Prabhu Deva & His Wife Himani Give Birth To A Baby Girl Actor Prabhudeva: 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾದ ಪ್ರಭು ದೇವ - Vistara News

South Cinema

Actor Prabhudeva: 50ನೇ ವಯಸ್ಸಿಗೆ ಹೆಣ್ಣು ಮಗುವಿಗೆ ತಂದೆಯಾದ ಪ್ರಭು ದೇವ

Actor Prabhudeva: ಇದೀಗ ನಟ 50ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಈವರೆಗೂ ಪ್ರಭುದೇವ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿರಲಿಲ್ಲವಂತೆ. ಹೀಗಾಗಿ ಅವರ ಕುಟುಂಬಕ್ಕೆ ಸಂಭ್ರಮ ತಂದಿದೆ.

VISTARANEWS.COM


on

Prabhu Deva & His Wife Himani Give Birth To A Baby Girl
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಭಾರತದ ಮೈಕೆಲ್ ಜಾಕ್ಸನ್ ಎಂತಲೇ ಖ್ಯಾತಿ ಪಡೆದಿರುವ ನೃತ್ಯ ಸಂಯೋಜಕ-ನಟ ಮತ್ತು ನಿರ್ದೇಶಕ ಪ್ರಭುದೇವ (Actor Prabhudeva) ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ನಟ 50ನೇ ವಯಸ್ಸಿನಲ್ಲಿ ತಂದೆಯಾಗಿದ್ದಾರೆ. ಈವರೆಗೂ ಪ್ರಭುದೇವ ಅವರ ಮನೆಯಲ್ಲಿ ಹೆಣ್ಣು ಮಗು ಜನಿಸಿರಲಿಲ್ಲವಂತೆ. ಹೀಗಾಗಿ ಅವರ ಕುಟುಂಬಕ್ಕೆ ಸಂಭ್ರಮ ತಂದಿದೆ. ಆದರೆ ಪ್ರಭುದೇವ ಮಾತ್ರ ಈ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿಲ್ಲ.

ಪ್ರಭುದೇವ ಮೊದಲ ಪತ್ನಿ ಹೆಸರು ರಮ್ಲತ್‌. ಇವರು : ಮುಸ್ಲಿಂ ಆಗಿದ್ದು ಮದುವೆ ನಂತರ ಹಿಂದು ಧರ್ಮಕ್ಕೆ ಮತಾಂತರವಾದರು. ನಂತರ ರಮ್ಲತಾ ಎಂದು ಹೆಸರು ಬದಲಿಸಿಕೊಂಡು. ಇಬ್ಬರೂ ಕೆಲವು ವರ್ಷಗಳ ಕಾಲ ಪ್ರೀತಿಸಿ 1995 ರಲ್ಲಿ ಮದುವೆ ಆದರು. ಈ ದಂಪತಿಗೆ ಮೂವರು ಗಂಡು ಮಕ್ಕಳು. ಪ್ರಭುದೇವ ಇತ್ತೀಚೆಗೆ ತಮ್ಮ ಎರಡನೇ ಪತ್ನಿ ಹಿಮಾನಿಯೊಂದಿಗೆ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದರು.

ಪ್ರಭುದೇವ ಮೊದಲ ಪತ್ನಿಯಿಂದ ಗಂಡು ಮಗು ಪಡೆದಿದ್ದರು. ಆದರೆ ಮೊದಲ ಮಗ ಕ್ಯಾನ್ಸರ್‌ ಕಾರಣದಿಂದ ನಿಧನರಾದರು. ಈ ವಿಚಾರವನ್ನು ಇತ್ತೀಚೆಗೆ ಪ್ರಭುದೇವ ಜೀ ಕನ್ನಡ ವಾಹಿನಿಯ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದರು. ಮೊದಲ ಪತ್ನಿ ಜತೆಗಿನ ಹೊಂದಾಣಿಕೆಯ ಕೊರತೆಯಿಂದಾಗಿ ಡಿವೋರ್ಸ್ ಪಡೆದರು. ಕೋವಿಡ್ ಸಂದರ್ಭದಲ್ಲಿ ವೃತ್ತಿಯಲ್ಲಿ ವೈದ್ಯಯಾಗಿರುವ ಹಿಮಾನಿ ಸಿಂಗ್ ಜತೆ ಡೇಟ್‌, ಮಾಡಿ ಬಳಿಕ ಗುಟ್ಟಾಗಿಯೇ ಮದುವೆಯಾಗಿದ್ದರು.

ಇದನ್ನೂ ಓದಿ: Aditi Prabhudeva | ನಟಿ ಅದಿತಿ ಪ್ರಭುದೇವ ಮದುವೆ ಸಂಭ್ರಮದ ಫೋಟೊಗಳು ಇಲ್ಲಿವೆ!

ಪ್ರಭುದೇವ, ತಮಿಳು ನಟಿ ನಯನತಾರಾ ಜತೆ ರಿಲೇಶನ್‌ಶಿಪ್‌ನಲ್ಲಿಯೂ ಇದ್ದರು. ಕೆಲವು ದಿನಗಳ ಹಿಂದಷ್ಟೇ ಪ್ರಭುದೇವ ಜೀ ಕನ್ನಡದ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಮೊದಲ ಬಾರಿಗೆ ಹಿಮಾನಿ ಸಿಂಗ್‌ ಕ್ಯಾಮರಾ ಮುಂದೆ ಬಂದು ಪತಿಯನ್ನು ಹೊಗಳಿದ್ದರು. ಇದೀಗ 50ನೇ ವಯಸ್ಸಿನಲ್ಲಿ ಪ್ರಭುದೇವ ಹೆಣ್ಣು ಮಗುವಿನ ತಂದೆ ಆಗಿದ್ದಾರೆ.

