UK Politics: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ, ಸುನಕ್‌ ಮುಂದಿನ ಪಿಎಂ? - Vistara News

ಪ್ರಮುಖ ಸುದ್ದಿ

UK Politics: ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ರಾಜೀನಾಮೆ, ಸುನಕ್‌ ಮುಂದಿನ ಪಿಎಂ?

ಬ್ರಿಟಿಷ್‌ ಪ್ರಧಾನ ಮಂತ್ರಿ ಬೋರಿಸ್‌ ಜಾನ್ಸನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನೈತಿಕ ಮತ್ತು ವಿಶ್ವಾಸದ ಪ್ರಶ್ನೆಯಲ್ಲಿ ಅವರು ಇತ್ತೀಚೆಗೆ ಭಾರಿ ಹಿನ್ನಡೆ ಅನುಭವಿಸಿದ್ದರು.

VISTARANEWS.COM


on

Boris Johnson
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಬ್ರಿಟಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಚಿವರ ಸರಣಿ ರಾಜೀನಾಮೆ, ಹಿಂದೆಂದೂ ಕಂಡರಿಯದಷ್ಟು ನಾಯಕರ ವಲಸೆ ಮತ್ತು ಪದತ್ಯಾಗಕ್ಕೆ ಕೇಳಿಬಂದ ತೀವ್ರ ಒತ್ತಡಕ್ಕೆ ಮಣಿದ ಹಿರಿಯ ನಾಯಕ ಇದೀಗ ಹುದ್ದೆ ತೊರೆಯಲು ನಿರ್ಧರಿಸಿದ್ದಾರೆ. ಗುರುವಾರ ಅವರು ಪದತ್ಯಾಗ ಮಾಡಿದ್ದು, ಹಂಗಾಮಿ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ.

ಸಚಿವರೊಬ್ಬರ ಅಕ್ರಮ ಸಂಬಂಧದ ಬಗ್ಗೆ ಅರಿವಿದ್ದರೂ ಸುಳ್ಳು ಹೇಳಿದ್ದಾರೆಂಬ ನೈತಿಕತೆ ಪ್ರಶ್ನೆ ಮತ್ತು ವಿಶ್ವಾಸಾರ್ಹತೆ ಕುಸಿದ ಹಿನ್ನೆಲೆಯಲ್ಲಿ ಸಚಿವರೇ ಬೋರಿಸ್‌ ಜಾನ್ಸನ್‌ ಅವರ ವಿರುದ್ಧ ಬಂಡಾಯ ಸಾರಿದ್ದರು. ಹಣಕಾಸು ಸಚಿವ ರಿಷಿ ಸುನಕ್‌ ಹಾಗೂ ಆರೋಗ್ಯ ಕಾರ್ಯದರ್ಶಿ ಸಾಜಿದ್‌ ಜಾವಿದ್‌ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

ಬೋರಿಸ್‌ ಜಾನ್ಸನ್‌ ಅವರು ಕಳೆದ ವರ್ಷದ ಆರಂಭದಿಂದಲೂ ಬ್ರಿಟನ್‌ ಜನತೆಯ ಮುಂದೆ ವಿಶ್ವಾಸದ ಕೊರತೆಯನ್ನು ಎದುರಿಸುತ್ತಿದ್ದಾರೆ. ಕೋವಿಡ್‌ ಸನ್ನಿವೇಶವನ್ನು ಅವರು ಸಾಕಷ್ಟು ಸಮರ್ಪಕವಾಗಿ ಎದುರಿಸಿರಲಿಲ್ಲ ಎಂಬ ಆಕ್ಷೇಪ ಅವರ ಮೇಲೆ ಇದೆ. ಬ್ರಿಟನ್‌ ಕೊರೊನಾ ಸಾಂಕ್ರಾಮಿಕವನ್ನು ಎದುರಿಸುತ್ತಿದ್ದಾಗ ಪ್ರಧಾನಿ ಬೋರಿಸ್‌ ಹಾಗೂ ಅವರ ಗೆಳೆಯರು ಡೌನಿಂಗ್‌ ಸ್ಟ್ರೀಟ್‌ನಲ್ಲಿರುವ ಪ್ರಧಾನಿಯ ಅಧಿಕೃತ ನಿವಾಸದಲ್ಲಿ ಆಲ್ಕೋಹಾಲ್‌ ಪಾರ್ಟಿ ನಡೆಸಿದ್ದರು. ಇದು ವಿವಾದದ ಕಿಡಿ ಹೊತ್ತಿಸಿತ್ತು.

