Shikhar Dhawan: ಆಯ್ಕೆ ಸಮಿತಿ ಬಗ್ಗೆ ಮೌನ ಮುರಿದ ಶಿಖರ್​ ಧವನ್ - Vistara News

ಕ್ರಿಕೆಟ್

Shikhar Dhawan: ಆಯ್ಕೆ ಸಮಿತಿ ಬಗ್ಗೆ ಮೌನ ಮುರಿದ ಶಿಖರ್​ ಧವನ್

ಏಷ್ಯನ್​ ಗೇಮ್ಸ್​ಗೂ ನನ್ನನ್ನು ಪರಿಗಣಿಸದೇ ಇರುವುದನ್ನು ಕೇಳಿ ಆಘಾತವಾಯಿತು” ಎಂದು ಶಿಖರ್​ ಧವನ್​ ಅಳಲು ತೋಡಿಕೊಂಡರು.

VISTARANEWS.COM


on

Shikhar Dhawan Indian cricketer
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಒಂದು ಕಾಲದಲ್ಲಿ ಭಾರತದ ಇನಿಂಗ್ಸ್​ ಆರಂಭಿಸುತ್ತಿದ್ದ ಹಿರಿಯ ಏಡಗೈ ಬ್ಯಾಟರ್​ ಶಿಖರ್​ ಧವನ್​ ಅವರು ತಂಡಕ್ಕೆ ಆಯ್ಕೆ ಮಾಡದೇ ಇರುವ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪಕ್ಷ ಏಷ್ಯನ್​ ಗೇಮ್ಸ್​ಗೂ(Asian Games) ಅವಕಾಶ ನೀಡಿಲ್ಲವಲ್ಲ ಎಂದು ಹೇಳಿದ್ದಾರೆ.

“ಬ್ಯಾಟಿಂಗ್​ ಫಾರ್ಮ್​ನಲ್ಲಿ ಇರದೇ ಇದ್ದರೆ ಆಗ ಆಯ್ಕೆ ಮಾಡದಿರುವುದರಲ್ಲಿ ಒಂದು ನ್ಯಾಯವಿದೆ. ಆದರೆ ಕಳೆದ 2 ವರ್ಷಗಳಿಂದ ನಾನು ಭಾರತ ಕ್ರಿಕೆಟ್​ ತಂಡದ ಪರ ಆಡುವ ಅವಕಾಶವಂಚಿತನಾಗಿದ್ದೇನೆ. ಐಪಿಎಲ್​ನಲ್ಲಿ(IPL) ಉತ್ತಮ ಪ್ರದರ್ಶನ ತೋರಿದ್ದೇನೆ. ಜತೆಗೆ ಫಾರ್ಮ್​ನಲ್ಲಿರುವಾಗಲೇ ನನ್ನು ತಂಡದಿಂದ ಕೈ ಬಿಡಲಾಗಿತ್ತು. ಇದು ಯಾವ ಕಾರಣಕ್ಕೆ ಎಂದು ಇದುವರೆಗೂ ನನಗೆ ತಿಳಿದಿಲ್ಲ. ಕಳಪೆ ಪ್ರದರ್ಶನ ತೋರುತ್ತಿರುವ ಅದೆಷ್ಟೋ ಆಟಗಾರರು ಭಾರತ ಸೀನಿಯರ್​ ತಂಡದಲ್ಲಿ ಸತತವಾಗಿ ಅವಕಾಶ ಪಡೆಯುತ್ತಿದ್ದಾರೆ. ಏಷ್ಯನ್​ ಗೇಮ್ಸ್​ಗೂ ನನ್ನನ್ನು ಪರಿಗಣಿಸದೇ ಇರುವುದನ್ನು ಕೇಳಿ ಆಘಾತವಾಯಿತು” ಎಂದು ಶಿಖರ್​ ಧವನ್​ ಅಳಲು ತೋಡಿಕೊಂಡರು.

ಯುವ ಆಟಗಾರರ ಮೇಲೆ ನಂಬಿಕೆ

ತಂಡದಲ್ಲಿ ಅನೇಕ ಯುವ ಆಟಗಾರರು ಬೆಳಕಿಗೆ ಬಂದಿದ್ದಾರೆ ಶುಭಮನ್​ ಗಿಲ್​,ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​ ಸೇರಿ ಇನ್ನು ಹಲವು ಆಟಗಾರರು ಇದ್ದಾರೆ. ಈ ಎಲ್ಲ ಯುವ ಪಡೆ ಭಾರತ ತಂಡದಲ್ಲಿ ಉನ್ನತ ಮಟ್ಟದ ಸಾಧನೆ ತೋರುವಂತಾಗಬೇಕು. ಯುವ ಆಟಗಾರರಿಗೆ ನನ್ನ ಪ್ರೋತ್ಸಾಹ ಸದಾ ಇರಲಿದೆ. ಏಷ್ಯನ್​ ಗೇಮ್ಸ್​ನಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಗಾಯಕ್ವಾಡ್​ಗೆ ಶುಭಹಾರೈಕೆ, ಆತ ತಂಡವನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಬಲ್ಲ ಎಂದು ಧವನ್​ ಪಿಟಿಐಗೆ ತಿಳಿಸಿದ್ದಾರೆ.

