Money changes in August : ಆಗಸ್ಟ್‌ ತಿಂಗಳಿನಲ್ಲಿ ಪ್ರಮುಖ ಹಣಕಾಸು ಬದಲಾವಣೆಗಳೇನು? - Vistara News

ಮನಿ-ಗೈಡ್

Money changes in August : ಆಗಸ್ಟ್‌ ತಿಂಗಳಿನಲ್ಲಿ ಪ್ರಮುಖ ಹಣಕಾಸು ಬದಲಾವಣೆಗಳೇನು?

Money changes in August: ಆಗಸ್ಟ್‌ನಲ್ಲಿ ಜನತೆ ತಮ್ಮ ವೈಯಕ್ತಿಕ ಹಣಕಾಸು ಪ್ಲಾನ್‌ ಬಗ್ಗೆ ಮಾಡಿಕೊಳ್ಳುವಾಗ ಗಮನಿಸಬೇಕಾದ ಬದಲಾವಣೆಗಳ ವಿವರ ಇಲ್ಲಿದೆ.

VISTARANEWS.COM


on

finance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಿಮ್ಮ ಉಳಿತಾಯ ಮತ್ತು ಹೂಡಿಕೆಗೆ ಸಂಬಂಧಿಸಿ ಆಗಸ್ಟ್‌ನಲ್ಲಿ ಐದು ಪ್ರಮುಖ ಬದಲಾವಣೆಗಳು ನಡೆಯಲಿವೆ.(Money changes in August) ಅವುಗಳನ್ನು ನೀವು ಗಮನಿಸಬಹುದು. ಪರಿಣಾಮ ಬೀರುವುದಿದ್ದರೆ ಅಗತ್ಯ ಬದಲಾವಣೆ ಮಾಡಿಕೊಳ್ಳಬಹುದು. ವಿವರ ಇಲ್ಲಿದೆ.

ಎಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ನಿಯಮಾವಳಿಗಳು ಬದಲಾಗುತ್ತಿವೆ. ನೀವು‌ ಫ್ಲಿಪ್‌ ಕಾರ್ಟ್- ಎಕ್ಸಿಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ ಬಳಸುತ್ತಿದ್ದರೆ ಗಮನಿಸಿ. ನಿಯಮ ಬದಲಾಗಲಿದೆ. ಎಕ್ಸಿಸ್‌ ಬ್ಯಾಂಕ್‌ ಕೆಲವು ಕ್ಯಾಶ್‌ ಬ್ಯಾಕ್‌ ಮತ್ತು ಇನ್ಸೆಂಟಿವ್‌ ಪಾಯಿಂಟ್‌ಗಳನ್ನು ಈ ಕಾರ್ಡಿಗೆ ಕಡಿತಗೊಳಿಸಲಿದೆ. ಹೀಗಾಗಿ ಇದರ ಪ್ರಯೋಜನ ತಪ್ಪಬಹುದು. ಆಗಸ್ಟ್‌ 12ರಿಂದ ಹೊಸ ನಿಯಮ ಅನ್ವಯವಾಗಲಿದೆ.

ಎಕ್ಸಿಸ್‌ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ 2023 ಆಗಸ್ಟ್‌ 12ರಿಂದ ನೀವು ನಿಮ್ಮ ಕ್ರೆಡಿಟ್‌ ಕಾರ್ಡ್‌ ಬಳಸಿ ಫ್ಲಿಪ್‌ ಕಾರ್ಟ್‌ನಲ್ಲಿ ಮಾಡುವ ಟ್ರಾವೆಲ್ಸ್‌ ಸಂಬಂಧಿತ ವೆಚ್ಚಗಳಿಗೆ 1.5% ಕ್ಯಾಶ್‌ ಬ್ಯಾಕ್‌ ಸಿಗಲಿದೆ. ಬ್ಯಾಂಕ್‌ ಪ್ರಕಾರ ಮರ್ಚೆಂಟ್‌ ಕೆಟಗರಿ ಕೋಡ್‌ (mcc) ಬಳಸಿ ಸರ್ಕಾರಿ ಸೇವೆಗೆ ನೀಡುವ ಮೊತ್ತಕ್ಕೆ ಕ್ಯಾಶ್‌ ಬ್ಯಾಕ್‌ ಇರುವುದಿಲ್ಲ. ಪೆಟ್ರೋಲ್-ಡೀಸೆಲ್‌ ಖರೀದಿ, ಫ್ಲಿಪ್‌ ಕಾರ್ಟ್‌ ಮತ್ತು ಮೈಂತ್ರದಲ್ಲಿ ಗಿಫ್ಟ್‌ ಕಾರ್ಡ್‌ ಪರ್ಚೇಸ್‌ಗೆ ಕ್ಯಾಶ್‌ ಬ್ಯಾಕ್‌ ಇರುವುದಿಲ್ಲ.

ಎಸ್‌ಬಿಐ ಅಮೃತ್‌ ಕಲಾಶ್:‌ (SBI Amrit Kalash) : ಎಸ್‌ಬಿಐ ಅಮೃತ್‌ ಕಲಾಶ್‌ ಡೆಪಾಸಿಟ್‌ ಯೋಜನೆಯಲ್ಲಿ ಹೂಡಿಕೆಗೆ ಕೊನೆಯ ದಿನ 2023ರ ಆಗಸ್ಟ್‌ 15 ಕೊನೆಯ ದಿನವಾಗಿದೆ. ಎಸ್‌ಬಿಐ ವೆಬ್‌ಸೈಟ್‌ ಪ್ರಕಾರ 400 ದಿನಗಳ ಟರ್ಮ್‌ ಡೆಪಾಸಿಟ್‌ 7.1% ಬಡ್ಡಿ ದರವನ್ನು ಸಾಮಾನ್ಯ ಗ್ರಾಹಕರಿಗೆ ನೀಡುತ್ತದೆ. ಹಿರಿಯ ನಾಗರಿಕರಿಗೆ 7.6% ಬಡ್ಡಿ ಕೊಡುತ್ತದೆ.

ಇಂಡಿಯನ್‌ ಬ್ಯಾಂಕ್‌ IND SUPER 400 DAYS: ಇಂಡಿಯನ್‌ ಬ್ಯಾಂಕ್‌ 2023 ಮಾರ್ಚ್‌ 6ರಿಂದ ಇಂಡ್‌ ಸೂಪರ್‌ 400 ಡೇಸ್‌ ಎಂಬ ನೂತನ ಸ್ಪೆಶಲ್‌ ರಿಟೇಲ್‌ ಟರ್ಮ್‌ ಡೆಪಾಸಿಟ್‌ ಪ್ರಾಡಕ್ಟ್‌ IND SUPER 400 DAYS ಅನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಹೂಡಿಕೆಗೆ ಕೊನೆಯ ದಿನಾಂಕ 2023 ಆಗಸ್ಟ್‌ 31 ಆಗಿದೆ. 10,000 ರೂ.ಗಳಿಂದ 2 ಕೋಟಿ ರೂ. ತನಕ ಇನ್ವೆಸ್ಟ್‌ ಮಾಡಬಹುದು.

