Highest-paid actress in South cinema South Cinema Actress: ಸೌತ್‌ ಸಿನಿಮಾದಲ್ಲಿ ಹೆಚ್ಚು ಸಂಭಾವನೆ ಯಾರಿಗೆ? ನಯನತಾರಾ, ಸಮಂತಾ, ತಮನ್ನಾ, ರಶ್ಮಿಕಾ ಅಲ್ವೇ ಅಲ್ಲ! - Vistara News

South Cinema

South Cinema Actress: ಸೌತ್‌ ಸಿನಿಮಾದಲ್ಲಿ ಹೆಚ್ಚು ಸಂಭಾವನೆ ಯಾರಿಗೆ? ನಯನತಾರಾ, ಸಮಂತಾ, ತಮನ್ನಾ, ರಶ್ಮಿಕಾ ಅಲ್ವೇ ಅಲ್ಲ!

South Cinema Actress: ಇತ್ತೀಚೆಗಷ್ಟೇ ಸೌತ್ ಸಿನಿಮಾ ತಾರೆ ಸಮಂತಾ ರುತ್ ಪ್ರಭು ‘ಸಿಟಾಡೆಲ್ ಇಂಡಿಯಾ’ ಸಿರೀಸ್‌ಗೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು.

VISTARANEWS.COM


on

Highest-paid actress in South cinema
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಕ್ಷಿಣ ಭಾರತದ ಚಿತ್ರರಂಗದಲ್ಲಿ (South Cinema Actress) ಎ-ಲಿಸ್ಟ್ ಹೀರೊಗಳು ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ದಕ್ಷಿಣ ಚಿತ್ರರಂಗದ ಎ-ಲಿಸ್ಟ್ ನಟಿಯರ ಪೈಕಿ ಅನೇಕ ಬಾಲಿವುಡ್ ಸ್ಟಾರ್ಸ್‌ಗಳಿಗಿಂತ ಸಂಭಾವನೆ ಹೆಚ್ಚಿದೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಸೌತ್ ಸಿನಿಮಾ ತಾರೆ ಸಮಂತಾ ರುತ್ ಪ್ರಭು ‘ಸಿಟಾಡೆಲ್ ಇಂಡಿಯಾ’ ಸಿರೀಸ್‌ಗೆ 10 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಆದರೆ ಇದೀಗ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಪಟ್ಟಿಗೆ ಮತ್ತೊಬ್ಬ ಜನಪ್ರಿಯ ಸೌತ್ ನಟಿಯ ಹೆಸರು ಸೇರ್ಪಡೆಯಾಗಿದೆ.

ಸಮಂತಾ ರುತ್ ಪ್ರಭು ಭಾರತದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಇದರಲ್ಲಿ ಸಂದೇಹವೇ ಇಲ್ಲ. ಸೂಪರ್‌ಹಿಟ್ ಚಿತ್ರ ‘ಪುಷ್ಪಾ’ದಲ್ಲಿನ ಐಟಂ ಸಾಂಗ್ ‘ಊ ಅಂಟವಾ’ ನಂತರ ಅವರ ಜನಪ್ರಿಯತೆ ಹೆಚ್ಚಾಗಿದೆ. ಈ ಹಾಡಿನ ಯಶಸ್ಸಿನ ನಂತರ ಸಮಂತಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ‘ಸಿಟಾಡೆಲ್ ಇಂಡಿಯಾ’ ವೆಬ್ ಸಿರೀಸ್‌ಗಾಗಿ 10 ಕೋಟಿ ರೂ. ವಿಧಿಸಿದ್ದಾರೆ ಎಂದು ವರದಿಯಾಗಿದೆ. ಆದರೀಗ ಮತ್ತೊಬ್ಬ ನಟಿಯ ಹೆಸರು ಕೇಳಿ ಬರುತ್ತಿದೆ. ಅವರೇ ತ್ರಿಶಾ ಕೃಷ್ಣನ್.

ಫಿನ್‌ಕ್ಯಾಶ್ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಮಣಿರತ್ನಂ ಅವರ ‘ಪೊನ್ನಿಯನ್ ಸೆಲ್ವನ್’ ಚಿತ್ರದ ನಂತರ ತ್ರಿಷಾ ಅವರ ಸ್ಟಾರ್ ವ್ಯಾಲ್ಯೂ ಹೆಚ್ಚಿದೆ. ನಟಿ ತಮ್ಮ ಮುಂದಿನ ಚಿತ್ರಕ್ಕೆ ರೂ 10 ಕೋಟಿ ರೂ. ಚಾರ್ಜ್ ಮಾಡುತ್ತಿದ್ದಾರೆ, ಆ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯಾಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: South Indian Cinema | ನಯನತಾರಾರಿಂದ ಕಾಜಲ್ ಅಗರ್ವಾಲ್‌ವರೆಗೆ: 2022ರಲ್ಲಿ ತಾಯಿಯಾದ ಸೆಲೆಬ್ರೆಟಿಗಳಿವರು!

