Adipurush Movie will not release in IMAX in India. This is why Adipurush Movie : ಐಮ್ಯಾಕ್ಸ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ ಆದಿಪುರುಷ್‌; ಏನು ಕಾರಣ? - Vistara News

South Cinema

Adipurush Movie : ಐಮ್ಯಾಕ್ಸ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ ಆದಿಪುರುಷ್‌; ಏನು ಕಾರಣ?

Adipurush Movie: ಚಿತ್ರ ಗ್ರ್ಯಾಂಡ್ ರಿಲೀಸ್‌ಗೂ ಮುನ್ನ ಐಮ್ಯಾಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ ಎಂಬ ಸುದ್ದಿ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದು ಅಭಿಮಾನಿಗಳನ್ನು ಕೆರಳಿಸಿದೆ. ಸರಿಯಾಗಿ ಯೋಜಿಸದ ಪ್ರೊಡಕ್ಷನ್ ಹೌಸ್, ಟಿ-ಸೀರೀಸ್‌ವನ್ನು ಇದೀಗ ಪ್ರಭಾಸ್‌ ಫ್ಯಾನ್ಸ್‌ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

VISTARANEWS.COM


on

Adipurush Movie will not release in IMAX in India. This is why
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಟಾಲಿವುಡ್‌ ನಟ ಪ್ರಭಾಸ್ ಅವರ ಬಹು ನಿರೀಕ್ಷಿತ ಚಿತ್ರ ʻಆದಿಪುರುಷ್‌ʼ ಸಿನಿಮಾ (Adipurush Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಆದಿಪುರುಷ್‌ ಜೂನ್ 16ರಂದು ವಿಶ್ವಾದ್ಯಂತ ತೆರೆ ಕಾಣುತ್ತಿದೆ. ಚಿತ್ರ ಗ್ರ್ಯಾಂಡ್ ರಿಲೀಸ್‌ಗೂ ಮುನ್ನ ಐಮ್ಯಾಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿಲ್ಲ ಎಂಬ ಸುದ್ದಿ ಭಾರಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇದು ಅಭಿಮಾನಿಗಳನ್ನು ಕೆರಳಿಸಿದೆ. ಸರಿಯಾಗಿ ಯೋಜಿಸದ ಪ್ರೊಡಕ್ಷನ್ ಹೌಸ್ ಟಿ-ಸೀರೀಸ್‌ ವಿರುದ್ಧ ಇದೀಗ ಪ್ರಭಾಸ್‌ ಫ್ಯಾನ್ಸ್‌ ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.

ಓಂ ರಾವುತ್ ನಿರ್ದೇಶನದ ಈ ಸಿನಿಮಾ ಘೋಷಿಸಿದ್ದಾಗಲಿಂದಲೂ ಒಂದಲ್ಲ ಒಂದು ಸುದ್ದಿಗಳಿಗೆ ಚರ್ಚೆಯಾಗುತ್ತಲೇ ಇದೆ. ಐಮ್ಯಾಕ್ಸ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತಿಲ್ಲ ಎಂಬ ಸುದ್ದಿ ವೈರಲ್‌ ಆಗುತ್ತಿದ್ದಂತೆ ಪ್ರಭಾಸ್‌ ಫ್ಯಾನ್ಸ್‌ ಟ್ವೀಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ನಿರ್ಮಾಣದ ʼದಿ ಫ್ಲ್ಯಾಶ್ʼ ಚಿತ್ರ ಅದೇ ದಿನ ಬಿಡುಗಡೆಯಾಗುತ್ತಿದೆ. ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಸಂಸ್ಥೆ ಸಾಕಷ್ಟು ಮೊದಲೇ ಭಾರತದಲ್ಲಿ IMAX ಸ್ಕ್ರೀನ್‌ಗಳನ್ನು ಕಾದಿರಿಸಿದೆ. ಹಾಗಾಗಿ ಭಾರತದಲ್ಲಿ ಐಮ್ಯಾಕ್ಸ್‌ ಸ್ಕ್ರೀನ್‌ನಲ್ಲಿ ಆದಿಪುರುಷ್‌ ಚಿತ್ರವನ್ನು ಪ್ರದರ್ಶಿಸಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ, ಭಾರಿ ನಿರೀಕ್ಷೆಯೊಂದಿಗೆ ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಅನೇಕ ಅಭಿಮಾನಿಗಳು ಟ್ವಿಟ್ಟರ್‌ ಮೂಲಕ ಈ ಬಗ್ಗೆ ನಿರ್ದೇಶಕ ಓಂ ರಾವುತ್ ಮತ್ತು ಟಿ-ಸಿರೀಸ್‌ನ ನಿರ್ಮಾಪಕ ಭೂಷಣ್ ಕುಮಾರ್ ಅವರಿಗೆ ಸಂದೇಶ ಕಳುಹಿಸಿ, ಆದಿಪುರುಷ್‌ ಚಿತ್ರವನ್ನು ಹೇಗಾದರು ಮಾಡಿ ಐಮ್ಯಾಕ್ಸ್‌ನಲ್ಲಿ ಬಿಡುಗಡೆ ಮಾಡಬೇಕೆಂದು ಮನವಿ ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಚಿತ್ರತಂಡ ಯಾವುದೇ ಅಪ್‌ಡೇಟ್‌ ನೀಡಿಲ್ಲ.

ಇದನ್ನೂ ಓದಿ: Wrestlers Protest: ಏಷ್ಯನ್​ ಗೇಮ್ಸ್​ ಆಡುತ್ತೇವೆ ಆದರೆ… ಸರ್ಕಾರಕ್ಕೆ ವಾರ್ನಿಂಗ್​​ ಕೊಟ್ಟ ಕುಸ್ತಿಪಟುಗಳು

ಆದಿಪುರುಷ್‌ ಚಿತ್ರವನ್ನು 700 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರ ಇದೆಂದು ಹೇಳಲಾಗಿದೆ. ಜೂನ್ 16ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಅದಕ್ಕೂ ಮುನ್ನ ವಿದೇಶದ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ. ನ್ಯೂಯಾರ್ಕ್​ನಲ್ಲಿ ಜೂನ್​ 7ರಿಂದ ಆರಂಭವಾಗಿರುವ ‘ತ್ರಿಬ್ಯಾಕಾ ಫಿಲ್ಮ್ ಫೆಸ್ಟಿವಲ್​’ (Tribeca Film Festival ) ಜೂನ್​ 18ರವರೆಗೆ ನಡೆಯಲಿದೆ. ಈ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ‘ಆದಿಪುರುಷ್​’ ಸಿನಿಮಾ ಆಯ್ಕೆ ಆಗಿದೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ನಟ ದೇವದತ್ತ ನಾಗೆ ಹನುಮಾನ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಹಿಂದು ಮಹಾಕಾವ್ಯ ರಾಮಾಯಣದ ರೂಪಾಂತರವಾಗಿದೆ. ಆದಿಪುರುಷವನ್ನು ಟಿ-ಸೀರೀಸ್‌ನ ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್, ಓಂ, ಪ್ರಸಾದ್ ಸುತಾರ್ ಮತ್ತು ರೆಟ್ರೋಫೈಲ್ಸ್‌ನ ರಾಜೇಶ್ ನಾಯರ್ ನಿರ್ಮಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Kannada New Movie: ಮೊದಲ ಹಂತದ ಶೂಟಿಂಗ್ ಮುಗಿಸಿದ ʼಹೇ ಪ್ರಭುʼ ಚಿತ್ರ

