ವಿಸ್ತಾರ Explainer: ರಾಜೀನಾಮೆ ನೀಡಿದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ ಆಗುವರೇ? - Vistara News

EXPLAINER

ವಿಸ್ತಾರ Explainer: ರಾಜೀನಾಮೆ ನೀಡಿದ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ ಆಗುವರೇ?

ಇನ್ಫಿ ಮೂರ್ತಿ ಅಳಿಯ ರಿಷಿ ಸುನಕ್‌ ರಾಜೀನಾಮೆಯೊಂದಿಗೆ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಇನ್ನಷ್ಟು ಬಿಕ್ಕಟ್ಟಿಗೆ ಒಳಗಾಗಿದ್ದಾರೆ. ಇದು ರಿಷಿ ಪ್ರಧಾನಿಯಾಗಲು ದಾರಿ ಮಾಡಿ ಕೊಡಲಿದೆಯೇ?

VISTARANEWS.COM


on

rishi sunak boris
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬ್ರಿಟನ್‌ನ ಹಣಕಾಸು ಸಚಿವ ಸ್ಥಾನಕ್ಕೆ ರಿಷಿ ಸುನಕ್‌ ರಾಜೀನಾಮೆ ನೀಡಿದ್ದಾರೆ. ಅಲ್ಲಿನ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಉತ್ತರಾಧಿಕಾರಿ ಎಂದು ಕೆಲವು ತಿಂಗಳ ಹಿಂದೆ ಹೊಗಳಿಸಿಕೊಂಡಿದ್ದ ರಿಷಿ ಅವರಿಗೂ ಬೋರಿಸ್‌ಗೂ ಯಾಕೆ ಭಿನ್ನಮತ ಮೂಡಿತು? ಬ್ರಿಟನ್‌ನ ಪ್ರಧಾನಿಯಾಗುವ ಇನ್ಫಿ ಮೂರ್ತಿ ಅಳಿಯನ ಕನಸು ನನಸಾಗುವುದಿಲ್ಲವೇ? ರಿಷಿ ಅವರ ಮುಂದಿನ ಹಾದಿ ಏನು?

ಬೋರಿಸ್‌ಗೆ ಕಾಡಿದ ಕೋವಿಡ್‌ ಪಾರ್ಟಿ

rishi sunak with boris johnson
ಬೋರಿಸ್‌ ಜಾನ್ಸನ್‌ ಜತೆಗೆ ರಿಷಿ ಸುನಕ್

ಹಣಕಾಸು ಸಚಿವ ರಿಷಿ ಸುನಕ್‌ ಹಾಗೂ ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಅವರ ರಾಜೀನಾಮೆ ಬೋರಿಸ್‌ ಸರ್ಕಾರಕ್ಕೆ ದೊಡ್ಡ ಹೊಡೆತ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರಿಂದಾಗಿ ಬೋರಿಸ್‌ ಅವರ ವಿಶ್ವಾಸಾರ್ಹತೆ ಕುಸಿದಿದ್ದು, ಪೇಚಿಗೆ ಸಿಲುಕಿದ್ದಾರೆ. ಸಚಿವ ಸಂಪುಟದ ಸದಸ್ಯರೇ ಬಂಡಾಯ ಎದ್ದಿದ್ದಾರೆ ಎಂದರೆ ಸರ್ಕಾರ ಸರಿಯಾಗಿ ನಡೆಯುತ್ತಿಲ್ಲ ಎಂದೇ ಅರ್ಥ.

ಬೋರಿಸ್‌ ಜಾನ್ಸನ್‌ ಅವರು ಕಳೆದ ವರ್ಷದ ಆರಂಭದಿಂದಲೂ ಬ್ರಿಟನ್‌ ಜನತೆಯ ಮುಂದೆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಾರೆ. ಕೋವಿಡ್‌ ಸನ್ನಿವೇಶವನ್ನು ಅವರು ಸಾಕಷ್ಟು ಸಮರ್ಪಕವಾಗಿ ಎದುರಿಸಿರಲಿಲ್ಲ ಎಂಬ ಆಕ್ಷೇಪ ಅವರ ಮೇಲೆ ಇದೆ. ಬ್ರಿಟನ್‌ ಕೊರೊನಾ ಸಾಂಕ್ರಾಮಿಕವನ್ನು ಎದುರಿಸುತ್ತಿದ್ದಾಗ ಪ್ರಧಾನಿ ಬೋರಿಸ್‌ ಹಾಗೂ ಅವರ ಗೆಳೆಯರು ಡೌನಿಂಗ್‌ ಸ್ಟ್ರೀಟ್‌ನಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಆಲ್ಕೋಹಾಲ್‌ ಪಾರ್ಟಿ ನಡೆಸಿದ್ದರು. ಇದು ವಿವಾದದ ಕಿಡಿ ಹೊತ್ತಿಸಿತ್ತು.

ಇದರಿಂದ ಅವರು ತಮ್ಮ ಪಕ್ಷವಾದ ಕನ್ಸರ್ವೇಟಿವ್‌ ಪಾರ್ಟಿಯಲ್ಲೇ ಸಾಕಷ್ಟು ಶಾಸಕರ ವಿರೋಧ, ಭಿನ್ನಮತ ಎದುರಿಸಬೇಕಾಗಿ ಬಂದಿತ್ತು. ಬೋರಿಸ್‌ ರಾಜೀನಾಮೆ ನೀಡಬೇಕು ಎಂದು ದೊಡ್ಡದೊಂದು ಬಣ ಒತ್ತಾಯಿಸಿತ್ತು. ಬೋರಿಸ್‌ ನಾಯಕತ್ವದಲ್ಲಿ ಮುಂದುವರಿಯುವುದನ್ನು ಆಕ್ಷೇಪಿಸಿ ಸರಕಾರದ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜೂನ್‌ 6ರಂದು ಬೋರಿಸ್‌ ನಾಯಕತ್ವದ ಬಗೆಗೆ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ, 211: 148 ಮತಗಳಲ್ಲಿ ಬೋರಿಸ್‌ ಗೆದ್ದಿದ್ದರು. ಇದರ ನಂತರ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಕನ್ಸರ್ವೇಟಿವ್‌ ಪಕ್ಷವನ್ನು ಕೈಬಿಟ್ಟಿದ್ದರು. ಇದು ಬೋರಿಸ್‌ಗೆ ಬಿದ್ದ ಎರಡನೇ ಹೊಡೆತ.

ಇಂಥ ಸಮಯದಲ್ಲಿಯೂ ರಿಷಿ ಸುನಕ್‌ ಅವರು ಬೋರಿಸ್‌ ಅವರ ಕೈಬಿಟ್ಟಿರಲಿಲ್ಲ. ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧ ಸಾರಿದಾಗ, ಉಕ್ರೇನ್‌ಗೆ ನೀಡಲಾದ ದೊಡ್ಡ ಮೊತ್ತದ ಸಹಾಯಧನದ ಕುರಿತು ಆಕ್ಷೇಪ ಎದ್ದಾಗಲೂ ಅದನ್ನು ರಿಷಿ ಸಮರ್ಥಿಸಿಕೊಂಡಿದ್ದರು.

ಮುಳುವಾದ ಕ್ರಿಸ್‌ ಪಿಂಚರ್‌

ಆದರೆ ಮೂರನೆಯದಾಗಿ ಬೋರಿಸ್‌ಗೆ ಸುತ್ತಿಕೊಂಡದ್ದು ಅವರ ಆಪ್ತನಾದ ಸಚಿವನೊಬ್ಬನ ಲೈಂಗಿಕ ಹಗರಣ. ಇದು 2019ರಲ್ಲೇ ನಡೆದಿದ್ದ ಘಟನೆ. ಆ ವರ್ಷ ಜುಲೈನಲ್ಲಿ, ಕನ್ಸರ್ವೇಟಿವ್‌ ಪಕ್ಷದ ಸಂಸದ ಕ್ರಿಸ್‌ ಪಿಂಚರ್‌ ಎಂಬಾತ, ಪಿಕಾಡೆಲಿ ಎಂಬಲ್ಲಿ ಒಂದು ಕ್ಲಬ್‌ಗೆ ಹೋಗಿದ್ದ. ಈತ ಅಲ್ಲಿ ಇಬ್ಬರು ತರುಣರನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಸ್ಪರ್ಶಿಸಿದ್ದ. ಇದು ಮರುದಿನ ಸುದ್ದಿಯಾಗಿ, ಸ್ವತಃ ಮುಜುಗರಕ್ಕೊಳಗಾಗಿದ್ದ ಈತ ತಾನು ಹೊತ್ತಿದ್ದ ಪಕ್ಷದ ಡೆಪ್ಯುಟಿ ಚೀಫ್‌ ವಿಪ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ.

ಇದರ ನಂತರವೂ ಪಿಂಚರ್‌ನನ್ನು ಬೋರಿಸ್‌ ಜಾನ್ಸನ್‌ ವಿದೇಶಾಂಗ ವ್ಯವಹಾರ ಸಚಿವ ಸ್ಥಾನದಂಥ ಮಹತ್ವದ ಸ್ಥಾನಗಳಿಗೆ ನೇಮಿಸಿದ್ದರು. ಪಿಕಾಡೆಲಿ ಕ್ಲಬ್‌ ಮಾತ್ರವಲ್ಲದೆ ಹಲವು ಕಡೆಗಳಿಂದ ಪಿಂಚರ್‌ನ ಕಾಮುಕ ವರ್ತನೆಯ ಬಗ್ಗೆ ದೂರುಗಳು ಬಂದಿದ್ದರೂ ಅವುಗಳಿಗೆ ಬೋರಿಸ್‌ ಕಿವುಡಾಗಿದ್ದರು. ಇತ್ತೀಚೆಗೆ, ಪಿಂಚರ್‌ನ ಬಗ್ಗೆ ಎಲ್ಲ ವಿವರಗಳು ಗೊತ್ತಿದ್ದರೂ ಬೋರಿಸ್‌ ತಲೆ ಕೆಡಿಸಿಕೊಂಡಿರಲಿಲ್ಲ ಎಂಬುದನ್ನು ಅವರ ಪಕ್ಷದ ಮಹತ್ವದ ಸ್ಥಾನದಲ್ಲಿದ್ದವರೇ ಬಯಲು ಮಾಡಿದ್ದರು. ಇದು ಬೋರಿಸ್‌ರನ್ನು ತೀರಾ ಮುಜುಗರಕ್ಕೀಡು ಮಾಡಿತ್ತು.

