Shoaib Akhtar: ಭಾರತದ ಹಣದಿಂದ ಪಾಕ್​ ಆಟಗಾರರು ಬದುಕುತ್ತಿದ್ದಾರೆ; ಅಖ್ತರ್ ಬೌನ್ಸರ್​ - Vistara News

ಕ್ರಿಕೆಟ್

Shoaib Akhtar: ಭಾರತದ ಹಣದಿಂದ ಪಾಕ್​ ಆಟಗಾರರು ಬದುಕುತ್ತಿದ್ದಾರೆ; ಅಖ್ತರ್ ಬೌನ್ಸರ್​

ನಾವು ಭಾರತವನ್ನು ಎಷ್ಟೇ ವಿರೋಧ ಮಾಡಿದರೂ ಅವರ ಋಣದಿಂದಲೇ ನಮ್ಮ ದೇಶದ ಕ್ರಿಕೆಟ್​ ಜೀವಂತವಾಗಿದೆ ಎಂದು ಅಖ್ತರ್​ ಹೇಳಿದ್ದಾರೆ.

VISTARANEWS.COM


on

Pakistani former cricketer Shoaib Akhtar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರಾಚಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್​ ಅಖ್ತರ್(Shoaib Akhtar)​ ಹಲವು ಬಾರಿ ಭಾರತ ಆಟಗಾರರ ಪರ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್​ ಆಟಗಾರರು ಭಾರತದ ಹಣದಿಂದ ಬುದುಕುತ್ತಿದ್ದಾರೆ ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಏಷ್ಯಾ ಕಪ್(Asia Cup 2023)​ ಮತ್ತು ಏಕದಿನ ವಿಶ್ವಕಪ್​ಗೆ(ICC World Cup 2023) ಕೆಲವೇ ದಿನಗಳು ಬಾಕಿ ಇರುವಾಗ ಅಖ್ತರ್​ ಈ ಹೇಳಿಕೆ ನೀಡಿರುವುದು ಪಾಕಿಸ್ತಾನಕ್ಕೆ ಮುಜುಗರ ಉಂಟುಮಾಡಿದೆ. ಹಿರಿಯ ಕ್ರೀಡಾ ಪತ್ರಕರ್ತ ಬೋರಿಯಾ ಮಜುಂದಾರ್ ಅವರೊಂದಿನ ವಿಶೇಷ ಸಂದರ್ಶನವೊಂದರಲ್ಲಿ ಮಾತನಾಡಿದ ಅಖ್ತರ್, ಬಿಸಿಸಿಐ(BCCI) ಪ್ರಸ್ತುತ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಐಸಿಸಿಯ ಆದಾಯಕ್ಕೆ ಭಾರತೀಯ ಕ್ರಿಕೆಟ್ ಮಂಡಳಿ ಅತಿ ಹೆಚ್ಚು ಕೊಡುಗೆ ನೀಡುತ್ತಿದೆ. ಭಾರತದಿಂದ ಪಾಕಿಸ್ತಾನ ಮಾತ್ರವಲ್ಲದೆ ಹಲವು ಕ್ರಿಕೆಟ್ ಮಂಡಳಿಗಳು ನೆರವು ಪಡೆಯುತ್ತಿವೆ. ಹೀಗಾಗಿ ಪಾಕಿಸ್ತಾನದ ಆಟಗಾರರು ಭಾರತದ ಬಿಸಿಸಿಐಯಿಂದ ಬರುತ್ತಿರುವ ಹಣದಿಂದ ಬದುಕುತ್ತಿದ್ದಾರೆ ಎಂದಿದ್ದಾರೆ.

ಬಿಸಿಸಿಐ ದುಡ್ಡಿನಿಂದ ಪಾಕ್​ನಲ್ಲಿ ದೇಶಿಯ ಕ್ರಿಕೆಟ್​

ವಿಶ್ವ ಕ್ರಿಕೆಟ್‌ನಲ್ಲಿ ಬಿಸಿಸಿಐ ಎಷ್ಟು ಪ್ರಬಲವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಖ್ತರ್, ಭಾರತೀಯ ಕ್ರಿಕೆಟ್ ಮಂಡಳಿಯ ಮೂಲಕ ಐಸಿಸಿ ಗಳಿಸುವ ಆದಾಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಪಾಲು ಪಡೆಯುತ್ತದೆ. ಐಸಿಸಿಯಿಂದ ಪಡೆದ ಈ ಹಣದಿಂದಾಗಿ ಪಾಕ್​ ಕ್ರಿಕೆಟ್​ ಮಂಡಳಿ ದೇಶೀಯ ಕ್ರಿಕೆಟಿಗರಿಗೆ ಪಂದ್ಯದ ಶುಲ್ಕವನ್ನು ಪಾವತಿಸಲು ಸಾಧ್ಯವಾಗುತ್ತದೆ. ಒಂದೊಮ್ಮೆ ಬಿಸಿಸಿಐ ಈ ನಿರ್ಧಾರದಿಂದ ಹಿಂದೆ ಸರಿದರೆ ಪಾಕ್​ ಕ್ರಿಕೆಟ್​ ಮಂಡಳಿಯ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ನಾವು ಭಾರತವನ್ನು ಎಷ್ಟೇ ವಿರೋಧ ಮಾಡಿದರೂ ಅವರ ಋಣದಿಂದಲೇ ನಮ್ಮ ದೇಶದ ಕ್ರಿಕೆಟ್​ ಜೀವಂತವಾಗಿದೆ ಎಂದು ಅಖ್ತರ್​ ಹೇಳಿದರು.

