Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು - Vistara News

ಕಲೆ/ಸಾಹಿತ್ಯ

Sunday Read: ಹೊಸ ಪುಸ್ತಕ: ನಾ.ಮೊಗಸಾಲೆ ಕಾದಂಬರಿ: ನೀರು

ಖ್ಯಾತ ಕಾದಂಬರಿಕಾರ, ಕವಿ ಡಾ.ನಾ, ಮೊಗಸಾಲೆ ಅವರ ಹೊಸ ಕಾದಂಬರಿ ʼನೀರುʼ ಅಂಕಿತ ಪ್ರಕಾಶನದಿಂದ ಬಿಡುಗಡೆಯಾಗಿದೆ. ಈ ಕೃತಿಯಿಂದ ಆಯ್ದ ಭಾಗ ಇಲ್ಲಿದೆ.

VISTARANEWS.COM


on

neeru book mogasale
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಧನು ತಿಂಗಳ 18. ಭಾನುವಾರ (2 ಜನವರಿ 2015) ಊರಿಗೆ ಊರೇ ಆಕಾಶಕ್ಕೆ ನೆಗೆದ ಹಾಗೆ ಸೀತಾಪುರದ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತ್ತು. ಮುದುಕರು ಮಕ್ಕಳೆನ್ನದೆ, ಹಿರಿಯರು ಕಿರಿಯರೆನ್ನದೆ ಯಾರ್ಯಾರಿಗೆ ಓಡಾಡಲು ಮಂಡಿ ಮತ್ತು ಸೊಂಟ ಗಟ್ಟಿ ಇತ್ತೋ ಅಂತವರೆಲ್ಲ ಜಾತ್ರೆಗೆ ಹೊರಟು ಬಂದದ್ದರಿಂದ ಸೀತಾಪುರದ ರಥಬೀದಿ ಜನರಿಂದ ತುಂಬಿ ಗಿಜಿಗುಡುತ್ತಿತ್ತು.

ಸೀತಾಪುರದ ಜಾತ್ರೆ ಮೂರು ದಿನದ್ದು. ಮೊದಲ ದಿನ ಧ್ವಜಾರೋಹಣವಾಗಿ ಮಧ್ಯಾಹ್ನ ಉತ್ಸವಮೂರ್ತಿಯ ಮೂರು ಸುತ್ತಿನ ‘ಬಲಿ’ ಮತ್ತು ಮೃಷ್ಟಾನ್ನ ಭೋಜನ. ರಾತ್ರೆ ಸಾಂಸ್ಕೃತಿಕ ಕಾರ್ಯಕ್ರಮ. ಊರ ಪರವೂರಿನಲ್ಲಿರುವ ಸೀತಾಪುರದ ಮಂದಿಗೆ ಮೊದಲ ದಿನದ ಉತ್ಸವದಲ್ಲಿ ಭಾಗವಹಿಸುವುದು ಅಂದರೆ ಎಲ್ಲಿಲ್ಲದ ಸಂಭ್ರಮ. ಜೊತೆಗೆ ಊರ ಹುಡುಗರೇ ಸೇರಿ ಆಡುವ ಯಕ್ಷಗಾನ ಬಯಲಾಟ ಇಲ್ಲವೇ ನಾಟಕಗಳನ್ನು ನೋಡುವುದೆಂದರೆ – ಇದೀಗ ಟಿ.ವಿ.ಯಲ್ಲಿ ಧಾರಾವಾಹಿಗಳ ಹಾವಳಿ ಇದ್ದರೂ ಅದನ್ನು ಮರೆತು – ನಮ್ಮ ಮಕ್ಕಳ ಜೀವಚೈತನ್ಯ ಎಷ್ಟಿದೆ ಎನ್ನುವ ಕುತೂಹಲ.

ಎರಡನೇ ದಿನದ ಉತ್ಸವ ಮಾಮೂಲು. ದಿನನಿತ್ಯದ ಪೂಜೆಗಿಂತ ಹೆಚ್ಚು ವೈಭವೋಪೇತವಾಗಿ ಅಂದರೆ ದೇವರನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಿ ಹತ್ತಾರು ಆರತಿ ಎತ್ತಿ ಪೂಜಿಸುವುದು ಬಿಟ್ಟರೆ ಮತ್ತೇನಿಲ್ಲ. ಪ್ರತಿನಿತ್ಯ ದೇವರ ಮಡಿಲಲ್ಲಿ ಊರಲ್ಲೇ ಬೆಳೆದ ದಾಸವಾಳ ಅಥವಾ ಇನ್ನಿತರ ಸಾಮಾನ್ಯ ಹೂಗಳು ಮಾತ್ರ ಇದ್ದರೆ, ಉತ್ಸವದ ಸಮಯದಲ್ಲಿ ಸೀತಾಪುರದಲ್ಲಿ ಬೆಳೆಯುವ ಮಲ್ಲಿಗೆ ಹೂಗಳೂ ಸಾಕಾಗದೆ ಶಿರ್ವ ಮಂಚಕಲ್ಲಿನಿಂದಲೂ ಮಲ್ಲಿಗೆ ಹೂಗಳ ಸಾವಿರಾರು ‘ಅಟ್ಟೆ’ಗಳು ಸೀತಾಪುರಕ್ಕೆ ಬರುತ್ತವೆ. ಅವು ಎಷ್ಟಿದ್ದರೂ ಅರ್ಧ ಇಲ್ಲವೇ ಒಂದು ಗಂಟೆಯಲ್ಲಿ ದೇವರ ಮೂರ್ತಿಯ ಮುಖವೂ ಕಾಣದಷ್ಟು ಅಲಂಕಾರಕ್ಕೆ ಸಲ್ಲುತ್ತವೆ. ಶ್ರೀದೇವಿಗೆ ಮಲ್ಲಿಗೆ ಹೂವೆಂದರೆ ಇಷ್ಟ ಎಂಬ ನಂಬಿಕೆ ಜನರಲ್ಲಿರುವುದರಿಂದ, ಕರಾವಳಿ ಪ್ರದೇಶದಲ್ಲಿ ದೇವಿ ದೇವಸ್ಥಾನಗಳು ಇರುವಲ್ಲಿ ಮಲ್ಲಿಗೆ ಹೂಗಳು ಏನಿಲ್ಲ ಎಂದರೂ ಸಾವಿರಾರು ‘ಮಾರು’ (ಒಂದು ಮಾರು ಅಂದರೆ ಸುಮಾರು ಒಂದೂವರೆ ಅಡಿ) ಮಾರಾಟವಾಗುತ್ತವೆ. ಮತ್ತು ಅವುಗಳ ಬೇಡಿಕೆ ಆಕಾಶಕ್ಕೆ ಏರಿದ ಹಾಗೆ ಬೆಲೆಯೂ ಏರಿ ಮೋಡಗಳಾಗಿ ತುಂತುರು ಮಳೆ ಬಿದ್ದಂತೆ ದೇವಿಯ ಮಡಿಲು ಸೇರುತ್ತವೆ.

