Dina Bhavishya : ಈ ರಾಶಿಯ ಪ್ರೇಮಿಗಳಿಗೆ ಶುಭ ಸೂಚನೆ - Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಶುಭ ಸೂಚನೆ

Dina Bhavishya : ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷದ ಹುಣ್ಣುಮೆ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮಂಗಳವಾರ ಕುಂಭ ರಾಶಿಯಲ್ಲೇ ನೆಲಸಲಿದ್ದಾನೆ. ಇದರಿಂದಾಗಿ ಮಿಥುನ, ಕಟಕ, ಸಿಂಹ, ವೃಶ್ಚಿಕ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಚಂದ್ರನ ಬಲವಿರುವ ಮಿಥುನ ರಾಶಿಯ ಉದ್ಯೋಗಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಮೇಷ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು. ಸಿಂಹ ರಾಶಿಯವರು ಅತಿಯಾದ ದ್ವೇಷದ ಭಾವನೆಯಿಂದ ನಿಮ್ಮ ಮನಸ್ಸುನ್ನು ಹಾಳು ಮಾಡಿಕೊಳ್ಳುವುದು ಬೇಡ. ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (1-08-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಹುಣ್ಣುಮೆ 24:00 ವಾರ: ಮಂಗವಾರ
ನಕ್ಷತ್ರ: ಉತ್ತಾರಾಷಾಢ 16:02 ಯೋಗ: ಪ್ರೀತಿ 18:51
ಕರಣ: ವಿಷ್ಟಿ (ಭದ್ರ) 13:57 ಅಮೃತ ಕಾಲ: ಬೆಳಗ್ಗೆ 10:26 ರಿಂದ ಬೆಳಗ್ಗೆ 11:50ರ ವರೆಗೆ
ಇಂದಿನ ವಿಶೇಷ : ಅಧಿಕದ ಹುಣ್ಣಿಮೆ

ಸೂರ್ಯೋದಯ : 05:58 ಸೂರ್ಯಾಸ್ತ : 07: 07

ರಾಹುಕಾಲ : ಸಾಯಂಕಾಲ 3.00 ರಿಂದ 4.30
ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30
ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ. ನಿಮ್ಮ ಸಂಗಾತಿಯ ಒರಟು ವರ್ತನೆ ನಿಮ್ಮ ಮೇಲೆ ಒತ್ತಡ ಹಾಕಬಹುದು. ವ್ಯಾಪಾರ-ವ್ಯವಹಾರದಲ್ಲಿ ಲಾಭ. ಆರ್ಥಿಕವಾಗಿ ಲಾಭ. ತಿಂಗಳ ಆರಂಭದ ದಿನವೇ ಉದ್ಯೋಗದ ಸ್ಥಳದಲ್ಲಿ ನೀವು ಕಿರಿಕಿರಿ ಅನುಭವಿಸುವ ಸಾಧ್ಯತೆ ಇರುವುದರಿಂದ ಆದಷ್ಟು ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ಅನಂತ ಚೈತನ್ಯ ಮತ್ತು ಉತ್ಸಾಹ ನಿಮ್ಮನ್ನು ಆವರಿಸುತ್ತದೆ ಮತ್ತು ನೀವು ಯಾವುದೇ ಅವಕಾಶವನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತೀರಿ. ಕೆಲವರಿಗೆ ಪ್ರಯಾಣದ ಗಡಿಬಿಡಿ ಮತ್ತು ಒತ್ತಡದಿಂದ ಕೂಡಿರುತ್ತವೆ. ಆದರೆ ಆರ್ಥಿಕವಾಗಿ ಲಾಭದಾಯಕವಾಗಿರುತ್ತವೆ. ನಿಮ್ಮ ಆಕರ್ಷಣೆ ಹಾಗೂ ವ್ಯಕ್ತಿತ್ವ ನೀವು ಹೊಸ ಸ್ನೇಹಿತರನ್ನು ಗಳಿಸಲು ಸಹಾಯ ಮಾಡಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ವಿಶೇಷ ಅನುಕೂಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮಿಥುನ: ಜೀವನ ಸಂಗಾತಿಯೊಂದಿಗೆ ಸೇರಿ ಇಂದು ನೀವು ಭವಿಷ್ಯಕ್ಕೆ ಯಾವುದೇ ಆರ್ಥಿಕ ಯೋಜನೆಯನ್ನು ಮಾಡಬಹುದು ಮತ್ತು ಈ ಯೋಜನೆ ಯಶಸ್ವಿಯಾಗಲಿದೆ.
ಹತಾಶೆಯ ಭಾವನೆ ನಿಮ್ಮನ್ನು ಆವರಿಸಲು ಬಿಡಬೇಡಿ. ಆರೋಗ್ಯ ಮಧ್ಯಮ. ಉದ್ಯೋಗಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಪ್ರೇಮಿಗಳಿಗೆ ಶುಭ ಸೂಚನೆ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಕಟಕ: ಬಿಡುವಿರದ ಕಾರ್ಯಕ್ರಮದ ಹೊರತಾಗಿಯೂ ಆರೋಗ್ಯ ಚೆನ್ನಾಗಿರುತ್ತದೆ. ಅನಿರೀಕ್ಷಿತ ಲಾಭದ ಮೂಲಕ ಆರ್ಥಿಕ ಬಲಗಳು ಸುಧಾರಿಸುತ್ತವೆ. ನಿಮ್ಮ ಸಹೋದ್ಯೋಗಿಗಳು ಎಂದಿಗಿಂತಲೂ ಉತ್ತಮವಾಗಿ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಸಿಂಹ: ಧರ್ಮ ಕಾರ್ಯಗಳು, ಹವನಗಳು, ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳವ ಸಾಧ್ಯತೆ. ಅತಿಯಾದ ದ್ವೇಷದ ಭಾವನೆಯಿಂದ ನಿಮ್ಮ ಮನಸ್ಸುನ್ನು ಹಾಳು ಮಾಡಿಕೊಳ್ಳುವುದು ಬೇಡ. ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವಾಗುವ ಸಾಧ್ಯತೆ. ಆರ್ಥಿಕವಾಗಿ ಲಾಭ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಕನ್ಯಾ: ಕೆಲವು ಅನಿವಾರ್ಯ ಸಂದರ್ಭಗಳು ನಿಮಗೆ ಅಹಿತಕರವೆನಿಸಬಹುದು. ಆತುರದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಇದು ನಿಮ್ಮ ಮನಸ್ಥಿತಿಯನ್ನು ಬದಲಾಯಿಸುವುದಷ್ಟೇ ಅಲ್ಲದೇ ನಿಮ್ಮ ತಪ್ಪು ತಿಳುವಳಿಕೆಗಳನ್ನೂ ಹೋಗಲಾಡಿಸುತ್ತದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ದಿನದ ಮಟ್ಟಿಗೆ ಆದಾಯಕ್ಕಿಂತ ಹೆಚ್ಚಿನ ಖರ್ಚು ಇರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸ್ನೇಹಿತರ ಜತೆಗಿನ ನಿಮ್ಮ ಅಪಾರ್ಥ ಕೆಲವು ಅಹಿತಕರ ಪ್ರತಿಕ್ರಿಯೆಗಳನ್ನು ಉಂಟು ಮಾಡಬಹುದು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಂಯಮದಿಂದ ವರ್ತಿಸಿ.
ನಿಮ್ಮ ವೈಯಕ್ತಿಕ ರಂಗದಲ್ಲಿ ಮುಖ್ಯ ಬೆಳವಣಿಗೆಯಾಗುತ್ತಿದ್ದು, ಇದು ನೀವು ಮತ್ತು ನಿಮ್ಮ ಇಡೀ ಕುಟುಂಬಕ್ಕೆ ಸಂತೋಷ ತರಲಿದೆ. ಆರ್ಥಿವಾಗಿ ಉತ್ತಮ ಫಲ ಇರಲಿದೆ. ಆರೋಗ್ಯದ ಬಗೆಗೆ ಜಾಗೃತಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಅತಿಥಿಗಳ ಆಗಮನದಿಂದಾಗಿ ಕೊಂಚಮಟ್ಟಿಗೆ ಪ್ರಮುಖ ಕೆಲಸಗಳಲ್ಲಿ ವಿಳಂಬವಾಗುವ ಸಾಧ್ಯತೆ. ಅನೇಕ ಒತ್ತಡದಿಂದ ಹೊರಬರವಿರಿ. ಹಣಕಾಸಿನಲ್ಲಿ ಸುಧಾರಣೆ, ದೀರ್ಘಕಾಲದ ಬಾಕಿ ಮರುಪಾವತಿ ಆಗಲಿದೆ. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ದಿನದ ಕೊನೆಯಲ್ಲಿ ಮನಸ್ತಾಪ ಆದಷ್ಟು ಮಾತಿಗೆ ವಿರಾಮವಿರಲಿ.
ಅದೃಷ್ಟ ಸಂಖ್ಯೆ: 9