ವಿಶ್ವಕಪ್​ ರೋಮಾಂಚನವಾಗಿ ಸಾಗಲಿದೆ

ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ ಕುರಿತಾಗಿಯೂ ಮಾತನಾಡಿದ ಅಖ್ತರ್​, ಈ ಬಾರಿಯ ವಿಶ್ವಕಪ್ ಟೂರ್ನಿ ಅತ್ಯಂತ ರೋಮಾಂಚಕಾರಿಯಾಗಿ ಮತ್ತು ಯಶಸ್ವಿಯಾಗಿ ನಡೆಯಲಿದೆ. ಈ ವಿಶ್ವಕಪ್‌ನಿಂದ ಬಿಸಿಸಿಐ ಮತ್ತು ಐಸಿಸಿ ಸಾಕಷ್ಟು ಹಣ ಗಳಿಸಲಿದೆ. ಇದರೊಂದಿಗೆ ಹಲವು ದೇಶದ ಕ್ರಿಕೆಟ್​ ಮಂಡಳಿಗೆ ದೊಡ್ಡ ಮಟ್ಟದ ಹಣ ಹರಿದು ಬರಲಿದೆ. ಹಾಗಾಗಿ ಭಾರತ ಈ ಬಾರಿಯ ವಿಶ್ವಕಪ್‌ನಿಂದ ಸಾಕಷ್ಟು ಹಣ ಗಳಿಸಬೇಕೆಂದು ನಾನು ಬಯಸುತ್ತೇನೆ. ಅನೇಕರು ಇದನ್ನು ಹೇಳುವುದಿಲ್ಲ ಆದರೆ ಐಸಿಸಿಯಲ್ಲಿ ಭಾರತ ಗಳಿಸುವ ಪಾಲು ಪಾಕಿಸ್ತಾನಕ್ಕೂ ಸಿಗುತ್ತದೆ ಎಂದು ನಾನು ಹಿಂಜರಿಕೆಯಿಲ್ಲದೆ ಹೇಳುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ Shoaib Akhtar : ಎಲ್ಲಿದ್ದಳು ಇಲ್ಲಿ ತನಕ; ಅಖ್ತರ್ ಪುತ್ರಿಯ ಚಿತ್ರ ನೋಡಿದ ನೆಟ್ಟಿಗರ ಅಚ್ಚರಿ!

ಪಾಕ್ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ

ಅಕ್ಟೋಬರ್​ 5ರಿಂದ ಭಾರತದಲ್ಲಿ ಆರಂಭಗೊಳ್ಳಲಿರುವ ಪ್ರತಿಷ್ಠಿತ ಏಕದಿನ ವಿಶ್ವಕಪ್​ನಲ್ಲಿ(ICC World Cup 2023) ಪಾಕಿಸ್ತಾನದ ಭಾಗಿಯಾಗುವ ಕುರಿತಂತೆ ಇದ್ದ ಎಲ್ಲ ಅನುಮಾನಗಳು ಕಳೆದ ವಾರ ಇತ್ಯರ್ಥಗೊಂಡಿತ್ತು. ಪಾಕ್‌ ವಿದೇಶಾಂಗ ಇಲಾಖೆಯು ಪಾಕ್‌ ಕ್ರಿಕೆಟ್‌ ತಂಡಕ್ಕೆ ಭಾರತ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿತ್ತು. ಇದೀಗ ಭಾರತಕ್ಕೆ ಬರುವ ಪಾಕಿಸ್ತಾನ ತಂಡಕ್ಕೆ ಹೆಚ್ಚುವರಿ ಭದ್ರತೆ ನೀಡಲಾಗುವುದಿಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ.

ಯಾವುದೇ ಕಾರಣಕ್ಕೂ ಹೆಚ್ಚುವರಿ ಭದ್ರತೆ ಇಲ್ಲ

ಪಾಕಿಸ್ತಾನದ ಮನವಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ(Ministry of External Affairs of India) ಅರಿಂದಮ್ ಬಾಗ್ಚಿ(Arindam Bagchi), ವಿಶ್ವಕಪ್‌ಗಾಗಿ ಭಾರತಕ್ಕೆ ಬರುವ ಇತರ ಎಲ್ಲ ತಂಡಗಳಂತೆ ಪಾಕಿಸ್ತಾನ ತಂಡಕ್ಕೂ ಆತಿಥ್ಯ ನೀಡಲಾಗುತ್ತದೆ. ಯಾವುದೇ ವಿಶೇಷ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪಾಕ್​ನ ಕುತಂತ್ರದ ಮನವಿಗೆ ಹಿನ್ನಡೆಯಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Gautam Gambhir: ಅಮೀತ್​ ಶಾ ಭೇಟಿಯಾದ ಗೌತಮ್‌ ಗಂಭೀರ್‌; ಕೋಚ್​ ಆಗುವುದು ಖಚಿತ ಎಂದ ನೆಟ್ಟಿಗರು

Gautam Gambhir: 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್‌, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಕೋಚ್​ ಆಗುವ ಉದ್ದೇಶದಿಂದಲೇ ಗಂಭೀರ್​ ಈ ನಿರ್ಧಾರ ಕೈಗೊಂಡದ್ದು ಎಂಬ ಮಾತುಗಳು ಕೂಡ ಕೇಳಿ ಬಂದಿದೆ.