ಇಂಡಿಯನ್‌ ಬ್ಯಾಂಕ್‌ ಇಂಡ್‌ ಸುಪ್ರೀಮ್‌ 300 ಡೇಸ್:‌ ಇಂಡಿಯನ್‌ ಬ್ಯಾಂಕ್‌ ವೆಬ್‌ ಸೈಟ್‌ ಪ್ರಕಾರ special retail term deposit IND SUPREME 300 DAYS 2023ರ ಜುಲೈ 1ರಿಂದ ಚಾಲ್ತಿಯಲ್ಲಿದೆ. 5000 ರೂ.ಗಳಿಂದ 2 ಕೋಟಿ ರೂ. ತನಕದ ಮೊತ್ತಕ್ಕೆ 300 ದಿನಗಳಿಗೆ ಎಫ್‌ಡಿ/ಎಂಎಂಡಿ ಆಯ್ಕೆ ನೀಡುತ್ತದೆ. ಈ ಯೋಜನೆ 2023 ಆಗಸ್ಟ್‌ 31 ತನಕ ಇರುತ್ತದೆ. ಇಂಡಿಯನ್‌ ಬ್ಯಾಂಕ್‌ ಈಗ 7.05% ಬಡ್ಡಿಯನ್ನು ಸಾಮಾನ್ಯ ನಾಗರಿಕರಿಗೆ ನೀಡುತ್ತದೆ. ಹಿರಿಯ ನಾಗರಿಕರಿಗೆ 7.80% ಮತ್ತು ಸೂಪರ್‌ ಸೀನಿಯರ್‌ ಸಿಟಿಜನ್ಸ್‌ಗೆ 7.80% ಬಡ್ಡಿ ಕೊಡುತ್ತದೆ.

ಇದನ್ನೂ ಓದಿ: Mutual fund : ಮ್ಯೂಚುವಲ್‌ ಫಂಡ್‌ನಲ್ಲಿ 6 ವರ್ಷಕ್ಕೆ ಹೂಡಿಕೆ ಡಬಲ್‌, ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಐಟಿ ರಿಟರ್ನ್‌ ವಿಳಂಬಕ್ಕೆ ಪೆನಾಲ್ಟಿ: 2023ರ ಜುಲೈ 31ರೊಳಗೆ ಐಟಿ ರಿಟರ್ನ್‌ ಫೈಲ್‌ ಮಾಡದವರಿಗೆ ಪೆನಾಲ್ಟಿ ಇರುತ್ತದೆ. ಇದು 5000 ರೂ. ತನಕ ಇರಬಹುದು. ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಕೆಳಗಿದ್ದವರಿಗೆ 1000 ರೂ. ಮಾತ್ರ ಪೆನಾಲ್ಟಿ. ಆದಾಯ ತೆರಿಗೆ ರಿಟರ್ನ್‌ ಫೈಲಿಂಗ್‌ ಗಡುವು ವಿಸ್ತರಣೆ ಆಗದಿದ್ದರೆ ಇದು ಅನ್ವಯ.

ಅಮೃತ್‌ ಮಹೋತ್ಸವ್‌ ಎಫ್‌ಡಿ: ಅಮೃತ್‌ ಮಹೋತ್ಸವ್‌ ಎಫ್‌ಡಿ ಎಂಬ ಡೆಪಾಸಿಟ್‌ ಸ್ಕೀಮ್‌ ಅನ್ನು ಐಡಿಬಿಐ ಬ್ಯಾಂಕ್‌ ಪರಿಚಯಿಸಿದೆ. 7.6% ಬಡ್ಡಿ ನೀಡುವ ಈ ಸ್ಲೀಮ್‌ 2023ರ ಆಗಸ್ಟ್‌ 15 ತನಕ ಲಭ್ಯ. ಆಗಸ್ಟ್‌ 15ಕ್ಕೆ ಎಲ್ಲ ಬ್ಯಾಂಕ್‌ಗಳಿಗೆ ರಜಾ ದಿನ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ಮನೆಯಲಿ ಇದ್ದರೆ ಚಿನ್ನ ಈ ನಿಯಮ ಅರಿತಿರುವುದು ಚೆನ್ನ: ಗೋಲ್ಡ್‌ ಟ್ಯಾಕ್ಸ್‌ ಏನು ಹೇಳುತ್ತದೆ?

Money Guide: ಭಾರತೀಯರಿಗೆ ಚಿನ್ನಾಭರಣ ಎಂದರೆ ಬಹು ಪ್ರಿಯ. ಪ್ರಪಂಚದಲ್ಲಿ ಅತೀ ಹೆಚ್ಚು ಚಿನ್ನ ಬಳಸುವ ದೇಶಗಳ ಪೈಕಿ ಭಾರತವೂ ಒಂದು. ನಾವು ಮನೆಯಲ್ಲಿ ದಾಖಲೆ ಇಲ್ಲದೆ ಎಷ್ಟು ಬೇಕಾದರೂ ಚಿನ್ನವನ್ನು ಸಂಗ್ರಹಿಸಿ ಇಡಬಹುದಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾನೂನು ಪ್ರಕಾರ ನಾವು ಇಟ್ಟುಕೊಳ್ಳಬಹುದಾದ ಚಿನ್ನಕ್ಕೆ ಮಿತಿ ಇದೆ. ಮಿತಿಗಿಂತ ಹೆಚ್ಚು ಚಿನ್ನವನ್ನು ಇಟ್ಟುಕೊಳ್ಳುವುದಿದ್ದರೆ ಅದರ ಲೆಕ್ಕವನ್ನು ನಾವು ಆದಾಯ ಇಲಾಖೆಗೆ ಖಾತೆಯನ್ನು ನೀಡಬೇಕಾಗುತ್ತದೆ. ಈ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಭಾರತೀಯರಿಗೆ ಚಿನ್ನಾಭರಣ ಎಂದರೆ ಬಹು ಪ್ರಿಯ. ಪ್ರಪಂಚದಲ್ಲಿ ಅತೀ ಹೆಚ್ಚು ಚಿನ್ನ ಬಳಸುವ ದೇಶಗಳ ಪೈಕಿ ಭಾರತವೂ ಒಂದು. 2,000 ರೂ. ಮುಖಬೆಲೆಯ ನೋಟುಗಳನ್ನು ಆರ್‌ಬಿಐ ನಿಷೇಧಿಸಿದ ಬಳಿಕವಂತೂ ಚಿನ್ನದ ಆಭರಣಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ವರದಿಗಳು ತಿಳಿಸಿವೆ. ಈ ಮಧ್ಯೆ ನಾವು ಮನೆಯಲ್ಲಿ ದಾಖಲೆ ಇಲ್ಲದೆ ಎಷ್ಟು ಬೇಕಾದರೂ ಚಿನ್ನವನ್ನು ಸಂಗ್ರಹಿಸಿ ಇಡಬಹುದಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಕಾನೂನು ಪ್ರಕಾರ ನಾವು ಇಟ್ಟುಕೊಳ್ಳಬಹುದಾದ ಚಿನ್ನಕ್ಕೆ ಮಿತಿ ಇದೆ. ಮಿತಿಗಿಂತ ಹೆಚ್ಚು ಚಿನ್ನವನ್ನು ಇಟ್ಟುಕೊಳ್ಳುವುದಿದ್ದರೆ ಅದರ ಲೆಕ್ಕವನ್ನು ನಾವು ಆದಾಯ ಇಲಾಖೆಗೆ ಖಾತೆಯನ್ನು ನೀಡಬೇಕಾಗುತ್ತದೆ. ಹಾಗಾದರೆ ಚಿನ್ನದ ಕುರಿತಾದ ಕಾನೂನು (Gold Tax) ಏನು ಹೇಳುತ್ತದೆ? ಎಷ್ಟು ಪ್ರಮಾಣದ ಚಿನ್ನ ಸಂಗ್ರಹಿಸಿ ಇಡಬಹುದು? ನಿಮ್ಮ ಎಲ್ಲ ಪ್ರಶ್ನೆಗಳಿಗೆ ಮನಿಗೈಡ್‌ (Money Guide)ನಲ್ಲಿದೆ ಉತ್ತರ.

