Shreyanka Patil: ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಆಡಲಿದ್ದಾರೆ ಕನ್ನಡತಿ ಶ್ರೇಯಾಂಕ ಪಾಟೀಲ್ - Vistara News

ಕ್ರಿಕೆಟ್

Shreyanka Patil: ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಆಡಲಿದ್ದಾರೆ ಕನ್ನಡತಿ ಶ್ರೇಯಾಂಕ ಪಾಟೀಲ್

VISTARANEWS.COM


on

Shreyanka Patil during ACC Emerging Teams Cup 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಕ್ರಿಕೆಟ್​ ಆಟಗಾರ್ತಿ ಬಲಗೈ ಸ್ಪಿನ್ನರ್​ ಆಗಿರುವ ಶ್ರೇಯಾಂಕಾ ಪಾಟೀಲ್(shreyanka patil) ಅವರು ಮಹಿಳಾ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌(ಸಿಪಿಎಲ್‌)ನಲ್ಲಿ(Caribbean Premier League) ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಜತೆಗೆ ಈ ಲೀಗ್​ನಲ್ಲಿ ಆಡಲಿರುವ ಭಾರತದ ಮೊದಲ ಕ್ರಿಕೆಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

20 ವರ್ಷದ ಶ್ರೇಯಾಂಕ ಅವರನ್ನು ಗಯಾನ ಅಮೆಜಾನ್‌ ವಾರಿಯರ್ಸ್‌ ತಂಡಕ್ಕೆ ಸೇರಿಸಿಕೊಂಡಿದೆ. ಇದೇ ವರ್ಷ ಭಾರತದಲ್ಲಿ ನಡೆದ ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆರ್‌ಸಿಬಿ ಪರ ಮಿಂಚಿದ ಇವರು ಎಲ್ಲರ ಗಮನ ಸೆಳೆದಿದ್ದರು. ಕಳೆದ ತಿಂಗಳು ನಡೆದಿದ್ದ ಮಹಿಳಾ ಎಮರ್ಜಿಂಗ್ ತಂಡಗಳ ಏಷ್ಯಾ ಕಪ್ ಕೂಟದಲ್ಲಿ ಭಾರತ ತಂಡ ಚಾಂಪಿಯನ್​ ಆಗುವಲ್ಲಿ ಶ್ರೇಯಾಂಕಾ ಪ್ರಮುಖ ರೂವಾರಿಯಾಗಿದ್ದರು. ಅದರಲ್ಲೂ ಹಾಂಗ್​ಕಾಂಗ್​ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 2 ರನ್​ ನೀಡಿ 5 ವಿಕೆಟ್​ ಉರುಳಿಸಿದ್ದರು. ಬಾಂಗ್ಲಾ ವಿರುದ್ಧದ ಫೈನಲ್​ ಪಂದ್ಯದಲ್ಲಿಯೂ ಸ್ಪಿನ್​ ಮ್ಯಾಜಿಕ್​ ಮಾಡಿದ್ದ ಅವರು 4 ವಿಕೆಟ್​ ಕೆಡವಿ ಭಾರತ ತಂಡ ಚಾಂಪಿನ್​ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಈ ಪ್ರದರ್ಶನಕ್ಕೆ ಸರಣಿಶ್ರೆಷ್ಠ ಪ್ರಸಶ್ತಿಯೂ ಲಭಿಸಿತ್ತು.

ಈಗಾಗಲೇ ಭಾರತ ತಂಡದ ಭವಿಷ್ಯದ ಆಟಗಾರ್ತಿ ಎಂದೇ ಗುರುತಿಸಿಕೊಂಡಿರುವ ಅವರು ಸಿಕ್ಕ ಅವಕಾಶವನ್ನೆಲ್ಲಾ ಸದ್ಬಳಕೆ ಮಾಡಿಕೊಳ್ಳತ್ತಲೇ ಬರುತ್ತಿದ್ದಾರೆ. ಸದ್ಯದಲ್ಲೇ ಭಾರತ ಪ್ರಧಾನ ತಂಡಕ್ಕೆ ಪದಾರ್ಪಣೆ ಮಾಡಿದರೂ ಅಚ್ಚರಿಯಿಲ್ಲ. ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಿರುವ ಅವರು ಮೊದಲ ಬಾರಿಗೆ ಕೆರಿಬಿಯನ್​ ಮಹಿಳಾ ಲೀಗ್​ ಆಡಲು ಎದುರು ನೋಡುತ್ತಿದ್ದಾರೆ.

​ಕೆರಿಬಿಯನ್​ ಲೀಗ್​ನಲ್ಲಿ ಆಡುವ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೇಯಾಂಕ, ವಿಶ್ವದ ಶ್ರೇಷ್ಠ ಆಟಗಾರ್ತಿಯರೊಂದಿಗೆ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಈಗಾಗಲೇ ಮಹಿಳಾ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ ಅನುಭವ ಹೊಂದಿದ್ದೇನೆ ಇದೀಗ ಮತ್ತೊಂದು ಲೀಗ್​ನಲ್ಲಿ ಆಡುವ ಮೂಲಕ ನನ್ನ ಕ್ರಿಕೆಟ್​ ಕೌಶಲವನ್ನು ಹೆಚ್ಚಿಸಲು ಇದು ಸಹಕಾರಿಯಾಗಲಿದೆ” ಎಂದರು. ಕೆಲ ದಿನಗಳ ಹಿಂದಷ್ಟೇ ಅವರು ಭಾರತ ವನಿತೆಯರ ತಂಡದಲ್ಲಿ ಆಡುವುದೇ ಪ್ರಮುಖ ಗುರಿ. ದೇಶಕ್ಕಾಗಿ ವಿಶ್ವಕಪ್‌ ಗೆಲ್ಲುವುದು, ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವುದು ತಮ್ಮ ಮಹದಾಸೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ Women’s Asia Cup 2023: ಭಾರತದ ವನಿತೆಯರ ತಂಡ ‘ಎ’ ಒನ್;‌‌ ಬಾಂಗ್ಲಾ ಮಣಿಸಿ ಏಷ್ಯಾ ಕಪ್‌ ಚಾಂಪಿಯನ್ಸ್

ಕೊಹ್ಲಿಯ ಅಪ್ಪಟ ಅಭಿಮಾನಿ

ಶ್ರೇಯಾಂಕಾ ಅವರು ವಿರಾಟ್‌ ಕೊಹ್ಲಿಯ ದೊಡ್ಡ ಅಭಿಮಾನಿಯಾಗಿದ್ದಾರೆ. ಈ ವಿಚಾರವನ್ನು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಕೊಹ್ಲಿ ಸರ್​ ಅವರನ್ನು ಆನ್‌ಫೀಲ್ಡ್‌ ಹಾಗೂ ಆಫ್‌ ಫೀಲ್ಡ್‌ನಲ್ಲಿ ನೋಡುವುದೇ ತುಂಬಾ ಖುಷಿ. ಜತೆಗೆ ಅವರ ಅಗ್ರೆಸಿವ್​ ತುಂಬಾ ಇಷ್ಟ ಎಂದು ಹೇಳಿದ್ದರು. ವುಮೆನ್ಸ್​ ಪ್ರೀಮಿಯರ್​ ಲೀಗ್​ ವೇಳೆ ಕೊಹ್ಲಿಯ ಜತೆ ಫೋಟೊ ಕೂಡ ತೆಗೆಸಿಕೊಂಡು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಸದ್ಯ ಉತ್ತಮ ಪ್ರದರ್ಶನ ತೋರುತ್ತಿರುವ ಅವರು ಶೀಘ್ರದಲ್ಲೇ ಭಾರತ ತಂಡದ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Virat kohli : ಕಡೆಗಣಿಸುವ ಹೇಳಿಕೆ ನೀಡಿ ಕೊಹ್ಲಿಗೆ ಮತ್ತೆ ಅವಮಾನ ಮಾಡಿದ ಅಂಬಾಟಿ ರಾಯುಡು

