಳಿತ; ಪೊಲೀಸರಿಂದ ಲಾಠಿ ಚಾರ್ಜ್​​

ಆಕ್ರಮಣಕಾರಿ ಆಟದ ಶೈಲಿಯೊಂದಿಗೆ ಎರಡು ವರ್ಷಗಳ ಕಾಲ ನಡೆದ ಟೂರ್ನಿಯಲ್ಲಿ ಕೊನೇ ಹಂತದಲ್ಲಿ ಚೇತರಿಸಿಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿರುವ ಇಂಗ್ಲೆಂಡ್​ ತಂಡಕ್ಕೆ 2,89,17,000 ರೂಪಾಯಿ ಬಹುಮಾನ ಲಭಿಸಿದೆ. ಐದನೇ ಸಾಲಿನಲ್ಲಿರುವ ಲಂಕಾ ತಂಡಕ್ಕೆ 1,65,23,900 ರೂಪಾಯಿ ಬಹುಮಾನ ದೊರಕಿದೆ.

ಹೊಸ ಕಿಟ್​ನಲ್ಲಿ ಆಡಲಿದೆ ಭಾರತ ತಂಡ

ಜೂನ್ 7ರಂದು ಇಂಗ್ಲೆಂಡ್​​ನ ಓವಲ್​ನಲ್ಲಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನ ಫೈನಲ್​ ಪಂದ್ಯ (WTC FInal 2023) ನಡೆಯಲಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ರೋಹಿತ್​ ಶರ್ಮಾ ನೇತೃತ್ವದ ಟೀಮ್​ ಇಂಡಿಯಾ ಪ್ರಶಸ್ತಿಗಾಗಿ ಸೆಣಸಾಡಲಿದೆ. ಏತನ್ಮಧ್ಯೆ, ಐಪಿಎಲ್​​ನಿಂದ ಹೊರಕ್ಕೆ ಬಿದ್ದಿರುವ ತಂಡಗಳಲ್ಲಿದ್ದ ಟೀಮ್​ ಇಂಡಿಯಾ (Team India) ಆಟಗಾರರು ಈಗಾಗಲೇ ಇಂಗ್ಲೆಂಡ್ ತಲುಪಿ ಅಭ್ಯಾಸ ಆರಂಭಿಸಿದ್ದಾರೆ. ಮೊದಲ ಶಿಬಿರದ ವೇಳೆ ಟೀಮ್​ ಇಂಡಿಯಾ ಆಟಗಾರರು ಬಿಸಿಸಿಐನ ಹೊಸ ಕಿಟ್​ನೊಂದಿಗೆ ಕಾಣಿಸಿಕೊಂಡಿದ್ದಾರೆ. ಅದು ಅಡಿಡಾಸ್​ ಸಂಸ್ಥೆಯ ಕಿಟ್​ ಅಗಿದೆ. ಈ ಚಿತ್ರವನ್ನು ಬಿಸಿಸಿಐ (BCCI) ತನ್ನ ಟ್ವಿಟರ್​ ಖಾತೆಯಲ್ಲಿ ಪ್ರಕಟಿಸಿದೆ.

Unveiling #TeamIndia’s new training kit 💙💙

Also, kickstarting our preparations for the #WTCFinal pic.twitter.com/iULctV8zL6— BCCI (@BCCI) May 25, 2023

ಆಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್ ಮತ್ತು ಉಮೇಶ್ ಯಾದವ್ ಸೇರಿದಂತೆ ಮೊದಲ ಬ್ಯಾಚ್​​ನ ಭಾರತೀಯ ಕ್ರಿಕೆಟಿಗರು ಹೆಡ್​ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದ ಭಾರತದ ಸಹಾಯಕ ಸಿಬ್ಬಂದಿಯ ಕಣ್ಗಾವಲಿನಲ್ಲಿ ಡಬ್ಲ್ಯುಟಿಸಿ ಫೈನಲ್​ಗೆ (WTC Final 2023) ಸಿದ್ಧತೆಗಳನ್ನು ಆರಂಭಿಸಿದ್ದಾರೆ. ಐಪಿಎಲ್ 2023 ಮುಗಿದ ಕೂಡಲೇ ನಾಯಕ ರೋಹಿತ್ ಶರ್ಮಾ, ಸ್ಟಾರ್ ಬ್ಯಾಟ್ಸ್​​ಮನ್​ ವಿರಾಟ್ ಕೊಹ್ಲಿ ಮತ್ತು ಇತರ ಕ್ರಿಕೆಟಿಗರು ಇಂಗ್ಲೆಂಡ್​​ಗೆ ಪ್ರವಾಸ ಬೆಳೆಸಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್​ಗೆ ಕೊಕ್​