ನಿಯಮ ಏನು ಹೇಳುತ್ತದೆ?

ಆದಾಯ ತೆರಿಗೆ ಇಲಾಖೆಯ ತನಿಖೆಯ ಸಂದರ್ಭದಲ್ಲಿ ಖರೀದಿಸಲು ಅಥವಾ ಹೂಡಿಕೆ ಮಾಡಲು ನಿಮಗೆ ಅನುಮತಿಸಿದ ಆದಾಯದ ಮೂಲವನ್ನು ನೀವು ಹಾಜರುಪಡಿಸುವುದಾದರೆ ಮನೆಯಲ್ಲಿ ಎಷ್ಟು ಚಿನ್ನದ ಆಭರಣಗಳನ್ನು ಬೇಕಾದರೂ ಇಟ್ಟುಕೊಳ್ಳಬಹುದು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (CBDT) ನಿಯಮಗಳ ಪ್ರಕಾರ, ಮನೆಯಲ್ಲಿರುವ ಚಿನ್ನವು ನಿಗದಿತ ಮಿತಿಯಲ್ಲಿದ್ದರೆ, ಆದಾಯ ತೆರಿಗೆ ಅಧಿಕಾರಿಗಳು ಹುಡುಕಾಟದ ಸಮಯದಲ್ಲಿ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಂತಿಲ್ಲ (ಚಿನ್ನದ ಆಭರಣ ಸಂಗ್ರಹ ನಿಯಮ). ಆದರೆ ಮಿತಿಯನ್ನು ಮೀರಿದರೆ ಅದಕ್ಕೆ ದಾಖಲೆ ಒದಗಿಸಬೇಕು. ಹಾಗಾದರೆ ಮಿತಿಯ ಪ್ರಮಾಣವೆಷ್ಟು?

  • ಅವಿವಾಹಿತ ಮಹಿಳೆ: 250 ಗ್ರಾಂ. ಚಿನ್ನ.
  • ವಿವಾಹಿತ ಮಹಿಳೆ: 500 ಗ್ರಾಂ. ಚಿನ್ನ.
  • ವಿವಾಹಿತ / ಅವಿವಾಹಿತ ಪುರುಷ: 100 ಗ್ರಾಂ. ಚಿನ್ನ.

ʼʼವೈಯಕ್ತಿಕ ಬಳಕೆಗಾಗಿ ಅಥವಾ ಹೂಡಿಕೆಗಾಗಿ ಚಿನ್ನವು ಅತ್ಯಂತ ಜನಪ್ರಿಯ ಮತ್ತು ಬೇಡಿಕೆಯ ಲೋಹವಾಗಿ ಉಳಿದಿದೆ. ಚಿನ್ನ ಖರೀದಿಸುವಾಗ ಬೆಲೆಗಳ ಏರಿಳಿತವನ್ನು ನೋಡುವ ಜತೆಗೆ ತೆರಿಗೆಯನ್ನೂ ಗಮನಿಸಬೇಕು. ಹೂಡಿಕೆಯ ಆಯ್ಕೆಯಾಗಿ ಪರಿಗಣಿಸುವವರು ಚಿನ್ನವನ್ನು ನಾಣ್ಯಗಳು, ಆಭರಣಗಳಂತಹ ಭೌತಿಕ ರೂಪಗಳಲ್ಲಿ, ಚಿನ್ನದ ವಿನಿಮಯ-ವಹಿವಾಟು ನಿಧಿಗಳು (ಗೋಲ್ಡ್ ಇಟಿಎಫ್‌ಗಳು), ಭಾರತೀಯ ರಿಸರ್ವ್ ಬ್ಯಾಂಕ್ ನೀಡುವ ಸವರಿನ್ ಗೋಲ್ಡ್ ಬಾಂಡ್‌ಗಳು (ಎಸ್‌ಜಿಬಿ) ಮತ್ತು ಕಾಗದದ ರೂಪಗಳಲ್ಲಿ ಖರೀದಿಸಬಹುದುʼʼ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ.

ಚಿನ್ನ ಖರೀದಿಗೆ ಯಾವುದೇ ನೇರ ತೆರಿಗೆ ಇಲ್ಲ. ಆದಾಗ್ಯೂ ಪರೋಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಇದು ಚಿನ್ನದ ಪ್ರಕಾರ ಮತ್ತು ಸಂಬಂಧಿತ ಸೇವೆಯನ್ನು ಅವಲಂಬಿಸಿ ಬದಲಾಗುತ್ತದೆ. ಉದಾಹರಣೆಗೆ ಚಿನ್ನದ ಗಟ್ಟಿಗಳು, ನಾಣ್ಯಗಳು ಮತ್ತು ಆಭರಣಗಳ ಖರೀದಿಯ ಮೇಲೆ ಶೇ. 3ರಷ್ಟು ಜಿಎಸ್‌ಟಿ ಪಾವತಿಸಬೇಕಾಗುತ್ತದೆ. ಇನ್ನು ಆಭರಣ ಮತ್ತು ಅಕ್ಕಸಾಲಿಗ ಸೇವೆಗಳ ಜಿಎಸ್‌ಟಿ ದರವು ಶೇ. 5ರಷ್ಟಿರುತ್ತದೆ. ಇದಲ್ಲದೆ ಚಿನ್ನವನ್ನು ಆಮದು ಮಾಡಿಕೊಳ್ಳುವಾಗ ಕಸ್ಟಮ್ಸ್ ಸುಂಕ, ಕೃಷಿ ಮೂಲ ಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.

ʼʼಚಿನ್ನಾಭರಣ ಖರೀದಿಗೆ ಸಂಬಂಧಿಸಿ ನೇರ ತೆರಿಗೆಗಳಿಲ್ಲ. ಆದರೆ ಚಿನ್ನ ಖರೀದಿಯ ವಿವರಗಳನ್ನು ನೀವು ಒದಗಿಸುವ ಪ್ಯಾನ್ ಕಾರ್ಡ್‌ನ ಮೂಲಕ ಅಧಿಕಾರಿಗಳು ಸಂಗ್ರಹಿಸುತ್ತಾರೆ. ಆದ್ದರಿಂದ ಚಿನ್ನವನ್ನು ಭಾರಿ ಪ್ರಮಾಣದಲ್ಲಿ ಖರೀದಿಸುವಾಗ ಅದಕ್ಕೆ ತಕ್ಕದಾದ ಆದಾಯದ ಮೂಲಗಳನ್ನು ಹೊಂದಿರುವುದು ಅಗತ್ಯ. ಇನ್ನು ತೆರಿಗೆದಾರರು ಒಟ್ಟು 50 ಲಕ್ಷ ರೂ.ಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದರೆ ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ಹೊಂದಿರುವ ದೇಶೀಯ ಸ್ವತ್ತುಗಳ ಭಾಗವಾಗಿ ಚಿನ್ನದ ಪ್ರಮಾಣವನ್ನು ಬಹಿರಂಗಪಡಿಸಬೇಕಾಗುತ್ತದೆ.

