Mrs India Karnataka 2023: ಮಿಸೆಸ್‌ ಇಂಡಿಯಾ ಕರ್ನಾಟಕ ವಿಜೇತೆ ಸ್ನೇಹಾ ಶ್ರೀಧರ್‌ ಫ್ಯಾಷನ್‌ ಬಗ್ಗೆ ಹೇಳುವುದಿಷ್ಟು - Vistara News

ಫ್ಯಾಷನ್

Mrs India Karnataka 2023: ಮಿಸೆಸ್‌ ಇಂಡಿಯಾ ಕರ್ನಾಟಕ ವಿಜೇತೆ ಸ್ನೇಹಾ ಶ್ರೀಧರ್‌ ಫ್ಯಾಷನ್‌ ಬಗ್ಗೆ ಹೇಳುವುದಿಷ್ಟು

ಬಿಸ್ನೆಸ್‌ ವುಮೆನ್‌, ಗೃಹಿಣಿ, ಎರಡು ಮಕ್ಕಳ ತಾಯಿ ಹೀಗೆ ಎಲ್ಲಾ ಪಾತ್ರವನ್ನು ನಿಭಾಯಿಸುತ್ತಲೇ ಯಶಸ್ವಿಯಾಗಿರುವ ಮಹಿಳೆ ಸ್ನೇಹಾ ಶ್ರೀಧರ್‌, ಈ ಬಾರಿಯ ಮಿಸೆಸ್‌ ಇಂಡಿಯಾ ಕರ್ನಾಟಕ 2023 ಟೈಟಲನ್ನು (Mrs India Karnataka 2023 ತಮ್ಮದಾಗಿಸಿಕೊಂಡಿದ್ದಾರೆ. ವಿಸ್ತಾರ ನ್ಯೂಸ್‌ನ ಸೆಲೆಬ್ರೆಟಿ ಕಾಲಂನಲ್ಲಿ ತಮ್ಮ ಫ್ಯಾಷನ್‌ ಜರ್ನಿ ಬಗ್ಗೆ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದಾರೆ.

VISTARANEWS.COM


on

Mrs India Karnataka 2023
ಚಿತ್ರಗಳು: ಸ್ನೇಹಾ ಶ್ರೀಧರ್‌, ಮಿಸೆಸ್‌ ಇಂಡಿಯಾ ಕರ್ನಾಟಕ 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಂದರ್ಶನ: ಶೀಲಾ ಸಿ. ಶೆಟ್ಟಿ

ಮದುವೆಯಾದ ನಂತರ ಮಹಿಳೆಯರ ಲೈಫ್‌ ಎಲ್ಲಿಯೂ ಸ್ಟಾಪ್‌ ಆಗುವುದಿಲ್ಲ, ಹಾಗಾಗಿ ಕನಸು ಕಾಣುವುದನ್ನು ನಿಲ್ಲಿಸಬೇಕಾಗಿಲ್ಲ! ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿರಬೇಕಷ್ಟೇ! ಎನ್ನುವ ಮಿಸೆಸ್‌ ಇಂಡಿಯಾ ಕರ್ನಾಟಕ 2023 ಪೇಜೆಂಟ್‌ ವಿಜೇತೆ ಸ್ನೇಹಾ ಶ್ರೀಧರ್‌, ಇದೀಗ ಯಶಸ್ವಿ ಮಹಿಳೆಯರ ಸಾಲಿನಲ್ಲಿ ನಿಲ್ಲುತ್ತಾರೆ. ಮನೆಯಲ್ಲಿ ಗೃಹಿಣಿಯಾಗಿ, ತಾಯಿಯಾಗಿ, ಬಿಸ್ನೆಸ್‌ ವುಮೆನ್‌ ಆಗಿ, ಹೋಮಿಯೊಪತಿ ವಿದ್ಯಾರ್ಥಿಯಾಗಿ ನಾನಾ ಪಾತ್ರಗಳನ್ನು ನಿಭಾಯಿಸುತ್ತಲೇ ಪೇಜೆಂಟ್‌ನಲ್ಲಿ ಭಾಗವಹಿಸಿ, ಟೈಟಲ್‌ ವಿಜೇತರಾದವರು. ಅವರು ತಮ್ಮ ಈ ಫ್ಯಾಷನ್‌ ಜರ್ನಿಯ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ್ದಾರೆ.

Mrs India Karnataka

ವಿಸ್ತಾರ ನ್ಯೂಸ್‌ : ಪೇಜೆಂಟ್‌ನಲ್ಲಿ ಟೈಟಲ್‌ ಪಡೆದು ವಿಜೇತರಾದ ನಂತರ ಸಾಮಾಜಿಕ ಜವಾಬ್ದಾರಿಗಳು ಹೆಚ್ಚಾಗುತ್ತವೆಯೇ!

  • ಖಂಡಿತಾ ಹೌದು. ಒಂದು ಐಡೆಂಟಿಟಿ ದೊರೆತ ನಂತರ ಜನರು ಗುರುತಿಸುತ್ತಾರೆ. ನಾವು ಹೇಳುವುದನ್ನು ಕೇಳಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಾನು ಕೂಡ ಪೇಜೆಂಟ್‌ನಲ್ಲಿ ಕೊಟ್ಟ ಟಾಸ್ಕ್‌ವೊಂದರಲ್ಲಿ ಭಾಗವಹಿಸಿದ್ದೆ. ಮುಂದೆಯೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಲಿದ್ದೇನೆ.
Mrs India Karnataka 2023 winner

ವಿಸ್ತಾರ ನ್ಯೂಸ್‌: ನೀವು ಕಾರ್ಯ ನಿರ್ವಹಿಸುತ್ತಿರುವ ಕ್ಷೇತ್ರಕ್ಕೂ ಫ್ಯಾಷನ್‌ ಕ್ಷೇತ್ರಕ್ಕೂ ಅಜಗಜಾಂತರ ಇದೆಯಲ್ಲ! ಹೇಗೆ ಬ್ಯಾಲೆನ್ಸ್‌ ಮಾಡುತ್ತೀರಾ?

  • ಹೌದು. ನಾನು ಸದ್ಯ ಮೆಡಿಸಿನ್‌ ಕ್ಷೇತ್ರದಲ್ಲಿ ಇಂಟರ್ನ್ ಆಗಿದ್ದೇನೆ. ಅದರೊಂದಿಗೆ ನನ್ನದು ಜಾಯಿಂಟ್‌ ಫ್ಯಾಮಿಲಿ. ಕುಟುಂಬ ಹಾಗೂ ಪ್ರೊಫೆಷನ್‌ ಎರಡನ್ನು ಸಾವಧಾನವಾಗಿ ನಿರಾಂತಕವಾಗಿ ಬ್ಯಾಲೆನ್ಸ್‌ ಮಾಡುತ್ತೇನೆ. ಯಾವ ವಿಷಯವನ್ನು ಮಿಕ್ಸ್‌ ಮಾಡಿ ಗೊಂದಲ ಸೃಷ್ಟಿಸುವುದಿಲ್ಲ.