T20 World Cup 2024: ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

VISTARANEWS.COM


on

T20 World Cup 2024
Koo

ಅಹಮದಾಬಾದ್​: ಕೆಲವು ದಿನಗಳಿಂದ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದ್ದ ಟಿ20 ವಿಶ್ವಕಪ್​ಗೆ(T20 World Cup 2024) ಟೀಮ್​ ಇಂಡಿಯಾ(Team India) ಪ್ರಕಟ ಯಾವಾಗ? ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮಂಗಳವಾರ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್​ ಅಗರ್ಕರ್(Ajit Agarkar)​ ಅವರು ಭಾರತ ತಂಡವನ್ನು ಪ್ರಕಟಿಸುವ ಮೂಲಕ ಸ್ಪಷ್ಟ ಉತ್ತರ ನೀಡಿದ್ದಾರೆ. ತಂಡವನ್ನು ರೋಹಿತ್​ ಶರ್ಮ ಮುನ್ನಡೆಸಲಿದ್ದಾರೆ. ಹಾರ್ದಿಕ್​ ಪಾಂಡ್ಯ ಉಪನಾಯನಾಗಿದ್ದಾರೆ. ಅಚ್ಚರಿ ಎಂದರೆ ಕನ್ನಡಿಗ ಕೆ.ಎಲ್​ ರಾಹುಲ್​ ಅವರಿಗೆ ಅವಕಾಶ ಸಿಕ್ಕಿಲ್ಲ.

ವಿಕೆಟ್ ಕೀಪರ್ ಆಯ್ಕೆ ಹಾಗೂ ಆಲ್ ರೌಂಡರ್ ಕುರಿತು ಹೆಚ್ಚಿನ ಚರ್ಚೆ ನಡೆದಿತ್ತು. ಇದೀಗ ಪಂತ್​ ಮತ್ತು ಸಂಜು ಸ್ಯಾಮ್ಸನ್​ ವಿಕೆಟ್​ ಕೀಪರ್​ ಆಗಿ ಆಯ್ಕೆಯಾಗಿದ್ದಾರೆ. ಆಲ್​ರೌಂಡರ್​ ಕೋಟದಲ್ಲಿ ಶಿವಂ ದುಬೆ, ಅಕ್ಷರ್​ ಪಟೇಲ್​, ರವೀಂದ್ರ ಜಡೇಜಾ ಮತ್ತು ಹಾರ್ದಿಕ್​ ಪಾಂಡ್ಯ ಕಾಣಿಸಿಕೊಂಡಿದ್ದಾರೆ. ಏಷ್ಯಾ ಕಪ್​ ಮತ್ತು ಏಕದಿನ ವಿಶ್ವಕಪ್​ನಲ್ಲಿ ಅವಕಾಶ ಸಿಗದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಅವಕಾಶ ಸಿಕ್ಕಿದೆ. ರಿಷಭ್​ ಪಂತ್​ ಅವರು ಮೊದಲ ಆಯ್ಕೆಯ ವಿಕೆಟ್​ ಕೀಪರ್​ ಆಗಿದ್ದರೆ, 2ನೇ ಕೀಪರ್ ಆಗಿ ಸಂಜು ಆಯ್ಕೆಯಾಗಿದ್ದಾರೆ.

ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲ 20 ತಂಡಗಳು ಕೂಡ ಮೇ 1ರ ಒಳಗಡೆ ಆಟಗಾರರ ಅಂತಿಮ ಪಟ್ಟಿ ರಚಿಸಿ ಐಸಿಸಿಗೆ ನೀಡಬೇಕಿತ್ತು. ಹೀಗಾಗಿ ಏಪ್ರಿಲ್​ 30ರಂದು ಹಾಲಿ ಚಾಂಪಿಯನ್​ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಭಾರತ ತನ್ನ ತಂಡವನ್ನು ಪ್ರಕಟಿಸಿತು. ಸೋಮವಾರ ನ್ಯೂಜಿಲ್ಯಾಂಡ್​ ತನ್ನ ತಂಡವನ್ನು ಪ್ರಕಟಿಸಿತ್ತು. ಮೇ 25 ರ ತನಕ ಐಸಿಸಿ ಅನುಮತಿ ಇಲ್ಲದೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆ ಬಳಿಕದ ಯಾವುದೇ ಬದಲಾವಣೆ ಮಾಡಬೇಕಿದ್ದರೆ ಐಸಿಸಿ ತಾಂತ್ರಿಕ ಸಮಿತಿಯ ಅನುಮತಿ ಅತ್ಯಗತ್ಯ. ಇದು ಕೂಡ ಆಟಗಾರರು ಗಾಯಗೊಂಡರೆ ಮಾತ್ರ ಬದಲಿ ಆಟಗಾರನ ಆಯ್ಕೆಯನ್ನು ಐಸಿಸಿ ಮಾನ್ಯ ಮಾಡುತ್ತದೆ.