ಕ್ರಿಕೆಟ್​ ಭವಿಷ್ಯದ ಬಗ್ಗೆ ಚಿಂತಿಸಿಲ್ಲ

“ನಾನು ಯಾವುದೇ ಆಯ್ಕೆದಾರರೊಂದಿಗೆ ನನ್ನ ಕ್ರಿಕೆಟ್​ ಭವಿಷ್ಯದ ಬಗ್ಗೆ ಮಾತನಾಡಿಲ್ಲ. ನಾನು ಎನ್‌ಸಿಎಗೆ ಹೋಗುತ್ತಿದ್ದೇನೆ. ಅಲ್ಲಿ ನನ್ನ ಸಮಯವನ್ನು ನಾನು ಆನಂದಿಸುತ್ತೇನೆ, ಸೌಲಭ್ಯಗಳು ಉತ್ತಮವಾಗಿವೆ. ಎನ್‌ಸಿಎ ನನ್ನ ವೃತ್ತಿಜೀವನವನ್ನು ರೂಪಿಸಿದೆ ಮತ್ತು ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳುವ ಮೂಲಕ ಧವನ್​ ತಮ್ಮ ನಿವೃತ್ತಿ ಸದ್ಯದಲ್ಲಿ ಇಲ್ಲ ಎನ್ನುವ ಸುಳಿವು ನೀಡಿದ್ದಾರೆ.

ಇದನ್ನೂ ಓದಿ IPL 2023: ಚಿರತೆಯಂತೆ ಜಿಗಿದು ಕ್ಯಾಚ್​ ಪಡೆದ ಶಿಖರ್​ ಧವನ್​; ವಿಡಿಯೊ ವೈರಲ್​

ಮುಂದಿನ ತಿಂಗಳು ಟೂರ್ನಿ ಆರಂಭ

ಏಷ್ಯನ್‌ ಕ್ರೀಡಾಕೂಟ ಸೆಪ್ಟಂಬರ್‌ ಮತ್ತು ಅಕ್ಟೋಬರ್​ನಲ್ಲಿ ಚೀನಾದ ಹ್ಯಾಂಗ್‌ಝೌನಲ್ಲಿ(Hangzhou ) ನಡೆಯಲಿದೆ. ಇದೇ ಮೊದಲ ಬಾರಿ ಭಾರತ ಪುರುಷರ ಕ್ರಿಕೆಟ್‌ ತಂಡ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದೆ. ಏಷ್ಯಾ ಕಪ್‌ ಹಾಗೂ ಐಸಿಸಿ ಏಕದಿನ ವಿಶ್ವಕಪ್‌(ICC World Cup) ಟೂರ್ನಿಯ ಹಿನ್ನೆಲೆಯಲ್ಲಿ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಆಟಗಾರರು ಇಲ್ಲಿ ಕಣಕ್ಕಿಳಿಯಲಿದ್ದಾರೆ. ಐಪಿಎಲ್ ಸ್ಟಾರ್​ಗಳು ಇಲ್ಲಿ ಸ್ಥಾನ ಪಡೆದಿದ್ದಾರೆ ಋತುರಾಜ್‌ ಗಾಯಕ್ವಾಡ್‌(Ruturaj Gaikwad) ತಂಡದ ನಾಯಕನಾಗಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

IND vs SL T20 : ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಜಯ, ಸರಣಿ ಕೈವಶ

IND vs SL T20 : ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಂತೆಯೇ ಭಾರತ ರನ್ ಮಾಡಲು ಆರಂಭಿಸಿ 6 ರನ್ ಬಾರಿಸಿದ್ದಾಗ ಮಳೆ ಶುರುವಾಯಿತು. ತುಂಬಾ ಹೊತ್ತು ನಷ್ಟವಾದ ಕಾರಣ ಭಾರತಕ್ಕೆ 8 ಓವರ್​ಗಳಲ್ಲಿ 76 ರನ್ ಸವಾಲು ನೀಡಲಾಯಿತು. ಭಾರತ ಇನ್ನೂ 3 ಎಸೆತ ಬಾಕಿ ಇರುವಾಗ 3 ವಿಕೆಟ್​ ನಷ್ಟಕ್ಕೆ 81 ರನ್ ಬಾರಿಸಿ ಗೆಲುವು ಕಂಡಿತು.

