Zerodha Zerodha founder Nikhil Kamath pledges to donate half of his assetsZerodha : ಅರ್ಧ ಆಸ್ತಿಯನ್ನೇ ದೇಣಿಗೆ ನೀಡಲು ಜೆರೋಧಾ ಸ್ಥಾಪಕ ನಿಖಿಲ್‌ ಕಾಮತ್‌ ವಾಗ್ದಾನ

ಪ್ರಮುಖ ಸುದ್ದಿ

Zerodha : ಅರ್ಧ ಆಸ್ತಿಯನ್ನೇ ದೇಣಿಗೆ ನೀಡಲು ಜೆರೋಧಾ ಸ್ಥಾಪಕ ನಿಖಿಲ್‌ ಕಾಮತ್‌ ವಾಗ್ದಾನ

Zerodha ಆನ್‌ಲೈನ್‌ ಬ್ರೋಕರೇಜ್‌ ವಲಯದ ಜೆರೋಧಾ ಕಂಪನಿಯ ಸ್ಥಾಪಕ ನಿಖಿಲ್‌ ಕಾಮತ್‌ ಅವರು ತಮ್ಮ ಒಟ್ಟು ಆಸ್ತಿಯಲ್ಲಿ 50% ಅನ್ನು ಸಮಾಜಸೇವೆಗೆ ದಾನ ನೀಡುವುದಾಗಿ ಘೋಷಿಸಿದ್ದಾರೆ. ವಿವರ ಇಲ್ಲಿದೆ.

VISTARANEWS.COM


on

nilhil kamant
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆನ್‌ಲೈನ್‌ ಬ್ರೋಕರೇಜ್‌ ಸಂಸ್ಥೆ ಜೆರೋಧಾ (Zerodha) ಸಹ ಸಂಸ್ಥಾಪಕ ನಿಖಿಲ್‌ ಕಾಮತ್‌ ಅವರು ಇತ್ತೀಚೆಗೆ ದಿ ಗಿವಿಂಗ್‌ ಪ್ಲೆಡ್ಜ್‌ (The Giving Pledge) ಸಂಘಟನೆಗೆ ಸೇರಿದ್ದಾರೆ. ಇದೊಂದು ಅಭಿಯಾನವಾಗಿದ್ದು, ತಮ್ಮ ಸಂಪತ್ತಿನ ಬಹುಪಾಲನ್ನು ಸಮಾಜ ಸೇವೆಗೆ ನೀಡುವ ವಾಗ್ದಾನ ನೀಡುವವರ ಪಡೆಯನ್ನೇ ಹೊಂದಿದೆ. ಬಿಲ್‌ ಗೇಟ್ಸ್‌, ವಾರೆನ್‌ ಬಫೆಟ್‌ 2010ರಲ್ಲಿ ಸ್ಥಾಪಿಸಿದ ಅಭಿಯಾನದಲ್ಲಿ ಹಲವಾರು ಗಣ್ಯರಿದ್ದಾರೆ. ಭಾರತದಿಂದ ಅಜೀಂ ಪ್ರೇಮ್‌ಜೀ, ಕಿರಣ್‌ ಮಜುಂದಾರ್‌ ಷಾ, ರೋಹಿಣಿ ಮತ್ತು ನಂದನ್‌ ನಿಲೇಕಣಿ ದಂಪತಿ ಇದ್ದಾರೆ. ನಾಲ್ಕನೆಯವರಾಗಿ ನಿಖಿಲ್‌ ಕಾಮತ್‌ ಸೇರಿದ್ದಾರೆ. ತಮ್ಮ ಸಂಪತ್ತಿನಲ್ಲಿ 50% ಅನ್ನು ದೇಣಿಗೆ ನೀಡಲಿದ್ದಾರೆ.

ನಿಖಿಲ್‌ ಕಾಮತ್‌ ಅವರು ಈ ಬಗ್ಗೆ ನೀಡಿರುವ ಹೇಳಿಕೆಯಲ್ಲಿ, ಗಿವಿಂಗ್‌ ಪ್ಲೆಡ್ಜ್‌ ಅಭಿಯಾನಕ್ಕೆ ಸೇರಿದ್ದಕ್ಕೆ ಸಾರ್ಥಕತೆಯ ಭಾವ ಉಂಟಾಗಿದೆ. ಯುವ ಉದ್ಯಮಿಯಾಗಿದ್ದರೂ, ಸಮಾಜದಲ್ಲಿ ಒಳಿತಿಗೋಸ್ಕರ ಏನಾದರೂ ಮಾಡುವ ಹಂಬಲ ಇದೆ. ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲು ಗಿವಿಂಗ್‌ ಪ್ಲೆಡ್ಜ್‌ ಅಭಿಯಾನ ಸಹಕರಿಸುವ ವಿಶ್ವಾಸ ಇಎ ಎಂದು ಹೇಳಿದ್ದಾರೆ.

ನಿಖಿಲ್‌ ಕಾಮತ್‌ ಅವರು ಸುಮಾರು ಎರಡು ದಶಕಗಳಿಂದ ಷೇರು ಮಾರುಕಟ್ಟೆಯಲ್ಲಿ ಸಕ್ರಿಯರಾಗಿದ್ದಾರೆ. 17ನೇ ವಯಸ್ಸಿನಲ್ಲಿಯೇ ಸ್ಟಾಕ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದರು. ಅವರ ಜೆರೋಧಾ ಆನ್‌ಲೈನ್‌ ಬ್ರೋಕರೇಜ್‌ ಸಂಸ್ಥೆ ಅಲ್ಪ ಕಾಲದಲ್ಲಿಯೇ ಭಾರಿ ಯಶಸ್ಸು ಗಳಿಸಿದೆ.

