Viral video: ಓರಿಯೋ ಕೇಕ್‌, ಶೇಕ್‌ ಆಯ್ತು, ಪಿಜ್ಜಾ, ಬಜ್ಜಿಯೂ ಆಯ್ತು, ಈಗ ಓರಿಯೋ ಫ್ರೈಡ್‌ ರೈಸ್! - Vistara News

ವೈರಲ್ ನ್ಯೂಸ್

Viral video: ಓರಿಯೋ ಕೇಕ್‌, ಶೇಕ್‌ ಆಯ್ತು, ಪಿಜ್ಜಾ, ಬಜ್ಜಿಯೂ ಆಯ್ತು, ಈಗ ಓರಿಯೋ ಫ್ರೈಡ್‌ ರೈಸ್!

ಓರಿಯೋ ಬಿಸ್ಕತ್ತಿನಿಂದ ಮಾಡುವ ತರಹೇವಾರಿ ತಿನಿಸುಗಳನ್ನೂ ಕೇಕುಗಳನ್ನೂ ಶೇಕುಗಳನ್ನೂ ನೀವು ನೋಡಿ ಸುಸ್ತಾಗದಿದ್ದರೆ, ಓರಿಯೋನಿಂದ ಫ್ರೈಡ್‌ ರೈಸನ್ನೂ ಮಾಡಿ ನಿಮ್ಮ ಮಕ್ಕಳಿಗೆ ಚಾಕೋಲೇಟೀಯಾಗಿರುವ ಊಟ ಬಡಿಸಬಹುದು.

VISTARANEWS.COM


on

oreo fried rice
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಏನಿದ್ದರೂ ಇದು ಪ್ರಯೋಗಗಳ ಕಾಲ. ಅಡುಗೆಯಲ್ಲಿ ಏನೇ ಪ್ರಯೋಗ ಮಾಡಿದರೂ ಅದು ಟ್ರೆಂಡ್‌ (trending) ಆಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಜನ ನೋಡುತ್ತಾರೆ. ಇಷ್ಟವಾದವರು ಮಾಡುತ್ತಾರೆ. ಅದೆಲ್ಲಿ ಸಿಗುತ್ತದೆಯೋ ಹುಡುಕಿಕೊಂಡು ಹೋಗಿ ತಿಂದು ರುಚಿ ನೋಡುತ್ತಾರೆ. ಚಿತ್ರವಿಚಿತ್ರ ಅಡುಗೆಗಳು, ಎಂದೂ ಯೋಚನೆಯೇ ಮಾಡದಂಥ ಕಾಂಬಿನೇಷನ್ನುಗಳು ನಮ್ಮ ತಟ್ಟೆಯಲ್ಲಿ ಬಂದು ಬೀಳುತ್ತದೆ. ಇಷ್ಟಪಡದ ಮಂದಿ ಸಾಮಾಜಿಕ ಜಾಲತಾಣದಲ್ಲಿಯೇ ಈ ವಿಚಿತ್ರ ತಿನಿಸುಗಳಿಗೆ ನಗೆಯಾಡುತ್ತಾರೆ. ನೇರವಾಗಿ ಪ್ರತಿಕ್ರಿಯೆ ನೀಡುತ್ತಾರೆ.

