ಚುನಾವಣೆಗೆ ʻನಮ್ಮ ಕ್ಲಿನಿಕ್‌ʼ ಟ್ರಂಪ್‌ ಕಾರ್ಡ್‌: ರಾಜ್ಯಾದ್ಯಂತ ತಲೆಯೆತ್ತಲಿವೆ ಸರ್ಕಾರಿ ಚಿಕಿತ್ಸಾಲಯ - Vistara News

ಕರ್ನಾಟಕ

ಚುನಾವಣೆಗೆ ʻನಮ್ಮ ಕ್ಲಿನಿಕ್‌ʼ ಟ್ರಂಪ್‌ ಕಾರ್ಡ್‌: ರಾಜ್ಯಾದ್ಯಂತ ತಲೆಯೆತ್ತಲಿವೆ ಸರ್ಕಾರಿ ಚಿಕಿತ್ಸಾಲಯ

ನಗರ ಪ್ರದೇಶದಲ್ಲಿ ಬಡತನ ಪ್ರಮಾಣ ಹೆಚ್ಚುತ್ತಿದ್ದು, ಸಾಮಾನ್ಯ ಕಾಯಿಲೆಗಳಿಗೆ ದುಬಾರಿ ಹಣ ತೆತ್ತು ಔಷಧ ಪಡೆಯಲು ಸಾಧ್ಯವಾಗುವುದಿಲ್ಲ. ನೇರವಾಗಿ ಮೆಡಿಕಲ್‌ ಸ್ಟೋರ್‌ನಿಂದ ಔಷಧ ಖರೀದಿಸಿ ಪಡೆಯುವುದರಿಂದ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ. ಹೀಗಾಗಿ ʻನಮ್ಮ ಕ್ಲಿನಿಕ್‌ʼ ಜನಸಾಮಾನ್ಯರಿಗೆ ಉಪಯುಕ್ತವಾಗಲಿದೆ.

VISTARANEWS.COM


on

Namma clinic
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಆರೋಗ್ಯ ವ್ಯವಸ್ಥೆ ದುಬಾರಿಯಾಗಿರುವ ಇಂದಿನ ಸನ್ನಿವೇಶದಲ್ಲಿ ಸಾಮಾನ್ಯ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ 438 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ನವ ದೆಹಲಿಯಲ್ಲಿ ಆಮ್‌ ಆದ್ಮಿ ಸರ್ಕಾರ ಮಾಡಿರುವ ಮೊಹಲ್ಲಾ ಕ್ಲಿನಿಕ್‌ ಮಾದರಿಯಲ್ಲಿ ಈ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತವೆ ಎನ್ನಲಾಗಿದ್ದು, ʻನಮ್ಮ ಕ್ಲಿನಿಕ್‌ʼ ಎಂದು ನಾಮಕರಣ ಮಾಡಲಾಗುತ್ತಿದೆ. ನವ ದೆಹಲಿಯ ಆಮ್‌ ಆದ್ಮಿ ಸರ್ಕಾರಕ್ಕೆ ಪ್ರಸಿದ್ಧಿಯನ್ನು ತಂದುಕೊಟ್ಟ ಯೋಜನೆ ಎನ್ನಲಾಗುವ ಮೊಹಲ್ಲಾ ಕ್ಲಿನಿಕ್‌ಗಳನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಜಾರಿಗೊಳಿಸಲು ರಾಜ್ಯ ಸರ್ಜಾರ ಉತ್ಸುಕವಾಗಿದೆ.

ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಜನರು ಆಸ್ಪತ್ರೆಗಳ ಮೊರೆ ಹೋಗುತ್ತಾರೆ. ಆದರೆ ಜ್ವರ, ಚಳಿ, ಶೀತ, ನೆಗಡಿ ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಿಗಳಿಗೆ ಹೊರರೋಗಿ ಚಿಕಿತ್ಸೆ(ಒಪಿಡಿ) ದೊರೆಯಲಿವೆ. ರಕ್ತ, ಮೂತ್ರ ಪರೀಕ್ಷೆ ಸೇರಿ ಸಾಮಾನ್ಯ ಪ್ರಯೋಗಾಲಯ ಸೇವೆಗಳು, ಕೆಲವು ಉಚಿತ ಔಷಧ ವಿತರಣೆ, ಮಧುಮೇಹ, ರಕ್ತದೊತ್ತಡದಂತಹ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದಲ್ಲಿ ರೋಗಿಗಳನ್ನು ಮೇಲ್ಮಟ್ಟದ ಆರೋಗ್ಯ ಸಂಸ್ಥೆಗಳಿಗೆ ಶಿಫಾರಸು ಮಾಡುವುದು. ಶುಕ್ರವಾರ ನಡೆಯುವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತ ನಂತರ ಯೋಜನೆ ಜಾರಿ ಆರಂಭವಾಗುತ್ತದೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ | ಪಂಜಾಬ್‌ ಆಮ್‌ ಆದ್ಮಿ ಸರ್ಕಾರದ ಮೊದಲ ಬಜೆಟ್‌ ಮಂಡನೆ; ರೈತರು, ವಿದ್ಯಾರ್ಥಿಗಳಿಗೆ ಬಂಪರ್‌

ನಗರವಾಸಿಗಳೇ ಟಾರ್ಗೆಟ್‌

ರಾಜ್ಯದಲ್ಲಿ ಈಗಾಗಲೆ ಪ್ರತಿ 50 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇದನ್ನು ಪ್ರತಿ 10 ಸಾವಿರ ಜನಸಂಖ್ಯೆಗೆ ಏರಿಕೆ ಮಾಡಬೇಕೆಂಬ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಹೆಚ್ಚಿನ ಆರೋಗ್ಯ ಕೇಮದ್ರಗಳು ಗ್ರಾಮೀಣಪ್ರದೇಶಗಳಲ್ಲಿವೆ. ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸ್ಲಂ, ಕಾರ್ಮಿಕರು ವಾಸಿಸುವ ಸ್ಥಳಗಳ ಸುತ್ತಮತ್ತ ʻನಮ್ಮ ಕ್ಲಿನಿಕ್‌ʼ ಆರಂಭಿಸಲು ನಿರ್ಧಾರ ಮಾಡಲಾಗಿದೆ. ಈ ಕುರಿತು ರಾಜ್ಯ ಬಜೆಟ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು.

ನಗರ ಪ್ರದೇಶದಲ್ಲಿರುವ ಬಡತನದ ಬಗ್ಗೆ ಇತ್ತೀಚೆಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರವೂ ನಗರ ಬಡತನ ನಿರ್ಮೂಲನೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮಾದರಿಯಲ್ಲಿ ನಗರದಲ್ಲಿರುವ ಕೆಳ ಮಧ್ಯಮ ವರ್ಗ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರ ಆರೋಗ್ಯ ಸಂರಕ್ಷಣೆಗೆ ಈ ಯೋಜನೆ ಘೋಷಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ವಾರ್ಡ್‌ಗೆ ಒಂದು ಕ್ಲಿನಿಕ್‌

ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿದ ನಂತರ ಬೆಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ 243 ಕೇಂದ್ರಗಳನ್ನು ಆರಂಭಿಸಲು ನಿರ್ಧರಿಸಲಾಗಿತ್ತು. ಇಲ್ಲಿವರೆಗೆ ಬಿಬಿಎಂಪಿಯಲ್ಲಿ 198 ವಾರ್ಡ್‌ಗಳಿದ್ದು, ಇದೀಗ ಹೊಸದಾಗಿ ವಾರ್ಡ್‌ ಮರುವಿಗಡಣೆಯಲ್ಲಿ 243ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗಾಗಿ ವಾರ್ಡ್‌ಗೆ ಒಂದರಂತೆ ನಮ್ಮ ಕ್ಲಿನಿಕ್‌ ಘೋಷಣೆ ಮಾಡಲಾಗಿತ್ತು. ಈಗಾಗಲೆ ಬಿಬಿಎಂಪಿ ವತಿಯಿಂದ ಕಟ್ಟಡಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದೀಗ ರಾಜ್ಯ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯೋಜನೆಗಾಗಿ 15ನೇ ಹಣಕಾಸು ಆಯೋಗದ ಅನುದಾನವನ್ನು ಬಳಕೆ ಮಾಡಿಕೊಳ್ಳಲು ನಿರ್ಧಾರ ಮಾಡಲಾಗಿದೆ. 155. 77 ಕೋಟಿ ರೂ. ವೆಚ್ಚದಲ್ಲಿ 438 ನಮ್ಮ ಕ್ಲಿನಿಕ್‌ ಆರಂಭಿಸಲಾಗುತ್ತದೆ. ಅಂದರೆ ಪ್ರತಿ ಕ್ಲಿನಿಕ್‌ಗೆ ಸರಾಸರಿ 35 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಪ್ರತಿ ಕ್ಲಿನಿಕ್‌ನಲ್ಲಿ ಪಾಳಿಯ ಆಧಾರದಲ್ಲಿ ಆರು ಸಿಬ್ಬಂದಿ ಇರಲಿದ್ದು, ಕೆಲವು ಪ್ರಾಥಮಿಕ ಪರೀಕ್ಷಾ ಉಪಕರಣಗಳನ್ನು ಖರೀದಿಸಲು ಹಾಗೂ ನಿರ್ವಹಿಸಲು ಈ ಹಣವನ್ನು ಬಳಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಪಂಜಾಬ್‌ನಲ್ಲೂ ಆರಂಭ

ನವ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್‌ ಪ್ರಯೋಗ ಸಫಲವಾದ ನಂತರ ಇತ್ತೀಚೆಗೆ ಪಂಜಾಬ್‌ನಲ್ಲೂ ಜಾರಿಗೆ ನಿರ್ಧಾರ ಮಾಡಲಾಗಿದೆ. ಈತ್ತೀಚೆಗೆ ಅಧಿಕಾರಕ್ಕೆ ಬಂದ ಆಮ್‌ ಆದ್ಮಿ ಸರ್ಕಾರ ತನ್ನ ಮೊದಲ ಬಜೆಟ್‌ನಲ್ಲಿ ಇದನ್ನು ಘೋಷಣೆ ಮಾಡಿತ್ತು. ಅದಕ್ಕಾಗಿ 77ಕೋಟಿ ರೂಪಾಯಿ ಮೀಸಲಾಗಿಟ್ಟಿದ್ದು, ಈ ವರ್ಷ ಒಟ್ಟು ೧೧೭ ಕ್ಲಿನಿಕ್‌ಗಳು ಸ್ಥಾಪನೆಯಾಗಲಿವೆ. ಅದರಲ್ಲಿ 75 ಆಗಸ್ಟ್‌ನಿಂದ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Vegetable Rates: ತರಕಾರಿ ಮುಟ್ಟಿದರೆ ಶಾಕ್‌, ಕಿಲೋಗೆ 320 ದಾಟಿದ ಬೀನ್ಸ್!‌

Vegetable Rates: ಬೀನ್ಸ್‌ನ ಬೆಲೆ ಬೆಂಗಳೂರಿನಲ್ಲಿ ನಿನ್ನೆಯೇ ಒಂದು ಕೆಜಿಗೆ 200 ರೂ. ಗಡಿ ದಾಟಿದೆ. ಕಳೆದ ವಾರ 60ರಿಂದ 80 ರೂಪಾಯಿ ಇದ್ದ ಬೀನ್ಸ್ ಬೆಲೆ ಈ ವಾರ ಮುಗಿಲು ಮುಟ್ಟಿದೆ. ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಯಲ್ಲಿ ಬೀನ್ಸ್‌ 160ರಿಂದ 190 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆ ಹೊರಗಡೆ 180ರಿಂದ 230 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ತಾಜಾ ಬೀನ್ಸ್‌ ಸಿಗುತ್ತಿಲ್ಲ.

VISTARANEWS.COM


on

vegetable rates increase
Koo

ಬೆಂಗಳೂರು: ರಾಜಧಾನಿ ಹಾಗೂ ರಾಜ್ಯದ ಇತರ ಕಡೆಗಳಲ್ಲೂ ತರಕಾರಿ ಬೆಲೆಗಳು (vegetable rates increase) ಗಗನಕ್ಕೇರಿವೆ. ಶ್ರೀಸಾಮಾನ್ಯನ ಕೈ ಸುಡುತ್ತಿರುವ ತರಕಾರಿ ಬೆಲೆಗಳನ್ನು ಕಂಡು ವರ್ತಕರಿಗೆ ಕೂಡ ಚಿಂತೆಯಾಗಿದೆ. ಬೀನ್ಸ್‌ ದರ (Beans rate) ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆ.ಜಿ. ಬೀನ್ಸ್‌ ಬರೋಬ್ಬರಿ 200- 320 ರೂ.ವರೆಗೆ ತಲುಪಿದೆ. ರಾಜಧಾನಿಯ ಕೆಂಗೇರಿ, ಹೆಬ್ಬಾಳ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 200 ರೂ. ಇದ್ದರೆ, ಜಯನಗರ ಮತ್ತಿತರ ಬಡಾವಣೆಗಳಲ್ಲಿ ಕೆ.ಜಿ.ಗೆ 320 ರೂ. ಇದೆ.

ಬೀನ್ಸ್‌ನ ಬೆಲೆ ಬೆಂಗಳೂರಿನಲ್ಲಿ ನಿನ್ನೆಯೇ ಒಂದು ಕೆಜಿಗೆ 200 ರೂ. ಗಡಿ ದಾಟಿದೆ. ಕಳೆದ ವಾರ 60ರಿಂದ 80 ರೂಪಾಯಿ ಇದ್ದ ಬೀನ್ಸ್ ಬೆಲೆ ಈ ವಾರ ಮುಗಿಲು ಮುಟ್ಟಿದೆ. ಬೆಂಗಳೂರಿನ ಕೆ.ಆರ್‌ ಮಾರುಕಟ್ಟೆಯಲ್ಲಿ ಬೀನ್ಸ್‌ 160ರಿಂದ 190 ರೂಪಾಯಿಗೆ ಮಾರಾಟವಾಗುತ್ತಿದೆ. ಮಾರುಕಟ್ಟೆ ಹೊರಗಡೆ 180ರಿಂದ 230 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ತಾಜಾ ಬೀನ್ಸ್‌ ಸಿಗುತ್ತಿಲ್ಲ.

ಅಕಾಲಿಕ ತಾಪಮಾನ ಹಾಗೂ ಮಳೆಯಿಂದಾಗಿ ಇಳುವರಿ ನೆಲಕಚ್ಚಿದ ಪರಿಣಾಮ ಬೆಲೆಗಳು ಏರಿವೆ. ಫೆಬ್ರವರಿಯಿಂದಲೇ ಆರಂಭವಾದ ಬಿಸಿಲ ಧಗೆ ಮಾರ್ಚ್, ಏಪ್ರಿಲ್‌ನಲ್ಲಿ ತುತ್ತ ತುದಿಗೆ ತಲುಪಿತ್ತು. ಬರಗಾಲದಿಂದಾಗಿ ನೀರಿನ ಸಮಸ್ಯೆ ಉಲ್ಬಣಿಸಿತ್ತು. ಹಲವೆಡೆ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದವು. ಹೀಗಾಗಿ, ತರಕಾರಿ ಬೆಳೆಗಳು ಕೆಲವೆಡೆ ಒಣಗಿವೆ. ಮತ್ತೆ ಕೆಲವೆಡೆ ಬೆಳೆಯಾದರೂ ಹೂ ಉದುರಲು ಅರಂಭಿಸಿತು. ಹೀಗಾಗಿ, ಬೀನ್ಸ್‌ನ ಉತ್ಪಾದನೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಯಿತು. ಇದೇ ಅವಧಿಯಲ್ಲಿ ಶುಭ ಸಮಾರಂಭಗಳ ಸೀಸನ್‌ ಬಂದುದರಿಂದ ಬೀನ್ಸ್‌ ಸೇರಿ ತರಕಾರಿಗೆ ಹೆಚ್ಚಿನ ಬೇಡಿಕೆ ಬಂತು. ಆದರೆ, ಬೇಡಿಕೆಗೆ ತಕ್ಕಂತೆ ಪೂರೈಕೆಯಾಗದ ಹಿನ್ನೆಲೆಯಲ್ಲಿ ಏಲ್ಲ ತರಕಾರಿಗಳ ಬೆಲೆ ಏರಿಕೆಯಾಗಿದೆ.

