Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ! - Vistara News

ವೈರಲ್ ನ್ಯೂಸ್

Viral News : ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡ ತಾಯಿ!

ತಾಯಿಯೊಬ್ಬಳು ತನ್ನ ಮಗ ಸಿಎ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Viral News) ಆಗಿದೆ.

VISTARANEWS.COM


on

mother suicide
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ಮಕ್ಕಳು ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲವೆಂದಾದರೆ ಮಕ್ಕಳಿಗೆ ಬೈಯುವ, ಹೊಡೆಯುವ ಪೋಷಕರನ್ನು ನೀವು ನೋಡಿರುತ್ತೀರಿ. ಇಲ್ಲವೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡಿಕೊಂಡು ಕೂರುವವರನ್ನೂ ನೀವು ನೋಡಿರಬಹುದು. ಆದರೆ ಇಲ್ಲೊಬ್ಬ ತಾಯಿ ತನ್ನ ಮಗ ಸಿಎ ಪರೀಕ್ಷೆಯಲ್ಲಿ ಪಾಸ್‌ ಆಗಲಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಹೈದರಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ (Viral News) ಚರ್ಚೆ ನಡೆಯುತ್ತಿದೆ.

ಹೈದರಾಬಾದ್‌ನ ಗುಜುಲರಾಮ್‌ನ ಬಾಲಾಜಿ ನಗರ ಎನ್‌ಕ್ಲೇವ್‌ನಲ್ಲಿ ವಾಸವಿದ್ದ 41 ವರ್ಷದ ಪುಷ್ಪ ಜ್ಯೋತಿ ಹೆಸರಿನ ಮಹಿಳೆಗೆ ಇಬ್ಬರು ಗಂಡು ಮಕ್ಕಳು. ಆಕೆಯ ಪತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರೆ ಆಕೆ ಮನೆಯನ್ನು ಸಂಭಾಳಿಸಿಕೊಂಡು ಹೋಗುತ್ತಿದ್ದಳು. ಆಕೆಯ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಇತ್ತೀಚೆಗೆ ಚಾರ್ಟರ್ಡ್‌ ಅಕೌಂಟೆನ್ಸಿ (ಸಿಎ) ಪರೀಕ್ಷೆಯನ್ನು ಬರೆದಿದ್ದ. ಆದರೆ ಆತನ ದುರಾದೃಷ್ಟವೆನ್ನುವಂತೆ ಆತ ಪರೀಕ್ಷೆಯಲ್ಲಿ ತೇರ್ಗಡೆಯಾಗಿಲ್ಲ. ಇದರಿಂದಾಗಿ ಆತ ಬೇಸರಗೊಂಡಿದ್ದಾನೆ. ಆದರೆ ಆತನಿಗಿಂತ ಹೆಚ್ಚಾಗಿ ಬೇಸರಗೊಂಡ ತಾಯಿ ಪುಷ್ಪ ಜ್ಯೋತಿ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಮಗನ ಭವಿಷ್ಯದ ಬಗ್ಗೆ ಚಿಂತೆಗೆ ಬಿದ್ದ ಆಕೆ ಬುಧವಾರದಂದು ಮನೆಯಲ್ಲಿನ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Viral News : ಕಚೇರಿಯಲ್ಲೇ ಟ್ರೈನಿ ಐಪಿಎಸ್‌ ಅಧಿಕಾರಿಯನ್ನು ಮದುವೆಯಾದ ಐಎಎಸ್‌ ಅಧಿಕಾರಿ!
ಈ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆತ್ಮಹತ್ಯೆ ಸ್ಥಳಕ್ಕೆ ಬಂದ ಪೊಲೀಸರು ಪುಷ್ಪ ಜ್ಯೋತಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಆತ್ಮಹತ್ಯೆ ವಿಚಾರದಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪುಷ್ಪ ಜ್ಯೋತಿ ಅವರ ಆತ್ಮಹತ್ಯೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೀಡಾಗುತ್ತಿದೆ. ಮಕ್ಕಳಿಗೆ ಧೈರ್ಯ ಹೇಳಬೇಕಾದ ಪೋಷಕರೇ ಇಷ್ಟು ದುರ್ಬಲ ಮನಸ್ಥಿತಿಯನ್ನಿಟ್ಟುಕೊಂಡರೆ ಕಷ್ಟ ಎನ್ನುವ ಬಗ್ಗೆ ನೆಟ್ಟಿಗರು ಮಾತನಾಡುತ್ತಿದ್ದಾರೆ. ಸಿಎ ಪರೀಕ್ಷೆ ಕಬ್ಬಿಣದ ಕಡಲೆಯಿದ್ದಂತೆ. ಅದನ್ನು ಒಂದೇ ಪ್ರಯತ್ನದಲ್ಲಿ ಪಾಸ್‌ ಮಾಡುವುದು ಕಷ್ಟ ಸಾಧ್ಯ. ಅಷ್ಟೂ ಅರಿತುಕೊಳ್ಳದ ತಾಯಿ ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದು ಜನರು ಹೇಳುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Janhvi Kapoor: ಇಡ್ಲಿ- ಚಿಕನ್ ಕರಿ ಕಾಂಬಿನೇಶನ್‌ಗೆ ಮುಖ ಕಿವುಚಿಕೊಂಡ ಖ್ಯಾತ ಯುಟ್ಯೂಬರ್‌; ತಿನ್ನಲು ಕೈ ಬಳಸಿ ಎಂದ ಜಾಹ್ನವಿ ಕಪೂರ್!