ದಿ ಗಿವಿಂಗ್‌ ಪ್ಲೆಡ್ಜ್‌ ಕಮ್ಯುನಿಟಿ ಕಾಮತ್‌ ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದೆ. ಈಗ 29 ದೇಶಗಳ 241 ದಾನಿಗಳು ಇದರಲ್ಲಿ ಇದ್ದಾರೆ. ನಿಖಿಲ್‌ ಕಾಮತ್‌ 3.45 ಶತಕೋಟಿ ಡಾಲರ್‌ (28,290 ಕೋಟಿ ರೂ.) ಹವಾಮಾನ ಬದಲಾವಣೆ, ಇಂಧನ, ಶಿಕ್ಷಣ ಮತ್ತು ಆರೋಗ್ಯ ವಲಯದಲ್ಲಿ ಈ ಅಭಿಯಾನದಲ್ಲಿ ವಿನಿಯೋಗಿಸಲಾಗುತ್ತದೆ. ನಿಖಿಲ್‌ ಕಾಮತ್‌ ಅವರು 2010ರಲ್ಲಿ ಜೆರೋಧಾವನ್ನು ಸ್ಥಾಪಿಸಿದರು.

ನಿತಿನ್‌ ಕಾಮತ್‌ ಮತ್ತು ನಿಖಿಲ್‌ ಕಾಮತ್‌ ಅವರು ಹವಾಮಾನ ಬದಲಾವಣೆಯ ವಿಚಾರದಲ್ಲಿ ನೀಡುತ್ತಿರುವ ಬೆಂಬಲ ಅಪಾರವಾಗಿದೆ ಎಂದು ಮೈಕ್ರೊಸಾಫ್ಟ್‌ ಸ್ಥಾಪಕ ಬಿಲ್‌ಗೇಟ್ಸ್‌ ಶ್ಲಾಘಿಸಿದ್ದರು. ಇತ್ತೀಚಿನ ಭಾರತ ಪ್ರವಾಸದ ವೇಳೆ ಬಿಲ್‌ ಗೇಟ್ಸ್‌ ಅವರು ಕಾಮತ್‌ ಸೋದರರನ್ನು ಭೇಟಿಯಾಗಿದ್ದರು. ಬ್ರೇಕ್‌ ಫಾಸ್ಟ್ ಮಾತುಕತೆ ನಡೆಸಿದ್ದರು. ಬಳಿಕ ಇದೀಗ ಟ್ವೀಟ್‌ ಮಾಡಿರುವ ಅವರು, ಭಾರತದಲ್ಲಿ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಹೆಸರಾಗಿರುವ ಯುವ ಉದ್ಯಮಿಗಳಾದ ನಿತಿನ್‌ ಮತ್ತು ನಿಖಿಲ್‌ ಕಾಮತ್‌ ಅವರಿಂದ ನಾನು ಪ್ರಭಾವಿತನಾಗಿರುವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Prajwal Revanna Case: ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ, ನಾಳೆ ಮಧ್ಯರಾತ್ರಿಯೇ ಪ್ರಜ್ವಲ್‌ ರೇವಣ್ಣ ವಶಕ್ಕೆ

Prajwal Revanna Case: ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ.

VISTARANEWS.COM


on

Prajwal Revanna case
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP ‌Prajwal Revanna Case) ಭಾರತಕ್ಕೆ ಬರುತ್ತಿದ್ದಂತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿಕೊಂಡಿರುವ ಎಸ್‌ಐಟಿ (SIT) ತಂಡ, ಏರ್‌ಪೋರ್ಟ್‌ನಲ್ಲಿಯೇ (Kempegowda International Airport – KIA) ಸದ್ಯ ಠಿಕಾಣಿ ಹಾಕಿದೆ.

ಶುಕ್ರವಾರ ಬೆಳಗ್ಗೆ 10.30ಕ್ಕೆ ಎಸ್‌ಐಟಿ ಮುಂದೆ ಬರುವುದಾಗಿ ಪ್ರಜ್ವಲ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ಅಷ್ಟರವರೆಗೂ ಕಾಯಲು ಎಸ್‌ಐಟಿ ಸಿದ್ದವಾಗಿಲ್ಲ. ಯಾಕೆಂದರೆ ಬರುವುದಾಗಿ ತಿಳಿಸಿ ಪ್ರಜ್ವಲ್‌ ದೇಶದೊಳಗೇ ತಲೆ ಮರೆಸಿಕೊಳ್ಳಬಹುದು ಎಂಬ ಆತಂಕವೂ ಇದೆ. ಹೀಗಾಗಿ ಅದಕ್ಕೂ ಮುನ್ನವೇ, ಅಂದರೆ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಲೇ ಆರೆಸ್ಟ್‌ ಮಾಡಲು ಎಸ್‌ಐಟಿ ಸಜ್ಜಾಗಿದೆ.

ನಾಳೆ ರಾತ್ರಿ 12.35ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದ ಟರ್ಮಿನಲ್-2ಗೆ ಜರ್ಮನಿಯಿಂದ ಬರಲಿರುವ ಲುಫ್ತಾನ್ಸಾ ವಿಮಾನದಲ್ಲಿ ಪ್ರಜ್ವಲ್‌ ಲ್ಯಾಂಡ್ ಆಗಲಿದ್ದಾರೆ ಎಂದು ಗೊತ್ತಾಗಿದೆ. ವಿಮಾನದಿಂದ ಇಳಿದ ಬಳಿಕ ಪ್ರಜ್ವಲ್‌ ಇಮಿಗ್ರೇಷನ್‌‌‌‌‌ ಡೆಸ್ಕ್‌‌ಗೆ ಬರಬೇಕು. ಪಾಸ್‌ಪೋರ್ಟ್‌ಗೆ ಸ್ಟಾಂಪ್‌‌‌ ಹಾಕಿಸಬೇಕು. ಈಗ ಲುಕೌಟ್‌ ನೋಟೀಸ್‌ ಇರುವುದರಿಂದ ಇಮಿಗ್ರೇಶನ್‌ ಅಧಿಕಾರಿಗಳು ಪ್ರಜ್ವಲ್‌ ಅವರನ್ನು ವಶಕ್ಕೆ ಪಡೆಯಲಿದ್ದಾರೆ. ಏರ್‌‌ಪೋರ್ಟ್‌ ಅಧಿಕಾರಿಗಳಿಂದ SITಗೆ ಪ್ರಜ್ವಲ್ ಹಸ್ತಾಂತರ ನಡೆಯಲಿದೆ.

ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಪ್ರಜ್ವಲ್‌ ಟಿಕೆಟ್ ಕಾಯ್ದಿರಿಸಿರುವುದರಿಂದ ಅಲರ್ಟ್ ಆಗಿರುವ ಎಸ್ಐಟಿ ತಂಡ, ಏರ್‌ಪೋರ್ಟ್‌ನಲ್ಲಿಯೇ ಠಿಕಾಣಿ ಹೂಡಿದೆ. ಎರಡು ಮೂರು ಬಾರಿ ಪ್ರಜ್ವಲ್‌ ಟಿಕೆಟ್ ಬುಕ್ ಮಾಡಿ‌ ಕೊನೆ ಗಳಿಗೆಯಲ್ಲಿ ಕ್ಯಾನ್ಸಲ್ ಮಾಡಿಕೊಂಡಿದ್ದರು. ಹಾಗಾಗಿ ಎಸ್ಐಟಿ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಏರ್ಪೋರ್ಟ್‌ನಲ್ಲಿ ಬೀಡು ಬಿಟ್ಟಿದ್ದಾರೆ. 31ರಂದು ಬರುದಾಗಿ ಹೇಳಿ ಒಂದು ದಿನ ಮುಂಚಿತವಾಗಿಯೇ ಬಂದ್ರೆ ಕಷ್ಟ ಎಂದು ಏರ್ಪೋರ್ಟ್‌ನಲ್ಲಿ ಎರಡೆರಡು ತಂಡಗಳು ಕಾಯುತ್ತಿವೆ.

ಬಂದ ಬಳಿಕ ಏನೇನು?

ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದ ಬಳಿಕ ಮೆಡಿಕಲ್ ಟೆಸ್ಟ್‌ ಮತ್ತಿತರ ಅಗತ್ಯ ವಿಧಿವಿಧಾನಗಳು ನಡೆಯಲಿವೆ. ನಂತರ ತನಿಖೆ ನಡೆಸಲು ಎಸ್ಐಟಿ ತಯಾರಿ ಮಾಡಿಕೊಳ್ಳುತ್ತಿದೆ. ಎರಡು ಕೋನಗಳಲ್ಲಿ ಪ್ರಜ್ವಲ್ ರೇವಣ್ಣರನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ತನಿಖೆ ವೇಳೆ ಪ್ರಜ್ವಲ್ ರೇವಣ್ಣ ಎರಡು ತರಹದ ಪ್ರತಿಕ್ರಿಯೆ ನೀಡುವ ಸಾಧ್ಯತೆಯಿದ್ದು, ತಪ್ಪು ಒಪ್ಪಿಕೊಳ್ಳಬಹುದು ಅಥವಾ ತಾನು ಮಾಡಿಯೇ ಇಲ್ಲ ಅನ್ನಬಹುದು. ಈ ಎರಡೂ ಆಯಾಮಗಳಲ್ಲೂ ಎಸ್‌ಐಟಿ ತನಿಖೆ ಮಾಡಬೇಕಿದೆ.

ಪ್ರಜ್ವಲ್ ರೇವಣ್ಣ ತಪ್ಪು ಒಪ್ಪಿಕೊಂಡರೆ ಎಸ್‌ಐಟಿ ಕೆಲಸ ಸರಾಗವಾಗಲಿದೆ. ಆರೋಪಿತನ ಹೇಳಿಕೆ ದಾಖಲಿಸಿಕೊಂಡು ಸ್ಥಳ ಮಹಜರು ಮಾಡಲಾಗುತ್ತದೆ. ಎಲ್ಲೆಲ್ಲಿ ಕೃತ್ಯ ಎಸಗಲಾಗಿದೆ ಎಂದು ಸಂತ್ರಸ್ತೆ ನೀಡಿರುವ ಹೇಳಿಕೆ ಆಧಾರದಲ್ಲಿ ಕರೆದೊಯ್ದು ಸ್ಥಳ ಮಹಜರು ಮಾಡುತ್ತಾರೆ. ಎಂಪಿ ಗೆಸ್ಟ್ ಹೌಸ್, ಹೊಳೆನರಸೀಪುರದ ಫಾರ್ಮ್ ಹೌಸ್ ಸೇರಿ ಹಲವೆಡೆ ಪರಿಶೀಲನೆ ನಡೆಸಲಿದ್ದಾರೆ.