ರಿಷಿ ಸುನಕ್‌ ಹೇಳಿದ್ದೇನು?

ತಮ್ಮ ರಾಜೀನಾಮೆ ಪತ್ರದಲ್ಲಿ ರಿಷಿ ಸುನಕ್‌ ಬೋರಿಸ್‌ ಅವರ ಮೇಲೆ ಹೆಚ್ಚಿನ ಆರೋಪಗಳನ್ನೇನೂ ಹೊರಿಸಿಲ್ಲ. ಆದರೆ ಬೋರಿಸ್‌ ನಾಯಕತ್ವದಲ್ಲಿ ವಿಶ್ವಾಸವಿಲ್ಲ ಎಂದಿದ್ದಾರೆ.

ʼʼಕೊರೊನಾ ಪ್ಯಾಂಡೆಮಿಕ್‌ ನಂತರದ ಆರ್ಥಿಕ ಸಂಕಷ್ಟ, ಉಕ್ರೇನ್‌ ಯುದ್ಧದ ಬಿಕ್ಕಟ್ಟು, ಇನ್ನಿತರ ಗಂಭೀರ ಸವಾಲುಗಳು ನಡುನಡುವೆ ನನ್ನ ಈ ರಾಜೀನಾಮೆ ನಾನು ಹಗುರವಾಗಿ ಪರಿಗಣಿಸುತ್ತಿರುವ ಸಂಗತಿಯಲ್ಲ. ಆದರೆ ಸರ್ಕಾರ ಸರಿಯಾಗಿ. ಸ್ಪರ್ಧಾತ್ಮಕವಾಗಿ, ಗಂಭೀರ ರೀತಿಯಲ್ಲಿ ಮುನ್ನಡೆಯಬೇಕು ಎಂದು ಜನ ನಿರೀಕ್ಷಿಸುತ್ತಾರೆ. ಸರ್ಕಾರವನ್ನು ತೊರೆಯುತ್ತಿರುವುದಕ್ಕೆ ಬೇಸರವಾಗಿದೆ. ಆದರೆ ನಾವು ಹೀಗೇ ಮುಂದುವರಿಯಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇವೆ. ಇದರಿಂದಾಗಿ ನನಗೆ ಸಚಿವ ಸ್ಥಾನ ಶಾಶ್ವತವಾಗಿ ದೂರವಾಗಲಿದೆ ಎಂಬುದು ನನಗೆ ತಿಳಿದಿದೆ. ಆದರೆ ಮೇಲೆ ಹೇಳಿದ ಮೌಲ್ಯಗಳಿಗಾಗಿ ನನ್ನ ಹೋರಾಟ ಯೋಗ್ಯವಾಗಿದೆ ಎಂದು ನಾನು ನಂಬುತ್ತೇನೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಸುನಕ್‌ ತಿಳಿಸಿದ್ದಾರೆ.

ಬೋರಿಸ್‌ ಅವರ ಮುಂದಿನ ಹಾದಿ ಕಷ್ಟಕರವಾಗಿದೆ. ಯಾಕೆಂದರೆ ಸುನಕ್‌ ಸೇರಿದಂತೆ ಹಲವಾರು ಶಾಸಕರು, ಸಚಿವರು, ಬೋರಿಸ್‌ ನಾಯಕತ್ವದಲ್ಲಿ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಜುಗರಕ್ಕೆ ಒಳಗಾಗಿರುವ ಪಕ್ಷ ಇಷ್ಟರಲ್ಲೇ ಬೇರೊಬ್ಬ ನಾಯಕನನ್ನು ಆರಿಸಿದರೂ ಆಶ್ಚರ್ಯವಿಲ್ಲ.

ರಿಷಿ ಸುನಕ್‌ ಬೆಳವಣಿಗೆ

ರಿಷಿ ಸುನಕ್‌ ಇನ್‌ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಅವರ ಅಳಿಯ. ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರನ್ನು ಮದುವೆಯಾಗಿದ್ದಾರೆ. ರಿಷಿ ಇಂಗ್ಲೆಂಡಿನ ಸೌತಾಂಪ್ಟನ್‌ನಲ್ಲಿ ನೆಲೆಸಿದ್ದ ಯಶ್ವೀರ್‌ ಮತ್ತು ಉಷಾ ಸುನಕ್‌ ಎಂಬ ದಂಪತಿಗೆ 1980ರಲ್ಲಿ ಜನಿಸಿದವರು. ಇವರ ಅಜ್ಜ ಅಜ್ಜಿ ಪಂಜಾಬ್‌ನಿಂದ ವಲಸೆ ಹೋದವರು. ತಂದೆ ವೈದ್ಯರು. ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಲ್ಲಿ ಫಿಲಾಸಫಿ, ಪಾಲಿಟಿಕ್ಸ್‌ ಮತ್ತು ಎಕಾನಮಿಕ್ಸ್‌ ಓದಿದರು. ಪದವಿ ಪಡೆದ ನಂತರ ಗೋಲ್ಡ್‌ಮನ್‌ ಸ್ಯಾಕ್ಸ್‌ ಬ್ಯಾಂಕ್‌ನಲ್ಲಿ ಅನಲಿಸ್ಟ್‌ ಆಗಿ ಸೇರಿಕೊಂಡರು. 2014ರಲ್ಲಿ ರಿಚ್ಮಂಡ್‌ ಎಂಬಲ್ಲಿಂದ ಕನ್ಸರ್ವೇಟಿಕ್‌ ಪಕ್ಷದಿಂದ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿಂದ ಬಳಿಕ ಎರಡು ಬಾರಿ ಆರಿಸಿ ಬಂದಿದ್ದಾರೆ. ಪ್ರತಿಸಲವೂ ಅವರ ಜನಪ್ರಿಯತೆ ಏರುತ್ತಾ ಹೋಯಿತು.

2009ರಲ್ಲಿ ರಿಷಿ ಹಾಗೂ ಅಕ್ಷತಾ ಮೂರ್ತಿ ಮದುವೆಯಾದರು. ಅದಕ್ಕೂ ಮುನ್ನ ರಿಷಿ ಅವರು ನಾರಾಯಣಮೂರ್ತಿ ಪಾಲುದಾರರಾಗಿದ್ದ ಇಂಗ್ಲೆಂಡ್‌ನ ಸಂಸ್ಥೆಯೊಂದಕ್ಕೆ ಸಲಹೆಗಾರರಾಗಿದ್ದರು.

ಪ್ರಧಾನಿ ಬೋರಿಸ್‌ ಜಾನ್ಸನ್‌ ಕೊರೊನಾದ ಅಪಕ್ವ ನಿರ್ವಹಣೆ ಸೇರಿದಂತೆ ಅನೇಕ ವಿವಾದಗಳಲ್ಲಿ ಸಿಲುಕಿ ಹೆಸರು ಕೆಡಿಸಿಕೊಂಡ ಬಳಿಕ, ರಿಷಿ ಸುನಕ್‌ ಅವರು ಜಾನ್ಸನ್‌ನ ಉತ್ತರಾಧಿಕಾರಿ ಎಂದು ಬ್ರಿಟಿಷ್‌ ಮಾಧ್ಯಮಗಳು ಹೇಳತೊಡಗಿದವು. ಹಣಕಾಸು ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದು ಇದಕ್ಕೆ ಕಾರಣವಾಗಿತ್ತು. ಅದಕ್ಕೂ ಮುನ್ನ ಪರಿಸರ ಮುಂತಾದ ಖಾತೆಗಳನ್ನು ಇವರು ನಿರ್ವಹಿಸಿದ್ದರು.

ಏರಿದಷ್ಟೇ ವೇಗದಲ್ಲಿ ಇಳಿದ ಖ್ಯಾತಿ

ಆದರೆ ಈ ವರ್ಷದ ಆರಂಭದಲ್ಲಿ ಅವರ ಜನಪ್ರಿಯತೆಯ ಗ್ರಾಫ್‌ ಅಷ್ಟೇ ವೇಗವಾಗಿ ಇಳಿಯತೊಡಗಿತು. ಇದಕ್ಕಿರುವ ಕಾರಣಗಳಲ್ಲಿ ಒಂದು, ಹಗರಣಗಳಲ್ಲಿ ಸಿಲುಕಿಕೊಂಡ ಬೋರಿಸ್‌ ಜಾನ್ಸನ್‌ ಅವರನ್ನು ಸಮರ್ಥಿಸಿಕೊಂಡು ಬಂದದ್ದು. ಇನ್ನೊಂದು ಪ್ರಮುಖ ಕಾರಣ, ಪತ್ನಿ ಅಕ್ಷತಾ ಮೂರ್ತಿ ಅವರ ತೆರಿಗೆ ಪ್ರಕರಣ.

ಅಕ್ಷತಾ ಮೂರ್ತಿ ತೆರಿಗೆ ಪ್ರಕರಣ

ಅಕ್ಷತಾ ಅವರು ಇಂಗ್ಲೆಂಡ್‌ ಸರಕಾರಕ್ಕೆ ಸಲ್ಲಿಸಬೇಕಾದ 20 ದಶಲಕ್ಷ ಪೌಂಡ್‌ (ಸುಮಾರು 197 ಕೋಟಿ ರೂಪಾಯಿ) ತೆರಿಗೆಯನ್ನು ತಪ್ಪಿಸಿದ್ದಾರೆ ಎಂಬುದು ಅವರ ಮೇಲಿರುವ ಆರೋಪ. ಅಕ್ಷತಾ ಅವರು ಬೆಂಗಳೂರು ಮೂಲದ ಇನ್ಫೋಸಿಸ್‌ ಕಂಪನಿಯಲ್ಲಿ 0.91% ಷೇರುಗಳನ್ನು ಹೊಂದಿದ್ದಾರೆ. ಪ್ರಸ್ತುತ ಅವುಗಳ ಮೌಲ್ಯ ಸುಮಾರು 100 ಕೋಟಿ ಡಾಲರ್.‌ ಇದರಿಂದಲೇ ಅವರು ವರ್ಷಕ್ಕೆ ₹ 11.56 ಕೋಟಿಗಳಷ್ಟು ಡಿವಿಡೆಂಡ್‌ ಗಳಿಸುತ್ತಾರೆ. ಅಕ್ಷತಾ ಅವರು ಹೊಂದಿರುವ ಎಲ್ಲ ಸ್ಥಿರ ಚರ ಆಸ್ತಿ ಮೌಲ್ಯ ಸುಮಾರು ₹ 6,834 ಕೋಟಿ ಆಗಬಹುದು ಎಂಬ ಅಂದಾಜು. ಅಂದರೆ ಅವರು ಬ್ರಿಟನ್‌ ರಾಣಿಗಿಂತಲೂ ಶ್ರೀಮಂತೆ.