ಶ್ರೀದೇವಿಯ ಮೂರನೇ ದಿನದ ಉತ್ಸವ ಸುತ್ತುಮುತ್ತು ಎಲ್ಲೂ ಇಲ್ಲದಷ್ಟು ವಿಜೃಂಭಣೆಯಿಂದ ನಡೆಯುತ್ತದೆ. ಮಧ್ಯಾಹ್ನ ಎಂದಿನ ಹಾಗೆ ಮೂರು ಸುತ್ತಿನ ದೇವಿಯ ‘ಬಲಿ’ ಇದ್ದರೆ ರಾತ್ರೆ ಮಾತ್ರ ಒಂಬತ್ತು ಸುತ್ತಿನ ಬಲಿ. ಇದರಲ್ಲಿ ಉಡ್ಕೆ ಸುತ್ತು, ಚೆಂಡೆ ಸುತ್ತು, ಸರ್ವವಾದ್ಯ ಸುತ್ತು, ಓಡಬಲಿ ಸುತ್ತು ಎಂಬ ವೈಶಿಷ್ಟ್ಯಗಳಿದ್ದು ದೇವರನ್ನು ತಲೆ ಮೇಲೆ ಹೊತ್ತು ‘ಬಲಿ ಬರುವ’ (ದೇವರನ್ನು ಹೊರುವ) ಐತಾಳರು ಅದಕ್ಕಾಗಿಯೇ ದೂರದ ಕುಂಬ್ಳೆಯಿಂದ ಬರುತ್ತಾರೆ. ಅವರು ಆ ದಿವಸಕ್ಕೆ ಮಾತ್ರ ಬರುವವರಿದ್ದು ಅವರಿಗೆ ‘ದೇವರು ಹೊರುವ’ ಕಲೆಯಲ್ಲಿ ವಿಶೇಷ ನೈಪುಣ್ಯ ಇದೆ ಎನ್ನುವುದು ಸೀತಾಪುರದ ಮಂದಿಗೆ ಮಾತ್ರವಲ್ಲ ಪ್ರಾಯಃ ಕರಾವಳಿಯ ಮಂದಿಗೇ ಗೊತ್ತು. ಅವರ ಒಂದು ದಿನದ ಸೇವೆಗೆ, ಅವರು ಬಂದು ಹೋಗುವ ವಾಹನದ ಬಾಡಿಗೆಯಲ್ಲದೆ ಐದು ಸಾವಿರ ಸಂಭಾವನೆ ಕೊಡಬೇಕೆಂದು ಅವರು ಹೇಳಿದರೂ, ‘ಚಿಂತಿಲ್ಲ, ಕೊಡೋಣ ಬನ್ನಿ’ ಎಂದು ಅವರನ್ನು ಆಹ್ವಾನಿಸುವ ಮಂದಿ ಸೀತಾಪುರದಲ್ಲಿ ಮಾತ್ರವಲ್ಲ, ಇನ್ನೂ ಅನೇಕ ಕಡೆ ಇದ್ದಾರೆ.

ಇಂಥ ಜಾತ್ರೆಗಳಲ್ಲಿ ಅನೇಕರು ದೇವರಿಗೆ ಭಕ್ತಿ ಶ್ರದ್ಧೆಯಿಂದ ಹರಕೆ ಹಾಕಿ ಹೋಗುವುದಕ್ಕೆ ಬಂದರೆ, ಇನ್ನು ಕೆಲವರು ಐತಾಳರ ‘ದರ್ಶನ ಸೇವೆ’ಯನ್ನು ನೋಡ ಬೇಕೆಂತಲೇ ಬರುತ್ತಾರೆ. ಐತಾಳರು ಚೆಂಡೆ ಸುತ್ತಿನಲ್ಲಿ ದೇವರನ್ನು ತಲೆಯ ಮೇಲೆ ಇಟ್ಟು ದೇವರ ಪಾಣಿಪೀಠವನ್ನು ಹಿಡಿಯದೆ ನರ್ತಿಸುವುದನ್ನು ನೋಡುವಾಗ ಜನರು ರೋಮಾಂಚನಗೊಳ್ಳುತ್ತಾರೆ. ಹದಿನೈದು ಹದಿನಾರು ಚೆಂಡೆಗಳ ವಾದನದ ನಡುವೆ ನಡೆಯುವ ಈ ‘ದೇವರ ಬಲಿ’ ನಿಜಕ್ಕೂ ಆಕರ್ಷಕವೂ ಭಕ್ತಿಭಾವವನ್ನು ಹುಟ್ಟಿಸು ವಂಥದ್ದೂ ಆಗಿದೆ ಎಂದು ಗೋವಿಂದಯ್ಯ ಹೋದಲ್ಲೆಲ್ಲ ಹೇಳುವುದುಂಟು. ಅವರಿಗೆ ಯಕ್ಷಗಾನದ ಕುಣಿಕೆ ಗೊತ್ತಿರುವುದರಿಂದ ಮತ್ತು ಬಾಲ್ಯದಲ್ಲಿ ಅವರೂ ಸೀತಾಪುರದ ಉತ್ಸವದ ಸಮಯದ ಸಾಂಸ್ಕøತಿಕ ಉತ್ಸವದಲ್ಲಿ ಭಾಗವಹಿಸಿದವರಾಗಿದ್ದುದರಿಂದ, ದೇವರ ‘ಬಲಿ’ ನಡೆಯುವಾಗ ಅವರು ಚೆಂಡೆಯವರ ಹಿಂದೆಯೇ ಬಂದು ನಿಲ್ಲುತ್ತಾರೆ. ಒಮ್ಮೊಮ್ಮೆ ಬಲದ ಕೈಯಿಂದ ತಮ್ಮ ತೊಡೆಗೆ ಬಡಿಯುತ್ತ ತಾಳ ಹಾಕುತ್ತಾರೆ. ಹಾಗೆಯೇ ದೇವರನ್ನು ಹೊತ್ತವರು ‘ಗಿರಕಿ’ ಹೊಡೆಯುವಾಗ ಇವರಿಗೂ ಗಿರಕಿ ಹೊಡೆಯುವ ಉತ್ಸಾಹ ಬರುವುದೂ ಉಂಟು. ಆದರೆ ತಾನೇನಾದರೂ ಗಿರಕಿ ಹೊಡೆದರೆ ಜನ ಗೇಲಿ ಮಾಡಬಹುದು ಎಂಬ ಎಚ್ಚರ ಅವರಿಗಿದ್ದು ‘ಕಾಲು ಹಾಕಲು ಜಾಗ’ ಇಲ್ಲದಷ್ಟು ಜನ ಬಲಿ ಉತ್ಸವದಲ್ಲಿ ಭಾಗವಹಿಸುವುದರಿಂದ, ಗೋವಿಂದಯ್ಯನಿಗೆ ಗಿರಕಿ ಹೊಡೆಯುವುದು ಬಿಡಿ, ಕಾಲು ಮುಂದಿಡಲೂ ಸಾಧ್ಯವಿಲ್ಲದಷ್ಟು ಗುಂಪು ಅಡ್ಡಿಯಾಗುವುದು ಸಾಮಾನ್ಯ.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ನೀಲಿ ನಕ್ಷೆ

