UPSC Exam: ಸ್ಯಾಂಡಲ್‌ವುಡ್‌ನ ಖ್ಯಾತ ಬಾಲನಟಿ ಈಗ ಐಎಎಸ್‌ ಅಧಿಕಾರಿ! - Vistara News

South Cinema

UPSC Exam: ಸ್ಯಾಂಡಲ್‌ವುಡ್‌ನ ಖ್ಯಾತ ಬಾಲನಟಿ ಈಗ ಐಎಎಸ್‌ ಅಧಿಕಾರಿ!

UPSC Exam: ಅನೇಕ ಚಲನಚಿತ್ರಗಳಲ್ಲಿ ಬಾಲ ನಟಿಯಾಗಿ ಖ್ಯಾತಿ ಪಡೆದ ಎಚ್ ಎಸ್ ಕೀರ್ತನಾ ಮಂಡ್ಯದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಶುರು ಮಾಡಿದ್ದಾರೆ.

VISTARANEWS.COM


on

keerthana h s IAS
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದೇಶದ ಮೂಲೆಮೂಲೆಯ ಲಕ್ಷಾಂತರ ಪ್ರಜೆಗಳು (ಯುಪಿಎಸ್‌ಸಿ) UPSC ಪರೀಕ್ಷೆ ಬರೆದರೂ ಪಾಸಾಗುವುದು, ಐಎಎಸ್‌ ಅಧಿಕಾರಿಯಾಗುವುದು ನೂರಾರು ಅಭ್ಯರ್ಥಿಗಳು ಮಾತ್ರ. ಇವರ ಪೈಕಿ ಕೆಲವರು ತಮ್ಮ ಸತತ ಪ್ರಯತ್ನದಿಂದಾಗಿ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಇದೀಗ ಸಿನೆಮಾ ಕ್ಷೇತ್ರವನ್ನು ತೊರೆದು ಆಡಳಿತಾತ್ಮಕ ಉದ್ಯೋಗಗಳನ್ನು ಪಡೆದು ಮಾದರಿಯಾದ ಬಾಲನಟಿ ನಮ್ಮೊಂದಿಗೆ (Former child artist H S Keerthana) ಇದ್ದಾರೆ. ಅನೇಕ ಚಲನಚಿತ್ರಗಳಲ್ಲಿ ಖ್ಯಾತಿ ಪಡೆದ ಬಾಲನಟಿ ಎಚ್ ಎಸ್ ಕೀರ್ತನಾ ಮಂಡ್ಯದಲ್ಲಿ ಸಹಾಯಕ ಆಯುಕ್ತರಾಗಿ ಕೆಲಸ ಶುರು ಮಾಡಿದ್ದಾರೆ. ಶಿವರಾಜ್‌ಕುಮಾರ್ ನಟನೆಯ ‘ದೊರೆ’ ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದ್ದ ಎಚ್ ಎಸ್ ಕೀರ್ತನಾ ಅವರು ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು.

ಭರವಸೆ ಕಳೆದುಕೊಳ್ಳದ ನಟಿ

ಬಾಲನಟಿಯಾಗಿದ್ದ ಕೀರ್ತನಾ ಐದು ಬಾರಿ UPSC ಪರೀಕ್ಷೆಯಲ್ಲಿ ಎದುರಿಸಿ ವಿಫಲಗೊಂಡಿದ್ದರು. ಆದರೆ ಭರವಸೆಯನ್ನು ಕಳೆದುಕೊಳ್ಳಲಿಲ್ಲ. ತಮ್ಮ ಆರನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಪಾಸಾದರು. ನಂದಿನಿ ಲೇಔಟ್ ಅಣ್ಣಮ್ಮ ಉತ್ಸವವೊಂದರಲ್ಲಿ ನೃತ್ಯ ಮಾಡುತ್ತಿದ್ದ ಬಾಲಕಿ ನಂತರ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದೇ ಅಚ್ಚರಿ. ಕರ್ಪೂರದ ಗೊಂಬೆ ಸಿನಿಮಾ, ಗಂಗಾ-ಯಮುನಾ, ಮುದ್ದಿನ ಅಳಿಯ, ಉಪೇಂದ್ರ, ಎ, ಕಾನೂರು ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ ಮತ್ತು ಟಿವಿ ಧಾರಾವಾಹಿಗಳಾದ ಜನನಿ, ಚಿಗುರು ಮತ್ತು ಪುಟಾಣಿ ಏಜೆಂಟ್‌ ಹೀಗೆ 32ಕ್ಕೂ ಅಧಿಕ ಸಿನಿಮಾ, ಧಾರಾವಾಹಿಗಳಲ್ಲಿ ಕೀರ್ತನಾ ನಟಿಸಿದ್ದರು. ಮಾತ್ರವಲ್ಲ ರಾಷ್ಟ್ರೀಯ ಬಾಲ ಪುರಸ್ಕಾರ, ರಾಜ್ಯ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಇದನ್ನೂ ಓದಿ:  UPSC Exam: ಒಂದೇ ಹೆಸರು, ಒಂದೇ ರೋಲ್‌ ನಂಬರ್‌, ಒಂದೇ ರ‍್ಯಾಂಕ್‌! ಯುಪಿಎಸ್‌ಸಿ ಪರೀಕ್ಷೆಯಲ್ಲೊಂದು ಎಡವಟ್ಟು