ಆದರೆ ತಮ್ಮ ಆದಾಯಕ್ಕೆ ತಕ್ಕಂತೆ ಅವರು ಬ್ರಿಟನ್‌ನಲ್ಲಿ ತೆರಿಗೆ ಪಾವತಿ ಮಾಡಿಲ್ಲ. ಯಾಕೆಂದರೆ ಅವರು ಬ್ರಿಟನ್‌ನ ಕಾಯಂ ನಿವಾಸಿ (Domicile) ಅಲ್ಲ. ಅವರು ಈಗಲೂ ಭಾರತೀಯ ಪೌರರೇ. ಭಾರತದಲ್ಲೇ ಹುಟ್ಟಿ ಬೆಳೆದು ವಿದ್ಯಾಭ್ಯಾಸ ಮಾಡಿದ ಅವರು ಇಂದಿಗೂ ಅದನ್ನು ತ್ಯಜಿಸಿ ಬ್ರಿಟನ್‌ನ ಪೌರತ್ವ ಪಡೆಯಲು ಮನಸ್ಸು ಮಾಡಿಲ್ಲ. ದ್ವಿರಾಷ್ಟ್ರ ಪೌರತ್ವವನ್ನು ಭಾರತ ಮಾನ್ಯ ಮಾಡುವುದಿಲ್ಲ. ಇದುವರೆಗೂ ಅವರು ಇನ್ಫಿಯಿಂದ ಗಳಿಸಿರುವ ಡಿವಿಡೆಂಡ್ ಪ್ರಮಾಣ ಸುಮಾರು ₹ 544 ಕೋಟಿ. ಈ ಲೆಕ್ಕಾಚಾರದಲ್ಲಿ ಅವರು ಸಲ್ಲಿಸಬೇಕಿರುವ ತೆರಿಗೆ ಮೊತ್ತ ₹ 200 ಕೋಟಿ. ಈ ತೆರಿಗೆ ಹಣವನ್ನು ಅವರು ಸಲ್ಲಿಸಿಲ್ಲ ಎಂದು ಪ್ರತಿಪಕ್ಷದ ಸದಸ್ಯರು ಆಕ್ಷೇಪಿಸಿದ್ದರು. ಈ ಬಗ್ಗೆ ಉತ್ತರ ನೀಡುವಂತೆ ಸಾರ್ವನಿಕರಿಂದಲೂ ಒತ್ತಡ ಬರತೊಡಗಿದಾಗ, ತಾವು ಬ್ರಿಟನ್‌ನಲ್ಲಿ ಪೂರ್ತಿ ತೆರಿಗೆ ಪಾವತಿ ಮಾಡುವುದಾಗಿ ಅಕ್ಷತಾ ಉತ್ತರ ನೀಡಿದ್ದರು.

ಬ್ರಿಟನ್‌ನ ಕಾಯಿದೆ ಪ್ರಕಾರ ಅಕ್ಷತಾ ಮೂರ್ತಿ ಅವರು ಅಲ್ಲಿನ non domicile ಪ್ರಜೆ. ಅಂದರೆ ಅವರು ಬ್ರಿಟನ್‌ನಲ್ಲಿ ಗಳಿಸುವ ಆದಾಯಕ್ಕೆ ಅಲ್ಲಿ ತೆರಿಗೆ ಸಲ್ಲಿಸಬೇಕು. ಆದರೆ ದೇಶದಾಚೆಯ ಮೂಲಗಳಿಂದ ಪಡೆದ ಆದಾಯಕ್ಕೆ ಅವರು ಬ್ರಿಟನ್‌ನಲ್ಲಿ ತೆರಿಗೆ ಕಟ್ಟಬೇಕಿಲ್ಲ. ಆದರೆ ಈ non domicile ಸ್ಥಾನಮಾನ ವಿದೇಶಿ ಪ್ರಜೆಯೊಬ್ಬರಿಗೆ ಅದರಷ್ಟಕ್ಕದೇ ದೊರೆಯುವುದಿಲ್ಲ. ಅದನ್ನು ಪಡೆಯಲು ಅವರು ಅರ್ಜಿ ಸಲ್ಲಿಸಬೇಕು. ಅಕ್ಷತಾ ಹಾಗೆ ಅರ್ಜಿ ಸಲ್ಲಿಸಿಲ್ಲ. 15 ವರ್ಷಗಳ ನಂತರ ಈ non domicile ಸ್ಥಾನಮಾನ ರದ್ದಾಗುತ್ತದೆ. ಅಕ್ಷತಾ ಅವರು ತೆರಿಗೆ ಕಟ್ಟದಿರುವುದೇನೂ ವಂಚನೆ ಅಲ್ಲ, ಕಾನೂನುಬಾಹಿರವೂ ಅಲ್ಲ. ಆದರೆ ಸ್ವತಃ ಗಂಡ ರಿಷಿ ಸುನಕ್‌ ವಿತ್ತ ಸಚಿವರಾಗಿರುವಾಗ, ತೆರಿಗೆ ಕಟ್ಟಬಹುದಾದ ಸ್ಥಿತಿಯಲ್ಲಿದ್ದೂ, ಅದನ್ನು ಕಟ್ಟದೆ ತಪ್ಪಿಸಿರುವುದು ಪತಿ- ಪತ್ನಿಯ ಆಷಾಢಭೂತಿತನ ಎಂಬುದು ಟೀಕಾಕಾರರ ಆರೋಪವಾಗಿತ್ತು.

ರಿಷಿಗೆ ಅಂಟಿಕೊಂಡ ಕಳಂಕಗಳು

ರಿಷಿ ಸುನಕ್‌ ಗಣ್ಯತೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಇತ್ತೀಚೆಗೆ ರಿಷಿ ಮಿನಿ ಬಜೆಟ್‌ ಮಂಡಿಸಿದ್ದರು. ಆದರೆ ಹಣದುಬ್ಬರದಿಂದ ಶ್ರೀಸಾಮಾನ್ಯರ ಬದುಕು ಕಷ್ಟವಾಗುತ್ತಿರುವಾಗ, ಆ ಹೊರೆಯನ್ನು ಇಳಿಸಲು ಏನನ್ನೂ ರಿಷಿ ಮಾಡಿಲ್ಲ ಎಂಬ ಸಿಟ್ಟಿದೆ. ಉಕ್ರೇನ್‌ ಮೇಲಿನ ಯುದ್ಧಕ್ಕಾಗಿ ರಷ್ಯಾದ ಮೇಲೆ ಹಲವು ವಾಣಿಜ್ಯ ನಿರ್ಬಂಧಗಳನ್ನು ಇಂಗ್ಲೆಂಡ್‌ ವಿಧಿಸಿದೆ. ಆದರೆ ಇನ್‌ಫೋಸಿಸ್‌ ಮಾತ್ರ ರಷ್ಯಾದಲ್ಲಿ ಎಂದಿನಂತೆ ತನ್ನ ವ್ಯವಹಾರ ನಡೆಸುತ್ತಿದೆ. ಇವೆಲ್ಲ ಕಾರಣಗಳು ರಿಷಿಯ ಪ್ರಧಾನಿ ಹಾದಿಯಲ್ಲಿ ಮುಳ್ಳಾಗಿ ಕಾಣಿಸಿಕೊಂಡಿವೆ. ಬ್ರಿಟನ್‌ನ ಜನತೆ ಅಧಿಕಾರ ಸ್ಥಾನದಲ್ಲಿ ಇರುವವರ ಪ್ರಾಮಾಣಿಕತೆಯನ್ನು ಭೂತಗನ್ನಡಿ ಹಿಡಿದು ನೋಡುತ್ತಾರೆ. ಹೀಗಾಗಿಯೇ ಇಂದು ಬೋರಿಸ್‌ಗೆ ಸಂಕಷ್ಟ ಕಾಣಿಸಿಕೊಂಡಿರುವಂತೆ, ಸುನಕ್‌ ಅವರಿಗೂ ತಮ್ಮ ಪ್ರಾಮಾಣಿಕತೆ ಸಾಬೀತುಪಡಿಸಬೇಕಾದ ಅಗತ್ಯ ಒದಗಿದೆ.

ರಿಷಿ ಪ್ರಧಾನಿ ಆಗಬಹುದೇ?

ರಿಷಿ ಸುನಕ್‌ ಅವರ ಮುಂದಿನ ನಡೆ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ. ಕೆಲ ದಿನಗಳ ಹಿಂದೆ ʼʼನೀವು ಬ್ರಿಟನ್‌ನ ಪ್ರಧಾನಿ ಆಗಬಯಸುತ್ತೀರಾ?ʼʼ ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದರು- ʼʼನಾನು ಇಲ್ಲಿನ ಹಣಕಾಸು ಸಚಿವನಾದದ್ದೇ ಈ ದೇಶದ ಅಪಾರ ಸಹಿಷ್ಣುತೆ ಹಾಗೂ ಮುಕ್ತತೆಯ ಬಗ್ಗೆ ತಿಳಿಸುತ್ತದೆ. ಆದರೆ ಇಷ್ಟಕ್ಕೇ ಬ್ರಿಟಿಷ್-‌ ಇಂಡಿಯಾ ಬಾಂಧವ್ಯ ಮುಗಿಯಬಾರದು ಅನಿಸುತ್ತದೆ. ನಾವಿನ್ನೂ ಮಾಡಬಹುದಾದ ಎಷ್ಟೋ ಸಂಗತಿಗಳಿವೆ, ಹೀಗಾಗಿ ಭವಿಷ್ಯದ ಬಗ್ಗೆ ನಾನು ಕುತೂಹಲಿಯಾಗಿದ್ದೇನೆ.ʼʼ

ಪ್ರಧಾನಿಯಾಗುವ ಬಗ್ಗೆ ರಿಷಿ ಅವರಿಗೆ ಆಸಕ್ತಿಯಿದೆ ಎಂಬುದನ್ನು ಈ ಮಾತು ಸಾಬೀತುಪಡಿಸುತ್ತದೆ. ಆದರೆ ಇದು ನಿಜವಾಗಬೇಕಾದರೆ ಬೋರಿಸ್‌ ಜಾನ್ಸನ್‌ ರಾಜೀನಾಮೆ ನೀಡಬೇಕು ಹಾಗೂ ಇತರ ಶಾಸಕರು ರಿಷಿ ಅವರನ್ನು ಬೆಂಬಲಿಸಬೇಕು. ರಿಷಿ ಅವರಂತೆಯೇ ಆಕಾಂಕ್ಷಿಗಳಾದ ಇತರರೂ ಇರುವುದರಿಂದ ರಿಷಿಯ ಹಾದಿ ಸುಲಭವಾಗಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Mandya Election Result 2024 : ಮಂಡ್ಯದಲ್ಲಿ ಕುಮಾರ ಸ್ವಾಮಿಗೆ ಭರ್ಜರಿ ಗೆಲುವು

Mandya Election Result 2024 : 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು 7,03,660 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು.

