Story of Neem: ನಿಮಗೆ ಗೊತ್ತೇ, ಬೇವು ಕಹಿಯಲ್ಲ ಸಿಹಿ! - Vistara News

ಆರೋಗ್ಯ

Story of Neem: ನಿಮಗೆ ಗೊತ್ತೇ, ಬೇವು ಕಹಿಯಲ್ಲ ಸಿಹಿ!

ತನ್ನ ವಿಶಿಷ್ಟವಾದ ಗುಣಗಳಿಂದ ಬೇವು (neem tree) ಜನೋಪಯೋಗಿ ಮರ ಎನಿಸಿದೆ. ಹುಡುಕುತ್ತಾ ಹೋದರೆ ಗಿಡ ಮರಗಳಿಂದ , ನಮ್ಮ ಪ್ರಕೃತಿಯಿಂದ ಸಿಗುವ ಉಪಯೋಗಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.

VISTARANEWS.COM


on

neem tree
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
purnima hegade

:: ಪೂರ್ಣಿಮಾ ಹೆಗಡೆ

ಸುತ್ತ ಗಿಡ ಮರಗಳಿಂದ ಆವರಿಸಿರುವ ಕಂಪೆನಿಯ ಟೆರೆಸ್ ನಲ್ಲಿರುವ ಕೆಫೆಟೇರಿಯಾದ ಮೂಲೆಯಲ್ಲಿರುವ ಟೇಬಲ್ ನಮ್ಮ ಗುಂಪಿನ ಅಚ್ಚುಮೆಚ್ಚಿನ ಕಾಫಿ ಬ್ರೇಕ್ ತಾಣ. ಮಳೆ, ಹಸಿರ ಛಾವಣಿ, ಅದನ್ನು ನೋಡುತ್ತಾ ಬಿಸಿ ಬಿಸಿ ಕಾಫಿಯನ್ನು ಹೀರುವ ಮುದವೇ ಬೇರೆ. ಯಾರೋ ನೀರೆಯೊಬ್ಬಳು ತನ್ನ ಹಸಿರ ಸೆರಗಲ್ಲಿ ಒಂದೊಂದಾಗಿ ಹೊನ್ನ ಮಣಿಯನ್ನು ಆರಿಸಿ ಆರಿಸಿ ಪ್ರೀತಿಯಿಂದ ಪೇರಿಸಿಕೊಳ್ಳಲು ಪ್ರಯತ್ನಿಸಿದಂತೆ ಕಾಣುವ ದೃಶ್ಯ ಮನಸ್ಸಿಗೆ ತಂಪೆರೆದರೆ, ಬಿಸಿ ಬಿಸಿ ಕಾಫಿ ಉದರಕ್ಕೆ ಹಿತ ನೀಡುತ್ತಿತ್ತು. ಆದರೆ ರಸ್ತೆ ಅಗಲೀಕರಣದಿಂದ ಈ ದೃಶ್ಯ ಇನ್ನು ಸ್ವಲ್ಪ ದಿನಗಳಲ್ಲೇ ಕಾಣೆಯಾಗುವ ಸಂಗತಿ ಎಲ್ಲರಿಗೂ ಅರಿವಿತ್ತು.

ಕಾಫಿ ಕಪ್ ಹಿಡಿದು ಬಂದ ಮಿತಭಾಷಿ ರೋಹನ್ ಹೊರಗೆ ನೋಡುತ್ತಾ “ಆ ಬೇವಿನ ಮರವನ್ನಾದರೂ ಹಾಗೆ ಉಳಿಸಲಿ ಎನ್ನುವುದು ಅಷ್ಟೇ ನನ್ನ ಪ್ರಾರ್ಥನೆ” ಎಂದು ನುಡಿದಾಗ ನಮಗೆಲ್ಲಾ ಅಚ್ಚರಿ.

ಗುಂಪಿನಲ್ಲೆ ಮಾತಿನ ಮಲ್ಲಿ ನಂದಿತಾ “ಏಕೆ ಯಾವುದಾದರೂ ಮಧುರ ನೆನಪು ಆ ಮರದೊಂದಿಗೆ ಬೆಸೆದುಕೊಂಡಿದೆಯೆ?” ಎಂದು ಕಾಲೆಳೆದಾಗ, ತಟ್ಟನೇ ಆತ ನುಡಿದಿದ್ದ ” ಇಲ್ಲಾ , ಅದು ವಾಯುವ್ಯ ದಿಕ್ಕಿನಲ್ಲಿ ಇದೆ. ವಾಸ್ತು ಪ್ರಕಾರ ಬೇವಿನ ಮರ ಮನೆಯ ಅಥವಾ ಕಂಪೆನಿಯ ವಾಯುವ್ಯ ದಿಕ್ಕಿನಲ್ಲಿ ಇದ್ದರೆ ಆ ಕಂಪೆನಿಗೆ ಪ್ರಗತಿ “.

ಯುಗಾದಿಯಂದು ಬೇವು ಬೆಲ್ಲ ತಿನ್ನುವುದು ಮಾತ್ರ ತಿಳಿದಿದ್ದ ನನಗೆ ಈ ಉತ್ತರ ಆಶ್ಚರ್ಯವನ್ನು ಉಂಟು ಮಾಡಿತ್ತು. “ಬೇವಿನ ಮರ ವಾಸ್ತುಶಾಸ್ತ್ರದಲ್ಲಿ ಇಷ್ಟೊಂದು ಮಹತ್ವ ಪಡೆದಿದೆಯೇ ?” ಎಂದು ಉದ್ಗಾರ ತೆಗೆದಿದ್ದೆ.
“ವಾಸ್ತುಶಾಸ್ತ್ರ ಒಂದೇ ಅಲ್ಲ , ತುಂಬಾ ಉಪಯೋಗಗಳು ಇವೆ. ನಿಮಗೆ ಗೊತ್ತೆ ಪುರಿ ಜಗನ್ನಾಥ ದೇವಸ್ಥಾನದ ಮೂರ್ತಿಯನ್ನು ಕೇವಲ ಬೇವಿನ ಮರದಿಂದ ಮಾತ್ರ ಮಾಡುತ್ತಾರೆ! ” ಎನ್ನುವಲ್ಲಿಗೆ ನಮ್ಮ ಕಾಫಿ ಬ್ರೇಕ್ ಮುಗಿದಿತ್ತು.

ಈ ಘಟನೆಯಿಂದ ಬೇವಿನ ಮರದ ಬಗ್ಗೆ ತಿಳಿಯುವ ನನ್ನ ಕುತೂಹಲ ಗರಿಗೆದರಿತ್ತು. ಹೀಗೆ ನಮ್ಮ ಪುರಾಣಗಳು, ಆಯುರ್ವೇದ ಗ್ರಂಥಗಳ ಮೊರೆಹೊಕ್ಕಾಗ ತಿಳಿದಿದ್ದು ಹಲವು ಸಂಗತಿಗಳು.

ಪುರಾಣಗಳಲ್ಲಿ ಬೇವು

ನಮ್ಮ ಪುರಾಣಗಳಲ್ಲಿ ಬೇವಿನ ಮರದ ಕುರಿತು ವಿವಿಧ ರೀತಿಯ ಕಥೆಗಳನ್ನು ನಾವು ಕಾಣಬಹುದು. ಸಮುದ್ರ ಮಂಥನ ನಡೆದಾಗ ಹೊರಬಂದ ಅಮೃತದ ಕಲಶವನ್ನು ಅಸುರರು ಕಿತ್ತುಕೊಳ್ಳಲು ಹೋಗುತ್ತಾರೆ. ಆಗ ದೇವೇಂದ್ರನು ಅಮೃತದ ಕಲಶವನ್ನು ಹಿಡಿದು ಸ್ವರ್ಗಲೋಕಕ್ಕೆ ನೆಗೆಯುವಾಗ ಭೂಮಿಯ ಮೇಲೆ ಬಿದ್ದ ಅಮೃತದ ಹನಿಗಳು ಬೇವಿನ ಸಸಿಗಳಾದವು ಎಂಬ ಪ್ರತೀತಿ ಇದೆ. ಹೀಗೆ ಅಮೃತದಿಂದ ಹುಟ್ಟಿರುವದಕ್ಕಾಗಿ ಬೇವಿಗೆ “ಸರ್ವ ರೋಗ ನಿವಾರಿಣಿ” ಎಂದು ಹೆಸರಿದೆ.