UPSC Exam
UPSC Exam
UPSC Exam

ತನ್ನ UPSC ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಕೀರ್ತನಾ 2011ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆಗೆ ಹಾಜರಾಗಿದ್ದರು. ಮಾತ್ರವಲ್ಲ ಅದರಲ್ಲಿ ತೇರ್ಗಡೆಯಾಗಿ. ಎರಡು ವರ್ಷಗಳ ಕಾಲ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2020ರಲ್ಲಿ ಆರನೇ ಬಾರಿಗೆ ಪರೀಕ್ಷೆ ಬರೆದು ಅಖಿಲ ಭಾರತ ಶ್ರೇಣಿ (AIR)ಯಲ್ಲಿ 167ನೇ ರ‍್ಯಾಂಕ್ ಪಡೆದುಕೊಂಡು IAS ಅಧಿಕಾರಿಯಾದರು. ಮಗಳು ಸಿವಿಲ್ ಅಧಿಕಾರಿಯಾಗಬೇಕು ಎಂದು ಕೀರ್ತನಾ ತಂದೆ ಅಂದುಕೊಂಡಿದ್ದರಂತೆ. ಮೈಸೂರು ಲ್ಯಾಂಪ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೀರ್ತನಾ ತಂದೆ 2013ರಲ್ಲಿ ಕೊನೆಯುಸಿರೆಳೆದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಾಲಿವುಡ್

All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

All We Imagine As Light : ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು.

VISTARANEWS.COM


on

All We Imagine As Light actor rejected audition call by The Kerala Story
Koo

ಬೆಂಗಳೂರು: ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪ್ರಶಸ್ತಿ ಕಾನ್ ಸಿನಿಮೋತ್ಸವದ ಎರಡನೇ ಅತ್ಯುತ್ತಮ ಪ್ರಶಸ್ತಿಯಾಗಿದೆ. ಪಾಯಲ್ ಕಪಾಡಿಯಾ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿತ್ತು. ʻ ಆಲ್ ವಿ ಇಮ್ಯಾಜಿನ್ ಆಸ್ ಲೈಟ್‌ʼನಲ್ಲಿನ ಅಭಿನಯಕ್ಕಾಗಿ ಮಲಯಾಳಂ ನಟಿ ʻಕಣಿ ಕುಸರುತಿʼ (Kani Kusruti ) ಜಾಗತಿಕ ಮೆಚ್ಚುಗೆಯನ್ನು ಗಳಿಸಿದರು. ಕಣಿ ಕುಸರುತಿ ನೀಡಿದ ಸಂದರ್ಶನದಲ್ಲಿ, ʻʻಕಡಿಮೆ ಸಿನಿಮಾಗಳು ನನಗೆ ಆಫರ್‌ ಬಂದಿದ್ದವು. ಹಾಗೇ ನಿರ್ದೇಶಕ ಸುದೀಪ್ತೋ ಸೇನ್ ಅವರ ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ಕರೆ ಬಂದಿತ್ತು. ಅದನ್ನು ಕೂಡ ರಿಜೆಕ್ಟ್‌ ಮಾಡಿದ್ದೆʼʼಎಂದು ಹೇಳಿಕೊಂಡಿದ್ದಾರೆ.

ನಟಿ ಮಾತನಾಡಿ ʻʻನನಗೆ ಬಂದ ಸಿನಿಮಾಗಳನ್ನು ಮಾತ್ರ ನಾನು ಮಾಡಬಲ್ಲೆ. ಸಜಿನ್ ಬಾಬು ಅವರ 2019 ರ ಬಿಡುಗಡೆಯಾದ ʻಬಿರಿಯಾನಿʼ ಸಿನಿಮಾ ನಟನೆಗೆ ಕೇರಳ ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದೆ. ಆದರೆ ನನಗೆ ಹೊಂದಿಕೆಯಾಗದ ಚಿತ್ರಗಳನ್ನು ಮಾಡದಿರಲು ಪ್ರಯತ್ನಿಸುತ್ತೇನೆ. ಉದಾಹರಣೆಗೆ ಕಳೆದ ವರ್ಷ ಬ್ಲಾಕ್‌ ಬಸ್ಟರ್‌ ಹಿಟ್‌ ಆದ ʻದಿ ಕೇರಳ ಸ್ಟೋರಿʼ ಸಿನಿಮಾ. ನಿರ್ದೇಶಕ ಸುದೀಪ್ತೋ ಸೇನ್ ಅವರು ಆಡಿಷನ್‌ಗೆ ಕರೆದಿದ್ದರು. ಆದರೆ ನಾನು ರಿಜೆಕ್ಟ್‌ ಮಾಡಿದ್ದೆʼʼ ಎಂದು ಬಹಿರಂಗಪಡಿಸಿದರು.

ಈ ಹಿಂದೆ ʻಬಿರಿಯಾನಿʼ ಸಿನಿಮಾದಲ್ಲಿ ಕಣಿ ಕುಸರುತಿ ಸಾಕಷ್ಟು ವಿವಾದಗಳನ್ನು ಎದುರಿಸಿದ್ದರು. ಈ ಬಗ್ಗೆಯೂ ನಟಿ ಹೇಳಿಕೊಂಡಿದ್ದಾರೆ. ʻʻಬಿರಿಯಾನಿ ಸಿನಿಮಾ ವೇಳೆ ನಾನು ಆ ಸ್ಕ್ರಿಪ್ಟ್‌ಗೆ ಹೊಂದಿಕೆಯಾಗುವುದಿಲ್ಲ ಎಂದು ನಾನು ನಿರ್ದೇಶಕ ಸಜಿನ್‌ಗೆ ಹೇಳಿದ್ದೆ. ಸಜಿನ್ ಹಿಂದುಳಿದ ಮುಸ್ಲಿಂ ಸಮುದಾಯದಿಂದ ಬಂದವರು. ಅವರು ಅವರ ಸ್ಥಾನದಲ್ಲಿಯೇ ಯೋಚಿಸುತ್ತಿದ್ದರು. ಅವರ ರಾಜಕೀಯವನ್ನು ಮಾತ್ರ ಮಾತನಾಡುತ್ತಿದ್ದರುʼʼಎಂದರು.