ಆ ದಿನದ ಉತ್ಸವದಲ್ಲಿ ದೇವರು ಹೊರುವ ಐತಾಳರು ಅನಾರೋಗ್ಯದ ಕಾರಣದಿಂದ ಬರುವುದಿಲ್ಲ ಎಂಬ ವಾರ್ತೆ ಗೋವಿಂದಯ್ಯನಿಗೆ ಈ ಮೊದಲೇ ಅಂದರೆ ಧ್ವಜಾರೋಹಣದ ದಿನವೇ ಸಿಕ್ಕಿತ್ತು. “ಹಾಗಾದರೆ ಜಾತ್ರೆ ಬರೇ ಸಪ್ಪೆ ಆದ ಹಾಗೇ !” ಎಂದು ಮಧ್ಯಾಹ್ನ ಅವರು ಊಟಕ್ಕೆ ಕುಳಿತಾಗ ಪಕ್ಕದಲ್ಲಿ ಕುಳಿತಿದ್ದ ಬಾಳು ಭಟ್ರಿಗೆ ಬೇಕಂತಲೇ ಹೇಳಿದರು. ಬಾಳು ಭಟ್ರು “ಹಾಗೇನಿಲ್ಲ ಗೋವಿಂದಣ್ಣ, ಐತಾಳರ ಮಗ ಬರುತ್ತಾನಂತೆ. ಆತ ಅಪ್ಪನಿಗಿಂತಲೂ ‘ಭಲ’ ಇದ್ದಾನಂತೆ” ಎಂದರು. ಅಷ್ಟರಲ್ಲಿ ಬೂಂದಿ ಲಾಡನ್ನು ಊಟಕ್ಕೆ ಕುಳಿತವರಿಗೆ ಇಕ್ಕುತ್ತ ಹೋಗುತ್ತಿದ್ದ ದಾಸಣ್ಣನ ಕಿವಿಗೆ ಈ ಇಬ್ಬರ ಮಾತುಕತೆ ಕೇಳಿಸಿದಂತಾಗಿ, ಅವರು ಬಡಿಸುವುದನ್ನು ನಿಲ್ಲಿಸಿ “ಹೌದು ಗೋವಿಂದಣ್ಣ, ಐತಾಳರ ಮಗನ ಚೆಂಡೆ ಸುತ್ತು ನೀವು ನೋಡಲೇ ಬೇಕು ಎಂದು ಕುಂಬ್ಳೆಯಲ್ಲಿರುವ ನನ್ನ ಮಗಳ ಗಂಡ ಮನಮೋಹನ ಹೇಳಿದ್ದಾನೆ” ಎನ್ನುತ್ತ ಬಡಿಸುತ್ತಾ ಮುಂದೆ ಹೋದರು.

ಗೋವಿಂದಯ್ಯನಿಗೆ ಸಮಾಧಾನವಾಯಿತು. ಅವರಿಗೆ ಅದನ್ನು ಬಾಳು ಭಟ್ಟರಲ್ಲಿ ಹೇಳಿ ಚರ್ಚಿಸಬೇಕೆನಿಸಿತು. ಅವರು ಬಾಳು ಭಟ್ಟರಲ್ಲಿ ಆ ವಿಷಯ ಚರ್ಚಿಸಲು ಮುಂದಾದಾಗ ಬೂಂದಿ ಲಾಡಿಗೆ ತುಪ್ಪ ಬಡಿಸುವವರು ಪಂಕ್ತಿಯಲ್ಲಿ ಬಂದೇ ಬಿಟ್ಟಿದ್ದರು. ಗೋವಿಂದಯ್ಯ “ತಡೀರಿ, ನೀವು ಒಟ್ಟು ತುಪ್ಪ ಬಡಿಸುವುದಲ್ಲ, ಅವಸರ ಮಾಡಬೇಡಿ” ಎನ್ನುತ್ತಾ ಎಲೆಯಲ್ಲಿದ್ದ ಬೂಂದಿ ಲಾಡನ್ನು ಒಡೆದು ‘ಈಗ ತುಪ್ಪ ಹಾಕಿ’ ಎಂದು ಎರಡು ಚಮಚೆ ತುಪ್ಪ ಹಾಕಿಸಿಕೊಂಡು ಆಮೇಲೆ ಒಂದು ತುಂಡು ಲಾಡನ್ನು ಬಾಯಿಗೆ ಹಾಕಿ “ಆ್ಹ, ಲಾಡು ಅಂದರೆ ಲಾಡು. ಅಡಿಗೆ ಚಂಕಣ್ಣ ಇದರಲ್ಲೇ ಅಲ್ವಾ ಹೆಸರು ಮಾಡಿದ್ದು?” ಎಂದು ಸ್ವಗತದಲ್ಲಿ ಆಡಿಕೊಳ್ಳುವಾಗ, ಅವರ ಮನಸ್ಸಿನಲ್ಲಿ ಮತ್ತೆ ದೇವರು ಹೊರುವ ಐತಾಳರು ಪ್ರತ್ಯಕ್ಷರಾಗಿದ್ದರು. ತಕ್ಷಣ ಅವರು ಪಕ್ಕದಲ್ಲಿದ್ದ ಬಾಳು ಭಟ್ಟರ ತೊಡೆಯನ್ನು ಮೆತ್ತಗೆ ತಟ್ಟಿ “ಈ ಐತಾಳರು ಇದ್ದಾರಲ್ಲ, ಅವರ ದೊಡ್ಡ ಮಗಳನ್ನು ಯಾರಿಗೆ ಕೊಟ್ಟದ್ದು ಅನ್ನುತ್ತೀರಿ? ನನ್ನ ಮಗಳ ಗಂಡನ ಸೋದರಮಾವನ ಮಗನಿಗೆ. ಹಾಗಾಗಿ ಅವರು ನಮಗೆ ಸಂಬಂಧ !” ಎನ್ನುತ್ತಾ ಬೀಗಿದರು.

