Adipurush Movie: ಬಾಕ್ಸಾಫಿಸ್‌ ಗಳಿಕೆಯಲ್ಲಿ ಮುಗ್ಗರಿಸಿದ 'ಆದಿಪುರುಷ'! ಫ್ಲಾಪ್ ಆಯ್ತಾ 'ಬಾಹುಬಲಿ' ಪ್ರಭಾಸ್ ಸಿನಿಮಾ? - Vistara News

ಸಿನಿಮಾ

Adipurush Movie: ಬಾಕ್ಸಾಫಿಸ್‌ ಗಳಿಕೆಯಲ್ಲಿ ಮುಗ್ಗರಿಸಿದ ‘ಆದಿಪುರುಷ’! ಫ್ಲಾಪ್ ಆಯ್ತಾ ‘ಬಾಹುಬಲಿ’ ಪ್ರಭಾಸ್ ಸಿನಿಮಾ?

ಭಾರೀ ನಿರೀಕ್ಷೆ ಹುಟ್ಟಿಸಿ ಬಿಡುಗಡೆಯಾದ ವಾರಾಂತ್ಯದಲ್ಲಿ ಬರೋಬ್ಬರಿ 220 ಕೋಟಿ ರೂ. ಗಳಿಸಿಕೊಂಡಿದ್ದ ಆದಿಪುರುಷ ಸಿನಿಮಾದ (Adipurush Movie) ಗಳಿಕೆ ಐದೇ ದಿನಗಳಲ್ಲಿ ಕುಸಿದಿದೆ. ಮಂಗಳವಾರ ಭಾರೀ ಕಡಿಮೆ ಮೊತ್ತದ ಗಳಿಕೆಯನ್ನು ಸಿನಿಮಾ ಕಂಡಿದೆ.

VISTARANEWS.COM


on

adipurush box office collection
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಓಂ ರಾವತ್‌ ನಿರ್ದೇಶನ ಮತ್ತು ದಕ್ಷಿಣ ಭಾರತದ ಪ್ರಸಿದ್ಧ ನಟ ಪ್ರಭಾಸ್‌ ನಟನೆಯ ಸಿನಿಮಾ ಆದಿಪುರುಷ (Adipurush Movie) ಬಿಡುಗಡೆಯಾಗಿ ಹಲವಾರು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದೆ. ಸಿನಿಮಾ ಬಿಡುಗಡೆಗೂ ಮೊದಲು ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆಯಿತ್ತಾದರೂ ಸಿನಿಮಾ ಬಿಡುಗಡೆಯಾದ ನಂತರ ವೀಕ್ಷಕರ ಕೋಪಕ್ಕೆ ಸಿನಿಮಾ ಗುರಿಯಾಗಿದೆ. ಕಳೆದ ಶುಕ್ರವಾರ ಬಿಡುಗಡೆಯಾಗಿ ವಾರಾಂತ್ಯದಲ್ಲಿ ಭರ್ಜರಿ ಗಳಿಕೆ ಕಂಡಿದ್ದ ಸಿನಿಮಾ ಈಗಾಗಲೇ ಗಳಿಕೆಯಲ್ಲಿ ಭಾರೀ ಹಿಂದಕ್ಕೆ ಹೋಗಿದೆ.

ಹೌದು. ಆದಿಪುರುಷ ಸಿನಿಮಾ ವಾರಾಂತ್ಯದಲ್ಲಿ ದೇಶಾದ್ಯಂತ ಒಟ್ಟು 220 ಕೋಟಿ ರೂ. ಗಳಿಸಿಕೊಂಡಿತ್ತು. ಆದರೆ ಮಂಗಳವಾರ ಈ ಸಿನಿಮಾ ದೇಶಾದ್ಯಂತ ಗಳಿಸಿರುವುದು ಕೇವಲ 10.80 ಕೋಟಿ ರೂ. ಮಾತ್ರ. ಮಂಗಳವಾರದವರೆಗೆ ಸಿನಿಮಾದ ಒಟ್ಟಾರೆ(ವಿಶ್ವಾದ್ಯಂತ) ಗಳಿಕೆ 375 ಕೋಟಿ ರೂ. ಎಂದು ಟಿ ಸೀರಿಸ್‌ ಹೇಳಿಕೊಂಡಿದೆ.

ಇದನ್ನೂ ಓದಿ: Viral News : ಹೆಂಡತಿಯನ್ನು ಹೆದರಿಸಲು ಹೋಗಿ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ ಗಂಡ!
ಈ ಸಿನಿಮಾದ ವಿತರಕರಾಗಿರುವ ಅಕ್ಷಯ್‌ ರಥಿ ಅವರ ಪ್ರಕಾರ ಸಿನಿಮಾ ಟಿಕೆಟ್‌ ಮಾರಾಟ ಪ್ರಮಾಣ ಶೇ. 65-70 ಕುಸಿತ ಕಂಡಿದೆಯಂತೆ. “ಸಿನಿಮಾವನ್ನು ಜನರು ಮೆಚ್ಚಿಕೊಂಡಿಲ್ಲ. ಹಾಗಾಗಿ ಟಿಕೆಟ್‌ ಮಾರಾಟ ಪ್ರಮಾಣ ಭಾರೀ ಪ್ರಮಾಣದಲ್ಲಿ ಕುಸಿದಿದೆ” ಎಂದು ಅವರು ಹೇಳಿಕೊಂಡಿದ್ದಾರೆ.