ಇದರಿಂದ ಅವರು ತಮ್ಮ ಪಕ್ಷವಾದ ಕನ್ಸರ್ವೇಟಿವ್‌ ಪಾರ್ಟಿಯಲ್ಲೇ ಸಾಕಷ್ಟು ಶಾಸಕರ ವಿರೋಧ, ಭಿನ್ನಮತ ಎದುರಿಸಬೇಕಾಗಿ ಬಂದಿತ್ತು. ಬೋರಿಸ್‌ ರಾಜೀನಾಮೆ ನೀಡಬೇಕು ಎಂದು ದೊಡ್ಡದೊಂದು ಬಣ ಒತ್ತಾಯಿಸಿತ್ತು. ಬೋರಿಸ್‌ ನಾಯಕತ್ವದಲ್ಲಿ ಮುಂದುವರಿಯುವುದನ್ನು ಆಕ್ಷೇಪಿಸಿ ಸರಕಾರದ ಹಲವು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಜೂನ್‌ 6ರಂದು ಬೋರಿಸ್‌ ನಾಯಕತ್ವದ ಬಗೆಗೆ ನಡೆದ ವಿಶ್ವಾಸಮತ ಪರೀಕ್ಷೆಯಲ್ಲಿ, 211: 148 ಮತಗಳಲ್ಲಿ ಬೋರಿಸ್‌ ಗೆದ್ದಿದ್ದರು. ಇದರ ನಂತರ ನಡೆದ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮತದಾರರು ಕನ್ಸರ್ವೇಟಿವ್‌ ಪಕ್ಷವನ್ನು ಕೈಬಿಟ್ಟಿದ್ದರು. ಹೀಗೆ ಹಂತ ಹಂತವಾಗಿ ವಿಶ್ವಾಸ ಕಳೆದುಕೊಳ್ಳುತ್ತಿರವ ಬೋರಿಸ್‌ ಜಾನ್ಸನ್‌ ಅವರು ಈಗ ಹುದ್ದೆಯಿಂದ ನಿರ್ಗಮಿಸಿದ್ದಾರೆ.

ಇನ್ಫೋಸಿಸ್‌ ಸ್ಥಾಪಕರಾದ ನಾರಾಯಣಮೂರ್ತಿ, ಸುಧಾ ಮೂರ್ತಿ ದಂಪತಿಯ ಅಳಿಯ ಋಷಿ ಸುನಕ್‌ ಅವರು ಮುಂದಿನ ಪ್ರಧಾನಿಯಾಗುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Actress Ramya: ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಾಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ಯಾರನ್ನೋ ಕೊಲ್ಲಬಾರದು. ನೀವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇ ಆದರೆ, ಒಂದು ದೂರು ದಾಖಲಿಸಿ ಅಷ್ಟೆ ಎಂಬುದಾಗಿ ನಟಿ ರಮ್ಯಾ ಅವರು ಪೋಸ್ಟ್‌ ಮಾಡಿದ್ದಾರೆ. ಆ ಮೂಲಕ ಕೊಲೆ ಆರೋಪ ಹೊತ್ತಿರುವ ದರ್ಶನ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ.

VISTARANEWS.COM


on

Actress Ramya
Koo

ಬೆಂಗಳೂರು: ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ರೇಣುಕಾಚಾರ್ಯ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan), ಪವಿತ್ರಾ ಗೌಡ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್‌ ವಿರುದ್ಧ ರಾಜ್ಯಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಿದೆ. ಇನ್ನು, ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ (Actress Ramya) ಅವರು ನಟನ ವಿರುದ್ಧ ಆಕ್ರೋಶ ಮುಂದುವರಿಸಿದ್ದಾರೆ. ಈಗ ಮತ್ತೆ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ ದರ್ಶನ್‌ಗೆ ಕ್ಲಾಸ್‌ ತೆಗೆದುಕೊಂಡಿರುವ ಅವರು, “ಕಾನೂನಿಗಿಂತ ಯಾರೂ ದೊಡ್ಡವರಲ್ಲ” ಎಂದು ಹೇಳಿದ್ದಾರೆ.