ಪ್ರಜ್ವಲ್‌ ತಮ್ಮ ಮೇಲಿರುವ ಆರೋಪ ತಳ್ಳಿ ಹಾಕಿದರೆ ಸಂತ್ರಸ್ತೆ ಹೇಳಿಕೆ ಪ್ರಾಮುಖ್ಯತೆ ಪಡೆಯಲಿದೆ. ಆಕೆಯ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ನಡೆಯುತ್ತದೆ. ಈಗಾಗಲೇ ಸಂತ್ರಸ್ತೆ ಹೇಳಿಕೆ ದಾಖಲಿಸಿರುವ ಎಸ್ಐಟಿ, ಜೊತೆಗೆ ಸ್ಥಳ ಮಹಜರು ನಡೆಸಿ ಒಂದಷ್ಟು ಸಾಕ್ಷ್ಯಗಳನ್ನು ಕಲೆಹಾಕಿದೆ. ಇದರ ಜೊತೆಗೆ ಆರೋಪಿ ಹೇಳಿಕೆಯನ್ನೂ ದಾಖಲಿಸಿಕೊಂಡು ಚಾರ್ಜ್ ಶೀಟ್ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

Continue Reading

ಪ್ರಮುಖ ಸುದ್ದಿ

School Reopen: ಬನ್ನಿ ಮಕ್ಕಳೇ ಶಾಲೆಗೆ! ರಜೆ ಮುಗೀತು, ಇಂದಿನಿಂದ ಕ್ಲಾಸ್‌ ಶುರು

School Reopen: ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಿನ್ನೆಯೇ ನಡೆದಿದ್ದು, ಇವತ್ತು ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯ ಸ್ವಚ್ಛತಾ ಕಾರ್ಯವನ್ನು ಸಿಬ್ಬಂದಿಗಳು ಮಾಡಿದ್ದಾರೆ.

VISTARANEWS.COM


on

school reopen
Koo

ಬೆಂಗಳೂರು: ಬರೋಬ್ಬರಿ 40 ದಿನಗಳ ಬೇಸಿಗೆ ರಜೆಯ (Summer holidays) ಬಳಿಕ ಇಂದು ಮಕ್ಕಳು ಮತ್ತೆ ಶಾಲೆಯ (School reopen) ಮುಖ ಕಾಣುತ್ತಿದ್ದಾರೆ. ಇಷ್ಟು ದಿನ ರಜೆಯ ಮಜದಲ್ಲಿದ್ದ ಮಕ್ಕಳು ಇದೀಗ ಪುಸ್ತಕ, ಪೆನ್, ಬ್ಯಾಗ್ ರೆಡಿ ಮಾಡಿಕೊಂಡಿದ್ದು, ಇಂದು ಸ್ಕೂಲ್‌ ಕಾಂಪೌಂಡ್‌ ಒಳಗೆ ಮತ್ತೆ ಹೆಜ್ಜೆ ಹಾಕಲಿದ್ದಾರೆ.

ರಾಜ್ಯದ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ನಿನ್ನೆಯೇ ನಡೆದಿದ್ದು, ಇವತ್ತು ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯ ಸ್ವಚ್ಛತಾ ಕಾರ್ಯವನ್ನು ಸಿಬ್ಬಂದಿಗಳು ಮಾಡಿದ್ದಾರೆ. ಶೈಕ್ಷಣಿಕ ಮಾರ್ಗಸೂಚಿಯಂತೆ ಮಕ್ಕಳನ್ನು ಅದ್ಧೂರಿಯಾಗಿ ಸ್ವಾಗತಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ.

ಶಾಲಾ ಪ್ರಾರಂಭೋತ್ಸವದೊಂದಿಗೆ ಮೊದಲ ದಿನ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಬುಧವಾರ ಮತ್ತು ಗುರುವಾರ ಶಾಲೆಗಳಲ್ಲಿ ಪ್ರತಿಯೊಂದು ತರಗತಿ ಕೊಠಡಿ, ಹೊರಾಂಗಣ, ಬಿಸಿಯೂಟ ಕೊಠಡಿ, ಆಟದ ಮೈದಾನ, ಕಾಂಪೌಂಡ್ ಸೇರಿದಂತೆ ಇಡೀ ಶಾಲೆಯನ್ನು ಉತ್ತಮ ರೀತಿಯಲ್ಲಿ ಸ್ವಚ್ಚಗೊಳಿಸಬೇಕು. ಅಲ್ಲದೆ ತಳಿರು ತೋರಣ, ರಂಗೋಲಿ ಬಿಡಿಸಿ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಮುಖ್ಯ ಶಿಕ್ಷಕರುಗಳಿಗೆ ಶಿಕ್ಷಣ ಇಲಾಖೆ ಸೂಚಿಸಿದೆ.

ಮೇ 29ರಿಂದ 2024- 25ನೇ ಸಾಲಿನ ಶೈಕ್ಷಣಿಕ ತರಗತಿಗಳು ಆರಂಭವಾಗಲಿದೆ. ಸರಕಾರಿ ಶಾಲೆಗಳಲ್ಲಿ ಮೊದಲ ದಿನವೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿದ್ಯಾವಿಕಾಸ ಯೋಜನೆಯಡಿ 2024-25ನೇ ಸಾಲಿಗೆ ಎಲ್ಲಾ ವಿಭಾಗದ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಬಟ್ಟೆ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2024-25ನೇ ಸಾಲಿಗೆ ವಿದ್ಯಾವಿಕಾಸ ಯೋಜನೆಯಡಿ ರಾಜ್ಯದಲ್ಲಿನ ಎಲ್ಲಾ ಜಿಲ್ಲೆಗಳ 1 ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಎರಡು ಜೊತೆ ಉಚಿತ ಸಮವಸ್ತ್ರ ಬಟ್ಟೆಗಳ ಸರಬರಾಜು ಕಾರ್ಯಕ್ರಮವನ್ನು ಕೈಗೊಳ್ಳಲಾಗಿರುತ್ತದೆ.

ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. 2024-25ರ ಸಾಲಿನಲ್ಲಿ ಮೊದಲನೇ ಅವಧಿ ಮೇ 29 ಹಾಗೂ ಎರಡನೇ ಅವಧಿ ಅಕ್ಟೋಬರ್‌ 21ಕ್ಕೆ ಶುರುವಾಗಲಿದೆ. ಅಕ್ಟೋಬರ್‌ 3ರಿಂದ 20ರವರಗೆ ದಸರಾ ರಜೆಯನ್ನು ಘೋಷಣೆ ಮಾಡಲಾಗಿದೆ. ಏಪ್ರಿಲ್‌ 11ರಿಂದ ಬೇಸಿಗೆ ರಜೆ ಶುರುವಾಗಲಿದೆ.