ಮಾರಾಟ ಮಾಡುವಾಗ…

ಒಂದು ವೇಳೆ ಖರೀದಿ ಮಾಡಿದ ಬಳಿಕ ಮೂರು ವರ್ಷದ ಒಳಗೆ ಚಿನ್ನವನ್ನು ಮಾರಾಟ ಮಾಡುವುದಿದ್ದರೆ ಅದರಿಂದ ಪಡೆದ ಆದಾಯವನ್ನು ವೈಯಕ್ತಿಕ ಆದಾಯ ಎಂದು ಪರಿಗಣಿಸಲಾಗುತ್ತಿದೆ. ವೈಯಕ್ತಿಕ ಆದಾಯಕ್ಕೆ ನೀಡಬೇಕಿರುವ ತೆರಿಗೆಯೇ ಇದಕ್ಕೂ ಅನ್ವಯವಾಗುತ್ತದೆ. ಮೂರು ವರ್ಷಗಳ ನಂತರ ಚಿನ್ನವನ್ನು ಮಾರಾಟ ಮಾಡಿದರೆ, ದೀರ್ಘಾವಧಿಯ ಕ್ಯಾಪಿಟಲ್ ಗೇನ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ ಎನ್ನುವುದು ತಿಳಿದಿರಲಿ.

ಇದನ್ನೂ ಓದಿ: Money Guide: ಪ್ಯಾನ್‌ ಕಾರ್ಡ್‌ ಕಳೆದುಹೋದರೆ ಚಿಂತೆ ಬೇಡ; ಮನೆಯಲ್ಲೇ ಕೂತು ಡುಪ್ಲಿಕೇಟ್‌ ಪಡೆಯುವ ವಿಧಾನ ಇಲ್ಲಿದೆ

Continue Reading

ಮನಿ-ಗೈಡ್

Money Guide: ಪ್ಯಾನ್‌ ಕಾರ್ಡ್‌ ಇಲ್ಲದೆಯೂ ಸಿಬಿಲ್‌ ಸ್ಕೋರ್‌ ಪರಿಶೀಲಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

Money Guide: ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಸಿಬಿಲ್‌ ಸ್ಕೋರ್‌ ಮುಖ್ಯ. ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಹೀಗಾಗಿ ಸಿಬಿಲ್ ಸ್ಕೋರ್‌ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಹಾಗಾದರೆ ಹಾಗಾದರೆ ಸಿಬಿಲ್ ಸ್ಕೋರ್‌ ಪರಿಶೀಲಿಸುವುದು ಹೇಗೆ? ಸಿಬಿಲ್‌ ಸ್ಕೋರ್‌ ವಿಚಾರದಲ್ಲಿ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ಒಂದು ಪ್ಯಾನ್‌ ಕಾರ್ಡ್‌ ಇಲ್ಲದಿದ್ದರೆ ಏನು ಮಾಡಬೇಕು? ಚಿಂತಿಸಬೇಡಿ. ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Money Guide
Koo

ಬೆಂಗಳೂರು: ಯಾವುದೇ ಬ್ಯಾಂಕ್‌ನಿಂದ ಸಾಲ ಪಡೆಯಲು ಸಿಬಿಲ್‌ ಸ್ಕೋರ್‌ (ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್-CIBIL) ಮುಖ್ಯವಾಗುತ್ತದೆ. ಅಂದರೆ ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಹೀಗಾಗಿ ಸಿಬಿಲ್ ಸ್ಕೋರ್‌ ಅನ್ನು 750ಕ್ಕಿಂತ ಹೆಚ್ಚು ಕಾಯ್ದುಕೊಳ್ಳುವುದು ಅನಿವಾರ್ಯ. ಸಿಬಿಲ್ ಸ್ಕೋರ್ ಇಲ್ಲದಿದ್ದರೆ ನಿಮ್ಮ ಸಾಲದ ಅರ್ಜಿ ತಿರಸ್ಕೃತಗೊಳ್ಳುವ ಸಾಧ್ಯತೆಯೂ ಇದೆ. 300ರಿಂದ 900ರ ನಡುವೆ ಇರುವ ಸಿಬಿಲ್ ಸ್ಕೋರ್ ಹೆಚ್ಚಾದಷ್ಟೂ ಒಳ್ಳೆಯದು. ಹಾಗಾದರೆ ಸಿಬಿಲ್ ಸ್ಕೋರ್‌ ಪರಿಶೀಲಿಸುವುದು ಹೇಗೆ? ಸಿಬಿಲ್‌ ಸ್ಕೋರ್‌ ವಿಚಾರದಲ್ಲಿ ಯಾವೆಲ್ಲ ಅಂಶಗಳನ್ನು ಗಮನಿಸಬೇಕು? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ (Money Guide).

ನಿಮ್ಮ ಬಳಿ ಪ್ಯಾನ್ ಕಾರ್ಡ್ ಲಭ್ಯವಿಲ್ಲದಿದ್ದರೆ ಸಿಬಿಲ್ ಸ್ಕೋರ್ ಪಡೆಯುವುದು ಬಹುದೊಡ್ಡ ಸವಾಲು. ಹೀಗಾಗಿ ಸುಲಭವಾಗಿ, ಪ್ಯಾನ್ ಕಾರ್ಡ್ ಇಲ್ಲದೆ ನಿಮ್ಮ ಸಿಬಿಲ್ ಸ್ಕೋರ್ ಅನ್ನು ಹೇಗೆ ಪರಿಶೀಲಿಸಬಹುದು ಎನ್ನುವುದರ ಹಂತ ಹಂತದ ಮಾಹಿತಿ ಇಲ್ಲಿದೆ.

  • ಅಧಿಕೃತ ಸಿಬಿಲ್ ವೆಬ್‌ಸೈಟ್‌ https://www.cibil.com/ಗೆ ಭೇಟಿ ನೀಡಿ.
  • ‘Personal CIBIL Score’ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಬಳಿಕ ‘Get Your Free CIBIL Score’ ಆಪ್ಶನ್‌ ಆಯ್ಕೆ ಮಾಡಿ ಸೂಚನೆಗಳನ್ನು ಅನುಸರಿಸಿ ಕೇಳಿದ ಮಾಹಿತಿಗಳನ್ನು ಭರ್ತಿ ಮಾಡಿ.
  • ಒಂದು ವೇಳೆ ನಿಮ್ಮ ಬಳಿ ಪ್ಯಾನ್‌ ಕಾರ್ಡ್‌ ಇಲ್ಲ ಎಂದಾದರೆ ಪರ್ಯಾಯ ಡಾಕ್ಯುಮೆಂಟ್‌ಗಳಾದ ಪಾಸ್‌ಪೋರ್ಟ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸನ್ಸ್‌ ಅಥವಾ ರೇಷನ್‌ ಕಾರ್ಡ್‌ ಅನ್ನು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿಕೊಂಡ ಡಾಕ್ಯುಮೆಂಟ್‌ನ ನಂಬರ್‌ ಅನ್ನು ಇಲ್ಲಿ ನಮೂದಿಸಿ.
  • ಈಗ ನಿಮ್ಮ ಡೇಟ್‌ ಆಫ್‌ ಬರ್ತ್‌, ಪಿನ್‌ ಕೋಡ್‌ ಮತ್ತು ರಾಜ್ಯವನ್ನು ನಮೂದಿಸಿ. ಜತೆಗೆ ಮೊಬೈಲ್‌ ನಂಬರ್‌ ಎಂಟ್ರಿ ಮಾಡಿ ‘Accept and Continueʼ ಆಯ್ಕೆಯನ್ನು ಕ್ಲಿಕ್‌ ಮಾಡಿ.
  • ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ ‘Continueʼ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • ‘Yes’ ಅಥವಾ ‘No’ ಆಪ್ಶನ್‌ ಸೆಲೆಕ್ಟ್‌ ಮಾಡಿ.
  • ಈಗ ನಿಮ್ಮ ಹೆಸರು ಯಶಸ್ವಿಯಾಗಿ ನೋಂದಣಿಯಾಗಿರುವ ಸಂದೇಶ ಪರದೆ ಮೇಲೆ ಮೂಡುತ್ತದೆ.
  • ಈಗ ‘Go to Dashboard’ ಆಯ್ಕೆಯನ್ನು ಕ್ಲಿಕ್‌ ಮಾಡಿದರೆ ನಿಮ್ಮ ಸಿಬಿಲ್‌ ಸ್ಕೋರ್‌ ಅನ್ನು ವೀಕ್ಷಿಸಬಹುದು.