VISTARANEWS.COM


on

Gautam Gambhir
Koo

ನವದೆಹಲಿ: ಟೀಮ್​ ಇಂಡಿಯಾದ ಮಾಜಿ ಆಟಗಾರ ಗೌತಮ್‌ ಗಂಭೀರ್‌(Gautam Gambhir) ಅವರು ಭಾರತ ತಂಡ ಮುಂದಿನ ಕೋಚ್​ ಆಗಲಿದ್ದಾರೆ(gautam gambhir team india coach) ಎಂದು ಬಿಸಿಬಿಸಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಗಂಭೀರ್​ ಅವರು ಕೇಂದ್ರ ಗೃಹ ಮಂತ್ರಿ ಅಮೀತ್​ ಶಾ(Amit Shah) ಅವರನ್ನು ಭೇಟಿಯಾಗಿದ್ದಾರೆ. ಇವರಿಬ್ಬರ ಭೇಟಿಯ ಫೋಟೊ ಕಂಡು ನೆಟ್ಟಿಗರು ಗಂಭೀರ್​ ಕೋಚ್​ ಆಗುವುದು ಖಚಿತ ಎಂದಿದ್ದಾರೆ.

ಗಂಭೀರ್​ ಅವರು ಅಮಿತ್‌ ಶಾ ಅವರನ್ನು ಭೇಟಿಯಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಅಭಿನಂಧನೆ ಸಲ್ಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ದೆಹಲಿ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಗಂಭೀರ್‌, ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಕೋಚ್​ ಆಗುವ ಉದ್ದೇಶದಿಂದಲೇ ಗಂಭೀರ್​ ಈ ನಿರ್ಧಾರ ಕೈಗೊಂಡದ್ದು ಎಂಬ ಮಾತುಗಳು ಕೂಡ ಕೇಳಿ ಬಂದಿದೆ.

2 ದಿನಗಳ ಹಿಂದಷ್ಟೇ ಬಿಸಿಸಿಐ ಕೂಡ ಗಂಭೀರ್​ ಅವರನ್ನು ಕೋಚ್ ಆಗಿ ನೇಮಕ ಮಾಡಿಕೊಳ್ಳಲು ಅಂತಿಮ ನಿರ್ಧಾರ ಕೈಗೊಂಡಿದ್ದು, ಇದೇ ತಿಂಗಳಾತ್ಯಂದಲ್ಲಿ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಇದೀಗ ಅಮಿತ್‌ ಶಾ ಅವರನ್ನು ಗಂಭೀರ್‌ ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಅವರು ಅಮಿತ್​ ಶಾ ಅವರ ಮಗನಾಗಿದ್ದಾರೆ.

ಇದನ್ನೂ ಓದಿ Gautam Gambhir: ಗೌತಮ್​ ಗಂಭೀರ್​ ಭಾರತದ ಮುಂದಿನ ಕೋಚ್​; ಅಧಿಕೃತ ಘೋಷಣೆಯೊಂದೇ ಬಾಕಿ

‘ಲೋಕಸಭಾ ಚುನಾವಣಾ ಯಶಸ್ಸಿಗೆ ಅಭಿನಂದಿಸುವ ಸಲುವಾಗಿ ನಾನು ಸನ್ಮಾನ್ಯ ಅಮಿತ್ ಶಾ ಅವರನ್ನು ಭೇಟಿಮಾಡಿ ಅವರನ್ನು ಅಭಿನಂದಿಸಿದೆ. ಗೃಹ ಸಚಿವರಾಗಿ ಅವರ ನಾಯಕತ್ವವು ನಮ್ಮ ರಾಷ್ಟ್ರದ ಭದ್ರತೆ ಮತ್ತು ಸ್ಥಿರತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ನಂಬಿಕೆ ನನಗಿದೆ’ ಎಂದು ಗಂಭೀರ್​ ಟ್ವೀಟ್​ ಮಾಡಿದ್ದಾರೆ.

ಕಳೆದ ತಿಂಗಳು ಬಿಸಿಸಿಐ ಕೋಚ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಆರಂಭದಲ್ಲಿ ಎನ್​ಸಿಎ ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ಅವರು ಕೊಚ್​ ಹುದ್ದೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದರು. ಈ ವೇಳೆ ಗಂಭೀರ್​ ಕೋಚ್​ ಆಗಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಅವರೇ ಕೋಚ್​ ಆಗುವುದು ಖಚಿತ ಎನ್ನುತ್ತಿದೆ ಮೂಲಗಳು. ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ದ್ರಾವಿಡ್ ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕವೇ ಕೋಚ್​ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ಆದರೆ, ಬಿಸಿಸಿಐ ಟಿ20 ವಿಶ್ವಕಪ್​ ತನಕ ಅವರನ್ನು ಮುಂದುವರಿಯುವಂತೆ ಒತ್ತಾಯ ಮಾಡಿತ್ತು. ಹೀಗಾಗಿ ದ್ರಾವಿಡ್​ ಟಿ20 ವಿಶ್ವಕಪ್ ತನಕ ಈ ಹುದ್ದೆಯಲ್ಲಿ ಮುಂದುವರಿದರು.

