Viral News : ಮಹಾರಾಷ್ಟ್ರದ ಶಾಲೆಯಾದರೂ ಕನ್ನಡದಲ್ಲಿಯೇ ವರ್ಗಾವಣೆ ಪತ್ರ ಬರೆದ ಶಿಕ್ಷಕ! ಎಲ್ಲೆಡೆ ವೈರಲ್‌ - Vistara News

ವೈರಲ್ ನ್ಯೂಸ್

Viral News : ಮಹಾರಾಷ್ಟ್ರದ ಶಾಲೆಯಾದರೂ ಕನ್ನಡದಲ್ಲಿಯೇ ವರ್ಗಾವಣೆ ಪತ್ರ ಬರೆದ ಶಿಕ್ಷಕ! ಎಲ್ಲೆಡೆ ವೈರಲ್‌

ಮಹಾರಾಷ್ಟ್ರ ಮತ್ತು ಕರ್ನಾಟಕದ ಗಡಿ ಭಾಗದಲ್ಲಿರುವ ಶಾಲೆಯೊಂದರ ಶಿಕ್ಷಕರು ವರ್ಗಾವಣೆ ಪತ್ರ ಮರಾಠಿಯಲ್ಲಿದ್ದರೂ ಅದನ್ನು ಕನ್ನಡದಲ್ಲೇ ಭರ್ತಿ ಮಾಡಿ (Viral News) ಸುದ್ದಿಯಲ್ಲಿದ್ದಾರೆ.

VISTARANEWS.COM


on

teacher writes tc in kannada
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಕರ್ನಾಟಕದಲ್ಲಿದ್ದುಕೊಂಡೇ ಕನ್ನಡ ಮಾತನಾಡುವುದಕ್ಕೆ ಹಲವರು ತಿಣಕಾಡುತ್ತಾರೆ. ಆದರೆ ಈ ಶಿಕ್ಷಕ ಹಾಗಲ್ಲ. ಮಹಾರಾಷ್ಟ್ರದ ಶಾಲೆಯೊಂದರ ಮುಖ್ಯ ಶಿಕ್ಷಕನಾದರೂ ಕನ್ನಡದಲ್ಲಿಯೇ ವಿದ್ಯಾರ್ಥಿಯ ವರ್ಗಾವಣೆ ಪತ್ರ ತುಂಬಿರುವ ಈ ಶಿಕ್ಷಕನ ಬಗ್ಗೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಚರ್ಚೆ(Viral News) ನಡೆಯುತ್ತಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜಟ್ ತಾಲೂಕಿನ ಗುಗವಾಡ್ ಗ್ರಾಮದ ಜಿಲ್ಲಾ ಪಂಚಾಯತ್ ಕನ್ನಡ ಪ್ರಾಥಮಿಕ ಶಾಲೆಯಿಂದ ವರ್ಗಾವಣೆ ಪತ್ರ ನೀಡಲಾಗಿದೆ ಎಂದು ಹೇಳಲಾಗಿದೆ. ಮಹಾರಾಷ್ಟ್ರದ ಶಾಲೆಯಾಗಿರುವುದರಿಂದ ಸಾಮಾನ್ಯವಾಗಿ ಮರಾಠಿಯಲ್ಲೇ ವರ್ಗಾವಣೆ ಪತ್ರದ ವಿವರಗಳಿವೆ. ಆದರೆ ಅದರಲ್ಲಿ ಮುಖ್ಯ ಶಿಕ್ಷಕರು ಕನ್ನಡದಲ್ಲಿಯೇ ಮಾಹಿತಿ ತುಂಬಿದ್ದಾರೆ. ಹಾಗೆಯೇ ರಾಜ್ಯದ ವಿವರ ಕೇಳಿದ್ದಲ್ಲಿ ಅವರು ಕರ್ನಾಟಕ ಎಂದೇ ನಮೂದಿಸಿದ್ದು, ಅದು ಅನೇಕ ಚರ್ಚೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: Viral News: ಚಿಕನ್ ತಿನ್ನಲ್ಲ, ಮಟನ್ ಮುಟ್ಟಲ್ಲ,‌ ರೊಟ್ಟಿಯಂತೂ ತಟ್ಟಂಗಿಲ್ಲ; ಮಳೆಗಾಗಿ ಊರೇ ಬಂದ್‌!
ಮಹಾಜನ್ ಸಮಿತಿ ವರದಿ ಪ್ರಕಾರ ಮಹಾರಾಷ್ಟ್ರದ ಜಟ್ ಮತ್ತು ಅಕ್ಕಲಕೋಟ್ ತಾಲೂಕಿನ ನೂರಾರು ಹಳ್ಳಿಗಳು ಕರ್ನಾಟಕದಲ್ಲಿ ವಿಲೀನಗೊಳ್ಳಲಿವೆ. ಕೆಲವು ತಿಂಗಳ ಹಿಂದೆ, ಜಟ್ ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಗಳು ಕರ್ನಾಟಕಕ್ಕೆ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದವು.


