ಎರಡು ಚೂರಾಗಿ ಒಡೆದು, ಮುಳುಗಿದ ಬೋಟ್​​; ಮದುವೆಯಿಂದ ಬರುತ್ತಿದ್ದ 103 ಜನರ ದುರ್ಮರಣ - Vistara News

ವಿದೇಶ

ಎರಡು ಚೂರಾಗಿ ಒಡೆದು, ಮುಳುಗಿದ ಬೋಟ್​​; ಮದುವೆಯಿಂದ ಬರುತ್ತಿದ್ದ 103 ಜನರ ದುರ್ಮರಣ

ಮೃತಪಟ್ಟವರೆಲ್ಲ ಇಲ್ಲೇ ಸುತ್ತಲಿನ ಹಳ್ಳಿಯವರೇ. ಪರಸ್ಪರ ಸಂಬಂಧಿಕರು, ಕುಟುಂಬದವರು ಇದ್ದಾರೆ. 100ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

VISTARANEWS.COM


on

boat capsizes in Nigeria
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮದುವೆ ಸಂಭ್ರಮದಲ್ಲಿ ಪಾಲ್ಗೊಂಡು, ಖುಷಿಯಿಂದ ವಾಪಸ್​ ಬರುತ್ತಿದ್ದವರನ್ನು ಹೊತ್ತು ಪ್ರಯಾಣಿಸುತ್ತಿದ್ದ ದೋಣಿಯೊಂದು ಮುಳುಗಿ (Boat Capsizes) 103 ಜನ ಮೃತಪಟ್ಟಿದ್ದಾರೆ. ಆ ಬೋಟ್​​ನಲ್ಲಿ ಮಹಿಳೆಯರು, ಮಕ್ಕಳೂ ಇದ್ದರು. ಒಂದು ಅದ್ಧೂರಿ ಮದುವೆ ಮುಗಿಸಿ ವಾಪಸ್​ ತಮ್ಮ ಊರುಗಳಿಗೆ ತೆರಳಲು, ಬೋಟ್​​ನಲ್ಲಿ ಹೊರಟಿದ್ದರು. ಆದರೆ ವಿಧಿ ಆಟವಾಡಿದೆ. ಅಂದಹಾಗೇ, ಈ ಘಟನೆ ನಡೆದಿದ್ದು ಆಫ್ರಿಕನ್​ ದೇಶ ನೈಜೀರಿಯಾದಲ್ಲಿ. ಅಲ್ಲಿನ ಕ್ವಾರಾ ಎಂಬ ರಾಜ್ಯದ ಪಟೇಗಿ ಜಿಲ್ಲೆಯಲ್ಲಿ. ಇಲ್ಲಿ ಹರಿಯುವ ನೈಜರ್ ನದಿ ಈಗ 103 ಜನರನ್ನು ತನ್ನೊಡಲಿಗೆ ಸೆಳೆದುಕೊಂಡಿದೆ. ಇನ್ನೂ 100 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಕಣ್ಮರೆಯಾಗಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಮುಖಂಡ ಅಬ್ದುಲ್ ಗಣ ಲಕ್ಪಾದಾ, ‘ಮೃತಪಟ್ಟವರೆಲ್ಲ ಇಲ್ಲೇ ಸುತ್ತಲಿನ ಹಳ್ಳಿಯವರೇ. ಪರಸ್ಪರ ಸಂಬಂಧಿಕರು, ಕುಟುಂಬದವರು ಇದ್ದಾರೆ. ಒಂದು ಮದುವೆಗೆ ಹೋಗಿ, ತಡರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ. ಬಳಿಕ ದೋಣಿ ಹತ್ತಿದ್ದಾರೆ. ಈ ದೋಣಿಯಲ್ಲಿ ಸುಮಾರು 300 ಜನರನ್ನು ತುಂಬಲಾಗಿತ್ತು. ಬೋಟ್​​ನ ಸಾಮರ್ಥ್ಯಕ್ಕೂ ಮೀರಿ ಜನ ಹತ್ತಿದ್ದರಿಂದಲೇ ದೋಣಿ ಸಮತೋಲನ ಕಳೆದುಕೊಂಡಿತು. ನೀರಿನಲ್ಲಿದ್ದ ಮರದ ದಿಮ್ಮಿಗೆ ಬಡಿದು, ಎರಡು ಚೂರಾಗಿ ನೀರಿನಲ್ಲಿ ಮುಳುಗಿದೆ’ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಇವರೆಲ್ಲ ಮದುವೆಗೆ ಬರುವಾಗ ಮೋಟರ್​ಸೈಕಲ್​ನಲ್ಲಿ, ಬೇರೆ ಕೆಲವು ವಾಹನಗಳ ಮೂಲಕ ಮತ್ತೊಂದು ರಸ್ತೆ ಮಾರ್ಗದಲ್ಲಿ ಬಂದಿದ್ದರು. ಆದರೆ ಜೋರಾಗಿ ಮಳೆ ಬಂದ ಕಾರಣ ರಸ್ತೆಗಳೆಲ್ಲ ಜಲಾವೃತವಾಗಿವೆ. ಹೀಗಾಗಿ ದೋಣಿಯನ್ನು ಹತ್ತಿ, ಮತ್ತೊಂದು ದಡಕ್ಕೆ ಹೊರಟಿದ್ದರು ಎಂದೂ ಅಬ್ದುಲ್​ ಗಣ ತಿಳಿಸಿದ್ದಾರೆ.