ಇದನ್ನೂ ಓದಿ: Kendall Jenner: ತಿಂಗಳಲ್ಲಿ ಎರಡು ಬಾರಿ ಟಾಪ್‌ಲೆಸ್‌ ಆದ ಹಾಲಿವುಡ್‌ ಬ್ಯೂಟಿ ಕೆಂಡಲ್‌ ಜೆನ್ನರ್‌!

ಪಾಯಲ್ ನಿರ್ದೇಶನದ ‘ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ (All We Imagine as Light) ಸಿನಿಮಾ ಕಾನ್​ನ ಗ್ರ್ಯಾಂಡ್​ ಪ್ರಿಕ್ಸ್ ಪ್ರೈಜ್ ( Grand Prix At Cannes) ಪಡೆದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ .77ನೇ ಆವೃತ್ತಿಯ ಕಾನ್ ಫಿಲ್ಮ್ಸ್‌ ಫೆಸ್ಟಿವಲ್‌ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿತ್ತು. ಸಿನಿಮಾ ಕಾನ್​ನಲ್ಲಿ ಪ್ರದರ್ಶನವಾದಾಗ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿತ್ತು.

ಆಲ್ ವಿ ಇಮ್ಯಾಜಿನ್ ಆಸ್ ಲೈಟ್’ ಸಿನಿಮಾವು ಮಲಯಾಳಂ-ಹಿಂದಿ ಸಿನಿಮಾ ಆಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳಾಗಿ ಸೇವೆ ಸಲ್ಲಿಸುವ ಇಬ್ಬರು ರೂಮ್‌ಮೇಟ್‌ಗಳ ಕಥೆ ಇದರಲ್ಲಿದೆ. ಚಿತ್ರವು ಮೂರು ವಿಭಿನ್ನ ಮಹಿಳೆಯರ ನಡುವಿನ ಸ್ನೇಹದ ಕತೆ ಕೂಡ ಇದೆ. ಕನಿ ಕುಸರುತಿ ಮುಂದೆ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ನಾಗೇಂದ್ರ ಅವರ ಮಲಯಾಳಂ ಸಿರೀಸ್‌ ಹನಿಮೂನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Continue Reading

ಸ್ಯಾಂಡಲ್ ವುಡ್

Ravichandran Birthday: ಇಂದು ಕನಸುಗಾರನ ಜನುಮದಿನ: ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡ್ತಾರಾ ‘ಕ್ರೇಜಿ ಸ್ಟಾರ್’?

Ravichandran Birthday: ಕ್ರೇಜಿ ಸ್ಟಾರ್‌ ರವಿಚಂದ್ರನ್‌  ಅವರಿಗೆ ಇಂದು ಜನುಮದಿನದ (Ravichandran Birthday) ಸಂಭ್ರಮ. 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಇದೇ ವೇಳೆ ರವಿಚಂದ್ರನ್ ಕೂಡ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಫ್ಯಾನ್ಸ್‌ಗೆ ಅಚ್ಚರಿಯ ಉಡುಗೊರೆಗಳನ್ನು ನೀಡುವುದಕ್ಕೆ ಮುಂದಾಗಿದ್ದಾರೆ. ಸಿನಿಮಾವನ್ನು ಕೂಡ ರವಿಚಂದ್ರನ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ.

VISTARANEWS.COM


on

Ravichandran Birthday will give surprise To Fans
Koo

ಬೆಂಗಳೂರು: ಚಂದನವನದ ಕ್ರೇಜಿ ಸ್ಟಾರ್‌ ರವಿಚಂದ್ರನ್‌  ಅವರಿಗೆ ಇಂದು ಜನುಮದಿನದ (Ravichandran Birthday) ಸಂಭ್ರಮ. 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ಅಭಿಮಾನಿಗಳ ಜತೆ ಬರ್ತ್‌ಡೇ ಸೆಲೆಬ್ರೇಟ್ ಮಾಡಲಿದ್ದಾರೆ ರವಿಚಂದ್ರನ್‌. ರಾಜಾಜಿನಗರದ ನಿವಾಸದಲ್ಲಿ ಆಚರಣೆ ಮಾಡಲಿದ್ದಾರೆ ಫ್ಯಾನ್ಸ್‌. ಹೊಸಕೇರೇಹಳ್ಳಿಯ ಹೊಸ ಫ್ಲಾಟ್‌ಗೆ ಶಿಫ್ಟ್ ಆಗಿದ್ದರಿಂದ ರವಿಚಂದ್ರನ್ ಕುಟುಂಬ 9.30ಕ್ಕೆ ರಾಜಾಜಿನಗರದಲ್ಲಿ ಬರಲಿದೆ ಎಂದು ವರದಿಯಾಗಿದೆ. ಕಳೆದ ವಾರ ರವಿಚಂದ್ರನ್‌ ಅವರ ʻದಿ ಜಡ್ಜ್ ಮೆಂಟ್ʼ ಸಿನಿಮಾ ತೆರೆಕಂಡಿತ್ತು. ಇಂದೇ ರವಿಚಂದ್ರನ್‌ ಅವರ ಹೊಸ ಸಿನಿಮಾ ‘ಪ್ರೇಮಲೋಕ 2’ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಇದರ ಜತೆಗೆ ಮತ್ತೊಂದು ಸಿನಿಮಾವನ್ನು ಕೂಡ ರವಿಚಂದ್ರನ್ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ. ಇದು ಕೂಡ ಅವರೇ ನಿರ್ದೇಶನ ಮಾಡಲಿದ್ದು, ನಟನೆಯನ್ನೂ ಮಾಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾ ಯಾವುದು? ಇದರ ಶೀರ್ಷಿಕೆ ಏನು ಎಂಬುದು ಇನ್ನೂ ಗೌಪ್ಯವಾಗಿ ಇಡಲಾಗಿದೆ.

