Saud Shakeel: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಪಾಕ್​ ಆಟಗಾರ - Vistara News

ಕ್ರಿಕೆಟ್

Saud Shakeel: ಒಂದೇ ಪಂದ್ಯದಲ್ಲಿ ಹಲವು ದಾಖಲೆ ಬರೆದ ಪಾಕ್​ ಆಟಗಾರ

ಪಾಕ್​ ಕ್ರಿಕೆಟಿಗ ಸೌದ್‌ ಶಕೀಲ್‌(Saud Shakeel) ಅವರು ಶ್ರೀಲಂಕಾ ವಿರುದ್ಧ ಅಮೋಘ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ

VISTARANEWS.COM


on

Pakistan's Saud Shakeel celebrates scoring a double century during the third day of the first cricket test match between Sri Lanka and Pakistan in Galle
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಾಲೆ: ಪಾಕಿಸ್ತಾನ ಕ್ರಿಕೆಟ್​ ತಂಡದ ಎಡಗೈ ಆಟಗಾರ ಸೌದ್‌ ಶಕೀಲ್‌(Saud Shakeel) ಅವರು ಶ್ರೀಲಂಕಾ ವಿರುದ್ಧ ಅಮೋಘ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನ 312 ರನ್ನ್​ಗಳನ್ನು ಬೆನ್ನಟ್ಟಿದ ಪಾಕ್​ ಉತ್ತಮ ಆಟವಾಡಿ 461 ರನ್​ ಬಾರಿಸಿ 149ರನ್​ ಲೀಡ್​ ಪಡೆದಿದೆ. ಇದಕ್ಕೆ ಉತ್ತರವಾಗಿ ಲಂಕಾ ದ್ವಿತೀಯ ಇನಿಂಗ್ಸ್​ ಆರಂಭಿಸಿದೆ.

ಮೂರನೇ ದಿನವಾದ ಮಂಗಳವಾರ ಪಾಕಿಸ್ತಾನ 5ಕ್ಕೆ 221 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಸೌದ್‌ ಶಕೀಲ್‌ 69 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ಬಿರುಸಿನ ಬ್ಯಾಟಿಂಗ್​ ನಡೆಸಿದ ಅವರು 2ನೇ ಶತಕ ಹಾಗೂ ಚೊಚ್ಚಲ ದ್ವಿಶತಕ ಬಾರಿಸಿ ಮಿಂಚಿದರು. ಒಟ್ಟು 361 ಎಸೆತ ಎದುರಿಸಿ ನಿಂತ ಅವರು 19 ಬೌಂಡರಿ ನೆರವಿನಿಂದ ಅಜೇಯ 208 ರನ್‌ ಬಾರಿಸಿದರು. ಇದೇ ವೇಳೆ ಹಲವು ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಇದನ್ನೂ ಓದಿ Asia Cup 2023 : ಭಾರತ ತಂಡಕ್ಕೆ ಶುಭ ಸುದ್ದಿ; ಏಷ್ಯಾ ಕಪ್​ಗೆ ಬಲಿಷ್ಠ ಬಲಗೈ ಬ್ಯಾಟರ್​ ರೆಡಿ!

ಸೌದ್‌ ಶಕೀಲ್‌ ಸಾಧನೆಗಳ ಪಟ್ಟಿ

1. ಟೆಸ್ಟ್​ ಕ್ರಿಕೆಟ್​ನ 10 ಇನಿಂಗ್ಸ್​ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್​ ಎವರೇಜ್​ ಹೊಂದಿದವರ ಪಟ್ಟಿಯಲ್ಲಿ ಶಕೀಲ್‌(98.50) ದ್ವಿತೀಯ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಸರ್‌ ಡಾನ್‌ ಬ್ರಾಡ್‌ಮನ್‌(99.95)(don bradman) ಅಗ್ರಸ್ಥಾನಲ್ಲಿದ್ದಾರೆ.

2. ಶ್ರೀಲಂಕಾದಲ್ಲಿ ಡಬಲ್ ಸೆಂಚುರಿ ಬಾರಿಸಿದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಹೆಗ್ಗಳಿಕೆಗೆ ಶಕೀಲ್‌ ಪಾತ್ರರಾದರು.

3. ಶ್ರೀಲಂಕಾದಲ್ಲಿ ದ್ವಿಶತಕ ಬಾರಿಸಿದ ಮೂರನೇ ಏಷ್ಯಾದ ಬ್ಯಾಟರ್​ ಎಂಬ ದಾಖಲೆ ಬರೆದರು. ಇದರೊಂದಿಗೆ ಜತೆಗೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹವಾಗ್​ ಅವರ ದಾಖಲೆಯೊಂದನ್ನು ಸರಿಗಟ್ಟಿದರು. ಸಚಿನ್(sachin tendulkar)​ ಅವರು 2010ರಲ್ಲಿ ಸೆಹವಾಗ್(virender sehwag)​ 2008ರಲ್ಲಿ ಲಂಕಾ ನೆಲದಲ್ಲಿ ದ್ವಿಶತಕ ಬಾರಿಸಿದ್ದರು.

4. ಲಂಕಾ ವಿರುದ್ಧ ದ್ವಿಶತಕ ಬಾರಿಸಿದ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ ಶಕೀಲ್​ಗೆ 4ನೇ ಸ್ಥಾನ. ಇದಕ್ಕೂ ಮುನ್ನ ವೀರೇಂದ್ರ ಸೆಹವಾಗ್​ (208), ಸಚಿನ್ ತೆಂಡೂಲ್ಕರ್ (203) ಹಾಗೂ ಜೋ ರೂಟ್ (228) ಅವರು ಈ ಸಾಧನೆ ಮಾಡಿದ್ದರು.