ಹಿಮಾನಿ ಸಿಂಗ್‌ ಕೆಲವು ದಿನಗಳ ಹಿಂದೆಯೇ ಮಗುವಿಗೆ ಜನ್ಮ ನೀಡಿದ್ದು ಪ್ರಭುದೇವ ಮಾತ್ರ ಈ ವಿಚಾರವನ್ನು ಅಭಿಮಾನಿಗಳ ಬಳಿ ಹಂಚಿಕೊಂಡಿಲ್ಲ. ಪ್ರಭುದೇವ ಅಭಿಮಾನಿಗಳು ಮಗುವಿಗೆ ಹಾರೈಸುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಸ್ಯಾಂಡಲ್ ವುಡ್

Actor Darshan: ದರ್ಶನ್‌ ಬಲೆಗೆ ಪವಿತ್ರಾ ಗೌಡ ಬಿದ್ದಿದ್ದು ಹೇಗೆ? ಇವರು ಹೀರೋಯಿನ್‌ ಆಗಿದ್ದು ಯಾವಾಗ?

Actor Darshan: ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್‌ ಹತ್ತಿಸಿಕೊಂಡು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು ಪವಿತ್ರಾ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿ ಮಾಡ್‌ಲಿಂಗ್‌ ಕ್ಷೇತ್ರಕ್ಕೆ ಬಂದರು. ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡವರು ಪವಿತ್ರಾ. ದರ್ಶನ್‌ ಬಲೆಗೆ ಬೀಳುವ ಮುಂಚೆ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್‌ ಜತೆ ಪವಿತ್ರಾ ಜತೆಗಿಲ್ಲ.

VISTARANEWS.COM


on

Actor Darshan pavithra gowda relationship secrete
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ (Actor Darshan) ಕಂಬಿ ಎಣಿಸುತ್ತಿದ್ದಾರೆ ನಟ ದರ್ಶನ್‌. ದರ್ಶನ್ ಹೇಳಿದಂತೆ ನಡೆದುಕೊಂಡಿದ್ದರಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್, ಪವಿತ್ರಾ, ವಿನಯ್, ಪವನ್ ಸೇರಿ ಹಲವರು ಅರೆಸ್ಟ್ ಆಗಿದ್ದಾರೆ. ಈಗಾಗಲೇ ಜೈಲಿನಲ್ಲಿರುವ ಎ7 ಆರೋಪಿ ಅನುಕುಮಾರ್​ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.  ಪವಿತ್ರಾ ಗೌಡಗೆ ಅಶ್ಲೀಲ ಮೆಸೆಜ್‌ ಕಳುಹಿಸಿದ ಎನ್ನುವ ಕಾರಣಕ್ಕೆ ದರ್ಶನ್‌ ಹಾಗೂ ಗ್ಯಾಂಗ್‌ ಇದೀಗ ಅರೆಸ್ಟ್‌ ಆಗಿದೆ. ಹಾಗಾದ್ರೆ ಈ ಪವಿತ್ರಾ ಗೌಡ ಯಾರು? ದರ್ಶನ್‌ಗೆ ಪವಿತ್ರಾ ಲಿಂಕ್‌ ಆಗಿದ್ದು ಹೇಗೆ? ಪವಿತ್ರಾ ಮಾಜಿ ಪತಿ ಈಗೇನು ಮಾಡುತ್ತಿದ್ದಾರೆ ಎಂಬುದು ತಿಳಿಯಲು ಮುಂದೆ ಓದಿ.

ಕಾಲೇಜು ದಿನಗಳಲ್ಲೇ ಬಣ್ಣದ ಜಗತ್ತಿನ ಕ್ರೇಜ್‌ ಹತ್ತಿಸಿಕೊಂಡು ನಾಟಕ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಿಂಚಿದ್ದರು ಪವಿತ್ರಾ. ಬಿಷಪ್ ಕಾಟನ್ ಕಾಲೇಜಿನಲ್ಲಿ ಬಿಸಿಎ ಪದವಿ ಮುಗಿಸಿ ಮಾಡ್‌ಲಿಂಗ್‌ ಕ್ಷೇತ್ರಕ್ಕೆ ಬಂದರು. ಬೆಂಗಳೂರಿನಲ್ಲಿ ನಡೆದ ಮೂರು ಫ್ಯಾಷನ್ ಶೋಗಳಲ್ಲಿ ಮೂರು ಬಾರಿ ಶೋ ಟಾಪರ್ ಪಟ್ಟ ಗಿಟ್ಟಿಸಿಕೊಂಡವರು ಪವಿತ್ರಾ. ಇವರು ಮೂಲತಃ ಬೆಂಗಳೂರಿನ ಜೆ ಪಿ ನಗರದವರು. ಭೂಗತ ದೊರೆ ಎಂದು ಗುರುತಿಸಿಕೊಂಡಿದ್ದ ಎಂ.ಪಿ ಜಯರಾಜ್ ಮಗ ನಾಯಕನಾಗಿದ್ದ ಸಿನಿಮಾದಲ್ಲಿ ಪವಿತ್ರಾ ನಾಯಕಿಯಾಗಿ ಕಂಗೊಳಿಸಿದ್ದರು. ಇದಾದ ಬಳಿಕ ಕೆಲವು ಸಿನಿಮಾಗಳಲ್ಲಿ ನಾಯಕಿಯಾದರು.