ಇದನ್ನೂ ಓದಿ: Sunday Read: ಹೊಸ ಪುಸ್ತಕ: ಮೊದಲ ಮಳೆಯ ಪರಿಮಳ: ಹುಟ್ಟು

ಬಾಳು ಭಟ್ಟರಿಗೆ ಈ ಗೋವಿಂದಯ್ಯನಿಗೆ ಐತಾಳರು ಸಂಬಂಧೀಕರಾದರೆ ತನಗೇನಾಗಬೇಕು ಎಂಬ ಉದಾಸೀನ ಭಾವ ಮೂಡಿತು. ಅವರು “ಅದೆಲ್ಲ ಸರಿ ಗೋವಿಂದಣ್ಣ, ನೀವು ಹವೀಕರು. ಅವರು ಕೋಟದವರು. ನಿಮ್ಮೊಳಗೆ ರಕ್ತ ಸಂಬಂಧ ಆಗ್ತದಲ್ಲ ಈಗ?!” ಎಂದು ಕುತೂಹಲ ತೋರಿಸಿದರು.

ಕೃತಿ: ನೀರು (ಕಾದಂಬರಿ)
ಲೇಖಕ: ಡಾ.ನಾ. ಮೊಗಸಾಲೆ
ಪ್ರಕಾಶನ: ಅಂಕಿತ ಪುಸ್ತಕ
ಬೆಲೆ: ರೂ.295

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Youngest Artist: ಅಂಬೆಗಾಲಿಡುವ ಬಾಲಕ ಈಗ ವಿಶ್ವದ ಅತಿ ಕಿರಿಯ ಚಿತ್ರ ಕಲಾವಿದ!

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ವಿಶ್ವದ ಕಿರಿಯ ಚಿತ್ರಕಲಾವಿದ (Youngest Artist) ಘಾನಾದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ್ದಾನೆ! ಈ ಅತಿ ಕಿರಿಯ ಕಲಾವಿದನ ಕುರಿತು ವ್ಯಾಪಕ ಕುತೂಹಲ ಉಂಟಾಗಿದೆ.

VISTARANEWS.COM


on

By

Youngest Artist
Koo

ಅಂಬೆಗಾಲಿಡುವ (Toddler) ಮಗು ವರ್ಣಚಿತ್ರಗಳನ್ನು (Youngest Artist) ರಚಿಸಿ ಗಿನ್ನೆಸ್ ವಿಶ್ವ ದಾಖಲೆ (Guinness World Records) ಬರೆದಿದೆ. ವಿಶ್ವದ ಅತ್ಯಂತ ಕಿರಿಯ ಚಿತ್ರ ಕಲಾವಿದ ಎನ್ನುವ ಖ್ಯಾತಿಗೆ ಈ ಮಗು ಪಾತ್ರವಾಗಿದೆ. ಘಾನಾದ (Ghana) 1 ವರ್ಷ 152 ದಿನಗಳ ಏಸ್-ಲಿಯಾಮ್ ನಾನಾ ಸ್ಯಾಮ್ ಆಂಕ್ರಾ (Ace-Liam Nana Sam Ankrah) ತಾನೇ ರಚಿಸಿದ 9 ವರ್ಣಚಿತ್ರಗಳನ್ನು ಮಾರಾಟ ಮಾಡಿ ಈ ದಾಖಲೆ ನಿರ್ಮಿಸಿದೆ.

ಏಸ್- ಲಿಯಾಮ್ ನಾನಾ ಸ್ಯಾಮ್ ಆಂಕ್ರಾ ವಿಶ್ವದ ಅತ್ಯಂತ ಕಿರಿಯ ಪುರುಷ ಚಿತ್ರ ಕಲಾವಿದನಾಗಿ ಪ್ರತಿಷ್ಠಿತ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ (GWR) ನಲ್ಲಿ ತನ್ನ ಹೆಸರನ್ನು ಬರೆದಿದ್ದಾನೆ.

ಸುಮಾರು ಆರು ತಿಂಗಳ ಮಗುವಿದ್ದಾಗಲೇ ಚಿತ್ರ ರಚಿಸಲು ಪ್ರಾರಂಭಿಸಿದ ಆಂಕ್ರಾ ಹಲವಾರು ವರ್ಣಚಿತ್ರಗಳನ್ನು ರಚಿಸಿರುವುದು ಮಾತ್ರವಲ್ಲ ಅವುಗಳಲ್ಲಿ ಒಂಬತ್ತು ವರ್ಣಚಿತ್ರಗಳನ್ನು ಪ್ರದರ್ಶನದಲ್ಲಿ ಮಾರಾಟ ಮಾಡಿದ. ಆಂಕ್ರಾನ ಈ ಸಾಧನೆ ಹಲವಾರು ಮಂದಿಯ ಗಮನ ಸೆಳೆದಿದ್ದ್ದು, ಜಾಗತಿಕ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ವಿಶ್ವ ದಾಖಲೆ ಪಟ್ಟಿಯಲ್ಲಿ ಆಂಕ್ರಾ ಹೆಸರು ಸೇರ್ಪಡೆಗೆ ಸಾಕಷ್ಟು ಮಂದಿ ಅಚ್ಚರಿಯನ್ನೂ ವ್ಯಕ್ತಪಡಿಸಿದ್ದಾರೆ.


ಯಾವಾಗ ಚಿತ್ರಕಲೆ ಪ್ರಾರಂಭಿಸಿದ್ದು?

ಈಗಷ್ಟೇ ಅಂಬೆಗಾಲಿಡುತ್ತಿರುವ ಆಂಕ್ರಾ ಕೇವಲ ಆರು ತಿಂಗಳಲ್ಲೇ ಚಿತ್ರಕಲೆಯನ್ನು ಪ್ರಾರಂಭಿಸಿದನು ಎನ್ನುತ್ತಾರೆ ಆತನ ತಾಯಿ. ಚಿತ್ರಕಲೆಯ ಮೇಲಿನ ಆತನ ಉತ್ಸಾಹವು ಚಿಕ್ಕ ವಯಸ್ಸಿನಿಂದಲೂ ಸ್ಪಷ್ಟವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಆತ ಕಲಿಯಲು ಪ್ರಾರಂಭ ಮಾಡಿದಾಗಲೇ ಕ್ಯಾನ್ವಾಸ್‌ನ ತುಂಡನ್ನು ನೆಲದ ಮೇಲೆ ಹರಡಿ ಅದರ ಮೇಲೆ ಸ್ವಲ್ಪ ಬಣ್ಣವನ್ನು ಬೀಳಿಸಿದೆ. ಕ್ಯಾನ್ವಾಸ್‌ನಾದ್ಯಂತ ಆತ ಬಣ್ಣವನ್ನು ಹರಡಿ ಕೊನೆಗೊಳಿಸಿದ. ಇದು ಆತನ ಮೊದಲ ವರ್ಣಚಿತ್ರ ‘ದಿ ಕ್ರಾಲ್’ ಎಂದು ಅವರು ವಿವರಿಸಿದರು.