Virat kohli : ಐಪಿಎಲ್ 2024 ರ ಸಮಯದಲ್ಲಿ ಕೊಹ್ಲಿ ಬಗ್ಗೆ ಕಳಪೆ ಹೇಳಿಕೆಗಳೊಂದಿಗೆ ವಿವಾದವನ್ನು ಹುಟ್ಟುಹಾಕಿದ ನಂತರ, ಭಾರತದ ಮಾಜಿ ಬ್ಯಾಟರ್​ ಜೂನ್ 2 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024ನಲ್ಲಿಯೂ ಕೊಹ್ಲಿಯನ್ನು ಕಡೆಗಣಿಸುವ ಹೇಳಿಕೆ ನೀಡಿದ್ದಾರೆ.

VISTARANEWS.COM


on

Virat Kohli
Koo

ನವದೆಹಲಿ: ಭಾರತದ ಮಾಜಿ ಬ್ಯಾಟರ್ ಮತ್ತು ಆರು ಬಾರಿ ಐಪಿಎಲ್ ವಿಜೇತ ಅಂಬಾಟಿ ರಾಯುಡು ಕಳೆದ ಕೆಲವು ವಾರಗಳಿಂದ ವಿರಾಟ್ ಕೊಹ್ಲಿ (Virat kohli) ಅವರ ಅಭಿಮಾನಿಗಳ ರೇಡಾರ್ನಲ್ಲಿದ್ದಾರೆ ಮತ್ತು ಟೀಮ್ ಇಂಡಿಯಾದ ಬ್ಯಾಟಿಂಗ್ ಮಾಂತ್ರಿಕನನ್ನು ಅನಗತ್ಯವಾಗಿ ಟೀಕಿಸಿದ್ದಕ್ಕಾಗಿ ಫಲ ಅನುಭವಿಸುತ್ತಿದ್ದಾರೆ. ಟೀಕೆಗಳ ಹೊರತಾಗಿಯೂ, ರಾಯುಡು ಮತ್ತೊಮ್ಮೆ ಕೊಹ್ಲಿ ಬಗ್ಗೆ ತಮ್ಮ ಉದಾಸೀನ ಭಾವ ವ್ಯಕ್ತಪಡಿಸಿದ್ದಾರೆ. ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup) ಭಾರತೀಯ ಕ್ರಿಕೆಟ್ ತಂಡದ ಪರ ಕೊಹ್ಲಿ ಅತಿ ಹೆಚ್ಚು ರನ್ ಗಳಿಸುವುದಿಲ್ಲ ಎಂದು ಹೇಳಿದ್ದಾರೆ.

ಐಪಿಎಲ್ 2024 ರ ಸಮಯದಲ್ಲಿ ಕೊಹ್ಲಿ ಬಗ್ಗೆ ಕಳಪೆ ಹೇಳಿಕೆಗಳೊಂದಿಗೆ ವಿವಾದವನ್ನು ಹುಟ್ಟುಹಾಕಿದ ನಂತರ, ಭಾರತದ ಮಾಜಿ ಬ್ಯಾಟರ್​ ಜೂನ್ 2 ರಿಂದ ಪ್ರಾರಂಭವಾಗುವ ಟಿ 20 ವಿಶ್ವಕಪ್ 2024ನಲ್ಲಿಯೂ ಕೊಹ್ಲಿಯನ್ನು ಕಡೆಗಣಿಸುವ ಹೇಳಿಕೆ ನೀಡಿದ್ದಾರೆ.

ಕೊಹ್ಲಿ ಅಲ್ಲ ಎಂದ ಅಂಬಾಟಿ

ಯುಎಸ್ಎ ಮತ್ತು ಕೆರಿಬಿಯನ್​ನಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಸೂರ್ಯಕುಮಾರ್​ ಭಾರತ ಪರ ಅತಿ ಹೆಚ್ಚು ರನ್​ ಗಳಿಸಲಿದ್ದಾರೆ ಎಂದು ಹೇಳಿದ್ದಾರೆ. ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರು 2024ರ ಟಿ 20 ವಿಶ್ವಕಪ್​​ನಲ್ಲಿ ಭಾರತದ ಪ್ರಭಾವಿ ಆಟಗಾರರು ಎಂದು ಹೇಳಿದ್ದಾರೆ. ಆದರೆ, ಕೊಹ್ಲಿ ಅಲ್ಲ ಎಂದಿದ್ದಾರೆ.

ರಾಯುಡು ತಮ್ಮ ಮಾಜಿ ಮುಂಬೈ ಇಂಡಿಯನ್ಸ್​ ಸಹ ಆಟಗಾರ ಮತ್ತು ಭಾರತ ತಂಡದ ನಾಯಕ ರೋಹಿತ್ ಅವರನ್ನು ತಮ್ಮ ಆದ್ಯತೆಯ ಆಯ್ಕೆ ಎಂದು ಹೆಸರಿಸಿದ್ದಾರೆ. ಈ ಮೆಗಾ ಈವೆಂಟ್​ನಲ್ಲಿ ರೋಹಿತ್ ಭಾರತದ ನಾಯಕನಾಗಿ ಮಿಂಚುತ್ತಾರೆ ಎಂದು ಅವರು ನಂಬಿದ್ದಾರೆ.

ಮುಂಬರುವ ಟಿ 20 ವಿಶ್ವಕಪ್ 2024 ರಲ್ಲಿ ಭಾರತಕ್ಕಾಗಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದು ರಾಯುಡು ಹೆಸರಿಸಿದ್ದಾರೆ, ಪಂದ್ಯಾವಳಿಯ ಇತಿಹಾಸದಲ್ಲಿ ಭಾರತೀಯ ನಾಯಕ ಎಂದಿಗೂ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿಲ್ಲ.

ರಾಯುಡು ಅವರ ಆಯ್ಕೆಯು ಕೆಲವು ಅಭಿಮಾನಿಗಳನ್ನು ಕೆರಳಿಸಬಹುದು. ವಿಶೇಷವಾಗಿ ಕೊಹ್ಲಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಪ್ರತಿಕ್ರಿಯೆ ಪಡೆಯಲಿದ್ದಾರೆ. ಕೊಹ್ಲಿ ಐಪಿಎಲ್ 2024 ರಲ್ಲಿ ರೆಡ್-ಹಾಟ್ ಫಾರ್ಮ್​ನಲ್ಲಿದ್ದರು. ಅವರ 742 ರನ್ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಆದರೆ ರೋಹಿತ್ ಆಡಿರಲಿಲ್ಲ.