ವಿಸ್ತಾರ ನ್ಯೂಸ್‌: ಪೇಜೆಂಟ್‌ಗೆ ನಿಮ್ಮ ತಯಾರಿ ಹೇಗಿತ್ತು?

  • ನಿಮಗೆ ಅಚ್ಚರಿಯಾಗಬಹುದು. ನಾನು 10 ತಿಂಗಳ ಹಿಂದಷ್ಟೇ ಮುದ್ದು ಮಗುವಿಗೆ ಜನ್ಮ ನೀಡಿದ್ದೇನೆ. ಕ್ಷೇಮವನದಲ್ಲಿ ಕಷ್ಟಪಟ್ಟು ತೂಕ ಇಳಿಸಿಕೊಂಡು ಪೇಜೆಂಟ್‌ನಲ್ಲಿ ಭಾಗವಹಿಸಿದೆ. ಗ್ರೂಮಿಂಗ್‌ ಸಮಯದಲ್ಲಿ ಪೇಜೆಂಟ್‌ ಡೈರೆಕ್ಟರ್‌ ಪ್ರತಿಭಾ ಸೌಂಶೀಮಠ್‌ ಅವರ ಟಿಪ್ಸ್‌ ಕೂಡ ನನಗೆ ಸಹಾಯ ಮಾಡಿದೆ.
Mrs India Karnataka 2023 Sneha Sridhar

ವಿಸ್ತಾರ ನ್ಯೂಸ್‌: ನಿಮ್ಮ ಪ್ರಕಾರ ಫ್ಯಾಷನ್ ಅಂದರೆ ಏನು?

  • ನಮ್ಮ ಉಡುಗೆ-ತೊಡುಗೆ ಮೂಲಕ ನಮ್ಮ ಕಲ್ಚರ್‌ ಹಾಗೂ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದರೊಂದಿಗೆ ಐಡೆಂಟಿಟಿ ಸೃಷ್ಟಿಸುವುದೇ ಫ್ಯಾಷನ್‌.

ವಿಸ್ತಾರ ನ್ಯೂಸ್‌: ನಿಮ್ಮ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಏನು?

  • ಕಾನ್ಫಿಡೆನ್ಸ್‌ ತುಂಬುವ ಯಾವುದೇ ಫ್ಯಾಷನ್‌ವೇರ್‌ಗಳಾದರೂ ಸರಿಯೇ! ನನಗೆ ಟ್ರೆಡಿಷನಲ್‌ ಹಾಗೂ ಮಾಡರ್ನ್ ಔಟ್‌ಫಿಟ್‌ಗಳು ಎಂಬ ಭೇದಭಾವವಿಲ್ಲ. ನನ್ನ ಬಾಡಿಟೈಪ್‌ಗೆ ತಕ್ಕಂತೆ ಚಾಯ್ಸ್ ಮಾಡುತ್ತೇನೆ. ಇವುಗಳ ಸಂಗಮವೇ ನನ್ನ ಸ್ಟೈಲ್‌ ಸ್ಟೇಟ್ಮೆಂಟ್‌ಗೆ ನಾಂದಿ ಹಾಡುತ್ತದೆ.

ವಿಸ್ತಾರ ನ್ಯೂಸ್‌: ಫ್ಯಾಷನ್‌ ಜಗತ್ತಿಗೆ ಕಾಲಿಡುವ ವಿವಾಹಿತರಿಗೆ ನೀವು ನೀಡುವ ಸಲಹೆ ಏನು?

  • ಆತ್ಮವಿಶ್ವಾಸದಿಂದಿರಿ. ಛಲದಿಂದ ಮುನ್ನುಗ್ಗಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Anklet Fashion: ಬೆಳ್ಳಿ ಕಾಲ್ಗೆಜ್ಜೆಯ ಜಾಗಕ್ಕೆ ಬಂತು ಫಂಕಿ ಆಕ್ಸೆಸರೀಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

ಈ ಬಾರಿಯ ಸಮ್ಮರ್‌ ಎಂಡ್‌ನಲ್ಲಿ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಸೆಟ್‌ಗಳು (Summer Star Fashion) ಬಿಡುಗಡೆಗೊಂಡಿವೆ. ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಈ ಔಟ್‌ಫಿಟ್‌ ಧರಿಸಿ, ಟ್ರೆಂಡ್‌ ಸೆಟ್‌ ಮಾಡಿದ್ದಾರೆ. ಇದ್ಯಾವ ಬಗೆಯ ಫ್ಯಾಷನ್‌? ಇಲ್ಲಿದೆ ಡಿಟೇಲ್ಸ್.