ಅಂಬೆಗಾಲಿಡುವ ಘಾನಾದ ಆಂಕ್ರಾ ಈಗ ಸೆಲೆಬ್ರಿಟಿಯಾಗಿದ್ದಾನೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಮಾತ್ರವಲ್ಲದೆ ಘಾನಾ ಗಣರಾಜ್ಯದ ಪ್ರಥಮ ಮಹಿಳೆಯ ಗಮನವನ್ನೂ ಆತ ಸೆಳೆದಿದ್ದಾನೆ.

ಮೊದಲ ಪ್ರದರ್ಶನ

ಏಸ್- ಲಿಯಾಮ್ ಆಂಕ್ರಾ ಇತ್ತೀಚೆಗೆ ತನ್ನ ಚಿತ್ರಗಳನ್ನು ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನಡೆಸಿದ. ಇದರಲ್ಲಿ ಆತನ ಹತ್ತು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಅವುಗಳಲ್ಲಿ ಒಂಬತ್ತು ಮಾರಾಟವಾಗಿವೆ. ಏಸ್- ಲಿಯಾಮ್‌ನ ಕಲೆಯು ನಿರ್ದಿಷ್ಟ ಸಂದೇಶಗಳನ್ನು ರವಾನಿಸುವುದಕ್ಕಿಂತ ಹೆಚ್ಚಾಗಿ ಅಭಿವ್ಯಕ್ತಿ ಮತ್ತು ಅನ್ವೇಷಣೆಯ ಬಗ್ಗೆ ಹೆಚ್ಚಾಗಿದೆ ಎಂದು ಆತನ ತಾಯಿ ಹೇಳಿದ್ದಾರೆ.

ಅವನ ಅಮೂರ್ತ ವರ್ಣಚಿತ್ರಗಳು ಸುತ್ತಲಿನ ಪ್ರಪಂಚದಿಂದ ಪ್ರೇರಿತವಾಗಿವೆ. ಬಣ್ಣ, ಆಕಾರ, ಟೆಕಶ್ಚರ್ ಮತ್ತು ಅವನ ಮನಸ್ಥಿತಿಯನ್ನು ಇದು ಅವಲಂಬಿಸಿದೆ. ಪ್ರತಿ ಚಿತ್ರಕಲೆಯು ಹೊಸ ವಿಷಯಗಳನ್ನು ಕಂಡುಹಿಡಿಯುವಲ್ಲಿ ಆತನ ಕುತೂಹಲ ಮತ್ತು ಸಂತೋಷದ ಅಭಿವ್ಯಕ್ತಿಯಾಗಿದೆ ಎಂದಿದ್ದಾರೆ ಅವರು.


ಭವಿಷ್ಯದ ಯೋಜನೆಗಳು

ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ವಿಶ್ವದ ಅತ್ಯಂತ ಕಿರಿಯ ಕಲಾವಿದ ಲಿಯಾಮ್ ಅವರ ದಾಖಲೆಯನ್ನು ಅನುಮೋದಿಸಿದ ಬಳಿಕ ಆತನ ಕುಟುಂಬವು ಆತನ ಕಲಾತ್ಮಕ ಪ್ರತಿಭೆಗೆ ಗುಣಮಟ್ಟದ ಶಿಕ್ಷಣದ ಮೂಲಕ ಪೋಷಿಸಲು ಅವಕಾಶಗಳನ್ನು ಹುಡುಕುತ್ತಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವೇತನದ ಅವಕಾಶಗಳು ಅವರಿಗೆ ದೊರೆಯುತ್ತದೆ ಮತ್ತು ಆತನ ಕಲಾಕೃತಿಗಳನ್ನು ಮಾರಾಟ ಮಾಡಲು ಬಯಸುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ: Guinness World Records: ಬರೋಬ್ಬರಿ 168 ಅಕ್ಷರಗಳನ್ನೊಳಗೊಂಡ ಈ ನಗರದ ಹೆಸರಿನಲ್ಲಿದೆ ವಿಶ್ವ ದಾಖಲೆ

ಏಸ್-ಲಿಯಾಮ್ ತಾಯಿಯ ಸಲಹೆ ಏನು?

ತಮ್ಮ ಆಸಕ್ತಿಗಳನ್ನು ಕಂಡುಕೊಳ್ಳಲು ಮಕ್ಕಳನ್ನು ಪ್ರೋತ್ಸಾಹಿಸಲು ಪೋಷಕರಿಗೆ ಸಲಹೆ ನೀಡಿದ ಅವರು, ಪ್ರತಿ ಮಗು ಅನನ್ಯವಾಗಿದೆ ಮತ್ತು ಅವರ ಭಾವೋದ್ರೇಕಗಳನ್ನು ಪೋಷಿಸುವುದು ಅದ್ಭುತ ಆವಿಷ್ಕಾರಗಳು ಮತ್ತು ಸಾಧನೆಗಳಿಗೆ ಕಾರಣವಾಗಬಹುದು. ಅದನ್ನು ಪ್ರಯತ್ನಿಸುವ ಮೊದಲು ಅದನ್ನು ಮತ್ತೆ ಮತ್ತೆ ಓದಿ ಮತ್ತು ನೆನಪಿಡಿ. ಪ್ರಯಾಣ ಮತ್ತು ಅದು ತರುವ ಸಂತೋಷವು ತುಂಬಾ ತೃಪ್ತಿಕರವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

Bengaluru News: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26 ರಂದು ಭಾನುವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ ನಲ್ಲಿ ನಡೆಯಲಿದೆ. ಸಾಹಿತಿ ಎಸ್‌.ಎಲ್‌.ಭೈರಪ್ಪ ಕೃತಿ ಬಿಡುಗಡೆ ಮಾಡಲಿದ್ದಾರೆ.

VISTARANEWS.COM


on

Bharathada dheera chethanagalu kruthi lokarpane in Bengaluru on May 26
Koo

ಬೆಂಗಳೂರು: ಡಾ. ವಿಕ್ರಮ್‌ ಸಂಪತ್‌ ಅವರ ʼಭಾರತದ ಧೀರ ಚೇತನಗಳುʼ (ಭಾರತೀಯ ಇತಿಹಾಸದ ವೀರರರ ಬಗೆಗೆ ನುಡಿಚಿತ್ರಗಳು) ಎಂಬ ಕೃತಿಯ ಲೋಕಾರ್ಪಣೆ ಕಾರ್ಯಕ್ರಮವು ಇದೇ ಮೇ 26ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಗರದ (Bengaluru News) ಬಸವನಗುಡಿಯ ಬಿ.ಪಿ. ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌ನಲ್ಲಿ ಜರುಗಲಿದೆ.