5. ಪಾಕಿಸ್ತಾನ ಪರ ದ್ವಿಶತಕ ಸಿಡಿಸಿದ 23ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸೌದ್ ಶಕೀಲ್ ಪಾತ್ರರಾಗಿದ್ದಾರೆ.

6. ವಿದೇಶಿ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿದ 2ನೇ ಪಾಕ್​ ಆಟಗಾರ ಎಂಬ ಹಿರಿಮೆ ಸೌದ್ ಶಕೀಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1971 ರಲ್ಲಿ ಇಂಗ್ಲೆಂಡ್ ವಿರುದ್ಧ ಝಹೀರ್ ಅಬ್ಬಾಸ್ ದ್ವಿಶತಕ ಬಾರಿಸಿದ್ದರು. ಇದು ಪಾಕ್​ ಪರ ಆಟಗಾರನೋರ್ವ ವಿದೇಶ ನೆಲದಲ್ಲಿ ದಾಖಲಿಸಿದ ಮೊದಲ ದ್ವಿಶತಕವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

David Warner : ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ನೇತೃತ್ವದಲ್ಲಿ ವಿಶ್ವಾಸದಿಂದಲೇ ವೆಸ್ಟ್​ ಇಂಡೀಸ್​ಗೆ ತೆರಳಿತ್ತು. ಆದರೆ, ಅಪಘಾನಿಸ್ತಾನ ವಿರುದ್ಧ ಸೂಪರ್​ ಪಂದ್ಯವನ್ನು ಸೋತ ಬಳಿಕ ನಡುಗಿತು. ಬಳಿಕ ಭಾರತ ವಿರುದ್ಧವೂ ಹೀನಾಯವಾಗಿ ಪರಾಭವಗೊಂಡಿತು.

VISTARANEWS.COM


on

David Warner
Koo

ಬೆಂಗಳೂರು: ದುರಂಹಕಾರಿ ಆಸ್ಟ್ರೇಲಿಯಾ ತಂಡ ವಿಶ್ವ ಕಪ್​ನ ಸೂಪರ್ 8 ಹಂತದಿಂದ ಹೊರಕ್ಕೆ ಬಿದ್ದಿದೆ. ಹೀಗಾಗಿ ಆ ತಂಡಕ್ಕೆ ಆಘಾತವಾಗಿದೆ. 2021ರ ಆವೃತ್ತಿಯ ಚಾಂಪಿಯನ್ ಹಾಗೂ 2023ರ ಏಕ ದಿನ ವಿಶ್ವ ಕಪ್ ಚಾಂಪಿಯನ್ ತಂಡಕ್ಕೆ ಇದು ನಿಜವಾಗಿಯೂ ದುಃಖದ ವಿಚಾರ. ಹೀಗಾಗಿ ಸೋಲಿನ ಬಳಿಕ ಆಟಗಾರರು ಬಿಯರ್​ ಕುಡಿತಾ ಬೇಸರ ಹೊರಹಾಕಿದ್ದಾರೆ ಎಂಬುದಾಗಿ ವರದಿಯಾಗಿದೆ. ಬಿಯರ್ ಅಲ್ಲಿ ಸಾಮಾನ್ಯ ಸಂಸ್ಕೃತಿಯಾಗಿರುವ ಕಾರಣ ಅದು ಎಷ್ಟು ಸತ್ಯ ಎಂಬುದು ಗೊತ್ತಿಲ್ಲ. ಆದರೆ, ಜೇಕ್ ಫ್ರೇಸರ್ ಮೆಗ್​ಕುರ್ಕ್​ ಹಾಗೂ ಡೇವಿಡ್​ ವಾರ್ನರ್ (David Warner ) ಬಿಯರ್​ ಕುಡಿತಾ ಕುಳಿತಿರುವ ಫೋಟೊಗಳನ್ನು ಹಾಕಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್​ ನೇತೃತ್ವದಲ್ಲಿ ವಿಶ್ವಾಸದಿಂದಲೇ ವೆಸ್ಟ್​ ಇಂಡೀಸ್​ಗೆ ತೆರಳಿತ್ತು. ಆದರೆ, ಅಪಘಾನಿಸ್ತಾನ ವಿರುದ್ಧ ಸೂಪರ್​ ಪಂದ್ಯವನ್ನು ಸೋತ ಬಳಿಕ ನಡುಗಿತು. ಬಳಿಕ ಭಾರತ ವಿರುದ್ಧವೂ ಹೀನಾಯವಾಗಿ ಪರಾಭವಗೊಂಡಿತು. ಗೆದ್ದೇ ಗೆಲ್ಲುತ್ತೇವೆ ಎಂಬ ಅತ್ಯುತ್ಸಾಹದಲ್ಲಿ ಸಾಗುವ ಕಾಂಗಾರೂ ಪಡೆಗಳಿಗೆ ಇದು ಸಂಪೂರ್ಣ ನಿರಾಸೆಯ ಸಂಗತಿಯಾಗಿದೆ. ಹೀಗಾಗಿ ಬಿಯರ್​ ಕುಡಿಯದೇ ವಿಧಿಯಿಲ್ಲ

ಮೆಗ್​ಕುರ್ಕ್​ ವಿಶ್ವ ಕಪ್​​ ಆಸ್ಟ್ರೇಲಿಯಾ ತಂಡದ ಪರ ಬ್ಯಾಟಿಂಗ್ ಮಾಡುವ ಮೂಲಕ ಅದ್ಭುತ ಪ್ರದರ್ಶನ ನೀಡಿದ್ದಾರೆ. ಯುವ ಬ್ಯಾಟ್ಸ್ಮನ್ ಅನ್ನು ಆಸ್ಟ್ರೇಲಿಯಾ ತಂಡದ ಮುಂದಿನ ಸಂಭಾವ್ಯ ಆರಂಭಿಕ ಆಟಗಾರ ಎಂದು ಪರಿಗಣಿಸಲಾಗಿದೆ. ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್​​ ಡೇವಿಡ್ ವಾರ್ನರ್ ಈ ಯುವ ಆಟಗಾರನಿಗೆ ಪ್ರೇರಣೆ.

