PAN- Aadhaar deadline expired : ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು? - Vistara News

ಪ್ರಮುಖ ಸುದ್ದಿ

PAN- Aadhaar deadline expired : ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು?

PAN- Aadhaar deadline expired ಪ್ಯಾನ್‌ ಕಾರ್ಡ್‌ ಹಾಗೂ ಆಧಾರ್‌ ಕಾರ್ಡ್‌ ಲಿಂಕ್‌ ಕುರಿತ ಗಡುವು ಮುಗಿದಿದೆ. ಒಂದು ವೇಳೆ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ವಿವರ.

VISTARANEWS.COM


on

Aadhaar and PAN
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಆಧಾರ್‌ ಕಾರ್ಡ್‌ ಜತೆಗೆ ಪ್ಯಾನ್‌ ಕಾರ್ಡ್‌ ಅನ್ನು ಲಿಂಕ್‌ ಮಾಡಲು ಸರ್ಕಾರ ವಿಧಿಸಿದ್ದ 2023ರ ಜೂನ್‌ 30ರ ಗಡುವು ಮುಕ್ತಾಯವಾಗಿದೆ. ಈ ಹಿಂದೆ ಹಲವಾರು ಸಲ ಸರ್ಕಾರ ಗಡುವನ್ನು ಮುಂದೂಡಿತ್ತು. ಆದರೆ ಈ ಸಲ ಮುಂದೂಡಲಾಗಿಲ್ಲ. ಇದರ ಪರಿಣಾಮ ಆಧಾರ್‌ ಜತೆಗೆ ಲಿಂಕ್‌ ಮಾಡದಿರುವ ಪ್ಯಾನ್‌ ಕಾರ್ಡ್‌ 2023ರ ಜುಲೈ 1ರ ಬಳಿಕ ನಿಷ್ಕ್ರಿಯವಾಗುತ್ತಿದೆ. ಒಂದು ವೇಳೆ ಈ ರೀತಿ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾದರೆ ಸಕ್ರಿಯಗೊಳಿಸಲು ಏನು ಮಾಡಬೇಕು? ನಿಷ್ಕ್ರಿಯವದರೆ ಪರಿಣಾಮವೇನು? ಇಲ್ಲಿದೆ ವಿವರ.

ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾದರೆ ಕೆಲವು ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಮುಖ್ಯವಾಗಿ ಆದಾಯ ತೆರಿಗೆ ವಿವರ ಸಲ್ಲಿಕೆ (ಐಟಿಆರ್)‌ ಸಾಧ್ಯವಾಗುವುದಿಲ್ಲ. ಆಧಾರ್‌ ಜತೆಗೆ ಪ್ಯಾನ್‌ ಲಿಂಕ್‌ ಮಾಡದಿದ್ದರೆ, ಪ್ಯಾನ್‌ ನಿಷ್ಕ್ರಿಯವಾಗುತ್ತದೆ. ಇದರ ಪರಿಣಾಮ ಪ್ಯಾನ್‌ ದಾಖಲೆ ಅಗತ್ಯವಿರುವ ರಿಫಂಡ್‌ಗಳು ನೆರವೇರುವುದಿಲ್ಲ. ಟಿಡಿಎಸ್‌ ಮತ್ತು ಟಿಸಿಎಸ್‌ ಕಡಿತದ ಪ್ರಮಾಣ ಹೆಚ್ಚಲಿದೆ. ನಿಮಗೆ ಐರಿ ರಿಟರ್ನ್‌ ಮಾಡಲು ಕಷ್ಟವಾಗಬಹುದು. ಅದಕ್ಕೆ ಮತ್ತೆ ದಂಡ ಕಟ್ಟಬೇಕಾಗಿ ಬರಬಹುದು. ತೆರಿಗೆ ಬೆನಿಫಿಟ್‌ ಸಿಗದೆ ಹೋಗಬಹುದು. ಹೊಸ ಬ್ಯಾಂಕ್‌ ಅಕೌಂಟ್‌ ತೆರೆಯಲು ಕಷ್ಟವಾಗಬಹುದು. ಕಾರು, ಗೃಹಸಾಲವನ್ನು, ಕ್ರೆಡಿಟ್‌ ಕಾರ್ಡ್‌ ಅನ್ನು ಬ್ಯಾಂಕ್‌ಗಳಿಂದ ಪಡೆಯಲು ಕಷ್ಟ ಸಾಧ್ಯವಾಗಬಹುದು.‌

ಪ್ಯಾನ್‌ ಅನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ? ನಿಮ್ಮ ಪ್ಯಾನ್‌ ಕಾರ್ಡ್‌ ನಿಷ್ಕ್ರಿಯವಾಗಿದ್ದರೆ ಮತ್ತೆ ಸಕ್ರಿಯಗೊಳಿಸಬಹುದು. 1000 ರೂ. ದಂಡ ಪಾವತಿಸಿ ಆಧಾರ್-ಪ್ಯಾನ್‌ ಲಿಂಕ್‌ ಮಾಡಿದ ಬಳಿಕ ಪ್ಯಾನ್‌ ಸಕ್ರಿಯವಾಗುತ್ತದೆ. ಆದರೆ ಈ ಸಲ ಇದಕ್ಕಾಗಿ 30 ದಿನಗಳ ಕಾಲ ಕಾಯಬೇಕಾಗುತ್ತದೆ.

ಪ್ಯಾನ್‌ ಅನ್ನು ಆಧಾರ್‌ ಜತೆಗೆ ಲಿಂಕ್‌ ಮಾಡಲು ಚಲನ್‌ ರಿಸಿಪ್ಟ್‌ ಅನ್ನು ಡೌನ್‌ಲೋಡ್‌ ಮಾಡಬೇಕಾದ ಅಗತ್ಯ ಇಲ್ಲ. ಶುಲ್ಕ ಪಾವತಿಸಿಯೂ 2023ರ ಜೂನ್‌ 30ರಂದು ಪ್ಯಾನ್-‌ ಆಧಾರ್‌ ಲಿಂಕ್‌ ಆಗದಿದ್ದರೆ ತೆರಿಗೆ ಇಲಾಖೆ ಅಂಥ ಕೇಸ್‌ ಗಳನ್ನು ಪರಿಶೀಲಿಸಲಿದೆ ಎಂದು ಇಲಾಖೆ ಟ್ವೀಟ್‌ ಮೂಲಕ ತಿಳಿಸಿದೆ. ಹೀಗಾಗಿ 1000 ರೂ. ವಿಳಂಬ ಶುಲ್ಕ ಪಾವತಿಸಿದ್ದರೂ, ಪ್ಯಾನ್-‌ ಆಧಾರ್‌ ಲಿಂಕ್‌ ಆಗದಿದ್ದರೆ ಆತಂಕಪಡಬೇಕಿಲ್ಲ. ಇಲಾಖೆ ಅಂಥ ಪ್ರಕರಣಗಳನ್ನು ಪರಿಶೀಲಿಸಿ ಸಹಕರಿಸಲಿದೆ. ತಾಂತ್ರಿಕ ಅಡಚಣೆ ಪರಿಣಾಮ ಕೆಲ ಪ್ಯಾನ್‌ ಕಾರ್ಡ್‌ದಾರರು ಶುಕ್ರವಾರ ಪರದಾಡಿದ್ದರು.