ಬೀನ್ಸ್ ಜೊತೆಗೆ ಗೆಡ್ಡೆಕೂಸು, ಬೀಟ್ರೂಟ್, ಹೀರೇಕಾಯಿ ಎಲ್ಲದರ ದರವೂ ಏರಿಕೆಯಾಗಿದೆ. ಬೆಲೆಗಳು ಹೀಗಿವೆ:

ಬೀನ್ಸ್ : ₹180- ₹230
ಈರುಳ್ಳಿ : ₹30
ಬೀಟ್ರೂಟ್ : ₹40
ಬೆಂಡೆಕಾಯಿ : ₹45
ಗೆಡ್ಡೆಕೂಸು : ₹60
ಕ್ಯಾಪ್ಸಿಕಂ : ₹75 – ₹90
ಹೀರೇಕಾಯಿ : ₹50
ಬೆಳ್ಳುಳ್ಳಿ ₹300
ಆಲೂಗಡ್ಡೆ ₹40
ಕ್ಯಾರೆಟ್ ₹50
ಬೀಟ್‌ರೂಟ್ ₹100
ಟೊಮ್ಯಾಟೊ ₹50
ಎಲೆಕೋಸು ₹40
ಹೂಕೋಸು ಒಂದಕ್ಕೆ ₹40
ಬದನೆಕಾಯಿ ₹80

ಕೊತ್ತಂಬರಿ ಒಂದು ಕಟ್ಟು ₹50
ಪಾಲಕ್ ₹40
ಪುದಿನಾ ₹10
ಸಬ್ಸಿಗೆ ₹50
ಮೆಂತ್ಯ ₹50
ನುಗ್ಗೆಕಾಯಿ ಒಂದಕ್ಕೆ- ₹10- ₹12

ಇದನ್ನೂ ಓದಿ: Karnataka Weather: ಇಂದು ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Continue Reading

ವಿಜಯನಗರ

Medical Negligence: ಅಮಾಯಕ ಬಾಲಕನ ಜೀವ ತೆಗೆದ ಆಸ್ಪತ್ರೆಗೆ ಬೀಗ!

Vistara News impact: ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಮರಾವತಿಯಲ್ಲಿರುವ ಶರಣಂ ಆಸ್ಪತ್ರೆಯಲ್ಲಿ ಮೇ 9ರಂದು ಗೌತಮ್ (9) ಎನ್ನುವ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅಂದೇ ಮೃತನ ಬಂಧುಗಳು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪಿಸಿ ಶವ ಇಟ್ಟು ಪ್ರತಿಭಟನೆ ಮಾಡಿದ್ದರು.

VISTARANEWS.COM


on

vistara news impact medical negligence
Koo

ವಿಜಯನಗರ: ವಿಸ್ತಾರ ನ್ಯೂಸ್ ವರದಿಯಿಂದ ಮತ್ತೊಂದು ಬಿಗ್ ಇಂಪ್ಯಾಕ್ಟ್ (Vistara News impact) ಆಗಿದೆ. KPME ಕಾಯಿದೆ ಉಲ್ಲಂಘಿಸಿ ಅಮಾಯಕ ರೋಗಿಗಳ ಜೀವ ತೆಗೆದ ಆರೋಪದ (medical negligence) ಹಿನ್ನೆಲೆಯಲ್ಲಿ, ಹೊಸಪೇಟೆಯ ಶರಣಂ ಆಸ್ಪತ್ರೆ ಮುಚ್ಚಲು ಆದೇಶ ನೀಡಲಾಗಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಮರಾವತಿಯಲ್ಲಿರುವ ಶರಣಂ ಆಸ್ಪತ್ರೆಯಲ್ಲಿ ಮೇ 9ರಂದು ಗೌತಮ್ (9) ಎನ್ನುವ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಅಂದೇ ಮೃತನ ಬಂಧುಗಳು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪಿಸಿ ಶವ ಇಟ್ಟು ಪ್ರತಿಭಟನೆ ಮಾಡಿದ್ದರು.

ಈ ಹಿಂದೆಯೂ ಈ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಕೆಲವು ಸಾವುಗಳು ಸಂಭವಿಸಿರುವ ಆರೋಪಗಳು ಇವೆ. ಆಗಲೂ ಆಸ್ಪತ್ರೆ ಎದುರು ಪಾಲಕರು ಶವವಿಟ್ಟು ಪ್ರತಿಭಟನೆ ಮಾಡಿದ್ದರು. ಶವವಿಟ್ಟು ಪ್ರತಿಭಟನೆ ಮಾಡಿದಾಗ ಶಾಸಕ ಗವಿಯಪ್ಪ, DHO ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದನ್ನು ವಿಸ್ತಾರ ನ್ಯೂಸ್ ಬಿತ್ತರಿಸಿತ್ತು.

ಪದೇ ಪದೆ ನಿರ್ಲಕ್ಷ್ಯ ತೋರಿದ ಖಾಸಗಿ ಆಸ್ಪತ್ರೆ ವಿರುದ್ಧ ಇದೀಗ ಆರೋಗ್ಯ ಇಲಾಖೆ ಸಮರ ಸಾರಿದೆ. ಸಾವಿನ ವರದಿ ಆಧರಿಸಿ ವಿಜಯನಗರ ಜಿಲ್ಲಾಡಳಿತ ಡೆತ್ ಆಡಿಟ್‌ಗೆ ಆದೇಶ ನೀಡಿತ್ತು. ವಿಜಯನಗರ ಡಿಸಿ ದಿವಾಕರ್ ಎಂಎಸ್ ಆರೋಗ್ಯ ಇಲಾಖೆಗೆ ತನಿಖೆಗೆ ಸೂಚಿಸಿದ್ದರು. ತನಿಖೆಯ ಬಳಿಕ, ರೋಗಿಗಳ ಜತೆ ಚೆಲ್ಲಾಟವಾಡುವ ಖಾಸಗಿ ಆಸ್ಪತ್ರೆಗೆ ಸದ್ಯ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಸದ್ಯ ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಬೇರೆಕಡೆ ಸ್ಥಳಾಂತರ ಮಾಡಲು ಸೂಚಿಸಿದೆ.

KPME (Karnataka Private Medical Establishment Act) ಕಾಯಿದೆಯು ಖಾಸಗಿ ಆಸ್ಪತ್ರೆಗಳನ್ನು ರಾಜ್ಯ ಸರ್ಕಾರದ ಅಧಿಕಾರದ ವ್ಯಾಪ್ತಿಯೊಳಗೆ ತರುತ್ತಿದ್ದು, ಆರೋಗ್ಯ ಸೇವೆಯಲ್ಲಿ ಕಳಪೆ ಗುಣಮಟ್ಟ, ನಿರ್ಲಕ್ಷ್ಯ, ಸೇವಾ ನ್ಯೂನತೆಗಳು ಕಂಡುಬಂದಲ್ಲಿ ತಕ್ಕ ಕ್ರಮಗಳನ್ನು ಕೈಗೊಳ್ಳುವ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡುತ್ತದೆ.

ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ ಸಾವು; 35 ಲಕ್ಷ ಬಿಲ್‌ ಕಟ್ಟಿ ಮೃತದೇಹ ತೆಗೆದುಕೊಳ್ಳಿ ಎಂದ ಆಸ್ಪತ್ರೆ!

ಬೆಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಬೆನ್ನಲ್ಲೇ ತಾಯಿ (Mother Dies) ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಗರದ ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಅವಧಿಪೂರ್ವ ಹೆರಿಗೆಯಾದ ಬಳಿಕ ಆರೋಗ್ಯ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಬಾಣಂತಿ ಮೃತಪಟ್ಟಿದ್ದಾರೆ. ಇದಕ್ಕೆ ಕ್ಲೌಡ್‌ನೈನ್‌ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಜನನಿ (33) ಮೃತ ಬಾಣಂತಿ. ಕ್ಲೌಡ್‌ನೈನ್‌ (CloudNine) ಆಸ್ಪತ್ರೆಯಲ್ಲಿ ಐವಿಎಫ್‌ ಮೂಲಕ ಜನನಿ ಮತ್ತು ಕೇಶವ್ ದಂಪತಿ ಮಕ್ಕಳನ್ನು ಪಡೆದಿದ್ದರು. ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮೇ 2ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗಾಗಿ ದಂಪತಿ ಹೆರಿಗೆ ಪ್ಯಾಕೇಜ್ ಮಾಡಿಸಿದ್ದರು. ಜನನಿಗೆ ಅವಧಿ ಪೂರ್ವ (7.5 ತಿಂಗಳಿಗೆ) ಹೆರಿಗೆ ಆಗಿತ್ತು. ನಂತರ ಆಕೆಗೆ ಜಾಂಡೀಸ್ ಇದೆ, ಲಿವರ್ ಸಮಸ್ಯೆ ಇದೆ ಎಂದು ವೈದ್ಯರು ಹೇಳಿದ್ದರು, ಪರಿಸ್ಥಿತಿ ಗಂಭೀರವಾಗಿದ್ದರಿಂದ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು. ಆದರೆ ಬುಧವಾರ ಬೆಳಗ್ಗೆ ಜನನಿ ಸಾವನ್ನಪ್ಪಿದ್ದಾರೆ.

ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ 30 ಲಕ್ಷ ಬಿಲ್‌ ಆಗಿದ್ದು, ಈ ಬಿಲ್ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದಾರೆ. ಆದರೆ ಕ್ಲೌಡ್‌ನೈನ್‌ ಆಸ್ಪತ್ರೆಯವರ ನಿರ್ಲಕ್ಷ್ಯಕ್ಕೆ ಜನನಿ ಸಾವಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಬಿಲ್ ಅನ್ನು CloudNine ಆಸ್ಪತ್ರೆಯೇ ಪಾವತಿಸಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಜೆ.ಬಿ.ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಮೃತ ಜನನಿ ಪತಿ ಕೇಶವ್‌ ಪ್ರತಿಕ್ರಿಯಿಸಿ, ಕಳೆದ ತಿಂಗಳು ಪರೀಕ್ಷೆಗೆ ಬಂದಾಗ ವೈದ್ಯರು ಕೆಲವು ಮಾತ್ರೆಗಳನ್ನು ಕೊಟ್ಟಿದ್ದರು. ನಂತರ ನನ್ನ ಹೆಂಡತಿಗೆ ಕಾಲು ಊತ ಸೇರಿ ಆರೋಗ್ಯದಲ್ಲಿ ಕೆಲ ಸಮಸ್ಯೆ ಕಂಡುಬಂತು. ಮೇ 2ರಂದು ತಾರಿಖು ಬೆಳಗ್ಗೆ ಚಿಕಿತ್ಸೆಗೆ ಬಂದಿದ್ದೆವು, ಅಂದು ಎರಡು ಮಗು ಡೆಲಿವರಿ ಆಯ್ತು. ಆವತ್ತು ಬೆಳಗ್ಗೆ 11 ಗಂಟೆಗೆ ಹೆಂಡತಿಯನ್ನು ಮಾತನಾಡಿಸಿದಾಗ ಚೆನ್ನಾಗಿದ್ದಳು. ಇದ್ದಕ್ಕಿದ್ದಂತೆ ಸೀರಿಯಸ್ ಆಗಿದೆ ಎಂದರು. ನಂತರ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದರು. ಈಗ ಪೇಮೆಂಟ್ ಮಾಡಿದರೆ ಮಾತ್ರ ನನ್ನ ಹೆಂಡತಿ ಮೃತದೇಹ ಸಿಗುತ್ತೆ ಎನ್ನುತ್ತಿದ್ದಾರೆ. 11 ಲಕ್ಷದ ಮೆಡಿಸಿನ್ ತಂದಿದ್ದೆ. 30 ಲಕ್ಷ ಬಿಲ್ ಆಗಿದೆ. ಇವರು ಮಾಡಿದ ತಪ್ಪಿನಿಂದ ನಮಗೆ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.

ಕ್ಲೌಡ್‌ನೈನ್‌ ಆಸ್ಪತ್ರೆಯಲ್ಲಿ ಹೆರಿಗೆಗೆ 1 ಲಕ್ಷ 30 ಸಾವಿರ ಪ್ಯಾಕೇಜ್ ಇತ್ತು. ಇಲ್ಲೂ 25 ಲಕ್ಷ ಬಿಲ್ ಆಗಿದೆ, ಮಣಿಪಾಲ್‌ ಆಸ್ಪತ್ರೆಯಲ್ಲೂ 30 ಲಕ್ಷ ಬಿಲ್ ಆಗಿದೆ. ಇವರ ಎಡವಟ್ಟಿನಿಂದ ಅಲ್ಲಿ ಹಣ ಕಟ್ಟಿ ಮೃತದೇಹ ತರಬೇಕಾದ ಪರಿಸ್ಥಿತಿ ಬಂದಿದೆ. ಈಗ ತಪ್ಪು ನೀವು ಮಾಡಿದ್ದು, ನೀವೇ ಪರಿಹಾರ ನೀಡಬೇಕು ಎಂದು ಕೇಳಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | Assault Case: ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

Continue Reading

ಪ್ರವಾಸ

Hampi Tour: ಹಂಪಿ ಪ್ರವಾಸದ ವೇಳೆ ಈ 10 ಸ್ಥಳಗಳಲ್ಲಿ ರಾಮಾಯಣದ ಕುರುಹುಗಳನ್ನು ಹುಡುಕಿ!

ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ಹಂಪಿಯ (Hampi Tour) ಕಣಕಣದಲ್ಲೂ ಅದರ ಸೌಂದರ್ಯ ಅಡಗಿದೆ. ಪ್ರತಿಯೊಂದು ಹಾದಿಯೂ ತನ್ನದೇ ಆದ ಕಥೆಯನ್ನು ಹೇಳುತ್ತದೆ. ನಾವು ಶೋಧಿಸುತ್ತಾ ಹೋದಂತೆ ಮತ್ತಷ್ಟು ಹೊಸಹೊಸ ಕಥೆಗಳು ಹುಟ್ಟಿಕೊಳ್ಳುತ್ತವೆ.

VISTARANEWS.COM


on

By

Hampi Tour
Koo

ಧುಮ್ಮಿಕ್ಕುವ ತುಂಗಭದ್ರೆಯ (Tungabhadra) ಪಕ್ಕದಲ್ಲಿ ಗ್ರಾನೈಟ್ ಬಂಡೆಗಳ ಕಣಿವೆಗಳ ನಡುವೆ ಸುತ್ತುವರೆದಿರುವ ಹಂಪಿಯ (Hampi Tour) ಅವಶೇಷಗಳು ಇಂದಿಗೂ ಶ್ರೀಮಂತ ವಿಜಯನಗರ (vijayanagar) ಪರಂಪರೆಯನ್ನು ಪ್ರದರ್ಶಿಸುತ್ತಿವೆ. ವಿಠ್ಠಲ ದೇವಾಲಯ ಮತ್ತು ಪುರಾತನ ಕಲ್ಲಿನ ರಥದಂತಹ ಸಾಂಪ್ರದಾಯಿಕ ಆಕರ್ಷಣೆಗಳು ದೀರ್ಘಕಾಲಿಕ ಪ್ರವಾಸಿಗರನ್ನು ಸೆಳೆದರೂ ಇಲ್ಲಿ ಹಲವಾರು ಗುಪ್ತ ರತ್ನಗಳಿದ್ದು ಸಂಶೋಧಕ ಮನವುಳ್ಳವರನ್ನು ಬರ ಸೆಳೆಯುವುದು.