ಟಿ 20 ವಿಶ್ವಕಪ್​ನಲ್ಲಿ ಕೊಹ್ಲಿಯ ಸಾಧನೆ


ಎಂಐ ಆರಂಭಿಕ ಆಟಗಾರ ರೋಹಿತ್​ ಐಪಿಎಲ್ 2024 ರಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದ್ದರು. ಆದರೆ ಅವರು ಋತುವಿನಾದ್ಯಂತ ಸರಿಯಾಗಿ ಆಡಿಲ್ಲ ಮತ್ತೊಂದೆಡೆ, ಕೊಹ್ಲಿ ಟಿ 20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ, 27 ಪಂದ್ಯಗಳಲ್ಲಿ 1141 ರನ್, 81.50 ಪ್ರಭಾವಶಾಲಿ ಸರಾಸರಿ ಮತ್ತು 131.30 ಸ್ಟ್ರೈಕ್ ರೇಟ್ ಹೊಂದಿದ್ದರೆ.

ಇದನ್ನೂ ಓದಿ: T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಮಹೇಲ ಜಯವರ್ಧನೆ (1016) ಮತ್ತು ಕ್ರಿಸ್ ಗೇಲ್ (965) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ 39 ಪಂದ್ಯಗಳಲ್ಲಿ 963 ರನ್ ಗಳಿಸಿ ಟಿ 20 ವಿಶ್ವಕಪ್ ನಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. 2022ರ ಟಿ20 ವಿಶ್ವಕಪ್​ನಲ್ಲಿ ಕೊಹ್ಲಿ 296 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಮೆನ್ ಇನ್ ಬ್ಲೂ ಈಗಾಗಲೇ ಯುಎಸ್ಎಯಲ್ಲಿ ತರಬೇತಿಯನ್ನು ಪ್ರಾರಂಭಿಸಿದೆ, ಮತ್ತು ಜೂನ್ 1 ರಂದು ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೆ ಮುಂಚಿತವಾಗಿ ಕೊಹ್ಲಿ ಶೀಘ್ರದಲ್ಲೇ ನ್ಯೂಯಾರ್ಕ್ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

Continue Reading

ಕ್ರೀಡೆ

T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

T20 World Cup : ಧೋನಿಗೂ ಹೊಸ ಅನುಭವಾಗಿತ್ತು. ಅಲ್ಲದೆ ಟೂರ್ನಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದ ಭಾರತ ತಂಡಕ್ಕೆ ಕೋಚ್​​ ಕೂಡ ಇರಲಿಲ್ಲ. ಲಾಲ್ ಚಂದ್ ರಜಪೂತ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು. ಆದರೂ ಭಾರತ ತಂಡ ಕಪ್​ ಗೆದ್ದಿತ್ತು. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಫೈನಲ್ ನಲ್ಲಿ ಪಾಕಿಸ್ತಾನವನ್ನು ಐದು ರನ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

VISTARANEWS.COM


on

T20 World Cup
Koo

ಬೆಂಗಳೂರು: 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು. ಸಚಿನ್ ತೆಂಡೂಲ್ಕರ್ ಸೇರಿದಂತೆ ಕೆಲವು ಹಿರಿಯ ಆಟಗಾರರು ಈ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಮೆನ್ ಇನ್ ಬ್ಲೂ ಅನನುಭವಿ ತಂಡವಾಗಿತ್ತು. ಅದೇ ರೀತಿ ಧೋನಿಗೂ ಹೊಸ ಅನುಭವಾಗಿತ್ತು. ಅಲ್ಲದೆ ಟೂರ್ನಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದ ಭಾರತ ತಂಡಕ್ಕೆ ಕೋಚ್​​ ಕೂಡ ಇರಲಿಲ್ಲ. ಲಾಲ್ ಚಂದ್ ರಜಪೂತ್ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದು. ಆದರೂ ಭಾರತ ತಂಡ ಕಪ್​ ಗೆದ್ದಿತ್ತು. ಜೋಹಾನ್ಸ್ ಬರ್ಗ್ ನಲ್ಲಿ ನಡೆದ ಫೈನಲ್ ನಲ್ಲಿ ಪಾಕಿಸ್ತಾನವನ್ನು ಐದು ರನ್ ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತ್ತು.

ವೆಸ್ಟ್ ಇಂಡೀಸ್ ಮತ್ತು ಯುಎಸ್ಎಯಲ್ಲಿ ಮುಂದಿನ ತಿಂಗಳು ನಡೆಯಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಭಾರತವು ತನ್ನ ಎರಡನೇ ಪ್ರಶಸ್ತಿಯನ್ನು ಗೆಲ್ಲಲು ತಯಾರಿ ನಡೆಸುತ್ತಿತ್ತಿದೆ. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಆವೃತ್ತಿಯಲ್ಲಿ ಆಡಿದ ಭಾರತ ತಂಡದ ಆಟಗಾರರ ಪ್ರದರ್ಶನ ಮತ್ತು ಅವರು ಈಗ ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸೋಣ.

ಪಿಯೂಷ್​ ಚಾವ್ಲಾ

2007 ರ ಟಿ 20 ವಿಶ್ವಕಪ್​​ ನಿಯೋಗದಲ್ಲಿದ್ದು ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದ ಏಕೈಕ ಆಟಗಾರ ಲೆಗ್-ಸ್ಪಿನ್ನರ್ ಪಿಯೂಷ್​ ಚಾವ್ಲಾ. ಚಾವ್ಲಾ 2011 ರಲ್ಲಿ ಭಾರತದ ಏಕದಿನ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು ಆದರೆ ಕೇವಲ ಮೂರು ಪಂದ್ಯಗಳನ್ನು ಆಡಿದ್ದರು. 35ರ ಹರೆಯದ ಚಾವ್ಲಾ ವೃತ್ತಿಪರ ಕ್ರಿಕೆಟ್​ನಲ್ಲಿದ್ದಾರೆ. ಐಪಿಎಲ್​ 2024 ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. 11 ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 13 ವಿಕೆಟ್ ಪಡೆದಿದ್ದಾರೆ.

ಅಜಿತ್ ಅಗರ್ಕರ್​

ಅಗರ್ಕರ್ ಭಾರತೀಯ ತಂಡದಲ್ಲಿದ್ದ ಅತ್ಯಂತ ಅನುಭವಿ ವೇಗಿಯಾಗಿದ್ದರು. ಆದಾಗ್ಯೂ, ಅವರು ಕೇವಲ ಒಂದೆರಡು ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದರು ಮತ್ತು ಪಾಕಿಸ್ತಾನ ವಿರುದ್ಧ ಕೇವಲ ಒಂದು ವಿಕೆಟ್ ಪಡೆದಿದ್ದರು. ಮುಂಬೈ ಕ್ರಿಕೆಟಿಗ ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮುಖ್ಯ ಆಯ್ಕೆಗಾರರಾಗಿದ್ದಾರೆ.