Janhvi Kapoor: ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಅವರ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಇಡ್ಲಿ ಮತ್ತು ಚಿಕನ್ ಕರಿ ಕಾಂಬಿನೇಷನ್‌ ಬಗ್ಗೆ ಹಾಗೂ ಕೈಯಿಂದ ಇಡ್ಲಿ ತಿನ್ನುವುದರ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲ ಅವರ ಮುಖ ಕಿವುಚಿಕೊಳ್ಳುವ ರೀತಿಗೆ ನೆಟ್ಟಿಗರು ಭಾರಿ ಟ್ರೋಲ್‌ ಮಾಡಿದ್ದಾರೆ.

VISTARANEWS.COM


on

Janhvi Kapoor interview Kamiya Jani trolled for calling idli-chicken curry weird combination
Koo

ಬೆಂಗಳೂರು: ಕರ್ಲಿ ಟೇಲ್ಸ್‌ನ ( Curly Tales) ಸಂಸ್ಥಾಪಕಿ ಕಾಮಿಯಾ ಜಾನಿ (Kamiya Jani) ಅವರು ಕಳೆದ ತಿಂಗಳು ನಟಿ ಜಾಹ್ನವಿ ಕಪೂರ್ (Janhvi Kapoor) ಅವರನ್ನು ಸಂದರ್ಶನ ಮಾಡಿದ್ದಾರೆ. ಕಾಮಿಯಾ ಜಾನಿ ಕ್ಲಿಪ್ ವೈರಲ್ ಆದ ನಂತರ ಭಾರಿ ಟ್ರೋಲ್‌ ಆಗುತ್ತಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಪೂರ್ ಅವರ ಮನೆಯಲ್ಲಿ ನಡೆದ ಸಂದರ್ಶನದಲ್ಲಿ, ಇಡ್ಲಿ ಮತ್ತು ಚಿಕನ್ ಕರಿ ಕಾಂಬಿನೇಷನ್‌ ಬಗ್ಗೆ ಹಾಗೂ ಕೈಯಿಂದ ಇಡ್ಲಿ ತಿನ್ನುವುದರ ಬಗ್ಗೆಯೂ ಆಶ್ಚರ್ಯ ವ್ಯಕ್ತಪಡಿಸಿದರು. ಮಾತ್ರವಲ್ಲ ಅವರ ಮುಖ ಕಿವುಚಿಕೊಳ್ಳುವ ರೀತಿಗೆ ನೆಟ್ಟಿಗರು ಭಾರಿ ಟ್ರೋಲ್‌ ಮಾಡಿದ್ದಾರೆ.

ಡೈನಿಂಗ್ ಟೇಬಲ್‌ನಲ್ಲಿ, ದೋಸೆ, ಇಡ್ಲಿ, ಚಿಕನ್ ಕರಿ, ಪನೀರ್ ಭುರ್ಜಿ ಮತ್ತು ಮೂಂಗ್ ದಾಲ್ ಇತ್ತು. ಆಗ ಕಾಮಿಯಾ ಜಾನಿಗೆ ಜಾಹ್ನವಿ ಅವರು ಇಡ್ಲಿಯೊಂದಿಗೆ ಚಿಕನ್ ಕರಿ ಟ್ರೈ ಮಾಡಿ ಎಂದು ಹೇಳುತ್ತಾರೆ. ಆಗ ಕಾಮಿಯಾ ಬಹಳ ಆಶ್ಚರ್ಯ ಚಕಿತರಾಗಿ ಏನು? ಇಡ್ಲಿ ಜೊತೆ ಚಿಕನ್ ಕರಿ?” ಇದೆಂಥ ಕಾಂಬಿನೇಶನ್‌? ನೀವೇ ಇದ್ದನ್ನ ಪರಿಚಯಿಸಿದ್ದೀರಾ ಅಥವಾ ಇದು ಕಾಂಬಿನೇಶನ್‌ ಇರೋದು ಹೌದಾ? ಎಂದು ಕೇಳುತ್ತಾರೆ. ಮಾತ್ರವಲ್ಲ ಇದು ಬೋನಿ ಸ್ಪೆಷಲ್. ಚಿಕನ್ ಕರಿ ಜೊತೆ ಇಡ್ಲಿ. ನಿಮ್ಮಲ್ಲಿ ಎಷ್ಟು ಮಂದಿ ಇದನ್ನು ಪ್ರಯತ್ನಿಸಿದ್ದೀರಿ ಎಂದು ನನಗೆ ತಿಳಿದಿಲ್ಲ. ಇಡ್ಲಿಯ ಮೇಲೆ ಚಿಕನ್ ಕರಿ. ಇದನ್ನು ಪ್ರಯತ್ನಿಸಲು ನನಗೆ ತುಂಬಾ ಭಯವಾಗಿದೆ” ಎಂದು ಅವಳು ಹೇಳುತ್ತಾರೆ.