ಇದನ್ನೂ ಓದಿ: Kerala Boat Tragedy : ಕೇರಳದಲ್ಲಿ ಪ್ರವಾಸಿ ದೋಣಿ ಮುಳುಗಿ 18 ಮಂದಿ ಸಾವು, ಮುಂದುವರಿದ ಶೋಧ

ಎಗ್ಬೋಟಿ ಎಂಬ ಹಳ್ಳಿಯಲ್ಲಿ ಸೋಮವಾರ ಮದುವೆ ಇತ್ತು. ಈ ಮದುವೆ ಮರುದಿನ ಅಂದರೆ ಮಂಗಳವಾರ ಮುಂಜಾನೆ 3ಗಂಟೆ ಹೊತ್ತಿಗೆ ದೋಣಿ ಮುಳುಗಿದೆ. ಹೀಗಾಗಿ ಅವಘಡದ ಬಗ್ಗೆ ತಕ್ಷಣವೇ ಗೊತ್ತಾಗಲೇ ಇಲ್ಲ. ಹಾಗಿದ್ದಾಗ್ಯೂ ನದಿತೀರದಲ್ಲಿ ವಾಸವಾಗಿದ್ದ ಜನರು ಕೂಡಲೇ ಹೋಗಿ ಸುಮಾರು 50 ಮಂದಿಯನ್ನು ರಕ್ಷಣೆ ಮಾಡಿದ್ದಾರೆ. ಅಷ್ಟರಲ್ಲಿ ಅಗ್ನಿಶಾಮಕದಳದವರು, ಪೊಲೀಸರು ಮತ್ತು ಇತರ ರಕ್ಷಣಾ ಸಿಬ್ಬಂದಿ ಅಲ್ಲಿಗೆ ಆಗಮಿಸಿದ್ದರು. ಇತ್ತೀಚಿನ ದಿನಗಳಲ್ಲೇ ಅತ್ಯಂತ ಭಯಾನಕವಾದ ದೋಣಿ ದುರಂತ ಇದಾಗಿದೆ. ನಾಪತ್ತೆಯಾದವರ ಹುಡುಕುವ ಕಾರ್ಯಾಚರಣೆ ನಡೆಯುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral News: ಕಾಮ ದಾಹ ತಣಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡ ಶಿಕ್ಷಕಿಗೆ ಶಿಕ್ಷೆ

Viral News: ಗುರುವೆಂದರೆ ಗುರಿ ತೋರಿಸುವವರು ಎಂಬ ನಂಬಿಕೆ. ಆದರೆ ಇಲ್ಲೊಬ್ಬಳು ಶಿಕ್ಷಕಿ ಪಾಠ ಮಾಡುವ ಬದಲು ವಿದ್ಯಾರ್ಥಿಗಳೊಂದಿಗೆ ಕಾಮದಾಟವಾಡಿ ಈಗ ಗರ್ಭಿಣಿಯಾಗಿದ್ದಾಳೆ. ಯುನೈಟೆಡ್ ಕಿಂಗ್ ಡಮ್‌ನಲ್ಲಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಅವರಲ್ಲಿ ಒಬ್ಬರಿಂದ ಗರ್ಭಿಣಿಯಾದ ಆರೋಪದ ಮೇಲೆ ಬ್ರಿಟಿಷ್ ಮಹಿಳಾ ಶಿಕ್ಷಕಿಗೆ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

VISTARANEWS.COM


on

Viral News
Koo

ಶಿಕ್ಷಕರು ವಿದ್ಯಾರ್ಥಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಸುವವರು ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ಶಿಕ್ಷಕಿ ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡು ಜೈಲು ಪಾಲಾಗಿದ್ದಳು. ಯುನೈಟೆಡ್ ಕಿಂಗ್ ಡಮ್‌ನಲ್ಲಿ ಇಬ್ಬರು ಹದಿಹರೆಯದ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿ ಅವರಲ್ಲಿ ಒಬ್ಬರಿಂದ ಗರ್ಭಿಣಿಯಾದ ಆರೋಪದ ಮೇಲೆ ಬ್ರಿಟಿಷ್ ಮಹಿಳಾ ಶಿಕ್ಷಕಿಗೆ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ ಈಗ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌ (Viral News) ಆಗಿದೆ.

