Wildlife Tourism: ವನ್ಯಜೀವಿ ಪ್ರಿಯರೇ, ಪೆಂಚ್‌ ಹುಲಿಧಾಮದ ಕಾಡೊಳಗೆ ಸೈಕಲ್‌ ಸಫಾರಿ ಮಾಡಿ! - Vistara News

ಪ್ರವಾಸ

Wildlife Tourism: ವನ್ಯಜೀವಿ ಪ್ರಿಯರೇ, ಪೆಂಚ್‌ ಹುಲಿಧಾಮದ ಕಾಡೊಳಗೆ ಸೈಕಲ್‌ ಸಫಾರಿ ಮಾಡಿ!

ಮಹಾರಾಷ್ಟ್ರದ ಪೆಂಚ್‌ ಹುಲಿ (Pench tiger reserve) ರಕ್ಷಿತಾರಣ್ಯದ ದಟ್ಟ ಕಾಡೊಳಗೆ ಇದೀಗ ಮೊದಲ ಬಾರಿಗೆ ಸೈಕಲ್‌ ಸಫಾರಿ (Bicycle safari) ಆರಂಭವಾಗಿದೆ.

VISTARANEWS.COM


on

Man death in tiger attack in Nittur village
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನೀವು ವನ್ಯಜೀವಿ (wildlife enthusiasts) ಪ್ರಿಯರೇ? ನಿಮಗೆ ಸೈಕಲ್‌ ಸವಾರಿಯೆಂದರೆ (bicycle ride) ಬಹಳ ಇಷ್ಟವೇ? ಹಾಗಿದ್ದರೆ ನಿಮ್ಮ ಮುಂದೊಂದು ಅದ್ಭುತ ಅವಕಾಶ ತೆರೆದಿದೆ. ಮಹಾರಾಷ್ಟ್ರದ ಪೆಂಚ್‌ ಹುಲಿ (Pench tiger reserve) ರಕ್ಷಿತಾರಣ್ಯದ ದಟ್ಟ ಕಾಡೊಳಗೆ ಇದೀಗ ಮೊದಲ ಬಾರಿಗೆ ಸೈಕಲ್‌ ಸಫಾರಿ (Bicycle safari) ಆರಂಭವಾಗಿದೆ. ಸೈಕಲ್‌ ಪ್ರೇಮಿಗಳಿನ್ನು ತಮ್ಮ ಸೈಕಲ್‌ ಜೊತೆಗೆ ಕಾಡೊಳಗೆ (Wildlife Tourism) ಹೋಗಬಹುದು!

ಹೌದು. ಕೇಳಲು ಕೊಂಚ ಭಯವಾಗುತ್ತಿದೆಯೇ? ಭಯ ಸಹಜ. ಯಾಕೆಂದರೆ, ಪೆಂಚ್‌ ಟೈಗರ್‌ ರಿಸರ್ವ್‌ ಹೇಳಿ ಕೇಳಿ ಹುಲಿಗಳಿಗೆ ಪ್ರಸಿದ್ಧಿ ಪಡೆದ ಕಾಡು. ಕೇವಲ ಹುಲಿಗಳಷ್ಟೇ ಅಲ್ಲ, ಚಿರತೆ, ಕರಡಿ ಮತ್ತಿತರ ಕಾಡು ಪ್ರಾಣಿಗಳು ನಿರ್ಭೀತಿಯಿಂದ ಸುತ್ತುವ ಕಾಡಿದು. ಇಂಥ ರಾಷ್ಟ್ರೀಯ ಉದ್ಯಾನದೊಳಗೆ ಸಫಾರಿ (tiger safari) ಮಾಡುವ ಕನಸು ಪ್ರತಿಯೊಬ್ಬ ವನ್ಯಜೀವಿ ಪ್ರೇಮಿಗೂ ಇದ್ದೇ ಇರುತ್ತದೆ ನಿಜ. ಆದರೆ, ಸೈಕಲ್‌ ಚಲಾಯಿಸುತ್ತಾ ಸಫಾರಿ ಮಾಡುವುದು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ನಿಮ್ಮನ್ನು ಕಾಡದೆ ಇರದು. ಆದರೆ, ಇದು ಸುರಕ್ಷಿತವಾದ್ದರಿಂದಲೇ ಇಂಥದ್ದೊಂದು ಹೊಸ ಅವಕಾಶವನ್ನು ವನ್ಯಜೀವಿ ಪ್ರಿಯರಿಗೆ, ಪ್ರವಾಸಿಗರಿಗೆ ಲಭಿಸಿದೆ. ಈ ಜಾಗದಲ್ಲಿ ಪೆಂಚ್‌ನ ಮುಖ್ಯ ಪ್ರದೇಶದಲ್ಲಿರುವಷ್ಟು ವನ್ಯಜೀವಿಗಳು ಇಲ್ಲದಿರುವುದರಿಂದ ಸುರಕ್ಷಿತವಾಗಿ ಸೈಕಲ್‌ ಸವಾರಿ ಮಾಡಬಹುದು ಎಂದು ಪೆಂಚ್‌ ರಕ್ಷಿತಾರಣ್ಯ ಅಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದರೆ, ಈ ಸೈಕಲ್‌ ಸಫಾರಿಯ ಮೂಲಕ ಪೆಂಚ್‌ನೊಳಗೆ ಎಲ್ಲ ಜಾಗಗಳಿಗೂ ಸವಾರಿ ಮಾಡುವಂತಿಲ್ಲ. ಹೆಚ್ಚು ಭಯವಿಲ್ಲದ, ಸುರಕ್ಷಿತವಾದ ಪ್ರದೇಶವಾಗಿರುವ ಕೊಲಿತ್ಮಾರಾದಿಂದ ಕುನ್ವಾರ ಭಿವ್ಸೆನ್‌ ಪ್ರದೇಶದವರೆಗೆ ಮಾತ್ರ ಈ ಸೈಕಲ್‌ ಸಫಾರಿ ಲಭ್ಯವಿದೆ. 48 ಕಿಮೀ ವ್ಯಾಪ್ತಿಯ ಈ ಪ್ರದೇಶದಲ್ಲಿ ಸೈಕಲ್‌ ಚಲಾಯಿಸುತ್ತಾ, ನರ್ಹರ್‌, ಬನೇರಾ ಹಾಗೂ ಚಾರ್‌ಗಾಂ ಮತ್ತಿತರ ಪ್ರದೇಶಗಳಲ್ಲಿರುವ ಕಾಡನ್ನು ಸುತ್ತು ಹಾಕಿ ಬರಬಹುದು. ಈ ಮೊದಲು ಪ್ರವಾಸಿಗರು ಕೇವಲ ಜೀಪ್‌ ಹಾಗೂ ಕ್ಯಾಂಟರ್‌ಗಳ ಮೂಲಕ ಪೆಂಚ್‌ ಕಾಡನ್ನು ಸುತ್ತಬಹುದಾಗಿತ್ತು.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ತಮ್ಮದೇ ಸೈಕಲನ್ನು ತಂದರೆ, ಈ ಸೈಕಲ್‌ ಸಫಾರಿಗೆ 100 ರೂಪಾಯಿ ಪ್ರವೇಶ ದರವಿರಲಿದೆ. ಆದರೆ, ಸ್ಥಳದಲ್ಲೇ ಬಾಡಿಗೆ ಸೈಕಲ್‌ ಕೂಡಾ ಲಭ್ಯವಿದ್ದು, ಅವುಗಳ ಮೂಲಕ ಸಫಾರಿ ಮಾಡಲು ಪ್ರತಿಯೊಬ್ಬನಿಗೆ 300 ರೂ ಪ್ರವೇಶ ದರ ವಿಧಿಸಲಿದೆ. ಗುಂಪಿನಲ್ಲಿ ಹೋಗುವುದಾದರೆ, ಎರಡರಿಂದ ಆರು ಮಂದಿ ಜೊತೆಯಾಗಿ ಹೋಗಬಹುದಾಗಿದ್ದು, ಪ್ರತಿ ಗುಂಪಿನ ಜೊತೆಗೆ ಅನುಭವಿ ಗೈಡ್‌ ಕೂಡಾ ಜೊತೆಗಿರಲಿದ್ದಾರೆ. ಗೈಡ್‌ಗಾಗಿ 1000 ರೂಪಾಯಿಗಳ ಶುಲ್ಕವನ್ನು ನೀಡಬೇಕಾಗಿದ್ದು, ಸುರಕ್ಷಿತತೆಯ ದೃಷ್ಟಿಯಿಂದ ಗೈಡ್‌ ಇಲ್ಲದೆ, ಪ್ರವೇಶ ನೀಡಲಾಗುವುದಿಲ್ಲ.