Continue Reading

ಕ್ರೀಡೆ

WI vs AFG: ಒಂದೇ ಓವರ್​ನಲ್ಲಿ 36 ರನ್​ ಗಳಿಸಿ ಯುವರಾಜ್​ ಸಿಂಗ್​ ದಾಖಲೆ ಸರಿಗಟ್ಟಿದ ನಿಕೋಲಸ್​ ಪೂರನ್​

WI vs AFG: 36 ರನ್​ ಕಲೆಹಾಕುವ ಮೂಲಕ ಪೂರನ್​ ಅವರು ಒಂದೇ ಓವರ್​ನಲ್ಲಿ 36 ರನ್​ ಬಾರಿಸಿದ ಯುವರಾಜ್​ ಮತ್ತು ಕೈರನ್​ ಪೊಲಾರ್ಡ್​ ಅವರನ್ನೊಳಗೊಂಡ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು.

VISTARANEWS.COM


on

WI vs AFG
Koo

ಸೈಂಟ್ ಲೂಸಿಯಾ: ಮಂಗಳವಾರ ನಡೆದ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಅಂತಿಮ ಲೀಗ್​ ಪಂದ್ಯದಲ್ಲಿ ವೆಸ್ಟ್​ ಇಂಡೀಸ್​ ತಂಡ ಅಫಘಾನಿಸ್ತಾನ(WI vs AFG) ವಿರುದ್ಧ 104 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ವಿಂಡೀಸ್​ನ ಎಡಗೈ ಬ್ಯಾಟರ್​ ನಿಕೋಲಸ್​ ಪೂರನ್​(Nicholas Pooran) ಒಂದೇ ಓವರ್​ನಲ್ಲಿ 36 ರನ್​(36 runs in an over) ಬಾರಿಸುವ ಮೂಲಕ ಯುವರಾಜ್​ ಸಿಂಗ್(Yuvraj Singh)​ ಮತ್ತು ಕೈರನ್ ಪೊಲಾರ್ಡ್​ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಪೂರನ್​ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ ನಡೆಸಿ ಗಮನ ಸೆಳೆದರು. ಅಜ್ಮತುಲ್ಲಾ ಒಮರ್ಜಾಯ್(Azmatullah Omarzai) ಅವರ ದ್ವಿತೀಯ ಓವರ್​ನಲ್ಲಿ ಸಿಡಿದು ನಿಂತ ಪೂರನ್​ ಮೂರು ಸಿಕ್ಸರ್​ ಮತ್ತು ಮೂರು ಬೌಂಡರಿ ಬಾರಿಸಿ ಒಟ್ಟು 36 ರನ್​ ಕಲೆಹಾಕಿದರು. 2 ನೋಬಾಲ್​ ಮತ್ತು ಒಂದು ವೈಡ್​ 4 ಕೂಡ ಈ ಓವರ್​ನಲ್ಲಿ ದಾಖಲಾಯಿತು. 36 ರನ್​ ಕಲೆಹಾಕುವ ಮೂಲಕ ಪೂರನ್​ ಅವರು ಒಂದೇ ಓವರ್​ನಲ್ಲಿ 36 ರನ್​ ಬಾರಿಸಿದ ಯುವರಾಜ್​ ಮತ್ತು ಕೈರನ್​ ಪೊಲಾರ್ಡ್​ ಅವರನ್ನೊಳಗೊಂಡ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು.

ಇದನ್ನೂ ಓದಿ Team India Coach: ಜಾಂಟಿ ರೋಡ್ಸ್ ಟೀಮ್​ ಇಂಡಿಯಾದ ಮುಂದಿನ ಫೀಲ್ಡಿಂಗ್​ ಕೋಚ್​

ಯುವರಾಜ್​ ಸಿಂಗ್​ ಅವರು 2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್​ ಟೂರ್ನಿಯ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಸುವರ್ಟ್​ ಬ್ರಾಡ್​ ಅವರ ಓವರ್​ನಲ್ಲಿ ಸತತ 6 ಸಿಕ್ಸರ್​ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದರು. ವಿಂಡೀಸ್​ನ ಆಟಗಾರನೇ ಆಗಿರುವ ಕೈರನ್​ ಪೊಲಾರ್ಡ್​ 2021ರಲ್ಲಿ ಶ್ರೀಲಂಕಾದ ಅಕಿಲ್​ ಧನಂಜಯ ಅವರ ಓವರ್​ನಲ್ಲಿ 36 ರನ್​ ಬಾರಿಸಿದ್ದರು.

ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪೂರನ್​ 53 ಎಸೆತಗಳಿಂದ 89 ರನ್​ ಬಾರಿಸಿ ರನೌಟ್​ ಆಗುವ ಮೂಲಕ ಕೇವಲ 2 ರನ್​ ಅಂತರದಿಂದ ಶತಕ ವಂಚಿತರಾದರು. ಅವರ ಈ ಬ್ಯಾಟಿಂಗ್​ ಇನಿಂಗ್ಸ್​ನಲ್ಲಿ ಬರೋಬ್ಬರಿ 8 ಸಿಕ್ಸರ್​ ಮತ್ತು 6 ಬೌಂಡರಿ ಸಿಡಿಯಿತು. ಸಾರಸ್ಯವೆಂದರೆ 36 ರನ್​ ಚಚ್ಚಿಸಿಕೊಂಡ ಒಮರ್ಜಾಯ್ ಅವರೇ ಪೂರನ್​ ಅವರನ್ನು ರನೌಟ್​ ಮಾಡಿದ್ದು.