ಈಗಲೂ ಅಂಥದ್ದೇ ಒಂದು ವಿಚಿತ್ರವಾದ ಅಡುಗೆ ಸದ್ದು ಮಾಡುತ್ತಿದೆ. ಈ ಬಾರಿ ಇದು ಓರಿಯೋ ಫ್ರೈಡ್‌ ರೈಸ್‌ (Oreo fried rice) . ಹಲವು ರೈಸ್‌ಬಾತ್‌ಗಳ ರುಚಿ ನೋಡಿರುವ ಮಂದಿಗೆ, ರೈಸ್‌ ಬಾತ್‌ಗಳನ್ನು ಇಷ್ಟಪಡುವ ಮಂದಿಗೆ ಇದು ಕೊಂಚ ವಿಚಿತ್ರ ಅಂತನಿಸಿದರೆ ಅದರಲ್ಲಿ ಅವರ ತಪ್ಪಿಲ್ಲ. ಓರಿಯೋ ಬಿಸ್ಕತ್ತಿನಿಂದ ಮಾಡುವ ತರಹೇವಾರಿ ತಿನಿಸುಗಳನ್ನೂ ಕೇಕುಗಳನ್ನೂ ಶೇಕುಗಳನ್ನೂ ನೀವು ನೋಡಿ ಸುಸ್ತಾಗದಿದ್ದರೆ, ಓರಿಯೋನಿಂದ ಫ್ರೈಡ್‌ ರೈಸನ್ನೂ ಮಾಡಿ ನಿಮ್ಮ ಮಕ್ಕಳಿಗೆ ಚಾಕೋಲೇಟೀಯಾಗಿರುವ ಊಟ ಬಡಿಸಬಹುದು. ಗುಂಡಿಗೆ ಇದ್ದವರೊಮ್ಮೆ ಟ್ರೈ ಮಾಡಿ ನೋಡಿ!

ಇದು ಅತಿಯಾಯಿತು ಅಂತೀರಾ? ಹಾಗಿದ್ದರೆ ಪೂರ್ತಿ ಓದಿ. ಇತ್ತೀಚೆಗೆ ಇನ್ಸ್‌ಟಾಗ್ರಾಂನಲ್ಲಿ ಹಂಚಲಾದ ವಿಡಿಯೋ ಒಂದರಲ್ಲಿ ಮೊದಲು ಕೊಂಚ ಎಣ್ನೆಯಲ್ಲಿ ತೆಗೆದುಕೊಂಡು ಅದಕ್ಕೆ ಓರಿಯೋ ಬಿಸ್ಕತ್ತುಗಳನ್ನು ಹಾಕಲಾಗುತ್ತದೆ. ಓರಿಯೋ ಬಿಸ್ಕತ್ತು ಎಣ್ಣೆಯ ಜೊತೆ ಪೂರ್ಣ ಬೆರೆತುಕೊಂಡು ಚಾಕೋಲೇಟ್‌ ಪೇಸ್ಟ್‌ನಂತೆ ಆದ ತಕ್ಷಣ ಅದಕ್ಕೆ ಮೊದಲೇ ಬೇಯಿಸಿಟ್ಟ ಅನ್ನವನ್ನು ಸೇರಿಸಲಾಗುತ್ತದೆ. ಆಮೇಲೆ ಅದಕ್ಕೆ ಸೋಯಾ ಸಾಸ್‌ ಹಾಗೂ ಕ್ಯಾರೆಟ್‌ ತುಂಡುಗಳನ್ನು ಸೇರಿಸಿ ರಿಚಿಗೆ ಉಪ್ಪನ್ನು ಸೇರಿಸಿ, ಮೇಲಿನಿಂದ ಸ್ಪ್ರಿಂಗ್‌ ಅನಿಯನ್‌ನಿಂದ ಅಲಂಕರಿಸಿ ನೀಡಲಾಗುತ್ತದೆ.

ಈ ಸಣ್ಣ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ಆಹಾರ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸಿದೆ. ಇದು ಮನಸ್ಸಿಗೆ ತುಂಬಾ ಘಾಸಿಯನ್ನುಂಟು ಮಾಡುತ್ತಿದೆ ಎಂದು ಒಬ್ಬರು ಕಾಮೆಂಟ್‌ ಮಾಡಿದರೆ ಇನ್ನೊಬ್ಬರು ದಯವಿಟ್ಟು ಹೀಗೆ ಆಹಾರವನ್ನು ಹಾಳು ಮಾಡಬೇಡಿ ಎಂದು ಅಲವತ್ತುಕೊಂಡಿದ್ದಾರೆ.