ಆಗ ಕಾಮಿಯಾ ಜಾನಿಗೆ ಜಾಹ್ನವಿ ಚಮಚ ಬಳಸಬೇಡಿ, ಕೈಗಳಿಂದ ತಿನ್ನಿರಿ ಎಂದಾಗ, ಕೈಯಿಂದ ಇಡ್ಲಿ ತಿನ್ನಲು ನನಗೆ ಗೊತ್ತಿಲ್ಲ,” ಎಂದು ಜಾನಿ ನಗುತ್ತಾ ಪ್ರತಿಕ್ರಿಯಿಸುತ್ತಾರೆ. ಮ್ಯಾಗಿ ನೂಡಲ್ಸ್ ಸೇರಿದಂತೆ ಎಲ್ಲವನ್ನೂ ಕೈಯಿಂದ ತಿನ್ನಬಹುದು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ. ಬಳಿಕ ಇಡ್ಲಿ-ಕೋಳಿ ಕರಿ ಕಾಂಬಿನೇಶನ್‌ ತಿಂದ ಬಳಿಕ ಕಾಮಿಯಾ ʻʻವಿಚಿತ್ರ ಕಾಮಬಿನೇಶನ್‌ʼʼಎಂದು ಎಂದು ಹೇಳುತ್ತಾರೆ.

ಕ್ಲಿಪ್ ಅನ್ನು ವೀಕ್ಷಿಸಿದ ಹೆಚ್ಚಿನ ಸಂಖ್ಯೆಯ ಜನರು ಕಾಮಿಯಾ ಜಾನಿ ಅವರನ್ನು ಟೀಕೆ ಮಾಡಿದ್ದಾರೆ. ದಕ್ಷಿಣ ಭಾರತದ ಆಹಾರಗಳ ಬಗ್ಗೆ ಆಕೆಗೆ ತಿಳಿದಿಲ್ಲ ಎಂದು ಟ್ರೋಲ್‌ ಮಾಡಿದ್ದಾರೆ. ಆಕೆ ಎಂದಾದರೂ ತಮಿಳುನಾಡಿಗೆ ಭೇಟಿ ನೀಡಿದ್ದಾಳೆಯೇ? ಅಲ್ಲದೆ, ಇಡ್ಲಿ ಅಥವಾ ಮಟನ್‌ನೊಂದಿಗೆ ದೋಸೆಯನ್ನು ಪ್ರಯತ್ನಿಸಿ, ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Janhvi Kapoor: ಪೀರಿಯಡ್ಸ್ ವೇಳೆ ಲವ್ ಬ್ರೇಕ್ ಅಪ್‌ ಆಗ್ತಿತ್ತು ಎಂದ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌!

ಕರ್ಲಿ ಟೇರ್ಲ್ ಎಂಬ ಯೂಟ್ಯೂಬ್ ಚಾನೆಲ್ ಹೊಂದಿರುವ ಕಾಮಿಯಾ ಜಾನಿ ಈ ವರ್ಷ ಮಾರ್ಚ್‌ನಲ್ಲಿ ಪ್ರಧಾನಿ ಮೋದಿಯಿಂದ ಬೆಸ್ಟ್ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಅವಾರ್ಡನ್ನು ಗಳಿಸಿದ್ದಾರೆ. 

ಇದಕ್ಕೂ ಮುಂಚೆ ಮುಂಬಯಿನಲ್ಲಿ (mumbai) ಅದ್ಧೂರಿಯಾಗಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ (Anant Radhika Wedding) ಸಮಾರಂಭದಲ್ಲಿ ವ್ಯಾಪಾರ, ರಾಜಕೀಯ ಮತ್ತು ಮನರಂಜನಾ ಲೋಕದ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಈ ಬಗ್ಗೆ ಕರ್ಲಿ ಟೇಲ್ಸ್ ನ (Curly Tales) ಕಾಮಿಯಾ ಜಾನಿ (kamiya jani) ಅವರು ವಿಡಿಯೋವನ್ನು ಹಂಚಿಕೊಂಡಿದ್ದು, ಉನ್ನತ-ಪ್ರೊಫೈಲ್ ಮದುವೆ ಎಷ್ಟು ಸ್ಮರಣೀಯ ಮತ್ತು ಭವ್ಯವಾಗಿತ್ತು ಎಂಬುದನ್ನು ವಿಡಿಯೋ ಮೂಲಕ ವಿವರಿಸಿದ್ದರು.





Continue Reading

ವೈರಲ್ ನ್ಯೂಸ್

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

Viral Video: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಈ ಮಹಿಳೆ ಅದನ್ನೇ ಪ್ರವೃತ್ತಿ ಮಾಡಿಕೊಂಡಂತಿದೆ. ಕಳೆದ 6 ಡಿವೋರ್ಸ್ ಪ್ರಕರಣದಲ್ಲಿ ಈ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಈ ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಸದ್ಯ ಈ ಪ್ರಕರಣದ ವಿಚಾರಣೆ ಬೆಂಗಳೂರಿನ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಮಹಿಳೆಯ ಕಥೆ ಕೇಳಿ ನ್ಯಾಯಾಧೀಶರೇ ಅಚ್ಚರಿಗೊಳಗಾಗಿದ್ದಾರೆ.

