World Breastfeeding Week: ಮಗುವಿಗೆ ತಾಯಿಯ ಎದೆ ಹಾಲೇ ಅಮೃತ! ಇದುವೇ ಮಗುವಿನ ಆರೋಗ್ಯದ ಗುಟ್ಟು - Vistara News

ಆರೋಗ್ಯ

World Breastfeeding Week: ಮಗುವಿಗೆ ತಾಯಿಯ ಎದೆ ಹಾಲೇ ಅಮೃತ! ಇದುವೇ ಮಗುವಿನ ಆರೋಗ್ಯದ ಗುಟ್ಟು

World Breastfeeding Week: ಪ್ರತಿ ವರ್ಷವು ಆಗಸ್ಟ್ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತದೆ. ಆ ಮೂಲಕ ಮಗು ಆರೋಗ್ಯವಾಗಿ ಬೆಳೆಯಲು ತಾಯಿಯ ಎದೆ ಹಾಲು ಎಷ್ಟು ಮುಖ್ಯ ಎಂಬುದನ್ನು ಮನದಟ್ಟು ಮಾಡಲಾಗುತ್ತದೆ.

VISTARANEWS.COM


on

World Breastfeeding Week
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

-ಡಾ. ಶಿವಕುಮಾರ. ಹೆಚ್.ಸಿ. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು, ಅಧ್ಯಕ್ಷರು, ಬಳ್ಳಾರಿ ಸ್ತ್ರೀರೋಗ ಸಂಘ ಸಹ ಪ್ರಾಧ್ಯಾಪಕರು, ವಿಮ್ಸ್‌, ಬಳ್ಳಾರಿ.
ಗಸ್ಟ್‌ ಮೊದಲ ವಾರವನ್ನು ವಿಶ್ವ ಸ್ತನ್ಯಪಾನ ದಿನಾಚರಣೆಯನ್ನು (World Breastfeeding Week) ಮಾಡಲಾಗುತ್ತದೆ. ಇದರ ಉದ್ದೇಶ ಪ್ರತಿಯೊಬ್ಬರಿಗೂ ಎದೆ ಹಾಲು ಉಣಿಸುವ ಅವಶ್ಯಕತೆಯನ್ನು ತಿಳಿಸುವುದಾಗಿದೆ. ಸ್ತನಪಾನವಿಲ್ಲದಿದ್ದರೆ ಮನುಷ್ಯನ ಉಳಿವು ಸಾಧ್ಯವಾಗುತ್ತಿರಲಿಲ್ಲ. ಇದು ಮಗು ಒಂದು ಉತ್ತಮ ಜೀವನ ಆರಂಭ ಮಾಡಲು ತಾಯಿಯ ಕೊಡುಗೆಯಾಗಿದೆ(Healthy Child). ಇದರೊಂದಿಗೆ ಇದು ತಾಯಿಯ ಆರೋಗ್ಯ ಚನ್ನಾಗಿರಲು ಸಹಕಾರಿಯಾಗಿರುವುದಲ್ಲದೇ ಉತ್ತಮ ಮಗು ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತದೆ. ಎದೆ ಹಾಲು ಅಮೃತಕ್ಕೆ ಸಮನಾಗಿದ್ದು, ಭಾರತ ಸಕಾ೯ರವು (Indian Government) ಮಗು ಹುಟ್ಟಿದ 1 ಗಂಟೆಯೊಳಗೆ ತಾಯಿ ಎದೆ ಹಾಲು ಉಣಿಸಬೇಕು ಮೊದಲ 6 ತಿಂಗಳು ಎದೆ ಹಾಲು ಬಿಟ್ಟು ಬೇರೆ ಯಾವುದೇ ಆಹಾರವನ್ನು ಮಗುವಿಗೆ ನೀಡಬಾರದೆಂದು ಉತ್ತೇಜಿಸುತ್ತದೆ. 6 ತಿಂಗಳ ನಂತರ ಪೂರಕ ಆಹಾರದೊಂದಿಗೆ 2 ವಷ೯ಗಳವರೆಗೆ ಎದೆ ಹಾಲು ಉಣಿಸಲು ಉತ್ತೇಜಿಸುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯ ಪ್ರಕಾರ ಕೇವಲ 40% ತಾಯಂದಿರು ಮಗು ಹುಟ್ಟಿದ 1 ಗಂಟೆಯೊಳಗೆ ಎದೆ ಹಾಲು ಉಣಿಸುತ್ತಾರೆ. ಕೇವಲ 33% ತಾಯಂದಿರು ಮಾತ್ರವೆ ಮೊದಲ ಆರು ತಿಂಗಳಲ್ಲಿ ಎದೆ ಹಾಲನ್ನು ಮಾತ್ರ ಉಣಿಸುತ್ತಾರೆ. 66% ತಾಯಂದಿರುವ ಎದೆ ಹಾಲು ಉಣಿಸುವುದಿಲ್ಲ ಅಥವಾ ಎದೆಹಾಲಿನೊಂದಿಗೆ ಕೃತಕ ಹಾಲನ್ನು ಮೊದಲ ಆರು ತಿಂಗಳಲ್ಲಿ ಉಣಿಸುತ್ತಾರೆ. ಇದು ಅತ್ಯಂತ ಕಳವಳಿಯಾದ ವಿಷಯ.

ಎದೆ ಹಾಲು ಉಣಿಸದಿರಲು ಕಾರಣಗಳೆಂದರೆ….

  1. ಸಂಪೂಣ೯ ಮಾಹಿತಿ ಇರುವುದಿಲ್ಲ.
  2. ಎದೆ ಹಾಲು ಉಣಿಸುವ ತೊಂದರೆಗಳು.
  3. ಉದ್ಯೋಗಕ್ಕೆ ಹೋಗುವುದರಿಂದ ಯಾರು ಸಹಾಯ ಮಾಡಲು ಇಲ್ಲದಿರುವುದು.
  4. ಆರೋಗ್ಯ ಕಾಯ೯ಕತ೯ರು ಎದೆ ಹಾಲು ಉಣಿಸಲು ಪ್ರೋತ್ಸಾಹಿಸದಿರುವುದು.