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

ಭಾರತದ ಪಂದ್ಯಗಳು

ದಿನಾಂಕಎದುರಾಳಿಸ್ಥಳ
ಜೂನ್​ 5ಐರ್ಲೆಂಡ್​ನ್ಯೂಯಾರ್ಕ್​
ಜೂನ್​ 9ಪಾಕಿಸ್ತಾನನ್ಯೂಯಾರ್ಕ್​
ಜೂನ್​ 12ಅಮೆರಿಕನ್ಯೂಯಾರ್ಕ್
ಜೂನ್​ 15ಕೆನಡಾಫ್ಲೋರಿಡಾ

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ

T20 World Cup 2024: ಐಸಿಸಿ ಪುರುಷರ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಹಾಲಿ ಚಾಂಪಿಯನ್​ ಇಂಗ್ಲೆಂಡ್(England T20 World Cup squad)​ ಮತ್ತು ದಕ್ಷಿಣ ಆಫ್ರಿಕಾ(South Africa T20 World Cup squad) ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

VISTARANEWS.COM


on

T20 World Cup 2024
Koo

ಲಂಡನ್​/ಜೊಹಾನ್ಸ್​ಬರ್ಗ್​: ಅಮೆರಿಕಾ ಮತ್ತು ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಐಸಿಸಿ ಪುರುಷರ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಹಾಲಿ ಚಾಂಪಿಯನ್​ ಇಂಗ್ಲೆಂಡ್(England T20 World Cup squad)​ ಮತ್ತು ದಕ್ಷಿಣ ಆಫ್ರಿಕಾ(South Africa T20 World Cup squad) ಮಂಗಳವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮೊಣಕೈ ಗಾಯಕ್ಕೆ ತುತ್ತಾಗಿ ದೀರ್ಘಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದ ಮಾರಕ ವೇಗಿ ಜೋಫ್ರಾ ಆರ್ಚರ್​ ಇಂಗ್ಲೆಂಡ್​ ತಂಡ ಸೇರಿದ್ದಾರೆ.

ಆರ್ಚರ್​ ಅವರು 2019ರ ಏಕದಿನ ವಿಶ್ವಕಪ್​ ಬಳಿಕ ಗಾಯದ ಸಮಸ್ಯೆಗೆ ಸಿಲುಕಿದ್ದರು. ಕೆಲವು ಬಾರಿ ಚೇತರಿಕೆ ಕಂಡರೂ ಕೂಡ ಪದೇಪದೆ ಗಾಯಕ್ಕೀಡಾಗುತ್ತಲೇ ಇದ್ದರು. ಇದೇ ಕಾರಣದಿಂದ ಅವರು ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿಯೂ ಸ್ಥಾನ ಪಡೆಯಲು ವಿಫಲರಾಗಿದ್ದರು. ಆರ್ಚರ್​ ಕಳೆದ ಒಂದುವರೆ ವರ್ಷದಿಂದ ಇಂಗ್ಲೆಂಡ್​ ಪರ ಏಕದಿನ ಮತ್ತು ಟಿ20 ಆಡಿರಲಿಲ್ಲ. ಇದೀಗ ಟಿ20 ವಿಶ್ವಕಪ್​ ಮೂಲಕ ಮತ್ತೆ ಕಮ್​ಬ್ಯಾಕ್​ ಮಾಡಲಿದ್ದಾರೆ.

ಇಂಗ್ಲೆಂಡ್​ ತಂಡವನ್ನು ಜಾಸ್​ ಬಟ್ಲರ್​ ಮುನ್ನಡೆಸಲಿದ್ದಾರೆ. ಬೆನ್​ ಸ್ಟೋಕ್ಸ್​ ಟೂರ್ನಿಯಿಂದ ಹೊರಗುಳಿದಿದ್ದಾರೆ. ಬೆನ್ ಡಕೆಟ್ ಆಲ್ ರೌಂಡರ್ ಮೊಯಿನ್ ಅಲಿ ಕೂಡ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್​ ತಂಡ ಸ್ಕಾಟ್ಲೆಂಡ್​ ವಿರುದ್ಧ ಜೂನ್​ 4 ರಂದು ಆಡುವ ಮೂಲಕ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ T20 World Cup 2024: ಇಂದು ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಸಂಭಾವ್ಯ ತಂಡ ಹೀಗಿದೆ

ಇಂಗ್ಲೆಂಡ್​ ತಂಡ


ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.

ಬಲಿಷ್ಠ ತಂಡ ಪ್ರಕಟಿಸಿದ ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ಕೂಡ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ತಂಡವನ್ನು ಐಡೆನ್​ ಮಾರ್ಕ್ರಮ್​ ಮುನ್ನಡೆಸಲಿದ್ದಾರೆ. ದಕ್ಷಿಣ ಆಫ್ರಿಕಾ ಜೂನ್​ 3ರಂದು ನಡೆಯುವ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಶುರುಮಾಡಲಿದೆ. ಐಪಿಎಲ್​ನಲ್ಲಿ ವಿಸ್ಫೋಟಕ ಬ್ಯಾಟಿಂಗ್​ ಮೂಲಕಗ ಗಮನ ಸೆಳೆದಿರುವ ಹೆನ್ರಿಚ್​ ಕ್ಲಾಸೆನ್​, ಟ್ರಿಸ್ಟಾನ್ಸ್​ ಸ್ಟಬ್ಸ್​ ಸೇರಿ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿರುವ ಕ್ವಿಂಟನ್​ ಡಿಕಾಕ್​ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಬರ್ಗರ್​ ಮತ್ತು ಲುಂಗಿ ಎನ್​ಗಿಡಿ ಮೀಸಲು ಆಟಗಾರರಾಗಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ


ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಡ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಟುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನಾರ್ಜೆ, ಕಗಿಸೊ ರಬಾಡಾ, ರಿಯಾನ್ ರಿಕೆಲ್ಟನ್, ಟ್ರೀಸ್ಟಾನ್ ಸ್ಟಬ್ಸ್​, ತಬ್ರೈಜ್ ಶಂಸಿ. ಮೀಸಲು ಆಟಗಾರು: ಲುಂಗಿ ಎನ್​ಗಿಡಿ, ಬರ್ಗರ್.