VISTARANEWS.COM


on

IND vs SL T20
Koo

ಪಲ್ಲೆಕೆಲೆ: : ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ (IND vs SL T20) ಭಾರತ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆಯೊಂದಿಗೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದೆ. ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಸೂರ್ಯಕುಮಾರ್ ಯಾದವ್ ಇದರೊಂದಿಗೆ ಭರ್ಜರಿ ಆರಂಭ ಮಾಡಿದರೆ ಕೋಚ್ ಗೌತಮ್ ಗಂಭೀರ್​ ಕೂಡ ಮೊದಲ ಯಶಸ್ಸು ಸಾಧಿಸಿದ್ದಾರೆ. ಮಳೆಯಿಂದ ಬಾಧಿತವಾತ ಪಂದ್ಯದಲ್ಲಿ ಭಾರತ ಸಂಪೂರ್ಣವಾಗಿ ಮೇಲುಗೈ ಸಾಧಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು. ಅಂತೆಯೇ ಭಾರತ ರನ್ ಮಾಡಲು ಆರಂಭಿಸಿ 6 ರನ್ ಬಾರಿಸಿದ್ದಾಗ ಮಳೆ ಶುರುವಾಯಿತು. ತುಂಬಾ ಹೊತ್ತು ನಷ್ಟವಾದ ಕಾರಣ ಭಾರತಕ್ಕೆ 8 ಓವರ್​ಗಳಲ್ಲಿ 76 ರನ್ ಸವಾಲು ನೀಡಲಾಯಿತು. ಭಾರತ ಇನ್ನೂ 3 ಎಸೆತ ಬಾಕಿ ಇರುವಾಗ 3 ವಿಕೆಟ್​ ನಷ್ಟಕ್ಕೆ 81 ರನ್ ಬಾರಿಸಿ ಗೆಲುವು ಕಂಡಿತು.

ಮೊದಲು ಬ್ಯಾಟ್ ಮಾಡಿದ ಲಂಕಾ ಪವರ್​ ಪ್ಲೇನಲ್ಲಿ 54 ರನ್ ಗಳಿಸಿತು. ಪಥುಮ್ ನಿಸ್ಸಾಂಕಾ ಉತ್ತಮವಾಗಿ ಆಡಿದರು. ಕುಸಾಲ್ ಮೆಂಡಿಸ್ ಅವರ ವಿಕೆಟ್ ಕಳೆದುಕೊಂಡರು. ನಿಸ್ಸಾಂಕಾ 24 ಎಸೆತಗಳಲ್ಲಿ 32 ರನ್ ಗಳಿಸಿ ರವಿ ಬಿಷ್ಣೋಯ್ ಬೌಲಿಂಗ್​ಗೆ ಔಟಾದರು. ಬಳಿಕ ಕುಸಾಲ್ ಪೆರೆರಾ ಅತ್ಯುತ್ತಮ ಪ್ರದರ್ಶನ ನೀಡಿದರು. ಮಧ್ಯಮ ಓವರ್ಗಳಲ್ಲಿ ಇನ್ನಿಂಗ್ಸ್​ಗೆ ವೇಗ ನೀಡಿದ ಅವರು 34 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್ ನೊಂದಿಗೆ 53 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 16ನೇ ಓವರ್ನಲ್ಲಿ ಪೆರೆರಾ ಮತ್ತು ಕಮಿಂಡು ಮೆಂಡಿಸ್ ಅವರನ್ನು ಒಂದೇ ಓವರ್​ನಲ್ಲಿ ಔಟ್ ಮಾಡಿದರು.

ಪೆರೆರಾ ಔಟಾದ ನಂತರ ಶ್ರೀಲಂಕಾ ಕೊನೆಯ ನಾಲ್ಕು ಓವರ್ ಗಳಲ್ಲಿ ಕೇವಲ 22 ರನ್ ಗಳಿಸಿತು. ದಸುನ್ ಶನಕಾ ಮತ್ತು ವನಿಂದು ಹಸರಂಗ ಗೋಲ್ಡನ್ ಡಕ್​ ಔಟಾದರ. ಭಾರತದ ಪರ ಬಿಷ್ಣೋಯ್ ತಮ್ಮ 4 ಓವರ್​ಗಳ ಸ್ಪೆಲ್​ನಲ್ಲಿ 3 ವಿಕೆಟ್ ಪಡೆದರು. ಅರ್ಷ್ದೀಪ್ ಸಿಂಗ್ 2 ವಿಕೆಟ್ ಉರುಳಿಸಿದರು.

ಸೂರ್ಯಕುಮಾರ್, ಜೈಸ್ವಾಲ್ ಗೆಲುವು ತಂದುಕೊಟ್ಟರು

ಭಾರತದ ರನ್ ಚೇಸ್ ನ ಮೊದಲ ಓವರ್ ನಲ್ಲಿ ಮಳೆ ಬಂತು. ಆದರೆ ಅಂತಿಮವಾಗಿ ಭಾರತಕ್ಕೆ 8 ಓವರ್ಗಳಲ್ಲಿ 78 ರನ್​ಗಳ ಪರಿಷ್ಕೃತ ಗುರಿ ನೀಡಲಾಯಿತು. ಗಿಲ್​ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಆಡಲು ಬಂದ ಸಂಜು ಸ್ಯಾಮ್ಸನ್ ಶೂನ್ಯಕ್ಕೆ ಔಟಾದರು. ಹೀಗಾಗಿ ಭಾರತ ಅವರು ಆರಂಭಿಕ ತೊಂದರೆಯಲ್ಲಿ ಸಿಲುಕಿತು.