ಮೊಬೈಲ್‌ನಿಂದ ದೂರವಿರಿ

ಇದರ ಜೊತೆಗೆ, ಶಾಲೆ ಆರಂಭದಲ್ಲಿಯೇ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡುವಂತೆ ಪೋಷಕರಿಗೆ ಮನವಿ ಮಾಡಿವೆ ಖಾಸಗಿ ಶಾಲೆ ಒಕ್ಕೂಟಗಳು. ಖಾಸಗಿ ಶಾಲಾ ಒಕ್ಕೂಟದಿಂದ ಪೋಷಕರಿಗೆ ಪತ್ರ ಬರೆಯಲಾಗಿದೆ. ಮಕ್ಕಳಲ್ಲಿ ಹೆಚ್ಚಾಗಿರುವ ಮೊಬೈಲ್ ಗೀಳಿನಿಂದ ಭವಿಷ್ಯ ಹಾಳು ಎಂದು ಪೋಷಕರು ಎಚ್ಚರಿಕೆ ವಹಿಸುವಂತೆ ಖಾಸಗಿ ಶಾಲಾ ಒಕ್ಕೂಟ ಮನವಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನಲ್ಲೆ ಮುಳುಗಿರುವ ಮಕ್ಕಳು ಸದಾ ಸಾಮಾಜಿಕ ಜಾಲತಾಣದಲ್ಲಿ ಹೈ ಆಕ್ಟಿವ್ ಆಗಿರುತ್ತಾರೆ. ಇದರಿಂದ ನಾನಾ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಮಕ್ಕಳ ಮೊಬೈಲ್ ಬಳಕೆ ಮಿತಗೊಳಿಸುವಂತೆ ಪೋಷಕರಿಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

Continue Reading

ಪ್ರಮುಖ ಸುದ್ದಿ

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

Prajwal Revanna Case: ಮಂಗಳವಾರ ಸತತ ಹತ್ತು ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ (FSL) ತಂಡಗಳು ಹಾಸನ ಸಂಸದನ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು. ಪ್ರಜ್ವಲ್‌ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ.

VISTARANEWS.COM


on

prajwal revanna case mattress
Koo

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal Revanna Case) ಭಾಗಿಯಾಗಿರುವ ಅಶ್ಲೀಲ ವಿಡಿಯೋ (Obscene video) ಹಾಗೂ ಲೈಂಗಿಕ ದೌರ್ಜನ್ಯ (Physical abuse) ಪ್ರಕರಣಕ್ಕೆ ಸಂಬಂಧಿಸಿ, ಒಂದೆಡೆ ತಾನು ಮೇ 31ರಂದು ಭಾರತಕ್ಕೆ ಬರುವುದನ್ನು ಪ್ರಜ್ವಲ್‌ ಖಚಿತಪಡಿಸಿದ್ದರೆ, ಇನ್ನೊಂದೆಡೆ ಸಂಸದನ ಮನೆಯಲ್ಲಿ ವಿಶೇಷ ತನಿಖಾ ತಂಡ (SIT) ಸಮಗ್ರ ತಪಾಸಣೆ ನಡೆಸಿದೆ.

ಮಂಗಳವಾರ ಸತತ ಹತ್ತು ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ (FSL) ತಂಡಗಳು ಹಾಸನ ಸಂಸದನ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು. ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಪರಿಶೀಲನೆ ಮುಗಿಸಿ ಬೆಳಗ್ಗೆ 4 ಗಂಟೆಗೆ ಹೊರಬಿದ್ದವು. ಪ್ರಜ್ವಲ್‌ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ.

ಹಾಸನ ಸಂಸದರು ತಮ್ಮ ಅಧಿಕೃತ ನಿವಾಸಕ್ಕೇ ಸಂರಸ್ತ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಅದನ್ನು ಸ್ವತಃ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಾಕ್ಷಿಗಳ ಸಂಗ್ರಹ ಮಹತ್ವ ಪಡೆದಿದೆ. ಈ ಹಾಸಿಗೆ ಹೊದಿಕೆಗಳ ಮೇಲಿರಬಹುದಾದ ಡಿಎನ್‌ಎ ಸಾಕ್ಷಿಗಳ ಸಂಗ್ರಹ ಹಾಗೂ ಪರಿಶೀಲನೆಗೆ ಎಫ್‌ಎಸ್‌ಎಲ್‌ ಮುಂದಾಗಲಿದೆ.

ಮೇ 31ಕ್ಕೆ ಪ್ರಜ್ವಲ್‌ ರೇವಣ್ಣ ಬರುವ ಹೇಳಿಕೆ ನೀಡಿದ ಬೆನ್ನಲ್ಲೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ, ಪೂರಕ ಸಾಕ್ಷಿ ಕಲೆಹಾಕಲು ಮುಂದಾಗಿದೆ. ಹಾಸನದಲ್ಲಿರುವ ಸಂಸದರ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕೊಂಡೊಯ್ದಿದೆ. ಇದಕ್ಕಾಗಿ ನಿನ್ನೆ ಇಡೀ ತಪಶೀಲು ನಡೆಸಿದ ತಂಡ, ಹಾಸನ ನಗರ ಠಾಣೆ ಪೊಲೀಸರ ಸಹಾಯ ಪಡೆಯಿತು.‌