Horoscope Today

ಧನಸ್ಸು: ಚಿಕ್ಕ ಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಂಡು ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಬೇಡ. ನೀವು ಇತರರ ಮಾತುಗಳನ್ನು ನಂಬಿ ಇಂದು ಹೂಡಿಕೆ ಮಾಡಿದಲ್ಲಿ ಇಂದು ಆರ್ಥಿಕ ನಷ್ಟದ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗಿಗಳಿಗೆ ಆಲಸ್ಯದಿಂದಾಗಿ ಕಿರಿಕಿರಿ ಅನುಭವಿಸುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 6

ಯಾವ ದಿಕ್ಕಿನಲ್ಲಿ ತಲೆಹಾಕಿ ಮಲಗಬಾರದು?

Horoscope Today

ಮಕರ: ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸ ಕಾರ್ಯಗಳು ಯಶಸ್ಸನ್ನು ತಂದುಕೊಡಲಿದೆ. ವಿದೇಶ ಪ್ರವಾಸಕ್ಕೆ ಕಾಯುತ್ತಿರುವವರಿಗೆ ಶುಭ ಸೂಚನೆ ಸಿಗಲಿದೆ. ಸೃಜನಶೀಲ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆರೋಗ್ಯ ಮಧ್ಯಮ. ಆರ್ಥಿಕ ಪ್ರಗತಿ ಸಾಧಾರಣ. ಉದ್ಯೋಗಿಗಳಿಗೆ ಶುಭ ಫಲ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ.
ಅದೃಷ್ಟ ಸಂಖ್ಯೆ: 6

Horoscope Today

ಕುಂಭ: ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯ ನ್ಯಾಯಾಲಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ, ಇಂದು ನೀವು ಅದರಲ್ಲಿ ವಿಜಯವನ್ನು ಪಡೆಯಬಹುದು ಮತ್ತು ನೀವು ಹಣದ ಲಾಭವನ್ನು ಪಡೆಯಬಹುದು. ಆರೋಗ್ಯ ಪರಿಪೂರ್ಣ. ಉದ್ಯೋಗಿಗಳಿಗೆ ಭರವಸೆ ಇಮ್ಮಡಿ ಆಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

ಇದನ್ನೂ ಓದಿ : Prerane column : ನಿಮ್ಮ ನಿಮ್ಮ ಬದುಕಿಗೆ ನೀವೇ ಜವಾಬ್ದಾರಿ; ಅದನ್ನು ಬೇರೆಯವರ ಮೇಲೆ ಹೊರಿಸಿದರೆ ನೀವು Waste Body!

Horoscope Today

ಮೀನ: ನಿಮ್ಮ ಆರೋಗ್ಯವು ಇಂದು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಿಮ್ಮಲ್ಲಿ ಇಂದು ಚುರುಕುತನವನ್ನು ನೋಡಬಹುದು. ಕೆಲವು ಊಹೆಗಳು ಲಾಭ ತರುತ್ತವೆ. ಪ್ರಮುಖ ವ್ಯಕ್ತಿಗಳೊಂದಿಗೆ ಮಾತನಾಡುವಾಗ ಜಾಗೃತೆ ಇರಲಿ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 2

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

Used Car Sale : ಕಾರು ಡೀಲರ್​ಗಳು ಅಥವಾ ಬ್ರೋಕರ್​ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಯೋಜನೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.

