ಪ್ರತಿಯೊಬ್ಬರೂ ಐದು ಗಿಡ ಬೆಳೆಸಿ; ವನಮಹೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆ - Vistara News

ಪರಿಸರ

ಪ್ರತಿಯೊಬ್ಬರೂ ಐದು ಗಿಡ ಬೆಳೆಸಿ; ವನಮಹೋತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕರೆ

ಅರಣ್ಯ ಇಲಾಖೆಯು ಬೆಂಗಳೂರಿನ ದಾಸನಪುರ ಮಾಚೋನಹಳ್ಳಿ ಅರಣ್ಯ ಪ್ರದೇಶದಲ್ಲಿ ಟ್ರೀ ಪಾರ್ಕ್‌ ನಿರ್ಮಿಸಿದ್ದು, ಇದನ್ನು ಶುಕ್ರವಾರ ಮುಖ್ಯಮಂತ್ರಿ ಬೊಮ್ಮಾಯಿ ಉದ್ಘಾಟಿಸುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ.

VISTARANEWS.COM


on

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಪ್ರತಿಯೊಬ್ಬರೂ ಐದು ಗಿಡಗಳನ್ನು ಬೆಳೆಸಬೇಕು ಎಂದು ರಾಜ್ಯದ ಜನತೆಗೆ ಕರೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನರ ಸಹಭಾಗಿತ್ವದಿಂದ ಮಾತ್ರ ಅರಣ್ಯೀಕರಣದ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದಿದ್ದಾರೆ.

ಬೆಂಗಳೂರು ನಗರ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ. ಇಂದಿನ ಎಲ್ಲ ಬಡಾವಣೆಗಳಲ್ಲಿ ಉದ್ಯಾನಗಳು, ಗಿಡಮರಗಳಿವೆ. ಬೆಂಗಳೂರು ಉದ್ಯಾನನಗರ ಎಂದು ಕರೆಯಲ್ಪಡುತ್ತದೆ. ಈಗ ನಾಗರಿಕತೆ ಹೆಚ್ಚಾಗಿದ್ದು, ಉದ್ಯಮಗಳು ಹೆಚ್ಚಾಗಿದೆ. ಅರಣ್ಯ ಇಲಾಖೆ ವತಿಯಿಂದ ಬೆಂಗಳೂರಿನ ಸುತ್ತಲೂ ಅರಣ್ಯ ಉದ್ಯಾನವನ ಬೆಳೆಸಲು ವಿಶೇಷ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವನಮಹೋತ್ಸವದ ಅಂಗವಾಗಿ ಅರಣ್ಯ ಇಲಾಖೆಯು ನಿರ್ಮಿಸಿರುವ ಮಾಚೋಹಳ್ಳಿ ಟ್ರೀ ಪಾರ್ಕ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಪರಿಸರ ಬಹಳ ಮುಖ್ಯ. ಗಿಡಮರಗಳಿಂದ ಶುದ್ಧ ಗಾಳಿ ಸಿಗುತ್ತದೆ. ಗಿಡಮರಗಳಿಂದ ಶುದ್ಧವಾದ ಆಮ್ಲಜನಕ ದೊರೆಯುತ್ತದೆ. ಪರಿಸರದಲ್ಲಿ ಕಾರ್ಬನ್ ಅಂಶ ಹೆಚ್ಚಾದರೆ ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ. ಹವಾಮಾನ ಬದಲಾವಣೆ ಆಗುತ್ತಿದೆ. ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಾಗಿ ಜನರಿಗೆ ತೊಂದರೆಯಾಗುವ ಜೊತೆಗೆ ಪ್ರವಾಹ ಭೀತಿಯೂ ಎದುರಾಗುತ್ತದೆ. ಈ ಸಮಸ್ಯೆಗಳನ್ನು ತಡೆಗಟ್ಟಲು ಅರಣ್ಯೀಕರಣ ಬಹಳ ಮುಖ್ಯ ಎಂದರು.

ಈ ಸಾಲಿನ ಆಯವ್ಯಯದಲ್ಲಿ ಹಸಿರು ಬಜೆಟ್‌ನ್ನು ರೂಪಿಸಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪರಿಸರ ಹಾನಿಯನ್ನು ಸರಿದೂಗಿಸಲು ಈಗಾಗಲೇ ಸೂಚನೆ ನೀಡಲಾಗಿದ್ದು, ಕ್ರಿಯಾ ಯೋಜನೆ ಸಿದ್ಧವಾಗುತ್ತಿದೆ. ಪ್ರತಿ ವರ್ಷವೂ ಪರಿಸರದ ಹಾನಿಯಿಂದಾಗುವ ಕೊರತೆಯನ್ನು ನೀಗಿಸುವ ಯೋಜನೆಗಳನ್ನು ರೂಪಿಸಲು ಅರಣ್ಯ ಇಲಾಖೆಗೆ 100 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಬೀಜೋತ್ಸವ ಕಾರ್ಯಕ್ರಮ
ಬೀಜೋತ್ಸವ ಕಾರ್ಯಕ್ರಮವನ್ನು ರೂಪಿಸಿ ಎರಡೂವರೆ ಕೋಟಿ ಬೀಜಗಳನ್ನು ಈ ವರ್ಷ ಬಿತ್ತಲಾಗುತ್ತಿದೆ. ಅರಣ್ಯವೆಂದು ಗುರುತಿಸಲ್ಪಡುವ ಪ್ರದೇಶಗಳಲ್ಲಿ ಬೀಜಗಳನ್ನು ಬಿತ್ತುವ ಹಾಗೂ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಮಾಡಲಾಗುವುದು ಎಂದರು.

ಹಳೇ ಬೇರು, ಹೊಸ ಚಿಗುರು ಒಂದಾದಾಗ ಮಾತ್ರ ಅರಣ್ಯೀಕರಣ ಯಶಸ್ವಿಯಾಗುತ್ತದೆ. ಮಕ್ಕಳು ನೆಡುವ ಗಿಡಗಳಿಗೆ ಒಂದು ಹೆಸರು ನೀಡಬೇಕು. ನಿಮ್ಮ ಪ್ರೀತಿಪಾತ್ರರ ಹೆಸರನ್ನು ನೀಡಿ, ಆಗ ಆ ಗಿಡದೊಂದಿಗೆ ನಿಮ್ಮ ಬಾಂಧವ್ಯ ಹೆಚ್ಚುತ್ತದೆ ಎಂದು ಅವರು ಮಕ್ಕಳಿಗೆ ಕರೆ ನೀಡಿದ್ದಾರೆ.