ವಿಶ್ವಕಪ್​ಗೆ ಮುನ್ನ ಎಲ್ಲ 20 ತಂಡಗಳು ತಮ್ಮ ಆಗಮನಕ್ಕೆ ತಕ್ಕಂತೆ ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿವೆ ಎಂದು ಐಸಿಸಿ ತಿಳಿಸಿದೆ. ಟೂರ್ನಿಯ ಲೀಗ್​ ಮತ್ತು ಸೂಪರ್​ 8 ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇಲ್ಲ. ಈ ಪಂದ್ಯಗಳಿಗೆ ಮಳೆ ಬಂದು ಪಂದ್ಯ ರದ್ದಾದರೆ ಸಮಾನ ಅಂಕ ನೀಡಲಾಗುತ್ತದೆ. ಆದರೆ, ಸೆಮಿಫೈನಲ್​ ಮತ್ತು ಫೈನಲ್​ ಪಂದ್ಯಗಳಿಗೆ ಮೀಸಲು ದಿನ ಇರಲಿದೆ. ಒಂದೊಮ್ಮೆ ಸೆಮಿ ಮತ್ತು ಫೈನಲ್​ ಫೈನಲ್​ ಪಂದ್ಯಗಳು ಕೂಡ ಮೀಸಲು ದಿನವೂ ನಡೆಯದಿದ್ದರೆ ಆಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡಕ್ಕೆ ಲಾಭ ಸಿಗಲಿದೆ.

Continue Reading

ಕ್ರೀಡೆ

Rohit Sharma Birthday: ಬೌಲರ್​ ಆಗಿದ್ದ ರೋಹಿತ್​ ಹಿಟ್​ಮ್ಯಾನ್​ ಆಗಿದ್ದೇಗೆ?; ಕ್ರಿಕೆಟ್​ ಜರ್ನಿಯೇ ರೋಚಕ

Rohit Sharma Birthday: ಏಕದಿನ ಕ್ರಿಕೆಟ್​ನಲ್ಲಿ ಒಂದು ದ್ವಿಶತಕ ಬಾರಿಸುವುದೇ ಬಹಳ ಕಷ್ಟ. ಹೀಗಿರುವಾಗ ರೋಹಿತ್​ ಬರೋಬ್ಬರಿ ಮೂರು ದ್ವಿಶತಕ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್​ ಎನ್ನುವ ಹಿರಿಮೆಯೂ ಇವರದ್ದಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿಯೂ ಒಂದು ದ್ವಿಶತಕ ಬಾರಿಸಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 472 ಪಂದ್ಯಗಳನ್ನಾಡಿ 18,820 ರನ್​ ಬಾರಿಸಿದ್ದಾರೆ. ಇದರಲ್ಲಿ 48 ಶತಕ ಒಳಗೊಂಡಿದೆ

VISTARANEWS.COM


on

Rohit Sharma Birthday
Koo

ಬೆಂಗಳೂರು: ಟೀಮ್​ ಇಂಡಿಯಾದ ನಾಯಕ ರೋಹಿತ್ ಶರ್ಮಾ(Rohit Sharma Birthday) ಅವರಿಗೆ ಇಂದು 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. 30 ಏಪ್ರಿಲ್ 1987ರಲ್ಲಿ ಜನಿಸಿದ ರೋಹಿತ್(Rohit Sharma)​ ಅವರ ಕ್ರಿಕೆಟ್​ ಜರ್ನಿಯೇ ಬಲು ರೋಚಕ. ಆರಂಭದಲ್ಲಿ ಬೌಲರ್​ ಆಗಿ ತಂಡ ಸೇರಿದ ಅವರು ಮಧ್ಯಮ ಕ್ರಮಾಂದಿಂದ ಆರಂಭಿಕ ಆಟಗಾರನಾಗಿ ಸಾಧನೆಯ ಶಿಖರವನ್ನೇರಿದರು. ಇವರ ಕ್ರಿಕೆಟ್​ ಜರ್ನಿಯ ಕುತೂಹಲಕಾರಿ ಸ್ಟೋರಿ ಇಂತಿದೆ.