ಹಸಿರು ತೋಪುಗಳು, ಅಸ್ಪಷ್ಟವಾದ ಹಳ್ಳಿಯ ಗೂಡುಗಳು ಮತ್ತು ರಮಣೀಯ ಜಲಮೂಲಗಳು ಭವ್ಯವಾದ ಸಂಪತ್ತು ಇಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಹಲವಾರು ಕಲ್ಲಿನ ಗುಹೆಗಳಿಂದ ಹಿಡಿದು ಪಾಕಶಾಲೆಯ ರಹಸ್ಯಗಳು ಇನ್ನೂ ಇಲ್ಲಿ ಜೀವಂತವಾಗಿವೆ. ಹಂಪಿಯ ಆಕರ್ಷಣೆಯನ್ನು ಹೆಚ್ಚಿಸುವ ಇಲ್ಲಿ ಹಲವು ತಾಣಗಳಿದ್ದು, ಅವುಗಳಲ್ಲಿ ಹತ್ತು ಹೆಚ್ಚು ಸಂತೋಷವನ್ನು ಕೊಡುತ್ತದೆ.


ಅಂಜನಾದ್ರಿ ಬೆಟ್ಟ

ತುಂಗಭದ್ರಾ ನದಿಗೆ ಅಡ್ಡಲಾಗಿ ನೆಲೆಗೊಂಡಿರುವ ಅಂಜನಾದ್ರಿಯು ಒಂದು ಪವಿತ್ರ ಯಾತ್ರಾಸ್ಥಳ. ಇದು ಒಂದು ತುಲನಾತ್ಮಕವಾಗಿ ಅನಿಯಂತ್ರಿತ ಆಕರ್ಷಣೆಯನ್ನು ಶಾಶ್ವತವಾದ ಸಿದ್ಧಾಂತದೊಂದಿಗೆ ವಿಲೀನಗೊಳಿಸುವ ಪ್ರಕೃತಿಯ ಸೌಂದರ್ಯವನ್ನು ವಿವರಿಸುತ್ತದೆ. ರಾಮಾಯಣದ ಪ್ರಕಾರ ಇದು ಶಿವ- ವಾಯುವಿನ ಶಕ್ತಿ ರೂಪವಾದ ಹನುಮಂತನು ಅಂಜನಿ ದೇವಿಯ ಗರ್ಭದಿಂದ ಜನಿಸಿದ ಕ್ಷೇತ್ರವಿದು. ಸೀತಾ ದೇವಿ ಇಲ್ಲಿಗೆ ಬಂದ ಬಳಿಕ ಈ ಕ್ಷೇತ್ರ ಹೆಚ್ಚು ಪ್ರಸಿದ್ಧವಾಯಿತು ಎನ್ನಲಾಗುತ್ತದೆ. ಇದು ಇನ್ನೂ ಇಲ್ಲಿ ಗುಪ್ತವಾಗಿಯೇ ಉಳಿದಿದೆ. ಕೇವಲ ಹತ್ತು ನಿಮಿಷಗಳ ಮೋಟಾರು ದೋಣಿಯ ಮೂಲಕ ನೀರಿನಲ್ಲಿ ಸಂಚರಿಸಿ ಈ ಬೆಟ್ಟವನ್ನು ಕಾಣಬಹುದು.


ಪುರಂದರ ದಾಸ ಗುಹಾ ದೇವಾಲಯ

ಪುರಂದರ ದಾಸ ಗದ್ದಿಯಲ್ಲಿರುವ ಅಸ್ಪಷ್ಟವಾದ ಗುಹೆ ದೇವಾಲಯವು ಪಾರಂಪರಿಕ ಸಂಗೀತ ಸ್ಮಾರಕವಾಗಿದೆ. ಇದು ಸಂತ ಪುರಂದರ ದಾಸರು ಇಲ್ಲಿ ಧ್ಯಾನ ಮಗ್ನರಾಗಿರುತ್ತಿದ್ದರು ಎಂದು ನಂಬಲಾಗಿದೆ. 15ನೇ ಶತಮಾನದ ಈ ತಾಣವು ನೈಸರ್ಗಿಕವಾಗಿ ರೂಪುಗೊಂಡ ಗ್ರಾನೈಟ್ ಗುಹೆಗಳನ್ನು ಜೊತೆಗೆ ಪ್ರಾಚೀನ ಲಿಂಗದ ಅವಶೇಷಗಳನ್ನು ಹೊಂದಿದೆ. ಸಾಧುಗಳು ಮತ್ತು ಸಂಗೀತಗಾರರು ಆಗಾಗ್ಗೆ ಇಲ್ಲಿಗೆ ಭೇಟಿ ಮಾಡುತ್ತಾರೆ.


ಅಚ್ಯುತರಾಯ ದೇವಸ್ಥಾನ

ಅಚ್ಯುತರಾಯ ದೇವಾಲಯದ ಸಂಕೀರ್ಣದ ಕಥೆಯು ನಿರಂತರ ರಾಜವಂಶದ ಭಕ್ತಿಯ ಸುತ್ತ ಸುತ್ತುತ್ತದೆ. ತುಂಗಭದ್ರಾ ನದಿಯಿಂದ ಸುತ್ತುವರಿದಿರುವ 16ನೇ ಶತಮಾನದ ಸಂಕೀರ್ಣವಾದ ಇದು ಸಹೋದರ ಲಕ್ಷ್ಮಣನ ಜೊತೆಯಲ್ಲಿ ಭಗವಾನ್ ರಾಮನ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ಅನನ್ಯವಾದ ಅವಳಿ ಗರ್ಭಗುಡಿಯ ದೇವಾಲಯವಾಗಿದೆ. ಧರ್ಮನಿಷ್ಠ ವಿಜಯನಗರ ಚಕ್ರವರ್ತಿ ಅಚ್ಯುತದೇವ ರಾಯರಿಂದ ಸ್ಥಾಪಿಸಲ್ಪಟ್ಟಿದೆ. ವಿಟ್ಲ ದೇವಸ್ಥಾನದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಲ್ಲಿ ಈ ದೇವಾಲಯವನ್ನು ತಲುಪಬಹುದು.


ಸಣಾಪುರ ಸರೋವರ

ಹೆಚ್ಚಿನ ನಗರ ಪ್ರದೇಶಗಳು ಕಾಂಕ್ರೀಟ್ ಉದ್ಯಾನಗಳ ಮೂಲಕ ಪ್ರಕೃತಿಯ ಆನಂದವನ್ನು ಮಿತಿಗೊಳಿಸುತ್ತವೆ. ಆದರೆ ಗಮನಾರ್ಹವಾಗಿ ರಾಜಮನೆತನದ ಹಂಪಿ ಅರಮನೆಯ ಒಳ ನೋಟಗಳು ಹಳ್ಳಿಗಾಡಿನ ವಿಹಾರದ ಆನಂದವನ್ನು ಒದಗಿಸುತ್ತದೆ. ಸಣಾಪುರವು ವಿಟ್ಲ ದೇವಸ್ಥಾನದ ಹಿಂದೆ ಕೇವಲ ಎರಡು ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಈ ಪಾದಯಾತ್ರೆಯ ಹಾದಿ ಮರದ ಏರಿಳಿತಗಳೊಂದಿಗೆ ಭಾಗಶಃ ಸಂತೋಷಕರ ಪಿಕ್ನಿಕ್ ವಲಯವಾಗಿ ಮಾರ್ಪಡಿಸಲಾಗಿದೆ. ಸ್ಥಳೀಯ ಇತಿಹಾಸ, ಪುರಾತನ ಜಲಮೂಲ ಇಲ್ಲಿ ಪ್ರವಾಸಕ್ಕೆ ಮತ್ತಷ್ಟು ಸಂತೋಷವನ್ನು ತುಂಬಿಕೊಡುತ್ತದೆ. ಗ್ರೋವ್ ಹೂವುಗಳ ಸುವಾಸನೆ ತಂಗಾಳಿಯಲ್ಲಿ ದೋಣಿ ಸವಾರಿ, ಹಠಾತ್ತನೆ ಕಾಣಿಸುವ ಬೆಳ್ಳಕ್ಕಿಗಳು ಆಕರ್ಷಕ ಚಿತ್ರವನ್ನು ಮನದಲ್ಲಿ ಕೆತ್ತಿಸುತ್ತದೆ. ಮಾನವ ನಿರ್ಮಿತ ಆಕ್ವಾ ವಾಸ್ತುಶಿಲ್ಪಗಳ ಸೌಂದರ್ಯವನ್ನು ಇಲ್ಲಿ ಕಾಣಬಹುದು.


