India Couture Week: ಭಾರತೀಯ ಕಲೆಯನ್ನು ಎತ್ತಿ ಹಿಡಿದ ಡಿಸೈನರ್‌ ಸುನೀತ್‌ ವರ್ಮಾ ಎಥ್ನಿಕ್‌ ಡಿಸೈನರ್‌ವೇರ್ಸ್ - Vistara News

ಫ್ಯಾಷನ್

India Couture Week: ಭಾರತೀಯ ಕಲೆಯನ್ನು ಎತ್ತಿ ಹಿಡಿದ ಡಿಸೈನರ್‌ ಸುನೀತ್‌ ವರ್ಮಾ ಎಥ್ನಿಕ್‌ ಡಿಸೈನರ್‌ವೇರ್ಸ್

ದಿಲ್ಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಕೌಚುರ್ ವೀಕ್‌ ಹಾಗೂ ಎಫ್‌ಡಿಐ ಸಂಯೋಜನೆಯಲ್ಲಿ ನಡೆಯುತ್ತಿರುವ ಫ್ಯಾಷನ್‌ ವೀಕ್‌ನಲ್ಲಿ (India Couture Week) ಡಿಸೈನರ್‌ ಸುನೀತ್‌ ವರ್ಮಾ ಅವರ ಡಿಸೈನರ್‌ವೇರ್‌ ಕಲೆಕ್ಷನ್‌ಗಳು ಭಾರತೀಯ ಕಲಾತ್ಮಕ ವಿನ್ಯಾಸಕ್ಕೆ ಕೈಗನ್ನಡಿಯಂತಿದ್ದವು. ಈ ಬಗ್ಗೆ ಫ್ಯಾಷನ್‌ ವಿಮರ್ಶಕರು ಏನು ಹೇಳಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ವರದಿ.

VISTARANEWS.COM


on

India Couture Week
ಚಿತ್ರಗಳು : ಸುನೀತ್‌ ವರ್ಮಾ ಎಥ್ನಿಕ್‌ ಕಲೆಕ್ಷನ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇಂಡಿಯಾ ಕೌಚುರ್‌ ವೀಕ್‌ ಹಾಗೂ ಎಫ್‌ಡಿಐ ಸಂಯೋಜನೆಯಲ್ಲಿ ನಡೆಯುತ್ತಿರುವ ಫ್ಯಾಷನ್‌ ವೀಕ್‌ನಲ್ಲಿ (India Couture Week) ಡಿಸೈನರ್‌ ಸುನೀತ್‌ ವರ್ಮಾ ಅವರ ಭಾರತೀಯ ಕಲಾತ್ಮಕ ವಿನ್ಯಾಸವನ್ನೊಳಗೊಂಡ ಎಥ್ನಿಕ್‌ ಡಿಸೈನರ್‌ವೇರ್‌ಗಳು ಫ್ಯಾಷನ್‌ ಪ್ರಿಯರನ್ನು ಸಮ್ಮೋಹನಗೊಳಿಸಿದ್ದವು. ಅಷ್ಟು, ಮಾತ್ರವಲ್ಲ, ನೋಡುತ್ತಿದ್ದರೇ, ಇಂಡಿಯನ್‌ ರಾಯಲ್‌ ಔಟ್‌ಫಿಟ್‌ಗಳನ್ನು ನೆನಪಿಗೆ ತರುವಂತಿದ್ದವು.

ಈಗಾಗಲೇ ದಿಲ್ಲಿಯಲ್ಲಿ ಆರಂಭಗೊಂಡಿರುವ ಈ ಫ್ಯಾಷನ್‌ ವೀಕ್‌ ಅಗಸ್ಟ್ 2ರವರೆಗೂ ನಡೆಯಲಿದ್ದು, ಭಾರತದಾದ್ಯಂತ ಇರುವ ಡಿಸೈನರ್‌ಗಳು ಭಾಗವಹಿಸುತ್ತಿದ್ದಾರೆ. ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಹಾಗೂ ಅದಿತಿ ರಾವ್‌ ಹೈದರಿ ಕೂಡ ಈ ಫ್ಯಾಷನ್‌ ವೀಕ್‌ನಲ್ಲಿ ಶೋ ಸ್ಟಾಪರ್‌ ಆಗಿ ಈಗಾಗಲೇ ಮನಗೆದ್ದಿದ್ದಾರೆ. ಭಾರತೀಯ ಸಂಸ್ಕೃತಿ ಬಿಂಬಿಸುವ ವೆಡ್ಡಿಂಗ್‌ವೇರ್‌ಗಳಿಗೆ ಈ ಫ್ಯಾಷನ್‌ ಶೋನಲ್ಲಿ ಆದ್ಯತೆ ನೀಡಲಾಗಿದ್ದು, ಒಂದಕ್ಕಿಂತ ಒಂದು ಕಲೆಕ್ಷನ್‌ಗಳು ಫ್ಯಾಷನ್‌ ಪ್ರಿಯರ ಮನಗೆದ್ದಿವೆ. ಅವುಗಳಲ್ಲಿ ಡಿಸೈನರ್‌ ಸುನೀತ್‌ ವರ್ಮಾ ಅವರ ಎಕ್ಸ್‌ಕ್ಲ್ಯೂಸಿವ್‌ ವೆಡ್ಡಿಂಗ್‌ವೇರ್‌ಗಂತೂ ಸಾಕಷ್ಟು ಉತ್ತಮ ಪ್ರತಿಕ್ರಿಯೆ ದೊರೆತಿದೆ.

