Spandana Vijay Raghavendra: ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ; ಶೌರ್ಯ ಮುಡಿ ತೆಗೆದ ನಂತರ ಪೂಜೆ - Vistara News

South Cinema

Spandana Vijay Raghavendra: ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಸ್ಪಂದನಾ ಅಸ್ಥಿ ವಿಸರ್ಜನೆ; ಶೌರ್ಯ ಮುಡಿ ತೆಗೆದ ನಂತರ ಪೂಜೆ

ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಸ್ಥಿಯನ್ನು ಕಾವೇರಿ ನದಿಗೆ (Cauvery river) ಅರ್ಪಿಸುವ ಅಸ್ಥಿ ವಿಸರ್ಜನಾ (Asthi visarjane) ಪ್ರಕ್ರಿಯೆ ಶ್ರೀರಂಗಪಟ್ಟಣದ (Srirangapatna) ಕಾವೇರಿ ನದಿ ತೀರದಲ್ಲಿ ನಡೆಯಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್‌ ರಾಘವೇಂದ್ರ (Spandana Vijay Raghavendra) ಮೃತಪಟ್ಟು ಇಂದಿಗೆ ಆಗಸ್ಟ್‌ 11 ಐದು ದಿನ ಕಳೆದಿದೆ. ಸ್ಪಂದನಾ ಕುಟುಂಬಸ್ಥರಿಂದ ಹಾಲುತುಪ್ಪ ಬಿಡುವ ಕಾರ್ಯ ನಡೆಯಿತು. ಶ್ರೀರಾಮಪುರದ ಹರಿಶ್ಚಂದ್ರಘಾಟ್​​ನಲ್ಲಿ ಕುಟುಂಬಸ್ಥರ ಪೂಜೆ ಮಾಡಿದ್ದಾರೆ. ಅಸ್ಥಿ ಬಿಡುವ ಕಾರ್ಯಕ್ಕೂ ಮುನ್ನ ಕುಟುಂಬಸ್ಥರಿಂದ ಪೂಜೆ ನಡೆಯಿತು. ಸ್ಪಂದನಾಗೆ ಇಷ್ಟವಾದ ಪದಾರ್ಥಗಳನ್ನಿಟ್ಟು ಕುಟುಂಬದವರು ಪೂಜೆ ಮಾಡಿದ್ದಾರೆ. ಸ್ಪಂದನಾ ವಿಜಯ ರಾಘವೇಂದ್ರ (Spandana Vijay Raghavendra) ಅವರ ಪಾರ್ಥಿವ ಶರೀರದ ಅಸ್ಥಿಯನ್ನು ಕಾವೇರಿ ನದಿಗೆ (Cauvery river) ಅರ್ಪಿಸುವ ಅಸ್ಥಿ ವಿಸರ್ಜನಾ (Asthi visarjane) ಪ್ರಕ್ರಿಯೆ ಶ್ರೀರಂಗಪಟ್ಟಣದ (Srirangapatna) ಕಾವೇರಿ ನದಿ ತೀರದಲ್ಲಿ ನಡೆಯಲಿದೆ.

ವಿಧಿವಿಧಾನಗಳು ನಡೆದ ನಂತರ ಕಾವೇರಿ ನದಿಗೆ ಅಸ್ಥಿ

ಕೆಲವು ವಿಧಿವಿಧಾನಗಳು ನಡೆದ ನಂತರ ಕಾವೇರಿ ನದಿಗೆ ಅಸ್ಥಿ ಬಿಡಲಿದೆ ಕುಟುಂಬ. ಕಾವೇರಿ ನದಿಯಲ್ಲಿ ಅದರಲ್ಲೂ ಶ್ರೀರಂಗಪಟ್ಟಣದಲ್ಲಿ ಅಸ್ಥಿ ಬಿಟ್ಟರೆ ಮುಕ್ತಿ ಸಿಗಲಿದೆ ಎಂಬ ನಂಬಿಕೆ ಇದೆ. ಸ್ಪಂದನಾ ವಿಜಯ ರಾಘವೇಂದ್ರ ಅವರ ಮಗ ಶೌರ್ಯ ಮುಡಿ ತೆಗೆದ ನಂತರ ಪೂಜಾ ಕೈಂಕರ್ಯ ಆರಂಭವಾಗಲಿದೆ. ಸ್ಪಂದನಾ ಅವರ ಅಸ್ಥಿ ವಿಸರ್ಜನೆ ನಡೆಯುವ ಸ್ಥಳದಲ್ಲಿ ಸಿದ್ಧತೆ ಮತ್ತು ಪೂಜೆಯ ನೇತೃತ್ವವನ್ನು ರಮೇಶ್ ಶರ್ಮಾ ವಹಿಸಿದ್ದಾರೆ.

ಬ್ಯಾಂಕಾಕ್‌ ಪ್ರವಾಸದಲ್ಲಿದ್ದ ಸ್ಪಂದನಾ ಅವರು ಆಗಸ್ಟ್ 6ರಂದು ಸ್ಪಂದನಾ ಬ್ಯಾಂಕಾಕ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ರಾತ್ರಿ 11.35ಕ್ಕೆ ಥಾಯ್‌ ಏರ್‌ವೇಸ್‌ ವಿಮಾನದ ಮೂಲಕ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿತ್ತು. ಅಲ್ಲಿಂದ ರಾತ್ರಿಯೇ ಮಲ್ಲೇಶ್ವರದಲ್ಲಿರುವ ಸ್ಪಂದನಾ ಅವರ ತಂದೆ, ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಅವರ ನಿವಾಸಕ್ಕೆ ತರಲಾಗಿತ್ತು.