ಇನ್ನೊಂದತ್ತ ಆದಿಪುರುಷ ಸಿನಿಮಾವನ್ನು ಪ್ರದರ್ಶನವಾಗದಂತೆ ನಿಷೇಧಿಸಬೇಕು ಎಂದು ಅಖಿಲ ಭಾರತೀಯ ಸಿನಿ ವರ್ಕರ್ಸ್ ಅಸೋಸಿಯೇಷನ್ (ಎಐಸಿಡಬ್ಲ್ಯುಎ) ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಪತ್ರದ ಮೂಲಕ ಮನವಿ ಮಾಡಿಕೊಂಡಿದೆ. ರಾಮಾಯಣದ ಕಥೆಯಾಗಿರುವ ಈ ಸಿನಿಮಾದಲ್ಲಿ ರಾಮ ಮತ್ತು ಹನುಮನ ಚಿತ್ರಣವನ್ನು ಹಾಳು ಮಾಡಲಾಗಿದೆ. ಸನಾತನ ಧರ್ಮದ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಲಾಗಿದೆ ಎಂದು ಪತ್ರದಲ್ಲಿ ದೂರಲಾಗಿದೆ. ಈ ಸಿನಿಮಾ ಸಂಪೂರ್ಣ ಹಾಳಾಗಿರುವ ಸಿನಿಮಾದ ಎಂದು ಎಐಸಿಡಬ್ಲ್ಯುಎ ದೂರಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ದರ್ಶನ್‌ ಅರೆಸ್ಟ್​ ಆದ ಬೆನ್ನಲ್ಲೇ ಕರ್ಮ ಫಲ ಎಂದು ಜಗ್ಗೇಶ್‌ ಟ್ವೀಟ್‌!

Actor Darshan: ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan ). ಬುಧವಾರದಿಂದ ಆರಂಭಗೊಂಡಂತೆ ದರ್ಶನ್ ಗ್ಯಾಂಗ್​​ಗೆ ಆರು ದಿನಗಳ ಕಾಲ ಪೊಲೀಸ್ ವಿಚಾರಣೆ ನಡೆಯಲಿದೆ. ಕೊಲೆ ಕೇಸ್ ಸಂಬಂಧ ಪೊಲೀಸರು ಸಾಕ್ಷ್ಯಗಳನ್ನು ಒಟ್ಟು ಮಾಡಲಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಅರೆಸ್ಟ್‌ ಆದ ಬಳಿಕ ನಟಿ ರಮ್ಯಾ , ಚೇತನ್‌ ಅಹಿಂಸಾ ಸೇರಿದಂತೆ ಅನೇಕರು ಸೋಷಿಯಲ್‌ ಮೀಡಿಯಾ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ.

VISTARANEWS.COM


on

Actor Darshan arest Actor Jaggesh Says Karma Follows You
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರು ಅರೆಸ್ಟ್‌ ಆದ ಬಳಿಕ ನಟಿ ರಮ್ಯಾ , ಚೇತನ್‌ ಅಹಿಂಸಾ ಸೇರಿದಂತೆ ಅನೇಕರು ಸೋಷಿಯಲ್‌ ಮೀಡಿಯಾ ಮೂಲಕ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈಗ ನಟ ಜಗ್ಗೇಶ್ ಕೂಡ ಪರೋಕ್ಷವಾಗಿ ದರ್ಶನ್‌ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ʻಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆʼಎಂದು ಬರೆದುಕೊಂಡಿದ್ದಾರೆ.

ʻʻಸರ್ವ ಆತ್ಮಾನೇನ ಬ್ರಹ್ಮ” ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನು ಕೊಲ್ಲುವ ಹಕ್ಕು ಯಾರಿಗೂ ಇಲ್ಲ! ಕರ್ಮ ಜೀವನವನ್ನು ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ! ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕು ತತಕ್ಷಣ ಫಲಿತಾಂಶ ಉಂಟು! ರಾಮನಾಗು.. ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ! ಮದಕ್ಕೆ ಕಾರುಣ್ಯದ ಅರಿವಿಲ್ಲಾ!ʼʼಎಂದು ಬರೆದುಕೊಂಡಿದ್ದಾರೆ. ಮದ ಇದ್ದವನಿಗೆ ಕರುಣೆ ಎಂಬುದೆಲ್ಲ ಇರುವುದಿಲ್ಲ ಎಂಬುದು ಈ ವಾಕ್ಯದ ಅರ್ಥ.ಈ ಮೂಲಕ ಅವರು ದರ್ಶನ್ ಬಗ್ಗೆಯೇ ಟ್ವೀಟ್ ಮಾಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

‘ತೋತಾಪುರಿ’ ಸಿನಿಮಾ ಚಿತ್ರೀಕರಣ ಸೆಟ್‌ಗೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಜಗ್ಗೇಶ್ ವಿರುದ್ಧ ಧಿಕ್ಕಾರ ಕೂಗಿದ್ದು ವಿವಾದ ಸೃಷ್ಟಿಸಿತ್ತು. ದರ್ಶನ್ ಹುಡುಗರ ಬಗ್ಗೆ ನಟ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೊ ಕ್ಲಿಪ್ ವೈರಲ್ ಆಗಿ ಭಾರೀ ಸುದ್ದಿ ಆಗಿತ್ತು. ಇದರ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಜಗ್ಗೇಶ್ ಅವರಲ್ಲಿ ಪಟ್ಟು ಹಿಡಿದಿದ್ದರು. ಸಂದರ್ಶನವೊಂದರಲ್ಲಿ ಈ ಘಟನೆ ಬಗ್ಗೆ ಜಗ್ಗೇಶ್‌ಗೆ ಸ್ವತಃ ದರ್ಶನ್ ಕ್ಷಮೆ ಕೇಳಿದ್ದರು.

