Fashion Talk: ಗೆಜೆಟೆಡ್‌ ಆಫೀಸರ್‌ ಅಶ್ವಿನಿ ಲಕ್ಷ್ಮಯ್ಯ ಅಚ್ಚರಿಯ ಫ್ಯಾಷನ್‌ ಜರ್ನಿ! - Vistara News

ಫ್ಯಾಷನ್

Fashion Talk: ಗೆಜೆಟೆಡ್‌ ಆಫೀಸರ್‌ ಅಶ್ವಿನಿ ಲಕ್ಷ್ಮಯ್ಯ ಅಚ್ಚರಿಯ ಫ್ಯಾಷನ್‌ ಜರ್ನಿ!

ಗೆಜೆಟೆಡ್‌ ಆಫೀಸರ್‌ ಆಗಿರುವ ಅಶ್ವಿನಿ ಲಕ್ಷ್ಮಯ್ಯ, ಮಿಸ್‌ ಅರ್ತ್ ಇಕೋಸ್ಪಿಯರ್‌ 2023 (Miss Earth Ecosphere 2023) ಟೈಟಲ್‌ ವಿಜೇತೆ, ಮಿಸೆಸ್‌ ಇಂಡಿಯಾ (ಐಎನ್‌ಸಿ ) ಫೈನಲಿಸ್ಟ್‌ ಕೂಡ. ಇದರೊಂದಿಗೆ ನಾನಾ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿರುವ ಇವರು ವಿಸ್ತಾರ ನ್ಯೂಸ್‌ನೊಂದಿಗೆ (Fashion Talk) ತಮ್ಮ ಫ್ಯಾಷನ್‌ ಜರ್ನಿ ಹಂಚಿಕೊಂಡಿದ್ದಾರೆ.

VISTARANEWS.COM


on

Fashion Talk
ಚಿತ್ರಗಳು : ಅಶ್ವಿನಿ ಲಕ್ಷ್ಮಯ್ಯ, ಮಿಸ್‌ ಅರ್ತ್ ಇಕೋ ಸ್ಪಿಯರ್‌ 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ

ಗೆಜೆಟೆಡ್‌ ಆಫೀಸರ್‌ ಆಗಿದ್ದುಕೊಂಡೇ ಫ್ಯಾಷನ್‌ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಅಶ್ವಿನಿ ಲಕ್ಷ್ಮಯ್ಯ, ಮಿಸ್‌ ಅರ್ತ್ ಇಕೋಸ್ಪಿಯರ್‌ 2023 (Miss Earth Ecosphere 2023) ಟೈಟಲ್‌ ವಿಜೇತೆ, ಅಷ್ಟು ಮಾತ್ರವಲ್ಲ, ಮಿಸೆಸ್‌ ಇಂಡಿಯಾ (ಐಎನ್‌ಸಿ) ಫೈನಲಿಸ್ಟ್‌ ಆಗಿದ್ದವರು. ಜೊತೆಗೆ ಬೆಲ್ಲಿ ಡಾನ್ಸರ್‌, ಫಿಟ್ನೆಸ್‌ ಫ್ರೀಕ್‌ ಹೀಗೆ ಸಖತ್‌ ಸಕ್ರಿಯವಾಗಿರುವ ಲೇಡಿ. ಇವೆಲ್ಲದರೊಂದಿಗೆ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲೂ ತಮ್ಮನ್ನೂ ತೊಡಗಿಸಿಕೊಂಡಿರುವ ಇವರು, ಸರಕಾರಿ ಕೆಲಸದಲ್ಲಿದ್ದರೂ ಕೂಡ ಫ್ಯಾಷನ್‌ ಕನಸು ಕಾಣಬಹುದು, ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ತಮ್ಮ ಪ್ರೊಫೆಷನ್‌, ಪ್ಯಾಷನ್‌ ಹಾಗೂ ಫ್ಯಾಷನ್‌ ಕುರಿತಂತೆ ಒಂದಿಷ್ಟು ವಿಷಯಗಳನ್ನು ವಿಸ್ತಾರ ನ್ಯೂಸ್‌ನೊಂದಿಗೆ (Fashion Talk) ಹಂಚಿಕೊಂಡಿದ್ದಾರೆ.

Ashwini Lakshmaiah Miss Earth Ecosphere 2023

ವಿಸ್ತಾರ ನ್ಯೂಸ್‌ : ಗೆಜೆಟೆಡ್‌ ಆಫೀಸರ್‌ ಆಗಿರುವ ನೀವು ಫ್ಯಾಷನ್‌ ಲೋಕದತ್ತ ಹೇಗೆ ಸಾಗಿದಿರಿ?

ಮೊದಲಿನಿಂದಲೂ ನಾನು ಡಾನ್ಸ್, ಮಾರ್ಷಲ್‌ ಆರ್ಟ್ಸ್ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ನನ್ನನ್ನು ನಾನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. ಫ್ಯಾಷನ್‌ ಪೇಜೆಂಟ್‌ನಲ್ಲಿ ಪಾಲ್ಗೊಂಡು ಗೆಲುವು ಸಾಧಿಸುವ ಮೂಲಕ ಒಂದು ಐಡೆಂಟಿಟಿ ಪಡೆದು ಮತ್ತಷ್ಟು ಸಾಧನೆ ಮಾಡುವ ಕನಸನ್ನು ಕಂಡಿದ್ದೆ. ಇದಕ್ಕಾಗಿ ಕಷ್ಟಪಟ್ಟು ತಯಾರಿ ನಡೆಸಿದೆ. ಕೊನೆಗೆ ಗೆಲುವು ಸಾಧಿಸಿದೆ.

ವಿಸ್ತಾರ ನ್ಯೂಸ್‌ : ಫ್ಯಾಷನ್‌ ಪೇಜೆಂಟ್‌ಗಳು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಗುರುತಿಸಿಕೊಳ್ಳಲು ಸಹಾಯ ಮಾಡುತ್ತವೆಯೇ!

ಖಂಡಿತಾ ಹೌದು. ಒಂದು ಐಡೆಂಟಿಟಿ ಗಳಿಸಿಕೊಂಡಲ್ಲಿ ಜನರು ಗುರುತಿಸುತ್ತಾರೆ. ಇದು ಮತ್ತಷ್ಟು ಸಮಾಜ ಸೇವೆ ಮಾಡಲು ಪೂರಕವಾಗುತ್ತವೆ.

fashion talk with Ashwini Lakshmaia

ವಿಸ್ತಾರ ನ್ಯೂಸ್‌ : ಈ ಪೇಜೆಂಟ್‌ನಲ್ಲಿ ಗೆಲುವು ಸಾಧಿಸಲು ಯಾವ ರೀತಿ ನೀವು ತಯಾರಿ ನಡೆಸಿದಿರಿ?