ಹೊಳೆನರಸೀಪುರದಲ್ಲೂ ಶೋಧ

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಬೆನ್ನಲ್ಲೆ ಹೊಳೆನರಸೀಪುರಕ್ಕೂ ಎಸ್ಐಟಿ ತಂಡ ಬಂದಿದೆ. ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಮನೆಗೆ ಮತ್ತೆ ಬಂದ ಎಸ್ಐಟಿ ತಂಡ, ರೇವಣ್ಣ ಮನೆಯಲ್ಲಿ ಶೋಧ ನಡೆಸಿದೆ. ಗನ್ನಿಕಡ ತೋಟದ ಮನೆಯಲ್ಲೂ ಸ್ಥಳ ಮಹಜರ್ ನಡೆಸುತ್ತಿದೆ. ಒಟ್ಟು ಮೂರು ಕಡೆಗಳಲ್ಲಿ ಎಸ್ಐಟಿ ತಂಡಗಳಿಂದ ಏಕಕಾಲಕ್ಕೆ ಮಹಜರ್ ನಡೆದಿದೆ.‌

ಟಿಕೆಟ್‌ ಬುಕ್‌ ಮಾಡಿದ ಪ್ರಜ್ವಲ್‌ ರೇವಣ್ಣ

ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ವಾಪಸ್​ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್​ ಟಿಕೆಟ್​ ಬುಕ್ ಮಾಡಿದ ವಿವರ ‘ವಿಸ್ತಾರನ್ಯೂಸ್​’ಗೆ ಲಭ್ಯವಾಗಿದೆ. ಪ್ರಕರಣದ ತನಿಖೆ ನಡೆಸುವ ಎಸ್​ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್​ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಟಿಕೆಟ್​ ಬುಕ್​ ಮಾಡಿಕೊಂಡಿದ್ದು ಅಲ್ಲಿಂದಲೇ ಅವರನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ.

ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ. ಎಸ್​ಐಟಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವುದಕ್ಕಿಂತ ಮೊದಲೇ ಅವರು ಭಾರತದಿಂದ ಹೊರಟ್ಟಿದ್ದರು. ಪ್ರಕರಣ ಕಾವು ಪಡೆದು ಪ್ರತಿಭಟನೆ ಹಾಗೂ ಧರಣಿಗಳು ನಡೆಯುವ ಸಂದರ್ಭದಲ್ಲಿ ದೇಶದಿಂದ ದೂರವಿದ್ದರು. ಎಸ್​ಐಟಿ ಪೊಲೀಸರು ಪ್ರಜ್ವಲ್​ ವಶಕ್ಕೆ ಪಡೆಯಲು ನಾನಾ ರಾಜತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕಾಯಬೇಕಾಯಿತು. ಅಂತಿಮವಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರ ಒತ್ತಾಯ ಹಾಗೂ ತಮಗೆ ಹಾಜರಾಗಲು ನೀಡಿದ ನೋಟಿಸ್​ನ ಗಡುವು ಮುಗಿದ ಕಾರಣ ಜರ್ಮನಿಯಿಂದ ಬರಲಿದ್ದಾರೆ.

ಇದನ್ನೂ ಓದಿ: Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

Continue Reading

ಪರಿಸರ

Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ (wildlife sanctuaries) ಅನುಭವಗಳನ್ನು ನೀಡುತ್ತವೆ

VISTARANEWS.COM


on

Wildlife Sanctuaries
Koo

ಮಳೆಗಾಲ ಮತ್ತು ಕಾಡು! ಪ್ರಕೃತಿ ಪ್ರಿಯರ ಅತ್ಯಂತ ಇಷ್ಟದ ಕಾಂಬಿನೇಷನ್‌ ಇದು. ಮಳೆಗಾಲದಲ್ಲೊಮ್ಮೆ ಕಾಡಿಗೆ ಕರೆದರೆ ಯಾವ ಪ್ರಕೃತಿಪ್ರೇಮಿ ಬೇಡ ಅನ್ನಲಾರ ಹೇಳಿ? ವನ್ಯಜೀವಿ ಪ್ರಿಯರ, ಪ್ರಕೃತಿಪ್ರಿಯರ ಈ ಆಸೆಗೆ ತಣ್ಣೀರೆರಚುವಂತೆ ಮಳೆಗಾಲ ಬಂದ ತಕ್ಷಣ ರಾಷ್ಟ್ರೀಯ ಉದ್ಯಾನ/ವನ್ಯಜೀವಿಧಾಮಗಳೆಲ್ಲ ಬಾಗಿಲು ಮುಚ್ಚುತ್ತವೆ. ಕಾಡಿನ ಮದ್ಯದಲ್ಲಿ ಸಫಾರಿ ಹೋಗಲು, ವನ್ಯಜೀವಿಗಳ ಬೆನ್ನು ಹತ್ತಲು ಯಾರಿಗೂ ಆಸ್ಪದವಿಲ್ಲ. ಆದರೂ, ಪ್ರಕೃತಿ ಪ್ರಿಯರೆಲ್ಲ ಇಂತಹ ರಾಷ್ಟ್ರೀಯ ಉದ್ಯಾನ/ ವನ್ಯಜೀವಿಧಾಮಗಳು ಮುಚ್ಚಿಕೊಳ್ಳುವ ಕೆಲವೇ ದಿನಗಳ ಮುಂಚಿತವಾಗಿ ಅಲ್ಲಿಗೆ ಭೇಟಿ ಕೊಡಬೇಕು. ಮಳೆಗಾಲ ಈಗಷ್ಟೇ ಶುರುವಾದ ವನ್ಯಜೀವಿಧಾಮದಲ್ಲಿ ತಿರುಗಾಡಿ ಬರುವುದೇ ಹಬ್ಬ. ಒಂದೆರಡು ಮಳೆ ಸುರಿದು ಕಾಡೆಲ್ಲ ಕಳೆಕಳೆಯಾಗಿ ಹಸಿರಾಗಿ ಚಿಗಿತುಕೊಂಡು ಅದ್ಭುತ ದೃಶ್ಯಗಳನ್ನು ನಿಮಗೆ ನೀಡುವ ಜೊತೆಗೆ ರೋಮಾಂಚಕ ಅನುಭವಗಳನ್ನು ನೀಡುತ್ತವೆ. ಬನ್ನಿ, ಯಾವೆಲ್ಲ ರಾಷ್ಟ್ರೀಯ ಉದ್ಯಾನಗಳನ್ನು ಮಳೆಗಾಲಕ್ಕೆ ಸ್ವಲ್ಪವೇ ಮುನ್ನ ನೀವು ನೋಡುವುದೇ ಒಂದು ಅನುಭವ (wildlife sanctuaries) ಎಂಬುದನ್ನು ತಿಳಿಯೋಣ ಬನ್ನಿ.