ಇನ್​ಸ್ಪೆಕ್ಟರ್ ವಿಕ್ರಂ ಚಿತ್ರದ ನಿರ್ಮಾಪಕ ವಿಖ್ಯಾತ್​ರವರೊಂದಿಗೆ ನಟ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ಅಭಿಮಾನಿಗಳ ಬಗ್ಗೆ ಮಾತನಾಡುವ ವೇಳೆ ನನ್ನ ಬಳಿ ಇರುವವರೆಲ್ಲರೂ ತುಂಬಾ ಒಳ್ಳೆಯವರು. ಆದರೆ ದರ್ಶನ್ ಥರ, ಅವರ ಥರ ತಲೆ ಮಾಂಸ ಕಳಿಸಿ ಅಣ್ಣಾ, ನೂರು ಕುರಿ ಕಳಿಸಿ ಅಣ್ಣಾ ಎನ್ನುವವರು ಯಾರೂ ನಮ್ಮ ಬಳಿ ಇಲ್ಲ ಎಂದು ಜಗ್ಗೇಶ್ ಹೇಳಿದ್ದಾರೆ. ಇದೇ ವಿಚಾರಕ್ಕೆ ಸಿಟ್ಟಿಗೆದ್ದ ದರ್ಶನ್ ಅಭಿಮಾನಿಗಳು ಕ್ಷಮೆಯಾಚಿಸುವಂತೆ ಪಟ್ಟು ಹಿಡಿದಿದ್ದರು.

ಇದನ್ನೂ ಓದಿ: Actor Darshan: ʻಡೆವಿಲ್‌ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!

ಈಗಾಗಲೇ ಚೇತನ್‌ ಅಹಿಂಸಾ ಕೂಡ ಎಕ್ಸ್‌ನಲ್ಲಿ ʻʻʻಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ನಿಜ ಜೀವನದಲ್ಲಿ ನಟ ದರ್ಶನ್‌ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು,” ಎಂಬುದಾಗಿ ಬರೆದುಕೊಂಡಿದ್ದಾರೆ.

ಚೇತನ್‌ ಅಹಿಂಸಾ ಹೀಗೆ ಬರೆದುಕೊಂಡಿದ್ದಾರೆ. ʻʻನಟ ದರ್ಶನ ಮತ್ತು ಆತನ ಸಹಚರರ ವಿರುದ್ಧ ಕೊಲೆ ಆರೋಪಗಳು ಗಂಭೀರವಾಗಿವೆ. ನಮ್ಮ ರಾಜ್ಯ ಪೊಲೀಸರು ಅದಕ್ಕೆ ಅನುಗುಣವಾಗಿ ತನಿಖೆ ನಡೆಸುತ್ತಾರೆ ಎಂದು ನಾವು ನಂಬುತ್ತೇವೆ. ಅಲ್ಲದೆ, ಚಲನಚಿತ್ರ ತಾರೆಯರು ಸುಮಾರು ಒಂದು ಶತಮಾನದಿಂದ ಅವರು ಪಡೆದಿರುವ ಜೀವನಕ್ಕಿಂತ ದೊಡ್ಡ ಸ್ಥಾನಮಾನಕ್ಕೆ ಅರ್ಹರಲ್ಲ. ಇಂತಹ ನಿಜ-ಜೀವನದ ಖಳನಾಯಕರನ್ನು ಸೃಷ್ಟಿಸಿದವರು ನಾವು ಒಂದು ಸಮಾಜವಾಗಿ ತಪ್ಪಿತಸ್ಥರುʼʼಎಂದು ಬರೆದುಕೊಂಡಿದ್ದಾರೆ.

ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ನಟ ದರ್ಶನ್​ಗೆ (Actor Darshan) ಮರಣದಂಡನೆಯಾಗಲಿ ಎಂಬ ಆಶಯವನ್ನು ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ವ್ಯಕ್ತಪಡಿಸಿದ್ದಾರೆ. ಕೊಲೆ ಪ್ರಕರಣದ ಕುರಿತು ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್​ಗೆ ಇಂಡಿಯನ್ ಪಿನಲ್​ ಕೋಡ್​ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್‌ ಅನ್ನು ರಮ್ಯಾ ರೀಟ್ವೀಟ್‌ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Vinod Raj: ಲೀಲಮ್ಮನ ಮಗ, ನಟ ವಿನೋದ್‌ ರಾಜ್‌ ಆಸ್ಪತ್ರೆಗೆ ದಾಖಲು

Vinod Raj: ಇತ್ತೀಚೆಗೆ ವಿನೋದ್ ರಾಜ್ ಸಮಾಜಮುಖಿ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದರು. ಇದೀಗ ನಟ ರುಳಿನ ಸಮಸ್ಯೆಯಿಂದ ಇವರು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ 11 ವರ್ಷಗಳ ಹಿಂದೆ ಹಾರ್ಟ್ ಆಪರೇಷನ್‌ಗೆ ಒಳಗಾಗಿ ಸ್ಟಂಟ್ ಹಾಕಿಸಿಕೊಂಡಿದ್ದರು ವಿನೋದ್ ರಾಜ್.

VISTARANEWS.COM


on

Vinod Raj admitted hospital
Koo

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ದಿವಂಗತ ಲೀಲಾವತಿ ಪುತ್ರ, ನಟ ವಿನೋದ್‌ ರಾಜ್‌ (Vinod Raj) ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆಯಿಂದ ಇವರು ನೆಲಮಂಗಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಲಗಳ ಪ್ರಕಾರ 11 ವರ್ಷಗಳ ಹಿಂದೆ ಹಾರ್ಟ್ ಆಪರೇಷನ್‌ಗೆ ಒಳಗಾಗಿ ಸ್ಟಂಟ್ ಹಾಕಿಸಿಕೊಂಡಿದ್ದರು ವಿನೋದ್ ರಾಜ್. ಇದೀಗ ಅದೇ ಸ್ಟಂಟ್‌ನಿಂದ ಕರುಳಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಸದ್ಯ ಆಪರೇಷನ್‌ಗೆ ಒಳಗಾಗಿದ್ದಾರೆ ವಿನೋದರಾಜ್. ಇನ್ನು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲ ತಿಳಿಸಿದೆ.