ಹಾಗೆ ನೋಡಿದರೆ ಓರಿಯೋ ಎಂಬ ಬಿಸ್ಕತ್ತು ಏನೆಲ್ಲ ರೂಪಗಳನ್ನು ಇತ್ತೀಚೆಗೆ ಪಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಓರಿಯೋ ಬಿಸ್ಕತ್ತಿನ ಕೇಕ್‌ ಹಾಗೂ ಶೇಕ್‌ ಮಕ್ಕಳ ವಲಯದಲ್ಲಿ ಸಾಕಷ್ಟು ಪ್ರಸಿದ್ಧ. ಈಗಾಗಲೇ, ರೆಸ್ಟೋರೆಂಟುಗಳಲ್ಲಿಯೂ ಓರಿಯೋ ಶೇಕ್‌ ದೊರೆಯುತ್ತವೆ. ಮಕ್ಕಳು ಬಹಳ ಇಷ್ಟಪಟ್ಟು ಕುಡಿಯುತ್ತಾರೆ ಕೂಡಾ. ಆದರೆ, ಯಾವಾಗ ಓರಿಯೋ ಎಂಬ ಬಿಸ್ಕತ್ತಿನಿಂದ ಚಿತ್ರವಿಚಿತ್ರ ಅಡುಗೆಗಳು ವೈರಲ್‌ ಆಗತೊಡಗಿದವೋ ಆಗ ಆಹಾರ ಪ್ರಿಯರು ಮಾತ್ರ ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಓರಿಯೋ ಪಿಜ್ಜಾದ ವಿಡಿಯೋವನ್ನು ನೋಡಿ ಆಹಾರ ಪ್ರಿಯರು ಅರಗಿಸಿಕೊಳ್ಳದೆ ಒದ್ದಾಡುತ್ತಿರುವಾಗ, ಇನ್ನೊಂದೆಡೆಯಿಂದ ಓರಿಯೋ ಬಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡತೊಡಗಿತ್ತು. ಅದನ್ನು ನೋಡಿ ತಲೆಚಚ್ಚಿಕೊಳ್ಳುತ್ತಿದ್ದ ಸಂದರ್ಭ ಈಗ ಓರಿಯೋ ಫ್ರೈಡ್‌ ರೈಸ್‌ ಬಂದಿದೆ.

ಕಳೆದ ಜನ್ಮದಲ್ಲಿ ನಾವು ಯಾವ ಪಾಪ ಮಾಡಿದ್ದೇವೆಂದು ನಾವು ಈಗ ಇನ್ನೂ ಏನೇನನ್ನೆಲ್ಲಾ ಈ ಜೀವನದಲ್ಲಿ ನೋಡಲಿದ್ದೇವೆಯೋ ಎಂದು ಆಹಾರಪ್ರಿಯರು ತಲೆಬಿಸಿಮಾಡಿಕೊಳ್ಳುತ್ತಿದ್ದಾರಂತೆ!

ಇದನ್ನೂ ಓದಿ: Viral video: ಅಲಾಯಿ ದೇವರಿಗೆ ಹೂ ನೀಡಿದ ಆಂಜನೇಯ, ವಿಡಿಯೋ ವೈರಲ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ 50 ವರ್ಷದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು (Teenage Boy Arrested) ಬಂಧಿಸಲಾಗಿದೆ.

VISTARANEWS.COM


on

By

Teenage boy arrested
Koo

ಉತ್ತರಪ್ರದೇಶ: ಅತ್ಯಾಚಾರಿಯನ್ನು (rapist) ಕೊಂದ ಹದಿಹರೆಯದ ಬಾಲಕನನ್ನು (Teenage Boy Arrested) ಉತ್ತರಪ್ರದೇಶದ (Uttar Pradesh) ಮುಜಾಫರ್‌ನಗರದಲ್ಲಿ (Muzaffarnagar) ಪೊಲೀಸರು ಬಂಧಿಸಿದ್ದು, ಐಪಿಸಿ ಸೆಕ್ಷನ್ 302 (Murder) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಮುಜಾಫರ್‌ನಗರದ ಹಳ್ಳಿಯೊಂದರಲ್ಲಿ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ 50 ವರ್ಷದ ವ್ಯಕ್ತಿಯನ್ನು ಕೊಂದ ಆರೋಪದ ಮೇಲೆ 15 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಮೇ 20ರಂದು ಬಾಲಕನ ಮನೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಪೊಲೀಸ್ ತನಿಖೆಯ ಅನಂತರ ಹದಿಹರೆಯದವರನ್ನು ಶನಿವಾರ ಬಂಧಿಸಲಾಯಿತು.