ಲಿಂಕ್‌ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?

ಆಧಾರ್‌ ಜತೆ ಪ್ಯಾನ್‌ ಕಾರ್ಡ್‌ ಲಿಂಕ್‌ ಆಗಿದೆಯೇ ಎಂದು ಆನ್‌ಲೈನ್‌ ಮೂಲಕ ಪರಿಶೀಲಿಸಬಹುದು. ಅದು ಹೀಗಿದೆ-

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ತೆರಳಿ (www.incometax.gov.in)

ಲಿಂಕ್‌ ಆಧಾರ್‌ ಸ್ಟೇಟಸ್‌ ಆಯ್ಕೆ ಮಾಡಿಕೊಳ್ಳಿ. ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆ ನಮೂದಿಸಿ.

ವ್ಯೂ ಲಿಂಕ್‌ ಆಧಾರ್‌ ಸ್ಟೇಟಸ್‌ ಕ್ಲಿಕ್ಕಿಸಿ. (view link aadhaar status)

ಆಧಾರ್-ಪ್ಯಾನ್‌ ಸ್ಟೇಟಸ್‌ ಪೇಜ್‌ನಲ್ಲಿ ಕಾಣಿಸುತ್ತದೆ. ಉದಾಹರಣೆಗೆ ಆಧಾರ್-ಪ್ಯಾನ್‌ ಲಿಂಕ್‌ ಆಗಿದ್ದರೆ Your PAN is linked to Aadhaar number. ಎಂಬ ಸಂದೇಶ ಕಾಣಿಸುತ್ತದೆ.

ಆನ್‌ಲೈನ್‌ ಮೂಲಕ ಸುಲಭವಾಗಿ ಕೆಲವೇ ನಿಮಿಷಗಳಲ್ಲಿ ಆಧಾರ್-ಪ್ಯಾನ್‌ ಕಾರ್ಡ್ ಲಿಂಕ್‌ ಮಾಡಲು ಸಾಧ್ಯ ಇರುವುದರಿಂದ ದಂಡ ಪಾವತಿಸಿ ಲಿಂಕ್‌ ಮಾಡಿಸಿಕೊಳ್ಳುವುದು ಸೂಕ್ತ.‌ ಪ್ಯಾನ್‌ ಕಾರ್ಡ್‌ ಹಲವು ಸಂದರ್ಭಗಳಲ್ಲಿ ಅಗತ್ಯವಾಗಿರುವುದರಿಂದ, ಆಧಾರ್-ಪ್ಯಾನ್‌ ಲಿಂಕ್‌ ಮಾಡಲು ಕಡೆಗಣಿಸದಿರುವುದು ಉತ್ತಮ.

ಪ್ಯಾನ್ – ಆಧಾರ್‌ ಲಿಂಕ್‌ ಅನ್ನು 2023ರ ಜೂನ್‌ 30 ರೊಳಗೆ ಮಾಡದಿದ್ದರೆ, ಬಳಿಕ 1,000 ರೂ. ದಂಡ ಕಟ್ಟಬೇಕಾಗುತ್ತದೆ. ಪ್ಯಾನ್‌ ನಿಷ್ಕ್ರಿಯವಾದರೆ ಯಾವುದೇ ಆದಾಯ ತೆರಿಗೆಯ ರಿಫಂಡ್‌ ಸಿಗುವುದಿಲ್ಲ. ಟಿಡಿಎಸ್‌ ಮತ್ತು ಟಿಸಿಎಸ್‌ ದರ ಹೆಚ್ಚುತ್ತದೆ. ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಬಹುದು. ಸಬ್ಸಿಡಿ, ಪಾಸ್‌ ಪೋರ್ಟ್‌, ಬ್ಯಾಂಕ್‌ ಖಾತೆ ತೆರೆಯುವಲ್ಲಿ ಅಡಚಣೆ ಆದೀತು.

ಇದನ್ನೂ ಓದಿ: Cyber Fraud: ಧೋನಿ, ಶಿಲ್ಪಾ ಶೆಟ್ಟಿ ಹೆಸರಲ್ಲಿ ಪ್ಯಾನ್‌ ಕಾರ್ಡ್‌ ಸೃಷ್ಟಿಸಿ, ಕ್ರೆಡಿಟ್‌ ಕಾರ್ಡ್‌ ಪಡೆದು ಲಕ್ಷಾಂತರ ರೂ. ವಂಚನೆ

ನಿಮ್ಮ ಪ್ಯಾನ್‌ ಕಾರ್ಡ್‌ ಕಳೆದು ಹೀದರೆ ಅಥವಾ ಡ್ಯಾಮೇಜ್‌ ಆಗಿದ್ದರೆ ಹೊಸ ಪ್ಯಾನ್‌ ಕಾರ್ಡಿಗೆ ಅರ್ಜಿ ಹಾಕುತ್ತೀರಿ ಅಲ್ಲವೇ. ಆಗ ಪ್ಯಾನ್‌ – ಆಧಾರ್‌ ಲಿಂಕ್‌ ಆಗಿರದಿದ್ದರೆ ಸವಾಲಾಗಿ ಪರಿಣಮಿಸಬಹುದು. ಏಕೆಂದರೆ ಸರ್ಕಾರ ಹೊಸ ಪ್ಯಾನ್‌ ಕಾರ್ಡಿಗೆ ಅರ್ಜಿ ಹಾಕುವಾಗ ಆಧಾರ್-ಪ್ಯಾನ್‌ ಲಿಂಕ್‌ ಆಗಿರಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

Rajeev Taranath: ಹಾಗೆ ನೋಡಿದರೆ ರಾಜೀವ್ ತಾರಾನಾಥ್ ಅವರು ಬಹಳ ಅದ್ಭುತ ಲೇಖಕರು. ಅಂದಿನ ನಮ್ಮ ಹಾಟ್ ಫೇವರಿಟ್ ಲೇಖಕ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ ‘ಮೌನಿ’ ಕೃತಿಗೆ ಅತ್ಯುತ್ತಮ ಮುನ್ನುಡಿ ಬರೆದಿದ್ದರು. ಅದೆಷ್ಟು ಒಳ್ಳೆಯ ಮುನ್ನುಡಿ ಬರೆದಿದ್ದರೆಂದರೆ, ಸಂಕಲನಕ್ಕಿಂತ ಮುನ್ನುಡಿಯನ್ನೇ ನಾವೆಲ್ಲ ನಾಲ್ಕಾರು ಬಾರಿ ಓದಿದ್ದೆವು. ತೊಂಬತ್ತೆರಡು ವರ್ಷ ಇದ್ದ ರಾಜೀವ್ ಇನ್ನಿಲ್ಲ. ಹಾಗೆನ್ನುವಾಗ, ನಮ್ಮ “ಯಾದೊಂಕೀ ಬಾರಾತ್”ನಲ್ಲಿ ಅವರ ಬರವಣಿಗೆ, ಅವರ ಮಾತು, ಅವರ ತುಂಬು ಕಂಠ, ಅವರ ಅಸದೃಶ ಸರೋದ್ ವಾದನ ಎಲ್ಲವೂ ಒಟ್ಟೊಟ್ಟಿಗೇ ನುಗ್ಗಿನುಗ್ಗಿ ಬರುತ್ತಿವೆ.