ಕೆಲವು ಪ್ರದೇಶಗಳಲ್ಲಿ ದುರ್ಗಾ ಮಾತೆಯು ಬೇವಿನ ಮರದಲ್ಲಿ ನೆಲೆಸಿರುವಳು ಎಂಬ ನಂಬಿಕೆ ಇದ್ದರೆ , ಇನ್ನು ಕೆಲವು ಪ್ರದೇಶಗಳಲ್ಲಿ ಲಕ್ಷ್ಮೀ ದೇವಿ ನೆಲೆಸಿದ್ದಾಳೆ ಎನ್ನುವ ಪ್ರತೀತಿ ಇದೆ . ಹಾಗಾಗಿ ಕೆಲವು ದೇವಿ ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇವಿನ ಮರವು ವ್ಯಾಪಕವಾಗಿ ಕಂಡುಬರುವುದನ್ನು ಕಾಣಬಹುದು.

ಅಶ್ವಥ್ ವೃಕ್ಷಕ್ಕೆ ಹಾಗೂ ಬೇವಿನ ಮರಕ್ಕೆ ಮದುವೆ ಮಾಡಿಸುವ ಸಂಪ್ರದಾಯ ಈ ನಂಬಿಕೆಯಿಂದ ಬಂದಿದೆ. ಅಶ್ವತ್ಥ ಮರವನ್ನು ನಾರಾಯಣ ಎಂದೂ, ಬೇವಿನ ಮರವನ್ನು ಲಕ್ಷ್ಮೀ ದೇವಿ ಎಂದೂ ಭಾವಿಸಿ ಅವರನ್ನು ವಧು-ವರರಂತೆ ಸಿಂಗರಿಸಿ ಸಕಲ ವಿಧಿ ವಿಧಾನಗಳೊಂದಿಗೆ ಮದುವೆ ಕಾರ್ಯವನ್ನು ನೆರವೇರಿಸುತ್ತಾರೆ. ಬ್ರಹ್ಮ ಪುರಾಣದ ಪ್ರಕಾರ ಬೇವಿನ ಮರದಲ್ಲಿ ಆರು ರೋಗನಿರೋಧಕ ದೇವತೆಗಳು ನೆಲೆಸಿರುತ್ತಾರೆ . ಹಾಗಾಗಿ ಅದನ್ನು ಪೂಜಿಸಿದರೆ ರೋಗಭಯ ಇರುವುದಿಲ್ಲ ಎನ್ನುವುದು ಇನ್ನೊಂದು ನಂಬಿಕೆ.

ಜ್ಯೋತಿಷ್ಯ ಹಾಗೂ ವಾಸ್ತುಶಾಸ್ತ್ರದಲ್ಲಿ ಬೇವು

ಬೇವಿನ ಮರ ದೈವಿಕ ಶಕ್ತಿಯನ್ನು ಹೊಂದಿದೆ ಎಂಬ ನಂಬಿಕೆ ಇದೆ. ಹಾಗಾಗಿ ಬೇವಿನ ಮರಕ್ಕೆ ಧಾರ್ಮಿಕ ಮಹತ್ವ ಇದೆ. ಶನಿ ಹಾಗೂ ಕೇತುವು ಬೇವಿನ ಮರದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಹಾಗಾಗಿ ಈ ಗ್ರಹಗಳ ಶಾಂತಿಗಾಗಿ ಮನೆಯಲ್ಲಿ ಬೇವಿನ ಗಿಡವನ್ನು ನೆಡಬೇಕು ಎಂಬ ನಂಬಿಕೆ ಇದೆ.

ಬೇವಿನ ಮರ ದೈವಿಕ ಶಕ್ತಿಗಳ ನೆಲೆಬೀಡು ಹಾಗೂ ಆ ಮರವನ್ನು ನೆಟ್ಟರೆ ಪೂರ್ವಜರ ಆಶೀರ್ವಾದ ಸಿಗುತ್ತದೆ ಹಾಗೂ ಇದರಿಂದ ಪಿತೃ ದೋಷ ಪರಿಹಾರವಾಗುತ್ತದೆ ಎಂಬ ನಂಬಿಕೆ ಕೆಲವು ಪ್ರದೇಶಗಳಲ್ಲಿ ಕಂಡುಬರುತ್ತದೆ.

ಇನ್ನು ಕೆಲವು ಪ್ರದೇಶಗಳಲ್ಲಿ ಭಾನುವಾರದಂದು ಬೇವಿನ ಮರಕ್ಕೆ ನೀರು ಹಾಕಿದರೆ ಉತ್ತಮ ಆರೋಗ್ಯವನ್ನು ಪಡೆಯಬಹುದು ಹಾಗೂ ಜಾತಕದಲ್ಲಿ ಇರುವ ಅಶುಭ ಫಲಿತಾಂಶಗಳು ಇದರಿಂದ ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಬೇವಿನ ಸೊಪ್ಪಿನ ಹೊಗೆಯನ್ನು ಮನೆಯಲ್ಲಿ ಹಾಕುವುದರಿಂದ ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ನಂಬಿಕೆ ಹಲವೆಡೆ ಇದೆ.

ಆಯುರ್ವೇದದಲ್ಲಿ ಬೇವು

ತನ್ನ ಔಷಧೀಯ ಗುಣಗಳಿಂದ ಬೇವು ಆಯುರ್ವೇದದಲ್ಲಿ ವಿಶಿಷ್ಟವಾದ ಸ್ಥಾನವನ್ನು ಹೊಂದಿದೆ. ಬೇವಿನ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದೆ. ಆಯುರ್ವೇದದಲ್ಲಿ ಬೇವನ್ನು “ನಿಂಬಾ ಮರ” ಎಂದು ಉಲ್ಲೇಖಿಸಲಾಗಿದೆ. ಮನುಷ್ಯನ ದೇಹದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಬೇವು ರಾಮಬಾಣವಾಗಿದೆ.

ರಕ್ತ ಶುದ್ಧೀಕರಣದಲ್ಲಿ ಸಹಾಯಕ
ಚರ್ಮರೋಗಗಳ ನಿವಾರಣೆಯಲ್ಲಿ ಉಪಯುಕ್ತ
ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಉಂಟಾಗುವ ಸೋಂಕಿನ ವಿರುದ್ಧ ಹೋರಾಡುತ್ತದೆ
ಸೌಂದರ್ಯವರ್ಧಕಗಳಲ್ಲಿ ಉಪಯೋಗಿಸುತ್ತಾರೆ.
ಕೀಟನಾಶಕವಾಗಿ ಕೂಡಾ ಬಳಸುತ್ತಾರೆ.
ಮಧುಮೇಹ ನಿಯಂತ್ರಣದಲ್ಲಿ ಸಹಾಯಕಾರಿ

ಹೀಗೆ ನಾನಾ ರೀತಿಯಲ್ಲಿ ಬೇವಿನ ಉಪಯೋಗವನ್ನು ಕಾಣಬಹುದು.

