Wrestlers Protest: ದೇಶಕ್ಕಾಗಿ ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲಿರುವ ಕುಸ್ತಿಪಟುಗಳು - Vistara News

ಕ್ರೀಡೆ

Wrestlers Protest: ದೇಶಕ್ಕಾಗಿ ಗೆದ್ದ ಪದಕಗಳನ್ನು ಗಂಗಾ ನದಿಯಲ್ಲಿ ಎಸೆಯಲಿರುವ ಕುಸ್ತಿಪಟುಗಳು

ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ತಾವು ದೇಶಕ್ಕಾಗಿ ಗೆದ್ದ ಪದಕಗಳನ್ನು ಇಂದು(ಮಂಗಳವಾರ) ಹರಿದ್ವಾರದ ಗಂಗಾನದಿಯಲ್ಲಿ ಎಸೆಯುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VISTARANEWS.COM


on

wrestlers protest latest news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭಾನುವಾರ ಅತ್ಯಂತ ಅಮಾನುಷವಾಗಿ ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿತ್ತು. ಈ ಘಟನೆ ನಡೆದ ಬಳಿಕ ಕುಸ್ತಿಪಟುಗಳು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಮತ್ತು ತಾವು ದೇಶಕ್ಕಾಗಿ ಗೆದ್ದ ಪದಕಗಳನ್ನು ಇಂದು(ಮಂಗಳವಾರ) ಹರಿದ್ವಾರದ ಗಂಗಾನದಿಯಲ್ಲಿ ಎಸೆಯುವುದಾಗಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳು ಭಾನುವಾರ ಉದ್ಘಾಟನೆಯಾದ ಸಂಸತ್‌ನ ನೂತನ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯೋಜನೆ ರೂಪಿಸಿದ್ದರು. ಇದೇ ವೇಳೆ ಸಂಸತ್​ ಭವನಕ್ಕೆ ತೆರಳುವ ಸಿದ್ಧತೆಯಲ್ಲಿದ್ದ ಈ ಕುಸ್ತಿಪಟುಗಳನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ನೂಕು ನುಗ್ಗಲು ಉಂಟಾಯಿತು. ವಿನೇಶ್ ಫೋಗಟ್ ಮತ್ತು ಅವರ ಸೋದರಿ​ ಸಂಗೀತಾ ಫೋಗಟ್​​ ಒಬ್ಬರ ಮೇಲೊಬ್ಬರು ಬಿದ್ದರು. ಆದರೂ ಅವರನ್ನು ಅತ್ಯಂತ ಅಮಾನುಷವಾಗಿ ರಸೆಯಲ್ಲಿ ಎಳೆದಾಡಿ ಬಂಧಿಸಲಾಗಿತ್ತು. ಪೊಲೀಸರ ಈ ನಡೆಗೆ ಟೋಕೊಯೊ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​ ಚೋಪ್ರಾ ಸೇರಿ ದೇಶದ ಅಗ್ರಮಾನ್ಯ ಹಾಲಿ ಮತ್ತು ಮಾಜಿ ಕ್ರೀಡಾಪಟುಗಳು ಖಂಡನೆ ವ್ಯಕ್ತಪಡಿಸಿ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ Wrestlers Protest : ಕುಸ್ತಿಪಟುಗಳ ಬಂಧನದ ಬಗ್ಗೆ ಒಲಿಂಪಿಕ್‌ ಸ್ಟಾರ್‌ ನೀರಜ್​ ಚೋಪ್ರಾ ಹೇಳಿದ್ದೇನು?

ಈ ಎಲ್ಲ ಘಟನೆ ನಡೆದ ಬಳಿಕ ಮಹತ್ವದ ನಿರ್ಧಾರ ಕೈಗೊಂಡಿರುವ ಕುಸ್ತಿಪಟುಗಳು ಇಂದು(ಮಂಗಳವಾರ) ಸಂಜೆ 6 ಗಂಟೆಗೆ ಪದಕಗಳನ್ನು ಗಂಗಾನದಿಯಲ್ಲಿ ನದಿಯಲ್ಲಿ ವಿಸರ್ಜನೆ ಮಾಡುವುದಾಗಿ ತಿಳಿಸಿದ್ದಾರೆ. ಈ ಕುರಿತು ಟ್ವಿಟರ್​ನಲ್ಲಿ ವಿನೇಶ್​ ಫೋಗಟ್​, ಬಜರಂಗ್​ ಪೂನಿಯಾ ಮತ್ತು ಸಾಕ್ಷಿ ಮಲಿಕ್​ ಸುದೀರ್ಘ ಪತ್ರವನ್ನು ಪ್ರಕಟಿಸಿದ್ದಾರೆ. “ಪದಕಗಳನ್ನು ಇಂದು ಸಂಜೆ ಗಂಗಾ ನದಿಗೆ ಎಸೆದ ಬಳಿಕ ಇಂಡಿಯಾ ಗೇಟ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡಲಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Virat Kohli : ಕ್ರಿಕೆಟ್​ಬಜ್​ನಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗಿನ ಇತ್ತೀಚಿನ ಮಾತುಕತೆ ವೇಳೆ ಡೌಲ್ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಲಗೈ ಬ್ಯಾಟರ್ ಕೊಹ್ಲಿ ಬಗ್ಗೆ ಹಲವಾರು ಒಳ್ಳೆಯ ವಿಷಯಗಳನ್ನು ಹೇಳಿದ್ದರೂ, ಅವರ ಒಂದು ನಕಾರಾತ್ಮಕ ಹೇಳಿಕೆಯ ಪರಿಣಾಮವಾಗಿ ತಮ್ಮ ಜೀವಕ್ಕೆ ಬೆದರಿಕೆ ಬಂದಿತ್ತು ಎಂದು ಬಹಿರಂಗಪಡಿಸಿದರು.