VISTARANEWS.COM


on

Used Car Sale
Koo

ಬೆಂಗಳೂರು: ಕಷ್ಟಕಾಲಕ್ಕೊ ಅಥವಾ ಹೊಸ ಕಾರನ್ನು ತೆಗೆದುಕೊಳ್ಳುವುದಕ್ಕೊ ಹಳೆ ಕಾರನ್ನು (Used Car Sale) ಮಾರಬೇಕಾಗುತ್ತದೆ. ಮೊದಲ ನೋಟಕ್ಕೆ ಅದು ಸುಲಭ ಎನಿಸಬಹುದು. ‘ಮಾರಿದ್ರೆ ಆಯ್ತು’ ಎಂದು ಹೇಳಬಹುದು. ಆದರೆ ಅದು ಅಷ್ಟೊಂದು ಸುಲಭವಲ್ಲ. ನೀವು ಮಾರಲು ನಿರ್ಧರಿಸಿದ ತಕ್ಷಣ ಅಂದುಕೊಳ್ಳುವಷ್ಟು ಬೆಲೆಯು ಸಿಗುವುದೇ ಇಲ್ಲ. ಕಾರು ಕೊಡಲು ಮುಂದಾದಾಗ ಕಡಿಮೆ ಬೆಲೆಗೆ ಕೇಳುವವರೇ ಹೆಚ್ಚು. ಹೀಗಾಗಿ ಸಾಕಷ್ಟು ಲಾಸ್ ಆಗಬಹುದು. ಅದೂ ಅಲ್ಲದಿದ್ದರೆ ಸೆಕೆಂಡ್ ಹ್ಯಾಂಡ್ ಕಾರು ಡೀಲರ್​ಗಳ ಬಳಿಗೆ ಹೋಗಬೇಕು. ಅವರು ಕೂಡ ತಮ್ಮ ಲಾಭಾಂಶವನನ್ನು ಇಟ್ಟುಕೊಂಡೇ ಖರೀದಿ ಮಾಡುತ್ತದೆ. ಆ ರೀತಿ ಆಗಬಾರದು ಎಂದಾರೆ ಸ್ವಲ್ಪ ಯೋಚನೆ ಮಾಡಿಕೊಂಡು ಕಾರನ್ನು ಮಾರಲು ಮುಂದಾಗಬೇಕು. ಅದಕ್ಕೆ ಬೇಕಾಗಿರುವ ಕೆಲವೊಂದು ತಂತ್ರಗಳನ್ನು ಇಲ್ಲಿ ನೀಡಲಾಗಿದೆ.

ಏನು ಮಾಡಬೇಕು

ಕಾರು ಡೀಲರ್​ಗಳು ಅಥವಾ ಬ್ರೋಕರ್​ಗಳು ಬೇಡ ಎಂದು ಅಂದು ತಕ್ಷಣ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಕಾರಿಗೆ ಹೆಚ್ಚು ಬೆಲೆ ಸಿಗುತ್ತದೆ ಹಾಗೂ ಹೆಚ್ಚು ಲಾಭ ನಿಮ್ಮದಾಗುತ್ತದೆ. ಹೀಗಾಗಿ ಮಾರುವ ಮೊದಲು ಕೆಲವೊಂದು ಸಿದ್ಧತೆಗಳನ್ನು ಮಾಡಬೇಕಾಗುತ್ತದೆ. ಮೊದಲಾಗಿ ಮಾನಸಿಕವಾಗಿ ಸಂಪೂರ್ಣವಾಗಿ ಸಿದ್ಧಗೊಳ್ಳಬೇಕು. ಇಂತಿಷ್ಟು ಬೆಲೆ ಸಿಕ್ಕರೆ ಮಾರುವುದು ಖಚಿತ. ಇಲ್ಲವಾದರೆ ಇಲ್ಲ. ಇಂಥವರಿಗಷ್ಟೇ ಮಾರುವೆ. ಒಂದು ಬಾರಿಗೆ ಹಣ ಕೊಟ್ಟರಷ್ಟೇ ಮಾರುವೆ ಎಂಬೆಲ್ಲ ಯೋಜನೆಗಳನ್ನು ಹಾಕಿಕೊಂಡಿಬೇಕು.

ಪ್ರಸ್ತುತ ಮಾರುಕಟ್ಟೆ ಬೆಲೆಯನ್ನು ಅರಿತುಕೊಳ್ಳಬೇಕು.

ಇಂಟರ್ನೆಟ್ ನಿಮಗೆ ಲಭ್ಯವಿದ್ದರೆ ನಿಮ್ಮಲ್ಲಿರುವ ಕಾರಿನ ಪ್ರಸ್ತುತ ಅನ್​​ರೋಡ್​ ಪ್ರೈಸ್​ ತಿಳಿದುಕೊಳ್ಳಬೇಕು. ಹೀಗಾಗಿ ಕೆಲವೊಂದು ವರ್ಷಗಳು ಹಳೆಯದಾಗಿರುವ ನಿಮ್ಮ ಕಾರಿಗೆ ಎಷ್ಟು ಬೆಲೆ ಪಡೆಯಬಹುದು ಎಂದು ಅಂದಾಜಿಸಿ. ಕಾರಿನ ಬೆಲೆಯ ಅಂದಾಜು ಮಾಡಲು ಯೂಸ್ಡ್​ ಕಾರು ಮಾರಾಟ ವೆಬ್​ಸೈಟ್​ ಹೋಗಿ ಎಲ್ಲ ಮಾಹಿತಿ ನಮೂದಿಸಿ. ಖರೀದಿ ಮಾಡಿದ ವರ್ಷ, ಓಡಿರುವ ಕಿಲೋಮೀಟರ್​ಗಳು, ಯಾವ ವೇರಿಯೆಂಟ್​ ಎಂಬುದನ್ನೆಲ್ಲ ಹಾಕಿ. ಅಲ್ಲಿ ಕಾಣುವ ಬೆಲೆಗಿಂತ ಸ್ವಲ್ಪ ಜಾಸ್ತಿ ಹೇಳಿ. ಕನಿಷ್ಠ ಬೆಲೆಯ ಮೇಲೆ ಬಫರ್ ದರ ಇಟ್ಟುಕೊಳ್ಳಿ. ಆದರೆ ನೆನಪಿಡಿ, ಜಾಸ್ತಿ ಹೇಳಬೇಡಿ. ಖರೀದಿದಾರನ ಬಳಿಯೂ ಇಂಟರ್ನೆಟ್​ ಇರುತ್ತದೆ. ಚೌಕಾಸಿಯಲ್ಲೇ ಟೈಮ್​ ವೇಸ್ಟ್​ ಮಾಡಬೇಕಾಗುತ್ತದೆ. ಬಳಿಕ ಕಾರಿನ ಮಾಹಿತಿಯೊಂದಿಗೆ ಸೆಕೆಂಡ್​ ಹ್ಯಾಂಡ್​ ಕಾರು ಮಾರಾಟದ ವೆಬ್​ಸೈಟ್​, ಸೋಶಿಯಲ್ ಮೀಡಿಯಾಗಳಲ್ಲಿ ಅಪ್​ಲೋಡ್ ಮಾಡಿ. ಕಾರಿನ ಎಲ್ಲ ಮಾಹಿತಿ ಕೊಟ್ಟು ಹ್ಯಾಕರ್​ಗಳ ಮೋಸಗಾರರ ಕೈಗೆ ಸಿಕ್ಕಿ ಹಾಕಿಕೊಳ್ಳಬೇಡಿ. ಅಗತ್ಯ ಮಾಹಿತಿ ಮಾತ್ರ ಕೊಡಿ. ಹೆಚ್ಚು ಪ್ರತಿಕ್ರಿಯೆಗಳನ್ನು ಬಯಸದಿದ್ದರೆ ಅಥವಾ ಸಿಂಗಲ್​ ಡಿಲ್​ ಎಂದಾದರೆ “ಅತ್ಯುತ್ತಮ ಕೊಡುಗೆ”, “ಅಂತಿಮ ಬೆಲೆ”, “ಮಾತುಕತೆ ಇಲ್ಲ ” ಎಂಬುದನ್ನು ಸ್ಪಷ್ಟಪಡಿಸಿ.