ಇತ್ತೀಚೆಗೆ ವಿನೋದ್ ರಾಜ್ ಸಮಾಜಮುಖಿ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದರು. ಸ್ಯಾಂಡಲ್​​ವುಡ್ ನಟ ವಿನೋದ್ ರಾಜ್ ಅವರು ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್​ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ವಿನೋದ್‌ ರಾಜ್‌ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು. ನೆಲಮಂಗಲದ ಕರೆಕಲ್ ಕ್ರಾಸ್​ನಿಂದ ಸೋಲದೇವನಹಳ್ಳಿವರೆಗೂ ಗುಂಡಿ ಬಿದ್ದ ರಸ್ತೆ ಹಾಗೂ ಕೆಟ್ಟು ಹೋದ ರಸ್ತೆಗಳನ್ನು ಸರಿ ಪಡಿಸಿದ್ದರು. ಈ ಮೂಲಕ ಮಳೆಗಾಲ ಆರಂಭವಾಗುವ ಮೊದಲೇ ವಿನೋದ್ ರಾಜ್ ರಸ್ತೆಯನ್ನು ರಿಪೇರಿ ಮಾಡಿಸಿದ್ದರು.

ಇದೀಗ ಹೆಂಡತಿ ಮಗನ ಜತೆ ನೆಲಮಂಗಲದಲ್ಲಿ ವಾಸವಿದ್ದಾರೆ. 1987ರವರೆಗೂ ಲೀಲಾವತಿ ಅವರ ಮಗ ಕೇವಲ ವಿನೋದ್‌ ಆಗಿದ್ದರು. ಖ್ಯಾತ ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರು ವಿನೋದ್‌ ಗಾಗಿ ಡ್ಯಾನ್ಸ್‌ ರಾಜಾ ಡ್ಯಾನ್ಸ್‌ ಸಿನಿಮಾವನ್ನು ನಿರ್ಮಿಸಿದಾಗ ವಿನೋದ್‌ ಎಂಬ ಹೆಸರನ್ನು ವಿನೋದ್‌ ರಾಜ್‌ ಆಗಿ ಪಡೆದರು.

ಇದನ್ನೂ ಓದಿ: Actor Darshan: ʻಡೆವಿಲ್‌ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!

80ರ ದಶಕದಲ್ಲಿ ಶಿವರಾಜ್‌ಕುಮಾರ್ ಇಂಡಸ್ಟ್ರಿಗೆ ಬಂದು ‘ಆನಂದ್’ ಸಿನಿಮಾ ಹಿಟ್ ಆಗಿತ್ತು.. ದ್ವಾರಕೀಶ್ ಅವರು ಅಣ್ಣಾವ್ರ ಜತೆ ಮೇಯರ್ ಮುತ್ತಣ್ಣ ಮತ್ತು ಭಾಗ್ಯವಂತರು ಸಿನಿಮಾ ಮಾಡಿದರು. ಮುಂದೆ ಡಾ. ರಾಜ್‌ ಅವರ ಡೇಟ್ಸ್‌ ಸಿಕ್ಕಿರಲಿಲ್ಲ. ಆಗ ದ್ವಾರಕೀಶ್‌ ಅವರು ಲೀಲಾವತಿ ಅವರ ಪುತ್ರ ವಿನೋದ್‌ ನನ್ನು ನಾಯಕನಾಗಿ ಮಾಡಿ ಸಿನಿಮಾ ಮಾಡಲು ನಿರ್ಧರಿಸಿದರು. ಲೀಲಾವತಿಯವರು ಒಪ್ಪಿಕೊಂಡಾಗ ಹುಟ್ಟಿದ್ದೇ ಡ್ಯಾನ್ಸ್‌ ರಾಜಾ ಡ್ಯಾನ್ಸ್‌. ದ್ವಾರಕೀಶ್‌ ಅವರು ಈ ಸಿನಿಮಾಕ್ಕಾಗಿ ವಿನೋದ್‌ ಅವರ ಹೆಸರನ್ನು ವಿನೋದ್‌ ರಾಜ್‌ ಮಾಡಿದರು.

Continue Reading

ಸ್ಯಾಂಡಲ್ ವುಡ್

Actor Darshan: ʻಡೆವಿಲ್‌ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!

Actor Darshan: ಬರೋಬ್ಬರಿ ಒಂಭತ್ತು ಸಿನಿಮಾಗಳು ದರ್ಶನ್‌ ಅವರ ಕೈಯಲ್ಲಿ ಇತ್ತು. ಇನ್ನೇನು ದಚ್ಚು ಫ್ಯಾನ್ಸ್‌ ʻಡೆವಿಲ್‌ʼ ಸಿನಿಮಾ ರಿಲೀಸ್‌ಗೆ ಕಾಯುತ್ತಿರುವಾಗಲೇ ʻದಾಸʼ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಈ ಮುಂಚೆಯೂ ಹಲವು ಪ್ರಕರಣಗಳಲ್ಲಿ ದರ್ಶನ್‌ ಪೊಲೀಸರು ಅತಿಥಿಯಾಗಿದ್ದರೂ ಈ ಬಾರಿ ಗಂಭೀರ ಪ್ರಕರಣವಾಗಿರುವುದರಿಂದ ದರ್ಶನ್‌ಗೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗುತ್ತಿದೆ.