ವ್ಯಕ್ತಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ ಅನಂತರ ಬಾಲಕನ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕನನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ.

ಎಸ್ಪಿ (ಗ್ರಾಮೀಣ) ಆದಿತ್ಯ ಬನ್ಸಾಲ್ ಅವರು, ವಾರಗಳ ಹಿಂದೆ ಮೃತರು ಅಪ್ರಾಪ್ತ ವಯಸ್ಕನನ್ನು ಅಶ್ಲೀಲ ವಿಡಿಯೋ ಕ್ಲಿಪ್ ಅನ್ನು ರೆಕಾರ್ಡ್ ಮಾಡಿದ್ದರು. ಬಾಲಕನಿಗೆ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಮತ್ತು ಪದೇ ಪದೇ ಲೈಂಗಿಕ ಕಿರುಕುಳ ನೀಡಲಾಗುತ್ತಿತ್ತು.

ಸೋಮವಾರ ವಿಡಿಯೋವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ ಅನಂತರ, ವ್ಯಕ್ತಿ ತನ್ನ ಮನೆಗೆ ಬರುವಂತೆ ಬಾಲಕನಿಗೆ ಒತ್ತಾಯಿಸಿದ್ದನು. ಆತ ಕಿರುಕುಳ ನೀಡುತ್ತಿದ್ದುದರಿಂದ ಹುಡುಗ ತನ್ನ ಪಕ್ಕದಲ್ಲಿದ್ದ ಹರಿತವಾದ ವಸ್ತುವನ್ನು ಎತ್ತಿಕೊಂಡು ಹೋಗಿ ವ್ಯಕ್ತಿಯ ತಲೆ ಮತ್ತು ಗಂಟಲಿನ ಮೇಲೆ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಆತನ ಕುಟುಂಬಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ಪ್ರೀತಿಗೆ ವಿರೋಧ; ಯುವಕ ಆತ್ಮಹತ್ಯೆ

ಪ್ರೀತಿಸಿದ ಯುವತಿಯ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ ಕಾರಣ ಮನನೊಂದ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಲಸೂರ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಅಜಯ್ ಮನೋಹರ ಸೂರ್ಯವಂಶಿ (22) ಮೃತ ವ್ಯಕ್ತಿ. ಕೆಲವು ವರ್ಷಗಳಿಂದ ಈತ ಯುವತಿಯೊಬ್ಬಳನ್ನು ಪ್ರೀತಿಸುತಿದ್ದ, ಆದರೆ ತನ್ನ ತಂಗಿಯನ್ನು ಮರೆತು ಬಿಡುವಂತೆ ಆಕೆಯ ಅಣ್ಣ ಯುವಕನಿಗೆ ಧಮ್ಕಿ ಹಾಕಿದ್ದ. ಹೀಗಾಗಿ ಆತನ ಭಯಕ್ಕೆ ಹೆದರಿ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತನ ತಾಯಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ಹೊಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ: Physical Abuse: ವಾಯಿಸ್‌ ಚೇಂಜಿಂಗ್‌ ಆಪ್‌ ಸಹಾಯದಿಂದ ಯುವತಿಯರಿಗೆ ಬಲೆ; ಮಹಿಳೆಯಂತೆ ಮಾತನಾಡಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಹಿಟ್‌ ಆ್ಯಂಡ್‌ ರನ್‌: ಪಾದಚಾರಿ ಸಾವು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅರೇಪುರ ಗೇಟ್ ಬಳಿ ಹಿಟ್‌ ಆ್ಯಂಡ್‌ ರನ್‌ಗೆ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಯ ಮಧ್ಯೆ ಹಾರಿ ಬಿದ್ದ ವ್ಯಕ್ತಿ ಮೇಲೆ ಮತ್ತೊಂದು ವಾಹನ ಹರಿದಿದೆ ಎನ್ನಲಾಗಿದೆ.

ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ಕೂಡಲೇ ಆಂಬ್ಯುಲೆನ್ಸ್‌ನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳೀಯ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಕ್ರೀಡೆ

Hardik Pandya: ಬ್ರೇಕ್ ಅಪ್ ಕುರಿತು ರಹಸ್ಯ ಪೋಸ್ಟ್​ ಮಾಡಿದ ಹಾರ್ದಿಕ್ ಪಾಂಡ್ಯ ಪತ್ನಿ

Hardik Pandya: ನತಾಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾಂಡ್ಯ ಹೆಸರನ್ನು ಮತ್ತು ಅವರ ಜತೆಗಿರುವ ಫೋಟೊವನ್ನು ಅಳಿಸಿಹಾಕಿದ ಬಳಿಕ ವಿಚ್ಛೇದನಕ್ಕೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಈ ವದಂತಿಗಳ ಬಗ್ಗೆ ಪಾಂಡ್ಯ ಅಥವಾ ನಾತಾಶಾ ಪ್ರತಿಕ್ರಿಯಿಸದಿದ್ದರೂ ಕೂಡ, ಶನಿವಾರ ರಾತ್ರಿ ನತಾಶಾ ಕುರಿಮರಿಯೊಂದಿಗೆ ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

VISTARANEWS.COM


on

Hardik Pandya
Koo

ಲಂಡನ್​: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರ ವಿವಾಹ ಮುರಿದು ಬಿದ್ದಿದೆಯೇ?, ಈ ಜೋಡಿ ವಿಚ್ಛೇದನಕ್ಕೆ ಪಡೆಯಲಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ನತಾಶಾ ರಹಸ್ಯ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ ನೋಡುವಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿದೆ.

ನತಾಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾಂಡ್ಯ ಹೆಸರನ್ನು ಮತ್ತು ಅವರ ಜತೆಗಿರುವ ಫೋಟೊವನ್ನು ಅಳಿಸಿಹಾಕಿದ ಬಳಿಕ ವಿಚ್ಛೇದನಕ್ಕೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಈ ವದಂತಿಗಳ ಬಗ್ಗೆ ಪಾಂಡ್ಯ ಅಥವಾ ನಾತಾಶಾ ಪ್ರತಿಕ್ರಿಯಿಸದಿದ್ದರೂ ಕೂಡ, ಶನಿವಾರ ರಾತ್ರಿ ನತಾಶಾ ಕುರಿಮರಿಯೊಂದಿಗೆ ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿದೆ. ಈ ಫೋಟೊವನ್ನು ಅವರು ತಮ್ಮ ಮುಂದಿನ ಜೀವನದ ಅರ್ಥ ಕಲ್ಪಿಸುವ ನಿಟ್ಟಿನಲ್ಲಿಯೇ ಹಾಕಿದಂತಿದೆ.


ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಸಾರ್ವಜನಿಕಗಾಗಿ ಹೋಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಪಾಪರಾಜಿಗಳು (ಕ್ಯಾಮೆರಾಮನ್​ಗಳು) ಅವರಿಬ್ಬರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ನಟಿ ದಿಶಾ ಪಠಾಣಿ ಅವರ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ಲಿಕ್​ ಮತ್ತು ನತಾಶಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳಿಂದ ಸಾಕಷ್ಟು ವಿನಂತಿಗಳನ್ನು ಪಡೆದ ನಂತರ ನತಾಶಾ ಪೋಸ್ ನೀಡಿದ್ದಾರೆ. ಹೀಗಾಗಿ ಪಾಂಡ್ಯಾ ಜತೆಗಿನ ಡೈವೋರ್ಸ್​ ಪ್ರಕರಣವನ್ನು ಇನ್ನಷ್ಟು ಆಸಕ್ತಿದಾಯಕವಾಗಿದೆ. ಐಪಿಎಲ್ 2024 ರಲ್ಲಿ ಹಾರ್ದಿಕ್ ತಮ್ಮ ಉನ್ನತ ನಿರೀಕ್ಷೆಗಳಿಗೆ ತಕ್ಕ ಹಾಗೆ ಆಡಿಲ್ಲ. ಪತಿ ಸೋಲುತ್ತಿದ್ದರೂ ಒಂದೇ ಒಂದು ಬಾರಿಯೂ, ನತಾಶಾ ತಮ್ಮ ಪತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ಟ್ಯಾಂಡ್​ಗಳಿಗೆ ಬಂದಿರಲಿಲ್ಲ.