Designerwares reflecting Indian culture

ಭಾರತೀಯ ಸಂಸ್ಕೃತಿ ಬಿಂಬಿಸಿದ ಡಿಸೈನರ್‌ವೇರ್ಸ್‌

ಡಿಸೈನರ್‌ ಸುನೀತ್‌ ವರ್ಮಾ ಅವರ ವೆಡ್ಡಿಂಗ್‌ ಕಲೆಕ್ಷನ್‌ನಲ್ಲಿ ಪ್ರಸ್ತುತಪಡಿಸಿದ ಬ್ರೈಡಲ್‌ ರೆಡ್‌ ಲೆಹೆಂಗಾ ಇದೀಗ ರಾಯಲ್‌ ಕಲೆಕ್ಷನ್‌ನಲ್ಲಿ ಟಾಪ್‌ ಸ್ಥಾನ ಪಡೆದಿದ್ದು, ಮುಂಬರುವ ವೆಡ್ಡಿಂಗ್‌ ಸೀಸನ್‌ನ ಬ್ರೈಡಲ್‌ ಕಲೆಕ್ಷನ್‌ಗೆ ಸ್ಫೂರ್ತಿ ನೀಡಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಇನ್ನು, ರಾಯಲ್‌ ಕಲಾತ್ಮಕ ವಿನ್ಯಾಸದೊಂದಿಗೆ ಶಿಮ್ಮರ್‌ ಹಾಗೂ ಜಗಮಗಿಸುವ ಲೆಹೆಂಗಾಗಳ ಬಗ್ಗೆ ಹೇಳುವುದಕ್ಕಿಂತ ನೋಡಿಯೇ ತೀರಬೇಕು. ಆ ಮಟ್ಟಿಗೆ ಅವು ಸಾಮಾನ್ಯ ಮಹಿಳೆಯರನ್ನು ಕೂಡ ಸೆಳೆಯುತ್ತವೆ. ಜೀವನದಲ್ಲಿ ಒಮ್ಮೆಯಾದರೂ ಸರಿಯೇ ಇಂತಹ ಒಂದು ಲೆಹೆಂಗಾವನ್ನು ಧರಿಸಬೇಕು ಎನ್ನುವ ಮಹದಾಸೆಯನ್ನು ಹುಟ್ಟುಹಾಕುತ್ತವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ. ಅವರ ಪ್ರಕಾರ, ಡಿಸೈನರ್‌ ಸುನೀತ್‌ ವರ್ಮಾ ಕೇವಲ ತಮ್ಮ ಡಿಸೈನರ್‌ವೇರ್‌ ಪ್ರದರ್ಶಿಸಿಲ್ಲ, ಬದಲಿಗೆ ಭಾರತೀಯ ಕಲೆಯನ್ನು ಜಾಗತಿಕ ಮ,ಟ್ಟದಲ್ಲಿ ಪ್ರದರ್ಶಿಸಿ, ಭಾವಿ ಫ್ಯಾಷನ್‌ ಡಿಸೈನರ್‌ಗಳಿಗೆ ಸ್ಫೂರ್ತಿ ನೀಡಿದ್ದಾರೆ. ಪ್ರೇರಣೆ ನೀಡಿದ್ದಾರೆ ಎನ್ನುತ್ತಾರೆ.

Awesome sequins design

ಅದ್ಭುತವೆನಿಸುವ ಸಿಕ್ವೀನ್ಸ್‌ ವಿನ್ಯಾಸ

ಉತ್ತರ ಭಾರತದಲ್ಲಿನ ಸೀರೆಗಳ ಛಾಯೆಯನ್ನು ಇವರ ಈ ಕಲೆಕ್ಷನ್‌ನಲ್ಲಿ ಕಾಣಬಹುದು. ಅದರೊಂದಿಗೆ ಇಂಡೋ-ವೆಸ್ಟರ್ನ್ ಕಲೆಕ್ಷನ್‌ಗಳು ನಿಬ್ಬೆರಗು ಮೂಡಿಸುವಂತಿವೆ. ಸಿಕ್ವೀನ್ಸ್‌ ಡಿಸೈನ್‌ ಮೂಲಕ ಪ್ರತಿ ಡಿಸೈನರ್‌ವೇರ್‌ಗಳನ್ನು ಹ್ಯಾಂಡ್‌ಮೇಡ್ ವರ್ಕ್‌ನಲ್ಲಿ ಅದ್ಭುತವಾಗಿ ಡಿಸೈನ್‌ ಮಾಡಲಾಗಿದೆ ಎಂದಿದ್ದಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Earrings Fashion: ಕಿವಿಯ ಅಲಂಕಾರಕ್ಕೆ ಬಂತು ಓವರ್‌ ಸೈಜ್ ಇಯರಿಂಗ್ಸ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Dupatta Selection Tips: ಪರ್ಫೆಕ್ಟ್ ದುಪಟ್ಟಾ ಸೆಲೆಕ್ಷನ್‌ಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

ಉಡುಪಿಗೆ ಧರಿಸುವ ದುಪಟ್ಟಾ ಆಯ್ಕೆಗೆ ಒಂದಿಷ್ಟು ಸಿಂಪಲ್‌ ಸೂತ್ರಗಳನ್ನು (Dupatta Selection Tips) ಪಾಲಿಸಬೇಕು. ಟ್ರೆಂಡಿಯಾಗಿರುವ ದುಪಟ್ಟಾ ಖರೀದಿಸಿದರಷ್ಟೇ ಸಾಲದು, ಅದಕ್ಕೆ ತಕ್ಕಂತೆ ಎಥ್ನಿಕ್‌ ಉಡುಪುಗಳು ಮ್ಯಾಚ್‌ ಆಗಬೇಕು. ಹಾಗಾದಲ್ಲಿ, ದುಪಟ್ಟಾ ಸೆಲೆಕ್ಷನ್‌ ಹೇಗೆ? ಇಲ್ಲಿದೆ ಟಿಪ್ಸ್.

VISTARANEWS.COM


on

Dupatta Selection Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದುಪಟ್ಟಾಗಳು ಇಂದು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ, ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಮೊದಲೆಲ್ಲಾ ಡಿಸೈನರ್‌ವೇರ್‌ಗಳ ಜೊತೆಗೆ ದೊರೆಯುತ್ತಿದ್ದ ದುಪಟ್ಟಾಗಳು (Dupatta Selection Tips) ಇದೀಗ ಪ್ರತ್ಯೇಕವಾಗಿಯೂ ದೊರೆಯುತ್ತಿವೆ. ಅಷ್ಟು ಮಾತ್ರವಲ್ಲ, ಡಿಸೈನ್‌ ಮಾಡಿಸುವ ಉಡುಗೆಗೆ ತಕ್ಕಂತೆ ದುಪಟ್ಟಾ ಮ್ಯಾಚ್‌ ಮಾಡುವ ಕ್ರೇಝ್‌ ಮೊದಲಿಗಿಂತ ಹೆಚ್ಚಾಗಿದೆ. ಕೆಲವೊಮ್ಮೆಯಂತೂ ದುಪಟ್ಟಾಗಳೇ ಡಿಸೈನರ್‌ವೇರ್‌ಗಿಂತ ಆಕರ್ಷಕವಾಗಿ ಕಾಣಿಸುತ್ತವೆ. ಆ ಮಟ್ಟಿಗೆ ದುಪಟ್ಟಾಗಳು ಇಂದು ಪ್ರಾಮುಖ್ಯತೆ ಪಡೆದುಕೊಂಡಿವೆ.