ಈ ಬಗ್ಗೆ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಮಾತನಾಡಿ, “ಮಹಾರಾಷ್ಟ್ರದ ಶಾಲೆಯೊಂದು ಕನ್ನಡ ಭಾಷೆಯಲ್ಲಿಯೇ ಶಾಲಾ ಟಿಸಿ ನೀಡಿರುವುದು ಜತ್ತ ತಾಲೂಕಿನ ಜನತೆ ಕರ್ನಾಟಕದಲ್ಲಿ ವಿಲೀನವಾಗಲು ಎಷ್ಟು ಉತ್ಸುಕರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.


”ಈ ಶಾಲೆಗಳು ಸೌಲಭ್ಯಗಳ ಕೊರತೆ ಎದುರಿಸುತ್ತಿವೆ. ಗೋವಾ, ಕೇರಳ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲೂ ಇಂತಹ ಘಟನೆಗಳು ನಡೆದಿವೆ. ಸಿದ್ದರಾಮಯ್ಯ ಅವರು ಈ ವಿಷಯಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು,” ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Modi Meditation: ಕನ್ಯಾಕುಮಾರಿಯಲ್ಲಿ ಧ್ಯಾನಾಸಕ್ತ ಪ್ರಧಾನಿ ಮೋದಿಯಿಂದ ಸೂರ್ಯ ವಂದನೆ; ವಿಡಿಯೊ ನೋಡಿ

ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ನಡೆಸುತ್ತಿದ್ದಾರೆ. ಮೋದಿ ಅವರ ಧ್ಯಾನ ಶನಿವಾರ ಕೊನೆಯ ದಿನಕ್ಕೆ ಕಾಲಿಟ್ಟಿದೆ (Modi Meditation). ಮೋದಿ ಧ್ಯಾನ ಮಾಡುತ್ತಿರುವ ವಿಡಿಯೊ ಸದ್ಯ ಹೊರ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Modi Meditation
Koo

ಚೆನ್ನೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿರುವ ಮಧ್ಯೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ (Vivekananda Rock Memorial) 45 ಗಂಟೆಗಳ ಧ್ಯಾನ ನಡೆಸುತ್ತಿದ್ದಾರೆ. ಮೋದಿ ಅವರ ಧ್ಯಾನ ಶನಿವಾರ ಕೊನೆಯ ದಿನಕ್ಕೆ ಕಾಲಿಟ್ಟಿದೆ (Modi Meditation). ಮೋದಿ ಧ್ಯಾನ ಮಾಡುತ್ತಿರುವ ವಿಡಿಯೊ ಸದ್ಯ ಹೊರ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶನಿವಾರ ಬೆಳಗಿನ ಜಾವವೇ ಎದ್ದ ಪ್ರಧಾನಿ ಮೋದಿ ಭಕ್ತಿಯ ಪ್ರತೀಕವಾಗಿರುವ ಕಾವಿ ಉಡುಗೆ ತೊಟ್ಟು ಹಣೆಗೆ ವಿಭೂತಿ ಮತ್ತು ತಿಲಕವನ್ನಿಟ್ಟು ಕೈಯಲ್ಲಿ ಜಪಮಣಿಯೊಂದಿಗೆ ಮಂತ್ರ ಪಠಿಸುತ್ತಾ ಸೂರ್ಯೋದಯ ವೀಕ್ಷಿಸಿದರು ಮತ್ತು ಸೂರ್ಯನಿಗೆ ವಂದನೆ ಸಲ್ಲಿಸಿದರು.