ಮಕ್ಕಳಲ್ಲಿ ಗಿಡಮರಗಳನ್ನು ಆರೈಕೆಯಲ್ಲಿ ಆಸಕ್ತಿಯನ್ನು ಬೆಳೆಸಲು ಸರ್ಕಾರದೊಂದಿಗೆ ಸಾರ್ವಜನಿಕರು, ಸಂಘಸಂಸ್ಥೆಗಳೂ ಕೈಜೋಡಿಸಬೇಕು. ಪ್ರತಿ ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ಗಿಡಗಳನ್ನು ನೆಡಬೇಕು ಎಂದರು.

ರಾಜ್ಯದದಲ್ಲಿರುವ ಶೇ. 21 ರಷ್ಟಿರುವ ಅರಣ್ಯ ಪ್ರದೇಶವನ್ನು ಶೇ. 30 ಕ್ಕೆ ಏರಿಸಬೇಕು. ಈ ದಿಸೆಯಲ್ಲಿ ಅರಣ್ಯ ಇಲಾಖೆಗೆ ಎಲ್ಲ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ಜಾಗತಿಕ ಸ್ಟಾರ್ಟ್‌ಅಪ್‌ ಪರಿಸರ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ ಬೆಂಗಳೂರು: ಜಿಎಸ್‌ಇಆರ್‌ ಸಮೀಕ್ಷೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

World Environment Day: ಬೆಂಗಳೂರಿನಲ್ಲಿ ಎನ್‌ಸಿಸಿ ತಂಡದಿಂದ ವಿಶೇಷ ಪರಿಸರ ಜಾಗೃತಿ ಕಾರ್ಯಕ್ರಮ

World Environment Day: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ತಂಡದ ವತಿಯಿಂದ ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ವಿಶೇಷ ಜಾಗೃತಿ ಕಾರ್ಯಕ್ರಮಗಳು ಜರುಗಿದವು.

VISTARANEWS.COM


on

Environment awareness programme by NCC team in Bengaluru
Koo

ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಂ.2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್ ಎನ್‌ಸಿಸಿ ತಂಡದ ವತಿಯಿಂದ ಪರಿಸರ ಸಂರಕ್ಷಣೆ (World Environment Day) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನಗರದ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ವಿಶೇಷ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರು ನಗರದ ಐ.ಟಿ.ಐ ಸೆಂಟ್ರಲ್ ಶಾಲೆಯ ವತಿಯಿಂದ ಇಲ್ಲಿನ ರಾಮಮೂರ್ತಿ ನಗರದ ಮುಖ್ಯರಸ್ತೆಯಲ್ಲಿ ಶಾಲೆಯ ನೂರಾರು ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಕುರಿತ ಭಿತ್ತಿಚಿತ್ರಗಳೊಂದಿಗೆ ನಡೆದ ಕಾಲ್ನಡಿಗೆ ಜಾಥಾ ನಡೆಸಿ, ಜಾಗೃತಿ ಮೂಡಿಸಲಾಯಿತು. ಬಳಿಕ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಶಾಲಾ ವಿದ್ಯಾರ್ಥಿಗಳಿಂದ ನಡೆದ ಬೀದಿ ನಾಟಕ ಎಲ್ಲರ ಗಮನ ಸೆಳೆಯಿತು.

ಇದನ್ನೂ ಓದಿ: India vs Ireland: ಪಂಜಾಬಿ ಪುಟ್ಟ ಪೋರನಿಂದ ಚಿನ್ನದ ಪದಕ ಪಡೆದ ಮೊಹಮ್ಮದ್​ ಸಿರಾಜ್

ಸೈಕಲ್ ಜಾಥಾ

ನಗರದ ಜೈನ್ ಪಬ್ಲಿಕ್ ಶಾಲೆ ಹಾಗೂ ಎನ್‌ಸಿಸಿ ತಂಡದ ವತಿಯಿಂದ ಪರಿಸರದ ನಡೆ ಹಳ್ಳಿಯ ಕಡೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ಕ್ರೈಸ್ಟ್ ಹಾಗೂ ಸೀ ಪ್ರೌಢಶಾಲೆಯ ಎನ್‌ಸಿಸಿ ಕೆಡೆಟ್‌ಗಳಿಂದ ಸೈಕಲ್ ಜಾಥಾ ನಡೆಸಲಾಯಿತು.

ಇಲ್ಲಿನ ಐ.ಟಿ.ಐ. ವಿದ್ಯಾಮಂದಿರ ಪ್ರೌಢಶಾಲೆ, ಜೈನ್ ಪಬ್ಲಿಕ್ ಶಾಲೆ, ಕ್ರೈಸ್ಟ್, ಸೈಂಟ್ ಪ್ಯಾಟ್ರಿಕ್ಸ್ ಅಕಾಡೆಮಿ, ಸೀ ಪ್ರೌಢಶಾಲೆ, ಶ್ರೀವಾಣಿ ರಾಜಾಜಿನಗರ ಹಾಗೂ ಬಸವೇಶ್ವರ ನಗರ ಶಾಲೆಗಳ ವತಿಯಿಂದ ಪರಿಸರ ಜಾಗೃತಿ ಮೂಡಿಸುವ ಅನೇಕ ಕಾರ್ಯಗಳು ಜರುಗಿದವು.

ಈ ಸಂದರ್ಭದಲ್ಲಿ ನಂ. 2 ಕರ್ನಾಟಕ ಏರ್ (ಟೆಕ್ನಿಕಲ್) ಸ್ಕ್ವಾಡ್ರನ್‌ನ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ರಾಜೇಶ್ ಚಂದ್ರ ಮಾತನಾಡಿ, ಯೂನಿಟ್‌ನ ಎಲ್ಲಾ ಟ್ರೂಪ್‌ಗಳ ನೇತೃತ್ವದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮಗಳ ಕುರಿತು ಶ್ಲಾಘಿಸಿದರು.