ಪಂದ್ಯ ಗೆದ್ದ ವಿಂಡೀಸ್​


ಈಗಾಗಲೇ ಸೂಪರ್​-8 ಹಂತಕ್ಕೇರಿರುವ ವಿಂಡೀಸ್​ ಮತ್ತು ಅಫಘಾನಿಸ್ತಾನಕ್ಕೆ ಈ ಪಂದ್ಯ ಕೇವಲ ಅಭ್ಯಾಸಕ್ಕೆ ಸೀಮಿತವಾದ ಪಂದ್ಯವಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ವೆಸ್ಟ್​ ಇಂಡೀಸ್ ನಿಗದಿತ 20 ಓವರ್​ಗಳಲ್ಲಿ ಪ್ರಚಂಡ ಬ್ಯಾಟಿಂಗ್​ ನಡೆಸಿ 5 ವಿಕೆಟ್​ಗೆ 218 ರನ್​ ಬಾರಿಸಿತು. ಈ ಬೃಹತ್​ ಮೊತ್ತವನ್ನು ಕಂಡು ದಂಗಾದ ಅಫಘಾನಿಸ್ತಾನ ಆರಂಭದಿಂದಲೇ ವಿಕೆಟ್​ ಕಳೆದುಕೊಂಡು 114 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ವಿಂಡೀಸ್​ ಪರ ಒಬೆಡ್ ಮೆಕಾಯ್(3), ಅಕಿಲ್​ ಹೊಸೈನ್​ ಮತ್ತು ಗುಡಾಕೇಶ್ ಮೋತಿ ತಲಾ 2 ವಿಕೆಟ್​ ಕಿತ್ತರು.

Continue Reading

ಕ್ರೀಡೆ

T20 World Cup 2024: ಸೂಪರ್​-8 ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ; ಅಭ್ಯಾಸದ ವೇಳೆ ಸ್ಟಾರ್​ ಆಟಗಾರನಿಗೆ ಗಾಯ

T20 World Cup 2024: ಅಭ್ಯಾಸದ ವೇಳೆ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್ (Suryakumar Yadav)​ ಅವರು ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ.

VISTARANEWS.COM


on

T20 World Cup 2024
Koo

ಬಾರ್ಬಡೋಸ್​: ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಸೂಪರ್​-8 ಪಂದ್ಯ ಆರಂಭಕ್ಕೂ ಮುನ್ನವೇ ಟೀಮ್​ ಇಂಡಿಯಾಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್ (Suryakumar Yadav)​ ಅವರು ಕೈ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಅಭ್ಯಾಸ ನಡೆಸುವ ವೇಳೆ ಅವರು ಗಾಯಗೊಂಡರು(Suryakumar Yadav suffers minor injury).

ಭಾನುವಾರದಂದು ಬಾರ್ಬಡೋಸ್‌ಗೆ ಆಗಮಿಸಿದ ಭಾರತೀಯ ಆಟಗಾರರು ಕೆರಿಬಿಯನ್ ಬೀಚ್​ನಲ್ಲಿ ವಾಲಿಬಾಲ್​ ಆಡಿ ಎಂಜಾಯ್​ ಮಾಡಿದ್ದರು. ಸೋಮವಾರ ರಾತ್ರಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ವೇಳೆ ನೆಟ್ಸ್​ನಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿದ್ದ ಸೂರ್ಯಕುಮಾರ್​ ಅವರ ಕೈ ಬೆರಳಿಗೆ ಚೆಂಡಿನೇಟು ಬಿದ್ದಿದೆ. ಕೆಲಕಾಲ ನೋವಿನಿಂದ ಬಳಲಿದ ಅವರುನ್ನು ಫಿಸಿಯೋ ಆರೈಕೆ ಮಾಡಿದ್ದಾರೆ. ಮೂಲಗಳ ಪ್ರಕಾರ ಅವರ ಗಾಯದ ಪ್ರಮಾಣ ಗಂಭೀರವಾಗಿ ಪರಿಣಮಿಸಿಲ್ಲ ಎಂದು ತಿಳಿದುಬಂದಿದೆ. ಒಂದೊಮ್ಮೆ ಮತ್ತೆ ನೋವು ಕಾಣಿಸಿಕೊಂಡರೆ ತಂಡಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಸೂರ್ಯ ಅವರು ಇದೇ ವರ್ಷದ ಜನವರಿಯಲ್ಲಿ ಸ್ಪೋರ್ಟ್ಸ್ ಹರ್ನಿಯಾಕ್ಕಾಗಿ ತೊಡೆಸಂದು ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಳಿಕ ಐಪಿಎಲ್​ ಮೂಲಕ ಮತ್ತೆ ಕ್ರಿಕೆಟ್​ ಕಮ್​ಬ್ಯಾಕ್​ ಮಾಡಿದ್ದರು.