Jim Corbett National Park, Uttarakhand

ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನ, ಉತ್ತರಾಖಂಡ

ಉತ್ತರಾಖಂಡದ ಬಹು ಪ್ರಸಿದ್ಧ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಹಳೆಯ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳನ್ನು ಕಾಣಲು ಇದು ಪ್ರಶಸ್ತ ಜಾಗ. ಜೂನ್‌ ಮದ್ಯದಲ್ಲಿ ಇದು ಮುಚ್ಚಿದರೆ ಮತ್ತೆ ತೆರೆಯುವುದು ಅಕ್ಟೋಬರ್‌ನಲ್ಲಿಯೇ. ಆದರೆ, ಜೂನ್‌ ಆರಂಭದಲ್ಲಿ ಈ ಕಾಡು ನೋಡುವುದು ಬಲು ಸೊಗಸು.

Ranthambore National Park, Rajasthan

ರಣಥಂಬೋರ್‌ ರಾಷ್ಟ್ರೀಯ ಉದ್ಯಾನ, ರಾಜಸ್ಥಾನ

ಭಾರತದ ದೊಡ್ಡ ರಾಷ್ಟ್ರೀಯ ಉದ್ಯಾನಗಳ ಪೈಕಿ ಇದೂ ಒಂದು. ಹುಲಿಗಳನ್ನು ನೋಡಬೇಕೆಂದು ಬಯಸುವ ಪ್ರತಿ ವನ್ಯಜೀವಿ ಪ್ರೇಮಿ ಹಾಗೂ ವನ್ಯಜೀವಿ ಛಾಯಾಗ್ರಾಹಕರು ಈ ರಾಷ್ಟ್ರೀಯ ಉದ್ಯಾನಕ್ಕೆ ಬೇಟಿ ಕೊಡಲು ಬಯಸುವುದು ಸಾಮಾನ್ಯ. ಇದು ಜೂನ್‌ 30ರ ವೇಳೆಗೆ ಮುಚ್ಚುವ ಕಾರಣ ಅದಕ್ಕೂ ಮೊದಲು ಬೇಟಿ ಕೊಟ್ಟರೆ ಅಪರೂಪದ ಅನುಭವಗಳು ನಿಮ್ಮದಾಗಬಹುದು.

Bandhavgarh National Park, Madhya Pradesh

ಬಾಂಧವಗಢ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಹುಲಿಯನ್ನು ನೋಡಲು ಬಯಸುವ ಪ್ರತಿಯೊಬ್ಬ ವನ್ಯಜೀವಿ ಪ್ರಿಯರಿಗೂ ತಿಳಿದ ವನ್ಯಜೀವಿಧಾಮ ಇದು. ಇಲ್ಲಿ ಹುಲಿ ದರ್ಶನದ ಸಾಧ್ಯತೆ ಹೆಚ್ಚು. ಈಗಷ್ಟೇ ಮಳೆಬಿದ್ದ ಕಾಡು ಹಸಿರಾಗಿ ಕಂಗೊಳಿಸುವ ಸಂದರ್ಭ ಮಧ್ಯದಲ್ಲಿ ಆಕಳಿಸುತ್ತಾ ಕುಳಿತ ಹುಲಿಯನ್ನೊಮ್ಮೆ ಕಲ್ಪಿಸಿ ನೋಡಿ. ರೋಮಾಂಚಿತಗೊಳ್ಳುವುದಿಲ್ಲವೇ ಹೇಳಿ! ಜುಲೈನಿಂದ ಅಕ್ಟೋಬರ್‌ವರೆಗೆ ಈದು ಮುಚ್ಚಿರುವ ಕಾರಣ ಜೂನ್‌ನಲ್ಲಿ ಭೇಟಿಕೊಡಲು ಸುಸಮಯ.

Kanha National Park, Madhya Pradesh

ಕನ್ಹಾ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ

ಇದೂ ಕೂಡಾ ಹುಲಿಗಳಿಗೆ ಬಲುಪ್ರಸಿದ್ಧವಾದ ರಾಷ್ಟ್ರೀಯ ಉದ್ಯಾನ. ಮಳೆಗಾಲ ಆರಂಭವಾದ ತಕ್ಷಣ ಕಾಣಲು ಇದು ಬಲು ಚಂದ. ಜೂನ್‌ 30ರಿಂದ ಅಕ್ಟೋಬರ್‌ 15ರವರೆಗೆ ಇದು ಮುಚ್ಚಿರುತ್ತದೆ.