VISTARANEWS.COM


on

Rajiv Taranath
Koo

ಮಂಜುನಾಥ ಅಜ್ಜಂಪುರ

ಸಂಗೀತವೇ ಅದ್ಭುತ. ಅದರಲ್ಲೂ ಹಿಂದೂಸ್ತಾನಿ ಸಂಗೀತವೆಂಬುದು ಅನೂಹ್ಯ, ಅಸಾಮಾನ್ಯ. ಅದರ ಭಾವಲೋಕದ ಸಾಧ್ಯತೆಗಳೇ ಅಪಾರ. ಕ್ಷಣಕಾಲ ಕಣ್ಣುಮುಚ್ಚಿ ಕೇಳಿದರೂ ಅನುಭವ ಅನುಭಾವವಾಗಿಬಿಡುತ್ತದೆ.
ಬಾಲ್ಯದಲ್ಲಿ ಕರ್ನಾಟಕ ಸಂಗೀತದ ಕೆಲವು ವಾದ್ಯಗಳನ್ನು ನೋಡಿ ಪರಿಚಯ ಮಾಡಿಕೊಂಡಿದ್ದರೂ ಸಿತಾರ್, ಸರೋದ್, ಸಂತೂರ್, ಬಾನ್ಸುರಿ, ಸಾರಂಗಿಗಳಂತಹ ವಾದ್ಯಗಳನ್ನು ನೋಡುವ ಅವಕಾಶವೇ ಇರಲಿಲ್ಲ. ನಮ್ಮ ತಂದೆಯವರು (ಅಜ್ಜಂಪುರದ ಎ.ಪಿ. ನಾಗರಾಜ ಶ್ರೇಷ್ಠಿಯವರು) ರೇಡಿಯೋದಲ್ಲಿ ಮುಂಜಾನೆ ಬರುತ್ತಿದ್ದ ರಾಮರಾವ್ ನಾಯಕ್, ಮಲ್ಲಿಕಾರ್ಜುನ ಮನ್ಸೂರ್ ಮೊದಲಾದವರ ಗಾಯನ ಕೇಳುತ್ತಿದ್ದರು. ಕೇಳಿ ಕೇಳಿ ನಾನೂ ಹಿಂದೂಸ್ತಾನಿ ಸಂಗೀತ ಕೇಳುವ – ಆನಂದಿಸುವ ಸಂಸ್ಕಾರ ಬೆಳೆಸಿಕೊಂಡೆ. 1970ರ ದಶಕದ ಆರಂಭದ ಆ ಕಾಲದಲ್ಲಿ, ಪ್ರತಿ ವರ್ಷ ಆಕಾಶವಾಣಿಯಲ್ಲಿ ಬರುತ್ತಿದ್ದ ರೇಡಿಯೋ ಸಂಗೀತ ಸಮ್ಮೇಳನಗಳು, ಗಾಯನ ಮತ್ತು ವಾದ್ಯ ಸಂಗೀತಗಳ ಪರಮಾದ್ಭುತ ಲೋಕಕ್ಕೆ ಕರೆದೊಯ್ಯುತ್ತಿದ್ದವು. ಹಾಗೆ ವಿಜಯರಾಘವ ರಾವ್, ಬಿಸ್ಮಿಲ್ಲಾ ಖಾನ್, ಪರ್ವೀನ್ ಸುಲ್ತಾನಾ, ಶಿವಕುಮಾರ್ ಶರ್ಮ ಮೊದಲಾದವರ ದಿವ್ಯ ಸಂಗೀತದ ಪರಿಚಯವಾಯಿತು. ವಿಶೇಷವಾಗಿ ಸರೋದ್, ಸಂತೂರ್ ಮತ್ತು ಬಾನ್ಸುರಿಗಳು ಅಂದಿಗೂ – ಇಂದಿಗೂ ನನಗೆ ಬಹಳ ಬಹಳ ಆಪ್ಯಾಯಮಾನ.

ಇಂದಿಗೂ ಪ್ರತಿನಿತ್ಯ ಕೇಳುತ್ತೇನೆ

ಹಾಗೆ ತಮ್ಮ ಸರೋದ್ ನಿಂದ ಪರಿಚಯವಾದವರು ರಾಜೀವ್ ತಾರಾನಾಥ್ (Rajeev Taranath). ಹಾಗೆ ನೋಡಿದರೆ, ಅವರು ಬಹಳ ಅದ್ಭುತ ಲೇಖಕರು. ಅಂದಿನ ನಮ್ಮ ಹಾಟ್ ಫೇವರಿಟ್ ಲೇಖಕ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ “ಮೌನಿ” ಕೃತಿಗೆ ಅತ್ಯುತ್ತಮ ಮುನ್ನುಡಿ ಬರೆದಿದ್ದರು. ಅದೆಷ್ಟು ಒಳ್ಳೆಯ ಮುನ್ನುಡಿ ಬರೆದಿದ್ದರೆಂದರೆ, ಸಂಕಲನಕ್ಕಿಂತ ಮುನ್ನುಡಿಯನ್ನೇ ನಾವೆಲ್ಲ ನಾಲ್ಕಾರು ಬಾರಿ ಓದಿದ್ದೆವು. ಇದೆಲ್ಲ ಅರ್ಧ ಶತಮಾನಕ್ಕೂ ಹಿಂದಿನ ವಿಷಯ.

ಬಹುಮುಖ ಪ್ರತಿಭೆಯ ಮತ್ತು ಕ್ರಾಂತಿಕಾರಿ ವ್ಯಕ್ತಿತ್ವದ ತಾರಾನಾಥರು ಇವರ ತಂದೆ. ಸಾಹಿತ್ಯವಂತೂ ಸಹಜವಾಗಿಯೇ ರಾಜೀವರಿಗೆ ಒಲಿದಿತ್ತು. ಆದರೂ ಅನಂತರದ ವರ್ಷಗಳಲ್ಲಿ ಅವರು ಸಂಗೀತಕ್ಕೆ ಆದ್ಯತೆ, ಪ್ರಾಧಾನ್ಯ ನೀಡಿದರು. ಬೆಂಗಳೂರಿನಲ್ಲಿ ಒಮ್ಮೆ ಅವರ ಸರೋದ್ ವಾದನದ ಕಛೇರಿ ಇತ್ತು. ಪ್ರಾಯಶಃ 1979 ಇಲ್ಲವೇ 1980 ಇರಬಹುದು. ಬಸವನಗುಡಿಯ ದೊಡ್ಡ ಗಣೇಶನ ಬಳಿಯ ಕಹಳೆ ಬಂಡೆಯ ಬಳಿ ಮುಂಜಾನೆಯೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜೀವರನ್ನು ಮತ್ತು ಸರೋದ್ ವಾದ್ಯವನ್ನು ಮೊದಲ ಬಾರಿಗೆ ನೋಡುವ ಅವಕಾಶ. ಲೇಖಕ ರಾಜೀವರ ಅಭಿಮಾನಿಗಳಾದ ಮತ್ತು ಸರೋದ್ ವಾದನದ ಅಭಿಮಾನಿಗಳೂ ಆದ ನಮ್ಮಂತಹವರಿಗೆ ಅದೊಂದು ಸುವರ್ಣಾವಕಾಶವಾಗಿತ್ತು. “ಕ್ಯಾಲಿಫೋರ್ನಿಯಾದಿಂದ ಬಂದೆ” ಎಂದಿದ್ದರು. ನಾನೂ, ಮಾಲಾ ಸರೋದ್ ಕಚೇರಿ ಕೇಳಿದ್ದೇ ಅದೇ ಮೊದಲು. ರೇಡಿಯೋದಲ್ಲಿ ಕೇಳುವುದಕ್ಕೂ, ಮಹಾನ್ ಕಲಾವಿದರನ್ನು ನೇರಾನೇರ ನೋಡುತ್ತ ಕೇಳುವುದಕ್ಕೂ ತುಂಬ ವ್ಯತ್ಯಾಸವಿದೆ.