ಇದನ್ನೂ ಓದಿ: Spandana Vijay Raghavendra : ಒಳಗೆ ಅವಳು ಶಾಂತಮೂರ್ತಿ, ಹೊರಗೆ ಇವನು ಕಲ್ಲುಬಂಡೆ!

ಇದನ್ನೂ ಓದಿ: Spandana Vijay Raghavendra: ಸ್ಪಂದನಾ ಬಾಲ್ಯ ಹೇಗಿತ್ತು? ಹಳೆಯ ಫೋಟೊಗಳು ವೈರಲ್‌!

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌, ಗೃಹ ಮಂತ್ರಿ ಜಿ. ಪರಮೇಶ್ವರ್‌ ಸೇರಿದಂತೆ ನಾನಾ ರಾಜಕೀಯ ಗಣ್ಯರು, ಶಿವರಾಜ್‌ ಕುಮಾರ್‌, ಯಶ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ರವಿಚಂದ್ರನ್‌, ಗಿರಿಜಾ ಲೋಕೇಶ್‌ ಸೇರಿದಂತೆ ಚಿತ್ರರಂಗದ ಬಹುತೇಕ ಎಲ್ಲ ನಟ-ನಟಿಯರು ಹಾಗೂ ದೊಡ್ಡ ಸಂಖ್ಯೆಯ ಅಭಿಮಾನಿಗಳು ಅಂತಿಮ ದರ್ಶನ ಪಡೆದಿದ್ದರು.

ಹರಿಶ್ಚಂದ್ರ ಘಾಟ್‌ನ ವಿದ್ಯುತ್‌ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತಂದು ಅಲ್ಲಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಾಗಿತ್ತು. ಈಡಿಗ ಸಂಪ್ರದಾಯದಂತೆ ಸರಳವಾಗಿ ನಡೆದ ಸ್ಪಂದನಾ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ಪತಿ ವಿಜಯ ರಾಘವೇಂದ್ರ ಮತ್ತು ಪುತ್ರ ಶೌರ್ಯ ನೆರವೇರಿಸಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Actress Nayanathara: ‘ಬಾಹುಬಲಿ’ ಸಿನಿಮಾ ದೃಶ್ಯದ ಮರುಸೃಷ್ಟಿಯಲ್ಲಿ ವಿಘ್ನೇಶ್ ಶಿವನ್ ಪುತ್ರರು!

Actress Nayanathara: ಬಾಹುಬಲಿ…. ಈ ಸಿನಿಮಾದ ಹೆಸರು ಕೇಳುತ್ತಲೇ ಮೈ ನವಿರೇಳುತ್ತದೆ. ಜನಮಾನಸದಲ್ಲಿ ಹಾಸುಹೊಕ್ಕಾಗಿರುವ ಸಿನಿಮಾವಿದು. ದಕ್ಷಿಣ ಭಾರತದ ಹಿಟ್ ಚಲನಚಿತ್ರಗಳಲ್ಲಿ ಒಂದಾದ ಬಾಹುಬಲಿ ಚಿತ್ರ ಜನರ ಮೆಚ್ಚುಗೆಯನ್ನು ಪಡೆದ ಸೂಪರ್ ಹಿಟ್ ಚಿತ್ರವಾಗಿತ್ತು. ಅದರ ಒಂದೊಂದು ದೃಶ್ಯವು ಅಮೋಘವಾಗಿ ಮೂಡಿಬಂದಿತ್ತು. ಈ ಸೂಪರ್ ಹಿಟ್ ಚಿತ್ರದ ದೃಶ್ಯವೊಂದನ್ನು ನಯನತಾರಾ ಹಾಗೂ ವಿಘ್ನೇಶ್ ಪುತ್ರರು ಮರುಸೃಷ್ಟಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ನಟಿ ನಯನತಾರಾ ವಿಘ್ನೇಶ್ ಶಿವನ್ ಅವರಿಗೆ ತಂದೆಯ ದಿನದ ಶುಭಾಶಯ ತಿಳಿಸಿದ್ದಾರೆ.

VISTARANEWS.COM


on

Actress Nayanathara
Koo

ಬೆಂಗಳೂರು: ಕಾಲಿವುಡ್ ನಟಿ ನಯನತಾರಾ(Actress Nayanathara) ಹಾಗೂ ನಿರ್ಮಾಪಕ ವಿಘ್ನೇಶ್ ದಂಪತಿ ಉಯಿರ್ ಮತ್ತು ಉಲಗ್ ಎಂಬ ಅವಳಿ ಮಕ್ಕಳನ್ನು ಹೊಂದಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಈ ದಂಪತಿ ಇತ್ತೀಚಿಗೆ ತಮ್ಮ ಮುದ್ದಿನ ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಸಮಯವನ್ನು ಕಳೆಯುತ್ತಿದ್ದಾರೆ. ಈ ನಡುವೆ ಈ ದಂಪತಿ ಸೂಪರ್ ಹಿಟ್ ಸಿನಿಮಾವೊಂದರ ದೃಶ್ಯವನ್ನು ತಮ್ಮ ಮಕ್ಕಳ ಮೂಲಕ ಮರು ಸೃಷ್ಟಿ ಮಾಡಿದ್ದಾರೆ.