“ಸಾಮಾಜಿಕ ಜಾಲತಾಣದಲ್ಲಿ ಸರಿಯಾದ ಉದ್ದೇಶದಿಂದಾಗಿಯೇ ಬ್ಲಾಕ್‌ ಎಂಬ ಆಯ್ಕೆಯನ್ನು ನೀಡಲಾಗಿದೆ. ಅತಿರೇಕದ ಟ್ರೋಲ್‌ ಮಾಡಿದಾಗ ನೀವು ದೂರು ನೀಡಬಹುದು. ಅತಿ ಕೆಟ್ಟ ಭಾಷೆಯನ್ನು ಬಳಸಿ ನನ್ನ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಬೇರೆ ನಟರ ಬಗ್ಗೆಯೂ ಟ್ರೋಲ್‌ ಮಾಡಿದ್ದಾರೆ. ಟ್ರೋಲ್‌ ಮಾಡುವವರು ಬೇರೆಯವರ ಹೆಂಡತಿಯರು ಹಾಗೂ ಮಕ್ಕಳನ್ನೂ ಬಿಟ್ಟಿಲ್ಲ. ಇಂತಹ ಕೆಟ್ಟ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ನಾನೇ ಒಂದಷ್ಟು ಟ್ರೋಲಿಗರ ವಿರುದ್ಧ ಕೇಸ್‌ ದಾಖಲಿಸಿದ್ದೇನೆ. ದೇಶದ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಇವರು ಸಾಮಾಜಿಕ ಜಾಲತಾಣದಲ್ಲಿ ಹೀಗೇಕೆ ಸಮಯ ಹಾಳು ಮಾಡುತ್ತಿದ್ದಾರೆ? ಅವರ ಭವಿಷ್ಯದ ಮೇಲೆಯೇ ಏಕೆ ಕಲ್ಲು ಹಾಕೊಳ್ಳುತ್ತಿದ್ದಾರೆ ಎಂಬುದಾಗಿ ಅನಿಸಿದ್ದಿದೆ” ಎಂದು ರಮ್ಯಾ ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿದ್ದಾರೆ.

ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ

“ಕಾನೂನಿನ ಮುಂದೆ ಎಲ್ಲರೂ ಸಮಾನರು. ಕಾನೂನಿಗಿಂತ ಯಾರು ದೊಡ್ಡವರಲ್ಲ. ಹಾಗಾಗಿ, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ನೀವು ಯಾರನ್ನೋ ಕೊಲ್ಲಬಾರದು. ನೀವು ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟಿದ್ದೇ ಆದರೆ, ಒಂದು ದೂರು ದಾಖಲಿಸಿ ಅಷ್ಟೆ. ಹಾಗೆಯೇ, ಥ್ಯಾಂಕ್‌ಲೆಸ್‌ ಜಾಬ್‌ ಮಾಡುತ್ತಿರುವ ಪೊಲೀಸರ ಅವಿರತ ಶ್ರಮವನ್ನೂ ನಾವು ಸ್ಮರಿಸಬೇಕಿದೆ ಹಾಗೆಯೇ, ಯಾವುದೇ ರಾಜಕೀಯ ಒತ್ತಡಕ್ಕೆ ಸಿಲುಕದೆ ಪೊಲೀಸರು ಕಾರ್ಯ ನಿರ್ವಹಿಸುತ್ತಾರೆ ಎಂಬ ವಿಶ್ವಾಸವಿದೆ” ಎಂದು ರಮ್ಯಾ ಪೋಸ್ಟ್‌ ಮಾಡಿದ್ದಾರೆ. ಹಾಗೆಯೇ, ಜಸ್ಟಿಸ್‌ ಫಾರ್‌ ರೇಣುಕಾಸ್ವಾಮಿ, ದರ್ಶನ್‌, ಯಡಿಯೂರಪ್ಪ ಹಾಗೂ ಪ್ರಜ್ವಲ್‌ ರೇವಣ್ಣ ಎಂಬ ಹ್ಯಾಶ್‌ಟ್ಯಾಗ್‌ಅನ್ನೂ ಬಳಸಿದ್ದಾರೆ.