ಇದನ್ನೂ ಓದಿ: Paris Olympics 2024 : ಪುರಷರ 10 ಮೀಟರ್​ ಏರ್​ರೈಫಲ್​​ ಸ್ಪರ್ಧೆಯಲ್ಲಿ ಫೈನಲ್​ಗೇರಿದ ಅರ್ಜುನ್ ಬಬುಟಾ

, ಯಶಸ್ವಿ ಜೈಸ್ವಾಲ್ ಮತ್ತು ಸೂರ್ಯಕುಮಾರ್ ಅಬ್ಬರಿಸಿದರು. ಭಾರತವು ರನ್​ಗಳಿಕೆಯಲ್ಲಿ ಹಿಂದೆ ಬೀಳದಂತೆ ನೋಡಿಕೊಂಡರು. 12 ಎಸೆತಗಳಲ್ಲಿ 26 ರನ್ ಗಳಿಸಿದ ಸೂರ್ಯಕುಮಾರ್ ಮಥೀಶಾ ಪತಿರಾನಾ ಎಸೆತಕ್ಕೆ ಔಟಾದರು. ಜೈಸ್ವಾಲ್ 15 ಎಸೆತಗಳಲ್ಲಿ 30 ರನ್ ಗಳಿಸಿದರು.

ಡೆತ್ ಓವರ್​ಗಳಲ್ಲಿ ಭಾರತಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಹಾರ್ದಿಕ್ ಪಾಂಡ್ಯ ಎಲ್ಲಾ ಪ್ರಯತ್ನ ಮಾಡಿದರು. ಅವರು ಒಂಬತ್ತು ಎಸೆತಗಳಲ್ಲಿ 22 ರನ್ ಗಳಿಸಿ ಔಟಾಗದೆ ಉಳಿದರು.

Continue Reading

ಪ್ರಮುಖ ಸುದ್ದಿ

Womens Asia Cup : ಭಾರತದ ಮಹಿಳೆಯರನ್ನು ಸೋಲಿಸಿ ಚೊಚ್ಚಲ ಏಷ್ಯಾ ಕಪ್​ ಗೆದ್ದ ಶ್ರೀಲಂಕಾ ತಂಡ

Womens Asia Cup : ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

VISTARANEWS.COM


on

Women's Asia Cup
Koo

ಪಲ್ಲೆಕೆಲೆ: ಫೈನಲ್ ಪಂದ್ಯದಲ್ಲಿ ವೈಫಲ್ಯ ಕಂಡ ಭಾರತ ಮಹಿಳೆಯರ ತಂಡ ಆತಿಥೇಯ ಶ್ರೀಲಂಕಾ ವಿರುದ್ಧ 8 ವಿಕೆಟ್​ಗಳ ಸೋಲು ಕಂಡಿದ್ದು, ಮಹಿಳೆಯರ ಏಷ್ಯಾ ಕಪ್​ (Womens Asia Cup) ಟ್ರೋಫಿ ಉಳಿಸಲು ವಿಫಲಗೊಂಡಿದೆ. ಕಳೆದ ಬಾರಿ ಭಾರತ ಚಾಂಪೊಯನ್ ಆಗಿತ್ತು, ಅಲ್ಲದೆ, ಈ ಬಾರಿಯೂ ತಂಡ ಉತ್ತಮವಾಗಿತ್ತು. ಆದರೆ, ಕಪ್ ಗೆಲ್ಲುವಲ್ಲಿ ಕೊನೇ ಕ್ಷಣದಲ್ಲಿ ಎಡವಿತು. ಇದೇ ವೇಳೆ ಚಾಮರಿ ಅಟ್ಟಪಟ್ಟು ನೇತೃತ್ವದ ಲಂಕಾ ವನಿತೆಯರು ಮೊದಲ ಬಾರಿಗೆ ಏಷ್ಯಾ ಕಪ್​ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಫೈನಲ್​ ಪಂದ್ಯದಲ್ಲಿ ಸಂಪೂರ್ಣವಾಗಿ ಪಾರಮ್ಯ ಮೆರೆದ ಲಂಕಾ ತಂಡ ಟ್ರೋಫಿ ಗೆದ್ದು ಸಂಭ್ರಮಿಸಿತು.