ವಿಶೇಷವೆಂದರೆ, ಇಬ್ಬರೂ ಕ್ರಿಕೆಟಿಗರು ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಡ್ರೆಸ್ಸಿಂಗ್ ಕೊಠಡಿಯನ್ನು ಹಂಚಿಕೊಂಡಿದ್ದಾರೆ. 2024 ರ ಟಿ 20 ವಿಶ್ವ ಕಪ್​ನಿಂದ ಆಸೀಸ್​ ಬಳಗ ಹೊರಬಿದ್ದ ನಂತರ ಅವರಿಬ್ಬರೂ ಮೈದಾನದಿಂದ ದೂರವಿದ್ದರು. ಅವರಿಬ್ಬರೂ ಜತೆಯಾಗಿ ಬಿಯರ್​ ಕುಡಿದಿದ್ದಾರೆ.

ಮೆಗ್​ಕುರ್ಕ್​ ಒಂದೇ ಒಂದು ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೂ ಆಸೀಸ್​ ತಂಡದ ಟ್ರೋಫಿಗೆ ಸವಾಲೊಡ್ಡುವ ವಾತಾವರಣಕ್ಕೆ ಅವರು ತೆರೆದುಕೊಂಡರು. ಡೇವಿಡ್ ವಾರ್ನರ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಮೆಗ್​ಕುರ್ಕ್​ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ತಮ್ಮ ಕೆರಿಬಿಯನ್ ವಾಸ್ತವ್ಯದ ಮುಕ್ತಾಯದ ನಂತರ ಬಿಯರ್ ಕುಡಿತಾ ಕುಳಿತಿದ್ದರು.

ಮೆಗ್​ಕುರ್ಕ್​ ಪ್ರಶ್ನೆಗಳನ್ನು ಕೇಳುತ್ತಾರೆ : ವಾರ್ನರ್

ಆಸ್ಟ್ರೇಲಿಯಾ ತಂಡದಲ್ಲಿ ಜೇಕ್ ಫ್ರೇಸರ್ ಮೆಕ್ಗುರ್ಕ್ ಅವರ ಸಂಭಾವ್ಯ ಸ್ಥಾನದ ಬಗ್ಗೆ ವಾರ್ನರ್ ಮಾತನಾಡಿದ್ದಾರೆ. ಜಾಗತಿಕ ಟೂರ್ನಿಯಿಂದ ದುರದೃಷ್ಟವಶಾತ್ ನಿರ್ಗಮಿಸಿದ ನಂತರ ಆಸ್ಟ್ರೇಲಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ ಮತ್ತು ಮೆಕ್ಗುರ್ಕ್ ಸ್ಥಾನ ಪಡೆಯುವ ವಿಶ್ವಾಸವನ್ನು ಅವರು ತೋರಿಸಿದ್ದಾರೆ. ಮೆಕ್ಗುರ್ಕ್, ವಿಶೇಷವಾಗಿ, ಡೆಲ್ಲಿ ಕ್ಯಾಪಿಟಲ್ಸ್​ ತಂಡ ಪರವಾಗಿ ಅಸಾಧಾರಣ ಪ್ರದರ್ಶನ ನೀಡಿದ್ದರು. ಅವರನ್ನು ಪಂದ್ಯಾವಳಿಯ ಫೈನಲ್​ ಸ್ಟ್ರೈಕರ್ ಎಂದು ಕರೆಯಲಾಗಿತ್ತು. ಅವರ ಸ್ಟ್ರೈಕ್ ರೇಟ್ 200 ರ ಗಡಿಯನ್ನು ಮೀರಿತ್ತು.

ಇದನ್ನೂ ಓದಿ: Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

” ಮೆಗ್​ಕುರ್ಕ್​ ಅವರ ಅನುಭವವು ಉತ್ತಮವಾಗಿರುತ್ತದೆ. ಅವರು ಆಗಸ್ಟ್ ಅಂತ್ಯದಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಚಿಕ್ಕ ಮಗುವಾಗಿ, ಆಟದ ಬಗ್ಗೆ, ತಂಡದ ಆಟಗಾರನಾಗಿ ಗುಂಪಿನ ಸುತ್ತಲೂ ಇರುವುದು ಹೇಗೆ ಎಂಬುದನ್ನು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಅವರು ಆಟವನ್ನು ಪ್ರೀತಿಸುತ್ತಾರೆ” ಎಂದು ವಾರ್ನರ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

Women’s Asia Cup 2024 : ಮಹಿಳೆಯರ ಏಷ್ಯಾ ಕಪ್​ ಕ್ರಿಕೆಟ್​ನ ವೇಳಾಪಟ್ಟಿ ಬಿಡುಗಡೆ, ಜುಲೈ 19ಕ್ಕೆ ಭಾರತ- ಪಾಕ್ ಪಂದ್ಯ