ನಟ ದರ್ಶನ್​ಗೆ ಮರಣದಂಡನೆಯಾಗಲಿ ಎಂಬ ಆಶಯವನ್ನು ಇದಕ್ಕೂ ಮೊದಲು ರಮ್ಯಾ ವ್ಯಕ್ತಪಡಿಸಿದ್ದರು. ಕೊಲೆ ಪ್ರಕರಣದ ಕುರಿತು ಎಕ್ಸ್​ನಲ್ಲಿ ಪೋಸ್ಟ್​​ ಮಾಡಿರುವ ರಮ್ಯಾ ಐಪಿಸಿ ಸೆಕ್ಷನ್​ 302ರನ್ನು ಉಲ್ಲೇಖಿಸಿ ಅದರ ಅನ್ವಯ ದರ್ಶನ್​ಗೆ ಕಠಿಣ ಶಿಕ್ಷೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದರು. ಕೊಲೆಯಾಗಿರುವ ವ್ಯಕ್ತಿಯ ಪರವಾಗಿ ನಿಂತಿರುವ ರಮ್ಯಾ, ದರ್ಶನ್​ಗೆ ಇಂಡಿಯನ್ ಪಿನಲ್​ ಕೋಡ್​ 302ರ ಪ್ರಕಾರ ಯಾವ ಪ್ರಕಾರಣದ ಶಿಕ್ಷೆಯಾಗುತ್ತದೆ ಎಂಬ ಬಗ್ಗೆ ರಿಪೋಸ್ಟ್ ಮಾಡಿದ್ದರು. ಈ ಸೆಕ್ಷನ್​ 302ರಲ್ಲಿ ಕೊಲೆ ಆರೋಪ ಸಾಬೀತಾದರೆ ಅವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಮಾಹಿತಿ ಇರುವ ಪೋಸ್ಟ್‌ ಅನ್ನು ರಮ್ಯಾ ರಿಪೋಸ್ಟ್ ಮಾಡಿದ್ದರು. ಮತ್ತೊಂದು ಪೋಸ್ಟ್‌ನಲ್ಲಿ ಅವರು, “ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು” ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ: Actor Darshan: ಯಾರೇ ಆದ್ರೂ ನ್ಯಾಯ ಎತ್ತಿ ಹಿಡಿಯಬೇಕು; ದರ್ಶನ್ ವಿರುದ್ಧ ನಟಿ ರಮ್ಯಾ ಮತ್ತೊಂದು ಟ್ವೀಟ್‌!

Continue Reading

ದೇಶ

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

Union Budget 2024: ಜೂನ್‌ 24ರಿಂದ ಜುಲೈ 3ರವರೆಗೆ ಸಂಸತ್‌ ಅಧಿವೇಶನ ನಡೆಯಲಿದ್ದು, ಲೋಕಸಭೆ ಸ್ಪೀಕರ್‌ ಆಯ್ಕೆ, ನೂತನ ಸಂಸದರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಅಂದರೆ, ಜುಲೈ ಮೂರನೇ ವಾರದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ ಮಂಡನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Union Budget 2024
Koo

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಬಹುಮತ ಸಾಧಿಸಿದ್ದು, ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇನ್ನು, ನೂತನ ಸರ್ಕಾರ ರಚನೆಯಾಗುತ್ತಲೇ ಮೊದಲ ಬಜೆಟ್‌ ಮಂಡನೆ (Union Budget 2024) ಮಾಡಲಾಗುತ್ತದೆ. ಅದರಂತೆ, ಜುಲೈ 15-21ರ ಅವಧಿಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಒಂದು ವಾರದಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವಾಲಯದ ಅಧಿಕಾರಿಗಳು ಸೇರಿ ಹಲವರೊಂದಿಗೆ ಸಭೆ, ಸಮಾಲೋಚನೆ ನಡೆಸುವ ಮೂಲಕ ಬಜೆಟ್‌ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಲಿದ್ದಾರೆ. ಅಷ್ಟೇ ಅಲ್ಲ, ಜೂನ್‌ 22ರಂದು ನಿರ್ಮಲಾ ಸೀತಾರಾಮನ್‌ ನೇತೃತ್ವದಲ್ಲಿ 53ನೇ ಜಿಎಸ್‌ಟಿ ಸಮಿತಿ ಸಭೆ ನಡೆಯಲಿದ್ದು, ಅಧಿಕಾರಿಗಳ ಸಲಹೆ-ಸೂಚನೆಗಳನ್ನೂ ಸಚಿವೆ ಪಡೆಯಲಿದ್ದಾರೆ. ಬಜೆಟ್‌ ಮಂಡನೆ ದೃಷ್ಟಿಯಿಂದ ಜಿಎಸ್‌ಟಿ ಸಮಿತಿ ಸಭೆಯು ಕೂಡ ಪ್ರಾಮುಖ್ಯತೆ ಪಡೆದಿದೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಜುಲೈನಲ್ಲಿ ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ಇದನ್ನೂ ಓದಿ: G7 Summit: ಮೂರನೇ ಬಾರಿ ಪ್ರಧಾನಿಯಾದ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ; ಇಟಲಿಯ ಜಿ7 ಶೃಂಗಸಭೆಯಲ್ಲಿ ಭಾಗಿ