ಇದನ್ನೂ ಓದಿ: Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ʻಜಗ್ಗು ದಾದಾʼಗೆ ಲಿಂಕ್‌ ಆದ ಬೆಡಗಿ!

ʼಜಗ್ಗುದಾದಾʼ ಸಿನಿಮಾ ಮೂಲಕ ದರ್ಶನ್‌ಗೆ ಪರಿಚಯವಾದವರು ಈ ಪವಿತ್ರಾ. ಹೀಗೆ ಶುರುವಾದ ಸ್ನೇಹ ಆ ನಂತರ ಪ್ರೇಮಕ್ಕೆ ತಿರುಗಲು ಹೆಚ್ಚೇನು ಸಮಯ ಬೇಕಾಗಲಿಲ್ಲ. ಇದಕ್ಕೆ ಸಾಕ್ಷಿ ಎನ್ನುವಂತೆ 2016ರಲ್ಲಿ ʼಜಗ್ಗುದಾದಾʼ ತೆರೆಗೆ ಬಂದ ಬೆನ್ನಲ್ಲಿಯೇ, 2017ರಲ್ಲಿ ʻತಾರಕ್ʼ ಚಿತ್ರದ ಬಿಡುಗಡೆಯ ಸಮಯದಲ್ಲಿ ಪವಿತ್ರಾ ಗೌಡ ತನ್ನ ಪ್ರಿಯಕರ ದರ್ಶನ್ ಜೊತೆ ಅತ್ಯಾಪ್ತವಾದ ಫೋಟೊವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಂಜಯ್ ಸಿಂಗ್‌ಗೆ ಡಿವೋರ್ಸ್‌ ಕೊಟ್ಟ ಪವಿತ್ರಾ

ದರ್ಶನ್‌ ಬಲೆಗೆ ಬೀಳುವ ಮುಂಚೆ ಪವಿತ್ರಾ ಅವರು ಸಂಜಯ್ ಸಿಂಗ್ ಎಂಬುವರನ್ನು ಮದುವೆಯಾಗಿದ್ದರು. ಆದರೆ ಈಗ ಸಂಜಯ್‌ ಜತೆ ಪವಿತ್ರಾ ಜತೆಗಿಲ್ಲ. ಡಿವೋರ್ಸ್‌ ಆಗಿದೆ. 12 ವರ್ಷಗಳ ಹಿಂದೆ ಬೆಂಗಳೂರು ತೊರೆದು ಹುಟ್ಟೂರು ಉತ್ತರ ಪ್ರದೇಶದಲ್ಲಿ ಸ್ವಂತ ಶಾಲೆ ನಡೆಸುತ್ತಿದ್ದಾರೆ ಸಂಜಯ್ ಸಿಂಗ್.

ಅರೆಸ್ಟ್‌ ಆದ ಬಳಿಕ ಸಂಜಯ್‌ ಸಿಂಗ್‌ ಹೇಳಿದ್ದೇನು?

ʻಪವಿತ್ರಾ ಕೊಲೆ ಕೇಸಿನಲ್ಲಿ ಮಿಂಗಲ್‌ ಆಗಿದ್ದಾಳೆ ಎಂದರೆ ನಂಲಾಗುತ್ತಿಲ್ಲ. ಪವಿತ್ರಾ ಇಲಿ ಕಂಡರೂ ಹೆದರುತ್ತಿದ್ದಳು. ಹೀಗಾಗಿ ಆಕೆ ಕೊಲೆ ಮಾಡಿದ್ದಾಳೆ ಅಂದರೆ ನಾನು ನಂಬಲ್ಲ. ಕೊಲೆ ನಡೆದ ಜಾಗದಲ್ಲಿ ದರ್ಶನ್ ಜೊತೆ ಪವಿತ್ರಾ ಇದ್ದಿರಬಹುದು ಅಷ್ಟೆ. ಆಕೆ ತುಂಬ ಸಾಫ್ಟ್‌ʼʼ ಎಂದಿದ್ದಾರೆ.

ಸಂಜಯ್‌ ಸಿಂಗ್‌-ಪವಿತ್ರಾ ದಾಂಪತ್ಯ ಜೀವನ ಹೇಗಿತ್ತು?