VISTARANEWS.COM


on

Mandya Election Result 2024
Koo

ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದ ವರಿಷ್ಠ ಎಚ್​ ಡಿ ಕುಮಾರಸ್ವಾಮಿ (8,51,881 ಮತಗಳು) ಗೆಲುವು ಸಾಧಿಸಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು (5,67.261 ಮತಗಳು) ವಿರುದ್ಧ 2,84,620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್​ ತನ್ನ ಕ್ಷೇತ್ರವನ್ನು ಮರುವಶಪಡಿಸಿಕೊಂಡಿದೆ. ಹಿಂದಿನ ಚುನಾವಣೆಯಲ್ಲಿ ಇದನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಾನಾ ರಾಜಕೀಯ ಚಟುವಟಿಕೆ ಬಳಿಕ ಗೆಲುವು ಕಂಡಿದ್ದರು.

ಎಚ್​. ಡಿ. ಕುಮಾರಸ್ವಾಮಿ (ಜೆಡಿಎಸ್​)- 8,51,881 ಮತಗಳು
ಸ್ಟಾರ್​ ಚಂದ್ರು (ಕಾಂಗ್ರೆಸ್​)- 5,67.261 ಮತಗಳು
ಗೆಲುವಿನ ಅಂತರ-2,84,620

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು 7,03,660 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು.

2018ರ ಉಪಚುನಾವಣೆಯಲ್ಲಿ ಜೆಡಿಎಸ್ ನ ಎಲ್.ಆರ್.ಶಿವರಾಮಗೌಡ 5,69,347 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಡಿ.ಆರ್.ಸಿದ್ದರಾಮಯ್ಯ 2,44,404 ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಹೊನ್ನೇಗೌಡ 17,842 ಮತಗಳನ್ನು ಪಡೆದಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ರಮ್ಯಾ 4,84,085 ಮತಗಳನ್ನು ಪಡೆದು ಜಯಗಳಿಸಿದ್ದರು.

ಈ ಕ್ಷೇತ್ರವು 2009 ಮತ್ತು 2019 ರ ನಡುವೆ ಎರಡು ಉಪಚುನಾವಣೆಗಳಿಗೆ ಸಾಕ್ಷಿಯಾಗಿದೆ. 2009 ರವರೆಗೆ ಸತತ ಮೂರು ಅವಧಿಗೆ ಕನ್ನಡ ಚಲನಚಿತ್ರ ತಾರೆ ಅಂಬರೀಶ್ ಇಲ್ಲಿ ಗೆದ್ದಿದ್ದರು. ಅವರ ಪತ್ನಿ ಸುಮಲತಾ 2019 ರಲ್ಲಿ ಸ್ಪರ್ಧಿಸಿ ಗೆದ್ದರು. 2013ರಲ್ಲಿ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಚೆಲುವರಾಯಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ನಟಿ ರಮ್ಯಾ ಗೆಲುವು ಸಾಧಿಸಿದರು. 2018 ರ ಉಪಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡಿತು.

ಹೇಗಿದೆ ಕ್ಷೇತ್ರ

ಮಂಡ್ಯ ಲೋಕಸಭಾ ಕ್ಷೇತ್ರವು (mandya lok sabha constituency) ಇಡೀ ಮಂಡ್ಯ ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ಒಂದು ಭಾಗವನ್ನು ಒಳಗೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯ ಕ್ಷೇತ್ರವು ಆರಂಭಗೊಂಡ ಬಳಿಕದಿಂದ ಶ್ರೀಮಂತ ರಾಜಕೀಯ ಇತಿಹಾಸ ಹೊಂದಿದೆ. ಮಂಡ್ಯದಲ್ಲಿ 3 ಬಾರಿ ಜೆಡಿಎಸ್ , 2 ಬಾರಿ ಜತನಾ ದಳ ಹಾಗೂ ಒಂದು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ. ಹಿಂದಿನ ಬಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿಜಯ ಕಂಡಿದ್ದರು. ಮೂಲತಃ ಮೈಸೂರು ರಾಜ್ಯದ ಭಾಗವಾಗಿದ್ದ ಮಂಡ್ಯ 1977 ರ ನಂತರ ಕರ್ನಾಟಕಕ್ಕೆ ಸೇರಿತು.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ ಮತ್ತು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಜೆಡಿಎಸ್ ಮತ್ತು ಸರ್ವೋದಯ ಕರ್ನಾಟಕ ಪಕ್ಷ ತಲಾ 1 ಸ್ಥಾನಗಳನ್ನು ಹೊಂದಿವೆ.

2011ರ ಜನಗಣತಿ ಪ್ರಕಾರ ಮಂಡ್ಯದಲ್ಲಿ 1805769 ಜನಸಂಖ್ಯೆ ಇತ್ತು. ಸರಾಸರಿ ಸಾಕ್ಷರತಾ ಪ್ರಮಾಣವು 70.40% – ಮಹಿಳೆಯರಲ್ಲಿ 62.54% ಮತ್ತು ಪುರುಷರಲ್ಲಿ 78.27% ಆಗಿತ್ತು. ಗ್ರಾಮೀಣ ಮತದಾರರು ಇಎಲ್ ನ 83.4% ರಷ್ಟಿದ್ದಾರೆ.

Continue Reading

Lok Sabha Election 2024

Exit Poll: 2004, 2009, 2014, 2019ರಲ್ಲಿ ಎಕ್ಸಿಟ್ ಪೋಲ್ ಹೇಳಿದ್ದೇನು? ಆಗಿದ್ದೇನು?

ಲೋಕಸಭಾ ಚುನಾವಣೆ ಕೊನೆಯ ಹಂತದಲ್ಲಿದೆ. ಈಗ ಎಲ್ಲರ ದೃಷ್ಟಿ ಫಲಿತಾಂಶದತ್ತ ನೆಟ್ಟಿದೆ. ಈ ನಡುವೆ ಎಕ್ಸಿಟ್ ಪೋಲ್ ನುಡಿಯುವ ಭವಿಷ್ಯದ ಬಗ್ಗೆಯೂ ಕುತೂಹಲ ಹೆಚ್ಚಾಗಿದೆ. ಕಳೆದ ನಾಲ್ಕು ಲೋಕ ಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ (Exit Poll) ನುಡಿದಿರುವ ಭವಿಷ್ಯ ಎಷ್ಟು ನಿಜವಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ. ಕಳೆದ ನಾಲ್ಕು ಬಾರಿಯ ಲೋಕಸಭೆ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ಹಿನ್ನೋಟ ಇಲ್ಲಿದೆ.

VISTARANEWS.COM


on

By

Exit Polls
Koo

ಲೋಕಸಭೆ ಚುನಾವಣೆ-2024ರ (Loksabha election-2024) ಕೊನೆಯ ಹಂತದ ಮತದಾನ (voting) ಮುಗಿದ ಬಳಿಕ ಪ್ರಸಾರವಾಗಲಿರುವ ಎಕ್ಸಿಟ್ ಪೋಲ್ ಗಳ (Exit Poll) ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಜೂನ್ 1ರಂದು ಎಂಟು ರಾಜ್ಯಗಳ (states) 59 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಸಂಜೆ 6:30ಕ್ಕೆ ಮತಗಟ್ಟೆ ಸಮೀಕ್ಷೆ ಪ್ರಕಟವಾಗಲಿದೆ.

ಅಭಿಪ್ರಾಯ ಸಂಗ್ರಹಕ್ಕಿಂತ (opinion polls) ಎಕ್ಸಿಟ್ ಪೋಲ್ ಭಿನ್ನವಾಗಿರುತ್ತದೆ. ಎಕ್ಸಿಟ್ ಪೋಲ್ ಮತದಾನ ಮುಗಿದ ಅನಂತರ ತೆಗೆದುಕೊಳ್ಳಲಾಗುವ ಮತದಾರರ ಸಮೀಕ್ಷೆಯಾಗಿದೆ. ಜನರು ಹೇಗೆ ಮತ ಚಲಾಯಿಸಿದ್ದಾರೆ ಎಂಬ ಟ್ರೆಂಡ್ ಇದು ನೀಡುತ್ತದೆ.

ನಿರ್ದಿಷ್ಟ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯು ತನ್ನ ಪ್ರತಿಸ್ಪರ್ಧಿಗಿಂತ ಮುಂದಿದ್ದಾರೆ ಎಂಬ ನಿಖರವಾದ ಮಾಹಿತಿಯನ್ನು ಇದು ಒದಗಿಸುತ್ತದೆ. ಚುನಾವಣೆ ಆರಂಭಕ್ಕೂ ಮುನ್ನ ಅಭಿಪ್ರಾಯ ಸಂಗ್ರಹಣೆ ನಡೆಸಲಾಗುತ್ತದೆ. ಇದಕ್ಕಾಗಿ ಜನ ಯಾವ ಪಕ್ಷಕ್ಕೆ ಮತ ಹಾಕಬೇಕು ಎಂದು ಮತಗಟ್ಟೆಯವರು ಕೇಳುತ್ತಾರೆ. ಆದರೆ ಎಕ್ಸಿಟ್ ಪೋಲ್‌ಗಳಲ್ಲಿ ಜನರು ಯಾವ ಪಕ್ಷ ಅಥವಾ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎಂಬುದನ್ನು ಕಂಡುಕೊಳ್ಳುತ್ತಾರೆ.