Dupatta Selection Tips

ದುಪಟ್ಟಾಗಳ ಪ್ರಮುಖ ಪಾತ್ರ

“ದುಪಟ್ಟಾಗಳು ಇಂದು ಎಥ್ನಿಕ್‌ ಡಿಸೈನರ್‌ವೇರ್‌ಗಳಿಗೆ ಸಾಥ್‌ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದು ಯಾವುದೇ ಗ್ರ್ಯಾಂಡ್‌ ಡ್ರೆಸ್‌ ಆಗಿರಲಿ ಸಿಂಪಲ್‌ ಉಡುಪಾಗಿರಲಿ ಅವುಗಳ ಡಿಸೈನ್‌ಗೆ ತಕ್ಕಂತೆ ದುಪಟ್ಟಾ ಧರಿಸುವುದು ಆಯಾ ಯುವತಿಯ ಅಭಿರುಚಿಯನ್ನು ತೋರ್ಪಡಿಸುತ್ತದಂತೆ” ಹಾಗೆನ್ನುತ್ತಾರೆ ಸ್ಟೈಲಿಸ್ಟ್ ಗೀತಾ. ಅವರು ಹೇಳುವಂತೆ, ಇವುಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡುವಾಗ ಒಂದಿಷ್ಟು ಸಲಹೆಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ.

Dupatta Selection Tips

ಗ್ರ್ಯಾಂಡ್‌ ಡಿಸೈನರ್‌ವೇರ್‌ಗೆ ಮ್ಯಾಚಿಂಗ್‌

ಗ್ರ್ಯಾಂಡ್‌ ಡಿಸೈನರ್‌ವೇರ್‌ಗೆ ದುಪಟ್ಟಾ ಆಯ್ಕೆ ಮಾಡುವಾಗ ಆದಷ್ಟೂ ಡಿಸೈನ್‌ ಹಾಗೂ ಕಲರ್‌ಗೆ ಪ್ರಾಮುಖ್ಯತೆ ನೀಡಬೇಕು. ಟ್ರೆಂಡಿಯಾಗಿರುವ ದುಪಟ್ಟಾ ಖರೀದಿಸಿದರಷ್ಟೇ ಸಾಲದು, ಅದಕ್ಕೆ ತಕ್ಕಂತೆ ಮ್ಯಾಚ್‌ ಮಾಡುತ್ತಿರುವ ಎಥ್ನಿಕ್‌ ಉಡುಪುಗಳು ಮ್ಯಾಚ್‌ ಆಗಬೇಕು.

ಲೆಹೆಂಗಾ ದುಪಟ್ಟಾ

ಲೆಹೆಂಗಾಗಳಿಗೆ ದುಪಟ್ಟಾ ಹೊಂದಿಸುವುದಾದಲ್ಲಿ ಇಂದು ಟ್ರೆಂಡಿಯಾಗಿರುವ ಕಾಂಟ್ರಾಸ್ಟ್ ಶೇಡ್‌ನವನ್ನು ಆಯ್ಕೆ ಮಾಡಿ. ಸಿಂಪಲ್‌ ಆದ್ರೆ ಸಾಕು ಎನ್ನುವವರು ಮಾನೋಕ್ರೋಮ್‌ ಶೇಡ್ಸ್‌ಗೆ ಮೊರೆ ಹೋಗಬಹುದು. ದುಪಟ್ಟಾ ಉದ್ದನಾಗಿರಬೇಕು. ಅದನ್ನು ದಾವಣಿ ಎನ್ನಲಾಗುತ್ತದೆ.

Dupatta Selection Tips

ಫ್ಯಾಬ್ರಿಕ್‌ ಸೆಲೆಕ್ಷನ್‌

ದುಪಟ್ಟಾ ಫ್ಯಾಬ್ರಿಕ್‌ ನೋಡಿ ಸೆಲೆಕ್ಷನ್‌ ಮಾಡಿ. ಯಾಕೆಂದರೇ, ಔಟ್‌ಫಿಟ್‌ ಭಾರಿ ಡಿಸೈನ್‌ ಹಾಗೂ ಫ್ಯಾಬ್ರಿಕ್‌ನದ್ದಾದಲ್ಲಿ ಆದಷ್ಟೂ ಲೈಟ್‌ವೈಟ್‌ ಸಾಫ್ಟ್ ಶೀರ್‌, ನೆಟ್ಟೆಡ್ನಂತಹ ಪಾರದರ್ಶಕ ದುಪಟ್ಟಾಗಳು ಉತ್ತಮ.

Dupatta Selection Tips

ಸಲ್ವಾರ್ ಕಮೀಝ್‌/ಚೂಡಿದಾರ್ ಸೆಟ್‌

ಸಾದಾ ಸೆಟ್‌ಗಳಿಗೆ ಭಾರಿ ಡಿಸೈನ್‌ನ ದುಪಟ್ಟಾ ಆಯ್ಕೆ ಬೆಸ್ಟ್. ಗ್ರ್ಯಾಂಡ್‌ ಡಿಸೈನ್‌ನವಕ್ಕೆ ಸಿಂಪಲ್‌ ದುಪಟ್ಟಾ ಓಕೆ. ಇನ್ನು, ಧರಿಸುವ ಕುರ್ತಾಗಿಂತ ದುಪಟ್ಟಾ ಉದ್ದನಾಗಿ ಕಾಣಿಸಬೇಕು. ಪಾದಗಳಿಗೆ ತಾಗಬಾರದು.