VISTARANEWS.COM


on

Koo

ಬೆಂಗಳೂರು: ಮದುವೆಯಾದ ಬಳಿಕ ಪತಿ-ಪತ್ನಿ ಮಧ್ಯೆ ಒಮ್ಮತ ಮೂಡದಿದ್ದರೆ, ಸರಸಕ್ಕಿಂತ ವಿರಸವೇ ಹೆಚ್ಚಾದರೆ ವಿಚ್ಛೇದನ ಪಡೆಯುವುದು ಸಹಜ. ಆದರೆ ಇಲ್ಲೊಬ್ಬ ಮಹಿಳೆ ಡಿವೋರ್ಸ್‌ ಪಡೆದುಕೊಳ್ಳಲೆಂದೇ ಮದುವೆ ಮಾಡಿಕೊಳ್ಳುತ್ತಿದ್ದಾಳ ಎನ್ನುವ ಅನುಮಾನ ಮೂಡುವಂತಾಗಿದೆ. ಯಾಕೆಂದರೆ ಇದೀಗ ಈಕೆಯ 7ನೇ ಡಿವೋರ್ಸ್ ಪ್ರಕರಣ ಕೋರ್ಟ್‌ ಮೆಟ್ಟಿಲೇರಿದ್ದು, ನ್ಯಾಯಾಧೀಶರನ್ನೇ ಅಚ್ಚರಿಗೆ ದೂಡಿದೆ. ಈ ವಿಚಾರಣೆಯ ವಿಡಿಯೊ ಇದೀಗ ವೈರಲ್ ಆಗಿದೆ (Viral Video).

ಮದುವೆಯಾದ ನಂತರ ಮಹಿಳೆಯರು ತಮ್ಮ ಮನೆಗಳಿಂದ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿರುವ ಅನೇಕ ಪ್ರಕರಣಗಳು ನಡೆದಿವೆ. ಇಂತಹ ಘಟನೆಗಳು ಉತ್ತರ ಭಾರತದಲ್ಲಿ ಆಗಾಗ ವರದಿಯಾಗುತ್ತಿರುತ್ತವೆ. ಅದಕ್ಕಿಂತ ಭಿನ್ನವಾಗಿ, ನ್ಯಾಯಾಧೀಶರನ್ನೇ ಬೆರಗುಗೊಳಿಸಿದ ಡಿವೋರ್ಸ್‌ ಪ್ರಕರಣ ಇದೀಗ ಬೆಂಗಳೂರಿನಲ್ಲಿ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಪ್ರಕರಣ ಹೆಚ್ಚಾಗುತ್ತಿದೆ. ಆದರೆ ಈ ಮಹಿಳೆ ಅದನ್ನೇ ಪ್ರವೃತ್ತಿ ಮಾಡಿಕೊಂಡಂತಿದೆ. ಕಳೆದ 6 ಡಿವೋರ್ಸ್ ಪ್ರಕರಣದಲ್ಲಿ ಈ ಮಹಿಳೆ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಇದೀಗ 7ನೇ ಪತಿ ವಿರುದ್ಧವೂ ಪ್ರಕರಣ ದಾಖಲಿಸಿದ್ದಾಳೆ. ಈ ಮಹಿಳೆ ವರ್ಷಕ್ಕೆ ಒಂದರಂತೆ ಗಂಡಂದಿರನ್ನು ಬದಲಾಯಿಸಿದ್ದಾಳೆ. ಮದುವೆಯಾದ ಬಳಿಕ 6 ತಿಂಗಳು ಸಂಸಾರ ನಡೆಸಿ ಬಳಿಕ 6 ತಿಂಗಳಲ್ಲಿ ಪತಿ ವಿರುದ್ಧ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಸಕ್ಷನ್ 498ಎ ಅಡಿ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ. 6 ಪ್ರಕರಣಗಳಲ್ಲಿಯೂ ಗಂಡಂದಿರಿಂದ ದುಬಾರಿ ಮೊತ್ತವನ್ನು ಪಡೆದಿದ್ದಾಳೆ. ಇದೀಗ ಈ ಮಹಿಳೆಯ ವಂಚನೆಯನ್ನು ಬಯಲಿಗೆಳೆಯಲು ಏಳನೇ ಪತಿ ಮುಂದಾಗಿದ್ದಾನೆ. ಹೀಗಾಗಿ ಪತ್ನಿಯ ವಿರುದ್ಧವೇ ಈತ ಪ್ರಕರಣ ದಾಖಲಿಸಿದ್ದಾನೆ. ಈ ಅರ್ಜಿಯ ಕೈಗೆತ್ತಿಕೊಂಡ ನ್ಯಾಯಾಧೀಶರು ಮಹಿಳೆಯ ಕಥೆ ಕೇಳಿ ಬೆಚ್ಚಿ ಬಿದ್ದಿದ್ದಾರೆ.