ಇದನ್ನೂ ಓದಿ: Travel Insurance : ಪ್ರವಾಸ ಮಾಡುವಾಗ ಪ್ರಯಾಣ ವಿಮೆ ತುಂಬಾನೇ ಅಗತ್ಯ; ಏನಕ್ಕೆಲ್ಲ ಬಳಕೆಗೆ ಬರುತ್ತದೆ ಗೊತ್ತಾ?

ಈಗಾಗಲೇ ಸೈಕಲ್‌ ಸಫಾರಿ ಆಗಸ್ಟ್‌ 20ರಂದು ಆರಂಭವಾಗಿದ್ದು, ಸುಮಾರು 80 ಮಂದಿ ಸೈಕಲ್‌ ಸಫಾರಿ ಮಾಡಿದ್ದಾರೆ. ಸೈಕಲ್‌ ಸಫಾರಿ ಮಾಡುವುದರಿಂದ ಇನ್ನೂ ಆಳವಾಗಿ, ಪೆಂಚ್‌ ಕಾಡನ್ನು ಶಾಂತಿಯಿಂದ ನೋಡಬಹುದಾಗಿದ್ದು, ಇಲ್ಲಿನ ಕಾಡಿನ ಸೌಂದರ್ಯವಷ್ಟೇ ಅಲ್ಲ, ಸಸ್ಯ ಪ್ರಬೇಧ, ಭೂವೈವಿಧ್ಯ, ಅಪರೂಪದ ಪಕ್ಷಿ ಸಂಕುಲವನ್ನು ಕೂಲಂಕುಷವಾಗಿ ವೀಕ್ಷಿಸುವ ಅವಕಾಶ ಸಿಗಲಿದೆ. ಅಷ್ಟೇ ಅಲ್ಲದೆ, ಪೆಂಚ್‌ನ ಕೊಲಿತ್ಮಾರಾದಿಂದ ಕುನ್ವಾರ ಭಿವ್ಸೆನ್‌ ಪ್ರದೇಶದವರೆಗಿನ ಈ ಹಾದಿ ನಯನ ಮನೋಹರವಾದ ಕಾಡಾಗಿದ್ದು, ಕಣಿವೆ, ಬಯಲು, ದಟ್ಟ ಕಾಡು ಹೀಗೆ ಎಲ್ಲ ಬಗೆಯ ಪ್ರಾಕೃತಿಕ ವೈವಿಧ್ಯವನ್ನೂ ಹೊಂದಿರುವ ಪ್ರದೇಶವಾಗಿದೆ. ಬಹಳ ಸಾರಿ, ಜೀಪ್‌ ಸಫಾರಿ ಗದ್ದಲ, ಕಡಿಮೆ ಅವಧಿ ಇತ್ಯಾದಿಗಳು ನಿಜವಾದ ವನ್ಯಜೀವಿ ಪ್ರಿಯರಿಗೆ ತೃಪ್ತಿಯನ್ನು ಕೊಡಲಾರದು. ಅಂಥವರಿಗೆ, ಕುತೂಹಲದ ಕಣ್ಣು ಇರುವ ನಿಜವಾದ ಪ್ರಕೃತಿಪ್ರೇಮಿಗಳಿಗೆ ಕಾಡೊಳಗೆ ಮೌನವಾಗಿ ಕಳೆದುಹೋಗಲು, ಈ ಹೊಸ ಸೈಕಲ್‌ ಸಫಾರಿ ಯೋಜನೆ ಚೇತೋಹಾರಿ ಅನುಭವವನ್ನೇ ನೀಡಲಿದೆ!

ಇದನ್ನೂ ಓದಿ: Travel Tips: ದ್ವೀಪಗಳೆಂಬ ಮೋಹಕ ತಾಣಗಳು! ಈ ಮಳೆಗಾಲದಲ್ಲಿ ಇವು ನಿಮ್ಮ ಮೋಹ ಅರಳಿಸಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tatkal Tickets: ಕೊನೆ ಘಳಿಗೆಯಲ್ಲಿ ರೈಲು ಪ್ರಯಾಣಕ್ಕೆ ತತ್ಕಾಲ್‌ ಟಿಕೆಟ್‌ ಪಡೆಯುವುದು ಹೇಗೆ?

ತತ್ಕಾಲ್ ಸೇವೆಯ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣದ ಪ್ರಯಾಣದ ಯೋಜನೆಗಳಿಗೆ ಟಿಕೇಟ್‌ಗಳನ್ನು ಬುಕ್ ಮಾಡಬಹುದು. ಎಲ್ಲಾ ರೈಲುಗಳ ಕಾಯ್ದಿರಿಸಿದ ಕೋಚ್ ಗಳಲ್ಲಿ ಭಾರತೀಯ ರೈಲ್ವೇಯು ರೈಲು ಟಿಕೆಟ್‌ಗಳ ತತ್ಕಾಲ್ ಬುಕಿಂಗ್ (Tatkal Tickets) ಅನ್ನು ಅನುಮತಿಸುತ್ತದೆ. ತತ್ಕಾಲ್‌ ಟಿಕೆಟ್‌ ಪಡೆಯುವ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

By

Tatkal Tickets
Koo

ಕೊನೆ ಘಳಿಗೆಯಲ್ಲಿ ಪ್ರವಾಸ (travel) ಹೊರಡುವ ಯೋಜನೆಯೇ ಅಥವಾ ತುರ್ತಾಗಿ ಬೇರೆ ನಗರಕ್ಕೆ ಹೋಗಬೇಕಿದೆಯೇ? ಆದರೆ ಇನ್ನೂ ರೈಲ್ವೇ ಟಿಕೇಟ್ ಕಾದಿರಿಸಿಲ್ಲ ಎಂಬ ಚಿಂತೆ ಬೇಡ. ಐಆರ್‌ಸಿಟಿಸಿಯ (IRCTC) ತತ್ಕಾಲ್ ಸೇವೆಯು (Tatkal Tickets) ಪ್ರಯಾಣಿಕರಿಗೆ ಹೊರಡುವ ಒಂದು ದಿನದ ಮುಂಚಿತವಾಗಿ ರೈಲು ಸೀಟುಗಳನ್ನು ಕಾಯ್ದಿರಿಸಲು ಅನುವು ಮಾಡಿಕೊಡುತ್ತದೆ.

ತತ್ಕಾಲ್ ಸೇವೆಯ ವ್ಯವಸ್ಥೆಯನ್ನು ಬಳಸಿಕೊಂಡು ತಕ್ಷಣದ ಪ್ರಯಾಣದ ಯೋಜನೆಗಳಿಗೆ ಟಿಕೇಟ್‌ಗಳನ್ನು ಬುಕ್ ಮಾಡಬಹುದು. ಎಲ್ಲಾ ರೈಲುಗಳ ಕಾಯ್ದಿರಿಸಿದ ಕೋಚ್‌ಗಳಲ್ಲಿ ಭಾರತೀಯ ರೈಲ್ವೇಯು ರೈಲು ಟಿಕೆಟ್‌ಗಳ ತತ್ಕಾಲ್ ಬುಕಿಂಗ್ ಅನ್ನು ಅನುಮತಿಸುತ್ತದೆ. ಆದ್ದರಿಂದ ನೀವು ಕೊನೆಯ ನಿಮಿಷದಲ್ಲಿ ಸ್ಲೀಪರ್, 3AC, 2AC, ಅಥವಾ 1AC ಯ ಟಿಕೆಟ್ ಖರೀದಿಸಬಹುದು.

ತತ್ಕಾಲ್ ಟಿಕೆಟ್ ಶುಲ್ಕ

ಐಆರ್‌ಸಿಟಿಸಿ ಬುಕಿಂಗ್‌ಗಳಿಗೆ ಹೆಚ್ಚುವರಿ ದರವನ್ನು ವಿಧಿಸುತ್ತದೆ. ಏಕೆಂದರೆ ಅದು ತತ್ಕಾಲ್ ಯೋಜನೆಗೆ ಸೀಟುಗಳನ್ನು ಕಾಯ್ದಿರಿಸಬೇಕು. ಉದಾಹರಣೆಗೆ ತತ್ಕಾಲ್ ಟಿಕೆಟ್‌ನ ಬೆಲೆ ಅಂದಾಜು 1,300 ರೂ. ಆಗಿರುತ್ತದೆ ಎಂದರೆ, ಸಾಮಾನ್ಯ ಟಿಕೆಟ್‌ಗಳ ಬೆಲೆ 900 ರೂ. ಆಗಿರುತ್ತದೆ. ಎರಡನೇ ದರ್ಜೆಯ (ಕುಳಿತುಕೊಳ್ಳುವಿಕೆ) ಹೊರತುಪಡಿಸಿ, ಐಆರ್‌ಸಿಟಿಸಿ ಎಲ್ಲಾ ಪ್ರಯಾಣಿಕರಿಗೆ ಮೂಲ ದರದ ಶೇ. 30 ಹೆಚ್ಚು ಶುಲ್ಕ ವಿಧಿಸುತ್ತದೆ.