ʻಮೊದಲಿಗೆ ನಾನು ಐಟಿ ವೃತ್ತಿಯಲ್ಲಿ ಇದ್ದೆ. ಹಾಗೇ ಪವಿತ್ರಾಗೂ ಸಿನಿಮಾ ಮೇಲೆ ಹುಚ್ಚಿತ್ತು. ನಟಿಯಾಗುವ ಕನಸನ್ನು ಹೊತ್ತಿದ್ದಳು. ಆಗ ಮಗು ಕೂಡ ನಮಗೆ ಆಯ್ತು. ಬಳಿಕ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಹದಗೆಡುತ್ತಾ ಹೋಯ್ತು. ನಾನು ಮೂಲತಃ ಉತ್ತರ ಪ್ರದೇಶದವನು. 2013ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್‌ ಆಯ್ತು. ಅವಳು ಹೇಳುವ ಹಾಗೇ ದರ್ಶನ್‌ ಮದುವೆ ಕೂಡ ಆಗಿದ್ದಾಳಂತೆ. ಮಗು ಹುಟ್ಟಿದ ಬಳಿಕ ಮನಸ್ತಾಪವಾಗಿ ಒಂದು ವರ್ಷದ ಬಳಿಕ ಬೇರೆಯಾದೆವು. ಈಗಲೂ ನಾನು ಪವಿತ್ರಾ ಜತೆ ಸಂಪರ್ಕದಲ್ಲಿ ಇಲ್ಲ. ಅತ್ತೆ ಮಾವಗೆ ಪೋನ್ ಮಾಡಿದಾಗ ಮಗಳು ಇದ್ದಾಗ ಆಗ ಅವಳ ಬಳಿ ಮಾತನಾಡುತ್ತೇನೆ. ದರ್ಶನ್‌ ಮದುವೆ ಆಗಬೇಕು ಎಂದು ನನ್ನ ಬಳಿ ವಿಚ್ಛೇದನ ಪಡೆದುಕೊಂಡಳು. ಕಳೆದ 12 ವರ್ಷಗಳಲ್ಲಿ ನಾನು ಮಗಳ ಜೊತೆ ಎರಡು ಬಾರಿ ಮಾತನಾಡಿದ್ದು, 2017ರಲ್ಲಿ ಬೆಂಗಳೂರಿಗೆ ಬಂದು ಮಗಳನ್ನು ಭೇಟಿ ಮಾಡಿದ್ದೆʼʼ ಎಂದಿದ್ದಾರೆ.

ಇದೀಗ ದರ್ಶನ್‌ ಹಾಗೂ ಗ್ಯಾಂಗ್‌ವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಜೂನ್‌ 11ರಿಂದ ಜೂನ್‌ 17ರ ವರೆಗೆ ಪೊಲೀಸರು ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ವಶಕ್ಕೆ ಪಡೆದಿದ್ದರು. ಆದರೆ ಜೂನ್‌ 17ರಂದು ಸರ್ಕಾರಿ ರಜೆ ಇರುವುದರಿಂದ ಪೊಲೀಸರು ಎರಡು ದಿನಗಳ ಮೊದಲೇ ಕೋರಮಂಗಲದ ಜಡ್ಜ್​​​​ ನಿವಾಸಕ್ಕೆ ಇಬ್ಬರನ್ನು ಹಾಜರು ಪಡಿಸಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಪೊಲೀಸರು ದರ್ಶನ್‌ ಅವರ ಪ್ರಾಥಮಿಕ ವಿಚಾರಣೆಯನ್ನು ಮುಗಿಸಿದ್ದಾರೆ. 

Continue Reading

ಸ್ಯಾಂಡಲ್ ವುಡ್

Kannada New Movie: ರಾಜವರ್ಧನ್ ನಟನೆಯ ‘ಹಿರಣ್ಯ’ ಸಿನಿಮಾದ ಮೆಲೋಡಿ ಹಾಡು ರಿಲೀಸ್

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ್ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯುವನಟಿ ರಿಹಾನಾ ರಾಜವರ್ಧನ್‌ಗೆ ಜೋಡಿಯಾಗಿ ನಟಿಸಿದ್ದಾರೆ.

VISTARANEWS.COM


on

Kannada New Movie hiranys song out
Koo

ಬೆಂಗಳೂರು: ʻಬಿಚ್ಚುಗತ್ತಿʼ ಸಿನಿಮಾ ಮೂಲಕ ಭರವಸೆ ಹುಟ್ಟಿಸಿರುವ ಮ್ಯಾಸೀವ್ ಸ್ಟಾರ್ ರಾಜವರ್ಧನ್, ಹಿರಣ್ಯ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಹಾಜರಲು ಸಜ್ಜಾಗಿದ್ದಾರೆ. ಇದೀಗ ಈ ಚಿತ್ರದ ಮೆಲೋಡಿ ನಂಬರ್ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಸಾಹಿತ್ಯದಲ್ಲಿ ಮೂಡಿ ಬಂದಿರುವ ಪದೇ ಪದೇ ಎಂಬ ಗೀತೆಗೆ ಸಂಚಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡ್ ಟ್ಯೂನ್ ಹಾಕಿದ್ದಾರೆ.

ಚಿತ್ರವನ್ನು ಪ್ರವೀಣ್ ಅವ್ಯೂಕ್ ನಿರ್ದೇಶನ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಇದು ಅವರಿಗೆ ಮೊದಲ ಚಿತ್ರ. ಇದಕ್ಕೂ ಮುನ್ನ ಕಿರುಚಿತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್​ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ್ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಯುವನಟಿ ರಿಹಾನಾ ರಾಜವರ್ಧನ್‌ಗೆ ಜೋಡಿಯಾಗಿ ನಟಿಸಿದ್ದಾರೆ.