ಪತಿ ಪರ ವಕೀಲರು ವಾದ ಮಂಡಿಸಿ, “ವಿವಾಹಿತ ಮಹಿಳೆಯರ ಮೇಲಿನ ಕ್ರೌರ್ಯಕ್ಕೆ ಸಂಬಂಧಿಸಿದ ಸೆಕ್ಷನ್ 498ಎ ಅಡಿಯಲ್ಲಿ ಎಲ್ಲ ಗಂಡಂದಿರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ ಆಕೆ ಜೀವನಾಂಶವನ್ನು ಆಗ್ರಹಿಸಿದ್ದಾಳೆʼʼ ಎಂದು ತಿಳಿಸಿದರು. ಇದಕ್ಕೆ ನ್ಯಾಯಾಧೀಶರು ʼʼಅವಳು ಪ್ರತಿ ಗಂಡನೊಂದಿಗೆ ಎಷ್ಟು ಸಮಯದಿಂದ ಇರುತ್ತಾಳೆ?ʼʼ ಎಂದು ಕೇಳಿದರು. ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮೊದಲು ಅವಳು ಪ್ರತಿ ಪತಿಯೊಂದಿಗೆ ಒಂದು ವರ್ಷದಿಂದ ಆರು ತಿಂಗಳವರೆಗೆ ವಾಸಿಸುತ್ತಿದ್ದಳು ಎಂದು ವಕೀಲರು ತಿಳಿಸಿದರು.

ಬಳಿಕ ನ್ಯಾಯಾಧೀಶರು ಮಹಿಳೆ ಕಾನೂನನ್ನು ತಿರುಚುತ್ತಿದ್ದಾರೆ ಎಂದು ಟೀಕಿಸಿದರು. ಆಕೆಯ ಪತಿಯ ವಕೀಲರು ಮದುವೆಯ ಎಲ್ಲ ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಮುಂದಿನ ವಿಚಾರಣೆಯಂದು ವಿವರವಾದ ಮಾಹಿತಿಯೊಂದಿಗೆ ಹಾಜರಾಗುವಂತೆ ಆಕೆಯ ಎಲ್ಲ ಪತಿಯಂದಿರಿಗೆ ಜಡ್ಜ್‌ ಸೂಚಿಸಿದರು. ಇದು ಕಾನೂನಿನ ದುರ್ಬಳಕೆ. ಇಲ್ಲಿ ಕಾನೂನು ಜತೆ ಆಟವಾಡುತ್ತಿದ್ದೀರಿ ಎಂದು ಮಹಿಳೆಗೆ ಎಚ್ಚರಿಕೆ ನೀಡಿದರು. ಒಟ್ಟಿನಲ್ಲಿ ಈ ಪ್ರಕರಣ ಹಲವರ ಗಮನ ಸೆಳೆದಿದೆ.

ಇದನ್ನೂ ಓದಿ: ದೇಶಗಳ ಗಡಿ ಮೀರಿದ ಮತ್ತೊಂದು ಲವ್‌ಸ್ಟೋರಿ; ಪ್ರಿಯತಮನೊಂದಿಗೆ ಬಾಳಲು ರಾಜಸ್ಥಾನಕ್ಕೆ ಬಂದ ಪಾಕ್‌ ಮಹಿಳೆ

Continue Reading

ವೈರಲ್ ನ್ಯೂಸ್

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಅವಾಂತರ; ದುರಂತದಿಂದ ಪಾರಾದವರ Video ಇಲ್ಲಿದೆ

Rajendra Nagar Tragedy: ಶನಿವಾರ (ಜುಲೈ 27) ದೆಹಲಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗಿ ಮೂವರು ಮೃತಪಟ್ಟಿದ್ದಾರೆ. ಇದೀಗ ಈ ದುರಂತದಿಂದ ಪಾರಾದವರ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

VISTARANEWS.COM


on

Rajendra Nagar Tragedy
Koo

ನವದೆಹಲಿ: ಶನಿವಾರ (ಜುಲೈ 27) ದೆಹಲಿಯಲ್ಲಿ (Delhi Floods) ಸುರಿದ ಧಾರಾಕಾರ ಮಳೆಯಿಂದ ಐಎಎಸ್‌ ಕೋಚಿಂಗ್‌ ಸೆಂಟರ್‌ಗೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ (Rajendra Nagar Tragedy). ರಾಜೇಂದ್ರ ನಗರದಲ್ಲಿರುವ ರಾವ್‌ ಐಎಎಸ್‌ ಕೋಚಿಂಗ್‌ ಸೆಂಟರ್‌ (Rau’s IAS Coaching Institute)ನಲ್ಲಿ ಈ ದುರಂತ ಸಂಭವಿಸಿದೆ. ಸಂಜೆ ಏಕಾಏಕಿ ನೀರು ನುಗ್ಗಿದ ಕಾರಣ ನೆಲಮಹಡಿಯಲ್ಲಿದ್ದ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತರನ್ನು ಐಎಎಎಸ್‌ ಆಕಾಂಕ್ಷಿಗಳಾದ ತೆಲಂಗಾಣ, ಉತ್ತರ ಪ್ರದೇಶ ಮತ್ತು ಕೇರಳ ಮೂಲದ ತಾನಿಯಾ ಸೋನಿ (25), ಶ್ರೇಯಾ ಯಾದವ್ (25) ಮತ್ತು ನವೀನ್ ಡೆಲ್ವಿನ್ (28) ಎಂದು ಗುರುತಿಸಲಾಗಿದೆ. ಇದೀಗ ದುರಂತದಿಂದ ಕೂದಲೆಳೆ ಅಂತರದಿಂದ ಪಾರಾದವರ ವಿಡಿಯೊ ವೈರಲ್‌ (Viral Video) ಆಗಿದೆ.