ಭಾರತ ತಂಡ ಹಾಲಿ ಆವೃತ್ತಿಯಲ್ಲೂ ಬಲಾಢ್ಯ ತಂಡವಾಗಿತ್ತು. ಈ ಹಿಂದಿನ ಎಂಟು ಆವೃತ್ತಿಗಳಲ್ಲಿ 7 ಟ್ರೋಫಿ ಗೆದ್ದಿತ್ತು. ಅಂತೆಯೇ 8ನೇ ಕಪ್​ ಗೆಲ್ಲುವ ನಿರೀಕ್ಷೆಯಲ್ಲಿತ್ತು. ಆದರೆ, ಅದಕ್ಕೆ ಲಂಕಾ ವನಿತೆಯರು ಅವಕಾಶ ಕೊಡಲಿಲ್ಲ. ಕಳೆದ 8 ಆವೃತ್ತಿಗಳಲ್ಲಿ 5 ಬಾರಿ ಫೈನಲ್​​ನಲ್ಲಿ ಪ್ರವೇಶಿಸಿದ್ದ ದ್ವೀಪರಾಷ್ಟ್ರ, ಕೊನೆಗೂ 6ನೇ ಪ್ರಯತ್ನದಲ್ಲಿ ಗೆಲುವಿನ ಕನಸು ನನಸಾಗಿಸಿಕೊಂಡಿದೆ.

ಇಲ್ಲಿನ ಪಲ್ಲೆಕೆಲೆ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 165 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟಿ್​ ಮಾಡಿದ ಲಂಕಾ 18.4 ಓವರ್​ಗಳಲ್ಲೇ 2 ವಿಕೆಟ್​ ನಷ್ಟಕ್ಕೆ 167 ರನ್​ ಬಾರಿಸಿ ಗೆಲುವಿನ ನಗೆ ಬೀರಿತು.

ಸವಾಲಿನ ಗುರಿ ಬೆನ್ನಟ್ಟಿದ ಶ್ರೀಲಂಕಾ 7 ರನ್ ಗಳಿಸಿ ಮೊದಲ ವಿಕೆಟ್​ ಕಳೆದುಕೊಂಡು ಆತಂಕಕ್ಕೆ ಬಿತ್ತು. ಆರಂಭಿಕ ಹಿನ್ನಡೆ ಮಧ್ಯೆಯೂ ನಾಯಕಿ ಚಾಮರಿ ಅಟ್ಟಪಟ್ಟು ಭಾರತೀಯ ಬೌಲರ್​ಗಳನ್ನು ಹಿಮ್ಮೆಟ್ಟಿಸಿದರು. ಅವರಿಗೆ ಹರ್ಷಿತಾ ಸಮರವಿಕ್ರಮ ಬೆಂಬಲವಾಗಿನಿಂತರು. ಹೀಗಾಗಿ ಎರಡನೇ ವಿಕೆಟ್​ಗೆ ಲಂಕಾ ತಂಡ 87 ರನ್ ಗಳಿಸಿತು. ಇದೇ ವೇಳೆ ಚಾಮರಿ ಅರ್ಧ ಶತಕ ಬಾರಿಸಿದರು.
43 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್​ ಸಹಿತ 61 ರನ್ ಗಳಿಸಿದ್ದ ಚಾಮರಿ ಔಟಾದರೂ ಹರ್ಷಿತಾ ಗೆಲುವಿನ ಕಡೆಗೆ ಮುನ್ನುಗ್ಗಿದರು. ಹರ್ಮನ್ ಪಡೆಯ ವಿರುದ್ಧ ಸವಾರಿ ಮಾಡಿ ಗೆಲುವಿನತ್ತ ಮುನ್ನಡೆಸಿದರು. ಹಾಗೆಯೇ ಅರ್ಧಶತಕ ಪೂರೈಸಿದರು.

ಇದನ್ನೂ ಓದಿ: Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

ಮಂಧಾನ ಏಕಾಂಗಿ ಹೋರಾಟ

ಬ್ಯಾಟಿಂಗ್ ಆರಂಭಿಸಿದ ಭಾರತ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 44 ರನ್ ಬಂದರೂ ಶಫಾಲಿ ವರ್ಮಾ 16 ರನ್​ಗಳಿಗೆ ಆಟ ಮುಗಿಸಿದರು. ಫೈನಲ್​ಗೆ ಎಂಟ್ರಿ ಪಡೆದ ಉಮಾ ಚೆಟ್ರಿ 9 ರನ್​ಗೆ ನಿರ್ಗಮಿಸಿದರು. ಹರ್ಮನ್​ಪ್ರೀತ್​ ಕೌರ್​ (11) ಬೇಗನೆ ಔಟಾದ ಕಾರಣ ದೊಡ್ಡ ಮೊತ್ತ ಪೇರಿಸುವ ಕನಸಿಗೆ ಬ್ರೇಕ್ ಬಿತ್ತು. ಸತತ ವಿಕೆಟ್​ ಪತನದ ಮಧ್ಯೆಯೂ ಮಂಧಾನ ಅರ್ಧಶತಕ ಸಿಡಿಸಿ ಆಸರೆಯಾದರು.

ಮಂಧಾನ 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್ ಗಳಿಸಿ ತಂಡವನ್ನು 150ರ ಗಡಿ ದಾಟಿಸಲು ನೆರವಾದರು. ಜೆಮಿಮಾ ರೊಡ್ರಿಗಸ್ 29 ರನ್ ಗಳಿಸಿದರು. ಕೊನೆಯಲ್ಲಿ ರಿಚಾ ಘೋಷ್ ಅಬ್ಬರದ 30 ರನ್ ಕಲೆ ಹಾಕಿದರು. ಪೂಜಾ ವಸ್ತ್ರಾಕರ್ 5, ರಾಧಾ ಯಾದವ್ 1 ರನ್ ಗಳಿಸಿದರು.