ಇದನ್ನೂ ಓದಿ: OTT Release: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸಿನಿಮಾ, ವೆಬ್‌ ಸಿರೀಸ್‌ಗಳಿವು

ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

Continue Reading

ಟಾಲಿವುಡ್

Kannapp Teaser : ವಿಷ್ಣು ಮಂಚು ನಾಯಕನಾಗಿ ನಟಿಸಿರುವ `ಕಣ್ಣಪ್ಪ’ ಚಿತ್ರದ ಟೀಸರ್‌ ಬಿಡುಗಡೆ

Kannapp Teaser: ಟೀಸರ್‌ ಲಾಂಚ್‌ ವೇಳೆ ಮಾತನಾಡಿದ ಮೋಹನ್ ಬಾಬು, ಪರಮೇಶ್ವರನ ಒಪ್ಪಿಗೆಯ ಮೇರೆಗೆ ನಾವು ಈ ಕಣ್ಣಪ್ಪ ಸಿನಿಮಾ ಮಾಡಿದ್ದೇವೆ. ಅಚ್ಚು ಕಟ್ಟಾಗಿ ಸಿನಿಮಾ ಮೂಡಿ ಬಂದಿದೆ. ಬಹುಭಾಷೆಯ ತಾರೆಯರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದರು.

VISTARANEWS.COM


on

Kannappa Teaser Kannada Vishnu Manchu Mohan Babu
Koo

ಬೆಂಗಳೂರು: ವಿಷ್ಣು ಮಂಚು ಅವರ ಕನಸಿನ ಯೋಜನೆಯಾದ ‘ಕಣ್ಣಪ್ಪ’ (Kannappa Movie) ಎವಿಎ ಎಂಟರ್‌ಟೈನ್‌ಮೆಂಟ್ಸ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಬ್ಯಾನರ್‌ಗಳಲ್ಲಿ ಅದ್ಧೂರಿಯಾಗಿ (Kannapp Teaser) ಚಿತ್ರೀಕರಣಗೊಳ್ಳುತ್ತಿದೆ. ಈ ಚಿತ್ರವನ್ನು ಡಾ.ಮೋಹನ್ ಬಾಬು ನಿರ್ಮಿಸಿದ್ದಾರೆ ಮತ್ತು ಮುಖೇಶ್ ಕುಮಾರ್ ಸಿಂಗ್ ನಿರ್ದೇಶಿಸಿದ್ದಾರೆ. ಶುಕ್ರವಾರ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್‌ ಲಾಂಚ್ ಕಾರ್ಯಕ್ರಮವನ್ನು ಅಷ್ಟೇ ಅದ್ಧೂರಿಯಾಗಿ ಚಿತ್ರತಂಡ ಆಯೋಜಿಸಲಾಗಿತ್ತು.

ಟೀಸರ್‌ ಲಾಂಚ್‌ ವೇಳೆ ಮಾತನಾಡಿದ ಮೋಹನ್ ಬಾಬು, ಪರಮೇಶ್ವರನ ಒಪ್ಪಿಗೆಯ ಮೇರೆಗೆ ನಾವು ಈ ಕಣ್ಣಪ್ಪ ಸಿನಿಮಾ ಮಾಡಿದ್ದೇವೆ. ಅಚ್ಚು ಕಟ್ಟಾಗಿ ಸಿನಿಮಾ ಮೂಡಿ ಬಂದಿದೆ. ಬಹುಭಾಷೆಯ ತಾರೆಯರು ನಮ್ಮ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಇಡೀ ತಂಡಕ್ಕೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದರು.

ವಿಷ್ಣು ಮಂಚು ಹೇಳಿದ್ದೇನು?

“ಮೊದಲ ದಿನದಿಂದ ಇಲ್ಲಿಯವರೆಗೆ ‘ಕಣ್ಣಪ್ಪ’ ಚಿತ್ರವನ್ನು ಪ್ರತಿಯೊಬ್ಬ ಪ್ರೇಕ್ಷಕ ಕುತೂಹಲದಿಂದಲೇ ನೋಡುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಕ್ಕೆ ಸಿಗುತ್ತಿರುವ ಬೆಂಬಲ ನೋಡಿದ್ದೇನೆ. ಇದೀಗ ಆ ಕನಸು ನಿಮ್ಮೆಲ್ಲರ ಮುಂದೆ ತೆರೆದಿಡುವ ಹಂತಕ್ಕೆ ಬಂದಿದೆ. ಕಣ್ಣಪ್ಪ ಸಿನಿಮಾ ಪಯಣ 2014 -15ರಲ್ಲಿ ಶುರುವಾಗಿತ್ತು. ತಂದೆ ಮೋಹನ್ ಬಾಬು, ವಿನ್ನಿ ಮತ್ತು ಸಹೋದರ ವಿನಯ್ ಅವರ ಪ್ರೋತ್ಸಾಹದಿಂದಾಗಿ ಇದೀಗ ಅದು ಸಿದ್ಧವಾಗುತ್ತಿದೆ”

ಇದನ್ನೂ ಓದಿ: Actor Darshan: ಎಷ್ಟೇ ದಿನ ಆದರೂ ಚಂದ್ರಣ್ಣನ ಶವ ಎತ್ತಲ್ಲ; ಅನು ತಂದೆ ನಿಧನಕ್ಕೆ ಸಂಬಂಧಿಕರ ಕಣ್ಣೀರು