ಘಟನೆಯನ್ನು ಖಂಡಿಸಿ ಈಗಾಗಲೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದುರಂತಕ್ಕೆ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂಬ ಕೂಗು ಎಲ್ಲೆಡೆ ಕೇಳಿ ಬಂದಿದೆ. ಈ ಮಧ್ಯೆ ದುರಂತದಿಂದ ಪಾರಾದ ವಿದ್ಯಾರ್ಥಿಗಳಲ್ಲಿ ಒಬ್ಬರಾದ ಹೃದೇಶ್ ಚೌಹಾಣ್ ಘಟನೆ ಯಾವಾಗ ನಡೆಯಿತು ಎಂಬುದರ ಆಘಾತಕಾರಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ನೆಲಮಹಡಿಗೆ ನೆರೆ ನುಗ್ಗಿದ ನಂತರ ಅಲ್ಲಿನ ಪರಿಸ್ಥಿತಿ ಹೇಗಿತ್ತು ಎನ್ನುವುದನ್ನು ಈ ವೈರಲ್ ವಿಡಿಯೊ ತೋರಿಸುತ್ತದೆ. ಹಲವು ವಿದ್ಯಾರ್ಥಿಗಳು ದುರಂತದಿಂದ ಪಾರಾಗುವುದನ್ನು ಕಾಣಬಹುದು. ಜತೆಗೆ ನೆರೆಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬರಿಗೆ ವಿದ್ಯಾರ್ಥಿಗಳ ಗುಂಪು ಸಹಾಯಹಸ್ತ ಚಾಚಿ ನೆರವಾಗುತ್ತಿರುವುದೂ ಕಂಡು ಬಂದಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊ ಹಂಚಿಕೊಂಡಿರುವ ಹೃದೇಶ್‌ ಚೌಹಾಣ್‌, ನೆಲಮಹಡಿಯು ಹತ್ತು ನಿಮಿಷಗಳಲ್ಲಿ ಪ್ರವಾಹದಿಂದ ತುಂಬಿಕೊಂಡಿತ್ತು ಎಂದು ಬರೆದುಕೊಂಡಿದ್ದಾರೆ. ಸಂಜೆ 6.40ಕ್ಕೆ ಈ ಘಟನೆ ನಡೆದಿದ್ದು, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (National Disaster Management Authority)ಕ್ಕೆ ತಕ್ಷಣ ಮಾಹಿತಿ ನೀಡಲಾಯಿತು. ಆದರೆ ಅವರು ರಾತ್ರಿ 9ರ ನಂತರವೇ ತಲುಪಿದರು. ಇದು ಮೂವರು ಐಎಎಎಸ್‌ ಆಕಾಂಕ್ಷಿಗಳ ಸಾವಿಗೆ ಕಾರಣವಾಯಿತು ಎಂದಿದ್ದಾರೆ.

ನೆಟ್ಟಿಗರಿಂದ ಆಕ್ರೋಶ

ಸದ್ಯ ಈ ವಿಡಿಯೊವನ್ನು 10 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಹಲವು ಮಂದಿ ಆಡಳಿತ ಯಂತ್ರದ ವೈಫಲ್ಯವನ್ನು ಖಂಡಿಸಿದ್ದಾರೆ. ʼʼಇದು ನಿಜವಾಗಿಯೂ ಭಯಾನಕʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಈ ದುರಂತಕ್ಕೆ, ಮೂವರ ಸಾವಿಗೆ ನಾವು ನ್ಯಾಯಾಂಗ ವ್ಯವಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬಹುದೇ?ʼʼ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.

“ದೆಹಲಿ ಪೊಲೀಸ್‌ ನೀವು ಸಮಯಕ್ಕೆ ಸರಿಯಾಗಿ ಏಕೆ ತಲುಪಲಿಲ್ಲ? ಮತ್ತು ಈಗ ನೀವು ಕೋಚಿಂಗ್ ಸೆಂಟರ್ ಮೇಲೆ ಎಫ್ಐಆರ್ ದಾಖಲಿಸುತ್ತೀರಿ. ಎಂತಹ ವಿಪರ್ಯಾಸ” ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. “ಈ ದುರಂತದ ಹಿಂದಿರುವ ಕಾರಣಕರ್ತರ ವಿರುದ್ಧ, ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಿರಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡದೇ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ಪ್ರವೃತ್ತರಾಗಬೇಕು” ಎಂದು ಮಗದೊಬ್ಬರು ಸೂಚಿಸಿದ್ದಾರೆ.