Kannada New Movie: ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ 13ನೇ ಹೊಸ ಚಿತ್ರ “ಹೇ ಪ್ರಭು” ಸದ್ದಿಲ್ಲದೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ. “ಹೇ ಪ್ರಭು ” ಈ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದ ಅಧವಾ “ಪ್ರಭು” ಅಂದರೇ ನಮ್ಮ ನಾಡ ಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ . ಸದ್ಯಕ್ಕೆ ಚಿತ್ರ ತಂಡ ಶೀರ್ಷಿಕೆ ವಿನ್ಯಾಸ (ಟೈಟಲ್ ಲೋಗೋ) ಅನಾವರಣಗೊಳಿಸಿದೆ, ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು ಕುತೂಹಲ ಮೂಡಿಸಿದೆ.

VISTARANEWS.COM


on

Hey Prabhu film has completed its first phase of shooting
Koo

ಬೆಂಗಳೂರು: ವಿನೂತನ ಶೀರ್ಷಿಕೆ ಮತ್ತು ವಿಭಿನ್ನ ಪ್ರಯೋಗಗಳಿಗೆ ಹೆಸರಾಗಿರುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಅವರ 13ನೇ ಹೊಸ ಚಿತ್ರ “ಹೇ ಪ್ರಭು” ಸದ್ದಿಲ್ಲದೆ ಮೊದಲ ಹಂತದ ಶೂಟಿಂಗ್ ಮುಗಿಸಿದೆ. “ಹೇ ಪ್ರಭು” ಈ ಹೆಸರು ಕೇಳಿದ ತಕ್ಷಣ ನೀವು ದೇವರು ಇರಬಹುದಾ ಅಥವಾ “ಪ್ರಭು” ಅಂದರೆ ನಮ್ಮ ನಾಡಪ್ರಭು ಕೆಂಪೇಗೌಡರಿರಬಹುದಾ ಎಂಬ ಕುತೂಹಲ ಮೂಡಿಸುತ್ತದೆ. ಸದ್ಯಕ್ಕೆ ಚಿತ್ರತಂಡ ಶೀರ್ಷಿಕೆ ವಿನ್ಯಾಸ (ಟೈಟಲ್ ಲೋಗೋ) ಅನಾವರಣಗೊಳಿಸಿದೆ. ಇದರಲ್ಲಿ ಕೆಂಪೇಗೌಡರ ಚಿತ್ರವಿರುವುದು (Kannada New Movie) ಸ್ವಲ್ಪ ಕುತೂಹಲ ಮೂಡಿಸಿದೆ.

ಇನ್ನು 5 ದಿನಗಳ ಶೂಟಿಂಗ್ ಮುಗಿದರೆ ಚಿತ್ರೀಕರಣ ಮುಕ್ತಾಯವಾಗುತ್ತದೆ ಎಂದು ತಂಡ ಹೇಳಿಕೊಂಡಿದೆ. ಜೊತೆಜೊತೆಯಾಗಿ ಸಂಕಲನ ಕಾರ್ಯ ಕೂಡ ಪ್ರಗತಿಯಲ್ಲಿದ್ದು, ನಿರ್ದೇಶಕರು ಮೊದಲ ಪ್ರತಿಯನ್ನು ಶೀಘ್ರದಲ್ಲಿ ತರುವುದಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ: Share Market: ಮೊದಲ ಬಾರಿಗೆ 79,000 ಅಂಕಗಳ ಗಡಿ ದಾಟಿದ ಸೆನ್ಸೆಕ್ಸ್; ಗರಿಷ್ಠ ಮಟ್ಟ ತಲುಪಿದ ನಿಫ್ಟಿ

ಪ್ರಮೋದ್ ಭಾರತೀಯ ಛಾಯಾಗ್ರಹಣ, ಡ್ಯಾನ್ನಿ ಆಂಡರ್ಸನ್, ಸಂಗೀತ, ಚಂದನ್ ಪಿ., ಶಮೀಕ್ ಭಾರದ್ವಾಜ್ ಮತ್ತು ಲಾರೆನ್ಸ್ ಪ್ರೀತಮ್ ತಾಂತ್ರಿಕ ಕೆಲಸದಲ್ಲಿ ಕಾರ್ಯವಹಿಸುತ್ತಿದ್ದಾರೆ. ಮಹೇಶ್ ಮತ್ತು ಪ್ರವೀಣ್ ಅವರ ಸಂಭಾಷಣೆ, ಅರಸು ಅಂತಾರೆ ಮತ್ತು ಮನೋಜ್ ರಾವ್ ಅವರ ಸಾಹಿತ್ಯ ಚಿತ್ರಕ್ಕಿದೆ. 24 Reels ಮತ್ತು Amrutha Film Center ನಿರ್ಮಾಣ, ಕಥೆ ಚಿತ್ರಕಥೆ ವೆಂಕಟ್ ಭಾರದ್ವಾಜ್ ಅವರದ್ದಾಗಿದೆ.

ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಸ್ಯಾಮ್ಸನ್ ಜೈಪಾಲ್ ಅವರ ಪುತ್ರ ಡ್ಯಾನ್ನಿ ಆಂಡರ್ಸನ್ ಅವರನ್ನು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ವೆಂಕಟ್ ಭಾರದ್ವಾಜ್ ಪರಿಚಯಿಸುತ್ತಿದ್ದಾರೆ.

ತಾರಾಬಳಗದಲ್ಲಿ ಜಯ್, ಸೂರ್ಯ ರಾಜ್, ಲಕ್ಷ್ಮಣ್ ಶಿವಶಂಕರ್ (ಕೆಂಪಿರ್ವೇ ಖ್ಯಾತಿ), ಸಂಹಿತ ವಿನ್ಯಾಸ, ಗಜಾನನ ಹೆಗಡೆ, ನಿರಂಜನ್ ಪ್ರಸಾದ್, ಹರಿ ಧನಂಜಯ , ಪ್ರಮೋದ್ ರಾಜ್ , ದಿಲೀಪ್ ದೇವ್, ನೇತ್ರ ಗೋಪಾಲ್, ಸುಚಿತ್ರ ದಿನೇಶ್, ಸಾಧನ ಭಟ್, ಮನೋಹರ್, ಶಶಿರ್ ರಾಜು , ಹಾಗೂ ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: Gold Rate Today: ಆಭರಣ ಖರೀದಿಗೆ ಇದು ಗೋಲ್ಡನ್‌ ಟೈಮ್‌; ಇಳಿದ ಚಿನ್ನದ ದರ

ಶೀಘ್ರದಲ್ಲಿ ತಂಡ “ಹೇ ಪ್ರಭು ” ಮೊದಲ ನೋಟ (First Look) ಬಿಡುಗಡೆ ಮಾಡಲಿದೆ. ಸದ್ಯಕ್ಕೆ ವೆಂಕಟ್ ಭಾರದ್ವಾಜ್ ಅವರ ಹೈನ ಮತ್ತು ಆಹತ ಎರಡು ಚಿತ್ರ ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ.