ಇದನ್ನೂ ಓದಿ: Electric Airport Taxi : ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಇನ್ಮುಂದೆ ಮಹಿಳೆಯರಿಗಾಗಿ ಗುಲಾಬಿ ಟ್ಯಾಕ್ಸಿ

ಕಾರ್ಯಕ್ರಮದಲ್ಲಿ ಐ.ಟಿ.ಐ. ಸೆಂಟ್ರಲ್ ಶಾಲೆಯ ಹಿರಿಯ ಆಡಳಿತಾಧಿಕಾರಿ ಲತಾ, ಪ್ರಾಂಶುಪಾಲ ಪೊನ್ಮಲಾರ್ ಹಾಗೂ ಎನ್‌ಸಿಸಿ ಸಹ ಅಧಿಕಾರಿಗಳಾದ ಬಾಲಕೃಷ್ಣ ವಿ.ಎಚ್.ಜೆ. ಕೃಷ್ಣಪ್ಪ, ನಜೀರ್ ಅಹಮದ್, ಜಸ್ಟಿನ್, ಜಗದೀಶ್, ವಿವೇಕ್ ಹೆಗ್ಡೆ, ಆದರ್ಶ್ ಕುಮಾರ್ ಮತ್ತು ನವೀನ್ ಶರ್ಮ, ಸಾರ್ಜಂಟ್ ರವಿ ಸತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಪ್ರವಾಸ

Norway Tour: ಜಗತ್ತಿನ ಕೊನೆಯ ದೇಶ ಇದು! ಇಲ್ಲಿ 6 ತಿಂಗಳು ಹಗಲು, 6 ತಿಂಗಳು ರಾತ್ರಿ!

ಉತ್ತರ ಧ್ರುವದ ಸಾಮೀಪ್ಯದಿಂದಾಗಿ ಭೂಮಿಯ ಮೇಲಿನ ಕೊನೆಯ ದೇಶ ಎಂದು ಕರೆಯಲ್ಪಡುವ ನಾರ್ವೆಯಲ್ಲಿ (Norway Tour) ಮಧ್ಯರಾತ್ರಿ ಸೂರ್ಯ ಕಾಣಿಸಿಕೊಳ್ಳುತ್ತಾನೆ. ಆರು ತಿಂಗಳ ನಿರಂತರ ಹಗಲು ಅಥವಾ ಕತ್ತಲೆಯಂತಹ ವಿಶಿಷ್ಟ ವಿದ್ಯಮಾನಗಳನ್ನು ಇಲ್ಲಿ ಅನುಭವಿಸಬಹುದು. ಇಲ್ಲಿನ ಇ-69 ಹೆದ್ದಾರಿಯು ಜಗತ್ತಿನ ಕೊನೆಯನ್ನು ಸೂಚಿಸುತ್ತದೆ. ಆದರೆ ಈ ರಸ್ತೆಯಲ್ಲಿ ಏಕವ್ಯಕ್ತಿ ಪ್ರಯಾಣವನ್ನು ನಿಷೇಧಿಸಲಾಗಿದೆ.

VISTARANEWS.COM


on

By

Norway Tour
Koo

ಭೂಮಿಯು (earth) ದುಂಡಗಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಭೂಮಿಯ ಮೂಲೆ ಮೂಲೆಯಲ್ಲಿ ಒಂದಲ್ಲ ಒಂದು ದೇಶವಿದೆ (country). ಪ್ರತಿಯೊಂದು ದೇಶವು ಅದರ ನೈಸರ್ಗಿಕ ಸೌಂದರ್ಯದಿಂದಾಗಿ (natural beauty) ಸುಂದರವಾಗಿರುತ್ತದೆ. ಕೆಲವು ದೇಶಗಳು ತಮ್ಮ ಐತಿಹಾಸಿಕ ಕಟ್ಟಡಗಳಿಗೆ (historical buildings) ಪ್ರಸಿದ್ಧವಾಗಿವೆ, ಇತರವುಗಳು ತಮ್ಮ ನೈಸರ್ಗಿಕ ದೃಶ್ಯಾವಳಿಗಳಿಂದ. ವಿಶ್ವದ ಅತಿದೊಡ್ಡ ಮತ್ತು ಶ್ರೀಮಂತ ದೇಶಗಳ ಬಗ್ಗೆ ಎಲ್ಲರೂ ಕೇಳಿರಬಹುದು, ಆದರೆ ಭೂಮಿಯ ಮೇಲಿನ ಕೊನೆಯ ದೇಶ ಯಾವುದು ಗೊತ್ತೇ ಅಲ್ಲಿನ ವಿಶೇಷತೆ ಏನು ಗೊತ್ತೇ ?

ವಿಶ್ವದ ಕೊನೆಯ ದೇಶ ನಾರ್ವೆ (Norway Tour). ಇಲ್ಲಿ ಭೂಮಿ ಕೊನೆಗೊಳ್ಳುತ್ತದೆ. ಈ ದೇಶವು ಉತ್ತರ ಧ್ರುವದ ಬಳಿ ಇದೆ. ಅಲ್ಲಿ ಭೂಮಿಯು ತನ್ನ ಅಕ್ಷದ ಮೇಲೆ ತಿರುಗುತ್ತದೆ. ಆದ್ದರಿಂದ, ನಾರ್ವೆ ಹೇಗಿದೆ ಎಂದು ಊಹಿಸಿಕೊಳ್ಳಬಹುದು.
ಬಹಳ ಸುಂದರವಾಗಿರುವ ಈ ದೇಶದಲ್ಲಿ ರಾತ್ರಿ ಬಹಳ ಕಡಿಮೆ. ರಾತ್ರಿಯೇ ಇರುವುದಿಲ್ಲ ಎಂದು ತಿಳಿದರೆ ಆಶ್ಚರ್ಯವಾಗಬಹುದು.