ರೆಬೆಕಾ ಜಾಯ್ನೆಸ್ (30) ಜೈಲು ಶಿಕ್ಷೆಗೆ ಒಳಗಾದ ಶಿಕ್ಷಕಿ. ಈಕೆ ಇಬ್ಬರು ಹುಡುಗರಿಗೆ ಸೋಶಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡುವ ಮೂಲಕ ಅವರ ಪರಿಚಯ ಮಾಡಿಕೊಂಡು ಈ ಕೃತ್ಯ ನಡೆಸಿದ್ದಾಳೆ. ಈ ಹಿಂದೆ ಈ ಶಿಕ್ಷಕಿಗೆ ಒಬ್ಬ ಬಾಲಕನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಕ್ಕಾಗಿ ಕೋರ್ಟ್ ಶಿಕ್ಷೆ ವಿಧಿಸಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದ ಶಿಕ್ಷಕಿ ಮತ್ತೆ ಇನ್ನೊಬ್ಬ ಬಾಲಕನೊಂದಿಗೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದು, ಇದರಿಂದ ಗರ್ಭಿಣಿಯಾಗಿದ್ದಾಳೆ.

ಅಲ್ಲದೇ ಶಿಕ್ಷಕಿಯ ಜೊತೆಗಿನ ಲೈಂಗಿಕ ಸಂಬಂಧವನ್ನು ನಿರಾಕರಿಸಿದರೂ ಆಕೆ ತಮ್ಮನ್ನು ಬಲವಂತವಾಗಿ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾಳೆ. ತಮ್ಮನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾಳೆ. ಹಾಗೇ ತಮ್ಮನ್ನು ಮಾನಸಿಕವಾಗಿ ನಿಂದಿಸಿದ್ದಾಳೆ. ಈ ಘಟನೆಯಿಂದ ಹೊರಬರಲು ತಾವು ಹೆಣಗಾಡುತ್ತಿರುವುದಾಗಿ ಬಾಲಕರು ಶಿಕ್ಷಕಿಯ ಮೇಲೆ ಆರೋಪ ಮಾಡಿದ್ದರು.

ಹಾಗಾಗಿ ವಾಯವ್ಯ ಇಂಗ್ಲೆಂಡ್‍ನ ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯದ ನ್ಯಾಯಾಧೀಶರು ಆಕೆಯ ನಡವಳಿಕೆ ಆಕ್ಷೇಪಕಾರಿ ಆಗಿದೆ. ವಯಸ್ಕಳಾಗಿದ್ದೂ ಎಲ್ಲಾ ತಿಳಿವಳಿಕೆ ಹೊಂದಿದ್ದೂ ತನ್ನನ್ನು ತಾನು ನಿಯಂತ್ರಿಸಿಕೊಳ್ಳಬೇಕಿತ್ತು. ಆದರೆ ಅದರ ಬದಲಾಗಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ತನ್ನ ಲೈಂಗಿಕ ದಾಹವನ್ನು ತೀರಿಸಿಕೊಳ್ಳಲು ಇಂತಹ ಘೋರ ತಪ್ಪು ಮಾಡಿರುವುದಾಗಿ ತಿಳಿಸಿದ್ದಾರೆ. ಹಾಗಾಗಿ ಆಕೆಗೆ ಆರೂವರೆ ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

ಇದನ್ನೂ ಓದಿ: ನೀರು ತುಂಬಿದ್ದ ರಸ್ತೆ ಗುಂಡಿಗೆ ಬಿದ್ದ ಬಾಲಕಿ; ಜೀವ ಉಳಿಸಿದ ಹುಡುಗ

ಶಿಕ್ಷಕಿಗೆ ನ್ಯಾಯಾಲಯ ಈ ಹಿಂದೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದದಂತೆ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷ್ಯ ಮಾಡಿ ಮತ್ತೊಂದು ಬಾಲಕನೊಂದಿಗೆ ಸಂಬಂಧ ಹೊಂದಿದ್ದಾಳೆ. ಹಾಗಾಗಿ ಶಿಕ್ಷೆಗೆ ಒಳಗಾದ ಶಿಕ್ಷಕಿಯು ಜನ್ಮ ನೀಡಿದ ಮಗುವನ್ನು ಆಕೆಯಿಂದ ತೆಗೆದುಕೊಂಡು ಆಕೆಯನ್ನು ಜೈಲಿಗೆ ಹಾಕಲಾಗಿದೆ.

ಈ ಘಟನೆ ನೋಡಿದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲೆ ಮಾತ್ರ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿಲ್ಲ. ಜೊತೆಗೆ ಪುರುಷರು ಹಾಗೂ ಮಕ್ಕಳೂ ಕೂಡ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

Continue Reading

ವಿದೇಶ

UK Election: ಯುಕೆ ಎಲೆಕ್ಷನ್‌ನಲ್ಲಿ ಹೀನಾಯ ಸೋಲು; ರಿಶಿ ಸುನಕ್‌ ಫಸ್ಟ್‌ ರಿಯಾಕ್ಷನ್‌

UK Election:ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಶಿ ಸುನಕ್‌ ಪ್ರತಿಕ್ರಿಯಿಸಿದ್ದು, ಈ ಸೋಲಿನ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಲೇಬರ್‌ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್‌ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.