ದಕ್ಷಿಣ ಭಾರತದ ಹಿಟ್ ಚಲನಚಿತ್ರಗಳಲ್ಲಿ ಒಂದಾದ ಬಾಹುಬಲಿ ಚಿತ್ರ ಜನರ ಮೆಚ್ಚುಗೆಯನ್ನು ಪಡೆದ ಸೂಪರ್ ಹಿಟ್ ಚಿತ್ರವಾಗಿತ್ತು. ಅದರ ಒಂದೊಂದು ದೃಶ್ಯವು ಅಮೋಘವಾಗಿ ಮೂಡಿಬಂದಿತ್ತು. ಹಾಗಾಗಿ ಅದು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇಂತಹ ಸೂಪರ್ ಹಿಟ್ ಚಿತ್ರ ದೃಶ್ಯವೊಂದನ್ನು ನಯನತಾರಾ ಹಾಗೂ ವಿಘ್ನೇಶ್ ಪುತ್ರರು ಮರುಸೃಷ್ಟಿ ಮಾಡಿದ್ದಾರೆ.

ಈ ಚಿತ್ರದಲ್ಲಿ ರಮ್ಯಕೃಷ್ಣರವರು ಶಿವಗಾಮಿ ಪಾತ್ರದಲ್ಲಿ ನೀರಿನಲ್ಲಿ ಮುಳುಗುತ್ತಿರುವಾಗ ಬಾಹುಬಲಿಯನ್ನು ಕೈಯಲ್ಲಿ ಎತ್ತಿ ಹಿಡಿದಿರುವ ದೃಶ್ಯ ಇಂದಿಗೂ ಎಲ್ಲರ ಮನದಲ್ಲಿ ನೆಲೆಯೂರಿದೆ. ಅಂತಹ ದೃಶ್ಯವನ್ನು ಇದೀಗ ವಿಘ್ನೇಶ್‌ ಅವರು ಮರುಸೃಷ್ಟಿ ಮಾಡಿದ್ದಾರೆ. ತಮ್ಮ ಮಕ್ಕಳಿಗೆ ಬಾಹುಬಲಿ ಸಾಂಪ್ರದಾಯಿಕ ಉಡುಗೆಯನ್ನು ತೊಡಿಸಿ, ವಿಘ್ನೇಶ್ ಅವರು ನೀರಿನಲ್ಲಿ ಮುಳುಗಿಕೊಂಡು ತಮ್ಮ ಮಕ್ಕಳನ್ನು ಕೈಯಲ್ಲಿ ಎತ್ತಿ ಹಿಡಿದಿದ್ದಾರೆ. ಹಾಗೇ ಇದಕ್ಕೆ ಸಂಬಂಧಿಸಿದ ಫೋಟೊವನ್ನು ನಯನತಾರಾ ಅವರು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡು “My dear Baahubali 1&2 cos of U 2. It’s a Happy Father’s Day. Life with U boys sooo sooo amazingly satisfying. Love you my uyir & ulag @nayanathara(sic)” ಎಂಬ ಶೀರ್ಷಿಕೆ ನೀಡಿದ್ದಾರೆ.

ನಯನತಾರಾ ಈ ಫೋಟೊವನ್ನು ಹಂಚಿಕೊಳ್ಳುವ ಮೂಲಕ ವಿಘ್ನೇಶ್ ಶಿವನ್ ಅವರಿಗೆ ತಂದೆಯ ದಿನದ ಶುಭಾಶಯ ತಿಳಿಸಿದ್ದಾರೆ. ಹಾಗೇ ಮಕ್ಕಳ ಆಗಮನದಿಂದ ಅವರ ಜೀವನ ಎಷ್ಟು ತೃಪ್ತಿಕರವಾಗಿದೆ ಎಂಬುದನ್ನು ವಿವರಿಸಿದ್ದಾರೆ.
ನಯನತಾರಾ ಹಾಗೂ ವಿಘ್ನೇಶ್ ತಮ್ಮ ಅವಳಿ ಗಂಡುಮಕ್ಕಳಾದ ಉಯಿರ್ ಮತ್ತು ಉಲಗ್ ಅವರನ್ನು ಅಕ್ಟೋಬರ್ 2022ರಲ್ಲಿ ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಅಂದಿನಿಂದ ಅವರು ತಮ್ಮ ಮುದ್ದಾದ ಮಕ್ಕಳೊಂದಿಗಿನ ಫೋಟೊಗಳು ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅವರು ತಮ್ಮ ಮಕ್ಕಳೊಂದಿಗೆ ಮೋಜು ಮಸ್ತಿ ಮಾಡಲು ಹಾಂಗ್‌ಕಾಂಗ್‌ಗೆ ಹೋಗಿದ್ದರು.

ಇದನ್ನೂ ಓದಿ: Viral Video: ನಾಯಿ ಜತೆ ವಾಕಿಂಗ್ ನೋಡಿರುತ್ತೀರಿ, ಹುಲಿ ಜತೆ? ಈ ವಿಡಿಯೊ ನೋಡಿ!