Women’s Asia Cup 2024 : ಏಷ್ಯಾದ ಅಗ್ರ 8 ಮಹಿಳಾ ಕ್ರಿಕೆಟ್ ತಂಡಗಳನ್ನು ಒಳಗೊಂಡ ಪಂದ್ಯಾವಳಿಗೆ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ. ನಿಮ್ಮ ಕ್ಯಾಲೆಂಡರ್​ನಲ್ಲಿ ದಿನಾಂಕಗಳನ್ನು ಮಾರ್ಕ್ ಮಾಡಿ. ಏಕೆಂದರೆ ಇದು ಜುಲೈ 19, 2024 ರಂದು ಶ್ರೀಲಂಕಾದ ಡಂಬುಲ್ಲಾದಲ್ಲಿ ಟೂರ್ನಿ ಪ್ರಾರಂಭವಾಗಲಿದೆ, ಕಾಂಟಿನೆಂಟಲ್ ಕ್ರಿಕೆಟ್ ಆಡಳಿತ ಮಂಡಳಿಯಾಗಿರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ತನ್ನ ‘ಎಕ್ಸ್’ ಹ್ಯಾಂಡಲ್​ನಲ್ಲಿ ಬರೆದುಕೊಂಡಿದೆ.

VISTARANEWS.COM


on

Women's Asia Cup
Koo

ಬೆಂಗಳೂರು : ಇತ್ತೀಚೆಗೆ ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3-0 ಸರಣಿ ಗೆಲುವಿನೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಉತ್ಸಾಹದಲ್ಲಿದೆ. ಇದೀಗ ಮತ್ತೊಂದು ಪ್ರಮುಖ ಪಂದ್ಯಾವಳಿಗಾಗಿ ಶೀಘ್ರದಲ್ಲೇ ಸಿದ್ಧಗೊಳ್ಳಬೇಕಾಗಿದೆ. ಅದುವೇ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ (Women’s Asia Cup 2024 )​. ಅಲ್ಲಿ ಏಷ್ಯಾದ ಅಗ್ರ ತಂಡಗಳು ಖಂಡಾಂತರ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಮುಂಬರುವ ಮಹಿಳಾ ಏಷ್ಯಾ ಕಪ್ 2024 ಖಂಡದ ಅಗ್ರ ಎಂಟು ತಂಡಗಳು ಭಾಗವಹಿಸಲಿವೆ. ಜುಲೈ 19ರಿಂದ ಆರಂಭವಾಗಲಿರುವ ಈ ರೋಚಕ ಕ್ರಿಕೆಟ್ ಪಂದ್ಯ ಜುಲೈ 28ರಂದು ಮುಕ್ತಾಯಗೊಳ್ಳಲಿದೆ. ಶ್ರೀಲಂಕಾ ಟೂರ್ನಿಗೆ ಆತಿಥ್ಯ ವಹಿಸಲಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಏಷ್ಯಾದ ಅಗ್ರ 8 ಮಹಿಳಾ ಕ್ರಿಕೆಟ್ ತಂಡಗಳನ್ನು ಒಳಗೊಂಡ ಪಂದ್ಯಾವಳಿಗೆ ನಿಮ್ಮನ್ನು ಸಜ್ಜುಗೊಳಿಸಿಕೊಳ್ಳಿ. ನಿಮ್ಮ ಕ್ಯಾಲೆಂಡರ್​ನಲ್ಲಿ ದಿನಾಂಕಗಳನ್ನು ಮಾರ್ಕ್ ಮಾಡಿ. ಏಕೆಂದರೆ ಇದು ಜುಲೈ 19, 2024 ರಂದು ಶ್ರೀಲಂಕಾದ ಡಂಬುಲ್ಲಾದಲ್ಲಿ ಟೂರ್ನಿ ಪ್ರಾರಂಭವಾಗಲಿದೆ, ಕಾಂಟಿನೆಂಟಲ್ ಕ್ರಿಕೆಟ್ ಆಡಳಿತ ಮಂಡಳಿಯಾಗಿರು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಗಳವಾರ ತನ್ನ ‘ಎಕ್ಸ್’ ಹ್ಯಾಂಡಲ್ನಲ್ಲಿ ಬರೆದುಕೊಂಡಿದೆ.

ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ

ಮಹಿಳಾ ಏಷ್ಯಾ ಕಪ್ 2024 ರ ವೇಳಾಪಟ್ಟಿಯ ಬಗ್ಗೆ ಮಾತನಾಡುವುದಾದರೆ, ಜುಲೈ 21 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮಹಿಳಾ ವಿರುದ್ಧ ಭಾರತ ಮಹಿಳಾ ತಂಡವನ್ನು ಆಡಲು ನಿರ್ಧರಿಸಲಾಗಿತ್ತು. ಆದಾಗ್ಯೂ, ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಎಸಿಸಿ ಆಟವನ್ನು ಜುಲೈ 19 ಕ್ಕೆ ನಿಗದಿ ಮಾಡಿದೆ. ವಿಶೇಷವೆಂದರೆ, ಅಪೇಕ್ಷಿತ ಪಂದ್ಯಾವಳಿಯಲ್ಲಿ ಎಂಟು ತಂಡಗಳು ಕೇಂದ್ರ ಸ್ಥಾನವನ್ನು ಪಡೆಯುತ್ತಿರುವುದು ಇದೇ ಮೊದಲು. ಕಾಂಟಿನೆಂಟಲ್ ಈವೆಂಟ್​​ನಲ್ಲಿ ಇಲ್ಲಿಯವರೆಗೆ ಕೇವಲ ಏಳು ತಂಡಗಳು ಆಡಿದ್ದವು.