ಮಾತಂಗ ಬೆಟ್ಟಗಳು

ರಾಯಲ್ ಸೆಂಟರ್‌ನ ಪೂರ್ವದ ಮಾತಂಗ ಬೆಟ್ಟ ನೈಸರ್ಗಿಕ ಗ್ರಾನೈಟ್ ಬಂಡೆಗಳಲ್ಲಿ ಸುತ್ತುವರಿಯಲ್ಪಟ್ಟಿದೆ. ಪೌರಾಣಿಕ ಋಷಿ ಮಾತಂಗನ ಹೆಸರನ್ನು ಈ ಸ್ಥಳ ನೆನಪಿಸುತ್ತದೆ. ಪಕ್ಷಿಗಳು ಮತ್ತು ಲಾಂಗೂರ್ ಕೋತಿಗಳ ಗುಂಪುಗಳು ಗಮನ ಸೆಳೆಯುತ್ತವೆ. ಚಾರಣಪ್ರಿಯರು ಇಷ್ಟಪಡುವ ತಾಣವಿದು. ಕೆಲವು ಗಂಟೆಗಳಲ್ಲಿ ಹತ್ತಿ ಇಳಿಯಬಹುದು.


ಕಮಲಾಪುರ ಗ್ರಾಮ

ಮಾರುಕಟ್ಟೆ ಬೀದಿಗಳ ಆಚೆಗೆ ಇರುವ ಈ ಹಳ್ಳಿ ಇನ್ನೂ ಪುರಾತನ ದಿನಗಳನ್ನು ನೆನಪಿಸುತ್ತದೆ. ಮುಖ್ಯ ಪಟ್ಟಣದಿಂದ 14 ಕಿಲೋಮೀಟರ್ ದೂರದಲ್ಲಿರುವ ಕಮಲಾಪುರ ಕೃಷಿ ವಸಾಹತು, ಮಧ್ಯಕಾಲೀನ ಯುಗದ ಮಾಂತ್ರಿಕ ದೇವಾಲಯದ ಗೋಪುರಗಳನ್ನು ಹೊಂದಿದೆ. ಪಚ್ಚೆ ಹೊಲಗಳ ನಡುವೆ ವಾರ್ಷಿಕ ಜಾತ್ರೆಗಳು ಇಲ್ಲಿ ಸೌಂದರ್ಯವನ್ನು ಸಾರುತ್ತದೆ. ಇಲ್ಲಿನ ಹಿರಿಯರು ಸುಮಾರು ಒಂದು ಶತಮಾನದ ಹಿಂದೆ ತಮ್ಮ ಬಾಲ್ಯದಿಂದಲೂ ಹಾಳಾದ ಕೋಟೆಗಳ ಬಗ್ಗೆ ಆಸಕ್ತಿದಾಯಕ ಕಥೆಗಳನ್ನು ವಿವರಿಸುತ್ತಿದ್ದರೆ ಕೇಳುವುದೇ ಚಂದ. ಹಳ್ಳಿಯ ಪಾಕಪದ್ಧತಿಯು ಇಲ್ಲಿ ಎಲ್ಲರ ತನುಮನವನ್ನು ಸಂತೃಪ್ತಗೊಳಿಸುವುದು.


ರಘುನಾಥಸ್ವಾಮಿ ದೇವಾಲಯ

ಗತಕಾಲದ ವಾಸ್ತುಶೈಲಿ ಇನ್ನೂ ಅಖಂಡವಾಗಿರುವ ದೇವಾಲಯವಿದು. ರಘುನಾಥಸ್ವಾಮಿ ದೇವಾಲಯವು ಅಚ್ಚರಿಯ ವಾಸ್ತುಶಿಲ್ಪದೊಂದಿಗೆ ಇತಿಹಾಸ ಹಿನ್ನೋಟವನ್ನು ಅದ್ಭುತವನ್ನು ವಿವರಿಸುತ್ತದೆ. ಸುಂದರವಾದ ಬಂಡೆಗಳಿಂದ ಸುತ್ತುವರಿದಿರುವ 16ನೇ ಶತಮಾನದ ಈ ಸ್ಥಳ ಅದ್ಭುತವಾಗಿದೆ. ಸಾಂಪ್ರದಾಯಿಕ ದೀಪದ ಕಲ್ಲಿನ ಕಂಬಗಳು, ರಾಮ-ಸೀತೆಯ ಕಪ್ಪು ಗ್ರಾನೈಟ್ ವಿಗ್ರಹಗಳು ಸೊಗಸಾಗಿವೆ. ವಿಠಲ ದೇವಸ್ಥಾನದಿಂದ ಕೇವಲ ಹತ್ತು ನಿಮಿಷಗಳ ನಡಿಗೆಯಲ್ಲಿ ಈ ದೇವಾಲಯವನ್ನು ತಲುಪಬಹುದು.


ಹಂಪಿ ಬಜಾರ್

ಹಳ್ಳಿಗಾಡಿನ ಮೋಜು ಮಸ್ತಿಗಳು ಜೀವಂತವಾಗಿರುವುದನ್ನು ಕಾಣಬೇಕಾದರೆ ಹಂಪಿ ಬಜಾರ್‌ಗೆ ಭೇಟಿ ನೀಡಬೇಕು. ಪ್ರಾದೇಶಿಕ ಜನಾಂಗೀಯ ವೈವಿಧ್ಯತೆಯನ್ನು ವೈಭವಯುತವಾಗಿ ವ್ಯಕ್ತಪಡಿಸುವ ಹಂಪಿ ಬಜಾರ್ ಜನವರಿಯ ಪೊಂಗಲ್ ಹಬ್ಬಗಳ ಸಮಯದಲ್ಲಿ ಸಂದರ್ಶಕರನ್ನು ಆಕರ್ಷಿಸುತ್ತದೆ. ಭಾವಪೂರ್ಣವಾದ ಜಾನಪದ ನೃತ್ಯಗಳು, ಜಾನುವಾರು ಓಟಗಳು ಮತ್ತು ವರ್ಣರಂಜಿತ ರಂಗೋಲಿ ಸ್ಪರ್ಧೆಗಳು ಬಯಲು ರಂಗದಲ್ಲಿ ನಡೆಯುತ್ತವೆ. ಬಿದಿರು ಚಿಗುರು ಪುಲಾವ್ ಅಥವಾ ತೆಂಗಿನಕಾಯಿ-ಬೆಲ್ಲದ ಲಡ್ಡೂಗಳಂತಹ ರುಚಿಕರವಾದ ಪ್ರಾದೇಶಿಕ ಖಾದ್ಯಗಳನ್ನು ಇಲ್ಲಿ ಸವಿಯಬಹುದು.