ಯೂಸುಫ್ ಪಠಾಣ್​

ವಿನಾಶಕಾರಿ ಬಲಗೈ ಬ್ಯಾಟರ್​ ಯೂಸುಫ್​ ಪಠಾಣ್​ ಪಾಕಿಸ್ತಾನ ವಿರುದ್ಧದ ಫೈನಲ್​​ನಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಪಂದ್ಯದ ವೇಳೆ ಗಾಯಗೊಂಡ ವೀರೇಂದ್ರ ಸೆಹ್ವಾಗ್ ಬದಲಿಗೆ ಆಡಿದ ಅವರು ಎಂಟು ಎಸೆತಗಳಲ್ಲಿ 15 ರನ್ ಗಳಿಸಿದರು. ಫೆಬ್ರವರಿ 2021 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ. ಯೂಸುಫ್ ಈ ವರ್ಷದ ಆರಂಭದಲ್ಲಿ ರಾಜಕೀಯಕ್ಕೆ ಕಾಲಿಟ್ಟದ್ದು, ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಬೆರ್ಹಾಂಪೋರ್ ಸ್ಥಾನದಿಂದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಇದನ್ನೂ ಓದಿ: T20 World Cup 2024: ಐನಾಕ್ಸ್‌ ದೈತ್ಯ ಪರದೆಯಲ್ಲೂ ಮೂಡಿಬರಲಿದೆ ಭಾರತದ ಪಂದ್ಯಗಳು

ದಿನೇಶ್ ಕಾರ್ತಿಕ್

ಧೋನಿ ವಿಕೆಟ್ ಕೀಪಿಂಗ್ ಗ್ಲೌಸ್ ಧರಿಸುತ್ತಿದ್ದ ಕಾರಣ ದಿನೇಶ್ ಕಾರ್ತಿಕ್ ಪಂದ್ಯಾವಳಿಯ ಮೊದಲಾರ್ಧದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದರು. ಸ್ಪರ್ಧೆಯಲ್ಲಿ ಅವರ ಅತ್ಯಂತ ಸ್ಮರಣೀಯ ಕ್ಷಣವು ದಕ್ಷಿಣ ಆಫ್ರಿಕಾ ವಿರುದ್ಧ ಮೂಡಿ ಬಂತು ಅಲ್ಲಿ ಅವರು ಗ್ರೇಮ್ ಸ್ಮಿತ್ ಅವರನ್ನು ಔಟ್ ಮಾಡಲು ಅದ್ಭುತ ಡೈವಿಂಗ್ ಕ್ಯಾಚ್ ಪಡೆದಿದ್ದರು. ಇದು ಕ್ಯಾಚ್​ ಆಫ್​ದಿ ಟೂರ್ನಮೆಂಟ್ ಆಯಿತು. ಐಪಿಎಲ್ 2024 ರಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದು ಅವರಿಗದು ಕೊನೇ ಸೀಸನ್​. ಆದಾಗ್ಯೂ, ತಮಿಳುನಾಡು ಕ್ರಿಕೆಟಿಗ ಇನ್ನೂ ಅಧಿಕೃತವಾಗಿ ನಿವೃತ್ತಿ ಘೋಷಿಸಿಲ್ಲ. ಆದರೆ, ಕಾಮೆಂಟರಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಎಸ್ ಶ್ರೀಶಾಂತ್

ಎಸ್ ಶ್ರೀಶಾಂತ್ ಈ ವಿಶ್ವ ಕಪ್​​ನ ಏಳು ಪಂದ್ಯಗಳನ್ನು ಆಡಿದ್ದಾರೆ. 30.50 ಸರಾಸರಿ ಮತ್ತು 23 ಸ್ಟ್ರೈಕ್ ರೇಟ್​ನಲ್ಲಿ ಆರು ವಿಕೆಟ್​ ಪಡೆದಿದ್ದಾರೆ. ಕೇರಳದ ವೇಗದ ಬೌಲರ್ ಫೈನಲ್​​ನಲ್ಲಿ ಕೊನೆಯ ಓವರ್​ನಲ್ಲಿ ಮಿಸ್ಬಾ-ಉಲ್-ಹಕ್ ಅವರ ಪ್ರಮುಖ ಕ್ಯಾಚ್ ಪಡೆದು ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದ್ದರು. 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಶ್ರೀಶಾಂತ್ ಆಜೀವ ನಿಷೇಧ ಎದುರಿಸಬೇಕಾಯಿತು. ನಂತರ ನಿಷೇಧವನ್ನು ಏಳು ವರ್ಷಗಳಿಗೆ ಇಳಿಸಲಾಯಿತು. ಹೀಗಾಗಿ ಅವರ ಕಕ್ರಿಕೆಟ್​ ವೃತ್ತಿ ಜೀವನ ಕಮರಿ ಹೋಯಿತು. ಅವರು 2021 ರಲ್ಲಿ ದೇಶೀಯ ಕ್ರಿಕೆಟ್​ಗೆ ಮರಳಿದರು ಮತ್ತು ಮುಂದಿನ ವರ್ಷ ನಿವೃತ್ತರಾದರು. ಇತ್ತೀಚೆಗೆ ಅವರು ವೀಕ್ಷಕ ವಿವರಣೆಗಾರ ಮತ್ತು ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ.

ಜೋಗಿಂದರ್ ಶರ್ಮಾ

ಬಲಗೈ ವೇಗಿ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟವರು. ಫೈನಲ್​ನಲ್ಲಿ ಪಾಕಿಸ್ತಾನ ವಿರುದ್ಧ ಒತ್ತಡದ ಕೊನೆಯ ಓವರ್ ಎಸೆದಿದ್ದರು. ಮಿಸ್ಬಾ ಉಲ್ ಹಕ್ ವಿಕೆಟ್ ಪಡೆದು ಮಿಂಚಿದ್ದರು. ಜೋಗಿಂದರ್ ಹರಿಯಾಣ ಪೊಲೀಸ್ ಇಲಾಖೆಗೆ ಸೇರಿದ್ದಾರೆ ಪ್ರಸ್ತುತ ಅಂಬಾಲಾದ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾರೆ.

ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ ಎಲ್ಲಾ ಏಳು ಪಂದ್ಯಗಳನ್ನು ಆಡಿದ್ದಾರೆ. ಆರು ಇನ್ನಿಂಗ್ಸ್​ಗಳಲಲ್ಲಿ 18.83 ಸರಾಸರಿ ಮತ್ತು 113 ಸ್ಟ್ರೈಕ್ ರೇಟ್​​ನಲ್ಲಿ 113 ರನ್ ಗಳಿಸಿದ್ದಾರೆ. ಅವರು ಗುಂಪು ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಅರ್ಧಶತಕ ಗಳಿಸಿದ್ದರು. ಉತ್ತಪ್ಪ ಸೆಪ್ಟೆಂಬರ್ 2022 ರಲ್ಲಿ ಕ್ರೀಡೆಗೆ ವಿದಾಯ ಹೇಳಿದ್ದಾರೆ. ಅಂದಿನಿಂದ ವೀಕ್ಷಕವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.

ಆರ್.ಪಿ.ಸಿಂಗ್

ಎಡಗೈ ವೇಗಿ 2007 ರ ಟಿ 20 ವಿಶ್ವಕಪ್​ನ ಭಾರತದ ಪರ ಪ್ರಮುಖ ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮಿದ್ದಾರೆ. ಏಳು ಪಂದ್ಯಗಳಿಂದ 12.66 ಸರಾಸರಿ ಮತ್ತು 12 ಸ್ಟ್ರೈಕ್ ರೇಟ್ನೊಂದಿಗೆ 12 ವಿಕೆಟ್​​ ಪಡೆದಿದ್ದರು. ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಉಮರ್ ಗುಲ್ ನಂತರದ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ವೇಗಿ 13 ವಿಕೆಟ್ ಪಡೆದಿದ್ದರು. ಸೆಪ್ಟೆಂಬರ್ 2018 ರಲ್ಲಿ ಕ್ರಿಕೆಟ್​​ನಿಂದ ನಿವೃತ್ತರಾದ ನಂತರ ಆರ್​ಪಿ ಸಿಂಗ್ ಹಿಂದಿ ವೀಕ್ಷಕ ವಿವರಣೆ ನೀಡುತ್ತಿದ್ದಾರೆ.