ಕೃಷಿಯಲ್ಲಿ ಬೇವು

neem benefits

ಮಹಾಗೋನಿ ಕುಟುಂಬಕ್ಕೆ ಸೇರುವ ಬೇವಿಗೆ ಬಡವರ ಪಾಲಿನ ಸಾಗುವಾನಿ ಎನ್ನುವ ಹೆಸರಿದೆ . ತೀವ್ರ ತರದ ಬರಗಾಲದಲ್ಲಿ ಕೂಡ ಬದುಕುವ ಸಾಮರ್ಥ್ಯ ಬೇವಿನ ಮರಕ್ಕಿದೆ. ಕೀಟಗಳನ್ನು ನಿರ್ವಹಿಸಲು ಬೇವಿನ ಉತ್ಪನ್ನಗಳನ್ನು ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯವಾಗಿ ಹಾಗೂ ರಸಗೊಬ್ಬರವಾಗಿ ಬಳಸಬಹುದು. ಮಣ್ಣನ್ನು ಸಮೃದ್ಧಗೊಳಿಸುವ ಗುಣ ಬೇವಿನ ಎಲೆಗಳಿಗೆ ಇದೆ. ಬೇವಿನ ಮರದ ಬೀಜದ ಹಿಂಡಿ ಉತ್ಕೃಷ್ಟ ಗೊಬ್ಬರವಾಗಿ ಉಪಯೋಗವಾಗುತ್ತದೆ.

ಗೃಹ ನಿರ್ಮಾಣ, ಪಿಠೋಪಕರಣಗಳು,ಆಟಿಕೆ, ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಬೇವಿನ ಮರವನ್ನು ಉಪಯೋಗಿಸುತ್ತಾರೆ. ಬೇವಿನ ಮರದಿಂದ ತಯಾರಿಸಿದ ಪೀಠೋಪಕರಣಗಳ ಬಣ್ಣ ಮನೆಯ ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ ಕೀಟಬಾಧೆಯಿಂದ ಮುಕ್ತವಾಗಿ ಬಹುಕಾಲ ಬಾಳಿಕೆ ಬರುತ್ತದೆ.

ಒಟ್ಟಿನಲ್ಲಿ ತನ್ನ ವಿಶಿಷ್ಟವಾದ ಗುಣಗಳಿಂದ ಬೇವು ಜನೋಪಯೋಗಿ ಮರ ಎನಿಸಿದೆ. ಹುಡುಕುತ್ತಾ ಹೋದರೆ ಗಿಡ ಮರಗಳಿಂದ , ನಮ್ಮ ಪ್ರಕೃತಿಯಿಂದ ಸಿಗುವ ಉಪಯೋಗಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಪರೋಪಕಾರಂ ಇದಂ ಶರೀರಂ ಎನ್ನುವ ಮಾತಿಗೆ ಅನ್ವರ್ಥದಂತೆ ಪ್ರಕೃತಿಯಲ್ಲಿ ಇರುವ ಎಲ್ಲವೂ ಬದುಕುತ್ತಿದೆ ಬಹುಶಃ ಮನುಷ್ಯನನ್ನು ಹೊರತುಪಡಿಸಿ.

ಇದನ್ನೂ ಓದಿ: Health Tips: ತಾಮ್ರದ ಬಾಟಲಿಗಳಲ್ಲೇ ನಿತ್ಯವೂ ನೀರು ಕುಡಿಯುತ್ತೀರಾ? ಹಾಗಾದರೆ, ಪಿತ್ತಕೋಶ, ಕಿಡ್ನಿ ಹುಷಾರು!

ಯಾವತ್ ಭೂಮಂಡಲಂ ಧತ್ತೇ ಸಮೃಗವನಕಾನನಂ
ತಾವತ್ತಿಷ್ಠಥತಿ ಮೇದಿನ್ಯಾಂ ಸಂತತಿ ಪುತ್ರಪೌತ್ರಿಕೀ ||

ಸಂಸ್ಕೃತದ ಈ ಶ್ಲೋಕ “ಈ ಭೂಮಂಡಲದಲ್ಲಿ ಎಲ್ಲಿಯವರೆಗೆ ಕಾಡು ,ವನ,ಕಾನನ ಇರುತ್ತದೋ ಅಲ್ಲಿಯವರೆಗೆ ಜೀವಿಗಳ ಸಂತತಿ ಇರುತ್ತದೆ ” ಎಂದು ನಮ್ಮ ಅಡಿಪಾಯವಾದ ಮರಗಿಡಗಳ ಮಹತ್ವವನ್ನು ಸಾರುತ್ತದೆ. ನಮ್ಮ ಜೀವನಕ್ಕೆ ಆಧಾರವಾದ ಪ್ರಕೃತಿಯನ್ನು ನಾಶಮಾಡುತ್ತ ನಾವು ಏನನ್ನು ಸಾಧಿಸಲು ಹೊರಟಿದ್ದೇವೆ! ಈ ಕಾಲಕ್ಕೆ ಇದರ ಕುರಿತು ಅವಲೋಕಿಸುವ ಅವಶ್ಯಕತೆ ಖಂಡಿತವಾಗಿ ಇದೆ ಅದರ ಜೊತೆಗೆ ಸಂರಕ್ಷಣೆ ಹೊಣೆಯೂ ಇದೆ. ಇಲ್ಲವಾದಲ್ಲಿ ಈ ಹಸಿರನ್ನು ನಾಶ ಪಡಿಸುತ್ತ ಪಡಿಸುತ್ತ ನಾವು ಉಸಿರು ಚೆಲ್ಲುವ ದಿನ ಸನ್ನಿಹಿತವಾಗಬಹುದು.

ಒಂದೊಮ್ಮೆ ನಾವು ಯೋಚಿಸುವ ಹಾಗೆ ಮರಗಿಡಗಳು ಈ ಮನುಷ್ಯನಿಂದ ಏನು ಉಪಯೋಗಗಳಿವೆ ಎಂದು ಪಟ್ಟಿ ಮಾಡಹೊರಟರೆ ಆ ಪಟ್ಟಿಯಲ್ಲಿ ಏನಿರಬಹುದು ! ನಮ್ಮ ಸಂಪಾದನೆ ನಿಜಾರ್ಥದಲ್ಲಿ ಏನು? ಎದುರಿಗೆ ಕಾಣುತ್ತಿದ್ದ ಮರದಿಂದ ಎಲೆಯೊಂದು ” ನೀ ಯಾರಿಗಾದೆಯೋ ಎಲೆ ಮಾನವಾ” ಎನ್ನುತ್ತಾ ನಕ್ಕು ನಕ್ಕು ಧರೆಗುರುಳಿದಂತೆ ಭಾಸವಾಯಿತು!!

ಇದನ್ನೂ ಓದಿ: Hair Care: ತಲೆಕೂದಲಿನ ಯಾವ ಸಮಸ್ಯೆಗೆ ಯಾವ ಎಣ್ಣೆ ಸೂಕ್ತ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Home remedies for Dengue: ಸರಳ ಮನೆ ಮದ್ದು ಬಳಸಿ; ಡೆಂಗ್ಯೂ ಅಪಾಯದಿಂದ ಪಾರಾಗಿ!

Home remedies for Dengue: ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆ ಅಗತ್ಯ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ (Home Remedies). ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ಸ್ವಲ್ಪ ವಿಶ್ರಾಂತಿ ನೀಡುವುದು. ಡೆಂಗ್ಯೂ ವ್ಯಾಪಿಸಿರುವ ಈ ಸಂದರ್ಭದಲ್ಲಿ ಸರಳ ಮನೆಮದ್ದುಗಳ ಉಪಯುಕ್ತ ಮಾಹಿತಿ ಇಲ್ಲಿದೆ.