ವಿರೂಪಾಕ್ಷ ಗುಹೆ

ಇಲ್ಲಿಯ ವಿರೂಪಾಕ್ಷನ ಗುಹೆ ಪುರಾತನ ಕಥೆಗಳನ್ನು ವರ್ಣಿಸುತ್ತದೆ. ಶಿಲಾಯುಗದ ರಾಕ್ ಕಲೆಯೊಂದಿಗೆ ನವಶಿಲಾಯುಗದ ಅವಶೇಷಗಳೊಂದಿಗೆ ಸಮಾಧಿ ಕೋಣೆಗಳು, ಬಾಗಿದ ಗುಹೆಯ ಗೋಡೆಗಳು ಅಥವಾ ಗ್ರಾನೈಟ್ ಬಂಡೆಯ ಮೇಲ್ಮೈಗಳಾದ್ಯಂತ ಪ್ರಾಣಿಗಳು, ಬುಡಕಟ್ಟು ಆಚರಣೆಗಳು ಗಮನ ಸೆಳೆಯುತ್ತವೆ. ಆಧುನಿಕ ಹಂಪಿ ಬಳಿ ನದಿ ಕಣಿವೆಯ ಉದ್ದಕ್ಕೂ ವಿಭಿನ್ನ ಸಂಸ್ಕೃತಿಯೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಪ್ಯಾಲಿಯೊಲಿಥಿಕ್ ವಸಾಹತು ವಲಯ ಎದ್ದು ಕಾಣುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?


ಆನೆಗುಂದಿ

ನದಿಯ ದಡದ ಆನೆಗುಂದಿಯ ಸುಂದರವಾದ ಪ್ರದೇಶ ಇಲ್ಲಿಯ ಮತ್ತೊಂದು ಆಕರ್ಷಣೆ. ಇದು ರಾಮಾಯಣ ಕಾಲದಲ್ಲಿ ಸುಗ್ರೀವ ವಾಸವಾಗಿದ್ದ ಪವಿತ್ರ ಸ್ಥಳವೆಂದು ನಂಬಲಾಗಿದೆ. ವಿಜಯನಗರ ಶೈಲಿಯು ಗುಪ್ತ ಪ್ರಾಂಗಣಗಳು ಗಮನ ಸೆಳೆಯುತ್ತವೆ. ಒಟ್ಟಿನಲ್ಲಿ ಹಂಪಿಯ ಆಕರ್ಷಣೆ ಅಲ್ಲಿನ ಪ್ರತಿಯೊಂದು ಕಣಕಣದಲ್ಲೂ ಇದೆ.

Continue Reading

ಕ್ರೈಂ

Road Rage: ರಾಜಧಾನಿಯಲ್ಲಿ ಹೆಚ್ಚುತ್ತಿದೆ ರೋಡ್‌ ರೇಜ್‌, ಮತ್ತೊಂದು ಹಲ್ಲೆ

Road Rage: ಸರ್ಜಾಪುರ ರಸ್ತೆಯಲ್ಲಿ ಕುಟುಂಬದೊಂದಿಗೆ ಅಖಿಲ್ ಸಾಬು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ, ಹೋಂಡಾ ಆ್ಯಕ್ಟಿವಾ ಬೈಕ್‌ನಲ್ಲಿ ಬಂದ ವ್ಯಕ್ತಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲಿ ಜಗಳವಾಗಿದೆ.

VISTARANEWS.COM


on

road rage bangalore
Koo

ಬೆಂಗಳೂರು: ರಾಜಧಾನಿಯಲ್ಲಿ ರೋಡ್ ರೇಜ್ (Road Rage) ಪ್ರಕರಣಗಳು ಮಿತಿಮೀರಿ ಹೆಚ್ಚುತ್ತಿವೆ. ಕೆಲವು ವರದಿಯಾಗುತ್ತಿವೆ, ಕೆಲವು ಗಮನಕ್ಕೆ ಬರದೇ ಹೋಗುತ್ತಿವೆ. ಮೇ 17ರಂದು ಸರ್ಜಾಪುರ ರಸ್ತೆಯಲ್ಲಿ (Sarjapura road) ನಡೆದ ಘಟನೆಯ ವಿಡಿಯೋವನ್ನು ಸೋಶಿಯಲ್‌ ಮೀಡಿಯಾ (Social media) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ದೂರು ನೀಡಲಾಗಿದ್ದು, ಇದರಲ್ಲಿ ಸ್ಕೂಟರ್‌ ಸವಾರನೊಬ್ಬ ಕಾರು ಪ್ರಯಾಣಿಕರ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ.

ಕೇರಳ ಮೂಲದ ಅಖಿಲ್ ಸಾಬು ಎಂಬವರು ಸರ್ಜಾಪುರ ರಸ್ತೆಯಲ್ಲಿ ಅನುಭವಿಸಿದ ಯಾತನೆಯನ್ನು ನಗರ ಪೊಲೀಸರು, ಗೃಹ ಸಚಿವರಿಗೆ ಎಕ್ಸ್‌ನಲ್ಲಿ ಟ್ಯಾಗ್ ಮಾಡಿ ದೂರು‌‌ ನೀಡಿದ್ದಾರೆ. ಬಳಿಕ ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸರ್ಜಾಪುರ ರಸ್ತೆಯಲ್ಲಿ ಕುಟುಂಬದೊಂದಿಗೆ ಅಖಿಲ್ ಸಾಬು ಕಾರಿನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದಾಗ, ಹೋಂಡಾ ಆ್ಯಕ್ಟಿವಾ ಬೈಕ್‌ನಲ್ಲಿ ಬಂದ ವ್ಯಕ್ತಿ ಓವರ್ ಟೇಕ್ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ನಡುರಸ್ತೆಯಲ್ಲಿ ಜಗಳವಾಗಿದೆ. ಜಗಳದ ವೇಳೆ ಕಾರಿನ ಎಡಭಾಗದ ಕಿಟಕಿಯನ್ನು ಆರೋಪಿ ಹೆಲ್ಮೆಟ್‌ನಿಂದ ಹೊಡೆದು ಒಡೆದುಹಾಕಿದ್ದಾನೆ. ಆಗ ಕಾರಿನಲ್ಲಿದ್ದ ಅಖಿಲ್ ಪತ್ನಿ ಹಾಗೂ ಮಗುವಿನ ಕೈಗೆ ಗಾಯವಾಗಿದೆ.

ಇದನ್ನು ಪ್ರಶ್ನೆ ಮಾಡಿದ ಅಖಿಲ್ ಮೇಲೂ ಹಲ್ಲೆ ಎಸಗಲಾಗಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಲಾಗಿದೆ. ಜಗದೀಶ್ ಎಂಬಾತನ ಮೇಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಾರು ಚಾಲಕನ ಹುಚ್ಚಾಟ

ಬೆಂಗಳೂರಿನಲ್ಲಿ ಕಾರು ಚಾಲಕನೊಬ್ಬ ಮನ ಬಂದಂತೆ ಕಾರು ಚಲಾಯಿಸಿ ಕಂಡ ಕಂಡವರಿಗೆ ಡಿಕ್ಕಿ ಹೊಡೆದಿದ್ದಾನೆ. ಹುಚ್ಚಾಪಟ್ಟೆ ಕಾರು ಚಲಾಯಿಸಿ ಪಾದಚಾರಿಗಳಿಗೆ ಹಾಗೂ ಅನೇಕ ವಾಹನಗಳಿಗೆ ಡಿಕ್ಕಿ ಹೊಡೆದ ಚಾಲಕನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಚಾಲಕ‌ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮೇ 21ರ ಬೆಳಿಗ್ಗೆ 8:30ರ ಸುಮಾರಿಗೆ ವೆಸ್ಟ್ ಆಫ್ ಕಾರ್ಡ್ ರೋಡ್‌ನ ಎನ್‌ಪಿಎಸ್ ಜಂಕ್ಷನ್ ಬಳಿ KA02MK4206 ಸಂಖ್ಯೆಯ ಮಾರುತಿ ಕಾರಿನಲ್ಲಿ ಬಂದ ಚಾಲಕನಿಂದ ಕೃತ್ಯ ನಡೆದಿದೆ. ಘಟನೆಯಲ್ಲಿ ಪಾದಚಾರಿ ವೆಂಕಟೇಶ್ ಎಂಬವರ ಕೈಕಾಲುಗಳಿಗೆ ಗಾಯವಾಗಿದೆ. ಇದೇ ವೇಳೆ ಬೇರೆ ವಾಹನಗಳಿಗೂ ಡಿಕ್ಕಿ ಹೊಡೆಸಿದ್ದಾನೆ.