ಎಕ್ಸಿಟ್ ಪೋಲ್‌ಗಳು ಎಷ್ಟು ನಿಖರವಾಗಿರುತ್ತದೆ?

ಎಕ್ಸಿಟ್ ಪೋಲ್ ಜನರ ಮನಸ್ಥಿತಿಯನ್ನು ಹೇಳುತ್ತವೆ. ಆದರೆ ಅದರ ನಿಖರತೆಯು ಭೌಗೋಳಿಕ ವ್ಯಾಪ್ತಿ ಮತ್ತು ಮತದಾರರ ನಿಷ್ಕಪಟತೆಯಂತಹ ಬಹು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ಸಾಮಾನ್ಯವಾಗಿ ಜನರು ಗುಂಪುಗಳಲ್ಲಿ ಮತ ಚಲಾಯಿಸಿದಾಗ ಗಾಳಿ ಯಾವ ಕಡೆಗೆ ಬೀಸುತ್ತಿದೆ ಎಂಬುದನ್ನು ಅಳೆಯುವುದು ಸುಲಭ. ಆದರೆ ಒಂದು ಭಾಗದ ಜನರು ತಮ್ಮ ಒಲವನ್ನು ತೋರಿಸದಿರಲು ನಿರ್ಧರಿಸಿದರೆ ಅಲ್ಲಿಯೇ ಸಮೀಕ್ಷೆದಾರರು ಸಂಖ್ಯೆಗಳನ್ನು ತಪ್ಪಾಗಿ ಬಿಡುತ್ತದೆ. ಎಕ್ಸಿಟ್ ಪೋಲ್‌ಗಳು ಕೆಲವೊಮ್ಮೆ ಸರಿ ಮತ್ತು ಕೆಲವೊಮ್ಮೆ ತಪ್ಪಾಗಿವೆ.

ಕಳೆದ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಎಕ್ಸಿಟ್ ಪೋಲ್‌ಗಳು ಏನು ಭವಿಷ್ಯ ನುಡಿದಿವೆ ಮತ್ತು ನಿಜವಾದ ಫಲಿತಾಂಶಗಳು ಹೇಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

2019ರ ಎಕ್ಸಿಟ್ ಪೋಲ್‌ಗಳು

ಇಂಡಿಯಾ ಟುಡೇ- ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಎನ್ ಡಿ ಎ: 339-365, ಯುಪಿಎ: 77-108
ನ್ಯೂಸ್ 24-ಟುಡೇಸ್ ಚಾಣಕ್ಯ ಪ್ರಕಾರ ಎನ್ ಡಿ ಎ-350, ಯುಪಿಎ-95
ನ್ಯೂಸ್ 18-ಐಪಿಎಸ್ ಒಎಸ್ ಪ್ರಕಾರ ಎನ್ ಡಿ ಎ- 336, ಯುಪಿಎ- 124
ಟೈಮ್ಸ್ ನೌ- ವಿಎಂಆರ್ ಪ್ರಕಾರ ಎನ್ ಡಿ ಎ- 306, ಯುಪಿಎ-132
ಇಂಡಿಯಾ ಟಿವಿ-ಸಿಎನ್ ಎಕ್ಸ್ ಪ್ರಕಾರ ಎನ್ ಡಿಎ-300, ಯುಪಿಎ-120
ಎಬಿಪಿ-ಸಿಎಸ್ ಡಿಎಸ್ ಪ್ರಕಾರ ಎನ್ ಡಿಎ- 277, ಯುಪಿಎ- 130
ಇಂಡಿಯಾ ನ್ಯೂಸ್-ಪೋಲ್ ಸ್ಟಾರ್ಟ್ ಪ್ರಕಾರ ಎನ್ ಡಿಎ- 287, ಯುಪಿಎ- 130
2019ರ ಅಂತಿಮ ಫಲಿತಾಂಶ ಹೀಗಿತ್ತು: ಎನ್ ಡಿ ಎ-353, ಯುಪಿಎ-91

2014ರ ಎಕ್ಸಿಟ್ ಪೋಲ್‌ಗಳು

ಸಿ ಎನ್ ಎನ್-ಐಬಿಎನ್– ಸಿಎಸ್ ಡಿಎಸ್–ಲೋಕ್ ನೀತಿ ಪ್ರಕಾರ ಎನ್ ಡಿ ಎ – 276, ಯುಪಿಎ -97, ಇತರೆ-148
ಇಂಡಿಯಾ ಟುಡೇ–ಸಿಸೆರೊ ಪ್ರಕಾರ ಎನ್ ಡಿ ಎ-272, ಯುಪಿಎ-115, ಇತರೆ- 156
ಸುದ್ದಿ 24–ಚಾಣಕ್ಯ ಪ್ರಕಾರ ಎನ್‌ಡಿಎ-340, ಯುಪಿಎ-70, ಇತರೆ-133
ಟೈಮ್ಸ್ ನೌ–ಒ ಆರ್ ಜಿ ಪ್ರಕಾರ ಎನ್‌ಡಿಎ- 249, ಯುಪಿಎ-148, ಇತರೆ- 146
ಎಬಿಪಿ ನ್ಯೂಸ್–ನೀಲ್ಸನ್ ಪ್ರಕಾರ ಎನ್‌ಡಿಎ-274, ಯುಪಿಎ-97, ಇತರೆ-165
ಎನ್ ಡಿ ಟಿವಿ –ಹಂಸ ಸಂಶೋಧನೆ ಪ್ರಕಾರ ಎನ್‌ಡಿಎ-279, ಯುಪಿಎ-103, ಇತರೆ-161
2014ರ ಫಲಿತಾಂಶ ಹೀಗಿತ್ತು: ಎನ್‌ಡಿಎ-336, ಯುಪಿಎ-66, ಇತರೆ-147 ಇದರಲ್ಲಿ ಬಿಜೆಪಿ 282, ಕಾಂಗ್ರೆಸ್ 44 ಸ್ಥಾನಗಳನ್ನು ಗಳಿಸಿತ್ತು.

2009ರ ಎಕ್ಸಿಟ್ ಪೋಲ್‌ಗಳು

ಸಿ ಎನ್ ಎನ್-ಐಬಿಎನ್ – ದೈನಿಕ್ ಭಾಸ್ಕರ್ ಪ್ರಕಾರ ಯುಪಿಎ 185– 205, ಎನ್‌ಡಿಎ 165– 185, ತೃತೀಯ ರಂಗ 110– 130, ನಾಲ್ಕನೇ ರಂಗ 25–35
ಸ್ಟಾರ್-ನೀಲ್ಸನ್ ಪ್ರಕಾರ ಯುಪಿಎ 199, ಎನ್‌ಡಿಎ 196, ತೃತೀಯ ರಂಗ 100, ನಾಲ್ಕನೇ ರಂಗ 36
ಭಾರತ ಟಿವಿ – ಸಿ ವೋಟರ್ ಪ್ರಕಾರ ಯುಪಿಎ 189–201, ಎನ್‌ಡಿಎ 183–195, ತೃತೀಯ ರಂಗ 105–121
2009ರ ಫಲಿತಾಂಶ ಹೀಗಿತ್ತು: ಯುಪಿಎ-262, ಎನ್‌ಡಿಎ-159, ತೃತೀಯ ರಂಗ-79, ನಾಲ್ಕನೇ ರಂಗ-27. ಇದರಲ್ಲಿ ಕಾಂಗ್ರೆಸ್- 206, ಬಿಜೆಪಿ 116 ಸ್ಥಾನಗಳನ್ನು ಗೆದ್ದುಕೊಂಡಿತ್ತು.

2004ರ ಎಕ್ಸಿಟ್ ಪೋಲ್‌ಗಳು

ಎನ್ ಡಿ ಟಿವಿ- ಎಸಿ ನೀಲ್ಸನ್ ಪ್ರಕಾರ ಎನ್ ಡಿ ಎ 230-250, ಕಾಂಗ್ರೆಸ್ 190-205, ಇತರೆ 100-120
ಆಜ್ತಕ್ ಒಆರ್ ಜಿ-ಮಾರ್ಗ್ ಪ್ರಕಾರ ಎನ್ ಡಿ ಎ 248, ಕಾಂಗ್ರೆಸ್-190, ಇತರೆ-105
ಸ್ಟಾರ್‌ನ್ಯೂಸ್ ಸಿ-ವೋಟರ್ ಪ್ರಕಾರ ಎನ್ ಡಿ ಎ 263-275, ಕಾಂಗ್ರೆಸ್ 174-186, ಇತರೆ 86-98
2004ರ ಫಲಿತಾಂಶ ಹೀಗಿತ್ತು: ಯುಪಿಎ- 208, ಎನ್‌ಡಿಎ- 181, ಎಡರಂಗ- 59. ಇದರಲ್ಲಿ ಕಾಂಗ್ರೆಸ್ 145, ಬಿಜೆಪಿ 138 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಇದನ್ನೂ ಓದಿ: Exit Poll: ಈ ಹಿಂದೆ 5 ಬಾರಿ ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಹೊಡೆದಿತ್ತು! ಯಾವಾಗ ನೆನಪಿದೆಯೆ?

ಎಷ್ಟು ನಿಖರ?

ಕಳೆದ ನಾಲ್ಕು ಬಾರಿಯ ಲೋಕಸಭೆ ಚುನಾವಣೆಗಳ ಮತಗಟ್ಟೆ ಸಮೀಕ್ಷೆಗಳಲ್ಲಿ ಮೂರು ಬಾರಿ ಬಹುತೇಕ ನಿಖರವಾಗಿತ್ತು. ಆದರೆ 2004ರಲ್ಲಿ ಮಾತ್ರ ಸಮೀಕ್ಷೆ ಸುಳ್ಳಾಗಿತ್ತು. ಇದೀಗ 2024 ಸಮೀಕ್ಷೆ ಕುತೂಹಲ ಮೂಡಿಸಿದೆ.