“ಕಣ್ಣಪ್ಪ ಸಿನಿಮಾ ಬರೀ ಇತಿಹಾಸವಲ್ಲ, ಇದು ಎರಡನೇ ಶತಮಾನದ ಚೋಳರ ಕಾಲದ ಕಥೆ ಎಂದು ಶಂಕರಾಚಾರ್ಯರು ಹೇಳಿದ್ದರು. 14 ನೇ ಶತಮಾನದಲ್ಲಿ ಕವಿ ಧೂರ್ಜಟಿ ಈ ಬಗ್ಗೆ ಬರೆದಿದ್ದಾರೆ. 18ನೇ ಶತಮಾನದಲ್ಲಿ ಬ್ರಿಟಿಷರೂ ಇಂಗ್ಲಿಷ್‌ನಲ್ಲಿ ಇದನ್ನು ಉಲ್ಲೇಖಿಸಿದ್ದಾರೆ. ಇದೆಲ್ಲವನ್ನು ಅಧ್ಯಯನ ನಡೆಸಿ ಈ ಸಿನಿಮಾ ಮಾಡಿದ್ದೇವೆ. ಅಷ್ಟೇ ಎಚ್ಚರಿಕೆಯಿಂದ ಈ ಸಿನಿಮಾ ಮಾಡಿದ್ದೇವೆ” ಎಂದರು ವಿಷ್ಣು ಮಂಚು.

ನಿರ್ದೇಶಕ ಮುಕೇಶ್ ಕುಮಾರ್ ಸಿಂಗ್ ಮಾತನಾಡಿ, ʻʻಕಣ್ಣಪ್ಪ ಚಿತ್ರದ ನನ್ನ ಶಕ್ತಿಯೇ ನನ್ನ ಕಲಾವಿದರು. ವಿಷ್ಣು ಅವರ ನಟನೆ ಮತ್ತು ಅವರು ಎದುರಿಸಿದ ಕಷ್ಟಗಳ ಬಗ್ಗೆ ನಾನು ಹೇಳಲಾರೆ. ಕೊರೆಯುವ ಚಳಿಯಲ್ಲೂ ಇಡೀ ತಂಡ ಶ್ರಮಿಸಿದೆ. ವಿಷ್ಣು, ಶರತ್ ಕುಮಾರ್, ಮೋಹನ್ ಬಾಬು ನನ್ನ ನಿರೀಕ್ಷೆಗೂ ಮೀರಿದ ಬೆಂಬಲ ನೀಡಿದ್ದಾರೆʼʼ ಎಂದರು.

ʻಶರತ್ ಕುಮಾರ್ ಮಾತನಾಡಿ ʻʻ, ಕಣ್ಣಪ್ಪ ಕೇವಲ ಸಿನಿಮಾ ಅಲ್ಲ; ಇದು ನಮ್ಮ ಇತಿಹಾಸ. ಪ್ರತಿಯೊಬ್ಬರೂ ತಮ್ಮ ತಮ್ಮ ಪಾತ್ರಗಳನ್ನು ಜೀವಿಸಿದ್ದಾರೆ. ಈಗಲೂ ನಾವು ಆ ಪಾತ್ರಗಳಲ್ಲಿ ಉಳಿದಿದ್ದೇವೆ. ಅಷ್ಟೊಂದು ಅಚ್ಚುಕಟ್ಟಾಗಿ ಸಿನಿಮಾ ಮೂಡಿಬಂದಿದೆ. ಎಲ್ಲರೂ ಇತಿಹಾಸವನ್ನು ಮರೆಯುತ್ತಿದ್ದಾರೆ. ನಾವು ನಮ್ಮ ಇತಿಹಾಸವನ್ನು ಹೇಳಬೇಕು. ಎಲ್ಲರೂ ಕಣ್ಣಪ್ಪನನ್ನು ನೋಡಬೇಕು” ಎಂದು ಹೇಳಿದರು.

ಮಧುಬಾಲಾ ಮಾತನಾಡಿ, “ಕಣ್ಣಪ್ಪನಂಥ ಪ್ರಾಜೆಕ್ಟ್‌ನಲ್ಲಿ ನಟಿಸಲು ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ನನಗೆ ಇಂತಹ ಒಳ್ಳೆಯ ಅವಕಾಶ ನೀಡಿದ ಮೋಹನ್ ಬಾಬು ಮತ್ತು ವಿಷ್ಣು ಅವರಿಗೆ ಧನ್ಯವಾದಗಳು. ವಿಷ್ಣು ಮಂಚು ಅವರಿಗೆ ಸಿನಿಮಾ ನಿರ್ಮಾಣದಲ್ಲಿ ಸಾಕಷ್ಟು ಜ್ಞಾನವಿದೆ. ವಿಷ್ಣು ಅವರಂತಹವರು ಈ ಸಿನಿಮಾ ಮೂಲಕ ದೊಡ್ಡ ರಿಸ್ಕ್‌ ತೆಗೆದುಕೊಂಡಿದ್ದಾರೆ. ಒಂದು ದೊಡ್ಡ ಯಜ್ಞದಲ್ಲಿ ಪಾಲ್ಗೊಂಡಂತೆ ಭಾಸವಾಯಿತು” ಎಂದಿದ್ದಾರೆ.