Continue Reading

ಸಿನಿಮಾ

Kalki 2898 AD: ಕ್ಯೂ ನಿಂತು ಟಿಕೆಟ್‌ ಖರೀದಿಸಿ ʼಕಲ್ಕಿʼ ವೀಕ್ಷಿಸಿದ ಸ್ಟಾರ್‌ ನಿರ್ದೇಶಕ! ವೈರಲ್‌ ಫೋಟೊ ಇಲ್ಲಿದೆ

Kalki 2898 AD: ಈ ವರ್ಷದ ಬಹು ನಿರೀಕ್ಷಿತ, ಅತ್ಯಂತ ದುಬಾರಿ ಚಿತ್ರ ʼಕಲ್ಕಿ 2898 ಎಡಿʼ ಸಿನಿಮಾ ತರೆಕಂಡಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪೌರಾಣಿಕ ಕಥೆಯನ್ನು ಆಧುನಿಕ ಜಗತ್ತಿನೊಂದಿಗೆ ಬೆರೆಸಿದ ಈ ಸೈನ್ಸ್‌ ಫಿಕ್ಷನ್‌ಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಎಲ್ಲ ಶೋಗಳು ಹೌಸ್‌ಫುಲ್‌ ಆಗಿವೆ. ಈ ಮಧ್ಯೆ ಟಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರಗಳ ಜನಪ್ರಿಯ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ ಇಂದು ಮುಂಜಾನೆಯೇ ʼಕಲ್ಕಿʼ ಸಿನಿಮಾವನ್ನು ವೀಕ್ಷಿಸಿದ್ದು, ಅವರು ಥಿಯೇಟರ್‌ನಲ್ಲಿ ನಿಂತಿರುವ ಫೋಟೊ ವೈರಲ್‌ ಆಗಿದೆ.

VISTARANEWS.COM


on

Kalki 2898 AD
Koo

ಮುಂಬೈ: ಈ ವರ್ಷದ ಬಹು ನಿರೀಕ್ಷಿತ, ಅತ್ಯಂತ ದುಬಾರಿ ಚಿತ್ರ ʼಕಲ್ಕಿ 2898 ಎಡಿʼ (Kalki 2898 AD) ವಿವಿಧ ಭಾಷೆಗಳಲ್ಲಿ ಇಂದು (ಜೂನ್‌ 27) ವಿಶ್ವಾದ್ಯಂತ ತೆರೆಕಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಟಾಲಿವುಡ್‌ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ (Nag Ashwin) ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಟಾಲಿವುಡ್‌ ಸೂಪರ್‌ ಸ್ಟಾರ್‌ ಪ್ರಭಾಸ್‌, ಬಾಲಿವುಡ್‌ನ ಅಮಿತಾಭ್‌ ಬಚ್ಚನ್‌, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಮತ್ತಿತರರು ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಕಮಲ್‌ ಹಾಸನ್‌ ಮತ್ತು ಶೋಭನಾ ಕಾಣಿಸಿಕೊಂಡಿದ್ದಾರೆ. ಪೌರಾಣಿಕ ಕಥೆಯನ್ನು ಆಧುನಿಕ ಜಗತ್ತಿನೊಂದಿಗೆ ಬೆರೆಸಿದ ಈ ಸೈನ್ಸ್‌ ಫಿಕ್ಷನ್‌ಗೆ ಪ್ರೇಕ್ಷಕರು ಜೈ ಎಂದಿದ್ದಾರೆ. ಎಲ್ಲ ಶೋಗಳು ಹೌಸ್‌ಫುಲ್‌ ಆಗಿವೆ. ಈ ಮಧ್ಯೆ ಟಾಲಿವುಡ್‌ನ ಸೂಪರ್‌ ಹಿಟ್‌ ಚಿತ್ರಗಳ ಜನಪ್ರಿಯ ನಿರ್ದೇಶಕ ಎಸ್‌.ಎಸ್‌.ರಾಜಮೌಳಿ (S.S. Rajamouli) ಇಂದು ಮುಂಜಾನೆಯೇ ʼಕಲ್ಕಿʼ ಸಿನಿಮಾವನ್ನು ವೀಕ್ಷಿಸಿದ್ದು, ಅವರು ಥಿಯೇಟರ್‌ನಲ್ಲಿ ನಿಂತಿರುವ ಫೋಟೊ ವೈರಲ್‌ ಆಗಿದೆ.

ರಾಜಮೌಳಿ, ಅವರ ಪತ್ನಿ ರಮಾ ಮತ್ತು ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಥಿಯೇಟರ್‌ ಮುಂದೆ ನಿಂತಿರುವ ಫೋಟೊ ಇದಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ‌ʼʼಎಲ್ಲ ಕಡೆ ಶೋ ಹೌಸ್‌ಫುಲ್‌ ಆಗಿದೆ. ರಾಜಮೌಳಿ, ಕೀರವಾಣಿ ಅವರೂ ಚಿತ್ರದ ಟಿಕೆಟ್‌ಗಾಗಿ ಕಾಯುವಂತಾಗಿದೆʼʼ ಎಂದು ಕ್ಯಾಪ್ಶನ್‌ ಬರೆದು ಫೋಟೊ ಹಂಚಿಕೊಳ್ಳಲಾಗಿದೆ.

ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ್ದ ರಾಜಮೌಳಿ ʼಕಲ್ಕಿʼ ಚಿತ್ರತಂಡಕ್ಕೆ ಮೆಚ್ಚುಗೆ ಸೂಚಿಸಿದ್ದರು. ಟ್ರೈಲರ್‌ ವೀಕ್ಷಿಸಿ, ʼʼಅದ್ಭುತ ಟ್ರೈಲರ್‌. ಅಮಿತಾಭ್‌, ಪ್ರಭಾಸ್‌, ದೀಪಿಕಾ ಪಡುಕೋಣೆ ಪಾತ್ರಗಳು ಮನ ಮುಟ್ಟುವಂತಿದೆ. ಕಮಲ್‌ ಹಾಸನ್‌ ಅವರ ಲುಕ್‌ ಅಂತೂ ಅಮೋಘವಾಗಿದೆʼʼ ಎಂದು ಬರೆದುಕೊಂಡಿದ್ದರು. ತೆರೆಮೇಲೆ ಮ್ಯಾಜಿಕ್‌ ಸೃಷ್ಟಿಸುವ ರಾಜಮೌಳಿ ಅವರಂತಹ ನಿರ್ದೇಶಕರೇ ಶ್ಲಾಘಿಸಿರುವುದು ಚಿತ್ರತಂಡದ ಆತ್ಮವಿಶ್ವಾಸ ವೃದ್ಧಿಸಿತ್ತು.