ಇದನ್ನೂ ಓದಿ: T20 World Cup : ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ತಾಲಿಬಾನ್ ನಾಯಕ

ಏಷ್ಯನ್ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಆಯಾ ಗುಂಪುಗಳ ಅಗ್ರ ಎರಡು ತಂಡಗಳು ಜುಲೈ 26 ರಂದು ನಡೆಯಲಿರುವ ಸೆಮಿಫೈನಲ್​ಗೆ ಅರ್ಹತೆ ಪಡೆಯುತ್ತವೆ. ಫೈನಲ್ ಪಂದ್ಯ ಜುಲೈ 28ರಂದು ನಡೆಯಲಿದೆ. ಇದಲ್ಲದೆ, ಸಾಂಪ್ರದಾಯಿಕ ಎದುರಾಳಿಗಳ ಜೊತೆಗೆ ನೇಪಾಳ ಮತ್ತು ಯುಎಇ ತಂಡಗಳನ್ನು ಟೀಮ್ ಇಂಡಿಯಾದೊಂದಿಗೆ ಗುಂಪು ಮಾಡಲಾಗಿದೆ. ಬಾಂಗ್ಲಾದೇಶ, ಶ್ರೀಲಂಕಾ, ಥಾಯ್ಲೆಂಡ್ ಮತ್ತು ಮಲೇಷ್ಯಾ ತಂಡಗಳು ‘ಬಿ’ ಗುಂಪಿನಲ್ಲಿವೆ.

ಮಹಿಳಾ ಏಷ್ಯಾ ಕಪ್ ಅನ್ನು ಕೊನೆಯ ಬಾರಿಗೆ 2022 ರಲ್ಲಿ ಬಾಂಗ್ಲಾದೇಶದಲ್ಲಿ ಆಡಿಸಲಾಗಿತ್ತು. ಅಲ್ಲಿ ಫೈನಲ್​​ನಲ್ಲಿ ಶ್ರೀಲಂಕಾ ಮಹಿಳೆಯರನ್ನು ಎಂಟು ವಿಕೆಟ್​ಗಳಿಂ ಸೋಲಿಸಿದ ಭಾರತ ಮಹಿಳೆಯರು ಏಳನೇ ಪ್ರಶಸ್ತಿ ಗೆದ್ದುಕೊಂಡಿದ್ದರು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಏಷ್ಯಾ ಕಪ್ ಅನ್ನು ಎರಡು ವರ್ಷಗಳ ಕಾಲ ಮುಂದೂಡಲಾಗಿತ್ತು.

Continue Reading

ಪ್ರಮುಖ ಸುದ್ದಿ

Frank Duckworth : ಮಳೆ ಪೀಡಿತ ಪಂದ್ಯಗಳಿಗೆ ಅನ್ವಯಿಸುವ ಡಕ್ವರ್ತ್​​ ಲೂಯಿಸ್ ನಿಯಮದ ರೂವಾರಿ ಫ್ರಾಂಕ್​ ಡಕ್ವರ್ತ್​​ ನಿಧನ

Frank Duckworth ಮಳೆ ಪೀಡಿತ ಕ್ರಿಕೆಟ್ ಪಂದ್ಯಗಳ ಫಲಿತಾಂಶಗಳನ್ನು ನಿರ್ಧರಿಸಲು ಡಕ್ವರ್ತ್ ಮತ್ತು ಸಹ ಸಂಖ್ಯಾಶಾಸ್ತ್ರಜ್ಞ ಟೋನಿ ಲೂಯಿಸ್ ರೂಪಿಸಿದ ಡಕ್ವರ್ತ್-ಲೂಯಿಸ್ ಪ್ರಸ್ತುತ ಚಾಲ್ತಿಯಲ್ಲಿದೆ. ಐಸಿಸಿ ಅದಕ್ಕೆ ಮಾನ್ಯತೆ ನೀಡಿದೆ. ಈ ವಿಧಾನವನ್ನು ಮೊದಲ ಬಾರಿಗೆ 1997 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಳಸಲಾಯಿತು

VISTARANEWS.COM


on

Frank Duckworth
Koo

ಬೆಂಗಳೂರು: ಮಂಗಳವಾರ ಮುಂಜಾನೆ ನಡೆದ ಟಿ20 ವಿಶ್ವ ಕಪ್ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಫಘಾನಿಸ್ತಾನ ತಂಡ ಐತಿಹಾಸಿಕ ಗೆಲುವು ದಾಖಲಿಸಿತ್ತು. ಪಂದ್ಯದ ವೇಳೆ ಮಳೆ ಬಂದ ಕಾರಣ ಡಕ್ವರ್ತ್​ (Frank Duckworth) ಲೂಯಿಸ್ ನಿಯಮದ ಪ್ರಕಾರ ಬಾಂಗ್ಲಾದೇಶಕ್ಕೆ ಡಕ್ವರ್ತ್​ ನಿಯಮದ ಪ್ರಕಾರ 19 ಓವರ್​ಗಳಿಗೆ 114 ರನ್ ಮಾಡುವ ಗುರಿ ನೀಡಲಾಗಿತ್ತು. ಆದರೆ ಬಾಂಗ್ಲಾದೇಶ ತಂಡ 8 ರನ್​ಗಳಿಂದ ಸೋತಿತ್ತು. ಇಲ್ಲಿ ಅಪಘಾನಿಸ್ತಾನ ತಂಡಕ್ಕೆ ನೆರವಾಗಿದ್ದು ಡಕ್ವರ್ತ್​ ನಿಯಮ. ಇಂಥ ಅಮೋಘ ನಿಯಮದ ಸಹ ಕರ್ತೃ ಇಂಗ್ಲಿಷ್ ಸಂಖ್ಯಾಶಾಸ್ತ್ರಜ್ಞ ಫ್ರಾಂಕ್ ಡಕ್ವರ್ತ್ (84) ಮಂಗಳವಾರ ನಿಧನ ಹೊಂದಿದ್ದಾರೆ. ಈ ವಿಶೇಷ ದಿನದಂದು ಅವರು ನಿಧನದ ಸುದ್ದಿ ಪ್ರಕಟಗೊಂಡಿರುವುದು ವಿಶೇಷ. ಅ