ಇದನ್ನೂ ಓದಿ: Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

ಗೋಲ್ಡನ್‌ ಶೇಡ್ ದುಪಟ್ಟಾ

ಗ್ರ್ಯಾಂಡ್‌ ದುಪಟ್ಟಾಗಳನ್ನು ಬಹುತೇಕ ಎಲ್ಲಾ ಗ್ರ್ಯಾಂಡ್‌ ಉಡುಪುಗಳಿಗೂ ಮಿಕ್ಸ್ ಮ್ಯಾಚ್‌ ಮಾಡಬಹುದು. ಅದರಲ್ಲೂ ಬಂಗಾರ ವರ್ಣದ ದುಪಟ್ಟಾಗಳು ಎಲ್ಲಾ ಗೋಲ್ಡ್ ಹಾಗೂ ಸಿಲ್ವರ್‌ ಝರಿ ಅಥವಾ ಬಾರ್ಡರ್‌ ಇರುವಂತಹ ಎಥ್ನಿಕ್‌ ಉಡುಪುಗಳಿಗೆ ಹೊಂದುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಧರಿಸಿದ ಎಮಾರಾಲ್ಡ್ ಜ್ಯುವೆಲರಿಗಳ ಕಲೆಕ್ಷನನ್ನು ಕಾಪಿ ಮಾಡಿದ ಇಮಿಟೇಷನ್‌ ಜ್ಯುವೆಲರಿಗಳು ಇದೀಗ ಬೇಡಿಕೆ ಹೆಚ್ಚಿಸಿಕೊಂಡಿವೆ. ಯಾವ್ಯಾವ ಡಿಸೈನ್‌ಗಳು ದೊರೆಯುತ್ತಿವೆ? ಬೇಡಿಕೆ ಹೆಚ್ಚಲು ಕಾರಣವೇನು? ಇಲ್ಲಿದೆ ವಿವರ.

VISTARANEWS.COM


on

Ambani Family Fashion
ಚಿತ್ರಗಳು: ಅಂಬಾನಿ ಫ್ಯಾಮಿಲಿಯ ಮಹಿಳೆಯರು ಧರಿಸಿರುವ ಅತ್ಯಮೂಲ್ಯ ಎಮಾರಾಲ್ಡ್ ಜ್ಯುವೆಲರಿಗಳ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಸಾಮಾನ್ಯ ಮಹಿಳೆ ಕೂಡ ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಧರಿಸುವ ಜ್ಯುವೆಲರಿಗಳನ್ನು, ತಾವು ಕೂಡ ಧರಿಸಿ ಸಂತಸ ಪಡಬಹುದು! ಹೌದು. ಅದು ಹೇಗೆ? ಎಂದು ಯೋಚಿಸುತ್ತಿದ್ದೀರಾ! ಅವರಂತೆ ಒರಿಜಿನಲ್‌ ಜ್ಯುವೆಲರಿಗಳನ್ನು ಖರೀದಿಸಲು ಸಾಧ್ಯವಾಗದಿದ್ದರೂ, ಥೇಟ್‌ ಅವರು ಧರಿಸಿರುವಂತಹ ಜ್ಯುವೆಲರಿಗಳನ್ನೇ ಹೋಲುವಂತಹ ಕೃತಕ ಪ್ರಿಶಿಯಸ್‌ ಸ್ಟೋನ್‌ನಿಂದ ಸಿದ್ಧಗೊಂಡ ಇಮಿಟೇಷನ್‌ ಜ್ಯುವೆಲರಿಗಳನ್ನು ಕೊಂಡು ಧರಿಸಿ ಖುಷಿ ಪಡಬಹುದು. ಇದಕ್ಕೆ ಪ್ರಮುಖ ಕಾರಣ, ಕೈಗೆಟಕುವ ಬೆಲೆ. ಹಾಗಾಗಿ ಈ ಕೃತಕ ಇಮಿಟೇಷನ್‌ ಜ್ಯುವೆಲರಿಗಳು ಇದೀಗ ಸಖತ್‌ ಟ್ರೆಂಡಿಯಾಗಿವೆ.

Ambani Family Fashion

ಅಂಬಾನಿ ಫ್ಯಾಮಿಲಯ ಮಹಿಳೆಯರ ಜ್ಯುವೆಲರಿ ಮೋಹ

ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಸೇರಿದಂತೆ ಅಂಬಾನಿ ಕುಟುಂಬದ ಮಹಿಳೆಯರ ಪ್ರೆಸ್ಟಿಜ್‌ನ ಧ್ಯೋತಕವಾದ ಅಮೂಲ್ಯವಾದ ಎಮಾರಾಲ್ಡ್ ಜ್ಯುವೆಲರಿಗಳ ರಿಪ್ಲೀಕಾದಂತೆ ಕಾಣುವ ಈ ಆರ್ಟಿಫಿಶಿಯಲ್‌ ಇಮಿಟೇಷನ್‌ ಆಭರಣಗಳು, ಎಲ್ಲಾ ವರ್ಗದ ಮಹಿಳೆಯರನ್ನು ಆಕರ್ಷಿಸಿವೆ. ಕೋಟಿಗಟ್ಟಲೆ ಬೆಲೆ ಬಾಳುವ ಜ್ಯುವೆಲರಿ ಧರಿಸಲಾಗದಿದ್ದರೂ, ಅದರಂತೆಯೇ ಕಾಣಿಸುವ ಜ್ಯುವೆಲರಿಗಳನ್ನು ಧರಿಸುವ ಇಚ್ಛೆ ಸಾಕಷ್ಟು ಮಹಿಳೆಯರದ್ದಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಡಿಸೈನ್‌ನ ಆಭರಣಗಳು ಕಾಲಿಟ್ಟಿವೆ ಎನ್ನುತ್ತಾರೆ ಇಮಿಟೇಷನ್‌ ಜ್ಯುವೆಲರಿ ಮಾರಾಟಗಾರಾದ ರಾಕೇಶ್‌.