VISTARANEWS.COM


on

Summer Star Fashion
ಚಿತ್ರಗಳು: ಅದಿತಿ ರಾವ್‌ ಹೈದರಿ, ಬಾಲಿವುಡ್‌ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಧರಿಸಿದ, ಸಮ್ಮರ್‌ ಕೋ ಆರ್ಡ್ ಪ್ರಿಂಟೆಡ್‌ ಕೊಸ್ಟಾ ಪ್ಯಾಂಟ್‌ ಸೆಟ್ ಇದೀಗ ಸೀಸನ್‌ ಎಂಡ್‌ನಲ್ಲಿ ಟ್ರೆಂಡಿಯಾಗಿದೆ. ಅಂದಹಾಗೆ, ಇದ್ಯಾವ ಬಗೆಯ ಕೋ ಆರ್ಡ್ ಸೆಟ್ ಫ್ಯಾಷನ್‌ (Summer Star Fashion) ಎಂದು ಯೋಚಿಸುತ್ತಿದ್ದೀರಾ? ಅಂತಹದ್ದೇನಿಲ್ಲ! ಇವು ಸೆಲೆಬ್ರೆಟಿ ಲುಕ್‌ ನೀಡುವ ಶೋಲ್ಡರ್ಲೆಸ್‌ ಬಟನ್‌ ಟಾಪ್‌ ಹೊಂದಿರುವ ಕೋ ಆರ್ಡ್ ಸೆಟ್‌ಗಳಿವು. ಈಗಾಗಲೇ, ಈ ಬಾರಿಯ ಸಮ್ಮರ್‌ನಲ್ಲಿ ನಾನಾ ಬಗೆಯ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಬಿಡುಗಡೆಗೊಂಡಿದ್ದವು. ಅವುಗಳಲ್ಲಿ, ಇದೀಗ ಬಾಲಿವುಡ್‌ ಸೆಲೆಬ್ರೆಟಿಗಳು ಹಾಗೂ ಫ್ಯಾಷನ್‌ ಕ್ಷೇತ್ರದ ಮಾಡೆಲ್‌ಗಳು ಧರಿಸುತ್ತಿರುವ, ಈ ಡಿಸೈನ್‌ನ ಕೋ ಆರ್ಡ್ ಪ್ಯಾಂಟ್‌ ಸೆಟ್‌ಗಳು ಸದ್ಯ ಟ್ರೆಂಡಿಯಾಗಿವೆ. ಇದಕ್ಕೆ ಪೂರಕ ಎಂಬಂತೆ, ನಟಿ ಅದಿತಿ ರಾವ್‌ ಹೈದರಿ, ಕೂಡ ಈ ಔಟ್‌ಫಿಟ್‌ ಧರಿಸಿದ್ದು, ಪರಿಣಾಮ, ಈ ಶೈಲಿಯ ಪ್ರಿಂಟ್ಸ್ ಇರುವಂತಹ ಕೋ ಆರ್ಡ್ ಕೊಸ್ಟಾ ಪ್ಯಾಂಟ್‌ ಸೆಟ್‌ ಫ್ಯಾಷನ್‌ ಇದ್ದಕ್ಕಿದ್ದಂತೆ ಅಲ್ಟ್ರಾ ಮಾಡರ್ನ್ ಹುಡುಗಿಯರನ್ನು ಆವರಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

Summer Star Fashion

ಏನಿದು ಕೊಸ್ಟಾ ಪ್ಯಾಂಟ್‌ ಕೋ -ಆರ್ಡ್ ಸೆಟ್?

ಒಂದೇ ಬಗೆಯ ಶೇಡ್‌ ಅಥವಾ ಪ್ರಿಂಟ್ಸ್ ಇರುವ ಕೋ -ಆರ್ಡ್ ಸೆಟ್‌ ಪ್ಯಾಂಟ್‌ ಫ್ಯಾಷನ್‌ಗೆ ಇವು ಸೇರುತ್ತವೆ. ಆದರೆ, ಪ್ಯಾಂಟ್‌ ಮಾತ್ರ ಪಲ್ಹಾಜೊ ರೀತಿಯಲ್ಲಿರುತ್ತವೆ. ನೋಡಲು ಫ್ಲೇರ್‌ ಇದ್ದರೂ, ಲೂಸಾಗಿರುವುದಿಲ್ಲ. ಬೇಸಿಗೆಗೆ ಹೊಂದುವಂತಿರುತ್ತವೆ. ಇನ್ನು ಇವಕ್ಕೆ ಶೋಲ್ಡರ್ ಲೆಸ್‌ ಅಥವಾ ಬಾರ್ಡಾಟ್ ಶೈಲಿಯ ಬಾಡಿ ಫಿಟ್‌ ಇರುವ ಬಟನ್‌ ಟಾಪ್‌ ಮ್ಯಾಚ್‌ ಮಾಡಲಾಗಿರುತ್ತದೆ. ಈ ಔಟ್‌ಫಿಟ್‌ಗಳನ್ನು ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಧರಿಸುವುದರಿಂದ ಇವು ಸೆಲೆಬ್ರೆಟಿ ಔಟ್‌ಫಿಟ್ಸ್ ಎಂದೇ ಕರೆಸಿಕೊಳ್ಳುತ್ತವೆ. ಆದರೆ, ಇದೀಗ, ಹಾಲಿ ಡೇ, ಔಟಿಂಗ್‌ ಎಂದೆಲ್ಲಾ ಅಲೆದಾಡುವ ಯುವತಿಯರು ಈ ಉಡುಗೆಯನ್ನು ಧರಿಸುವುದು ಸಾಮಾನ್ಯವಾಗತೊಡಗಿದ್ದು, ಸೀಸನ್‌ ಎಂಡ್‌ನ ಟಾಪ್‌ ಲಿಸ್ಟ್‌ನಲ್ಲಿವೆ. ಫ್ಲೋರಲ್‌ ಪ್ರಿಂಟ್ಸ್ ಅಥವಾ ಟ್ರಾಪಿಕಲ್‌ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಠಿಸಿಕೊಂಡಿವೆ ಎನ್ನುತ್ತಾರೆ ಫ್ಯಾಷನ್‌ ಡಿಸೈನರ್‌ಗಳು.

Summer Star Fashion

ಅದಿತಿ ರಾವ್‌ ಹೈದರಿ ಸಮ್ಮರ್‌ ಕೋ ಆರ್ಡ್ ಸೆಟ್‌ ಲುಕ್‌

ಇನ್ನು, ಸದ್ಯ ಹೀರಾ ಮಂಡಿ ಬಾಲಿವುಡ್‌ ಚಿತ್ರದಲ್ಲಿ ಎಥ್ನಿಕ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ, ನಟಿ ಅದಿತಿ ರಾವ್‌ ಹೈದರಿಯವರಿಗೆ ಈ ಇಮೇಜ್‌ನಿಂದ ಕೊಂಚ ಬ್ರೇಕ್‌ ಬೇಕಿತ್ತು. ಹಾಗಾಗಿ ವೆಸ್ಟರ್ನ್ ಲುಕ್‌ ನೀಡುವ ಕೊಸ್ಟಾ ಪ್ಯಾಂಟ್‌ ಔಟ್‌ಫಿಟ್‌ ಧರಿಸಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

Summer Star Fashion

ಕೋ -ಆರ್ಡ್ ಕೊಸ್ಟಾ ಪ್ಯಾಂಟ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳು

  • ಹಾಲಿ ಡೇ, ಔಟಿಂಗ್‌ ಹಾಗೂ ಲಂಚ್‌-ಬ್ರಂಚ್‌ ಪಾರ್ಟಿಗಳಿಗೆ ಧರಿಸಲು ಮಾತ್ರ ಇವು ಸೂಕ್ತ.
  • ಫಿಟ್ಟಿಂಗ್‌ ಸರಿಯಾಗಿದ್ದಲ್ಲಿ ಮಾತ್ರ ಕಂಫರ್ಟಬಲ್‌ ಫೀಲ್‌ ನೀಡಬಲ್ಲವು.
  • ಶೋಲ್ಡರ್ ಲೆಸ್‌ ಆಗಿರುವುದರಿಂದ ಎಕ್ಸ್ಪೋಸ್‌ ಆಗುವ ಸಾಧ್ಯತೆ ಹೆಚ್ಚು.
  • ನೋಡಲು ಆಕರ್ಷಕವಾದರೂ ಟ್ರಯಲ್‌ ನೋಡದೇ ಧರಿಸುವುದು ಸೂಕ್ತವಲ್ಲ.
  • ತೀರಾ ಸ್ಲಿಮ್‌, ತೀರಾ ಪ್ಲಂಪಿ ಇಬ್ಬರಿಗೂ ನಾಟ್‌ ಓಕೆ. ಸರಿಯಾದ ಬಿಎಂಐ ಹೊಂದಿರುವವರಿಗೆ ಚೆನ್ನಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Continue Reading