‘ಪೊನ್ನಿಯನ್ ಸೆಲ್ವನ್’ ಎರಡು ಭಾಗಗಳಲ್ಲಿ ಬಿಡುಗಡೆಯಾಯಿತು ಮತ್ತು ಚಿತ್ರದಲ್ಲಿ ತ್ರಿಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಅವರು ಐಶ್ವರ್ಯಾ ರೈ ಬಚ್ಚನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ತ್ರಿಶಾ ಶೀಘ್ರದಲ್ಲೇ ವಿಜಯ್ ದಳಪತಿ ಜತೆ ‘ಲಿಯೋ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 14 ವರ್ಷಗಳ ನಂತರ ವಿಜಯ್ ಮತ್ತು ತ್ರಿಶಾ ತೆರೆ ಮೇಲೆ ಜೋಡಿಯಾಗುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಟಾಲಿವುಡ್

Raj Tarun: ಯುವ ನಟ ರಾಜ್ ತರುಣ್ ಮಾಜಿ ಪ್ರೇಯಸಿ ವಿರುದ್ಧ ದೂರು ದಾಖಲಿಸಿದ ನಟಿ!

Raj Tarun: ರಾಜ್ ತರುಣ್​ಗೆ ಅವರು ನಟಿಸುತ್ತಿರುವ ಸಿನಿಮಾದ ನಾಯಕ ನಟಿಯೊಂದಿಗೆ ಸಂಬಂಧವಿದ್ದು ಆಕೆಯ ಕಾರಣಕ್ಕೆ ನನಗೆ ಮೋಸ ಮಾಡಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ರಾಜ್ ತರುಣ್​ರ ಹೊಸ ಸಿನಿಮಾದ ನಾಯಕ ನಟಿ, ರಾಜ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದಾರೆ.

VISTARANEWS.COM


on

Raj Tarun’s Heroine Malvi Malhotra Files Complaint
Koo

ಬೆಂಗಳೂರು: ಉಯ್ಯಾಲ ಜಂಪಾಲ’, ‘ಕುಮಾರಿ 21 ಎಫ್’, ‘ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಟಾಲಿವುಡ್​ನ ಜನಪ್ರಿಯ ಯುವ ನಟ ರಾಜ್ ತರುಣ್ (Raj Tarun) ವಿರುದ್ಧ ಅವರ ಪ್ರೇಯಸಿಯೇ ವಂಚನೆ ಪ್ರಕರಣ ದಾಖಲಿಸಿದ್ದರು. ಪೊಲೀಸ್ ಠಾಣೆಯಲ್ಲಿ ಲಾವಣ್ಯ ಹೆಸರಿನ ಯುವತಿ ದೂರು ದಾಖಲಿಸಿದ್ದು, ತಮಗೆ ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದರು. ಮಾತ್ರವಲ್ಲ ರಾಜ್ ತರುಣ್​ಗೆ ಅವರು ನಟಿಸುತ್ತಿರುವ ಸಿನಿಮಾದ ನಾಯಕ ನಟಿಯೊಂದಿಗೆ ಸಂಬಂಧವಿದ್ದು ಆಕೆಯ ಕಾರಣಕ್ಕೆ ನನಗೆ ಮೋಸ ಮಾಡಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ರಾಜ್ ತರುಣ್​ರ ಹೊಸ ಸಿನಿಮಾದ ನಾಯಕ ನಟಿ, ರಾಜ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ನೀಡಿದ್ದಾರೆ.

”ಲಾವಣ್ಯ ನನ್ನ ವಿರುದ್ಧ ಮಾಡಿರುವ ಆರೋಪಗಳು ಸುಳ್ಳು. ನಾನು ರಾಜ್ ತರುಣ್‌ ಜತೆ ಸಂಬಂಧ ಹೊಂದಿಲ್ಲ ಮತ್ತು ನಮ್ಮಿಬ್ಬರ ಮಧ್ಯೆ ಇರುವುದು ಕೇವಲ ಫ್ರೆಂಡ್‌ಶಿಪ್‌. ನಮ್ಮ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ” ಎಂದು ಹೇಳಿಕೊಂಡಿದ್ದಾರೆ. “ತಿರಗಬ್ಯಾಡರ ಸಾಮಿ” ಚಿತ್ರದಲ್ಲಿ ನಟಿಸಿದ್ದರು ಮಾಳವಿ ಮಲ್ಹೋತ್ರಾ.