ಇನ್ನೊಮ್ಮೆ ಆರ್.ವಿ.ಕಾಲೇಜಿನಲ್ಲೂ ಅದೇ ಕಾಲಘಟ್ಟದಲ್ಲಿ ರಾಜೀವ್ ತಾರಾನಾಥರ ಸರೋದ್ ವಾದನ ಕೇಳುವ ದಿವ್ಯ ಅವಕಾಶ ನಮಗೆ ದೊರೆತಿತ್ತು. ಆ ಕಾಲವೇ ಹಾಗಿತ್ತು. ರೇಡಿಯೋ ಬಿಟ್ಟರೆ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಮಾತ್ರವೇ ಕೇಳುವ – ನೋಡುವ ಅವಕಾಶ ಲಭ್ಯ.

ಇದನ್ನೂ ಓದಿ: Rajeev Taranath: ಖ್ಯಾತ ಸರೋದ್‌ ವಾದಕ ರಾಜೀವ್ ತಾರಾನಾಥ್ ಇನ್ನಿಲ್ಲ

ದಿಗ್ಗಜರ ಒಡನಾಟ

ರಾಜೀವ್ ತಾರಾನಾಥರ ಬಹು ಆಯಾಮಗಳ ಪ್ರತಿಭೆಯ ಆಸ್ವಾದನಕ್ಕೆ ದೊರೆತ ಮತ್ತೊಂದು ಅವಕಾಶ ಎಂದರೆ, 1983ರಲ್ಲಿ ಗಿರೀಶ್ ಕಾಸರವಳ್ಳಿಯವರು ನಡೆಸಿಕೊಟ್ಟ 8 ದಿನಗಳ ಚಲನಚಿತ್ರ ರಸಗ್ರಹಣ ಶಿಬಿರ. ಗೆಳೆಯ ಅಪೂರ್ವ ಅಜ್ಜಂಪುರ ಅವರೊಂದಿಗೆ, ನಾನೂ – ಮಾಲಾ ಶಿಬಿರದಲ್ಲಿ ಭಾಗವಹಿಸಿದ್ದೆವು. ಇಂದಿಗೂ ನೆನಸಿಕೊಳ್ಳುವಂತಹ ಅಪೂರ್ವ ಶಿಬಿರವದು. ಚಲನಚಿತ್ರಗಳ ಸಂಗೀತದ ಆಯಾಮದ ಬಗೆಗೆ ರಾಜೀವ್ ವಿವರಣೆ ನೀಡುತ್ತಿದ್ದರು. ನೆನಪು ಮಾಡಿಕೊಂಡರೆ, ಇಂದಿಗೂ ರೋಮಾಂಚನವಾಗುತ್ತದೆ. ಅದು ಅಕ್ಷರಶಃ ದಿಗ್ಗಜರ ಒಡನಾಟ.
ಒಮ್ಮೆ ಜರ್ಮನಿಯ ಯಾತನಾ ಶಿಬಿರಗಳ ಸಾಕ್ಷ್ಯಚಿತ್ರ “ನೈಟ್ ಅಂಡ್ ಫಾಗ್” ತೋರಿಸಿದರು. Rarest ಎನ್ನಬಹುದಾದ ದೃಶ್ಯಗಳ ತುಣುಕುಗಳು ಅವು. ಮನಸ್ಸು, ಹೃದಯಗಳನ್ನು ಬಹುಕಾಲ ಕಲಕಿಬಿಡುವಂತಹ ಅನುಭವವಾಯಿತು. ಆ ಸಾಕ್ಷ್ಯಚಿತ್ರ ನೋಡಿ ಮುಗಿದ ಮೇಲೆ ನಮಗೆ, ಅಂದರೆ ಶಿಬಿರಾರ್ಥಿಗಳಿಗೆ, ರಾಜೀವ್ ” ಹಿಟ್ಲರನ ಸೈನ್ಯದ ಮೆರೆವಣಿಗೆಯ ದೃಶ್ಯದ ಅವಧಿಯಲ್ಲಿ ಹಿನ್ನೆಲೆ ಸಂಗೀತಕ್ಕೆ ಸಂಬಂಧಿಸಿದಂತೆ ಏನು ಗಮನಿಸಿದಿರಿ?” ಎಂದರು. ಆ ಇಡೀ ಸಾಕ್ಷ್ಯಚಿತ್ರ ಅತ್ಯಂತ ವೇದನಾದಾಯಕವಾದುದರಿಂದ, ಶಿಬಿರಾರ್ಥಿಗಳಿಗೆ ಹಿನ್ನೆಲೆ ಸಂಗೀತದ ಆ different ಆಯಾಮವನ್ನು ಗಮನಿಸಲು ಆಗಿರಲೇ ಇಲ್ಲ. ಕೊನೆಗೆ ರಾಜೀವ್ ಆ ದೃಶ್ಯವನ್ನು ಇನ್ನೊಮ್ಮೆ play ಮಾಡಿಸಿದರು. ಸೈನಿಕರ ಆ ಪಥಸಂಚಲನಕ್ಕೆ ಅಳುವ ಹಿನ್ನೆಲೆ ಸಂಗೀತವನ್ನು (Mourning Music) ನೀಡಲಾಗಿತ್ತು. ಅದು ಸೈನಿಕರ ಅಬ್ಬರದ ಪಥಸಂಚಲನವಾದರೂ, ಹಿಟ್ಲರನ ಪಡೆಗಳು ಎಸಗಿದ ಅಪಾರ ಕ್ರೌರ್ಯವನ್ನು ಆ ಸಂಗೀತ ಅದ್ಭುತವಾಗಿ ಪರಿಣಾಮಕಾರಿಯಾಗಿ ತೆರೆಯಮೇಲೆ ಹೊಮ್ಮಿಸಿತ್ತು.