Pench National Park, Madhya Pradesh and Maharashtra

ಪೆಂಚ್‌ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದ ಗಡಿಯಲ್ಲಿರುವ ಈ ರಾಷ್ಟ್ರೀಯ ಉದ್ಯಾನ ಅತ್ಯಂತ ಸುಂದರವಾದ ಕಾಡುಗಳಲ್ಲಿ ಒಂದು. ರುಡ್ಯಾರ್ಡ್‌ ಕಿಪ್ಲಿಂಗ್‌ ಅವರ ದಿ ಜಂಗಲ್‌ ಬುಕ್‌ ಇದೇ ಕಾಡಿನಿಂದ ಸ್ಪೂರ್ತಿಗೊಂಡು ರಚಿತವಾದ ಕತೆ. ಹೆಚ್ಚು ಹುಲಿಗಳಿರುವ ಈ ಕಾಡು ಜೂನ್‌ 16ರಿಂದ ಸೆಪ್ಟೆಂಬರ್‌ವರೆಗೆ ಪ್ರವಾಸಿಗರಿಗೆ ಮುಚ್ಚಿರುತ್ತದೆ.

Nagarhole National Park, Karnataka

ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕರ್ನಾಟಕ

ನಮ್ಮ ಕರ್ನಾಟಕದ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಭಾರತದ ಅತ್ಯಂತ ಸುಂದರವಾದ ವನ್ಯಜೀವಿಧಾಮಗಳಲ್ಲಿ ಒಂದು. ಹುಲಿಗಳ ಜೊತೆಗೆ ಆನೆ, ಚಿರತೆ, ಜಿಂಕೆ, ಕಾಡಮ್ಮೆಗಳೂ ಸೇರಿದಂತೆ ಅನೇಕ ಪ್ರಾಣಿಗಳ ಸಂತಿತಿ ಇಲ್ಲಿ ವಿಪುಲವಾಗಿದೆ. ಮಳೆ ಈಗಷ್ಟೇ ಬರಲು ಆರಂಭವಾಗುವ ಸಂದರ್ಭ ಇದು ರಮ್ಯವಾಗಿ ಕಾಣುತ್ತದೆ. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಇದು ಮುಚ್ಚಿರುತ್ತದೆ. ಅಕ್ಟೋಬರ್‌ ತಿಂಗಳಲ್ಲೂ ಇದು ಅದ್ಭುತವಾಗಿ ಕಾಣುತ್ತದೆ.

Continue Reading
Advertisement
love jihad kasaragod 2
ಕ್ರೈಂ1 min ago

Love Jihad: ನಾಪತ್ತೆಯಾದ ಹಿಂದೂ ಯುವತಿ ಮುಸ್ಲಿಂ ಯುವಕನ ಮದುವೆಯಾಗಿ ಪತ್ತೆ; ಮುಸ್ಲಿಂ ಲೀಗ್‌ ನಾಯಕನ ಕುಮ್ಮಕ್ಕು?

Kannada New Movie Aditya Shashikumar Kaadaadi Movie Lyrical song out
ಸ್ಯಾಂಡಲ್ ವುಡ್22 mins ago

Kannada New Movie: ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ಔಟ್‌!

Viral Video
ವೈರಲ್ ನ್ಯೂಸ್22 mins ago

Viral Video: ಭಾರತ-ಚೀನಾ ಯೋಧರ ನಡುವೆ ಹಗ್ಗಜಗ್ಗಾಟ; ಗೆದ್ದವರು ಯಾರು? ವಿಡಿಯೊ ನೋಡಿ!

Aditi Prabhudeva is returning to reality show judge
ಕಿರುತೆರೆ38 mins ago

Aditi Prabhudeva: ತಾಯಿಯಾದ ಬಳಿಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅದಿತಿ ಪ್ರಭುದೇವ!

Prajwal Revanna case
ಪ್ರಮುಖ ಸುದ್ದಿ44 mins ago

Prajwal Revanna Case: ಏರ್‌ಪೋರ್ಟ್‌ನಲ್ಲೇ ಎಸ್‌ಐಟಿ ಠಿಕಾಣಿ, ನಾಳೆ ಮಧ್ಯರಾತ್ರಿಯೇ ಪ್ರಜ್ವಲ್‌ ರೇವಣ್ಣ ವಶಕ್ಕೆ

Radhika Pandit
ಸ್ಯಾಂಡಲ್ ವುಡ್50 mins ago

Radhika Pandit: ನಟಿ ರಾಧಿಕಾ ಪಂಡಿತ್‌ ಕಮ್‌ ಬ್ಯಾಕ್‌ ಯಾವಾಗ? ಅಭಿಮಾನಿಗಳ ಪ್ರಶ್ನೆಗೆ ಕೊನೆಗೂ ಸಿಕ್ತು ಉತ್ತರ

Ambareesh Birthday
ಸಿನಿಮಾ1 hour ago

Ambareesh Birthday: ರೆಬಲ್‌ ಸ್ಟಾರ್‌ 72 ನೇ ಹುಟ್ಟುಹಬ್ಬ; ಅಂಬಿ ಸ್ಮರಣಾರ್ಥ ಅಭಿಮಾನಿಗಳಿಂದ ವಿವಿಧ ಕಾರ್ಯಕ್ರಮ

Ambareesh Birthday heartfelt note By sumalatha
ಸ್ಯಾಂಡಲ್ ವುಡ್1 hour ago

Ambareesh Birthday: ಅಂಬಿ ನೆನೆದು ಸುಮಲತಾ ಭಾವನಾತ್ಮಕ ಪೋಸ್ಟ್‌ !

Vastu Tips
ಧಾರ್ಮಿಕ2 hours ago

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಪ್ರೀತಿ ಪಾತ್ರರಿಗೆ ನೀಡುವ ಉಡುಗೊರೆಗಳು ಹೀಗಿರಬೇಕು

Mani Shankar Aiyar
ದೇಶ2 hours ago

Mani Shankar Aiyar: ಮಣಿಶಂಕರ್‌ ಅಯ್ಯರ್ ಮತ್ತೊಂದು ವಿವಾದ;‌ ಪಾಕ್‌ ಬಳಿಕ ಚೀನಾ ಪರ ಬ್ಯಾಟಿಂಗ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ15 hours ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು23 hours ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ6 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