ಗೂಗಲ್‌ ಪೇಯಲ್ಲಿ ಹೀಗೆ ಚೆಕ್‌ ಮಾಡಿ

  • ಮೊಬೈಲ್‌ ಫೋನ್‌ನಲ್ಲಿ ಗೂಗಲ್‌ ಪೇ ಅಪ್ಲಿಕೇಷನ್‌ ಓಪನ್‌ ಮಾಡಿ.
  • Manage your money ಆಯ್ಕೆಯನ್ನು ಕೆಳಗಡೆ ಕಾಣಿಸುವ ʼCheck your CIBIL score for freeʼ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
  • ಪ್ಯಾನ್‌ ಕಾರ್ಡ್‌ನಲ್ಲಿ ಇರುವಂತೆ ನಿಮ್ಮ ಹೆಸರು ನಮೂದಿಸಿ.
  • ನಿಮ್ಮ ಗುರುತನ್ನು ಅಂಗಿಕರಿಸಿದರೆ ಪರದೆ ಮೇಲೆ ಸಿಬಿಲ್‌ ಸ್ಕೋರ್‌ ಕಂಡು ಬರುತ್ತದೆ.

ಫೋನ್‌ ಪೇ, ಪೇಟಿಎಂ ಅಪ್ಲಿಕೇಷನ್‌ನಲ್ಲಿಯೂ ಇದೇ ರೀತಿ ವೀಕ್ಷಿಸಬಹುದು.

ಸ್ಕೋರ್‌ ಹೆಚ್ಚಿಸುವುದು ಹೇಗೆ?

  • ನಿಮ್ಮ ಸಿಬಿಲ್ ಸ್ಕೋರ್ ಅನ್ನು ಆಗಾಗ ಪರಿಶೀಲಿಸಿ. ಇದರಿಂದ ನೀವು ಯಾವ ಮಟ್ಟದಲ್ಲಿದ್ದೀರಿ ಎಂಬುದು ತಿಳಿಯುತ್ತದೆ.
  • ನಿಮ್ಮ ಇಎಂಐಗಳು ಮತ್ತು ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಿ; ಯಾವುದೇ ಕಾರಣಕ್ಕೂ ತಪ್ಪಿಸಬೇಡಿ ಮತ್ತು ವಿಳಂಬ ಮಾಡಬೇಡಿ.
  • ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಹೆಚ್ಚು ಬಳಸಬೇಡಿ ಮತ್ತು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು (ಸಿಯುಆರ್ ) 30% ಒಳಗೆ ಇರಿಸಿಕೊಳ್ಳಲು ಪ್ರಯತ್ನಿಸಿ.
  • ಕಡಿಮೆ ಅವಧಿಯಲ್ಲಿ ಬೇರೆ ಬೇರೆ ಸಾಲಗಳು ಅಥವಾ ಕ್ರೆಡಿಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬೇಡಿ
  • ಅನಿವಾರ್ಯ ಆಗಿರದಿದ್ದರೆ, ನಿಮ್ಮ ಹಳೆಯ ಕ್ರೆಡಿಟ್ ಕಾರ್ಡ್‌ಗಳನ್ನು ರದ್ದುಗೊಳಿಸಬೇಡಿ
  • ಚೆಕ್‌ ಬೌನ್ಸ್‌ ಆಗದಂತೆ ನೋಡಿಕೊಳ್ಳಿ

ಪ್ರಯೋಜನಗಳೇನು?

ಹೆಚ್ಚಿನ ಸಿಬಿಲ್‌ ಸ್ಕೋರ್‌ ಇದ್ದರೆ ಪಡೆಯಬಹುದಾದ ಪ್ರಯೋಜನಗಳು:

  • ಸಾಲಗಳ ಮೇಲಿನ ಕಡಿಮೆ ಬಡ್ಡಿ ದರಗಳು
  • ಹೆಚ್ಚಿನ ಸಾಲದ ಮೊತ್ತಗಳು
  • ದೀರ್ಘ ಅಥವಾ ಹೆಚ್ಚು ಹೊಂದಿಕೊಳ್ಳುವ ಮರುಪಾವತಿ ಅವಧಿಯಂತಹ ನಿಯಮಗಳು
  • ತ್ವರಿತ ಸಾಲ ಮಂಜೂರಾತಿ ಪ್ರಕ್ರಿಯೆ
  • ಸಾಲ ನೀಡುವ ಸಂಸ್ಥೆಗಳ ಹೆಚ್ಚಿನ ಆಯ್ಕೆ

ಇದನ್ನೂ ಓದಿ: Money Guide: ಸಿಬಿಲ್‌ ಸ್ಕೋರ್‌ ಕಡಿಮೆ ಇದ್ದರೆ ಚಿಂತೆ ಬೇಡ; ಈ ಟಿಪ್ಸ್‌ ಫಾಲೋ ಮಾಡಿ ಹೆಚ್ಚಿಸಿಕೊಳ್ಳಿ

Continue Reading

ಮನಿ-ಗೈಡ್

Ration Card: ಹೊಸ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ? ಇಲ್ಲಿದೆ ಸಂಪೂರ್ಣ ವಿವರ

Money Guide: ಪಡಿತರ ಚೀಟಿ ಪ್ರಮುಖ ಗುರುತಿನ ದಾಖಲೆಗಳ ಪೈಕಿ ಒಂದು ಎನಿಸಿಕೊಂಡಿದೆ. ಪ್ರಮುಖ ಗುರುತಿನ ದಾಖಲೆಗಳ ಪೈಕಿ ಒಂದು ಎನಿಸಿಕೊಂಡಿದೆ. ಸರ್ಕಾರದ ವಿವಿಧ ಸೌಲಭ್ಯ, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ (ಪಡಿತರ) ಪಡೆಯಲು ರೇಷನ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ. ಕಾರಣಾಂತರಗಳಿಂದ ಕೆಲವು ತಿಂಗಳಿಂದ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುಂದಿನ ತಿಂಗಳು ಇದು ಪುನರಾಂಭಗೊಳ್ಳಲಿದ್ದು, ಗ್ರಾಹಕರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪಡಿತರ ಚೀಟಿ (Ration Card) ಪ್ರಮುಖ ಗುರುತಿನ ದಾಖಲೆಗಳ ಪೈಕಿ ಒಂದು ಎನಿಸಿಕೊಂಡಿದೆ. ಸರ್ಕಾರದ ವಿವಿಧ ಸೌಲಭ್ಯ, ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ (ಪಡಿತರ) ಪಡೆಯಲು ರೇಷನ್‌ ಕಾರ್ಡ್‌ ಹೊಂದಿರುವುದು ಕಡ್ಡಾಯ. ಜತೆಗೆ ವಾಸಸ್ಥಳ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಪ್ಯಾನ್ ಕಾರ್ಡ್‌, ಚಾಲಕರ ಪರವಾನಗಿ ಇತ್ಯಾದಿಗೆ ಅರ್ಜಿ ಸಲ್ಲಿಸುವಾಗ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಲಾಗುತ್ತದೆ. ಇದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ‌ ವಿತರಿಸುತ್ತದೆ. ಕಾರಣಾಂತರಗಳಿಂದ ಕೆಲವು ತಿಂಗಳಿಂದ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು. ಮುಂದಿನ ತಿಂಗಳು ಇದು ಪುನರಾಂಭಗೊಳ್ಳಲಿದ್ದು, ಗ್ರಾಹಕರು ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ವಿವರ ಇಲ್ಲಿದೆ (Money Guide).