ಡಾ|| ಯು.ಆರ್.ಅನಂತಮೂರ್ತಿ ಅವರ “ಸಮಕ್ಷಮ” ಅಪರೂಪದ ಸಂದರ್ಶನಗಳ ಸಂಕಲನವೂ ಹೌದು. ಅಲ್ಲಿ ರಾಜೀವ್ ತಾರಾನಾಥರ ಸಂದರ್ಶನವೂ ಇತ್ತು. ಶಿಬಿರದ ಬಿಡುವಿನಲ್ಲಿ ರಾಜೀವ್ ಅವರೊಂದಿಗೆ ಮಾತನಾಡುವಾಗ ಸಹಜವಾಗಿಯೇ ಅವರ ಆ ಸಂದರ್ಶನದ ವಿಷಯವು ಪ್ರಸ್ತಾಪವಾಗಿ ರೋಮಾಂಚನವಾಗುತ್ತಿತ್ತು.
ತೊಂಬತ್ತೆರಡು ವರ್ಷ ಇದ್ದ ರಾಜೀವ್ ಇನ್ನಿಲ್ಲ. ಹಾಗೆನ್ನುವಾಗ, ನಮ್ಮ “ಯಾದೊಂಕೀ ಬಾರಾತ್”ನಲ್ಲಿ ಅವರ ಬರವಣಿಗೆ, ಅವರ ಮಾತು, ಅವರ ತುಂಬು ಕಂಠ, ಅವರ ಅಸದೃಶ ಸರೋದ್ ವಾದನ ಎಲ್ಲವೂ ಒಟ್ಟೊಟ್ಟಿಗೇ ನುಗ್ಗಿನುಗ್ಗಿ ಬರುತ್ತಿವೆ.

ಅವರ ಅಪಾರ ಪ್ರತಿಭೆಗೆ ನಮೋ ನಮಃ.

Continue Reading

ಪ್ರಮುಖ ಸುದ್ದಿ

Murder News : ಖಾಸಗಿ ಕ್ಷಣದ ಫೋಟೋಗಳನ್ನಿಟ್ಟು ಬೆದರಿಕೆ ಹಾಕುತ್ತಿದ್ದವನನ್ನು ಕೊಲೆ ಮಾಡಿದ ವಿವಾಹಿತ ಮಹಿಳೆ

Murder News : ಪದೇ ಪದೆ ಬೆದರಿಕೆ ಹಾಕುತ್ತಿದ್ದ ರಾಜೇಶ್​ಗೆ ಸೌಮ್ಯವಾಗಿ ಮಾತನಾಡಿದ್ದ ಪ್ರೇಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಸಹೋದರ ಶಿವುನ ನೆರವಿನಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದಾಳೆ.
ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

VISTARANEWS.COM


on

Murder News
Koo

ಮೈಸೂರು: ಖಾಸಗಿ ಕ್ಷಣಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕಿ ಮರ್ಯಾದೆ ಕಳೆಯುವುದಾಗಿ ಬೆದರಿಕೆ ಹಾಕಿದ್ದ ಪ್ರಿಯಕರನ್ನು ವಿವಾಹಿತ ಮಹಿಳೆಯೊಬ್ಬಳು ಸಹೋದರನ ಜತೆ ಸೇರಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಪ್ರಕರಣ (Murder News) ಎಚ್​​​ಡಿ ಕೋಟೆ ತಾಲೂಕಿನ ಸಿದ್ದಯ್ಯನ ಹುಂಡಿ ಬಳಿ ನಡೆದಿದೆ. ಪ್ರೇಮಾ ಹಾಗೂ ಆಕೆಯ ಸಹೋದರ ಶಿವು ಕೊಲೆ ಆರೋಪಿಗಳು. 32 ವರ್ಷದ ರಾಜೇಶ್​ ಕೊಲೆಯಾದ ವ್ಯಕ್ತಿ.

ಆರೋಪಿ ಪ್ರೇಮಾ ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಯಾಗಿದ್ದಾರೆ. ಅವರು 15 ವರ್ಷದ ಹಿಂದೆ ನಂಜನಗೂಡಿನ ಶ್ರೀರಾಂಪುರಕ್ಕೆ ಮದುವೆ ಆಗಿ ಬಂದಿದ್ದರು. ಒಂದು ತಿಂಗಳ ಹಿಂದೆ ಪ್ರೇಮಾಳ ಪತಿ ಆತ್ಮಹತ್ಯೆ. ಮಾಡಿಕೊಂಡಿದ್ದರು. ಆ ಬಳಿಕ ಪ್ರೇಮಾ ಪತಿಯ ಸ್ನೇಹಿತ ರಾಜೇಶ್​ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು. ಅವರಿಬ್ಬರು ಖಾಸಗಿ ಕ್ಷಣಗಳನ್ನೂ ಕಳೆದಿದ್ದರು. ಇದನ್ನೇ ದುರ್ಬಳಕೆ ಮಾಡಿಕೊಂಡಿದ್ದ ರಾಜೇಶ್​​, ಆ ಕ್ಷಣದ ಫೋಟೋಗಳನ್ನು ತೆಗೆದಿಟ್ಟುಕೊಂಡು ಬೆದರಿಕೆ ಹಾಕಲು ಆರಂಭಿಸಿದ್ದ. ಬೆದರಿದ ಪ್ರೇಮಾ ಆತನ ಜೀವನ ಕೊನೆಗೊಳಿಸಲು ನಿರ್ಧರಿಸಿದ್ದಾಳೆ. ಅಂತೆಯೇ ಆತನನ್ನು ತನ್ನ ಬಳಿಗೆ ಕರೆಸಿಕೊಂಡು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ: Actor Darshan Arrested : ಲಾಕಪ್​ನಲ್ಲಿ ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎದ್ದು ಕುಳಿತಿದ್ದ ನಟ ದರ್ಶನ್​!

ಪದೇ ಪದೆ ಬೆದರಿಕೆ ಹಾಕುತ್ತಿದ್ದ ರಾಜೇಶ್​ಗೆ ಸೌಮ್ಯವಾಗಿ ಮಾತನಾಡಿದ್ದ ಪ್ರೇಮಾ ತನ್ನ ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಸಹೋದರ ಶಿವುನ ನೆರವಿನಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿದ್ದಾಳೆ.
ನಂಜನಗೂಡು ಪಟ್ಟಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಹಿರಿಯ ಸ್ವಾಮೀಜಿ ಕೊಂದ‌ ಆರೋಪಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ


ಮೈಸೂರು: ಮೈಸೂರಿನ ಸಿದ್ದಾರ್ಥನಗರದಲ್ಲಿ ಅನ್ನದಾನೇಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರ ಆಪ್ತ ಸಹಾಯಕನಿಂದಲೇ ಬರ್ಬರವಾಗಿ ಕೊಂದು (Murder case ) ಹಾಕಿದ್ದ. ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ಆರೋಪಿ ರವಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥಗೊಂಡಿದ್ದ ಆರೋಪಿ ರವಿಯನ್ನು ಪೊಲೀಸರು ಕೆಆರ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕುಡಿತದ ಚಟಕ್ಕೆ ಒಳಗಾಗಿದ್ದ ರವಿಗೆ ಶಿವಾನಂದ ಸ್ವಾಮೀಜಿ ಬುದ್ಧಿವಾದ ಹೇಳಿದ್ದರು. ಸ್ವಾಮೀಜಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ರವಿ ಕೊಲೆ ಮಾಡಿದ್ದ ಎನ್ನಲಾಗಿದೆ. ಸದ್ಯ ಆರೋಪಿ‌ ರವಿ ಗುಣಮುಖನಾದ ಬಳಿಕ ಪೊಲೀಸರು ತನಿಖೆಯನ್ನು ಮುಂದುವರಿಸಲಿದ್ದಾರೆ.