VISTARANEWS.COM


on

By

Home remedies for Dengue
Koo

ಬೆಂಗಳೂರು (bengaluru) (Home remedies for Dengue) ಸೇರಿದಂತೆ ರಾಜ್ಯಾದ್ಯಂತ ಡೆಂಗ್ಯೂವಿನ (Dengue ) ಅಬ್ಬರ ಹೆಚ್ಚಾಗಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದ್ದು, ಎಚ್ಚರ ತಪ್ಪಿದರೆ ಇದು ಪ್ರಾಣಾಪಾಯಕ್ಕೂ ಕಾರಣ ಆಗುತ್ತದೆ. ಆದರೆ ಕೆಲವು ಮನೆ ಮದ್ದಿನಿಂದ (Home Remedies) ಇದರಿಂದ ಬೇಗನೆ ಚೇತರಿಸಿಕೊಳ್ಳಲು ಸಾಧ್ಯವಿದೆ.

ಮಳೆಗಾಲದಲ್ಲಿ (rainy season) ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತವೆ. ಯಾಕೆಂದರೆ ನಿಂತ ನೀರು ಸೊಳ್ಳೆಗಳ ಉತ್ಪತ್ತಿ ಕೇಂದ್ರವಾಗಿರುತ್ತದೆ. ವಿಪರೀತ ಜ್ವರ, ತಲೆನೋವು, ಕಣ್ಣುಗಳ ಹಿಂದೆ ನೋವು, ಆಯಾಸ, ಕೀಲು ನೋವು, ಚರ್ಮದ ದದ್ದು, ವಾಕರಿಕೆ ಮತ್ತು ವಾಂತಿ ಡೆಂಗ್ಯೂನ ಕೆಲವು ಪ್ರಮುಖ ಲಕ್ಷಣಗಳಾಗಿವೆ.

ಡೆಂಗ್ಯೂ ಜ್ವರಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲು ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಡೆಂಗ್ಯೂ ರೋಗಲಕ್ಷಣಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಣಾಮಕಾರಿ ಮನೆಮದ್ದುಗಳಿವೆ. ಈ ಪರಿಹಾರಗಳು ಹೆಚ್ಚಿನ ಜ್ವರವನ್ನು ತಗ್ಗಿಸಬಹುದು ಮತ್ತು ರೋಗಲಕ್ಷಣಗಳಿಂದ ನಿಮಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಡೆಂಗ್ಯೂ ಮತ್ತು ಅದರ ತೊಡಕುಗಳನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ.


ಅಮೃತ ಬಳ್ಳಿ ರಸ

ಡೆಂಗ್ಯೂ ಜ್ವರಕ್ಕೆ ಅಮೃತ ಬಳ್ಳಿ ರಸ ಸುಪ್ರಸಿದ್ಧ ಪರಿಹಾರವಾಗಿದೆ. ಅಮೃತ ಬಳ್ಳಿಯ ರಸ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಲವಾದ ರೋಗ ನಿರೋಧಕ ಶಕ್ತಿಯು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ಹೋರಾಡಲು, ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೀವು ಒಂದು ಲೋಟ ನೀರಿನಲ್ಲಿ ಅಮೃತಬಳ್ಳಿ ಸಸ್ಯದ ಎರಡು ಸಣ್ಣ ಕಾಂಡಗಳನ್ನು ಕುದಿಸಬಹುದು. ಸ್ವಲ್ಪ ಬೆಚ್ಚಗಿರುವಾಗ ಈ ನೀರನ್ನು ಸೇವಿಸಿ. ನೀವು ಒಂದು ಕಪ್ ಬೇಯಿಸಿದ ನೀರಿಗೆ ಕೆಲವು ಹನಿ ಅಮೃತ ಬಳ್ಳಿಯ ರಸವನ್ನು ಸೇರಿಸಿ ಮತ್ತು ದಿನಕ್ಕೆ ಎರಡು ಬಾರಿ ಕುಡಿಯಬಹುದು. ಆದರೆ ಇದನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.


ಪಪ್ಪಾಯ ಎಲೆಯ ರಸ

ಡೆಂಗ್ಯೂ ರೋಗಿಗಳಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಕಡಿಮೆಯಾಗುವುದರಿಂದ, ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಪಪ್ಪಾಯ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ. ಕೆಲವು ಪಪ್ಪಾಯ ಎಲೆಗಳನ್ನು ತೆಗೆದುಕೊಂಡು ಅದರಿಂದ ರಸವನ್ನು ಹೊರತೆಗೆಯಲು ಅವುಗಳನ್ನು ಪುಡಿಮಾಡಿ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಎರಡು ಬಾರಿ ಪಪ್ಪಾಯ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.


ತಾಜಾ ಪೇರಳೆ ರಸ

ಪೇರಳೆ ರಸವು ಬಹು ಪೋಷಕಾಂಶಗಳಿಂದ ತುಂಬಿರುತ್ತದೆ. ಇದರಲ್ಲಿ ವಿಟಮಿನ್ ಸಿಯು ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ನೀಡಲು ಆಹಾರದಲ್ಲಿ ತಾಜಾ ಪೇರಳೆ ರಸವನ್ನು ಸೇರಿಸಬಹುದು. ಪೇರಳೆ ರಸವು ನಿಮಗೆ ಇತರ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ದಿನಕ್ಕೆ ಎರಡು ಬಾರಿ ಒಂದು ಕಪ್ ಪೇರಳೆ ರಸವನ್ನು ಕುಡಿಯಬಹುದು ಅಥವಾ ಜ್ಯೂಸ್ ಬದಲಿಗೆ ತಾಜಾ ಪೇರಳೆ ಹಣ್ಣನ್ನು ಕೂಡ ತಿನ್ನಬಹುದು.


ಮೆಂತ್ಯ ಬೀಜಗಳು

ಮೆಂತ್ಯ ಬೀಜಗಳು ಡೆಂಗ್ಯೂ ಜ್ವರವನ್ನು ನಿಯಂತ್ರಿಸಲು ಸಹಾಯ ಮಾಡುವ ಬಹು ಪೋಷಕಾಂಶವಿರುವ ಔಷಧ ಕೆಲವು ಮೆಂತ್ಯ ಬೀಜಗಳನ್ನು ಒಂದು ಕಪ್ ಬಿಸಿ ನೀರಿನಲ್ಲಿ ನೆನೆಸಿಟ್ಟು ತಣ್ಣಗಾದ ಬಳಿಕ ದಿನಕ್ಕೆ ಎರಡು ಬಾರಿ ಕುಡಿಯಿರಿ. ಮೆಂತ್ಯ ನೀರಿನಲ್ಲಿ ವಿಟಮಿನ್ ಸಿ, ಕೆ ಮತ್ತು ಫೈಬರ್‌ ಸಮೃದ್ಧವಾಗಿರುವ ಕಾರಣ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಮೆಂತ್ಯ ನೀರು ಜ್ವರವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳು

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಡೆಂಗ್ಯೂವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡೆಂಗ್ಯೂ ಜ್ವರದಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ಡೆಂಗ್ಯೂನ ಆರಂಭಿಕ ರೋಗಲಕ್ಷಣಗಳನ್ನು ಸಹ ತಡೆಯುತ್ತದೆ. ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಮತ್ತು ಇನ್ನೂ ಕೆಲವು ಆಹಾರ ಸಾಮಗ್ರಿಗಳಲ್ಲಿ ; ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿರುತ್ತವೆ. ಇವುಗಳನ್ನು ಆಹಾರದಲ್ಲಿ ಸೇರಿಸಿ ನಿಯಮಿತವಾಗಿ ಸೇವಿಸಿ.