ಇದನ್ನೂ ಓದಿ: COMEDK UGET Result 2024: ಕಾಮೆಡ್‌ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್‌ ರ‍್ಯಾಂಕ್‌

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪ ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಇದೇ ವೇಳೆ ಎಸ್‌.ಎಲ್‌. ಭೈರಪ್ಪನವರ ಇಂಗ್ಲೀಷ್‌ ಅನುವಾದಿತ 3 ಕಾದಂಬರಿಗಳನ್ನು ಡಾ. ವಿಕ್ರಮ್‌ ಸಂಪತ್‌ ಅವರು ಲೋಕಾರ್ಪಣೆ ಮಾಡಲಿದ್ದಾರೆ.

ಇದನ್ನೂ ಓದಿ: Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

ಕಾರ್ಯಕ್ರಮದಲ್ಲಿ ಡಾ. ವಿಕ್ರಮ್‌ ಸಂಪತ್‌ ಅವರೊಂದಿಗೆ ಅರ್ಧಗಂಟೆಯ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅನುವಾದಕರಾದ ಎಲ್‌.ವಿ. ಶಾಂತಕುಮಾರಿ, ಪ್ರೊ. ಜಿ.ಎಲ್‌. ಶೇಖರ್‌ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಎಂ.ಎ. ಸುಬ್ರಮಣ್ಯ ಮತ್ತು ಎಂ.ಎಸ್‌. ಋತ್ವಿಕ್‌ ತಿಳಿಸಿದ್ದಾರೆ.

Continue Reading

ಕರ್ನಾಟಕ

ಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಇವು ಗುರು ಸಕಲಮಾ ಬದುಕಿನ ಅಧ್ಯಾಯಗಳು!

ಉತ್ತರದ ಹಿಮಾಲಯ ಭಾರತೀ ಗುರು ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಗುರು ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುತ್ತಿರುವ ಗುರು ಸಕಲಮಾ ಅವರ ಆತ್ಮಕಥನ ಸದ್ಯದಲ್ಲೇ ಹೊರಬರಲಿದೆ.

VISTARANEWS.COM


on

ಗುರು ಸಕಲಮಾ guru sakalamaa
Koo

ಹಿಮಾಲಯದ ಮಹಾನ್‌ ಯೋಗಿ ಸ್ವಾಮಿ ರಾಮ (Himalayan Yogi Swami Rama) ಹಾಗೂ ಬಹುಶ್ರುತ ವಿದ್ವಾಂಸ, ಶ್ರೀವಿದ್ಯಾ ಗುರು, ಪದ್ಮಶ್ರೀ ಪುರಸ್ಕೃತ ಡಾ. ರಾ. ಸತ್ಯನಾರಾಯಣ (R Satyanarayana) ಅವರುಗಳ ನೇರ ಶಿಷ್ಯೆ, ಶ್ರೀವಿದ್ಯಾ (Shrividya) ಸಾಧಕಿ ಸಕಲಮಾ ಅವರ ʻಹಿಮಾಲಯ ಋಷಿಗಳ ದಿವ್ಯ ಸಂದೇಶಗಳು- ಸಕಾಲಿಕ ಮತ್ತು ಕಾಲಾತೀತʼ ಆತ್ಮಕಥನ ಪುಸ್ತಕ ರೂಪದಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ ಭಾಷೆಯಲ್ಲಿ (Messages from Himalayan Sages- Timely and Timeless) ಸದ್ಯದಲ್ಲೇ ಹೊರಬರಲಿದೆ. ಈ ಹಿನ್ನೆಲೆಯಲ್ಲಿ, ಕೃತಿಯ ಮುಖಪುಟ ಅನಾವರಣ (cover page launch) ಇದೇ ಮೇ 26ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ನಡೆಯಲಿದೆ. ಸಂಸದ ತೇಜಸ್ವಿ ಸೂರ್ಯ (Tejaswi Surya), ಸಾಹಿತಿ, ಪತ್ರಕರ್ತ ಜೋಗಿ (Jogi), ಕಾಂತಾರ (Kantara) ಸಿನಿಮಾ ಖ್ಯಾತಿಯ ನಟಿ ಸಪ್ತಮಿ ಗೌಡ (Saptami Gowda) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಗುರು ಸಕಲಮಾ ತಮ್ಮ ಪೂರ್ವಾಶ್ರಮದಲ್ಲಿ ಜ್ಯೋತಿ ಪಟ್ಟಾಭಿರಾಂ ಹೆಸರಿನಿಂದಲೇ ನೃತ್ಯವಲಯದಲ್ಲಿ, ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಹೆಸರು ಮಾಡಿದವರು. ಮೂವತ್ತಕ್ಕೂ ಹೆಚ್ಚು ವರ್ಷಗಳ ಕಾಲ ಪ್ರೊಫೆಸರ್‌ ಆಗಿ ಸಾವಿರಾರು ಮಕ್ಕಳಿಗೆ ಇಂಗ್ಲೀಷ್‌ ಬೋಧನೆ ಮಾಡಿದವರು. ಇದರ ಜೊತೆಜೊತೆಗೇ, ತಾನು ಬಾಲ್ಯದಿಂದ ಕಲಿತ ಭರತನಾಟ್ಯವನ್ನೂ ಪೋಷಿಸಿ, ತನ್ನದೇ ಆದ ನೃತ್ಯ ಸಂಸ್ಥೆಯನ್ನು ಕಟ್ಟಿ ನೀರೆರೆದು, ಹಲವಾರು ನೃತ್ಯಪ್ರತಿಭೆಗಳನ್ನು ಬೆಳೆಸಿದವರು. ನೃತ್ಯಕ್ಷೇತ್ರದ ಇವರ ಸಾಧನೆಗೆ ಕರ್ನಾಟಕ ಸರ್ಕಾರ ಕೊಡುವ ಉನ್ನತ ನಾಗರಿಕ ಪ್ರಶಸ್ತಿಯಾದ ರಾಜ್ಯೋತ್ಸವ ಪ್ರಶಸ್ತಿ ಇವರನ್ನು ಹುಡುಕಿಕೊಂಡು ಬಂದಿರುವುದು ಇವರ ಸಾಧನೆಯ ಹಾದಿಯ ಮೈಲುಗಲ್ಲುಗಳಲ್ಲಿ ಒಂದು. ಇವಿಷ್ಟೇ ಅಲ್ಲದೆ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಯೋಗ- ನಾಟ್ಯ ಸರಸ್ವತಿ, ಆಸ್ಟ್ರೇಲಿಯಾ ಕನ್ನಡ ಸಂಘ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರ ಸನ್ಮಾನಗಳು ಇವರಿಗೆ ಸಂದಿವೆ. ನೂರಾರು ಪ್ರದರ್ಶನಗಳನ್ನೂ ನೀಡಿ ಅಪಾರ ನೃತ್ಯಾಭಿಮಾನಿಗಳನ್ನೂ ಹೊಂದಿದ್ದಾರೆ.