ಭಾರತ ತನ್ನ ಮಪದಲ ಸೂಪರ್​-8 ಪಂದ್ಯವನ್ನು ಜೂನ್​ 20ರಂದು ಅಫಘಾನಿಸ್ತಾನ ವಿರುದ್ಧ ಆಡಲಿದೆ. ಮಂಗಳವಾರ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಸೇರಿ ತಂಡದ ಆಟಗಾರರು ಬ್ಯಾಟಿಂಗ್​ ಮತ್ತು ಬೌಲಿಂಗ್​ ಅಭ್ಯಾಸ ನಡೆಸಿದ್ದಾರೆ. ವಿರಾಟ್​ ಕೊಹ್ಲಿ ಅವರು ಮತ್ತೆ ತಮ್ಮ ಹಳೆಯ ಬ್ಯಾಟಿಂಗ್​ ಫಾರ್ಮ್ ಕಂಡುಕೊಳ್ಳುವ ನಿಟ್ಟಿನಲ್ಲಿ ಸೋಮವಾರ ಹೆಚ್ಚುವರಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದರು. ಕಳೆದ ಮೂರು ಪಂದ್ಯಗಳಲ್ಲಿಯೂ ಒಂದಂಕಿಗೆ ಸೀಮಿತರಾಗಿದ್ದರು. ಒಂದು ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು.​​

ಕೊಹ್ಲಿ ವೈಫಲ್ಯಕ್ಕೆ ನಿಧಾನಗತಿ ಪಿಚ್ ಕಾರಣ!


ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸುವ ಮುನ್ನ ಅಮೆರಿಕ ಮತ್ತು ವಿಂಡೀಸ್​ ಪಿಚ್​ಗಳು ನಿಧಾನಗತಿಯದ್ದಾಗಿದ್ದು, ಕೊಹ್ಲಿಗೆ ಇದು ಸೂಕ್ತವಾಗಿಲ್ಲ ಹೀಗಾಗಿ ಅವರನ್ನು ಆಯ್ಕೆ ಮಾಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸ್ಟಾರ್​ ಆಟಗಾರನನ್ನು ಕೈ ಬಿಟ್ಟರೆ ಬಿಸಿಸಿಐ ವಿರುದ್ಧ ಭಾರೀ ಟೀಕೆ ಮತ್ತು ವಿರೋಧ ವ್ಯಕ್ತವಾಗುವುದು ಎನ್ನುವ ನಿಟ್ಟಿನಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಅಂದು ಊಹೆ ಮಾಡಿದಂತೆ ಇದೀಗ ಕೊಹ್ಲಿ ನಿಧಾನಗತಿಯ ಪಿಚ್​ನಲ್ಲಿ ರನ್​ ಗಳಿಸಲು ಪರದಾಡುತ್ತಿದ್ದಾರೆ.

ಇದನ್ನೂ ಓದಿ Team India Coach: ಜಾಂಟಿ ರೋಡ್ಸ್ ಟೀಮ್​ ಇಂಡಿಯಾದ ಮುಂದಿನ ಫೀಲ್ಡಿಂಗ್​ ಕೋಚ್​

ಸೂಪರ್​ 8 ಹಂತದ ಮೊದಲ ಪಂದ್ಯ ಜೂನ್​ 19ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಅಮೆರಿಕ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಟ ನಡೆಸಲಿವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಹೈವೋಲ್ಟೇಜ್​ ಪಂದ್ಯ ಜೂನ್​ 24 ಭಾನುವಾರದಂದು ನಡೆಯಲಿದೆ. ಟೀಮ್​ ಇಂಡಿಯಾದ ಎಲ್ಲ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪ್ರಸಾರಗೊಳ್ಳಲಿದೆ.

ಭಾರತದ ಸೂಪರ್​-8 ಪಂದ್ಯದ ವೇಳಾಪಟ್ಟಿ

ಎದುರಾಳಿದಿನಾಂಕತಾಣಪ್ರಸಾರ
ಭಾರತ-ಅಫಘಾನಿಸ್ತಾನಜೂನ್​ 20ಬಾರ್ಬಡೋಸ್ರಾತ್ರಿ 8ಕ್ಕೆ
ಭಾರತ-ಬಾಂಗ್ಲಾದೇಶಜೂನ್​ 22ಆಂಟಿಗುವಾರಾತ್ರಿ 8ಕ್ಕೆ
ಭಾರತ-ಆಸ್ಟ್ರೇಲಿಯಾಜೂನ್​ 24ಸೇಂಟ್ ಲೂಸಿಯಾರಾತ್ರಿ 8ಕ್ಕೆ
Continue Reading

ಕ್ರೀಡೆ

Team India Coach: ಜಾಂಟಿ ರೋಡ್ಸ್ ಟೀಮ್​ ಇಂಡಿಯಾದ ಮುಂದಿನ ಫೀಲ್ಡಿಂಗ್​ ಕೋಚ್​

Team India Coach: ಭಾರತವೆಂದರೆ ಜಾಂಟಿ ರೋಡ್ಸ್​ಗೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ಅವರು ತನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ. ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವ ಅವರು ಮುಂಬೈನಲ್ಲಿ ಸರ್ಫಿಂಗ್​ ಮತ್ತು ಕೆಲವು ತೀರ್ಥಕ್ಷೇತ್ರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತಾರೆ.