ಎದೆ ಹಾಲಿನ ಸಂಪೂಣ೯ ಮಾಹಿತಿ ಇಲ್ಲಿದೆ…

ಎದೆ ಹಾಲು ಒಂದು ಸಂಪೂಣ೯ ಆಹಾರವಾಗಿದ್ದು ಅಮೃತಕ್ಕೆ ಸಮಾನ. ತಾಯಿಯ ಎದೆ ಹಾಲು ಮೊದಲ ದಿನ ಹಳದಿ ಬಣ್ಣವಿದ್ದು ಅದನ್ನು ಕುಡಿಸಬಾರದೆಂದು ಬಹಳ ಜನರಲ್ಲಿ ತಪ್ಪು ಕಲ್ಪನೆ ಇದೆ. ಆದರೆ ಮೊದಲ ದಿನದ ಈ ಹಳದಿ ಬಣ್ಣದ ಹಾಲು ಅತಿ ಪೌಷ್ಟಿಕಾಂಶ ಹೊಂದಿದ್ದು ರೋಗ ನಿರೋಧಕ ಶಕ್ತಿ ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ಮಗುವಿಗೆ ರೋಗಗಳೊಡನೆ ಹೋರಾಡಲು ಸಹಾಯವಾಗುತ್ತದೆ. ತಾಯಿಯ ಎದೆಹಾಲಿನಲ್ಲಿ ಎಲ್ಲಾ ಪೋಷಕಾಂಶಗಳು ಸರಿಯಾದ ಪ್ರಮಾಣದಲ್ಲಿದ್ದು ಮೊದಲ ಆರು ತಿಂಗಳು ತಾಯಿಯ ಎದೆ ಹಾಲು ಬಿಟ್ಟು ಬೇರೆ ಯಾವುದೇ ಆಹಾರದ ಅವಶ್ಯಕತೆ ಇರುವುದಿಲ್ಲ. ಬೇಸಿಗೆಯಲ್ಲಿ ಸರಿಯಾಗಿ ಎದೆ ಹಾಲು ಉಣಿಸಿದ ಮಗುವಿಗೆ ನೀರಿನ ಅವಶ್ಯಕತೆಯು ಇರುವುದಿಲ್ಲ.

ಎದೆ ಹಾಲುಣಿಸುವುದರಿಂದ ಆಗುವ ಉಪಯೋಗಗಳು?

  1. ಮಗುವಿಗೆ: ಶ್ವಾಶಕೋಶ, ಜಾಂಡೀಸ್‌, ಆಸ್ತಮ, ಅಲಜಿ೯, ಬೊಜ್ಜು, ರಕ್ತಕ್ಯಾನ್ಸರ್‌ನಿಂದ ರಕ್ಷಣೆ, ಸ್ತನಪಾನ ಮಾಡಿದ ಮಕ್ಕಳು ಬುದ್ಧಿವಂತರಾಗಿರುತ್ತಾರೆ. ಇವರಿಗೆ ಸ್ಥೂಲಕಾಯ, ಮಧುಮೇಹ ತೊಂದರೆ ಬರುವುದಿಲ್ಲ.
  2. ತಾಯಿಗೆ: ತಾಯಿ ಮಗು ಬಾಂಧವ್ಯ ಹೆಚ್ಚುತ್ತದೆ, ಮುಂದಿನ ಗಭಾ೯ವಸ್ಥೆಯನ್ನು ತಡೆಯುತ್ತದೆ. ದೇಹದ ತೂಕ ಸಾಮಾನ್ಯ ಸ್ಥಿತಿಗೆ ಬರುತ್ತದೆ. ರಕ್ತ ಹೀನತೆ, ಮೂಳೆಗಳ ತೊಂದರೆ, ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್‌ ಬರುವುದನ್ನು ತಡೆಗಟ್ಟುತ್ತದೆ.
  3. ಸಮಾಜ ಮತ್ತು ಕುಟುಂಬಕ್ಕೆ: ತಾಯಿ ಮತ್ತು ಶಿಶುವಿನ ಮರಣ ಪ್ರಮಾಣ ಕಡಿಮೆ ಮಾಡುತ್ತದೆ. ಪೂರಕ ಆಹಾರಕ್ಕೆ ವ್ಯಯಿಸುವ ಹಣ ಉಳಿಸುತ್ತದೆ. ಮುಂದಿನ ಪೀಳಿಗೆಗೆ ಆರೋಗ್ಯವಂತ ಪ್ರಜೆಯನ್ನು ನೀಡುತ್ತದೆ.

ಎದೆ ಹಾಲು ಹೆಚ್ಚಿಸಲು ತಾಯಂದಿರು ಏನ ಮಾಡಬೇಕು?

ಬಾಣಂತಿಯರು ಪತ್ಯೆ ಮಾಡಬೇಕು ಎಂಬ ಮೂಡ ನಂಬಿಕೆಗೆ ಹೋಗದೆ, ಎದೆ ಹಾಲು ಹೆಚ್ಚಿಸಲು
ಹಾಲು, ಕಪ್ಪು ಎಳ್ಳು, ಸಬ್ಬಸಿಗೆ ಸೊಪ್ಪು, ರಾಗಿ, ಸೊಂಪುಕಾಳು, ಮೆಂತ್ಯ ಸೊಪ್ಪು, ಜೋಳ, ಜೀರಿಗೆ, ಪಾಲಾಕ್‌ ಸೊಪ್ಪು, ಅಗಸೆ ಬೀಜ, ಗಸಗಸೆ, ಬಸ್ಲೆ ಸೊಪ್ಪು, ಮೆಂತ್ಯೆ ಬಳಸಬೇಕು. ಅಲ್ಲದೇ, ಬೆಳುಳ್ಳಿ, ಬಾದಾಮಿ,
ಮೀನು, ಶುಂಠಿ, ಗೋಡಂಬಿ, ಮೊಟ್ಟೆ, ಗೆಣಸು, ಖಜೂ೯ರ, ಕೋಳಿ ಮಾಂಸ, ತೆಂಗಿನ ಕಾಯಿ, ಪರಂಗಿಹಣ್ಣು ಸೇವಿಸಬಹುದು.

ಅತಿಯಾದ ಎಣ್ಣೆ ಮತ್ತು ಖಾರದ ಆಹಾರವನ್ನು ಸೇವಿಸಬಾರದು ಮಧ್ಯಪಾನ ಮತ್ತು ದೂಮಪಾನ ಮಾಡಬಾರದು ಇಂತಹ ಅಮೂಲ್ಯವಾದ ಎದೆ ಹಾಲು ಮಗುವಿನ ಹಕ್ಕು ಮತ್ತು ಇದನ್ನು ಕುಡಿಸುವುದು ತಾಯಿಯ ಕತ೯ವ್ಯ.