ಫ್ಯಾಷನ್

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

ಬಾಲಿವುಡ್‌ ನಟ ಹಾಗೂ ಮಾಡೆಲ್‌ ಪ್ರತೀಕ್‌ ಬಬ್ಬರ್‌ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ (Cannes Star Fashion) ತಾಯಿ ಹಿರಿಯ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಟ್ರಿಬ್ಯೂಟ್‌ ಅರ್ಪಿಸುವ ಸಲುವಾಗಿ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡರು. ಅವರ ಈ ಔಟ್ಫಿಟ್‌ ಸ್ಟೈಲಿಂಗ್‌ ಮಾಡಿರುವ ಮೆನ್ಸ್ ಸ್ಟೈಲಿಸ್ಟ್ ರಾಹುಲ್‌ ಈ ಬಗ್ಗೆ ವಿವರಿಸಿದ್ದಾರೆ.

VISTARANEWS.COM


on

Cannes Star Fashion
ಚಿತ್ರಗಳು: ಪ್ರತೀಕ್‌ ಬಬ್ಬರ್‌, ಬಾಲಿವುಡ್‌ ನಟ, ಮಾಡೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟ ಹಾಗೂ ಮಾಡೆಲ್‌ ಪ್ರತೀಕ್‌ ಬಬ್ಬರ್‌ (Prateek Babbar) ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ/ಸೂಟ್‌ನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ, ರೆಡ್‌ ಕಾರ್ಪೆಟ್‌ ವಾಕ್‌ ಮಾಡಿದ್ದಾರೆ. ಪ್ರತೀಕ್‌ಗೆ ಪ್ರಶಂಸೆ: ಕಾನ್ ಫಿಲ್ಮ್‌ ಫೆಸ್ಟಿವಲ್‌ (Cannes Star Fashion) ಈ ಬಾರಿ ವಾಕ್‌ ಮಾಡಿದ ಭಾರತೀಯ ನಟರ ಪೈಕಿ ಪ್ರತೀಕ್‌, ಅತಿ ಹೆಚ್ಚು ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಫ್ಯಾಷನ್‌ ವಿಮರ್ಶಕರು. ಯಂಗ್‌ & ಎನರ್ಜಿಟಿಕ್‌ ಆಗಿರುವ ಪ್ರತೀಕ್‌ ಈ ಜನರೇಷನ್‌ನ ಹುಡುಗರನ್ನು ಪ್ರತಿಬಿಂಬಿಸಿದ್ದಾರೆ. ತೀರಾ ಸೀರಿಯಸ್‌ ಆಗಿಯೂ ಕಾಣಿಸದೇ, ತೀರಾ ಫಂಕಿಯಾಗಿಯೂ ಕಾಣಿಸದೇ, ಜಂಟಲ್‌ಮೆನ್‌ ಲುಕ್‌ನಲ್ಲಿ ಆಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ ಎಂದು ವಿಶ್ಲೇಶಿಸಿದ್ದಾರೆ.

ತಾಯಿ ಸ್ಮಿತಾ ಪಾಟೀಲ್‌ಗೆ ಅರ್ಪಣೆ

ಅಂದಹಾಗೆ, ಪ್ರತೀಕ್‌ ಬಬ್ಬರ್‌ ಅವರು ಇದೇ ಮೊತ್ತ ಮೊದಲ ಬಾರಿಗೆ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ವಾಕ್‌ ಮಾಡಿದ್ದಾರೆ. ಮೊದಲ ಬಾರಿಯಲ್ಲೆ ಎಲ್ಲರ ಗಮನ ಸೆಳೆದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಾಯಿ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಟ್ರಿಬ್ಯೂಟ್‌ ಅರ್ಪಿಸುವ ಸಲುವಾಗಿ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ ಅಂದರೇ, ಸೂಟ್‌ ಜೊತೆಗೆ ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ ಅವರ ಸ್ಟೈಲಿಸ್ಟ್ ರಾಹುಲ್‌ ವಿಜಯ್‌. ಅವರು ಹೇಳುವಂತೆ, ಫಿಲ್ಮ್ ಫೆಡರೇಷನ್‌ ಆಫ್‌ ಇಂಡಿಯಾ, ಈ ಬಾರಿ ಮತ್ತೊಮ್ಮೆ ಸ್ಕ್ರೀನ್‌ ಮಾಡಿದ ಸ್ಮಿತಾ ಪಾಟೀಲ್‌ ಅವರ ಹಳೆಯ ಚಿತ್ರ ಮನ್ನತ್‌ ಶೋಗಾಗಿ ಪುತ್ರ ಪ್ರತೀಕ್‌ ಈ ಕಾನ್‌ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಹಿರಿಯ ನಟ-ನಟಿಯರಾದ, ನಾಸಿರುದ್ದೀನ್‌ ಶಾ ಹಾಗೂ ನಟಿ ರತ್ನಾ ಪಾಠಕ್‌ ಕೂಡ ಸಿನಿಮಾದ ಸ್ಕ್ರೀನಿಂಗ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಪ್ರತೀಕ್‌ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ

ರೋಹಿತ್‌ ಗಾಂಧಿ & ರಾಹುಲ್‌ ಖನ್ನಾ ಜಂಟಿಯಾಗಿ ಡಿಸೈನ್‌ ಮಾಡಿರುವ ಈ ಕಸ್ಟಮೈಸ್ಡ್ ಟುಕ್ಸೆಡೊ ಅಥವಾ ಬ್ಲ್ಯಾಕ್‌ ಸೂಟ್‌, ಪ್ರತೀಕ್‌ ಅವರಿಗೆ ಸಖತ್‌ ಹ್ಯಾಂಡ್‌ಸಮ್‌ ಆಗಿ ಬಿಂಬಿಸಿದೆ. ಇನ್ನು, ಬೋ ಅಥವಾ ಟೈ ಬದಲು ಅವರು ಧರಿಸಿರುವ ವಿಂಟೇಜ್‌ ಸ್ಕಾರ್ಫ್ ಅವರ ಲುಕ್ಕನ್ನು ಮತ್ತಷ್ಟು ಡಿಫರೆಂಟ್‌ ಆಗಿಸಿದೆ. ಇತರರಿಗಿಂತ ವಿಭಿನ್ನವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ಪ್ರತೀಕ್‌ ಮೊದಲ ಕಾನ್‌ ವಾಕ್‌