ಮೋದಿ ದಿನಚರಿ ಹೀಗಿದೆ

ಸೂರ್ಯೋದಯದ ವೇಳೆ ವಿವೇಕಾನಂದ ಶಿಲೆ ಸ್ಮಾರಕದಲ್ಲಿ ಮೋದಿ ಸೂರ್ಯ ಆರ್ಘ್ಯವನ್ನೂ ಅರ್ಪಿಸಿದರು. ಸೂರ್ಯನ ರೂಪದಲ್ಲಿ ಪ್ರಕಟವಾದ ಸರ್ವಶಕ್ತನಿಗೆ ನಮಸ್ಕರಿಸುವ ಆಧ್ಯಾತ್ಮಿಕ ರೀತಿಗೆ ‘ಸೂರ್ಯ ಅರ್ಘ್ಯ’ ಎಂದು ಕರೆಯಲಾಗುತ್ತದೆ. ಸಣ್ಣ ಪಾತ್ರೆಯಿಂದ ಸ್ವಲ್ಪ ನೀರನ್ನು ಸಮುದ್ರಕ್ಕೆ ಅರ್ಘ್ಯವಾಗಿ ಸುರಿದ ಪ್ರಧಾನಿ ಜಪಮಾಲೆ ಬಳಸಿ ಪ್ರಾರ್ಥಿಸುವುದು ವಿಡಿಯೊದಲ್ಲಿ ಸೆರೆಯಾಗಿದೆ. ಜತೆಗೆ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಮೋದಿ ಪುಷ್ಪ ನಮನ ಸಲ್ಲಿಸಿದರು. ಅವರು ಕೈಯಲ್ಲಿ ಜಪಮಾಲೆ ಹಿಡಿದು ಮಂಟಪದ ಸುತ್ತಲೂ ಹೆಜ್ಜೆ ಹಾಕಿದರು. ಆಧ್ಯಾತ್ಮಿಕ, ಧಾರ್ಮಿಕ ಕೈಂಕರ್ಯಗಳನ್ನು ಪೂರೈಸಿದ ನಂತರ ಅವರು ರಾಕ್ ಮೆಮೋರಿಯಲ್ ಮೆಟ್ಟಿಲುಗಳ ಮೇಲೆ ಸ್ವಲ್ಪ ಹೊತ್ತು ಕುಳಿತುಕೊಂಡರು.

ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ. ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು. ಇದೇ ಕಾರಣಕ್ಕಾಗಿ ವಿವೇಕಾನಂದ ರಾಕ್‌ ಮೆಮೋರಿಯಲ್‌ನಲ್ಲಿ ಮೋದಿ ಅವರು ಧ್ಯಾನ ಮಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು. ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Continue Reading

ಕ್ರೀಡೆ

Cristiano Ronaldo: ಕಿಂಗ್ಸ್ ಕಪ್ ಫೈನಲ್​ನಲ್ಲಿ ಸೋಲು; ಬಿಕ್ಕಿ ಬಿಕ್ಕಿ ಅತ್ತ ಕ್ರಿಸ್ಟಿಯಾನೊ ರೊನಾಲ್ಡೊ

Cristiano Ronaldo: ಬರೋಬ್ಬರಿ 1,700 ಕೋಟಿ ರೂ. (200 ಮಿಲಿಯನ್‌ ಯೂರೋಸ್‌) ಪಡೆದು ಕ್ರಿಸ್ಟಿಯಾನೊ ರೊನಾಲ್ಡೊ 2 ವರ್ಷಗಳ ಒಪ್ಪಂದ ಪ್ರಕಾರ ಅಲ್ ನಾಸ್ಸರ್ ತಂಡಕ್ಕೆ ಸೇರಿದ್ದರು. ತಂಡದ ಪರ ಇದುವರೆಗೆ ಒಟ್ಟು 35 ಗೋಲು ಬಾರಿಸಿದ್ದಾರೆ. ಆದರೆ ತಂಡವನ್ನು ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ವಿಫಲರಾಗಿದ್ದಾರೆ.

VISTARANEWS.COM


on

Cristiano Ronaldo
Koo

ದುಬೈ: ಪೋರ್ಚುಗಲ್‌ನ ಸೂಪರ್‌ ಸ್ಟಾರ್‌ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಅವರು ತಾನು ಪ್ರತಿನಿಧಿಸುವ ಅಲ್​ ನಾಸ್ಸರ್​(Al Nassr) ತಂಡ ಕಿಂಗ್ಸ್ ಕಪ್ ಫೈನಲ್​ನಲ್ಲಿ(King’s Cup final) ಸೋಲು ಕಂಡ ಬೇಸರದಲ್ಲಿ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಪ್ರಸಂಗ ನಡೆದಿದೆ. ರೊನಾಲ್ಡೊ ಕಣ್ಣೀರು ಸುರಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​(viral video) ಆಗಿದೆ.