ಈ ಸ್ತನಪಾನ ಮಾಡಲು ಆರೋಗ್ಯ ವ್ಯವಸ್ಥೆ ಮತ್ತು ಸಮುದಾಯದ ಹಸ್ತಕ್ಷೇಪ ಅತಿ ಅವಶ್ಯಕ. ಇದರ ಮಹತ್ವವನ್ನು ತಾಯಿಗೆ ವೈಯಕ್ತಿಕ ಸಮಾಲೋಚನೆ, ಗುಂಪು ಸಮಾಲೋಚನೆ ಮತ್ತು ಕುಟುಂಬದವರಿಗೆ ಇದರ ಮಹತ್ವ ತಿಳಿಸಿ ತಾಯಂದಿರನ್ನು ಹಾಲುಣಿಸಲು ಬೆಂಬಲಿಸ ಬೇಕಾಗಿದೆ. ಕುಟುಂಬದ ಸದಸ್ಯರು ಇದರ ಮಹತ್ವ ತಿಳಿದರೆ ಅವರು ತಾಯಿಗೆ ಹಾಲುಣಿಸಲು ಪ್ರೋತ್ಸಾಹಿಸುತ್ತಾರೆ. ಪ್ರಸವದ ನಂತರ ಸ್ತನಪಾನಕ್ಕೆ ಬೆಂಬಲ ನೀಡುವುದು ಆರೋಗ್ಯ ಕಾಯ೯ಕತ೯ರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಂದು ಹೆರಿಗೆ ಆಸ್ಪತ್ರೆಯು Baby Friendly Hospital Initiative ಪಾಲಿಸಿ ಅನುಸರಿಸಬೇಕಾಗಿದೆ. ಸ್ತನಪಾನದ ಬಗ್ಗೆ ಸಾಮಾನ್ಯ ಜನರಿಗೆ ಅಥ೯ವಾಗುವ ಬಗ್ಗೆ ಬರೆದು ಫಲಕ ಹಾಕಬೇಕು. ಪ್ರತಿಯೊಬ್ಬ ಆರೋಗ್ಯ ಕಾಯ೯ಕತ೯ರು ಸ್ತನಪಾನ ಪ್ರೋತ್ಸಾಹಿಸುವ ಕೌಶಲ್ಯ ತರಬೇತಿ ಹೊಂದಿರಬೇಕು. ತಾಯಿ ಮತ್ತು ಮಗುವನ್ನು ಚಮ೯ಕ್ಕೆ ಚಮ೯ ಹೊಂದಿಕೊಳ್ಳುವಂತೆ ಮಲಗಿಸಿ ಹುಟ್ಟಿದ ಮೊದಲ ಒಂದು ಗಂಟೆಯೊಳಗೆ ಹಾಲುಣಿಸುವಂತೆ ನೋಡಿಕೊಳ್ಳಬೇಕು. ದಿನದ 24 ಗಂಟೆಗಳು ತಾಯಿ ಮತ್ತು ಮಗು ಜೊತೆಗಿರಬೇಕು ಯಾವುದೇ ಕಾರಣಕ್ಕೂ ಮೊದಲ ಆರು ತಿಂಗಳು ಕೃತಕ ಆಹಾರ ನೀಡಬಾರದು.

ಸ್ತನಪಾನವನ್ನು ಉತ್ತೇಜಿಸಲು ಸಕಾ೯ರದ ಕೊಡುಗೆಗಳು

  1. ತಾಯ್ತನದ ರಜೆ/ಪಿತೃತ್ವ ರಜೆ.
  2. ಸಾವ೯ಜನಿಕ ಸ್ಥಳದಲ್ಲಿ ಎದೆಹಾಲುಣಿಸಲು ಶಾಸನಬದ್ದವಾಗಿ ಪ್ರೋತ್ಸಾಹಿಸಿದೆ.
  3. ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ.
  4. ರಾಷ್ಟ್ರೀಯ ಪೋಷಣ ಅಭಿಯಾನ

ಸ್ತನಪಾನ ಮಾಡುವಾಗ ಮತ್ತು ಸ್ತನಪಾನ ಯಶಸ್ಸಾಗಲು ತಾಯಿಯು ಪ್ರತಿದಿನ ಸ್ನಾನ ಮಾಡಿ, ಮೊಲೆಯನ್ನು ಸ್ವಚ್ಚಗೊಳಿಸಿ ಹಾಲುಣಿಸಲು ಶಾಂತವಾದ ಸ್ಥಳವನ್ನು ಆಯ್ಕೆಮಾಡಿ ಯಾವಾಗಲು ಸಂತೋಷದಿಂದ, ಮಗುವಿನ ಬಗ್ಗೆ ಯೋಚಿಸುತ್ತ ಮಗು ಮಾಡುವ ಶಬ್ದ ಕೇಳಿಸಿಕೊಳ್ಳುತ್ತಾ ಮಗುವನ್ನು ಗಮನಿಸುತ್ತಾ ಆತ್ಮವಿಶ್ವಾಸದಿಂದ ಹಾಲುಣಿಸಬೇಕು. ತಾಯಿಯ ಚಿಂತೆ, ಒತ್ತಡ, ಭಯ, ನೋವು ಮತ್ತು ಆತ್ಮವಿಶ್ವಾಸದ ಕೊರತೆಯಿಂದಿದ್ದಲ್ಲಿ ಎದೆಹಾಲು ಉತ್ಪತ್ತಿ ಕಡಿಮೆಯಾಗುವುದು.

ಇಂತಹ ಮನಸ್ಥಿತಿಯನ್ನು ಹೋಗಲಾಡಿಸಿ, ಪ್ರಶಾಂತ ಮನಸ್ಥಿತಿಯಲ್ಲಿ ಹಾಲುಣಿಸುವ ತಾಯಂದಿರು ಮೊಲೆಗೆ ಮಗುವಿನ ಬಾಯಿಯನ್ನು ಸರಿಯಾಗಿ ಅಂಟಿಸುವುದು ಸ್ತನಪಾನ ಯಶಸ್ವಿಯಾಗಲು ತುಂಬಾ ಅವಶ್ಯಕ. ಇದಕ್ಕೆ ಮಗು ಬಾಯಿಯನ್ನು ಅಗಲಮಾಡಿ ಕೆಳತುಟಿಯನ್ನು ಹೊರಗೆ ತಿರುಗಿಸಿ, ಗಲ್ಲವನು ಸ್ತನಕ್ಕೆ ಸ್ಪಷಿ೯ಸಿ ಸ್ತನದ ಕಪ್ಪು ಭಾಗವನ್ನು ಮಗುವಿನ ಬಾಯಿಯ ಒಳಗೆ ಇರಿಸಬೇಕು. ಇದು ಮಗುವು ಎದೆ ಹಾಲನ್ನು ನುಂಗಲು ಮತ್ತು ಹೀರಲು ಸಹಾಯ ಮಾಡುತ್ತದೆ. ಇದರಿಂದ ತಾಯಿಗೆ ಯಾವುದೇ ರೀತಿಯ ನೋವು ಉಂಟಾಗುವುದಿಲ್ಲ.