VISTARANEWS.COM


on

UK Election
Koo

ಲಂಡನ್‌: ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 14ವರ್ಷಗಳ ಬಳಿಕ ಲೇಬರ್ ಪಕ್ಷ ಜಯಭೇರಿ ಭಾರಿಸಿದೆ. ಲೇಬರ್‌ ಪಕ್ಷ 360 ಸ್ಥಾನಗಳನ್ನು ಗಳಿಸಿ ಮ್ಯಾಜಿಕ್‌ ನಂಬರ್‌ 320 ಅನ್ನು ದಾಟುವ ಮೂಲಕ ಸರ್ಕಾರ ರಚನೆಗೆ ಮುಂದಾಗಿದೆ. ಹಾಲಿ ಪ್ರಧಾನಿ ರಿಷಿ ಸುನಕ್‌(Rishi Sunak) ಅವರ ಪಕ್ಷ ಕನ್ಸರ್ವೇಟಿವ್‌ ಪಕ್ಷ ಭಾರೀ ಹಿನ್ನಡೆ ಅನುಭವಿಸಿದ್ದು, ಲೇಬರ್‌ ಪಕ್ಷದ ಕೀರ್‌ ಸ್ಟಾರ್ಮರ್‌(Keir Starmer) ಅವರಿಗೆ ಪ್ರಧಾನಿ ಗಿಟ್ಟಿದೆ. ಇನ್ನು

ಫಲಿತಾಂಶ ಹೊರ ಬೀಳುತ್ತಿದ್ದಂತೆ ರಿಶಿ ಸುನಕ್‌ ಪ್ರತಿಕ್ರಿಯಿಸಿದ್ದು, ಈ ಸೋಲಿನ ಜವಾಬ್ದಾರಿಯನ್ನು ತಾವು ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೇ ಲೇಬರ್‌ ಪಕ್ಷದ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಲೇಬರ್ ಪಕ್ಷವು ಈ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿದೆ ಮತ್ತು ಅವರ ವಿಜಯಕ್ಕಾಗಿ ಅಭಿನಂದಿಸಲು ನಾನು ಸರ್ ಕೀರ್ ಸ್ಟಾರ್ಮರ್‌ಗೆ ಕರೆ ಮಾಡಿದ್ದೇನೆ. ಇಂದು, ಅಧಿಕಾರವು ಶಾಂತಿಯುತವಾಗಿ ಮತ್ತು ಕ್ರಮಬದ್ಧವಾಗಿ ಅಧಿಕಾರ ಹಸ್ತಾಂತರಗೊಂಡಿದೆ. ಎಲ್ಲಾ ಕಡೆಯಿಂದಲೂ ಸದ್ಭಾವನೆ ಇರುತ್ತದೆ. ಇದು ನಮ್ಮ ದೇಶದ ಸ್ಥಿರತೆ ಮತ್ತು ಭವಿಷ್ಯದ ಬಗ್ಗೆ ನಮಗೆಲ್ಲರಿಗೂ ವಿಶ್ವಾಸವನ್ನು ನೀಡುವ ವಿಷಯವಾಗಿದೆ ಎಂದು ಹೇಳಿದ್ದಾರೆ.

ಪಕ್ಷಗಳ ಬಲಾಬಲ ಹೇಗಿದೆ?

ಇನ್ನು ಕಣದಲ್ಲಿರುವ ಪಕ್ಷಗಳ ಬಲಾಬಲ ಹೇಗಿದೆ ಎಂದು ನೋಡುವುದಾದರೆ,

  1. ಕನ್ಸರ್ವೇಟಿವ್‌ ಪಕ್ಷ ಕೇವಲ – 81
  2. ಲೇಬರ್ ಪಾರ್ಟಿ – 360
  3. ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP) – 3
  4. ಲಿಬರಲ್ ಡೆಮೋಕ್ರಾಟ್‌ಗಳು – 49
  5. ರಿಫಾರ್ಮ್‌ ಯುಕೆ – 3
  6. ಇತರೆ – 1

ಎಕ್ಸಿಟ್‌ ಪೋಲ್‌ ಭವಿಷ್ಯ ಏನು?

ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್‌ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್‌ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ. ಹಾಗಿದ್ದರೆ ಎಕ್ಸಿಟ್‌ ಪೋಲ್‌ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿದೆ ನೋಡೋಣ.

  1. ಕನ್ಸರ್ವೇಟಿವ್‌: 131
  2. ಲೇಬರ್ ಪಕ್ಷ: 410
  3. ಲಿಬರಲ್ ಡೆಮೋಕ್ರಾಟ್‌ಗಳು: 61
  4. ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP): 10
  5. ರಿಫಾರ್ಮ್ ಯುಕೆ: 13
  6. ಪ್ಲೈಡ್ ಸಿಮ್ರು: 4
  7. ಗ್ರೀನ್ಸ್: 2

ರಿಷಿ ಸುನಕ್‌ಗೆ ಆಡಳಿತ ವಿರೋಧಿ ಅಲೆ

44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್‌ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ.

ಇದನ್ನೂ ಓದಿ: Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Continue Reading

ವಿದೇಶ

UK Election: ಬ್ರಿಟನ್‌ನಲ್ಲಿ ಲೇಬರ್‌ ಪಾರ್ಟಿಗೆ ಗದ್ದುಗೆ ಖಚಿತ- ಪ್ರಧಾನಿ ಪಟ್ಟಕೇರಲಿರುವ ಕೀರ್‌ ಸ್ಟಾರ್ಮರ್‌ ಹಿನ್ನೆಲೆ ಏನು?