VISTARANEWS.COM


on

Actor Darshan arrest what about his future project
Koo

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Challenging Star Darshan) ʻಕಾಟೇರʼ ಸಿನಿಮಾ ಮೂಲಕ ವಿಜಯದ ಪತಾಕೆ ಹಾರಿಸಿದ್ದರು. ಇದಾದ ಬಳಿಕ ಹಲವು ಸಿನಿಮಾಗಳನ್ನು ಅನೌನ್ಸ್‌ ಮಾಡಿದ್ದರು. ಇನ್ನೇನು ದಚ್ಚು ಫ್ಯಾನ್ಸ್‌ ʻಡೆವಿಲ್‌ʼ ಸಿನಿಮಾ ರಿಲೀಸ್‌ಗೆ ಕಾಯುತ್ತಿರುವಾಗಲೇ ʻದಾಸʼ ಕೊಲೆ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಈ ಮುಂಚೆಯೂ ಹಲವು ಪ್ರಕರಣಗಳಲ್ಲಿ ದರ್ಶನ್‌ ಪೊಲೀಸರು ಅತಿಥಿಯಾಗಿದ್ದರೂ ಈ ಬಾರಿ ಗಂಭೀರ ಪ್ರಕರಣವಾಗಿರುವುದರಿಂದ ದರ್ಶನ್‌ಗೆ ಜೈಲು ಶಿಕ್ಷೆ ಗ್ಯಾರಂಟಿ ಎನ್ನಲಾಗುತ್ತಿದೆ.

ಇದೀಗ ದರ್ಶನ್‌ ಅವರನ್ನು ನಂಬಿಕೊಂಡು ಸಿನಿಮಾಗಳಿಗೆ ಈಗಾಗಲೇ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿರುವ ನಿರ್ಮಾಪಕರ ಗತಿ ಏನು? ಹಾಗೇ ಸಿನಿಮಾಗಳೆ ಬರುತ್ತಿಲ್ಲ ಎಂಬ ಗಾಸಿಪ್‌ಗಳ ಮಧ್ಯೆ ವರ್ಷಕ್ಕೆ ಒಂದೆರಡು ಸಿನಿಮಾ ಮಾಡುತ್ತಿದ್ದ ದರ್ಶನ್‌ ಜೈಲು ಪಾಲಾದರೆ ಏನು ಕಥೆ? ಎಂದು ಫ್ಯಾನ್ಸ್‌ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಯಾವೆಲ್ಲ ಸಿನಿಮಾಗಳು ʻದಚ್ಚುʼ ಕೈಯಲ್ಲಿತ್ತು?

ಬರೋಬ್ಬರಿ ಒಂಭತ್ತು ಸಿನಿಮಾಗಳು ದರ್ಶನ್‌ ಅವರ ಕೈಯಲ್ಲಿ ಇತ್ತು. ಆ ಪೈಕಿ ದರ್ಶನ್ ಅವರ ಆಪ್ತ ನಿರ್ಮಾಪಕರಾದ ಶೈಲಜಾ ನಾಗ್ ಮತ್ತು ಬಿ.ಸುರೇಶ್ ಕೂಡ ಇದ್ದಾರೆ. ಖ್ಯಾತ ನಿರ್ದೇಶಕ ತರುಣ್​ ಸುಧೀರ್​ (Tharun Sudhir) ಮತ್ತು ದರ್ಶನ್​ ಅವರ ಕಾಂಬಿನೇಶನ್‌​ನಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಇದರಲ್ಲಿ ಐತಿಹಾಸಿಕ ಕಥಾಹಂದರ ಇರಲಿದೆ ಎನ್ನಲಾಗಿತ್ತು. ಶೈಲಜಾ ನಾಗ್​ ಮತ್ತು ಬಿ. ಸುರೇಶ ಅವರು ನಿರ್ಮಾಣದ D 59 ಸಿನಿಮಾ ಪೋಸ್ಟರ್​ ಬಿಡುಗಡೆ ಮಾಡಲಾಗಿತ್ತು.

ದರ್ಶನ್‌ ಅವರಿಗೆ ಐತಿಹಾಸಿಕ ಸಿನಿಮಾ ಮಾಡುವುದೆಂದರೆ ಅಚ್ಚು ಮೆಚ್ಚು. ಈ ಮೊದಲು ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದ ದರ್ಶನ್ ಅವರು ಈಗ ಸಿಂಧೂರ ಲಕ್ಷ್ಮಣನ ಪಾತ್ರ ಮಾಡಲು ಒಪ್ಪಿಕೊಂಡಿದ್ದರು. ತರುಣ್​ ಸುಧೀರ್​ ಮತ್ತು ದರ್ಶನ್​ ಕಾಂಬಿನೇಷನ್​ನಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಕಥೆ ಇರಲಿದೆ ಎನ್ನಲಾಗಿತ್ತು. ದರ್ಶನ್​ ನಟನೆಯ 59ನೇ ಸಿನಿಮಾವಾಗಿ ಈ ಚಿತ್ರ ಮೂಡಿಬರಲಿತ್ತು. ಈ ಮೊದಲು ದರ್ಶನ್​ ನಟಿಸಿದ್ದ ‘ಯಜಮಾನ’ ಮತ್ತು ‘ಕ್ರಾಂತಿ’ ಸಿನಿಮಾಗಳಿಗೆ ‘ಮೀಡಿಯಾ ಹೌಸ್​ ಸ್ಟುಡಿಯೋ’ ಸಂಸ್ಥೆಯ ಮೂಲಕ ಶೈಲಜಾ ನಾಗ್​ ಮತ್ತು ಬಿ. ಸುರೇಶ್​ ಅವರು ಬಂಡವಾಳ ಹೂಡಿದ್ದರು.