ಇದೀಗ ಲಾವಣ್ಯ ಈಗ ಇದೇ ಮಾಳವಿ ಅವರು ರಾಜ್ ತರುಣ್​ರ ಪ್ರೇಯಸಿ ಲಾವಣ್ಯ ವಿರುದ್ಧ ದೂರು ದಾಖಲಿಸಿದ್ದಾರೆ. ಹೈದರಾಬಾದ್​ ಡಿಸಿಪಿ ಅವರನ್ನು ಭೇಟಿ ಆಗಿರುವ ಮಾಳವಿ ಮಲ್ಹೋತ್ರಾ, ʻʻಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ತನ್ನ ಕುಟುಂಬಕ್ಕೆ ಲಾವಣ್ಯ ಬೆದರಿಕೆ ಹಾಕಿದ್ದಾಳೆ. ಮತ್ತು ತನ್ನ ಸಹೋದರನಿಗೆ ಕರೆ ಮಾಡಿ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ಲಾವಣ್ಯ ಯಾರು ಹಾಗೇ ಅವರ ಮುಖವನ್ನು ಇನ್ನೂ ನಾನು ನೋಡಿಲ್ಲ. ರಾಜ್ ತರುಣ್ ಅವರು ನನ್ನ ಮಾಜಿ ಎಕ್ಸ್‌ ಎಂದು ಹೇಳಿದ್ದರಿಂದ ನಾನು ಅವಳನ್ನು ಬ್ಲಾಕ್ ಮಾಡಿದ್ದೇನೆ ರಾಜ್ ತರುಣ್ ಬಳಿಯೂ ನನ್ನ ಅಪ್ಪನ ಫೋನ್ ನಂಬರ್ ಇರಲಿಲ್ಲ. ಆದರೆ ಲಾವಣ್ಯ ಅವಳ ಬಳಿ ಇದೆ. ನನ್ನ ಖಾಸಗಿ ಜೀವನದ ಮೇಲೆ ಆಕೆ ನಿಗಾ ಇರಿಸಿದ್ದಾಳೆ. ನನ್ನ ಖಾಸಗಿ ಜೀವನದಲ್ಲಿ ಮೂಗು ತೂರಿಸಿದ್ದಾಳೆ ಅದು ಅಪರಾಧ. ಪೊಲೀಸರು ಈ ವಿಷಯವಾಗಿ ಕೂಡಲೇ ಕ್ರಮ ಕೈಗೊಳ್ಳಬೇಕುʼʼ ಎಂದಿದ್ದಾರೆ. 

ಇದನ್ನೂ ಓದಿ: Dolly Dhananjay: ಐತಿಹಾಸಿಕ ‘ಹಲಗಲಿ’ ಸಿನಿಮಾದಲ್ಲಿ ‘ಡಾಲಿ’ ಧನಂಜಯ ಹೀರೊ!

ಲಾವಣ್ಯ ಈ ಹಿಂದೆ ದೂರು ನೀಡಿದ್ದೇನು?

ನಟ ರಾಜ್ ತರುಣ್ ವಂಚನೆ ಮಾಡಿದ್ದಾನೆಂದು ಆರೋಪಿಸಿದ್ದರು. . “ರಾಜ್ ತರುಣ್ ನನ್ನನ್ನು ನಂಬಿ, ಪ್ರೀತಿಸಿ, ದೈಹಿಕವಾಗಿಯೂ ಬಳಸಿಕೊಂಡಿದ್ದಾರೆ. ಇದಕ್ಕೆ ಕಾರಣ ಒಬ್ಬ ಯುವತಿ . ಹಾಗಾಗಿಯೇ ಆಕೆಯ ಹಾಗೂ ಆಕೆಯ ಸಹೋದರನ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ. ನಾನು ರಾಜ್‌ತರುಣ್ ಜತೆ 11 ವರ್ಷಗಳಿಂದ ಸಂಬಂಧ ಹೊಂದಿದ್ದೆ. ದೇವಸ್ಥಾನದಲ್ಲಿ ಮದುವೆ ಕೂಡ ಮಾಡಿಕೊಂಡಿದ್ದೇವು. ಆದರೆ ಆಕೆಯೊಂದಿಗೆ ಸಂಬಂಧ ಹೊಂದಿದ್ದ ಕಾರಣ 3 ತಿಂಗಳ ಹಿಂದೆ ರಾಜ್ ಮನೆ ಬಿಟ್ಟು ನನ್ನಿಂದ ದೂರ ಉಳಿದಿದ್ದರು’’ ಎಂದು ಲಾವಣ್ಯ ಹೇಳಿಕೆ ನೀಡಿರುವುದಾಗಿ ವರದಿಯಾಗಿತ್ತು.