ವಿಶ್ವಕಪ್​ನ ಶತಕ ವೀರ


ಪ್ರಸ್ತುತ ಟೀಮ್​ ಇಂಡಿಯಾದ ನಾಯಕನಾಗಿರುವ ರೋಹಿತ್​ ಶರ್ಮ ಒಂದೇ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ ಎಂಬ ಕೀರ್ತಿ ಹೊಂದಿದ್ದಾರೆ. ರೋಹಿತ್​ 2019ರಲ್ಲಿ ಲಂಡನ್​ನಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ 5 ಶತಕ ಬಾರಿಸಿದ್ದರು. ಈ ಮೂಲಕ ಲಂಕಾದ ಕುಮಾರ ಸಂಗಕ್ಕರ ಅವರ ಹೆಸರಿನಲ್ಲಿದ್ದ ದಾಖಲಯನ್ನು ಮುರಿದಿದ್ದರು. ರೋಹಿತ್​ 9 ಪಂದ್ಯಗಳನ್ನು ಆಡಿ ಒಟ್ಟು 648 ರನ್ ಗಳಿಸಿದ್ದರು. ವಿಶ್ವಕಪ್​ನಲ್ಲಿ ಒಟ್ಟು ರೋಹಿತ್​ 7 ಶತಕ ಬಾರಿಸಿದ್ದಾರೆ. 2015 ಮತ್ತು 2023ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ತಲಾ ಒಂದು ಶತಕ ಬಾರಿಸಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ನಲ್ಲಿ ಭಾರತ ಫೈನಲಲ್​ನಲ್ಲಿ ಸೋಲು ಕಂಡಿತ್ತು.​ ಸೋತರೂ ಕೂಡ ರೋಹಿತ್​ ನಾಯಕತ್ವದ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ಸೂಚಿಸಿತ್ತು.

ಬೌಲರ್​ ಆಗಿ ಕ್ರಿಕೆಟ್​ ಜರ್ನಿ ಆರಂಭ


ರೋಹಿತ್​ ಅವರ ಕ್ರಿಕೆಟ್​ ಜರ್ನಿ ಆರಂಭವಾಗಿದ್ದು ಆಫ್​ ಸ್ಪಿನ್ನರ್​ ಆಗಿ. 2007ರಲ್ಲಿ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅದೇ ವರ್ಷ ನಡೆದ ಐಸಿಸಿ T20 ವಿಶ್ವಕಪ್​ನಲ್ಲಿ ಮೂರು ಪಂದ್ಯಗಳನ್ನು ಆಡಿದ್ದ ರೋಹಿತ್​ 88 ರನ್ ಬಾರಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಆರು ವರ್ಷಗಳ ಕಾಲ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಶಿಖರ್ ಧವನ್ ಅವರೊಂದಿಗೆ ಓಪನರ್​ ಆಗಿ ಆಡುವ ಅವಕಾಶವನ್ನು ಪಡೆದಿದ್ದರು. ಧೋನಿ ಅವರು ರೋಹಿತ್​ಗೆ ಆರಂಭಿಕ ಆಟಗಾರನಾಗಿ ಭಡ್ತಿ ನೀಡಿದ್ದರು. ಧೋನಿಯ ಈ ಒಂದು ನಿರ್ಧಾರ ರೋಹಿತ್​ ವೃತ್ತಿ ಜೀವನಕ್ಕೆ ಸಿಕ್ಕ ಮಹತ್ವದ ತಿರುವಾಯಿತು. ಈ ಟೂರ್ನಿಯಿಂದ ರೋಹಿತ್​ ಖಾಯಂ ಆರಂಭಿಕ ಆಟಗಾರನಾಗಿ ಸ್ಥಾನ ಪಡೆದರು.

ಇದನ್ನೂ ಓದಿ Rohit Sharma Birthday: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ಗೆ 37ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

3 ದ್ವಿಶತಕ


ಏಕದಿನ ಕ್ರಿಕೆಟ್​ನಲ್ಲಿ ಒಂದು ದ್ವಿಶತಕ ಬಾರಿಸುವುದೇ ಬಹಳ ಕಷ್ಟ. ಹೀಗಿರುವಾಗ ರೋಹಿತ್​ ಬರೋಬ್ಬರಿ ಮೂರು ದ್ವಿಶತಕ ಬಾರಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಏಕೈಕ ಬ್ಯಾಟರ್​ ಎನ್ನುವ ಹಿರಿಮೆಯೂ ಇವರದ್ದಾಗಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿಯೂ ಒಂದು ದ್ವಿಶತಕ ಬಾರಿಸಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 472 ಪಂದ್ಯಗಳನ್ನಾಡಿ 18,820 ರನ್​ ಬಾರಿಸಿದ್ದಾರೆ. ಇದರಲ್ಲಿ 48 ಶತಕ ಒಳಗೊಂಡಿದೆ. ಏಕದಿನ ಕ್ರಿಕೆಟ್​ನಲ್ಲಿ ಸಚಿನ್ ತೆಂಡೂಲ್ಕರ್ (18426), ರಾಹುಲ್ ದ್ರಾವಿಡ್ (10,768), ಸೌರವ್ ಗಂಗೂಲಿ (11,221), ವಿರಾಟ್ ಕೊಹ್ಲಿ (13848) ಮತ್ತು ಎಂಎಸ್ ಧೋನಿ (10599) ನಂತರ ಅತಿ ಹೆಚ್ಚು ರನ್ ಗಳಿಸಿದ ಆರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಕ್ರಿಕೆಟ್ ಸಾಧನೆಗೆ 2015ರಲ್ಲಿ ಅರ್ಜುನ ಪ್ರಶಸ್ತಿ, 2020ರಲ್ಲಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಗಳು ಲಭಿಸಿವೆ.