ಅಗತ್ಯ ದಾಖಲೆಗಳು

ಗ್ರಾಮಾಂತರ ಪ್ರದೇಶ

  • ನಿಮ್ಮ ಗ್ರಾಮ ಪಂಚಾಯಿತಿಯ ಹೆಸರು
  • ಈಗ ವಾಸ ಮಾಡುತ್ತಿರುವ ಮನೆ ವಿಳಾಸ
  • ಮನೆಯ ಆಸ್ತಿ ಸಂಖ್ಯೆ ವಿವರ
  • ಮನೆಯ ವಿದ್ಯುತ್‌ ಸಂಪರ್ಕದ ಬಿಲ್‌ ಪ್ರತಿ
  • ಕುಟುಂಬದ ಎಲ್ಲ ಸದಸ್ಯರ ಹೆಸರು, ಸದಸ್ಯರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
  • ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
  • ನಿಮ್ಮ ಕುಟುಂಬಕ್ಕಿರುವ ಅಡುಗೆ ಅನಿಲದ ಸರಬರಾಜಿನ ಇತ್ತಿಚಿನ ಬಿಲ್/ರಶೀದಿ.

ನಗರ / ಪಟ್ಟಣ ಪ್ರದೇಶ

  • ನೀವು ವಾಸವಿರುವ ನಗರಸಭೆ / ಪುರಸಭೆ / ನಗರ ಪಾಲಿಕೆಯ ವಾರ್ಡ್ ಸಂಖ್ಯೆ
  • ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶದವರಾಗಿದ್ದಲ್ಲಿ (ಬಿಬಿಎಂಪಿ ಪ್ರದೇಶ) ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ (ಇದನ್ನು ಸುಲಭವಾಗಿ ತಿಳಿಯಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯವರನ್ನು ಸಂಪರ್ಕಿಸಿ, ಇಲ್ಲವೇ ನಿಮ್ಮ ನೆರೆಹೊರೆಯವರಲ್ಲಿ ಈಗಾಗಲೇ ಲಭ್ಯವಿರುವ ಪಡಿತರ ಚೀಟಿಯನ್ನು ನೋಡಿ ತಿಳಿಯಿರಿ)
  • ನಿಮ್ಮ ಮನೆಯ ವಿದ್ಯುತ್ ಬಿಲ್
  • ನಿಮ್ಮ ನಿವಾಸದ ಪೂರ್ಣ ವಿಳಾಸ (ಅಂಚೆ ಪಿನ್ ಕೋಡ್‌ ಕಡ್ಡಾಯ). ಸ್ವಂತ ಮನೆಯಾಗಿದ್ದಲ್ಲಿ
  • ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು
  • ಕುಟುಂಬದ ಸದಸ್ಯರ ಹೆಸರು, ಸದಸ್ಯರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.
  • ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.
  • ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಯಾವುದಾದರೂ ಮೊಬೈಲ್ ಸಂಖ್ಯೆಯನ್ನು ನೀಡುವುದು.
  • ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ
  • ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ/ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ

ಅರ್ಜಿ ಸಲ್ಲಿಸುವುದು ಹೇಗೆ?

ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಿದ್ದರೆ ನೀವು ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ಇ-ಸರ್ವಿಸ್‌ (ಇ-ಸೇವೆ) ಮೇಲೆ ಕ್ಲಿಕ್‌ ಮಾಡಬೇಕು. ಇದರಲ್ಲಿ ಕೆಳಗಡೆ ನಿಮಗೆ ಇ-ಪಡಿತರ ಚೀಟಿ ಆಯ್ಕೆ ಕಾಣುತ್ತದೆ. ಅದರಲ್ಲಿ ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್‌ ಮಾಡಿದರೆ ಹೊಸ ಪಡಿತರ ಚೀಟಿ ಎಂಬ ಆಯ್ಕೆ ತೋರಿಸುತ್ತದೆ. ಅಲ್ಲಿ ಎಪಿಎಲ್‌ ಹಾಗೂ ಬಿಪಿಎಲ್‌ ಆಯ್ಕೆ ಇರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದ ಬಳಿಕ ಅಗತ್ಯ ದಾಖಲೆಗಳನ್ನು ನೀವು ಸಲ್ಲಿಸಬೇಕಾಗುತ್ತದೆ.

ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Bal Jeevan Bima: ಮಕ್ಕಳ ಹೆಸರಲ್ಲಿ ನಿತ್ಯ 6 ರೂ.ನಂತೆ ಕಟ್ಟಿದರೆ 1 ಲಕ್ಷ ರೂ. ವಿಮೆಯ ರಕ್ಷಣೆ

Continue Reading

ಮನಿ ಗೈಡ್

Retirement Plan: ನಿವೃತ್ತಿ ನಂತರ ನೆಮ್ಮದಿ ಜೀವನ ನಡೆಸಬೇಕೆ? ಈ 5 ಯೋಜನೆಗಳನ್ನು ಮರೆಯಬೇಡಿ

ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಮತ್ತು ಪ್ರತಿ ತಿಂಗಳು ಪಿಂಚಣಿ ಪಡೆಯಲು ಬಯಸಿದರೆ ಉತ್ತಮ ಆದಾಯವನ್ನು ನೀಡುವ ಯೋಜನೆಗಳಲ್ಲಿ (Retirement Plan) ಹೂಡಿಕೆ ಮಾಡುವುದು ಒಳ್ಳೆಯದು. ಐದು ನಿವೃತ್ತಿ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ.

VISTARANEWS.COM


on

By

Retirement Plan
Koo

ಉದ್ಯೋಗ (job) ಆರಂಭಿಸುವಾಗಲೇ ನಿವೃತ್ತಿ ಯೋಜನೆಯನ್ನು (Retirement Plan) ರೂಪಿಸಬೇಕು. ಇಲ್ಲವಾದರೆ ವಯಸ್ಸು ಜಾರಿದ್ದು ಗೊತ್ತೇ ಆಗುವುದಿಲ್ಲ. ನಿವೃತ್ತಿ ಸಮೀಪಿಸಿದಾಗ ಕೈಯಲ್ಲಿ ಬಿಡಿಗಾಸೂ ಇಲ್ಲದೆ ಕಷ್ಟ ಪಡಬೇಕಾಗಬಹುದು. ಇಲ್ಲವಾದರೆ ಅವರಿವರ ಮುಂದೆ ಕೈಚಾಚಿಕೊಂಡು ನಿಲ್ಲುವಂತಹ ಸಂದರ್ಭ ಬರಬಹುದು.