Continue Reading

ಸ್ಯಾಂಡಲ್ ವುಡ್

Kiccha Sudeep: ಮುಂದಿನ ಸಿನಿಮಾಗಾಗಿ ಭಾರಿ ವರ್ಕೌಟ್‌ ಮಾಡ್ತಾ ಇದ್ದಾರೆ ಕಿಚ್ಚ!

Kiccha Sudeep: ಒಂದು ಪಾತ್ರದಲ್ಲಿ ಭಾರಿ ಕಟ್ಟುಮಸ್ತಾದ ದೇಹವನ್ನು ಹೊಂದಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ ಕಿಚ್ಚ. ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುವ ಮುನ್ನವೇ ‘ಬಿಲ್ಲಾ ರಂಗ ಭಾಷಾ’ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ.

VISTARANEWS.COM


on

Kiccha Sudeep workout For next Movie
Koo

ಬೆಂಗಳೂರು: ‘ವಿಕ್ರಾಂತ್ ರೋಣ’ ಬಳಿಕ ಕಿಚ್ಚ ಸುದೀಪ್ (Kiccha Sudeep) ಒಪ್ಪಿಕೊಂಡಿರುವ ಸಿನಿಮಾ ʻಮ್ಯಾಕ್ಸ್ʼ (MAX). ಹೀಗಾಗಿ ಈ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆಯಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಪಾತ್ರದ ಹೆಸರು ವಿಭಿನ್ನವಾಗಿಯೇ ಇದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಮುಂದಿನ ಸಿನಿಮಾಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಬಿಲ್ಲಾ ರಂಗ ಭಾಷಾ’ಗಾಗಿ ರೆಡಿಯಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ಸುದೀಪ್ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಒಂದೊಂದು ಪಾತ್ರಕ್ಕೆ ಒಂದೊಂದು ರೀತಿ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಕಿಚ್ಚ ಅವರು ವರ್ಕೌಟ್‌ ಮಾಡಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಒಂದು ಪಾತ್ರದಲ್ಲಿ ಭಾರಿ ಕಟ್ಟುಮಸ್ತಾದ ದೇಹವನ್ನು ಹೊಂದಿದ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಜಿಮ್​ನಲ್ಲಿ ಬೆವರಿಳಿಸುತ್ತಿದ್ದಾರೆ ಕಿಚ್ಚ. ಮ್ಯಾಕ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗುವ ಮುನ್ನವೇ ‘ಬಿಲ್ಲಾ ರಂಗ ಭಾಷಾ’ ಸಿನಿಮಾಕ್ಕೆ ತಯಾರಾಗುತ್ತಿದ್ದಾರೆ. ಈ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡಲಿದ್ದಾರೆ. ‘ದ್ರೋಣಾಚಾರ್ಯ’ ಸಿನಿಮಾವನ್ನು ಅನುಪ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿತ್ತು, ಆದರೆ ಅದರ ಬದಲಿಗೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಪ್ರಾರಂಭ ಮಾಡಿದ್ದಾರೆ.

ಮ್ಯಾಕ್ಸ್ʼ ಸಿನಿಮಾಕ್ಕೆ ಕನ್ನಡದ ತಾರೆಯರು ಇದ್ದಾರೆ. ಕನ್ನಡದ ಟೆಕ್ನಿಷನ್‌ಗಳೂ ಇದ್ದಾರೆ. ಹಾಗೆ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೆ ಕೂಡ ಈ ಸಿನಿಮಾದಲ್ಲಿ ಇದ್ದಾರೆ.

ಇದನ್ನೂ ಓದಿ: Kiccha Sudeep: ಜಗ್ಗೇಶ್‌ಗೆ ಹೇಗೆ ಮಾತನಾಡಬೇಕು, ಹೇಗೆ ಎಸ್ಕೇಪ್ ಆಗಬೇಕು ಅನ್ನೋದು ಗೊತ್ತು ಎಂದ ಕಿಚ್ಚ!

ವರಲಕ್ಷ್ಮಿ ಶರತ್ ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಕಾರ್ತಿಕೇಯ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಮಿಳು ನಿರ್ಮಾಪಕ ಕಲೈಪುಲಿ ಎಸ್. ತನು ಜೊತೆ ಸೇರಿ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.

Continue Reading

ಟಾಲಿವುಡ್

Shruti Haasan: ಮದುವೆ ಯಾವಾಗ ಎಂದು ಕೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡ ಶ್ರುತಿ ಹಾಸನ್‌!

Shruti Haasan: ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು.ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ.