ಬುಕ್ಕಿಂಗ್ ಸಮಯ

ತತ್ಕಾಲ್ ಟಿಕೆಟ್ ಬುಕ್ಕಿಂಗ್ ವಿಂಡೋವನ್ನು ಐಆರ್‌ಸಿಟಿಸಿಯಿಂದ ರೈಲು ಪ್ರಾರಂಭವಾಗುವ ನಿಲ್ದಾಣದಿಂದ ಹೊರಡುವ ಒಂದು ದಿನ ಮೊದಲು ತೆರೆಯಲಾಗುತ್ತದೆ. ಉದಾಹರಣೆಗೆ, ನೀವು ಕೋಲ್ಕತ್ತಾದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರೆ, ಕೋಲ್ಕತ್ತಾದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್‌ ಪ್ರಯಾಣ ಪ್ರಾರಂಭಿಸಿಸುವ ಹಿಂದಿನ ದಿನದಿಂದ ಶುರುವಾಗುತ್ತದೆ. ಹೆಚ್ಚುವರಿಯಾಗಿ ಎಸಿ ವರ್ಗದ ಟಿಕೆಟ್‌ಗಳಿಗಾಗಿ (2A/3A/CC/EC/3E) ಖರೀದಿ ವಿಂಡೋ ಬೆಳಗ್ಗೆ 10 ಗಂಟೆಗೆ ತೆರೆಯುತ್ತದೆ. ಈ ಮಧ್ಯೆ ಎಸಿ ಅಲ್ಲದ ವರ್ಗ (SL/FC/2S) ತತ್ಕಾಲ್ ಟಿಕೆಟ್‌ಗಳು ಬೆಳಗ್ಗೆ 11 ಗಂಟೆಗೆ ಮಾರಾಟವಾಗುತ್ತವೆ.

ಬುಕ್ ಮಾಡುವುದು ಹೇಗೆ?

ಐಆರ್‌ಸಿಟಿಸಿಯ ವೆಬ್‌ಸೈಟ್ irctc.co.in ಗೆ ಹೋಗಿ ಲಾಗ್ ಇನ್ ಮಾಡಲು ನಿಮ್ಮ ಐಆರ್‌ಸಿಟಿಸಿ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ. “ಸೈನ್ ಅಪ್” ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಮತ್ತು ನೀವು ಈಗಾಗಲೇ ಒಂದನ್ನು ಹೊಂದಿಲ್ಲದಿದ್ದರೆ ಸೂಚನೆಗಳನ್ನು ಅನುಸರಿಸುವ ಮೂಲಕ ನೀವು ಐಆರ್ ಸಿಟಿಸಿ ಖಾತೆಯನ್ನು ರಚಿಸಬಹುದು. ಲಾಗ್ ಇನ್ ಮಾಡಿದ ಅನಂತರ “ಬುಕ್ ಟಿಕೆಟ್” ಕ್ಲಿಕ್ ಮಾಡಿ.


“ತತ್ಕಾಲ್” ಬುಕ್ಕಿಂಗ್ ಆಯ್ಕೆಯನ್ನು ಆರಿಸಿ ಮತ್ತು ಪ್ರಯಾಣದ ದಿನಾಂಕ, ಮೂಲ ಮತ್ತು ಗಮ್ಯಸ್ಥಾನದ ನಿಲ್ದಾಣಗಳಂತಹ ಎಲ್ಲಾ ಅಗತ್ಯ ಮಾಹಿತಿಯನ್ನು ನಮೂದಿಸಿ. ನಿಮ್ಮ ಪ್ರಯಾಣಕ್ಕಾಗಿ ನೀವು ಬಯಸುವ ರೈಲು ಮತ್ತು ವರ್ಗವನ್ನು ಆಯ್ಕೆಮಾಡಿ. ಮುಂದೆ ಪ್ರಯಾಣಿಕರ ಮಾಹಿತಿಯನ್ನು ನಮೂದಿಸಿ. ಹೆಚ್ಚುವರಿಯಾಗಿ, ನಿಮ್ಮ ಆದ್ಯತೆಯ ಬರ್ತ್ ಅನ್ನು ನೀವು ಆಯ್ಕೆ ಮಾಡಬಹುದು. ಆದಾಗ್ಯೂ, ನಿಮಗೆ ಬರ್ತ್ ಆಸನವನ್ನು ನಿಯೋಜಿಸಲಾಗುವುದು ಎಂದು ನೀವು ಖಾತರಿಪಡಿಸದಿರಬಹುದು.

ಶುಲ್ಕ ಮತ್ತು ಹೆಚ್ಚುವರಿ ಮಾಹಿತಿಯನ್ನು ಪರಿಶೀಲಿಸಿದ ಅನಂತರ, “ಪಾವತಿಗೆ ಮುಂದುವರಿಯಿರಿ” ಕ್ಲಿಕ್ ಮಾಡಿ. ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು, ನೆಟ್ ಬ್ಯಾಂಕಿಂಗ್, ಯುಪಿಐ ಮತ್ತು ಇತರ ಪರ್ಯಾಯ ವಿಧಾನಗಳು ನೀವು ವಹಿವಾಟಿಗೆ ಪಾವತಿಸಬಹುದಾದ ಮಾರ್ಗಗಳಾಗಿವೆ. ಮೀಸಲಾತಿಯನ್ನು ಪರಿಶೀಲಿಸಿ. ಎಲೆಕ್ಟ್ರಾನಿಕ್ ಟಿಕೆಟ್ ಪಡೆಯಿರಿ.

ಇದನ್ನೂ ಓದಿ: Ambulance Booking : ಬೆಂಗಳೂರಿನಲ್ಲಿ ಆ್ಯಪ್ ​ಮೂಲಕವೇ ಮಾಡಬಹುದು ಆಂಬ್ಯುಲೆನ್ಸ್​ ಬುಕಿಂಗ್

ಐಆರ್‌ಸಿಟಿಸಿ ಅಪ್ಲಿಕೇಶನ್ ಬಳಸುವುದು ಹೇಗೆ?

ಐಆರ್‌ಸಿಟಿಸಿ ಅಪ್ಲಿಕೇಶನ್ ಅನ್ನು ರನ್ ಮಾಡಲು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಹೊಂದಿಸಿ. ಅಪ್ಲಿಕೇಶನ್ ಅನ್ನು ಪ್ರಾರಂಭಿಸಿ ಮತ್ತು ನಿಮ್ಮ ಐಆರ್ ಸಿಟಿಸಿ ರುಜುವಾತುಗಳೊಂದಿಗೆ ಸೈನ್ ಇನ್ ಮಾಡಿ. ಈ ಹಂತದಲ್ಲಿ “ತತ್ಕಾಲ್ ಬುಕಿಂಗ್” ಆಯ್ಕೆ ಮಾಡಿ. ನೀವು ಟಿಕೇಟ್‌ಗಳನ್ನು ಕಾಯ್ದಿರಿಸಿದ್ದರೂ ಹಲವು ಬಾರಿ ಅವುಗಳನ್ನು ದೃಢೀಕರಿಸಲಾಗುವುದಿಲ್ಲ.

ಜನರು ತಮ್ಮ ರೈಲು ಟಿಕೆಟ್ ದೃಢೀಕರಿಸದಿರುವಾಗ ಅಥವಾ ಅವರು ಈಗಿನಿಂದಲೇ ತಮ್ಮ ಪ್ರಯಾಣದ ಯೋಜನೆಗಳನ್ನು ಮಾಡಿದರೆ ತತ್ಕಾಲ್ ಟಿಕೆಟ್ ಅಥವಾ ಪ್ರೀಮಿಯಂ ತತ್ಕಾಲ್ ಅನ್ನು ಆಯ್ಕೆ ಮಾಡುತ್ತಾರೆ. ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಸ್ವಲ್ಪ ಹೆಚ್ಚಿನ ಶುಲ್ಕವನ್ನು ಹೊಂದಿದ್ದರೂ ವೇಗವಾಗಿ ಸೀಟ್ ಲಭ್ಯವಾಗುವುದು.