“ಇದು ನನ್ನ ಮೊದಲ ಅಂತಾರಾಷ್ಟ್ರೀಯ ಮಟ್ಟದ ರೆಡ್‌ ಕಾರ್ಪೆಟ್‌ ವಾಕ್‌. ಹಾಗಾಗಿ ನಾನು ಆಕರ್ಷಕವಾಗಿ ಕಾಣಿಸುವುದರೊಂದಿಗೆ ನನ್ನ ತಾಯಿಗೆ ಟ್ರಿಬ್ಯೂಟ್‌ ಕೂಡ ಸಲ್ಲಿಸಬೇಕಿತ್ತು. ಹಾಗಾಗಿ ಕತ್ತಿಗೆ ವಿಂಟೇಜ್‌ ಸ್ಕಾರ್ಫ್‌ ಧರಿಸಿ, ಕಾಣಿಸಿಕೊಂಡೆ. ಇದು ಎಲ್ಲರಿಗೂ ಇಷ್ಟವಾಯಿತು” ಎಂದು ಪ್ರತೀಕ್‌ ಮಾಧ್ಯಮದವರೆದುರು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಈ ಬಾರಿಯ ಕಾನ್‌ ಫೆಸ್ಟಿವಲ್‌ ಮೂಲಕ ಭಾರತೀಯ ಮೆನ್ಸ್ ಫ್ಯಾಷನ್‌ನಲ್ಲಿ ಪ್ರತೀಕ್‌ ಕ್ರಾಪ್‌ ಟುಕ್ಸೆಡೊ ಟ್ರೆಂಡ್‌ ಹುಟ್ಟು ಹಾಕಿದ್ದಾರೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Fashion: ಮಾಲಾಶ್ರೀ ಮಗಳ ಬಿಗ್‌ ಬ್ಲ್ಯಾಕ್‌ ಜುಮ್ಕಾ ಲವ್‌!

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ (Star Fashion) ಆರಾಧನಾಗೆ ಇದೀಗ ಬಿಗ್‌ ಬ್ಲ್ಯಾಕ್‌ ಜುಮ್ಕಾಗಳ ಮೇಲೆ ಲವ್‌ ಆಗಿದೆ. ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದೆ. ಟ್ರೆಂಡಿಯಾಗಿರುವ ಇವನ್ನು ಹುಡುಗಿಯರು ಅವರಂತೆ ಕಾಣಲು ಹೇಗೆಲ್ಲಾ ಧರಿಸಬಹುದು? ಎಂಬುದರ ಬಗ್ಗೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ಆರಾಧನಾ, ಸ್ಯಾಂಡಲ್‌ವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ (Star Fashion) ಆರಾಧನಾಗೆ ಇದೀಗ ಬಿಗ್‌ ಬ್ಲ್ಯಾಕ್‌ ಜುಮ್ಕಾಗಳ ಮೇಲೆ ಲವ್‌ ಆಗಿದೆ. ಹೌದು, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಆಗಿದ್ದ, ಮಾಲಾಶ್ರೀ ಮಗಳಾದ ನಟಿ ಆರಾಧನಾ, ಈಗಷ್ಟೇ ನಟ ದರ್ಶನ್‌ ಅವರೊಂದಿಗೆ ‘ಕಾಟೇರ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾನಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಡೆಲ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಒಂದಲ್ಲ ಒಂದು ಹೊಸ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಈ ಜನರೇಷನ್‌ ಹುಡುಗಿಯರನ್ನು ಸೆಳೆಯುತ್ತಿದ್ದಾರೆ.

Star Fashion

ಆರಾಧನಾ ಜುಮ್ಕಾ ಪ್ರೇಮ

ಅಂದಹಾಗೆ, ನಟಿ ಆರಾಧನಾ ಇದೀಗ ಬ್ಲ್ಯಾಕ್‌ ಔಟ್‌ಫಿಟ್‌ ಜೊತೆ ಬ್ಲ್ಯಾಕ್‌ ಬಿಗ್‌ ಜುಮ್ಕಾ ಧರಿಸಿ ಕಾಣಿಸಿಕೊಂಡಿರುವುದು ಅವರಿಗೆ ಬಾಲಿವುಡ್‌ ಫೀಲ್‌ ನೀಡಿದೆ. ಚಿತ್ರದೊಂದಿಗೆ ಅವರು ಹಾಕಿಕೊಂಡಿರುವ ಜುಮ್ಕಾ ಹಿಂದಿ ಹಾಡು ಅವರ ಜುಮ್ಕಾ ಮೇಲಿನ ಪ್ರೇಮವನ್ನು ಹೈಲೈಟ್‌ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇಂಡೋ-ವೆಸ್ಟರ್ನ್‌ ಲುಕ್‌