Continue Reading

ಪ್ರಮುಖ ಸುದ್ದಿ

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Manu Bhaker : ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

VISTARANEWS.COM


on

Manu Bhaker
Koo

ನವದೆಹಲಿ: 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಮೆಡಲ್​ಗಳ ಖಾತೆ ತೆರೆದ ಹರಿಯಾಣದ ಮನು ಭಾಕರ್ (Manu Bhaker) ಅವರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಅವರಾಗಿದ್ದಾರೆ.

ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಹರಿಯಾಣದ ಮಗಳಿಂದ ಇಡೀ ದೇಶ ನಿರೀಕ್ಷಿಸುತ್ತಿದ್ದ ಪದಕದ ಭರವಸೆ ಈಡೇರಿದೆ ಎಂದು ಹೇಳಿದ್ದಾರೆ.

ದೇಶದ ಹೆಮ್ಮೆಯ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್​ನಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ ಎಂದು ಸೈನಿ ಪೋಸ್ಟ್ ಮಾಡಿದ್ದಾರೆ.

ಇಂದು, 22 ವರ್ಷದ ಮನು ಭಾಕರ್ ಇಡೀ ದೇಶ ಮತ್ತು ಹರಿಯಾಣ ರಾಜ್ಯವು ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಬ್ಬ ಹರ್ಯಾಣ ಜನ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಎಕ್ಸ್ ಗೆ ತೆರಳಿ ಮಹಿಳಾ ಅಥ್ಲೀಟ್ ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

“ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೂಟಿಂಗ್​​ನಲ್ಲಿ 12 ವರ್ಷಗಳ ಪದಕಗಳ ಬರವನ್ನು ಕೊನೆಗೊಳಿಸಿದ್ದಾರೆ. ಈ ಸಾಧನೆಯೊಂದಿಗೆ ಮನು ಭಾಕರ್​ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ ಮತ್ತು “ಭಾರತಕ್ಕೆ ಮೊದಲ ಪದಕ ಪಡೆದ ಮನು ಭಾಕರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Continue Reading

ಕ್ರಿಕೆಟ್

IPT 12: ಎನ್ 1 ಕ್ರಿಕೆಟ್ ಅಕಾಡೆಮಿಯ ವತಿಯಿಂದ ʻIPT 12ʼ ಕ್ರಿಕೆಟ್ ಟ್ರೋಫಿ, ಜೆರ್ಸಿ ಅನಾವರಣ

IPT 12: ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ಕೊಟ್ಟಿದ್ದಾರೆ.

VISTARANEWS.COM


on

Unveiling of IPT 12 Cricket Trophy, Jersey by N1 Cricket Academy
Koo

ಬೆಂಗಳೂರು: ಕಿರುತೆರೆ ಕಲಾವಿದರಿಗಾಗಿ TPL-ಟೆಲಿವಿಷನ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಟೂರ್ನಮೆಂಟ್ ನಡೆಸಿಕೊಂಡು ಬರುತ್ತಿರುವ ‘ಎನ್ 1’ ಕ್ರಿಕೆಟ್ ಅಕಾಡೆಮಿಯು ಇದೀಗ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದೆ. ಈಗಾಗಲೇ ಯಶಸ್ವಿಯಾಗಿ ಮೂರು TPL ಸೀಸನ್ ಮುಗಿಸಿರುವ ಎನ್ 1 ಅಕಾಡೆಮಿ ಸೂತ್ರಧಾರ ಸುನಿಲ್ ಕುಮಾರ್ ಬಿ. ಆರ್ ಅವರು ಈಗ IPT12 ಎಂಬ ಹೊಸ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ಕೊಟ್ಟಿದ್ದಾರೆ.

ಡಾಕ್ಟರ್ಸ್, ಲಾಯರ್ಸ್, ಸಿನಿಮಾ ನಟರು, ಕಿರುತೆರೆ ಕಲಾವಿದರು, ಮಾಧ್ಯಮದವರು, ಫ್ಯಾಷನ್ ಡಿಸೈನರ್ ಹೀಗೆ ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಇದಾಗಿದೆ. ಈ ಪಂದ್ಯಾವಳಿಯ ಟ್ರೋಫಿ ಹಾಗೂ ಜೆರ್ಸಿ ಬಿಡುಗಡೆ ಮಾಡಲಾಯಿತು,. ಬೆಂಗಳೂರಿನ ಎಂಎಂ ಲೆಗಸಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಪ್ರಣಮ್ ದೇವರಾಜ್, ಶರಣ್ಯ ಶೆಟ್ಟಿ ಸೇರಿದಂತೆ ಚಿತ್ರರಂಗದ ಕಲಾವಿದರು, ಎಲ್ಲಾ ತಂಡದ ನಾಯಕರು ಮತ್ತು ಬ್ರ್ಯಾಂಡ್ ಅಂಬಾಸಿಡರ್ ಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.