Continue Reading

ಪ್ರವಾಸ

Ooty Tour: ಪ್ರತಿ ಸೀಸನ್‌ನಲ್ಲೂ ಭಿನ್ನ ಅನುಭವ! ನಿಮ್ಮ ಊಟಿ ಪ್ರವಾಸ ಯಾವಾಗ?

ಊಟಿಗೆ ಯಾವ ಸಮಯದಲ್ಲಿ ಬೇಕಾದರೂ ಭೇಟಿ ನೀಡಬಹುದು. ಇಲ್ಲಿ ಪ್ರತಿಯೊಂದು ತಿಂಗಳೂ ಏನಾದರೂ ಒಂದು ವಿಶೇಷ ಇದ್ದೇ ಇರುತ್ತದೆ. ಹೀಗಾಗಿ ನಿಮ್ಮ ಆಸಕ್ತಿಗೆ ಅನುಗುಣವಾಗಿ ಊಟಿಗೆ ಪ್ರವಾಸ (Ooty Tour) ಹೊರಡುವ ಯೋಜನೆ ಮಾಡಬಹುದು. ಊಟಿಯ ಅದ್ಭುತಗಳ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

By

Ooty Tour
Koo

ಬೇಸಿಗೆಯ ಬಿಸಿಲಿನ ಕಣ್ತಪ್ಪಿಸಿ ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು ಎನ್ನುವ ಆಸೆ ಮನದಲ್ಲಿ ಮೂಡಿದಾಗ ಕೂಡಲೇ ನೆನಪುಗುವುದು ದಕ್ಷಿಣ ಭಾರತದ (southern India) ಸುಪ್ರಸಿದ್ಧ ಪ್ರವಾಸಿ ತಾಣ ಊಟಿ (Ooty Tour). ದಕ್ಷಿಣ ಭಾರತದ ನೀಲಗಿರಿ ಬೆಟ್ಟಗಳಲ್ಲಿ ( Nilgiri Hills) ನೆಲೆಯಾಗಿರುವ ಸುಂದರವಾದ ಗಿರಿಧಾಮ ಪ್ರದೇಶವಾಗಿರುವ ಊಟಿಯಲ್ಲಿ ಕಣ್ತುಂಬಿಕೊಳ್ಳಲು ಸಾಕಷ್ಟು ಪ್ರದೇಶಗಳಿವೆ. ಪ್ರಶಾಂತವಾದ ಭೂದೃಶ್ಯಗಳು, ಆಹ್ಲಾದಕರ ಹವಾಮಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಇದು ಹೊಂದಿದೆ.

ಪ್ರವಾಸ ಪ್ರಿಯರಿಗಾಗಿ ಊಟಿ ಏನನ್ನಾದರೂ ನೀಡುತ್ತದೆ. ಅದು ಪ್ರಕೃತಿಯ ಪ್ರೀತಿ, ಸಾಹಸದ ಪ್ರಜ್ಞೆ ಅಥವಾ ಶಾಂತಿ ಮತ್ತು ಶಾಂತತೆಯ ಹಂಬಲವನ್ನು ತಣಿಸುತ್ತದೆ. ಪ್ರತಿ ಋತುವಿಗೂ ತನ್ನದೇ ಆದ ವಿಶೇಷತೆಯನ್ನು ಒದಗಿಸುತ್ತದೆ. ವರ್ಷವಿಡೀ ಬೇಸಿಗೆಯು ಬಹುವರ್ಣದ ಹೂವುಗಳನ್ನು ತರುತ್ತದೆ. ಮಳೆಗಾಲ ಬಂದೊಡನೆ ಎಲ್ಲವನ್ನೂ ಮಂಜಿನಿಂದ ಆವರಿಸುವಂತೆ ಮಾಡುತ್ತದೆ. ಶರತ್ಕಾಲದಲ್ಲಿ ಉಲ್ಲಾಸಕರವಾದ ಗಾಳಿ ಮತ್ತು ಚಳಿಗಾಲದ ತಂಪು ಅಪ್ಪುಗೆಯನ್ನು ಮರೆಯಲಾಗದು.

ಗಿರಿಧಾಮಗಳ ರಾಣಿ ಎಂದೂ ಕರೆಯಲಾಗುವ ಊಟಿಗೆ ವರ್ಷಪೂರ್ತಿ ಭೇಟಿ ಮಾಡಬಹುದು. ಪ್ರತಿ ಋತುವಿನಲ್ಲಿ ಇದು ತನ್ನದೇ ಆದ ವೈಭವವನ್ನು ತೊಂಬಿಕೊಂಡು ತನುಮನಕ್ಕೆ ಸಂತೋಷವನ್ನು ಉಣಬಡಿಸುತ್ತದೆ. ನಿಖರವಾಗಿ ಯಾವಾಗ ಹೋಗಬೇಕೆಂದು ತಿಳಿಯುವುದು ಖಂಡಿತವಾಗಿಯೂ ನಮ್ಮ ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ. ಊಟಿಯಲ್ಲಿ ಪ್ರತಿ ಸೀಸನ್ ಏನು ವಿಶೇಷ ಎಂಬ ಮಾಹಿತಿ ಇಲ್ಲಿದೆ.


ಬೇಸಿಗೆಯ ವೈಭವ; ಮಾರ್ಚ್‌ನಿಂದ ಜೂನ್

ಊಟಿಗೆ ಪ್ರವಾಸ ಹೋಗಲು ಅತ್ಯಂತ ಜನಪ್ರಿಯ ಸಮಯವೆಂದರೆ ಬೇಸಿಗೆಯ ತಿಂಗಳು. ಮಾರ್ಚ್‌ನಿಂದ ಜೂನ್‌ವರೆಗೆ ಹಗಲಿನ ತಾಪಮಾನವು ಇಲ್ಲಿ 15 ಡಿಗ್ರಿ ಸೆಲ್ಸಿಯಸ್ ನಿಂದ 25 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತದೆ. ಇದು ಬಿಸಿಯಾದ ಬಯಲು ಪ್ರದೇಶಗಳಿಗೆ ಹೋಲಿಸಿದರೆ ಇದು ತುಂಬಾ ಆರಾಮದಾಯಕವಾಗಿದೆ. ಈ ಅವಧಿಯಲ್ಲಿ ಹವಾಮಾನವು ತಂಪಾಗಿರುತ್ತದೆ. ಇದು ಹಸಿರು ಕಣಿವೆಗಳು, ಹೂಬಿಡುವ ಹೂವುಗಳು ಮತ್ತು ಬೀಳುವ ಕ್ಯಾಸ್ಕೇಡ್‌ಗಳನ್ನು ಅನ್ವೇಷಿಸಲು ಸೂಕ್ತವಾಗಿದೆ. ಪ್ರತೀ ವರ್ಷ ಮೇ ತಿಂಗಳಲ್ಲಿ, ಬೊಟಾನಿಕಲ್ ಗಾರ್ಡನ್ಸ್‌ನಲ್ಲಿ ಅದ್ಭುತವಾದ ಪುಷ್ಪ ಪ್ರದರ್ಶನವನ್ನು ನಡೆಸಲಾಗುತ್ತದೆ.


ಮಾನ್ಸೂನ್‌ ಮ್ಯಾಜಿಕ್ -ಜುಲೈನಿಂದ ಸೆಪ್ಟೆಂಬರ್

ಒಮ್ಮೆ ಮಳೆ ಬಂದರೆ ಮತ್ತೆ ಎಲ್ಲವೂ ಹಸಿರು ಬಣ್ಣಕ್ಕೆ ತಿರುಗುತ್ತದೆ. ಆದರೆ ಈ ಬಾರಿ ಹೆಚ್ಚು ತೀವ್ರವಾಗಿ ಇಡೀ ಪ್ರದೇಶವು ಸೊಂಪಾದ ಸಸ್ಯಗಳಿಂದ ಆವೃತವಾಗಿದೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ಇಡೀ ಪಟ್ಟಣವು ದಟ್ಟವಾದ ಎಲೆಗಳ ಅಡಿಯಲ್ಲಿ ಕಣ್ಮರೆಯಾಗುತ್ತದೆ. ಈ ತಿಂಗಳುಗಳಲ್ಲಿ ಜುಲೈನಿಂದ ಸೆಪ್ಟೆಂಬರ್ ವರೆಗೆ, ಊಟಿಯ ಮೇಲೆ ಮಧ್ಯಮ ಅಥವಾ ಭಾರೀ ಮಳೆ ಬೀಳುತ್ತದೆ. ಇದು ಸುತ್ತಲಿನ ಎಲ್ಲವನ್ನೂ ರಿಫ್ರೆಶ್ ಮಾಡಿದಂತೆ ಭಾಸವಾಗುತ್ತದೆ. ಬೇಸಿಗೆಯ ಶಾಖದ ಅನಂತರ ಮತ್ತೊಮ್ಮೆ ಜೀವಂತ ತಳೆದಂತೆ ಕಾಣುತ್ತದೆ. ಮಳೆಯ ಕಾರಣದಿಂದ ಹೊರಾಂಗಣ ಚಟುವಟಿಕೆಗಳು ಸೀಮಿತವಾಗಿರಬಹುದು. ಆದರೆ ಮಂಜಿನಿಂದ ಆವೃತವಾದ ಪರ್ವತಗಳ ಮೂಲಕ ಹರಿಯುವ ತೊರೆಗಳ ಸೌಂದರ್ಯ ಇಮ್ಮಡಿಯಾಗುತ್ತದೆ.