ಫಿಲಿಫೈನ್ಸ್ ನಲ್ಲಿ ನಡೆದ ಈ ಪೇಜೆಂಟ್‌ಗೆ ತಯಾರಿ ನಡೆಸಲು ನನಗೆ ಸುಮಾರು ಒಂದು ತಿಂಗಳ ಕಾಲ ಅವಕಾಶ ದೊರಕಿತ್ತು. ರೆಗ್ಯುಲರ್‌ ಆಗಿ ವರ್ಕೌಟ್‌ ಮಾಡುತ್ತಿದೆ. ಸ್ಟ್ರಿಕ್ಟ್‌ ಡಯಟ್‌ ಮಾಡಿದೆ. ಲುಕ್ಸ್‌ಗಾಗಿ ಸಾಕಷ್ಟು ಗ್ರೂಮಿಂಗ್‌ ತರಗತಿಗಳನ್ನು ಪಡೆದೆ. ಪರಿಸರ ಜಾಗೃತಿ ಕುರಿತಂತೆ ಈ ಪೇಜೆಂಟ್‌ನಲ್ಲಿ ಹೆಚ್ಚಿನ ಗಮನ ನೀಡುತ್ತಿದ್ದದ್ದರಿಂದ ಈ ಕುರಿತು ತರಬೇತಿ ಪಡೆದೆ.

ವಿಸ್ತಾರ ನ್ಯೂಸ್‌ : ನಿಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಏನು ?

ಆಫೀಸ್‌ವೇರ್‌ನಲ್ಲಿ ಸೀರೆಯನ್ನು ಧರಿಸುತ್ತೇನೆ. ಫೀಲ್ಡ್‌ ವರ್ಕ್ ಇದ್ದಾಗ, ಜೀನ್ಸ್‌ ಹಾಗೂ ವೈಟ್‌ ಶರ್ಟ್ ಧರಿಸಲು ಇಷ್ಟಪಡುತ್ತೇನೆ. ಇನ್ನು ಫ್ಯಾಷನ್‌ ವಿಷಯಕ್ಕೆ ಬಂದಲ್ಲಿ, ನನಗೆ ಬಾಡಿಕಾನ್‌ ಉಡುಪುಗಳು ನನಗಿಷ್ಟ. ಅದರೊಂದಿಗೆ ನನಗೆ ನನ್ನದೇ ಆದ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿವೆ. ಎಲಿಗೆನ್ಸ್‌ ಹಾಗೂ ಕಂಫರ್ಟ್‌ಗೆ ಮೊದಲ ಆದ್ಯತೆ.

ವಿಸ್ತಾರ ನ್ಯೂಸ್‌ : ಸರಕಾರಿ ಕೆಲಸದಲ್ಲಿದ್ದುಕೊಂಡು ಫ್ಯಾಷನ್‌ ಕ್ಷೇತ್ರಕ್ಕೆ ಕಾಲಿಡುವವರಿಗೆ ಯಾವ ಬಗೆಯ ಸಲಹೆ ನೀಡುತ್ತೀರಾ?

ಮೊದಲು ಸಂಬಂಧಿಸಿದ ವಿಭಾಗದ ಮುಖ್ಯಸ್ಥರ ಪರ್ಮಿಷನ್‌ ತೆಗೆದುಕೊಳ್ಳಿ. ಹೆದರಬೇಡಿ, ಧೈರ್ಯವಾಗಿ ಮುನ್ನುಗ್ಗಿ. ಸರಿಯಾದ ಟ್ರೈನರ್‌ ಹಾಗೂ ಪೇಜೆಂಟ್‌ಗಳನ್ನು ಆಯ್ಕೆ ಮಾಡಿ. ಟ್ರೆಂಡ್‌ ಬಗ್ಗೆ ತಿಳಿದುಕೊಳ್ಳಿ. ಗ್ರೂಮಿಂಗ್‌ಗೆ ಒಳಗಾಗಿ.

in front of pool, Ashwini Lakshmaiah What is your next goal

ವಿಸ್ತಾರ ನ್ಯೂಸ್‌ : ನಿಮ್ಮ ಮುಂದಿನ ಗುರಿಯೇನು ?

ಸೇವಾ ಕಾರ್ಯಗಳಿಗೆ ಈ ಟೈಟಲ್‌ ಬಳಸಿಕೊಳ್ಳುವುದು. ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವುದು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Bracelate fashion: ಬ್ರೇಸ್‌ಲೆಟ್‌ ಆಗಿ ಬದಲಾದ ಮಾಂಗಲ್ಯದ ಕರಿಮಣಿ ಸರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್ ಇರುವಂತಹ ಮಾರ್ಬಲ್‌ ಪ್ರಿಂಟ್ಸ್ ಕ್ರಾಪ್‌ ಟಾಪ್‌ಗಳು ಇದೀಗ ಕಾಲೇಜು ಹುಡುಗಿಯರನ್ನು (Students Fashion) ಆವರಿಸಿಕೊಂಡಿವೆ. ನಾನಾ ಫ್ಯಾಬ್ರಿಕ್‌ನಲ್ಲಿ ಲಭ್ಯವಿರುವ ಈ ಕ್ರಾಪ್‌ ಟಾಪ್‌ಗಳು ಯಾವ್ಯಾವ ಡಿಸೈನ್‌ನಲ್ಲಿ ಲಭ್ಯ! ಧರಿಸುವಾಗ ಹೇಗೆಲ್ಲಾ ಇವನ್ನು ಮಿಕ್ಸ್ ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Students Fashion
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್‌ಗಳು ಇದೀಗ ಕಾಲೇಜು ಹುಡುಗಿಯರನ್ನು (Students Fashion) ಆವರಿಸಿಕೊಂಡಿವೆ. ನೋಡಲು ಬ್ರಶ್‌ ಸ್ಟ್ರೋಕ್ಸ್‌ ಅಥವಾ ಅಬ್‌ಸ್ಟ್ರಾಕ್ಟ್ ಪ್ರಿಂಟ್ಸ್‌ನಂತೆ ಕಾಣುವ ಈ ಕಲರ್‌ಫುಲ್‌ ಮಲ್ಟಿ ಶೇಡ್‌ನ ಮಾರ್ಬಲ್‌ ಪ್ರಿಂಟ್ಸ್ ಕ್ರಾಪ್‌ ಟಾಪ್‌ಗಳು ವೈವಿಧ್ಯಮಯ ಮಿಕ್ಸ್ ಮ್ಯಾಚ್‌ ಫ್ಯಾಷನ್‌ಗೆ ನಾಂದಿ ಹಾಡಿವೆ.