VISTARANEWS.COM


on

Team India Coach
Koo

ಮುಂಬಯಿ: ಗೌತಮ್​ ಗಂಭೀರ್​ ಅವರು ಟೀಮ್​ ಇಂಡಿಯಾದ(Team India Coach) ಮುಂದಿನ ಕೋಚ್​ ಆಗಲಿದ್ದಾರೆ ಎಂದು ವರದಿಯಾದ ಬೆನ್ನಲ್ಲೇ ಇದೀಗ ದಕ್ಷಿಣ ಆಫ್ರಿಕಾದ ಈ ಮಾಜಿ ಆಟಗಾರ, ಕ್ರಿಕೆಟ್​ ಕಂಡ ಬೆಸ್ಟ್​ ಫೀಲ್ಡರ್​ ಜಾಂಟಿ ರೋಡ್ಸ್(Jonty Rhodes) ಅವರು ಭಾರತ ತಂಡದ ಫೀಲ್ಡಿಂಗ್​ ಕೋಚ್​(Jonty Rhodes ia’s New Fielding Coach) ಆಗಲಿದ್ದಾರೆ ಎಂದು ತಿಳಿದುಬಂದಿದೆ. ತಂಡದ ಇತರ ಕೋಚ್​ಗಳ ಆಯ್ಕೆಯಲ್ಲಿ ತನ್ನ ವ್ಯಕ್ತಿಗಳನ್ನು ನೇಮಿಸಿಕೊಳ್ಳುವ ಅವಕಾಶ ನೀಡಬೇಕೆಂದು ಗಂಭೀರ್​ ಅವರು ಬಿಸಿಸಿಐಗೆ ಬೇಡಿಕೆ ಇಟ್ಟಿದ್ದು ಈ ಬೇಡಿಕೆಯನ್ನು ಬಿಸಿಸಿಐ ಒಪ್ಪಿಕೊಂಡಿದೆ ಎನ್ನಲಾಗಿದೆ.

ಗಂಭೀರ್​ ಅವರು ಜಾಂಟಿ ರೋಡ್ಸ್ ಜತೆ ಐಪಿಎಲ್​ನಲ್ಲಿ ಲಕ್ನೋ ತಂಡದ ಪರ ಜತೆಯಾಗಿ 2 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಇದೇ ಕಾಂಬಿನೇಷನ್​ನಲ್ಲಿ ಇದೀಗ ಟೀಮ್​ ಇಂಡಿಯಾದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಕಂಡುಬಂದಿದೆ. 2019ರಲ್ಲಿಯೂ ಜಾಂಟಿ ರೋಡ್ಸ್ ಅವರು ಭಾರತದ ತಂಡದ ಫೀಲ್ಡಿಂಗ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಭಾರತೀಯ ಮೂಲದ ಸಿಬ್ಬಂದಿಗೆ ಬಿಸಿಸಿಐ ಮಣೆ ಹಾಕಿತ್ತು. ಈ ಬಾರಿ ಗಂಭೀರ್​ ಅವರ ಅಭಯಹಸ್ತದಿಂದ ರೋಡ್ಸ್​ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಟಿ20 ವಿಶ್ವಕಪ್​ ಟೂರ್ನಿ ಮುಕ್ತಾಯಗೊಂಡ ತಕ್ಷಣ ನೂತನ ಕೋಚ್​ಗಳ ಹೆಸರು ಪ್ರಕಟಗೊಳ್ಳಲಿದೆ. 54 ವರ್ಷದ ಜಾಂಟಿ ಸದ್ಯ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಫೀಲ್ಡಿಂಗ್​ ಕೋಚ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಪಂಜಾಜ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ತಂಡದ ಪರ ಫೀಲ್ಡಿಂಗ್​ ಕೋಚ್​ ಆಗಿ ಕಾರ್ಯ ನಿರ್ವಹಿಸಿದ್ದರು.​

ಇದನ್ನೂ ಓದಿ Team India Coach: ಭಾರತ ತಂಡದ ಕೋಚ್​ ಆಗಿ ಗಂಭೀರ್​ ಆಯ್ಕೆ; ಶೀಘ್ರದಲ್ಲೇ ಅಧಿಕೃತ ಘೋಷಣೆ

ಭಾರತವೆಂದರೆ ಜಾಂಟಿ ರೋಡ್ಸ್​ಗೆ ಅಚ್ಚುಮೆಚ್ಚು. ಅದೇ ಕಾರಣಕ್ಕೆ ಅವರು ತನ್ನ ಮಗಳಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರೆ. ಭಾರತಕ್ಕೆ ಆಗಾಗ ಭೇಟಿ ನೀಡುತ್ತಿರುವ ಅವರು ಮುಂಬೈನಲ್ಲಿ ಸರ್ಫಿಂಗ್​ ಮತ್ತು ಕೆಲವು ತೀರ್ಥಕ್ಷೇತ್ರಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುತ್ತಾರೆ. ಈ ಬಾರಿಯ ಐಪಿಎಲ್​ ಟೂರ್ನಿಯ ವೇಳೆ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ರಾಮ ಮಂದಿರ ಉದ್ಘಾಟನೆಯ ವೇಳೆಯೂ ಅವರು ಶುಭ ಹಾರೈಸಿದ್ದರು. 2020ರಲ್ಲಿ ಹೃಷಿಕೇಶ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ಹಬ್ಬಕ್ಕೆ ಆಗಮಿಸಿದ್ದ ವೇಳೆ ಜಾಂಟಿ ರೋಡ್ಸ್‌ ಗಂಗಾ ನದಿಗೂ ಭೇಟಿ ನೀಡಿದ್ದರು. ಮೊದಲೇ ಭಾರತ ನೆಲ, ಇಲ್ಲಿನ ಸಂಸ್ಕೃತಿ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಜಾಂಟಿ ರೋಡ್ಸ್‌ ಭಾರತೀಯರಿಗೆ ಅತ್ಯಂತ ಪವಿತ್ರವಾಗಿರುವ ಗಂಗಾ ನದಿಯಲ್ಲಿ ಸ್ನಾನ ಮಾಡಿ ಸಾರ್ಥಕತೆಯ ಖುಷಿ ಅನುಭವಿಸಿದ್ದರು.