ಶರತ್ಕಾಲದ ಅದ್ಭುತ- ಅಕ್ಟೋಬರ್‌ನಿಂದ ನವೆಂಬರ್

ಮಳೆಗಾಲ ಅವಧಿ ಮುಗಿದ ಅನಂತರ, ಶರತ್ಕಾಲದಲ್ಲಿ ಆಕಾಶವು ಮತ್ತೆ ನೀಲಿ ಬಣ್ಣಕ್ಕೆ ತಿರುಗುತ್ತದೆ. ಚಳಿಗಾಲ ಪ್ರಾರಂಭವಾಗುವವರೆಗೆ ಪ್ರಶಾಂತ ಪರಿಸರ ಮನಸ್ಸಿಗೆ ಹಿತ ನೀಡುತ್ತದೆ. ಈ ಸಮಯದಲ್ಲಿ ತಾಪಮಾನವು 10 ಡಿಗ್ರಿಯಿಂದ 20 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. ಹೀಗಾಗಿ ಇದು ಚಟುವಟಿಕೆಗಳಿಗೆ ಸೂಕ್ತವಾಗಿರುತ್ತದೆ. ಟ್ರೆಕ್ಕಿಂಗ್, ಬೋಟಿಂಗ್, ದೃಶ್ಯವೀಕ್ಷಣೆ ನಡೆಸಲು ಸೂಕ್ತ ಸಮಯವಾಗಿರುತ್ತದೆ. ಹವಾಮಾನವು ಸಾಕಷ್ಟು ಸ್ನೇಹಪರವಾಗಿರುತ್ತದೆ. ಛಾಯಾಗ್ರಹಣಕ್ಕೆ ಇದು ಸೂಕ್ತ ಸಮಯ. ಈ ಸಂದರ್ಭದಲ್ಲಿ ಊಟಿ ಮಾರಿಯಮ್ಮನ್ ದೇವಾಲಯದ ಉತ್ಸವವನ್ನು ಕಣ್ತುಂಬಿಕೊಳ್ಳಲು ಮರೆಯಬೇಡಿ.


ಚಳಿಗಾಲದ ವಂಡರ್ ಲ್ಯಾಂಡ್ (ಡಿಸೆಂಬರ್‌ನಿಂದ ಫೆಬ್ರವರಿ)

ಚಳಿಗಾಲದಲ್ಲಿ ರಾತ್ರಿಯ ಸಮಯದಲ್ಲಿ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಸುಮಾರು 5 ಡಿಗ್ರಿ ಸೆಲ್ಸಿಯಸ್ ಗಿಂತಲೂ ಕೆಳಗೆ ಇಳಿಯುತ್ತದೆ. ಮುಂಜಾನೆಯು ಸಾಮಾನ್ಯವಾಗಿ ಮಂಜಿನಿಂದ ಕೂಡಿರುತ್ತದೆ. ಆದರೆ ಇಡೀ ದಿನ ತಂಪಾಗಿರುತ್ತದೆ.

ಇದನ್ನೂ ಓದಿ: Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ಸಾಕಷ್ಟು ಬಿಸಿಲು ಸಿಗುತ್ತದೆ. ಆದರೂ ಪ್ರದೇಶದ ಸುತ್ತಲಿನ ದಟ್ಟವಾದ ಕಾಡುಗಳಿಂದಾಗಿ ಸೂರ್ಯನ ಬೆಳಕು ಅಷ್ಟೇನೂ ನೆಲದ ಮಟ್ಟವನ್ನು ತಲುಪುವುದಿಲ್ಲ, ಆದ್ದರಿಂದ ಚಹಾ ತೋಟಗಳ ಸುತ್ತಲೂ ಮಾಂತ್ರಿಕ ಸ್ಪರ್ಶ ನೀಡಿದಂತೆ ಭಾಸವಾಗುತ್ತದೆ. ಸಾಹಸಿಗಳು ನೀಲಗಿರಿಯ ಅತೀ ಎತ್ತರದ ಪ್ರದೇಶವಾದ ದೊಡ್ಡಬೆಟ್ಟ ಶಿಖರದಲ್ಲಿ ಚಾರಣಕ್ಕೆ ಹೋಗಬಹುದು ಅಥವಾ ವಿವಿಧ ಜಾತಿಯ ಪ್ರಾಣಿಗಳು, ಪಕ್ಷಿಗಳು, ಸರೀಸೃಪಗಳು, ಕೀಟಗಳನ್ನು ಮುದುಮಲೈ ವನ್ಯಜೀವಿ ಅಭಯಾರಣ್ಯದಲ್ಲಿ ಅನ್ವೇಷಿಸಬಹುದು. ಜನವರಿಯಲ್ಲಿ ಇಲ್ಲಿ ವಾರ್ಷಿಕ ಚಹಾ ಪ್ರವಾಸೋದ್ಯಮ ಉತ್ಸವ ನಡೆಯುತ್ತದೆ. ಇಲ್ಲಿ ಸಾಂಸ್ಕೃತಿಕ ಪ್ರದರ್ಶನಗಳನ್ನು ಆನಂದಿಸಬಹುದು, ವಿವಿಧ ಮಾದರಿಯ ಚಹಾಗಳನ್ನು ಸವಿಯಬಹುದು.

Continue Reading

ಪ್ರವಾಸ

Kochi Tour: ವಾರಾಂತ್ಯದ ಪ್ರವಾಸಕ್ಕೆ ಕೊಚ್ಚಿ ಸೂಕ್ತ ತಾಣ; ಏನೇನಿವೆ ಆಕರ್ಷಣೆ?

ವಾರಾಂತ್ಯದ ವಿಹಾರಕ್ಕೆ ಕೊಚ್ಚಿಯಲ್ಲಿ (Kochi Tour) ಯಾವುದೇ ಕೊರತೆ ಇಲ್ಲ. ಮುನ್ನಾರ್‌ನ ಮಂಜಿನ ಬೆಟ್ಟಗಳಿಂದ ಹಿಡಿದು ಅಲೆಪ್ಪಿ ಮತ್ತು ಚೆರೈ ಬೀಚ್‌ನ ಶಾಂತ ಹಿನ್ನೀರು ಮತ್ತು ಮರಳಿನ ತೀರಗಳವರೆಗೆ ಅನೇಕ ರೋಮಾಂಚಕಾರಿ ಸ್ಥಳಗಳು ಇಲ್ಲಿದೆ. ಈ ಪ್ರವಾಸಿ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Kochi Tour
Koo

ಸಮುದ್ರ ತೀರಗಳಿಂದ ಸುತ್ತುವರಿದಿರುವ ಕೇರಳದ (kerala) ಹೃದಯ ಭಾಗವಾದ ಕೊಚ್ಚಿಯು ಅತ್ಯಂತ ಆಕರ್ಷಕ ಪ್ರವಾಸಿ (Kochi Tour) ತಾಣಗಳಿಂದ ದೂರದ ಊರಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಹೆಸರುವಾಸಿಯಾಗಿರುವ ಕೊಚ್ಚಿ ಗೇಟ್ ವೇ ಆಗಿರುವ ಹಿನ್ನೀರು (backwaters) ಪ್ರದೇಶಗಳಿಂದ, ಗಿರಿಧಾಮಗಳಿಂದ (hill stations) ನೈಸರ್ಗಿಕ ಸೌಂದರ್ಯವನ್ನು ಮಡಿಲಲ್ಲಿ ತುಂಬಿಕೊಂಡು ನಿಂತಂತಿದೆ.