ಯುವತಿಯರಿಗೆ ಪ್ರಿಯವಾದ ಮಾರ್ಬಲ್‌ ಪ್ರಿಂಟ್ಸ್

“ನಾನಾ ಶೈಲಿಯ ಫ್ಯಾಬ್ರಿಕ್‌ನಲ್ಲಿ ಲಭ್ಯವಿರುವ ಈ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್‌ಗಳು ಈ ಮೊದಲು ಟೀ ಶರ್ಟ್‌ಗಳಲ್ಲಿ ಕಾಣಬಹುದಾಗಿತ್ತು. ಇನ್ನು, ಕೆಲವು ಹಾಲಿ ಡೇ ಡಿಸೈನರ್‌ವೇರ್‌ಗಳಲ್ಲಿಯೂ ಬಂದಿದ್ದವು. ಸಾಕಷ್ಟು, ರೆಸಾರ್ಟ್ ವೇರ್‌ಗಳಲ್ಲೂ ಪ್ರಚಲಿತದಲ್ಲಿದ್ದವು. ಇದೀಗ ಡಿಸೈನರ್‌ಗಳು ಪ್ರಯೋಗಾತ್ಮಕವಾಗಿ ಇದೇ ಬಗೆಯ ಪ್ರಿಂಟ್ಸ್‌ಗಳನ್ನು ಕ್ರಾಪ್‌ ಟಾಪ್‌ಗಳಲ್ಲಿ ಬಳಸಿದ್ದು, ಹಿಟ್‌ ಲಿಸ್ಟ್‌ಗೆ ಸೇರಿದೆ. ಇದು ಕಾಲೇಜು ಹುಡುಗಿಯರಿಗೂ ಪ್ರಿಯವಾಗಿವೆ. ಪರಿಣಾಮ, ನಾನಾ ಬಗೆಯವು ಫ್ಯಾಷನ್‌ಲೋಕಕ್ಕೆ ಎಂಟ್ರಿ ನೀಡಿವೆ” ಎನ್ನುತ್ತಾರೆ ಫ್ಯಾಷನಿಸ್ಟ್‌ ಧವನ್‌. ಅವರ ಪ್ರಕಾರ, ಇವು ಬಿಂದಾಸ್‌ ಲುಕ್‌ ನೀಡುತ್ತವಂತೆ .

ಏನಿದು ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್

ನೆಲಕ್ಕೆ ಹಾಕುವ ಮಾರ್ಬಲ್‌ ಕಲ್ಲುಗಳ ನೈಜ ರೂಪವನ್ನ, ಫ್ಯಾಬ್ರಿಕ್‌ ಮೇಲೆ ಬಳಸಲಾಗಿರುವುದು, ಮಾರ್ಬಲ್‌ ಪ್ರಿಂಟ್ಸ್ ಕ್ರಾಪ್‌ ಟಾಪ್‌ಗಳ ಹುಟ್ಟಿಗೆ ಕಾರಣ. ತಕ್ಷಣಕ್ಕೆ ಇವು ನೋಡಲು ಅಬ್‌ಸ್ಟ್ರಾಕ್ಟ್ ಪ್ರಿಂಟ್‌ ಎಂದೆನಿಸಿದರೂ ಇವು ಅವಲ್ಲ! ಮಾರ್ಬಲ್‌ ಪ್ರಿಂಟ್ಸ್‌ನವೆಲ್ಲವೂ ನೋಡಲು ಒಂದೇ ಬಗೆಯವೆನಿಸಬಹುದು. ಆದರೆ, ಇವುಗಳಲ್ಲೆ ನಾನಾ ಬಗೆಯ ಶೇಡ್‌ಗಳು ಲಭ್ಯ. ಲೈಟ್‌ ಅಥವಾ ಡಾರ್ಕ್ ಶೇಡ್‌ನಲ್ಲೂ ಕಾಣಬಹುದು. ಹರಿಯುವ ನೀರಿನಂತೆಯು ಕೆಲವು ಕಾಣಿಸುತ್ತವೆ. ಒಟ್ಟಿನಲ್ಲಿ, ಈ ಶೈಲಿಯ ಪ್ರಿಂಟ್ಸ್ ಇಂದಿನ ಯುವತಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇದನ್ನೂ ಓದಿ: Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!

ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್‌ ಮಿಕ್ಸ್ ಮ್ಯಾಚ್‌

ಮಾರ್ಬಲ್‌ ಪ್ರಿಂಟ್ಸ್ ಇರುವಂತಹ ಫ್ಯಾಬ್ರಿಕ್‌ ಆಧಾರದ ಮೇಲೆ ಮಿಕ್ಸ್ ಮ್ಯಾಚ್‌ ಮಾಡಬಹುದು. ನಾನಾ ಬಗೆಯ ಫ್ಯಾಬ್ರಿಕ್‌ನಲ್ಲಿ ಈ ಕ್ರಾಪ್‌ ಟೀ ಶರ್ಟ್‌ಗಳು ಲಭ್ಯ. ಹಾಗಾಗಿ ಅವುಗಳ ಫ್ಯಾಬ್ರಿಕ್‌ ಹಾಗೂ ಡಿಸೈನ್ಸ್‌ಗೆ ಅನುಗುಣವಾಗಿ ಮ್ಯಾಚ್‌ ಮಾಡಬಹುದು ಎಂದು ಸಿಂಪಲ್‌ ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ಧೀಮಂತ್‌.

  • ಸಿಂಥೆಟಿಕ್‌ ಮಾರ್ಬಲ್‌ ಪ್ರಿಂಟೆಡ್‌ ಕ್ರಾಫ್‌ ಟಾಪ್‌ಗೆ ಕಾಟನ್‌, ಜೆನ್ಸ್ ಪ್ಯಾಂಟ್‌ ಮ್ಯಾಚ್‌ ಮಾಡಬಹುದು.
  • ಲೆನಿನ್‌ ಹಾಗೂ ಕಾಟನ್‌ ಪ್ಯಾಂಟ್‌ಗಳಿಗೆ ಕಾಟನ್‌ ಮಾರ್ಬಲ್‌ ಪ್ಯಾಂಟ್‌ ಧರಿಸಬಹುದು.
  • ಮಿನಿ ಸ್ಕರ್ಟ್‌ಗಳಿಗೆ ಆದಷ್ಟೂ ರಯಾನ್‌ ಅಥವಾ ಸ್ಪನ್‌ ಫ್ಯಾಬ್ರಿಕ್‌ನವನ್ನು ಧರಿಸಬಹುದು.
  • ಕ್ರಾಪ್‌ ಟಾಪ್‌ ಫುಲ್‌ ಸ್ಲೀವ್‌ದ್ದಾದಲ್ಲಿ ಆದಷ್ಟೂ ಪ್ಯಾಂಟ್ ಅಥವಾ ಸ್ಕರ್ಟ್ ಲೈಟ್‌ ಶೇಡ್‌ನದ್ದಾಗಿರಬೇಕು.
  • ಲಾಂಗ್‌ ಮಿಡಿ ಸ್ಕರ್ಟ್‌ಗೆ ಲೈಟ್‌ ಶೇಡ್‌ ಮಾರ್ಬಲ್‌ ಟಾಪ್‌ ಬೆಸ್ಟ್ ಮ್ಯಾಚ್‌ ಎನ್ನಬಹುದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Kangana Ranaut Saree Fashion: ದೇಸಿ ಸೀರೆ ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ ಕಂಗನಾ ರಣಾವತ್!