ಮನಸೋತ ಪ್ರೇಕ್ಷಕರು

ತೆರೆಮೇಲೆ ಬೇರೆಯದೇ ಲೋಕ ತೆರೆದಿಟ್ಟ ನಿರ್ದೇಶಕರ ಶ್ರಮವನ್ನು ಚಿತ್ರ ನೋಡಿದ ಪ್ರತಿಯೊಬ್ಬರೂ ಶ್ಲಾಘಿಸುತ್ತಿದ್ದಾರೆ. ಹಾಲಿವುಡ್‌ ಚಿತ್ರದ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಅದ್ಭುತ ವಿಷುವಲ್ಸ್‌, ನಟನೆ, ಕಥೆ, ನಿರ್ದೇಶನ ಹೀಗೆ ಹಲವು ಕಾರಣಗಳಿಂದ ಸಿನಿಮಾ ವೀಕ್ಷಕರ ಮನಗೆದ್ದಿದೆ. ಸಂಗೀತ, ಡಬ್ಬಿಂಗ್‌, ಎಡಿಟಿಂಗ್‌ ಇನ್ನೂ ಉತ್ತಮಪಡಿಸಬಹುದಾಗಿತ್ತು ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ.

ನಿರ್ದೇಶಕರೇ ಹೇಳಿರುವಂತೆ ಇದು ಸುಮಾರು 6,000 ವರ್ಷಗಳಲ್ಲಿ ನಡೆಯುವ ಕಥೆ. ಕುರುಕ್ಷೇತ್ರ ಯುದ್ಧದ ಅಂತ್ಯದ ಮೂಲಕ ಚಿತ್ರ ಆರಂಭವಾಗುತ್ತದೆ. ಬಳಿಕ ಕಥೆ 6,000 ವರ್ಷಗಳ ನಂತರಕ್ಕೆ ಬದಲಾಗುತ್ತದೆ. ಅದು ಕಲಿಯುಗದ ಅಂತ್ಯದ ಸಮಯ. ಆಗ ಅರಾಜಕತೆ ತಾಂಡವವಾಡುತ್ತಿರುತ್ತದೆ. ಒಳಿತಿನ ವಿರೋಧಿ ಯಾಸ್ಕಿನ್, ಕಾಂಪ್ಲೆಕ್ಸ್ ಹೆಸರಿನ ಭವ್ಯ ಪ್ರಪಂಚವನ್ನೇ ಕಟ್ಟಿಕೊಂಡು ಅಮರತ್ವ ಪಡೆಯುವ ಹಪಾಹಪಿಯಲ್ಲಿರುತ್ತಾನೆ. ಆತನ ಅಟ್ಟಹಾಸ ಹೇಗೆ ಮತ್ತು ಯಾರು ಮಟ್ಟ ಹಾಕುತ್ತಾರೆ ಎನ್ನುವುದೇ ಸಿನಿಮಾದ ಒಟ್ಟು ಸಾರಾಂಶ. ಭೈರವನಾಗಿ ಪ್ರಭಾಸ್‌, ಸುಮತಿಯಾಗಿ ದೀಪಿಕಾ, ಅಶ್ವತ್ಥಾಮನಾಗಿ ಅಮಿತಾಭ್‌ ಬಚ್ಚನ್‌, ಯಾಸ್ಕಿನ್ ಆಗಿ ಕಮಲ್‌ ಹಾಸನ್‌ ಕಮಾಲ್‌ ಮಾಡಿದ್ದಾರೆ. ವೈಜಯಂತಿ ಮೂವೀಸ್‌ ಸುಮಾರು 600 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಿಸಿದ್ದು, ಯಾವೆಲ್ಲ ದಾಖಲೆ ಉಡೀಸ್‌ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Kalki 2898 AD Review: ʼಕಲ್ಕಿʼ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಪ್ರೇಕ್ಷಕರು; ಹೀಗಿದೆ ನೋಡುಗರ ಪ್ರತಿಕ್ರಿಯೆ

Continue Reading

ಸಿನಿಮಾ

Kalki 2898 AD Review: ʼಕಲ್ಕಿʼ ಚಿತ್ರರಂಗದ ಇತಿಹಾಸದಲ್ಲೇ ಮೈಲಿಗಲ್ಲು ಎಂದ ಪ್ರೇಕ್ಷಕರು; ಹೀಗಿದೆ ನೋಡುಗರ ಪ್ರತಿಕ್ರಿಯೆ

Kalki 2898 AD Review: ಈ ವರ್ಷದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಕಲ್ಕಿ 2898 ಎಡಿʼ ಬೆಟ್ಟದಷ್ಟು ನಿರೀಕ್ಷೆ ಹೊತ್ತು ತೆರೆಗೆ ಬಂದಿದೆ. ಪ್ರಭಾಸ್‌-ದೀಪಿಕಾ ಪಡುಕೋಣೆ-ಅಮಿತಾಭ್‌ ಬಚ್ಚನ್‌ ಮೊದಲ ಬಾರಿಗೆ ತೆರೆ ಹಂಚಿಕೊಂಡ ಈ ಸಿನಿಮಾದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದವರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದು, ಬಹುತೇಕರು ಇದನ್ನು ಮಾಸ್ಟರ್‌ ಪೀಸ್‌ ಎಂದೇ ಕರೆದಿದ್ದಾರೆ. ವೀಕ್ಷಕರು ಏನಂದ್ರು ಎನ್ನುವ ವಿವರ ಇಲ್ಲಿದೆ.

VISTARANEWS.COM


on

Kalki 2898 AD Review
Koo

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಚಿತ್ರ ʼಕಲ್ಕಿ 2898 ಎಡಿʼ (Kalki 2898 ADಬೆಟ್ಟದಷ್ಟು ನಿರೀಕ್ಷೆ ಹೊತ್ತು ತೆರೆಗೆ ಬಂದಿದೆ. ಪ್ರಭಾಸ್‌-ದೀಪಿಕಾ ಪಡುಕೋಣೆ-ಅಮಿತಾಭ್‌ ಬಚ್ಚನ್‌ ಮೊದಲ ಬಾರಿಗೆ ತೆರೆ ಹಂಚಿಕೊಂಡ ಈ ಸಿನಿಮಾದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರ ನೋಡಿದವರು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಸುತ್ತಿದ್ದು, ಬಹುತೇಕರು ಇದನ್ನು ಮಾಸ್ಟರ್‌ ಪೀಸ್‌ ಎಂದೇ ಕರೆದಿದ್ದಾರೆ (Kalki 2898 AD Review).