UK Election: ಹಿರಿಯ ಎಡಪಂಥೀಯ ವ್ಯಕ್ತಿ ಜೆರೆಮಿ ಕಾರ್ಬಿನ್ ನೇತೃತ್ವದಲ್ಲಿ 2019 ರಲ್ಲಿ 84 ವರ್ಷಗಳಲ್ಲಿ ಅದರ ಚುನಾವಣಾ ಸೋಲಿನ ನಂತರ ಕೀರ್ ಸ್ಟಾರ್ಮರ್ 2020 ರಲ್ಲಿ ಲೇಬರ್ ಪಕ್ಷದ ಉಸ್ತುವಾರಿ ವಹಿಸಿಕೊಂಡರು. ನಂತರ ಅವರು ಲೇಬರ್ ಪಾರ್ಟಿಯನ್ನು ಪ್ರಾಥಮಿಕವಾಗಿ ಸಿದ್ಧಾಂತದಿಂದ ಪ್ರೇರೇಪಿಸುವುದಕ್ಕಿಂತ ಹೆಚ್ಚಾಗಿ ಸಾಮರ್ಥ್ಯ ಮತ್ತು ವಾಸ್ತವಿಕತೆಗೆ ಹೆಸರುವಾಸಿಯಾದ ಪಕ್ಷವಾಗಿ ರೂಪಿಸಲು ಗಮನಹರಿಸಿದರು.

VISTARANEWS.COM


on

UK Election
Koo

ಲಂಡನ್‌: ಬ್ರಿಟನ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ರಂಗೇರಿದ್ದು, ಬಹುತೇಕ ಫಲಿತಾಂಶ ಸ್ಪಷ್ಟವಾಗಿದೆ. ಈ ಬಾರಿ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌(Rishi Sunak)ಗೆ ಭಾರೀ ಹಿನ್ನಡೆ ಅನುಭವಿಸಿದ್ದು, ಕೀರ್‌ ಸ್ಟಾರ್ಮರ್‌(Keir Starmer) ಅವರ ಲೇಬರ್‌ ಪಕ್ಷ(Labour Party) ಭರ್ಜರಿ ಗೆಲುವು ಸಾಧಿಸುವುದು ಖಚಿತವಾಗಿದೆ. ಕೀರ್‌ ಸ್ಟಾರ್ಮರ್‌ ಇಂಗ್ಲೆಂಡ್‌ನ ಪ್ರಧಾನಿಯಾಗುವುದು ಬಹುತೇಕ ಸ್ಪಷ್ಟವಾಗಿದೆ. ಹಾಗಿದ್ದರೆ ಯಾರು ಈ ಕೀರ್‌ ಸ್ಟಾರ್ಮರ್?‌ ಭಾರತದ ಬಗೆಗೆ ಅವರಿಗಿರುವ ನಿಲುವೇನು ಎಂಬ ಬಗ್ಗೆ ಇಲ್ಲಿ ಮಾಹಿತಿ.

ಯಾರು ಈ ಕೀರ್‌ ಸ್ಟಾರ್ಮರ್?‌

1963 ರಲ್ಲಿ ಸರ್ರೆಯಲ್ಲಿ ಕಾರ್ಮಿಕ-ವರ್ಗದ ಕುಟುಂಬದಲ್ಲಿ ಜನಿಸಿದ ಸ್ಟಾರ್ಮರ್ ಬಾಲ್ಯದಿಂದಲೇ ಕಷ್ಟವನ್ನು ಕಂಡವರು. ತಂದೆಯ ಜೊತೆ ಹೆಚ್ಚು ಒಡನಾಟ ಹೊಂದಿರದ ಸ್ಟಾರ್ಮರ್, ತಾಯಿ ಮೇಲೆ ಅತೀವ ಪ್ರೀತಿ ಹೊಂದಿದ್ದರು. ನರ್ಸ್ ಆಗಿದ್ದ ಅವರ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸ್ಟಾರ್ಮರ್ ಅವರ ಫಸ್ಟ್‌ ನೇಮ್‌ ʼಕೀರ್‌ʼ ಎಂಬುದು ಲೇಬರ್ ಪಕ್ಷದ ಸಂಸ್ಥಾಪಕ ಕೀರ್ ಹಾರ್ಡಿ ಅವರದ್ದು. ಅವರ ಮೇಲಿನ ಅತೀವ ಗೌರವದಿಂದ ಸ್ಟಾರ್ಮರ್‌ ತಮ್ಮ ಹೆಸರಿನ ಮುಂದೆ ಕೀರ್‌ ಎಂದು ಬಳಸಲು ಶುರು ಮಾಡಿದ್ದರು.