Continue Reading

ಕರ್ನಾಟಕ

ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಕಾನೂನು, ನ್ಯಾಯ, ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ, ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ನೀಡಿದರು. ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಮುಖ್ಯಾಂಶಗಳು ಇಲ್ಲಿವೆ.

VISTARANEWS.COM


on

Siddaramaiah
Koo

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ನೇತೃತ್ವದಲ್ಲಿ ಗುರುವಾರ (ಜೂನ್‌ 13) ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಸರ್ಕಾರಿ ನೌಕರರಿಗೆ ಮತ್ತೆ ನಿರಾಸೆಯಾಗಿದೆ. ರಾಜ್ಯದಲ್ಲಿ ಏಳನೇ ವೇತನ ಆಯೋಗದ (7th Pay Commission) ಜಾರಿ ಕುರಿತು ಸಚಿವ ಸಂಪುಟ ಸಭೆಯಲ್ಲಿ (Karnataka Cabinet Meeting) ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಇದರಿಂದಾಗಿ, ಏಳನೇ ವೇತನ ಆಯೋಗದ ಜಾರಿ ಕುರಿತು ಭಾರಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಇದರಿಂದ ನಿರಾಸೆಯಾದಂತಾಗಿದೆ.

ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಪುಟ ಸಭೆಯ ಬಳಿಕ ಕಾನೂನು, ನ್ಯಾಯ, ಮಾನವಹಕ್ಕುಗಳು, ಸಂಸದೀಯ ವ್ಯವಹಾರ ಮತ್ತು ಶಾಸನರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ಅವರು ಸುದ್ದಿಗೋಷ್ಠಿ ನಡೆಸಿ, ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಕುರಿತು ಮಾಹಿತಿ ನೀಡಿದರು. ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ತೀರ್ಮಾನಗಳ ಮುಖ್ಯಾಂಶಗಳು ಇಲ್ಲಿವೆ.