ಸದಾ ಗ್ಲಾಮರಸ್‌ ಔಟ್‌ಫಿಟ್‌ಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಬಾಲಿವುಡ್‌ ನಟಿ ಕಂಗನಾ ರಾಣಾವತ್‌ (kangana Ranaut Saree Fashion), ರಾಜಕೀಯಕ್ಕೆ ಧುಮುಕಿದ ನಂತರ ದೇಸಿ ಸೀರೆಗಳತ್ತ ವಾಲಿದ್ದಾರೆ. ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ತಾವು ಉಟ್ಟಿದ್ದ ದೇಸಿ ಸೀರೆಯನ್ನು ನೇಯ್ದ ನೇಕಾರರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅವರ ಸೀರೆ ಪ್ರೇಮದ ಬಗ್ಗೆ ಇಲ್ಲಿದೆ ಒಂದಿಷ್ಟು ವಿವರ.

VISTARANEWS.COM


on

Kangana Ranaut Saree Fashion
ಚಿತ್ರಗಳು: ಕಂಗನಾ ರಾಣಾವತ್‌, ಬಾಲಿವುಡ್‌ ನಟಿ, ರಾಜಕೀಯ ಧುರೀಣೆ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟಿ ಹಾಗೂ ರಾಜಕೀಯ ಧುರೀಣೆ ಕಂಗನಾ ರಾಣಾವತ್‌ (kangana Ranaut Saree Fashion) ಅವರ ದೇಸಿ ಸೀರೆ ಪ್ರೇಮ ಇದೀಗ ಸೀರೆ ಪ್ರಿಯರನ್ನು ಸೆಳೆದಿದೆ. ಇದಕ್ಕೆ ಪೂರಕ ಎಂಬಂತೆ, ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ, ಬೆಳ್ಳಿ ಹಾಗೂ ಬಂಗಾರದ ಎಳೆಗಳಿಂದ ನೇಯ್ದ ಹ್ಯಾಂಡ್‌ಲೂಮ್‌ ಸಿಲ್ಕ್ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡ ಕಂಗನಾ, ತಾವು ಉಟ್ಟ ಸೀರೆಯನ್ನು ನೇಯ್ದ ಭಾರತೀಯ ನೇಯ್ಗೆಗಾರರಿಗೆ ಧನ್ಯವಾದಗಳನ್ನು ಸೋಷಿಯಲ್‌ ಮೀಡಿಯಾ ಮೂಲಕ ತಿಳಿಸಿದ್ದಾರೆ.

Kangana Ranaut Saree Fashion

ಸೀರೆಗೆ ಬದಲಾದ ಕಂಗನಾ ಇಮೇಜ್‌

ನಟಿಸಿದ ಬಹುತೇಕ ಸಿನಿಮಾಗಳಲ್ಲಿ ಹೆಚ್ಚಾಗಿ ಗ್ಲಾಮರಸ್‌ ಔಟ್‌ಫಿಟ್‌ಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ, ನಟಿ ಕಂಗನಾ ರಾಣಾವತ್‌, ರಾಜಕೀಯಕ್ಕೆ ಧುಮುಕಿದ ನಂತರ ಸೀರೆಗಳತ್ತ ವಾಲಿದ್ದಾರೆ. ಅವರು ಧರಿಸುವ ಒಂದೊಂದು ಸೀರೆಗಳು, ಇತ್ತೀಚೆಗೆ ಸೀರೆ ಪ್ರಿಯರನ್ನು ಸೆಳೆಯಲಾರಂಭಿಸಿವೆ. ಇವು ಅವರ ಇಮೇಜನ್ನು ಬದಲಿಸುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Kangana Ranaut Saree Fashion

ಏರ್‌ಪೋರ್ಟ್ ಲುಕ್‌ಗೂ ಸೀರೆ

ಕಂಗನಾ ಮೂಲತಃ ನಟಿ ಕಮ್‌ ಮಾಡೆಲ್‌, ಹಾಗಾಗಿ ಅವರ ಸ್ಟೈಲ್‌ ಹಾಗೂ ಫ್ಯಾಷನ್‌ ಸ್ಟೇಟ್ ಮೆಂಟ್‌ಗಳು ಮೊದಲಿನಿಂದಲೂ ಟ್ರೆಂಡ್‌ ಸೆಟ್ಟಿಂಗ್‌ಗೆ ನಾಂದಿ ಹಾಡುತ್ತಿದ್ದವು. ಇದೀಗ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ ನಂತರ, ಅವರ ಒಂದೊಂದು ಸ್ಟೈಲ್‌ ಹಾಗೂ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ವೆಸ್ಟರ್ನ್ ಔಟ್‌ಫಿಟ್‌ಗಳಿಗೆ ತಾತ್ಕಲಿಕವಾಗಿ ತಿಲಾಂಜಲಿ ಇಟ್ಟಿರುವ, ಕಂಗನಾ, ಸದ್ಯ ದೇಸಿ ಔಟ್‌ಫಿಟ್‌ಗಳಲ್ಲೆ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದ್ದಾರೆ. ಅಷ್ಟೇಕೆ! ಏರ್‌ಪೋರ್ಟ್ ಲುಕ್‌ನಲ್ಲೂ ಕೂಡ ಸೀರೆಯನ್ನು ಪರಿಚಯಿಸಿದ ಮೊದಲ ಬಾಲಿವುಡ್‌ ನಟಿಯಾಗಿದ್ದಾರೆ. ಸದ್ಯ ಡಿಸೈನರ್‌ ಸೀರೆಗಳಿಗಿಂತ ಸಾದಾ ಸಿಂಪಲ್‌ ಹ್ಯಾಂಡ್‌ಲೂಮ್‌ ಹಾಗೂ ಸಿಲ್ಕ್ ಕಾಟನ್‌ ಸೀರೆಗಳನ್ನು ಉಡುತ್ತಿರುವ ಕಂಗನಾ, ನಾಮಿನೇಷನ್‌ ಸಮಯದಲ್ಲೂ ತೀರಾ ಸಿಂಪಲ್‌ ಶೇಡ್‌ನ ಪಿಸ್ತಾ ಸೀರೆಯಲ್ಲಿ ಕಾಣಿಸಿಕೊಂಡಿದ್ದರು.