ಪ್ರಸ್ತುತ ನಯನತಾರಾ ಅವರು ನಿವಿನ್ ಪೌಲಿ ಅವರೊಂದಿಗೆ ‘ಡಿಯರ್ ಸ್ಟೂಡೆಂಟ್ಸ್’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಹಾಗೇ ಟೆಸ್ಟ್’ ಮತ್ತು ‘ಮನ್ನಂಗಟ್ಟಿ 1960’ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನಿರ್ಮಾಪಕ, ನಿರ್ದೇಶಕ ವಿಘ್ನೇಶ್ ಅವರು ಪ್ರದೀಪ್ ರಂಗನಾಥನ್, ಕೃತಿ ಶೆಟ್ಟಿ ಮತ್ತು ಎಸ್.ಜೆ ಸೂರ್ಯ ಅಭಿನಯದ ‘ಲವ್ ಇನ್ಶೂರೆನ್ಸ್ ಕಾರ್ಪೊರೇಷನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ಕೊಲೆಯನ್ನು ಆತುರದಲ್ಲಿ ಮಾಡಿರ್ತಾನೆ ಬಳಿಕ ಕೊರಗುತ್ತಾನೆ; ದರ್ಶನ್ ಹಳೆಯ ಸಂದರ್ಶನ ವೈರಲ್‌!

Actor Darshan: ದರ್ಶನ್‌ ರೇಣುಕಾ ಸ್ವಾಮಿ ಕೊಲೆ ಕೇಸ್‌ ಒಂದಲ್ಲ ಸಾಕಷ್ಟು ಕೇಸ್‌ಗಳು ಇದೀಗ ಬೆಳಕಿಗೆ ಬರುತ್ತಿದೆ. ಈಗ ದರ್ಶನ್‌ ಅವರ ವಿಡಿಯೊವೊಂದು ವೈರಲ್‌ ಆಗಿದೆ. ʻʻಕೊಲೆ ಮಾಡುವವನು ಆತುರದಲ್ಲಿ ಮಾಡಿರುತ್ತಾನೆ. ಆಮೇಲೆ ಆ ಬಗ್ಗೆ ಕೊರಗುತ್ತಾ ಇರುತ್ತಾನೆ. ಏನೋ ಸಮಯ ಕೊಡಬಹುದಿತ್ತು. ಪರಿಹಾರ ಕಂಡುಹಿಡಯಬಹುದಿತ್ತಲ್ಲ ಎಂದು ಆಮೇಲೆ ಕೊರಗುತ್ತಾನೆʼʼಎಂದು ಹೇಳಿದ್ದರು. ಇದೀಗ ದರ್ಶನ್‌ ಅವರ ಈ ವಿಡಿಯೊ ಕಂಡು ನೆಟ್ಟಿಗರು ʻʻದರಾನ್‌ ತಾವು ಕಲಿತ ಪಾಠವನ್ನೇ ಮರೆತು ಬಿಟ್ರಲ್ಲʼʼಎಂದು ಕಮೆಂಟ್‌ ಮಾಡುತ್ತಿದ್ದಾರೆ.

VISTARANEWS.COM


on

Actor Darshan old interview goes viral Explain About Murder And His Mindset
Koo

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ (Actor Darshan) ಅರೆಸ್ಟ್‌ ಆಗಿದ್ದಾರೆ. ಈ ಪ್ರಕರಣಕ್ಕೂ ಮುಂಚೆ 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ದರ್ಶನ್ ಮಾರಣಾಂತಿಕ ಹಲ್ಲೆ ಮಾಡಿದ್ದರು. ಆ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನದಲ್ಲಿದ್ದರು ದರ್ಶನ್‌. ಆ ಸಮಯದಲ್ಲಿ ದರ್ಶನ್‌ ಅವರು ಜೈಲಿನ ಅನುಭವವನ್ನು ಹೇಳಿಕೊಂಡಿದ್ದರು. ಇದೀಗ ಈ ವಿಡಿಯೊ ಭಾರಿ ವೈರಲ್‌ ಆಗುತ್ತಿದೆ. ವಿಡಿಯೊದಲ್ಲಿ ದರ್ಶನ್‌ ʻʻಕೊಲೆ ಮಾಡುವವನು ಆತುರದಲ್ಲಿ ಮಾಡಿರುತ್ತಾನೆ. ಆಮೇಲೆ ಆ ಬಗ್ಗೆ ಕೊರಗುತ್ತಾ ಇರುತ್ತಾನೆ. ಏನೋ ಸಮಯ ಕೊಡಬಹುದಿತ್ತು. ಪರಿಹಾರ ಕಂಡುಹಿಡಯಬಹುದಿತ್ತಲ್ಲ ಎಂದು ಆಮೇಲೆ ಕೊರಗುತ್ತಾನೆʼʼಎಂದು ಹೇಳಿದ್ದರು. ಇದೀಗ ದರ್ಶನ್‌ ಅವರ ಈ ವಿಡಿಯೊ ಕಂಡು ನೆಟ್ಟಿಗರು ʻʻದರಾನ್‌ ತಾವು ಕಲಿತ ಪಾಠವನ್ನೇ ಮರೆತು ಬಿಟ್ರಲ್ಲʼʼಎಂದು ಕಮೆಂಟ್‌ ಮಾಡುತ್ತಿದ್ದಾರೆ.