Reservation in outsourcing

ಸಂಪುಟ ಸಭೆಯಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು

  • ಕಳೆದ ಸಚಿವ ಸಂಪುಟ ಸಭೆಯಲ್ಲಿ 147 ಟೆಂಡರ್‌ಗಳಿಗೆ ಟೆಂಡರ್ ಕರೆಯಲು ನೀಡಿರುವ ಆಡಳಿತಾತ್ಮಕ ಮಂಜೂರಾತಿಯ ಪೈಕಿ ಎಷ್ಟು ಟೆಂಡರ್ ಕರೆದು ಕೆಲಸ ಪ್ರಾರಂಭವಾಗಿದೆ ಎಂದು ಅವಲೋಕಿಸಿ, 94 ಪ್ರಸ್ತಾವಗಳಿಗೆ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ. 19 ಪ್ರಸ್ತಾವನೆಗಳು ಪರಿಶೀಲನೆಯಲ್ಲಿದ್ದು, 18 ಪ್ರಸ್ತಾವನೆಗಳಿಗೆ ಕಾರ್ಯಾದೇಶ ನೀಡಲಾಗಿದೆ. 7 ಕಾಮಗಾರಿಗಳು ಮುಕ್ತಾಯವಾಗಿವೆ. 53 ಪ್ರಸ್ತಾವನೆಗಳು ಟೆಂಡರ್ ಕರೆಯಲು ಬಾಕಿ ಇವೆ. ಸಚಿವ ಸಂಪುಟ ಇವುಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಆಡಾಳಿತಾತ್ಮಕ ಮಂಜೂರಾತಿ ನೀಡಿರುವ ಎಲ್ಲ ಟೆಂಡರ್‌ಗಳಿಗೆ ಮುಂದಿನ ಒಂದು ತಿಂಗಳೊಳಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
  • ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಡಿ 2025 ಫೆಬ್ರವರಿ 12-14ರವರೆಗೆ ಇನ್ವೆಸ್ಟ್ ಕರ್ನಾಟಕ -2025 ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲು ಸಚಿವ ಸಂಪುಟ ಅನುಮೋದಿಸಿದೆ. ಈಗಾಗಲೇ 75 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹೆಚ್ಚುವರಿ 15 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಒಪ್ಪಿದೆ.
  • ಕಾರ್ಮಿಕ ಇಲಾಖೆಯಲ್ಲಿ ಇಎಸ್‍ಐ ನಲ್ಲಿ ಗುತ್ತಿಗೆ ವೈದ್ಯರ ವಿಲೀನ ಮಾಡುವ ಬಗ್ಗೆ ಚರ್ಚೆಯಾಗಿ ಮುಂದೂಡಲಾಗಿದೆ. ಕಾನೂನು ಸಲಹೆ ಪಡೆಯಲು ಸೂಚಿಸಲಾಗಿದೆ.
  • ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ.
  • ಸಾರಿಗೆ ಇಲಾಖೆಯಲ್ಲಿ ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಹೊಸದಾಗಿ 112 ಪೂರ್ಣ ಕವಚ ನಿರ್ಮಿತ ಬಿಎಸ್. 4 ವೇಗದೂತ ಬಸ್ಸುಗಳನ್ನು 46.48 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲು ಪ್ರಸ್ತಾವನೆಯನ್ನು ಸಚಿವ ಸಂಪುಟ ಒಪ್ಪಿದೆ. 62 ಹೊಸ ಬಸ್ಸುಗಳನ್ನು ಖರೀದಿಸಲು ಹಾಗೂ 50 ಬಸ್ಸುಗಳನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ವರ್ಗಾಯಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ಗಣಿಗುತ್ತಿಗೆ ಅವಧಿ ಮುಕ್ತಾಯಗೊಂಡಿರುವ ಮೆ: ಭಾರತ್ ಚಿನ್ನದ ಗಣಿ ಸಂಸ್ಥೆ, ಕೆ.ಜಿಎಫ್ ಅವರು ಪಡೆದಿರುವ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ಟೇಲಿಂಗ್ ಡಂಪ್ಸ್ ಗಳಿಗೆ ಎಂ.ಎಂ.ಡಿ.ಆರ್ ಕಾಯ್ದೆಯ ಕಲಂ 17 ರನ್ವಯ ಕೇಂದ್ರ ಸರ್ಕಾರದಿಂದ ಗಣಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಸ್ತಾವನೆ ಇದ್ದು, ಹೆಚ್ಚಿನ ತಾಂತ್ರಿಕ ವಿವರಗಳು ಅಗತ್ಯವಿರುವುದರಿಂದ ಇದನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ.
  • ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆಗಾಗಿ Knowledge Partner ಆಯ್ಕೆ ಮಾಡಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇ-ಟೆಂಡರ್ ಕರೆದಿದ್ದು ಟೆಂಡರ್ ಪ್ರಕಾರ ಈಗಾಗಲೇ ಮೆ: ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ ಇಂಡಿಯಾ ಪ್ರೈ ಲಿ., ಇವರನ್ನು ಜಿಎಸ್‍ಟಿ ಒಳಗೊಂಡಂತೆ 21 ಕೋಟಿ ರೂ. ವೆಚ್ಚದಲ್ಲಿ Knowledge Partner ಆಗಿ ನೇಮಕ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.
  • ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯಡಿ ರಾಜ್ಯದಲ್ಲಿ ಕಾನೂನು ಮತ್ತು ನೀತಿಗೆ ಅನುಮೋದನೆ ನೀಡುವ ಬಗ್ಗೆ ಎರಡು ಮೂರು ವಿಚಾರಗಳಲ್ಲಿ ಬದಲಾವಣೆ ಅಗತ್ಯವನ್ನು ಮನಗಂಡು ಮುಂದೂಡಲಾಗಿದೆ.
  • ಏಳನೇ ವೇತನ ಆಯೋಗದ ಬಗ್ಗೆ ಅಧಿಕೃತ ಪ್ರಸ್ತಾವನೆ ಬಂದಿದ್ದು ಈ ಬಗ್ಗೆ ಯಾವುದೇ ನಿರ್ಣಯಗಳಾಗಿಲ್ಲ.
  • ರಾಜ್ಯದ ಆಡಳಿತವನ್ನು ಹೆಚ್ಚು ಬಿಗಿಯಾಗಿ, ಪರಿಣಾಮಕಾರಿಯಾಗಿ, ಜನಸ್ನೇಹಿಯಾಗಿ ಮಾಡಬೇಕು, ವಿಳಂಬ ಆಗದ ಹಾಗೇ ಕೆಲಸಗಳಾಗಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡಿದ್ದಾರೆ.