ಒಟ್ಟಾರೆ ಕ್ರಿಕೆಟ್​ ಸಾಧನೆ

ರೋಹಿತ್ ಶರ್ಮಾ ಈವರೆಗೆ 262 ಏಕದಿನ ಏಕದಿನ ಪಂದ್ಯಗಳ್ನನಾಡಿದ್ದಾರೆ. ಇದರಲ್ಲಿ 31 ಶತಕ, 3 ದ್ವಿಶತಕ ಮತ್ತು 55 ಅರ್ಧಶತಕ ಬಾರಿಸಿದ್ದಾರೆ. ಒಟ್ಟು 10709 ರನ್​ ಗಳಿಸಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 59 ಪಂದ್ಯಗಳಿಂದ 4138 ರನ್​ ಬಾರಿಸಿದ್ದಾರೆ. 12 ಶತಕ ,1 ದ್ವಿಶತಕ ಮತ್ತು 17 ಅರ್ಧಶತಕ ಒಳಗೊಂಡಿದೆ. ಟಿ20ಯಲ್ಲಿ 151 ಪಂದ್ಯ, 3974 ರನ್​, 5 ಶತಕ ಮತ್ತು 29 ಅರ್ಧಶತಕ ಬಾರಿಸಿದ್ದಾರೆ. ಐಪಿಎಲ್​ನಲ್ಲಿಯೂ ಉತ್ತಮ ಸಾಧನೆ ಮಾಡಿರುವ ರೋಹಿತ್​ ನಾಯಕನಾಗಿ ಮುಂಬೈ ತಂಡಕ್ಕೆ 5 ಬಾರಿ ಕಪ್​ ಗೆದ್ದಿದ್ದಾರೆ. 252 ಐಪಿಎಲ್​ ಪಂದ್ಯಗಳಿಂದ 6522 ರನ್​, 2 ಶತಕ ಮತ್ತು 42 ಅರ್ಧಶತಕ ಬಾರಿಸಿದ್ದಾರೆ.

Continue Reading

ಕ್ರೀಡೆ

IPL 2024: ಐಪಿಎಲ್​ನಲ್ಲಿ ವಿಶೇಷ ದಾಖಲೆ ಬರೆದ ಕುಲ್​ದೀಪ್, ನರೈನ್

IPL 2024: ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯಾದವ್(35*)​ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಅತ್ಯಧಿಕ ರನ್​ ಗಳಿಸಿದ 2ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾದರು. ಮಾಜಿ ಆಟಗಾರ ಹರ್ಭಜನ್​ ಸಿಂಗ್(49*)​ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

VISTARANEWS.COM


on

IPL 2024
Koo

ಕೋಲ್ಕತ್ತಾ: ಕೋಲ್ಕತ್ತಾ ನೈಟ್​ ರೇಡರ್ಸ್(Kolkata Knight Riders)​ ಮತ್ತು ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ನಡುವೆ ನಿನ್ನೆ(ಸೋಮವಾರ) ನಡೆದ ಐಪಿಎಲ್​ನ(IPL 2024) 37ನೇ ಲೀಗ್​ ಪಂದ್ಯದಲ್ಲಿ ಸುನೀಲ್​ ನರೈನ್​​(Sunil Narine) ಮತ್ತು ಕುಲ್​ದೀಪ್​ ಯಾದವ್(Kuldeep Yadav) ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಉಭಯ ಆಟಗಾರರ ದಾಖಲೆಯ ವಿವರ ಇಂತಿದೆ.

ಸುನೀಲ್​ ನಾರಾಯಣ್​ ಐಪಿಎಲ್​ನಲ್ಲಿ ಒಂದೇ ಕ್ರೀಡಾಂಗಣದಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡರು. ಈ ಮೂಲಕ ಲಸಿತ್ ಮಾಲಿಂಗ ಅವರ ದಾಖಲೆ ಮುರಿದರು. ಮಾಲಿಂಗ ಮುಂಬಯಿಯ ವಾಂಖೆಡೆ ಸ್ಟೇಡಿಯಂನಲ್ಲಿ 68 ವಿಕೆಟ್​ ಕಿತ್ತಿದ್ದಾರೆ. ನಾರಾಯಣ್​ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ನಲ್ಲಿ 69 ವಿಕೆಟ್​ ಕಿತ್ತು ಐಪಿಎಲ್​ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಒಂದೇ ಸ್ಟೇಡಿಯಂನಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಬೌಲರ್


ಸುನೀಲ್​ ನರೈನ್​-69 ವಿಕೆಟ್​ (ಈಡನ್​ ಗಾರ್ಡನ್ಸ್​
)