ಬ್ಲ್ಯಾಕ್‌ ಮೆಟಲ್‌ನ ಬಿಗ್‌ ಜುಮ್ಕಾಗಳು ಎಲ್ಲಾ ಬ್ಲ್ಯಾಕ್‌ ಹಾಗೂ ಡಾರ್ಕ್‌ ಶೇಡ್‌ಗೆ ಮ್ಯಾಚ್‌ ಆಗುತ್ತವೆ. ಹೆಚ್ಚು ಮಿಕ್ಸ್‌ ಮ್ಯಾಚ್‌ ಮಾಡುವ ಅಗತ್ಯವಿಲ್ಲ ಎನ್ನುವ ಜ್ಯುವೆಲ್‌ ಡಿಸೈನರ್‌ಗಳು, ಆರಾಧನಾ ಅವರಿಗೆ ಈ ಜುಮ್ಕಾಗಳು ಸಖತ್‌ ಆಗಿ ಮ್ಯಾಚ್‌ ಆಗಿವೆ. ಅವರ ವೆಸ್ಟರ್ನ್‌ ಸ್ಟೈಲ್‌ಗೆ ಸಾಥ್‌ ನೀಡಿವೆ. ಜುಮ್ಕಾಗಳು ವೆಸ್ಟರ್ನ್‌ ಸ್ಟೈಲ್‌ಸ್ಟೇಟ್ಮೆಂಟ್‌ಗೆ ಮ್ಯಾಚ್‌ ಮಾಡಿರುವುದು ಅವರಿಗೆ ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿವೆ ಎನ್ನುತ್ತಾರೆ ಅವರು.
ಇನ್ನು ಅವರ ಬಾರ್ಡಟ್‌ ಡ್ರೆಸ್‌ ಇವನ್ನು ಮತ್ತಷ್ಟು ಹೈಲೈಟ್‌ ಮಾಡಿದೆ. ಇದರೊಂದಿಗೆ ಮ್ಯಾಚ್‌ ಮಾಡಿರುವ ಬಿಗ್‌ ಬ್ಲ್ಯಾಕ್‌ ಮೆಟಲ್‌ನ ಕಾಕ್ಟೈಲ್‌ ಫಿಂಗರ್‌ರಿಂಗ್‌ ಕೂಡ ಕಂಪ್ಲೀಟ್‌ ಮಾರ್ಡನ್‌ ಟಚ್‌ ನೀಡಿದೆ. ಇನ್ನು, ಅವರ ಹನ್‌ ಹೇರ್‌ಸ್ಟೈಲ್‌ ಹಾಗೂ ನೆಕ್‌ಲೇಸ್‌ ಇಲ್ಲದ ಖಾಲಿ ಕತ್ತನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಇವೆಲ್ಲದರ ಜೊತೆಗೆ ತಿಳಿಯಾದ ಮೇಕಪ್‌, ಕಾಜಲ್‌ ಹಚ್ಚಿದ ಕಂಗಳು ಸಿಂಪಲ್‌ ಲುಕ್‌ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗುವಂತಿದೆ ಎನ್ನುವ ಫ್ಯಾಷನ್‌ ವಿಮರ್ಶಕರಾದ ರಿಚಾ ಪ್ರಕಾರ, ಇದು ಯಂಗ್‌ ಹುಡುಗಿಯರ ಸ್ಟೈಲಿಶ್‌ ಲುಕ್‌ಗೆ ಮಾದರಿಯಾಗುವಂತಿದೆ ಎನ್ನುತ್ತಾರೆ.

Star Fashion

ತಾರೆಯರ ಮುಗಿಯದ ಬಿಗ್‌ ಜುಮ್ಕಾ ಲವ್‌

ಬಿಗ್‌ ಜುಮ್ಕಾಗಳು ಅದರಲ್ಲೂ, ಬ್ಲ್ಯಾಕ್‌ ಹಾಗೂ ವೈಟ್‌ ಮೆಟಲ್‌ನ ಜುಮ್ಕಾಗಳು ಸದಾ ಸಿನಿ ತಾರೆಯರ ಫೇವರೇಟ್‌ ಲಿಸ್ಟ್‌ನಲ್ಲಿವೆ. ಸಿನಿಮಾಗಳಲ್ಲಿ ಅಥವಾ ಸೀರಿಯಲ್‌ಗಳಲ್ಲಿ ಸೀರೆಯೊಂದಿಗೆ ಅಥವಾ ಎಥ್ನಿಕ್‌ ಉಡುಪುಗಳೊಂದಿಗೆ ನಾಯಕಿಯರು ಧರಿಸುವ ಈ ಬಿಗ್‌ ಜುಮ್ಕಾಗಳು, ಹುಡುಗಿಯರನ್ನು ಮಾತ್ರವಲ್ಲ, ಮಧ್ಯ ವಯಸ್ಕ ಮಹಿಳೆಯರನ್ನು ಸೆಳೆದು ಟ್ರೆಂಡಿಯಾಗಿವೆ. ಬಾಲಿವುಡ್‌ನ ನಟಿ ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್‌, ಸೋನಂ ಕಪೂರ್‌, ಜಾನ್ಹವಿ ಸೇರಿದಂತೆ ಸಾಕಷ್ಟು ಬಾಲಿವುಡ್‌ ನಟಿಯರನ್ನು ಸವಾರಿ ಮಾಡಿವೆ. ಬರಬರುತ್ತಾ ಸ್ಯಾಂಡಲ್‌ವುಡ್‌ ನಟಿಯರನ್ನು ಸೆಳೆದಿವೆ. ಇವೆಲ್ಲದರ ಪರಿಣಾಮ, ಎವರ್‌ಗ್ರೀನ್‌ ಮೆಟಲ್‌ ಜ್ಯುವೆಲ್‌ ಟ್ರೆಂಡ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

ಬಿಗ್‌ ಬ್ಲ್ಯಾಕ್‌ ಜುಮ್ಕಾ ಧರಿಸಲು ಬಯಸುವ ಹುಡುಗಿಯರಿಗೆ 5 ಟಿಪ್ಸ್‌

  • ನಿಮ್ಮ ಮುಖದ ಆಕಾರಕ್ಕೆ ಹೊಂದುವ ಡಿಸೈನ್‌ ಧರಿಸಿ.
  • ಈ ಜುಮ್ಕಾ ಧರಿಸಿದಾಗ ಕತ್ತಿಗೆ ಭಾರಿ ವಿನ್ಯಾಸದ ನೆಕ್‌ಪೀಸನ್ನು ಧರಿಸಬೇಡಿ.
  • ಬ್ಲ್ಯಾಕ್‌ ಬಿಗ್‌ ಜುಮ್ಕಾಗಳು ಎಲ್ಲಾ ಉಡುಪಿಗೂ ಮ್ಯಾಚ್‌ ಆಗುತ್ತವೆ.
  • ಹೇರ್‌ಸ್ಟೈಲ್‌ ಕಟ್ಟಿದಂತಿರಲಿ. ಜುಮ್ಕಾಗಳು ಹೈಲೈಟಾಗುತ್ತವೆ.
  • ಧರಿಸುವ ಉಡುಪಿನ ನೆಕ್‌ಲೈನ್‌ ಅಗಲವಾಗಿದ್ದಷ್ಟು ಜುಮ್ಕಾಗಳು ಎದ್ದು ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್‌ ಜ್ಯುವೆಲರಿಗಳು!

ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್‌ನಲ್ಲಿ ಸಿಲ್ವರ್‌ ಜ್ಯುವೆಲರಿಗಳು (Silver Jewel Trend) ಆಗಮಿಸಿದ್ದು, ಇದೀಗ ಟ್ರೆಂಡಿಯಾಗಿವೆ. ಮಾನಿನಿಯರು ಧರಿಸುವ ಸಾಮಾನ್ಯ ಡಿಸೈನ್‌ಗಳಿಂದಿಡಿದು ಬ್ರೈಡಲ್‌ ಜ್ಯುವೆಲರಿ ವಿನ್ಯಾಸದಲ್ಲೂ ಇವು ಎಂಟ್ರಿ ನೀಡಿವೆ. ಯಾವ್ಯಾವುದು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Silver Jewel Trend
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆಯುವಂತಹ ಡಿಸೈನ್‌ನಲ್ಲಿ ಸಿಲ್ವರ್‌ ಜ್ಯುವೆಲರಿಗಳು (Silver Jewel Trend) ಇದೀಗ ಟ್ರೆಂಡಿಯಾಗಿವೆ. ಮಾನಿನಿಯರ ಸಾಮಾನ್ಯ ಡಿಸೈನ್‌ಗಳಿಂದಿಡಿದು ಬ್ರೈಡಲ್‌ ಜ್ಯುವೆಲರಿಗಳಲ್ಲೂ (Bridal Jewellery) ಎಂಟ್ರಿ ನೀಡಿವೆ. ವೆಡ್ಡಿಂಗ್‌ ಸೀಸನ್‌ನಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಲೆಕ್ಕವಿಲ್ಲದಷ್ಟು ಬಂಗಾರದ ಇಮಿಟೇಷನ್‌ ಡಿಸೈನ್‌ಗಳಲ್ಲೂ ಬಿಡುಗಡೆಗೊಂಡಿವೆ.

Silver Jewel Trend

ಸಿಲ್ವರ್‌ ಜ್ಯುವೆಲರಿಗಳಲ್ಲಿ ಬಂತು ವೆಡ್ಡಿಂಗ್‌ ಆಭರಣಗಳು

“ಸಿಲ್ವರ್‌ ಜ್ಯುವೆಲರಿಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ವೆಡ್ಡಿಂಗ್‌ ಸೀಸನ್‌ಗೆ ಊಹೆಗೂ ಮೀರಿದ ಡಿಸೈನ್‌ನಲ್ಲಿ ಆಗಮಿಸಿವೆ. ಒಂದಕ್ಕಿಂತ ಒಂದು ಡಿಸೈನ್‌ಗಳು ಬಂಗಾರದ ಆಭರಣಗಳ ಡಿಸೈನ್‌ಗಳನ್ನು ಮೀರಿಸಿವೆ. ಹಾಗಾಗಿ ಮದುವೆಯಾಗುವ ಹೆಣ್ಣು ಮಕ್ಕಳು ಮಾತ್ರವಲ್ಲ, ಫ್ಯಾಮಿಲಿಯ ಇತರೇ ಹೆಣ್ಣು ಮಕ್ಕಳು , ಮಾನಿನಿಯರು ಕೂಡ ಇವನ್ನು ಕೊಳ್ಳತೊಡಗಿದ್ದಾರೆ. ಆ ಮಟ್ಟಿಗೆ ಇವು ಮಾನಿನಿಯರನ್ನು ಸೆಳೆದಿವೆ” ಎನ್ನುತ್ತಾರೆ ಜ್ಯುವೆಲರಿ ಮಾರಾಟಗಾರರು.

ಟ್ರೆಂಡಿಯಾಗಿರುವ ಸಿಲ್ವರ್‌ ಜ್ಯುವೆಲರಿಗಳು

ಆಂಟಿಕ್‌ ಆಭರಣಗಳ ಸೆಟ್‌, ಪ್ರೀಶಿಯಸ್‌ ಜ್ಯುವೆಲರಿಗಳು, ಟೆಂಪಲ್‌ ಜ್ಯುವೆಲರಿ, ಕಂಟೆಂಪರರಿ ಡಿಸೈನ್ಸ್‌, ಹವಳದ ಸೆಟ್‌, ಮುತ್ತಿನ ಸೆಟ್‌, ಎಮರಾಲ್ಡ್‌ ಸೆಟ್‌, ಮೋಹನ್‌ಮಾಲ, ಬಿಗ್‌ ಚೋಕರ್ಸ್‌, ಸೊಂಟದ ಪಟ್ಟಿ, ಬಾಜುಬಂಧ್‌, ಕಡಗ, ಬಂಗಾರದ ಬಳೆಗಳ ಸೆಟ್‌, ಜಡೆನಾಗರ, ಮಾಟಿ, ಕಿವಿಯ ಬಿಗ್‌ ಮುತ್ತಿನ ಜುಮಕಿಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಡಿಸೈನ್‌ನ ಸಿಲ್ವರ್‌ ಆಭರಣಗಳು ಎಂಟ್ರಿ ನೀಡಿವೆ. ಅದರಲ್ಲೂ ಬಂಗಾರದ ಹಾಗೂ ವಜ್ರಾಭರಣಗಳ ಸೆಟ್‌ಗಳು ಅತಿ ಹೆಚ್ಚು ವೆಡ್ಡಿಂಗ್‌ ಬ್ರೈಡಲ್‌ ಸೆಟ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

Silver Jewel Trend

ಮೆನ್ಸ್ ಗೂ ಬಂತು ಸಿಲ್ವರ್‌ ಜ್ಯುವೆಲರಿ

ಬ್ರೇಸ್‌ಲೆಟ್ಸ್‌, ಕತ್ತಿನ ನಾನಾ ಬಗೆಯ ಚೈನ್‌ಗಳು, ಕೈ ಉಂಗುರಗಳು ಇದೀಗ ಮೆನ್ಸ್‌ ಜ್ಯುವೆಲರಿ ಕೆಟಗರಿಯಲ್ಲಿ ದೊರೆಯುತ್ತಿವೆ. ಬಂಗಾರ ಖರೀದಿಸಲು ಆಗದಿದ್ದವರಿಂದಿಡಿದು, ವೆರೈಟಿ ಡಿಸೈನ್‌ ಸೆಟ್‌ಗಳನ್ನು ಧರಿಸಲು ಬಯಸುವವರು, ಒಮ್ಮೆ ಧರಿಸಿ, ಮತ್ತೆ ರಿಪೀಟ್‌ ಮಾಡಲು ಬಯಸದವರು ಸಿಲ್ವರ್‌ ಜ್ಯುವೆಲರಿಗಳನ್ನು ಖರೀದಿಸತೊಡಗಿದ್ದಾರೆ.