ಇದನ್ನೂ ಓದಿ: Actor  Ravichandran: ಯಶ್, ದರ್ಶನ್ ವರ್ಷಕ್ಕೆ 3 ಸಿನಿಮಾ ಮಾಡಿಬಿಟ್ರೆ ಕಥೆ ಅಷ್ಟೇ ಎಂದ ರವಿಚಂದ್ರನ್‌!

ಕನಸುಗಾರನ ʻಪ್ರೇಮಲೋಕ 2’ 

ಹಂಪಿ ಉತ್ಸವದ ಸಮಯದಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ (Actor Ravichandran) ಅವರು ಒಂದು ವರ್ಷದಿಂದ ಪ್ರೇಮಲೋಕ ಸಿನಿಮಾಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದರು. ಈ ಮೂಲಕ ‘ಪ್ರೇಮಲೋಕ 2’ ಶೀಘ್ರದಲ್ಲಿಯೇ ಅನೌನ್ಸ್ ಆಗಲಿದೆ ಎಂಬ ಸುಳಿವು ನೀಡಿದ್ದರು. ಶೀಘ್ರದಲ್ಲೇ ಆ ಸಿನಿಮಾ ಸೆಟ್ಟೇರಲಿದೆ. ಪುತ್ರ ಮನೋರಂಜನ್ ಹೀರೊ ಆಗಿ ನಟಿಸಲಿದ್ದಾರೆ. ಸದ್ಯ ರವಿಚಂದ್ರನ್ ‘ಪ್ರೇಮಲೋಕ’-2 ಚಿತ್ರದ ಕಥೆ, ಚಿತ್ರಕಥೆ ಸಿದ್ಧಪಡಿಸುತ್ತಿದ್ದಾರೆ.

ಪ್ರೇಮಲೋಕ’ ಚಿತ್ರಕ್ಕಾಗಿ ಜ್ಯೂಹಿ ಚಾವ್ಲಾ ಕನ್ನಡಕ್ಕೆ ಬಂದಿದ್ದರು. ಆದರೆ ಈ ಬಾರಿ ಮನೋರಂಜನ್ ಜತೆ ಚೆನ್ನೈ ಚೆಲುವೆ ತೇಜು ಅಶ್ವಿನಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ. ಈ ಚಿತ್ರದಲ್ಲಿ 20-25 ಸಾಂಗ್​ಗಳು ಇರಲಿವೆ ಎಂದು ತಂಡ ಹೇಳಿಕೊಂಡಿದೆ.

1987ರಲ್ಲಿ ರಿಲೀಸ್ ಆದ ‘ಪ್ರೇಮಲೋಕ’ ಸಿನಿಮಾ ರವಿಚಂದ್ರನ್ ಅವರೇ ನಿರ್ಮಾಣ ಮಾಡಿ, ನಟಿಸಿ, ನಿರ್ದೇಶನ ಮಾಡಿದ್ದರು. ಅಂದಿನ ಕಾಲಕ್ಕೆ ಈ ಸಿನಿಮಾ ಬರೋಬ್ಬರಿ 11 ಹಾಡುಗಳನ್ನು ಹೊಂದಿತ್ತು. ಈ ಕಾರಣಗಳಿಂದಾಗಿ ಯಾರೋಬ್ಬ ನಿರ್ಮಾಪಕರು ಮುಂದೆ ಬರಲೇ ಇಲ್ಲ. ಹೀಗಾಗಿ ರವಿಚಂದ್ರನ್‌ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ವೇಳೆ ಬೆಂಬಲಕ್ಕೆ ನಿಂತಿದ್ದು ರವಿಚಂದ್ರನ್ ತಂದೆ ವೀರಸ್ವಾಮಿ. ಇದಾದ ಬಳಿಕ ಸಿನಿಮಾ ಗೆಲುವು ಕಂಡಿತ್ತು.

ಕೆಡಿ ಸಿನಿಮಾ

ಸ್ಯಾಂಡಲ್‌ವುಡ್‌ ನಟ, ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಹಾಗೂ ನಿರ್ದೇಶಕ ಪ್ರೇಮ್‌ ಕಾಂಬಿನೇಶನ್‌ ಸಿನಿಮಾ ʻಕೆಡಿ’ಗೆ ಕ್ರೇಜಿ ಸ್ಟಾರ್ ರವಿಚಂದ್ರನ್‌ ಅಭಿನಯಿಸುತ್ತಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ ಈ ಸಿನಿಮಾಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಈಗ ರವಿಚಂದ್ರನ್ `ʻಕೆಡಿ’ ಸಿನಿಮಾದಲ್ಲಿನ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಹಣೆಯಲ್ಲಿ ವಿಭೂತಿ, ಕಪ್ಪು ಶರ್ಟ್ ಮತ್ತು ಫ್ಯಾಂಟ್‌ನಲ್ಲಿ ರವಿಚಂದ್ರನ್ ಖಡಕ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಕಥೆ 1970ರ ದಶಕದಲ್ಲಿ ಸಾಗಲಿದೆ ಎಂದು ಹೇಳಲಾಗುತ್ತಿದೆ. ಟೈಟಲ್‌ ಟೀಸರ್‌ನಲ್ಲಿ ಧ್ರುವ ಸರ್ಜಾ ಮಾಸ್‌ ಆಗಿ ಕಾಣಿಸಿಕೊಂಡಿದ್ದಾರೆ. ‘ಕೆವಿಎನ್​ ಪ್ರೊಡಕ್ಷನ್ಸ್’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಮೂಡಿ ಬರುತ್ತಿದೆ. ಸಿನಿಮಾ ಡಿಸೆಂಬರ್‌ನಲ್ಲಿ ತೆರೆ ಕಾಣುತ್ತಿದೆ.