ಲಸಿತ್​ ಮಾಲಿಂಗ್​-68 ವಿಕೆಟ್​(ವಾಂಖೆಡೆ)

ಅಮಿತ್​ ಮಿಶ್ರಾ-58 ವಿಕೆಟ್​(ಫಿರೋಜ್ ಶಾ ಕೋಟ್ಲಾ)

ಯಜುವೇಂದ್ರ ಚಹಲ್​-52 ವಿಕೆಟ್​(ಬೆಂಗಳೂರು)

ಹರ್ಭಜನ್​ ಸಿಂಗ್​-49 ವಿಕೆಟ್​(ವಾಂಖೆಡೆ)

9ನೇ ಕ್ರಮಾಂಕದಲ್ಲಿ ಕುಲ್​ದೀಪ್ ದಾಖಲೆ​


ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಚೈನಾಮನ್​ ಖ್ಯಾತಿಯ ಸ್ಪಿನ್ನರ್​ ಕುಲ್​ದೀಪ್​ ಯಾದವ್(35*)​ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಿ ಅತ್ಯಧಿಕ ರನ್​ ಗಳಿಸಿದ 2ನೇ ಬ್ಯಾಟರ್​ ಎಂಬ ಕೀರ್ತಿಗೆ ಪಾತ್ರರಾದರು. ಮಾಜಿ ಆಟಗಾರ ಹರ್ಭಜನ್​ ಸಿಂಗ್(49*)​ ಈ ದಾಖಲೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ LSG vs MI: ಫಿಟ್​ ಆದ ಶರವೇಗದ ಎಸೆತಗಾರ ಮಾಯಾಂಕ್‌ ಯಾದವ್‌; ಮುಂಬೈ ವಿರುದ್ಧ ಕಣಕ್ಕೆ

ಗಂಗೂಲಿಯ ಐಪಿಎಲ್​ ದಾಖಲೆ ಮುರಿದ ಫಿಲ್​ ಸಾಲ್ಟ್

ಡೆಲ್ಲಿ ಕ್ಯಾಟಪಿಲ್ಸ್​ ವಿರುದ್ಧ ಪ್ರಚಂಡ ಬ್ಯಾಟಿಂಗ್​ ನಡೆಸಿ ಗಮನಸೆಳೆದ ಕೆಕೆಆರ್(​KKR vs DC) ತಂಡದ ಆರಂಭಿಕ ಆಟಗಾರ ಫಿಲ್​ ಸಾಲ್ಟ್(Phil Salt)​ ಅವರು ಮಾಜಿ ಆಟಗಾರ ದಾದಾ ಖ್ಯಾತಿಯ ಸೌರವ್ ಗಂಗೂಲಿಯ(Sourav Ganguly) ಐಪಿಎಲ್​(IPL 2024) ದಾಖಲೆಯೊಂದನ್ನು ಮುರಿದರು.

ಫಿಲ್ ಸಾಲ್ಟ್​ ಅವರು ಅರ್ಧಶತಕ ಬಾರಿಸುವ ಮೂಲಕ ಐಪಿಎಲ್​ ಆವೃತ್ತಿಯೊಂದರಲ್ಲಿ ಕೆಕೆಆರ್​ ಪರ ಈಡನ್ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ಅತಿ ಹೆಚ್ಚು ರನ್​ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. ಈ ಮೂಲಕ ಸೌರವ್​ ಗಂಗೂಲಿಯ ದಾಖಲೆಯನ್ನು ಮುರಿದರು. ಗಂಗೂಲಿ 2010ರ ಆವೃತ್ತಿಯಲ್ಲಿ 7 ಇನಿಂಗ್ಸ್​ ಆಡಿ 331 ರನ್​ ಬಾರಿಸಿದ್ದರು. ಆದರೆ ಫಿಲ್​ ಸಾಲ್ಟ್​ ಕೇವಲ 6 ಇನಿಂಗ್ಸ್​ಗಳಿಂದ 344* ರನ್​ ಕಲೆಹಾಕುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದರು. ಆ್ಯಂಡ್ರೆ ರಸೆಲ್​ ಮೂರನೇ ಸ್ಥಾನದಲ್ಲಿದ್ದಾರೆ. ರಸೆಲ್​ 2019ರಲ್ಲಿ 7 ಇನಿಂಗ್ಸ್​ ನಿಂದ 311 ರನ್​ ಬಾರಿಸಿದ್ದೆರು.