ಬಳಿಕ ಮಾತನಾಡಿದ ನಟ ಪ್ರಣಂ ದೇವರಾಜ್ ಮಾತನಾಡಿ, ʻʻಸುನಿಲ್ ಅವರು ಪ್ರತಿ ವರ್ಷ ಈ ರೀತಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿಕೊಂಡು ಬರುತ್ತಿದ್ದಾರೆ. ನಾವು ಮಾಧ್ಯಮದರು ಒಟ್ಟಿಗೆ ಕ್ರಿಕೆಟ್ ಆಡುವ ಅವಕಾಶ ಮಾಡಿಕೊಟ್ಟಿದ್ದಾರೆ. ಸಾಕಷ್ಟು ತಂಡಗಳು ಆಡುತ್ತಿದ್ದಾರೆ. ನಮ್ಮ ದೇಶದಲ್ಲಿ ಜನರನ್ನು ಒಂದು ಮಾಡಲು ಕ್ರಿಕೆಟ್ ಹಾಗು ಸಿನಿಮಾದಿಂದ ಮಾತ್ರ ಸಾಧ್ಯ. ಕ್ರಿಕೆಟ್ ನಿಂದ ಸುನಿಲ್ ನಮ್ಮನ್ನೆಲ್ಲಾ ಒಂದು ಮಾಡುತ್ತಿದ್ದಾರೆʼ ಎಂದು ತಿಳಿಸಿದರು.

ಇದನ್ನೂ ಓದಿ: ICC Champions Trophy : ಪಾಕಿಸ್ತಾನದ ಕ್ರಿಕೆಟ್​ ಮಂಡಳಿಯ ಮಾಧ್ಯಮ ಹಕ್ಕುಗಳನ್ನು ಕೇಳುವವರೇ ಇಲ್ಲ!

ಎನ್ 1 ಕ್ರಿಕೆಟ್ ಅಕಾಡೆಮಿ ಸಂಸ್ಥಾಪಕ ಸುನಿಲ್ ಕುಮಾರ್ ಬಿ ಆರ್ , ಎಲ್ಲಾ ತಂಡಗಳಿಗೂ ಆಲ್ ದಿ ಬೆಸ್ಟ್ ತಿಳಿಸಿದರು.

ಯಾವ ಯಾವ ತಂಡಗಳಿವೆ?
1.GLR ವಾರಿಯರ್ಸ್
ಲೂಸ್ ಮಾದ ಯೋಗಿ -ನಾಯಕ
ರಾಜೇಶ್.ಎಲ್-ಮಾಲೀಕರು

  1. ಅಶ್ವಸೂರ್ಯ ರೈಡರ್ಸ್
    ಹರ್ಷ ಸಿಎಂ ಗೌಡ – ನಾಯಕ
    ರಂಜಿತ್ ಕುಮಾರ್ ಎಸ್ – ಮಾಲೀಕರು

3.ದಿ ಬುಲ್ ಸ್ಕ್ವಾಡ್
ಶರತ್ ಪದ್ಮನಾಭ್- ನಾಯಕ
ಮೋನಿಶ್- ಮಾಲೀಕರು

4.ಬಯೋಟಾಪ್ ಲೈಫ್ ಸೆವಿಯರ್ಸ್
ಅಬ್ರಾರ್ ಮೊಹಮ್ಮದ್-ನಾಯಕ
ಪ್ರಸನ್ನ ವಿ, ಡಾ.ವಿಶ್ವನಾಥ್,
ವಿನು ಜೋಸ್ -ಮಾಲೀಕರು

5.ಶ್ರೀಲಂಕಾ ಲಾಯರ್ಸ್ ಕ್ರಿಕೆಟ್
ಕುಸನ್-ನಾಯಕ
ಮನೀಶ್ ಅಧ್ಯಕ್ಷರು
ಬುವನೇಕ ಉಪಾಧ್ಯಕ್ಷ

  1. S/ o ಮುತ್ತಣ್ಣ ಮಿಡಿಯಾ ಟೀಮ್
    ಸದಾಶಿವ ಶೆಣೈ-ನಾಯಕ
    ಪುರಾತನ‌‌ ಫಿಲ್ಮಂಸ್-ಮಾಲೀಕರು
  2. ಭಾರತೀಯ ವಕೀಲರ ತಂಡ
    ಅರವಿಂದ್ ವೆಂಕಟೇಶ್ ರೆಡ್ಡಿ-ನಾಯಕ
    ಶಿಲೇಶ್ ಕುಮಾರ್ -ಮಾಲೀಕರು