ಮಳೆ ಪೀಡಿತ ಕ್ರಿಕೆಟ್ ಪಂದ್ಯಗಳ ಫಲಿತಾಂಶಗಳನ್ನು ನಿರ್ಧರಿಸಲು ಡಕ್ವರ್ತ್ ಮತ್ತು ಸಹ ಸಂಖ್ಯಾಶಾಸ್ತ್ರಜ್ಞ ಟೋನಿ ಲೂಯಿಸ್ ರೂಪಿಸಿದ ಡಕ್ವರ್ತ್-ಲೂಯಿಸ್ ಪ್ರಸ್ತುತ ಚಾಲ್ತಿಯಲ್ಲಿದೆ. ಐಸಿಸಿ ಅದಕ್ಕೆ ಮಾನ್ಯತೆ ನೀಡಿದೆ. ಈ ವಿಧಾನವನ್ನು ಮೊದಲ ಬಾರಿಗೆ 1997 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬಳಸಲಾಯಿತು. 2001 ರಲ್ಲಿ ಮಳೆಯಿಂದ ಮೊಟಕುಗೊಂಡ ಪಂದ್ಯಗಳಲ್ಲಿ ಪರಿಷ್ಕೃತ ಗುರಿ ನಿಗದಿಪಡಿಸುವ ಪ್ರಮಾಣಿತ ವಿಧಾನವಾಗಿ ಐಸಿಸಿ ಡಿಎಲ್​ಎಸ್​​ನ್ನು ಅಳವಡಿಸಿಕೊಂಡಿತು. ಅಂದ ಹಾಗೆ ಡಕ್ವರ್ತ್​ ಅವರು ಜೂನ್​ 21ಕ್ಕೆ ಮೃತಪಟ್ಟಿದ್ದಾರೆ. ಆದರೆ ವಿಷಯ ಪ್ರಕಟಗೊಂಡಿರುವುದು ಜೂನ್​ 25ರಂದು ಎಂಬುದು ವಿಶೇಷ.

ಇದನ್ನೂ ಓದಿ: T20 World Cup : ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ತಾಲಿಬಾನ್ ನಾಯಕ

ಡಕ್ವರ್ತ್ ಮತ್ತು ಲೂಯಿಸ್​ ಅವರ ನಿವೃತ್ತಿಯ ನಂತರ ಈ ವಿಧಾನವನ್ನು ಡಕ್ವರ್ತ್-ಲೂಯಿಸ್-ಸ್ಟರ್ನ್ ವಿಧಾನ ಎಂದು ಮರುನಾಮಕರಣ ಮಾಡಲಾಯಿತು. ಪ್ರಸ್ತುತ ಬಳಕೆಯಲ್ಲಿರುವ ನಿಯಮಕ್ಕ ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್ ಸ್ಟರ್ನ್ ಕೆಲವು ಮಾರ್ಪಾಡುಗಳನ್ನು ಮಾಡಿದ್ದಾರೆ.

ಡಕ್ವರ್ತ್ ಮತ್ತು ಲೂಯಿಸ್ ಇಬ್ಬರಿಗೂ ಜೂನ್ 2010 ರಲ್ಲಿ ಎಂಬಿಇ (ಮೆಂಬರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್) ಗೌರವ ನೀಡಲಾಗಿದೆ. ಡಿಎಲ್ಎಸ್ ವಿಧಾನವು ಸಂಕೀರ್ಣ ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಾಗಿದೆ. ಇದು ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಪರಿಷ್ಕೃತ ಗುರಿಯನ್ನು ನಿಗದಿಪಡಿಸಲು ಉಳಿದಿರುವ ವಿಕೆಟ್​ಗಳು ಮತ್ತು ಕಳೆದುಕೊಂಡ ಓವರ್​ನಂಥ ಅನೇಕ ಅಂಶಗಳನ್ನು ನೀಡುತ್ತದೆ.

Continue Reading

ಪ್ರಮುಖ ಸುದ್ದಿ

T20 World Cup : ಅಫಘಾನಿಸ್ತಾನ ತಂಡದ ನಾಯಕ ರಶೀದ್​ ಗೆ ಕರೆ ಮಾಡಿ ಶುಭಾಶಯ ತಿಳಿಸಿದ ತಾಲಿಬಾನ್ ನಾಯಕ

T20 World Cup: ಅಫ್ಘಾನಿಸ್ತಾನ ಪುರುಷರ ಟಿ 20 ವಿಶ್ವಕಪ್​​ನಲ್ಲಿ ಬಾರಿಗೆ ಸೆಮಿಫೈನಲ್ ತಲುಪುವ ಮೂಲಕ ಸ್ಮರಣೀಯ ದಾಖಲೆ ಬರೆದಿದೆ. ಕೆರಿಬಿಯನ್ ನೆಲದಲ್ಲಿ ನಡೆದ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸುವ ಮೊದಲು ಅಫ್ಘಾನಿಸ್ತಾನವು ಅಚ್ಚರಿಯ ಫಲಿತಾಂಶ ಒದಗಿಸಿತ್ತು.