VISTARANEWS.COM


on

Shruti Haasan responds to netizens’ marriage questions in style
Koo

ಬೆಂಗಳೂರು: ಕಾಲಿವುಡ್‌ ಸೂಪರ್‌ ಸ್ಟಾರ್‌ ಮಲ್‌ ಹಾಸನ್‌ (Kamal Hassan) ಅವರ ಪುತ್ರಿ ನಟಿ ಶ್ರುತಿ ಹಾಸನ್‌ (Shruti Haasan) ಪ್ರಿಯತಮ ಶಂತನು ಹಜಾರಿಕಾ (santanu hazarika) ಜತೆ ಬ್ರೇಕಪ್‌ ಮಾಡಿಕೊಂಡಿರುವ ವಿಚಾರ ಗೊತ್ತೇ ಇದೆ.  ಇದೀಗ ಅಭಿಮಾನಿಯೊಬ್ಬ, ನಿಮ್ಮ ಮದುವೆ (Wedding) ಯಾವಾಗ ಎಂದಿದ್ದಕ್ಕೆ ನಟಿ ಗರಂ ಆಗಿದ್ದಾರೆ. ಖಡಕ್ ಆಗಿ ಶ್ರುತಿ ಉತ್ತರ ನೀಡಿದ್ದಾರೆ. ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ.

ನಟಿ ಶ್ರುತಿ ಹಾಸನ್, ತಮ್ಮ ದೀರ್ಘಕಾಲದ ಗೆಳೆಯ ಶಂತನು ಹಜಾರಿಕಾ ಅವರೊಂದಿಗೆ ಬ್ರೇಕಪ್‌ ಮಾಡಿಕೊಂಡು ಕೆಲವು ತಿಂಗಳುಗಳಾಗಿವೆ. ಇದರ ಹೊರತಾಗಿಯೂ, ಅವರು ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಇನ್‌ಸ್ಟಾದಲ್ಲಿ ಅಭಿಮಾನಿಗಳ ಜತೆ ಮಾತುಕತೆ ನಡೆಸಿದ್ದಾರೆ ನಟಿ. ಈ ವೇಳೆ ಹಲವರು ನಟಿಗೆ ಮಾದುವೆ ಯಾವಾಗ? ಎಬ ಪ್ರಶ್ನೆ ಇಟ್ಟಿದ್ದಾರೆ. ಅದಕ್ಕೆ ನಟಿ, ಇದು 2024 ಹುಡುಗಿಯರಿಗೆ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಬೇಡಿ ಎಂದು ಖಾರವಾಗಿಯೇ ಉತ್ತರಿಸಿದ್ದಾರೆ. ಮತ್ತೊಬ್ಬ ಅಭಿಮಾನಿ, ನೀವು ಮದುವೆ ಯಾವಾಗ ಆಗ್ತೀರಾ ಎಂದು ಕೇಳಿದ್ದಾರೆ. ʻನಾನು ಮದುವೆ ಆಗುವುದಿಲ್ಲ ಎಂದು ಖಡಕ್ ಆಗಿ ಕಮಲ್ ಹಾಸನ್ (Kamal Haasan) ಪುತ್ರಿ ಉತ್ತರಿಸಿದ್ದಾರೆ. ಈ ಮೂಲಕ ನಾನು ಸಿಂಗಲ್ ಆಗಿಯೇ ಇರುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ: Shruti Haasan: ಎರಡನೇ ಬಾಯ್‌ಫ್ರೆಂಡ್‌ ನಿಂದಲೂ ಕಮಲ್‌ ಹಾಸನ್‌ ಪುತ್ರಿ ಬ್ರೇಕಪ್?

ಮೈಕಲ್ ಕೋರ್ಸೆಲ್ ಅವರಿಂದ ದೂರವಾದ ನಂತರ, ಶ್ರುತಿ ಹಾಸನ್ ಬದುಕಿನಲ್ಲಿ ಬಂದ ವ್ಯಕ್ತಿ ಶಂತನು ಹಜಾರಿಕಾ. ಶಂತನು ಹಜಾರಿಕಾ ಜತೆ ಎರಡು ವರ್ಷಗಳ ಪ್ರೀತಿಯಲ್ಲಿ ಇದ್ದಿದ್ದರು ಶ್ರುತಿ ಹಾಸನ್. ಅನೇಕ ಸಲ ತಮ್ಮ ಈ ಪ್ರೇಮ ಕಥೆಯನ್ನ ಹೆಮ್ಮೆಯಿಂದ ಹೇಳಿಕೊಂಡಿದ್ದರು.ಶ್ರುತಿ ಹಾಸನ್‌ ಮತ್ತು ಶಂತನು ಹಜಾರಿಕಾ ಸುಮಾರು 5 ವರ್ಷಗಳಿಂದ ಡೇಟಿಂಗ್‌ ನಡೆಸುತ್ತಿದ್ದಾರೆ. ಇವರು 2018ರಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆಗಾಗ ಶ್ರುತಿ ಹಾಸನ್‌ ಶಂತನು ಹಜಾರಿಕಾ ಜತೆ ಇರುವ ಫೋಟೊಗಳನ್ನು ಶೇರ್‌ ಮಾಡಿಕೊಳ್ಳುತ್ತಲೇ ಇರುತ್ತಿದ್ದರು. ಮೊದಲು ಪ್ರಪೋಸ್ ಮಾಡಿದ್ದು ಕೂಡ ಶ್ರುತಿ ಹಾಸನ್‌ ಅಂತೆ. ಸಲಾರ್ (Salaar) ಬಳಿಕ ಸಲಾರ್ 2, ಡಕಾಯಿತ್, ಚೆನ್ನೈ ಸ್ಟೋರಿ ಸಿನಿಮಾಗಳಲ್ಲಿ ಶ್ರುತಿ ಹಾಸನ್ ಬ್ಯುಸಿಯಾಗಿದ್ದಾರೆ.