Continue Reading

ಕಾಲಿವುಡ್

Actor Rajinikanth: ಈ ಬಾರಿಯೂ ಮೋದಿ ಗೆಲ್ಲಬಹುದಾ ಎಂಬ ಪ್ರಶ್ನೆಗೆ ರಜನಿಕಾಂತ್ ಕೊಟ್ಟ ಉತ್ತರ ಏನು?

Actor Rajinikanth ಇತ್ತೀಚೆಗೆ ರಜನಿಕಾಂತ್ ಅವರು ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿದ್ದರು. ಕೆಲವು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್, ನಟ ರಜನಿಕಾಂತ್ ಅವರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ವೆಟ್ಟೈಯನ್ ಚಿತ್ರದ ಶೂಟಿಂಗ್ ಮುಗಿಸಿರು ರಜನಿಕಾಂತ್​ (Rajinikanth) ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಿಶ್ರಾಂತಿ ಪಡೆದಿದ್ದರು. ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಗೋಲ್ಡನ್​ ವೀಸಾ ನೀಡಿದ ಅಬುಧಾಬಿ ಸರ್ಕಾರಕ್ಕೆ ನಟ ರಜನಿಕಾಂತ್​ ಧನ್ಯವಾದ ಕೂಡ ಹೇಳಿದ್ದಾರೆ.

VISTARANEWS.COM


on

Actor Rajinikanth response to political questions is unmissable
Koo

ಬೆಂಗಳೂರು: ಪ್ರತಿ ಚಿತ್ರ ಮುಗಿದ ನಂತರ, ರಜನಿಕಾಂತ್ (Actor Rajinikanth) ಹಿಮಾಲಯದ ಪ್ರವಾಸವನ್ನು ಕೈಗೊಳ್ಳುತ್ತಾರೆ. ನಟ ರಜನಿಕಾಂತ್‌ ಅವರು ಆಗಾಗ ಆಧ್ಯಾತ್ಮಿಕದ ಕಡೆಗೆ ಹೊರಳುವುದನ್ನು ನೋಡಿಯೇ ಇರುತ್ತೀರ. ಭಕ್ತಿ, ದೇವರ ವಿಚಾರದಲ್ಲಿ ಅವರು ಮನಸ್ಸು ಸದಾ ಜಾಗೃತವಾಗಿರುತ್ತದೆ. ಈಗಾಗಲೆ ಹಲವಾರು ಸಲ ಹಿಮಾಲಕ್ಕೆ ಹೋಗಿ ಬಂದಿದ್ದಾರೆ. ಈ ಆಧ್ಯಾತ್ಮಿಕ ಪ್ರವಾಸವನ್ನು ಕೈಗೊಳ್ಳುವ ಸಂಪ್ರದಾಯವನ್ನು ಬಹು ವರ್ಷಗಳಿಂದ ನಟ ಹೊಂದಿದ್ದಾರೆ. ಈ ಹಿಂದೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸಗಳನ್ನು ಮಾಡಿದ್ದ ರಜನಿಕಾಂತ್ ಈಗ ಮತ್ತಷ್ಟು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ. ಈ ವೇಳೆ ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ನಟನಿಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ರಜನಿ ʻʻಯಾವುದೇ ರೀತಿಯ ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿʼʼ ಎಂದು ನಗುತ್ತ ವಿನಂತಿಸಿದ್ದಾರೆ.

ಈ ಹಿಂದೆ ಹಿಮಾಲಯಕ್ಕೆ ಆಧ್ಯಾತ್ಮಿಕ ಪ್ರವಾಸಗಳನ್ನು ಮಾಡಿದ್ದ ರಜನಿಕಾಂತ್ ಈಗ ಮತ್ತಷ್ಟು ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದಾರೆ. ಸೂಪರ್‌ಸ್ಟಾರ್ ಚೆನ್ನೈನಿಂದ ಹೊರಟು ಉತ್ತರಾಖಂಡದ ಡೆಹ್ರಾಡೂನ್‌ಗೆ ಆಗಮಿಸಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಈ ವೇಳೆ ಮಾಧ್ಯಮಗಳು ಲೋಕಸಭಾ ಚುನಾವಣಾ ಫಲಿತಾಂಶಗಳ ಬಗ್ಗೆ ನಟನಿಗೆ ಪ್ರಶ್ನೆ ಕೇಳಿದ್ದಾರೆ. ಈ ವೇಳೆ ರಜನಿ ʻʻಯಾವುದೇ ರೀತಿಯ ರಾಜಕೀಯ ಪ್ರಶ್ನೆಗಳನ್ನು ಕೇಳಬೇಡಿ. “ಅಣ್ಣಾ…ನೋ ಕಮೆಂಟ್ಸ್ ಎಂದು ಅಲ್ಲಿಂದ ಮುಂದೆ ತೆರಳಿದ್ದಾರೆ.

ಇದನ್ನೂ ಓದಿ: Actor Rajinikanth: ಮೊಮ್ಮಗನ ಕ್ರಿಕೆಟ್‌ ಥೀಮ್‌ ಬರ್ತ್‌ಡೇ ಪಾರ್ಟಿಯಲ್ಲಿ ಭಾಗಿಯಾದ ತಲೈವಾ!