Ambani Family Fashion

ಎಮಾರಾಲ್ಡ್ ಸೆಟ್‌ನಂತೆ ಕಾಣುವ ಇಮಿಟೇಷನ್‌ ಜ್ಯುವೆಲರಿ

ಅಂದಹಾಗೆ, ಎಲ್ಲರಿಗೂ ತಿಳಿದಿರುವಂತೆ ನೀತಾ ಅಂಬಾನಿಯವರ ಬಳಿ ಎಮರಾಲ್ಡ್‌ನ ದೊಡ್ಡ ಸೆಟ್‌ ಜ್ಯುವೆಲರಿಗಳಿವೆ. ಮಗಳು ಮತ್ತು ಸೊಸೆಯ ಬಳಿಯೂ ಸಾಕಷ್ಟಿವೆ. ಪ್ರಪಂಚದ ಅತ್ಯಂತ ದುಬಾರಿ ಎಮರಾಲ್ಡ್‌ನಿಂದ ಮಾಡಿದ ಜ್ಯುವೆಲರಿ ಸೆಟ್‌ಗಳಿವು. ಪ್ರಿ-ವೆಡ್ಡಿಂಗ್‌ನಲ್ಲಿ ಇವರೆಲ್ಲರೂ ಧರಿಸಿದ್ದೇ ತಡ, ಕೃತಕ ಆಭರಣ ಲೋಕದಲ್ಲಿ, ಇವುಗಳ ರಿಪ್ಲೀಕಾ ಜ್ಯುವೆಲರಿಗಳ ಆಗಮನವಾಗತೊಡಗಿತು. ಕೇವಲ ಎರಡ್ಮೂರು ಸಾವಿರ ರೂ.ಗಳಿಗೆ ದೊರಕುಲಾರಂಭಿಸಿತು. ಹಾಗಾಗಿ ಬೇಡಿಕೆಯು ಹೆಚ್ಚಿತು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್. ಅಷ್ಟೇಕೆ, ಇದೀಗ ಬ್ರೈಡಲ್‌ ಸೆಟ್‌ಗಳಲ್ಲೂ ನಾನಾ ಡಿಸೈನ್‌ನವು ಕಾಲಿಟ್ಟಿವೆ. ಖರೀದಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಕೃತಕ ಆಭರಣದ ಮಾರಾಟಗಾರರು.

ಇದನ್ನೂ ಓದಿ: Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

ಇಮಿಟೇಷನ್‌ ಎಮಾರಾಲ್ಡ್ ಜ್ಯುವೆಲರಿ ಪ್ರಿಯರಿಗೆ ಸಿಂಪಲ್‌ ಟಿಪ್ಸ್

  • ಫಿನಿಶಿಂಗ್‌ ಇರುವಂತಹ ಜ್ಯುವೆಲ್‌ ಸೆಟ್‌ ಆಯ್ಕೆ ಮಾಡಿ.
  • ಗೋಲ್ಡನ್‌ ಹಾಗೂ ಸಿಲ್ವರ್‌ ಕೋಟೆಡ್‌ ಸೆಟ್‌ಗಳು ಟ್ರೆಂಡ್‌ನಲ್ಲಿವೆ.
  • ಈ ಸೆಟ್‌ನೊಂದಿಗೆ ಮ್ಯಾಚ್‌ ಆಗದ ಇತರೇ ಮೆಟಲ್‌ನ ಜ್ಯುವೆಲರಿಗಳನ್ನು ಧರಿಸಕೂಡದು.
  • ಕ್ಲಾಸಿ ಲುಕ್‌ಗೆ ಇವು ಮ್ಯಾಚ್‌ ಆಗುತ್ತವೆ.
  • ಡಾರ್ಕ್ ಶೇಡ್‌ ಹಾಗೂ ಮಿಂಟ್‌ ಗ್ರೀನ್‌ ಶೇಡ್‌ನವು ಪ್ರಚಲಿದಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

ಈ ಸೀಸನ್‌ನಲ್ಲಿ ಬಂಗಾರ ವರ್ಣದ ಡಿಸೈನರ್‌ ಸೀರೆಗಳು (Saree Fashion) ಟ್ರೆಂಡಿಯಾಗಿವೆ. ನೋಡಲು ಸೆಲೆಬ್ರೆಟಿ ಲುಕ್‌ ನೀಡುವ ಈ ಶೇಡ್‌ನ ಸೀರೆಗಳು ನೀರೆಯರನ್ನು ಸೆಳೆದಿವೆ. ಯಾವ್ಯಾವ ಬಗೆಯವು ಟ್ರೆಂಡ್‌ನಲ್ಲಿವೆ? ಆಯ್ಕೆ ಹೇಗೆ? ಎಂಬುದರ ಬಗ್ಗೆ ಸೀರೆ ಪರಿಣತರು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Saree Fashion
ಚಿತ್ರಗಳು: ಉದಿತಿ ಸಿಂಗ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರ ವರ್ಣದ ಡಿಸೈನರ್‌ ಸೀರೆಗಳು (Saree Fashion) ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಸೆಲೆಬ್ರೆಟಿ ಲುಕ್‌ ನೀಡುವ ಈ ಶೇಡ್‌ನ ಸೀರೆಗಳು, ನಾನಾ ಫ್ಯಾಬ್ರಿಕ್‌ ಹಾಗೂ ವಿನ್ಯಾಸದಲ್ಲಿ ಕಾಲಿಟ್ಟಿದ್ದು, ಪಾರ್ಟಿಪ್ರಿಯ ಮಹಿಳೆಯರನ್ನು ಆಕರ್ಷಿಸಿವೆ. “ಗೋಲ್ಡನ್‌ ಶೇಡ್‌ನ ಡಿಸೈನರ್‌ ಸೀರೆಗಳು ಎಂತಹ ಮಹಿಳೆಯರನ್ನು ಕೂಡ ಅಂದವಾಗಿ ಬಿಂಬಿಸುತ್ತವೆ. ಈ ವರ್ಣದ ಸೀರೆಗೆ ಹೆಚ್ಚು ಆಕ್ಸೆಸರೀಸ್‌ ಹಾಕುವ ಅಗತ್ಯವಿಲ್ಲ, ಸೀರೆಗಳೇ ಮಿನುಗುತ್ತವೆ. ಜಗಮಗಿಸುತ್ತವೆ. ಆ ಮಟ್ಟಿಗೆ ಈ ಗೋಲ್ಡನ್‌ ಶೇಡ್‌ನ ಮಿರಮಿರ ಮಿನುಗುವ ಸೀರೆಗಳು ಆಗಮಿಸಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ನೋಡಲು ಒಂದೇ ಶೇಡ್‌ ಆದರೂ ಇದರಲ್ಲೆ ಕೊಂಚ ಡಾರ್ಕ್, ಲೈಟ್‌ ಹಾಗೂ ಬಗೆಬಗೆಯ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿವೆ” ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌. ಅವರ ಪ್ರಕಾರ, ಗೋಲ್ಡನ್‌ ವರ್ಣದ ಸೀರೆಗಳು ಈ ಸೀಸನ್‌ನಲ್ಲಿ ಸಖತ್‌ ಬೇಡಿಕೆ ಸೃಷ್ಟಿಸಿಕೊಂಡಿವೆ ಎನ್ನುತ್ತಾರೆ.