ಮೊಲೆಗೆ ಮಗುವಿನ ಬಾಯಿ ಸರಿಯಾಗಿ ಅಂಟಿಸದಿದ್ದಲ್ಲಿ ತೊಟ್ಟುಗಳು ಕೆಂಪಾಗುವುದು ನೋವಿನಿಂದ ಕೂಡುವುದು, ಸ್ತನ ಗಟ್ಟಿಯಾಗುವುದು ಮತ್ತು ಮಗು ಹೀರಿಕೆಯನ್ನು ನಿರಾಕರಿಸುವುದು.

ಎದೆಹಾಲು ಕುಡಿಸಿದ ನಂತರ ತಾಯಿ ಮಗುವಿನ ಬೆನ್ನನ್ನು ತಟ್ಟಬೇಕು, ಬೆರಳಿಗೆ ಶುಚಿಯಾದ ಬಟ್ಟೆ ಸುತ್ತಿಕೊಂಡು ಮಗುವಿನ ವಸಡನ್ನು ಒರೆಸಬೇಕು ಇದರಿಂದ ಮಗುವಿಗೆ ಯಾವುದೇ ಸೊಂಕು ಅಥವಾ ರೋಗಗಗಳು ಬರುವುದಿಲ್ಲ.

ಎದೆ ಹಾಲನ್ನು ಮಗು ಬಯಸುವಷ್ಟು ಸಲ ಅಥವಾ ಕನಿಷ್ಟ ದಿನಕ್ಕೆ 8-12 ಸಲ ನೀಡಬೇಕು, ಹೆಚ್ಚುಸಲ ಹಾಲು ಕುಡಿಸಿದಲ್ಲಿ ಹೆಚ್ಚು ಹಾಲು ಉತ್ಪತ್ತಿಯಾಗುತ್ತದೆ. ಎದೆ ಹಾಲು ಸಮಪ೯ಕವಾದ ಸೂಚನೆಗಳು. ಎದೆ ಹಾಲಿನ ನಂತರ ಮಗು 2-3 ತಾಸು ಮಲಗುತ್ತದೆ. ದಿನಕ್ಕೆ 6-8 ಬಾರಿ ಬಟ್ಟೆ ಒದ್ದೆ ಮಾಡುತ್ತದೆ. ತೊಂದರೆಯಿಲ್ಲದೆ ಸಾಮಾನ್ಯವಾಗಿ ಮಲವನ್ನು ವಿಸಜ೯ನೆ ಮಾಡುತ್ತದೆ. ಮಗುವು ಕ್ರಿಯಾಶೀಲವಾಗಿರುತ್ತದೆ.

ಕೆಲವು ಮಕ್ಕಳಲ್ಲಿ ಸೀಳುತುಟಿ, ಕಡಿಮೆ ತೂಕದ ಮಕ್ಕಳು ಮತ್ತು ಕೆಲಸ ಮಾಡುವ ಮಹಿಳೆಯರು ಎದೆ ಹಾಲು ಉಣಿಸಲು ಆಗುವುದಿಲ್ಲ. ಇಂತಹ ಸಂದಭ೯ದಲ್ಲಿ ಎದೆ ಹಾಲು ಹೊರತೆಗೆದು ಸಂಗ್ರಹಿಸಿಟ್ಟು ಮಗುವಿಗೆ ಕಾಲ ಕಾಲಕ್ಕೆ ಉಣಿಸಬಹುದು. ಹೀಗೆ ತೆಗೆದ ಎದೆ ಹಾಲನ್ನು ಕೊಠಡಿಯ ಉಷ್ಣತೆಯಲ್ಲಿ 8 ಗಂಟೆಗಳು ಮತ್ತು ರೆಫ್ರಿಜರೇಟರ್‌ನಲ್ಲಿ 24 ಗಂಟೆಗಳು ಶೇಖರಿಸಬಹುದು.

ಎದೆ ಹಾಲುಣಿಸುವ ಮಹಿಳೆಯರಲ್ಲಿ ಕೆಲವು ವೇಳೆ ಒಳ ತಿರುಗಿದೆ, ತೊಟ್ಟುಗಳು ಕೀವು ತೊಟ್ಟು, ಊತವಾದ ಸ್ತನಗಳು ಸ್ತನದ ಸೊಂಕು ಉಂಟಾಗುವವು. ಇಂತಹ ಸಮಯದಲ್ಲಿ ವೈದ್ಯರನ್ನು ಸಂಪಕಿ೯ಸಿ ಸೂಕ್ತ ಚಿಕಿತ್ಸೆ ಮಾಡಿಸಬೇಕು.

ವಿಶ್ವ ಆರೋಗ್ಯ ಸಂಸ್ಥೆಯು ಸ್ತನಪಾನವನ್ನು ಒಂದು ಉತ್ತಮ ಆಹಾರವೆಂದು ಉತ್ತೇಜಿಸುತ್ತದೆ ಮತ್ತು ಹುಟ್ಟಿದ ಮೊದಲ ಆರು ತಿಂಗಳು ತಾಯಿಯು ಎದೆಯ ಹಾಲನ್ನು ಮಾತ್ರ ಕುಡಿಸಬೇಕು ಎಂದು ಉತ್ತೇಜಿಸುತ್ತಿದೆ. ಹುಟ್ಟಿದ ಮೊದಲ 6 ತಿಂಗಳಲ್ಲಿ ಕೇವಲ ಎದೆ ಹಾಲನ್ನು ಮಾತ್ರ ಕುಡಿಸುವ ತಾಯಂದಿರ ಸಂಖ್ಯೆಯನ್ನು 2025ರೊಳಗೆ 50%ಗಿಂತ ಹೆಚ್ಚಾಗಿಸಲು ಪ್ರಯತ್ನಿಸುತ್ತಿದೆ.