ಮೇ 31, ಶುಕ್ರವಾರ ತಡರಾತ್ರಿ ನಡೆದಿದ್ದ ಕಿಂಗ್ಸ್ ಕಪ್ ಫೈನಲ್‌ನಲ್ಲಿ ಅಲ್ ನಾಸ್ಸರ್ ಮತ್ತು ಅಲ್ ಹಿಲಾಲ್(Al Hilal) ತಂಡಗಳು ಮುಖಾಮುಖಿಯಾಗಿದ್ದವು. ಅತ್ಯಂತ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯ 1-1 ಗೋಲುಗಳಿಂದ ಮುಕ್ತಾಯಕಂಡಿತು. ಹೆಚ್ಚುವರಿ ಸಮಯದ ಆಟದಲ್ಲಿಯೂ ಉಭಯ ತಂಡಗಳಿಂದ ಗೋಲು ಗಳಿಸಲು ಸಾಧ್ಯವಾಗದ ಕಾರಣ ಅಂತಿಮವಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಶೂಟೌಟ್​ನಲ್ಲಿ ಅಲ್ ಹಿಲಾಲ್ ತಂಡ 5-4 ಗೋಲುಗಳ ಅಂತರದಿಂದ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿತು.

ತಂಡ ಸೋಲುತ್ತಿದ್ದಂತೆ ಕ್ರಿಸ್ಟಿಯಾನೊ ರೊನಾಲ್ಡೊ ಮೈದಾನದಲ್ಲೇ ಬಿದ್ದು ಅಳತೊಡಗಿದರು. ರೊನಾಲ್ಡೊ ಅವರು ಟರ್ಫ್‌ನ ಮೇಲೆ ಮಲಗಿ ಅಳುತ್ತಿದ್ದ ವೇಳೆ ಸಹ ಆಟಗಾರರು ಮತ್ತು ತಂಡದ ಮಾಲಿಕ ಕೂಡ ಆಗಮಿಸಿ ರೊನಾಲ್ಡೊರನ್ನು ಸಂತೈಸಿದ್ದಾರೆ. ರನ್ನರ್ಸ್-ಅಪ್ ಪದಕ ನೀಡುವ ವೇಳೆಯೂ ರೊನಾಲ್ಡೊ ಕಣ್ಣೀರು ಸುರಿಸುತ್ತಲೇ ಇದ್ದರು. ಈ ದೃಶ್ಯ ಕಂಡು ಅವರ ಅಭಿಮಾನಿಗಳ ಕಣ್ಣಲ್ಲಿಯೂ ನೀರು ಬರುವಂತೆ ಮಾಡಿತು.

ಇದನ್ನೂ ಓದಿ Cristiano Ronaldo: ಅಶ್ಲೀಲ ವರ್ತನೆ ತೋರಿದ ರೊನಾಲ್ಡೊಗೆ ಅಮಾನತು ಶಿಕ್ಷೆ ವಿಧಿಸಿದ ಸೌದಿ ಫುಟ್ಬಾಲ್​ ಫೆಡರೇಷನ್

ಬರೋಬ್ಬರಿ 1,700 ಕೋಟಿ ರೂ. (200 ಮಿಲಿಯನ್‌ ಯೂರೋಸ್‌) ಪಡೆದು ಕ್ರಿಸ್ಟಿಯಾನೊ ರೊನಾಲ್ಡೊ 2 ವರ್ಷಗಳ ಒಪ್ಪಂದ ಪ್ರಕಾರ ಅಲ್ ನಾಸ್ಸರ್ ತಂಡಕ್ಕೆ ಸೇರಿದ್ದರು. ತಂಡದ ಪರ ಇದುವರೆಗೆ ಒಟ್ಟು 35 ಗೋಲು ಬಾರಿಸಿದ್ದಾರೆ. ಆದರೆ ತಂಡವನ್ನು ಚಾಂಪಿಯನ್​ ಪಟ್ಟ ಅಲಂಕರಿಸುವಲ್ಲಿ ವಿಫಲರಾಗಿದ್ದಾರೆ.