ಉತ್ತರ ನಾರ್ವೆಯ ಹ್ಯಾವರ್‌ಫೆಸ್ಟ್ ನಗರದಲ್ಲಿ, ಸೂರ್ಯ ಕೇವಲ 40 ನಿಮಿಷಗಳ ಕಾಲ ಅಸ್ತಮಿಸುತ್ತಾನೆ. ಆದ್ದರಿಂದ, ಇದನ್ನು ಮಧ್ಯರಾತ್ರಿ ಸೂರ್ಯನ ದೇಶ ಎಂದೂ ಕರೆಯುತ್ತಾರೆ. ಇಲ್ಲಿ ಕೇವಲ 40 ನಿಮಿಷ ಮಾತ್ರ ಕತ್ತಲು, ಉಳಿದ 23 ಗಂಟೆ 20 ನಿಮಿಷಗಳ ಕಾಲ ಈ ನಗರವು ಬೆಳಕಿನಿಂದ ತುಂಬಿರುತ್ತದೆ.


ಬೇಸಿಗೆಯಲ್ಲಿ ಹಿಮ

ಬೇಸಿಗೆಯಲ್ಲಿ ಇಲ್ಲಿ ಹಿಮ ಹೆಪ್ಪುಗಟ್ಟುತ್ತದೆ. ಈ ದೇಶವು ಅತ್ಯಂತ ತಂಪಾದ ವಾತಾವರಣವನ್ನು ಹೊಂದಿದೆ. ಪ್ರಪಂಚದ ಕೆಲವು ದೇಶಗಳಲ್ಲಿ ಬೇಸಿಗೆಯಲ್ಲಿ ತಾಪಮಾನವು 45 ರಿಂದ 50 ಡಿಗ್ರಿಗಳ ನಡುವೆ ಇದ್ದರೆ ಈ ದೇಶದಲ್ಲಿ ಬೇಸಿಗೆಯಲ್ಲಿ ಹಿಮ ಇರುತ್ತದೆ. ಈ ಸಮಯದಲ್ಲಿ ಇಲ್ಲಿ ತಾಪಮಾನ ಶೂನ್ಯ ಡಿಗ್ರಿ. ತೀವ್ರವಾದ ಚಳಿಗಾಲದಲ್ಲಿ ಇಲ್ಲಿ ತಾಪಮಾನವು ಮೈನಸ್ 45 ಡಿಗ್ರಿಗಳಿಗೆ ಇಳಿಯುತ್ತದೆ. ಇಲ್ಲಿನ ಸೌಂದರ್ಯವೇ ಬೇರೆಯದೇ ಪ್ರಪಂಚವನ್ನು ಸೃಷ್ಟಿಸುತ್ತದೆ.

ರಾತ್ರಿಯೇ ಇರುವುದಿಲ್ಲ

ಬೇಸಿಗೆಯಲ್ಲಿ ಇಲ್ಲಿ ರಾತ್ರಿ ಇರುವುದಿಲ್ಲ. ಉತ್ತರ ಧ್ರುವದ ಸಾಮೀಪ್ಯದಿಂದಾಗಿ ಇತರ ದೇಶಗಳಂತೆ ಪ್ರತಿದಿನ ಹಗಲು ಅಥವಾ ರಾತ್ರಿ ಇರುವುದಿಲ್ಲ. ಬದಲಾಗಿ ಇದು ಆರು ತಿಂಗಳು ಹಗಲು ಮತ್ತು ಆರು ತಿಂಗಳು ರಾತ್ರಿಯನ್ನು ಹೊಂದಿದೆ. ಚಳಿಗಾಲದಲ್ಲಿ ಇಲ್ಲಿ ಸೂರ್ಯನು ಕಾಣಿಸುವುದಿಲ್ಲ, ಆದರೆ ಬೇಸಿಗೆಯಲ್ಲಿ ಇಲ್ಲಿ ಸೂರ್ಯ ಮುಳುಗುವುದಿಲ್ಲ. ತುಂಬಾ ಆಸಕ್ತಿದಾಯಕವಾಗಿರುವ ಈ ದೇಶವನ್ನು ನೋಡಲು ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ.


ಜಗತ್ತಿನ ಕೊನೆ

ಇಷ್ಟೆಲ್ಲಾ ಗೊತ್ತಾದ ಮೇಲೆ ನಾವು ನಾರ್ವೆಗೆ ಹೋಗಬೇಕು ಎನಿಸುವುದರಲ್ಲಿ ಸಂದೇಹವಿಲ್ಲ. ಆದರೆ ಈ ದೇಶದ ಇ-69 ಹೆದ್ದಾರಿಯಲ್ಲಿ ಏಕಾಂಗಿಯಾಗಿ ಹೋಗುವುದನ್ನು ನಿಷೇಧಿಸಲಾಗಿದೆ. ಯಾಕೆಂದರೆ ಈ ಹೆದ್ದಾರಿಯು ಭೂಮಿಯ ತುದಿಗಳನ್ನು ನಾರ್ವೆಗೆ ಸಂಪರ್ಕಿಸುತ್ತದೆ. ಮುಂದೆ ಹೋದಂತೆ ಇಲ್ಲಿಯೇ ರಸ್ತೆ ಕೊನೆಗೊಳ್ಳುತ್ತದೆ. ಅಲ್ಲಿಗೆ ತಲುಪಿದಾಗ ಎಲ್ಲಿಗೆ ಹೋಗಬೇಕೆಂದು ತಿಳಿಯುವುದಿಲ್ಲ. ಯಾಕೆಂದರೆ ಇಲ್ಲಿ ಜಗತ್ತು ಕೊನೆಗೊಳ್ಳುತ್ತದೆ.