ಇರ್ಫಾನ್ ಪಠಾಣ್

ಆಲ್​ರೌಂಡರ್​ ಬ್ಯಾಟಿಂಗ್​ನಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ. ಆದರೆ ಚೆಂಡಿನೊಂದಿಗೆ ನಾಯಕ ಧೋನಿಗೆ ಉತ್ತಮ ಆಯ್ಕೆಯಾಗಿದ್ದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ನಿರ್ಣಾಯಕ ಮೂರು ವಿಕೆಟ್ ಸೇರಿದಂತೆ ಇರ್ಫಾನ್ ಆರು ಇನಿಂಗ್ಸ್​ಗಳಲ್ಲಿ 10 ವಿಕೆಟ್​ ಪಡೆದಿದ್ದರು. ಬರೋಡಾ ಕ್ರಿಕೆಟಿಗ 2020 ರಲ್ಲಿ ನಿವೃತ್ತರಾಗಿದ್ದಾರೆ. ಆದರೆ ಲೆಜೆಂಡ್ಸ್ ಲೀಗ್​​ನಲ್ಲಿ ಆಡುತ್ತಿದ್ದಾರೆ. ಅವರು ಅತ್ಯಂತ ಜನಪ್ರಿಯ ವಿಕ್ಷಕ ವಿವರಣೆಗಾರರಾಗಿದ್ದಾರೆ.

ರೋಹಿತ್ ಶರ್ಮಾ

ಪ್ರಸ್ತುತ ಭಾರತದ ನಾಯಕ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟಿ20 ಐ ಗೆ ಪಾದಾರ್ಪಣೆ ಮಾಡಿದ್ದರು. ಆದರೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ತಮ್ಮ ಎರಡನೇ ಪ್ರದರ್ಶನದಲ್ಲಿ, ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 40 ಎಸೆತಗಳಲ್ಲಿ ಅಜೇಯ 50 ರನ್ ಗಳಿಸಿ ಭಾರತಕ್ಕೆ 37 ರನ್​ಗಳ ಗೆಲುವು ತಂದುಕೊಟ್ಟರು. ಫೈನಲ್​​ಲ್ಲಿ ಮುಂಬೈ ಬ್ಯಾಟರ್​ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ಭಾರತದ ಸ್ಕೋರ್​ 150 ರನ್ ಗಡಿ ದಾಟಲು ನೆರವಾಗಿದ್ದರು. ಮುಂಬರುವ ಟಿ 20 ವಿಶ್ವ ಕಪ್​ನಲ್ಲಿ ಅವರು ಭಾರತ ತಂಡದ ನೇತೃತ್ವ ವಹಿಸಿದ್ದಾರೆ.

ಹರ್ಭಜನ್ ಸಿಂಗ್

ಲೆಜೆಂಡರಿ ಆಫ್-ಸ್ಪಿನ್ನರ್ ಏಳು ಪಂದ್ಯಗಳಲ್ಲಿ ಏಳು ವಿಕೆಟ್​ ಪಡೆದಿದ್ದರು. ಅವರು 26 ಸರಾಸರಿ ಮತ್ತು 19.71 ಸ್ಟ್ರೈಕ್ ರೇಟ್ ನೊಂದಿಗೆ ಬೌಲಿಂಗ್ ಮಾಡಿದ್ದರು. ಅವರ ಎಕಾನಮಿ ರೇಟ್ 8 ಕ್ಕಿಂತ ಕಡಿಮೆ ಇತ್ತು. ಸ್ಪಿನ್ನರ್​ಗಳಿಗೆ ಅನುಕೂಲವಲ್ಲದ ಪಿಚ್​​ನಲ್ಲಿ ಉತ್ತಮ ಸಾಧನೆಯೇ ಆಗಿತ್ತು. ಹರ್ಭಜನ್ ಸಿಂಗ್ 2021 ರ ಡಿಸೆಂಬರ್​ನಲ್ಲಿ ನಿವೃತ್ತರಾದರು. ಹಿಂದಿ ಕಾಮೆಂಟರಿ ಸರ್ಕೀಟ್​ನ ಜನಪ್ರಿಯ ವ್ಯಕ್ತಿ. ಜತೆಗೆ ಆಪ್​ ಮೂಲಕ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ.

ವೀರೇಂದ್ರ ಸೆಹ್ವಾಗ್

ಅಪ್ರತಿಮ ಆರಂಭಿಕ ಆಟಗಾರ ದೊಡ್ಡ ಸ್ಕೋರ್ ಮಾಡಲೇ ಇಲ್ಲ. ಆದರೆ ಕ್ಷಿಪ್ರ ಆರಂಭ ಕೊಟ್ಟಿದ್ದರು. ಐದು ಇನ್ನಿಂಗ್ಸ್ಗಳಲ್ಲಿ 26.60 ಸರಾಸರಿ ಮತ್ತು 138.54 ಸ್ಟ್ರೈಕ್ ರೇಟ್​​ನಲ್ಲಿ 133 ರನ್ ಗಳಿಸಿದ್ದಾರೆ. 2015 ರಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದ ನಂತರ, ಸೆಹ್ವಾಗ್ ವೀಕ್ಷಕ ವಿವರಣೆಗೆ ಹೆಸರುವಾಸಿಯಾಗಿದ್ದಾರೆ.

ಗೌತಮ್ ಗಂಭೀರ್

ಗೌತಮ್ ಗಂಭೀರ್ ಆರು ಇನಿಂಗ್ಸ್​ಗಳಲ್ಲಿ 37.83 ಸರಾಸರಿಯಲ್ಲಿ 129.71 ಸ್ಟ್ರೈಕ್ ರೇಟ್​​ನಲ್ಲಿ 227 ರನ್ ಗಳಿಸುವ ಮೂಲಕ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು. ಫೈನಲ್ ಪಂದ್ಯದಲ್ಲಿ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿ 75 ರನ್ ಬಾರಿಸಿದ್ದರು. ಮಾರ್ಚ್ 2019ರಲ್ಲಿ ನಿವೃತ್ತರಾದರು. ಗಂಭೀರ್ ರಾಜಕೀಯಕ್ಕೆ ಸೇರುವ ಮೊದಲು ವೀಕ್ಷಕವಿವರಣೆಗಾರರಾಗಿ ಕೆಲಸ ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿ, ಅವರು ತಮ್ಮ ಕೋಚಿಂಗ್ ವೃತ್ತಿಜೀವನದ ಮೇಲೆ ಗಮನ ಹರಿಸಲು ರಾಜಕೀಯವನ್ನು ತೊರೆದಿದ್ದಾರೆ. 2024ರಲ್ಲಿ ಅವರು ಕೆಕೆಆರ್​ ತಂಡಕ್ಕೆ ಮಾರ್ಗದರ್ಶಕರ ಪಾತ್ರದಲ್ಲಿ ಟ್ರೋಫಿ ಗೆದ್ದುಕೊಟ್ಟಿದ್ದಾರೆ.