ಇದನ್ನೂ ಓದಿ: Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Continue Reading

ಕರ್ನಾಟಕ

Actor Darshan: ಅಪ್ಪನನ್ನು ಬೈದಿದ್ದಕ್ಕೆ ಥ್ಯಾಂಕ್ಸ್‌ ಎಂದ ದರ್ಶನ್‌ ಪುತ್ರ ವಿನೀಶ್;‌ ಪೋಸ್ಟ್‌ನಲ್ಲಿ ಇನ್ನೇನಿದೆ?

Actor Darshan: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆಯ ಪ್ರಕರಣದಲ್ಲಿ ದರ್ಶನ್‌ ಸೇರಿ ಹಲವರನ್ನು ಬಂಧಿಸಲಾಗಿದ್ದು, ಪೊಲೀಸರು ನಿರಂತರವಾಗಿ ತನಿಖೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ, ದರ್ಶನ್‌ ಅವರ ಪುತ್ರ ವಿನೀಶ್‌ ತೂಗುದೀಪ ಬೇಸರದ ಪೋಸ್ಟ್‌ ಹಂಚಿಕೊಂಡಿದ್ದಾನೆ. ನನ್ನ ತಂದೆ ಹಾಗೂ ತಾಯಿಗೆ ಇಂತಹ ಕಷ್ಟದ ಸಮಯದಲ್ಲಿ ಬೆಂಬಲದ ಅವಶ್ಯಕತೆ ಇದೆ ಎಂದು ಹೇಳಿದ್ದಾನೆ.

VISTARANEWS.COM


on

Actor Darshan
Koo

ಬೆಂಗಳೂರು: ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ರೇಣುಕಾಚಾರ್ಯ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ (Actor Darshan), ಪವಿತ್ರಾ ಗೌಡ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ. ರಾಜ್ಯಾದ್ಯಂತ ನಟ ದರ್ಶನ್‌ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಟನ ವಿರುದ್ಧ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ, ದರ್ಶನ್‌ ಪುತ್ರ ವಿನೀಶ್‌ ತೂಗುದೀಪ (Vineesh Thoogudeepa) ಭಾವನಾತ್ಮಕ ಪೋಸ್ಟ್‌ ಮಾಡಿದ್ದಾನೆ. “ನನ್ನ ತಂದೆಯನ್ನು ಕೆಟ್ಟ ಪದಗಳಿಂದ ನಿಂದಿಸಿದ ನಿಮಗೆಲ್ಲ ಧನ್ಯವಾದʼ ಎಂಬ ಬೇಸರದ ಪೋಸ್ಟ್‌ಅನ್ನು ವಿನೀಶ್‌ ಹಂಚಿಕೊಂಡಿದ್ದಾನೆ.

“ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ನಾನು 15 ವರ್ಷದ ಬಾಲಕ, ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ. ಇಂತಹ ಕೆಟ್ಟ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನಗೆ ಶಾಪ ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ” ಎಂದು ತಂದೆಯ ಬಂಧನ, ಜನರ ಆಕ್ರೋಶ, ಕೆಟ್ಟ ಕಮೆಂಟ್‌ಗಳ ಬಗ್ಗೆ ವಿನೀಶ್‌ ತೂಗುದೀಪ ಬೇಸರದ ಪೋಸ್ಟ್‌ ಮಾಡಿದ್ದಾನೆ.

ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್‌ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್‌ ಸೇರಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.