ಏಕವ್ಯಕ್ತಿ ಪ್ರಯಾಣ ನಿಷೇಧ

ಈ ಹೆದ್ದಾರಿಯಲ್ಲಿ ಹೋಗಬೇಕೆಂದರೂ ಒಬ್ಬರೇ ಹೋಗುವುದು ನಿಷಿದ್ಧ. ಒಂದು ದೊಡ್ಡ ಗುಂಪಿಗೆ ಮಾತ್ರ ಹೋಗಲು ಅನುಮತಿಸಲಾಗುತ್ತದೆ. ಈ ರಸ್ತೆಯಲ್ಲಿ ಯಾವುದೇ ವ್ಯಕ್ತಿ ಏಕಾಂಗಿಯಾಗಿ ಹೋಗಲು ಅಥವಾ ಏಕಾಂಗಿಯಾಗಿ ವಾಹನ ಚಲಾಯಿಸಲು ಅವಕಾಶವಿಲ್ಲ. ಇಲ್ಲಿ ಎಲ್ಲೆಂದರಲ್ಲಿ ಹಿಮವಿದ್ದು, ಏಕಾಂಗಿಯಾಗಿ ಪ್ರಯಾಣಿಸಿ ದಾರಿ ತಪ್ಪುವ ಸಾಧ್ಯತೆ ಇರುವುದರಿಂದ ಏಕಾಂಗಿ ಪ್ರಯಾಣವನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Konark Tourist Destination: ರಜೆಯಲ್ಲಿ ಕೋನಾರ್ಕ್‌ಗೆ ಹೋದಾಗ ಈ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ

ಈ ದೇಶದಲ್ಲಿ ಪೋಲಾರ್ ಲೈಟ್‌ಗಳನ್ನು ನೋಡಿ ಆನಂದಿಸಬಹುದು. ಇಲ್ಲಿ ಸೂರ್ಯಾಸ್ತ ಮತ್ತು ಧ್ರುವ ದೀಪಗಳನ್ನು ವೀಕ್ಷಿಸುವುದು ವಿನೋದಮಯವಾಗಿದೆ. ವರ್ಷಗಳ ಹಿಂದೆ ಇಲ್ಲಿ ಮೀನು ವ್ಯಾಪಾರ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಆದರೆ ಕ್ರಮೇಣ ದೇಶವು ಅಭಿವೃದ್ಧಿ ಹೊಂದಿತು ಮತ್ತು ಪ್ರವಾಸಿಗರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಈಗ ಪ್ರವಾಸಿಗರು ಇಲ್ಲಿ ಉಳಿದುಕೊಳ್ಳಲು ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳ ಸೌಲಭ್ಯವನ್ನೂ ಪಡೆಯುತ್ತಾರೆ.

Continue Reading

ಕೊಪ್ಪಳ

World Environment Day: ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ಆಗಬೇಕು

World Environment Day: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕಾರಟಗಿ ತಾಲೂಕು ಪಂಚಾಯಿತಿ ಆವರಣದಲ್ಲಿ ತಾ.ಪಂ ಹಾಗೂ ಸಾಮಾಜಿಕ ಅರಣ್ಯ ವಲಯ ಗಂಗಾವತಿ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

VISTARANEWS.COM


on

World Environment Day celebration in karatagi
Koo

ಕಾರಟಗಿ: ಪರಿಸರವನ್ನು (World Environment Day) ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀದೇವಿ ತಿಳಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಆವರಣದಲ್ಲಿ ತಾ.ಪಂ. ಹಾಗೂ ಸಾಮಾಜಿಕ ಅರಣ್ಯ ವಲಯ ಗಂಗಾವತಿ ಅವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು.

ಇದನ್ನೂ ಓದಿ: World Environment Day: ಇಂದು ವಿಶ್ವ ಪರಿಸರ ದಿನ; ಭೂಮಿಯನ್ನು ಉಳಿಸಲು ಈ 5 ಸೂತ್ರ ಪಾಲಿಸೋಣ

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ. ಈ ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಇತ್ಯಾದಿಗಳು ಎಂದೆಂದಿಗೂ ಉಳಿಯಬೇಕು. ನಾವೆಲ್ಲರೂ ಅವಲಂಬಿತರಾಗಿರುವುದು ಈ ಪರಿಸರ, ಅದಕ್ಕಾಗಿ ಪರಿಸರವನ್ನು ಸಂರಕ್ಷಿಸಲು ‌ಮುಂದಾಗಬೇಕು ಎಂದು ಹೇಳಿದರು.

ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಮಾತನಾಡಿ, ಪರಿಸರದ ಕಾಳಜಿ ಹಾಗೂ ಪರಿಸರದ ಮಹತ್ವವನ್ನು ತಿಳಿಸಿ ನಾವೆಲ್ಲರೂ ಪರಿಸರ ಸ್ನೇಹಿಯಾಗಿ ಬಾಳೋಣ ಎಂದು ತಿಳಿಸಿದರು.

ನಂತರ ಆವರಣದಲ್ಲಿ ವಿವಿಧ ಬಗೆಯ ಸಸಿಗಳನ್ನು ಸಸಿಗಳನ್ನು ನೆಡಲಾಯಿತು.

ಇದನ್ನೂ ಓದಿ: SCO vs ENG: ಮಳೆಯಿಂದ ಇಂಗ್ಲೆಂಡ್​-ಸ್ಕಾಟ್ಲೆಂಡ್​ ಪಂದ್ಯ ರದ್ದು; ನೇಪಾಳ ವಿರುದ್ಧ ಗೆದ್ದ ನೆದರ್ಲೆಂಡ್ಸ್​

ಈ ಸಂದರ್ಭದಲ್ಲಿ ತಾ.ಪಂ‌ ಸಹಾಯಕ ನಿರ್ದೇಶಕಿ ವೈ. ವನಜಾ, ಉಪ ವಲಯ ಅರಣ್ಯ ಅಧಿಕಾರಿ ಕವಿತಾ ನಾಯಕ, ತಾಲೂಕಿನ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು, ತಾ.ಪಂ. ವಿವಿಧ ಯೋಜನೆಗಳ ವಿಷಯ ನಿರ್ವಾಹಕರು, ನರೇಗಾ, ತಾ.ಪಂ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Toyota Kirloskar Motor: ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಿಂದ ಪರಿಸರ ಮಾಸಾಚರಣೆ

Toyota: ವಿಶ್ವ ಪರಿಸರ ದಿನದ ಅಂಗವಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಬೆಳೆಸಲು, ಹಸಿರು, ಸುಸ್ಥಿರ ಭವಿಷ್ಯವನ್ನು ಪ್ರತಿಪಾದಿಸಲು ಈ ವರ್ಷದ ಜೂನ್ ತಿಂಗಳನ್ನು ಟೊಯೊಟಾ ಪರಿಸರ ಮಾಸಾಚರಣೆ ಆರಂಭಿಸಿದೆ. ಪರಿಸರ ನಿರ್ವಹಣೆಯ ಕುರಿತು ಜಾಗೃತಿ ಮತ್ತು ಕಾರ್ಯಕ್ರಮಗಳನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.