ನಾಗ್‌ ಅಶ್ವಿನ್‌ ನಿರ್ದೇಶನದ ಈ ಸೈನ್ಸ್‌ ಫಿಕ್ಷನ್‌ ಚಿತ್ರಕ್ಕೆ ಪ್ರೇಕ್ಷರು ಫಿದಾ ಆಗಿದ್ದಾರೆ. ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು ಎಂದು ಅನೇಕರು ಕೊಂಡಾಡಿದ್ದಾರೆ. ಅಧ್ಬುತ ಕಥೆ ಮತ್ತು ವಿಷುವಲ್ಸ್‌ ನೋಡುಗರ ಗಮನ ಸೆಳೆಯುತ್ತಿದೆ. ಪೌರಾಣಿಕ ಮತ್ತು ಆಧುನಿಕ ಕಾಲಘಟ್ಟದ ಕಥೆಯನ್ನು ಹಿತವಾಗಿ ಬೆರೆಸಿ ತೆರೆ ಮೇಲೆ ಮೂಡಿಸಿರುವ ಈ ವಿಶಿಷ್ಟ ಪ್ರಯತ್ನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರೇಕ್ಷಕರು ಏನಂದ್ರು?

ʼʼಕಲ್ಕಿ 2898 ಎಡಿʼ ಭಾರತೀಯ ಚಿತ್ರರಂಗದಲ್ಲೇ ಅದ್ಭುತ ಸಿನಿಮಾ. ಇದೊಂದು ಮೈಲಿಗಲ್ಲು. ತೆರೆ ಮೇಲೆ ಮೂಡುವ ದೃಶ್ಯಗಳು ಬೇರೊಂದು ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತವೆ. ತೆರೆ ಮೇಲೆ ಏನೆಲ್ಲ ಮ್ಯಾಜಿಕ್‌ ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಿದ್ದಾರೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಬ್ಲ್ಯಾಕ್‌ ಬಸ್ಟರ್‌. ಫಸ್ಟ್‌ ಆಫ್‌ ಸ್ವಲ್ಪ ನಿಧಾನವಾಗಿ ಸಾಗುತ್ತದೆ. ಇಂಟರ್‌ವೆಲ್‌ ಸೀನ್‌ ಅದ್ಭುತ. ಸೆಕೆಂಡ್‌ ಆಫ್‌ ಚಿಂದಿ. ಅದರಲ್ಲಿಯೂ ಕ್ಲೈಮಾಕ್ಸ್‌ನ ಕೊನೆಯ 10 – 15 ಮರೆಯಲು ಸಾಧ್ಯವೇ ಇಲ್ಲʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ʼʼಅಮಿತಾಭ್‌ ಬಚ್ಚನ್‌ ಮತ್ತು ಪ್ರಭಾಸ್‌ ಗಮನ ಸೆಳೆಯುತ್ತಾರೆ. ಸೆಕೆಂಡ್‌ ಆಫ್‌ ಹಾಲಿವುಡ್‌ ಚಿತ್ರಗಳ ಮಾದರಿಯಲ್ಲಿ ಮೂಡಿ ಬಂದಿದೆ. ಈ ಸೈನ್ಸ್‌ ಫಿಕ್ಷನ್‌ ಮಹಾಭಾರತದ ಕಥೆಯನ್ನು ಒಳಗೊಂಡಿದ್ದು, ಪ್ರತಿಯೊಬ್ಬರೂ ತಪ್ಪದೇ ನೋಡಬೇಕುʼʼ ಎಂದು ವೀಕ್ಷಕರೊಬ್ಬರು ಸಲಹೆ ನೀಡಿದ್ದಾರೆ.

ಸಿನಿಮಾದ ಕಥೆ, ವಿಷುವಲ್ಸ್‌, ಅಭಿನಯಕ್ಕೆ ಪೂರ್ಣಾಂಕ ನೀಡಿದ ಪ್ರೇಕ್ಷಕರು ನಿರ್ದೇಶಕ ನಾಗ್‌ ಅಶ್ವಿನ್‌ ಅವರಿಗೆ ಸೆಲ್ಯೂಟ್‌ ಹೊಡೆದಿದ್ದಾರೆ. ʼʼತಂಡದ ಪ್ರತಿಯೊಬ್ಬರೂ ಅದ್ಭುತ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ನಿರ್ದೇಶಕ ನಾಗ್‌ ಅಶ್ವಿನ್‌ ಅವರ ಕಾರ್ಯವಂತೂ ಇನ್ನು ಒಂದು ಹೆಜ್ಜೆ ಮುಂದೆ. ಪೌರಾಣಿ ಕತೆ ಮತ್ತು ವಿಜ್ಞಾನವನ್ನು ಹದವಾಗಿ ಬೆರೆಸಿ ಮ್ಯಾಜಿಕ್‌ ಸೃಷ್ಟಿಸಿದ್ದಾರೆ. ಎರಡನೇ ಭಾಗಕ್ಕಾಗಿ ಕಾಯುತ್ತಿದ್ದೇವೆʼʼ ಎಂದು ನೋಡುಗರೊಬ್ಬರು ಬರೆದಿದ್ದಾರೆ.

ಅಭಿನಯಕ್ಕೆ ಮೆಚ್ಚುಗೆ

ವಿಷುವಲ್ಸ್‌, ನಿರ್ದೇಶನ, ಕಥೆಯ ಜತೆಗೆ ಕಲಾವಿದರ ಅಭಿನಯಕ್ಕೂ ಪ್ರೇಕ್ಷಕರು ಜೈ ಎಂದಿದ್ದಾರೆ. ಅದರಲ್ಲಿಯೂ ಅಮಿತಾಭ್‌, ಪ್ರಭಾಸ್‌, ದೀಪಿಕಾ, ಕಮಲ್‌ ಹಾಸನ್‌ ಅವರ ನಟನೆ ಎಲ್ಲರ ಗಮನ ಸೆಳೆದಿದೆ. ʼʼಅಮಿತಾಭ್‌ ಫಸ್ಟ್‌ ಹಾಫ್‌ನಲ್ಲಿ ಮಿಂಚಿದರೆ ಸೆಕೆಂಡ್‌ ಆಪ್‌ನಲ್ಲಿ ಪ್ರಭಾಸ್‌ ಮತ್ತು ದೀಪಿಕಾ ಗಮನ ಸೆಳೆಯುತ್ತಾರೆ. ಕೆಲವೇ ನಿಮಿಷಗಳಲ್ಲಿ ಬಂದು ಹೋಗುವ ವಿಲನ್‌ ಕಮಲ್‌ ಹಾಸನ್‌ ಅಬಿನಯವೂ ಗಮನ ಸೆಳೆಯುತ್ತದೆʼʼ ಎಂದು ಒಬ್ಬರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಅಶ್ವತ್ಥಾಮನಾಗಿ ಅಮಿತಾಭ್‌, ಗರ್ಭಿಣಿ ದೀಪಿಕಾ, ಪ್ರಭಾಸ್‌ ಕಲ್ಕಿಯನ್ನು ಎತ್ತಿಕೊಂಡಿರುವ ದೃಶೃವನ್ನಂತೂ ಮರೆಯಲು ಸಾಧ್ಯವೇ ಇಲ್ಲ ಎಂದು ಇನ್ನೊಬ್ಬರು ಹೇಳಿದ್ದು, ಸಿನಿಮಾ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