ದರ್ಶನ್‌ ರೇಣುಕಾ ಸ್ವಾಮಿ ಕೊಲೆ ಕೇಸ್‌ ಒಂದಲ್ಲ ಸಾಕಷ್ಟು ಕೇಸ್‌ಗಳು ಇದೀಗ ಬೆಳಕಿಗೆ ಬರುತ್ತಿದೆ. ಈಗ ದರ್ಶನ್‌ ಅವರ ವಿಡಿಯೊವೊಂದು ವೈರಲ್‌ ಆಗಿದೆ. ಈ ಹಿಂದೆ 14 ದಿನ ಜೈಲಿನಲ್ಲಿ ಇದ್ದು ಬಂದ ದರ್ಶನ್‌ ವಿಡಿಯೊದಲ್ಲಿ ಈ ರೀತಿ ಹೇಳಿಕೊಂಡಿದ್ದಾರೆ. ʻನಾನು 14 ದಿನ ಜೈಲಿನಲ್ಲಿ ಇದ್ದವನು. ಸುಮಾರು ಜನರನ್ನ ನಾನು ಮೀಟ್‌ ಮಾಡ್ದೆ ಅಲ್ಲಿ. ಕೆಲವರು ಮಾಡದೇ ಇರುವ ತಪ್ಪಿಗೆ ಅಲ್ಲಿ ಇದ್ದಾರೆ. ಇನ್ನು ಕೆಲವರಿಗೆ ಕೋಪ ಆ ಟೈಮಿಗೆ ಕೈ ಕೊಟ್ಟು ಜೈಲು ಪಾಲಾಗಿದ್ದರು. ಆ ಬಗ್ಗೆ ಅವತ್ತು ನಾನು ಯೋಚನೆ ಮಾಡಿದಾಗ, ಕೊಲೆ ಮಾಡುವವನು ಆತುರದಲ್ಲಿ ಮಾಡಿರುತ್ತಾನೆ. ಬಳಿಕ ಕೊರಗುತ್ತಿರುತ್ತಾನೆ. ಸ್ವಲ್ಪ ಸಮಯ ಕೊಡಬೇಕಿತ್ತು. ಏನೋ ಪರಿಹಾರ ಕಂಡು ಹಿಡಿಯಬಹುದಾಗಿತ್ತು ಎಂದು ಅವನಿಗೆ ಆಮೇಲೆ ಅನ್ನಿಸಿರುತ್ತದೆ. ಇದೆಲ್ಲ ನಾನು ಜೈಲಿನಲ್ಲಿ ಇದ್ದಾಗ ಕಲಿತ ಪಾಠʼʼಎಂದಿದ್ದರು. ಇದೀಗ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್‌ ಈ ಪಾಠ ಮರೆತು ಬಿಟ್ರಾ ಎಂದು ಕಮೆಂಟ್‌ ಮಾಡುತ್ತಿದ್ದಾರೆ ನೆಟ್ಟಿಗರು. ಇದೀಗ ಟ್ರೋಲಿಗರಿಗೂ ಈ ವಿಡಿಯೊ ಆಹಾರವಾಗಿದೆ.

ಇದನ್ನೂ ಓದಿ: Actor Darshan: ಬಂಧಿತರಲ್ಲಿ ಹಲವರಿಗೆ ದರ್ಶನ್ ನೇರ ಪರಿಚಯವೇ ಇಲ್ವಂತೆ; ʻದಚ್ಚುʼ ಅರೆಸ್ಟ್ ಆದ ಬಳಿಕವೇ ಮುಖಾಮುಖಿ!

ಹೊಸ ಆರೋಪಗಳು ಬೆಳಕಿಗೆ

10 ವರ್ಷಗಳ ಹಿಂದೆ, ಪರಿಹಾರ ಕೇಳಲು ಹೋಗಿದ್ದ ಕೂಲಿ ಕೆಲಸಗಾರನ ಮೇಲೆ ನಾಯಿ ಛೂ ಬಿಟ್ಟು ವಿಕೃತಿ ಮೆರೆದಿದ್ದರೆಂಬ ಗಂಭೀರ ಆರೋಪ ಕೇಳಿ ಬಂದಿದೆ. ಟಿ. ನರಸೀಪುರ ಸಮೀಪದ ತೂಗುದೀಪ ಫಾರ್ಮ್​ಹೌಸ್​ನಲ್ಲಿ ಚಾಮರಾಜನಗರ ತಾಲೂಕಿನ ನಿಜಲಿಂಗನಪುರದ ಮಹೇಶ್ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವ ವೇಳೆ ಇವರಿಗೆ ಎತ್ತು ಕೊಂಬಿನಿಂದ ತಿವಿದಿತ್ತು. ಎತ್ತಿನ ಕೊಂಬು ಕಣ್ಣಿನಿಂದ ತೂರಿ ತಲೆ ಹೊರಗೆ ಬಂದಿತ್ತು. ಇದರಿಂದ ಅವರ ಕಣ್ಣು ಹೋಗಿತ್ತು. ಆ ಬಳಿಕ ದರ್ಶನ್‌ ಕಡೆಯವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ತಂದು ಬಿಟ್ಟು ಹೋಗಿದ್ದರು. ಆ ಬಳಿಕ ದರ್ಶನ್ ಈ ಕುಟುಂಬದ ಕಡೆ ತಿರುಗಿಯೂ ನೋಡಿಲ್ಲ. ಬಳಿಕ ಕಾರ್ಮಿಕ ತನ್ನ ಸಂಬಂಧಿಕರ ಜತೆ ಪರಿಹಾರ ಕೇಳಲು ಫಾರ್ಮ್ ಹೌಸ್​ಗೆ ಹೋದರೆ ದರ್ಶನ್‌ ಗ್ಯಾಂಗ್‌ ಅವರ ಮೇಲೆ ಸಾಕುನಾಯಿ ಛೂ ಬಿಟ್ಟಿದ್ದರಂತೆ. ಮೈಸೂರಿನ ಹೊಟೇಲ್​ಗೆ ಮಾತುಕತೆಗೆ ಕರೆಸಿ ರೌಡಿಗಳಿಂದ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ.

ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ

ಮತ್ತೊಂದು ಪ್ರಕರಣದಲ್ಲಿ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಹಿಳೆ ಮೇಲೆ ನಟ ದರ್ಶನ್ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗಿದೆ. ಕೊಡಗು ಜಿಲ್ಲೆಯ ಹೊಂ ಸ್ಟೇ ಯಲ್ಲಿ ಕೆಲವು ವರ್ಷಗಳ ಹಿಂದೆ ಘಟನೆ ನಡೆದಿತ್ತು. ನಟ ದರ್ಶನ್ ಸ್ನೇಹಿತರ ಜತೆ ಹೋಂ ಸ್ಟೇ ಯಲ್ಲಿ ಉಳಿದುಕೊಂಡಿದ್ದರು. ಈ ವೇಳೆ ಹೋಂ ಸ್ಟೇಯಲ್ಲಿ ಕೆಲಸ ಮಾಡುವ ಮಹಿಳೆಗೆ ಸಿಗರೇಟ್‌ನಿಂದ ಸುಟ್ಟು ಹಲ್ಲೆ ಮಾಡಿದ್ದರು ಎಂದು ಆರೋಪ ಮಾಡಿದ್ದಾರೆ.

Continue Reading

ಸ್ಯಾಂಡಲ್ ವುಡ್

Actor Darshan: ದರ್ಶನ್ & ಗ್ಯಾಂಗ್ ಪೊಲೀಸ್ ವಿಚಾರಣೆ ಲೈವ್ ಸ್ಟ್ರೀಮಿಂಗ್ ಆಗಬೇಕು ಎಂದ ಉಪೇಂದ್ರ!

Actor Darshan: ʻಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ. ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದು ಎಲ್ಲವನ್ನೂ ವಿಡಿಯೊ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದುʼʼಎಂದು ನೇರವಾಗಿಯೇ ಹೇಳಿಕೊಂಡಿದ್ದಾರೆ.

VISTARANEWS.COM


on

Actor Darshan case real star upendra react about case
Koo

ಬೆಂಗಳೂರು: ದರ್ಶನ್‌ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ ಉಪೇಂದ್ರ ಅವರು ಈಗ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ʻʻಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು. ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ. ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದು ಎಲ್ಲವನ್ನೂ ವಿಡಿಯೊ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದುʼʼಎಂದು ನೇರವಾಗಿಯೇ ಹೇಳಿಕೊಂಡಿದ್ದಾರೆ.

ಉಪೇಂದ್ರ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ʻʻದರ್ಶನ್ – ರೇಣುಕಾ ಸ್ವಾಮಿ – ಪಾರದರ್ಶಕ ವಿಚಾರಣೆ …..
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ದರ್ಶನ್ ಬಂಧನ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಮತ್ತು ಅದರ ವಿಚಾರಣೆ ಇಡೀ ಕರ್ನಾಟಕ ಮಾತ್ರವಲ್ಲ ಇಡೀ ಭಾರತವೇ ಬೆರಗಾಗಿ ನೋಡುತ್ತಿದೆ. ಈ ಹೈ ಪ್ರೊಫೈಲ್ ಕೇಸ್ ವಿಚಾರಣೆಯಲ್ಲಿ ನಿಶ್ಪಕ್ಷಪಾತವಾದ ನಿರ್ಣಯ ಮತ್ತು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ರೇಣುಕಾ ಸ್ವಾಮಿ ಕುಟುಂಬದಲ್ಲಿ, ಜನರಲ್ಲಿ, ಟಿವಿ ಮಾಧ್ಯಮಗಳಲ್ಲಿ ಮತ್ತು ದರ್ಶನ್ ಅಭಿಮಾನಿಗಳಲ್ಲಿ ಏನೇನೋ ಆತಂಕ, ಅನುಮಾನಗಳು ಕಾಡುತ್ತಿದೆ,
ಊಹಾಪೋಹಗಳು ಹುಟ್ಟಿಕೊಳ್ಳುತ್ತಿದೆ. ಏಕೆಂದರೆ…… ಯಾವುದೇ ಕೇಸ್ ಆದರೂ ಆ ಕೇಸ್ ನ ವಿಚಾರಣೆಯ ವೀಡಿಯೊ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಆಗಾಗ ಪೋಲೀಸರು ಸಂಬಂದ ಪಟ್ಟ ವ್ಯಕ್ತಿಗಳ ಕುಟುಂಬದವರ ಜೊತೆ ಹಂಚಿಕೊಳ್ಳಬೇಕು ಮತ್ತು ಅದು ಕಾನೂನಾಗಬೇಕು.

ಇದನ್ನೂ ಓದಿ: Shah Rukh Khan: ʻನಾಯಕ್‌ʼ ಸಿನಿಮಾಗೆ ಶಾರುಖ್‌ ಹೀರೊ ಆಗಬೇಕಿತ್ತು! 1 ರೂ. ಅಡ್ವಾನ್ಸ್ ಪಡೆದಿದ್ದರು!