Kangana Ranaut Saree Fashion

ಶ್ವೇತ ವರ್ಣದ ಸೀರೆಗಳ ಪ್ರೇಮ

ರಾಜಕೀಯಕ್ಕೆ ಸೇರಿದ ನಂತರ ಕಂಗನಾ ಅತಿ ಹೆಚ್ಚಾಗಿ ಶ್ವೇತ ವರ್ಣದ ಸೀರೆಗಳನ್ನು ಉಟ್ಟಿದ್ದಾರೆ. ಅವುಗಳಲ್ಲಿ, ಹಾಫ್‌ ವೈಟ್‌, ಕ್ರೀಮಿಶ್‌ ವೈಟ್‌, ಮಿಲ್ಕಿ ವೈಟ್‌ ಶೇಡ್‌ಗಳ ಸಿಲ್ಕ್‌ ಹಾಗೂ ಹ್ಯಾಂಡ್‌ಲೂಮ್‌ ಸೀರೆಗಳು ಅವರನ್ನುಆಕರ್ಷಕವಾಗಿ ಬಿಂಬಿಸಿದೆ. ಇನ್ನು, ಕಂಗನಾ ಅವರೇ ಹೇಳುವಂತೆ, ಬಿಳಿ ವರ್ಣ ಶಾಂತಿಯ ಧ್ಯೋತಕ ಹಾಗೂ ಪಾಸಿಟಿವಿ ಎನರ್ಜಿಯನ್ನು ನೀಡುತ್ತದಂತೆ. ಹಾಗಾಗಿ ಈ ಬಗೆಯ ಶೇಡ್ಸ್ ಅವರಿಗೆ ಇಷ್ಟವಂತೆ.

ಇದನ್ನೂ ಓದಿ: Dupatta Selection Tips: ಪರ್ಫೆಕ್ಟ್ ದುಪಟ್ಟಾ ಸೆಲೆಕ್ಷನ್‌ಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

ಸೀರೆಯಲ್ಲಿ ಎಲಿಗೆಂಟ್‌ ಲುಕ್‌ಗೆ ಆದ್ಯತೆ

ಸೀರೆಯೊಂದಿಗೆ ಸಿಂಪಲ್‌ ಹೇರ್‌ಸ್ಟೈಲ್‌, ತಿಳಿಯಾದ ಮೇಕಪ್‌ ಇವುಗಳಿಗೆಲ್ಲಾ ಮ್ಯಾಚ್‌ ಆಗುವಂತಹ ಆಕ್ಸೆಸರೀಸ್‌, ಕಂಗನಾ ಸೌಂದರ್ಯವನ್ನು ಹೆಚ್ಚಿಸಲಾರಂಭಿಸಿವೆ. ಒಟ್ಟಾರೆ, ಅವರ ಇಂದಿನ ಸ್ಥಾನ-ಮಾನಕ್ಕೆ ಸೀರೆಗಳು ಪರ್ಫೆಕ್ಟ್ ಮ್ಯಾಚ್‌ ಆಗುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Dupatta Selection Tips: ಪರ್ಫೆಕ್ಟ್ ದುಪಟ್ಟಾ ಸೆಲೆಕ್ಷನ್‌ಗೆ ಇಲ್ಲಿದೆ 5 ಸಿಂಪಲ್‌ ಸೂತ್ರ

ಉಡುಪಿಗೆ ಧರಿಸುವ ದುಪಟ್ಟಾ ಆಯ್ಕೆಗೆ ಒಂದಿಷ್ಟು ಸಿಂಪಲ್‌ ಸೂತ್ರಗಳನ್ನು (Dupatta Selection Tips) ಪಾಲಿಸಬೇಕು. ಟ್ರೆಂಡಿಯಾಗಿರುವ ದುಪಟ್ಟಾ ಖರೀದಿಸಿದರಷ್ಟೇ ಸಾಲದು, ಅದಕ್ಕೆ ತಕ್ಕಂತೆ ಎಥ್ನಿಕ್‌ ಉಡುಪುಗಳು ಮ್ಯಾಚ್‌ ಆಗಬೇಕು. ಹಾಗಾದಲ್ಲಿ, ದುಪಟ್ಟಾ ಸೆಲೆಕ್ಷನ್‌ ಹೇಗೆ? ಇಲ್ಲಿದೆ ಟಿಪ್ಸ್.

VISTARANEWS.COM


on

Dupatta Selection Tips
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ದುಪಟ್ಟಾಗಳು ಇಂದು ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ, ಪ್ರಿಂಟ್ಸ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಮೊದಲೆಲ್ಲಾ ಡಿಸೈನರ್‌ವೇರ್‌ಗಳ ಜೊತೆಗೆ ದೊರೆಯುತ್ತಿದ್ದ ದುಪಟ್ಟಾಗಳು (Dupatta Selection Tips) ಇದೀಗ ಪ್ರತ್ಯೇಕವಾಗಿಯೂ ದೊರೆಯುತ್ತಿವೆ. ಅಷ್ಟು ಮಾತ್ರವಲ್ಲ, ಡಿಸೈನ್‌ ಮಾಡಿಸುವ ಉಡುಗೆಗೆ ತಕ್ಕಂತೆ ದುಪಟ್ಟಾ ಮ್ಯಾಚ್‌ ಮಾಡುವ ಕ್ರೇಝ್‌ ಮೊದಲಿಗಿಂತ ಹೆಚ್ಚಾಗಿದೆ. ಕೆಲವೊಮ್ಮೆಯಂತೂ ದುಪಟ್ಟಾಗಳೇ ಡಿಸೈನರ್‌ವೇರ್‌ಗಿಂತ ಆಕರ್ಷಕವಾಗಿ ಕಾಣಿಸುತ್ತವೆ. ಆ ಮಟ್ಟಿಗೆ ದುಪಟ್ಟಾಗಳು ಇಂದು ಪ್ರಾಮುಖ್ಯತೆ ಪಡೆದುಕೊಂಡಿವೆ.