ಏನಿದು ಪ್ರಕರಣ?
ನಿನ್ನೆ ಸೋಮವಾರ (ಜೂ.10) ಮೈಸೂರಿನಲ್ಲಿ ಹಿರಿಯ ಸ್ವಾಮೀಜಿಯೊಬ್ಬರ ಬರ್ಬರ (Murder case) ಕೊಲೆಯಾಗಿತ್ತು. ಮೈಸೂರಿನ ಸಿದ್ದಾರ್ಥನಗರದಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ (90) ಸ್ವಾಮೀಜಿ ಕೊಲೆಯಾದವರು. ಶಿವಾನಂದ ಸ್ವಾಮೀಜಿ ಅವರ ಸಹಾಯಕನಾಗಿದ್ದ ಭದ್ರತಾ ಸಿಬ್ಬಂದಿಯಿಂದಲೇ ಕೊಲೆ ನಡೆದಿತ್ತು.

ರವಿ (60) ಎಂಬಾತನಿಂದ ಈ ಕೃತ್ಯ ನಡೆದಿತ್ತು. ಶಿವಾನಂದ ಸ್ವಾಮೀಜಿಯನ್ನು ಮಾರಕಾಸ್ತ್ರದಿಂದ ಚುಚ್ಚಿ ಕೊಲೆ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಜರ್‌ಬಾದ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮಂಚದ ಮೇಲೆ ಮಲಗಿದ್ದಲ್ಲೇ ಶಿವಾನಂದ ಸ್ವಾಮೀಜಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು.

Continue Reading

ದೇಶ

Reasi Terror Attack: ರಿಯಾಸಿ ಭಯೋತ್ಪಾದಕ ದಾಳಿಯ ಶಂಕಿತನ ರೇಖಾಚಿತ್ರ ಬಿಡುಗಡೆ; ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಘೋಷಣೆ

Reasi Terror Attack: ದೇಶದವೇ ಬೆಚ್ಚಿ ಬಿದ್ದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಭಯೋತ್ಪದಕ ದಾಳಿಯ ಬಗ್ಗೆ ಪೊಲೀಸರು ಮಹತ್ವದ ಸುಳಿವು ನೀಡಿದ್ದಾರೆ. ಶಂಕಿತ ಉಗ್ರನ ರೇಖಾಚುತ್ರವನ್ನು ಬಿಡುಗಡೆ ಮಾಡಿದ್ದು ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ನಗದು ಘೋಷಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದಲ್ಲಿ ಈ ರೇಖಾಚಿತ್ರವನ್ನು ರಚಿಸಲಾಗಿದೆ.

VISTARANEWS.COM


on

Reasi Terror Attack
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ (ಜೂನ್ 9) ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ (Reasi Terror Attack). ಈ ಗುಂಡಿನ ದಾಳಿಯ ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶಿವ ಖೋರಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ವೇಳೆ ಬಸ್‌ ಆಳವಾದ ಕಮರಿಗೆ ಬಿದ್ದು, ದುರಂತ ಸಂಭವಿಸಿದೆ. ಇದೀಗ ಜಮ್ಮು ಮತ್ತು ಕಾಶ್ಮೀರ ಪೋಲೀಸರು ಶಂಕಿತ ಉಗ್ರನ ರೇಖಾಚಿತ್ರವನ್ನು ಬಿಡುಗಡೆ ಮಾಡಿದ್ದು, ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ರಿಯಾಸಿ ಜಿಲ್ಲೆಯ ಪೂನಿ ಪ್ರದೇಶದಲ್ಲಿ ಇತ್ತೀಚೆಗೆ ಬಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕನ ರೇಖಾ ಚಿತ್ರ ಬಿಡುಗಡೆ ಮಾಡಿದ್ದೇವೆ. ಈತನ ಸುಳಿವು ನೀಡಿದವರಿಗೆ ರಿಯಾಸಿ ಪೊಲೀಸರು 20 ಲಕ್ಷ ರೂ.ಗಳ ಬಹುಮಾನವನ್ನು ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದಲ್ಲಿ ಈ ರೇಖಾಚಿತ್ರವನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕನ ಬಗ್ಗೆ ಸುಳಿವು ಸಿಕ್ಕವರು ರಿಯಾಸಿ ಎಸ್ಎಸ್‌ಪಿ – 9205571332, ರಿಯಾಸಿ ಎಎಸ್‌ಪಿ- 9419113159, ರಿಯಾಸಿ ಡಿವೈಎಸ್‌ಪಿ ಪ್ರಧಾನ ಕಚೇರಿ – 9419133499, ಪೂನಿ ಎಸ್ಎಚ್ಒ- 7051003214, ರಾನ್ಸೂ ಎಸ್ಎಚ್ಒ – 7051003213, ರಿಯಾಸಿ ಪಿಸಿಆರ್ – 9622856295 ನಂಬರ್‌ಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ ತಿಳಿಸಿದೆ.

ರಿಯಾಸಿ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರನ್ನು ಪತ್ತೆಹಚ್ಚಲು ಎಲ್ಲ ಪ್ರಯತ್ನ ನಡೆಯುತ್ತಿದೆ. ಭದ್ರತಾ ಸಿಬ್ಬಂದಿಯ 11 ತಂಡಗಳು ಕಾರ್ಯನಿರ್ವಹಿಸುತ್ತಿವೆ ಮತ್ತು ರಾನ್ಸೊ-ಪೊನಿ-ತ್ರೇಯತ್ ಪ್ರದೇಶದಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಕೂವಾಡ ಇದೆ ಎಂದು ಶಂಕಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತಂಡವು ಸೋಮವಾರ ರಿಯಾಸಿಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿದೆ ಮತ್ತು ಎನ್ಐಎಯ ವಿಧಿವಿಜ್ಞಾನ ತಂಡವು ಪುರಾವೆಗಳನ್ನು ಸಂಗ್ರಹಿಸುತ್ತಿದೆ.

ಜೂನ್ 10ರಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಿಯಾಸಿ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಹತ್ತಿರದ ಸಂಬಂಧಿಕರಿಗೆ ತಲಾ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ ತಲಾ 50,000 ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ.

ಇದನ್ನೂ ಓದಿ: All Eyes on Raesi: ಹಿಂದೂ ಯಾತ್ರಿಕರ ಹತ್ಯೆ: ಆಲ್ ಐಸ್ ಆನ್ ರಿಯಾಸಿ; ರಫಾ ರಫಾ ಅನ್ನುತ್ತಿದ್ದ ಸೆಲೆಬ್ರಿಟಿಗಳು ಈಗೆಲ್ಲಿ?

ಮಾಹಿತಿ ಪಡೆದ ಪ್ರದಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. “ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ಆಳವಾದ ನೋವಾಗಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಜತೆ ಘಟನೆಯ ಬಗ್ಗೆ ವಿಚಾರಿಸಿದ್ದೇನೆ. ಈ ಭೀಕರ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿಕೋರರು ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan Arrested : ಲಾಕಪ್​ನಲ್ಲಿ ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎದ್ದು ಕುಳಿತಿದ್ದ ನಟ ದರ್ಶನ್​!