ಇದನ್ನೂ ಓದಿ Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರನ್ನು ಪಾಂಡ್ಯ ಗರ್ಭಿಣಿ ಮಾಡಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

Continue Reading

ದೇಶ

ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ಚೇಸ್‌ ಮಾಡಿ ಹಾಲಿವುಡ್ ಸಿನಿಮಾ ಸ್ಟೈಲಲ್ಲಿ ಕಳ್ಳತನ; ರೋಚಕ Video ಇಲ್ಲಿದೆ!

ಮಧ್ಯಪ್ರದೇಶದ ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Viral Video
Koo

ಭೋಪಾಲ್‌: ಚಲಿಸುತ್ತಿರುವ ವಾಹನದಿಂದಲೇ ಕಳ್ಳತನ ಮಾಡುವುದು, ಸಿಸಿಟಿವಿ, ಸೆಕ್ಯುರಿಟಿ ಇದ್ದರೂ ಬ್ಯಾಂಕ್‌ ದರೋಡೆ ಮಾಡುವುದು ಸೇರಿ ಹಲವು ಭೀಕರ ಕಳ್ಳತನಗಳನ್ನು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಹಾಲಿವುಡ್‌ ಸಿನಿಮಾ ರೀತಿಯಲ್ಲಿಯೇ ಮೂವರು ಕಳ್ಳರು ಚಲಿಸುತ್ತಿದ್ದ ಟ್ರಕ್‌ನಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಚಲಿಸುತ್ತಿದ್ದ ಟ್ರಕ್‌ಅನ್ನು ಬೈಕ್‌ ಮೇಲೆಯೇ ಚೇಸ್‌ ಮಾಡಿದ ಕಳ್ಳರು ಭಾರಿ ಪ್ರಮಾಣದ ವಸ್ತುಗಳನ್ನು ಕದ್ದಿದ್ದಾರೆ. ಸಿನಿಮೀಯ ರೀತಿಯ ಕಳ್ಳತನದ ವಿಡಿಯೊ (Viral Video) ಈಗ ಭಾರಿ ವೈರಲ್‌ ಆಗಿದೆ. ‌