ಇನ್ನು ಕೆಲವರಿಗೆ ಕಲ್ಕಿ ಸಿನಿಮಾ ಇಷ್ಟವಾಗಿದ್ದರೂ ಅದರಲ್ಲಿನ ಕೆಲವೊಂದು ಅಂಶಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಿನಿಮಾ, ನಿರ್ದೇಶನ, ಅಭಿನಯ, ವಿಷುವಲ್ಸ್‌ ಎಲ್ಲವೂ ಚೆನ್ನಾಗಿದೆ. ಆದರೆ ಕಥೆ ತುಂಬ ನಿಧಾನವಾಗಿ ಸಾಗುತ್ತದೆ ಎಂದು ಒಬ್ಬರು ಹೇಳಿದರೆ ಇನ್ನೊಬ್ಬರು ಸಂಗೀತ ಅಷ್ಟೇನೂ ಗಮನ ಸೆಳೆಯುವುದಿಲ್ಲ ಎಂದಿದ್ದಾರೆ. ಮತ್ತೊಬ್ಬರು ಚಿತ್ರ ಚೆನ್ನಾಗಿದೆ. ಆದರೆ ಪದೇ ಪದೆ ನೋಡುವಷ್ಟಿಲ್ಲ. ಒಮ್ಮೆ ಮಾತ್ರ ನೋಡಬಹುದು ಎಂದಿದ್ದಾರೆ. ಒಟ್ಟಿನಲ್ಲಿ ಬಹುಭಾಷೆಯಲ್ಲಿ ತೆರೆಕಂಡ ಸಿನಿಮಾ ಗಮನ ಸೆಳೆದಿರುವುದಂತು ಸತ್ಯ.

ಇದನ್ನೂ ಓದಿ: Rishab Shetty: ಕುಂದಾಪುರಕ್ಕೆ ಆಗಮಿಸಿದ ʼಕಲ್ಕಿʼಯ ಬುಜ್ಜಿ; ಪ್ರಭಾಸ್‌ ಕಾರು ರೈಡ್‌ ಮಾಡಿದ ರಿಷಬ್‌ ಶೆಟ್ಟಿ ಹೇಳಿದ್ದೇನು?

Continue Reading

ಕಾಲಿವುಡ್

Actress Akshita: ಕನ್ನಡತಿ ಅಕ್ಷಿತಾ ಈಗ ತಮಿಳು ಚಿತ್ರದ ನಾಯಕಿ!

Actress Akshita : ಕನ್ನಡದ ಸಿದ್ಲಿಂಗು-2 ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ.

VISTARANEWS.COM


on

Actress Akshita entry to kollywood cinema
Koo

ಬೆಂಗಳೂರು: ಕನ್ನಡದ ನಟ ನಟಿಯರು ಬೇರೆ ಭಾಷೆಗಳಲ್ಲಿ ಮಿಂಚುವುದು ಹೊಸತೇನಲ್ಲ. ಆದರೆ, ಬೇರೆ ಭಾಷೆಗಳಲ್ಲಿ ಜನಪ್ರಿಯತೆ ದಕ್ಕಿದ ಮೇಲೂ ಕನ್ನಡತನವನ್ನೇ ಧ್ಯಾನಿಸುತ್ತಾ, ತಾಯ್ನೆಲದ ಪ್ರೇಕ್ಷಕರನ್ನು ಚೆಂದದ ಪಾತ್ರಗಳ ಮೂಲಕ ಪ್ರಧಾನ ಆದ್ಯತೆಯಾಗಿಸಿಕೊಂಡವರ ಸಂಖ್ಯೆ ಕಡಿಮೆಯಿದೆ. ಆ ಸಾಲಿಗೆ ಸೇರುವ ಗುಣ ಹೊಂದಿರುವವರು ಅಕ್ಷಿತಾ ಬೋಪಯ್ಯ. ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಪ್ರೇಕ್ಷಕರ ಮನಗೆದ್ದಿರುವ ಅಕ್ಷಿತಾ, ಕಾಲದ ಸೆಳವಿಗೆ ಸಿಕ್ಕು ತಮಿಳು ಸೀರಿಯಲ್ ಜಗತ್ತಿಗೆ ಅಡಿಯಿರಿಸಿದ್ದರು. ಈವತ್ತಿಗೆ ಆಕೆಯ ಪಾಲಿಗೆ ತಮಿಳು ಕಿರುತೆರೆಯಲ್ಲಿ ದೊಡ್ಡ ಮಟ್ಟದ ಗೆಲುವು ಸಿಕ್ಕಿದೆ. ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನೂ ಸಂಪಾದಿಸಿಕೊಂಡಿರುವ ಅಕ್ಷಿತಾ ಈಗ ತಮಿಳು ಚಿತ್ರವೊಂದರ ಮೂಲಕ ನಾಯಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.

ʻಬ್ರಹ್ಮಚಾರಿʼ, ʻಐ ಲವ್ ಯೂʼ, ʻಶಿವಾರ್ಜುನʼ ಮುಂತಾದ ಚಿತ್ರಗಳ ಮೂಲಕ ಅಕ್ಷಿತಾ ಕನ್ನಡದ ಪ್ರೇಕ್ಷಕರಿಗೆಲ್ಲ ಪರಿಚಿತರಾಗಿದ್ದಾರೆ. ಈ ನಡುವೆ ತಮಿಳು ಸೀರಿಯಲ್‌ಗಳಾಗಿ ನಟಿಸುವ ಮೂಲಕ ಭಾರೀ ಜನಪ್ರಿಯತೆಯನ್ನೂ ಪಡೆದುಕೊಂಡಿದ್ದಾರೆ. ಹಾಗೆ ಅಕ್ಷಿತಾ ನಟಿಸುತ್ತಿದ್ದ ಪ್ರಸಿದ್ಧ ತಮಿಳು ಧಾರಾವಾಹಿ ನಾಲ್ಕು ತಿಂಗಳ ಹಿಂದೆ ಮುಕ್ತಾಯಗೊಂಡಿತ್ತು. ಅದಾದ ನಂತರ ಸೀರಿಯಲ್ಲುಗಳ ಅವಕಾಶವಿದ್ದರೂ ಕೂಡಾ ಅಕ್ಷಿತಾರ ಆಸಕ್ತಿ ಹೊರಳಿಕೊಂಡಿದ್ದದ್ದು ಸಿನಿಮಾ ರಂಗದತ್ತ. ತಮಿಳು ಕಿರುತೆರೆ ಜಗತ್ತಿನ ಮುಖ್ಯ ನಾಯಕಿಯಾಗಿ ದಾಖಲಾಗಿದ್ದ ಅಕ್ಷಿತಾ, ಸಿನಿಮಾದಲ್ಲಿ ನಟಿಸುವ ಮೂಲಕ ಏಕತಾನತೆಯನ್ನು ದಾಟಿಕೊಳ್ಳುವ ನಿರ್ಧಾರ ಮಾಡಿದ್ದರು.
ಅಂಥಾ ಹೊತ್ತಿನಲ್ಲಿ ತಮಿಳಿನಲ್ಲೊಂದು ಚೆಂದದ ಅವಕಾಶ ಸಿಕ್ಕಿದೆ.