ಫಿಲ್​ ಸಾಲ್ಟ್​-344* ರನ್​, 6* ಇನಿಂಗ್ಸ್​

ಸೌರವ್​ ಗಂಗೂಲಿ-331 ರನ್​, 7 ಇನಿಂಗ್ಸ್​

ಆ್ಯಂಡ್ರೆ ರಸೆಲ್​- 311 ರನ್​, 7 ಇನಿಂಗ್ಸ್​

ಕ್ರಿಸ್​ ಲೀನ್​-303 ರನ್​, 9 ಇನಿಂಗ್ಸ್​

ಕೆಕೆಆರ್​ಗೆ 7 ವಿಕೆಟ್​ ಜಯ

ಈಡನ್​ ಗಾರ್ಡನ್ಸ್​ನಲ್ಲಿ ಸೋಮವಾರ ರಾತ್ರಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ​ ನಾಟಕೀಯ ಕುಸಿತ ಕಂಡು ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 153 ರನ್​ ಬಾರಿಸಿತು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders) 16.3​ ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು 157 ರನ್​ ಬಾರಿಸಿ ಗೆಲುವಿನ ನಗೆ ಬೀರಿತು. ಇದು ಕೆಕೆಆರ್​ಗೆ 9ನೇ ಪಂದ್ಯದಲ್ಲಿ ಒಲಿದ 6ನೇ ಗೆಲುವಾಗಿದೆ. ಸದ್ಯ 12 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಕಾಣಿಸಿಕೊಂಡಿದೆ.

Continue Reading
Advertisement
jammu kashmir flash flood
ದೇಶ2 mins ago

Jammu Kashmir Flash Flood: ಜಮ್ಮ- ಕಾಶ್ಮೀರದಲ್ಲಿ ಭೂಕುಸಿತ, ಹಠಾತ್ ಪ್ರವಾಹ: 5 ಸಾವು

Love Jihad
ದೇಶ12 mins ago

‌Love Jihad: ಲವ್‌ ಜಿಹಾದ್‌ಗೆ ಮತ್ತೊಂದು ಬಲಿ? ಹೋಟೆಲ್ ರೂಮ್ ನಲ್ಲಿ ಹಿಂದೂ ಯುವತಿ ಶವ ಪತ್ತೆ; ಮುಸ್ಲಿಂ ಯುವಕ ಎಸ್ಕೇಪ್‌

T20 World Cup 2024
ಕ್ರಿಕೆಟ್13 mins ago

T20 World Cup 2024: ಟಿ20 ವಿಶ್ವಕಪ್​ಗೆ ಭಾರತ ತಂಡ ಪ್ರಕಟ; ಕನ್ನಡಿಗ ರಾಹುಲ್​ಗೆ ಕೊಕ್​

Hassan Pen Drive Case I gave video only to Devaraje Gowda says Karthik
ಹಾಸನ16 mins ago

Hassan Pen Drive Case: ನಾನು ವಿಡಿಯೊ ಕೊಟ್ಟಿದ್ದು ದೇವರಾಜೇಗೌಡರಿಗೆ ಮಾತ್ರ; ಅವರೇ ಲೀಕ್‌ ಮಾಡಿರಬೇಕು ಎಂದ ಕಾರ್ತಿಕ್!

Jai Shri Ram Slogan
ವಿದೇಶ33 mins ago

Jai Shri Ram Slogan: ಪ್ಯಾಲೆಸ್ತೇನ್ ವಿರುದ್ಧ ಜೈಶ್ರೀರಾಮ್ ಘೋಷಣೆ ಕೂಗಿದ ಇಸ್ರೇಲ್ ಬೆಂಬಲಿಗರು!

Amit Shah doctored video case
ದೇಶ47 mins ago

Amit Shah: ಅಮಿತ್‌ ಶಾ ತಿರುಚಿದ ವಿಡಿಯೋ ಪ್ರಕರಣ: ಆಪ್‌, ಕಾಂಗ್ರೆಸ್‌ ಪಕ್ಷದ ಮೂವರ ಬಂಧನ

National Commission for Women enters Prajwal Hassan Pen Drive Case Letter to DG to submit report within 3 days
ಕ್ರೈಂ47 mins ago

Hassan Pen Drive Case: ಪ್ರಜ್ವಲ್‌ ಕೇಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಎಂಟ್ರಿ; 3 ದಿನದಲ್ಲಿ ವರದಿ ಕೊಡಲು ಡಿಜಿಗೆ ಪತ್ರ

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಿದ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ

America Shootout
ವಿದೇಶ1 hour ago

America Shootout: ಅಮೆರಿಕದಲ್ಲಿ ಮತ್ತೆ ಶೂಟೌಟ್‌; 4 ಪೊಲೀಸರು ಬಲಿ

Hassan Pen Drive Case does not work as a discharge petal says DK Shivakumar
ರಾಜಕೀಯ2 hours ago

Hassan Pen Drive Case: ಪೆನ್‌ ಡ್ರೈವ್‌ ಹೊರ ಬಿಡುವ ಚಿಲ್ಲರೆ ಕೆಲಸ ಮಾಡಲ್ಲ; ಅಸೆಂಬ್ಲಿಗೆ ಬರುವಂತೆ ಎಚ್‌ಡಿಕೆಗೆ ಡಿಕೆಶಿ ಸವಾಲು

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for April 30 2024
ಭವಿಷ್ಯ11 hours ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20241 day ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20241 day ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Narendra Modi
Lok Sabha Election 20242 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20242 days ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20242 days ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20242 days ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest2 days ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

ಟ್ರೆಂಡಿಂಗ್‌