ಡೆಹ್ರಾಡೂನ್ ವಿಮಾನ ನಿಲ್ದಾಣದಲ್ಲಿ, ರಜನಿಕಾಂತ್ ತಮ್ಮ ಆಧ್ಯಾತ್ಮಿಕ ಪ್ರವಾಸಗಳ ಬಗ್ಗೆ ಮಾಧ್ಯಮದ ಜತೆ ಮಾತನಾಡಿದರು. “ಪ್ರತಿ ವರ್ಷ ನಾನು ಹೊಸ ಅನುಭವವನ್ನು ಪಡೆಯುತ್ತಿದ್ದೆ, ಅದು ನನ್ನ ಆಧ್ಯಾತ್ಮಿಕ ಪ್ರಯಾಣವನ್ನು ಮತ್ತೆ ಮತ್ತೆ ಮುಂದುವರಿಸುವಂತೆ ಮಾಡಿತು. ಈ ಬಾರಿಯೂ ನಾನು ಹೊಸ ಅನುಭವಗಳನ್ನು ಪಡೆಯುತ್ತೇನೆ ಎಂದು ನಾನು ನಂಬುತ್ತೇನೆ” ಎಂದು ಅವರು ಹೇಳಿದರು.

ರಜನಿಕಾಂತ್ ಅವರು ಆಧ್ಯಾತ್ಮಿಕತೆ ಏಕೆ ಮುಖ್ಯ ಎಂಬುದರ ಕುರಿತು ಮಾತನಾಡಿದರು. “ಇಡೀ ಜಗತ್ತಿಗೆ ಆಧ್ಯಾತ್ಮಿಕತೆಯ ಅಗತ್ಯವಿದೆ, ಏಕೆಂದರೆ ಅದು ಪ್ರತಿಯೊಬ್ಬ ಮನುಷ್ಯನಿಗೂ ಮುಖ್ಯವಾಗಿದೆ. ಆಧ್ಯಾತ್ಮಿಕವಾಗಿರುವುದು ಎಂದರೆ ಶಾಂತಿ ಮತ್ತು ನೆಮ್ಮದಿಯನ್ನು ಅನುಭವಿಸುವುದು ಮತ್ತು ಮೂಲಭೂತವಾಗಿ ಇದು ದೇವರಲ್ಲಿ ನಂಬಿಕೆಯನ್ನು ಒಳಗೊಂಡಿರುತ್ತದೆʼʼಎಂದರು.

ಇತ್ತೀಚೆಗೆ ರಜನಿಕಾಂತ್ ಅವರು ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರಕ್ಕೆ ಭೇಟಿ ನೀಡಿದ್ದರು. ಕೆಲವು ದಿನಗಳ ಹಿಂದೆ ಯುನೈಟೆಡ್ ಅರಬ್ ಎಮಿರೇಟ್ಸ್, ನಟ ರಜನಿಕಾಂತ್ ಅವರಿಗೆ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ. ವೆಟ್ಟೈಯನ್ ಚಿತ್ರದ ಶೂಟಿಂಗ್ ಮುಗಿಸಿರು ರಜನಿಕಾಂತ್​ (Rajinikanth) ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ವಿಶ್ರಾಂತಿ ಪಡೆದಿದ್ದರು. ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ರಜನಿಕಾಂತ್ ಭಾಗವಹಿಸಿದ್ದರು. ಗೋಲ್ಡನ್​ ವೀಸಾ ನೀಡಿದ ಅಬುಧಾಬಿ ಸರ್ಕಾರಕ್ಕೆ ನಟ ರಜನಿಕಾಂತ್​ ಧನ್ಯವಾದ ಕೂಡ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ ರಜನಿಕಾಂತ್ ಅವರು ಟಿಜೆ ಜ್ಞಾನವೇಲ್ ನಿರ್ದೇಶನದ ʻವೆಟ್ಟೈಯಾನ್ʼ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ವೆಟ್ಟೈಯನ್ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್ ಕೂಡ ನಟಿಸಿದ್ದಾರೆ.

ರಜನಿಕಾಂತ್ ಅವರ 170ನೇ ಚಿತ್ರವಾಗಿರುವ ವೆಟ್ಟೈಯಾನ್ ಈ ವರ್ಷದ ಅಕ್ಟೋಬರ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಸೇರಿದಂತೆ ಸಮಗ್ರ ತಾರಾಗಣವಿದೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವೆಟ್ಟೈಯಾನ್ ಸಿನಿಮಾಗೆ ರಾಕ್ ಸ್ಟಾರ್ ಖ್ಯಾತಿಯ ಅನಿರುದ್ಧ್ ರವಿಚಂದರ್ ಸಂಗೀತ, ಎಸ್.ಆರ್. ಕಥಿರ್ ಛಾಯಾಗ್ರಹಣ ಮತ್ತು ಫಿಲೋಮಿನ್ ರಾಜ್ ಸಂಕಲನವಿರಲಿದೆ. ತಿರುವನಂತಪುರಂ, ತಿರುನೆಲ್ವೇಲಿ, ಚೆನ್ನೈ, ಮುಂಬೈ, ಆಂಧ್ರಪ್ರದೇಶ ಮತ್ತು ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣ‌ ನಡೆಸಲಾಗಿದೆ.

Continue Reading

ಸಿನಿಮಾ

Rashmika Mandanna: ಸಮಾರಂಭಗಳಲ್ಲಿ ರಶ್ಮಿಕಾ ಇಂಗ್ಲೀಷ್‌ ಏಕೆ ಮಾತನಾಡಲ್ಲ? ನಟಿ ಕೊಟ್ಟ ಸ್ಪಷ್ಟನೆ ಏನು?

Rashmika Mandanna: ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ `ಗಂ ಗಂ ಗಣೇಶ’ ( Gam Gam Ganesha) ಸಿನಿಮಾದ ಪ್ರಿ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಅವರ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಉತ್ತರವನ್ನೂ ನೀಡಿದ್ದಾರೆ.