VISTARANEWS.COM


on

Virat kohli
Koo

ಬೆಂಗಳೂರು: ವಿರಾಟ್ ಕೊಹ್ಲಿ (Virat Kohli) ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರು. ಅವರಿಗೆ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರುವುದು ಮುಖ್ಯವಾಗುತ್ತದೆ. ಆದಾಗ್ಯೂ ಅವರನ್ನು ಹೊಗಳಿದರೆ ಸಿಕ್ಕಾಪಟ್ಟೆ ಪ್ರೀತಿ ಸಿಗುವುದು ಖಾತರಿ. ಹಲವಾರು ಬಾರಿ ನೋಡಿದಂತೆ ವಿರಾಟ್​ ಕೊಹ್ಲಿಯ ಅಭಿಮಾನಿ ಬಳಗವು ಆಗಾಗ್ಗೆ ಅವರನ್ನು ಟೀಕಿಸಿರುವರ ನಿದ್ದೆಗೆಡಿಸಿದ್ದಾರೆ. ಇದೀಗ ಕೊಹ್ಲಿಯ ಅಭಿಮಾನಿಗಳಿಗೆ ಹೆದರಿದವರು ನ್ಯೂಜಿಲ್ಯಾಂಡ್​ ಮಾಜಿ ಆಟಗಾರ ಸೈಮನ್ ಡೌಲ್ಐ. ಪಿಎಲ್ 2024 ರ ಋತುವಿನಲ್ಲಿ ವಿರಾಟ್ ಕೊಹ್ಲಿ ಅವರ ಸ್ಟ್ರೈಕ್ ರೇಟ್ ಬಗ್ಗೆ ಅವರು ಹೇಳಿಕೆ ನೀಡಿದ್ದರು. ಅಲ್ಲಿಂದ ಅವರಿಗೆ ಕೊಹ್ಲಿ ಅಭಿಮಾನಿಗಳು ಸರಿಯಾಗಿ ನಿದ್ದೆ ಮಾಡಲೂ ಬಿಟ್ಟಿಲ್ಲ. ನ್ಯೂಜಿಲೆಂಡ್​​ನ ಮಾಜಿ ಕ್ರಿಕೆಟಿಗನಿಗೆ ಕೊಲೆ ಬೆದರಿಕೆಗಳನ್ನೂ ಹಾಕಿದ್ದಾರೆ.

ಕ್ರಿಕೆಟ್​ಬಜ್​ನಲ್ಲಿ ದಿನೇಶ್ ಕಾರ್ತಿಕ್ ಅವರೊಂದಿಗಿನ ಇತ್ತೀಚಿನ ಮಾತುಕತೆ ವೇಳೆ ಡೌಲ್ ತಮಗಾದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬಲಗೈ ಬ್ಯಾಟರ್ ಕೊಹ್ಲಿ ಬಗ್ಗೆ ಹಲವಾರು ಒಳ್ಳೆಯ ವಿಷಯಗಳನ್ನು ಹೇಳಿದ್ದರೂ, ಅವರ ಒಂದು ನಕಾರಾತ್ಮಕ ಹೇಳಿಕೆಯ ಪರಿಣಾಮವಾಗಿ ತಮ್ಮ ಜೀವಕ್ಕೆ ಬೆದರಿಕೆ ಬಂದಿತ್ತು ಎಂದು ಬಹಿರಂಗಪಡಿಸಿದರು.