ಕನ್ನಡದ ಸಿದ್ಲಿಂಗು-2 ಚಿತ್ರವನ್ನು ನಿರ್ಮಾಣ ಮಾಡಿದ್ದ ಬ್ಯಾನರಿನಲ್ಲಿಯೇ ಈ ಚಿತ್ರವೂ ತಯಾರಾಗುತ್ತಿದೆ. ಇದು ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿಯೇ ರೂಪುಗೊಳ್ಳಲಿದೆ. ವಿಶೇಷವೆಂದರೆ, ಅಕ್ಷಿತಾ ಬಯಸಿದಂಥಾ ಪಾತ್ರವೇ ಇಲ್ಲಿ ಸಿಕ್ಕಿದೆ. ಸದ್ಯದ ಮಟ್ಟಿಗೆ ಈ ಸಿನಿಮಾ ಬಗೆಗಾಗಲಿ, ಅಕ್ಷಿತಾರ ಪಾತ್ರದ ಬಗೆಗಾಗಲಿ ಹೆಚ್ಚೇನೂ ಮಾಹಿತಿ ಜಾಹೀರು ಮಾಡುವಂತಿಲ್ಲ. ಆದರೆ, ಒಂದೊಳ್ಳ್ಳೆ ತಂಡ, ಹೊಸತೆನ್ನಿಸುವಂಥಾ ಕಥಾನಕದೊಂದಿಗೆ ಈ ಸಿನಿಮಾ ತಯಾರಾಗುತ್ತಿರುವ ಬಗ್ಗೆ ಅಕ್ಷಿತಾರೊಳಗೊಂದು ಖುಷಿ ಇದೆ. ಸದ್ಯ ಕೊಡಗಿನ ಸುತ್ತಮುತ್ತ ಸದರಿ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ.

ಇದನ್ನೂ ಓದಿ: Vinay Gowda: ʻಡೆವಿಲ್ʼ ಸಿನಿಮಾದಲ್ಲಿ ನಾನೇ ವಿಲನ್, ಪ್ರಾಜೆಕ್ಟ್‌ ಏನಾಗುತ್ತೋ ಗೊತ್ತಿಲ್ಲ ಎಂದ ʻಬಿಗ್ ಬಾಸ್ʼ ಆನೆ ವಿನಯ್ ಗೌಡ!

ತಮಿಳು ಒಂದು ಹಂತದಲ್ಲಿ ಅಕ್ಷಿತಾ ಪಾಲಿಗೆ ಗುರುತಿರದ ಭಾಷೆಯಾಗಿತ್ತು. ಆ ಭಾಷೆಯಲ್ಲೇ ಧಾರಾವಾಹಿಯೊಂದರ ನಾಯಕಿಯಾಗೋ ಅವಕಾಶ ಕೂಡಿ ಬಂದಾಗ, ಪ್ರತಿಭೆಯ ಬಲದಿಂದಲೇ ಅದನ್ನು ತಮ್ಮದಾಗಿಸಿಕೊಂಡಿದ್ದವರು ಅಕ್ಷಿತಾ. ಹಾಗೆ ತಮಿಳು ಕಿರುತೆರೆಗೆ ತೆರಳಿ ಅಲ್ಲಿನ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರುವ ಅಕ್ಷಿತಾ ಪಾಲಿಗೆ, ಅಲ್ಲಿಯೇ ನಟಿಯಾಗಿ ನೆಲೆಗಾಣುವ ವಿಪುಲ ಅವಕಾಶಗಳಿದ್ದಾವೆ. ಆದರೂ ಕೂಡಾ ಕನ್ನಡ ಚಿತ್ರರಂಗವೇ ತನ್ನ ಪಾಲಿನ ಖಾಯಂ ನೆಲೆ ಅಂದುಕೊಂಡಿರುವ ಅವರು, ಈಗಾಗಲೇ ಕರ್ನಾಟಕದ ಅಳಿಯ, ಮಿಸ್ಟರ್ ಆಂಡ್ ಮಿಸೆಸ್ ಎಂಬೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವೆರಡೂ ಸನಿಮಾಗಳೀಗ ಬಿಡುಗಡೆಯ ಹೊಸ್ತಿಲಿನಲ್ಲಿವೆ.

ಹೀಗೆ ಪರಭಾಷಾ ನೆಲದಲ್ಲಿಯೂ ನೆಲೆ ಕಂಡುಕೊಂಡು, ಕನ್ನಡ ಚಿತ್ರರಂಗದಲ್ಲಿಯೂ ಮಿಂಚುವ ಲಕ್ಷಣಗಳನ್ನ ಹೊಂದಿರುವ ಅಕ್ಷಿತಾ ಕೊಡಗಿನವರು. ಬಿಎಸ್‍ಸಿ ಪದವೀಧರೆಯಾಗಿರೋ ಅಕ್ಷಿತಾ ಕ್ಲಾಸಿಕಲ್ ಡ್ಯಾನ್ಸರ್ ಕೂಡಾ ಹೌದು. ಕುಟುಂಬದಲ್ಲಿ ಸಿನಿಮಾ ಹಿನ್ನಲೆ ಇಲ್ಲದಿದ್ದರೂ ಕೂಡಾ ಆರಂಭದಿಂದಲೇ ನಟಿಯಾಗೋ ಕನಸು ಸಾಕಿಕೊಂಡಿದ್ದವರು ಅಕ್ಷಿತಾ. ಪದವಿ ಮುಗಿಯುತ್ತಲೇ ಕೆಲಸಕ್ಕೆ ಸೇರಿಕೊಳ್ಳುವ ಸಂದರ್ಭ ಬಂದಾಗ ಸೀದಾ ತನ್ನ ಕನಸಿನ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆಯೂರಿದ್ದ ಈಕೆ, ಸಾಯಿ ಕುಮಾರ್ ನಟಿಸಿದ್ದ ರಿಯಲ್ ಪೊಲೀಸ್ ಚಿತ್ರದ ಪಾತ್ರವೊಂದರಲ್ಲಿ ನಟಿಸಿದ್ದರು. ಆ ಮೂಲಕ ಎಂಟ್ರಿ ಪಡೆದುಕೊಂಡಿದ್ದ ಅಕ್ಷಿತಾ ಆ ನಂತರದಲ್ಲಿ ಒಂದಷ್ಟು ಚಿತ್ರಗಳಲ್ಲಿ ಸಹನಟಿಯಾಗಿ ನಟಿಸಿ, ನಂತರ ನಾಯಕಿಯಾಗಿಯೂ ಹೊರಹೊಮ್ಮಿದ್ದರು.