VISTARANEWS.COM


on

Environment Month celebration by Toyota Kirloskar Motor
Koo

ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ)ನಿಂದ ಪರಿಸರ ಪ್ರಜ್ಞೆಯನ್ನು ಮತ್ತಷ್ಟು ಬೆಳೆಸುವುದು ಮತ್ತು ಹಸಿರು, ಸುಸ್ಥಿರ ಭವಿಷ್ಯವನ್ನು ಪ್ರತಿಪಾದಿಸಲು ಜೂನ್ 2024ಅನ್ನು ಟೊಯೊಟಾ (Toyota Kirloskar Motor) ಪರಿಸರ ಮಾಸಾಚರಣೆ ಪ್ರಾರಂಭಿಸಲಾಗಿದೆ.

ಟೊಯೊಟಾ ಎನ್ವಿರಾನ್‌ಮೆಂಟ್ ಚಾಲೆಂಜ್ 2050 (ಟಿಇಸಿ 2050) ಮತ್ತು ಈ ವರ್ಷದ ಥೀಮ್ “ಜಾಗತಿಕ ನಂ.1 ಆಗಲು ಜವಾಬ್ದಾರಿಯುತ ಸಂಪನ್ಮೂಲ ಬಳಕೆಗಾಗಿ ಒಗ್ಗೂಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ತನ್ನ ದೀರ್ಘಕಾಲೀನ ದೃಷ್ಟಿಕೋನದ ಕಾರ್ಯಕ್ರಮಗಳ ಮೂಲಕ ಕಂಪನಿಯು ನೀರಿನ ನಿರ್ವಹಣೆ ಮತ್ತು ಅರಣ್ಯೀಕರಣದ ಮೂಲಕ ನೈಸರ್ಗಿಕ ಪರಿಸರ ವ್ಯವಸ್ಥೆಯ ಪುನರುಜ್ಜೀವನದ ಮೇಲೆ ಪ್ರಮುಖ ಗಮನ ಹರಿಸಿದೆ.

ಪರಿಸರ ನಿರ್ವಹಣೆಯ ಕುರಿತು ಜಾಗೃತಿ ಮತ್ತು ಕಾರ್ಯಕ್ರಮಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇದು “ನಮ್ಮ ಭೂಮಿ, ನಮ್ಮ ಭವಿಷ್ಯ” ಎಂಬ ಘೋಷಣೆ ಸುತ್ತುವರೆದಿರುವ ಭೂ ಪುನಃಸ್ಥಾಪನೆ, ಮರುಭೂಮೀಕರಣ ಮತ್ತು ಬರ ಸ್ಥಿತಿಸ್ಥಾಪಕತ್ವದ ನಿರ್ಣಾಯಕ ಸಮಸ್ಯೆಗಳನ್ನು ಒತ್ತಿ ಹೇಳುತ್ತದೆ.

ಇದನ್ನೂ ಓದಿ: Govt Employees Association: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ನಡೆಸಲು ಕಾರ್ಯಕಾರಿ ಸಮಿತಿ ತೀರ್ಮಾನ

ಹಲವು ವರ್ಷಗಳಿಂದ ಟಿಕೆಎಂ ಪ್ರಜ್ಞಾಪೂರ್ವಕವಾಗಿ ಸುಸ್ಥಿರ ವ್ಯವಹಾರ ಪದ್ಧತಿಯನ್ನು ಅಳವಡಿಸಿಕೊಂಡಿದೆ. ಕಾರು ತಯಾರಕರಿಂದ ಚಲನಶೀಲತೆ ಕಂಪನಿಯಾಗಿ ರೂಪಾಂತರಗೊಂಡಿದೆ. ಭೂ ಗ್ರಹವನ್ನು ಗೌರವಿಸುವ ತತ್ವವನ್ನು ಗಮನದಲ್ಲಿಟ್ಟುಕೊಂಡು, ಟೊಯೊಟಾ ಜಾಗತಿಕವಾಗಿ ಅಕ್ಟೋಬರ್ 2015 ರಲ್ಲಿ ‘ಟೊಯೊಟಾ ಎನ್ವಿರಾನ್‌ಮೆಂಟ್ ಚಾಲೆಂಜ್ 2050’ (ಟಿಇಸಿ 2050) ಅನ್ನು ಘೋಷಿಸಿತು. ಇದು ಆರು ಪರಿಸರ ಸವಾಲುಗಳನ್ನು ಒಳಗೊಂಡಿದೆ. ಮೊದಲ ಮೂರು ಸವಾಲುಗಳು – ನಮ್ಮ ಉತ್ಪನ್ನಗಳಿಂದ ಇಂಗಾಲದ ತಟಸ್ಥತೆಯನ್ನು ಸಾಧಿಸುವುದರ ಮೇಲೆ ಕೇಂದ್ರೀಕರಿಸುತ್ತದೆ, ಮತ್ತು ಉತ್ಪಾದನಾ ಚಟುವಟಿಕೆಗಳು ಸೇರಿದಂತೆ ಅದರ ಸಂಪೂರ್ಣ ಮೌಲ್ಯ ಸರಪಳಿಯನ್ನು ಒಳಗೊಂಡಿದೆ.

ನಂತರದ 3 ಸವಾಲುಗಳು ನೀರಿನ ಬಳಕೆಯನ್ನು ಕಡಿಮೆ ಮಾಡುವ ಮತ್ತು ಉತ್ತಮಗೊಳಿಸುವ ಮೂಲಕ, ಮರುಬಳಕೆ ಆಧಾರಿತ ಸಮಾಜವನ್ನು ಸಕ್ರಿಯಗೊಳಿಸುವುದು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯ’ದಲ್ಲಿ ಭವಿಷ್ಯದ ಸಮಾಜವನ್ನು ಸ್ಥಾಪಿಸುವ ಮೂಲಕ ಸಕಾರಾತ್ಮಕ ಪರಿಣಾಮವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.