ಕೈಗೆಟಕುವ ಬೆಲೆಯಲ್ಲಿ ಸಿಲ್ವರ್‌ ಜ್ಯುವೆಲರಿ

“ಮೊದಮೊದಲು ಕೇವಲ ಹೆಣ್ಣು ಮಕ್ಕಳ ಸಿಲ್ವರ್‌ ಜ್ಯುವೆಲರಿಗಳು ಹೆಚ್ಚು ಲಭ್ಯವಿದ್ದವು. ಇದೀಗ ಪುರುಷರ ಜ್ಯುವೆಲರಿಗಳು ಬಂದಿವೆ. ಕಡಿಮೆ ದರದಲ್ಲಿ ಅಂದರೇ ಸಾವಿರಾರು ರೂ.ಗಳಲ್ಲಿ ಭಾರಿ ಡಿಸೈನ್‌ನವನ್ನು ಖರೀದಿಸಬಹುದೆಂಬ ಲೆಕ್ಕಚಾರ ಹಲವರದ್ದು. ಲಕ್ಷಗಟ್ಟಲೇ ಬಂಗಾರಕ್ಕೆ ಸುರಿಯುವ ಬದಲು ಅದರ ತದ್ರೂಪದಂತಿರುವ ಸಿಲ್ವರ್‌ ಜ್ಯುವೆಲರಿಗಳನ್ನು ಖರೀದಿಸಿ, ಧರಿಸುವುದು ಇದೀಗ ಕಾಮನ್‌ ಆಗಿದೆ” ಎನ್ನುತ್ತಾರೆ ಜ್ಯುವೆಲರಿ ಡಿಸೈನರ್ಸ್.‌

ಇದನ್ನೂ ಓದಿ: Fashion Trend: ಯುವತಿಯರನ್ನು ಸೆಳೆದಿರುವ 3 ಶೈಲಿಯ ವೈಟ್‌ ಪ್ಯಾಂಟ್‌ಗಳಿವು!

ಸಿಲ್ವರ್‌ ಜ್ಯುವೆಲರಿ ಪ್ರಿಯರು ಖರೀದಿಗೆ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ್ದು…

  • ಟ್ರೆಂಡಿಯಾಗಿರುವ ವಿನ್ಯಾಸದವನ್ನು ಖರೀದಿಸಿ.
  • ಹೆವ್ವಿ ಬಂಗಾರದ ರಿಪ್ಲೀಕಾ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ.
  • ನಿರ್ವಹಣೆ ಬಗ್ಗೆ ಮೊದಲೇ ತಿಳಿದುಕೊಳ್ಳಿ.
  • ನೀರು ಸೋಕಿಸಿದಲ್ಲಿ ಮಾಸಬಹುದು.
  • ಪಾಲಿಶ್‌ ಕಡಿಮೆಯಾದಾಗ ಮತ್ತೊಮ್ಮೆ ಹಾಕಿಸಲು ಅಂಗಡಿಯವರನ್ನು ಸಂಪರ್ಕಿಸಿ.
  • ರೀಸೇಲ್‌ ವ್ಯಾಲ್ಯೂ ಬಗ್ಗೆ ತಿಳಿದುಕೊಂಡು ಖರೀದಿಸಿ.
  • ಬ್ರಾಂಡೆಡ್‌ ಆಭರಣ ಮಾರಾಟಗಾರರ ಬಳಿ ಕೊಳ್ಳಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Used Car Sale
ಪ್ರಮುಖ ಸುದ್ದಿ4 mins ago

Used Car Sale : ನಿಮ್ಮ ಕಾರನ್ನು ಜಾಸ್ತಿ ಬೆಲೆಗೆ ಮಾರಬೇಕೇ? ಈ ಕೆಲವು ತಂತ್ರಗಳನ್ನು ಅನುಸರಿಸಿ

Summer Star Fashion
ಫ್ಯಾಷನ್11 mins ago

Summer Star Fashion: ಏನಿದು ನಟಿ ಅದಿತಿ ರಾವ್‌ ಹೈದರಿಯ ಕೋ-ಆರ್ಡ್ ಕೊಸ್ಟಾ ಪ್ಯಾಂಟ್‌ ಟ್ರೆಂಡ್‌?

Lok Sabha Elections 2024 7 celebs who didn’t vote in Lok Sabha Elections
ಬಾಲಿವುಡ್13 mins ago

Lok Sabha Elections 2024: ಈ ಬಾಲಿವುಡ್‌ ಸ್ಟಾರ್ಸ್‌ಗಳು ಈ ಬಾರಿ ವೋಟ್‌ ಹಾಕಲೇ ಇಲ್ಲ!

RR vs RCB
ಕ್ರೀಡೆ21 mins ago

RCB vs RR: ಆರ್​ಸಿಬಿ-ರಾಜಸ್ಥಾನ್​ ಪಂದ್ಯಕ್ಕೆ ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

Mangalore Tour
ಪ್ರವಾಸ24 mins ago

Mangalore Tour: ಮಂಗಳೂರಿಗೆ ಬಂದರೆ ಈ ಸ್ಥಳಗಳಿಗೆ ಭೇಟಿ ಕೊಡಲು ಮರೆಯದಿರಿ

2nd Pux Exam
ಬೆಂಗಳೂರು32 mins ago

2nd Puc Exam : ಆನ್‌ಲೈನ್‌ನಲ್ಲೆ ಸಿಗುತ್ತೆ ಪಿಯು ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ; ಅರ್ಜಿ ಸಲ್ಲಿಸಲು ಹೀಗೆ ಮಾಡಿ

Boiler Blast
ಕರ್ನಾಟಕ33 mins ago

Boiler Blast: ಅಥಣಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಮಹಿಳೆ ಸಾವು, ಇಬ್ಬರ ಸ್ಥಿತಿ ಗಂಭೀರ

Equity Market
ಪ್ರಮುಖ ಸುದ್ದಿ35 mins ago

Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Prajwal Revanna Case HD Kumaraswamy slams DK Shivakumar
ರಾಜಕೀಯ39 mins ago

Prajwal Revanna Case: ಡಿಕೆಶಿ ಒಪ್ಪಿಕೊಂಡಿದ್ದಕ್ಕಿಂತ ಸಾಕ್ಷಿ ಬೇಕಾ ಸಿದ್ದರಾಮಯ್ಯ? ಸಿಎಂಗೆ ಎಚ್‌ಡಿಕೆ ಪ್ರಶ್ನೆ

Allu Arjun Sneha spotted at a dhaba
South Cinema41 mins ago

Allu Arjun: ರಸ್ತೆ ಬದಿ ಡಾಬಾದಲ್ಲಿ ಊಟ ಮಾಡಿದ ಅಲ್ಲು ಅರ್ಜುನ್‌ ದಂಪತಿ! ಫ್ಯಾನ್ಸ್‌ಗೆ ಅಚ್ಚರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ1 day ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ2 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ2 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ2 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ4 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ5 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು5 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