ಕಣ್ಣಿಗೆ ಸೌಂದರ್ಯ, ಮನಸ್ಸಿಗೆ ಶಾಂತಿ ನೀಡುವ ಪ್ರಶಾಂತವಾದ ಮರಳಿನ ಬಿಳಿ ಕಡಲತೀರಗಳು ಮನೆಯಿಂದ ದೂರವಿದ್ದು, ಕೊಂಚ ರಿಲ್ಯಾಕ್ಸ್ ಮಾಡಿಕೊಳ್ಳಬೇಕು ಎನ್ನುವವರಿಗೆ ಸೂಕ್ತ ತಾಣ ಕೊಚ್ಚಿ. ಇಲ್ಲಿನ ಸುತ್ತಮುತ್ತ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳಿವೆ. ವಾರಾಂತ್ಯದ ರಜೆಯನ್ನು ಇಲ್ಲಿ ಕಳೆಯಬಹುದು.


ಮುನ್ನಾರ್ (Munnar)

ಚಹಾ ತೋಟಗಳು, ಮಂಜಿನ ಕಣಿವೆಗಳು ಮತ್ತು ಶಾಂತ ವಾತಾವರಣಕ್ಕೆ ಹೆಸರುವಾಸಿಯಾದ ಮುನ್ನಾರ್ ಸುಂದರವಾದ ಗಿರಿಧಾಮವಾಗಿದ್ದು, ಕೊಚ್ಚಿಯ ಸಮೀಪದಲ್ಲಿದೆ. ಮುನ್ನಾರ್‌ಗೆ ಹೋಗುವ ದಾರಿಯಲ್ಲಿ ದಟ್ಟ ಕಾಡುಗಳು ಮತ್ತು ಹಸಿರು ಪರ್ವತಗಳ ರುದ್ರರಮಣೀಯ ದೃಶ್ಯಗಳನ್ನು ನೀಡುತ್ತದೆ. ಮುನ್ನಾರ್ ತಲುಪಿದ ಅನಂತರ ಟ್ರೆಕ್ಕಿಂಗ್, ಪಕ್ಷಿ ವೀಕ್ಷಣೆಗೆ ಹೋಗಬಹುದು ಅಥವಾ ಶಾಂತಿಯುತ ಪರಿಸರದಲ್ಲಿ ವಿಶ್ರಾಂತಿ ಪಡೆಯಬಹುದು. ಇಲ್ಲಿನ ಟೀ ಮ್ಯೂಸಿಯಂಗೆ ಭೇಟಿ ನೀಡಿದರೆ ಚಹಾ ತಯಾರಿಕೆಯಲ್ಲಿ ಒಳಗೊಂಡಿರುವ ಸಾಂಸ್ಕೃತಿಕ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಬಹುದು.


ಅಲೆಪ್ಪಿ (Alleppey)

‘ಪೂರ್ವದ ವೆನಿಸ್ ಎಂದು ಕರೆಯಲ್ಪಡುವ ಅಲೆಪ್ಪಿ ಹಿನ್ನೀರು, ಪ್ರಶಾಂತವಾದ ಹೌಸ್‌ಬೋಟ್ ವಿಹಾರ ಮತ್ತು ಎಲ್ಲಿ ನೋಡಿದರೂ ಹಸಿರಿನಿಂದ ತುಂಬಿದ ಭತ್ತದ ಗದ್ದೆಗಳ ವ್ಯಾಪಕ ಜಾಲದಿಂದ ಆವರಿಸಲ್ಪಟ್ಟಿದೆ. ಈ ನಿಶ್ಯಬ್ದ ತಾಣವು ಕೊಚ್ಚಿನ್‌ನಿಂದ ಸ್ವಲ್ಪ ದೂರದಲ್ಲಿದೆ. ಪ್ರವಾಸಿಗರು ಹಿನ್ನೀರಿನಲ್ಲಿ ಹೌಸ್‌ಬೋಟ್ ಸವಾರಿಗಳನ್ನು ನಡೆಸಬಹುದು. ಇಲ್ಲಿ ತಂಗುವ ಸಮಯದಲ್ಲಿ ಸುತ್ತಲಿನ ಸುಂದರವಾದ ಭೂದೃಶ್ಯಗಳನ್ನು ವೀಕ್ಷಿಸಬಹುದು. ರಾತ್ರಿಯಲ್ಲಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡುತ್ತಾ ದೋಣಿ ವಿಹಾರ ನಡೆಸುವುದು ಅಲೆಪಿಯ ಮ್ಯಾಜಿಕ್ ಅನುಭವವನ್ನು ಕೊಡುತ್ತದೆ.


ಫೋರ್ಟ್ ಕೊಚ್ಚಿ (Fort Kochi)

ವಾರಾಂತ್ಯದ ವಿಹಾರಕ್ಕೆ ಫೋರ್ಟ್ ಕೊಚ್ಚಿಯು ಒಂದು ಸುಂದರ ತಾಣ. ಹಳೆಯ ವಸಾಹತುಶಾಹಿ ಕಟ್ಟಡಗಳಿಂದ ಕೂಡಿದ್ದು, ಕಿರಿದಾದ ಕಲ್ಲುಮಣ್ಣುಗಳಿಂದ ತುಂಬಿದ ಬೀದಿಗಳಲ್ಲಿ ನಡೆದುಕೊಂಡು ಹೋಗುವಾಗ ಈ ಸ್ಥಳದ ಹಿಂದಿನ ವೈಭವದ ದಿನಗಳ ಬಗ್ಗೆ ಚಿತ್ರ ಬರೆದಂತ ಭಾಸವಾಗುವುದು. ಇಲ್ಲಿ ಚೈನೀಸ್ ಫಿಶಿಂಗ್ ನೆಟ್ಸ್, ಸೇಂಟ್ ಫ್ರಾನ್ಸಿಸ್ ಚರ್ಚ್ ಮತ್ತು ಮತ್ತಂಚೇರಿ ಅರಮನೆಗೆ ಭೇಟಿ ನೀಡಿ ರಜಾ ದಿನವನ್ನು ಕಳೆಯಬಹುದು. ಈ ನಗರದ ಪರಂಪರೆಯ ಬಗ್ಗೆ ತಿಳಿದುಕೊಳ್ಳಲು ಕಥಕ್ಕಳಿ ಪ್ರದರ್ಶನವನ್ನು ಮಿಸ್ ಮಾಡದೇ ನೋಡಿ. ಕೇರಳದ ಶಾಸ್ತ್ರೀಯ ನೃತ್ಯ ಪ್ರಕಾರವು ಅದರ ರೋಮಾಂಚಕ ಸಾಂಸ್ಕೃತಿಕ ಸಂಪ್ರದಾಯಗಳನ್ನು ಬಹಿರಂಗಪಡಿಸುತ್ತದೆ.


ವಾಗಮೋನ್ (Vagamon)

ಕೇರಳದ ಪಶ್ಚಿಮ ಘಟ್ಟಗಳ ಮಡಿಕೆಗಳೊಳಗೆ ಅಡಗಿರುವ ವಾಗಮೋನ್ ಶಾಂತವಾದ, ಸಣ್ಣ ಗಿರಿಧಾಮವಾಗಿದೆ. ಪ್ರವಾಸಿಗರಿಗೆ ರೋಲಿಂಗ್ ಬೆಟ್ಟಗಳು, ಹಸಿರು ಹುಲ್ಲುಗಾವಲುಗಳು ಮತ್ತು ಪೈನ್ ಮರಗಳ ತೋಪುಗಳು ಜಲಪಾತಗಳ ನಡುವೆ ವಿಶ್ರಾಂತಿ ಪಡೆಯಲು ಅತ್ಯುತ್ತಮ ಅವಕಾಶವನ್ನು ನೀಡುತ್ತದೆ. ನಿಸರ್ಗವನ್ನು ಪ್ರೀತಿಸುವವರಿಗೆ ಮತ್ತು ಪೈನ್ ಫಾರೆಸ್ಟ್ ಅಥವಾ ಕುರಿಸುಮಲ ಆಶ್ರಮದಂತಹ ಹಲವಾರು ಗುಪ್ತ ರತ್ನಗಳಿಂದ ಕೂಡಿದ ವಿಸ್ಮಯಕಾರಿಯಾಗಿ ಸುಂದರವಾದ ಭೂದೃಶ್ಯದ ಮೂಲಕ ಟ್ರೆಕ್ಕಿಂಗ್‌ನಂತಹ ಸಾಹಸ ಚಟುವಟಿಕೆಗಳನ್ನು ಇಲ್ಲಿ ನಡೆಸಬಹುದು. ಪ್ಯಾರಾಗ್ಲೈಡಿಂಗ್ ಮತ್ತು ರಾತ್ರಿಯ ಕ್ಯಾಂಪಿಂಗ್ ಗೆ ಸೂಕ್ತ ತಾಣ ಗಳು ಇಲ್ಲಿದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?