Saree Fashion

ಟ್ರೆಂಡ್‌ನಲ್ಲಿರುವ ಗೋಲ್ಡನ್‌ ವರ್ಣದ ಸೀರೆಗಳು

ಸಿಕ್ವೀನ್ಸ್ ಗೋಲ್ಡನ್‌ ಸೀರೆ, ಶಿಮ್ಮರ್‌ ಗೋಲ್ಡನ್‌ ಸೀರೆ, ಎಂಬಾಲಿಶ್ಡ್, ಎಂಬ್ರಾಯ್ಡರಿ ಇರುವಂತಹ ಗೋಲ್ಡನ್‌ ಸೀರೆ, ನೆಟ್ಟೆಡ್‌ ಗೋಲ್ಡನ್‌, ಜಾರ್ಜೆಟ್ ಗೋಲ್ಡನ್‌, ಸಾಟಿನ್‌ ಗೋಲ್ಡನ್‌ ಹೀಗೆ ನಾನಾ ಬಗೆಯ ಫ್ಯಾಬ್ರಿಕ್‌ನ ಗೋಲ್ಡನ್‌ ಸೀರೆಗಳು ಟ್ರೆಂಡಿಯಾಗಿವೆ. ಮಹಿಳೆಯರು ಕೂಡ ಅವರವರ ಅಭಿಲಾಷೆಗೆ ತಕ್ಕಂತೆ ಈ ಶೇಡ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ ಎನ್ನುತ್ತಾರೆ ಮಾರಾಟಗಾರರು.

Saree Fashion

ಪಾರ್ಟಿ ಪ್ರಿಯರ ಗೋಲ್ಟನ್‌ ಸೀರೆ

ಸೆಲೆಬ್ರೆಟಿಗಳು ಹಾಗೂ ಪಾರ್ಟಿ ಪ್ರಿಯರು ಅತಿ ಹೆಚ್ಚು ಗೋಲ್ಡನ್‌ ಸೀರೆಗಳನ್ನು ಇಷ್ಟಪಡುತ್ತಾರಂತೆ. ಹಾಗೆಂದು ಒಂದು ಬ್ಯೂಟಿ ಅಕಾಡೆಮಿಯ ಸಮೀಕ್ಷೆ ಕೂಡ ತಿಳಿಸಿದೆ.

Saree Fashion

ಸೆಲೆಬ್ರೆಟಿ ಲುಕ್‌ಗಾಗಿ ಗೋಲ್ಡನ್‌ ಸೀರೆ

ಇನ್ನು, ಸೆಲೆಬ್ರೆಟಿಯಂತೆ ತಾವು ಕೂಡ ಕಾಣಿಸಬೇಕು ಎಂದು ಬಯಸುವವರು ಕೂಡ ಗೋಲ್ಡನ್‌ ಸೀರೆಗಳನ್ನು ಇಷ್ಟಪಡುತ್ತಾರಂತೆ.

Saree Fashion

ಗೋಲ್ಡನ್‌ ಸೀರೆಗೆ ಕಾಂಟ್ರಾಸ್ಟ್ ಬ್ಲೌಸ್‌ ಮ್ಯಾಚ್‌

ಗೋಲ್ಡನ್‌ ಸೀರೆಗೆ ಅದೇ ರೀತಿಯ ಬ್ಲೌಸ್‌ ಹಾಕುವುದು ಇದೀಗ ತೀರಾ ಕಡಿಮೆಯಾಗಿದೆ. ಬ್ಲಾಕ್‌, ವೆಲ್ವೆಟ್‌, ಸ್ಲಿವ್‌ಲೆಸ್‌, ಹಾಲ್ಟರ್‌ ನೆಕ್‌, ಬಿಕಿನಿ ಬ್ಲೌಸ್‌, ಬ್ಯಾಕ್‌ಲೆಸ್‌ ಬ್ಲೌಸ್‌ಗಳನ್ನು ಧರಿಸುವುದು ಹೆಚ್ಚಾಗಿದೆ. ಇದು ಗ್ಲಾಮರಸ್‌ ಲುಕ್‌ ನೀಡುವುದು ಎನ್ನುತ್ತಾರೆ ಸ್ಟೈಲಿಸ್ಟ್ ಜೀತು.

ಇದನ್ನೂ ಓದಿ: Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

ಗೋಲ್ಡನ್‌ ಸೀರೆ ಆಯ್ಕೆ ಹೀಗಿರಲಿ

  • ನಿಮ್ಮ ಸ್ಕಿನ್‌ ಟೋನ್‌ಗೆ ಹೊಂದುವ ಗೋಲ್ಡನ್‌ ಶೇಡ್ಸ್ ಆಯ್ಕೆ ಮಾಡಿ.
  • ಆದಷ್ಟೂ ಬಾರ್ಡರ್‌ ಇಲ್ಲದ ಗೋಲ್ಡನ್‌ ಸೀರೆ ಪಾರ್ಟಿಲುಕ್‌ ನೀಡುವುದು.
  • ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
  • ಸಾಫ್ಟ್ ಫ್ಯಾಬ್ರಿಕ್‌ನ ಗೋಲ್ಡನ್‌ ಸೀರೆಯಲ್ಲಿ ಬಳುಕುವ ಬಳ್ಳಿಯಂತೆ ಕಾಣಿಸಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Heera Mandi Fashion: ರೀಕ್ರಿಯೆಟ್‌ ಆಗುತ್ತಿದೆ ಹೀರಾಮಂಡಿ ಲುಕ್‌!