ಈ ಸುದ್ದಿಯನ್ನೂ ಓದಿ: Breast Feeding Awareness | ಸ್ತನ್ಯಪಾನ ತಾಯಿ ಮಗುವಿನ ಬಾಂಧವ್ಯ ಹೆಚ್ಚಿಸುತ್ತದೆ: ನಟಿ ಪ್ರಣೀತ ಸುಭಾಷ್

ಇದಕ್ಕೆ ನಾವು ಮಾಡಬೇಕಾಗಿರುವುದು ಮಗು ಹುಟ್ಟಿದ 1 ಗಂಟೆಯೊಳಗೆ ತಾಯಿಯ ಎದೆ ಹಾಲು ಉಣಿಸಲು ಪ್ರಾರಂಬಿಸಬೇಕಾಗಿದೆ. ಮೊದಲ 6 ತಿಂಗಳಲ್ಲಿ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕಾಗಿದೆ. ಮತ್ತು 6 ತಿಂಗಳ ನಂತರ 2 ವಷ೯ದವರೆಗೆ ಎದೆ ಹಾಲನ್ನು ಪೂರಕ ಆಹಾರದೊಂದಿಗೆ ಮುಂದುವರೆಸಬೇಕಾಗಿದೆ. ಇದಕ್ಕೆ ನಾವು ಮಾಡಬೇಕಾದದು ಹೀಗೆ…

  • ಸಾಮಾಜಿಕ ಮತ್ತು ಮಾಧ್ಯಮಗಳ ಮೂಲಕ ಎದೆ ಹಾಲು ಉಣಿಸುವುದನ್ನು ಉತ್ತೇಜಿಸಬೇಕು.
  • ಶಾಸನಬದ್ದವಾಗಿ ಎದೆ ಹಾಲು ಉಣಿಸುವುದರ ಬಗ್ಗೆ ನೀತಿ ಸಂಹಿತೆಗಳನ್ನು ಜಾರಿ ಮಾಡಬೇಕು.
  • ಸಮಾಲೋಚನೆ, ಕುಟುಂಬದ ನೆರವು ಮತ್ತು ಹಾಲುಣಿಸುವಾಗ ಆಗುವ ತೊಂದರೆಗಳನ್ನು ನಿವಾರಿಸಬೇಕು.

ಇದಕ್ಕೆ ಆರೋಗ್ಯ ವ್ಯವಸ್ಥೆ ಮತ್ತು ಸೇವೆಗಳು, ಕುಟುಂಬ ಮತ್ತು ಸಮುದಾಯದ ಪ್ರೋತ್ಸಾಹ, ಹೆಣ್ಣುಮಕ್ಕಳು ಕೆಲಸ ಮಾಡುವ ಜಾಗದಲ್ಲಿ ಪ್ರೋತ್ಸಾಹ/ ಮಾತೃತ್ವ/ಪಿತೃತ್ವ ರಜೆಯ ಮೂಲಕ ಶ್ರಮಿಸಬೇಕಾಗಿದೆ. ತಾಯಿ ಮತ್ತು ಮಗುವಿನ ಉತ್ತಮ ಭಾಂದವ್ಯಕೂಡ ಎದೆ ಹಾಲು ಉಣಿಸಲು ಅತಿ ಅವಶ್ಯಕ.

ಆರೋಗ್ಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

By

Doctors at Fortis Hospital remove fish bone from man's stomach for 5 years
Koo

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years
Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading

ಬೆಂಗಳೂರು

Breast cancer: ಬೈಕಥಾನ್‌ ಮೂಲಕ ಗಲ್ಲಿ ಗಲ್ಲಿಯಲ್ಲೂ ಸ್ತನ ಕ್ಯಾನ್ಸರ್‌ ಜಾಗೃತಿ ಮೂಡಿಸಿದ ಬೈಕರ್ಸ್‌ಗಳು

Breast cancer : ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಬೈಕಥಾನ್‌ ಆಯೋಜನೆ ಮಾಡಲಾಗಿತ್ತು.

VISTARANEWS.COM


on

By

Breast Cancer Awareness Month celebrated through bikethon
Koo

ಬೆಂಗಳೂರು: ಸ್ತನಕ್ಯಾನ್ಸರ್‌ (Breast cancer) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಬೆಂಗಳೂರು ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ವತಿಯಿಂದ ಪಿಂಕ್‌ ವುಮೆನ್ಸ್‌ ಶೀರ್ಷಿಕೆಯಡಿ ಬೈಕಥಾನ್‌ ಆಯೋಜಿಸಿತ್ತು. ಸ್ತನಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ನಡೆದ ಈ ಬೈಕಥಾನ್‌ ಕೆ.ಆರ್‌. ರಸ್ತೆಯ ಎಚ್‌ಸಿಜಿ ಕ್ಯಾನ್ಸರ್ ಕೇಂದ್ರದಿಂದ ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಂಡು, ಎಂ.ಜಿ. ರಸ್ತೆ, ಟ್ರಿನಿಟಿ ಸರ್ಕಲ್‌, ವಿಧಾನಸೌಧದ ಮುಂಭಾಗದಿಂದ ಹಾದು 10 ಕಿಲೋಮೀಟರ್ ದೂರದವರೆಗೆ ಸಾಗಿತು.

Breast Cancer Awareness Month celebrated through bikethon

180ಕ್ಕೂ ಹೆಚ್ಚು ಮಹಿಳಾ ಬೈಕರ್ಸ್‌ಗಳು ಈ ಬೈಕಥಾನ್‌ನಲ್ಲಿ ಪಾಲ್ಗೊಂಡು, ಸ್ತನಕ್ಯಾನ್ಸರ್‌ನ ಬಗ್ಗೆ ಹಾಗೂ ಆರಂಭಿಕ ತಪಾಸಣೆಗೆ ಆದ್ಯತೆ ನೀಡುವ ಕುರಿತು ಜಾಗೃತಿ ಮೂಡಿಸಿದರು. ಇದಷ್ಟೇ ಅಲ್ಲದೆ, ಬೈಕಥಾನ್‌ಗೂ ಮುನ್ನ, ಜುಂಬಾ ಸೆಷನ್‌, ಮೈಕಲ್‌ ಜಾಕ್ಸನ್‌ ಅವರ “ಡೇಂಜರಸ್‌” ಪ್ರೇರಿತಗೊಂಡ ಸ್ಟೆಪ್ಸ್‌ ಹಾಕುವ ಮೂಲಕ ಸ್ತನ ಕ್ಯಾನ್ಸರ್‌ ಆರಂಭಿಕ ಪತ್ತೆಯ ಬಗ್ಗೆ “ಬೀಟ್ ಇಟ್” ಶೀರ್ಷಿಕೆಯ ಫಲಕಗಳನ್ನು ಹಿಡಿದು ವಿಭಿನ್ನವಾಗಿ ಜಾಗೃತಿ ಮೂಡಿಸಿದರು.

ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶಾ ಕುಮಾರ್, ಮೆಡಿಕಲ್‌ ಆಂಕೊಲಾಜಿಸ್ಟ್ ಡಾ. ರೋಶನಿ ದಾಸ್‌ಗುಪ್ತ, ಸರ್ಜಿಕಲ್ ಆಂಕೊಲಾಜಿಸ್ಟ್ ಡಾ ಮಹೇಶ್ ಬಂಡೇಮೆಗಲ್ ಈ ಬೈಕಥಾನ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಮನೀಶಾ ಕುಮಾರ್, ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಹೆಚ್ಚಾಗಿ ಸ್ತನಕ್ಯಾನ್ಸರ್‌ ಕಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಆರಂಭದಲ್ಲಿಯೇ ಈ ಕ್ಯಾನ್ಸರ್‌ನನ್ನು ಪತ್ತೆ ಹಚ್ಚಿದರೆ ಸುಲಭವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು. ನಾವಷ್ಟೇ ಜಾಗೃತರಾದೆ ಸಾಲದು, ನಮ್ಮ ಸುತ್ತಮುತ್ತ ಹಾಗೂ ಗ್ರಾಮೀಣ ಭಾಗದ ಮಹಿಳೆಯರಿಗೂ ಕೂಡ ಈ ಬಗ್ಗೆ ಅರಿವು ಮೂಡಿಸಬೇಕು. ಆಗಷ್ಟೇ ಎಲ್ಲರಿಗೂ ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಲಿದೆ. ಮಹಿಳಾ ಬೈಕರ್ಸ್‌ಗಳು ವಿಶೇಷವಾಗಿ ಬೈಕ್‌ ಸವಾರಿ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿದ್ದು ಪ್ರಶಂಸನೀಯ ಎಂದರು.

ಮೆಡಿಕಲ್‌ ಆಂಕೊಲಾಜಿಸ್ಟ್ ಡಾ ರೋಶನಿ ದಾಸ್‌ಗುಪ್ತ ಮಾತನಾಡಿ, ಸ್ತನಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಿದಷ್ಟೂ ಈ ಬಗ್ಗೆ ಭಯಗೊಳ್ಳುವವರ ಸಂಖ್ಯೆಯೂ ಕಡಿಮೆಯಾಗಲಿದೆ. ಜನರು ಈ ಕ್ಯಾನ್ಸರ್‌ನ ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿ, ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಈ ರೋಗದಿಂದ ಮುಕ್ತಿಗೊಂಡು ಎಂದಿನಂತೆ ಜೀವನ ನಡೆಸಬಹುದು, ಹೀಗಾಗಿ ಜನರು ಈ ಬಗ್ಗೆ ಹೆಚ್ಚು ಜಾಗೃತರಾಗುವುದು ಒಳಿತು ಎಂದು ಸಲಹೆ ನೀಡಿದರು.

ಸರ್ಜಿಕಲ್ ಆಂಕೊಲಾಜಿಸ್ಟ್ ಡಾ. ಮಹೇಶ್ ಬಂಡೇಮೆಗಲ್ ಮಾತನಾಡಿ, “ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳಂದು ಪಿಂಕ್ ಮಹಿಳಾ ಬೈಕ್‌ಥಾನ್ 2024 ನಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆ ಹೆಚ್ಚಿದೆ. ಇದರಿಂದಲಾದರೂ ಮಹಿಳೆಯರು ಎಚ್ಚೆತ್ತುಕೊಳ್ಳುತ್ತಾರೆ ಎಂದು ಹೇಳಿದರು.

Continue Reading

ಬೆಂಗಳೂರು

Aplastic anemia : ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ ಆಫ್ರಿಕಾ ಮೂಲದ ಬಾಲಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

Aplastic anemia : ಆಫ್ರಿಕಾ ಮೂಲದ ಬಾಲಕ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆಯಿಂದ ಬಳಲುತ್ತಿದ್ದ. ಆತನಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನೀಡಿದೆ.

VISTARANEWS.COM


on

By

African boy successfully undergoes surgery for rare aplastic anemia
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾಗಿದ್ದ ಕಾರಣ ಅತಿ ವಿರಳ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ರಕ್ತ ಹೀನತೆಯಿಂದ ಬಳಲುತ್ತಿದ್ದ 16 ವರ್ಷದ ಬಾಲಕನಿಗೆ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ (Aplastic anemia) ನೀಡಲಾಗಿದೆ.

ಫೋರ್ಟಿಸ್ ಆಸ್ಪತ್ರೆಯ ಮೆಡಿಕಲ್‌ ಮತ್ತು ಹೆಮಟೋ ಆಂಕೊಲಾಜಿಯ ಹಿರಿಯ ನಿರ್ದೇಶಕಿ ಡಾ. ನೀತಿ ರೈಜಾದಾ, ಹೆಮಟೋ ಆಂಕೊಲಾಜಿ ಸಮಾಲೋಚಕ ಡಾ ನಿಶಿತ್ ಓಜ್ಹಾ, ಪೀಡಿಯಾಟ್ರಿಕ್ ಹೆಮಟೋ ಆಂಕೊಲಾಜಿಯ ಸಲಹೆಗಾರರಾದ ಡಾ ತನುಶ್ರೀ ಪಾಲ್ ಅವರ ವೈದ್ಯ ತಂಡ ಈ ಬಾಲಕನಿಗೆ ಸಮಯೋಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಬಾಲಕನ ಜೀವ ಉಳಿಸಲಾಗಿದೆ.

ಈ ಕುರಿತು ಮಾತನಾಡಿದ ಡಾ. ನೀತಿ ರೈಜಾದಾ, ಆಫ್ರೀಕಾ ಮೂಲದ 16 ವರ್ಷದ ಮೈಕೆಲ್ ಎಂಬಾತನಿಗೆ ಕಳೆದ ಎರಡು ತಿಂಗಳಿನಿಂದ ತೀವ್ರವಾದ ಜ್ವರ, ಆಯಾಸ, ದೌರ್ಬಲ್ಯಗಳಿಂದ ಬಳಲುತ್ತಿದ್ದರು. ಅಷ್ಟೇ ಅಲ್ಲದೆ, ಆತನ ಬಲ ಕಿವಿಯಿಂದ ರಕ್ತಸ್ತ್ರಾವವಾಗಲು ಪ್ರಾರಂಭಗೊಂಡಿತ್ತು. ಇದರಿಂದ ಭಯಭೀತಗೊಂಡ ಅವರ ಕುಟುಂಬ ಆಫ್ರಿಕಾದಲ್ಲಿರುವ ಎಲ್ಲಾ ಆಸ್ಪತ್ರೆಗಳಿಗೆ ತೋರಿಸಿದರೂ, ಬಾಲಕನ ಆರೋಗ್ಯ ಸಮಸ್ಯೆ ಏನೆಂದು ತಿಳಿಯಲಿಲ್ಲ. ಹೀಗಾಗಿ ಅವರು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು.