ಹೌದು, ಆಗ್ರಾ-ಮುಂಬೈ ಹೆದ್ದಾರಿಯ ದೆವಾಸ್-ಶಾಜಾಪುರ್‌ ರಸ್ತೆಯಲ್ಲಿ ಟ್ರಕ್‌ ಒಂದು ಚಲಿಸುತ್ತಿರುತ್ತಿದೆ. ವೇಗವಾಗಿ ಚಲಿಸುತ್ತಿದ್ದ ಟ್ರಕ್‌ ಹಿಂದೆ ಬೈಕ್‌ ವೇಗವಾಗಿ ಚಲಿಸುತ್ತದೆ. ಇದೇ ವೇಳೆ ಕಳ್ಳನೊಬ್ಬನು ಹಾಗೆಯೇ ಟ್ರಕ್‌ ಹತ್ತುತ್ತಾನೆ. ಬೆಲೆ ಬಾಳುವ ವಸ್ತುಗಳ ಮೂಟೆಯೊಂದನ್ನು ಅಲ್ಲಿಂದ ಕೆಳಗೆ ಎಸೆಯುತ್ತಾನೆ. ಅದಾದ ನಂತರ, ಚಲಿಸುತ್ತಿರುವ ಟ್ರಕ್‌ನಿಂದಲೇ ಚಲಿಸುತ್ತಿರುವ ಬೈಕ್‌ ಮೇಲೆ ಇಳಿಯುತ್ತಾನೆ. ಆತನು ಬೈಕ್‌ ಹತ್ತಲು ಉಳಿದ ಇಬ್ಬರು ಸಹಾಯ ಮಾಡುತ್ತಾರೆ. ಸ್ವಲ್ಪ ಸಮತೋಲನ ತಪ್ಪಿದರೂ ಬಿದ್ದು ಮೃತಪಡುವ ಸಾಧ್ಯತೆಗಳು ಜಾಸ್ತಿ ಇದ್ದರೂ ಸಿನಿಮೀಯ ರೀತಿಯಲ್ಲಿ ಮೂವರು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ನೂರಾರು ಜನ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. “ಯಾವ ಸಿನಿಮಾದ ದೃಶ್ಯ ಇದು” ಎಂದು ಒಬ್ಬರು ಅಚ್ಚರಿ ವ್ಯಕ್ತಪಡಿಸಿದ್ದಾರೆ. “ಅವರ ಬ್ಯಾಲೆನ್ಸ್‌, ಧೈರ್ಯ, ಚಾಣಾಕ್ಷತನವನ್ನು ಖಂಡಿತವಾಗಿಯೂ ಮೆಚ್ಚಬೇಕು. ಇವರ ಕೌಶಲಗಳು ಎಲ್ಲರಿಗೂ ಬರುವುದಿಲ್ಲ” ಎಂದು ಮತ್ತೊಬ್ಬರು ಕಳ್ಳರ ಸಾಹಸವನ್ನು ಕೊಂಡಾಡಿದ್ದಾರೆ. “ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಇಂತಹ ಕಳ್ಳರು ಅಪಾಯಕಾರಿ. ಮೂವರನ್ನೂ ಒದ್ದು ಒಳಗೆ ಹಾಕಬೇಕು” ಎಂಬುದಾಗಿ ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ, ಕಳ್ಳರ ಸಾಹಸವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ವಿಡಿಯೊ ವೈರಲ್‌ ಆಗುತ್ತಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಟ್ರಕ್‌ನಿಂದ ಯಾವೆಲ್ಲ ವಸ್ತುಗಳನ್ನು ಎಗರಿಸಿದರು ಎಂಬುದರ ಕುರಿತು ಇದುವರೆಗೆ ಯಾವುದೇ ಮಾಹಿತಿ ಇಲ್ಲ. ಹೆದ್ದಾರಿಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ತುಂಬಿಕೊಂಡು ಸಾವಿರಾರು ಟ್ರಕ್‌ಗಳು ಚಲಿಸುತ್ತಲೇ ಇರುತ್ತವೆ. ಹೀಗೆ, ಸಿನಿಮಾ ರೀತಿಯಲ್ಲಿ ಸ್ಟಂಟ್‌ ಮಾಡಿ, ಆ ವಸ್ತುಗಳನ್ನು ಕಳ್ಳತನ ಮಾಡಿದರೆ, ಯಾರೂ ಟ್ರಕ್‌ಗಳ ಮೂಲಕ ವಸ್ತುಗಳನ್ನು ಸಾಗಿಸಲು ಧೈರ್ಯ ಮಾಡುವುದಿಲ್ಲ. ಇಂತಹ ಪ್ರಕರಣಗಳನ್ನು ಗಂಭೀರವಾಗ ಪರಿಗಣಿಸಿ, ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

ಇದನ್ನೂ ಓದಿ: Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

Continue Reading

ಪ್ರಮುಖ ಸುದ್ದಿ

West Bengal: ಬಂಗಾಳದಲ್ಲಿ ಎಲೆಕ್ಷನ್‌ ಹಿಂಸಾಚಾರ; ಬಿಜೆಪಿ ಅಭ್ಯರ್ಥಿಯನ್ನು ಕಲ್ಲೆಸೆದು ಓಡಿಸಿದ ಟಿಎಂಸಿ ಕಾರ್ಯಕರ್ತರು, Video ಇದೆ