ಮೋದಿ ಅಭಿಮಾನಿ


ಜಾಂಟಿ ರೋಡ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ 15ನೇ ಬ್ರಿಕ್ಸ್‌ ಸಮ್ಮೇಳನದಲ್ಲಿ ಮೋದಿ ಅವರು ದಕ್ಷಿಣ ಆಫ್ರಿಕಾಗೆ ಬಂದಿದ್ದ ವೇಳೆ ರೋಡ್ಸ್ ಅವರು ‘ನಮಸ್ಕಾರ ಮೋದಿಜಿ’ ಎಂದು ಸ್ವಾಗತ ಕೋರಿದ್ದರು. “ಭಾರತಕ್ಕೆ ನನ್ನ ಕುಟುಂಬ ಹಲವು ಬಾರಿ ಭೇಟಿ ನೀಡಿದೆ. ಭಾರತವೆಂದರೆ ಭಾವನಾತ್ಮಕ ಸಂಬಂದವೂ ನನಗಿದೆ. ಅದ್ಭುತ ದೇಶ. ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ರಾಜಕೀಯ ಹಾಗೂ ಅರ್ಥಶಾಸ್ತ್ರದಲ್ಲಿ ನೀವೊಬ್ಬರು ರೋಲ್ ಮಾಡೆಲ್” ಎಂದು ಬರೆದುಕೊಂಡಿದ್ದರು.

Continue Reading
Advertisement
Actor Darshan
ಕರ್ನಾಟಕ5 mins ago

Actor Darshan: 2021ರಲ್ಲಿ ದರ್ಶನ್ ನನ್ನ ಮಾತು ಕೇಳಿದ್ದಿದ್ರೆ ಹೀಗಾಗುತ್ತಿರಲಿಲ್ಲ: ಇಂದ್ರಜಿತ್ ಲಂಕೇಶ್

Gold Rate Today
ಚಿನ್ನದ ದರ27 mins ago

Gold Rate Today: ಆಭರಣ ಖರೀದಿಸುವವರಿಗೆ ಗುಡ್‌ನ್ಯೂಸ್‌; ಮತ್ತೆ ಇಳಿದ ಚಿನ್ನದ ದರ

Austria vs France
ಕ್ರೀಡೆ32 mins ago

Austria vs France: ಗಂಭೀರ ಗಾಯಗೊಂಡ ಎಂಬಾಪೆ; ಮುಂದಿನ ಪಂದ್ಯಕ್ಕೆ ಅನುಮಾನ

Murder case
ಹಾಸನ34 mins ago

Murder Case : ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಗುಂಡಿಕ್ಕಿ ಕೊಂದು ನೇಣಿಗೆ ಶರಣಾದ ಪತಿ

murder Case
ಶಿವಮೊಗ್ಗ50 mins ago

Murder Case : ಸ್ಮಶಾನಕ್ಕೆ ಕರೆದೊಯ್ದು ಸ್ನೇಹಿತನನ್ನೇ ಕೊಂದು ಹಾಕಿದ ಮಿತ್ರದ್ರೋಹಿ

NEET UG 2024
ದೇಶ52 mins ago

NEET UG 2024: ನೀಟ್ ಯುಜಿ ವಿವಾದ; ಶೇ. 0.001ರಷ್ಟು ನಿರ್ಲಕ್ಷ್ಯವೂ ಸಹಿಸಲು ಸಾಧ್ಯವಿಲ್ಲ ಎಂದು ಚಾಟಿ ಬೀಸಿದ ಸುಪ್ರೀಂ ಕೋರ್ಟ್‌

actor darshan manager death 3
ಪ್ರಮುಖ ಸುದ್ದಿ1 hour ago

Actor Darshan: ರಕ್ತ ಕಾರಿಕೊಂಡು ಸತ್ತ ದರ್ಶನ್‌ ಫಾರಂ ಹೌಸ್ ಮ್ಯಾನೇಜರ್;‌ ಏನಿದು ಮತ್ತೊಂದು ನಿಗೂಢ?

Gautam Gambhir
ಕ್ರೀಡೆ1 hour ago

Gautam Gambhir: ಅಮೀತ್​ ಶಾ ಭೇಟಿಯಾದ ಗೌತಮ್‌ ಗಂಭೀರ್‌; ಕೋಚ್​ ಆಗುವುದು ಖಚಿತ ಎಂದ ನೆಟ್ಟಿಗರು

Reels tragedy
ದೇಶ1 hour ago

Reels Tragedy : ರೀಲ್ಸ್‌ ಶೋಕಿ; ಪ್ರಪಾತಕ್ಕೆ ಬಿದ್ದು ಯುವತಿ ಸಾವು- ಛಿದ್ರಗೊಂಡ ಕಾರು

bhavani revanna bail
ಕ್ರೈಂ2 hours ago

Bhavani Revanna: ಭವಾನಿ ರೇವಣ್ಣ‌ ನಿರಾಳ, ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು1 day ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 day ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ3 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ4 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು4 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ4 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