VISTARANEWS.COM


on

Rashmika Mandanna shares why she doesn’t speak English
Koo

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚೆಗೆ ಆನಂದ್ ದೇವರಕೊಂಡ ಅವರ ಮುಂಬರುವ ಚಿತ್ರ `ಗಂ ಗಂ ಗಣೇಶ’ ( Gam Gam Ganesha) ಸಿನಿಮಾದ ಪ್ರಿ-ರಿಲೀಸ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಈವೆಂಟ್‌ನ ಅವರ ಕೆಲವು ಫೋಟೊ ಹಾಗೂ ವಿಡಿಯೊಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದೀಗ ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ರಶ್ಮಿಕಾ ಅವರು ಇಂಗ್ಲಿಷ್‌ನಲ್ಲಿ ಮಾತನಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ರಶ್ಮಿಕಾ ಉತ್ತರವನ್ನೂ ನೀಡಿದ್ದಾರೆ.

ರಶ್ಮಿಕಾ ಫ್ಯಾನ್ಸ್‌ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ ʻʻನೀವು ಇಂಗ್ಲಿಷ್‌ನಲ್ಲಿ ಮಾತನಾಡಲು ವಿನಂತಿ. ಇಂದು ನೀವು ಈವೆಂಟ್‌ನಲ್ಲಿ ತುಂಬ ಸುಂದರವಾಗಿ ಕಾಣುತ್ತೀದ್ದೀರಿ. ನಿಮ್ಮನ್ನು ನೋಡಿ ನಮಗೆ ತುಂಬಾ ಸಂತೋಷವಾಯಿತು, ಆದರೆ ನಾವು ನಿಮ್ಮನ್ನು ನೋಡಿ ಆನಂದಿಸುವಷ್ಟು ನಿಮ್ಮ ಮಾತುಗಳನ್ನು ಕೇಳಿಯೂ ಖುಷಿ ಪಡುತ್ತೇವೆ. ಆದರೆ, ನೀವು ತೆಲುಗಿನಲ್ಲಿ ಮಾತನಾಡುವುದನ್ನು ಮುಂದುವರಿಸಿದ್ದೀರಿ, ಅದು ನಮಗೆ ಅರ್ಥವಾಗಲಿಲ್ಲ. ಒಂದು ವೇಳೆ ನಾರ್ಥ್‌ ಸೈಡ್‌ ನಿಮಗೆ ಅಭಿಮಾನಿಗಳಿದ್ದರೆ, ಅವರೂ ನಿಮ್ಮ ಮಾತನ್ನು ಕೇಳಲು ಇಷ್ಟಪಡುತ್ತಾರೆ ಎಂದು ನೀವು ಭಾವಿಸುವುದಿಲ್ಲವೇ? ನೀವು ಇಂಗ್ಲಿಷ್‌ನಲ್ಲಿ ಮಾತನಾಡಿದರೆ, ಹೆಚ್ಚಿನ ಜನರು ನಿಮ್ಮನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ, ನಾರ್ಥ್‌ ಮತ್ರವಲ್ಲ ಕನ್ನಡ, ತಮಿಳು ಅಥವಾ ಮಲಯಾಳಂ ಮಾತನಾಡುವವರೂ ಸಹ ಅರ್ಥ ಮಾಡಿಕೊಳ್ಳಲು ಬಯಸುತ್ತಾರೆ. ಇಂಗ್ಲೀಷ್‌ನಲ್ಲಿ ಮಾತನಾಡಿ ಎಂಬುದೇ ನಮ್ಮ ವಿನಂತಿʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

ಈ ಪೋಸ್ಟ್‌ಗೆ ರಶ್ಮಿಕಾ ಎಕ್ಸ್‌ ಮೂಲಕ ಹೀಗೆ ಬರೆದುಕೊಂಡಿದ್ದಾರೆ ʻʻನಾನು ಇಂಗ್ಲಿಷ್‌ನಲ್ಲಿ ಮಾತನಾಡಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ. ನೀವು ಎಲ್ಲಿಂದಲೇ ಬಂದಿದ್ದರೂ ಸಹ ಅರ್ಥ ಮಾಡಿಸಲು ಪ್ರಯತ್ನಿಸುತ್ತೇನೆ. ಆದರೆ ಅನೇಕ ಜನರು ಅವರ ಭಾಷೆಗಳಲ್ಲಿ ಮಾತನಾಡಬೇಕೆಂದು ಬಯಸುತ್ತಾರೆ. ಆಗ ನಾನು ಭಾಷೆಯ ಬಗ್ಗೆ ಅಗೌರವ ತೋರುತ್ತೇನೆ ಅಥವಾ ನನಗೆ ಭಾಷೆ ತಿಳಿದಿಲ್ಲ ಎಂದು ಭಾವಿಸುತ್ತಾರೆ. ಹೀಗಾಗಿ ನನ್ನ ನನ್ನ ಕೈಲಾದಷ್ಟು ಪ್ರಯತ್ನಿಸುವೆʼʼಎಂದು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಅವರು, ‘ರೇನ್ಬೋ, ‘ಡಿ 51’, ‘ಛಾವಾ’, ‘ಪುಷ್ಪ: ದಿ ರೂಲ್’, ಮತ್ತು ರವಿತೇಜಾ ಅವರೊಂದಿಗೆ ಹೆಸರಿಡದ ಚಿತ್ರದಲ್ಲಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಶೀಘ್ರದಲ್ಲೇ ಚಿತ್ರಕ್ಕಾಗಿ ಮತ್ತೆ ಒಂದಾಗುತ್ತಾರೆ ಎಂದು ವದಂತಿಗಳಿವೆ. ಹಿಂದಿಯಲ್ಲಿ, ಅವರು ಸಲ್ಮಾನ್ ಖಾನ್ ಅವರೊಂದಿಗೆ ಸಿಕಂದರ್ ಮತ್ತು ವಿಕ್ಕಿ ಕೌಶಲ್ ಅವರೊಂದಿಗೆ ಛಾವಾದಲ್ಲಿ ನಟಿಸಲಿದ್ದಾರೆ. ತೆಲುಗಿನಲ್ಲಿ, ಅವರು ಅಲ್ಲು ಅರ್ಜುನ್ ಜೊತೆ ಪುಷ್ಪ: ದಿ ರೂಲ್, ಧನುಷ್ ಜೊತೆ ಕುಬೇರ, ದಿ ಗರ್ಲ್‌ಫ್ರೆಂಡ್ ಮತ್ತು ರೇನ್‌ಬೋ ಚಿತ್ರಗಳಲ್ಲಿ ನಟಿಸಲಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ಸಲ್ಮಾನ್ ಖಾನ್ (Salman Khan) ಅವರ ಹೊಸ ಪ್ರಾಜೆಕ್ಟ್ ʻಸಿಕಂದರ್ʼ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಲಿದ್ದಾರೆ. ಇದು ರಶ್ಮಿಕಾ ಅವರ ನಾಲ್ಕನೇ ಬಾಲಿವುಡ್ ಚಿತ್ರ. ಈ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ.

ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗುತ್ತಿದೆ. ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದರು. ಮುರುಗದಾಸ್ ಅವರು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ರಶ್ಮಿಕಾ ಮುಂದೆ ಪುಷ್ಪಾ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 15ರಂದು ಸಿನಿಮಾ ಬಿಡುಗಡೆಯಾಗಲಿದೆ.

Continue Reading
Advertisement
Lok Sabha Election 2024
ದೇಶ33 seconds ago

Lok Sabha Election 2024: ಎಕ್ಸಿಟ್‌ ಪೋಲ್‌ ಬಗ್ಗೆ ನಿಮಗೆಷ್ಟು ಗೊತ್ತು? ಅದನ್ನು ನಡೆಸುವವರು ಯಾರು? ಹೇಗಿರುತ್ತೆ ಪ್ರಕ್ರಿಯೆ?

All We Imagine As Light actor rejected audition call by The Kerala Story
ಮಾಲಿವುಡ್8 mins ago

All We Imagine As Light: ʻದಿ ಕೇರಳ ಸ್ಟೋರಿʼ ಸಿನಿಮಾ ಆಡಿಷನ್‌ ರಿಜೆಕ್ಟ್‌ ಮಾಡಿದ್ರಂತೆ ಕಾನ್‌ ಪ್ರಶಸ್ತಿ ವಿಜೇತೆ!

IND vs PAK
ಕ್ರೀಡೆ9 mins ago

IND vs PAK: ಉಗ್ರರಿಂದ ‘ಒಂಟಿ ತೋಳ’ ದಾಳಿ ಬೆದರಿಕೆ; ಭಾರತ-ಪಾಕ್​ ಪಂದ್ಯಕ್ಕೆ ಭಾರೀ ಭದ್ರತಾ ವ್ಯವಸ್ಥೆ

Prajwal Revanna Case
ಪ್ರಮುಖ ಸುದ್ದಿ32 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಆಗಮನಕ್ಕೆ ಕೌಂಟ್‌ಡೌನ್‌, ವಿಮಾನ ಏರ್ತಾರಾ ಇಲ್ವಾ?

Viral Video
ಕ್ರೀಡೆ42 mins ago

Viral Video: ಜಡಿ ಮಳೆಗೆ ಒದ್ದೆಯಾಗುತ್ತಲೇ ಓಡೋಡಿ ಬಂದು ಕಾರು ಹತ್ತಿದ ರೋಹಿತ್​, ದ್ರಾವಿಡ್​

Lok Sabha Election
Lok Sabha Election 20241 hour ago

Lok Sabha Election: ಫಲೋಡಿ ಸಟ್ಟಾ ಬಜಾರ್ ಲೇಟೆಸ್ಟ್ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಒಕ್ಕೂಟಕ್ಕೆ ಬರುವ ಸೀಟೆಷ್ಟು?

Ravichandran Birthday will give surprise To Fans
ಸ್ಯಾಂಡಲ್ ವುಡ್1 hour ago

Ravichandran Birthday: ಇಂದು ಕನಸುಗಾರನ ಜನುಮದಿನ: ಫ್ಯಾನ್ಸ್‌ಗೆ ಸರ್‌ಪ್ರೈಸ್‌ ಕೊಡ್ತಾರಾ ‘ಕ್ರೇಜಿ ಸ್ಟಾರ್’?

Norway Chess
ಕ್ರೀಡೆ1 hour ago

Norway Chess: ವಿಶ್ವ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್​ಗೆ ಸೋಲುಣಿಸಿದ ಪ್ರಜ್ಞಾನಂದ

Viral Video
ವೈರಲ್ ನ್ಯೂಸ್1 hour ago

Viral Video: ಬಾಯ್‌ಫ್ರೆಂಡನ್ನು ಹೆದರಿಸಲು ರೈಲ್ವೇ ಟ್ರ್ಯಾಕ್‌ಗೆ ಇಳಿದಳು.. ಆಮೇಲೆ ಆಗಿದ್ದೇ ಬೇರೆ! ಶಾಕಿಂಗ್‌ ವಿಡಿಯೋ ನೋಡಿ

Viral Video
ವೈರಲ್ ನ್ಯೂಸ್2 hours ago

Viral Video: ಮುಂಬೈನ ಚಕಾಚಕ್‌ ʻರಜನೀಕಾಂತ್‌ʼ ಶೈಲಿಯ ದೋಸೆ ಈಗ ವೈರಲ್!‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ2 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ3 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ4 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು4 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