ಇದನ್ನೂ ಓದಿ: IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

ವಿರಾಟ್​ ಕೊಹ್ಲಿ ತುಂಬಾ ಒಳ್ಳೆಯ ಆಟಗಾರ. ಅದು ಯಾವಾಗಲೂ ಅವರ ಸ್ಟ್ರೈಕ್​ರೇಟ್​ ಸುತ್ತ ನನ್ನ ವಿಚಾರಗಳು ಇದ್ದವು. ನಾನು ವಿರಾಟ್ ಕೊಹ್ಲಿ ಬಗ್ಗೆ ಸಾವಿರ ಉತ್ತಮ ವಿಷಯಗಳನ್ನು ಹೇಳಿದ್ದೇನೆ. ಆದರೆ ನಾನು ಸ್ಟ್ರೈಕ್​ ರೇಟ್​ ಬಗ್ಗೆ ಮಾತನಾಡಿದೆ. ಅದು ಸ್ವಲ್ಪ ನಕಾರಾತ್ಮಕವಾಗಿರಬಹುದು ಅಥವಾ ನಕಾರಾತ್ಮಕವಾಗಿದ್ದವು. ಅದಕ್ಕಾಗಿ ನನಗೆ ಕೊಲೆ ಬೆದರಿಕೆಗಳು ಬಂದವು ಎಂದು ಹೇಳಿದ್ದಾರೆ.

ವಿದೇಶಿ ಆಟಗಾರರ ಟೀಕೆ

ಕೊಹ್ಲಿಯ ಸ್ಟ್ರೈಕ್​ ರೇಟ್​ ಬಗ್ಗೆ ಟೀಕೆ ಸೈಮನ್ ಡೌಲ್​ ಅವರದ್ದೇ ಮೊದಲಲ್ಲ. ಹಲವಾರು ಭಾರತೀಯ ಕ್ರಿಕೆಟ್​ ದೈತ್ಯದು ಅವರ ಸ್ಟ್ರೈಕ್ ರೇಟ್ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರೆ. ಪಂದ್ಯದ ನಂತರದ ಸಂದರ್ಶನದಲ್ಲಿ, ವಿರಾಟ್ ಕೊಹ್ಲಿ ತಮ್ಮ ಟೀಕೆಗಳಿಗೆ ಉತ್ತರಿಸಿದ್ದರು. ಅದು ತಮ್ಮ ಆದ್ಯತೆ ಎಂದು ಹೇಳಿದ್ದರು.

“ಎಲ್ಲರೂ ನನ್ನ ಸ್ಟ್ರೈಕ್ ರೇಟ್ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ನಾನು ಸ್ಪಿನ್ ಬೌಲಿಂಗ್​ಗೆ ಸರಿಯಾಗಿ ಆಡದಿರುವ ಬಗ್ಗೆ (ಅಂಕಿಅಂಶಗಳು) ಮಾತನಾಡುತ್ತಾರೆ. ಆದರೆ ನನಗೆ ನನ್ನ ಕೆಲಸವನ್ನು ಮಾಡುವ ಬಗ್ಗೆ ಮಾತ್ರ ಯೋಚನೆಯಿದೆ. ಅವರು ಏನು ಬೇಕಾದರೂ ಮಾತನಾಡಬಹುದು. ಇದು ಈಗ ನನಗೆ ಒಂದು ರೀತಿಯ ಸ್ಮರಣೆಯಾಗಿದೆ ಎಂದು ಹೇಳಿದ್ದರು.

ಕೊಹ್ಲಿ ಈ ಋತುವಿನಲ್ಲಿ 15 ಇನಿಂಗ್ಸ್​ಗಳಿಂದ 154.70 ಸ್ಟ್ರೈಕ್ ರೇಟ್​​ನಲ್ಲಿ 741 ರನ್ ಗಳಿಸಿದ್ದದ್ದರು. ಅದಕ್ಕಾಗಿ ಅವರು ಆರೆಂಜ್ ಕ್ಯಾಪ್ ಪಡೆದಿದ್ದರು. ಪಂದ್ಯಾವಳಿಯ ಅವಧಿಯಲ್ಲಿ ಅವರು ಐದು ಅರ್ಧಶತಕಗಳೊಂದಿಗೆ 1 ಶತಕವನ್ನು ಬಾರಿಸಿದ್ದರು.

Continue Reading

ಕ್ರೀಡೆ

Rishabh Pant: ದೇವರ ಕೃಪೆಯಿಂದ ಮತ್ತೆ ಟೀಮ್​ ಇಂಡಿಯಾ ಜೆರ್ಸಿ ಧರಿಸುವಂತಾಯಿತು ಎಂದು ಭಾವುಕರಾದ ರಿಷಭ್​ ಪಂತ್

Rishabh Pant: ಬಿಸಿಸಿಐ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಂತ್​, ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ತಂಡವನ್ನು ಸೇರಿಕೊಂಡಿರುವುದು, ಮತ್ತೆ ಸಹ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದು, ಪರಸ್ಪರ ತಮಾಷೆ, ಸಂಭಾಷಣೆ, ನಿಜಕ್ಕೂ ಈ ಎಲ್ಲ ಕ್ಷಣಗಳನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

VISTARANEWS.COM


on

Rishabh Pant
Koo

ನ್ಯೂಯಾರ್ಕ್: 2022ರ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್​ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಗಾಯದಿಂದ ಚೇತರಿಸಿಕೊಂಡು ಇದೀಗ ಸುಮಾರು ಒಂದೂವರೆ ವರ್ಷದ ಬಳಿಕ ಟೀಮ್​ ಇಂಡಿಯಾ ಪರ ಆಡಲು ಸಜ್ಜಾಗಿರುವ ಪಂತ್​ ಅವರು ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ಈ ಕ್ಷಣವನ್ನು ತುಂಬಾ ಮಿಸ್ ಮಾಡಿಕೊಂಡಿದ್ದೆ. ಈಗ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ’ ಎಂದು ಹೇಳಿದ್ದಾರೆ.