 ‘ಕಣ್ಣಪ್ಪ’ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಕಾಳಹಸ್ತಿಯಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿತ್ತು. ತೆಲುಗಿನಲ್ಲೂ ಕೃಷ್ಣಂರಾಜು ‘ಭಕ್ತ ಕಣ್ಣಪ್ಪ’ ಚಿತ್ರದಲ್ಲಿ ನಟಿಸಿದ್ದರು.

Continue Reading

ಸ್ಯಾಂಡಲ್ ವುಡ್

Actor Darshan:  ರೇಣುಕಾಸ್ವಾಮಿ ಕುಟುಂಬಕ್ಕೆ ಸಾಂತ್ವನ ಹೇಳಲು ಹೊರಟ ಚಲನಚಿತ್ರ ವಾಣಿಜ್ಯ ಮಂಡಳಿ

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ (Actor Darshan) ಮತ್ತು ಅವರ ಗೆಳತಿ ಪವಿತ್ರಾ ಗೌಡ ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಹೌದು, ಕೊಲೆ ಪ್ರಕರಣದಲ್ಲಿ ಎ 1 ಮತ್ತು ಎ 2 ಆರೋಪಿಗಳಾಗಿರುವ ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ಇಂದು ಜಡ್ಜ್‌ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಹುತೇಕ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಇಬ್ಬರೂ ಆತಂಕದಲ್ಲಿಯೇ ಸಮಯ ದೂಡುತ್ತಿದ್ದಾರೆ.

VISTARANEWS.COM


on

Actor Darshan case Film chamber visit to the renukaswamy house
Koo

ಬೆಂಗಳೂರು: ರೇಣುಕಾಸ್ವಾಮಿಯ ಬರ್ಬರ ಹತ್ಯೆಯನ್ನು (Renukaswamy Murder Case) ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಖಂಡಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಇಂದು (ಜೂ. 15) ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬಕ್ಕೆ ಭೇಟಿ ನೀಡಿ ಸ್ವಾಂತನ ಹೇಳಲಿದೆ.

ಈಗಾಗಲೇ ಚಿತ್ರದುರ್ಗದತ್ತ ಅಧ್ಯಕ್ಷರು, ಮಾಜಿ ಫಿಲಂ ಚೇಂಬರ್ ಅಧ್ಯಕ್ಷರು ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12.30ರ ವೇಳೆಗೆ ರೇಣುಕಾ ಮನೆ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಹಲವರು ಹೊರಟಿದ್ದಾರೆ. ಮೊದಲು ರೇಣುಕಾ ಸ್ವಾಮಿ ಮನೆಗೆ ಭೇಟಿ ಕೊಟ್ಟ ಬಳಿಕ ಮಧ್ಯಾಹ್ನ 1.30 ರ ಸಮಯಕ್ಕೆ ಖಾಸಗಿ ಹೋಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಮಾಜಿ ಅಧ್ಯಕ್ಷರುಗಳಾದ ಚಿನ್ನೇಗೌಡ, ಸಾರಾಗೋವಿಂದ್‌ ಜತೆ ಕೆವಿ ಚಂದ್ರಶೇಖರ್ ಸೇರಿದಂತೆ ಹಲವರು ಚಿತ್ರದುರ್ಗಕ್ಕೆ ತೆರಳಿದ್ದಾರೆ.

ಚಿತ್ರರಂಗದಿಂದ ಬ್ಯಾನ್‌ ಆಗ್ತಾರಾ ದರ್ಶನ್? 

ʻʻಆರೋಪಿ ನಟ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡುವುದು ಹಾಗೂ ಅಸಹಕಾರ ನೀಡುವುದರ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆರೋಪ ಸಾಬೀತಾದರೆ ಅಸಹಕಾರ ನೀಡುವ ವಿಚಾರಾಗಿ ನಿರ್ಧಾರ ಮಾಡಲಾಗುತ್ತದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ್ಯ ಎನ್.ಎಂ ಸುರೇಶ್ (NM Suresh) ಜೂ.13ರಂದು ನಡೆಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ: Actor Darshan: ಇಂದೇ ಪರಪ್ಪನ ಅಗ್ರಹಾರ ಸೇರ್ತಾರ ದರ್ಶನ್‌, ಪವಿತ್ರಾ ಗೌಡ?