ಯುವರಾಜ್ ಸಿಂಗ್

2007 ಮತ್ತು 2011ರಲ್ಲಿ ಭಾರತ ವಿಶ್ವಕಪ್ ಗೆಲ್ಲುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದರು. ಲೆಜೆಂಡರಿ ಆಲ್​ರೌಂಡರ್​ ಐದು ಇನ್ನಿಂಗ್ಸ್ಗಳಿಂದ 29.60 ಸರಾಸರಿಯಲ್ಲಿ 148 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 194.73 ಆಗಿತ್ತು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಸ್ಟುವರ್ಟ್ ಬ್ರಾಡ್ ಅವರ ಒಂದೇ ಓವರ್​ನಲ್ಲಿ ಅವರು ಬಾರಿಸಿದ ಆರು ಸಿಕ್ಸರ್​ಗಳು ಯುವರಾಜ್ ಅವರ ವೃತ್ತಿಜೀವನದ ಪ್ರಮುಖ ಘಟನೆ. ಎಡಗೈ ಬ್ಯಾಟರ್​ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ನಲ್ಲಿ 30 ಎಸೆತಗಳಲ್ಲಿ 70 ರನ್ ಗಳಿಸಿದ್ದರು. ಪಂಜಾಬ್ ಕ್ರಿಕೆಟಿಗ 2024 ರ ಟಿ 20 ವಿಶ್ವಕಪ್​​ನ ರಾಯಭಾರಿಗಳಲ್ಲಿ ಒಬ್ಬರು. 42 ವರ್ಷದ ಆಟಗಾರ ಜೂನ್ 2019 ರಲ್ಲಿ ನಿವೃತ್ತರಾದರು. ಅವರು ಪಂಜಾಬ್​​ನ ಯುವ ಕ್ರಿಕೆಟಿಗರಾದ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಎಂಎಸ್ ಧೋನಿ

ಪಂದ್ಯಾವಳಿಯುದ್ದಕ್ಕೂ ಧೋನಿ ಇಡೀ ತಂಡವನ್ನು ಒಂದು ಶಕ್ತಿಯಾಗಿ ರೂಪಿಸಿದವರು ಧೋನಿ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಧೋನಿ 33 ಎಸೆತಗಳಲ್ಲಿ 45 ರನ್ ಬಾರಿಸಿದ್ದರು. ಸೆಮಿಫೈನಲ್ನಲ್ಲಿ ಆಸೀಸ್ ವಿರುದ್ಧ ಅವರು 18 ಎಸೆತಗಳಲ್ಲಿ 36 ರನ್ ಗಳಿಸಿದ್ದು ಕೂಡ ಪ್ರಭಾವಶಾಲಿ ಇನ್ನಿಂಗ್ಸ್ . 2014ರ ಡಿಸೆಂಬರ್​ನಲ್ಲಿ ಧೋನಿ ಟೆಸ್ಟ್ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಆದಾಗ್ಯೂ, ಅವರು ಆಗಸ್ಟ್ 2020 ರವರೆಗೆ ಕಿರು ಸ್ವರೂಪಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 42ರ ಹರೆಯದ ಧೋನಿ ಇತ್ತೀಚೆಗೆ ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು.

Continue Reading

ಕ್ರೀಡೆ

T20 World Cup 2024: ಐನಾಕ್ಸ್‌ ದೈತ್ಯ ಪರದೆಯಲ್ಲೂ ಮೂಡಿಬರಲಿದೆ ಭಾರತದ ಪಂದ್ಯಗಳು

T20 World Cup 2024: ಭಾರತದ ಲೀಗ್​ ಪಂದ್ಯಗಳು ಐನಾಕ್ಸ್‌(INOX), ಪಿವಿಆರ್(PVR)​, ಸಿನೆಪೊಲಿಸ್(CONEPOLIS), ಮಿರಾಜ್​ ಸಿನೆಮಾ(MIRAJ CENIM)ದ ಬಿಗ್‌ ಸ್ಕ್ರೀನ್‌ಗಳಲ್ಲಿ ಮೂಡಿಬರಲಿವೆ. ನವದೆಹಲಿ, ನೋಯ್ಡಾ, ಫ‌ರೀದಾಬಾದ್‌, ಗುರುಗ್ರಾಮ್‌, ಮುಂಬಯಿ, ಬೆಂಗಳೂರು, ಪುಣೆ, ಕೋಲ್ಕತಾ, ಜೈಪುರ, ಇಂದೋರ್‌, ಸೂರತ್‌, ವಡೋದರ ಸೇರಿ ದೇಶದ ಪ್ರಮುಖ ನಗರದಲ್ಲಿ ಈ ವ್ಯವಸ್ಥೆ ಇದೆ

VISTARANEWS.COM


on

T20 World Cup 2024
Koo

ಮುಂಬಯಿ: ಈ ಬಾರಿಯ ಟಿ20 ವಿಶ್ವಕಪ್​ ಟೂರ್ನಿಯಲ್ಲಿ(T20 World Cup 2024) ಭಾರತದ ಪಂದ್ಯಗಳನ್ನು ಕ್ರಿಕೆಟ್​ ಅಭಿಮಾನಿಗಳು ಮೊಬೈಲ್​ ಮತ್ತು ಟಿವಿ ಮೂಲಕ ಮಾತ್ರವಲ್ಲದೆ ಸಿನೆಮಾ ಥಿಯೇಟರ್​ಗಳಲ್ಲಿಯೂ ಕಣ್ತುಂಬಿಕೊಳ್ಳಬಹುದು. ಹೌದು, ಭಾರತದ ಲೀಗ್​ ಪಂದ್ಯಗಳು ಐನಾಕ್ಸ್‌(INOX), ಪಿವಿಆರ್(PVR)​, ಸಿನೆಪೊಲಿಸ್(CONEPOLIS), ಮಿರಾಜ್​ ಸಿನೆಮಾ(MIRAJ CENIM)ದ ಬಿಗ್‌ ಸ್ಕ್ರೀನ್‌ಗಳಲ್ಲಿ ಮೂಡಿಬರಲಿವೆ. ನವದೆಹಲಿ, ನೋಯ್ಡಾ, ಫ‌ರೀದಾಬಾದ್‌, ಗುರುಗ್ರಾಮ್‌, ಮುಂಬಯಿ, ಬೆಂಗಳೂರು, ಪುಣೆ, ಕೋಲ್ಕತಾ, ಜೈಪುರ, ಇಂದೋರ್‌, ಸೂರತ್‌, ವಡೋದರ ಸೇರಿ ದೇಶದ ಪ್ರಮುಖ ನಗರದಲ್ಲಿ ಈ ವ್ಯವಸ್ಥೆ ಇದೆ.

ಜೂನ್​ 9ರಂದು ನಡೆಯುವ ಹೈವೋಲ್ಟೇಜ್ ಪಂದ್ಯವಾದ ಭಾರತ ಮತ್ತು ಪಾಕ್​ ಪಂದ್ಯಕ್ಕೆ ಭಾರೀ ಬೇಡಿಕೆ ಇರುವ ಸಾಧ್ಯತೆ ಇದೆ. ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ಲೀಗ್​ನಲ್ಲಿ ಭಾರತ ಒಟ್ಟು 4 ಪಂದ್ಯಗಳನ್ನು ಆಡಲಿದೆ. ಇಲ್ಲಿ ಅಗ್ರ 2ರೊಳಗೆ ಸ್ಥಾನ ಪಡೆದರೆ ಸೂಪರ್​ 8 ಹಂತಕ್ಕೇರಲಿದೆ.


ಮೊಬೈಲ್​ನಲ್ಲಿ ಉಚಿತ ಪ್ರಸಾರ


ಏಕದಿನ ವಿಶ್ವಕಪ್​ ಟೂರ್ನಿಯಂತೆ ಈ ಬಾರಿಯೂ ಟಿ20 ವಿಶ್ವಕಪ್​ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಉಚಿತವಾಗಿ ನೋಡಬಹುದಾಗಿದೆ. ​ಡಿಸ್ನಿ + ಹಾಟ್‌ಸ್ಟಾರ್(Disney+ Hotstar) ಭಾರತದಲ್ಲಿನ ಸ್ಮಾರ್ಟ್‌ಫೋನ್ ಬಳಕೆದಾರಿಗೆ ಈ ಅವಕಾಶ ಕಲ್ಪಿಸಿದೆ. OTT ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.