Dupatta Selection Tips

ದುಪಟ್ಟಾಗಳ ಪ್ರಮುಖ ಪಾತ್ರ

“ದುಪಟ್ಟಾಗಳು ಇಂದು ಎಥ್ನಿಕ್‌ ಡಿಸೈನರ್‌ವೇರ್‌ಗಳಿಗೆ ಸಾಥ್‌ ನೀಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅದು ಯಾವುದೇ ಗ್ರ್ಯಾಂಡ್‌ ಡ್ರೆಸ್‌ ಆಗಿರಲಿ ಸಿಂಪಲ್‌ ಉಡುಪಾಗಿರಲಿ ಅವುಗಳ ಡಿಸೈನ್‌ಗೆ ತಕ್ಕಂತೆ ದುಪಟ್ಟಾ ಧರಿಸುವುದು ಆಯಾ ಯುವತಿಯ ಅಭಿರುಚಿಯನ್ನು ತೋರ್ಪಡಿಸುತ್ತದಂತೆ” ಹಾಗೆನ್ನುತ್ತಾರೆ ಸ್ಟೈಲಿಸ್ಟ್ ಗೀತಾ. ಅವರು ಹೇಳುವಂತೆ, ಇವುಗಳನ್ನು ಪ್ರತ್ಯೇಕವಾಗಿ ಆಯ್ಕೆ ಮಾಡುವಾಗ ಒಂದಿಷ್ಟು ಸಲಹೆಗಳನ್ನು ಪಾಲಿಸುವುದು ಉತ್ತಮ ಎನ್ನುತ್ತಾರೆ.

Dupatta Selection Tips

ಗ್ರ್ಯಾಂಡ್‌ ಡಿಸೈನರ್‌ವೇರ್‌ಗೆ ಮ್ಯಾಚಿಂಗ್‌

ಗ್ರ್ಯಾಂಡ್‌ ಡಿಸೈನರ್‌ವೇರ್‌ಗೆ ದುಪಟ್ಟಾ ಆಯ್ಕೆ ಮಾಡುವಾಗ ಆದಷ್ಟೂ ಡಿಸೈನ್‌ ಹಾಗೂ ಕಲರ್‌ಗೆ ಪ್ರಾಮುಖ್ಯತೆ ನೀಡಬೇಕು. ಟ್ರೆಂಡಿಯಾಗಿರುವ ದುಪಟ್ಟಾ ಖರೀದಿಸಿದರಷ್ಟೇ ಸಾಲದು, ಅದಕ್ಕೆ ತಕ್ಕಂತೆ ಮ್ಯಾಚ್‌ ಮಾಡುತ್ತಿರುವ ಎಥ್ನಿಕ್‌ ಉಡುಪುಗಳು ಮ್ಯಾಚ್‌ ಆಗಬೇಕು.

ಲೆಹೆಂಗಾ ದುಪಟ್ಟಾ

ಲೆಹೆಂಗಾಗಳಿಗೆ ದುಪಟ್ಟಾ ಹೊಂದಿಸುವುದಾದಲ್ಲಿ ಇಂದು ಟ್ರೆಂಡಿಯಾಗಿರುವ ಕಾಂಟ್ರಾಸ್ಟ್ ಶೇಡ್‌ನವನ್ನು ಆಯ್ಕೆ ಮಾಡಿ. ಸಿಂಪಲ್‌ ಆದ್ರೆ ಸಾಕು ಎನ್ನುವವರು ಮಾನೋಕ್ರೋಮ್‌ ಶೇಡ್ಸ್‌ಗೆ ಮೊರೆ ಹೋಗಬಹುದು. ದುಪಟ್ಟಾ ಉದ್ದನಾಗಿರಬೇಕು. ಅದನ್ನು ದಾವಣಿ ಎನ್ನಲಾಗುತ್ತದೆ.

Dupatta Selection Tips

ಫ್ಯಾಬ್ರಿಕ್‌ ಸೆಲೆಕ್ಷನ್‌

ದುಪಟ್ಟಾ ಫ್ಯಾಬ್ರಿಕ್‌ ನೋಡಿ ಸೆಲೆಕ್ಷನ್‌ ಮಾಡಿ. ಯಾಕೆಂದರೇ, ಔಟ್‌ಫಿಟ್‌ ಭಾರಿ ಡಿಸೈನ್‌ ಹಾಗೂ ಫ್ಯಾಬ್ರಿಕ್‌ನದ್ದಾದಲ್ಲಿ ಆದಷ್ಟೂ ಲೈಟ್‌ವೈಟ್‌ ಸಾಫ್ಟ್ ಶೀರ್‌, ನೆಟ್ಟೆಡ್ನಂತಹ ಪಾರದರ್ಶಕ ದುಪಟ್ಟಾಗಳು ಉತ್ತಮ.

Dupatta Selection Tips

ಸಲ್ವಾರ್ ಕಮೀಝ್‌/ಚೂಡಿದಾರ್ ಸೆಟ್‌

ಸಾದಾ ಸೆಟ್‌ಗಳಿಗೆ ಭಾರಿ ಡಿಸೈನ್‌ನ ದುಪಟ್ಟಾ ಆಯ್ಕೆ ಬೆಸ್ಟ್. ಗ್ರ್ಯಾಂಡ್‌ ಡಿಸೈನ್‌ನವಕ್ಕೆ ಸಿಂಪಲ್‌ ದುಪಟ್ಟಾ ಓಕೆ. ಇನ್ನು, ಧರಿಸುವ ಕುರ್ತಾಗಿಂತ ದುಪಟ್ಟಾ ಉದ್ದನಾಗಿ ಕಾಣಿಸಬೇಕು. ಪಾದಗಳಿಗೆ ತಾಗಬಾರದು.

ಇದನ್ನೂ ಓದಿ: Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

ಗೋಲ್ಡನ್‌ ಶೇಡ್ ದುಪಟ್ಟಾ

ಗ್ರ್ಯಾಂಡ್‌ ದುಪಟ್ಟಾಗಳನ್ನು ಬಹುತೇಕ ಎಲ್ಲಾ ಗ್ರ್ಯಾಂಡ್‌ ಉಡುಪುಗಳಿಗೂ ಮಿಕ್ಸ್ ಮ್ಯಾಚ್‌ ಮಾಡಬಹುದು. ಅದರಲ್ಲೂ ಬಂಗಾರ ವರ್ಣದ ದುಪಟ್ಟಾಗಳು ಎಲ್ಲಾ ಗೋಲ್ಡ್ ಹಾಗೂ ಸಿಲ್ವರ್‌ ಝರಿ ಅಥವಾ ಬಾರ್ಡರ್‌ ಇರುವಂತಹ ಎಥ್ನಿಕ್‌ ಉಡುಪುಗಳಿಗೆ ಹೊಂದುತ್ತವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Ambani Family Fashion: ಅಂಬಾನಿ ಕುಟುಂಬದ ಮಹಿಳೆಯರ ಜ್ಯುವೆಲರಿ ಡಿಸೈನ್ಸ್ ಕಾಪಿ ಮಾಡಿ ಟ್ರೆಂಡಿಯಾದ ಜ್ಯುವೆಲರಿಗಳಿವು!

ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಪ್ರಿ-ವೆಡ್ಡಿಂಗ್‌ ಕಾರ್ಯಕ್ರಮಗಳಲ್ಲಿ ಧರಿಸಿದ ಎಮಾರಾಲ್ಡ್ ಜ್ಯುವೆಲರಿಗಳ ಕಲೆಕ್ಷನನ್ನು ಕಾಪಿ ಮಾಡಿದ ಇಮಿಟೇಷನ್‌ ಜ್ಯುವೆಲರಿಗಳು ಇದೀಗ ಬೇಡಿಕೆ ಹೆಚ್ಚಿಸಿಕೊಂಡಿವೆ. ಯಾವ್ಯಾವ ಡಿಸೈನ್‌ಗಳು ದೊರೆಯುತ್ತಿವೆ? ಬೇಡಿಕೆ ಹೆಚ್ಚಲು ಕಾರಣವೇನು? ಇಲ್ಲಿದೆ ವಿವರ.

VISTARANEWS.COM


on

Ambani Family Fashion
ಚಿತ್ರಗಳು: ಅಂಬಾನಿ ಫ್ಯಾಮಿಲಿಯ ಮಹಿಳೆಯರು ಧರಿಸಿರುವ ಅತ್ಯಮೂಲ್ಯ ಎಮಾರಾಲ್ಡ್ ಜ್ಯುವೆಲರಿಗಳ ಚಿತ್ರಗಳು
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಸಾಮಾನ್ಯ ಮಹಿಳೆ ಕೂಡ ಅಂಬಾನಿ ಫ್ಯಾಮಿಲಿಯ (Ambani Family Fashion) ಮಹಿಳೆಯರು ಧರಿಸುವ ಜ್ಯುವೆಲರಿಗಳನ್ನು, ತಾವು ಕೂಡ ಧರಿಸಿ ಸಂತಸ ಪಡಬಹುದು! ಹೌದು. ಅದು ಹೇಗೆ? ಎಂದು ಯೋಚಿಸುತ್ತಿದ್ದೀರಾ! ಅವರಂತೆ ಒರಿಜಿನಲ್‌ ಜ್ಯುವೆಲರಿಗಳನ್ನು ಖರೀದಿಸಲು ಸಾಧ್ಯವಾಗದಿದ್ದರೂ, ಥೇಟ್‌ ಅವರು ಧರಿಸಿರುವಂತಹ ಜ್ಯುವೆಲರಿಗಳನ್ನೇ ಹೋಲುವಂತಹ ಕೃತಕ ಪ್ರಿಶಿಯಸ್‌ ಸ್ಟೋನ್‌ನಿಂದ ಸಿದ್ಧಗೊಂಡ ಇಮಿಟೇಷನ್‌ ಜ್ಯುವೆಲರಿಗಳನ್ನು ಕೊಂಡು ಧರಿಸಿ ಖುಷಿ ಪಡಬಹುದು. ಇದಕ್ಕೆ ಪ್ರಮುಖ ಕಾರಣ, ಕೈಗೆಟಕುವ ಬೆಲೆ. ಹಾಗಾಗಿ ಈ ಕೃತಕ ಇಮಿಟೇಷನ್‌ ಜ್ಯುವೆಲರಿಗಳು ಇದೀಗ ಸಖತ್‌ ಟ್ರೆಂಡಿಯಾಗಿವೆ.

Ambani Family Fashion

ಅಂಬಾನಿ ಫ್ಯಾಮಿಲಯ ಮಹಿಳೆಯರ ಜ್ಯುವೆಲರಿ ಮೋಹ

ನೀತಾ ಅಂಬಾನಿ, ಇಶಾ ಅಂಬಾನಿ, ಶ್ಲೋಕಾ ಸೇರಿದಂತೆ ಅಂಬಾನಿ ಕುಟುಂಬದ ಮಹಿಳೆಯರ ಪ್ರೆಸ್ಟಿಜ್‌ನ ಧ್ಯೋತಕವಾದ ಅಮೂಲ್ಯವಾದ ಎಮಾರಾಲ್ಡ್ ಜ್ಯುವೆಲರಿಗಳ ರಿಪ್ಲೀಕಾದಂತೆ ಕಾಣುವ ಈ ಆರ್ಟಿಫಿಶಿಯಲ್‌ ಇಮಿಟೇಷನ್‌ ಆಭರಣಗಳು, ಎಲ್ಲಾ ವರ್ಗದ ಮಹಿಳೆಯರನ್ನು ಆಕರ್ಷಿಸಿವೆ. ಕೋಟಿಗಟ್ಟಲೆ ಬೆಲೆ ಬಾಳುವ ಜ್ಯುವೆಲರಿ ಧರಿಸಲಾಗದಿದ್ದರೂ, ಅದರಂತೆಯೇ ಕಾಣಿಸುವ ಜ್ಯುವೆಲರಿಗಳನ್ನು ಧರಿಸುವ ಇಚ್ಛೆ ಸಾಕಷ್ಟು ಮಹಿಳೆಯರದ್ದಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಡಿಸೈನ್‌ನ ಆಭರಣಗಳು ಕಾಲಿಟ್ಟಿವೆ ಎನ್ನುತ್ತಾರೆ ಇಮಿಟೇಷನ್‌ ಜ್ಯುವೆಲರಿ ಮಾರಾಟಗಾರಾದ ರಾಕೇಶ್‌.

Ambani Family Fashion

ಎಮಾರಾಲ್ಡ್ ಸೆಟ್‌ನಂತೆ ಕಾಣುವ ಇಮಿಟೇಷನ್‌ ಜ್ಯುವೆಲರಿ

ಅಂದಹಾಗೆ, ಎಲ್ಲರಿಗೂ ತಿಳಿದಿರುವಂತೆ ನೀತಾ ಅಂಬಾನಿಯವರ ಬಳಿ ಎಮರಾಲ್ಡ್‌ನ ದೊಡ್ಡ ಸೆಟ್‌ ಜ್ಯುವೆಲರಿಗಳಿವೆ. ಮಗಳು ಮತ್ತು ಸೊಸೆಯ ಬಳಿಯೂ ಸಾಕಷ್ಟಿವೆ. ಪ್ರಪಂಚದ ಅತ್ಯಂತ ದುಬಾರಿ ಎಮರಾಲ್ಡ್‌ನಿಂದ ಮಾಡಿದ ಜ್ಯುವೆಲರಿ ಸೆಟ್‌ಗಳಿವು. ಪ್ರಿ-ವೆಡ್ಡಿಂಗ್‌ನಲ್ಲಿ ಇವರೆಲ್ಲರೂ ಧರಿಸಿದ್ದೇ ತಡ, ಕೃತಕ ಆಭರಣ ಲೋಕದಲ್ಲಿ, ಇವುಗಳ ರಿಪ್ಲೀಕಾ ಜ್ಯುವೆಲರಿಗಳ ಆಗಮನವಾಗತೊಡಗಿತು. ಕೇವಲ ಎರಡ್ಮೂರು ಸಾವಿರ ರೂ.ಗಳಿಗೆ ದೊರಕುಲಾರಂಭಿಸಿತು. ಹಾಗಾಗಿ ಬೇಡಿಕೆಯು ಹೆಚ್ಚಿತು ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ಸ್. ಅಷ್ಟೇಕೆ, ಇದೀಗ ಬ್ರೈಡಲ್‌ ಸೆಟ್‌ಗಳಲ್ಲೂ ನಾನಾ ಡಿಸೈನ್‌ನವು ಕಾಲಿಟ್ಟಿವೆ. ಖರೀದಿ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಕೃತಕ ಆಭರಣದ ಮಾರಾಟಗಾರರು.