ಎಲ್ಲ ದಾಖಲೆಗಳೂ ಜತೆಗಿರಲಿ

ನಿಮ್ಮ ಕಾರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಒಟ್ಟಿಗೆ ಇಟ್ಟುಕೊಳ್ಳಿ. “ಎಲ್ಲವೂ” ಎಂದರೆ ಎಲ್ಲವೂ ಇರಬೇಕು. ಮೆಂಟೇನೆನ್ಸ್ ಬಿಲ್, ಸರ್ವಿಸ್​ ದಾಖಲೆಗಳು, ಟೈರ್ ಗಳು, ಬ್ಯಾಟರಿಗಳಿಗೆ ವಾರಂಟಿ ರಸೀದಿಗಳನ್ನು ಜತೆಗೆ ಇಟ್ಟುಕೊಳ್ಳಿ. ಈ ರೀತಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ದಾಖಲೆಗಳಿಂದಾಗಿ ಹೆಚ್ಚು ಬೆಲೆ ಸಿಗುತ್ತದೆ. ಅಂದರೆ ನಿಮ್ಮ ಕಾರಿನ ಬಗ್ಗೆ ನೀವು ಕಾಳಜಿ ವಹಿಸುತ್ತೀರಿ ಎಂದು ಅರ್ಥ.

ಆನ್​ಲೈನ್​ ಜಾಹೀರಾತು

ನಿಮಗೆ ಅತ್ಯುತ್ತಮ ಡೀಲ್ ಬೇಕಾದರೆ ಆನ್ ಲೈನ್ ಜಾಹೀರಾತು ನೀಡಿ. ಎಷ್ಟು ವೆಬ್​ಸೈಟ್​ಗಳನ್ನು ಎಷ್ಟು ಜನ ನೀಡುತ್ತಾರೆ ಎಂಬ ಮಾಹಿತಿ ಪಡೆಯಿತು. ಅವರಲ್ಲಿ ಕಾರಿನ ಬಗ್ಗೆ ಆಸಕ್ತಿ ಹೊಂದಿರುವವರು ಎಷ್ಟೆಂದು ತಿಳಿದುಕೊಳ್ಳಿ. ಅದರ ಪ್ರಕಾರ ಜಾಹೀರಾತು ನೀಡಿ. ನಿಮ್ಮ ಕಾರು ಮಾರಾಟವಾಗುವವರೆಗೂ ವೆಬ್​ಸೈಟ್​ನಲ್ಲಿ ಅಗತ್ಯ ಮಾಹಿತಿ ಇರಲಿ,

ಕೆಲವು ಸಲಹೆಗಳು ಇಲ್ಲಿವೆ

ಉತ್ತಮ ಫೋಟೋಗಳನ್ನು ಅಪ್ ಲೋಡ್ ಮಾಡಿ. ಚಿತ್ರಗಳನ್ನು ಕ್ಲಿಕ್ ಮಾಡಲು ನಿಮ್ಮ ಮೊಬೈಲ್ ಕ್ಯಾಮೆರಾವನ್ನು ನೀವು ಬಳಸಬಹುದು. ನಿಮ್ಮ ಕಾರಿನ ಫೋಟೊವನ್ನು ಹಗಲು ಹೊತ್ತಿನಲ್ಲಿಯೇ ತೆಗೆಯಿರಿ. ಆದ್ಯತೆಯ ಮೇರೆಗೆ ಮುಂಜಾನೆ ಅಥವಾ ಸಂಜೆ ಫೋಟೋ ತೆಗೆಯುವುದು ಒಳ್ಳೆಯದು.

ಇದನ್ನೂ ಓದಿ: Powerful Bikes : 2.5 ಲಕ್ಷ ರೂ.ಗಿಂತಲೂ ಕಡಿಮೆ ಬೆಲೆಗೆ ಸಿಗ್ತವೆ ಈ 5 ಪವರ್​ಫುಲ್ ಬೈಕ್​ಗಳು

ನಿಮ್ಮ ಕಾರಿನ ಬಗ್ಗೆ ಸಾಧ್ಯವಾದಷ್ಟು ವಿವರಗಳನ್ನು ನೀಡಿ. ಇದು ಸೂಕ್ತ ಖರೀದಿದಾರರನ್ನು ಆಕರ್ಷಿಸುತ್ತದೆ ಮತ್ತು ವೇಗವಾಗಿ ಮಾರಾಟ ಮಾಡಲು ಸಹಾಯ ಮಾಡುತ್ತದೆ.