VISTARANEWS.COM


on

T20 world cup 2024
Koo

ಬೆಂಗಳೂರು: ಟಿ20 ವಿಶ್ವ ಕಪ್​ 2024 (T20 World Cup 2024) ಅಫಘಾನಿಸ್ತಾನ ತಂಡ ಬಾಂಗ್ಲಾದೇಶ ತಂಡವನ್ನು ಸೋಲಿಸಿರುವ ಹಿನ್ನೆಲೆಯಲ್ಲಿ ಅಲ್ಲಿನ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ನಾಯಕ ರಶೀದ್ ಖಾನ್​ಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದಾರೆ. ಲಕ್ಷಾಂತರ ಅಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳ ಭಾವನೆಗಳನ್ನು ಅವರು ತಮ್ಮ ಕರೆಯ ಮೂಲಕ ಪ್ರತಿಧ್ವನಿಸಿದ್ದಾರೆ ಎನ್ನಲಾಗಿದೆ. ಪುರುಷರ ಟಿ 20 ವಿಶ್ವಕಪ್ 2024 ರ ಸೆಮಿಫೈನಲ್​ ಪ್ರವೇಶಿಸಿದ್ದಕ್ಕಾಗಿ ತಂಡವನ್ನು ಅಭಿನಂದಿಸಿದ್ದಾರೆ. ಸೇಂಟ್ ವಿನ್ಸೆಂಟ್​​ನ ಕಿಂಗ್ಸ್​​ಟೌನ್​ ಅರ್ನೋವ್ ವೇಲ್ ಮೈದಾನದಲ್ಲಿ ನಡೆದ ಕೊನೆಯ ಸೂಪರ್ 8 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಅಫ್ಘಾನಿಸ್ತಾನದ ರೋಚಕ ಗೆಲುವು ಸಾಧಿಸಿತ್ತು.

ಅಫ್ಘಾನಿಸ್ತಾನ ಪುರುಷರ ಟಿ 20 ವಿಶ್ವಕಪ್​​ನಲ್ಲಿ ಬಾರಿಗೆ ಸೆಮಿಫೈನಲ್ ತಲುಪುವ ಮೂಲಕ ಸ್ಮರಣೀಯ ದಾಖಲೆ ಬರೆದಿದೆ. ಕೆರಿಬಿಯನ್ ನೆಲದಲ್ಲಿ ನಡೆದ ಸೂಪರ್ 8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಚಕ ಗೆಲುವು ಸಾಧಿಸುವ ಮೊದಲು ಅಫ್ಘಾನಿಸ್ತಾನವು ಅಚ್ಚರಿಯ ಫಲಿತಾಂಶ ಒದಗಿಸಿತ್ತು.

ಬಾಂಗ್ಲಾದೇಶ ವಿರುದ್ಧದ ಥ್ರಿಲ್ಲರ್ ಪಂದ್ಯದ ನಂತರ ಮೈದಾನದಲ್ಲಿದ್ದ ರಶೀದ್ ಖಾನ್ ಅವರೊಂದಿಗೆ ತಾಲಿಬಾನ್ ವಿದೇಶಾಂಗ ಸಚಿವರು ಮಾತನಾಡುವ ವೀಡಿಯೊವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಹಂಚಿಕೊಂಡಿದೆ. ಬಾಂಗ್ಲಾದೇಶ ವಿರುದ್ಧದ ಗೆಲುವಿಗಾಗಿ ತಂಡವನ್ನು ಅಭಿನಂದಿಸಿದ ಮುತ್ತಾಕಿ, ಮುಂದಿನ ಯಶಸ್ಸನ್ನು ಹಾರೈಸಿದ್ದರು. 1

ಅಫ್ಘಾನಿಸ್ತಾನದ ಆಟಗಾರರು ಮೈದಾನದಲ್ಲಿ ಡಾನ್ಸ್​ ಮಾಡುವ ಮೂಲಕ ವಿಜಯೋತ್ಸವ ಆಚರಿಸಿದ್ದರು. ರಶೀದ್ ಖಾನ್ ತಂಡದ ಸಂಭ್ರಮಾಚರಣೆಯ ನೇತೃತ್ವ ವಹಿಸಿದ್ದರೆ, ಆಟಗಾರರು ವಿಜಯೋತ್ಸವದಲ್ಲಿ ಸಾಗಿದ್ದರು. ಕೋಚ್ ಜೊನಾಥನ್ ಟ್ರಾಟ್​ ಅವನ್ನು ಹೆಗಲ ಮೇಲೆ ಎತ್ತಿಕೊಂಡು ಹೋಗಿದ್ದರು. ಅಫ್ಘಾನಿಸ್ತಾನದ ಆಟಗಾರರು ತಂಡದ ಬಸ್​ನಲ್ಲಿ ತಮ್ಮ ಬೌಲಿಂಗ್ ಕೋಚ್ ಡ್ವೇನ್ ಬ್ರಾವೋ ಅವರ ರ್ಯಾಪ್ ಹಾಡುಗಳಿಗೆ ಡಾನ್ಸ್ ಮಾಡಿದ್ದರು