8.ಫ್ಯಾಶನ್ ಮೇವರಿಕ್ಸ್
ಫಹೀಮ್ ರಾಜ-ನಾಯಕ
ಪ್ರಶಾಂತ್ ಕೆ ಎಂ-ಮಾಲೀಕರು

ಎವಿಆರ್ ಗ್ರೂಪ್ಸ್ ವತಿಯಿಂದ ಎಚ್ ವೆಂಕಟೇಶ್ ರೆಡ್ಡಿರವರು IPT12 ಕ್ರಿಕೆಟ್ ಟೂರ್ನಮೆಂಟ್ಗೆ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ. ಸದ್ಯ ಜೆರ್ಸಿ ಹಾಗೂ ಟ್ರೋಫಿ ಅನಾವರಣ ಮಾಡಲಾಗಿದ್ದು, ಶೀಘ್ರದಲ್ಲಿಯೇ ಪ್ರಾಕ್ಟಿಸ್ ಗಾಗಿ ತಂಡಗಳು ಬ್ಯಾಟ್ ಬಾಲು ಹಿಡಿದು ಅಖಾಡಕ್ಕೆ ಇಳಿಯಲಿವೆ.

Continue Reading
Advertisement
Donald Trump
ವಿದೇಶ2 mins ago

Donald Trump: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೂಗಲ್‌ ಹಸ್ತಕ್ಷೇಪ: ರಿಪಬ್ಲಿಕನ್‌ ಪಾರ್ಟಿಯ ಆರೋಪಕ್ಕೆ ಕಾರಣವೇನು?

shiradi landslide railway track
ಪ್ರಮುಖ ಸುದ್ದಿ31 mins ago

Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

US Mass Shooting
ವಿದೇಶ49 mins ago

US Mass Shooting: ಅಮೆರಿಕದ ಪಾರ್ಕ್‌ನಲ್ಲಿ ಮತ್ತೆ ಸಾಮೂಹಿಕ ಗುಂಡಿನ ದಾಳಿ; ಒಬ್ಬ ವ್ಯಕ್ತಿ ಬಲಿ, 6 ಜನಕ್ಕೆ ಗಾಯ

Janhvi Kapoor interview Kamiya Jani trolled for calling idli-chicken curry weird combination
ಬಾಲಿವುಡ್54 mins ago

Janhvi Kapoor: ಇಡ್ಲಿ- ಚಿಕನ್ ಕರಿ ಕಾಂಬಿನೇಶನ್‌ಗೆ ಮುಖ ಕಿವುಚಿಕೊಂಡ ಖ್ಯಾತ ಯುಟ್ಯೂಬರ್‌; ತಿನ್ನಲು ಕೈ ಬಳಸಿ ಎಂದ ಜಾಹ್ನವಿ ಕಪೂರ್!

mukesh bollywood ರಾಜಮಾರ್ಗ ಅಂಕಣ
ಅಂಕಣ1 hour ago

ರಾಜಮಾರ್ಗ ಅಂಕಣ: ಮುಕೇಶ್ ಅಂದರೆ ಹಾಂಟಿಂಗ್ ಮೆಲಡಿ, ನೋವಿನಲ್ಲಿ ಅದ್ದಿ ತೆಗೆದ ದನಿ!

ವೈರಲ್ ನ್ಯೂಸ್1 hour ago

Viral Video: 7ನೇ ಡಿವೋರ್ಸ್‌ಗೆ ಕೋರ್ಟ್‌ಗೆ ಬಂದ ಮಹಿಳೆ; ಈಕೆಯ ಕುತಂತ್ರ ಕಂಡು ಜಡ್ಜ್‌ಗೆ ಶಾಕ್‌!

Tourist Place
Latest1 hour ago

Tourist Place in Tamilnadu : ತಮಿಳುನಾಡಿಗೆ ಹೋದರೆ ಈ ಅದ್ಭುತ ತಾಣಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಡಿ!

Kalika Temple
ದೇಶ2 hours ago

Kalika Temple: ಭಕ್ತರು ಈ ದೇವಾಲಯಕ್ಕೆ ತುಂಡುಡುಗೆ ಧರಿಸಿ ಬಂದರೆ ಪ್ರವೇಶ ಇಲ್ಲ; ಆಡಳಿತ ಮಂಡಳಿ ಆದೇಶ

Kannada New Movie powder Movie release date announce
ಸ್ಯಾಂಡಲ್ ವುಡ್2 hours ago

Kannada New Movie: ‘ಪೌಡರ್’ ರಿಲೀಸ್ ಡೇಟ್ ಪೋಸ್ಟ್ ಪೋನ್: ತೆರೆಗೆ ಯಾವಾಗ?

14 hours work protest
ಪ್ರಮುಖ ಸುದ್ದಿ2 hours ago

14 Hours Work: 14 ಗಂಟೆಗಳ ಕೆಲಸ; ರಾಜ್ಯ ಸರ್ಕಾರದ ವಿರುದ್ಧ ಆಗಸ್ಟ್‌ 3ರಂದು ಐಟಿ ಉದ್ಯೋಗಿಗಳ ಪ್ರತಿಭಟನೆ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ16 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ18 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ20 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ21 hours ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