ಚೆರೈ ಬೀಚ್ (Cherai Beach)

ಕೊಚ್ಚಿ ಬಳಿ ಪರಿಪೂರ್ಣ ವಿಶ್ರಾಂತಿ ಅನುಭವಕ್ಕಾಗಿ, ಬೀಚ್ ವಿಹಾರಕ್ಕಾಗಿ ಪಟ್ಟಣದಿಂದ ಸ್ವಲ್ಪ ದೂರದಲ್ಲಿರುವ ಚೆರೈ ಬೀಚ್‌ಗೆ ಭೇಟಿ ನೀಡಬಹುದು. ಇದು ಕರಾವಳಿಯ ಉದ್ದಕ್ಕೂ ತೂಗಾಡುತ್ತಿರುವ ತೆಂಗಿನ ಮರಗಳು, ಪ್ರಾಚೀನ ಮರಳು, ಚಿನ್ನದ ಬಣ್ಣದಲ್ಲಿ ಕಂಗೊಳಿಸುವ ಸೂರ್ಯ ಮತ್ತು ನೀಲಿ ಅರೇಬಿಯನ್ ಸಮುದ್ರದಿಂದ ಸುತ್ತುವರೆದಿದೆ. ಸೂರ್ಯನನ್ನು ನೋಡುತ್ತಾ ತೀರದಲ್ಲಿ ಸುತ್ತಾಡಲು ಪರಿಪೂರ್ಣ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿ ತಾಜಾ ಸಮುದ್ರಾಹಾರ ಸತ್ಕಾರವನ್ನು ಪಡೆಯಬಹುದು

Continue Reading

ಧಾರ್ಮಿಕ

Shankara Jayanti 2024: ಇಂದು ಶಂಕರ ಜಯಂತಿ; ಶಂಕರಾಚಾರ್ಯರ ಕುರಿತ 9 ಕುತೂಹಲಕರ ಸಂಗತಿಗಳು

ಶ್ರೀ ಶಂಕರರು (Shankara Jayanti 2024) ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡಿದ್ದರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತಿದ್ದರು. ಸಂನ್ಯಾಸಕ್ಕೆ ತಾಯಿಯ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಆಗ ತಾಯಿ ಒಪ್ಪಲೇಬೇಕಾಯಿತು.

VISTARANEWS.COM


on

Shankara Jayanti 2024
Koo

ಶಂಕರಾಚಾರ್ಯರು (Shankara Jayanti 2024) ಜೀವಿಸಿದ್ದು ಕೇವಲ 32 ವರ್ಷ. ಆದರೆ ಅವರು ಸಾಧಿಸಿದ್ದು ಅಪಾರ. ಹಿಂದೂ ಧರ್ಮದ ಏಳಿಗೆಗೆ ಅವರ ಕೊಡುಗೆ ಅಮೂಲ್ಯ. ಶಂಕರರ ಬದುಕಿನ ಕುರಿತ ಕುತೂಹಲಕರ ಸಂಗತಿಗಳು ಇಲ್ಲಿವೆ.

Adi Shankaracharya Jayanti
  1. ಶ್ರೀ ಶಂಕರರು ಎಷ್ಟು ಪ್ರತಿಭಾವಂತರಾಗಿದ್ದರು ಎಂದರೆ, ನಾಲ್ಕೂ ವೇದಗಳನ್ನು ಎಂಟು ವರ್ಷಗಳಾಗುವಾಗಲೇ ಕರಗತ ಮಾಡಿಕೊಂಡುಬಿಟ್ಟರು. ಹನ್ನೆರಡು ವರ್ಷಗಳಿರುವಾಗ ಸಕಲ ಶಾಸ್ತ್ರಗಳನ್ನೂ ಕಲಿತರು. ಸಾಮಾನ್ಯರಿಗೆ ಒಂದು ವೇದವನ್ನು ಅರ್ಥ ಮಾಡಿಕೊಳ್ಳಲೇ ಹತ್ತಾರು ವರ್ಷಗಳು ಬೇಕು.
  2. ಶಂಕರಾಚಾರ್ಯರು ಜನಿಸಿದ್ದು ಕೇರಳ ಕಾಲಟಿ ಎಂಬ ಪುಟ್ಟ ಗ್ರಾಮದಲ್ಲಿ. ತಂದೆಯನ್ನು ಕಳೆದುಕೊಂಡರು. ತಾಯಿ ಅವರನ್ನು ಬೆಳೆಸಿದರು. ಅವರು ಸಂನ್ಯಾಸ ಸ್ವೀಕರಿಸಲು ಒಂದು ಪುಟ್ಟ ಪವಾಡವನ್ನೇ ಮಾಡಬೇಕಾಯಿತು. ಸಂನ್ಯಾಸಕ್ಕೆ ತಾಯಿ ಆರ್ಯಾಂಬೆಯವರ ಅನುಮತಿ ಇರಲಿಲ್ಲ. ಒಮ್ಮೆ ಅವರು ಕೆರೆಯಲ್ಲಿರುವಾಗ ಅವರ ಕಾಲನ್ನು ಮೊಸಳೆ ಹಿಡಿದುಬಿಟ್ಟಿತು. ತಾಯಿ ಕಂಗಾಲಾದರು. ಆಗ ಶಂಕರರು, ‘ನಾನು ಸಂನ್ಯಾಸ ಸ್ವೀಕರಿಸಲು ನೀನು ಒಪ್ಪಿದರೆ ಈ‌ ಮೊಸಳೆ ಬಿಡುತ್ತದಂತೆ’ ಎಂದು ಹೇಳಿದರು. ಮಗ ಬದುಕುತ್ತಾನಲ್ಲ ಎಂಬ ಭರವಸೆಯೊಂದಿಗೆ ತಾಯಿ ಒಪ್ಪಿದರು.
  3. ಹದಿನಾರು ವರ್ಷ ಪ್ರಾಯ ಆಗುವುದರೊಳಗಾಗಿ ಅವರು ಉಪನಿಷತ್, ಬ್ರಹ್ಮಸೂತ್ರ, ಭಗವದ್ಗೀತೆಗಳಿಗೆ ಭಾಷ್ಯವನ್ನು ರಚಿಸಿದರು. ಆದಿಶಂಕರರು ಭಗವದ್-ಗೀತೆ, ಉಪನಿಷತ್ ಹಾಗು ಬ್ರಹ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು.
  4. ಭಾರತದಾದ್ಯಂತ ‘ದಿಗ್ವಿಜಯ ಯಾತ್ರೆʼ ಕೈಗೊಂಡರು. ವೇದವಿರೋಧಿಗಳನ್ನು ವಾಗ್ವಾದಕ್ಕೆ ಕರೆದರು. ಏಕಾಂಗಿಯಾಗಿ ಚರ್ಚೆ, ವಿಚಾರಮಂಡನೆ, ವಾದಗಳ‌ ಮೂಲಕ ಬ್ರಹ್ಮವಾದಕ್ಕೆ ಎಳೆತಂದರು. ದೇಶದುದ್ದಗಲಕ್ಕೂ ಸಂಚರಿಸಿ, ಅಲ್ಲಿಯ ವಿದ್ವಾಂಸರನ್ನು, ಜನರನ್ನು, ರಾಜರನ್ನು ವೈದಿಕತೆಗೆ ತಂದರು.
  5. ಆರು ಮತಗಳನ್ನು ಖಂಡಿಸಿ ತಮ್ಮ ಮತವನ್ನು ಸ್ಥಾಪಿಸಿದ ಪರಿಣಾಮ ಅವರನ್ನು ‘ಷಣ್ಮತ ಖಂಡನಾಚಾರ್ಯ’ ಮತ್ತು ಷಣ್ಮತ ಪ್ರತಿಷ್ಠಾಪನಾಚಾರ್ಯ’ ಎಂದು ಕರೆಯಲಾಯಿತು. ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂದ ಮತಗಳನ್ನು ಒಗ್ಗೂಡಿಸಿ, ಷಣ್ಮತ ಪ್ರತಿಷ್ಠಾಪಕರಾದರು.
  6. ಧರ್ಮವನ್ನು ಉಳಿಸಿ ಬೆಳೆಸುವ ಉದ್ದೇಶಕ್ಕಾಗಿ ಮಠಗಳ ಪರಿಕಲ್ಪನೆಯನ್ನು ತಂದರು. ಮಠ ಮತ್ತು ಯತಿಗಳು ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂಬ ಆಶಯ ಅವರದಾಗಿತ್ತು. ದೇಶದ ಉದ್ದಗಲಗಳಲ್ಲಿ ಮಠಗಳನ್ನು ಸ್ಥಾಪಿಸಿದರು. ಅವುಗಳಲ್ಲಿ ಮುಖ್ಯವಾದದ್ದು ಶೃಂಗೇರಿಯ ಮಠ. ಇತರವು ಪೂರ್ವದಲ್ಲಿ ಪುರಿ, ಪಶ್ಚಿಮದಲ್ಲಿ ದ್ವಾರಕಾ, ಉತ್ತರದಲ್ಲಿ ಬದರೀನಾಥ, ಕಂಚಿಯ ಕಾಮಕೋಟಿಗಳಲ್ಲಿವೆ.
  7. ಸೂರ್ಯ- ಗಣಪತಿ- ಅಂಬಿಕಾ- ಶಿವ- ವಿಷ್ಣುಗಳನ್ನು ಪೂಜಿಸುವ ಪಂಚಾಯತನ ಪೂಜೆಯನ್ನು ತಂದರು. ಈ ದೇವತೆಗಳನ್ನು ಭಾರತದ ಐದು ಕಡೆಗಳಲ್ಲಿ ಸಿಗುವ ಸ್ಫಟಿಕ, ಶೋಣಾಭದ್ರ, ಸ್ವರ್ಣಮುಖಿ, ಬಾಣಲಿಂಗ, ಸಾಲಿಗ್ರಾಮ ಎಂಬ ಕಲ್ಲಿನ ಮೂಲಕ ಪೂಜಿಸಲಾಗುತ್ತದೆ.
  8. ಮೂವತ್ತೆರಡು ವರ್ಷಗಳಲ್ಲಿ ಹಲವು ಮನುಷ್ಯರು ಸೇರಿ ಹಲವು ಜನ್ಮಗಳಲ್ಲಿ ಮಾಡುವಷ್ಟು ಕೆಲಸವನ್ನು ಮಾಡಿ ಮುಗಿಸಿದರು. ಭಾಷ್ಯಗಳನ್ನು ಹೊರತುಪಡಿಸಿ ನೂರಾರು ಸ್ತೋತ್ರ – ಸಾಹಿತ್ಯಗಳನ್ನು ರಚಿಸಿದರು.
  9. ಮೂರು ಸೂತ್ರಗಳಲ್ಲಿ ಶ್ರೀ ಶಂಕರರ ಉಪದೇಶವನ್ನು ಸೂತ್ರೀಕರಿಸಬಹುದು- “ಅಹಂ ಬ್ರಹ್ಮಾಸ್ಮಿ” (ನನ್ನೊಳಿರುವ ಆತ್ಮವೇ ಪರಂಬ್ರಹ್ಮ), “ತತ್ ತ್ವಮ್ ಅಸಿ” (ನೀನು ಅದೇ ಆತ್ಮದಿಂದ ಆಗಿರುವೆ) ಮತ್ತು ಜೀವಶ್ಶಿವೋಹಂʼ (ಜೀವನೇ ಶಿವ) ಎಂಬುದು ಅದ್ವೈತ ತತ್ವದ ಮೂಲ ಮಂತ್ರಗಳು. ಇದಲ್ಲದೇ ಪರಮಾತ್ಮ ಮಾತ್ರ ಸತ್ಯ; ಈ ಜಗತ್ತಿನಲ್ಲಿ ಮಿಕ್ಕೆಲ್ಲವೂ ಮಿಥ್ಯ ಹಾಗೂ “ಸರ್ವಂ ಬ್ರಹ್ಮಮಯಂ ಜಗತ್” (ಈ ಜಗತ್ತಿನಲ್ಲಿ ಎಲ್ಲವೂ ಪರಮಾತ್ಮನಿಂದಲೇ ಆವರಿಸಲ್ಪಟ್ಟಿದೆ) ಎಂಬುದಾಗಿ ಜಗತ್ತಿಗೆ ಸಾರಿದರು.
Continue Reading
Advertisement
crimes in karnataka
ಕ್ರೈಂ37 seconds ago