ನಿವೃತ್ತಿಗಾಗಿ ಯೋಜಿಸುತ್ತಿದ್ದರೆ ಮತ್ತು ಪ್ರತಿ ತಿಂಗಳು ಪಿಂಚಣಿ (pension ) ಪಡೆಯಲು ಬಯಸಿದರೆ ಉತ್ತಮ ಆದಾಯವನ್ನು (regular income) ನೀಡುವ ಯೋಜನೆಗಳಲ್ಲಿ ಹೂಡಿಕೆ (investment) ಮಾಡುವುದು ಒಳ್ಳೆಯದು. ನಿಯಮಿತ ಆದಾಯದ ಮೂಲವನ್ನು ನಮ್ಮನು ಸುರಕ್ಷಿತಗೊಳಿಸುತ್ತದೆ ಮತ್ತು ಆರಾಮದಾಯಕ ವೃದ್ಧಾಪ್ಯವನ್ನು ಖಚಿತಪಡಿಸಿಕೊಳ್ಳಲು ಗಮನಾರ್ಹವಾದ ಒಟ್ಟು ಮೊತ್ತವನ್ನು ಸಂಗ್ರಹಿಸುತ್ತದೆ. ಒಂದು ದೊಡ್ಡ ಮೊತ್ತವು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಆದರೆ ಮಾಸಿಕ ಆದಾಯವು ದೈನಂದಿನ ಖರ್ಚುಗಳನ್ನು ಒಳಗೊಂಡಿರುತ್ತದೆ.

ವಿಶ್ವಾಸಾರ್ಹ ಮಾಸಿಕ ಪಿಂಚಣಿಯನ್ನು ನೀಡುವ ಐದು ಯೋಜನೆಗಳು ಇಲ್ಲಿವೆ. ಇದರಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ಬಳಿಕ ಯಾರನ್ನೂ ಅವಲಂಬಿಸಬೇಕಿಲ್ಲ.

1. ಅಟಲ್ ಪಿಂಚಣಿ ಯೋಜನೆ

ತೆರಿಗೆದಾರರಲ್ಲದಿದ್ದರೆ ಅಟಲ್ ಪಿಂಚಣಿ ಯೋಜನೆ ಮೂಲಕ ನಿಮ್ಮ ವೃದ್ಧಾಪ್ಯದಲ್ಲಿ ನಿಯಮಿತ ಆದಾಯಕ್ಕೆ ವ್ಯವಸ್ಥೆ ಮಾಡಬಹುದು. ಈ ಯೋಜನೆಯು 18ರಿಂದ 40 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಲಭ್ಯವಿರುತ್ತದೆ. ಭಾಗವಹಿಸುವವರು 60 ವರ್ಷವನ್ನು ತಲುಪುವವರೆಗೆ ಸಣ್ಣ ಮಾಸಿಕ ಕೊಡುಗೆಗಳನ್ನು ನೀಡಬೇಕು. ಅನಂತರ ಅವರು ತಮ್ಮ ಕೊಡುಗೆಗಳ ಆಧಾರದ ಮೇಲೆ 1,000 ರಿಂದ ರೂ 5,000 ರವರೆಗಿನ ಮಾಸಿಕ ಪಿಂಚಣಿಯನ್ನು ಪಡೆಯುತ್ತಾರೆ.

2. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS)

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯು ಮಾಸಿಕ ಪಿಂಚಣಿ ಪಡೆಯಲು ಮತ್ತೊಂದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ. 18 ರಿಂದ 70 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ನೋಂದಾಯಿಸಿಕೊಳ್ಳಬಹುದು. NPS 60 ವರ್ಷ ವಯಸ್ಸಿನವರೆಗೆ ಹೂಡಿಕೆಯ ಅಗತ್ಯವಿರುವ ಮಾರುಕಟ್ಟೆ-ಸಂಯೋಜಿತ ಸರ್ಕಾರಿ ಯೋಜನೆಯಾಗಿದೆ. ತುರ್ತು ಸಂದರ್ಭದಲ್ಲಿ ನಿಮ್ಮ ಕೊಡುಗೆಗಳ ಶೇ. 60ರಷ್ಟನ್ನು ಹಿಂಪಡೆಯಬಹುದು, ಶೇ. 40 ಪಿಂಚಣಿಗೆ ನಿಗದಿಪಡಿಸಲಾಗಿದೆ. ಇದು ನಿಮ್ಮ ಪಿಂಚಣಿ ಮೊತ್ತವನ್ನು ನಿರ್ಧರಿಸುತ್ತದೆ. ವರ್ಷಾಶನವು ದೊಡ್ಡದಾಗಿದ್ದರೆ ಪಿಂಚಣಿ ಮೊತ್ತವೂ ಹೆಚ್ಚಾಗುತ್ತದೆ.


3. ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆ (SWP)

ವ್ಯವಸ್ಥಿತ ಹಿಂತೆಗೆದುಕೊಳ್ಳುವ ಯೋಜನೆಯು ಹೂಡಿಕೆದಾರರಿಗೆ ಮ್ಯೂಚುಯಲ್ ಫಂಡ್ ಯೋಜನೆಯಿಂದ ನಿಗದಿತ ಮಾಸಿಕ ಮೊತ್ತವನ್ನು ಪಡೆಯಲು ಅನುಮತಿಸುತ್ತದೆ. ಇದರಿಂದ ಲಾಭ ಪಡೆಯಲು ನಿಮ್ಮ ಕೆಲಸದ ವರ್ಷಗಳಲ್ಲಿ ವ್ಯವಸ್ಥಿತ ಹೂಡಿಕೆ ಯೋಜನೆ (SIP) ಅಥವಾ ಇತರ ಯೋಜನೆಗಳ ಮೂಲಕ ನೀವು ಗಣನೀಯ ಪ್ರಮಾಣದ ಹಣವನ್ನು ಹೂಡಿಕೆ ಮಾಡಿರಬೇಕು. ನೀವು SWP ಗಾಗಿ ನಿಮ್ಮ ನಿವೃತ್ತಿ ನಿಧಿಯನ್ನು ಬಳಸಬಹುದು, ಅಲ್ಲಿ ನೀವು ಮ್ಯೂಚುಯಲ್ ಫಂಡ್ ಘಟಕಗಳನ್ನು ಮಾರಾಟ ಮಾಡುವ ಮೂಲಕ ಮಾಸಿಕ ಪಾವತಿಗಳನ್ನು ಸ್ವೀಕರಿಸುತ್ತೀರಿ. ನಿಧಿಯು ಖಾಲಿಯಾದ ಅನಂತರ SWP ನಿಲ್ಲುತ್ತದೆ. ನೀವು ವಾಪಸಾತಿ ಆವರ್ತನವನ್ನು ನಿರ್ದಿಷ್ಟಪಡಿಸಬೇಕು ಮತ್ತು SWP ಅನ್ನು ಸಕ್ರಿಯಗೊಳಿಸಲು ಅಗತ್ಯ ವಿವರಗಳನ್ನು ಒದಗಿಸಬೇಕು.