African boy successfully undergoes surgery for rare aplastic anemia
African boy successfully undergoes surgery for rare aplastic anemia

ಬಾಲಕನ ಸಂಪೂರ್ಣ ತಪಾಸಣೆ ಬಳಿಕ, ಆ ಬಾಲಕನಿಗೆ ಅತಿ ವಿರಳ ಅಪ್ಲ್ಯಾಸ್ಟಿಕ್‌ ರಕ್ತ ಹೀನತೆ ಆಗಿರುವುದು ತಿಳಿದುಬಂತು. ಇದು ಅಸ್ಥಿಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ ಆ ಬಾಲಕ ರಕ್ತ ಹೀನತೆಗೆ ಒಳಗಾಗಿದ್ದ. ಹೀಗಾಗಿ ಆತನಿಗೆ ಹ್ಯಾಪ್ಲೋಡೆಂಟಿಕಲ್‌ ಸ್ಟೆಮ್‌ ಸೆಲ್‌ ಕಸಿ ಮಾಡುವ ಅವಶ್ಯಕತೆ ಅನಿವಾರ್ಯವಾಗಿತ್ತು. ಆದರೆ, ಬಾಲಕನ ರಕ್ತದ ಗುಂಪಿಗೆ ಹೊಂದುವಂತೆ ಸ್ಟೆಮ್‌ಸೆಲ್‌ ಸಿಗದೇ ಸಮಸ್ಯೆ ಎದುರಾಗಿತ್ತು.

ಈ ಮಧ್ಯೆ ಬಾಲಕನ ಹಿರಿಯ ಸಹೋದರಿಯೇ ತನ್ನ ತಮ್ಮನಿಗೆ ಹ್ಯಾಪ್ಲೊಂಡೆಂಟಿಕಲ್‌ ದಾನ ಮಾಡಲು ಮುಂದಾದರು. ಆದರೆ, ಬಾಲಕನಿಗೆ ಬಲಕಿವಿ ಸೋಂಕಿನಿಂದ ಸೋರುತ್ತಿದ್ದ ಕಾರಣ, ಮೊದಲು ಕಿವಿ ಶಸ್ತ್ರಚಿಕಿತ್ಸೆ ಮುಂದಾಗಬೇಕಾಯಿತು. ಬಾಲಕನ ಬಲ ಕಾರ್ಟಿಕಲ್‌ ಮಾಸ್ಟೊಡೆಕ್ಟಮಿ (ಕಿವಿ ಸುತ್ತ ಇರುವ ಸೋಂಕಿನ ಅಂಗಾಂಶ) ತೆಗೆದು ಹಾಕಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ಇದಾದ ಬಳಿಕ ಬಾಲಕನಿಗೆ ಹ್ಯಾಪ್ಲೋಡೆಂಟಿಕಲ್‌ ಸ್ಟೆಮ್‌ ಸೆಲ್‌ ಕಸಿಯನ್ನು ಯಶಸ್ವಿಯಾಗಿ ನಡೆಸಲಾಯಿತು. ಇದೀಗ ಬಾಲಕ ಗುಣಮುಖರಾಗುತ್ತಿದ್ದಾನೆ ಎಂದು ವಿವರಿಸಿದರು.

Continue Reading

ಬೆಂಗಳೂರು

Breast cancer : ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ನಿರ್ಲಕ್ಷ್ಯ ಮಾಡಲೇಬೇಡಿ!

ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಪಿಂಕ್‌ ಸ್ಟ್ರಾಂಗ್‌ ವಾಕಥಾನ್‌ ನಡೆಸಲಾಯಿತು. ಮಹಿಳೆಯರು ಸ್ತನಕ್ಯಾನ್ಸರ್‌ನ ಬಗ್ಗೆ ಜಾಗೃತಿ ಹೊಂದುವುದು ಅವಶ್ಯಕ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

By

Pink Strong walkathon to raise awareness among people about breast cancer
Koo

ಬೆಂಗಳೂರು: ಸ್ತನ ಕ್ಯಾನ್ಸರ್‌ ಜಾಗೃತಿ ಮಾಸದ ಅಂಗವಾಗಿ ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ ವತಿಯಿಂದ ಸ್ತನ ಕ್ಯಾನ್ಸರ್‌ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು “ಪಿಂಕ್‌ ಸ್ಟ್ರಾಂಗ್‌” ವಾಕಥಾನ್‌ನನ್ನು ಆಯೋಜಿಸಿತ್ತು. ಬನ್ನೇರುಘಟ್ಟ ರಸ್ತೆ ಫೋರ್ಟಿಸ್‌ ಆಸ್ಪತ್ರೆಯಿಂದ ಪ್ರಾರಂಭಗೊಂಡ ವಾಕಥಾನ್‌ ಗೋಪಾಲನ್‌ ಮಾಲ್‌ವರೆಗೆ ಮುಕ್ತಾಯಗೊಂಡಿತು. ಸುಮಾರು 5 ಕಿ.ಮೀ ದೂರದ ಈ ವಾಕಥಾನ್‌ನಲ್ಲಿ ಸ್ತನಕ್ಯಾನ್ಸರ್‌ನಿಂದ ಗುಣಮುಖರಾದ ರೋಗಿಗಳು ಹಾಗೂ ಅವರ ಕುಟುಂಬಸ್ಥರು, ಸಾರ್ವಜನರಿಕರು ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಸೇರಿದಂತೆ ಒಟ್ಟು 450 ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

Pink Strong walkathon to raise awareness among people about breast cancer
Pink Strong walkathon to raise awareness among people about breast cancer

ವಾಕಥಾನ್‌ನಲ್ಲಿ ಭಾಗವಹಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌, ಇತ್ತೀಚೆಗೆ ಸಾಕಷ್ಟು ಮಹಿಳೆಯರನ್ನು ಬಾಧಿಸುತ್ತಿರುವ ಕಾಯಿಲೆಗಳ ಪೈಕಿ ಸ್ತನಕ್ಯಾನ್ಸರ್‌ ಕೂಡ ಒಂದು. ಹೆಣ್ಣು ಮಕ್ಕಳು, ಮಹಿಳೆಯರು ಸ್ತನಕ್ಯಾನ್ಸರ್‌ ರೋಗ ಲಕ್ಷಣದ ಬಗ್ಗೆ ಮೊದಲೇ ತಿಳಿದಿದ್ದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ. ಆದರೆ ಸಾಕಷ್ಟು ಮಹಿಳೆಯರಿಗೆ ಇದರ ಬಗ್ಗೆ ಜಾಗೃತಿಯ ಕೊರತೆ ಇದೆ. ಮೊದಲು ಸ್ತನ ಕ್ಯಾನ್ಸರ್‌ ರೋಗದ ಬಗ್ಗೆ ಜಾಗೃತಿ ಹೊಂದಿರಬೇಕು, ಫೋರ್ಟಿಸ್‌ ಆಸ್ಪತ್ರೆಯು ಸ್ತನ ಕ್ಯಾನ್ಸರ್‌ ಮಾಸದ ಭಾಗವಾಗಿ ಈ ವಾಕಥಾನ್‌ ನಡೆಸುವ ಮೂಲಕ ಮಹಿಳೆಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.