West Bengal: ಪಶ್ಚಿಮ ಬಂಗಾಳದ ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

VISTARANEWS.COM


on

West Bengal
Koo

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ (West Bengal) ಚುನಾವಣೆ ಇರಲಿ, ಮತ ಎಣಿಕೆ ದಿನವೇ ಇರಲಿ, ಹಿಂಸಾಚಾರ ನಡೆದೇ ನಡೆಯುತ್ತವೆ. ಮತಯಂತ್ರಗಳನ್ನು ಧ್ವಂಸಗೊಳಿಸುವುದು, ಎದುರಾಳಿ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ನಡೆಸುವುದು ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯ (Lok Sabha Election 2024) ಆರನೇ ಹಂತದ ಮತದಾನದ ವೇಳೆ ಟಿಎಂಸಿ ಪಕ್ಷದ ದುಷ್ಕರ್ಮಿಗಳು ಬಿಜೆಪಿ ಅಭ್ಯರ್ಥಿಯ (BJP Candidate) ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಬಿಜೆಪಿ ಅಭ್ಯರ್ಥಿಯು ಗ್ರಾಮದಿಂದಲೇ ಓಡಿ ಹೋಗುವಂತಾಯಿತು.

ಹೌದು, ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದೆಲ್ಲ ಟಿಎಂಸಿ ಕೃತ್ಯ ಎಂದು ದೂರಿದೆ.

ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರು ಕಲ್ಲುತೂರಾಟದ ವಿಡಿಯೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಟಿಎಂಸಿಯ ಗೂಂಡಾಗಳು ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜನರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ಇಷ್ಟಾದರೂ, ರಾಜ್ಯದಿಂದ ಟಿಎಂಸಿಯನ್ನು ಕಿತ್ತೆಸೆಯುವ ದಿಸೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನ ಮಾಡುತ್ತಿದ್ದಾರೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರತಿಯೊಂದು ಹಂತದ ಮತದಾನದ ವೇಳೆಯೂ ಪಶ್ಚಿಮ ಬಂಗಾಳದಲ್ಲಿ ಭಾರಿ ಹಿಂಸಾಚಾರ ಸಂಭವಿಸಿದೆ. ಮತಗಟ್ಟೆಗಳ ಬಳಿ ಜನ ಶಾಂತಿಯಿಂದ ಮತದಾನ ಮಾಡಲೂ ಆಗದಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆದಿತ್ತು. ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ತನಿಖೆಗೂ ಆದೇಶಿಸಿತ್ತು.

ಇದನ್ನೂ ಓದಿ: Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Continue Reading
Advertisement
Teenage boy arrested
ಕ್ರೈಂ11 mins ago

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

Janhvi Kapoor on paparazzi culture
ಬಾಲಿವುಡ್18 mins ago

Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್‌ ಮಾಡಿದ ಜಾನ್ವಿ ಕಪೂರ್!

Gold Rate Today
ಕರ್ನಾಟಕ23 mins ago

Gold Rate Today: ಇಂದೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ

Tiger attack
ಮೈಸೂರು43 mins ago

Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

IPL 2024 Final
ಕ್ರೀಡೆ48 mins ago

IPL 2024 Final: ಐಪಿಎಲ್​ ವಿನ್ನರ್​ & ರನ್ನರ್​ಗೆ ಸಿಗುವ ಮೊತ್ತವೆಷ್ಟು? ಈ ಬಾರಿ ಆರೆಂಜ್​ ಕ್ಯಾಪ್​, ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ?

Cyclone Remal
ದೇಶ48 mins ago

Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Dhruva Sarja KD Movie Release date announce
South Cinema1 hour ago

Dhruva Sarja: ಮತ್ತೆ ಗುಡ್‌ ನ್ಯೂಸ್‌ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Road Accident
ಉತ್ತರ ಕನ್ನಡ1 hour ago

Road Accident : ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

Monsoon 2024
ಮಳೆ2 hours ago

Monsoon 2024: ಮೇ 31 ರಿಂದ ಕರ್ನಾಟಕದಲ್ಲಿ ಶುರುವಾಗುತ್ತಾ ಮುಂಗಾರು ಮಳೆ ದರ್ಬಾರ್‌!

Sambavami Yuge Yuge song release By sruthi hariharan
ಟಾಲಿವುಡ್2 hours ago

Kannada New Movie: ʻಸಂಭವಾಮಿ ಯುಗೇ ಯುಗೇʼ ಚಿತ್ರದ ಮೊದಲ ಹಾಡು ರಿಲೀಸ್‌ ಮಾಡಿದ ನಟಿ ಶ್ರುತಿ ಹರಿಹರನ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ20 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