Actor Darshan Arrested : ಸೊಳ್ಳೆ ಕಡಿತದ ಜತೆಗೆ ದರ್ಶನ್​ ಸಿಕ್ಕಾಪಟ್ಟೆ ಚಿಂತೆಯಲ್ಲಿ ಇದ್ದಂತೆ ಕಂಡು ಬಂತು. ಲಾಕ್​ಅಪ್​ನೊಳಗೆ ಆಗಾಗ ಎಚ್ಚರಗೊಂಡು ಕುಳಿತಿರುತ್ತಿದ್ದರು. ಆರಾಮವಾಗಿ ಎಸ್ಟೇಟ್​, ಬಂಗಲೆಯಲ್ಲಿ ಮಲಗುತ್ತಿದ್ದ ದರ್ಶನ್​ಗೆ ಜೈಲು ವಾಸ ಚಿಂತೆಯನ್ನು ಉಂಟು ಮಾಡಿತ್ತು.

VISTARANEWS.COM


on

Actor Darshan Arrested
Koo

ಬೆಂಗಳೂರು: ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ (Actor Darshan Arrested)​, ಸೊಳ್ಳೆ ಕಡಿತಕ್ಕೆ ಬೆಚ್ಚಿ ರಾತ್ರಿಯೆಲ್ಲ ಎಚ್ಚರವಿದ್ದರು. ಕೊಲೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ದರ್ಶನ್ ಮತ್ತು ಆತನ ಸಹಚರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಬೇರೆ ಬೇರೆ ಲಾಕಪ್​ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರು. ಆದರೆ, ಇದುವರೆಗೆ ಜೇಬುಗಳ್ಳರ, ಮನೆಗಳ್ಳರ ಮತ್ತು ಸಣ್ಣಪುಟ್ಟ ಹೊಡೆದಾಟಗಳಲ್ಲಿ ಜೈಲು ಸೇರುತ್ತಿದ್ದವರ ರಕ್ತ ಹೀರಿ ಅಭ್ಯಾಸವಿದ್ದ ಸೊಳ್ಳೆಗಳು ದರ್ಶನ್​ಗೂ ಕಾಟ ಕೊಟ್ಟವು. ಪೊಲೀಸರು ‘ಸೆಲೆಬ್ರಿಟಿ ದರ್ಶನ್​ಗೆ’ ಕಾರ್ಪೆಟ್​, ದಿಂಬು ಎಲ್ಲ ಕೊಟ್ಟು ಮಲಗಲು ವ್ಯವಸ್ಥೆ ಮಾಡಿದ್ದರೂ ಸೊಳ್ಳೆಗಳು ಅವೆಲ್ಲವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಬೆಡ್​ಶೀಟ್​ ಒಳಗಿನಿಂದ ತೂರಿಕೊಂಡು ಹೋಗಿ ಕಚ್ಚಿದವು.

ಕೊಲೆ ಆರೋಪ ಎದುರಿಸುತ್ತಿರುವ ದರ್ಶನ್ ಹಾಗೂ ಉಳಿದ 11 ಜನ ಆರೋಪಿಗಳು ಲಾಕ್ ಅಪ್ ನಲ್ಲೇ ಉಳಿಯಬೇಕಾಯಿತು. ದರ್ಶನ್‌, ರಾಘವೇಂದ್ರ ಮತ್ತು ವಿನಯ್ ಗೆ ಒಂದು ಲಾಕ್ ಅಪ್ ನಲ್ಲಿ ಮಲಗಲು ವ್ಯವಸ್ಥೆ ಮಾಡಿದ್ದರೆ, ಇತರ ಆರೋಪಿಗಳಿಗೆ ಮತ್ತೊಂದು ಲಾಕ್ ಅಪ್​ನಲ್ಲಿ ಮಲಗಲು ಹೇಳಿದ್ದರು. ರಾತ್ರಿ ಆರೋಪಿಗಳಿಗೆ ಖಾಸಗಿ ಹೋಟೆಲ್ ನಿಂದ ದೊನ್ನೆ ಬಿರಿಯಾನಿ‌ ವ್ಯವಸ್ಥೆ ಮಾಡಲಾಗಿತ್ತು. ಚೆನ್ನಾಗಿ ತಿಂದಿದ್ದ ಅವರು ಪೊಲೀಸರೇ ಒದಗಿಸಿದ್ದ ಹಾಸಿಗೆ ಪರಿಕರಗಳು, ಬೆಡ್ ಶೀಟ್, ತಲೆ ದಿಂಬು ಬಳಸಿ ಮಲಗಿದ್ದರು. ಆದರೆ, ಸೊಳ್ಳೆಗಳು ಅವರ ರಕ್ಷಣಾ ಕೋಟೆಯನ್ನು ಭೇದಿಸಿ ಬಂದು ಕಚ್ಚಿದ್ದವು.

ಚಿಂತೆಗೆ ಬಿದ್ದಿರುವ ದರ್ಶನ್​

ಸೊಳ್ಳೆ ಕಡಿತದ ಜತೆಗೆ ದರ್ಶನ್​ ಸಿಕ್ಕಾಪಟ್ಟೆ ಚಿಂತೆಯಲ್ಲಿ ಇದ್ದಂತೆ ಕಂಡು ಬಂತು. ಲಾಕ್​ಅಪ್​ನೊಳಗೆ ಆಗಾಗ ಎಚ್ಚರಗೊಂಡು ಕುಳಿತಿರುತ್ತಿದ್ದರು. ಆರಾಮವಾಗಿ ಎಸ್ಟೇಟ್​, ಬಂಗಲೆಯಲ್ಲಿ ಮಲಗುತ್ತಿದ್ದ ದರ್ಶನ್​ಗೆ ಜೈಲು ವಾಸ ಚಿಂತೆಯನ್ನು ಉಂಟು ಮಾಡಿತ್ತು.

ಭಾರೀ ಭದ್ರತೆ

ದರ್ಶನ್​ ಹಾಗೂ ಆತನ ಗ್ಯಾಂಗ್​ನ ಸದಸ್ಯರು ಇದ್ದ ಪೊಲೀಸ್ ಠಾಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು . ವಿಐಪಿ ಆರೋಪಿಗಳ ಮೇಲೆ ದಾಳಿಯಾಗುವ ಅಥವಾ ಇನ್ಯಾವುದೇ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಠಾಣೆಯ ಹೊರಗಡೆ ಕೆಎಸ್​ಆರ್​​ಪಿ ಪೊಲೀಸ್​ ತಂಡವೊಂದನ್ನು ನಿಯೋಜಿಸಲಾಗಿತ್ತು. ದರ್ಶನ್​ಗೆ ದೊಡ್ಡ ಪ್ರಮಾಣದ ಅಭಿಮಾನಿ ಬಳಗವಿದೆ. ಹುಚ್ಚು ಅಭಿಮಾನ ದರ್ಶನ್ ಆರೋಪಿಯೇ ಅಲ್ಲ ಎಂದು ವಾದಿಸುವ ಮಟ್ಟಕ್ಕೆ ಬಂದಿದೆ. ಹೀಗಾಗಿ ಡಿ ಬಾಸ್ ನೋಡಲು ಪೊಲೀಸ್​ ಠಾಣೆಗೆ ಬರಬಹುದು ಎಂಬ ಊಹೆ ಮೇಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಇಂದಿನಿಂದ ಆರು ದಿನಗಳ ಕಾಲ ತನಿಖೆ