ಈ ಬಾರಿಯ ಐಪಿಎಲ್​ ಮೂಲಕ ಪಂತ್​ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು. 14 ತಿಂಗಳ ಬಳಿಕ ಆಡಿದ್ದರೂ ಕೂಡ ಅವರ ಬ್ಯಾಟಿಂಗ್​ ಮತ್ತು ಕೀಪಿಂಗ್​ ಪ್ರದರ್ಶನದಲ್ಲಿ ಯಾವುದೇ ಸಮಸ್ಯೆ ಕಂಡುಬಂದಿರಲಿಲ್ಲ. ಹಿಂದಿನಂತೆ ತಮ್ಮ ಪ್ರದರ್ಶನ ತೋರಿದ್ದರು. ಆಡಿದ 13 ಪಂದ್ಯಗಳಿಂದ 446 ರನ್​ ಬಾರಿಸಿದ್ದರು. ಕೀಪಿಂಗ್​ ಕೂಡ ಉತ್ತಮ ಮಟ್ಟದಲ್ಲಿತ್ತು.

ಬಿಸಿಸಿಐ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪಂತ್​, ಭಾರತದ ಸಮವಸ್ತ್ರ ಧರಿಸಿ ಆಡುವುದೇ ವಿಭಿನ್ನ ಅನುಭವ. ತಂಡವನ್ನು ಸೇರಿಕೊಂಡಿರುವುದು, ಮತ್ತೆ ಸಹ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯವಾಗಿರುವುದು, ಪರಸ್ಪರ ತಮಾಷೆ, ಸಂಭಾಷಣೆ, ನಿಜಕ್ಕೂ ಈ ಎಲ್ಲ ಕ್ಷಣಗಳನ್ನು ಆನಂದಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ತಮ್ಮ ನಂಬಿಕೆ ಮತ್ತು ಕ್ರಿಕೆಟ್​ಗೆ ಮರಳುವ ದೃಢ ಸಂಕಲ್ಪದಿಂದ ಕಠಿಣ ವ್ಯಾಯಾಮ ನಡೆಸಿ ಕೇವಲ 14 ತಿಂಗಳಲ್ಲಿ ಸಂಪೂರ್ಣ ಫಿಟ್​ ಆಗಿ ಕ್ರಿಕೆಟ್​ಗೆ ಮರಳಿದ್ದರು. ಇದೇ ಛಲ ವಿಶ್ವಕಪ್​ ಗೆಲ್ಲುವಲ್ಲಿಯೂ ತಂಡಕ್ಕೆ ಇರಬೇಕು ಎನ್ನುವ ಅರ್ಥದಲ್ಲಿ ಪಂತ್​ ಅವರನ್ನು ಬಿಸಿಸಿಐ ಈ ವಿಡಿಯೊದಲ್ಲಿ ತೋರಿಸಿದೆ.

ಇದನ್ನೂ ಓದಿ Rishabh Pant Video Calls: ನ್ಯೂಯಾರ್ಕ್​ನಿಂದ ವಿಡಿಯೊ ಕಾಲ್​ ಮಾಡಿ ರಿಂಕು ಸಿಂಗ್​ಗೆ ಅಭಿನಂದಿಸಿದ ಪಂತ್​

ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್​ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ. ಭಾರತೀಯ ಕ್ರಿಕೆಟ್​ ಅಭಿಮಾನಿಗಳು ನೂತನ ಜೆರ್ಸಿ ತೊಟ್ಟು ತಂಡ ಕಪ್​ ಗೆಲ್ಲಲಿ ಎಂದು ಹಾರೈಸಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

IPL 2024 : ಜಿಯೋಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್​

IPL 2024: ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ.

VISTARANEWS.COM


on

IPL 2024
Koo

ಮುಂಬೈ: ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಆಗಿದ್ದ ಜಿಯೋಸಿನಿಮಾ, ಟಾಟಾ ಐಪಿಎಲ್‌-2024ರ (IPL 2024) ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆ ಸೃಷ್ಟಿಸಿದೆ. ಇದು ಟಾಟಾ ಐಪಿಎಲ್‌-2023ಕ್ಕೆ ಹೋಲಿಸಿದರೆ ಶೇ. 53ರಷ್ಟು ಹೆಚ್ಚಳವಾಗಿದೆ. ಜಿಯೋಸಿನಿಮಾ ಐಪಿಎಲ್​​ನಲ್ಲಿ ತನ್ನ ಎರಡನೇ ಋತುವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಈ ಪ್ಲಾಟ್ಫಾರ್ಮ್ 35,000 ಕೋಟಿಗೂ ಅಧಿಕ ನಿಮಿಷಗಳ ವೀಕ್ಷಣೆ ಸಮಯವನ್ನು ದಾಖಲಿಸಿದೆ.