ಹೀರಾಮಂಡಿ ಲುಕ್‌ (Heera Mandi Fashion) ಇದೀಗ ಪ್ರಯೋಗಾತ್ಮಕವಾಗಿ ಫ್ಯಾಷನ್‌ ಹಾಗೂ ಬ್ಯೂಟಿ ಲೋಕದಲ್ಲಿ ರೀ ಕ್ರಿಯೇಟ್‌ ಆಗುತ್ತಿದೆ. ಈ ವೆಬ್‌ ಸೀರಿಸ್‌ನಲ್ಲಿ ನಟಿಯರು ಧರಿಸಿರುವ ಗ್ರ್ಯಾಂಡ್‌ ಡಿಸೈನರ್‌ವೇರ್ಸ್, ಹೆವ್ವಿ ಜ್ಯುವೆಲರಿಗಳು ಮಾನಿನಿಯರನ್ನು ಆಕರ್ಷಿಸಲಾರಂಭಿಸಿವೆ. ಇನ್ನು, ಇವೆಲ್ಲದಕ್ಕೂ ಸಾಥ್‌ ನೀಡುವ ಮೇಕಪ್‌ ಕೂಡ ಟ್ರೆಂಡಿಯಾಗಿದೆ. ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Heera Mandi Fashion
ಚಿತ್ರಕೃಪೆ: ರಾಶಿ ಸೃಜನ್‌ ಮೇಕಪ್‌ ಸ್ಟುಡಿಯೋ & ಅಕಾಡೆಮಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೀರಾಮಂಡಿ ಲುಕ್‌ (Heera Mandi Fashion) ಇದೀಗ ಎಲ್ಲೆಡೆ ರೀ ಕ್ರಿಯೇಟ್‌ ಆಗಲಾರಂಭಿಸಿದೆ. ಅದರಲ್ಲೂ, ಎಥ್ನಿಕ್‌ ಫ್ಯಾಷನ್‌ ಕೆಟಗರಿಯಲ್ಲಿ ಹೀರಾಮಂಡಿ ಲುಕ್‌ ಟಾಪ್‌ ಲಿಸ್ಟ್ ಸ್ಥಾನ ಗಳಿಸಿದೆ.

Heera Mandi Fashion

ವೆಬ್‌ ಸೀರಿಸ್‌ ಪ್ರಭಾವ

ಅಂದಹಾಗೆ, ಸಂಜಯ್‌ ಲೀಲಾ ಬನ್ಸಾಲಿ ನಿರ್ದೆಶನದಲ್ಲಿ ಓಟಿಟಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವ ಹೀರಾಮಂಡಿ ವೆಬ್‌ ಸೀರಿಸ್‌ನಲ್ಲಿ ನಟಿಯರು ಧರಿಸಿದ, ಒಂದೊಂದು ಡಿಸೈನರ್‌ವೇರ್ಸ್, ಆಭರಣಗಳು ಈಗಾಗಲೇ ಮಾರುಕಟ್ಟೆಯಲ್ಲಿ ಟ್ರೆಂಡಿಯಾಗಿವೆ. ಇದರೊಂದಿಗೆ ಹೀರಾಮಂಡಿ ನಟಿಯರ ಲುಕ್‌ಗೆ ಸಾಥ್‌ ನೀಡಿದ್ದ ಮೇಕಪ್‌ ಹಾಗೂ ಸ್ಟೈಲಿಂಗ್‌ ಕೂಡ ಇದರೊಂದಿಗೆ ಹಿಟ್‌ ಆಗಿದೆ. ಈ ಲುಕ್‌ಗೆ ಮನಸೋತ ಫ್ಯಾಷನಿಸ್ಟಾಗಳು ಹಾಗೂ ಮೇಕಪ್‌ ಆರ್ಟಿಸ್ಟ್‌ಗಳು ಹೀರಾಮಂಡಿ ಲುಕ್ಕ್‌ ಅನ್ನು ರೀ ಕ್ರಿಯೇಟ್‌ ಮಾಡಲಾರಂಭಿಸಿದ್ದಾರೆ. ಪರಿಣಾಮ, ಈ ಲುಕ್‌ಗೆ ಸಾಥ್‌ ನೀಡಿದ ಎಥ್ನಿಕ್‌ವೇರ್ಸ್ ಹಾಗೂ ಜ್ಯುವೆಲರಿ ಡಿಸೈನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಕ್ಲಾಸಿ ಲುಕ್‌ ನೀಡುವ ಮೇಕಪ್‌ಗೂ ಪ್ರಾಮುಖ್ಯತೆ ನೀಡುವುದು ಹೆಚ್ಚಾಗಿದೆ ಎನ್ನುತ್ತಾರೆ ಮಾಡೆಲ್‌ ಕಮ್‌ ಸೆಲೆಬ್ರೆಟಿ ಮೇಕಪ್‌ ಆರ್ಟಿಸ್ಟ್ ರಾಶಿ ಮೇಘನಾ.

Heera Mandi Fashion

ಏನಿದು ಹೀರಾಮಂಡಿ ಲುಕ್‌

ಸ್ವಾತಂತ್ರ್ಯ ದೊರಕುವ ಮುನ್ನ, ಲಾಹೋರ್‌ನ ಹೀರಾ ಮಂಡಿಯಲ್ಲಿ ನಡೆಯುವ ಕಥಾ ಹಂದರವನ್ನು ಹೊಂದಿರುವ ಈ ವೆಬ್‌ಸೀರಿಸ್‌ನಲ್ಲಿ ನಟಿ ಮೊನಿಷಾ ಕೊಯಿರಾಲ, ಸೋನಾಕ್ಷಿ ಸಿನ್ಹಾ, ರಿಚಾ ಚಡ್ಡಾ, ಆದಿತಿ ರಾವ್‌ ಹೈದರಿ ಸೇರಿದಂತೆ ನಾನಾ ನಟಿಯರು ರೆಟ್ರೊ ಡಿಸೈನರ್‌ವೇರ್ಸ್‌ ಹಾಗೂ ಜ್ಯುವೆಲರಿಗಳಲ್ಲಿ ಶೃಂಗಾರಗೊಂಡು ಕಾಣಿಸಿಕೊಂಡಿದ್ದ ಗ್ರ್ಯಾಂಡ್‌ ಲುಕ್‌ ಇದು. ಇದೀಗ ಈ ಫ್ಯಾಷನ್‌ ಅನ್ನು ಹೀರಾಮಂಡಿ ಲುಕ್‌ ಎಂದು ಕರೆಯಲಾಗುತ್ತಿದೆ.

Heera Mandi Fashion

ಹೀರಾಮಂಡಿ ಲುಕ್‌ ರೀ ಕ್ರಿಯೇಟ್‌ ಮಾಡಿದ ರಾಶಿ ಮೇಘನಾ

ಬಾಲಿವುಡ್‌ ಹಾಗೂ ಬ್ಯೂಟಿಲೋಕದಲ್ಲಿ ಮಾತ್ರವಲ್ಲ, ನಮ್ಮ ಕನ್ನಡಿಗರಾದ ಸೆಲೆಬ್ರೆಟಿ ಮೇಕಪ್‌ ಆರ್ಟಿಸ್ಟ್ ರಾಶಿ ಮೇಘನಾ ಕೂಡ ಈ ಲುಕ್ಕನ್ನು ರೀ ಕ್ರಿಯೇಟ್‌ ಮಾಡಿದ್ದಾರೆ. ಅವರು ಈ ಲುಕ್‌ ರೀ ಕ್ರಿಯೇಟ್‌ಗಾಗಿ ರಿಸರ್ಚ್ ಕೂಡ ಮಾಡಿದರಂತೆ. ಒಂದೊಂದು ವಿಷಯವನ್ನು ಗಮನದಲ್ಲಿಟ್ಟುಕೊಂಡು ಮರುಸೃಷ್ಟಿ ಮಾಡಿದರಂತೆ.