ಇದನ್ನೂ ಓದಿ: Delhi Floods: ದೆಹಲಿಯಲ್ಲಿ ಕೋಚಿಂಗ್‌ ಸೆಂಟರ್‌ಗೆ ನುಗ್ಗಿದ ನೀರು; ಮೃತರ ಸಂಖ್ಯೆ 3ಕ್ಕೆ ಏರಿಕೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

Continue Reading

ಪ್ರಮುಖ ಸುದ್ದಿ

Viral Video : 25 ವರ್ಷದ ಕನ್ಯೆಯನ್ನು ಮದುವೆಯಾದ 70 ವರ್ಷದ ಮುದುಕ ಕಲೀಮುಲ್ಲಾ!

Viral Video : ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

VISTARANEWS.COM


on

Viral Video
Koo

ಗಯಾ: ಮುದುಕನ ಮದುವೆ ಹೊಸತಲ್ಲ. ಆದರೆ, ಪ್ರತಿ ಬಾರಿಯೂ ಮುದುಕರು ಮದುವೆಯಾಗಿರುವುದು ಸುದ್ದಿಯಾಗುವುದು ಅವರು ವರಿಸಿದ ಕನ್ಯೆಯ ವಯಸ್ಸಿನ ಆಧಾರದ ಮೇಲೆ ಅಂತೆಯೇ ಬಿಹಾರದಲ್ಲೂ ಒಂದು ಘಟನೆ ನಡೆದಿದೆ. ಕಲೀಮುಲ್ಲಾ ಎಂಬ ಹೆಸರಿನ 70 ವರ್ಷದ ವ್ಯಕ್ತಿ 25 ವರ್ಷದ ಯುವತಿಯನ್ನು ಮದುವೆಯಾಗಿ ಸುದ್ದಿಯಾಗಿದ್ದಾನೆ. ಬಿಹಾರದ ಗಯಾದಲ್ಲಿ ಈ ಘಟನೆ ನಡೆದಿದ್ದು,ಕುಟುಂಬ ಮತ್ತು ಗ್ರಾಮಸ್ಥರೆಲ್ಲರೂ ಆತನ ಮದುಗೆ ಬಂದು ತಿಂದುಂಡು ಹೋಗಿದ್ದಾರೆ. ಅಚ್ಚರಿಯೆಂದರೆ ಮದುವೆಯನ್ನು ಸಂಪೂರ್ಣ ಧಾರ್ಮಿಕ ಸಂಪ್ರದಾಯಗಳ ಪ್ರಕಾರವೇ ನಡೆಸಲಾಗಿದೆ.

ಮದುವೆಯಾದ ಜೋಡಿಯ ಹೆಸರು ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್. ರೇಷ್ಮಾ ಪರ್ವೀನ್ ಅಮಾಸ್ ಬ್ಲಾಕ್ನ ಹಮ್ಜಾಪುರ ವಾರ್ಡ್ ಸಂಖ್ಯೆ 11 ರ ಇಸ್ಲಾಂನಗರದ ನಿವಾಸಿ. 70 ವರ್ಷದ ಕಲೀಮುಲ್ಲಾ ನೂರಾನಿ ಬೈಡಾ ಗ್ರಾಮದ ನಿವಾಸಿ. ಇಬ್ಬರೂ ತಮ್ಮ ಸ್ವಂತ ಇಚ್ಛೆಯಿಂದ ಮದುವೆಯಾಗಿದ್ದಾರೆ. ಆದಾಗ್ಯೂ, ಕಲೀಮುಲ್ಲಾ ತನಗಿನ್ನೂ ವಯಸ್ಸ 50 ಎಂದು ಹೇಳುತ್ತಿದ್ದಾನೆ ಎಂದು ಸ್ಥಳೀಯರು ಹೇಳಿದ್ದಾರೆ.

ಮದುಗೆ ಆದ ವಿಚಾರದ ಬಗ್ಗೆ ಕಲೀಮುಲ್ಲಾನನ್ನು ಮಾತನಾಡಿಸಿದಾಗ, ನನ್ನದೇನೂ ತಪ್ಪಿಲ್ಲ. ಎಲ್ಲವೂ ಸರಿಯಾಗಿದೆ ಎಂದು ಹೇಳಿದ್ದಾನೆ. ಮದುವೆಗೆ ವಯಸ್ಸು ಲೆಕ್ಕವೇ ಅಲ್ಲ. ಹುಡುಗಿ ಕೂಡ ಈ ಮದುವೆಗೆ ಸಂತೋಷದಿಂದ ಒಪ್ಪಿಕೊಂಡಿದ್ದಾಳೆ. ಇದನ್ನು ಅವರು ಮಾಧ್ಯಮಗಳ ಮುಂದೆಯೂ ಹೇಳಿದ್ದಾಳೆ ಎಂದು ಸಮರ್ಥಿಸಿಕೊಂಡಿದ್ದಾನೆ. ಕಲೀಮುಲ್ಲಾ ವೃದ್ಧಾಪ್ಯದಲ್ಲಿ ಏಕೆ ವಿವಾಹವಾಗಿದ್ದೇನೆ ಎಂಬುದಕ್ಕೆ ಕಾರಣ ಕೊಟ್ಟಿದ್ದಾರೆ. ಮದುವೆಗೆ ಯಾವುದೇ ವಯಸ್ಸು ಇಲ್ಲ. ನನ್ನನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರಲಿಲ್ಲ. ಆದ್ದರಿಂದ ನಾನು ಮದುವೆಯ ಬಗ್ಗೆ ಯೋಚಿಸಿದೆ. ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: School Teacher : ಶಾಲಾ ಕೊಠಡಿಯಲ್ಲೇ ಚಾಪೆ ಹಾಸಿ, ಮಕ್ಕಳಿಗೆ ಗಾಳಿ ಹಾಕಲು ಹೇಳಿ ಗಡದ್ದಾಗಿ ನಿದ್ದೆ ಹೊಡೆದ ಟೀಚರ್​!