Pink Strong walkathon to raise awareness among people about breast cancer
Pink Strong walkathon to raise awareness among people about breast cancer

ಫೋರ್ಟಿಸ್ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿಯ ಹಿರಿಯ ಸಲಹೆಗಾರರಾದ ಡಾ, ಮೋನಿಕಾ ಪನ್ಸಾರಿ ಮಾತನಾಡಿ, ಸ್ತನಕ್ಯಾನ್ಸರ್‌ ಹೆಚ್ಚಾಗಿ ಕಡಿಮೆ ವಯಸ್ಸಿನ ಮಹಿಳೆಯರಲ್ಲೇ ಕಾಣಿಸುತ್ತಿದೆ, ಅಧ್ಯಯನಗಳ ಪ್ರಕಾರ ಸುಮಾರು ಶೇ.48 ರಷ್ಟು ರೋಗಿಗಳಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಇರುವುದು ಆಘಾತಕಾರಿ. ಹೀಗಾಗಿ ಹೆಣ್ಣುಮಕ್ಕಳಿಂದಲೇ ಸ್ತನ ಕ್ಯಾನ್ಸರ್‌ನ ಬಗ್ಗೆ ಜಾಗೃತಿ ಮೂಡಿಸುತ್ತಾ ಹೋದರೆ, ಭವಿಷ್ಯದಲ್ಲಿ ಆಗುವ ಅಪಾಯವನ್ನು ತಡೆಗಟ್ಟಬಹುದು. ಸ್ತನ ಕ್ಯಾನ್ಸರ್‌ ಇರುವ ಬಗ್ಗೆ ಮಹಿಳೆಯರೇ ಸ್ವಯಂ ಪರೀಕ್ಷೆ ಮಾಡಿಕೊಳ್ಳಬಹುದು. ಒಂದು ವೇಳೆ ತಮ್ಮ ಸ್ತನದಲ್ಲಿ ಗಂಟಿನ ರೀತಿ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗಿ ತಪಾಸಣೆಗೆ ಒಳಗಾಗುವುದು ಒಳ್ಳೆಯದು. ಇನ್ನು, ಮಹಿಳೆಯರು ಆರೋಗ್ಯಕರ ಜೀವನ ಶೈಲಿ ರೂಡಿಸಿಕೊಳ್ಳುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

Continue Reading
Advertisement
Dina Bhavishya
ಭವಿಷ್ಯ17 ಗಂಟೆಗಳು ago

Dina Bhavishya : ಭೂ ಸಂಬಂಧಿ ವ್ಯವಹಾರಗಳಲ್ಲಿ ಡಬಲ್‌ ಲಾಭ; ಬಹುದಿನಗಳ ಕನಸು ನನಸಾಗುವ ಕಾಲ

Hc grants interim bail to actor Darshan
ಸಿನಿಮಾ2 ದಿನಗಳು ago

Actor Darshan: ಈ ಕಾರಣಕ್ಕೆ ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು; 6 ವಾರಗಳ ನಂತ್ರ ಮತ್ತೆ ಜೈಲು!

dina bhavishya
ಭವಿಷ್ಯ2 ದಿನಗಳು ago

Dina Bhavishya : ಅನಾವಶ್ಯಕ ವಾದದಲ್ಲಿ ಸಿಲಿಕಿಕೊಳ್ಳುವ ಸಾಧ್ಯತೆ ಎಚ್ಚರಿಕೆ ಇರಲಿ

Doctors at Fortis Hospital remove fish bone from man's stomach for 5 years
ಬೆಂಗಳೂರು2 ದಿನಗಳು ago

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

murder case
ಕೊಡಗು3 ದಿನಗಳು ago

Murder case : ಸುಳಿವೆ ಇಲ್ಲದಿರುವ ಕೊಲೆ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಪೊಲೀಸರಿಗೆ ಸನ್ಮಾನ

ಬೆಂಗಳೂರು3 ದಿನಗಳು ago

Assault Case : ಬೆಂಗಳೂರಿನಲ್ಲೊಬ್ಬ ಸೈಕೋಪಾಥ್ ಪತಿ; ನಿಧಿಗಾಗಿ ಮಗುನಾ ಬಲಿ ಕೊಡೋಣವೆಂದು ಪತ್ನಿಗೆ ಕಿರುಕುಳ

Dina Bhavishya
ಭವಿಷ್ಯ3 ದಿನಗಳು ago

Dina Bhavishya : ಈ ದಿನ ಯಾವುದೇ ಕಾರಣಕ್ಕೂ ಜಂಟಿ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ

Murder case
ಉತ್ತರ ಕನ್ನಡ4 ದಿನಗಳು ago

Murder Case : ಗಾರೆ ಕೆಲಸಕ್ಕೆ ಬಂದಿದ್ದ ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿಗಳು

Medical negligence
ಪ್ರಮುಖ ಸುದ್ದಿ4 ದಿನಗಳು ago

Medical Negligence : ವಿಜಯನಗರದಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ 5 ವರ್ಷದ ಮಗು ಬಲಿ; ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು

assault case
ಬೆಂಗಳೂರು4 ದಿನಗಳು ago

Assault case: ಕರ್ನಾಟಕದ ಲಾರಿ ಡ್ರೈವರ್‌ಗೆ ಕಪಾಳಮೋಕ್ಷ ಮಾಡಿದ ತಮಿಳುನಾಡು ಟ್ರಾಫಿಕ್‌ ಪೊಲೀಸ್‌!

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ1 ವರ್ಷ ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ11 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ12 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ4 ವಾರಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 ತಿಂಗಳುಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 ತಿಂಗಳುಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು3 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ3 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