ಅಲಾಯ್ ಚಕ್ರಗಳು, ಲೆದರ್ ಅಪ್ಹೋಲ್ಸ್ಟರಿ, ಸಿಡಿ-ಚೇಂಜರ್, ಮ್ಯೂಸಿಕ್ ಸಿಸ್ಟಮ್, ಹೊಸ ಟೈರ್​ಗಳು, ಲಭ್ಯವಿರುವ ಸರ್ವಿಸ್​ಗಳು, ವಾರಂಟಿಗಳು ಮುಂತಾದ ಹೆಚ್ಚುವರಿ ಮಾಹಿತಿಯನ್ನು ನಿರ್ದಿಷ್ಟಪಡಿಸಿ.

ವಿಚಾರಣೆಗಳನ್ನು ಸೂಕ್ತ ಕಾಲಕ್ಕೆ ಸ್ವೀಕರಿಸಿ

ಒಮ್ಮೆ ನೀವು ನಿಮ್ಮ ಜಾಹೀರಾತು ಹಾಕಿದ ನಂತರ ನೀವು ಅದರಲ್ಲಿ ನಮೂದಿಸಿದ ಎಲ್ಲ ದಾಖಲೆಯೊಂದಿಗೆ ಸಿದ್ಧರಾಗಿರಿ. ನೀವು ಉಲ್ಲೇಖಿಸಿದ ಎಲ್ಲಾ ಅಂಕಿಅಂಶಗಳು ನೆನಪಿಲ್ಲದಿದ್ದರೆ ಅವುಗಳನ್ನು ಒಂದು ಕಾಗದದ ತುಣುಕಿನ ಮೇಲೆ ಬರೆದಿದೆ. ಖರೀದಿದಾರರು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ, ಆದ್ದರಿಂದ ಪ್ರತಿ ಪ್ರಶ್ನೆಗೆ ಪ್ರಾಮಾಣಿಕವಾಗಿ ಮತ್ತು ಬಹಿರಂಗವಾಗಿ ಉತ್ತರಿಸಲು ಪ್ರಯತ್ನಿಸಿ.

ಅನಗತ್ಯ ಅಪಾಯಿಂಟ್​ಮೆಂಟ್ ಕೊಡಬೇಡಿ. ನಿಮ್ಮ ಸಮಯವನ್ನು ಉಳಿಸಬೇಕಾದರೆ ಫೋನ್ ಮೂಲಕ ಖರೀದಿದಾರರಿಗೆ ಆರಂಭಿಕ ಸ್ಕ್ರೀನಿಂಗ್ ಮಾಡಿ. ನಂತರ ಅಪಾಯಿಂಟ್​ಮೆಂಟ್​ ನಿಗದಿ ಮಾಡಿ. ಖರೀದಿದಾರರನ್ನು ನಿರ್ದಿಷ್ಟ ಸಮಯಕ್ಕೆ ಭೇಟಿಯನ್ನು ಮಾಡಿ. ಇದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ನಿಮ್ಮ ಮನೆಗೆ ಬರುವುದು ಬೇಡ ಎಂದಾರೆ ಹೊರಗಡೆ ಅಪಾಯಿಂಟ್​ಮೆಂಟ್ ಫಿಕ್ಸ್​ ಮಾಡಿ.

ಟೆಸ್ಟ್ ಡ್ರೈವ್​ಗೆ ನೇರ ಕೊಡಬೇಡಿ

ಆಸಕ್ತ ಖರೀದಿದಾರರಿಗೆ ನಿಮ್ಮ ಕಾರನ್ನು ತೋರಿಸಿ. ನೀವು ಜತೆಗೆ ಇಲ್ಲದೆ ನಿಮ್ಮ ಕಾರನ್ನು ಟೆಸ್ಟ್ ಡ್ರೈವ್ ಗೆ ತೆಗೆದುಕೊಳ್ಳಲು ಬಿಡಬೇಡಿ. ಖರೀದಿದಾರರ ಚಾಲನಾ ಪರವಾನಗಿ ಪರಿಶೀಲಿಸಿ. ಆತನಿಗೆ ಚಾಲನೆ ಮಾಡಲು ಬಿಡಿ, ಆದರೆ ನೀವು ನ್ಯಾವಿಗೇಟ್ ಮಾಡುತ್ತಿರಬೇಕು. ಖರೀದಿದಾರನು ನೀವು ಕಾರನ್ನು ಕಾಯ್ದಿರಿಸಲು ಬಯಸಿದರೆ ಅಡ್ವಾನ್ಸ್​ ಡೆಪಾಸಿಟ್​ ಕೇಳಿ. ಆತನ ಅಡ್ವಾನ್ಸ್​ ಮುಕ್ತಾಯಗೊಳ್ಳುವ ಸಮಯ ನಿರ್ದಿಷ್ಟಪಡಿಸಿ. ಬೆಲೆಯ ಬಗ್ಗೆ ಮಾತುಕತೆ ನಡೆಸಿ. ಹೆಚ್ಚು ಚೌಕಾಸಿಗೆ ಅವಕಾಶ ನೀಡಬೇಡಿ.

ಮಾರಾಟ ಪ್ರಕ್ರಿಯೆಗಳು

ನೀವು ನಿಮ್ಮ ವಾಹನವನ್ನು ಮಾರಾಟ ಮಾಡಬೇಕಾದರೆ ಕೆಲವು ಕಾಗದಪತ್ರಗಳನ್ನು ಮಾಡಬೇಕಾಗುತ್ತದೆ. ಪಾವತಿಯನ್ನು ನಗದು ಅಥವಾ ಡಿಮ್ಯಾಂಡ್ ಡ್ರಾಫ್ಟ್ ರೂಪದಲ್ಲಿ ಸ್ವೀಕರಿಸಿ. ಚೆಕ್ ಪಾವತಿಯ ಸಂದರ್ಭದಲ್ಲಿ, ಚೆಕ್ ಕ್ಲಿಯರ್ ಆಗುವ ತನಕ ದಾಖಲೆಗಳನ್ನು ವರ್ಗಾಯಿಸಬಾರದು. ಖರೀದಿದಾರ ಸಾಲವನ್ನು ವ್ಯವಸ್ಥೆ ಮಾಡುತ್ತಿದ್ದರೆ, ಫೈನಾನ್ಸ್ ಕಂಪನಿಯ ಡಿಎಸ್ಎ ಸಹಾಯ ಪಡೆಯಿರು. ಅವರು ಎಲ್ಲಾ ಕಾಗದಪತ್ರಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಅದರಿಂದ ಕಾಗದ ಪತ್ರಗಳ ವರ್ಗಾವಣೆಗೆ ಅನುಕೂಲವಾಗುತ್ತದೆ.