Continue Reading

Lok Sabha Election 2024

Exit Poll: ಈ ಹಿಂದೆ 5 ಬಾರಿ ಎಕ್ಸಿಟ್ ಪೋಲ್ ಭವಿಷ್ಯ ಉಲ್ಟಾ ಹೊಡೆದಿತ್ತು! ಯಾವಾಗ ನೆನಪಿದೆಯೆ?

ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನವನ್ನು ಎದುರು ನೋಡುತ್ತಿರುವಾಗಲೇ ಎಲ್ಲರ ದೃಷ್ಟಿ ಈಗ ಎಕ್ಸಿಟ್ ಪೋಲ್ ನತ್ತ ನೆಟ್ಟಿದೆ. ಈ ಮೂಲಕ ಚುನಾವಣಾ ಆಯೋಗದ (Election Commission) ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ಸುಳಿವು ಜನರಿಗೆ ಲಭ್ಯವಾಗುತ್ತದೆ. ಬಹುತೇಕ ಬಾರಿ ಎಕ್ಸಿಟ್ ಪೋಲ್ (Exit Poll) ಸಮೀಕ್ಷೆ ನಿಜವಾಗಿದ್ದರೂ ಹಲವು ಬಾರಿ ಉಲ್ಟಾ ಆಗಿದೆ. ಅದು ಯಾವಾಗ, ಎಲ್ಲಿ ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Exit Poll
Koo

ಲೋಕಸಭಾ ಚುನಾವಣೆಯ (Loksabha election-2024) ಅಂತಿಮ ಹಂತದ ಮತದಾನ (voting) ಜೂನ್ 1ರಂದು ನಡೆಯಲಿದ್ದು, ಜೂನ್ 4ರಂದು ಏಳು ಹಂತದ ಮತದಾನದ ಫಲಿತಾಂಶ ಹೊರಬೀಳಲಿದೆ. ರಾಜಕೀಯ ನಾಯಕರು (political leaders), ತಜ್ಞರು, ನಾಗರಿಕರು ಸೇರಿದಂತೆ ಎಲ್ಲರ ಗಮನ ಈಗ ಎಕ್ಸಿಟ್ ಪೋಲ್‌ಗಳತ್ತ (Exit Poll) ಇದೆ. ಜೂನ್‌ 1ರಂದು ಸಂಜೆ 6.30ರ ಹೊತ್ತಿಗೆ ವಿವಿಧ ಮಾಧ್ಯಮಗಳ ಎಕ್ಸಿಟ್‌ ಪೋಲ್‌ ಪ್ರಕಟವಾಗಲಿದೆ. ಕಳೆದ ಅನೇಕ ವರ್ಷಗಳಲ್ಲಿ ಎಕ್ಸಿಟ್ ಪೋಲ್‌ಗಳು ಮತದಾರರ ಚಿತ್ತವನ್ನು ಅಳೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚುನಾವಣಾ ಆಯೋಗದ (Election Commission) ಅಧಿಕೃತ ಘೋಷಣೆಯ ಮೊದಲೇ ಚುನಾವಣಾ ಫಲಿತಾಂಶದ ನಿಖರವಾದ ವಿವರಣೆ ಲಭ್ಯವಾಗುತ್ತದೆ.

ಸಮೀಕ್ಷೆಗಳು ಬಹುತೇಕ ಯಾವಾಗಲೂ ನಿಖರವಾಗಿವೆಯೇ ಇದ್ದರೂ ಕೆಲವು ಬಾರಿ ತಪ್ಪಾಗಿದ್ದೂ ಇದೆ. ತೀವ್ರವಾದ ಪರಿಶೀಲನೆ, ಚರ್ಚೆಯ ಬಳಿಕವೂ ಎಕ್ಸಿಟ್ ಪೋಲ್‌ಗಳು ಯಾವಾಗಲೂ ಅಂತಿಮ ಫಲಿತಾಂಶಗಳನ್ನು ನಿಖರವಾಗಿ ಹೇಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಒಟ್ಟು ಐದು ಬಾರಿ ಎಕ್ಸಿಟ್‌ ಪೋಲ್‌ ಭವಿಷ್ಯ ಸುಳ್ಳಾಗಿದೆ. ಈ ಕುರಿತ ಹಿನ್ನೋಟ ಇಲ್ಲಿದೆ.
2004ರ ಲೋಕಸಭಾ ಚುನಾವಣೆ

2004ರಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ರಾಜಸ್ಥಾನ ರಾಜ್ಯಗಳ ಚುನಾವಣೆಗಳಲ್ಲಿ ಭರ್ಜರಿ ಜಯ ಗಳಿಸಿ, ಆಡಳಿತಾರೂಢ ಬಿಜೆಪಿಯು ‘ಇಂಡಿಯಾ ಶೈನಿಂಗ್’ ಬ್ಯಾನರ್ ಅಡಿಯಲ್ಲಿ ಅವಧಿಪೂರ್ವವೇ ಲೋಕಸಭೆ ಚುನಾವಣೆ ಎದುರಿಸಿತು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ನಾಯಕರು ಭಾರಿ ಆತ್ಮವಿಶ್ವಾಸದಿಂದಿದ್ದರು. ಎಕ್ಸಿಟ್ ಪೋಲ್‌ಗಳು ಬಿಜೆಪಿ ನೇತೃತ್ವದ ಎನ್‌ಡಿಎಗೆ 240ರಿಂದ 250 ಸ್ಥಾನಗಳು ಬರಲಿವೆ ಎಂದು ಭವಿಷ್ಯ ನುಡಿದಿದ್ದವು. ಆದರೆ ನಿಜವಾದ ಫಲಿತಾಂಶಗಳು ಬಂದಾಗ ಸಂಖ್ಯೆಗಳು ಸಂಪೂರ್ಣವಾಗಿ ವಿರುದ್ಧವಾಗಿದ್ದವು. ಎನ್‌ಡಿಎ ಕೇವಲ 181 ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು. 218 ಸ್ಥಾನಗಳನ್ನು ಗಳಿಸಿದ ಯುಪಿಎ ಮಿತ್ರ ಪಕ್ಷಗಳ ನೆರವಿನಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿತು.


2015ರ ದೆಹಲಿ ಅಸೆಂಬ್ಲಿ ಚುನಾವಣೆ

2015ರ ದೆಹಲಿ ಅಸೆಂಬ್ಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 70ರಲ್ಲಿ 67 ಸ್ಥಾನಗಳನ್ನು ಗಳಿಸಿ ಅಭೂತಪೂರ್ವ ಜಯ ಸಾಧಿಸಿತು. ಆದರೆ ಮತದಾನದ ದಿನದಂದು ನಡೆಸಿದ ಎಕ್ಸಿಟ್ ಪೋಲ್‌ಗಳು ಆಪ್‌ಗೆ ಸ್ಪಷ್ಟ ಬಹುಮತ ಎಂದು ಹೇಳಿತ್ತಾದರೂ, 50ರಷ್ಟು ಸೀಟು ಬರಬಹುದು ಎಂದಿತ್ತು. ಆದರೆ ಆಪ್‌ ಎಲ್ಲರ ನಿರೀಕ್ಷೆಗೂ ಮೀರಿದಷ್ಟು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಮೂಲಕ, ಜನರ ತೀರ್ಪನ್ನು ಸ್ಪಷ್ಟವಾಗಿ ಗುರುತಿಸಲು ಎಕ್ಸಿಟ್‌ ಪೋಲ್‌ಗಳು ವಿಫಲವಾಗಿದ್ದವು.

2015ರ ಬಿಹಾರ ವಿಧಾನಸಭಾ ಚುನಾವಣೆ

2015ರ ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ತೀವ್ರ ಪೈಪೋಟಿಯಿಂದ ಕೂಡಿತ್ತು. ಯಾವುದೇ ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಆದರೆ ಈ ಮುನ್ಸೂಚನೆಯ ಹೊರತಾಗಿಯೂ ಆರ್‌ಜೆಡಿ-ಜೆಡಿಯು-ಕಾಂಗ್ರೆಸ್ ಒಕ್ಕೂಟವು ಭರ್ಜರಿ ಜಯ ಸಾಧಿಸಿತು. ಲಾಲು ಪ್ರಸಾದ್ ಅವರ ಆರ್‌ಜೆಡಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2017

ನೋಟು ಅಮಾನ್ಯೀಕರಣದ ಅನಂತರ ನಡೆದ 2017ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯ ಸಮೀಕ್ಷೆಗಳು ಭಾರಿ ಕುತೂಹಲ ಮೂಡಿಸಿದ್ದವು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಸರಳ ಬಹುಮತಕ್ಕೂ ಕೆಲವು ಸ್ಥಾನಗಳು ಕೊರತೆ ಆಗಲಿವೆ. ಬಿಜೆಪಿಗೆ ಹೆಚ್ಚೆಂದರೆ 185ರಿಂದ 200 ಸ್ಥಾನಗಳು ಬರಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದವು. ಎಸ್‌ಪಿ-ಕಾಂಗ್ರೆಸ್‌ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದೆ ಎಂದು ಹೇಳಲಾಗಿತ್ತು. ಆದರೆ ಎಲ್ಲ ಮತಗಟ್ಟೆ ಸಮೀಕ್ಷೆಗಳಿಗೆ ವ್ಯತಿರಿಕ್ತವಾಗಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಒಟ್ಟು 403 ಸೀಟುಗಳಲ್ಲಿ 312 ಸೀಟುಗಳನ್ನು ಗೆದ್ದುಕೊಂಡಿತು. 2012ರ ಚುನಾವಣೆಯಲ್ಲಿ ಕೇವಲ 47 ಸ್ಥಾನ ಗಳಿಸಿದ್ದ ಬಿಜೆಪಿಗೆ 2017ರಲ್ಲಿ ಭರ್ಜರಿ ಜಯ ಸಾಧಿಸಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ಸರ್ಕಾರ ರಚಿಸಿತು. ಆ ಚುನಾವಣೆಯಲ್ಲಿ ಬಿಎಸ್‌ಪಿ ಕೇವಲ 19 ಸ್ಥಾನ ಗೆದ್ದಿತು. ಎಸ್ಪಿಗೆ ಕೇವಲ 47 ಸೀಟುಗಳು ಸಿಕ್ಕಿದವು. ಕಾಂಗ್ರೆಸ್‌ಗೆ ಕೇವಲ 7 ಸ್ಥಾನಗಳು ಲಭಿಸಿದವು. ಮತಗಟ್ಟೆ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಭಾರಿ ಅಲೆ ಇರುವುದನ್ನು ಗುರುತಿಸುವಲ್ಲಿ ವಿಫವಾದವು.