67 ವರ್ಷಗಳ ಇತಿಹಾಸ ಹೊಂದಿರುವ ಅಲ್‌ ನಾಸ್ಸರ್​ ಸೌದಿ ಅರೇಬಿಯದ ಅತ್ಯಂತ ಶ್ರೀಮಂತ ಫ‌ುಟ್‌ಬಾಲ್‌ ಕ್ಲಬ್‌. 9 ಸಲ ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಜಯಿಸಿದೆ. 6 ಸಲ ಕಿಂಗ್ಸ್‌ ಕಪ್‌ 3 ಸಲ ಕ್ರೌನ್‌ ಪ್ರಿನ್ಸೆಸ್‌ ಕಪ್‌, 3 ಸಲ ಫೆಡರೇಶನ್‌ ಕಪ್‌,2 ಸಲ ಸೌದಿ ಸೂಪರ್‌ ಕಪ್‌, ಚಾಂಪಿಯನ್‌ ಆಗಿ ಮೂಡಿಬಂದ ಹೆಗ್ಗಳಿಕೆ ಈ ಕ್ಲಬ್‌ನದ್ದು.

Continue Reading

ಕ್ರೀಡೆ

Shubman Gill: ಕಿರುತೆರೆ​ ನಟಿಯೊಂದಿಗೆ ಶುಭಮನ್​ ಗಿಲ್ ಮದುವೆ?; ಸ್ವತಃ ಸ್ಪಷ್ಟನೆ ನೀಡಿದ ನಟಿ

Shubman Gill: ಸಾಮಾಜಿಕ ಮಾಧ್ಯಮಗಳ ವರದಿ ಪ್ರಕಾರ ಶುಭಮನ್​ ಗಿಲ್​ ಮತ್ತು ರಿದ್ಧಿಮಾ ಪಂಡಿತ್ ಕೆಲವು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದರು. ಈ ಜೋಡಿ ಇದೇ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ತಾನು ಶುಭ್‌ಮನ್ ಗಿಲ್ ಅವರನ್ನು ಮದುವೆಯಾಗುತ್ತಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Shubman Gill
Koo

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​​ ಯುವ ಆಟಗಾರ ಶುಭಮನ್​ ಗಿಲ್(Shubman Gill)​ ಅವರು ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಗಿಲ್​ ಮದುವೆಯಾಗುತ್ತಿರುವುದು ಸಾರಾ ತೆಂಡೂಲ್ಕರ್(sara tendulkar)​ ಅಲ್ಲ ಬದಲಾಗಿ ಕಿರುತೆರೆಯ ಸುಂದರಿ ರಿದ್ಧಿಮಾ ಪಂಡಿತ್ ಅವರನ್ನು ವರಿಸಲಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ರಿದ್ಧಿಮಾ ಪಂಡಿತ್(Ridhima Pandit) ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳ ವರದಿ ಪ್ರಕಾರ ಶುಭಮನ್​ ಗಿಲ್​ ಮತ್ತು ರಿದ್ಧಿಮಾ ಪಂಡಿತ್ ಕೆಲವು ವರ್ಷಗಳಿಂದ ಗುಟ್ಟಾಗಿ ಪ್ರೀತಿಸುತ್ತಿದ್ದರು. ಈ ಜೋಡಿ ಇದೇ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ ಎಂದು ಹೇಳಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ತಾನು ಶುಭ್‌ಮನ್ ಗಿಲ್ ಅವರನ್ನು ಮದುವೆಯಾಗುತ್ತಿಲ್ಲ. ಈ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ. ನನ್ನ ಜೀವನದಲ್ಲಿ ಈ ರೀತಿಯ ಮಹತ್ವದ ಘಟನೆ ನಡೆದರೆ ನಾನೇ ಮುಂದೆ ಬಂದು ಸುದ್ದಿ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಈ ಸುಳ್ಳು ಸುದ್ದಿಯನ್ನು ತಳ್ಳಿಹಾಕಿದ್ದಾರೆ.

ಈ ಜೋಡಿ ಮದುವೆಯಾಗುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಲು ಕಾರಣವೆಂದರೆ, ಕೆಲ ದಿನಗಳ ಹಿಂದೆ ರಿದ್ಧಿಮಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮದುವೆಯ ಕುರಿತಾದ ವಿಡಿಯೊವೊಂದನ್ನು ಹಾಕಿದ್ದರು. ಇದೇ ವೇಳೆ ಕೆಲ ನೆಟ್ಟಿಗರು ಗಿಲ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಹೀಗಾಗಿ ಗಿಲ್​ ಮತ್ತು ರಿದ್ಧಿಮಾ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಡಿತು.

ಇದನ್ನೂ ಓದಿ Shubman Gill: ಶತಕದ ಐಪಿಎಲ್​ ಪಂದ್ಯವನ್ನಾಡಲು ಸಜ್ಜಾದ ಗಿಲ್​; ಸಾಧನೆ ಹೇಗಿದೆ?