Continue Reading

ಪ್ರಮುಖ ಸುದ್ದಿ

Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Equity Market: ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ. ಜೂನ್‌ 4ರ ಬಳಿಕ ದೇಶದ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವುದು ಕಷ್ಟ ಎಂಬುದಾಗಿ ಮೋದಿ ಹೇಳಿರುವ ಬೆನ್ನಲ್ಲೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Equity Market
Koo

ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಜೂನ್‌ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆ ಎಂಬುದಾಗಿ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.

ಹೌದು, 2023ರ ನವೆಂಬರ್‌ನಲ್ಲಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೊತ್ತವು 4 ಲಕ್ಷ ಕೋಟಿ ಡಾಲರ್‌ ಇತ್ತು. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಕಳೆದ 6 ತಿಂಗಳಲ್ಲಿಯೇ 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ. ಬಿಎಸ್‌ಇ ಲಿಸ್ಟ್‌ ಆಗಿರುವ ಕಂಪನಿಯಗಳ ಮಾರುಕಟ್ಟೆ ಬಂಡವಾಳವು 2007ರ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ, 2017ರ ಜುಲೈನಲ್ಲಿ 2 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇನ್ನು 2021ರ ಮೇ ತಿಂಗಳಲ್ಲಿ 4 ಲಕ್ಷ ಕೋಟಿ ಡಾಲರ್‌ ಆಗಿತ್ತು. ಈಗ ಆರೇ ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ.

ಇದರೊಂದಿಗೆ ಮಾರುಕಟ್ಟೆ ಬಂಡವಾಳ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ತಲುಪಿರುವುದು ಐತಿಹಾಸಿಕ ಎಂದೇ ಹೇಳಲಾಗುತ್ತಿದೆ. ಇದರಿಂದ ಹೂಡಿಕೆದಾರರ ವಿಶ್ವಾಸವೂ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. 5 ಲಕ್ಷ ಕೋಟಿ ಡಾಲರ್‌ ಎಂದರೆ ಭಾರತದ 414.75 ಲಕ್ಷ ಕೋಟಿ ರೂ. ಆಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ವೇಗದಲ್ಲಿ ಮಾರುಕಟ್ಟೆಯ ಬಂಡವಾಳವು ಏರಿಕೆಯಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷಿಸಲಾಗಿದೆ.

ಸದ್ಯ, ನಿಫ್ಟಿಯು ತನ್ನ ಗರಿಷ್ಠ ಪಾಯಿಂಟ್‌ಗಳಿಗಿಂತ 250 ಪಾಯಿಂಟ್‌ ಹಿಂದಿದೆ. ಆದರೂ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಹೂಡಿಕೆಯು ಹೆಚ್ಚಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್‌, ಜಪಾನ್‌, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್‌ ಷೇರು ಮಾರುಕಟ್ಟೆ ಎನಿಸಿದೆ. 2027ರ ವೇಳೆಗೆ ಭಾರತವು ವಿಶ್ವದಲ್ಲೇ ಮೂರನೇ ಬೃಹತ್‌ ಆರ್ಥಿಕತೆ ರಾಷ್ಟ್ರ ಎಂಬ ಖ್ಯಾತಿ ಗಳಿಸುವ ವಿಶ್ವಾಸ ಹೊಂದಿದೆ. 2030ರ ವೇಳೆಗೆ ಮಾರುಕಟ್ಟೆ ಬಂಡವಾಳವು 10 ಲಕ್ಷ ಡಾಲರ್‌ ತಲುಪಬೇಕು ಎಂಬ ಗುರಿ ಇದೆ. ಇದರ ದಿಸೆಯಲ್ಲಿ ಈಕ್ವಿಟಿ ಮೌಲ್ಯವು ಗಣನೀಯವಾಗಿ ಏರಿಕೆಯಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

Continue Reading

ರಾಜಕೀಯ

Prajwal Revanna Case: ಡಿಕೆಶಿ ಒಪ್ಪಿಕೊಂಡಿದ್ದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ? ಸಿಎಂಗೆ ಎಚ್‌ಡಿಕೆ ಪ್ರಶ್ನೆ

Prajwal Revanna Case: ಈಗಿನ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಸಿದ್ದರಾಮಯ್ಯ ಅವರ ಸಾಕ್ಷಿ ಕೇಳುತ್ತಿದ್ದಾರೆ. ಮಾಧ್ಯಮಗಳಿಗೆ ಬಿಡುಗಡೆ ಆಗಿರುವ ಸಂಭಾಷಣೆಯಲ್ಲಿ ಏನಿದೆ? ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ, ಶಿವರಾಮೇಗೌಡ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ನಡೆದ ಸಂಭಾಷಣೆಯಲ್ಲಿ ಏನಿದೆ? ಇದ್ಯಾವುದನ್ನೂ ಇವರು ಸಾಕ್ಷಿಯಾಗಿ ಪರಿಗಣಿಸುವುದಿಲ್ಲವೇ? ಇದಕ್ಕಿಂತ ಮತ್ತೇನು ಸಾಕ್ಷಿಗಳು ಬೇಕು ನಿಮಗೆ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