ಇದನ್ನೂ ಓದಿ: Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

ಡೆಂಗ್ಯೂನ ಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷಿಸಿಕೊಳ್ಳಬೇಕು. ಈ ಪರಿಹಾರಗಳು ಡೆಂಗ್ಯೂ ಜ್ವರವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾತ್ರ ಸಹಾಯ ಮಾಡುತ್ತದೆ. ಆದರೆ ಹೆಚ್ಚು ಕಾಲ ಮನೆಮದ್ದುಗಳನ್ನು ಅವಲಂಬಿಸಬೇಡಿ. ಕೂಡಲೇ ವೈದ್ಯರನ್ನು ಕಾಣಿರಿ.

Continue Reading

ಆರೋಗ್ಯ

Period Insomnia: ಋತುಸ್ರಾವ ಸಮಯದಲ್ಲಿ ನಿದ್ದೆಯ ಸಮಸ್ಯೆಯೇ?; ಇಲ್ಲಿವೆ ಸರಳ ಟಿಪ್ಸ್‌ಗಳು

Period Insomnia: ಮೆನೋಪಾಸ್‌ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್‌ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಇದಕ್ಕೇನು ಪರಿಹಾರ?

VISTARANEWS.COM


on

Period Insomnia
Koo

ಮಹಿಳೆ ತನ್ನ ಜೀವನದ ಹಲವು ಹಂತಗಳಲ್ಲಿ ಆಗಾಗ ಹಾರ್ಮೋನಿನ ಏರುಪೇರಿನಂಥ ಸಮಸ್ಯೆಗೆ ಒಳಗಾಗುತ್ತಾಳೆ (Period Insomnia). ಮೆನೋಪಾಸ್‌ ಸಮಯದಲ್ಲಿ, ಮೂಡ್‌ನ ಏರುಪೇರು, ಇದ್ದಕ್ಕಿದ್ದಂತೆ ಮೈಬಿಸಿಯಾಗಿ ಬೆವರುವುದು, ರಾತ್ರಿ ಎಷ್ಟೇ ಹೊತ್ತಾದರೂ ನಿದ್ದೆ ಬರದೇ ಇರುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ನಲವತ್ತರ ಆಸುಪಾಸಿನಲ್ಲೇ ಕೆಲವರಿಗೆ ಈ ಸಮಸ್ಯೆಗಳು ಆರಂಭವಾಗುವುದುಂಟು. ಮೆನೋಪಾಸ್‌ ಹಲವು ಬಗೆಯ ಇಂತಹ ಸಮಸ್ಯೆಗಳನ್ನು ವರ್ಷಾನುಗಟ್ಟಲೆ ಹೊತ್ತು ತರುವುದುಂಟು. ಮುಖ್ಯವಾಗಿ ಮಹಿಳೆಯರು ಈ ಸಂದರ್ಭದಲ್ಲಿ ಎದುರಿಸುವ ಸಮಸ್ಯೆ ಎಂದರೆ, ನಿದ್ದೆಯದ್ದು. ಎಷ್ಟು ಹೊತ್ತಾದರೂ ರಾತ್ರಿ ನಿದ್ದೆ ಬರದೇ ಇರುವುದೇ ವ್ಯಾಪಕವಾಗಿ ಮಹಿಳೆಯರು ಅನುಭವಿಸುವ ಸಮಸ್ಯೆ. ಬನ್ನಿ, ಮೆನೋಪಾಸ್‌ ಸಮಯದಲ್ಲಿ ಮಹಿಳೆಯರು ಎದುರಿಸುವ ನಿದ್ದೆಯ ಸಮಸ್ಯೆಗಳಿಗೆ ಇಲ್ಲಿ ಕೆಲವು ಸರಳ ಉಪಾಯಗಳಿವೆ.

Vastu Tips

ಮೆನೋಪಾಸ್‌ ಸಮಯದಲ್ಲಿ ಉತ್ತಮ ನಿದ್ದೆ ಬಹಳ ಮುಖ್ಯ. ಈ ಸಂದರ್ಭ ತೂಕ ಇಳಿಸುವ ಬಗ್ಗೆ, ಸಪ್ಲಿಮೆಂಟ್‌ಗಳ ಬಗ್ಗೆ ಹೇಳಿದಷ್ಟು ನಿದ್ದೆಯ ಬಗ್ಗೆ ಯಾರೂ ಹೇಳುವುದಿಲ್ಲ. ಆದರೆ, ನಿದ್ದೆ ಇಲ್ಲಿ ಅತ್ಯಂತ ಮುಖ್ಯವಾದ ಅಗತ್ಯ. ಮೆನೋಪಾಸ್‌ನ ಹಂತದಲ್ಲಿರುವ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಏಳರಿಂದ ಒಂಭತ್ತು ಗಂಟೆಗಳಷ್ಟು ನಿದ್ದೆ ಬೇಕು. ಮಧ್ಯರಾತ್ರಿಯಾದ ಮೇಲೆ ಮಲಗಿದರೆ ಖಂಡಿತಾ ಸಾಲದು.

ಒಳ್ಳೆಯ ನಿದ್ದೆ ಬರಬೇಕಾದರೆ, ಈ ಹಂತದಲ್ಲಿ ಮಹಿಳೆ ರಾತ್ರಿ ಒಂಭತ್ತರಿಂದ 11 ಗಂಟೆಯೊಳಗೆ ನಿದ್ದೆಗೆ ಜಾರಬೇಕು. ಈ ಸಮಯದಲ್ಲಿ ಮಲಗಿಬಿಟ್ಟರೆ, ಬೆಳಗ್ಗೆ ತಾಜಾ ಆಗಿ ಸೂರ್ಯ ಹುಟ್ಟುವಾಗಲೇ ಏಳಬಹುದು. ನಿಮ್ಮ ಬಹಳಷ್ಟು ಸಮಸ್ಯೆಗಳೆಲ್ಲವೂ ಇದನ್ನು ಅಭ್ಯಾಸ ಮಾಡಿಕೊಂಡರೆ ಪರಿಹಾರ ಕಾಣುತ್ತದೆ.

Menopause

ಅತ್ಯಂತ ಹೆಚ್ಚು ಅಥವಾ ಅತ್ಯಂತ ಕಡಿಮೆ ಋಥ್ರಿ ಉಣ್ಣುವುದು ಎರಡೂ ಒಳ್ಳೆಯದಲ್ಲ. ಹಿತಮಿತವಾಗಿ, ಹೊಟ್ಟೆ ಭಾರವೆನಿಸದಂತೆ ಊಟ ಮಾಡಿ. ರಾತ್ರಿ ಏಳರಿಂದ ಎಂಟು ಗಂಟೆಯೊಳಗೆ ಊಟ ಮುಗಿಸಿಬಿಡಿ. ಬೆಳಗ್ಗೆ ಎದ್ದ ಕೂಡಲೇ ಪೋಷಕಾಂಶಯುಕ್ತ ಉಪಹಾರ ಬಹಳ ಮುಖ್ಯ. ಇಡ್ಲಿ, ಪೋಹಾ, ದೋಸೆ, ಉಪ್ಪಿಟ್ಟು, ಪರಾಠಾ ಇತ್ಯಾದಿಗಳಿರುವ ಉಪಹಾರ ಒಳ್ಳೆಯದು. ಕಾರ್ಬೋಹೈಡ್ರೇಟ್‌ ಹೆಚ್ಚಿದೆ ಎಂದು ಇಂತಹ ದೇಸೀ ಆಹಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಇವು ನಿಜಕ್ಕೂ ನಮ್ಮ ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಹೊಂದಿವೆ.

ನೀವು ಮೆನೋಪಾಸ್‌ ಹಂತದಲ್ಲಿರುವಾಗ ಮನೆಯಲ್ಲೇ ಇದ್ದರೆ, ಮಧ್ಯಾಹ್ನ ಊಟವಾದ ಮೇಲೆ ಒಂದು ಸಣ್ಣ ನಿದ್ದೆ ಮಾಡಬಹುದು. ಆದರೆ ಆ ನಿದ್ದೆ ಅರ್ಧ ಗಂಟೆಯನ್ನು ಮೀರದಿರಲಿ. ಹೀಗೆ ಮಲಗುವುದರಿಂದ ಕೊಂಚ ಆರಾಮವೆನಿಸುತ್ತದೆ. ಥೈರಾಯ್ಡ್‌ ಸಮಸ್ಯೆ, ಋತುಚಕ್ರದಲ್ಲಿ ಏರಿಪೇರು ಹಾಗೂ ಕೈಕಾಲು ನೋವು, ಸೊಂಟ ನೋವಿನ ಸಮಸ್ಯೆ ಇರುವ ಮಂದಿಗೆ ಕೊಂಚ ಆರಾಮ ದೊರೆಯುತ್ತದೆ.

ಇದನ್ನೂ ಓದಿ: Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

ಆಲ್ಕೋಹಾಲ್‌, ತಂಬಾಕು ಇತ್ಯಾದಿಗಳಿಂದ ದೂರವಿರಿ. ಚಹಾ ಕಾಫಿ ಅಭ್ಯಾಸವಿದ್ದರೆ ದಿನಕ್ಕೆರಡು ಲೋಟಕ್ಕಿಂತ ಹೆಚ್ಚು ಸೇವಿಸಬೇಡಿ. ಚಾಕೋಲೇಟ್‌ ಕೂಡಾ ತಿನ್ನಬೇಡಿ.

Continue Reading

ಲೈಫ್‌ಸ್ಟೈಲ್

How to spot fake ghee: ನಾವು ಖರೀದಿಸಿದ ತುಪ್ಪ ಶುದ್ಧವೋ ಕಲಬೆರಕೆಯೋ ಪರೀಕ್ಷಿಸುವುದು ಹೇಗೆ?

How to spot fake ghee: ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಆದರೆ ಇಂಥ ಅಮೂಲ್ಯ ತುಪ್ಪ ಕಲಬೆರಕೆ ಆಗುತ್ತಿದೆ. ಇದನ್ನು ಪತ್ತೆ ಹಚ್ಚುವುದು ಹೇಗೆ?

VISTARANEWS.COM


on

Ghee benefits
Koo

ಭಾರತೀಯರ ಅಡುಗೆ ಮನೆಯಲ್ಲಿ ತುಪ್ಪಕ್ಕೆ ಮಹತ್ವದ ಸ್ಥಾನವಿದೆ. ಅದು ಅಡುಗೆ ಮನೆಯೊಳಗಿನ ಚಿನ್ನವೂ ಹೌದು. ನಮ್ಮ ಭಾರತೀಯ ಶೈಲಿಯ ಕೆಲ ಅಡುಗೆಗಳಿಗೆ ತುಪ್ಪ ಹಾಕಿದರೆ ಅದರ ರುಚಿ, ಘಮ ಎಲ್ಲವೂ ಸ್ವರ್ಗಸದೃಶ. ಅನ್ನ, ದೋಸೆ, ಪರಾಠಾ, ಚಪಾತಿ ಸೇರಿದಂತೆ ನಿತ್ಯವೂ ತುಪ್ಪ ಹಾಕಿ ಉಣ್ಣುತ್ತೇವೆ. ದೇಸೀ ದನದ ತುಪ್ಪದ ಹಿತಮಿತ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳೂ ಇವೆ. ಆಯುರ್ವೇದವೂ ಇದನ್ನು ಪುಷ್ಠೀಕರಿಸುತ್ತದೆ. ನಮ್ಮ ಹಿರಿಯರು ತಲೆತಲಾಂತರ ವರ್ಷಗಳಿಂದ ತುಪ್ಪದ ಬಹುಪಯೋಗಗಳ ಅರಿವನ್ನು ನಮಗೆ ದಾಟಿಸುತ್ತಲೇ ಬಂದಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ತುಪ್ಪದ ಬಗೆಗೆ ಮತ್ತೆ ಜನರಲ್ಲಿ ಅರಿವು ಮೂಡಿ ಮತ್ತೆ ತುಪ್ಪ ಸೇವನೆಯತ್ತ ಹಲವರು ಮುಖ ಮಾಡಿ ಅದರ ಲಾಭಗಳನ್ನು ಪಡೆಯುತ್ತಿದ್ದಾರೆ ಕೂಡಾ. ಆದರೆ, ಮನೆಗಳಲ್ಲಿ ತುಪ್ಪ ಮಾಡುವ ಪ್ರವೃತ್ತಿ ಅತ್ಯಂತ ಕಡಿಮೆಯಾಗುತ್ತಿದೆ. ಹೀಗಾಗಿ ಮಾರುಕಟ್ಟೆಯ ತುಪ್ಪವನ್ನು ಕೊಂಡು ತರುವುದು ಸಾಮಾನ್ಯ. ಆದರೆ, ಶುದ್ಧ ತುಪ್ಪ ಎಂದುಕೊಂಡು ನಾವು ಕೊಂಡು ತಂದು ಬಳಸುವ ತುಪ್ಪದಲ್ಲಿ ಕಲಬೆರಕೆಯೂ ಇರಬಹುದು ಎಂಬ ಸತ್ಯವನ್ನು ನಾವು ಅರಗಿಸಿಕೊಳ್ಳಲೇ ಬೇಕಾಗಿದೆ. ಯಾಕೆಂದರೆ ಇತ್ತೀಚೆಗಷ್ಟೇ ಗುಜರಾತ್‌ನಲ್ಲಿ ಸುಮಾರು 14 ಲಕ್ಷ ರೂಪಾಯಿಗಳಷ್ಟು ಬೆಲೆಬಾಳುವ ಮೂರು ಸಾವಿರ ಲೀಟರ್‌ಗಳಷ್ಟು ತುಪ್ಪದಲ್ಲಿ ಕಲಬೆರಕೆಯಾಗಿರುವುದನ್ನು ಪತ್ತೆ ಹಚ್ಚಿರುವ ಎಫ್‌ಡಿಸಿಎ ಅವುಗಳನ್ನು ವಶಪಡಿಸಿಕೊಂಡಿದೆ. ಇದು ನಮಗೆ ಎಚ್ಚರಿಕೆಯ ಕರೆಗಂಟೆಯೂ ಆಗಿದೆ. ನಾವು ಮಾರುಕಟ್ಟೆಯಿಂದ ಕೊಂಡು ತರುವ ತುಪ್ಪದ ಮೇಲೆ ಎಷ್ಟೇ ನಂಬಿಕೆಯಿದ್ದರೂ, ನಮ್ಮ ನಂಬಿಕೆಯನ್ನೊಮ್ಮೆ ನಾವು ಪರೀಕ್ಷಿಸಿ ದೃಢಪಡಿಸಿಕೊಂಡರೆ ತಪ್ಪಿಲ್ಲ. ಬನ್ನಿ ತುಪ್ಪ ಪರಿಶುದ್ಧವಾಗಿದೆಯೋ (How to spot fake ghee), ಕಲಬೆರಕೆಯದ್ದೋ ಎಂದು ಹೇಗೆಲ್ಲ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ತಿಳಿಯೋಣ.

Rich in antioxidants ghee is anti-inflammatory Ghee Benefits

ನೀರಿನ ಮೂಲಕ ಪರೀಕ್ಷೆ

ಒಂದು ಲೋಟ ನೀರು ತೆಗೆದುಕೊಂಡು ಅದರಲ್ಲಿ ಒಂದು ಚಮಚ ಗಟ್ಟಿಯಾದ ತುಪ್ಪವನ್ನು ಹಾಕಿ. ಅದು ತೇಲಿದರೆ ನಿಮ್ಮ ತುಪ್ಪ ಪರಿಶುದ್ಧವಾಗಿದೆ ಎಂದು ಅರ್ಥ.