ಈ ನಡುವೆ ತಮಿಳು ಸೀರಿಯಲ್ಲುಗಳ ಅವಕಾಶ ಸಿಕ್ಕಿ, ಅಲ್ಲಿ ಪ್ರಸಿದ್ಧಿ ಬಂದರೂ ಕನ್ನಡವೇ ಅಕ್ಷಿತಾರ ಪಾಲಿಗೆ ಪ್ರಧಾನ ಆದ್ಯತೆಯಾಗಿತ್ತು. ಕನ್ನಡದ ನೆಲೆಯಿಂದಲೇ ಬೇರೆ ಬೇರೆ ಭಾಷೆಗಳಲ್ಲಿಯೂ ನಟಿಸಬೇಕೆಂಬುದು ಅವರ ಬಯಕೆ. ಓರ್ವ ನಟಿಯಾಗಿ ಅಕ್ಷಿತಾರದ್ದು ಭಿನ್ನ ಅಭಿರುಚಿ. ಸಿಕ್ಕ ಅವಕಾಶಗಳನ್ನು ಅಳೆದೂ ತೂಗಿ ಒಪ್ಪಿಕೊಳ್ಳುವ ಈಕೆಯ ಪ್ರಧಾನ ಆದ್ಯತೆ ಕಂಟೆಂಟ್ ಓರಿಯಂಟೆಡ್ ಸಿನಿಮಾಗಳೇ. ನಟನೆಗೆ ಅವಕಾಶವಿರುವ ಭಿನ್ನ ಪಾತ್ರಗಳಲ್ಲಿ ಮಿಂಚುವ ಆಸೆ ಹೊಂದಿರುವ ಅಕ್ಷಿತಾ ಈಗ ತಮಿಳಿನಲ್ಲಿ ನಾಯಕಿಯಾಗಿ ಅವತರಿಸಿದ್ದಾರೆ. ತೆಲುಗಿಗೂ ಎಂಟರಿ ಕೊಡುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಕನ್ನಡದಲ್ಲಿಯೂ ಒಂದಷ್ಗಟು ಒಳ್ಳೆ ಅವಕಾಶಗಳು ಅವರನ್ನು ಅರಸಿಕೊಂಡು ಬರುತ್ತಿವೆ. ಸ್ತ್ರೀ ಪ್ರಧಾನ ಚಿತ್ರದ ಕನಸು ಹೊಂದಿರೋ ಅಕ್ಷಿತಾ, ಅಂಥಾದ್ದೊಂದು ಅಮೋಘ ಅವಕಾಶ ಕನ್ನಡದಿಂದಲೇ ಸಿಗುವ ನಿರೀಕ್ಷೆ ಹೊಂದಿದ್ದಾರೆ.

Continue Reading
Advertisement
Dina Bhavishya
ಭವಿಷ್ಯ44 mins ago

Dina Bhavishya : ಕುಟುಂಬದಲ್ಲಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪವಾಗದಂತೆ ಎಚ್ಚರ ವಹಿಸಿ

IND vs ENG Semi Final
ಕ್ರೀಡೆ4 hours ago

IND vs ENG Semi Final: ಇಂಗ್ಲೆಂಡ್​ ಮಣಿಸಿ 10 ವರ್ಷಗಳ ಬಳಿಕ ಫೈನಲ್​ ಪ್ರವೇಶಿಸಿದ ಭಾರತ

Abhyas Trial
ದೇಶ6 hours ago

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Congress Protest
ಕರ್ನಾಟಕ6 hours ago

ಹಾಲು, ಪೆಟ್ರೋಲ್‌ ಬೆಲೆ ಏರಿಸಿ, ಎಸಿ ಬಸ್‌ನಲ್ಲಿ ಪ್ರತಿಭಟನೆಗೆ ಹೊರಟ ಕಾಂಗ್ರೆಸ್‌ ಹಣದ ಮೂಲ ಏನು? ಬಿಜೆಪಿ ಪ್ರಶ್ನೆ

NEET Aspirant
ದೇಶ7 hours ago

NEET Aspirant: ನೀಟ್‌ ಅಕ್ರಮ ಬಯಲಾದ ಬೆನ್ನಲ್ಲೇ 17 ವರ್ಷದ NEET ಅಭ್ಯರ್ಥಿ ಆತ್ಮಹತ್ಯೆ; ಸಾವಿಗೆ ಯಾರು ಹೊಣೆ?

Tata Motors has taken the lead in the SUV market with Nexon Punch
ಕರ್ನಾಟಕ7 hours ago

Tata Motors: ನೆಕ್ಸಾನ್, ಪಂಚ್‌ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ಮುನ್ನಡೆ ಸಾಧಿಸಿದ ಟಾಟಾ ಮೋಟಾರ್ಸ್

Rohit Sharma
ಕ್ರೀಡೆ7 hours ago

Rohit Sharma: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ವಿಶ್ವ ದಾಖಲೆ ಬರೆದ ಹಿಟ್​ಮ್ಯಾನ್ ರೋಹಿತ್

virat kohli
ಕ್ರೀಡೆ8 hours ago

Virat Kohli: ಮೊದಲ ಬಾರಿಗೆ ಸೆಮಿಫೈನಲ್​ನಲ್ಲಿ ಸಿಂಗಲ್​ ಡಿಜಿಟ್​ಗೆ ಔಟ್​ ಆದ​ ಕೊಹ್ಲಿ; ಸಮಾಧಾನಪಡಿಸಿದ ಕೋಚ್​

DCM DK Shivakumar latest statement about CM change issue
ಪ್ರಮುಖ ಸುದ್ದಿ8 hours ago

DK Shivakumar: ಸಿಎಂ ಬದಲಾವಣೆ; ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದ ಡಿ.ಕೆ. ಶಿವಕುಮಾರ್

roopantara Movie First Look Poster released
ಕರ್ನಾಟಕ8 hours ago

Kannada New Movie: ‘ರೂಪಾಂತರ’ಗೊಂಡ ರಾಜ್ ಬಿ. ಶೆಟ್ಟಿ! ಮತ್ತೊಂದು ವಿಭಿನ್ನ ಚಿತ್ರ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ12 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು14 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ17 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