ಕಲೀಮುಲ್ಲಾ ಖಾನ್ ಪತ್ನಿ ನಿಧನ

ಮೊಹಮ್ಮದ್ ಕಲೀಮುಲ್ಲಾ ನೂರಾನಿ ಮತ್ತು ರೇಷ್ಮಾ ಪರ್ವೀನ್ ಯಾವುದೇ ಒತ್ತಡವಿಲ್ಲದೆ ಮದುವೆಯಾಗಿದ್ದಾರೆ. ಆದಾಗ್ಯೂ ಮದುವೆ ಚರ್ಚೆಯು ಇಡೀ ಪ್ರದೇಶದಲ್ಲಿ ಹರಡಿದಿದೆ. 70 ವರ್ಷದ ವ್ಯಕ್ತಿ 25 ವರ್ಷದ ಮಹಿಳೆಯನ್ನು ಏಕೆ ಮದುವೆಯಾಗಿದ್ದಾನೆ ಎಂದು ಚರ್ಚಿಸುತ್ತಿದ್ದಾನೆ. ಅಂದ ಹಾಗೆ ಕಲೀಮುಲ್ಲಾನ ಪತ್ನಿ ನಿಧನ ಹೊಂದಿದ್ದಾರೆ. ಅಲ್ಲಿಂದ ಆತನಿಗೆ ಏಕಾಂಗಿತನ ಕಾಡಿತ್ತು. ಅದಕ್ಕೆ ಎಲ್ಲ ಕೆಲಸ ಮಾಡಬಲ್ಲವಳನ್ನೇ ಮದುವೆಯಾಗಿದ್ದಾರೆ.

Continue Reading
Advertisement
Donald Trump
ವಿದೇಶ1 min ago

Donald Trump: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೂಗಲ್‌ ಹಸ್ತಕ್ಷೇಪ: ರಿಪಬ್ಲಿಕನ್‌ ಪಾರ್ಟಿಯ ಆರೋಪಕ್ಕೆ ಕಾರಣವೇನು?

shiradi landslide railway track
ಪ್ರಮುಖ ಸುದ್ದಿ30 mins ago

Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

US Mass Shooting
ವಿದೇಶ48 mins ago

US Mass Shooting: ಅಮೆರಿಕದ ಪಾರ್ಕ್‌ನಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ; ಒಬ್ಬ ವ್ಯಕ್ತಿ ಬಲಿ, 6 ಜನಕ್ಕೆ ಗಾಯ

Janhvi Kapoor interview Kamiya Jani trolled for calling idli-chicken curry weird combination
ಬಾಲಿವುಡ್53 mins ago

Janhvi Kapoor: ಇಡ್ಲಿ- ಚಿಕನ್ ಕರಿ ಕಾಂಬಿನೇಶನ್‌ಗೆ ಮುಖ ಕಿವುಚಿಕೊಂಡ ಖ್ಯಾತ ಯುಟ್ಯೂಬರ್‌; ತಿನ್ನಲು ಕೈ ಬಳಸಿ ಎಂದ ಜಾಹ್ನವಿ ಕಪೂರ್!

mukesh bollywood ರಾಜಮಾರ್ಗ ಅಂಕಣ
ಅಂಕಣ1 hour ago

ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

ವೈರಲ್ ನ್ಯೂಸ್1 hour ago

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

Tourist Place
Latest1 hour ago

Tourist Place in Tamilnadu : ತಮಿಳುನಾಡಿಗೆ ಹೋದರೆ ಈ ಅದ್ಭುತ ತಾಣಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಡಿ!

Kalika Temple
ದೇಶ2 hours ago

Kalika Temple: ಭಕ್ತರು ಈ ದೇವಾಲಯಕ್ಕೆ ತುಂಡುಡುಗೆ ಧರಿಸಿ ಬಂದರೆ ಪ್ರವೇಶ ಇಲ್ಲ; ಆಡಳಿತ ಮಂಡಳಿ ಆದೇಶ

Kannada New Movie powder Movie release date announce
ಸ್ಯಾಂಡಲ್ ವುಡ್2 hours ago

Kannada New Movie: ‘ಪೌಡರ್’ ರಿಲೀಸ್ ಡೇಟ್ ಪೋಸ್ಟ್ ಪೋನ್: ತೆರೆಗೆ ಯಾವಾಗ?

14 hours work protest
ಪ್ರಮುಖ ಸುದ್ದಿ2 hours ago

14 Hours Work: 14 ಗಂಟೆಗಳ ಕೆಲಸ; ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್‌ 3ರಂದು ಐಟಿ ಉದ್ಯೋಗಿಗಳ ಪ್ರತಿಭಟನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ16 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ18 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ20 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ21 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