ಬುಧವಾರದಿಂದ ಆರಂಭಗೊಂಡಂತೆ ದರ್ಶನ್ ಗ್ಯಾಂಗ್​​ಗೆ ಆರು ದಿನಗಳ ಕಾಲ ಪೊಲೀಸ್ ವಿಚಾರಣೆ ನಡೆಯಲಿದೆ. ಕೊಲೆ ಕೇಸ್ ಸಂಬಂಧ ಪೊಲೀಸರು ಸಾಕ್ಷ್ಯಗಳನ್ನು ಒಟ್ಟು ಮಾಡಲಿದ್ದಾರೆ. ಆರಂಭದಲ್ಲಿ ಆರೋಪಿಗಳ ಎಲೆಕ್ಟ್ರಾನಿಕ್ ಡಿವೈಸ್​​ಗಳ ತಲಾಷೆ ನಡೆಯಲಿದೆ. ಜತೆಗೆ ಅಪಹರಿಸಿಕೊಂಡು ಬಂದು ಕೂಡಿ ಹಾಕಿದ ಜಾಗ, ಕೊಲೆ ಮಾಡಿ ಎಸೆದ ಜಾಗವನ್ನು ಮಹಜರು ಮಾಡಲಿದ್ದಾರೆ.

ಇದನ್ನೂ ಓದಿ: Actor Darshan Arrested : ದರ್ಶನ್​ಗೆ ಪೊಲೀಸ್ ಠಾಣೆಯಲ್ಲಿ ರಾಜಾತಿಥ್ಯ; ಚಿಕ್ಕಪೇಟೆ ಬಿರಿಯಾನಿ, ಡೋಲೊ 650 ಮಾತ್ರೆ!

ರೇಣುಕಾಸ್ವಾಮಿಯನ್ನು ಹತ್ಯೆ ಮಾಡಿದ್ದು ಯಾರು, ಯಾರು ಅವರಿಗೆ ಹೊಡೆದಿದ್ದಾರೆ, ಅವರನ್ನು ಎತ್ತಿ ಹಾಕಿಕೊಂಡು ಬಂದು ಎಸೆದು ಹೋಗಿದ್ದು ಯಾರು ಎಂಬೆಲ್ಲ ಕೋನದಿಂದ ತನಿಖೆ ನಡೆಸಲಿದ್ದಾರೆ. ಅಮಾನುಷವಾಗಿ ಕೊಲೆ ಮಾಡಲು ಬಳಸಿರುವ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಬಿಸಾಡಿರುವ ಆಯುಧಗಳನ್ನು ಹುಡುಕಿ ಪತ್ತೆ ಹಚ್ಚಲಿದ್ದಾರೆ.

ಪ್ರಮುಖವಾಗಿ ಹತ್ಯೆ ನಡೆದ ದಿನ ಆರೋಪಿಗಳ ಮೊಬೈಲ್​ ನೆಟ್​ವರ್ಕ್ ಇದ್ದ ಜಾಗವನ್ನು ಪತ್ತೆ ಹಚ್ಚಲಿದ್ದಾರೆ. ಈ ಮಾಹಿತಿಯು ಆರೋಪಿಗಳ ವಿರುದ್ಧ ಚಾರ್ಜ್​ ಶೀಟ್​ ಸಲ್ಲಿಕೆ ಮಾಡುವುದಕ್ಕೆ ಪ್ರಮುಖ ಸಾಕ್ಷಿಗಳಾಗಲಿವೆ. ಅದೇ ರೀತಿ ಆರೋಪಿಗಳನ್ನು ಚಿತ್ರದುರ್ಗಕ್ಕೆ ಕರೆದೊಯ್ದು ತನಿಖೆ ನಡೆಸಲು ಪೊಲೀಸರು ಮುಂದಾಗಲಿದ್ದಾರೆ.

Continue Reading
Advertisement
Actor Darshan Renukaswamy Send His Photos To Pavitra Gowda
ಸ್ಯಾಂಡಲ್ ವುಡ್40 seconds ago

Actor Darshan: ಪವಿತ್ರಾಗೆ ಮರ್ಮಾಂಗದ ಫೋಟೊ ಕಳುಹಿಸಿದ್ರಾ ರೇಣುಕಾಸ್ವಾಮಿ? ದರ್ಶನ್​ಗೆ ತಿಳಿದಿದ್ದು ಹೇಗೆ?

Fraud Case
ಕ್ರೈಂ5 mins ago

Fraud Case: 300 ರೂ. ಬೆಲೆಯ ನಕಲಿ ಆಭರಣವನ್ನು ವಿದೇಶಿ ಮಹಿಳೆಗೆ 6 ಕೋಟಿ ರೂ.ಗೆ ಮಾರಿದರು!

Vastu Tips
ಧಾರ್ಮಿಕ24 mins ago

Vastu Tips: ಈ ನಕಾರಾತ್ಮಕ ವಸ್ತುಗಳನ್ನು ಮನೆಯಲ್ಲಿ ಇಡಲೇಬೇಡಿ!

Altroz Racer launched by Tata Motors
ಕರ್ನಾಟಕ28 mins ago

Tata Motors: ಟಾಟಾ ಮೋಟಾರ್ಸ್‌ನಿಂದ ʼಆಲ್ಟ್ರೋಜ್ ರೇಸರ್ʼ ಬಿಡುಗಡೆ; ದರ ಎಷ್ಟು?

Pawan Kalyan
ದೇಶ29 mins ago

Pawan Kalyan: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್‌ ಕಲ್ಯಾಣ್‌ ಆಯ್ಕೆ; ಇಂದು ಪ್ರಮಾಣ ವಚನ ಸ್ವೀಕಾರ

Minister Dinesh Gundurao drives 10 days Yogotsava programme in Bengaluru
ಕರ್ನಾಟಕ31 mins ago

Bengaluru News: 10 ದಿನಗಳ ‘ಯೋಗೋತ್ಸವ’ಕ್ಕೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ

Rajiv Taranath
ಪ್ರಮುಖ ಸುದ್ದಿ34 mins ago

Rajeev Taranath : ಮಹೋನ್ನತ ಪ್ರತಿಭೆಯ ರಾಜೀವ್ ತಾರಾನಾಥ್ ಸರೋದ್ ಲೋಕದ ಅದ್ಭುತ!

Actor Darshan Arrested Vijayalakshmi Darshan Unfollow Darshan On Instagram
ಸ್ಯಾಂಡಲ್ ವುಡ್41 mins ago

Actor Darshan Arrested : ದರ್ಶನ್​ನ ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ!

Murder News
ಪ್ರಮುಖ ಸುದ್ದಿ57 mins ago

Murder News : ಖಾಸಗಿ ಕ್ಷಣದ ಫೋಟೋಗಳನ್ನಿಟ್ಟು ಬೆದರಿಕೆ ಹಾಕುತ್ತಿದ್ದವನನ್ನು ಕೊಲೆ ಮಾಡಿದ ವಿವಾಹಿತ ಮಹಿಳೆ

Reasi Terror Attack
ದೇಶ2 hours ago

Reasi Terror Attack: ರಿಯಾಸಿ ಭಯೋತ್ಪಾದಕ ದಾಳಿಯ ಶಂಕಿತನ ರೇಖಾಚಿತ್ರ ಬಿಡುಗಡೆ; ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಘೋಷಣೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ16 hours ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ17 hours ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ18 hours ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ20 hours ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ22 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