VISTARANEWS.COM


on

Prajwal Revanna Case HD Kumaraswamy slams DK Shivakumar
Koo

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಪೆನ್‌ಡ್ರೈವ್‌ ಹಂಚಿಕೆ ಹಿಂದೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಇದ್ದಾರೆ ಎಂಬುದಕ್ಕೆ ಇನ್ನೆಷ್ಟು ಸಾಕ್ಷಿ ಬೇಕು? ತಾವು ಅರ್ಧ ನಿಮಿಷಗಳ ಕಾಲ ಮಾತನಾಡಿದ್ದಾಗಿ ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ಸಾಕ್ಷಿ ಏನಿದೆ ಎಂದು ಸಿಎಂ ಸಿದ್ದರಾಮಯ್ಯ ಕೇಳುತ್ತಿದ್ದಾರೆ. ಇದು ಸರಿಯೇ? ಇದ್ದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ ನಿಮಗೇ ಎಂದು ಮಾಜಿ ಸಿಎಂ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈಗಿನ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಸಿದ್ದರಾಮಯ್ಯ ಅವರ ಸಾಕ್ಷಿ ಕೇಳುತ್ತಿದ್ದಾರೆ. ಮಾಧ್ಯಮಗಳಿಗೆ ಬಿಡುಗಡೆ ಆಗಿರುವ ಸಂಭಾಷಣೆಯಲ್ಲಿ ಏನಿದೆ? ವಕೀಲ ದೇವರಾಜೇಗೌಡ ಹಾಗೂ ಮಾಜಿ ಸಂಸದ, ಶಿವರಾಮೇಗೌಡ ಹಾಗೂ ಡಿ.ಕೆ. ಶಿವಕುಮಾರ್‌ ನಡುವೆ ನಡೆದ ಸಂಭಾಷಣೆಯಲ್ಲಿ ಏನಿದೆ? ಇದ್ಯಾವುದನ್ನೂ ಇವರು ಸಾಕ್ಷಿಯಾಗಿ ಪರಿಗಣಿಸುವುದಿಲ್ಲವೇ? ಇದಕ್ಕಿಂತ ಮತ್ತೇನು ಸಾಕ್ಷಿಗಳು ಬೇಕು ನಿಮಗೆ? ಎಂದು ಕೇಳಿದರು.

ಯಾರು ಯಾರೋ ಬರುತ್ತಿರುತ್ತಾರೆ. ಕೆಟ್ಟವರು ಬರ್ತಾರೆ, ಒಳ್ಳೆಯವರು ಬರ್ತಾರೆ ಅಂತ ಡಿ.ಕೆ. ಶಿವಕುಮಾರ್‌ ಅವರು ಹೇಳಿದ್ದಾರೆ. ವಕೀಲ ದೇವರಾಜೇಗೌಡರ ಜತೆಗೆ ಡಿಕೆಶಿ ಅರ್ಧ ನಿಮಿಷ ಮಾತನಾಡಿರುವುದು ಪ್ರಮುಖವಾದ ಅಂಶ ಅಲ್ವಾ ಇವರಿಗೆ? ಸಾಕ್ಷಿ ಕೊಡಿ ಸಾಕ್ಷಿ ಕೊಡಿ ಅಂತ ಹೇಳ್ತಾರೆ. ಎಸ್‌ಐಟಿ ತಂಡದಿಂದ 7 ಜನರನ್ನು ಬಂಧನ ಮಾಡಿ ಕರೆ ತಂದಿದ್ದಾರೆ. ಹಾಗಾದರೆ ಯಾವ ಸಾಕ್ಷಿ ಮೇಲೆ ಬಂಧನ ಮಾಡಿ ಕರೆ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಹಲವಾರು ಜನರನ್ನು ಪ್ರತಿ ನಿತ್ಯ ಕರೆಯುವ ಎಸ್‌ಐಟಿ ಅಧಿಕಾರಿಗಳು ಈಗ ಮಾಡುತ್ತಿರುವುದು ಏನು? ಕಿರುಕುಳ ಅಲ್ಲವೇ? ಅವರಿಗೂ ಇದಕ್ಕೂ ಏನು ಸಂಬಂಧ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಈ ಪ್ರಕರಣದಲ್ಲಿ ಈಗ ಎಲ್ಲವೂ ಸ್ಪಷ್ಟವಾಗಿ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಮಾಹಿತಿ ಏನು ಇದೆಯೋ ಎಲ್ಲವನ್ನು ಸಹ ಕೊಡಿ ಅಂತ ಕೇಳುತ್ತಾರೆ. ದೂರನ್ನು ಬಹಳ ಕಷ್ಟಪಟ್ಟು ಕೊಡಿಸಿದ್ದೇವೆ ಅಂತ ಹೇಳುತ್ತಾರೆ. ಅ ವ್ಯಕ್ತಿ ಜೊತೆ ಮಾತನಾಡಬೇಕಾದರೆ ಕಷ್ಟ ಪಟ್ಟು ಕೊಡಿಸಿದ್ದೇವೆ ಅಂತ ಹೇಳ್ತಾರೆ. ಇದಕ್ಕಿಂತಲೂ ಸಿಎಂ ಅವರಿಗೆ ಸಾಕ್ಷಿ ಬೇಕಾ..? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಏನೋ 6 ಪ್ರಶ್ನೆ ಇಟ್ಟಿದ್ದಾರಂತೆ..?

ಬಿಜೆಪಿಯವರಿಗೆ ಏನೋ ಪತ್ರ ಬರೆದಿದ್ದಾರಂತೆ, ಗೊತ್ತಿದ್ದು ಯಾಕೆ ಪ್ರಜ್ವಲ್‌ಗೆ ಟಿಕೆಟ್ ಕೊಟ್ಟಿರಿ? ಜೆಡಿಎಸ್ ಅವರು ಪ್ರಜ್ವಲ್ ಅವರನ್ನು ಸಸ್ಪೆಂಡ್ ಯಾಕೆ ಮಾಡಿದರು? ಈಗ 5- ಪ್ರಶ್ನೆ ಕೇಳಿದ್ದೇವೆ ಅಂತ ಹೇಳುತ್ತಾರೆ. ನಾನು ಪಾರ್ಟಿಯಿಂದ ವಜಾ ಮಾಡುವ ನಿರ್ಧಾರ ಕೈಗೊಂಡೆ. ಆದರೆ, ಸಿಎಂ ಹೇಳಿಕೆಯನ್ನು ನೋಡಿದರೆ ಆರೋಪಿಯನ್ನು ಅಪರಾಧಿಯನ್ನಾಗಿ ಮಾಡಿದ್ದಾರೆ. ಆದರೆ, ಪ್ರಜ್ವಲ್‌ ಇನ್ನೂ ಆರೋಪಿ ಸ್ಥಾನದಲ್ಲಿ ಇದ್ದಾನೆ. ಅಪರಾಧಿ ಅನ್ನುವುದನ್ನು ಕೋರ್ಟ್‌ ನಿರ್ಧಾರ ಮಾಡಲಿದೆ? ಅದೀಗ ಎಲ್ಲಿ ಸಾಬೀತಾಗಿದೆ? ಎಂದು ಎಚ್.ಡಿ. ಕುಮಾರಸ್ವಾಮಿ ಕೇಳಿದರು.