ಕುದಿಸುವ ಪರೀಕ್ಷೆ

ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದನ್ನು ಬಾಣಲೆಯಲ್ಲಿ ಹಾಕಿ ಬಿಸಿ ಮಾಡಿ. ನಂತರ ಅದನ್ನು ತಣ್ಣಗಾಗಲು ಬಿಡಿ. ತಣ್ಣಾಗಾದಾಗ ಪ್ರತ್ಯೇಕವಾದ ಪದರವೊಂದು ತುಪ್ಪದ ಮೇಲ್ಮೈ ಮೇಲೆ ಸಂಗ್ರಹವಾಯಿತೆಂದರೆ, ಆ ತುಪ್ಪದಲ್ಲಿ ಕಲಬೆರಕೆಯಾಗಿರುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಕೆಲ ಅಗ್ಗದ ಎಣ್ಣೆಗಳನ್ನು ತುಪ್ಪದ ಜೊತೆ ಕಲಬೆರಕೆ ಮಾಡಿರಲೂಬಹುದು ಎಂದರ್ಥ.

Ghee is rich in antioxidants Ghee Health Benefits

ಅಯೋಡಿನ್‌ ಪರೀಕ್ಷೆ

ಸ್ವಲ್ಪ ಅಯೋಡಿನ್‌ ಅನ್ನು ಮಾರುಕಟ್ಟೆಯಿಂದ ಕೊಂಡು ತನ್ನಿ. ಸ್ವಲ್ಪ ತುಪ್ಪವನ್ನು ತೆಗೆದುಕೊಂಡು ಅದಕ್ಕೆ ಮೂರ್ನಾಲ್ಕು ಬಿಂದುಗಳಷ್ಟು ಅಯೋಡಿನ್‌ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ನಿಮ್ಮ ತುಪ್ಪ ಪರಿಶುದ್ಧವಾಗಿದ್ದರೆ ಅದು ಬಣ್ಣ ಬದಲಾಯಿಸದು. ನಿಮ್ಮ ತುಪ್ಪಕ್ಕೆ ಸ್ಟಾರ್ಚ್‌ ಅಥವಾ ಗಂಜಿಯ ಕಲಬೆರಕೆ ಮಾಡಿದ್ದರೆ ನಿಮ್ಮ ತುಪ್ಪ ಅಯೋಡಿನ್‌ ಜೊತೆ ಸೇರಿದ ತಕ್ಷಣ ನೀಲಿ ಬಣ್ಣಕ್ಕೆ ತಿರುಗಬಹುದು.

ಅಂಗೈ ಪರೀಕ್ಷೆ

ಸ್ವಲ್ಪ ತುಪ್ಪವನ್ನು ನಿಮ್ಮ ಅಂಗೈಯಲ್ಲಿ ತೆಗೆದುಕೊಳ್ಳಿ. ನಿಮ್ಮ ತುಪ್ಪ ಶುದ್ಧವಾಗಿದ್ದರೆ ಅದು ನಿಧಾನವಾಗಿ ಕರಗಿ ಹರಿಯಲು ಶುರು ಮಾಡುತ್ತದೆ. ನಿಮ್ಮ ತುಪ್ಪ ಕಲಬೆರಕೆಯದಾಗಿದ್ದರೆ, ಅದು ಗಟ್ಟಿಯಾಗಿ ಅಲುಗಾಡದೆ ಕೈಯಲ್ಲಿ ಹಾಗೆಯೇ ಇರುತ್ತದೆ. ಅತೀವ ಚಳಿ ಪ್ರದೇಶಗಳಲ್ಲಿ ಈ ಪರೀಕ್ಷೆ ಅನ್ವಯಿಸದು.

ಇದನ್ನೂ ಓದಿ: Superfoods: ಮಾರುಕಟ್ಟೆಯಲ್ಲಿ ಸೂಪರ್‌ಫುಡ್‌ಗಳೆನ್ನುವ ಈ ಆಹಾರಗಳು ನಿಜಕ್ಕೂ ಸೂಪರ್‌ಫುಡ್‌ಗಳೇ?

ಎಚ್‌ಸಿಎಲ್‌ ಪರೀಕ್ಷೆ

ಒಂದು ಟೆಸ್ಟ್‌ ಟ್ಯೂಬ್‌ ತೆಗದುಕೊಂಡು ಅದರಲ್ಲಿ ಸ್ವಲ್ಪ ತುಪ್ಪ ತೆಗೆದುಕೊಳ್ಳಿ. ನಂತರ ಅದಕ್ಕೆ ಕೆಲ ಬಿಂದುಗಳಷ್ಟು ಹೈಡ್ರೋಕ್ಲೋರಿಕ್‌ ಆಸಿಡ್‌ ಸೇರಿಸಿ ಕುಲುಕಿ. ಆಗ ನಿಮ್ಮದು ಶುದ್ಧ ತುಪ್ಪವಾಗಿದ್ದರೆ ಅದರ ಬಣ್ಣ ಬದಲಾಗದೆ ಹಾಗೆಯೇ ಇರುತ್ತದೆ. ಕಲಬೆರಕೆಯ ತುಪ್ಪವಾಗಿದ್ದರೆ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ.

Continue Reading

ಬೆಂಗಳೂರು

Dengue Scare: ಬೆಂಗಳೂರಿನಲ್ಲಿ ತೀವ್ರವಾಗಿ ಹರಡುತ್ತಿರುವ ಡೆಂಗ್ಯೂ; ನೂರಾರು ಮಂದಿ ಆಸ್ಪತ್ರೆಗೆ ದಾಖಲು

ಬೆಂಗಳೂರಿನಲ್ಲಿ ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ (Dengue Scare) ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ಡೆಂಗ್ಯೂ ಪೀಡಿತರ ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

VISTARANEWS.COM


on

By

Dengue Scare
Koo

ಬೆಂಗಳೂರು: ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು (Dengue Scare) ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ (silicon city) ಬೆಂಗಳೂರಿನಲ್ಲಿ (bengaluru) ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತಿದೆ. ಅನೇಕರು ಸೊಳ್ಳೆ ಬ್ಯಾಟ್‌ಗಳನ್ನು (Mosquito Bats) ಖರೀದಿಸುತ್ತಿದ್ದು, ಮನೆ ಸುತ್ತಮುತ್ತ ಸೊಳ್ಳೆಗಳು ಬರದಂತೆ ಮುನ್ನೆಚ್ಚರಿಕೆ ವಹಿಸುತ್ತಿರುವುದು ಕಂಡು ಬರುತ್ತಿದೆ. ಈ ನಡುವೆ, ಡೆಂಗ್ಯೂ ಪೀಡಿತರಾಗಿ ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯದಲ್ಲಿ ಈವರೆಗೆ ಡೆಂಗ್ಯೂವಿನಿಂದಾಗಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಸಿಲಿಕಾನ್ ಸಿಟಿಯು ಇಲ್ಲಿಯವರೆಗೆ 2,000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳನ್ನು ದಾಖಲಿಸಿದೆ. ರಾಜ್ಯಾದ್ಯಂತ ಒಟ್ಟು ಸಂಖ್ಯೆ 7,000 ದಾಟಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು, ವೃದ್ಧರಲ್ಲಿ ಡೆಂಗ್ಯೂ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಮನೆಯಲ್ಲಿ ಹೆಚ್ಚುವರಿ ಸೊಳ್ಳೆ ಬ್ಯಾಟ್‌ಗಳನ್ನು ಖರೀದಿಸುವ ಅವಶ್ಯಕತೆ ಹೆಚ್ಚಾಗಿದೆ ಎನ್ನುತ್ತಾರೆ ಸ್ಥಳೀಯರು.

ಗಿಡಗಳಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಬಾವಲಿಗಳು ಹೆಚ್ಚುತ್ತಿದೆ. ಜೂನ್‌ನಲ್ಲಿ ಭಾರೀ ಮಳೆಯು ಸೊಳ್ಳೆಗಳಿಗೆ ಸೂಕ್ತವಾದ ಸಂತಾನೋತ್ಪತ್ತಿಯ ಸ್ಥಳವನ್ನು ಸೃಷ್ಟಿಸಿದ ಅನಂತರ ಬಾವಲಿಗಳೂ ಹೆಚ್ಚಾಗಿವೆ.


ಬೆಂಗಳೂರಿನಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಕ್ರಮಗಳು

ಈಗಾಗಲೇ ಬೆಂಗಳೂರಿನಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ತಮ್ಮ ಪ್ರದೇಶಗಳನ್ನು ಸ್ವಚ್ಛವಾಗಿಡಲು ವಿಫಲರಾದ ಆಸ್ತಿ ಮಾಲೀಕರ ವಿರುದ್ಧ 500 ರೂಪಾಯಿ ದಂಡ ವಿಧಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದ ಸಭೆಯಲ್ಲಿ ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಹರಡುವ ಡೆಂಗ್ಯೂ ನಿಯಂತ್ರಣದ ಬಗ್ಗೆ ಗಮನಹರಿಸಿ ನಿರ್ಧಾರ ಕೈಗೊಳ್ಳಲು ಸೂಚಿಸಲಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ತಮ್ಮ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳದ ಆಸ್ತಿ ಮಾಲೀಕರಿಗೆ ಗರಿಷ್ಠ 50೦ ರೂಪಾಯಿ ದಂಡ ವಿಧಿಸುವಂತೆ ಆರೋಗ್ಯ ಸಚಿವರು ಸೂಚಿಸಿದ್ದಾರೆ.

ಇದನ್ನೂ ಓದಿ: Bomb Threat: ಬಾಯ್‌ ಫ್ರೆಂಡ್‌ ಬಿಟ್ಟು ಹೋಗ್ತಾನೆ ಎಂದು ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್‌ ಕರೆ ಮಾಡಿದ ಯುವತಿ!

ಇದಲ್ಲದೆ, ಬೆಂಗಳೂರಿನಲ್ಲಿ ಡೆಂಗ್ಯೂ ಹರಡುವುದನ್ನು ತಡೆಯಲು ಲಾರ್ವಾ ಪರೀಕ್ಷೆ ಮತ್ತು ನಾಗರಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಬಿಎಂಪಿಯಿಂದ ಮನೆ-ಮನೆ ಸಮೀಕ್ಷೆ ನಡೆಸಲಾಗುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದಟ್ಟ ಜನಸಂಖ್ಯೆ ಮತ್ತು ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 25 ಲಕ್ಷ ನಗರ ಬಡವರನ್ನು ಸಮೀಕ್ಷೆಗಾಗಿ ಎಲ್ಲಾ ಬಿಬಿಎಂಪಿ ವಲಯಗಳಲ್ಲಿ ಗುರುತಿಸಲಾಗಿದೆ. ಅಲ್ಲಿ ಆರೋಗ್ಯ ನಿರೀಕ್ಷಕರು, ಆಶಾ ಕಾರ್ಯಕರ್ತರು, ಎಎನ್‌ಎಂಗಳು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಎನ್‌ಎಸ್‌ಎಸ್ ಸ್ವಯಂಸೇವಕರು ಇರಲಿದ್ದಾರೆ. ತಲಾ 1,000 ಮನೆಗಳನ್ನು ಒಳಗೊಂಡ ಬ್ಲಾಕ್ ರಚಿಸಲು ನಿರ್ದೇಶನ ನೀಡಲಾಗಿದೆ. ಪ್ರತಿ 15 ದಿನಗಳಿಗೊಮ್ಮೆ ಕನಿಷ್ಠ 12-14 ಲಕ್ಷ ಮನೆಗಳನ್ನು ಆವರಿಸುವ ಗುರಿ ಹೊಂದಲಾಗಿದೆ.

Continue Reading
Advertisement
ಕ್ರೀಡೆ6 mins ago

Paris 2024 Olympics Athletics: ವಿಶ್ವ ರ್‍ಯಾಂಕಿಂಗ್‌ ಆಧಾರದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಜೆಸ್ವಿನ್‌, ಅಂಕಿತಾ ಧ್ಯಾನಿ

First Night Video
Latest9 mins ago

First Night Video: ಫಸ್ಟ್‌ ನೈಟ್‌ ವಿಡಿಯೊ ಹಂಚಿಕೊಂಡ ನವ ದಂಪತಿ! ಇನ್ನೇನು ಬಾಕಿ ಉಳಿದಿದೆ ಎಂದ ನೆಟ್ಟಿಗರು!

Ragging case in Bengaluru
ಬೆಂಗಳೂರು13 mins ago

Ragging Case : ಬೆಂಗಳೂರಲ್ಲಿ ನಿಲ್ಲದ ವ್ಹೀಲಿಂಗ್‌ ಆ್ಯಂಡ್‌ ರ‍್ಯಾಗಿಂಗ್‌ ಹಾವಳಿ; ಮಹಿಳೆ ಹಿಂದೆ ಬಿದ್ದ ಪೋಲಿ ಹುಡುಗರು

Supreme Court
ಪ್ರಮುಖ ಸುದ್ದಿ15 mins ago

Sandeshkhali case : ಸಿಬಿಐ ತನಿಖೆ ವಿರುದ್ಧದ ಅರ್ಜಿ ವಜಾ; ಸುಪ್ರೀಂ ಕೋರ್ಟ್‌‌ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆ

Kiccha Sudeep Call Boss To Only Two Persons
ಸ್ಯಾಂಡಲ್ ವುಡ್21 mins ago

Kiccha Sudeep: ಇಬ್ಬರಿಗೆ ಮಾತ್ರ ʻಬಾಸ್‌ʼ ಎಂದು ಕರೆಯುವೆ ಎಂದ ಕಿಚ್ಚ; ಯಾರವರು?

France Election
ಪ್ರಮುಖ ಸುದ್ದಿ42 mins ago

France Election: ಫ್ರಾನ್ಸ್ ಚುನಾವಣೆ: ಎಡ ಪಕ್ಷಗಳ ಒಕ್ಕೂಟದ ಮೇಲುಗೈ; ಅತಂತ್ರ ಫಲಿತಾಂಶ

Chennai Police commissioner
ಪ್ರಮುಖ ಸುದ್ದಿ45 mins ago

Chennai Police commissioner : ಬಿಎಸ್‌‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ

Rohit Sharma
ಕ್ರೀಡೆ46 mins ago

Rohit Sharma: ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಕುಟುಂಬದ ಜತೆ ವಿದೇಶ ಪ್ರವಾಸ ಕೈಗೊಂಡ ರೋಹಿತ್​

Karnataka Rain Effect
ಮಳೆ47 mins ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Kalki 2898 AD box office thrashes 'PK' record
ಟಾಲಿವುಡ್54 mins ago

Kalki 2898 AD: ‘ಪಿಕೆ’, ʻಗದರ್‌ʼ ಸಿನಿಮಾಗಳ ದಾಖಲೆ ಮುರಿದ ʻಕಲ್ಕಿ 2898 ಎಡಿʼ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain Effect
ಮಳೆ47 mins ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ3 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ4 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು5 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ20 hours ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ23 hours ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ23 hours ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ1 day ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ2 days ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

ಟ್ರೆಂಡಿಂಗ್‌