Crimes in Karnataka: 4 ತಿಂಗಳಲ್ಲಿ ಮಿತಿಮೀರಿದ ಕ್ರೈಂ; ಸ್ತ್ರೀಯರೇ ಹೆಚ್ಚಿನ ಟಾರ್ಗೆಟ್!‌ ʼಗೃಹ ಇಲಾಖೆ ಇದೆಯಾ?ʼ ಎಂದು ಪ್ರಶ್ನಿಸಿದ ಎಚ್‌ಡಿಕೆ

Kiara Advani Makes Cannes Debut In Thigh-High Slit Dress
ಬಾಲಿವುಡ್11 mins ago

Cannes 2024: ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಶ್ವೇತ ವರ್ಣದ ಗೌನ್​ ಧರಿಸಿ ಮಿಂಚಿದ ಕಿಯಾರ! ಇಲ್ಲಿದೆ ವಿಡಿಯೊ

Accident Case in Mysuru
ಮೈಸೂರು28 mins ago

Accident Case : ಟ್ರ್ಯಾಕ್ಟರ್ ರೋಟವೇಟರ್‌ಗೆ ಸಿಲುಕಿ ಬಾಲಕನ ದೇಹ ಛಿದ್ರ ಛಿದ್ರ

JP Nadda
Lok Sabha Election 202435 mins ago

JP Nadda: ಬಿಜೆಪಿ ಈಗ ಬೆಳೆದಿದೆ, ಸಶಕ್ತವಾಗಿದೆ; ಆರ್‌ಎಸ್‌ಎಸ್ ನೆರವಿನ ಪ್ರಶ್ನೆಗೆ ನಡ್ಡಾ ಉತ್ತರ

IPL 2024
ಪ್ರಮುಖ ಸುದ್ದಿ37 mins ago

IPL 2024 : ಬೆಂಗಳೂರಿನ ಬೀದಿ ಬೀದಿಗಳಲ್ಲಿ ‘ಧೋನಿ, ಧೋನಿ’ ಘೋಷಣೆ, ಇಲ್ಲಿದೆ ವಿಡಿಯೊ

Prajwal Revanna Case pen drive and hard disk were found during the raids in Hassan and Bengaluru
ಕ್ರೈಂ46 mins ago

Prajwal Revanna Case: ವಿದೇಶದಿಂದ ಪ್ರಜ್ವಲ್‌ ಕರೆತರೋಕೆ ಎಸ್‌ಐಟಿ ಮಾಸ್ಟರ್‌ ಸ್ಟ್ರೋಕ್!‌

Singer Suchitra makes shocking aligeations against shahrukh khan
ಬಾಲಿವುಡ್1 hour ago

Singer Suchitra: ಶಾರುಖ್ – ಕರಣ್ ಸಲಿಂಗಿಗಳು ಎಂದು ಹೇಳಿ ವಿವಾದ ಸೃಷ್ಟಿಸಿದ ತಮಿಳು ಗಾಯಕಿ!

Lok Sabha Election 2024
ವೈರಲ್ ನ್ಯೂಸ್1 hour ago

Lok Sabha Election 2024: ʼನನ್ನ ಸ್ಟೈಲು ಬೇರೇನೆ…ʼ; ಕತ್ತೆ ಮೂಲಕ ಪ್ರಚಾರ ನಡೆಸುವ ಅಭ್ಯರ್ಥಿಯ ಕಾರ್ಯ ವೈಖರಿ ಈಗ ವೈರಲ್‌

IPL 2024
ಕ್ರೀಡೆ1 hour ago

IPL 2024 : ಹಾರ್ದಿಕ್ ಪಾಂಡ್ಯಗೆ ನಿಷೇಧ ಹೇರಿದ ಬಿಸಿಸಿಐ; ಮುಂದಿನ ಪಂದ್ಯದಲ್ಲಿ ಆಡದಂತೆ ತಾಕೀತು

natural ice cream 1 rajamarga coumn
ಅಂಕಣ1 hour ago

ರಾಜಮಾರ್ಗ ಅಂಕಣ: ಅವರ ನೆನಪೇ ನ್ಯಾಚುರಲ್‌ ಐಸ್‌ಕ್ರೀಂನ ತಾಜಾ ಹಣ್ಣಿನ ರುಚಿ, ಪರಿಮಳದಂತೆ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case JDS calls CD Shivakumar pen drive gang
ರಾಜಕೀಯ15 hours ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ1 day ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ2 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು2 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ3 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ3 days ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ4 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20244 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

ಟ್ರೆಂಡಿಂಗ್‌