ಇದನ್ನೂ ಓದಿ: CM Siddaramaiah: ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಬಿಜೆಪಿ ವಿರುದ್ಧ ಹರಿಹಾಯ್ದ ಸಿಎಂ ಸಿದ್ದರಾಮಯ್ಯ

ನಿಮ್ಮ ಎಸ್‌ಐಟಿಯವರು ಹೇಳುವ ಪ್ರಕಾರ, ವಿಡಿಯೊಗಳಲ್ಲಿ ಪ್ರಜ್ವಲ್‌ ಮುಖ ಕಾಣುತ್ತಿಲ್ಲ. ಹಾಗಾದರೆ, ಅಪರಾಧಿ ಸ್ಥಾನದಲ್ಲಿ ಯಾಕೆ ನಿಲ್ಲಿಸಿದ್ದೀರಿ? ಈ ಆರೋಪ ಪ್ರಜ್ವಲ್‌ ಮೇಲೆ ಬಂದ ತಕ್ಷಣ ನಾವು ನೈತಿಕತೆ ಉಳಿಸಿಕೊಳ್ಳಲು ಮೇಲೆ ಸಸ್ಪೆಂಡ್ ಮಾಡಿದ್ದೇವೆ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Continue Reading

ಕ್ರೀಡೆ

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

RCB vs RR: ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಕಂಡಿಲ್ಲ.

VISTARANEWS.COM


on

RCB vs RR
Koo

ಅಹಮದಾಬಾದ್​: ಐಪಿಎಲ್​ ಆವೃತ್ತಿಯ ಚೊಚ್ಚಲ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​(RCB vs RR) ಮತ್ತು ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಕಪ್​ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಗಳು ನಾಳೆ(ಬುಧವಾರ) ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಇದುವರೆಗಿನ ಐಪಿಎಲ್​ನ ಸಾಧನೆಗಳ ಹಿನ್ನೋಟ ಇಂತಿದೆ.

ಸೇಡು ತೀರಿಸಿಕೊಂಡೀತೇ ಆರ್​ಸಿಬಿ?


ರಾಜಸ್ಥಾನ್​ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 2022ರಲ್ಲಿ ನಡೆದಿದ್ದ ಐಪಿಎಲ್​ ಟೂರ್ನಿಯ ಕ್ವಾಲಿಫೈಯರ್​-2 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿತ್ತು. ಪಂದ್ಯದಲ್ಲಿ ರಾಜಸ್ಥಾನ್​ 7 ವಿಕೆಟ್​ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಈ ಸೋಲಿಗೆ ಆರ್​ಸಿಬಿ ಈ ಬಾರಿಯ ಎಲಿಮಿನೇಟರ್​ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ? ಎಂದು ಕಾದು ನೋಡಬೇಕಿದೆ.

ಆರ್​ಸಿಬಿ ನಾಕೌಟ್​/ ಪ್ಲೇ ಆಫ್​ ಸಾಧನೆ


2009ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

201ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2011ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2015ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2020ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2021ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಇದನ್ನೂ ಓದಿ RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

ಮುಖಾಮುಖಿ


ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಆರ್​ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ. ಈ ಬಾರಿಯ ಮುಖಾಮುಖಿಯಲ್ಲಿ ರಾಜಸ್ಥಾನ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್​ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆ), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂದ್ರೆ ಬರ್ಗರ್.

Continue Reading
Advertisement
Used Car Sale
ಪ್ರಮುಖ ಸುದ್ದಿ5 mins ago

Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

Summer Star Fashion
ಫ್ಯಾಷನ್12 mins ago

Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

Lok Sabha Elections 2024 7 celebs who didn’t vote in Lok Sabha Elections
ಬಾಲಿವುಡ್14 mins ago

Lok Sabha Elections 2024: ಈ ಬಾಲಿವುಡ್‌ ಸ್ಟಾರ್ಸ್‌ಗಳು ಈ ಬಾರಿ ವೋಟ್‌ ಹಾಕಲೇ ಇಲ್ಲ!

RR vs RCB
ಕ್ರೀಡೆ22 mins ago

RCB vs RR: ಆರ್​ಸಿಬಿ-ರಾಜಸ್ಥಾನ್​ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

Mangalore Tour
ಪ್ರವಾಸ25 mins ago

Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

2nd Pux Exam
ಬೆಂಗಳೂರು33 mins ago

2nd Puc Exam : ಆನ್‌ಲೈನ್‌ನಲ್ಲೆ ಸಿಗುತ್ತೆ ಪಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

Boiler Blast
ಕರ್ನಾಟಕ34 mins ago

Boiler Blast: ಅಥಣಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಮಹಿಳೆ ಸಾವು, ಇಬ್ಬರ ಸ್ಥಿತಿ ಗಂಭೀರ

Equity Market
ಪ್ರಮುಖ ಸುದ್ದಿ36 mins ago

Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Prajwal Revanna Case HD Kumaraswamy slams DK Shivakumar
ರಾಜಕೀಯ41 mins ago

Prajwal Revanna Case: ಡಿಕೆಶಿ ಒಪ್ಪಿಕೊಂಡಿದ್ದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ? ಸಿಎಂಗೆ ಎಚ್‌ಡಿಕೆ ಪ್ರಶ್ನೆ

Allu Arjun Sneha spotted at a dhaba
South Cinema42 mins ago

Allu Arjun: ರಸ್ತೆ ಬದಿ ಡಾಬಾದಲ್ಲಿ ಊಟ ಮಾಡಿದ ಅಲ್ಲು ಅರ್ಜುನ್‌ ದಂಪತಿ! ಫ್ಯಾನ್ಸ್‌ಗೆ ಅಚ್ಚರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