ಮೊದಲ ದಿನದ ಅದ್ಭುತ ಆರಂಭದ ನಂತರ ತನ್ನ ವೀಕ್ಷಣೆಯ ಪ್ರಮಾಣವನ್ನು ಹೆಚ್ಚಿಸಿದ ಜಿಯೋಸಿನಿಮಾ, ತನ್ನ ವ್ಯಾಪ್ತಿಯನ್ನು ಶೇ. 38ಕ್ಕಿಂತ ಅಧಿಕವಾಗಿ ಬೆಳೆಸಿದ್ದು, 62 ಕೋಟಿಗೂ ಅಧಿಕ ವಿಕ್ಷಣೆಯೊಂದಿಗೆ ಮುಕ್ತಾಯಗೊಳಿಸಿದೆ. 12 ಭಾಷೆಯ ಫೀಡ್‌ಗಳು, 4ಕೆ ವೀಕ್ಷಣೆ, ಮಲ್ಟಿ-ಕ್ಯಾಮ್ ದೃಶ್ಯಗಳು ಮತ್ತು ಎಆರ್/ವಿಆರ್ ಮೂಲಕ ವರ್ಚುಯಲ್​ ಅನುಭವ ಮತ್ತು 360-ಡಿಗ್ರಿ ವೀಕ್ಷಣೆಯ ಅವಕಾಶ ನೀಡಿದ್ದರಿಂದ ಟಿವಿ ವೀಕ್ಷಕರು ಗಣನೀಯವಾಗಿ ವಿಸ್ತರಿಸಿದರು. ಕಳೆದ ಆವೃತ್ತಿಯಲ್ಲಿ ವೀಕ್ಷಣೆಯ ಸರಾಸರಿಯು 60 ನಿಮಿಷಗಳಾಗಿತ್ತು.

ಜಿಯೋಸಿನಿಮಾ 2024ರ ಆವೃತ್ತಿಯನ್ನು 11.3 ಕೋಟಿ ವೀಕ್ಷಕರು ಮೊದಲ ದಿನದಂದೇ ಲಾಗ್ಇನ್ ಆಗುವುದರೊಂದಿಗೆ ಶುಭಾರಂಭ ಮಾಡಿತ್ತು. ಐಪಿಎಲ್-2023ರ ಮೊದಲ ದಿನಕ್ಕೆ ಹೋಲಿಸಿದರೆ ಇದು ಶೇ.51ರಷ್ಟು ಹೆಚ್ಚಳ. ಜಿಯೋಸಿನಿಮಾ ತನ್ನ ಎರಡನೇ ಆವೃತ್ತಿಯನ್ನು ಡಿಜಿಟಲ್‌ನಲ್ಲಿ ಪ್ರಾರಂಭಿಸುತ್ತಿದ್ದಂತೆ ಟಾಟಾ ಐಪಿಎಲ್-2024ರ ಆರಂಭಿಕ ದಿನವು 59 ಕೋಟಿಗೂ ಹೆಚ್ಚು ವೀಡಿಯೊ ವೀಕ್ಷಣೆಗಳನ್ನು ಪ್ಲಾಟ್​ಫಾರ್ಮ್​​ನಲ್ಲಿ ದಾಖಲಿಸಿಕೊಂಡಿತು. ಅಂತಿಮವಾಗಿ ಇದು 660 ಕೋಟಿ ನಿಮಿಷಗಳ ವೀಕ್ಷಣೆ ಸಮಯ ದಾಖಲಿಸಿತು.

ಭಾರತದಲ್ಲಿ ಕ್ರೀಡಾಕೂಟಗಳನ್ನು ನೋಡುವ ವಿಧಾನವನ್ನು ಮರು ವ್ಯಾಖ್ಯಾನಿಸುವುದನ್ನು ಮುಂದುವರಿಸುವ ಭರವಸೆಯೊಂದಿಗೆ ನಾವು ಐಪಿಎಲ್-2024 ಆವೃತ್ತಿಯನ್ನು ಮುಕ್ತಾಯಗೊಳಿಸುತ್ತೇವೆ. ನಾವು ವರ್ಷದಿಂದ ವರ್ಷಕ್ಕೆ ಕಾಣುತ್ತಿರುವ ಬೆಳವಣಿಗೆಯು ನಮ್ಮ ವೀಕ್ಷಕ ಕೇಂದ್ರಿತ ಪ್ರಸಾರದ ಮೂಲಕ ಮೆಚ್ಚುಗೆ ಪಡೆದುಕೊಂಡಿದೆ ಎಂಬ ಭರವಸೆ ನಮಗೆ ನೀಡುತ್ತಿದೆ. ನಮ್ಮ ಪಾಲುದಾರರು, ಪ್ರಾಯೋಜಕರಿಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ” ಎಂದು ವಯಾಕಾಮ್18ರ ವಕ್ತಾರರು ಹೇಳಿದ್ದಾರೆ.