ಇವೆಲ್ಲ ಸಾಧನೆಯ ಜೊತೆಜೊತೆಗೇ, ಜ್ಯೋತಿ ಪಟ್ಟಾಭಿರಾಂ ಅವರು ಇನ್ನೊಂದು ಕ್ಷೇತ್ರದಲ್ಲೂ ಸಮನಾಗಿ ಹೆಜ್ಜೆಯೂರಿ ಬೆಳೆದಿದ್ದೇ ಒಂದು ವಿಸ್ಮಯದ ಗಾಥೆ. ಅದು ಅಧ್ಯಾತ್ಮ. 1992ರವರೆಗೆ ಜ್ಯೋತಿ ಪಟ್ಟಾಭಿರಾಂ ಅವರು ತಮ್ಮ ಬದುಕಿನ ಹಾದಿ ಈ ದಿಕ್ಕಿನಲ್ಲಿ ಹೊರಳೀತು ಎಂಬ ಕಲ್ಪನೆಯನ್ನೂ ಹೊಂದಿರಲಿಲ್ಲ. ಯೋಗಾಚಾರ್ಯ ಪಟ್ಟಾಭಿರಾಂ ಅವರ ಜೀವನ ಸಂಗಾತಿಯಾಗಿ, ತನ್ನ ಕಾಲೇಜು, ನೃತ್ಯ ತರಗತಿಗಳು, ನೃತ್ಯ ಪ್ರದರ್ಶನಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಅವರಿಗೆ ಹಿಮಾಲಯನ್‌ ಯೋಗಿ ಸ್ವಾಮಿ ರಾಮ ಅವರ ಭೇಟಿಯಾದದ್ದೇ ಒಂದು ಆಸಕ್ತಿದಾಯಕ ಕತೆ. ಅಲ್ಲಿಂದ ನಂತರ ಬದುಕು ಬೇರೆಯದೇ ದಿಕ್ಕಿನತ್ತ ಮುಖ ಮಾಡಿದರೂ, ಅಧ್ಯಾತ್ಮವನ್ನೂ, ನೃತ್ಯವನ್ನೂ, ತನ್ನ ಉದ್ಯೋಗವನ್ನೂ ಸಮದೂಗಿಸಿಕೊಂಡು ಕೆಲಸ ಮಾಡಿದರು. ತಮ್ಮ ಗುರು ಸ್ವಾಮಿ ರಾಮ ಅವರಿಂದ ಶ್ರೀವಿದ್ಯೆಯಲ್ಲಿ ಅತ್ಯಂತ ಶ್ರೇಷ್ಠವಾದ ಶಾಂಭವ ದೀಕ್ಷೆಯನ್ನು ಪಡೆದ ಇವರು, ಗುರುವಿನ ದೇಹತ್ಯಾಗದ ನಂತರವೂ ಅವರಿಂದ ಮಾರ್ಗದರ್ಶನಗಳನ್ನು ಪಡೆಯುತ್ತಾ ಬಂದವರು. ಅವರ ಈ ಅಧ್ಯಾತ್ಮದ ಹಾದಿಗೆ ಇನ್ನಷ್ಟು ಬಲ ಬಂದಿದ್ದು ಸ್ವಾಮಿ ರಾಮ ಅವರ ಮಾರ್ಗದರ್ಶನದ ಮೇರೆಗೆ ಮೈಸೂರಿನ ಖ್ಯಾತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ರಾ ಸತ್ಯನಾರಾಯಣ ಅವರ ಬಳಿ ದಕ್ಷಿಣದ ವಿದ್ಯಾರಣ್ಯ ಪರಂಪರೆಯಲ್ಲಿ ಶ್ರೀವಿದ್ಯೆಯ ಹೆಚ್ಚಿನ ಕಲಿಕೆಗೆ ತೆರಳಿದ ಮೇಲೆ.

ಹೀಗಾಗಿ ಉತ್ತರದ ಹಿಮಾಲಯನ್‌ ಭಾರತೀ ಪರಂಪರೆ ಹಾಗೂ ದಕ್ಷಿಣದ ವಿದ್ಯಾರಣ್ಯ ಪರಂಪರೆಗಳೆರಡರಲ್ಲೂ ಪಾರಮ್ಯ ಸಾಧಿಸಿ ಇದೀಗ ಸಕಲಮಾ ಆಗಿ, ಈಗ ಸಾವಿರಾರು ಮಂದಿಗೆ ಶ್ರೀವಿದ್ಯಾ ಸಾಧನೆಯ ಅರಿವು ಹೆಚ್ಚಿಸುವಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಈ ಬದುಕಿನ ಪುಟಗಳಲ್ಲಿ ನೂರಾರು ರೋಮಾಂಚನಗೊಳಿಸುವ ಅಧ್ಯಾತ್ಮದ ಅನುಭವಗಳಿವೆ. ಸುಮಾರು 30 ವರ್ಷಗಳ ಸುದೀರ್ಘ ಅಧ್ಯಾತ್ಮ ಸಾಧನೆಯ ವಿವಿಧ ಮಜಲುಗಳೆಲ್ಲವೂ, ಮೈನವಿರೇಳಿಸುವಂತ ಹಲವಾರು ಅನುಭವಗಳ ಜೊತೆಗೆ ಪುಸ್ತಕದ ಮೂಲಕ ಅಧ್ಯಾತ್ಮ ಆಸಕ್ತರನ್ನೂ ಸಾಧಕರನ್ನೂ, ಜನಸಾಮಾನ್ಯರನ್ನೂ ತಲುಪಲಿದ್ದು, ಋಷಿ ಪರಂಪರೆಯ ಬಗೆಗಿನ ಸಾಮಾನ್ಯರ ಅರಿವಿನ ವಿಸ್ತಾರಕ್ಕೆ ಹೊಸ ಭಾಷ್ಯ ಬರೆಯಲಿದ್ದಾರೆ.

ಕೃತಿ ಮುಖಪುಟ ಅನಾವರಣ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ
ದಿನಾಂಕ: ಮೇ 26, ಭಾನುವಾರ
ಸಮಯ: ಬೆಳಗ್ಗೆ 10.30
ಸಾನಿಧ್ಯ: ಗುರು ಸಕಲಮಾ
ಅತಿಥಿಗಳು: ಸಾಹಿತಿ ಜೋಗಿ, ಸಂಸದ ತೇಜಸ್ವಿ ಸೂರ್ಯ, ನಟಿ ಸಪ್ತಮಿ ಗೌಡ

ಇದನ್ನೂ ಓದಿ: Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಮೇ 19ರಂದು ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ

Bengaluru News: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ.ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

VISTARANEWS.COM


on

7 books release programme on May 19 in Bengaluru
Koo

ಬೆಂಗಳೂರು: ವೀರಲೋಕ ಪ್ರಕಾಶನದ 7 ಕೃತಿಗಳ ಲೋಕಾರ್ಪಣೆ ಸಮಾರಂಭವು ಇದೇ ಮೇ 19ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ (Bengaluru News) ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ನಡೆಯಲಿದೆ.