ಭಾರತದ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8ಗಂಟೆಗೆ ಆರಂಭವಾಗಲಿದೆ. ಇತರ ತಂಡಗಳ ಕೆಲವು ಪಂದ್ಯಗಳು ಬೆಳಗ್ಗೆ 6 ಗಂಟೆಗೆ ಪ್ರಸಾರಗೊಳ್ಳಲಿದೆ. ಡಿಸ್ನಿ+ ಹಾಟ್‌ಸ್ಟಾರ್ ಇಂಡಿಯಾದ ಮುಖ್ಯಸ್ಥ ಸಜಿತ್ ಶಿವಾನಂದನ್, “ಐಸಿಸಿ ಪುರುಷರ ಟಿ20 ವಿಶ್ವಕಪ್ 2024 ಅನ್ನು ಮೊಬೈಲ್‌ನಲ್ಲಿ ಉಚಿತವಾಗಿ ನೀಡುವ ಮೂಲಕ, ನಾವು ಕ್ರಿಕೆಟ್ ಆಟವನ್ನು ಬೆಳೆಸುವ, ದೇಶಾದ್ಯಂತ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ” ಎಂದು ಹೇಳಿದ್ದಾರೆ.

ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಸಮಯದಲ್ಲಿ, ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ಮೊಬೈಲ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡಲಾಯಿತು. ಇದು ಏಕಕಾಲದಲ್ಲಿ ಅತ್ಯಧಿಕ ವೀಕ್ಷಣೆ ಕಂಡ 5 ಬಾರಿಯ ದಾಖಲೆಗಳನ್ನು ಮುರಿದಿತ್ತು. ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ನಲ್ಲಿ ಪಂದ್ಯ ಏಕಕಾಲಕ್ಕೆ 5.9 ಕೋಟಿ ವೀಕ್ಷಣೆ ಕಂಡಿತ್ತು. ಈ ದಾಖಲೆ ಟಿ20 ವಿಶ್ವಕಪ್​ನಲ್ಲಿ ಪತನಗೊಳ್ಳುವ ಸಾಧ್ಯತೆ ಇದೆ.

ಈ ಬಾರಿ ಟೂರ್ನಿಯಲ್ಲಿ ಗರಿಷ್ಠ 20 ತಂಡಗಳು ಕಣಕ್ಕಿಳಿಯಲಿವೆ. 2022ರ ಆವೃತ್ತಿಯಲ್ಲಿ 12 ತಂಡಗಳು ಭಾಗಿಯಾಗಿದ್ದವು. ಟೂರ್ನಿಯಲ್ಲೂ ವಿಭಿನ್ನ ಸ್ವರೂಪವಿದೆ. 20 ತಂಡಗಳನ್ನು ತಲಾ ಐದು ತಂಡಗಳಂತೆ ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ವಿಭಾಗದಲ್ಲಿ ಪ್ರತಿ ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಪ್ರತಿ ಗುಂಪಿನಿಂದ ತಲಾ ಎರಡು ತಂಡಗಳು ಸೂಪರ್ ಎಂಟರ ಹಂತಕ್ಕೆ ತೇರ್ಗಡೆ ಪಡೆಯಲಿವೆ. ಅಲ್ಲೂ ತಲಾ ನಾಲ್ಕು ತಂಡಗಳ ಎರಡು ಗುಂಪುಗಳು ಇದ್ದು, ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಡಲಿವೆ.

Continue Reading

ಕ್ರಿಕೆಟ್

MS Dhoni’s last-ball Heroics: ಧೋನಿ ಮಿಂಚಿನ ವೇಗದ ರನೌಟ್​; ಭಾರತಕ್ಕೆ 1 ರನ್‌ ರೋಚಕ ಜಯ; ಇದು ಮರೆಯಲಾಗದ ನೆನಪು

MS Dhoni’s last-ball Heroics: ಅದು, 2016ರ ಟಿ20 ವಿಶ್ವಕಪ್‌. ಭಾರತ(India vs Bangladesh ICC World T20 2016) ತಂಡ ಬಾಂಗ್ಲಾದೇಶ(MS Dhoni’s last-ball HeroicsMS Dhoni’s last-ball Heroics) ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತ್ತು. ಇದನ್ನು ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಇಂದಿಗೂ ಕೂಡ ಪ್ರತಿ ಟಿ20 ವಿಶ್ವಕಪ್​ ವೇಳೆ ನೆನಪಿಸಿಕೊಳ್ಳುತ್ತಾರೆ.

VISTARANEWS.COM


on

MS Dhoni's last-ball Heroics
Koo

ಬೆಂಗಳೂರು: 2007ರ ಚೊಚ್ಚಲ ವಿಶ್ವಕಪ್ ಗೆಲುವಿನ​ ಬಳಿಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳು ಎಂದೂ ಮರೆಯದ ಪಂದ್ಯವೆಂದರೆ ಅದು, 2016ರ ಟಿ20 ವಿಶ್ವಕಪ್‌. ಭಾರತ(India vs Bangladesh ICC World T20 2016) ತಂಡ ಬಾಂಗ್ಲಾದೇಶ(MS Dhoni’s last-ball HeroicsMS Dhoni’s last-ball Heroics) ವಿರುದ್ಧ ಅತ್ಯಂತ ರೋಚಕವಾಗಿ 1 ರನ್‌ಗಳಿಂದ ಜಯ ಸಾಧಿಸಿತ್ತು. ಇದನ್ನು ಮರೆಯಲು ಸಾಧ್ಯವೇ ಇಲ್ಲ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಭಾರತ 7 ವಿಕೆಟ್​ಗೆ 146 ರನ್​ ಬಾರಿಸಿತು. ಸಾಮಾನ್ಯ ಮೊತ್ತದ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ 145 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಆರಾಮಾಗಿತ್ತು. ಆದರೆ ಮುಂದಿನೆರಡು ಎಸೆತಗಳಲ್ಲಿ ಹಾರ್ದಿಕ್‌ ಪಾಂಡ್ಯ ಬಾಂಗ್ಲಾದ ಸತತ 2 ವಿಕೆಟ್‌ ಎಗರಿಸಿದರು. ಕೊನೆಯ ಎಸೆತದಲ್ಲಿ ಬಾಂಗ್ಲಾಕ್ಕೆ ಗೆಲುವಿಗೆ ಎರಡು ರನ್‌ ಗಳಿಸಬೇಕಾದ ಒತ್ತಡ ಎದುರಾಗಿತ್ತು.