ʻʻರೇಣುಕಾ ಅವರ ತಂದೆ ತಾಯಿಯನ್ನು ನೋಡಿದರೆ ಕರುಳು ಚುರ್ ಅನ್ನುತ್ತೆ. ಯಾರೇ ತಪ್ಪು ಮಾಡಲಿ, ಕಾನೂನು ಶಿಕ್ಷೆ ಕೊಡುತ್ತದೆ. ಸತ್ಯಾಸತ್ಯತೆ ಬಯಲಿಗೆ ಎಳೆಯುತ್ತೇವೆ ಎಂದು ಕಮಿಷನರ್ ಹೇಳಿದ್ದಾರೆ. ತಪ್ಪಿಗೆ ಶಿಕ್ಷೆ ಆಗುತ್ತೆ . ಕಾನೂನಿಗೆ ಮರೆಮಾಚುವ ಕೆಲಸ ಮಾಡೋಕೆ ಆಗೊಲ್ಲ. ಈ ಹಿಂದೆ ಈ ಥರ ಘಟನೆ ಆದಾಗ ಎಚ್ಚೆತ್ತುಕೊಳ್ಬೇಕಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡೋಕೆ ನಾಚಿಕೆ ಆಗುತ್ತೆ. ದೊಡ್ಡ ಮಟ್ಟದಲ್ಲಿ ಬೆಳೆದ ನಟನಿಗೆ ಜವಾಬ್ದಾರಿ ಇರಬೇಕಿತ್ತು. ರಾಷ್ಟ್ರಮಟ್ಟದಲ್ಲಿ ಈ ಘಟನೆಯಿಂದ ಎಲ್ಲರೂ ತಲೆ ತಗ್ಗಿಸುವಂತಾಗಿದೆ. ಆದರ್ಶವಾಗಿ ಇರಬೇಕಾದ ವ್ಯಕ್ತಿ ಹೀಗೆ ಮಾಡಿದಾಗ ಏನು ಹೇಳ್ಬೇಕು ಗೊತ್ತಾಗ್ತಿಲ್ಲ. ಆಸ್ತಿ ಅಂತಸ್ತು ಹಣ ಬಂದ್ಮೇಲೆ ತಲೆ ನಿಲ್ಲೋಲ್ಲ. ರಾಜ್ಯ ಪೊಲೀಸರಿಗೆ ನನ್ನದೊಂದು ಸಲಾಂʼʼ ಎಂದಿದ್ದರು.

 ಚಿತ್ರದುರ್ಗದ ರೇಣುಕಾಸ್ವಾಮಿ (Renuka Swamy murder case) ಕೊಲೆ ಆರೋಪದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್‌ (Actor Darshan) ಮತ್ತು ಅವರ ಗೆಳತಿ ಪವಿತ್ರಾ ಗೌಡ ಇಂದೇ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್‌ ಆಗುವ ಸಾಧ್ಯತೆ ಇದೆ. ಹೌದು, ಕೊಲೆ ಪ್ರಕರಣದಲ್ಲಿ ಎ 1 ಮತ್ತು ಎ 2 ಆರೋಪಿಗಳಾಗಿರುವ ದರ್ಶನ್‌ ಮತ್ತು ಪವಿತ್ರಾ ಗೌಡ ಅವರನ್ನು ಇಂದು ಜಡ್ಜ್‌ ಮುಂದೆ ಹಾಜರುಪಡಿಸಲಾಗುತ್ತಿದ್ದು, ಬಹುತೇಕ ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಇಬ್ಬರೂ ಆತಂಕದಲ್ಲಿಯೇ ಸಮಯ ದೂಡುತ್ತಿದ್ದಾರೆ.

Continue Reading
Advertisement
Actor Darshan
ಕರ್ನಾಟಕ19 mins ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್;‌ ಮೊಬೈಲ್‌ ಪಾಸ್‌ವರ್ಡ್‌ ನೀಡಲು ದರ್ಶನ್‌ & ಗ್ಯಾಂಗ್‌ ತಕರಾರು!

Apple With sticker
Latest30 mins ago

Apple With sticker: ಸೇಬು ಹಣ್ಣುಗಳ ಮೇಲೆ ಸ್ಟಿಕ್ಕರ್; ಏನಿದರ ಹಿಂದಿರುವ ರಹಸ್ಯ?

Viral News
Latest31 mins ago

Viral News: ಮುಖಕ್ಕೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ ಅಮ್ಜದ್ ಅರೆಸ್ಟ್!

Viral Video
Latest43 mins ago

Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

Health Tips
Latest47 mins ago

Health Tips: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

Temple Bell
ಧಾರ್ಮಿಕ51 mins ago

Temple Bell: ದೇವಾಲಯದಿಂದ ಹಿಂತಿರುಗುವಾಗ ಗಂಟೆ ಬಾರಿಸಲೇಬಾರದು ಯಾಕೆ ಗೊತ್ತೇ?

Morning Nutrition
ಆರೋಗ್ಯ54 mins ago

Morning Nutrition: ಆರೋಗ್ಯಕರ ಆಗಿರಬೇಕಿದ್ದರೆ ನಮ್ಮ ಬೆಳಗಿನ ತಿಂಡಿ ಹೇಗಿರಬೇಕು?

Karnataka Weather Forecast
ಮಳೆ1 hour ago

Karnataka Weather : ರಾಜ್ಯಾದ್ಯಂತ ಮುಂದಿನ ಒಂದು ವಾರ ಗುಡುಗು ಸಹಿತ ಮಳೆ; ಬಿರುಗಾಳಿ ಸಾಥ್‌

Siddaramaiah
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಬೆಲೆ ಏರಿಕೆ ಮಾಡುವುದೇ ರಾಜ್ಯ ಸರ್ಕಾರದ 6ನೇ ‘ಗ್ಯಾರಂಟಿ’ ಆಗದಿರಲಿ!

International Yoga Day 2024
ಆರೋಗ್ಯ2 hours ago

International Yoga Day 2024: ಗರ್ಭಿಣಿಯರೂ ಯೋಗ ಮಾಡಬಹುದೇ? ಯಾವ ಆಸನಗಳು ಸೂಕ್ತ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಯಾದಗಿರಿ18 hours ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ2 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು2 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ2 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ5 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ5 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ5 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ5 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

ಟ್ರೆಂಡಿಂಗ್‌