ಹಿರಿಯ ಎಡಪಂಥೀಯ ವ್ಯಕ್ತಿ ಜೆರೆಮಿ ಕಾರ್ಬಿನ್ ನೇತೃತ್ವದಲ್ಲಿ 2019 ರಲ್ಲಿ 84 ವರ್ಷಗಳಲ್ಲಿ ಅದರ ಚುನಾವಣಾ ಸೋಲಿನ ನಂತರ ಕೀರ್ ಸ್ಟಾರ್ಮರ್ 2020 ರಲ್ಲಿ ಲೇಬರ್ ಪಕ್ಷದ ಉಸ್ತುವಾರಿ ವಹಿಸಿಕೊಂಡರು. ನಂತರ ಅವರು ಲೇಬರ್ ಪಾರ್ಟಿಯನ್ನು ಪ್ರಾಥಮಿಕವಾಗಿ ಸಿದ್ಧಾಂತದಿಂದ ಪ್ರೇರೇಪಿಸುವುದಕ್ಕಿಂತ ಹೆಚ್ಚಾಗಿ ಸಾಮರ್ಥ್ಯ ಮತ್ತು ವಾಸ್ತವಿಕತೆಗೆ ಹೆಸರುವಾಸಿಯಾದ ಪಕ್ಷವಾಗಿ ರೂಪಿಸಲು ಗಮನಹರಿಸಿದರು. ಮಾಜಿ ಮಾನವ ಹಕ್ಕುಗಳ ಹೋರಾಟಗಾರ, ಬ್ರಿಟನ್‌ನ ಉನ್ನತ ಪ್ರಾಸಿಕ್ಯೂಟರ್ ಆಗಿದ್ದ ಸ್ಟಾರ್ಮರ್ 2015 ರಲ್ಲಿ ಸಂಸತ್ತಿಗೆ ಪ್ರವೇಶಿಸಿದ್ದು, ಬ್ರೆಕ್ಸಿಟ್‌ನಲ್ಲಿ ಕಾರ್ಬಿನ್ ಅವರ ವಕ್ತಾರರಾಗಿ ಸೇವೆ ಸಲ್ಲಿಸಿದ್ದಾರೆ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ನೀರಸ ಪ್ರದರ್ಶನದ ನಂತರ ಲೇಬರ್ ಪಾರ್ಟಿಯ ಅದೃಷ್ಟವನ್ನು ಹಿಮ್ಮೆಟ್ಟಿಸಿದ ಕೀರ್ತಿ ಕೀರ್ ಸ್ಟಾರ್ಮರ್ ಅವರಿಗೆ ಸಲ್ಲುತ್ತದೆ.

ಭಾರತದ ಬಗ್ಗೆ ಸ್ಟಾರ್ಮರ್‌ ನಿಲುವೇನು?

ಜಾಗತಿಕ ಭದ್ರತೆ, ಹವಾಮಾನ ಭದ್ರತೆ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಉತ್ತಮ ಬಾಂದವ್ಯ ಹೊಂದುವ ಬಗ್ಗೆ ಸ್ಟಾರ್ಮರ್‌ ತಮ್ಮ ಭಾಷಣದಲ್ಲಿ ಆಗಾಗ ಪ್ರಸ್ತಾಪಿಸುತ್ತಿರುತ್ತಾರೆ. ಚುನಾವಣಾ ಭಾಷಣದಲ್ಲಿ ಮಾತನಾಡುತ್ತಾ ಅವರು, ನಮ್ಮ ಲೇಬರ್‌ ಪಕ್ಷ ಅಧಿಕಾರಕ್ಕೆ ಬಂದರೆ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ. ಅಲ್ಲದೇ ಮುಕ್ತ ವ್ಯಾಪಾರ ಒಪ್ಪಂದವನ್ನು (ಎಫ್‌ಟಿಎ) ಬಯಸುತ್ತದೆ. ಜಾಗತಿಕ ಭದ್ರತೆ, ಹವಾಮಾನ ಭದ್ರತೆ, ಆರ್ಥಿಕ ಭದ್ರತೆಗಾಗಿ ಹೊಸ ಕಾರ್ಯತಂತ್ರದ ಪಾಲುದಾರಿಕೆಯನ್ನು ಸಹ ಹಂಚಿಕೊಳ್ಳುತ್ತೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ; 6 ಜನರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸರು

Continue Reading

ವಿದೇಶ

UK Election: ಬ್ರಿಟನ್‌ ಸಂಸತ್‌ ಚುನಾವಣೆ; ನಾರಾಯಣಮೂರ್ತಿ ಅಳಿಯ ರಿಷಿ ಸುನಕ್ ಪಕ್ಷಕ್ಕೆ ಭಾರೀ ಹಿನ್ನಡೆ

UK Election: ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್‌ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್‌ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ.