ಇದನ್ನೂ ಓದಿ: Actor Darshan: ಕೊಲೆ ಕೇಸ್‌ನಿಂದ ಎಸ್ಕೇಪ್‌ ಆಗಲು 30 ಲಕ್ಷ ರೂ. ಕೊಟ್ಟಿದ್ದ ʻಡೆವಿಲ್‌ʼ? ಆದರೆ ಫ್ಲ್ಯಾನ್‌ ಆಗಿದ್ದು ಮಾತ್ರ ಉಲ್ಟಾ!

ಇದರ ಹೊರತಾಗಿ ದರ್ಶನ್ ಅವರ ಜತೆ ʻಅಂಬರೀಶʼ ಸಿನಿಮಾ ಮಾಡಿದ್ದ ಮಹೇಶ್ ಸುಖಧರೆ ಕೂಡ ದರ್ಶನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರವೊಂದನ್ನ ಘೋಷಿಸಿದ್ದರು. ಸಚ್ಚಿದಾನಂದ ಇಂಡುವಾಳ ಹೊಸ ಚಿತ್ರ ಘೋಷಿಸಿದ್ದರು, ಇದನ್ನು ತರುಣ್ ಸುಧೀರ್ ಅವರೇ ನಿರ್ದೇಶಿಸುತ್ತಿರುವುದು ವಿಶೇಷ. ರಮೇಶ್ ಪಿಳ್ಳೈ, ಮೋಹನ್ ನಟರಾಜನ್, ಕೆ.ಮಂಜುನಾಥ್, ರಘುನಾಥ್ ಸೋಗಿ, ದರ್ಶನ್ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿಯನ್ನ ತೋರಿಸಿರುವ ಉಳಿದ ನಿರ್ಮಾಪಕರು. ಇವರ ಚಿತ್ರಕ್ಕೆ ಯಾರು ನಿರ್ದೇಶಕರು ಯಾರೆಂಬುದು ತಿಳಿದು ಬಂದಿಲ್ಲ. ಜಗ್ಗು ದಾದಾʼ ಚಿತ್ರವನ್ನು ಮಾಡಿದ್ದ ರಾಘವೇಂದ್ರ ಹೆಗ್ಡೆ ಅವರು ದರ್ಶನ್‌ ಜತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು.

ʻಡೆವಿಲ್ʼ ಇನ್ನೂ ಕಂಪ್ಲೀಟ್‌ ಆಗಿಲ್ಲ

ಕಾಟೇರ ಯಶಸ್ಸಿನ ಬಳಿಕ ಡೆವಿಲ್‌ ಎಂಬ ಸಿನಿಮಾದಲ್ಲಿ ದರ್ಶನ್‌ ನಟಿಸುತ್ತಿದ್ದಾರೆ. ಈ ವರ್ಷ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಈ ಸಿನಿಮಾದ ಶೂಟಿಂಗ್‌ ಭರದಿಂದ ನಡೆಯುತ್ತಿತ್ತು. ಈ ಚಿತ್ರದ ಗ್ಲಿಂಪ್ಸ್‌ ವಿಡಿಯೋ ಕೂಡ ರಿಲೀಸ್‌ ಮಾಡಲಾಗಿತ್ತು.ಡೆವಿಲ್‌ನಲ್ಲಿ ಬಾಲಿವುಡ್‌ ನಟ ಮಹೇಶ್‌ ಮಂಜ್ರೇಕರ್‌ ಕೂಡ ನಟಿಸುತ್ತಿದ್ದಾರೆ. ಪ್ರಕಾಶ್‌ ವೀರ್‌ ನಿರ್ದೇಶನದ ಡೆವಿಲ್‌ ಸಿನಿಮಾದ ಭವಿಷ್ಯ ಏನಾಗಬಹುದು ಎಂಬ ಆತಂಕ ಫ್ಯಾನ್ಸ್‌ಗೆ ಇದೆ.

ಪ್ರೇಮ್‌ ಜತೆದ ಸಿನಿಮಾ

ಈಗಾಗಲೇ ದರ್ಶನ್‌ ನಟನೆಯ ಪ್ರೇಮ್‌ ನಿರ್ದೇಶನದ ಸಿನಿಮಾದ ಪ್ರಮೋ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಹೆಸರು ಇನ್ನೂ ಬಹಿರಂಗವಾಗಿಲ್ಲ.

Continue Reading

ಸ್ಯಾಂಡಲ್ ವುಡ್

Actor Darshan: ಕೊಲೆ ಕೇಸ್‌ನಿಂದ ಎಸ್ಕೇಪ್‌ ಆಗಲು 30 ಲಕ್ಷ ರೂ. ಕೊಟ್ಟಿದ್ದ ʻಡೆವಿಲ್‌ʼ? ಆದರೆ ಫ್ಲ್ಯಾನ್‌ ಆಗಿದ್ದು ಮಾತ್ರ ಉಲ್ಟಾ!

Actor Darshan: ಮೂಲಗಳ ಪ್ರಕಾರ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ದರ್ಶನ್‌ ಗ್ಯಾಂಗ್‌ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್​. ಪ್ರದೋಶ್​, ಎಂ. ಲಕ್ಷ್ಮಣ್​, ಕೆ. ಪವನ್, ನಂದೀಶ್​, ದೀಪಕ್​ ಕುಮಾರ್, ಕಾರ್ತಿಕ್​, ನಿಖಿಲ್ ನಾಯಕ್​, ರಾಘವೇಂದ್ರ ಅಲಿಯಾಸ್​ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ.