ಅಫಘಾನಿಸ್ತಾನದಲ್ಲೂ ಮೆರವಣಿಗೆ

ಅಫ್ಘಾನಿಸ್ತಾನದ ನಂಗರ್ಹಾರ್ ಪ್ರಾಂತ್ಯದ ಬೀದಿಗಳಲ್ಲಿ ಅಫ್ಘಾನಿಸ್ತಾನದ ಐತಿಹಾಸಿಕ ಸೆಮಿಫೈನಲ್ ಪ್ರವೇಶವನ್ನು ಆಚರಿಸುವ ಮೆರವಣಿಗೆ ನಡೆದವು. ನಾಯಕ ರಶೀದ್ ಖಾನ್ ಬ್ರಿಯಾನ್ ಲಾರಾ ಅವರಿಗೆ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ. ಯಾಕೆಂದರೆ ಪಂದ್ಯಾವಳಿಯ ಆರಂಭದಲ್ಲಿ ವೆಸ್ಟ್ ಇಂಡೀಸ್ ದಂತಕಥೆ ಲಾರಾ, ನಾಲ್ಕು ಸೆಮಿಫೈನಲ್ ಸ್ಪರ್ಧಿಗಳಲ್ಲಿ ಒಂದು ತಂಡವನ್ನು ಅಫಘಾನಿಸ್ತಾನವನ್ನು ಆಯ್ಕೆ ಮಾಡಿದ್ದರು. ಅದು ತಮಗೆ ಸಾಕಷ್ಟು ಪ್ರೇರಣೆ ನೀಡಿತು ಎಂದು ಹೇಳಿದರು.

ಇದನ್ನೂ ಓದಿ: David Warner Retirement: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಡೇವಿಡ್ ವಾರ್ನರ್

ಅಫ್ಘಾನಿಸ್ತಾನದಲ್ಲಿ ಕ್ರಿಕೆಟ್​​ ಪ್ರೀತಿಸುವ ಯುವಕರಿಗೆ ಸೆಮಿಫೈನಲ್ ಬೃಹತ್ ಸ್ಫೂರ್ತಿಯಾಗಲಿದೆ ಎಂದು ನಾನು ಭಾವಿಸುತ್ತೇನೆ. ಅಫ್ಘಾನಿಸ್ತಾನ ತಂಡ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದೆ. ಇದು ನಂಬಲಾಗದ ಭಾವನೆ, ಮತ್ತು ಅಫ್ಘಾನಿಸ್ತಾನವನ್ನು ಸೆಮಿಫೈನಲ್​​ನ ಅಗ್ರ ನಾಲ್ಕು ಸ್ಥಾನಗಳಲ್ಲಿ ಉಲ್ಲೇಖಿಸಿದ ಏಕೈಕ ವ್ಯಕ್ತಿ ಬ್ರಿಯಾನ್ ಲಾರಾ. ನಾವು ಅದನ್ನು ಸಾಬೀತುಪಡಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ರಶೀದ್ ಹೇಳಿದ್ದಾರೆ.

Continue Reading
Advertisement
Indian 2 trailer Kamal Haasan as master of disguise
South Cinema35 seconds ago

Indian 2 Trailer: `ಇಂಡಿಯನ್‌-2′ ಟ್ರೈಲರ್‌ ಔಟ್‌; ಹಲವು ಗೆಟಪ್​ನಲ್ಲಿ ಗಮನಸೆಳೆದ  ಕಮಲ್ ಹಾಸನ್!

sural falls assault case
ಕ್ರೈಂ10 mins ago

Assault Case: ಕರ್ನಾಟಕದ ಪ್ರವಾಸಿಗರಿಗೆ ಬಾಸುಂಡೆ ಬರುವಂತೆ ಥಳಿಸಿದ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ; ಹಣ ಸುಲಿಗೆ

Members of Parliament
Latest27 mins ago

Members of Parliament: ಸಂಸದರು ಪ್ರಮಾಣ ವಚನ ಸ್ವೀಕರಿಸದಿದ್ದರೆ ಏನಾಗುತ್ತದೆ? ಜೈಲಿನಲ್ಲಿದ್ದವರ ಕತೆಯೇನು?

Actor Darshan Judicial Custody Jailer Gave UTP Number
ಕ್ರೈಂ1 hour ago

Actor Darshan: ದರ್ಶನ್‌, ಪ್ರದೋಷ್‌ನಿಂದ ಮೂರು ಪಿಸ್ತೂಲ್‌ ವಶಕ್ಕೆ

Health Tips Kannada
ಆರೋಗ್ಯ1 hour ago

Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

NEET Paper Leak
ಶಿಕ್ಷಣ1 hour ago

NEET Paper Leak: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ರೂವಾರಿ ಸಂಜೀವ್ ಮುಖಿಯಾ; ಈತ ನಟೋರಿಯಸ್‌!

Karnataka Weather
ಕರ್ನಾಟಕ2 hours ago

Karnataka Weather: ಇಂದು ಹಾಸನ, ಕೊಡಗು, ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ

David Warner
ಪ್ರಮುಖ ಸುದ್ದಿ2 hours ago

David Warner : ವಿಶ್ವ ಕಪ್​ನಿಂದ ಹೊರಬಿದ್ದ ಬೇಸರ; ಬಿಯರ್ ಕುಡಿತಾ ಕುಳಿತ ಆಸ್ಟ್ರೇಲಿಯಾದ ಆಟಗಾರರು

Fatty Lever Disease
ಆರೋಗ್ಯ2 hours ago

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Karnataka Milk Federation
ಪ್ರಮುಖ ಸುದ್ದಿ3 hours ago

ವಿಸ್ತಾರ ಸಂಪಾದಕೀಯ: ಹಾಲು ದರ ಏರಿಕೆ ಬಳಕೆದಾರನಿಗೆ ಹೊರೆಯಾಗದಿರಲಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ5 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ5 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ6 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