(ಹಿಂದೆಲ್ಲಾ ಪೊಲೀಸರು ವಿಚಾರಣೆಯ ವಿವರ ಬರೆದು ದಾಖಲಿಸುತ್ತಿದ್ದರು. ಈಗ ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದು ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮತ್ತು ಲೈವ್ ಸ್ಟ್ರೀಮಿಂಗ್ ಮಾಡಬಹುದು) ಅದೇ ರೀತಿ
ಒಬ್ಬ ಸಾರ್ವಜನಿಕ ವ್ಯಕ್ತಿಯ ಬಗ್ಗೆ ಕೇಸ್ ಆಗಿದ್ದರೆ ಆ ಕೇಸ್ ನ ವಿಚಾರಣೆಯ ವಿಡಿಯೋ ದಾಖಲೆಗಳನ್ನು ಮತ್ತು ಸಾಕ್ಷಿಗಳ ಎಲ್ಲಾ ವಿವರಗಳನ್ನು ಪೋಲೀಸರು ಆಗಾಗ ಸಾರ್ವಜನಿಕವಾಗಿ ತೆರೆದಿಡಬೇಕು. ಒಬ್ಬ ಸಾರ್ವಜನಿಕ ವ್ಯಕ್ತಿಯ ವಿಚಾರಣೆ ಸಾರ್ವಜನಿಕವಾಗೇ ಸಂಪೂರ್ಣ ಪಾರದರ್ಶಕತೆಯಿಂದ ಆಗಬೇಕು, ಸಾಕ್ಷಿ ನಾಶ, ಪ್ರಭಾವಿಗಳ ಹಸ್ತಕ್ಷೇಪ, ಭ್ರಷ್ಟಾಚಾರ ಇವಕ್ಕೆಲ್ಲಾ ತೆರೆ ಎಳೆದಂತಾಗುತ್ತದೆ.

ಆಗ ರೇಣುಕಾ ಸ್ವಾಮಿ ಕುಟುಂಬಕ್ಕೆ, ಜನರಿಗೆ, ಟಿವಿ ಮಾಧ್ಯಮಗಳಿಗೆ ಮತ್ತು ದರ್ಶನ್ ಅಭಿಮಾನಿಗಳಿಗೆ ಮನಸಿನಲ್ಲಿ ಗೊಂದಲಗಳಿಲ್ಲದೇ ಪೊಲೀಸ್ ಮತ್ತು ಟಿವಿ ಮಾಧ್ಯಮಗಳ ಬಗ್ಗೆ ಇನ್ನೂ ಗೌರವ ಹೆಚ್ಚಾಗುತ್ತದೆ ಮತ್ತು ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಬರುತ್ತದೆʼʼಎಂದು ಬರೆದುಕೊಂಡಿದ್ದಾರೆ.

ದರ್ಶನ್‌ ಕೈವಾಡವೇನು?

ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಕಳುಹಿಸಿದ ಹಿನ್ನೆಲೆಯಲ್ಲಿ ದರ್ಶನ್‌ ಆಪ್ತರು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮತ್ತೊಂದಿಷ್ಟು ಮೂಲಗಳ ಪ್ರಕಾರ, ರೇಣುಕಾಸ್ವಾಮಿ ಮೇಲೆ ದರ್ಶನ್‌ ಅವರೇ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ರೇಣುಕಾಸ್ವಾಮಿ ಮೃತಪಟ್ಟಿದ್ದರು. ನಂತರ ಶವವನ್ನು ಚರಂಡಿ ಬಳಿ ಎಸೆಯಲಾಗಿತ್ತು ಎನ್ನಲಾಗಿದೆ.

Continue Reading

ಟಾಲಿವುಡ್

Ram Pothineni: ರಾಮ್ ಪೋತಿನೇನಿ ಅಭಿನಯದ ʻಡಬಲ್ ಇಸ್ಮಾರ್ಟ್ʼ ಬಿಡುಗಡೆಗೆ‌ ಮುಹೂರ್ತ ಫಿಕ್ಸ್!

Ram Pothineni: ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ.

VISTARANEWS.COM


on

Double iSmart to release on August 15
Koo

ಬೆಂಗಳೂರು: ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ನಟ ರಾಮ್ ಪೋತಿನೇನಿ (Ram Pothineni) ಕಾಂಬಿನೇಷನ್ ಮೇಲೆ ಸಿನಿಪ್ರಿಯರಿಗೆ ಭಾರಿ ನಿರೀಕ್ಷೆ ಇದೆ. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆಯೇ ‘ಡಬಲ್ ಇಸ್ಮಾರ್ಟ್’ ಚಿತ್ರದ ಟೀಸರ್​ ಮೂಡಿಬಂದಿದೆ. ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ‌ ನಿಗದಿಯಾಗಿದೆ. ಆಗಸ್ಟ್ 15ಕ್ಕೆ ಡಬಲ್ ಇಸ್ಮಾರ್ಟ್ ಚಿತ್ರ ತೆರೆಗೆ ಬರಲಿದೆ.

ಸೌತ್​ ಸಿನಿಮಾಗಳಲ್ಲಿ ಖಳನಾಗಿ ಅಬ್ಬರಿಸುತ್ತಿರುವ ಸಂಜಯ್ ದತ್ ಅವರು ‘ಡಬಲ್​ ಇಸ್ಮಾರ್ಟ್​’ ಚಿತ್ರದಲ್ಲೂ ವಿಲನ್​ ಆಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಕಾವ್ಯಾ ಥಾಪರ್ ನಟಿಸಿದ್ದಾರೆ.

ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ‘ಡಬಲ್​ ಇಸ್ಮಾರ್ಟ್​’ ಸಿನಿಮಾ ಬಿಡುಗಡೆ ಆಗಲಿದೆ. ಮಣಿ ಶರ್ಮಾ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಪುರಿ ಕನೆಕ್ಟ್ಸ್​’ ಬ್ಯಾನರ್ ಮೂಲಕ ಪುರಿ ಜಗನ್ನಾಥ್, ಚಾರ್ಮಿ ಕೌರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಈ‌ ಮೊದಲ ಬಂದ ಈ ಚಿತ್ರದ ಮೊದಲ ಸರಣಿ ಸಿನಿಮಾ 2019 ರಲ್ಲಿ ರಿಲೀಸ್ ಆಗಿತ್ತು. ಇದರಲ್ಲಿ ಕನ್ನಡತಿ ನಭಾ ನಟೇಶ್ ಅಭಿನಯಿಸಿದ್ದರು. ಆಗ ಈ ಸಿನಿಮಾ ಕರ್ಮಷಿಯಲಿ ಸಕ್ಸಸ್ ಆಗಿತ್ತು. ಆದರೆ ಈ ಸಿನಿಮಾ ಬಂದು 5 ವರ್ಷದ ಬಳಿಕ ಪಾರ್ಟ್-2 ಡಬಲ್ ಇಸ್ಮಾರ್ಟ್ ಸಿನಿಮಾ ಬರ್ತಿದೆ. ಟಾಲಿವುಡ್‌ನಲ್ಲಿ ಈಗಲೇ ಒಂದು ನಿರೀಕ್ಷೆಯನ್ನು ಕೂಡ ಹುಟ್ಟುಹಾಕಿದೆ ಅಂತ ಹೇಳಬಹುದು.

ಇದನ್ನೂ ಓದಿ: Ram Pothineni: ಡೈನಾಮಿಕ್ ಸ್ಟಾರ್ ರಾಮ್‌ – ಸಂಜಯ್ ದತ್ ಭರ್ಜರಿ ಜುಗಲ್ಬಂದಿ: `ಡಬಲ್ ಇಸ್ಮಾರ್ಟ್‘ ಟೀಸರ್‌ ಔಟ್‌!

ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬರುತ್ತಿದೆ. ಮಣಿ ಶರ್ಮಾ ಸಂಗೀತ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ನಡಿ ಪೂರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣದಲ್ಲಿ ಚಿತ್ರ ಅದ್ಧೂರಿಯಾಗಿ ಮೂಡಿಬರುತ್ತಿದೆ.

Continue Reading
Advertisement
Sandeep Lamichhane
ಕ್ರೀಡೆ7 seconds ago

Sandeep Lamichhane: ಪಾಕ್​ ಆಟಗಾರನನ್ನು ಹಿಂದಿಕ್ಕಿ ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ನೇಪಾಳ ಸ್ಪಿನ್ನರ್​

Yogi Adithyanath
Latest2 mins ago

Yogi Adithyanath: ಎರಡು ವರ್ಷಗಳ ಬಳಿಕ ತಾಯಿಯನ್ನು ಭೇಟಿಯಾದ ಯೋಗಿ ಆದಿತ್ಯನಾಥ್

Reasi Terror Attack
ವೈರಲ್ ನ್ಯೂಸ್13 mins ago

Reasi Terror Attack: ಪಾಕಿಸ್ತಾನದಲ್ಲಿ ರಿಯಾಸಿ ಭಯೋತ್ಪಾದಕ ದಾಳಿಯ ಮಾಸ್ಟರ್‌ ಮೈಂಡ್‌ನ ಹತ್ಯೆ; ವಿಡಿಯೊ ವೈರಲ್‌

Bakrid 2024
ಬೆಂಗಳೂರು26 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Actor Darshan Please leave Pavitra Darshan request to police
ಸಿನಿಮಾ38 mins ago

Actor Darshan: ಪ್ಲೀಸ್‌ ಪವಿತ್ರಾಳನ್ನು ಬಿಟ್ಟು ಬಿಡಿ ಎಂದು ಅಂಗಲಾಚುತ್ತಿರುವ ದರ್ಶನ್‌?

Bakrid
Latest38 mins ago

Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

Real Estate
ವಾಣಿಜ್ಯ44 mins ago

Real Estate: ಹಲವರಿಗೆ ಮನೆ ಇಲ್ಲ, ಇದ್ದವರು ಬಳಸುತ್ತಿಲ್ಲ! ದೇಶದಲ್ಲಿ 1 ಕೋಟಿಗೂ ಹೆಚ್ಚು ಫ್ಲ್ಯಾಟ್ ಗಳು ಖಾಲಿ ಬಿದ್ದಿವೆ!

Smriti Mandhana
ಕ್ರೀಡೆ45 mins ago

Smriti Mandhana: ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಸ್ಮೃತಿ ಮಂಧಾನ

Actress Nayanathara
Latest56 mins ago

Actress Nayanathara: ‘ಬಾಹುಬಲಿ’ ಸಿನಿಮಾ ದೃಶ್ಯದ ಮರುಸೃಷ್ಟಿಯಲ್ಲಿ ವಿಘ್ನೇಶ್ ಶಿವನ್ ಪುತ್ರರು!

Actor Darshan Rakshak Bullet Not Celebrating His Birthday Due To Darshan Arrest
ಸ್ಯಾಂಡಲ್ ವುಡ್59 mins ago

Actor Darshan: ಮನಸ್ಸಿಗೆ ಹತ್ತಿರವಾದವರು ಕಷ್ಟ ಅನುಭವಿಸುತ್ತಿದ್ದಾರೆ; ಬರ್ತ್‌ಡೇ ಕ್ಯಾನ್ಸಲ್ ಮಾಡಿದ ರಕ್ಷಕ್ ಬುಲೆಟ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bakrid 2024
ಬೆಂಗಳೂರು26 mins ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ19 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ20 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

ಟ್ರೆಂಡಿಂಗ್‌