ಇದನ್ನೂ ಓದಿ: PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

2014ರ ಲೋಕಸಭಾ ಚುನಾವಣೆ

2014ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವು ಸಾಧಿಸಲಿದೆ ಎಂದು ಹೇಳಿತ್ತು. ಆದರೆ ಬಿಜೆಪಿಯೊಂದೇ ಸರಳ ಬಹುಮತಕ್ಕೆ ಅಗತ್ಯವಾದ 272 ಸಂಖ್ಯೆ ಪಡೆಯುವುದಿಲ್ಲ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು. ಟುಡೇಸ್‌ ಚಾಣಕ್ಯ ಸಮೀಕ್ಷೆಯೊಂದು ಮಾತ್ರ ಬಿಜೆಪಿಗೆ 291 ಸೀಟು ಬರಬಹುದು ಎಂದು ಹೇಳಿತ್ತು. ಆದರೆ ಅಂತಿಮ ಫಲಿತಾಂಶದಲ್ಲಿ ಬಿಜೆಪಿಗೆ ಭರ್ಜರಿ 282 ಸೀಟುಗಳು ಲಭಿಸಿದವು. ಎನ್‌ಡಿಎ ಸೀಟುಗಳ ಸಂಖ್ಯೆ 300 ದಾಟಿತು. ಕಾಂಗ್ರೆಸ್ ಕೇವಲ 44 ಸ್ಥಾನಗಳಿಗೆ ಸೀಮಿತವಾಯಿತು. ಬಿಜೆಪಿ ಮತ್ತು ಎನ್‌ಡಿಎಯ ಭಾರಿ ಗೆಲುವಿನ ಸುಳಿವು ಮತಗಟ್ಟೆ ಸಮೀಕ್ಷೆಗಳಿಗೆ ಸಿಕ್ಕಿರಲಿಲ್ಲ. ಹಾಗಾಗಿ ಮತಗಟ್ಟೆ ಸಮೀಕ್ಷೆಗಳು ಎಲ್ಲ ಕಾಲಕ್ಕೂ ಸರಿಯಾಗಿಯೇ ಇರುತ್ತವೆ ಎಂದು ಹೇಳಲಾಗುವುದಿಲ್ಲ.

Continue Reading

Lok Sabha Election 2024

PM Modi: ಕನ್ಯಾಕುಮಾರಿಯಲ್ಲಿ ಪ್ರಧಾನಿ ಧ್ಯಾನ; ಪ್ರಧಾನಿ ಈ ಸ್ಥಳವನ್ನೇ ಆಯ್ಕೆ ಮಾಡಲು ಏನು ಕಾರಣ?

ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಈ ಬಾರಿ ಲೋಕ ಸಭಾ ಚುನಾವಣಾ ಪ್ರಚಾರದ ಅಂತ್ಯವನ್ನು ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ನಡೆಸಲಿದ್ದಾರೆ. ಇಲ್ಲಿ ಸುಮಾರು 45 ಗಂಟೆಗಳ ಕಾಲ ಅವರು ಕಳೆಯಲಿದ್ದಾರೆ.

VISTARANEWS.COM


on

By

PM Modi
Koo

ಲೋಕಸಭಾ ಚುನಾವಣೆ- 2024ರ (Loksabha election-2024) ಬಿಜೆಪಿ ಪ್ರಚಾರ ಕಾರ್ಯವನ್ನು ಅಂತ್ಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಕನ್ಯಾಕುಮಾರಿಗೆ ತೆರಳಲಿದ್ದು, ( Kanyakumari) ಇಲ್ಲಿನ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ (Vivekananda Rock Memorial) ಮೇ 30ರಿಂದ ಜೂನ್ 1ರವರೆಗೆ ಒಟ್ಟು 45 ಗಂಟೆಗಳ ಕಾಲ ಧ್ಯಾನ ಮಾಡಲಿದ್ದಾರೆ.

ಇದೇ ಸ್ಥಳದಲ್ಲಿ ಭಾರತದ ಆಧ್ಯಾತ್ಮಿಕ ನಾಯಕ ಸ್ವಾಮಿ ವಿವೇಕಾನಂದರು 1892ರಲ್ಲಿ ಮೂರು ದಿನಗಳ ಕಾಲ ಧ್ಯಾನ ಮಾಡಿ ಜ್ಞಾನೋದಯವನ್ನು ಪಡೆದಿದ್ದರು.

2019ರ ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಿ ಮೋದಿ ಅವರು ಉತ್ತರಾಖಂಡದ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿ 15 ಗಂಟೆಗಳ ‘ಏಕಾಂತವಾಸ್’ (ಏಕಾಂತ ಧ್ಯಾನ) ಕೈಗೊಂಡಿದ್ದರು.

2014 ರಲ್ಲಿ ಮಹಾರಾಷ್ಟ್ರದ ಪ್ರತಾಪಗಢಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದರು. 1659ರ ನವೆಂಬರ್ ನಲ್ಲಿ ಬಿಜಾಪುರದ ಆದಿಲ್ ಶಾಹಿ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ಅವರನ್ನು ಕೊಂದು ಯುದ್ಧದಲ್ಲಿ ಗೆದ್ದ ಛತ್ರಪತಿ ಶಿವಾಜಿಗೆ ಗೌರವ ಸಲ್ಲಿಸಿದರು. ಈ ವಿಜಯವು ಮರಾಠಾ ಸಾಮ್ರಾಜ್ಯದ ಮುಖ್ಯಸ್ಥನಾಗಿ ಶಿವಾಜಿಯ ಪಟ್ಟಾಭಿಷೇಕಕ್ಕೆ ದಾರಿ ಮಾಡಿಕೊಟ್ಟಿತು. ಇದನ್ನು ಹಿಂದವಿ ಸ್ವರಾಜ್ ಎಂದು ಛತ್ರಪತಿ ಶಿವಾಜಿ ಕರೆದರು.

ಇದೀಗ ಜೂನ್ 4 ರಂದು ಪ್ರಕಟವಾಗಲಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಮುಂಚಿತವಾಗಿ ಮೋದಿ ಕನ್ಯಾಕುಮಾರಿ ಪ್ರವಾಸ ಯೋಜನೆ ಹಾಕಿಕೊಂಡಿದ್ದಾರೆ.


ವಿವೇಕಾನಂದ ಬಂಡೆಯ ಮಹತ್ವ ಏನು?

ಹಿಂದೂ ಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿರುವ ಭಾರತದ ದಕ್ಷಿಣ ತುದಿಯಾದ ಕನ್ಯಾಕುಮಾರಿಯ ವವತುರೈ ಕಡಲತೀರದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಈ ದ್ವೀಪದ ಮೇಲೆ ಧ್ಯಾನ ಮಾಡುವಾಗ ಸ್ವಾಮಿ ವಿವೇಕಾನಂದರು ಅಭಿವೃದ್ಧಿ ಹೊಂದಿದ ಭಾರತದ ಕನಸು ಕಂಡಿದ್ದರು.

ಭಾರತದಾದ್ಯಂತ ನಾಲ್ಕು ವರ್ಷಗಳ ಕಾಲ ಅಲೆದಾಡಿದ ಅವರು ದೈವಿಕ ಸ್ವಭಾವ, ಸತ್ಯ, ಶುದ್ಧತೆ, ಪ್ರಾಮಾಣಿಕತೆ, ಪರಿಶ್ರಮ, ಧೈರ್ಯ, ಶಕ್ತಿ ಮತ್ತು ಪ್ರೀತಿಯಲ್ಲಿ ನಂಬಿಕೆಯ ಇಡುವ ತತ್ತ್ವವನ್ನು ಸಾರಿದರು.

ಸ್ವಾಮಿ ರಾಮಕೃಷ್ಣಾನಂದರಿಗೆ 1894ರಲ್ಲಿ ವಿವೇಕಾನಂದರು, ಭಾರತೀಯ ಬಂಡೆಯ ಕೊನೆಯ ತುಣುಕಿನ ಮೇಲೆ ಕುಳಿತು ನಾನು ಒಂದು ಯೋಜನೆಯನ್ನು ಕಂಡಿದ್ದೇನೆ. ಸನ್ಯಾಸಿಗಳು ಅಲೆದಾಡುತ್ತಾ ಜನರಿಗೆ ಆಧ್ಯಾತ್ಮಿಕತೆಯನ್ನು ಕಲಿಸುವುದು ಹುಚ್ಚುತನ. ಬಡವರು ಅತ್ಯಂತ ಕಷ್ಟವಾದ ಜೀವನ ನಡೆಸುತ್ತಿರುವುದು ಅವರ ಅಜ್ಞಾನದಿಂದಾಗಿ. ನಾವು ಅದನ್ನು ಹೋಗಲಾಡಿಸುವ ಬದಲು ಅವರ ರಕ್ತವನ್ನು ಹೀರುತ್ತಿದ್ದೇವೆ ಮತ್ತು ಅವರನ್ನು ಪಾದದಡಿಯಲ್ಲಿ ತುಳಿಯುತ್ತಿದ್ದೇವೆ ಎಂದು ಹೇಳಿದ್ದರು.

1963ರಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ಶತಮಾನೋತ್ಸವದ ಮುನ್ನಾದಿನ ಆರ್‌ಎಸ್‌ಎಸ್ ಕಾರ್ಯಕರ್ತ ಏಕನಾಥ್ ರಾನಡೆ ನೇತೃತ್ವದ ವಿವೇಕಾನಂದ ರಾಕ್ ಸ್ಮಾರಕ ಸಮಿತಿಯು ಈ ಸ್ಥಳವನ್ನು ನೆನಪಿಸಿತ್ತು. ಇದನ್ನು 1970 ರಲ್ಲಿ ರಾಷ್ಟ್ರಪತಿ ವಿ.ವಿ.ಗಿರಿ ಅವರು ಔಪಚಾರಿಕವಾಗಿ ಉದ್ಘಾಟಿಸಿದರು.