ಕೊನೆಗೆ ನಟ ದರ್ಶನ್‌ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್‌ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ರೇಣುಕಾಸ್ವಾಮಿಗೆ ಒದ್ದಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ದರ್ಶನ್‌ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Actor Darshan: ʻಡೆವಿಲ್ʼ ಸಿನಿಮಾಗೆ ದರ್ಶನ್‌ ಪಡೆದಿದ್ದು ಬರೋಬ್ಬರಿ 22 ಕೋಟಿ ರೂ.; ಶಾಕ್‌ನಲ್ಲಿ ನಿರ್ಮಾಪಕ!

Continue Reading
Advertisement
Actress Ramya
ಕರ್ನಾಟಕ29 mins ago

Actress Ramya: ಕಾನೂನಿಗಿಂತ ಯಾರೂ ದೊಡ್ಡೋರಲ್ಲ; ದರ್ಶನ್‌ಗೆ ಮತ್ತೆ ನಟಿ ರಮ್ಯಾ ಕ್ಲಾಸ್!

Namma Clinic
ಕರ್ನಾಟಕ30 mins ago

Namma Clinic: ಬಸ್‌ ನಿಲ್ದಾಣ ಸೇರಿದಂತೆ 254 ಕಡೆ ʼನಮ್ಮ ಕ್ಲಿನಿಕ್‌ʼ ಸ್ಥಾಪನೆ

Maruti Suzuki
ಆಟೋಮೊಬೈಲ್1 hour ago

Maruti Suzuki: ಮಾರುತಿ ಸುಜುಕಿ ಸಿಎನ್‌ಜಿ ವಾಹನದ ಟೀಸರ್ ಔಟ್‌; ಹಲವು ವೈಶಿಷ್ಟ್ಯಗಳ ನಿರೀಕ್ಷೆ

Reliance Retail Tira unveils skin care brand Akind
ದೇಶ2 hours ago

Reliance Retail: ಚರ್ಮ ರಕ್ಷಣೆಯ ʼಅಕೈಂಡ್ʼ ಬ್ರಾಂಡ್‌ನ ಕ್ರೀಮ್‌ ಬಿಡುಗಡೆ

Union Budget 2024
ದೇಶ2 hours ago

Union Budget 2024: ಮೋದಿ 3.0 ಸರ್ಕಾರದ ಮೊದಲ ಬಜೆಟ್‌ ಯಾವಾಗ? ಇಲ್ಲಿದೆ ಬಿಗ್‌ ಅಪ್‌ಡೇಟ್‌

AIDSO protest demanding investigation into corruption in NEET entrance exam
ರಾಯಚೂರು2 hours ago

Raichur News: ನೀಟ್ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಮಾನ್ವಿಯಲ್ಲಿ ಎಐಡಿಎಸ್ಒ ಪ್ರತಿಭಟನೆ

Joshimath Teshil Now Jyotirmath
ದೇಶ2 hours ago

Joshimath Teshil Now Jyotirmath: ಉತ್ತರಾಖಂಡದ ಜೋಶಿಮಠ ಈಗ ಜ್ಯೋತಿರ್ಮಠ!

ATM Cash Withdrawal Fee
ವಾಣಿಜ್ಯ2 hours ago

ATM Cash Withdrawal Fee: ಎಟಿಎಂ ನಗದು ಹಿಂಪಡೆಯುವಿಕೆ ಶುಲ್ಕ 21 ರೂ.ಗೆ ಏರಿಕೆ?

Siddaramaiah
ಕರ್ನಾಟಕ3 hours ago

ಸರ್ಕಾರಿ ನೌಕರರಿಗೆ ನಿರಾಸೆ; ಸಚಿವ ಸಂಪುಟ ಸಭೆಯಲ್ಲಿ 7ನೇ ವೇತನ ಆಯೋಗದ ಬಗ್ಗೆ ಯಾವುದೇ ನಿರ್ಣಯ ಇಲ್ಲ!

NEET UG Result 2024
ಶಿಕ್ಷಣ3 hours ago

NEET UG Result 2024: ಏನಿದು ನೀಟ್‌ ವಿವಾದ? ಗ್ರೇಸ್‌ ಅಂಕ ಕೊಟ್ಟಿದ್ಯಾಕೆ? ಮರು ಪರೀಕ್ಷೆ ಮಾಡೋದ್ಯಾಕೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ2 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ2 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ2 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ6 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ6 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