Continue Reading

ಟಾಲಿವುಡ್

Samantha Ruth Prabhu: ಸಮಂತಾಗೆ ಜೈಲಿಗೆ ಕಳಿಸಿ ಎಂದ ವೈದ್ಯ ; ನಟಿ ಹೇಳಿದ್ದೇನು?

Samantha Ruth Prabhu: ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು ಎಂದು ಕೂಡ ಆಗ್ರಹಿಸಿದ್ದಾರೆ ವೈದ್ಯರು. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ.

VISTARANEWS.COM


on

Samantha Ruth Prabhu Doctor Calls Health Illiterate
Koo

ಬೆಂಗಳೂರು: ಸಮಂತಾ ರುತ್ ಪ್ರಭು (Samantha Ruth Prabhu) ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಾಮಾನ್ಯ ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಪರ್ಯಾಯ ಮಾರ್ಗದ ಬಗ್ಗೆ ಸಲಹೆ ನೀಡಿರುವ ಕುರಿತು ವಿವಾದಕ್ಕೆ ಒಳಗಾಗಿದ್ದಾರೆ. ವೈರಲ್ ಇನ್​ಫೆಕ್ಷನ್ ​ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಸಮಂತಾ ಹೇಳಿದ್ದಾರೆ. ಈ ಹೇಳಿಕೆಯ ಬಗ್ಗೆ ವೈದ್ಯರು ತಕರಾರು ತೆಗೆದಿದ್ದಾರೆ. ವಿಜ್ಞಾನ ಹಾಗೂ ವೈದ್ಯ ಲೋಕದಲ್ಲಿ ಸ್ವಲ್ಪವೂ ಜ್ಞಾನವಿಲ್ಲದ ವ್ಯಕ್ತಿ ಎಂದು ಹೇಳಿದ್ದಾರೆ. ಡಾ ಸಿರಿಯಾಕ್ ಅಬ್ಬಿ ಫಿಲಿಪ್ಸ್ ಅವರು ಸಮಂತಾಗೆ “ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರು” ಎಂದು ಕರೆದಿದ್ದಾರೆ. ಇಂತಹ ಚಿಕಿತ್ಸೆಯನ್ನು ಉತ್ತೇಜಿಸುವ ವ್ಯಕ್ತಿಗಳಿಗೆ ದಂಡ ವಿಧಿಸಬೇಕು ಮತ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಟಿ ಪೋಸ್ಟ್‌ ಕೂಡ ಮಾಡಿದ್ದಾರೆ.

ಸಮಂತಾ ಸಲಹೆಗೆ ಪ್ರತಿಕ್ರಿಯಿಸಿದ ವೈದ್ಯರು, “ದುರದೃಷ್ಟವಶಾತ್ ಆರೋಗ್ಯ ಮತ್ತು ವಿಜ್ಞಾನ ಅನಕ್ಷರಸ್ಥರಾಗಿರುವ ಭಾರತೀಯ ನಟಿ ಸಮಂತಾ ರುತ್ ಅವರು ತಮ್ಮ ಲಕ್ಷಾಂತರ ಫಾಲೋವರ್ಸ್‌ಗಳಿಗೆ ವೈರಲ್ ಇನ್​ಫೆಕ್ಷನ್​ತಡೆಯಲು, ಹೈಡ್ರೋಜ್ ಪೆರಾಕ್ಸೈಡ್ ಹಾಗೂ ಭಟ್ಟಿ ಇಳಿಸಿದ ನೀರನ್ನು ಮಿಕ್ಸ್ ಮಾಡಿ ನೆಬ್ಯುಲೈಸರ್ ಮೂಲಕ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೆಬ್ಯುಲೈಸ್ ಮಾಡಬೇಡಿ. ಮತ್ತು ಉಸಿರಾಡಬೇಡಿ. ಏಕೆಂದರೆ ಇದು ಆರೋಗ್ಯಕ್ಕೆ ಅಪಾಯಕಾರಿ. ಅಮೇರಿಕದ ಸೈಂಟಿಫಿಕ್ ಸೊಸೈಟಿ ಅಸ್ತಮಾ ಮತ್ತು ಅಲರ್ಜಿ ಫೌಂಡೇಶನ್ ನವರೇ ಈ ಮಾತನ್ನು ಹೇಳಿದ್ದಾರೆ ಎಂದು ಕೂಡ ಹೇಳಿದ್ದಾರೆ ಡಾಕ್ಟರ್ ಸೈರಿಕ್ ಅಬ್ಬಿ ಫಿಲಿಪ್ಸ್ .