VISTARANEWS.COM


on

Actor Darshan a Want To Escape From This Case
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್‌ (Actor Darshan ) ಹಾಗೂ ಗ್ಯಾಂಗ್‌ ಜೈಲು ಸೇರಿದ್ದಾಗಿದೆ. ಈಗ ಒಂದೊಂದೆ ಮಾಹಿತಿಗಳು ಹೊರ ಬರುತ್ತಿವೆ. ಇದೀಗ ಮಾಧ್ಯಮವೊಂದರ ಮಾಹಿತಿ ಪ್ರಕಾರ ರೇಣುಕಾ ಸ್ವಾಮಿಯ ಶವವನ್ನು ಎಸೆದು, ಕೊಲೆ ಆರೋಪವನ್ನು ಹೊತ್ತುಕೊಳ್ಳಲು ಮೂವರಿಗೆ 30 ಲಕ್ಷ ರೂಪಾಯಿ ದರ್ಶನ್‌ ನೀಡಿದ್ದರು ಎನ್ನಲಾಗಿದೆ. ಮೊದಲಿಗೆ ಶವ ವಿಲೇವಾರಿ ಮಾಡಲು ದರ್ಶನ್‌ ಪ್ಲ್ಯಾನ್‌ ಮಾಡಿದ್ದು, ಬಳಿಕ ಅದೇ ಫ್ಲ್ಯಾನ್‌ ಉಲ್ಟಾ ಆಗಿದೆ ಎನ್ನಲಾಗಿದೆ.

ನಾಲ್ವರಿಗೆ ದರ್ಶನ್ 30 ಲಕ್ಷ ರೂ. ನೀಡಿ ಸರೆಂಡರ್ ಆಗುವಂತೆ ಸೂಚನೆ

ರೇಣುಕಾ ಸ್ವಾಮಿ ಮೃತಪಟ್ಟ ಬಳಿಕ ದರ್ಶನ್‌ ಅವರಿಗೆ ಶವ ಸಾಗಿಸುವುದು ಹೇಗೆ ಎನ್ನುವ ಭಯ ಕಾಡಿತ್ತು. ಹೀಗಾಗಿ ನಾಲ್ವರಿಗೆ ದರ್ಶನ್ 30 ಲಕ್ಷ ರೂ. ನೀಡಿ ಸರೆಂಡರ್ ಆಗುವಂತೆ ಸೂಚನೆ ನೀಡಿದ್ದರು. ನಾಲ್ವರು ಕೂಡ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಹೇಳಿ ಸರೆಂಡರ್‌ ಆಗಿದ್ದರು. ಆದರೆ ಪೊಲೀಸರ ವಿಚಾರಣೆ ವೇಳೆಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೇಳಿಕೆ ಬಂದಿತ್ತು. ಇದರಿಂದ ಅನುಮಾನಗೊಂಡು ಪೊಲೀಸರು ಇನ್ನಷ್ಟು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಇಡೀ ತಂಡ ರಾತ್ರಿಯಿಡೀ ದರ್ಶನ್ ಜತೆ ಸಂಪರ್ಕದಲ್ಲಿ ಇರುವುದು ಬೆಳಕಿಗೆ ಬಂದಿತು. ಮತ್ತು ಕಠಿಣವಾಗಿ ಎಲ್ಲವನ್ನೂ ಪರಿಶೀಲಿಸಿದಾಗ ದರ್ಶನ್ ಹೆಸರು ಹೊರಬಿದ್ದಿದೆ.

ಇದನ್ನೂ ಓದಿ: Actor Darshan: ನಿಜ ಜೀವನದಲ್ಲಿ ನಟ ದರ್ಶನ್‌ನಂತಹ ಖಳನಾಯಕನನ್ನು ಸೃಷ್ಟಿಸಿದ ನಾವೇ ತಪ್ಪಿತಸ್ಥರು; ಚೇತನ್‌ ಅಹಿಂಸಾ!

ಪವಿತ್ರಾ ಕೂಡ ಚಪ್ಪಲಿಯಿಂದ ಹೊಡೆದಿದ್ದರು

ಅಲ್ಲದೇ ಈ ಗ್ಯಾಂಗ್‌ ರೇಣುಕಾಸ್ವಾಮಿ ಅವರನ್ನು ಮನಬಂದಂತೆ ಥಳಿಸಿದ್ದಲ್ಲದೇ ಗುಪ್ತಾಂಗದ ಮೇಲೆ ಒದೆಯಲಾಗಿತ್ತು. ಮತ್ತೊಂದು ಮಾಹಿತಿ ಪ್ರಕಾರ ಪವಿತ್ರಾ ಅವರು ಕೂಡ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. ದರ್ಶನ್‌ ಕೂಡ ರೇಣುಕಾ ಸ್ವಾಮಿಗೆ ಅವಾಜ್‌ ಹಾಕಿ ಊಟ ಮತ್ತು ಟ್ಯಾಬ್ಲೆಟ್ ಕೊಡಿಸಿ ಎಂದು ಹೇಳಿದ್ದರು. ಆದರೆ ದರ್ಶನ್‌ ಗ್ಯಾಂಗ್‌ ಬಳಿಕ ಮತ್ತೆ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ.

ಮೂಲಗಳ ಪ್ರಕಾರ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಅಪಹರಣ ಮಾಡಿ ಕರೆದುಕೊಂಡು ಬಂದು ಶೆಡ್​ನಲ್ಲಿ ದರ್ಶನ್‌ ಗ್ಯಾಂಗ್‌ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಣ ಪಡೆದ ಮತ್ತೊಂದು ಗ್ಯಾಂಗ್ ರೇಣುಕಾ ಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮನಹಳ್ಳಿ ಮೋರಿಗೆ ಬಿಸಾಡಿ ಹೋಗಿದ್ದಾರೆ.