ಸಾರಾ ತೆಂಡೂಲ್ಕರ್ ಮತ್ತು ಶುಭಮನ್​ ಗಿಲ್​(Gill And Sara) ಇಬ್ಬರು ಕದ್ದು ಮುಚ್ಚಿ ಡೇಟಿಂಗ್(sara tendulkar and shubman gill relationship)​ ನಡೆಸುತ್ತಿದ್ದಾರೆ, ಇವರಿಬ್ಬರು ಪ್ರೀತಿ ಕೂಡ ಮಾಡುತ್ತಿದ್ದಾರೆ ಎಂಬ ಸುದ್ದಿ ಈಗಾಗಲೇ ಹಲವು ಬಾರಿ ಕೇಳಿಬಂದಿತ್ತು.  ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ.

ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದ ಸಾರಾ-ಗಿಲ್​

ಏಕದಿನ ವಿಶ್ವಕಪ್​ ಪಂದ್ಯವನ್ನಾಡಲು ಟೀಮ್​ ಇಂಡಿಯಾದ ಆಟಗಾರರು ಮುಂಬೈಗೆ ಬಂದಿದ್ದ ವೇಳೆ ಶುಭಮನ್​ ಗಿಲ್​ ಮತ್ತು ಸಾರಾ ಅವರು ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೆಸ್ಟೋರೆಂಟ್‌ನಿಂದ ಸಾರಾ ಜತೆಗೆ ಬರುತ್ತಿರುವುದನ್ನು ಪಾಪರಾಜಿಗಳು ಕಂಡ ತಕ್ಷಣ ಶುಭಮನ್​ ಗಿಲ್​ ತನಗೇನು ತಿಳಿಯದವರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೊಂದು ಅಚಾನಕ್ ಮುಖಾಮುಖಿ ಎಂಬಂತೆ ತಮ್ಮ ಪತವನ್ನು ಬದಲಿಸಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದಿದ್ದರು. ಗಿಲ್ ಕ್ರಿಕೆಟ್​ ಆಡುವ ವೇಳೆ ಹೆಚ್ಚಾಗಿ ಸಾರಾ ಕೂಡ ಪ್ರೇಕ್ಷಕರ ಸ್ಟ್ಯಾಂಡ್​ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅಲ್ಲದೆ ಗಿಲ್​ ಉತ್ತಮವಾಗಿ ಆಡಿದಾಗ ಚಪ್ಪಾಳೆ ತಟ್ಟುತ್ತಾ, ಔಟಾದಾಗ ಸಪ್ಪೆ ಮೋರೆ ಹಾಕಿ ಕುಳಿತ ಹಲವು ಫೋಟೊ ಮತ್ತು ವಿಡಿಯೊ ಈಗಾಗಲೇ ವೈರಲ್​ ಕೂಡ ಆಗಿದೆ.

Continue Reading

ವೈರಲ್ ನ್ಯೂಸ್

Shocking Video: ಮಗುವನ್ನು ಎತ್ತಿಕೊಂಡು ಹೋಗಲು ಕೋತಿಯ ಶತಪ್ರಯತ್ನ; ಮುಂದೇನಾಯ್ತು?

ಕೋತಿಗಳು ನಿಮ್ಮ ಸುತ್ತಮುತ್ತ ಇದ್ದರೆ ಎಚ್ಚರ. ಪುಟ್ಟ ಮಕ್ಕಳನ್ನು ಇದು ಎಳೆದುಕೊಂಡು ಹೋಗುವುದು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಎರಡು ವಿಡಿಯೋಗಳು ನಿಮ್ಮ ಎದೆಯಲ್ಲಿ ನಡುಕ (Shocking Video) ಹುಟ್ಟಿಸದೆ ಇರಲಾರದು.