Heera Mandi Fashion

ಟ್ರೆಂಡಿಯಾದ ಹೀರಾಮಂಡಿ ಡಿಸೈನರ್‌ವೇರ್ಸ್ & ಜ್ಯುವೆಲರಿಗಳು

  • ಅದಿತಿ ಹೈದರ್ ಧರಿಸಿದ್ದ ಗ್ರ್ಯಾಂಡ್‌ ಎಂಬ್ರಾಯ್ಡರಿ ಅನಾರ್ಕಲಿ ಡಿಸೈನರ್‌ವೇರ್ಸ್.
  • ನಟಿ ಮೊನಿಷಾ ಕೊಯಿರಾಲ ಧರಿಸಿದ್ದ ಐವರಿ ಪ್ರಿಂಟೆಡ್‌ ಲೆಹೆಂಗಾ ಜೊತೆಗಿನ ಡಿಸೈನರ್‌ ಕುರ್ತಾ.
  • ಬನಾರಸಿ ದುಪಟ್ಟ & ಫ್ಲೇರ್‌ ಇರುವ ಶರಾರ.
  • ಬನಾರಸ್ ಫ್ಯಾಬ್ರಿಕ್‌ನ ಫ್ಲೋರಲ್‌ ಲೆಹೆಂಗಾ-ಗೋಲ್ಡನ್‌ ದುಪಟ್ಟಾ.
  • ಪ್ರಿಶಿಯಸ್‌ ಸ್ಟೋನ್‌ನಿಂದ ಸಿದ್ಧಪಡಿಸಿದ ಬಾರಿ ಗಾತ್ರದ ಸ್ಟೇಟ್‌ಮೆಂಟ್‌ ನೆಕ್ಲೇಸ್, ಕಂಗನ್‌, ಕಡ, ಸೈಡ್‌ ಮಾಂಗ್‌ ಟೀಕಾ, ಲೇಯರ್‌ ಹಾರ, ಮಾಟಿ, ಬಾಂದ್‌ಬಾಲಿ, ಹಾತ್‌ ಚೈನ್‌ ಇದೀಗ ಜ್ಯುವೆಲರಿ ಲೋಕದಲ್ಲಿ ಟ್ರೆಂಡ್‌ ಸೃಷ್ಟಿಸಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
gold rate today bipasha
ಚಿನ್ನದ ದರ59 seconds ago

Gold Rate Today: ರಾಜಧಾನಿಯಲ್ಲಿ ಏರಿಳಿಯದ ಬಂಗಾರದ ಬೆಲೆ; ಇಂದಿನ ದರಗಳು ಹೀಗಿವೆ

IND vs PAK
ಕ್ರೀಡೆ12 mins ago

IND vs PAK : ಸೂಪರ್ ಫ್ಯಾನ್​​; ಟೀಮ್​ ಇಂಡಿಯಾ ಜೆರ್ಸಿ ಧರಿಸಿ ಭಾರತವನ್ನು ಬೆಂಬಲಿಸಿದ ಮೈಕ್ರೋಸಾಫ್ಟ್​​ ಸಿಇಒ ಸತ್ಯ ನಾದೆಳ್ಳಾ

karnataka Rain
ಬೆಳಗಾವಿ12 mins ago

Karnataka Rain : ಬೆಳಗಾವಿಯಲ್ಲಿ ಭಾರಿ ಮಳೆಗೆ ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಸಾವು

Nandamuri Balakrishna BB4 new film announced
ಟಾಲಿವುಡ್25 mins ago

Nandamuri Balakrishna: ಇಂದು ತೆಲುಗು ಸೂಪರ್‌ಸ್ಟಾರ್ ಬಾಲಯ್ಯ ಬರ್ತ್‌ಡೇ; ಹೊಸ ಸಿನಿಮಾ ಅನೌನ್ಸ್‌!

IND VS PAK
ಕ್ರೀಡೆ35 mins ago

IND vs PAK : ಪಾಕಿಸ್ತಾನವನ್ನು ಭಾರತ ಸೋಲಿಸಿದ ನಂತರ ತಮಾಷೆಯ ಪೋಸ್ಟ್​​ ಮಾಡಿದ ಡೆಲ್ಲಿ ಪೊಲೀಸರು

HSRP Number Plate
ಬೆಂಗಳೂರು38 mins ago

HSRP Number Plate: ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ನೋಂದಣಿಗೆ ಡೆಡ್‌ಲೈನ್‌! ಇನ್ನೂ ಎರಡೇ ದಿನ ಬಾಕಿ

Narendra Modi And stock market news
ಪ್ರಮುಖ ಸುದ್ದಿ41 mins ago

Stock Market News: ಮೋದಿ ಪ್ರಮಾಣ ವಚನದ ಬಳಿಕ ಷೇರು ಮಾರುಕಟ್ಟೆ ಜಿಗಿತ; ಸೆನ್ಸೆಕ್ಸ್‌ ಹೊಸ ದಾಖಲೆ

Anirudh Jatkar again rise on voice jote joteyali serial issue
ಸ್ಯಾಂಡಲ್ ವುಡ್54 mins ago

Anirudh Jatkar: ʻಜೊತೆ ಜೊತೆಯಲಿ’ ಧಾರಾವಾಹಿಯ ವಿವಾದದ ಬಗ್ಗೆ ಬೇಸರ ಹೊರ ಹಾಕಿದ ಅನಿರುದ್ಧ್!

NEET UG
ಪ್ರೇಮಿಗಳ ದಿನಾಚರಣೆ1 hour ago

NEET UG : ನೀಟ್-ಯುಜಿ ಫಲಿತಾಂಶ ಹಿಂಪಡೆಯಲು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

Personality Development
ಪ್ರಮುಖ ಸುದ್ದಿ1 hour ago

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