28 ಪ್ರಾಯೋಜಕರು

ಜಿಯೊ ಸಿನಿಮಾಗೆ ಆರಂಭಲ್ಲಿ ಬ್ರಾಂಡ್‌ಗಳಾದ ಡ್ರೀಮ್11, ಥಮ್ಸ್ ಅಪ್, ಪಾರ್ಲೆ ಪ್ರಾಡಕ್ಟ್ಸ್, ಬ್ರಿಟಾನಿಯಾ, ದಾಲ್ಮಿಯಾ ಸಿಮೆಂಟ್ಸ್ ಮತ್ತು ಎಚ್ಡಿಎಫ್​ಸಿ ಬ್ಯಾಂಕ್‌ನ ಪ್ರಾಯೋಜಕತ್ವ ಇತ್ತು. ಋತುವಿನ ಅಂತ್ಯದ ವೇಳೆಗೆ ಜಿಯೋಸಿನಿಮಾ ದಾಖಲೆಯ 28 ಪ್ರಾಯೋಜಕರು ಮತ್ತು 1400ಕ್ಕೂ ಹೆಚ್ಚು ಜಾಹೀರಾತುದಾರರನ್ನು ಹೊಂದಿತ್ತು.

ಇದನ್ನೂ ಓದಿ: Singapore Open: ದ್ವಿತೀಯ ಸುತ್ತಿಗೆ ಆಟ ಮುಗಿಸಿದ ಭಾರತದ ಪಿ.ವಿ.ಸಿಂಧು

ಅತ್ಯುತ್ತಮ ದರ್ಜೆಯ ಕ್ರೀಡಾ ವಿಷಯವನ್ನು ನೀಡುವ ಜಿಯೋಸಿನಿಮಾದ ಬದ್ಧತೆಯು ಪ್ಯಾರಿಸ್ ಒಲಿಂಪಿಕ್ ಗೇಮ್ಸ್-2024ರೊಂದಿಗೆ ಮುಂದುವರಿಯುತ್ತದೆ. ವೀಕ್ಷಕರು ಸಾವಿರಾರು ಗಂಟೆಗಳ ಲೈವ್ ಮತ್ತು ಬೇಡಿಕೆಯ ಕ್ರೀಡೆಯೊಂದಿಗೆ ಒಲಿಂಪಿಕ್ಸ್‌ನ ವರ್ಧಿತ ವೀಕ್ಷಣೆಯ ಅನುಭವವನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನಿರೀಕ್ಷಿಸಬಹುದು. ವಯಾಕಾಮ್18ರ ಪ್ಯಾರಿಸ್​ ಒಲಿಂಪಿಕ್ಸ್-2024ರ ಸಮಗ್ರ ಕವರೇಜ್, ಭಾರತದ ಅಭಿಮಾನಿಗಳು, ಒಲಿಂಪಿಕ್ಸ್‌ನಲ್ಲಿ ಭಾರತೀಯರು ನೋಡಲೇಬೇಕಾದ ಸ್ಪರ್ಧೆಗಳನ್ನು ವಿಕ್ಷಿಸಬಹುದು.

ವೀಕ್ಷಕರು ಜಿಯೋಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ. ತಾಜಾ ಸುದ್ದಿಗಳು, ಸ್ಕೋರ್, ವಿಡಿಯೋಗಳಿಗಾಗಿ ಅಭಿಮಾನಿಗಳು ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್, ಯುಟ್ಯೂಬ್ ಮತ್ತು ವ್ಯಾಟ್ಸ್ಆ್ಯಪ್ನಲ್ಲಿ ಜಿಯೋಸಿನಿಮಾ ಹಾಗೂ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಮತ್ತು ಯುಟ್ಯೂಬ್ನಲ್ಲಿ ಸ್ಪೋರ್ಟ್ಸ್18 ಅನ್ನು ಫಾಲೋ ಮಾಡಬಹುದು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ನಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಫೀಲ್ಡರ್​ಗಳಿವರು…

T20 World Cup 2024: ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು 16 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ 4 ಕ್ಯಾಚ್​ ಹಿಡಿದರೆ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

VISTARANEWS.COM


on

T20 World Cup 2024
Koo

ಬೆಂಗಳೂರು: ಕಳೆದ 8 ಆವೃತ್ತಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಅತ್ಯಧಿಕ ಕ್ಯಾಚ್​ ಹಿಡಿದ ಆಟಗಾರ(most catches in T20 World Cup) ಯಾರು? ಈ ಬಾರಿಯ ಟೂರ್ನಿಯಲ್ಲಿ ಯಾರಿಗೆಲ್ಲ ಮಾಜಿ ಆಟಗಾರರ ದಾಖಲೆಗಳನ್ನು ಮುರಿಯುವ ಅವಕಾಶವಿದೆ ಎನ್ನುವ ಸಂಪೂರ್ಣ ಮಾಹಿತಿ ಇಂತಿದೆ.