ಪಟ್ಟಣಗೆರೆ ಗೋಡಾನ್‌ನಲ್ಲಿ ಸ್ಥಳ ಮಹಜರ್ ಸಾಧ್ಯತೆ!

ರೇಣುಕಾ ಸ್ವಾಮಿ ಎಂಬುವವರನ್ನು ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್​, ಪವಿತ್ರಾ ಗೌಡ, ವಿ. ವಿನಯ್, ಆರ್. ನಾಗರಾಜು, ಎಸ್​. ಪ್ರದೋಶ್​, ಎಂ. ಲಕ್ಷ್ಮಣ್​, ಕೆ. ಪವನ್, ನಂದೀಶ್​, ದೀಪಕ್​ ಕುಮಾರ್, ಕಾರ್ತಿಕ್​, ನಿಖಿಲ್ ನಾಯಕ್​, ರಾಘವೇಂದ್ರ ಅಲಿಯಾಸ್​ ರಾಘು, ಕೇಶವಮೂರ್ತಿ ಪೊಲೀಸರ ಅತಿಥಿ ಆಗಿದ್ದಾರೆ. ಎಲ್ಲರನ್ನೂ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ. ಇಂದು ರೇಣುಕಾಸ್ವಾಮಿ ಕೊಲೆಯಾದ ಗೋಡಾನ್‌ಗೆ ಆರೋಪಿಗಳನ್ನ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳನ್ನ ಸ್ಥಳ ಮಹಜರ್ ಗೆ ಕರೆತರುವ ಸಾಧ್ಯತೆ ಇದೆ. ಸದ್ಯ ಪೊಲೀಸರು ಈ ಗೋಡಾನ್‌ವನ್ನು ಸೀಜ್ ಮಾಡಿದ್ದಾರೆ. ಈ ಗೋಡಾನ್ ಸುತ್ತಮುತ್ತ ಹೆಚ್ಚಾಗಿ ಸಾರ್ವಜನಿಕರು ಓಡಾಟ ಕೂಡ ಇಲ್ಲ ಎನ್ನಲಾಗಿದೆ. ಈ ಗೋಡಾನ್‌ ಪಟ್ಟಣಗೆರೆ ಜಯಣ್ಣ ಅವರಿಗೆ ಸೇರಿತ್ತು. ಸದ್ಯ ಬಾಡಿಗೆಗೆ ನೀಡಲಾಗಿತ್ತು. ನಿನ್ನೆಯಿಂದಲೂ ಪೊಲೀಸರ ವಶದಲ್ಲಿತ್ತು ಈ ಗೋಡಾನ್.

Continue Reading
Advertisement
Murder case
ಪ್ರಮುಖ ಸುದ್ದಿ2 mins ago

Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!

Chandrababu Naidu
ದೇಶ4 mins ago

Chandrababu Naidu: ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪದಗ್ರಹಣ

Viral News
ರಾಜಕೀಯ4 mins ago

Viral News: ಉತ್ತರ ಪ್ರದೇಶದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯಿದೆ ಜಾರಿ?

Belagvi Police
ಪ್ರಮುಖ ಸುದ್ದಿ7 mins ago

Belagavi News : ಬೆಳಗಾವಿ ಜಿಲ್ಲಾ ನ್ಯಾಯಾಲಯದಲ್ಲೆ ಪಾಕ್​ ಪರ ಘೋಷಣೆ ಕೂಗಿದ ಆರೋಪಿ

Tumkur News
ಪ್ರಮುಖ ಸುದ್ದಿ30 mins ago

Tumkur News : ವಾಟರ್​ ಮ್ಯಾನ್​ ಮೇಲೆ ಠಾಣೆಯಲ್ಲಿ ಹಲ್ಲೆ ; ಡಿವೈಎಸ್​ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಎಫ್​ಐಆರ್​​

Actor Darshan arest Actor Jaggesh Says Karma Follows You
ಸ್ಯಾಂಡಲ್ ವುಡ್33 mins ago

Actor Darshan: ದರ್ಶನ್‌ ಅರೆಸ್ಟ್​ ಆದ ಬೆನ್ನಲ್ಲೇ ಕರ್ಮ ಫಲ ಎಂದು ಜಗ್ಗೇಶ್‌ ಟ್ವೀಟ್‌!

Modi 3.0
ದೇಶ43 mins ago

Modi 3.0: ಶೀಘ್ರ ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌? ಕೇಂದ್ರ ಸಚಿವರು ಹೇಳಿದ್ದೇನು?

Vinod Raj admitted hospital
ಸ್ಯಾಂಡಲ್ ವುಡ್1 hour ago

Vinod Raj: ಲೀಲಮ್ಮನ ಮಗ, ನಟ ವಿನೋದ್‌ ರಾಜ್‌ ಆಸ್ಪತ್ರೆಗೆ ದಾಖಲು

Lok Sabha Election
ಪ್ರಮುಖ ಸುದ್ದಿ1 hour ago

Lok Sabha Election : ಬಿಜೆಪಿ-ಜೆಡಿಎಸ್ ಜತೆಯಾಗಿ ಸ್ಪರ್ಧಿಸಿದರೆ ವಿಧಾನಸಭೆ ಚುನಾವಣೆಯಲ್ಲಿ 142 ಸ್ಥಾನ!

Actor Darshan arrest what about his future project
ಸ್ಯಾಂಡಲ್ ವುಡ್1 hour ago

Actor Darshan: ʻಡೆವಿಲ್‌ʼಗೆ ಜೈಲು ಗ್ಯಾರಂಟಿ ಆದ್ರೆ ಮುಂದಿನ ಸಿನಿಮಾಗಳ ಗತಿಯೇನು? ನಿರ್ಮಾಪಕರಿಗೆ ನಡುಕ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ20 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ22 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ23 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ1 day ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