VISTARANEWS.COM


on

UK Election
Koo

ಲಂಡನ್‌: ಇಂಗ್ಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆ(UK Election) ರಂಗೇರಿದ್ದು, ಬಹುತೇಕ ಫಲಿತಾಂಶ ಸ್ಪಷ್ಟವಾಗಿದೆ. ಈ ಬಾರಿ ಕನ್ಸರ್ವೇಟಿವ್‌ ಪಕ್ಷದ ರಿಷಿ ಸುನಕ್‌(Rishi Sunak)ಗೆ ಭಾರೀ ಹಿನ್ನಡೆ ಅನುಭವಿಸಿದ್ದು, ಕೇರ್‌ ಸ್ಟಾರ್ಮೆರ್‌ ಅವರ ಲೇಬರ್‌ ಪಕ್ಷ(Labour Party) ಭರ್ಜರಿ ಗೆಲುವು ಸಾಧಿಸುವುದು ಖಚಿತವಾಗಿದೆ. ಇದುವರೆಗಿನ ಫಲಿತಾಂಶ ಗಮನಿಸಿದರೆ ಕನ್ಸರ್ವೇಟಿವ್‌ ಪಕ್ಷ ಕೇವಲ 15 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಪಕ್ಷಗಳ ಬಲಾಬಲ ಹೇಗಿದೆ?

ಇನ್ನು ಕಣದಲ್ಲಿರುವ ಪಕ್ಷಗಳ ಬಲಾಬಲ ಹೇಗಿದೆ ಎಂದು ನೋಡುವುದಾದರೆ,

  • ಕನ್ಸರ್ವೇಟಿವ್‌ ಪಕ್ಷ ಕೇವಲ 15
  • ಲೇಬರ್ ಪಾರ್ಟಿ – 113
  • ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP) – 1
  • ಲಿಬರಲ್ ಡೆಮೋಕ್ರಾಟ್‌ಗಳು – 12
  • ರಿಫಾರ್ಮ್‌ ಯುಕೆ – 1
  • ಇತರೆ – 1

ಎಕ್ಸಿಟ್‌ ಪೋಲ್‌ ಭವಿಷ್ಯ ಏನು?

ಇನ್ನು ಚುನಾವಣಾ ಪೂರ್ವ ಸಮೀಕ್ಷೆಗಳು ಕನ್ಸರ್ವೇಟಿವ್‌ ಪಕ್ಷ ಈ ಬಾರಿ ಸೋಲುವುದು ಖಚಿತ ಎಂಬ ಭವಿಷ್ಯ ನುಡಿದಿತ್ತು. ಈ ಬಾರಿ ಕನ್ಸರ್ವೇಟಿಕವ್‌ ಪಕ್ದ್ ಸ್ಥಾನ 131ಕ್ಕೆ ಇಳಿಯಲಿದ್ದು, ಲೇಬರ್‌ ಪಕ್ಷ ಅಭೂತಪೂರ್ವ ಗೆಲುವಿನೊಂದಿಗೆ ಅಧಿಕಾಕ್ಕೆ ಬರಲಿದೆ ಎಂದು ಹೇಳಿದೆ. ಹಾಗಿದ್ದರೆ ಎಕ್ಸಿಟ್‌ ಪೋಲ್‌ ಪ್ರಕಾರ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ದೊರೆಯಲಿದೆ ನೋಡೋಣ.

  1. ಕನ್ಸರ್ವೇಟಿವ್‌: 131
  2. ಲೇಬರ್ಸ್‌: 410
  3. ಲಿಬರಲ್ ಡೆಮೋಕ್ರಾಟ್‌ಗಳು: 61
  4. ಸ್ಕಾಟಿಷ್ ನ್ಯಾಶನಲಿಸ್ಟ್ ಪಾರ್ಟಿ (SNP): 10
  5. ರಿಫಾರ್ಮ್ ಯುಕೆ: 13
  6. ಪ್ಲೈಡ್ ಸಿಮ್ರು: 4
  7. ಗ್ರೀನ್ಸ್: 2

ರಿಷಿ ಸುನಕ್‌ಗೆ ಆಡಳಿತ ವಿರೋಧಿ ಅಲೆ

44 ವರ್ಷದ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, 61 ವರ್ಷದ ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಾರ್ಟಿಗಿಂತ ಕಳೆದ 6 ವಾರಗಳ ಪ್ರಚಾರದಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇಂಗ್ಲೆಂಡ್, ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲೆಂಡ್‌ನಾದ್ಯಂತ 650 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ, ಮೊದಲ ಬಾರಿಗೆ ಪೋಸ್ಟ್ ಸಿಸ್ಟಮ್‌ನಲ್ಲಿ ಬಹುಮತಕ್ಕೆ 326 ಮತಗಳ ಅಗತ್ಯವಿದೆ.