ಇದನ್ನೂ ಓದಿ: Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

4. ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆ (EPFO)

ಸಂಬಳ ಪಡೆಯುವ ಉದ್ಯೋಗಿಯಾಗಿದ್ದರೆ ಮತ್ತು ಉದ್ಯೋಗಿ ಭವಿಷ್ಯ ನಿಧಿ ಸಂಸ್ಥೆಗೆ (ಇಪಿಎಫ್‌ಒ) ಕೊಡುಗೆ ನೀಡುತ್ತಿದ್ದರೆ ನೀವು ಉದ್ಯೋಗಿ ಪಿಂಚಣಿ ಯೋಜನೆ (ಇಪಿಎಸ್) ಬಗ್ಗೆ ತಿಳಿದಿರಬಹುದು. ಈ ಯೋಜನೆಯು ಖಾಸಗಿ ವಲಯದ ಉದ್ಯೋಗಿಗಳಿಗೆ ನಿವೃತ್ತಿಯ ಅನಂತರ ಸಾಮಾಜಿಕ ಭದ್ರತೆಯನ್ನು ಒದಗಿಸುತ್ತದೆ. EPFO ನಿಂದ ಪಿಂಚಣಿ ಪಡೆಯಲು ಅರ್ಹರಾಗಲು, ನೀವು ಕನಿಷ್ಠ 10 ವರ್ಷಗಳ ಕಾಲ EPS ಗೆ ಕೊಡುಗೆ ನೀಡಿರಬೇಕು. ಪಿಂಚಣಿ ಮೊತ್ತವು ನಿಮ್ಮ ಕೊಡುಗೆಗಳನ್ನು ಅವಲಂಬಿಸಿರುತ್ತದೆ ಮತ್ತು ನಿವೃತ್ತಿಯ ನಂತರ ಲಭ್ಯವಿರುತ್ತದೆ.

5. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMIS)

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಮಾಸಿಕ ಆದಾಯವನ್ನು ಗಳಿಸಲು ಸರ್ಕಾರ-ಖಾತ್ರಿಪಡಿಸಿದ ಠೇವಣಿ ಆಯ್ಕೆಯನ್ನು ನೀಡುತ್ತದೆ. ನೀವು ಏಕ ಅಥವಾ ಜಂಟಿ ಖಾತೆಗಳನ್ನು ತೆರೆಯಬಹುದು, ಏಕ ಖಾತೆಗಳಿಗೆ ಗರಿಷ್ಠ 9 ಲಕ್ಷ ರೂ. ಮತ್ತು ಜಂಟಿ ಖಾತೆಗಳಿಗೆ 15 ಲಕ್ಷ ರೂ. ಠೇವಣಿ ಅವಧಿಯು ಐದು ವರ್ಷಗಳು ಮತ್ತು ನಿಮ್ಮ ಅಸಲು ಮೊತ್ತದ ಸುರಕ್ಷತೆಯನ್ನು ಖಾತರಿಪಡಿಸುವ ಮೂಲಕ ನೀವು ಬಡ್ಡಿಯನ್ನು ಗಳಿಸುತ್ತೀರಿ. ಪ್ರಸ್ತುತ ಶೇ.7.4 ಬಡ್ಡಿದರದಲ್ಲಿ ಜಂಟಿ ಖಾತೆಯು ತಿಂಗಳಿಗೆ 9,250 ರೂ. ವರೆಗೆ ಗಳಿಸಬಹುದು. ಐದು ವರ್ಷಗಳ ಅನಂತರ ನೀವು ಹೊಸ ಖಾತೆಯನ್ನು ತೆರೆಯುವ ಮೂಲಕ ಯೋಜನೆಯನ್ನು ನವೀಕರಿಸಬಹುದು.

Continue Reading
Advertisement
Prajwal Revanna Case
ಕರ್ನಾಟಕ2 hours ago

Prajwal Revanna Case: ಪ್ರಜ್ವಲ್ ರೇವಣ್ಣ ಪಾಸ್‌ ಪೋರ್ಟ್ ರದ್ದು ಮಾಡಲು ವಿದೇಶಾಂಗ ಇಲಾಖೆಗೆ ಎಸ್‌ಐಟಿ ಪತ್ರ

Mobile
ದೇಶ2 hours ago

ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೊ ನೋಡಿ 15 ವರ್ಷದ ಅಕ್ಕನನ್ನೇ ಗರ್ಭಿಣಿ ಮಾಡಿದ 13 ವರ್ಷದ ಬಾಲಕ!

Army Officer
Lok Sabha Election 20243 hours ago

101ನೇ ವಯಸ್ಸಿನಲ್ಲೂ ‘ಕರ್ತವ್ಯ’ ಮರೆಯದೆ ವೋಟ್‌ ಮಾಡಿದ ನಿವೃತ್ತ ಯೋಧ; ಸೆಲ್ಯೂಟ್‌ ಎಂದರು ಜನ

Congress Guarantee
ಪ್ರಮುಖ ಸುದ್ದಿ3 hours ago

Congress Guarantee: ಗ್ಯಾರಂಟಿ ಯೋಜನೆಗಳಿಗೆ ಒಂದು ವರ್ಷಕ್ಕೆ ಸರ್ಕಾರ ಮಾಡಿದ ಖರ್ಚು ಎಷ್ಟು ಸಾವಿರ ಕೋಟಿ?

Malaysia Masters
ಕ್ರೀಡೆ3 hours ago

Malaysia Masters: ವಿಶ್ರಾಂತಿ ಬಳಿಕ ಮಲೇಷ್ಯಾ ಮಾಸ್ಟರ್ಸ್​ನಲ್ಲಿ ಕಣಕ್ಕಿಳಿಯಲು ಸಜ್ಜಾದ ಸಿಂಧು

Rahul Gandhi
ದೇಶ3 hours ago

Rahul Gandhi: ರಾಯ್‌ಬರೇಲಿಯಲ್ಲಿ ಜನ ಜೈ ಶ್ರೀರಾಮ್‌ ಎನ್ನುತ್ತಲೇ ಕಾಲ್ಕಿತ್ತ ರಾಹುಲ್‌ ಗಾಂಧಿ! Video ಇದೆ

MS Dhoni Bike Riding
ಕ್ರೀಡೆ4 hours ago

MS Dhoni Bike Riding: ಐಪಿಎಲ್​ ಮುಗಿಸಿ ತವರಿಗೆ ಮರಳಿದ್ದೇ ತಡ, ಬೈಕ್ ರೈಡಿಂಗ್​ ಮಾಡಿದ ಧೋನಿ​

Self Harming
ಕರ್ನಾಟಕ4 hours ago

Self Harming: ಟಿಸಿ ಕೊಟ್ಟಿಲ್ಲವೆಂದು ಬೇಸರಗೊಂಡು ವಿದ್ಯಾರ್ಥಿ ಆತ್ಮಹತ್ಯೆ

AAP Funds
ದೇಶ5 hours ago

AAP Funds: ನಿಯಮ ಉಲ್ಲಂಘಿಸಿ ಬೇರೆ ದೇಶಗಳಿಂದ ಆಪ್‌ 7 ಕೋಟಿ ರೂ. ದೇಣಿಗೆ ಸ್ವೀಕಾರ; ಇ.ಡಿ ಸ್ಫೋಟಕ ಮಾಹಿತಿ!

Karnataka weather Forecast
ಕರ್ನಾಟಕ5 hours ago

Coastal Weather: ದಕ್ಷಿಣ ಕನ್ನಡ, ಉಡುಪಿಯಲ್ಲಿ ಎರಡು ದಿನ ಭಾರೀ ಮಳೆ ಸಾಧ್ಯತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ13 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