ಒಂದು ರನ್​ ಗಳಿಸುತ್ತಿದ್ದರೂ ಪಂದ್ಯವನ್ನು ಟೈ ಮಾಡಬಹುದಿತ್ತು. ಹಾರ್ದಿಕ್‌ ಪಾಂಡ್ಯ ಎಸೆದ ಕೊನೆಯ ಎಸೆತವನ್ನು ಶುವಗತಗೆ ಬಾರಿಸಲು ಆಗಲಿಲ್ಲ. ಚೆಂಡು ಕೀಪರ್​ ಕೈ ಸೇರಿತು. ಆದರೂ ಇನ್ನೊಂದು ತುದಿಯಲ್ಲಿದ್ದ ಮುಸ್ತಫಿಜುರ್‌ ರೆಹಮಾನ್‌ ರನ್‌ ಗಳಿಸಲು ಓಡಿದರು. ಈ ಸಂದರ್ಭದಲ್ಲಿ ಧೋನಿ ತೆಗೆದುಕೊಂಡ ನಿರ್ಧಾರ ಅತ್ಯಂತ ಅಚ್ಚರಿಯದ್ದಾಗಿತ್ತು. ಅವರು ದೂರದಿಂದಲೇ ಚೆಂಡನ್ನು ವಿಕೆಟ್‌ನತ್ತ ಎಸೆಯದೇ, ಅತಿ ವೇಗವಾಗಿ ಓಡಿಬಂದು ನೇರವಾಗಿ ಬೇಲ್ಸ್‌ ಎಗರಿಸಿದರು. ಕೂದಲೆಳೆ ಅಂತರದಲ್ಲಿ ಮುಸ್ತಫಿಜುರ್‌ ರನೌಟಾದರು. ಭಾರತಕ್ಕೆ 1 ರನ್‌ ಜಯ ಲಭಿಸಿತು. ಧೋನಿ ಜತೆಗೆ ಪಾಂಡ್ಯ ಕೂಡ ಗೆಲುವಿನ ಹೀರೊ ಎನಿಸಿಕೊಂಡರು. ಅಂದಿನ ಈ ರನೌಟ್​ ವಿಡಿಯೊವನ್ನು ಈ ಬಾರಿಯ ಟೂರ್ನಿಗೂ ಮುನ್ನ ಐಸಿಸಿ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ ಪಂದ್ಯವನ್ನು ಉಚಿತವಾಗಿ ವೀಕ್ಷಿಸುವುದು ಹೇಗೆ?

ಶ್ರೀಶಾಂತ್‌ ಕ್ಯಾಚ್‌; ಭಾರತಕ್ಕೆ ವಿಶ್ವಕಪ್‌


2007ರ ಟಿ20 ವಿಶ್ವಕಪ್‌ ಫೈನಲ್‌ ಸೆ.24ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿತ್ತು. ಅಲ್ಲಿ ಭಾರತ ರೋಚಕವಾಗಿ 5 ರನ್‌ಗಳಿಂದ ಗೆದ್ದಿದ್ದು ಮಾತ್ರವಲ್ಲ, ಟಿ20 ಇತಿಹಾಸದ ಮೊದಲ ವಿಶ್ವಕಪ್ಪನ್ನು ಜೈಸಿತು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್‌ ಬೇಕಿತ್ತು. ಜೋಗಿಂದರ್‌ ಶರ್ಮ ಈ ಓವರ್​ ಎಸೆದಿದ್ದರು. ಪಾಕ್​ ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್​ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್​ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು. ಪಾಕಿಸ್ತಾನ ಆಲ್​ಔಟ್​ ಆಯಿತು. ಭಾರತ ಕೇವಲ 5 ರನ್​ ಅಂತರದಿಂದ ಗೆದ್ದು ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿಂದ ಧೋನಿ ಯುಗ ಕೂಡ ಆರಂಭವಾಯಿತು. ಭಾರತ ಪರ ಬೌಲಿಂಗ್​ನಲ್ಲಿ ಇರ್ಫಾನ್​ ಪಠಾಣ್​ (16 ಕ್ಕೆ 3), ಆರ್​.ಪಿ ಸಿಂಗ್​(24ಕ್ಕೆ 3), ಜೋಗಿಂದರ್ ಶರ್ಮಾ(20ಕ್ಕೆ 2) ವಿಕೆಟ್​ ಕಿತ್ತು ಮಿಂಚಿದ್ದರು.

Continue Reading
Advertisement
Anti Islam Rally
ವಿದೇಶ7 mins ago

Anti Islam Rally: ಇಸ್ಲಾಂ ವಿರೋಧಿ ರ‍್ಯಾಲಿಯಲ್ಲಿ ಸಿಕ್ಕಸಿಕ್ಕವರಿಗೆ ಚಾಕು ಇರಿದ ವ್ಯಕ್ತಿ; ಗುಂಡಿಕ್ಕಿದ ಪೊಲೀಸರು

Modi Meditation
ದೇಶ41 mins ago

Modi Meditation: ವಿವೇಕಾನಂದರ ಮೂರ್ತಿ ಎದುರು ಮೋದಿ ಗಾಢ ಧ್ಯಾನ; ಇಲ್ಲಿವೆ ಫೋಟೊಗಳು

Yamaha has opened a new Blue Square outlet in Bengaluru
ಬೆಂಗಳೂರು2 hours ago

Yamaha: ಬೆಂಗಳೂರಿನಲ್ಲಿ ಹೊಸ ‘ಬ್ಲೂ ಸ್ಕ್ವೇರ್’ ಔಟ್‌ಲೆಟ್ ತೆರೆದ ಯಮಹಾ

Neha Hiremath
ಕರ್ನಾಟಕ2 hours ago

Neha Hiremath: ಲಿಂಗಾಯತಳಾದ ನೇಹಾ ಹಿರೇಮಠ ಎಸ್‌ಸಿ ಪ್ರಮಾಣಪತ್ರ ಮಾಡಿಸಿದ್ದೇಕೆ? ಸರ್ಟಿಫಿಕೇಟ್‌ ಫೋಟೊ ಈಗ ವೈರಲ್

Kanyakumari Tour
ಪ್ರವಾಸ3 hours ago

Kanyakumari Tour: ನಿಮ್ಮ ಕನ್ಯಾಕುಮಾರಿ ಪ್ರವಾಸದ ಪಟ್ಟಿಯಲ್ಲಿರಲಿ ಈ 10 ಸಂಗತಿಗಳು

Sri Huligemma Devi Maharathotsava in Hulagi
ಧಾರ್ಮಿಕ3 hours ago

Koppala News: ವಿಜೃಂಭಣೆಯಿಂದ ಜರುಗಿದ ಹುಲಗಿಯ ಶ್ರೀ ಹುಲಿಗೆಮ್ಮ ದೇವಿ ಮಹಾರಥೋತ್ಸವ

Vijayanagara ZP CEO Sadashiva Prabhu instructed that Dadara Rubella Lasika Abhiyan should be conducted neatly
ಆರೋಗ್ಯ3 hours ago

Vijayanagara News: ದಡಾರ, ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಸಿದ್ಧತೆ

District administration all preparations for vote counting says DC Prashanth Kumar Mishra
ಬಳ್ಳಾರಿ3 hours ago

Lok Sabha Election 2024: ಮತ ಎಣಿಕೆಗೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ

Exit Polls
Lok Sabha Election 20243 hours ago

Exit Poll: 2004, 2009, 2014, 2019ರಲ್ಲಿ ಎಕ್ಸಿಟ್ ಪೋಲ್ ಹೇಳಿದ್ದೇನು? ಆಗಿದ್ದೇನು?

Heart Attack
ದೇಶ3 hours ago

Heart Attack: ತಿರಂಗಾ ಹಿಡಿದು ಕುಣಿಯುವಾಗಲೇ ಹೃದಯಾಘಾತಕ್ಕೆ ನಿವೃತ್ತ ಯೋಧ ಬಲಿ; ಸಾವಿನಲ್ಲೂ ಸಾರ್ಥಕತೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ1 day ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