ನಮ್ಮ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಗುರಿಯೊಂದಿಗೆ, ಟಿಕೆಎಂ ಸಮಗ್ರ ವಿಧಾನವನ್ನು ಅಳವಡಿಸಿಕೊಂಡಿದೆ. ಉತ್ಪಾದನೆಗೆ ಅಗತ್ಯವಿರುವ 95% ನೀರನ್ನು ಮರುಬಳಕೆ ಮತ್ತು ಮಳೆನೀರು ಕೊಯ್ಲು ಮೂಲಕ ಪೂರೈಸಲಾಗುತ್ತದೆ. ಇದಲ್ಲದೆ, ಟಿಕೆಎಂ ತ್ಯಾಜ್ಯದ ಮರುಬಳಕೆಯನ್ನು 96% ವರೆಗೆ ಹೆಚ್ಚಿಸುವುದರೊಂದಿಗೆ ಮರುಬಳಕೆ ಆಧಾರಿತ ಸಮಾಜವನ್ನು ಉತ್ತೇಜಿಸುತ್ತಿದೆ.

ಇದನ್ನೂ ಓದಿ: India vs Ireland: ಇಂದು ನಡೆಯುವ ಭಾರತ-ಐರ್ಲೆಂಡ್​ ಪಂದ್ಯಕ್ಕೆ ಮಳೆ ಭೀತಿ ಇದೆಯೇ?

ಪರಿಸರದ ಮೇಲ್ವಿಚಾರಕರಾಗಿ ಕಂಪನಿಯು ಪ್ರಕೃತಿ ಸಂರಕ್ಷಣೆಯಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಹಲವು ವರ್ಷಗಳಿಂದ ಟಿಕೆಎಂ ಮಿಯಾವಾಕಿ ಪರಿಕಲ್ಪನೆಯನ್ನು ಬಳಸಿಕೊಂಡು ತನ್ನ ಕಾರ್ಖಾನೆ ಆವರಣದಲ್ಲಿ 112 ಎಕರೆಗಳಲ್ಲಿ 328,000 ಕ್ಕೂ ಹೆಚ್ಚು ಮರಗಳನ್ನು ನೆಟ್ಟಿದೆ. ಇದು “ಸಂಭಾವ್ಯ ನೈಸರ್ಗಿಕ ಸಸ್ಯವರ್ಗ” ಪರಿಕಲ್ಪನೆಯ ಆಧಾರದ ಮೇಲೆ ಕಾಡುಗಳನ್ನು ಪುನಃಸ್ಥಾಪಿಸುವ ಮತ್ತು ಪುನರ್ನಿರ್ಮಿಸುವತ್ತ ಗಮನ ಹರಿಸುತ್ತದೆ.

ಸ್ಥಳೀಯ ಜೀವವೈವಿಧ್ಯತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ಟಿಕೆಎಂ ಅತ್ಯಾಧುನಿಕ ‘ಪರಿಸರ ವಲಯ’ ಎಂಬ ಪ್ರಾಯೋಗಿಕ ಕಲಿಕಾ ಕೇಂದ್ರವನ್ನು ಸ್ಥಾಪಿಸಿದೆ. ಇದು ಟಿಕೆಎಂನ ಸ್ಥಾವರದಲ್ಲಿ 17 ಥೀಮ್ ಪಾರ್ಕ್‌ಗಳನ್ನು ಹೊಂದಿದೆ. ಹವಾಮಾನ ಬದಲಾವಣೆ, ಕಸದಿಂದ-ರಸ, ಪರಿಸರ ಸಮತೋಲನ, ಜಲ ಸಂಪನ್ಮೂಲ ನಿರ್ವಹಣೆ ಸೇರಿದಂತೆ ಪ್ರಕೃತಿ ಸಂರಕ್ಷಣೆಯ ವಿವಿಧ ಅಂಶಗಳ ಬಗ್ಗೆ ಜ್ಞಾನ ಹಂಚಿಕೆಯ ಮೂಲಕ ಕೊಡುಗೆ ನೀಡುತ್ತಲೇ ಇದೆ.

ಬಿಡದಿ ಮತ್ತು ರಾಮನಗರ ಪ್ರದೇಶಗಳಲ್ಲಿನ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು, ವ್ಯವಹಾರ ಸಹವರ್ತಿಗಳು, ಟೊಯೋಟಾ ಗ್ರೂಪ್ ಕಂಪನಿಗಳ ಸದಸ್ಯರು, ಶಾಲಾ ಮಕ್ಕಳು ಮತ್ತು ಸಮುದಾಯದ ಸದಸ್ಯರು ಸೇರಿದಂತೆ ಮಧ್ಯಸ್ಥಗಾರರಲ್ಲಿ ಸುಸ್ಥಿರ ಜೀವನಶೈಲಿಯನ್ನು ಉತ್ತೇಜಿಸಲು “ಟೊಯೊಟಾ ಸ್ವಚ್ಛ ಅಭಿಯಾನ, “ರಾರ್” (ಜವಾಬ್ದಾರಿಯಾಗಿ ಮರುಬಳಕೆ / ಉದಾ. ಕಚೇರಿ ಸಮವಸ್ತ್ರ ಮರುಬಳಕೆ), ಟೊಯೊಟಾ ಇಕೋ ಕ್ಲಬ್, ಇಕೋ ಫ್ಯಾಮಿಲಿ ವಾಕ್ (ಪರಿಸರ ವಲಯ) ಮುಂತಾದ ಚಟುವಟಿಕೆಗಳನ್ನು ಇಡೀ ತಿಂಗಳು ಆಯೋಜಿಸಲಾಗಿದೆ.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಉತ್ಪಾದನಾ ನಿರ್ದೇಶಕ ಬಿ.ಪದ್ಮನಾಭ ಟಿಕೆಎಂನ ಪರಿಸರ ಮಾಸಾಚರಣೆ ಕುರಿತು ಮಾತನಾಡಿ, “ಟೊಯೊಟಾ ಕಿರ್ಲೋಸ್ಕರ್ ಮೋಟಾರ್‌ನಲ್ಲಿ ಆರ್ಥಿಕ ಪ್ರಗತಿಯಷ್ಟೇ ಅಲ್ಲದೆ, ಪರಿಸರ ಮತ್ತು ಸಾಮಾಜಿಕ ಸುಸ್ಥಿರತೆಯೂ ನಿರ್ಣಾಯಕವಾಗಿದೆ ಎಂದು ನಾವು ಗುರುತಿಸುತ್ತೇವೆ. ಟೊಯೊಟಾ ಜಾಗತಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತಿರುವ ಆರು ಪರಿಸರ ಸವಾಲುಗಳಿಗೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Gold Rate Today: ಮತ್ತೆ ಇಳಿದ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