ಘಟನೆ ಸಂಬಂಧ ವಿಜಯನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಾಳು ವೆಂಕಟೇಶ್ ಮಗನ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ವಾಹನದ ಜೊತೆ ಚಾಲಕನನ್ನು ವಶಕ್ಕೆ ಪಡೆದು ವಿಜಯನಗರ ಸಂಚಾರಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಯುವತಿಯ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದ ಮಾಜಿ ಪ್ರಿಯಕರ!

ಕಾರವಾರ: ತಾನು ಪ್ರೀತಿಸುತ್ತಿದ್ದ ಯುವತಿ ತನ್ನ ಪ್ರೀತಿ ನಿರಾಕರಿಸಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿರುವುದಕ್ಕೆ ಕೋಪಗೊಂಡ ಮಾಜಿ ಪ್ರಿಯಕರ ಹಾಲಿ ಪ್ರಿಯಕರನ ಕುತ್ತಿಗೆಗೆ ಚಾಕುವಿನಿಂದ ಇರಿದು ಹಲ್ಲೆ (Assault Case) ಮಾಡಿರುವ ಘಟನೆ ಕುಮಟಾ ಪಟ್ಟಣ ಮಣಕಿ ಮೈದಾನದಲ್ಲಿ ನಡೆದಿದೆ.

ಸಂತೋಷ ಅಂಬಿಗ ಎಂಬಾತನೆ ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದು, ರಾಜೇಶ ಅಂಬಿಗ ಎಂಬಾತ ಹಲ್ಲೆ ಮಾಡಿದ ಆರೋಪಿಯಾಗಿದ್ದಾನೆ. ರಾಜೇಶ ಅಂಬಿಗ ಯುವತಿಯೋರ್ವಳನ್ನು ಪ್ರೀತಿ ಮಾಡುತ್ತಿದ್ದು, ಇಬ್ಬರೂ ಚೆನ್ನಾಗಿಯೇ ಇದ್ದರು ಎನ್ನಲಾಗಿದೆ. ಕಳೆದ ‌ಒಂದು ವರ್ಷದಿಂದ ರಾಜೇಶನ ನಡವಳಿಕೆ ಸರಿಯಿಲ್ಲದ ಕಾರಣ ಆಕೆ ರಾಜೇಶ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು ಎನ್ನಲಾಗಿದೆ. ನಂತರದಲ್ಲಿ ಇದೀಗ ಹಲ್ಲೆಗೆ ಒಳಗಾದ ಸಂತೋಷ ಅಂಬಿಗ ಈ ಹಿಂದೆ ರಾಜೇಶ ಪ್ರೀತಿ ಮಾಡುತ್ತಿದ್ದ ಯುವತಿಯನ್ನ ಪ್ರೀತಿ ಮಾಡಲು ಆರಂಭಿಸಿ ವಿವಾಹ ಕೂಡ ನಿಶ್ಚಯವಾಗಿತ್ತು ಎನ್ನಲಾಗಿದೆ.

ಇದೇ ವಿಚಾರಕ್ಕೆ ಸಿಟ್ಟಾದ ರಾಜೇಶ ಅಂಬಿಗ ಬುಧವಾರ ಸಂತೋಷ ಅಂಬಿಗನಿಗೆ ಪೋನ್ ಮಾಡಿ ಮಾತನಾಡಬೇಕೆಂದು ಒಬ್ಬನನ್ನೇ ಮಣಕಿ ಮೈದಾನಕ್ಕೆ ಕರೆಸಿಕೊಂಡಿದ್ದಾನೆ. ಆದರೆ ಸಂತೋಷ ಬರುವಾಗ ತನ್ನ ಜತೆ ಒಂದಿಬ್ಬರು ಸ್ನೇಹಿತರನ್ನ ಕರೆದುಕೊಂಡು ಬಂದಿದ್ದು, ಈ ವೇಳೆ ರಾಜೇಶ, ಸಂತೋಷನ ಕಣ್ಣಿಗೆ ಖಾರದ ಪುಡಿ ಎರಚಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ‌ ಎಂದು ತಿಳಿದುಬಂದಿದೆ‌. ಘಟನೆಯಿಂದ ಸಂತೋಷ ಅಂಬಿಗ ಗಂಭೀರವಾಗಿ ಗಾಯಗೊಂಡಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Murder Case: ನಟಿ, ಕಾಂಗ್ರೆಸ್ ನಾಯಕಿ ವಿದ್ಯಾ ಹತ್ಯೆ ಆರೋಪಿ ಪತಿಯ ಬಂಧನ

Continue Reading
Advertisement
RCB
ಕ್ರೀಡೆ1 min ago

RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

Cyber Crime
ಕ್ರೈಂ20 mins ago

ಎಐ ತಂತ್ರಜ್ಞಾನದಿಂದ ಹಿಂದು ಯುವತಿಯ ಅಶ್ಲೀಲ ವಿಡಿಯೊ ಸೃಷ್ಟಿಸಿ ಇಸ್ಲಾಂಗೆ ಮತಾಂತರಗೊಳಿಸಲು ಯತ್ನ: ಫೈಜಲ್ ವಿರುದ್ಧ ದೂರು

vegetable rates increase
ಪ್ರಮುಖ ಸುದ್ದಿ44 mins ago

Vegetable Rates: ತರಕಾರಿ ಮುಟ್ಟಿದರೆ ಶಾಕ್‌, ಕಿಲೋಗೆ 320 ದಾಟಿದ ಬೀನ್ಸ್!‌

Phalodi satta market
ದೇಶ45 mins ago

Phalodi Satta Bazar: ಚುನಾವಣಾ ಫಲಿತಾಂಶದ ಬಗ್ಗೆ ಸಟ್ಟಾ ಬಜಾರ್‌ನ ಪಕ್ಕಾ ಭವಿಷ್ಯವಾಣಿ; ಈ ಮಾರ್ಕೆಟ್‌ನ ಹಿನ್ನೆಲೆ ಏನು?

Virat Kohli
ಕ್ರೀಡೆ45 mins ago

Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

vistara news impact medical negligence
ವಿಜಯನಗರ1 hour ago

Medical Negligence: ಅಮಾಯಕ ಬಾಲಕನ ಜೀವ ತೆಗೆದ ಆಸ್ಪತ್ರೆಗೆ ಬೀಗ!

Dinesh Karthik
ಕ್ರೀಡೆ1 hour ago

Dinesh Karthik: ಕೊಹ್ಲಿಯೊಂದಿಗೆ ಭಾವುಕ ಆಲಿಂಗನ; ಕ್ರಿಕೆಟ್​ ಜರ್ನಿ ಮುಗಿಸಿದ ದಿನೇಶ್​ ಕಾರ್ತಿಕ್​

Bangladesh MP Missing Case
ದೇಶ2 hours ago

Bangladesh MP Missing Case: ನಿಗೂಢವಾಗಿ ಕಣ್ಮರೆ ಆಗಿದ್ದ ಬಾಂಗ್ಲಾದೇಶ ಸಂಸದನ ಬರ್ಬರ ಕೊಲೆ

Actor Dhananjay
ಸಿನಿಮಾ2 hours ago

Actor Dhananjay: ʻಕೋಟಿʼ ಸಿನಿಮಾದ ‘ಜನತಾ ಸಿಟಿ’ ಹಾಡು ಔಟ್‌

Hampi Tour
ಪ್ರವಾಸ2 hours ago

Hampi Tour: ಹಂಪಿ ಪ್ರವಾಸದ ವೇಳೆ ಈ 10 ಸ್ಥಳಗಳಲ್ಲಿ ರಾಮಾಯಣದ ಕುರುಹುಗಳನ್ನು ಹುಡುಕಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ5 hours ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 day ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು2 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು2 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ3 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ4 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ4 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ4 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ6 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