ಇದನ್ನೂ ಓದಿ: SubAir facility: ಸಬ್‌ ಏರ್‌ ಸಿಸ್ಟಮ್‌ ಹೇಗೆ ಕಾರ್ಯನಿರ್ವಹಿಸುತ್ತದೆ?; ಮಳೆ ನಿಂತು ಎಷ್ಟು ಗಂಟೆಯಲ್ಲಿ ಪಂದ್ಯ ಆರಂಭ?

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪನ್ಯಾಸಕ, ಕೃಷಿ ವಿಜ್ಞಾನಿ ಡಾ. ಕೆ.ಎನ್‌. ಗಣೇಶಯ್ಯ, ಕಥೆಗಾರ, ಕಾದಂಬರಿಕಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಕಥೆಗಾರ ಶಿವಕುಮಾರ ಮಾವಲಿ ಅವರು ಪಾಲ್ಗೊಳ್ಳಲಿದ್ದಾರೆ.

ವೀರಕಪುತ್ರ ಆಶಯನುಡಿಗಳನ್ನಾಡಲಿದ್ದಾರೆ. ಶೋಭಾ ರಾವ್‌ ಮತ್ತು ಅನಂತ ಕುಣಿಗಲ್‌ ಪುಸ್ತಕ ಪರಿಚಯ ಮಾಡಿಕೊಡಲಿದ್ದಾರೆ.

ಇದನ್ನೂ ಓದಿ: Karnataka Weather : ತುಮಕೂರಲ್ಲಿ ಸಿಡಿಲಿಗೆ ಜಾನುವಾರು ಬಲಿ; ಚಿಕ್ಕಮಗಳೂರಲ್ಲಿ ಮಳೆ ಅವಾಂತರಕ್ಕೆ ಜನ ತತ್ತರ

ಲೋಕಾರ್ಪಣೆಗೊಳ್ಳಲಿರುವ ಕೃತಿಗಳು ಹಾಗೂ ಕೃತಿಕಾರರ ವಿವರ

ಡಾ. ಲಕ್ಷ್ಮಣಕೌಂಟೆ ಅವರ ಮಹಾವಿನಾಶ (ಕಾದಂಬರಿ), ಕೌಂಡಿನ್ಯ ಅವರ ಬೆಳವಡಿ ಮಲ್ಲಮ್ಮ (ಕಾದಂಬರಿ), ರಾಘವೇಂದ್ರ ಪ್ರಭು ಎಂ. ಅವರ ಬಹುತ್ವ ಭಾರತ ಕಟ್ಟಿದವರು (ಬದುಕು ಬರಹಗಳು), ವಿ. ಗೋಪಕುಮಾರ್‌ ಅವರ ಕಗ್ಗಕ್ಕೊಂದು ನ್ಯಾನೋ ಕಥೆ (ನ್ಯಾನೋ ಕತೆಗಳು), ಗೀತಾ ದೊಡ್ಮನೆ ಅವರ ನೀಲಿ ಶಾಯಿಯ ಕಡಲು (ಕವಿತೆಗಳು), ಮೇದಿನಿ ಕೆಸವಿನಮನೆ ಅವರ ಮಿಸ್ಸಿನ ಡೈರಿ (ಅನುಭವ ಕಥನ), ಪಾರ್ವತಿ ಪಿಟಗಿ ಅವರ ಪುನರುತ್ಥಾನ (ಕಾದಂಬರಿ) ಲೋಕಾರ್ಪಣೆಗೊಳ್ಳಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Continue Reading
Advertisement
Prajwal Revanna Case Will SIT team go abroad for arrest Prajwal
ಕ್ರೈಂ6 mins ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಜ್ಞಾತವಾಸಕ್ಕೆ ಒಂದು ತಿಂಗಳು, ಎಲ್ಲಿದ್ದೀಯಪ್ಪಾ ಪ್ರಜ್ವಲ್?

Robert Vadra
ದೇಶ6 mins ago

Robert Vadra: “ಮಣಿಶಂಕರ್‌ ಅಯ್ಯರ್‌ ಬಾಯಿ ಬಡುಕ…ಕೇಜ್ರಿವಾಲ್‌ ಅವಕಾಶವಾದಿ”-ರಾಬರ್ಟ್‌ ವಾದ್ರಾ ಅಚ್ಚರಿಯ ಹೇಳಿಕೆ

Gautam Gambhir
ಕ್ರೀಡೆ20 mins ago

Gautam Gambhir : ಟ್ರೋಫಿ ಗೆದ್ದ ಸಂಭ್ರಮ; ಗಂಭೀರ್​ಗೆ ಖಾಲಿ ಚೆಕ್​ ಕೊಟ್ಟರೇ ಶಾರುಖ್​ ಖಾನ್​ ?

Netraa Jadhav Out From Serial perform Yakshagana on the special occasion
ಕಿರುತೆರೆ34 mins ago

Netraa Jadhav: ಸೀರಿಯಲ್‌ನಿಂದ ಔಟ್‌ ಆಗುತ್ತಿದ್ದಂತೆ ʻಯಕ್ಷಗಾನʼದಲ್ಲಿ ಶಾರ್ವರಿ ಶೈನ್‌!

Pune Porsche accident
ದೇಶ53 mins ago

Pune Porsche accident: ಕಾರು ಗುದ್ದಿ ಇಬ್ಬರನ್ನು ಸಾಯಿಸಿದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ; ಇಬ್ಬರು ವೈದ್ಯರು ಅರೆಸ್ಟ್‌

Chris Gayle
ಕ್ರಿಕೆಟ್54 mins ago

Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

Comedy Khiladigalu anchor anushree and Jaggesh Remembers Dogs
ಕಿರುತೆರೆ1 hour ago

Comedy Khiladigalu: ನನ್ನ ಮಗ ಚಿನ್ನುವನ್ನು ಇದೇ ಕೈಯಲ್ಲಿ ಕಳ್ಕೊಂಡೆ: ಅನುಶ್ರೀ ಭಾವುಕ!

kalaburagi illegal relationship
ಕ್ರೈಂ1 hour ago

Illegal Relationship:`ಅತ್ತಿಗೆಯಿಂದ ದೂರ ಇರುʼ ಎಂದ ಮೈದುನನ ಬರ್ಬರವಾಗಿ ಹತ್ಯೆ ಮಾಡಿದ ಪ್ರಿಯಕರ

IPL 2024
ಕ್ರೀಡೆ1 hour ago

IPL 2024 : ಕೆಕೆಆರ್​ ಗೆದ್ದ ಬಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

Ranbir Kapoor and Alia Bhatt flew to Italy
ಬಾಲಿವುಡ್2 hours ago

Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ17 hours ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು18 hours ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ4 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ7 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 week ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

ಟ್ರೆಂಡಿಂಗ್‌