ಆರೋಗ್ಯದ ಬಗ್ಗೆ ಬೇಕಾ ಬಿಟ್ಟಿ ಸಲಹೆಯನ್ನು ನೀಡುತ್ತಿರುವ ಸಮಂತಾ ಅವರ ವಿರುದ್ಧ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವ ಆರೋಪದಡಿ ಜೈಲಿಗೆ ಹಾಕಬೇಕು ಎಂದು ಕೂಡ ಆಗ್ರಹಿಸಿರುವ ವೈದ್ಯರು, ಭಾರತದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ಆರೋಗ್ಯ ಸಂಸ್ಥೆ ಇವರ ಮೇಲೆ ಕ್ರಮ ಕೈಗೊಳ್ಳುತ್ತದೆಯೇ ಅಥವಾ ಸುಮ್ಮನೆ ಇದ್ದು ಜನರನ್ನು ಸಾಯಲು ಬಿಡುತ್ತಾರಾ ಎಂದು ಪ್ರಶ್ನೆಯನ್ನೂ ಕೂಡ ಮಾಡಿದ್ದಾರೆ.

ಇದಾದ ಬಳಿಕ ಸಮಂತಾ ಈ ಬಗ್ಗೆ ಪೋಸ್ಟ್‌ ಮಾಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ವಿವಿಧ ರೀತಿಯ ಔಷಧಿಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂದಿರುವ ಸಮಂತಾ, ಹಲವು ಚಿಕಿತ್ಸೆಗಳು ತುಂಬಾ ದುಬಾರಿಯಾಗಿದ್ದವು. ನಾನು ನಿಭಾಯಿಸಬಲ್ಲೆ. ಆದರೆ ಕೆಲವರಿಗೆ ಅಸಾಧ್ಯ. ಕಳೆದೆರಡು ವರ್ಷಗಳಲ್ಲಿ ನಾನು ಎದುರಿಸಿದ ಮತ್ತು ಕಲಿತ ಎಲ್ಲದರಿಂದ ನಾನು ಕೇವಲ ಒಳ್ಳೆಯ ಉದ್ದೇಶದಿಂದ ಸಲಹೆ ನೀಡಿದ್ದೇನೆ ಎಂದು ಕೂಡ ಸಮಂತಾ ಹೇಳಿದ್ದಾರೆ.

ಇದನ್ನೂ ಓದಿ: Samantha Ruth Prabhu: ಬೆತ್ತಲೆ ಫೋಟೊ ಅಪ್​ಲೋಡ್ ಮಾಡಿದ್ರಾ ಸಮಂತಾ?

ಮಾತ್ರವಲ್ಲ ಜೈಲಿಗೆ ಕಳುಹಿಸಿ ಎಂದು ನನಗೆ ಹೇಳುವ ಬದಲು, ನನ್ನ ಪೋಸ್ಟ್‌ನಲ್ಲಿ ಟ್ಯಾಗ್ ಮಾಡಿರುವ ನನ್ನ ಡಾಕ್ಟರನ್ನು ಅವರು ಕೇಳಬೇಕಿತ್ತು ಎಂದಿದ್ದಾರೆ. ಆಗ ಇಬ್ಬರು ವೃತ್ತಿಪರ ವೈದ್ಯರ ನಡುವೆ ಚರ್ಚೆಯಾಗುತ್ತಿತ್ತು. ಆ ಚರ್ಚೆಯಿಂದ ನಾನು ಇನ್ನೂ ಹೆಚ್ಚು ಕಲಿಯಬಹುದಿತ್ತು ಎಂದು ಕೂಡ ಸಮಂತಾ ಹೇಳಿದ್ದಾರೆ. . ಇನ್ನು ಮುಂದೆ ತಾನು ಹಂಚಿಕೊಳ್ಳುವ ವೈದ್ಯಕೀಯ ಸಲಹೆಯ ಬಗ್ಗೆ ‘ಹೆಚ್ಚು ಜಾಗರೂಕರಾಗಿರುತ್ತೇನೆ’ ಎಂದು ಹೇಳಿದ್ದಾರೆ ಸಮಂತಾ.