ಇದನ್ನೂ ಓದಿ: Saree Fashion: ಸೆಲೆಬ್ರೆಟಿ ಲುಕ್‌ಗಾಗಿ ಬಂತು ಬಂಗಾರ ವರ್ಣದ ಸೀರೆಗಳು!

ಇಮಿಟೇಷನ್‌ ಎಮಾರಾಲ್ಡ್ ಜ್ಯುವೆಲರಿ ಪ್ರಿಯರಿಗೆ ಸಿಂಪಲ್‌ ಟಿಪ್ಸ್

  • ಫಿನಿಶಿಂಗ್‌ ಇರುವಂತಹ ಜ್ಯುವೆಲ್‌ ಸೆಟ್‌ ಆಯ್ಕೆ ಮಾಡಿ.
  • ಗೋಲ್ಡನ್‌ ಹಾಗೂ ಸಿಲ್ವರ್‌ ಕೋಟೆಡ್‌ ಸೆಟ್‌ಗಳು ಟ್ರೆಂಡ್‌ನಲ್ಲಿವೆ.
  • ಈ ಸೆಟ್‌ನೊಂದಿಗೆ ಮ್ಯಾಚ್‌ ಆಗದ ಇತರೇ ಮೆಟಲ್‌ನ ಜ್ಯುವೆಲರಿಗಳನ್ನು ಧರಿಸಕೂಡದು.
  • ಕ್ಲಾಸಿ ಲುಕ್‌ಗೆ ಇವು ಮ್ಯಾಚ್‌ ಆಗುತ್ತವೆ.
  • ಡಾರ್ಕ್ ಶೇಡ್‌ ಹಾಗೂ ಮಿಂಟ್‌ ಗ್ರೀನ್‌ ಶೇಡ್‌ನವು ಪ್ರಚಲಿದಲ್ಲಿವೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading
Advertisement
Danielle Wyatt Marriage
ಕ್ರೀಡೆ6 mins ago

Danielle Wyatt Marriage: ಸಲಿಂಗ ಸಂಗಾತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇಂಗ್ಲೆಂಡ್ ಮಹಿಳಾ ಕ್ರಿಕೆಟ್​ ತಂಡದ ಆಟಗಾರ್ತಿ

Actor Darshan
ಕರ್ನಾಟಕ11 mins ago

Actor Darshan: ಒಂದಲ್ಲ, ಎರಡಲ್ಲ, 3 ಕೇಸ್‌ಗಳಲ್ಲಿ ದರ್ಶನ್‌ಗೆ ಸಂಕಷ್ಟ; ಆರೋಪ ಸಾಬೀತಾದರೆ ಯಾವ ಶಿಕ್ಷೆ?

Supreme Court
ದೇಶ13 mins ago

Supreme Court: ನೀಟ್​ ಅಕ್ರಮ ಆರೋಪ; ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ನೋಟಿಸ್‌ ಜಾರಿ ಮಾಡಿದ ಸುಪ್ರೀಂ ಕೋರ್ಟ್‌

Actor Darshan
ಸಿನಿಮಾ19 mins ago

Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ತನಿಖೆ ಬಳಿಕವೇ ದರ್ಶನ್ ಪಾತ್ರ ಗೊತ್ತಾಗಲಿದೆ ಎಂದ ಸಚಿವ ಪರಮೇಶ್ವರ್‌

Actor Darshan
ಕರ್ನಾಟಕ44 mins ago

Actor Darshan: ಕೊಲೆ ಕೇಸ್‌ಗೆ ಕ್ಷಣಕ್ಕೊಂದು ಟ್ವಿಸ್ಟ್;‌ ದರ್ಶನ್‌ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷನೂ ಅರೆಸ್ಟ್!

Champions Trophy 2025
ಕ್ರಿಕೆಟ್58 mins ago

Champions Trophy 2025: ಲಾಹೋರ್​ನಲ್ಲಿ ಭಾರತದ ಪಂದ್ಯ ಆಯೋಜನೆಗೆ ಸಿದ್ಧತೆ ಆರಂಭಿಸಿದ ಪಾಕ್​ ಕ್ರಿಕೆಟ್​ ಮಂಡಳಿ

Drowned in water
ದಕ್ಷಿಣ ಕನ್ನಡ1 hour ago

Drowned in water : ಅಪ್ಪಳಿಸಿ ಬಂದ ರಕ್ಕಸ ಅಲೆಗೆ ಕೊಚ್ಚಿ ಹೋದ ಮಹಿಳೆ ಸಾವು; ಮೂವರ ರಕ್ಷಣೆ

Actor Darshan
ಕರ್ನಾಟಕ1 hour ago

Actor Darshan: ಕಳೆದ ವರ್ಷ ಮದುವೆಯಾಗಿದ್ದ ರೇಣುಕಾಸ್ವಾಮಿ ಪತ್ನಿ ಗರ್ಭಿಣಿ; ಸಾವಿನ ವಿಚಾರ ಆಕೆಗೆ ಗೊತ್ತೇ ಇಲ್ಲ!

Actor Darshan
ಕರ್ನಾಟಕ1 hour ago

Actor Darshan: ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಅರೆಸ್ಟ್‌; ಪೊಲೀಸರು ಹೇಳಿದ್ದೇನು?

Pavithra Gowda
ಕರ್ನಾಟಕ2 hours ago

Pavithra Gowda: ಕೊಲೆ ಕೇಸ್;‌ ದರ್ಶನ್‌ ಬಂಧನ ಬೆನ್ನಲ್ಲೇ ಗೆಳತಿ ಪವಿತ್ರಾ ಗೌಡ ಕೂಡ ಪೊಲೀಸ್‌ ವಶಕ್ಕೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Saptami Gowda
ಸಿನಿಮಾ2 hours ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ21 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ4 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ4 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

ಟ್ರೆಂಡಿಂಗ್‌