VISTARANEWS.COM


on

By

Shocking Video
Koo

ಮಕ್ಕಳು (Kids) ಆಟವಾಡುವಾಗ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಯಾಕೆಂದರೆ ಅಪಾಯ (danger) ಎಲ್ಲಿಂದ, ಹೇಗೆ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ ಆಗಿರುವ ಈ ವಿಡಿಯೋ ನೋಡಿದರೆ ಒಂದು ಕ್ಷಣ ಎಂತವರನ್ನೂ ಭಯ ಬೀಳಿಸದೆ (Shocking Video) ಇರಲಾರದು. ಆಟವಾಡುತ್ತಿದ್ದ ಮಗುವಿನ ಮೇಲೆ ಕೋತಿಯೊಂದು ನಿರಂತರ ದಾಳಿಗೆ ಮುಂದಾದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ಆಗಿರುವ ಈ ವಿಡಿಯೋದಲ್ಲಿ ಕೋತಿಯೊಂದು ಇತರ ಮಕ್ಕಳೊಂದಿಗೆ ಹೊರಗೆ ಆಡುತ್ತಿರುವ ಮಗುವಿನ ಮೇಲೆ ದಾಳಿ ಮಾಡಿದೆ. ಮಗು ಮನೆಯ ಹೊರಗೆ ಮರದ ಮೆಟ್ಟಿಲುಗಳ ಮೇಲೆ ಇದ್ದಾಗ ಮಂಗ ಇದ್ದಕ್ಕಿದ್ದಂತೆ ಹಾರಿ ಬಂದು ಮಗುವನ್ನು ಎಳೆದುಕೊಂಡು ಹೋಗಲು ಪ್ರಯತ್ನಿಸುತ್ತಿದೆ.

ಇತರ ಮಕ್ಕಳು ಭಯದಿಂದ ಓಡಿಹೋಗುತ್ತಾರೆ. ಕೂಡಲೇ ಮಗುವಿನ ಬೊಬ್ಬೆ ಕೇಳಿ ಓಡಿ ಬಂದ ತಾಯಿ ಮಗುವನ್ನು ರಕ್ಷಿಸಲು ಪ್ರಯತ್ನಿಸುತ್ತಾಳೆ. ಆದರೂ ಮಗ ಆಕೆಯ ಕೈಯಿಂದ ಮಗುವನ್ನು ಹಿಡಿದುಕೊಂಡು ಹೋಗಲು ಪ್ರಯತ್ನಿಸುತ್ತದೆ. ಕೂಡಲೇ ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಕೋತಿಯನ್ನು ಹೆದರಿಸಲು ಪ್ರಯತ್ನಿಸುತ್ತಾರೆ. ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೋತಿಯೂ ಮಗುವನ್ನು ಕೊಂಡೊಯ್ಯಲು ಬಿಡದ ಪ್ರಯತ್ನ ನಡೆಸಿದೆ.


ಮಗುವಿನ ತಾಯಿ ಮಗುವನ್ನು ಕೋತಿಯ ಹಿಡಿತದಿಂದ ಕಿತ್ತು ತನ್ನ ಮಡಿಲಲ್ಲಿ ಹಿಡಿದಿಡುತ್ತಾಳೆ. ಆದರೆ, ಪಟ್ಟುಬಿಡದ ಕೋತಿ ತನ್ನ ದಾಳಿಯನ್ನು ಮುಂದುವರೆಸಿದೆ. ತಾಯಿಯ ತೋಳುಗಳಿಂದಲೂ ಮಗುವನ್ನು ಎಳೆಯಲು ಪ್ರಯತ್ನಿಸುತ್ತಿದೆ.

ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆದಿದೆ. ಸುಮಾರು 7 ಮಿಲಿಯನ್ ಮಂದಿ ಇದನ್ನು ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು ಎಲ್ಲರ ಅಸಹಾಯಕತೆ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ವಿಡಿಯೋ ಜೊತೆಗೆ ನೆಟ್ಟಿಗರೊಬ್ಬರು ಮತ್ತೊಂದು ಕೋತಿ ದಾಳಿಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇತರ ಮಕ್ಕಳೊಂದಿಗೆ ಆಡುತ್ತಿದ್ದ ಪುಟ್ಟ ಮಗುವನ್ನು ಕೋತಿಯೊಂದು ಎಳೆದುಕೊಂಡು ಹೋಗಲು ಪ್ರಯತ್ನಿಸಿದೆ.


ಮನೆಯ ಹೊರಗೆ ಇತರ ಮಕ್ಕಳೊಂದಿಗೆ ಪುಟ್ಟ ಮಗು ಆಟವಾಡುತ್ತಿತ್ತು. ಅಲ್ಲಿಗೆ ಬಂದ ಕೋತಿಯೊಂದು ಮಗುವನ್ನು ಅಂಗಳದಲ್ಲಿ ಸಾಕಷ್ಟು ದೂರದವರೆಗೆ ಎಳೆದುಕೊಂಡು ಹೋಗಿದೆ. ಆದರೆ ಮಗುವನ್ನು ಎತ್ತಿಕೊಂಡು ಹೋಗಲು ಆಗಲಿಲ್ಲ. ಅಲ್ಲಿಯೇ ಇದ್ದ ಜನರನ್ನು ಕಂಡು ಹೆದರಿ ಅದು ಮಗುವನ್ನು ಬಿಟ್ಟು ಹೋಯಿತು. ಈ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗಿದ್ದು, ಸುಮಾರು 52 ಸಾವಿರ ಮಂದಿ ಇದನ್ನು ವೀಕ್ಷಿಸಿದ್ದಾರೆ.