ಈ ಮುಂಚೆಯೂ ನಟಿ ಲಿವರ್‌ ಡೆಟಾಕ್ಸಿಫಿಕೇಶನ್‌ (liver detoxification) ಬಗ್ಗೆ ತಪ್ಪು ಮಾಹಿತಿ ನೀಡಿದ್ದರು ಎಂದು ಹಲವರು ಆರೋಪಿಸಿದ್ದರು. ಅಲ್ಲಿ ಸಮಂತಾ ಅವರು ಲಿವರ್‌ ಆರೋಗ್ಯಕ್ಕಾಗಿ ʻದಂಡೇಲಿಯನ್‌ʼನಂತಹ ಗಿಡಮೂಲಿಕೆಗಳ ಬಳಕೆ ಬಗ್ಗೆ ಚರ್ಚಿಸಿದ್ದರು. ಈ ಬಗ್ಗೆ ಸುಳ್ಳು ಮಾಹಿತಿಯನ್ನು ಪ್ರಚಾರ ಮಾಡಿದ್ದಕ್ಕಾಗಿ ವೈದ್ಯರೊಬ್ಬರು ಸಮಂತಾ ಅವರನ್ನು ಟೀಕಿಸಿದ್ದರು.

Continue Reading
Advertisement
Vastu Tips
ಧಾರ್ಮಿಕ2 mins ago

Vastu Tips: ಆರ್ಥಿಕ ಸಂಕಷ್ಟ ದೂರವಾಗಿ ಶ್ರೀಮಂತರಾಗಬೇಕೆ? ಈ ವಾಸ್ತು ನಿಯಮ ಪಾಲಿಸಿ

Union Budget 2024
ಬಜೆಟ್ 202412 mins ago

Union Budget 2024: ಘೋಷಣೆ ಸೋರಿಕೆಯಿಂದ ಹಲ್ವಾ ತಿನ್ನುವವರೆಗೆ; ಕೇಂದ್ರ ಬಜೆಟ್‌ನ 10 ಆಸಕ್ತಿದಾಯಕ ಸಂಗತಿಗಳಿವು

Sanath Jayasuriya
ಪ್ರಮುಖ ಸುದ್ದಿ14 mins ago

Sanath Jayasuriya : ಬ್ಯಾಟಿಂಗ್​ ದಿಗ್ಗಜ ಸನತ್​ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್​ ತಂಡದ ನೂತನ ಕೋಚ್​

Yogi Adityanath
ದೇಶ20 mins ago

Yogi Adityanath: ನಿಂತ ಜಾಗದಲ್ಲೇ ಬಡ ಮಹಿಳೆಗೆ ಮನೆ ಮಂಜೂರು ಮಾಡಿದ ಯೋಗಿ ಆದಿತ್ಯನಾಥ್;‌ ಇದು ‌Instant ಮಾನವೀಯತೆ

leopard attack
ರಾಯಚೂರು24 mins ago

Leopard Attack : ದಾಳಿ ಮಾಡಿದ ಚಿರತೆಯನ್ನು ಹೊಡೆದು ಕೊಂದು ಆಂಬ್ಯುಲೆನ್ಸ್‌ಗೆ ಹಾಕಿದ ಗ್ರಾಮಸ್ಥರು

Viral Video
ವೈರಲ್ ನ್ಯೂಸ್33 mins ago

Viral Video: ದುಬೈ ಮಾಲ್‌ನಲ್ಲಿ ಬೊಂಬೆಗಳೊಂದಿಗೆ ಬೊಂಬೆಯಾದ ಮಾಡೆಲ್‌! ಗ್ರಾಹಕರು ಕಕ್ಕಾಬಿಕ್ಕಿ

bomb threat
ಕರ್ನಾಟಕ34 mins ago

Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

Puri Jagannath Yatra
ಧಾರ್ಮಿಕ43 mins ago

Puri Jagannath Yatra: ಪ್ರತಿ ವರ್ಷ ಹೊಸ ರಥ, ಜಗನ್ನಾಥನಿಗೆ ಜ್ವರ! ಪುರಿ ರಥ ಯಾತ್ರೆ ವಿಶೇಷ ಹಲವು!

Riyan Parag
ಪ್ರಮುಖ ಸುದ್ದಿ48 mins ago

Riyan Parag : ರಿಯಾನ್ ಪರಾಗ್​​ ಈ ಸಾಧನೆ ಮಾಡಿದ ಭಾರತದ ಮೊದಲ ಪುರುಷ ಆಟಗಾರ

Davanagere news
ಮಳೆ59 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Davanagere news
ಮಳೆ59 mins ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ2 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ12 hours ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ24 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ1 day ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ1 day ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು1 day ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ1 day ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ1 day ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ2 days ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

ಟ್ರೆಂಡಿಂಗ್‌