ಎಬಿ ಡಿವಿಲಿಯರ್ಸ್


ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆಟಗಾರ ಎಬಿ ಡಿವಿಲಿಯರ್ಸ್(AB de Villiers) ಅವರು ಇದುವರೆಗಿನ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕ್ಯಾಚ್​ ಪಡೆದ ದಾಖಲೆ ಹೊಂದಿದ್ದಾರೆ. 2007-2016 ತನಕ ವಿಶ್ವಕಪ್​ ಆಡಿದ ವಿಲಿಯರ್ಸ್, 30 ಪಂದ್ಯಗಳಿಂದ 23 ಕ್ಯಾಚ್​ ಹಿಡಿದಿದ್ದಾರೆ.


ಡೇವಿಡ್​ ವಾರ್ನರ್​


ವಿದಾಯದ ಟಿ20 ವಿಶ್ವಕಪ್​ ಆಡುತ್ತಿರುವ ಆಸ್ಟ್ರೇಲಿಯಾದ ಡೇವಿಡ್​ ವಾರ್ನರ್​(David Warner) ಈ ಯಾದಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. 34* ಪಂದ್ಯವನ್ನಾಡಿ 21* ಕ್ಯಾಚ್​ ಹಿಡಿದಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ 3 ಕ್ಯಾಚ್​ ಹಿಡಿದರೆ ಡಿವಿಲಿಯರ್ಸ್ ದಾಖಲೆ ಪತನಗೊಳ್ಳಲಿದೆ. ವಾರ್ನರ್​ ಈಗಾಗಲೇ ಏಕದಿನ ಮತ್ತು ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಇದನ್ನೂ ಓದಿ T20 World Cup 2024: ಒಂದೇ ಆವೃತ್ತಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್​ಗಳು ಯಾರು?


ಮಾರ್ಟಿನ್ ಗಪ್ಟಿಲ್


ನ್ಯೂಜಿಲ್ಯಾಂಡ್​ನ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್(Martin Guptill) ಅವರು ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಆಟಗಾರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 28 ಪಂದ್ಯಗಳಿಂದ 19 ಕ್ಯಾಚ್​ ಹಿಡಿದಿದ್ದಾರೆ. ಈ ಬಾರಿ ಅವರಿಗೆ ಆಡುವ ಅವಕಾಶ ಸಿಕ್ಕಿಲ್ಲ.


ರೋಹಿತ್​ ಶರ್ಮ


ಟೀಮ್​ ಇಂಡಿಯಾದ ನಾಯಕ, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮ(Rohit Sharma) ಅವರು 16 ಕ್ಯಾಚ್​ ಹಿಡಿದು ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಆವೃತ್ತಿಯಲ್ಲಿ 4 ಕ್ಯಾಚ್​ ಹಿಡಿದರೆ ಮಾರ್ಟಿನ್ ಗಪ್ಟಿಲ್ ದಾಖಲೆಯನ್ನು ಹಿಂದಿಕ್ಕಲಿದ್ದಾರೆ. ಚೊಚ್ಚಲ ಆವೃತ್ತಿಯಿಂದ ಇದುವರೆಗಿನ ಎಲ್ಲ ಆವೃತ್ತಿಯ ಟಿ20 ವಿಶ್ವಕಪ್​ ಆಡಿದ ಆಟಗಾರ ಎನ್ನುವ ಹಿರಿಮೆಯೂ ರೋಹಿತ್​ ಅವರದ್ದಾಗಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರು?


ಗ್ಲೆನ್​ ಮ್ಯಾಕ್ಸ್​ವೆಲ್​


ಆಸ್ಟ್ರೇಲಿಯಾದ ಬಿಗ್​ ಹಿಟ್ಟರ್​, ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ ಕೂಡ 16 ಕ್ಯಾಚ್​ ಹಿಡಿದು ರೋಹಿತ್​ ಶರ್ಮ ಜತೆ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ಬಾರಿಯೂ ಆಡುತ್ತಿರುವ ಕಾರಣ ಅವರ ಕ್ಯಾಚ್​ಗಳ ಸಂಖ್ಯೆ ಹೆಚ್ಚಿಸುವ ಅವಕಾಶವಿದೆ.