ಈ ಹಿಂದೆ ಟಿಕೆಎಂ ತನ್ನ ಪರಿಸರ ಬದ್ಧತೆಗಾಗಿ ಆಯಾ ವಿಭಾಗಗಳಲ್ಲಿ ವಿವಿಧ ಪ್ರಶಂಸೆಗಳು / ಮಾನ್ಯತೆಗಳನ್ನು ಪಡೆದಿದೆ. ಟೆರಿ ವಾಟರ್ ಸಸ್ಟೈನಬಿಲಿಟಿ ಪ್ರಶಸ್ತಿ, ಜೀವವೈವಿಧ್ಯತೆಗಾಗಿ ಸಿಐಐ ಸುಸ್ಥಿರತೆ ಪ್ರಶಸ್ತಿ, ನೀರು ಮತ್ತು ಅಪಾಯಕಾರಿ ತ್ಯಾಜ್ಯ ನಿರ್ವಹಣೆಗಾಗಿ ಸಿಐಐ ಪ್ರಶಸ್ತಿ, ನೀರಿನ ನಿರ್ವಹಣೆಯಲ್ಲಿ ಸಿಐಐ-ಎಸ್ಆರ್ ಇಎಚ್ಎಸ್ ಎಕ್ಸಲೆನ್ಸ್ ಪ್ರಶಸ್ತಿ, ಸಿಐಐ ಗ್ರೀನ್ ಕೋ ಪ್ಲಾಟಿನಂ ಕಂಪನಿ ಪರಿಸರ ಶ್ರೇಷ್ಠತೆ ಮತ್ತು ಸುಸ್ಥಿರ ನಾಯಕತ್ವಕ್ಕಾಗಿ ಪ್ರಶಸ್ತಿ, ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದೆ.

Continue Reading
Advertisement
IND vs PAK
ಕ್ರೀಡೆ6 mins ago

IND vs PAK: ಪಾಕ್​ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಕೊಹ್ಲಿ ಸಜ್ಜು; ಯಾವುದು ಈ ದಾಖಲೆ?

Karnataka weather Forecast
ಮಳೆ29 mins ago

Karnataka Weather : ಉತ್ತರ ಒಳನಾಡು, ಕರಾವಳಿಯಲ್ಲಿ ವ್ಯಾಪಕ ಮಳೆ; ಶಾಲೆಗೆ ನುಗ್ಗಿದ ನೀರು, ಮಕ್ಕಳಿಗೆ ರಜೆ

ಬೆಂಗಳೂರು35 mins ago

Wheelchair Cricket Tournament: ವಿಶೇಷಚೇತನರ ಗಾಲಿಕುರ್ಚಿಯ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿದ ರವಿಶಂಕರ್ ಗುರೂಜಿ

Ambani Family Fashion
ಫ್ಯಾಷನ್49 mins ago

Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

Narendra Modi
ದೇಶ51 mins ago

Narendra Modi: ನಾಳೆ 3ನೇ ಬಾರಿ ಮೋದಿಗೆ ಪ್ರಧಾನಿ ಗಾದಿ; ಇಲ್ಲಿದೆ ಅವರ ರಾಜಕೀಯದ ಹಾದಿ!

Norway Chess
ಕ್ರೀಡೆ59 mins ago

Norway Chess: 3ನೇ ಸ್ಥಾನಕ್ಕೆ ತೃಪ್ತಿಪಟ್ಟ ಪ್ರಜ್ಞಾನಂದ; ಸಹೋದರಿ ವೈಶಾಲಿಗೆ 4ನೇ ಸ್ಥಾನ

IND vs PAK
ಕ್ರೀಡೆ2 hours ago

IND vs PAK: ಭಾರತ-ಪಾಕ್​ ಪಂದ್ಯಕ್ಕೆ 4 ಹಂತದ ಭದ್ರತಾ ವ್ಯವಸ್ಥೆ; ಮೈದಾನಕ್ಕೆ ನುಗ್ಗಿದರೆ ಜೈಲೂಟ ಖಚಿತ!

Money Guide
ಮನಿ-ಗೈಡ್2 hours ago

Money Guide: ಈಗಿನ ಆರೋಗ್ಯ ವಿಮಾ ಪಾಲಿಸಿ ಬಗ್ಗೆ ಸಮಾಧಾನ ಇಲ್ಲವೆ? ಹೆಲ್ತ್ ಇನ್ಶೂರೆನ್ಸ್ ಪೋರ್ಟೆಬಿಲಿಟಿ ಬಳಸಿ

Niveditha Gowda chandan shetty age differance
ಸ್ಯಾಂಡಲ್ ವುಡ್2 hours ago

Niveditha Gowda: ಚಂದನ್‌ ಶೆಟ್ಟಿ-ನಿವೇದಿತಾ ನಡುವಿನ ವಯಸ್ಸಿನ ಅಂತರವೆಷ್ಟು?

Viral Video
ವೈರಲ್ ನ್ಯೂಸ್2 hours ago

Viral Video: ಹೊಟೇಲ್‌ ಮಾಲೀಕನನ್ನು ಮುಖಾಮೂತಿ ನೋಡದೆ ಚಚ್ಚಿದ ಶಾಸಕ; ವಿಡಿಯೋ ಫುಲ್‌ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ24 hours ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 day ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ4 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ5 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ5 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ1 week ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