ಒಂದು ನಂಬಿಕೆಯ ಪ್ರಕಾರ ಪಾರ್ವತಿ ದೇವಿಯು ಶಿವನಿಗಾಗಿ ಕಾಯುತ್ತಿರುವಾಗ ಇದೇ ಬಂಡೆಯ ಮೇಲೆ ಒಂದೇ ಕಾಲಿನ ಮೇಲೆ ಧ್ಯಾನ ಮಾಡುತ್ತಿದ್ದಳು.

ವವತುರೈನಿಂದ 15 ನಿಮಿಷಗಳ ದೋಣಿ ಸಂಚಾರದ ಮೂಲಕ ಕಲ್ಲಿನ ದ್ವೀಪವನ್ನು ಪ್ರವೇಶಿಸಬಹುದು. ಇದು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳವಾಗಿದೆ.


ಮೋದಿ ಈ ಸ್ಥಳ ಆಯ್ಕೆ ಮಾಡಿದ್ದು ಯಾಕೆ?

ಪ್ರಧಾನಿ ನರೇಂದ್ರ ಮೋದಿ ಅವರು ವಿವೇಕಾನಂದ ಅವರನ್ನು ತಮ್ಮ ಜೀವನಕ್ಕೆ ಆದರ್ಶ ಎಂದು ಪರಿಗಣಿಸುತ್ತಾರೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿರುವ ರಾಮಕೃಷ್ಣ ಮಿಷನ್‌ನ ಸದಸ್ಯರೂ ಆಗಿದ್ದಾರೆ.

ಕಳೆದ ವರ್ಷ ರಾಮಕೃಷ್ಣ ಮಿಷನ್‌ನ 125 ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮೋದಿ, ಸ್ವಾಮಿ ವಿವೇಕಾನಂದರು ಭಾರತದ ಬಗ್ಗೆ ಕಂಡಿರುವ ಕನಸನ್ನು ನನಸು ಮಾಡಲು ಭಾರತವು ಕೆಲಸ ಮಾಡುವುದನ್ನು ಅವರು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಹೇಳಿದ್ದರು.

ಈ ಬಾರಿ ತಮಿಳುನಾಡಿನ ಕನ್ಯಾಕುಮಾರಿಯನ್ನು ಅವರು ಧ್ಯಾನ ಮಾಡಲು ಅವರು ಆಯ್ಕೆ ಮಾಡಿರುವುದು ಈ ವರ್ಷದ ಚುನಾವಣಾ ಪ್ರಚಾರದ ಸಮಯದಲ್ಲಿ ಅವರ ಪಕ್ಷ ದಕ್ಷಿಣ ಭಾರತದಲ್ಲಿ ಬಲವಾಗಿರುವುದನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ಅವರ ಒಟ್ಟು ಪ್ರವಾಸಗಳಲ್ಲಿ ಮೂರನೇ ಒಂದು ಭಾಗದಷ್ಟು ಅವರು ದಕ್ಷಿಣ ಭಾರತಕ್ಕೆ ಪ್ರವಾಸ ಕೈಗೊಂಡಿದ್ದರು. 2024ರಲ್ಲಿ ತಮಿಳುನಾಡಿಗೆ ಏಳು ಭಾರಿ ಭೇಟಿ ನೀಡಿದ್ದಾರೆ.

ದಕ್ಷಿಣದ ರಾಜ್ಯಗಳ ಮೇಲೆ ದೃಷ್ಟಿ

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಕರ್ನಾಟಕವು ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ 131 ಸ್ಥಾನಗಳನ್ನು ಹೊಂದಿವೆ. ತಮಿಳುನಾಡುವೊಂದೇ ಸಂಸತ್ತಿನಲ್ಲಿ 39 ಸ್ಥಾನಗಳನ್ನು ಹೊಂದಿದೆ. ದಕ್ಷಿಣದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದರು.

ಮೋದಿ ಭೇಟಿಗೆ ಸಿದ್ಧತೆ ಏನು?

ಗುರುವಾರ ವಿವೇಕಾನಂದ ಕಲ್ಲಿನ ಸ್ಮಾರಕದಲ್ಲಿ ಪ್ರಧಾನಿಯವರ 45 ಗಂಟೆಗಳ ವಾಸ್ತವ್ಯ ಸುಗಮವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸುಮಾರು 2,000 ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ: Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

ತಿರುನೆಲ್ವೇಲಿ ವ್ಯಾಪ್ತಿಯ ಡಿಐಜಿ ಪ್ರವೇಶ್ ಕುಮಾರ್ ಅವರು ಪೊಲೀಸ್ ವರಿಷ್ಠಾಧಿಕಾರಿ ಇ. ಸುಂದರವತನಂ ಅವರೊಂದಿಗೆ ಇಲ್ಲಿನ ಕಲ್ಲಿನ ಸ್ಮಾರಕ, ಬೋಟ್ ಜೆಟ್ಟಿ, ಹೆಲಿಪ್ಯಾಡ್ ಮತ್ತು ರಾಜ್ಯ ಅತಿಥಿ ಗೃಹದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿದ ಅನಂತರ ಪ್ರಧಾನಿ ಗುರುವಾರ ಮಧ್ಯಾಹ್ನ ತಿರುವನಂತಪುರಂ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಸಂಜೆ ಕನ್ಯಾಕುಮಾರಿಯಲ್ಲಿರುವ ರಾಜ್ಯ ಅತಿಥಿ ಗೃಹ ತಲುಪಿ ದೋಣಿ ಮೂಲಕ ವಿವೇಕಾನಂದ ಕಲ್ಲಿನ ಸ್ಮಾರಕಕ್ಕೆ ತೆರಳಲಿದ್ದಾರೆ. ಅವರು ಶನಿವಾರ ಮಧ್ಯಾಹ್ನದವರೆಗೆ ಅಲ್ಲಿಯೇ ಇರುತ್ತಾರೆ ಎನ್ನಲಾಗಿದೆ.

ಮೋದಿ ಶನಿವಾರ ಸಂಜೆ ವೇಳೆಗೆ ಕನ್ಯಾಕುಮಾರಿ ಹೆಲಿಪ್ಯಾಡ್ ತಲುಪಿ ತಿರುವನಂತಪುರಕ್ಕೆ ಹಿಂತಿರುಗಿ ಅದೇ ದಿನ ದೆಹಲಿಗೆ ತೆರಳಲಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸರ್ಕಾರವು ಪ್ರಧಾನಿಯವರ ಈ ಭೇಟಿಗೆ ಅನುಮತಿಯನ್ನು ವಿರೋಧಿಸಿ ಪ್ರಸ್ತುತ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಮತ್ತು ನಡೆಯುತ್ತಿರುವ ಪ್ರವಾಸೋದ್ಯಮ ಋತುವನ್ನು ಉಲ್ಲೇಖಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

Continue Reading
Advertisement
World Anti Child Labor Day celebration in Hosapete
ವಿಜಯನಗರ20 mins ago

Vijayanagara News: ಹೊಸಪೇಟೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

Kangana Ranaut
Latest24 mins ago

Kangana Ranaut: ಸಂಸದೆಯಾಗಿರುವ ನಟಿ ಕಂಗನಾ ರಣಾವತ್‌ಗೆ ಸಿಗುವ ಸಂಬಳ, ಇತರ ಸವಲತ್ತುಗಳು ಏನೇನು?

JP Nadda
Latest36 mins ago

JP Nadda: ವೇದಿಕೆ ಮೇಲೆ ಗುಟ್ಕಾ ತಿಂದ ಕೇಂದ್ರ ಆರೋಗ್ಯ ಸಚಿವ ನಡ್ಡಾ? ವಿಡಿಯೊ ನೋಡಿ

Actor darshan Arrested
ಪ್ರಮುಖ ಸುದ್ದಿ43 mins ago

Actor darshan Arrested : ದರ್ಶನ್‌ಗೆ ಎಣ್ಣೆ ಹೊಡೆಯಲು, ಸಿಗರೇಟ್​ ಸೇದಲು ಠಾಣೆಗೇ ಶಾಮಿಯಾನ ಹಾಕಿದರೆ ಪೊಲೀಸರು?

Hamare Baarah Release Supreme Court has imposed a stay
ಬಾಲಿವುಡ್48 mins ago

Hamare Baarah: ಮುಸ್ಲಿಂ ಮಹಿಳೆಯರ ಕುರಿತ ʻಹಮಾರೆ ಬಾರಾʼ ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ

Stock Market
ವಾಣಿಜ್ಯ50 mins ago

Stock Market: ಷೇರುಪೇಟೆಯಲ್ಲಿ ಗೂಳಿ ಗುಟುರು; ಸೆನ್ಸೆಕ್ಸ್‌, ನಿಫ್ಟಿ ಏರಿಕೆ

Actor Darshan
ಬೆಂಗಳೂರು50 mins ago

Actor Darshan : ರೇಣುಕಾಸ್ವಾಮಿಯನ್ನು ಕೊಂದು ನಟ ದರ್ಶನ್‌ ಆ್ಯಂಡ್‌ ಗ್ಯಾಂಗ್‌ ಫೋನ್‌ ಮಾಡಿದ್ದು ಯಾರಿಗೆ?

Darshan Old Case Coming Out darshan gang
ಕ್ರೈಂ54 mins ago

Actor Darshan: ಬಡಪಾಯಿ ಕಾರ್ಮಿಕರ ಮೇಲೆ ನಾಯಿ ಛೂ ಬಿಟ್ಟು ಹಿಂಸಿಸಿದ್ದ ದರ್ಶನ್‌ & ಗ್ಯಾಂಗ್‌!

IND vs USA
ಕ್ರೀಡೆ1 hour ago

IND vs USA: ಬೆಸ್ಟ್​ ಫೀಲ್ಡಿಂಗ್​ಗೆ 2ನೇ ಚಿನ್ನದ ಪದಕ ಗೆದ್ದ ಮೊಹಮ್ಮದ್ ಸಿರಾಜ್

Actor Darshan case ram gopal varma Reaction
ಸ್ಯಾಂಡಲ್ ವುಡ್1 hour ago

Actor Darshan: ಆರಾಧನೆ ಅತಿರೇಕವಾದರೆ ದುರಂತ ಖಚಿತ; ದರ್ಶನ್​ ಬಗ್ಗೆ ರಾಮ್​ಗೋಪಾಲ್ ವರ್ಮಾ ಹೇಳಿದ್ದು ಹೀಗೆ…

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