ಎರಡು ಪ್ರಮುಖ ಪಕ್ಷಗಳ ಹೊರತಾಗಿ, ಮತದಾರರು ಲಿಬರಲ್ ಡೆಮಾಕ್ರಾಟ್‌ಗಳು, ಗ್ರೀನ್ ಪಾರ್ಟಿ, ಸ್ಕಾಟಿಷ್ ನ್ಯಾಷನಲ್ ಪಾರ್ಟಿ (ಎಸ್‌ಎನ್‌ಪಿ), ಎಸ್‌ಡಿಎಲ್‌ಪಿ, ಡೆಮಾಕ್ರಟಿಕ್ ಯೂನಿಯನಿಸ್ಟ್ ಪಾರ್ಟಿ (ಡಿಯುಪಿ), ಸಿನ್ ಫಿಯೆನ್, ಪ್ಲೈಡ್ ಸಿಮ್ರು, ವಲಸೆ ವಿರೋಧಿ ಸುಧಾರಣೆಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳ ಪಟ್ಟಿಯಿಂದ ಆಯ್ಕೆ ಮಾಡುತ್ತಾರೆ. ಪಕ್ಷ ಮತ್ತು ಹಲವರು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ರಿಷಿ ಸುನಕ್ ಅವರು ಅವಧಿಗೆ ಮುನ್ನವೇ ಚುನಾವಣಾ ಘೋಷಣೆ ಮಾಡಿದ್ದು, ಚುನಾವಣೆ ಘೋಷಣೆ ಮಾಡಿದಾಗಿನಿಂದಲೂ ಲೇಬರ್ ಪಾರ್ಟಿ ಬಹುಮತ ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಪ್ರಚಾರ ಅಂತ್ಯಗೊಳ್ಳುವ ವೇಳೆ ಕೀರ್ ಸ್ಟಾರ್ಮರ್ ಅವರೇ ಪ್ರಧಾನಿಯಾಗಲಿದ್ದಾರೆ ಎನ್ನಲಾಗುತ್ತದೆ.

ಇದನ್ನೂ ಓದಿ: Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ದೇಶದ ಕ್ರೀಡಾಪಟುಗಳ ಶ್ರೇಷ್ಠ ಪ್ರದರ್ಶನ; ಮೋದಿ ವಿಶ್ವಾಸ

Continue Reading
Advertisement
Neet UG
ದೇಶ1 min ago

NEET UG: ನೀಟ್‌ ಅಕ್ರಮ: ಪರೀಕ್ಷೆಯನ್ನುರದ್ದುಗೊಳಿಸುವುದು ಸಮಂಜಸವಲ್ಲ ಎಂದ ಕೇಂದ್ರ

Assault case
ತುಮಕೂರು9 mins ago

Assault Case : ಜಮೀನು ವಿವಾದ; ನೀರಿನಲ್ಲಿ ಮುಳುಗಿಸಿ, ಕುಡುಗೋಲು, ಕಲ್ಲಿನಿಂದ ವ್ಯಕ್ತಿ ಮೇಲೆ ಹಲ್ಲೆ!

Samantha Ruth Prabhu Doctor Calls Health Illiterate
ಟಾಲಿವುಡ್10 mins ago

Samantha Ruth Prabhu: ಸಮಂತಾಗೆ ಜೈಲಿಗೆ ಕಳಿಸಿ ಎಂದ ವೈದ್ಯ ; ನಟಿ ಹೇಳಿದ್ದೇನು?

DK Shivakumar
ಕರ್ನಾಟಕ16 mins ago

DK Shivakumar: ಕುಮಾರಸ್ವಾಮಿ ಒಬ್ಬ ಹುಚ್ಚ, ಚಿಕಿತ್ಸೆ ಪಡೆಯುವುದು ಉತ್ತಮ: ಡಿಸಿಎಂ ಡಿಕೆಶಿ

Team India
ಕ್ರೀಡೆ25 mins ago

Team India: ರೋಹಿತ್​, ಸೂರ್ಯಕುಮಾರ್​, ದುಬೆ, ಜೈಸ್ವಾಲ್​ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್​ ಶಿಂಧೆ

Guarantee Schemes
ಕರ್ನಾಟಕ26 mins ago

Guarantee Schemes: ಗ್ಯಾರಂಟಿ ಯೋಜನೆಗಳಿಗೆ ದಲಿತರ 14 ಸಾವಿರ ಕೋಟಿ ರೂ. ಕಸಿದು ಕೊಟ್ಟ ಸಿದ್ದರಾಮಯ್ಯ!

T20 World Cup
ಪ್ರಮುಖ ಸುದ್ದಿ26 mins ago

T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

Sexual Harassment
Latest36 mins ago

Sexual Harassment: 80 ವರ್ಷದ ಅಜ್ಜಿಯ ಮೇಲೆ ನಿರಂತರ ಅತ್ಯಾಚಾರ; ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಕರ್ನಾಟಕ44 mins ago

Satish Jarkiholi: ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗುವುದು ತಪ್ಪು; ಎಚ್‌ಡಿಕೆ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್!

Kangana Ranaut Madhavan's Hilarious Reaction To Double-Meaning
ಬಾಲಿವುಡ್45 mins ago

Kangana Ranaut: ನಿಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಇದೆಯಾ ಎಂದು ಕಂಗನಾಗೆ ಡಬಲ್‌ ಮೀನಿಂಗ್‌ ಪ್ರಶ್ನೆ;ಬಿದ್ದು ಬಿದ್ದು ನಕ್ಕ ಆರ್ ಮಾಧವನ್!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lovers Fighting
ಚಿಕ್ಕಬಳ್ಳಾಪುರ46 mins ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

karnataka rain
ಮಳೆ3 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ5 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು6 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು6 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ11 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ23 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ1 day ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ1 day ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ1 day ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

ಟ್ರೆಂಡಿಂಗ್‌