Continue Reading
Advertisement
Stray dogs attack in Shira 4 children one woman injured
ಪ್ರಮುಖ ಸುದ್ದಿ5 hours ago

Stray Dogs Attack: ಶಿರಾದಲ್ಲಿ ಬೀದಿ ನಾಯಿಗಳ ದಾಳಿ: 4 ಮಕ್ಕಳು, ಒಬ್ಬ ಮಹಿಳೆಗೆ ಗಂಭೀರ ಗಾಯ

Somnath Bharti
ದೇಶ5 hours ago

Somnath Bharti: ಮೋದಿ 3ನೇ ಸಲ ಪ್ರಧಾನಿಯಾದರೆ ತಲೆ ಬೋಳಿಸಿಕೊಳ್ಳುವೆ ಎಂದ ಆಪ್‌ ನಾಯಕ!

T 20 world cup
ಕ್ರೀಡೆ5 hours ago

T20 World Cup : ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 60 ರನ್​ ಭರ್ಜರಿ ವಿಜಯ ಸಾಧಿಸಿದ ಭಾರತ

Exit Poll
ಪ್ರಮುಖ ಸುದ್ದಿ6 hours ago

Exit Poll 2024 : ಆ್ಯಕ್ಸಿಸ್​ ಮೈ ಇಂಡಿಯಾ ಪ್ರಕಾರ ಎನ್​ಡಿಎಗೆ 401 ಸೀಟು

Poll Of Polls
ದೇಶ6 hours ago

Poll Of Polls: ಎನ್‌ಡಿಎಗೆ 350+ ಸೀಟು, ದಕ್ಷಿಣದಲ್ಲೂ ಬಿಜೆಪಿಗೆ ಸ್ವೀಟು, ಇಂಡಿಯಾ ‌ಕೂಟಕ್ಕೆ ಹಿನ್ನಡೆಯ ಏಟು!

Exit Poll 2024
ಪ್ರಮುಖ ಸುದ್ದಿ7 hours ago

Exit Poll 2024 : ಟಿಎಂಸಿಯ ಭದ್ರಕೋಟೆಗೆ ಕಮಲ ಪಕ್ಷದ ಲಗ್ಗೆ; ಮಮತಾ ಬ್ಯಾನರ್ಜಿಗೆ ಮುಖಭಂಗ?

Bangalore rain
ಪ್ರಮುಖ ಸುದ್ದಿ7 hours ago

Bangalore Rain: ರಾಜಧಾನಿಯಲ್ಲಿ ಮಳೆ ಆರ್ಭಟ; ಬೆಂಗಳೂರು-ಹೊಸೂರು ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು

Dinesh Karthik
ಪ್ರಮುಖ ಸುದ್ದಿ7 hours ago

Dinesh Karthik: ಜನ್ಮದಿನದಂದೇ ಕ್ರಿಕೆಟ್‌ ಬದುಕಿಗೆ ದಿನೇಶ್‌ ಕಾರ್ತಿಕ್‌ ಭಾವುಕ ವಿದಾಯ; ಕೊಡುಗೆ ನೆನೆದ ಆರ್‌ಸಿಬಿ ಫ್ಯಾನ್ಸ್

Exit Poll
ಪ್ರಮುಖ ಸುದ್ದಿ7 hours ago

Exit Poll 2024 : ಭರ್ಜರಿ ಗೆಲುವಿನ ಮುನ್ಸೂಚನೆ ಸಿಕ್ಕಿದ ತಕ್ಷಣ ಮತದಾರರಿಗೆ ಧನ್ಯವಾದ ತಿಳಿಸಿದ ಮೋದಿ

Exit Poll 2024
ದೇಶ8 hours ago

Exit Poll 2024 : ಮತಗಟ್ಟೆ ಸಮೀಕ್ಷೆಗಳನ್ನು ನಾವು ನಂಬಲ್ಲ; ಡಿಕೆಶಿ, ಎಂಬಿ ಪಾಟೀಲ್ ಸ್ಪಷ್ಟ ನುಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Liquor ban
ಬೆಂಗಳೂರು12 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 weeks ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

ಟ್ರೆಂಡಿಂಗ್‌