ಕೇನ್​ ವಿಲಿಯಮ್ಸನ್​


ನ್ಯೂಜಿಲ್ಯಾಂಡ್​ ತಂಡದ ನಾಯಕ ಕೇನ್​ ವಿಲಿಯಮ್ಸನ್(Kane Williamson)​ 2012-2022ರ ಅವಧಿಯಲ್ಲಿ 25 ಪಂದ್ಯಗಳಿಂದ 15 ಕ್ಯಾಚ್​ ಹಿಡಿದಿದ್ದಾರೆ. ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಅತ್ಯಧಿಕ ಕ್ಯಾಚ್​ ಹಿಡಿದ ಆಟಗಾರರ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನಿಯಾಗಿದ್ದಾರೆ. 2 ಕ್ಯಾಚ್​ ಹಿಡಿದರೆ ರೋಹಿತ್​ ಶರ್ಮ ಮತ್ತು ಗ್ಲೆನ್​ ಮ್ಯಾಕ್ಸ್​ವೆಲ್ ದಾಖಲೆ ಹಿಂದಿಕ್ಕಲಿದ್ದಾರೆ.

Continue Reading
Advertisement
3 Indian companies have featured in Time magazines list of 100 most influential companies in the world
ದೇಶ49 mins ago

Reliance Industries: ಟೈಮ್ ಮ್ಯಾಗಜೀನ್‌ನ ಜಗತ್ತಿನ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌

Murder News
ಪ್ರಮುಖ ಸುದ್ದಿ1 hour ago

Murder News : ಬಾಯ್​ಫ್ರೆಂಡ್​ ಜತೆ ಸೇರಿ ಅಪ್ಪ, ತಮ್ಮನನ್ನು ಕೊಂದು ಕತ್ತರಿಸಿ ಫ್ರಿಜ್​ನಲ್ಲಿಟ್ಟಿದ್ದ 16ರ ಬಾಲಕಿ

Reserve Bank of India
ದೇಶ2 hours ago

Reserve Bank of India : ಭಾರತದ ಬ್ಯಾಂಕ್​ಗಳಲ್ಲಿವೆ ವಾರಸುದಾರರಿಲ್ಲದ 78,213 ಕೋಟಿ ರೂಪಾಯಿ!

Modi Meditation
ದೇಶ2 hours ago

Modi Meditation: ಧ್ಯಾನ ಮಾಡುವ 45 ಗಂಟೆಯೂ ಆಹಾರ ಸೇವಿಸಲ್ಲ ಮೋದಿ; 2 ದಿನ ಪಾನೀಯವೇ ಆಹಾರ!

Virat kohli
ಕ್ರಿಕೆಟ್3 hours ago

Virat Kohli : ವಿರಾಟ್​ ಕೊಹ್ಲಿ ಟೀಕಿಸಿದ ನ್ಯೂಜಿಲ್ಯಾಂಡ್​ ಮಾಜಿ ಆಟಗಾರನಿಗೆ ಕೊಲೆ ಬೆದರಿಕೆ!

Hindu Janajagruthi Samithi demands declaration of Zakir Naik as international terrorist
ಬೆಂಗಳೂರು3 hours ago

Zakir Naik: ಜಾಕೀರ್ ನಾಯಕ್‌ನನ್ನು ಭಯೋತ್ಪಾದಕನೆಂದು ಘೋಷಿಸಿ; ಹಿಂದೂ ಜನಜಾಗೃತಿ ಸಮಿತಿ ಆಗ್ರಹ

Necessary Preparation for North East Graduate Constituency Election Voting says DC M S Diwakar
ವಿಜಯನಗರ3 hours ago

MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆಯ ಮತದಾನಕ್ಕೆ ಸಿದ್ಧತೆ: ಡಿಸಿ ಎಂ.ಎಸ್. ದಿವಾಕರ್‌

Viral Video
ವೈರಲ್ ನ್ಯೂಸ್3 hours ago

Viral Video: ಮುಂಬಯಿ ವಿಮಾನ ನಿಲ್ದಾಣದಲ್ಲಿ ಯುವತಿಯ ರೀಲ್ಸ್ ಹುಚ್ಚಾಟ; ಸಿಡಿದೆದ್ದ ನೆಟ್ಟಿಗರು

Muslim Personal Law
ಪ್ರಮುಖ ಸುದ್ದಿ4 hours ago

Muslim Personal Law : ಹಿಂದೂ- ಮುಸ್ಲಿಂ ಜೋಡಿಯ ಮದುವೆಗೆ ವೈಯಕ್ತಿಕ ಕಾನೂನಿನ ಮಾನ್ಯತೆ ಇಲ್ಲ ಎಂದ ಕೋರ್ಟ್​, ವಿವರಣೆ ಹೀಗಿದೆ

Prajwal Revanna Case
ಕರ್ನಾಟಕ4 hours ago

ಪ್ರಜ್ವಲ್‌ ರೇವಣ್ಣ ಭಾರತಕ್ಕೆ ಬರುವ ಮೊದಲೇ ಎಚ್‌ಡಿಕೆ ಅಂತರ; ಕಬಿನಿಯಲ್ಲಿ ಪತ್ನಿ ಜತೆ ಬೋಟಿಂಗ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ11 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